ಅಧ್ಯಾಯ - 3
ಸಂಸ್ಕೃತ ವ್ಯಾಖ್ಯಾನದ ಗೋಪ್ಯತೆ
“ವಯಸ್ಸಾದವರಿರಲಿ
ಅಥವಾ ಚಿಕ್ಕವರಿರಲಿ, ಸಂಸ್ಕೃತವನ್ನು ಕಲಿಯಲಿಕ್ಕೆ ಮಾತ್ರ ಹಿಂದೇಟು
ಹಾಕಬಾರದು. ಸಂಸ್ಕೃತ-ದಲ್ಲಿರತಕ್ಕಂತ ಸೊಗಸು, ಸಂಸ್ಕೃತದಲ್ಲಿರತಕ್ಕಂತ
ಸೌಂದರ್ಯ ಬೇರೆಯಾವುದರಲ್ಲೂ ಇಲ್ಲ.”
- ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ
ಮಹಾಸನ್ನಿಧಾನ.
ವೇದದ ಒಂದೊಂದು ಮಂತ್ರದಲ್ಲಿ, ಮಂತ್ರದ ಒಂದೊಂದು
ವಾಕ್ಯದಲ್ಲಿ, ವಾಕ್ಯದ ಒಂದೊಂದು ಪದದಲ್ಲಿ, ಪದದ ಒಂದೊಂದು ಅಕ್ಷರದಲ್ಲಿ ಭಗವಂತನನ್ನು ಕಾಣುವವ ಬ್ರಹ್ಮಜ್ಞಾನ ಪಡೆಯುತ್ತಾನೆ. ವೇದವನ್ನು ಕೇವಲ
ಮೇಲ್ನೋಟದಲ್ಲಿ ಓದಿದರೆ ಅದರಿಂದ ಏನೂ ಉಪಯೋಗವಿಲ್ಲ. ವೇದದ ಸಮಗ್ರ ಮಂತ್ರದಲ್ಲಿ, ಮಂತ್ರದ ಒಂದೊಂದು ಅಕ್ಷರದಲ್ಲಿ ಭಗವಂತನನ್ನು ಕಂಡು ಭಗವನ್ಮಯನಾದಾಗ, ಭಗವಂತನ ಸಮಸ್ತ ಅನುಗ್ರಹಕ್ಕೆ
ಪಾತ್ರನಾಗಿ, ಸಮಗ್ರ ಉಪಯೋಗವನ್ನು ಪಡೆಯಬಹುದು.
ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು
“ದ್ವೇ ವಿದ್ಯೇ ವೇದಿತವ್ಯೇ ಇತಿ ಹ ಸ್ಮ
ಯದ್ಬ್ರಹ್ಮವಿದೋ ವದಂತಿ ಪರಾ ಚೈವಾಪರಾ ಚ |
ತತ್ರಾಪರಾ ಬುಗ್ಗೇದೋ ಯಜುರ್ವೇದಃ
ಸಾಮವೇದೋsಥರ್ವವೇದಃ ಶಿಕ್ಪಾ ಕಲ್ಪೋ ವ್ಯಾಕರಣಂ
ನಿರುಕ್ತಂ ಛಂದೋ ಜ್ಯೋತಿಷಮಿತಿ | ಅಥ ಪರಾ ಯಯಾ
ತದಕ್ಷರಮಧಿಗಮ್ಯತೇ”
ಮುಂಡಕ ಉಪನಿಷತ್
೧-೧-೪
ಭಾವಾರ್ಥಃ- ಬ್ರಹ್ಮಜ್ಞಾನಿಗಳು ಹೀಗೆ ಹೇಳುವರು--ವಿದ್ಯೆಗಳಲ್ಲಿ
ಎರಡು ವಿಧ. ಪರಾ ಮತ್ತು ಅಪರಾ ಎಂದು. ಅವುಗಳನ್ನು ಪುರುಷರು ಅವಶ್ಯಕವಾಗಿ ತಿಳಿದುಕೊಳ್ಳಬೇಕು. ಆ
ಎರಡು ವಿದ್ಯೆಗಳಲ್ಲಿ, ಋಗ್ವೇದ, ಯಜುರ್ವೇದ,
ಸಾಮವೇದ, ಅಥರ್ವವೇದ, ಶಿಕ್ಷಾ, ಕಲ್ಪಸೂತ್ರಗಳು, ವ್ಯಾಕರಣಶಾಸ್ತ್ರ, ನಿರುಕ್ತ, ಛಂದಶ್ಶಾಸ್ತ್ರ, ಜ್ಯೋತಿಷ ಇವುಗಳನ್ನೊಳಗೊಂಡ
ವಿದ್ಯೆಗೆ ಅಪರಾ ಎಂದು ಹೆಸರು. ನಾಶರಹಿತವೂ ಅನಾದಿಯೂ ಆದ ಪರಬ್ರಹ್ಮಸ್ವರೂಪವನ್ನು ತಿಳಿಸುವ ಅಕ್ಷರ
ವಿದ್ಯೆಯೇ ಪರಾವಿದ್ಯೆಯೆಂದು ಹೇಳಲ್ಪಡುವುದು. ಶಂಕರಾಚಾರ್ಯರು ಅಕ್ಷರ ಶಬ್ದದ ಅರ್ಥವನ್ನು
ವಿವರಿಸುತ್ತ ವಿನಾಶರಹಿತಃ ಭಗವತಃ ಮಾಯಾಶಕ್ತಿಃ ನಾಶರಹಿತವಾದ ಭಗವಂತನ ಮಾಯಾಶಕ್ತಿಯೆಂದು
ತಿಳಿಸಿದ್ದಾರೆ.
ಸಂಸ್ಕೃತ
ಸತ್ಯ ಅರಿಯಬೇಕಾದರೆ, ವೇದಗಳು ಅರಿಯಬೇಕಾದರೆ ಮೊದಲು ಸಂಸ್ಕೃತ ಮೂಲ
ಆರ್ಥಗಳನ್ನು ಅಕ್ಷರ ಅಥವಾ ಪರಾ ವಿದ್ಯೆಯಲ್ಲಿ ವ್ಯಾಖ್ಯಾನಿಸುವುದು ಹೇಗೆ, ಅದು ಯಾವುದಾದರೂ ಗೋಪ್ಯಸಂದೇಶ ನೀಡುತ್ತಿದೆಯೇ ಎಂದು ಅವಲೋಕಿಸುವುದು
ಪ್ರಾರಂಭಿಸಬೇಕು.
ವೇದ
ಅನುವಾದದಲ್ಲಿ ಬಾಷ್ಯದಲ್ಲಿ ವಿದ್ವಾಂಸರಲ್ಲಿ ವ್ಯತ್ಯಾಸವಿದೆ.
ಯೇ ತ್ರಿಶಂತಿ ತ್ರಯಸ್ಪರೋ ದೇವಾಸೋ ಬರ್ಹಿರಾಸದನ್
ವಿದನ್ನಹ ದ್ವಿತಾಸನನ್ ॥ ಋಗ್ವೇದ . ಮಂ.
೮. ಸೂಕ್ತ ೨೮. ೧
ಭಾವಾರ್ಥಃ-
ಸ್ವಾಮಿ ದಯಾನಂದ ಸರಸ್ಪತಿ:- ಪರಂಪರಾಗತ ವಿಶ್ವಾಸದ ಪ್ರಕಾರ ದೇವತೆಗಳು ಮುವ್ವತ್ತು
ಮೂರು (ಕೋಟಿ). ಈ ಸೂಕ್ತದ ಕೊನೆಯಲ್ಲಿ ಆ ವಿಷಯವಾಗಿ ಚರ್ಚಿಸೋಣ. ಈ ಮಂತ್ರದಲ್ಲಿ 'ದ್ವಿತಾ ವಿದನ್' ದ್ವಿತಾ ಸನನ್ ಎಂಬ ಶಬ್ದಗಳ
ವ್ಯಾಖ್ಯೆ ಈ ರೀತಿ ಇದೆ. ದ್ವಿತಾ ವಿದನ್ - ಶತ್ರುಗಳನ್ನೂ ಮಿತ್ರರನ್ನೂ ತಿಳಿದವರು.
ದ್ವಿತಾಸನನ್ ನಿಗ್ರಹ ಮತ್ತು ಅನುಗ್ರಹಗಳ ಸಮಯವನ್ನು ಅರಿತವರು.
ಭಾವಾರ್ಥ:-
ಸಾಯಣ್ಣಭಾಷ್ಯ:- ಮೂವತ್ತು ಮೂರು ಸಂಖ್ಯೆಗಳಿಂದ ಪ್ರಸಿದ್ಧರಾದ ಸಕಲ
ದೇವತೆಗಳೂ ಬಂದು ನಮ್ಮ ದರ್ಭಾಸನದ ಮೇಲೆ ಕುಳಿತುಕೊಳ್ಳಲಿ. ಮತ್ತು ಯಜಮಾನರ ಭಕ್ತ್ಯತಿಶಯವನ್ನು
ತಿಳಿದು ಅದರ ಫಲವಾಗಿ ಅತ್ಯಧಿಕವಾದ ಸಂಪತ್ತುಗಳನ್ನು ನಮಗೆ ಕೊಡಲಿ.
ಭಾವಾರ್ಥ:-
ಬಸ್ತಿ ಪುಂಡಲೀಕ್ ವೆಂಕಟೇಶ್ ಶಣೈ;-
ಯಾವ ಮೂವತ್ತು ಮತ್ತು ಮೂರು ದೇವರು ಕುಶಾಸನದಲ್ಲಿ ಕೂತಿರುವರೋ ಅವರು
ಎಲ್ಲವನ್ನು ಅರಿತರು, ಮತ್ತು ಎರಡನ್ನೂ (ಆಜ್ಯವನ್ನು ಮತ್ತು
ಹವಿಸ್ಸನ್ನು) ಪಡೆದರು.
ಭಾವಾರ್ಥ:-
ಅಕ್ಷರ ವ್ಯಾಖ್ಯಾನ:- ಯಾವ ದಿಕ್ಕಿನಲ್ಲಿ ಮೂರು ಒಳಗೊಂಡಿರುವ ಅತ್ಯುತ್ತಮ
ಕರೆಯುವ ದೇವರನ್ನು (ಅಜಪ ಮಂತ್ರ) ಆರೋಗ್ಯಕರ ಪ್ರಶಾಂತತೆ ಕರೆಯುವ ಧ್ಯಾನ, ಬಾಲದಲ್ಲಿ (ಇಡಾ ಪಿಂಗಳಾ ಸುಷುಮ್ನಾ ನಾಡಿಯಲ್ಲಿ) ಧ್ವನಿಯನ್ನು ಒಳಗೊಂಡಿರುವ ವೈದ್ಯ ಸಮಾನತೆಯ ಆತ್ಮವನ್ನು
ಪಡೆಯಲು ಬೇಯಿಸಿದ ಅನ್ನವನ್ನು ಅನುಭವಿಸಲು ಅವಿಭಜಿತವಾದುದ್ದನ್ನು ನೀಡುತ್ತದೆ.
ಪದಾರ್ಥ:- ಯೇ= ಯಾವಾದಿಕ್ಕಿನಲ್ಲಿ, ತ್ರಿ = ಮೂರು, ಶಂ = ಆರೋಗ್ಯಕರ, ತಿ = ಪ್ರಶಾಂತತೆ, ತ್ರಯ = ಮೂರು ಒಳಗೊಂಡಿರುವ, ಸ್ಪರ್ = ಅತ್ಯುತ್ತಮ, ಓ = ಕರೆಯುವ, ದೇವಾ = ದೇವರನ್ನು, ಸ = ಧ್ಯಾನ, ಓ = ಕರೆಯುವ, ಬರ್ಹಿ = ಬಾಲ, ರಸ = ಸಾಮಾನ್ಯ ಧ್ವನಿಯನ್ನು
ಒಳಗೊಂಡಿರುವ, ದ = ನೀಡುವ, ನ =
ಅವಿಭಜಿತ, ವಿದ್ = ಅನುಭವಿಸಲು, ಅನ್ನ
= ಬೇಯಿಸಿದ ಅನ್ನವನ್ನು, ಹ = ವೈದ್ಯ,
ದ್ವಿತಾ = ಸಮಾನತೆಯ, ಸನ್ = ಪಡೆಯಲು,
ಆನ್ = ಆತ್ಮ.
ಮೂವತ್ತು ಮೂರು ಕೋಟಿ ದೇವರು ಎಂಬುದು ಸುಳ್ಳು
ಮೂವತ್ತು
ಮೂರು ಕೋಟಿ ದೇವರು ಎಂಬುದಕ್ಕೆ ವೇದ ಪ್ರಮಾಣ ಇರುವುದಿಲ್ಲ,
ಸಾಯಣ್ಣಾಚಾರ್ಯರು ತಮ್ಮ ಋಗ್ವೇದ ವ್ಯಾಖ್ಯಾನದಲ್ಲಿ ಹೀಗೆ ಬರೆಯುತ್ತಾರೆ, ಋಕ್ಸಂಹಿತೆಯ ಅನೇಕ ವಾಕ್ಯಗಳಲ್ಲಿ ದೇವತೆಗಳ ಸಂಖ್ಯೆಯು ೩೩ ಎಂಬುದು ಸ್ಪಷ್ಟವಾಗಿ
ಹೇಳಲ್ಪಟ್ಟಿದೆ ಉದಾಹರಣೆಗೆ “ಎಲೈ ಅಶ್ವಿನೀದೇವತೆಗಳೇ
ಅಮೃತಪಾನವನ್ನು ಮಾಡಲು ಮೂವತ್ತುಮೂರು ದೇವತೆಗಳೊಡ-ನೆಯೂ ಕೂಡಿಕೊಂಡು ಬನ್ನಿರಿ,'' (ಋ. ಸಂ ೧-೩೧-೧೪), “ರೋಹಿತಾಶ್ವವುಳ್ಳವನೂ, ಸ್ತುತಿಪ್ರಿಯನೂ ಆದ ಎಲೈ ಅಗ್ನಿಯೇ, ಮೂವತ್ತುಮೂರು
ದೇವತೆಗಳನ್ನೂ ಇಲ್ಲಿ ಕರೆದುಕೊಂಡು ಬಾ'' (ಋ. ಸಂ ೧-೪೫-೨),
“ಎಲೈ ದೇವತೆಗಳೇ ನೀವು ದ್ಯುಲೋಕದಲ್ಲಿ (ಸ್ವರ್ಗದಲ್ಲಿ)
ಹನ್ನೊಂದು ಸಂಖ್ಯೆಯುಳ್ಳ ವರಾಗಿಯೂ, ಅಂತರಿಕ್ಷದಲ್ಲಿ (ಭೂಮಿ ಮತ್ತು ಸ್ವರ್ಗದ ಮಧ್ಯ ಭಾಗ) ಹನ್ನೊಂದು ಸಂಖ್ಯೆಯುಳ್ಳನರಾಗಿಯೂ ಪೃಥ್ವಿಯಲ್ಲಿ (ಭೂಮಿಯಲ್ಲಿ)
ಹನ್ನೊಂದು ಸಂಖ್ಯೆಯುಳ್ಳವರಾಗಿಯೂ ಇದ್ದೀರಿ,'' (ಋ ಸಂ ೧-೧೩೯-೧),
“ಎಲೈ ಅಗ್ನಿಯೇ, ಪದ್ಧತಿಯಂತೆ, ಪತ್ನಿಯರೊಡಗೂಡಿದ ಮೂವತ್ತಮೂರು ದೇವತೆಗಳನ್ನೂ ಕರೆದು ಕೊಂಡು ಬಂದು ಅವರಿಗೆಲ್ಲಾ
ತೃಪ್ತಿಯನ್ನುಂಟುಮಾಡು” (ಋ.ಸಂ. 3-6-9), “ನಮ್ಮ ಯಜ್ಞ ವೇದಿಕೆಯಲ್ಲಿ ದರ್ಭಾಸನದ ಮೇಲೆ ಕುಳಿತಿರುವ ಮೂವತ್ತಮೂರು ದೇವತೆಗಳೂ
ಸಹ ನಮ್ಮನ್ನು ಪುರಸ್ಕರಿಸಿ ನಮಗೆ ದ್ವಿಗುಣವಾಗಿ ಧನಗಳನ್ನೂ ಪುತ್ರಾದಿ ಸಂಪತ್ತುಗಳನ್ನೂ ಕೊಡಲಿ,”
(ಋ.ಸಂ. 8-28-1) “ಮನುವಿನಿಂದ ಪೂಜಿತರಾದ ಎಲೈ ಮೂವ್ವತ್ತುಮೂರು ದೇವತೆಗಳೇ,
ನನ್ನಿಂದಲೂ ಸ್ತುತರಾಗಿ ನಮ್ಮ ಶತ್ರುಗಳನ್ನು ನಾಶಮಾಡಿರಿ.'' (ಋ. ಸಂ. ೮-೩೦-೨), ಎಲೈ ಅಶ್ವಿನೀದೇವತೆಗಳೇ
ಮೂವತ್ತಮೂರು ದೇವತೆಗಳೊಡನೆಯೂ, ಅಬ್ದೇವತೆಯೊಡ-ನೆಯೂ, ಮರುತ್ತುಗಳೊಡನೆಯೂ, ಭೃಗುಗಳೊ ಡನೆಯೂ, ಉಷಸ್ಸು ಮತ್ತು ಸೂರ್ಯನೊಡನೆಯೂ ಕೂಡಿಕೊಂಡು ಬಂದು ನಮ್ಮಿಂದ ಅರ್ಪಿತವಾದ ಸೋಮವನ್ನು
ಪಾನಮಾಡಿ” (ಋ ಸಂ. ೮-೩೫-೩), “ಎಲೈ ಸೋಮನೇ, ಈ ಎಲ್ಲಾ ಮೂವತ್ತಮೂರು ದೇವತೆಗಳೂ ಸಹ ನಿನ್ನ ಅನುಗ್ರಹಕ್ಕೆ ಕಾದಿದ್ದಾರೆ. (ಋ ಸಂ
೯-೯೨-೪). – “ಯೇ ದೇವಾ ದಿವಿ ಸ್ಥ ಯೇ ಪೃಥಿವ್ಯಾಂ ಯೇ ಅಂತರಿಕ್ಷೇ ಓಷಧೀಷು ಪೆಶುಷು ಅಪ್ಸು ಅಂತಃ”
ಎಂಬ ಈ ಸಾಮವೇದ ವಾಕ್ಯದಲ್ಲಿ ದ್ಯುಲೋಕಸ್ಥರೂ, ಪೃಥಿವೀಸ್ಥರೂ,
ಅಂತರಿಕ್ಷಸ್ಥರೂ, ಔಷಧಿಗಳಲ್ಲಿ ಅಂತರ್ಗತರಾಗಿ-ರುವವರೂ,
ಪಶುಗಳಲ್ಲಿ ಅಂತರ್ಯಾ ಮಿಗಳಾಗಿರುವವರೂ ಲಬ್ವರ್ತಿಗಳಾಗಿರುವವರೂ ಆದ
ದೇವತೆಗಳು ಎಂಬ ವಿಭಾಗವಿರುತ್ತದೆ. (ಸಾ ವೇ ೧-೩೦-೩). ಬೇರೆ ಗ್ರಂಥಗಳಲ್ಲಿ ವಿವಿದರೀತಿಯಲ್ಲಿ 33
ದೇವರು ಯಾರು ಎಂಬ ವ್ಯಾಖ್ಯಾನವಿದೆ. ವಸು ರುದ್ರ ಆದಿತ್ಯರು ದೇವರೆಂದು ಬಾವಿಸಲಾಗಿದೆ.
ಇಲ್ಲಿ
ಯಜ್ಞದಲ್ಲಿ ಸೋಮವನ್ನು (ಅಮೃತವನ್ನು) ಸೇವಿಸುವ ದೇವತೆಗಳು 33 ಎಂದು ಗುರುತಿಸಿರುವ ಬಗ್ಗೆ
ಗಮನಿಸುವುದು. ಪ್ರಾಣಾಯಾಮ ಎಂಬ ಯಜ್ಞದಲ್ಲಿ ಅಮೃತವನ್ನು ಸೇವಿಸುವ ನಮ್ಮಲ್ಲಿರುವ ಮೂರು ಲೋಕದ
ದೇವರು ಯಾರು ಎಂಬುದನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ದೇವರನ್ನು
ನಮ್ಮಲ್ಲೇ ಇರುವನು ಎಂದು ಚಿತ್ರಿಸುವ ವೇದ ಸಾರಕ್ಕೆ ಸತ್ಯ ಅರ್ಥ ಸಿಗುತ್ತದೆ.
ನಮ್ಮ
ದೇಹಕ್ಕೆ ಸಂಬಂದಿಸಿದಂತೆ ದೇವರು:-
ವಾಯು, ನೀರು, ಅಗ್ನಿ, ನರಸಮೂಹ, ಹತ್ತು ಬೆರಳು, 7 ಚಕ್ರಗಳು, ಆತ್ಮ ಶಕ್ತಿ (ಆತ್ಮ ಶಕ್ತಿಯನ್ನು
ಶೈವರು ಶಿವ ಶಕ್ತಿಯ ಸೇರುವ ರೂಪ ಎನ್ನುತ್ತಾರೆ, ಆತ್ಮ ಶಕ್ತಿಯನ್ನು
ನಾರಾಯಣ ಅಜಪ ಮಂತ್ರದಲ್ಲಿ ಸಂಪತ್ತಿನ ಅಮೃತ ಲಕ್ಷ್ಮಿಯ ರೂಪದಲ್ಲಿ ಸುಷುಮ್ನಾ ನಾಡಿಯನ್ನು ಸೇರುವ
ಲಕ್ಷ್ಮೀ ನಾರಾಯಣ, ಲಕ್ಷ್ಮೀ ನರಸಿಂಹ,
ಲಕ್ಷ್ಮೀಕಾಂತ, ಶ್ರೀ ಹರಿ,
ಇತ್ಯಾದಿಯಾಗಿ ಹೇಳುತ್ತಾರೆ), ಪಂಚ ದಾತುಗಳು (ರಕ್ತ, ಮಾಂಸ, ಮೇದ(ಟಿಷ್ಯು),
ಮೂಳೆ, ಮಜ್ಜೆ), ಪಂಚೇಂದ್ರಿಯಗಳು
(ಮೂಗು, ಕಣ್ಣು, ಕಿವಿ, ನಾಲಿಗೆ, ಚರ್ಮ),
ಬ್ರಹ್ಮರಂದ್ರ = ಒಟ್ಟು 33 ದೇವರು
ಸಂಸ್ಕೃತದ ಮೂಲ ಅರ್ಥ ಪ್ರತಿ ಅಕ್ಷರದಲ್ಲೂ ಹುಡುಕಿ
ಅಕ್ಷರ = अक्षर = अ क्ष र =
ಅಕ್ಷರ
ಅರ್ಥ:- “ವಿಶೇಷವಾಗಿ
ಪರಿಣಾಮಕಾರಿ ಮಂತ್ರ ಪ್ರಕಾಶಮಾನತೆ ಬೆಳಗಿಸಲು”. (ಅಕ್ಷರ ಎಂಬ ಒಂದೊಂದರಲ್ಲಿ ನಾವು ಪರಿಣಾಮಕಾರಿ
ಮಂತ್ರ ಪ್ರಕಾಶಮಾನತೆಯನ್ನು ಬೆಳಗಿಸುವ ಬಗ್ಗೆ ಜ್ಞಾನ ಕಾಣುತ್ತೇವೆ)
ಸಂಸ್ಕೃತದಲ್ಲಿ
ಒಂದೊಂದು ಅಕ್ಷರಕ್ಕೂ ಬಹಳ ವಿಶಿಷ್ಟವಾದ
ಅರ್ಥವನ್ನು ಅನಾದಿಯಿಂದ ನೀಡಲಾಗಿದೆ, ಒಂದು ಅಕ್ಷರಕ್ಕೆ
ಹಲವಾರು ಅರ್ಥಗಳನ್ನು ನೀಡಲಾಗಿದೆ, ಯಾವ ಅಕ್ಷರ ಯಾವ ಸಂಧರ್ಬದಲ್ಲಿ
ಯಾವ ಅಕ್ಷರದ ಜೊತೆ ಉಲ್ಲೇಕಿಸಲಾಗಿದೆ ಎಂಬುದರಲ್ಲಿ ಸಂಸ್ಕೃತದ ಪ್ರಾಚೀನ ವೇದ, ಉಪನಿಷತ್, ಪುರಾಣ, ಅನೇಕ
ಮಂತ್ರಗಳಲ್ಲಿ ಅನೇಕ ನಾಮಾಂಕಿತ ಪದಗಳಲ್ಲಿ ಅಡಗಿರುವ ನಿಗೂಡ ವಿಸ್ಮಯ ಸತ್ಯ ತಿಳಿಯುವುದೇ ಬ್ರಹ್ಮ
ಜ್ಞಾನಕ್ಕೆ ದಾರಿಯಾಗಿದೆ. ಅಂತಹ ಕೆಲವು ವಿಶಿಷ್ಟ ಪದಗಳ ಅಕ್ಷರಗಳ ಆರ್ಥ ಹೇಗೆ ವಿಭಾಗಿಸಿ ಕಂಡು
ಹಿಡಿಯಲಾಗಿದೆ ಎಂದು ಈ ಕೆಳಗೆ ನೀಡಲಾಗಿದೆ, ಅಕ್ಷರಗಳ ಅರ್ಥ ಎರಡನೇ
ಭಾಗದ ಕೊನೆಯಲ್ಲಿ ಗಮನಿಸಿ.
ಸಂಸ್ಕೃತ
= संस्कृत
= संस्कृतं
= संस्कृतम्
= सं
स
कृ
त/
तं = = स म स क र उ त म
ಹೀಗೆ
ವಿಭಾಗಿಸಿ ಸಂಸ್ಕೃತ ಕೋಶದಲ್ಲಿ ಅದರ ಒಂದೊಂದು ಅಕ್ಷರದ ಸೂಕ್ತ ಅರ್ಥವನ್ನು ಆಯ್ದು ಕ್ರಮವಾಗಿ ಜೋಡಿಸಿದಾಗ ಈ ಅದ್ಬುತ ಅರ್ಥ ಮತ್ತು ಮೂಲ
ಮಾರ್ಗದರ್ಶನ ನೀಡುತ್ತದೆ, "ಬೇರ್ಪಡಿಸಲಾಗದ್ದರಿಂದ
ಗೊಂದಲಕ್ಕೀಡಾಗಬೇಡ ಅಮೂಲ್ಯವಾದ ರತ್ನವನ್ನು ವ್ಯವಸ್ಥೆ ಮಾಡು" ಅಥವಾ “ಬೇರ್ಪಡಿಸಲಾಗದ
ಮಾಂತ್ರಿಕ ಸೂತ್ರವು ಸಂಪತ್ತಿನ ಒಕ್ಕೂಟವನ್ನು ವ್ಯಕ್ತಪಡಿಸುತ್ತದೆ, ಇದು ಭಾಗಶಃ ರತ್ನ ಮಾಂತ್ರಿಕ ಸೂತ್ರ ಕೊಡುತ್ತದೆ” ಎಂದು ಬರುತ್ತದೆ. ಅಂತಹ ಪದ
ಉಪಯೋಗದ ಅರ್ಥದಲ್ಲೇ ನಮ್ಮ ಮುಂದೆ ಇರುವ ಕರ್ತವ್ಯವನ್ನು ನೆನಪಿಸುತ್ತದೆ, ಪ್ರತಿಯೊಂದು ರತ್ನದಂತಹ ಅಕ್ಷರವನ್ನು ವ್ಯವಸ್ಥಿತವಾಗಿ ಬಿಡಿಸಿ ಅದರಲ್ಲಿನ
ಅರ್ಥವನ್ನು ಬೇರ್ಪಡಿಸುವುದೇ ಭಾಷೆಯ ವಿಧಾನ. ಇದು ಬಹಳ ಹಿಂದಿನ ಸನಾತನ ನಿಜ ಅರ್ಥವೂ ಅಹುದು ಆದರೆ
ಅದರ ಗೋಪ್ಯತೆಯನ್ನು ಈಗಾಗಲೇ ಅನೇಕ ಮಹನೀಯರು ಮತ್ತು ಭಗವದ್ಗೀತೆಯಲ್ಲಿ ಮತ್ತು ಈಗಾಗಲೇ ಹಿಂದಿನ
ಅಧ್ಯಾಯದಲ್ಲಿ ಉಲ್ಲೇಕಿಸಿದಂತೆ ಹೊರಹಾಕಲಾಗಿದೆ. ಆದರೆ ಅದನ್ನು ಬಹು ಚರ್ಚಿತವಾಗಿ ಅನೇಕ ಶ್ಲೋಕಗಳ
ಉಲ್ಲೇಕದಿ ಪ್ರಯತ್ನ ನಡೆದಿಲ್ಲ ಎಂಬುದಾಗಿ ಅರಿತು, ಇಂತಹ ಗೋಪ್ಯತೆ
ಹೊರಹಾಕುವುದರಿಂದಲೇ ಮುಂದೆ ಹಿಂದುತ್ವ ಸಿದ್ದಾಂತಗಳು ಈ ಭವ್ಯ ಜಗತ್ತಿಗೆ ಜಗದ್ಗುರುವಾಗಿ ತನ್ನ
ಅಧಿಪತ್ಯವನ್ನು ನಡೆಸುತ್ತದೆ, ನಡೆಸುವಂತಾಗಲೀ ಎಂಬ ಸದುದ್ದೇಶದಿಂದ
ಈ ಭವ್ಯ ಪ್ರಯತ್ನವನ್ನು ಎಲ್ಲರಿಗೂ ಸಾರಿ ಈ ಮುಖೇನ ಹೇಳುತ್ತಿದ್ದೇನೆ. ಇದನ್ನು ಹಿಂದೆ
ಮಹಾನುಬಾವರು ಮಾಡಿದ್ದಾರೆ, ಆದರೆ ಮತ್ತೆ ಗೋಪ್ಯತೆಗೆ ಜಾರಲು
ಕಾರಣವಾದುದ್ದು ಅನೇಕ ಕಾರಣ ಇದೆ, ಮುಂದಾದರೂ ಜಗತ್ತು ಬದಲಾಗಲೀ
ಎಂಬುದೇ ನನ್ನ ಆಶಯ.
ಹಿಂದು ಎಂದರೆ ಯಾರು ಅಕ್ಷರ ವ್ಯಾಖ್ಯಾನ
ಹಿಂದು = हिन्दु = हि + न् + दु = ह इ न द उ
ಅಕ್ಷರ
ಅರ್ಥ:- "ಬೆಂಕಿಯೊಂದಿಗೆ ಸೇವಿಸಲು ಅವಿಶ್ರಾಂತವಾಗಿ
ಉತ್ತೇಜಿಸುವಿಕೆ". ಅಥವ “ವೈದ್ಯತೆಯು ಅವಿಶ್ರಾಂತವಾಗಿ ಆಗಮಿಸುವಿಕೆಗೆ ಉಡುಗೊರೆಯನ್ನು
ಹಿಡಿತಕ್ಕೆ ಕರೆಯುವ” ಉಸಿರಾಟವನ್ನು ಬೆಂಕಿಯೊಂದಿಗೆ
ಸೇವಿಸಲು ವಿಶ್ರಾಂತಿ ಇಲ್ಲದೆ ಉತ್ತೇಜನ ನೀಡುವ ಜನರ ಒಂದು ಜನಾಂಗವೇ ಹಿಂದೂ. ಅಥವ ವೈದ್ಯತೆಯು
ಅವಿಶ್ರಾಂತವಾಗಿ ಆಗಮಿಸುವಿಕೆಗೆ ದೇಹದಲ್ಲಿ ಉಂಟಾಗುವ ಅಮೃತದಂತ ಉಡುಗೊರೆಯನ್ನು ಹಿಡಿತಕ್ಕೆ
ಕರೆಯುವ ಜನಾಂಗವೇ ಹಿಂದು. ಸಾಮಾನ್ಯವಾಗಿ
ಗ್ರಹಿಸಿದ ಉಸಿರಾಟದ ತಂತ್ರವೆಂದರೆ ನಾವು ಗಾಳಿಯನ್ನು ಶ್ವಾಸಕೋಶಕ್ಕೆ ತೆಗೆದುಕೊಂಡು ಉಸಿರು ಹೊರ
ಬಿಡುತ್ತೇವೆ. ಸನಾತನ ಋಷಿಗಳು ಮೊದಲ ಬಾರಿಗೆ ನಾವು ಉಸಿರಾಟವನ್ನು ಶ್ವಾಸಕೋಶಕ್ಕೆ ಮಾತ್ರವಲ್ಲ,
ಹೊಟ್ಟೆಯಲ್ಲಿನ ಬೆಂಕಿಗೆ ಕೂಡ ಉಸಿರನ್ನು ತೆಗೆದುಕೊಂಡುಹೋಗುವ ವಿಧಾನ ಇದೆ
ಎಂದು ತೋರಿಸಿದ್ದಾರೆ, ಇಡಾ ಮತ್ತು
ಪಿಂಗಳ ನಾಡಿಯು ಆಜ್ಞಾ ಚಕ್ರದ ಬಾಗದಿಂದ ಪ್ರಾರಂಭವಾಗಿ ಮೂಲಾಧಾರದವರೆಗೆ ಇರುತ್ತದೆ. ಒಮ್ಮೆ ನಾವು
ಉಸಿರನ್ನು ಮೂಗಿನಿಂದ ಎಳೆದಾಗ ಅದು ಆಜ್ಞಾಚಕ್ರ, ವಿಶುದ್ದ ಚಕ್ರ, ಅನಾಹತ ಚಕ್ರ, ಮಣಿಪೂರಕ ಚಕ್ರ, ಸ್ವಾಧಿಷ್ಟಾನ ಚಕ್ರ, ಮೂಲಾಧಾರ ಚಕ್ರ ಸೇರುತ್ತದೆ. ಮೂಲಾಧಾರದಲ್ಲಿನ
ಬೆಂಕಿ, ನೀರು ಮತ್ತು ದೇಹದಲ್ಲಿನ ಸಂಪೂರ್ಣ ದ್ರವದ ಬೆಂಕಿಯೊಂದಿಗೆ ಮತ್ತು
ಆವಿಯೊಂದಿಗೆ ಶುದ್ದೀಕರಿಸಿದ ಅಮೃತ ಉಸಿರನ್ನು
ವ್ಯವಸ್ಥಿತ ರೀತಿಯಲ್ಲಿ ಸುಷುಮ್ನಾ ನಾಡಿಯ ಮುಖೇನ ಸಹಸ್ರಾರದವರೆಗೆ ಹೊರಹಾಕುವ
ವಿಧಾನದಲ್ಲಿ ಸೇವಿಸುತ್ತೇವೆ, ಇದರಲ್ಲಿ ಅನೇಕ ವೈಜ್ಞಾನಿಕ
ಪ್ರಕ್ರಿಯೆ ನಡೆಯುತ್ತದೆ, ಅಂತಹ ಪ್ರಕ್ರಿಯೆ ಸಂಶೋಧನೇ ಮಾಡಿ
ಅನುಷ್ಟಾನಕ್ಕೆ ತಂದಿರುವವನೇ ಹಿಂದು. ಈ ಉಸಿರಾಟದ ವ್ಯವಸ್ಥೆಯು ನಮಗೆ ಅಪಾರವಾದ ಜ್ಞಾನ ಮತ್ತು
ಅಪಾರ ಆರೋಗ್ಯವನ್ನು ನೀಡುತ್ತದೆ, ಇದನ್ನು ಸಫಲತೆಯಿಂದ ಅನುಷ್ಟಾನ
ಮಾಡಿದ ಹಿಂದು ಅಂತಿಮವಾಗಿ ಋಷಿಯಾಗುತ್ತಾನೆ, ಅಧ್ಯಾತ್ಮಿ
ಆಗುತ್ತಾನೆ, ಕಾಲಜ್ಞಾನಿ ಆಗುತ್ತಾನೆ,
ಜಗದ್ಗುರು ಆಗುತ್ತಾನೆ. ಈ ರೀತಿಯ ಜನರನ್ನು, ಅಂದರೆ ದೇಹದಲ್ಲಿನ ಬೆಂಕಿ
ರೂಪದ ವಾಯುವಿನೊಂದಿಗೆ ಉಸಿರಾಟವನ್ನು ಸಂಪೂರ್ಣ ನರನಾಡಿಗಳ ದೇಹದಲ್ಲಿ ಸೇವಿಸಲು
ವಿಶ್ರಾಂತಿಯಿಲ್ಲದೆ ಉಸಿರಿಗೆ ಪ್ರಚೋದನೆ ಮಾಡುವ
ಕಲೆಯನ್ನು ಬಲ್ಲವರನ್ನು ಹಿಂದುಗಳು ಎಂದು ಕರೆಯಲಾಗುತ್ತದೆ. ಇದು ನಿಮಗೆ ವಿಚಿತ್ರವಾಗಿ
ಕಾಣಿಸಬಹುದು. ನೀವು ಈ ಸಂಪೂರ್ಣ ಪುಸ್ತಕವನ್ನು ಓದಿದರೆ ಮೇಲಿನ ಸತ್ಯವನ್ನು ನೀವು
ಬೇಷರತ್ತು ಒಪ್ಪಿಕೊಳ್ಳುತ್ತೀರಿ.
ಕೆಲವು
ವಿದ್ವಾಂಸರು ಹಿಂದುಗಳನ್ನು ಆರ್ಯರು ದ್ರಾವಿಡರು ಎನ್ನುತ್ತಾರೆ,
ಅಕ್ಷರ ಅರ್ಥದಲ್ಲಿ ಆರ್ಯಾ ಎಂದರೆ “ಧಾರ್ಮಿಕ
ಧ್ಯಾನವನ್ನು ಪಡೆಯುವ ದಿಕ್ಕಿನ ಬದಲಾವಣೆ” ಇದರ ರಹಸ್ಯವನ್ನು ಬಲ್ಲವರು ಆರ್ಯಾರಾದರೆ, ದ್ರಾವಿಡ ಎಂಬ ಪದದ ಅಕ್ಷರ ಅರ್ಥ “ಉತ್ಕೃಷ್ಟ ಗಿಡಮೂಲಿಕೆ ಜಲಾಂತರ್ಗಾಮಿ ಬೆಂಕಿ
ತಯಾರಿಸುವುದು”, ಇಲ್ಲಿ ಗಿಡಮೂಲಿಕೆ ಸೇವನೆಯಿಂದ ನಮ್ಮ
ಹೊಟ್ಟೆಪ್ರದೇಶದಲ್ಲಿನ ಜಲ ಪ್ರದೇಶದಲ್ಲಿ ಜೀರ್ಣಾಗ್ನಿ ತಯಾರಿಸುವ ಗಿಡಮೂಲಿಕಾ ವಿಧಾನವನ್ನು
ಬಲ್ಲವರು ದ್ರಾವಿಡರು. ಇಲ್ಲಿ ಆರ್ಯರು ಧ್ಯಾನ ಮಹತ್ವವನ್ನು ಬಲ್ಲವರಾದರೆ ದ್ರಾವಿಡರು ಕಾಡಿನ
ವಾಸಿಗಳಾಗಿ ಗಿಡಮೂಲಿಕಾ ರಹಸ್ಯವನ್ನು ತಿಳಿದವರು ಎಂದು ಶಬ್ದಗಳಲ್ಲಿ ಗುರುತಿಸಲಾಗಿದೆ.
ಓಂಕಾರಮೂಲಮಂತ್ರಾಧ್ಯಃ
ಪುನರ್ಜನ್ಮದೃಢಾಶಯಃ |
ಗೋಭಕ್ತೋ
ಭಾರತಗುರುರ್ಹಿಂದುರ್ಹಿಂಸನದೂಷಕಃ ||
(ಮಾಧವ ದಿಗ್ವಿಜಯ)
ಭಾವಾರ್ಥ:- ಎಲ್ಲದಕ್ಕೂ ಎಲ್ಲ ಮಂತ್ರಗಳಿಗೂ ಪ್ರಣವವೇ ಮೂಲವೆಂದು ನಂಬುವವನು, ಸಂಸಾರವಾಸನೆಯಿರುವವರೆಗೆ ಪುನರ್ಜನ್ಮವನ್ನು ಒಪ್ಪುವವನು, ಗೋಭಕ್ತನು, ಭಾರತಧರ್ಮದ ಸಿದ್ಧಾಂತಗಳನ್ನು
ಗುರುಸ್ಥಾನದಲ್ಲಿಟ್ಟು ನಡೆದುಕೊಳ್ಳತಕ್ಕವನು, ಹಿಂಸೆ-ಯನ್ನು
ನಿಂದ್ಯವಾಗಿ ಕಾಣುವವನು “ಹಿಂದು” ಎನ್ನಿಸಿಕೊಳ್ಳುವನು.
ಹಿನಸ್ತಿ ತಪಸಾ ಪಾಪಾನ್ ದೈಹಿಕಾನ್
ದುಷ್ಟ ಮಾನಸಾನ್ |
ಹೇತಿಭಿಃ ಶತ್ರುವರ್ಗಂ ಚ ಸ
ಹಿಂದುರಭಿಧೀಯತೇ ॥
(ಪಾರಿಜಾತ ಹರಣ ನಾಟಕಂ)
ಭಾವಾರ್ಥ;- ಯಾವಾತನು ತಪಸ್ಸಿನಿಂದ
ತನುಮನಗಳ ದೋಷಗಳನ್ನು ನಷ್ಟಮಾಡುವನೋ ಮತ್ತು ತೀಕ್ಷ್ಣ ಶಸ್ತ್ರಗಳಿಂದ ದುಷ್ಟ ಶತ್ರುಗಳನ್ನು
ನಾಶಿಸುವನೋ ಆತನು ಹಿಂದುವೆಂದು ಕರೆಯಿಸಿಕೊಳ್ಳುವನು.
'ಹೀನಂ ದೂಷಯತಿ ಇತಿ ಹಿಂದುಃ - ಹೀನವಾದುದನ್ನು ದೂಷ್ಯವಾದುದನ್ನು - ದೂಷಿಸುವವನು
ಹಿಂದು. ಅವನು ಅನುಸರಿಸುವ ಉದಾತ್ತ ಜೀವನ ವಿಧಾನ ಹಿಂದೂ ಧರ್ಮ.
ಎದುರ್ಕಳ
ಕೆ. ಶಂಕರನಾರಾಯಣ ಭಟ್ ರವರು ಬರೆದಿರುವ ಹಿಂದು ಧರ್ಮದ ಪರಿಚಯ ಪುಸ್ತಕದಲ್ಲಿ ಹಲವು ಚರ್ಚೆ
ಅದ್ಬುತವಾಗಿದೆ. “ಹಿಂದೂಧರ್ಮದ ಸರಿಯಾದ ಹೆಸರು ಸನಾತನ-ಧರ್ಮ ಎಂದಾಗಿರುತ್ತದೆ. ಶಾಶ್ಚತವಾದ
ವಸ್ತುವನ್ನು ಜಗತ್ತಿನಲ್ಲೆಲ್ಲಾ ಹರಡುವ, ಶಾಶ್ವತವಾದ ಸುಖವನ್ನು
ನೀಡಬಲ್ಲ, ಶಾಶ್ವತವಾಗಿ ಉಳಿಯಬಲ್ಲ, ಧರ್ಮ
ಎಂಬಂದು ಈ ಶಬ್ದದ ತಾತ್ಪರ್ಯ....... ವೇದ ಎಂದರೆ ಜ್ಞಾನ. ವೇದಾಂತ ಎಂದರೆ ಜ್ಞಾನದ ಅಂತ್ಯ. ಅಂದರೆ
ಯಾವ ಜ್ಞಾನವನ್ನು ಹೊಂದಿದರೆ ಇನ್ನೇನೂ ಹೊಸದಾಗಿ ಜ್ಞಾನಕ್ಕಾಗಿ ಸಾಧನೆ ಮಾಡಬೇಕಾಗಿಲವೋ ಆ ಜ್ಞಾನದ
ಸಿದ್ಧಿ ಎಂದು ಭಾವಾರ್ಥ. ಹಿಂದೂ ಧರ್ಮವು ಅಂತಹ ದಿವ್ಯ ಜ್ಞಾನವನ್ನು ಸಾಧಕರಿಗೆ ದೊರಕಿ-ಸುವುದರಲ್ಲಿ
ನೆರವಾಗುವ ಸಮರ್ಥ ಧರ್ಮವಾದ್ದರಿಂದ ವೇದಾಂತ-ಧರ್ಮ ಎಂದೂ ಕರೆಯುವ ವಾಡಿಕೆ ಬಂದಿದೆ. ....... ಹಿಂದೂ
ಧರ್ಮವನ್ನು ಸನಾತನಧರ್ಮ ಎಂದು ಕರೆಯುವುದು ಸರ್ವದೃಷ್ಟಿ-ಯಿಂದಲೂ ಸರಿ ....... ಸನಾತನಧರ್ಮ
ಎಂದರೆ ಯಾವ ಕಾಲಕ್ಕೂ ಬದಲಾವಣೆಹೊಂದದ ಶಾಶ್ವತವಾದ ಧರ್ಮ ಎಂದು ಸ್ಥೂಲವಾಗಿ ಹೇಳಬಹುದು. ಹಾಗೆಯೇ
ಶಾಶ್ವತ ವಸ್ತುವಿನ ಜ್ಞಾನವನ್ನು ಜಗತ್ತಿನಲ್ಲೆಲ್ಲಾ ಹರಡುವುದು ಎಂಬುದು ಸನಾತನ ಶಬ್ದದ ಇನ್ನೊಂದು
ಅರ್ಥವಾಗಿರುತ್ತದೆ. ಯಾವುದು ಜಗತ್ತಿನಲೆಲ್ಲಾ ಶಾಶ್ವತ ವಸ್ತುವಿನ ಜ್ಞಾನವನ್ನು
ವಿಸ್ತರಿಸುತ್ತದೆಯೋ ಅದು ಸನಾತನಧರ್ಮ ಎಂದೆನಿಸಿ-ರುತ್ತದೆ. ....... ಹಿಂದೂಧರ್ಮದ ಪ್ರಕಾರವಾಗಿ
ಮನುಷ್ಯನ ಜೀವನ ಎಂದರೆ ಒಂದು ಯಾತ್ರೆ ಎಂದು ಪರಿಗಣಿತವಾಗಿರುತ್ತದೆ. ಯಾತ್ರೆ ಎಂದರೆ ಜೀವಾತ್ಮನು
ಪರಮಾತ್ಮನನ್ನು ಸೇರಲು ಕೈಗೊಳ್ಳುವ ಯಾತ್ರೆಯಾಗಿದೆ. ....... ಜೀವನವ ಯಾವ ಹಂತವೇ ಆಗಲಿ,
ಯಾವ ಸಮಸ್ಯೆಯೇ ಆಗಲಿ. ಅದಕ್ಕೆ ಹಿಂದೂ ಧರ್ಮದಲ್ಲಿ ಸರಿಯಾದ ಮಾರ್ಗದರ್ಶಕ
ಪರಿಹಾರಗಳೂ ಅನುಷ್ಟಾನಸೂತ್ರಗಳೂ ಇವೆ. ಆದುದರಿಂದ ದೇಶಕಾಲಗಳ ಭೇದವಿಲ್ಲದೆ ಹಿಂದೂಧರ್ಮವು ಅತ್ಯಂತ
ಪ್ರಾಯೋಗಿಕವಾದ ಧರ್ಮ ಎನ್ನುವುದರಲ್ಲಿ ಎರಡಭಿ-ಪ್ರಾಯವಿರುವುದಿಲ್ಲ. ಈ ಧರ್ಮವು ಜೀವನವನ್ನು
ಆಳವಾದ ಹಾಗೂ ನ್ಯಾಯಸಮ್ಮತವಾದ ರೀತಿಯಲ್ಲಿ ಪರಿಶೀಲಿಸಿ ಜೀವ-ಜಗತ್ತು-ಜೀವನ ಇವುಗಳ ಒಳಗಿನ
ಸಂಬಂಧವನ್ನು ಸತ್ಯರೀತಿಯಲ್ಲಿ ಕಂಡುಕೊಂಡು ಬಾಳಿಗೊಂದು ನಂಬಿಕೆ ಮೌಲ್ಯಗಳನ್ನು ನೀಡಿರುತ್ತದೆ.
ಅಷ್ಟೇ ಅಲ್ಲದೆ ಜೀವನದಲ್ಲಿ ಮನುಷ್ಯನ ಸರ್ವತೋಮುಖವಾದ ಹಾಗೂ ಧರ್ಮಸಮ್ಮತವಾದ ಅಭಿವೃದ್ಧಿಗೆ
ಹಿಂದೂಧರ್ಮವು ಗಮನವನ್ನೂ ನೀಡಿದ್ದು, ಅದಕ್ಕನುಗುಣವಾಗಿ ಜೀವನ ಧರ್ಮಶಾಸ್ತ್ರಗಳು,
ವಿಧಿನಿ-ಯಮಗಳು ಇತ್ಯಾದಿಗಳೆಲ್ಲ ರೂಪಿಸಲ್ಪಡುತ್ತವೆ. ...”
ಧರ್ಮ
ಎಂದರೇನು?
ಧರ್ಮ = धर्म = ध र म
ಅಕ್ಷರ
ಅರ್ಥ:- ಪ್ರಕಾಶಮಾನ ಮಾಂತ್ರಿಕ ಸೂತ್ರವನ್ನು ನೀಡುವುದು
ಪಾಂಡವರಲ್ಲಿ
ಧರ್ಮರಾಯ ಧರ್ಮದ ರಹಸ್ಯವನ್ನರಿಯದೆ ಒಮ್ಮೆ ಭೀಷ್ಮ ಪಿತಾಮಹರ ಬಳಿ “ವಿದ್ಮ ಚೈವ ನ ವಾ ವಿದ್ಮ ಶಕೃಂ
ವಾ ವೇದಿತುಂ ನ ವಾ। ಅಣೀಯಾನ್ ಕ್ಷುರಧಾರಾಯಾಃ ಗರೀಯಾನಪಿ ಪರ್ವತಾತ್ ॥ (ಶಾಂತಿಪರ್ವ 260.12) ಅರ್ಥಾತ್ “ತಾತ,
ಧರ್ಮದ ಅರ್ಥ ತಿಳಿದಂತೆ ಅಗುತದೆ. ಅದರೆ ಏನೂ ಸರಿಯಾಗಿ ತಿಳಿಯುವುದಿಲ್ಲ ತಿಳಿಯುವುದು ಸಾಧ್ಯವೋ
ಅಲ್ಲವೋ ಎಂಬುದನ್ನು ಅರಿಯುವುದೂ ಕಷ್ಟ ಏಕೆಂದರೆ ಇದು ಕತ್ತಿಯ ತೀಕ್ಷ್ಣವಾದ ಅಲುಗಿಗಿಂತ
ಸೂಕ್ಷ್ಮವೂ ಪರ್ವತಕ್ಕಿಂತ ಸ್ಥೂಲವೂ ಆಗಿದೆ. ಒಮ್ಮೆ ಸ್ಪಷ್ಟವಾಗಿ ತೋರಿದರೆ ಮಗದೊಮ್ಮೆ ಗಮನಕ್ಕೆಬಾರದೆ
ಓಡುತದೆ” ಎನ್ನುತಾರೆ.
ಏತದ್ದೇಶಪ್ರಸೂತಸ್ಯ ಸಕಾಶಾದಗ್ರಜನ್ಮನಃ ।
ಸ್ವಂ ಸ್ಪಂ
ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ
ಸರ್ವಮಾನವಾಃ ॥
ಮನುಸ್ಮೃತಿ
ಭಾವಾರ್ಥ:- ಕಾಲಮಹಿಮೆಯಿಂದ ಈ ಧರ್ಮಕ್ಕೆ ಬಾಧೆಯುಂಟಾದಾಗ ಶ್ರೀರಾಮ, ಶ್ರೀಕೃಷ್ಣ ಮುಂತಾದ ಮಹಾತ್ಮರು
ಅವತರಿಸಿ. ಧರ್ಮವನ್ನು ಸುಸ್ಥಿತಿಗೆ ತಂದಿರಿಸುತ್ತಾ ಬಂದಿದ್ದಾರೆ.
ವಿದ್ವಾನ್
ರಂಗನಾಥ ಶರ್ಮ ಹೇಳುತ್ತಾರೆ “ಆಗ ರಾಜ್ಯದಲ್ಲಿ ಧರ್ಮರಕ್ಷಣೆಯು ಕ್ಷತ್ರಿಯರ ಹೊಣೆಯಾಗಿತು,
"ನಂದಾಂತಂ ಕ್ಷತ್ರಿಯಕುಲಂ' ಎಂಬ
ವಚನದಂತೆ ಈ ಕಲಿಯುಗದಲ್ಲಿ ಕ್ಷತ್ರಿಯ ಕುಲವೇ ಅಳಿಸಿಹೋಯಿತು. ಬ್ರಾಹ್ಮಣರ ಮಾರ್ಗದರ್ಶನದಲ್ಲಿ
ಕ್ಷತ್ರಿಯರು ಧರ್ಮವನ್ನು ರಕ್ಷಿಸುತಿದ್ದರು. ಕ್ಷತ್ರಿಯರು ಅಳಿದಾಗ ಮಾರ್ಗ ದರ್ಶಕರಾಗಿದ್ದ
ಬ್ರಾಹ್ಮಣರೂ ಕ್ರಮವಾಗಿ ತಪ್ಪದಾರಿಗೆ ಇಳಿಯತೊಡಗಿದರು. ಅವರದು ಬುದ್ದಿಬಲ, ಬಾಹುಬಲವಲ್ಲ, ಅಜ್ಞಾನದಿಂದಲೋ ಅಥವಾ ಗುಂಪುಕಟ್ಟಿ
ಸ್ವಾರ್ಥವನ್ನು ಸಾಧಿಸುವುದಕ್ಕಾಗಿಯೇ ತಮಗೆ ತೋರಿದಂತೆ ಗ್ರಂಥಗಳನ್ನು ರಚಿಸಿ
ಪ್ರಚಾರಮಾಡತೊಡಗಿದರು. ಹೊಸಮತಗಳು ಬಂದವು. ಸಂಪ್ರದಾಯ ಸಿದ್ದವಾದ ವೇದಾರ್ಥವೂ ಧರ್ಮಸ್ವರೂಪವೂ
ಮಾಸಿದವು. ಈ ಸಮಯದಲ್ಲಿ ಶ್ರೀ ಶಂಕರಭಗವತ್ಪಾದರು ಉದಯಿಸಿದರು. ಅನಾದಿಯಾಗಿ ಬಂದಿದ್ದ ಸಂಪ್ರದಾಯ
ಸಿದ್ಧವಾದ ವೈದಿಕ ಧರ್ಮವನ್ನು ಉಳಿಸಿಬೆಳೆಸಲು ಸರ್ವಪ್ರಯತ್ನಗಳನ್ನು ಮಾಡಿದರು”.
"ಯತೋಕಭ್ಯುದಯ
ನಿಃಶ್ರೇಯಸಸಿದ್ಧಿ, ಸ ಧರ್ಮಃ' ಎಂದು
ಶಾಸ್ತ್ರಕಾರರು ಹೇಳಿದ್ದಾರೆ. ಯಾವುದರಿಂದ ಸರ್ವ ಬೋಗಗಳು ಮತ್ತು ಮೋಕ್ಷ ಸಿದ್ಧಿಸುತ್ತದೆಯೋ ಅದು
ಧರ್ಮ.
ಡಾ|
ಅರ್ನಾಲ್ಡ್ ಟಾಯೆನ್ಬಿ ಹೀಗೆ ವರ್ಣಿಸಿದ್ದಾರೆ - "ಇಪ್ಪತ್ತನೆಯ
ಶತಮಾನವು ಜ್ಞಾನದ, ತಂತ್ರಜ್ಞಾನದ ಶತಮಾನ. ಇದರಲ್ಲಿ ವಿಜ್ಞಾನ ತಂತ್ರ
ಜ್ಞಾನಗಳು ಬೆಳೆದು, ಮಾನವ ಕುರುಡಾಗಿ ನುಗ್ಗುತ್ತಾ ವಿನಾಶದ ಅಂಚಿಗೆ
ಬರುತಾನೆ. ಅದರೆ ಬರಲಿರುವ ಶತಮಾನ ಇಪ್ಪತ್ತೊಂದನೆಯ
ಶತಮಾನ ಧರ್ಮದ ಶತಮಾನ, ಮಾನವನನ್ನು ರಕ್ತಸುವ ಶತಮಾನ. ಈ
ಶತಮಾನವನ್ನು ನಿರ್ಮಿಸುವುದು ಭಾರತದ ತರುಣರ ಹೊಣೆ. ಅವರೇ ಇದನ್ನು ರೂಪಿಸಬಲ್ಲರು”
"ಧರ್ಮೊ ವಿಶ್ವಸ್ಯ ಜಗತಃ ಪ್ರತಿಷ್ಠಾ'' ಎಂದರೆ “ಸಮಸ್ತ
ಜಗತಿನ ವ್ಯವಹಾರವು ಧರ್ಮದ ತಳಹದಿಯ ಮೇಲೆ ನಿಂತಿದೆ”. ಯಾವುದು ಜಗತ್ತನ್ನು ಧರಿಸುತ್ತದೆಯೋ ಧರಿಸಿ
ಪೋಷಿಸುತದೆಯೋ ಅದು ಧರ್ಮ. "ವೇದೋs ಖಲೋ ಧರ್ಮಮೂಲಂ''
ಎಂದರೆ “ಸಮಸ್ತ ವೇದವೂ ಧರ್ಮಕ್ಕೇ ಮೂಲವಾದದ್ದು” ಧರ್ಮದ ಮೂಲ ಅಂಶಗಳು
ವೇದಗಳಿಂದ ಹರಿದು ಬಂದಿದೆ. "ಚೋದನಾಲ-ಕ್ಷಣೋsರ್ಥೋ ಧರ್ಮಃ''
ಎಂದರೆ “ಮನುಷ್ಯನ ಕರ್ತವ್ಯವೆಂದು ವೇದವು ಯಾವುದನ್ನು ವಿಧಿಸಿದೆಯೋ ಅದು
ಧರ್ಮ” "ಧರ್ಮಬ್ರಹ್ಮಣೇ ವೇದ್ಯೆಕವೇದ್ಯೇ'' "ಧರ್ಮ,
ಬ್ರಹ್ಮ - ಇವೆರಡರ ಸ್ವರೂಪವನ್ನು ವೇದದಿಂದ ಮಾತ್ರವೇ ತಿಳಿಯಲು ಸಾಧ್ಯ'
ಎಂದು ಪ್ರಾಚೀನರ ಸೂಕ್ತಿ ಇದೆ. ಮಹಾಭಾರತದಲ್ಲಿ "ಆತ್ಮಜ್ಞಾನಂ
ತಿತಿಕ್ಷಾಚ ಧರ್ಮಃ ಸಾಧಾರಣೋ ನೃಪ'' ಎಂಬ ಶ್ಲೋಕದಲ್ಲಿ
ಆತ್ಮಜ್ಞಾನವನ್ನು ಧರ್ಮವೆಂದು ಸ್ವಷ್ಟವಾಗಿ ನಿರ್ದೇಶಿಸಿದೆ.
ಅಯಂ ಧರ್ಮೋsಯಮಧರ್ಮ
ಇತಿ ಶಾಸ್ತ್ರಮೇವ ವಿಜ್ಞಾನೇ ಕಾರಣಮ್ ।
ಅತೀಂದ್ರಿಯತ್ಪಾತ್ತಯೋಃ
ಅನಿಯತದೇಶಕಾಲನಿಮಿತ್ತತ್ವಾಚ್ಚ||
ಶ್ರೀ ಶಂಕರ ಭಗವತ್ಪಾದರ ಸೂ. ಭಾ. ೩-೧-೨೫
ಭಾವಾರ್ಥ:- ಇದು ಧರ್ಮ, ಇದು ಅಧರ್ಮ ಎಂದು ತಿಳಿಯುವುದಕ್ಕೆ
ವೇದವೇ ಸಾಧನ. ಏಕೆಂದರೆ ಧರ್ಮಾಧರ್ಮಗಳು ಕಣ್ಣಿಗೆ ಕಾಣಿಸತಕ್ಕವಲ್ಲ ಮತ್ತು ದೇಶ ಕಾಲ ನಿಮಿತ್ತಗಳು
ಅವುಗಳಿಗೆ ನಿಯತವಾಗಿಲ್ಲ.
ಆಗಮಮಾತ್ರಸಮಧಿಗಮ್ಯಏವ ತ್ವಯಮರ್ಥೊ
ಧರ್ಮವತ್ ॥
ಶ್ರೀ ಶಂಕರ ಭಗವತ್ಪಾದರ ಸೂ. ಭಾ.೨-೭-೬
ಭಾವಾರ್ಥ:-
ಈ ಬ್ರಹ್ಮಸ್ವರೂಪವು ವೇದದಿಂದ ಮಾತ್ರ ತಿಳಿಯಬಹುದಾದದ್ದು
ಧರ್ಮವಿದ್ದಂತೆ.''
ವೇದೋ ಖಿಲೋ ಧರ್ಮಮೂಲಂ ಸ್ಮೃತಿಶೀಲೇ ಚ
ತದ್ವಿದಾಮ್ ।
ಅಚಾರಶ್ಚೈವ ಸಾಧೂನಾಮಾತ್ಮನಸ್ತುಷ್ಟಿರೇವ
ಚ ॥
ಮನುಸ್ಮೃತಿ ೨. ೬
ಭಾವಾರ್ಥ:- ಸಮಸ್ತ ವೇದಗಳೂ ಧರ್ಮಕ್ಕೆ ಮೂಲಾಧಾರ ಪ್ರಮಾಣ. ವೇದಜ್ಞರ ಸ್ಮೃತಿ ಶೀಲಗಳು
ಧರ್ಮಕ್ಕೆ ಆಧಾರವಾಗುತವೆ. ಅಂತೆಯೇ ಶಿಷ್ಠರಾದ ಸಾಧು ಜನರ ಆಚಾರವೂ ಧರ್ಮ ವಿಚಾರ ಮಾಡತಕ್ಕವನ
ಆತ್ಮತುಷ್ಟಿಯೂ ಪ್ರಮಾಣವಾಗುತದೆ''
ಪರಿತ್ಯಜೇದರ್ಥಕಾಮೌಯೌ ಸ್ಯಾತಾಂ
ಧರ್ಮವರ್ಜಿತೌ।
ಧರ್ಮಂ ಚಾಪ್ಯಸುಖೋದರ್ಕಂ
ಲೋಕವಿಕ್ರುಷ್ಠಮೇವ ಚ ॥
ಮನುಸ್ಮೃತಿ - ೪-೧೭೯
ಭಾವಾರ್ಥ:- ಅರ್ಥಕಾಮಗಳು (ಐಶ್ವರ್ಯ ಬಯಕೆಗಳು) ಧರ್ಮ-ಬಾಹಿರ ಆದರೆ,
ಅವನ್ನು ತ್ಯಜಿಸತಕ್ಕದ್ದು ಧರ್ಮದ ಪರಿಣಾಮವು ಸುಖವನ್ನು ನೀಡದೆ ದುಃಖಕಾರಿಯೇ
ಆಗುವುದಾದರೆ, ಮತ್ತು ಜನರ ಆಕ್ರೋಶಕ್ಕೆ ಕಾರಣ ಆಗುವುದಾದರೆ ಅಂತಹ
ಧರ್ಮವನ್ನೂ ತ್ಯಜಿಸಿ-ಬಿಡಬೇಕು.
ಅಹಿಂಸಾ ಸತ್ಯಮಸ್ತೇಯಂ ಶೌಚ ಮಿಂದ್ರಿಯ
ನಿಗ್ರಹಃ |
ಏತಂ ಸಾಮಾಜಿಕಂ ಧರ್ಮಂ ಚಾತುರ್ವರ್ಣೈsಬ್ರವೀನ್ಮನುಃ॥
ಮನುಸ್ಮೃತಿ - ೧೦-೬೩
ಭಾವಾರ್ಥ:- ಹಿಂಸಾತ್ಯಾಗ, ಯಥಾರ್ಥವಾದ ನುಡಿ, ಕಳ್ಳತನ ಮಾಡದಿರುವುದು ಅನ್ಯಾಯವಾಗಿ ಪರಧನವನ್ನು ತೆಗೆದುಕೊಳ್ಳದಿರುವುದು, ಮನಸ್ಸು, ಮಾತು, ದೇಹ ಈ
ಮೂರರಲ್ಲಿ ಶುದ್ಧತೆ ಇಂದ್ರಿಯ ಸಂಯಮ ಈ ನಾಲ್ಕು ಗುಣಗಳು ನಾಲ್ಕು ವರ್ಣದವರೂ ಪಾಲಿಸಬೇಕಾದ ಧರ್ಮ.
ಧರ್ಮಾರ್ಥಕಾಮಾಃ ಸಮಮೇವ ಸೇವ್ಯಾ ಯೋ ಹ್ಯೇಕಭಕ್ತಃ
ಸ ನರೋ ಜಘನ್ಯ |
ತಯೋಸ್ತು ದಾಕ್ಷ್ಯಂ ಪ್ರವದಂತಿ ಮಧ್ಯಂ ಸ
ಉತ್ತಮೋ ಯೋsಭಿರತಸ್ತಿವರ್ಗೇ ॥
ಮಹಾಭಾರತ, ಶಾಂತಿ ಪರ್ವ-
೧೬೨-೪೦
ಭಾವಾರ್ಥ:-
ಧರ್ಮ, ಅರ್ಥ (ಐಶ್ವರ್ಯ) ಕಾಮ
(ಬಯಕೆಗಳು) ಇವು ಮೂರನ್ನೂ ಸಮವಾಗಿ ಸೇವಿಸಬೇಕು. ಇವುಗಳಲ್ಲಿ ಒಂದನ್ನು ಮಾತ್ರ ಸೇವಿಸತಕ್ಕವನು
ಕನಿಷ್ಠದರ್ಜೆಯವನು. ಯಾವುದಾದರೂ ಎರಡರಲ್ಲಿ ಆಸಕ್ತನಾದವನು ಮಧ್ಯಮ. ಮೂರರಲ್ಲಿಯೂ ಆಸಕ್ತನಾದವನು
ಶ್ರೇಷ್ಠ.
ನ ಸಾ ಸಭಾ ಯತ್ರ ನ ಸಂತಿ ವೃದ್ಧಾ ನ ತೇ
ವೃದ್ಧಾಯೇ ನ ವದಂತಿ ಧರ್ಮಂ |
ನಾಸೌ ಧರ್ಮೋ ಯತ್ರ ನ ಸತ್ಯಮಸ್ತಿ ನ ತತ್
ಸತ್ಯಂ ಯತ್ ಛಲೇನಾಭ್ಯುಪೇತಮ್ ॥
ಮಹಾಭಾರತ, ಉದ್ಯೋಗ. ೩೫-೫೮
ಭಾವಾರ್ಥ:- ಎಲ್ಲಿ ವೃದ್ದರಿಲ್ಲವೋ ಅದು ಸಭೆಯಲ್ಲ ಯಾರು ಧರ್ಮವನ್ನು ನುಡಿಯುವುದಿಲ್ಲವೋ ಅವರು
ವೃದ್ದರಲ್ಲ. ಎಲ್ಲಿ ಸತ್ಯವಿಲ್ಲವೋ ಅದು ಧರ್ಮವಲ್ಲ, ಯಾವುದು
ಹಟದಿಂದ ಕೂಡಿದ್ದೋ ಅದು ಸತ್ಯವಲ್ಲ.
ನ ಕುರ್ಯಾತ್ ಕರ್ಹಿಚಿತ್ಸಂಗಂ
ತಮಸ್ತೀವ್ರಂ ತಿತೀರಿಷುಃ |
ಧರ್ಮಾರ್ಥಕಾಮಮೋಕ್ಷಾಣಾಂ
ಯದತ್ಯಂತವಿಘಾತಕಮ್ ||
ಭಾಗವತ, ೪-೨೨-೩೪
ಭಾವಾರ್ಥ:-
ದಟ್ಟವಾದ ಕತ್ತಲೆಯನ್ನು (ಅಜ್ಞಾನವನ್ನು) ದಾಟಲಿಚ್ಛಿಸುವವನು ಯಾವ
ವಸ್ತುವಿನಲ್ಲಿಯೂ ವ್ಯಾಮೋಹವನ್ನಿಡಬಾರದು. ಏಕೆಂದರೆ, ವ್ಯಾಮೋಹವೇ
ಮಾನವನ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ನಾಶಮಾಡುತ್ತದೆ.
ಏಕ ಏವ ಸುಹೃದ್ಧರ್ಮೋ ನಿಧನೇsಪ್ಯನುಯಾತಿ ಯಃ |
ಶರೀರೇಣ ಸಮಂ ನಾಶಂ ಸರ್ವಮನ್ಯದ್ಧಿ
ಗಚ್ಛತಿ ॥
ಮನುಸ್ಮೃತಿ ೮-೧೭
ಭಾವಾರ್ಥ:-
ಧರ್ಮ ಒಂದೇ ನಿಜವಾದ ಮಿತ್ರ. ಸಾವಿನಲ್ಲಿಯೂ ಸಹ
ಜೊತೆಯಲ್ಲಿರುತ್ತದೆ. ಉಳಿದ ಎಲ್ಲವೂ ಶರೀರದೊಡನೆಯೇ ನಾಶವಾಗುತ್ತವೆ.
ಧ್ಯಾನಮೇವ ಪರೋ ಧರ್ಮೋ ಧಾನಮೇವ ಪರಂ ತಪಃ |
ಧ್ಯಾನಮೇವ ಪರಂ ಶೌಚಂ ತಸ್ಮಾದ್ಧ್ಯಾನಪರೋ
ಭವೇತ್ ॥
ಅತ್ರಿಸ್ಮೃತಿ ೪-೯
ಭಾವಾರ್ಥ:- ಧ್ಯಾನವೇ ಶ್ರೇಷ್ಠವಾದ ಧರ್ಮ. ಧ್ಯಾನವು ಶ್ರೇಷ್ಠವಾದ ತಪಸ್ಸು. ಧ್ಯಾನವೇ ಒಳ್ಳೆಯ
ಶೌಚ. ಆದುದರಿಂದ ಧ್ಯಾನವನ್ನು ಮಾಡಬೇಕು.
ಆಚಾರಃ ಪರಮೋ ಧರ್ಮಃ ಶ್ರುತ್ಯುಕ್ತಃ ಸ್ಮಾರ್ತ ಏವ ಚ |
ತಸ್ಮಾದಸ್ಮಿನ್ ಸದಾ ಯುಕ್ತಃ ನಿತ್ಯಂ
ಸ್ಯಾದಾತ್ಮವಾನ್ನರಃ ॥
ಮನುಸ್ಮೃತಿ ೧-೧೦೮
ಭಾವಾರ್ಥ:- ವೇದಗಳಲ್ಲಿ ಸ್ಮೃತಿಗಳಲ್ಲಿ ಹೇಳಿರುವ ಸದಾಚಾರವು ಶ್ರೇಷ್ಠವಾದ ಧರ್ಮ. ಆದುದರಿಂದ
ಮಾನವನು ಅವುಗಳನ್ನು ಸರ್ವದಾ ಕಾಪಾಡಿಕೊಂಡು ಆತ್ಮಜ್ಞಾನವನ್ನು ಪಡೆಯಬೇಕು.
ನ ಸಂಶಯಂ ಪ್ರಪದ್ಯೇತ ನಾಕಸ್ಮಾದಪ್ರಿಯಂ
ವದೇತ್ |
ನಾಹಿತಂ ನಾನೃತಂ ಚೈವ ನ ಸ್ತೇನಃ ಸ್ಯಾನ್ನ
ವಾರ್ಧುಷೀ ॥
ಯಾಜ್ಞವಲ್ಕ್ಯ, ೧-೧೩೨
ಭಾವಾರ್ಥ:- ಪ್ರಾಣಸಂಶಯವನ್ನುಂಟುಮಾಡುವ ಕೆಲಸವನ್ನು ಮಾಡಬಾರದು. ಕಾರಣವಿಲ್ಲದೆ
ಉದ್ದೇಗವನ್ನುಂಟುಮಾಡುವ, ಹಿತವಲ್ಲದ, ಸುಳ್ಳಾದ
ಮಾತುಗಳನ್ನಾಡಬಾರದು. ಕಳ್ಳನಾಗಬಾರದು. ಬಡ್ಡಿಯಿಂದ ಜೀವನ ಮಾಡಬಾರದು.
ತಪಃ ಶೌಚಂ ದಯಾ ಸತ್ಯಂ ಇತಿ ಪಾದಾಃ ಕೃತೇ
ಕೃತಾಃ |
ಅಧರ್ಮಾಂಶೈಸ್ತ್ರಯೋ ಭಗ್ನಾಃ
ಸ್ಮಯಸಂಗಮದೈಸ್ತವ ||
ಭಾಗವತ, ೧-೧೭-೨೪
ಭಾವಾರ್ಥ:- ಕೃತಯುಗದಲ್ಲಿ ಧರ್ಮಕ್ಕೆ ತಪಸ್ಸು, ಶುದ್ಧತೆ,
ದಯೆ, ಸತ್ಯ ಎಂಬ ನಾಲ್ಕು ಪಾದಗಳು ಇದ್ದವು.
ಅಧರ್ಮದ ಅಂಶಗಳಾದ, ಅಹಂಕಾರ, ಸಹವಾಸ
ಮತ್ತು ಮದಗಳಿಂದ, ಅದರ ಮೂರು ಪಾದಗಳು ಅಂದರೆ ತಪಸ್ಸು, ಶುದ್ಧತೆ ಮತ್ತು ದಯೆ ಕಲಿಯುಗದಲ್ಲಿ ಮುರಿದು ಹೋದವು.
ಧರ್ಮಾದರ್ಥಃ ಪ್ರಭವತೇ ಧರ್ಮಾತ್
ಪ್ರಭವತೇ ಸುಖಂ |
ಧರ್ಮೇಣ ಲಭತೇ ಸರ್ವಂ ಧರ್ಮಸಾರಮಿದಂ ಜಗತ್
||
ರಾಮಾಯಣ, ಅಯೋಧ್ಯಾ ೯-೩೦
ಭಾವಾರ್ಥ:- ಧರ್ಮದಿಂದಲೇ ಅರ್ಥ; ಧರ್ಮದಿಂದಲೇ ಸುಖ. ಸಕಲ
ಅಭೀಷ್ಟವೂ ಧರ್ಮದಿಂದ ಕೈಗೂಡುತ್ತದೆ. ಈ ಜಗತ್ತು ಧರ್ಮದ ತಳಹದಿಯ ಮೇಲೆ ನಿಂತಿದೆ.
ಧರ್ಮೋ ಹಿ ಪರಮೋ ಲೋಕೇ ಧರ್ಮೇ ಸತ್ಯಂ
ಪ್ರತಿಷ್ಠಿತಂ |
ಧರ್ಮಸಂಶ್ರಿತಮೇತಚ್ಚ
ಪಿತುರ್ವಚನಮುತ್ತಮಮ್ ॥
ರಾಮಾಯಣ, ಅಯೋಧ್ಯಾ. ೨೧-೪೧
ಭಾವಾರ್ಥ:- ಲೋಕದಲ್ಲಿ ಧರ್ಮವೇ ಶ್ರೇಷ್ಠವಾದದ್ದು. ಧರ್ಮದಲ್ಲಿ ಸತ್ಯವು ನೆಲೆಸಿದೆ. ಪಿತೃವಾಕ್ಯಪರಿಪಾಲನವು
ಧರ್ಮವನ್ನಾಶ್ರಯಿಸಿದೆ.
ನ ಹಿ ಧರ್ಮಾರ್ಥಸಿದ್ಧ್ಯರ್ಥಂ ಪಾನಮೇವಂ
ಪ್ರಶಸ್ಯತೇ |
ಪಾನಾದರ್ಥಶ್ಚ ಧರ್ಮಶ್ಚ ಕಾಮಶ್ಚ
ಪರಿಹೀಯತೇ ॥
ರಾಮಾಯಣ, ಕಿಷ್ಕಿಂಧಾ ೩೩-೪೬
ಭಾವಾರ್ಥ:- ಧರ್ಮಾರ್ಥಗಳನ್ನು ಸಾಧಿಸತಕ್ಕವರಿಗೆ ಮದ್ಯಪಾನವು ಯೋಗ್ಯವಲ್ಲ. ಧರ್ಮ, ಅರ್ಥ, ಕಾಮ ಈ ಮೂರು ಮದ್ಯಪಾನದಿಂದ ಕ್ಷೀಣಿಸುತ್ತವೆ.
ನ ವಿದ್ಯಯಾ. ಕೇವಲಯಾ ತಪಸಾ ವಾsಪಿ ಪಾತ್ರತಾ |
ಯತ್ರ ವೃತ್ತಮಿಮೇ ಚೋಭೇ ತದ್ಧಿ ಪಾತ್ರಂ
ಪ್ರಕೀರ್ತಿತಮ್ ॥
ಯಾಜ್ಞವಲ್ಕ್ಯ, ೧-೨೦೦
ಭಾವಾರ್ಥ:- ಬರೀ ವಿದ್ಯೆಯಿಂದಾಗಲೀ, ತಪಸ್ಸಿನಿಂದಾಗಲೀ ಯಾರೂ 'ಪಾತ್ರ'ನೆನಿಸುವುದಿಲ್ಲ. ಯಾರಲ್ಲಿ ನಡತೆ, ವಿದ್ಯೆ ಮತ್ತು ತಪಸ್ಸು ಇರುತ್ತವೆಯೋ ಅವನೇ ಸತ್ಪಾತ್ರ.
ಬ್ರಾಹ್ಮೇ ಮುಹೂರ್ತೇ ಚೋತ್ಥಾಯ
ಚಿಂತಯೇದಾತ್ಮನೋ ಹಿತಂ
ಧರ್ಮಾರ್ಥಕಾಮಾನ್ ಸ್ವೇ ಕಾಲೇ ಯಥಾಶಕ್ತಿ
ನ ಹಾಪಯೇತ್ ॥
ಯಾಜ್ಞವಲ್ಕ್ಯ, ೧-೧೧೫
ಭಾವಾರ್ಥ:-
ಮುಂಜಾನೆ ಎದ್ದು ತನಗೆ ಯಾವುದು ಒಳ್ಳೆಯದೆಂಬುದನ್ನು ಅಲೋಚಿಸಬೇಕು.
ಆಯಾ ಕಾಲದಲ್ಲಿ ಧರ್ಮ, ಅರ್ಥ, ಕಾಮಗಳನ್ನು
ಯಥಾಶಕ್ತಿ ಅನುಭವಿಸಬೇಕು, ಬಿಡ ಬಾರದು.
ಯವೀಯಾನಾತ್ಮನಃ ಪುತ್ರಃ ಶಿಷ್ಯಶ್ಚಾಪಿ
ಗುಣೋದಿತಃ |
ಪುತ್ರವತ್ತೇ ತ್ರಯಶ್ಚಿಂತ್ಯಾ
ಧರ್ಮಶ್ಚೇದತ್ರ ಕಾರಣಮ್ ॥
ರಾಮಾಯಣ, ಕಿಷ್ಕಿಂಧಾ,
೧೮-೧೪
ಭಾವಾರ್ಥ:- ಧರ್ಮಮಾರ್ಗವೇ ಯುಕ್ತವೆಂದು ನಂಬುವುದಾದರೆ, ತನ್ನ
ತಮ್ಮ, ಮಗ ಮತ್ತು ಗುಣಶಾಲಿಯಾದ ಶಿಷ್ಯ, ಈ ಮೂವರನ್ನೂ ಮಕ್ಕಳೆಂದು ತಿಳಿದು ವಾತ್ಸಲ್ಯದಿಂದ ನೋಡಿಕೊಳ್ಳಬೇಕು.
ಧರ್ಮಾರ್ಥೌ ಯತ್ರ ನ ಸ್ಯಾತಾಂ
ಶುಶ್ರೂಹಾವಾsಪಿ ತದ್ವಿಧಾ |
ತತ್ರ ವಿದ್ಯಾ ನ ವಕ್ತವ್ಯಾ ಶುಭಂ
ಬೀಜಮಿವೋಷರೇ ॥
ಮನುಸ್ಮೃತಿ, ೨-೧೧೨
ಭಾವಾರ್ಥ:- ಯಾರಲ್ಲಿ ಧರ್ಮವಿಲ್ಲವೋ, ಯಾರಿಂದ ಪ್ರಯೋಜನವಿಲ್ಲವೋ,
ಯಾರು ಸೇವೆ ಮಾಡುವುದಿಲ್ಲವೋ ಅಂಥವರಿಗೆ ವಿದ್ಯೆಯನ್ನು ಹೇಳಬಾರದು. ಅವರಿಗೆ ಕಲಿಸಿದರೆ
ಒಳ್ಳೆಯ ಬೀಜವನ್ನು ಬಂಜರುಭೂಮಿಯಲ್ಲಿ ಬಿತ್ತಿದಂತಾಗುತ್ತದೆ.
ವಿಪ್ರೋ ವೃಕ್ಷ ಮೂಲಮಸ್ತ್ಯಸ್ಯ ಸಂಧ್ಯಾ ।
ವೇದಾಃ ಶಾಖಾ ಧರ್ಮಕರ್ಮಾಣಿ ಪತ್ರಂ ॥
ತಸ್ಮಾನ್ನೂಲಂ ಯತ್ನತೋ ರಕ್ಷಣೀಯಂ । ಛಿನ್ನೇ
ಮೂಲೇ ನೈವ ವ್ಯಕ್ಷೋ ನ ಶಾಖಾ ॥
ದೇವೀ ಭಾಗವತ
ಭಾವಾರ್ಥ:-
ಜ್ಞಾನಿಯೆಂಬ ವೃಕ್ಷಕ್ಕೆ ಶಾಖೆಗಳೇ ವೇದಗಳು. ಧರ್ಮ ಕರ್ಮಾದಿಗಳೇ
ಪತ್ರಗಳು. ಸಂಧ್ಯಾವಂದನೆಯೇ ಬೇರು. ಬೇರನ್ನು ಸರಿಯಾಗಿ ಪೋಷಿಸಿ ರಕ್ಷಿಸಿದರೆ ವೃಕ್ಷವು ಸುರಕ್ಷಿತವಾಗಿರುತ್ತದೆ.
ಬೇರು ಭಿನ್ನವಾದರೆ ಮರವೂ ಇಲ್ಲ ಶಾಖೆಯೂ ಇಲ್ಲ ಎಂದು ಆಗುತದೆ. (ಮೂರು ಕಾಲದಲ್ಲೂ ಪ್ರಾಣಾಯಾಮದಿ ಏಳು
ಕುಂಡಲಿನಿ ಚಕ್ರಗಳನ್ನು ಸಮೀಪಿಸುವುದೇ ಸಂಧ್ಯಾ ವಂದನೆ)
ಶ್ರೂಯತಾಂ ಧರ್ಮಸರ್ವಸ್ವಂ ಶ್ರುತ್ವಾ
ಚೈವಾವಧಾರ್ಯತಾಮ್ |
ಆತ್ಮನಃ ಪ್ರತಿಕೂಲಾನಿ ಪರೇಷಾಂ ನ
ಸಮಾಚರೇತ್ ||
ಪಂಚತಂತ್ರ
ಭಾವಾರ್ಥ:- ಧರ್ಮದ ಸರ್ವಸ್ವವು, ಜೀವಾಳವು ಯಾವುದೆಂಬುದನ್ನು
ಕೇಳಿರಿ. ಕೇಳಿ ನೆನಪಿನಲ್ಲಿಟ್ಟುಕೊಳ್ಳಿರಿ. ತನಗೆ ಯಾವುದು ಪ್ರತಿಕೂಲವೆನಿಸುವುದೋ ಅದನ್ನು ಇತರರ
ವಿಷಯದಲ್ಲಿ ಆಚರಿಸಬಾರದು.
ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ
ಬ್ರೂಯಾತ್
ಸತ್ಯಮಪ್ರಿಯಮ್ | ಪ್ರಿಯಂ ಚ ನಾನೃತಂ
ಬ್ರೂಯಾತ್ ಏಷ ಧರ್ಮಃ ಸನಾತನಃ ||
ಮನುಸ್ಮೃತಿ, ೪-೧೩೮
ಭಾವಾರ್ಥ:-
ಸತ್ಯವನ್ನು ಹೇಳಬೇಕು. ಪ್ರಿಯವಾದ್ದನ್ನು ಹೇಳಬೇಕು. ಸತ್ಯವಾದರೂ
ಅಪ್ರಿಯವಾದ್ದನ್ನು ಹೇಳಬಾರದು. ಪ್ರಿಯವಾದ-ದ್ದಾದರೂ ಸುಳ್ಳನ್ನು ಹೇಳಬಾರದು. ಇದು ಸನಾತನ ಧರ್ಮ.
ನ ಭಾರ್ಯಯಾ ಸಮಂ ಮಿತ್ರಂ ನ ಚ ಧರ್ಮೋ
ದಯಾಸಮಃ |
ನ ಸ್ವಾತಂತ್ರ್ಯಸಮಂ ಸೌಖ್ಯಂ
ಗಾರ್ಹಸ್ಥ್ಯಾನ್ನಾಶ್ರಮೋ ವರಃ ॥
ಪದ್ಮಪುರಾಣ, ೪-೮೮-೫೦
ಭಾವಾರ್ಥ:- ಮಡದಿಗೆ ಸಮನಾದ ಮಿತ್ರನಿಲ್ಲ. ದಯೆಗೆ ಸಮಾನವಾದ ಧರ್ಮ ಇಲ್ಲ. ಸ್ವಾತಂತ್ರ್ಯಕ್ಕೆ
ಸಮವಾದ ಸುಖವಿಲ್ಲ. ಗೃಹಸ್ಥಾಶ್ರಮಕ್ಕಿಂತ ಉತ್ತಮವಾದ ಆಶ್ರಮವಿಲ್ಲ.
ಸೂಕ್ಷ್ಮಾತಿಸೂಕ್ಷ್ಮಂ ಕಲಿಲಸ್ಕ ಮಧ್ಯೇ
ವಿಶ್ವಸ್ಯ ಸ್ರಷ್ಟಾರಮುನೇಕರೂಪಮ್ |
ವಿಶ್ವಸ್ಯೈಕ್ಯಂ ಪರಿವೇಷ್ಟಿತಾರಂ
ಜ್ಞಾತ್ವಾ ಶಿವಂ ಶಾಂತಿಮತ್ಯಂತಮೇತಿ ॥
- ಶ್ವೇತಾಶ್ವರೋಪನಿಷತ್, ೪-೧೪
ಭಾವಾರ್ಥ:- “ಯಾರು ಸೂಕ್ಷ್ಮಕ್ಕಿಂತಲೂ ಸೂಕ್ಷ್ಮನೋ, ಅವಿದ್ಯೆಯ ಮತ್ತೂ ಅದರ ಕಾರ್ಯಗಳ ನಡುವೆ ಇರುವನೊ ಸೃಷ್ಟಿಕರ್ತೃವೋ ಬಹುರೂಪನೋ
ಎಲ್ಲವನ್ನೂ ಆವರಿಸಿರುತ್ತಾನೋ ಅವನನ್ನು (ಪರತತ್ತ್ವ, ಪರಮಾತ್ಮನನ್ನು)
ತಿಳಿಯುವುದರಿಂದ ಮಾನವನು ಶಾಶ್ವತ ಶಾಂತಿಯನ್ನು ಪಡೆಯುತ್ತಾನೆ”.
ಧಾರಣಾತ್ ಧರ್ಮಮಿತ್ಯಾಹುಃ ಧರ್ಮೋ ಧಾರಯತಿ
ಪ್ರಜಾಃ |
ಯಃ ಸ್ಯಾತ್ ಧಾರಣ ಸಂಯುಕ್ತಃ ಸ ಧರ್ಮ
ಇತಿ ನಿಶ್ಚಯಃ ॥
ಕರ್ಣಪರ್ವದಲ್ಲಿ ಶ್ರೀಕೃಷ್ಣನು ಹೇಳಿದ್ದು
(೮.೪೯.೫೦)
ಭಾವಾರ್ಥ:-
ಒಂದು ಸಮಾಜದಲ್ಲಿ ಜನರನ್ನು ಒಟ್ಟುಗೂಡಿಸಿರುವುದರಿಂದ ಅದನ್ನು ಧರ್ಮ
ಎಂದು ಕರೆಯಲಾಗುತ್ತದೆ. ಅದು ಮನುಷ್ಯನನ್ನು ಮನುಷ್ಯನೊಂದಿಗೆ ಸಂಯೋಜಿಸುತ್ತದೆ. ಯಾವ ಮೌಲ್ಯಕ್ಕೆ
ಈ ಸಂಯೋಜಕ ಸಾಮರ್ಥ್ಯ ಇದೆಯೋ ಅದನ್ನು ಧರ್ಮ ಎಂದು (ಜ್ಞಾನಿಗಳು) ನಿಶ್ಚಯವಾಗಿ ಹೇಳಿದ್ದಾರೆ.
ಸರ್ವೇಷಾಂ ಯಃ ಸುಹೃನ್ನಿತ್ಯಂ ಸರ್ವೇಷಾಂ
ಚ ಹಿತೇ ರತಃ
ಕರ್ಮಣಾ ಮನಸಾ ವಾಚಾ ಸ ಧರ್ಮಂ ವೇದ ಜಾಜಲೇ
ಮಹಾಭಾರತದ ಶಾಂತಿಪರ್ವ (೧೨.೨೫೪.೯)
ಭಾವಾರ್ಥ:- ಓ ಜಾಜಲಿ ಯಾರು ಸದಾ ಸಕಲಜೀವಿಗಳ ಗೆಳೆಯನಾಗಿರುತ್ತಾನೋ, ಎಲ್ಲರಿಗೂ ಒಳ್ಳೆಯದಾಗಿರುವುದನ್ನು
ಕೃತಿಯಲ್ಲಿ, ಮನಸ್ಸಿನಲ್ಲಿ ಮತ್ತು ಮಾತಿನಲ್ಲಿ ಮಾಡುತ್ತಿರುತ್ತಾನೋ
ಅವನು ಧರ್ಮವನ್ನು ಅರ್ಥಮಾಡಿಕೊಳ್ಳುತ್ತಾನೆ.
ಪರಿತ್ಯಜೇತ್ ಅರ್ಥಕಾಮೌ ಯೌ ಸ್ಯಾತಾಂ
ಧರ್ಮವರ್ಜಿತೌ |
ಧರ್ಮಂ ಚಾಪ್ಯಸುಖೋದರ್ಕಂ
ಲೋಕವಿಕ್ರುಷ್ಟಮೇವ ಚ ॥
(ಮನುಸ್ಮೃತಿ, ೪.೧೭೬)
ಭಾವಾರ್ಥ:- ಧರ್ಮವರ್ಜಿತವಾದ ಅರ್ಥಕಾಮಗಳನ್ನು ತ್ಯಜಿಸು ತನ್ನ ಮತ್ತು ಜನರ ದುಃಖಕ್ಕೆ ಕಾರಣವಾದ
ಧರ್ಮವನ್ನೂ ತ್ಯಜಿಸು.
ಖುಗ್ವೇದದಲ್ಲಿ
ಕೆಲವು ಕಡೆಯಲ್ಲಿ “ಪೋಷಣೆ ಮಾಡುವುದು” ಎನ್ನುವ ಅರ್ಥದಲ್ಲಿ ಧರ್ಮ ಶಬ್ದವನ್ನು ಪ್ರಯೋಗಿಸಲಾಗಿದೆ
ಮತ್ತೆ ಕೆಲವು ಕಡೆಯಲ್ಲಿ “ನೈತಿಕ ನಿಯಮ” ಹಾಗೂ “ಅಚಾರ” ಎನ್ನುವ ಅರ್ಥದಲ್ಲಿ, ಮತ್ತೆ ಕೆಲವು ಕಡೆಗಳಲ್ಲಿ “ಪ್ರಾಚೀನ ನೀತಿ ನಿಯಮಗಳು ಎನ್ನುವ ಅರ್ಥದಲ್ಲಿ ಈ
ಶಬ್ದವನ್ನು ಪ್ರಯೋಗಿಸಲಾಗಿದೆ. ಅಥರ್ವವೇದ (11-9-17)ದಲ್ಲಿ “ಧರ್ಮ” ಶಬ್ದದ ಅರ್ಥ “ಧಾರ್ಮಿಕ
ಆಚರಣೆಯಿಂದ ದೊರೆಯುವ ಪುಣ್ಯ” ಎಂದಿದೆ. ಛಾಂದೋಗ್ಯ ಉಪನಿಷತ್ (2-23)ನಲ್ಲಿ “ನಾಲ್ಕು ಆಶ್ರಮಗಳ
ವಿಶಿಷ್ಟ ಕರ್ತವ್ಯ” ಎನ್ನುವ ಅರ್ಥದಲ್ಲಿ ಧರ್ಮ ಶಬ್ದವನ್ನು ಉಪಯೋಗಿಸಲಾಗಿದೆ. ತೈತ್ತರೀಯ ಉಪನಿಷತ್
(1-11) ನಲ್ಲಿ “ಸತ್ಯಂ ವದ, ಧರ್ಮಂ ಚರ” (ಸತ್ಯವನ್ನು ಹೇಳು,
ಧರ್ಮಾನುಸಾರ ನಡೆದುಕೊ) ಎನ್ನುವ ರೀತಿಯಲ್ಲಿ ಧರ್ಮ ಶಬ್ದವನ್ನು
ಉಪಯೋಗಿಸಲಾಗಿದೆ.
ಶೃತಿಃ ಸ್ಮೃತಿಃ ಸದಾಚಾರಃ ಸ್ವಸ್ಯ ಚ
ಪ್ರಿಯಮಾತ್ಮನಃ |
ಸಮ್ಯಕ್ ಸಂಕಲ್ಪಜಃ ಕಾಮಿಂ ಧರ್ಮ
ಮೂಲಮಿದಂ ಸ್ಮೃತಮ್ ||
ಯಾಜ್ಞವಲ್ಕ್ಯ ಸ್ಮೃತಿ —1-7
ಭಾವಾರ್ಥ:- ವೇದ, ಸ್ಮೃತಿ, ಧರ್ಮಶಾಸ್ತ್ರಾದಿ
ಶಿಷ್ಟ ಜನರ ಹಾಗೂ ಸಜ್ಜನರ ಆಚಾರ (ಆಚರಣೆ) ಹಾಗೂ ಅವರ ಉಪದೇಶಾನುಸಾರ ಹಾಗೂ ತಮ್ಮ ವಿವೇಕ, ಬುದ್ಧಿಗಳಿಗೆ
ಅನುಸಾರ, ಆತ್ಮ ಸಂತೋಷಾ-ನುಸಾರ,
ಪ್ರತಿಯೊಬ್ಬ, ವ್ಯಕ್ತಿಯೂ ತನ್ನದೇ ಆದ
ಆಚರಣೆಯನ್ನು ಇಟ್ಟುಕೊಳ್ಳಬೇಕು.
ವೇದಾಂತ,
ಎಲ್ಲಿಯೊ ದೂರದ, ವಿಶ್ವವನ್ನು ಮೀರಿದ
ದೇವರನ್ನು ಬೋಧಿಸುವುದಿಲ್ಲ. ಮಾನವನಲ್ಲೂ ಪ್ರಕೃತಿಯಲ್ಲೂ ನಿತ್ಯ ನಿರಂತರವಾಗಿರುವ
ಸಾನ್ನಿಧ್ಯವನ್ನು ಬೋಧಿಸುತ್ತದೆ. “ಪ್ರತಿಯೊಂದು ಜೀವವೂ ಶಿವನೇ; ಜೀವನ
ಸೇವೆಯೆ ಶಿವನ ಪೂಜೆ' ಎನ್ನುತ್ತಾರೆ ಶ್ರೀ ರಾಮಕೃಷ್ಣ ಪರಮಹಂಸರು. ಅಭಿಗಮನ
(ದೇವಾಲಯಕ್ಕೆ ಹೋಗುವುದು), ಉಪಾದಾನ (ಪೂಜಾ ಸಾಮಗ್ರಿಯ ಸಂಗ್ರಹ),
ಇಜ್ಯಾ (ಪೂಜೆ), ಸ್ವಾಧ್ಯಾಯ (ವೇದಾಧ್ಯಯನ),
ಯೋಗ (ಧ್ಯಾನ) ಇವು ಆಗಮೋಕ್ತ ನಿತ್ಯ ವಿಧಿಗಳು. ಪರಮಾತ್ಮನ ಉಪಾಸನೆಯನ್ನು
ಹೇಗೆ ಮಾಡಬೇಕು, ಯಾವ ಆಚಾರದಲ್ಲಿ ನಿಷ್ಠೆಯಿರಬೇಕು, ಯಾವುದು ಪುಣ್ಯ, ಯಾವುದು ಪಾಪ, ಈ ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳ ರಹಸ್ಯವೇನು, ಎಂಬ
ಪ್ರಶ್ನೆಗಳಿಗೆ ಪರಂಪರಾಗತ ಉತ್ತರಗಳನ್ನು ಪ್ರಮಾಣಬದ್ಧವಾಗಿ ಅರುಹುವ ಪವಿತ್ರ ಗ್ರಂಥಗಳೇ ಆಗಮಗಳು.
ಅಧರ್ಮೇಣೈಧತೇ ತಾವತ್ ತತೋ ಭದ್ರಾಣಿ
ಪಶ್ಯತಿ |
ತತಸ್ಸಪತ್ನಾನ್ ಜಯತಿ ಸಮೂಲಸ್ತು
ವಿನಶ್ಯತಿ ॥
ತೈತ್ತಿರೀಯ ಸಂಹಿತೆ
ಅಂದರೆ "ಅಧರ್ಮದಿಂದ ಅಧಿಕಾರ, ಹಣ ಇತ್ಯಾದಿ ಗಳಿಸಲು
ಹೊರಟವರಿಗೆ ತಾತ್ಕಾಲಿಕವಾಗಿ ಸುಖ ಸಿಗುತ್ತದೆ. ವಿರೋಧಿಗಳನ್ನು ಗೆಲ್ಲುತ್ತಾರೆ. ಆದರೆ ಕೊನೆಯಲ್ಲಿ ಬುಡ ಸಹಿತ ನಾಶವಾಗುವುದು
ನಿಶ್ಚಿತ”.
ಮತ
= मत = म त
ಅಕ್ಷರ
ಅರ್ಥ:- ಸಮಯದ ಸದ್ಗುಣ
ವಿವರಣೆ:- ಮತ ಎಂದರೆ ಸಮಯದ ಜ್ಞಾನ, ವಿಚಾರ, ಅಭಿವ್ರಾಯ, ನಂಬಿಕೆ ಎಂದು ಅರ್ಥ ಇದೆ. ಮತ ಎಂದರೆ
ತಿಳಿದದ್ದು, ತಿಳಿಯಲ್ಪಟ್ಟದ್ದು,
ಅನುಭವಿಸಿ ತಿಳಿದು ಕೊಂಡದ್ದು, ಅನುಭವದ ಆಧಾರದಿಂದ ಆಲೋಚಿಸಿ
ತಿಳಿದುಕೊಂಡದ್ದು, ಅನುಭವಿಸಿದವರು ಹೇಳಿದುದನ್ನು ಕೇಳಿ ತಿಳಿದದ್ದೂ,
ಇವೆಲ್ಲವೂ ಆಯಾ ಸಮಯದ
ಸದ್ಗುಣ ಅನುಭವ ಎಂದೆನಿಸುತ್ತವೆ. ಈ ಅನುಭವ ಸದ್ಗುಣ ಜ್ಞಾನವೇ ಮತ. ಶ್ರೀ ಶಂಕರ, ಶ್ರೀ ರಾಮಾನುಜ,
ಶ್ರೀ ಮಧ್ವ ಇವರು ತುಂಬಾ ಪ್ರಸಿದ್ಧರಾಗಿದ್ದು ಇವರ ಮತಗಳಾದ ಅದ್ವೈತ,
ವಿಶಿಷ್ಟಾದ್ವೈತ ಮತ್ತು ದ್ವೈತಗಳು ಹೆಚ್ಚು ಪ್ರಸಿದ್ಧವಾಗಿವೆ. ಎಲ್ಲಾ ಮತಗಳೂ
ವೇದಾಂತದರ್ಶನವನ್ನು ಆಧರಿಸಿಯೇ ಇರುವುದರಿಂದ ಮತ್ತು ಇವುಗಳು ಆತ್ಮಜ್ಞಾನ ಅಥವಾ ಆತ್ಮನ ಮೋಕ್ಷದ
ಕುರಿತಾಗಿ ಸೂಕ್ತವಾದ ಮಾರ್ಗದರ್ಶನ ನೀಡುವುದರಿಂದ ಇವೆಲ್ಲವನ್ನೂ ಆಯಾಯ ಪಂಥಗಳ ಹೆಸರಿನೊಡನೆ
ವೇದಾಂತ ಎಂದು ಕರೆಯಲಾಗಿದೆ. ಮತ ಸತ್ಯದ ವಿಚಾರವಾಗಿ ಸಿದ್ಧಾಂತಗಳನ್ನು ಒಳಗೊಂಡಿರಂವುದರಿಂದ ಇವುಗಳಿಗೆ
“ಸಿದ್ದಾಂತ”ಗಳೆಂದು ಕರೆಯುತ್ತಾರೆ.
ಯಃ ಸರ್ವೇಷು ಭೂತೇಷು ತಿಷ್ಠನ್
ಸರ್ವೇಭ್ಯೋ ಭೂತೇಭ್ಯೋಂತರಃ,
ಯಂ ಸರ್ವಾಣಿ
ಭೂತಾನಿ ನ ವಿದುಃ, ಯಸ್ಯ ಸರ್ವಾಣಿ
ಭೂತಾನಿ ಶರೀರಂ ಯಃ ಸರ್ವಾಣಿ,
ಭೂತಾನ್ಯಂತರೋ ದಮಯತಿ, ಏಷ ಸ
ಆತ್ಮಾಂತರ್ಯಾಮ್ಯಮೃತಃ ॥
- ಬೃಹದಾರಣ್ಯಕ ಉಪನಿಷತ್, ೩-೭-1೫
ಭಾವಾರ್ಥ:- “ಯಾವನು. ಸರ್ವಪ್ರಾಣಿಗಳಲ್ಲಿರುವವನಾಗಿ ಸರ್ವಪ್ರಾಣಿಗಳ ಒಳಗಿರುವನೋ, ಯಾವನನ್ನು ಸರ್ವಪ್ರಾಣಿಗಳು ತಿಳಿಯವೋ, ಯಾವನಿಗೆ
ಸರ್ವಪ್ರಾಣಿಗಳು ಶರೀರವೋ, ಯಾವನು ಒಳಗಿದ್ದು ಕೊಂಡು
ಸರ್ವಪ್ರಾಣಿಗಳನ್ನು ನಿಯಮಿಸುವನೋ ಅವನೇ ಅಂತರ್ಯಾಮಿಯು, ನಿನ್ನ
ಅಮೃತನಾದ ಆತ್ಮನು.”
ಸನಾತನ ಧರ್ಮದವರು ಎಂದರೆ ಯಾರು?
ಸನಾತನ = सनातन = स न अ त न
ಅಕ್ಷರ
ಅರ್ಥ:- "ಅವಿಶ್ರಾಂತವಾಗಿ
ಜೀವ ಉಸಿರನ್ನು, ಅವಿಶ್ರಾಂತವಾಗಿ ಅಮೃತವನ್ನು
ಸಂಪಾದಿಸುವವರು" ಎಂಬ ಅರ್ಥ ಒಂದೊಂದು ಅಕ್ಷರವನ್ನು ವಿವರಿಸಿದಾಗ ಬರುತ್ತದೆ. ಸನಾತನ ಧರ್ಮದ
ಜನರು ಅವಿಶ್ರಾಂತವಾಗಿ ಜೀವ ಉಸಿರನ್ನು ಮತ್ತು ಅದರೊಂದಿಗೆ ಅಮೃತವನ್ನು ನಿತ್ಯದ ಉಸಿರಾಟದಲ್ಲಿ
ಸಂಪಾಧಿಸುವ ಕಲೆಯನ್ನು ಕಲಿತವರಾಗಿದ್ದರು. ಇಂತಹ ಧಾರ್ಮಿಕ ಕಾರ್ಯವನ್ನು ಕಲಿತವರೇ ಸನಾತನರು. ಸನಾತನರು ಎಂದರೆ ಬಹಳ ಪ್ರಾಚೀನರೂ ಎಂದೂ
ವ್ಯಾಖ್ಯಾನಿಸುತ್ತಾರೆ, ಆದರೆ ಈ ಮೇಲಿನ ಅರ್ಥ ಸರಿಯಾಗಿದೆ ಎಂಬುದು ನಿಮಗೆ ಮುಂದೆ ಮುಂದೆ
ತಿಳಿಯುತ್ತದೆ. "ಸನಾ ಅತನೋತಿ ಇತಿ ಸನಾತನಃ - ಅಂದರೆ ಬದುಕನ್ನು ಬಂಗಾರಗೊಳಿಸುವ ಶಾಶ್ವತ
ಮೌಲ್ಯಗಳುಳ್ಳದ್ದರಿಂದ ಇದು ಸನಾತನ ಧರ್ಮ
ಶ್ರೀ
ಶ್ರೀ ಜಯೇಂದ್ರಸರಸ್ವತಿ ಮಹಾಸ್ವಾಮಿಗಳು ಉಪನ್ಯಾಸವೊಂದರಲ್ಲಿ ಹೇಳಿರುವಂತೆ “ಹಿಂದೂ ಧರ್ಮವು
ವೈದಿಕ ಧರ್ಮವೆಂದೂ, ಸನಾತನ ಧರ್ಮವೆಂದೂ ಕರೆಯಲ್ಪಡುತ್ತದೆ. ಹಿಂದೂ
ಧರ್ಮ ಒಬ್ಬ ಮನುಷ್ಯನಿಂದ ಒಂದು ಕಾಲದಲ್ಲಿ ಆರಂಭವಾದುದಲ್ಲ. ಅದು ಅನೇಕ ಯುಗಗಳಿಂದ ಹರಿದು
ಬಂದಿದೆ. ಜಗತ್ತಿನ ಇತರ ಧರ್ಮಗಳಿಗೆ ಉದಯದ ನಿರ್ದಿಷ್ಟ ಕಾಲಾವದಿ ಇದ್ದರೆ ಹಿಂದೂ ಧರ್ಮಕ್ಕೆ
ಯಾವುದೆ ಉಗಮ ಕಾಲ ಇರುವದಿಲ್ಲ. ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಗಳಲ್ಲಿ ಸಾಗಿ ಬಂದ ಹಿಂದೂ ಧರ್ಮ ಪುರಾತನ
ಸಂಸ್ಕಾರಗಳ ಧರ್ಮವೆಂದು ಕರೆಯಲ್ಪಡುತ್ತದೆ.
ಯಾವುದಕ್ಕೆ ಆರಂಭವಿದೆಯೊ ಅದಕ್ಕೆ ಅಂತ್ಯವಿದೆ. ಯಾವುದಕ್ಕೆ ಆರಂಭವಿಲ್ಲವೊ ಅದಕ್ಕೆ ಅಂತ್ಯವೂ
ಇಲ್ಲ. ಹಿಂದೂ ಧರ್ಮಕ್ಕೆ ವೇದಗಳೇ ಪ್ರಮಾಣ ಗ್ರಂಥಗಳು. ಋಷಿಮುನಿಗಳ ಬಹುಕಾಲದ ಅನುಭವ ಜ್ಞಾನ,
ತಪಸ್ಸು, ಸಾಧನೆ, ಸಿದ್ದಿಗಳಿಂದ ಹುಟ್ಟಿಕೊಂಡ ವೇದಗಳು ಭಾರತದ
ಅಮೂಲ್ಯ ಮಾರ್ಗದರ್ಶಿಗಳಾಗಿವೆ”.
ಸಂಸ್ಕೃತದಲ್ಲಿ
ಲಕ್ಷ್ಮಿ,
ಪಾರ್ವತಿ, ಶಿವ, ವಿಷ್ಣು ಹೆಸರಿನ
ಹಿನ್ನೆಲೆ ಏನು?
"ಲಕ್ಷ್ಮಿ" = लक्ष्मी = ल क्ष मी ಎಂಬ ಪದವನ್ನು ಅಕ್ಷರಗಳ ರೀತ್ಯ ವಿಮರ್ಶಿಸಿದಾಗ
"ರಚಿಸುವುದು, ನಾಶಗೊಳಿಸುವುದು ಮತ್ತು ಚಲಿಸುವುದು"
ಎಂಬ ಅರ್ಥವನ್ನು ನೀಡುತ್ತದೆ. ಇನ್ನೂ ಐಶ್ವರ್ಯ
ದೇವತೆ ಲಕ್ಷ್ಮಿಯ ಮೂಲ ಸ್ವರೂಪವನ್ನು ಚಿತ್ರಿಸುವ ಅರ್ಥವನ್ನು ಗಮನಿಸಿ. ಐಶ್ವರ್ಯದಿಂದ ಯಾವುದು
ಬೇಕಾದರೂ ರಚಿಸಬಹುದು ಯಾವುದು ಬೇಕಾದರೂ ನಾಶಗೊಳಿಸಬಹುದು ಹಾಗೆ ಆಕೆ ಸ್ಥಿರವಾಗಿ ನೆಲಸುವವಳಲ್ಲ
ಆಕೆ ಸದಾ ಚಲಿಸುತ್ತಾಳೆ, ಎಂಬ ನೈಸರ್ಗಿಕ ಅರ್ಥವನ್ನು ನೀಡುತ್ತದೆ.
ಪಾರ್ವತಿ =
पार्वती = पा र व ती ಅವಳು ಶಿವನ ಅರ್ಧನಾರಿ ಎಂಬ ಪದ. ಅದು ಧ್ಯಾನದಲ್ಲಿರುವ ವ್ಯಕ್ತಿಯ ಶಕ್ತಿ. ಅವಳು
ಮಾನವನ ಕುಂಡಲಿನಿ ಚಕ್ರಗಳು. ಅವಳ ಹೆಸರಿನ ಅಕ್ಷರಗಳ ಅರ್ಥವನ್ನು ವಿಮರ್ಶಿಸಿದಾಗ
"ವ್ಯಾಪಿಸುವಿಕೆಗಾಗಿ (ಹರಡುವಿಕೆಗಾಗಿ) ಪ್ರಬಲವಾದ ಬೆಂಕಿಯ ಅಮೃತವನ್ನು ಕುಡಿಯಲು"
ಎಂಬ ಅರ್ಥವನ್ನು ನೀಡುತ್ತದೆ. ಪಾರ್ವತಿಯು ಮಾನವನ ದೇಹದ ಎಲ್ಲಾ ರಕ್ತನಾಳಗಳು, ಅಪಧಮನಿಗಳು ಮತ್ತು ನರಗಳನ್ನು ವ್ಯಾಪಿಸಲು ಅಗ್ನಿ ಅಮೃತವನ್ನು ಕುಡಿಯುತ್ತಾಳೆ.
ಮೂಲಾಧಾರ ಪ್ರದೇಶದಲ್ಲಿ ಗ್ಯಾಸ್ಟ್ರಿಕ್ ಬೆಂಕಿ ಮತ್ತು ನೀರಿನ ಬೆಂಕಿಯ ಮೂಲಕ ಆವಿಯಾದ ಅಮೃತವು
ಗಿಡಮೂಲಿಕೆಗಳ ರೂಪದಲ್ಲಿ ಅಥವಾ ನೈಟ್ರಿಕ್ ಆಕ್ಸೈಡ್ ರೂಪದಲ್ಲಿ ಉತ್ಪಾದಿತವಾಗಿ ಮನುಜನ
ಪ್ರಯತ್ನದಿಂದ ಅದು ಸುಷುಮ್ನ ನಾಡಿಯ ಮುಖೇನ ಏಳು ಕುಂಡಲಿನಿ ಚಕ್ರಗಳನ್ನು ತಲುಪಿ ಅಲ್ಲಿ ಒಂದೊಂದು
ಚಕ್ರದಲ್ಲಿಯೂ ಇರುವ ನರ ನಾಡಿಗಳ ಸಂಪರ್ಕದ ಮುಖೇನ ಹರಡುವಿಕೆಯನ್ನು ಅರ್ದ ನಾರಿಯಾದ ಪಾರ್ವತಿ
ಮಾತೆಯೂ ಮಾಡುತ್ತಾಳೆ. ಅಂತಹ ಬೆಂಕಿಯ ಅಮೃತವು ಮಾನವ ದೇಹದ ಪ್ರತಿಯೊಂದು ಕೋಶವನ್ನು ಸಾಕಷ್ಟು
ಆರೋಗ್ಯ ಮತ್ತು 100% ಮೆದುಳಿನ ಸಕ್ರಿಯಗೊಳಿಸುವಿಕೆಯೊಂದಿಗೆ
ವ್ಯಾಪಿಸುತ್ತದೆ.
ಸಂಸ್ಕೃತದ
ಅಕ್ಷರ ಅರ್ಥದಲ್ಲಿ ಶಿವ = शिव = शि व ಎಂಬುದರ ಅರ್ಥ ಎರಡು ವಿದದಲ್ಲಿ
ಅನುವಾದಿಸಿರುವಂತೆ "ಉತ್ತಮ ಆರೋಗ್ಯದಲ್ಲಿ / ಶಕ್ತಿಯುತವಾಗಿ ಗಮನಹರಿಸಬೇಕು (ಧ್ಯಾನ)". ಇವೆರಡೂ ಶಿವನ
ಚಿತ್ರಣವನ್ನು ಕೊಡುತ್ತದೆ ಒಂದು ಆತ ಆರೋಗ್ಯವಂತನೆಂದು ಕಾರಣ ಆತ ಧ್ಯಾನಾಸಕ್ತನೆಂದು, ಶಿವನು ಶಕ್ತಿಯುತವಾಗಿ ಗಮನಹರಿಸುವವನು ಅಂದರೆ ಯಾವುದಾದರೂ ವಸ್ತುವಿನ ಮೇಲೆ
ಶಕ್ತಿಯುತವಾಗಿ ಗಮನದಿ ಧ್ಯಾನ ಮಾಡತಕ್ಕವನು ಅದು ಆತನ ಧ್ಯಾನದಲ್ಲಿ ನಿಪುಣನು ಎಂದು ಚಿತ್ರಿಸಿದೆ.
ಇನ್ನೊಂದು ಅರ್ಥದಲ್ಲಿ "ಶಿ"
ಎಂಬುದಾಗಿ ಉಸಿರನ್ನು ಒಳಕ್ಕೆ ಎಳೆಯುವುದು, "ವಾ" ಎಂದು
ಉಸಿರನ್ನು ಹೊರಹಾಕುವುದು. ಸದರಿ ಅಕ್ಷರಗಳಿಂದ ಮನಸಿನಲ್ಲಿ ಹೇಳಿಕೊಳ್ಳುತ್ತಾ ಉಸಿರಾಟದ
ಶಬ್ದವನ್ನು ಕಲ್ಪನೆ ಮಾಡಿಕೊಂಡಾಗ ತಿಳಿಯುತ್ತೆ. ಶಿವಾಯ = शिवाय ಎಂಬ ಪದವು ಅಕ್ಷರ ವ್ಯಾಖ್ಯಾನ ಮುಖೇನ ಹೀಗೆ ಬರುತ್ತದೆ "ಗಾಳಿಯನ್ನು
ಆಹ್ವಾನಿಸಲು ಗಮನಹರಿಸಬೇಕು". ಈಶ್ವರ = ईश्वर = ಎಂಬ ಪದವನ್ನು ಒಂದು ವ್ಯಾಖ್ಯಾನದ ಪ್ರಕಾರ ಮೂರು ಅಕ್ಷರಗಳಾಗಿ ವಿಭಾಗಿಸಲಾಗುತ್ತೆ "ಈ" "ಶ್ವ" "ರ".
ಈ ಮೂರು ಅಜಪ ಮಂತ್ರಗಳಾಗಿವೆ. "ಈ" ಅಜಪ ಮಂತ್ರದ ಮುಖೇನ ಉಸಿರನ್ನು ಶ್ವಾಸಕೋಶಕ್ಕೆ
ಮತ್ತು ಮೂಲಾಧಾರದವರೆಗೆ ತುಂಬುವುದು, "ಶ್ವ" ಎಂದು ಅಜಪ
ಮಂತ್ರದ ಮುಖೇನ ಕೆಳ ಹೊಟ್ಟೆಯನ್ನು ಸ್ವಲ್ಪ ಒಳ ಎಳೆಯುವುದು "ರ" ಎಂದು ಅಜಪ ಮಂತ್ರದ
ಮುಖೇನ ಸುಷುಮ್ನ ನಾಡಿಯಲ್ಲಿ ಉಸಿರನ್ನು ಸಹಸ್ರಾರ ಚಕ್ರಕ್ಕೆ ಕಳಿಸುವುದು. ಈ ರೀತಿಯ ಉಸಿರಾಟವು ಸಹಸ್ರಾರಕ್ಕೆ ಪ್ರಕಾಶಮಾನವನ್ನು
ಆರ್ಜಿಸುತ್ತದೆ. ಅಕ್ಷರವಾಗಿ ಈಶ್ವರ ಎಂಬುದಕ್ಕೆ ಅರ್ಥ "ಶಕ್ತಿಯುತ ಹೊಳಪಿನ ನಿಪುಣ ಆಗಿರಿ" ಎಂದು ಬರುತ್ತದೆ. ಹಾಗೂ ಈಶ =
ईश
= ಎಂಬ ಪದದಲ್ಲಿ "ಈ" ಅಜಪ ಮಂತ್ರದ ಮುಖೇನ
ಉಸಿರನ್ನು ಮೂಲಾಧಾರದ ವರೆಗೆ ಒಳಗೆ ಎಳೆಯುವುದು, "ಶ"
ಅಜಪ ಮಂತ್ರದ ಮುಖೇನ ಉಸಿರನ್ನು ಮೂಲಾಧಾರದಿಂದ ಮೇಲಕ್ಕೆ ಎಳೆದು ಸಹಸ್ರಾರಕ್ಕೆ ಅಥವಾ
ಆಜ್ಞಾಚಕ್ರಕ್ಕೆ ಕಳಿಸುವುದು.
ಸಿದ್ದಾಂತ ಶಿಖಾಮಣಿ ಗ್ರಂಥದಲ್ಲಿ ಶಿವ
ಎಂದರೆ ..... “ಶಿಕಾರ”
ಅಗ್ನಿತತ್ವವನ್ನು ಪ್ರತಿನಿಧಿಸಿ ಮಹಾರುದ್ರಾಂಶದಿಂದ ಬೆಳಗುತ್ತಲಿದೆ. “ವಕಾರ” ವಾಯು ತತ್ವವನ್ನು
ಗರ್ಭೀಕರಿಸಿ ವಾಯು ಲಿಂಗದ ಪ್ರತೀಕವೆನಿಸಿದೆ. ಅಗ್ನಿ ವಾಯುವಿನಲ್ಲಿ ಸಖತ್ವದ ಸಹಕಾರದಿಂದ
ವಿಲೀನವಾಗಲು, ವಾಯುವು ಆಕಾಶತತ್ವದಲ್ಲಿ ವಿಲೀನ ಗೊಂಡಿರುವುದು".
ಎಂದಿದ್ದಾರೆ.
"ವಿಷ್ಣು" = "विष्णु" = वि ष ण उ ಎಂಬ ಪದವು ಅಕ್ಷರಶಃ
ಈ ಅರ್ಥವನ್ನು ನೀಡುತ್ತದೆ, "ಮಿದುಳಿನ ನಾಸಿಕಕ್ಕೆ
ಭ್ರೂಣದಲ್ಲಿನ (ಗರ್ಭದಲ್ಲಿನ/ ಮೂಲಾಧಾರದಲ್ಲಿನ) ಉತ್ಕೃಷ್ಟತೆಯನ್ನು ಹಿಡಿತಕ್ಕೆ ಕರೆಯುವ" ಮತ್ತೊಂದು ನಿಘಂಟಿನ ಅರ್ಥವು "ಸರ್ವವ್ಯಾಪ್ತನು" (ಎಲ್ಲೆಡೆ
ಅಸ್ತಿತ್ವದಲ್ಲಿರುವವನು ಅದುವೇ ಗಾಳಿ), ವಸುವಿನ ಒಂದು ಹೆಸರು
ಅದುವೇ ಗಾಳಿ. ಇದರಲ್ಲಿ ವಿ, ಶ, ಣು
ಎಂಬ ಮೂರು ಅಕ್ಷರ ಬರುತ್ತದೆ, ಉಸಿರಾಟ ಪ್ರಕ್ರಿಯೆಯಲ್ಲಿ
"ವಿ" ಅಜಪ ಮಂತ್ರದ ಮುಖೇನ ಉಸಿರನ್ನು ಶ್ವಾಸಕೋಶಕ್ಕೆ ಮತ್ತು ಮೂಲಾಧಾರದವರೆಗೆ ತುಂಬುವುದು, "ಶ" ಎಂದು ಅಜಪ ಮಂತ್ರದ ಮುಖೇನ ಕೆಳ ಹೊಟ್ಟೆಯನ್ನು ಸ್ವಲ್ಪ ಒಳ
ಎಳೆಯುವುದು "ಣು" ಎಂದು ಅಜಪ ಮಂತ್ರದ ಮುಖೇನ ಸುಷುಮ್ನ ನಾಡಿಯಲ್ಲಿ ಉಸಿರನ್ನು
ಸಹಸ್ರಾರ ಚಕ್ರಕ್ಕೆ ಕಳಿಸುವುದು. ಸಹಸ್ರಾರಕ್ಕೆ ಮಿದುಳಿನ ನಾಸಿಕ/ಮೂಗು ಇರುತ್ತದೆ, ಅದುವೇ ಸುಷುಮ್ನಾ ನಾಡಿ, ಮೂಲಾಧಾರದಲ್ಲಿ ಉತ್ಕೃಷ್ಟತೆಯ
ವಾಯು, ಅಮೃತ, ಗಿಡಮೂಲಿಕೆಯ ವಾಯು, ಮುಂತಾದವು ಇರುವುದನ್ನು ಹಿಡಿತಕ್ಕೆ ಪಡೆಯುವ ವಾಯು ಸಹಸ್ರಾರಕ್ಕೆ
ಎಳೆದೊಯ್ಯುತ್ತದೆ.
ಚರಾಚರಾತ್ಮಕವಾದ ಈ ಸಮಸ್ತ ಪ್ರಪಂಚವೂ ಪರಬ್ರಹ್ಮ ಸ್ವರೂಪನಾದ ವಿಷ್ಣುವಿನ ಶಕ್ತಿಯಿಂದ
ಕೂಡಿದೆ. ಕ್ಷೇತ್ರಜ್ಞವೆಂಬ (ಆತ್ಮವೆಂಬ)
ವಿಷ್ಣುಶಕ್ತಿಯು ಪರವೆಂತಲೂ, (ಅತ್ಯಧಿಕವೆಂತಲೂ)
ಅವಿದ್ಯೆಯು ಅಪರಶಕ್ತಿಯೆಂತಲೂ (ಅಲ್ಪಶಕ್ತಿಯಂತಲೂ)
ಉಕ್ತವಾಗಿದೆ. ಅಸಾರಭೂತವಾದ (ಆಧಾರರಹಿತವಾಗಿ ಅಸ್ತಿತ್ವದಲ್ಲಿ ಇರುವ) ಸಂಸಾರದಲ್ಲಿ ಕ್ಷೇತ್ರಜ್ಞಶಕ್ತಿಯು
(ಆತ್ಮಶಕ್ತಿಯು) ಕರ್ಮದಿಂದ ವ್ಯಕ್ತವಾಗಿ ಚೇಷ್ಟಾಯುಕ್ತವಾಗುತ್ತದೆಂದು
ಹೇಳಿದೆ. ಆ ಶಕ್ತಿಯಿಂದ ಮನುಷ್ಯನು ಅದಕ್ಕೆ ಅನುಗುಣವಾದ ನಾಮಧೇಯವುಳ್ಳ
ಸಂಸಾರ ತಾಪಗಳನ್ನೆಲ್ಲಾ ಹೊಂದುವನು, ಅದು ಹಿತವಾಗಿರುವುದರಿಂದ ಕ್ಷೇತ್ರಜ್ಞವೆಂಬ
ನಾಮಧೇಯವನ್ನು ಹೊಂದಿದೆ. ಆ ವಿಷ್ಣುಶಕ್ತಿಯು ಸಕಲ ಪ್ರಾಣಿಗಳಲ್ಲಿಯೂ
ತಾರತಮ್ಯದಿಂದ ಜ್ಞಾತವಾಗುತ್ತದೆ. ಪ್ರಾಣವಿಲ್ಲದ ವಸ್ತುಗಳಲ್ಲಿ ವಿಷ್ಣುಶಕ್ತಿಯು
ಅತ್ಯಲ್ಪವು. ಸ್ಥಾವರ ಪ್ರಾಣಿಗಳಲ್ಲಿ ಅದಕ್ಕಿಂತ ಹೆಚ್ಚಾಗಿದೆ.
ಹಾವುಗಳಲ್ಲಿ ಅದಕ್ಕಿಂತಲೂ ವಿಲಕ್ಷಣ ಶಕ್ತಿಯೂ, ಅದಕ್ಕೂ ಹೆಚ್ಚಾಗಿ ಪಕ್ಷಿಗಳಲ್ಲಿಯೂ, ಅವುಗಳಿಗಿಂತಲೂ ಮೃಗಗಳಲ್ಲಿ,
ಅದಕ್ಕಿಂತಲೂ ಪಶುಗಳಲ್ಲಿ ಶಕ್ತಿಯು ಕ್ರಮವಾಗಿ ಹೆಚ್ಚಾಗಿರುವುದು.[1]
ಜ್ಞಾನಿಗಳು "ಸತ್" ಎಂದು ಹೇಳುವ ಬ್ರಹ್ಮನ ಅಮೂರ್ತರೂಪವು (ನಿರಾಕಾರ ರೂಪವು)
ವಿಷ್ಣುವಿನ ಯೋಗಿಧ್ಯೇಯವಾದ ಎರಡನೆಯ ರೂಪವು. (ಸತ್
ಎಂದರೆ ಸಂಸ್ಕೃತದಲ್ಲಿ ಸತ್ಯ, ಅಸ್ತಿತ್ವದಲ್ಲಿರುವ, ವಾಸ್ತವ, ಒಳ್ಳೆಯ, ಬುದ್ದಿವಂತ,
ಪೂಜ್ಯ, ನೈಜ, ಶಾಶ್ವತ,
ಪ್ರಾಮಾಣಿಕ, ನಿರಂತರ, ಸುಂದರ) ಈ ಸಕಲ ಶಕ್ತಿಗಳೂ ಎಲ್ಲಿ ಪ್ರತಿಷ್ಠಿತವಾಗಿವೆಯೋ
ಅದು ಹರಿಯ ಸ್ವರೂಪಾಂಶವಲ್ಲ. ಅವನ ಮಹತ್ತಾದ ಸ್ವರೂಪವು ಬೇರೆ ಎಂದು ತಿಳಿಯಬೇಕು.
ಆ ಹರಿಯ ರೂಪವು ತನ್ನ ಲೀಲೆಯಿಂದ ಸಕಲ ಶಕ್ತಿರೂಪಗಳನ್ನೂ ದೇವತೆ, ತಿರ್ಯಗ್ಜಂತು, ಮನುಷ್ಯ ಮುಂತಾದವರ ಚೇಷ್ಟೆ ಯುಳ್ಳುದನ್ನಾಗಿ
ಮಾಡುತ್ತದೆ. ಲೋಕೋಪಕಾರಕ್ಕಾಗಿ ಅದರ ಕರ್ಮ ನಿಮಿತ್ತದಿಂದುಂಟಾದ,
ಅಪ್ರಮೇಯನಾದ ಹರಿಯ ಚೇಷ್ಟೆಯು ಪರರಿಂದ ವಿಧಿಸಲ್ಪಡದೆಯೇ ಎಂದರೆ ಸ್ವತಂತ್ರವಾಗಿ
ವ್ಯಾಪಕವಾಗಿದೆ. ವಿಶ್ವರೂಪನಾದ ಹರಿಯ ಸಕಲ ಪಾಪನಾಶಕವಾದ ಆ ರೂಪವನ್ನು
ಯೋಗಯುಕ್ತನಾದವನು ಆತ್ಮಶುದ್ಧ್ಯರ್ಥವಾಗಿ ಧ್ಯಾನ ಮಾಡಬೇಕು. ಮೇಲೆ ಜ್ವಲಿಸುವ
ಸ್ವಭಾವವುಳ್ಳ ಅಗ್ನಿಯು ಗಾಳಿಯಿಂದ ಸಹಿತವಾದರೆ ಸುತ್ತಮುತ್ತಲಿರುವ ಪೊದೆಗಳನ್ನು ಸುಡುವಂತೆ ಚಿತ್ತದಲ್ಲಿರುವ
ವಿಷ್ಣುವು ಯೋಗದಿಂದ ಯೋಗಿಗಳ ಪಾಪವೆಲ್ಲವನ್ನೂ ಸುಡುವನು.[2]
ನಾರಾಯಣಾಯ ಮತ್ತು ನಾರಾಯಣ ಅರ್ಥ
ನಾರಾಯಣಾಯ = नारायणाय = न अ रा य ण अ य = न अ र अ य ण अ य
ಅಕ್ಷರಶಃ
ಅರ್ಥ:- “ಅವಿಶ್ರಾಂತವಾಗಿ ಜೀವದ ಉಸಿರು ವಿಶೇಷವಾದ ಪರಿಣಾಮಕಾರಿ ಮಂತ್ರದೊಂದಿಗೆ
ಸೇರಿಕೊಂಡು ಮಿದುಳಿನ ನಾಸಿಕಕ್ಕೆ ಬೆಳಕನ್ನು ನೀಡುವುದು.” ಅಥವಾ “ಅವಿಶ್ರಾಂತವಾಗಿ
ವಿಶೇಷವಾದ ಪರಿಣಾಮಕಾರಿ ಮಂತ್ರದೊಂದಿಗೆ ಜ್ವಾಲಾ ಗಂಜಿಯನ್ನು ಉತ್ಪಾದಿಸುತ್ತಾ ಮಿದುಳಿನ ನಾಸಿಕಕ್ಕೆ ಜೀವ ಉಸಿರು ಸರಿಸುವುದು”
ಶ್ರೀ
ವೈಷ್ಣವರು ಅನುಸಂಧಾನ ಮಾಡುವ ರಹಸ್ಯತ್ರಯದಲ್ಲಿ ಮೊದಲನೆಯದು. ಅದೇ “ಓಂ
ನಮೋ ನಾರಾಯಣಾಯ". ಈ ನಾಮೋಚ್ಚಾರಣೆಯೊಂದರಿಂದ ಭಗವಂತನನ್ನು ಕಾಣಲು, ಮೋಕ್ಷ ಪ್ರಾಪ್ತಿಯಾಗಲು ಸಾಧ್ಯ; ಇದಕ್ಕಿಂತ
ಸುಲಭೋಪಾಯವಿಲ್ಲ ಎಂಬ ತತ್ವ ಇದರಲ್ಲಿ ಇದೆ. ಇದರ
ಬಗ್ಗೆ ರಾಮಾನುಜಾಚಾರ್ಕರ್ಯರಿಂದ ಮೊದಲುಗೊಂಡು ಅನೇಕ ಆಚಾರ್ಯರು, ಮತನಿಷ್ಠರು
ದೀರ್ಫವಾದ ವ್ಯಾಖ್ಶಾನಗಳನ್ನೇ ಮಾಡಿದ್ದಾರೆ. ರಾಮಾನುಜರ 'ರಹಸ್ಯತ್ರಯಸಾರ'
ಕೃತಿಯ ಮುಖ್ಯವಸ್ತುವೇ ಇದು. ಈ ಅಷ್ಟಾಕ್ಷರಿಯನ್ನು 'ಮೂಲಮಂತ್ರ’ 'ಮಹಾಮಂತ್ರ’
‘ಮಂತ್ರರಾಜ' ಎಂದೆಲ್ಲ ಕರೆಯಲಾಗಿದೆ.
“ಓಂ ನಮೋ ನಾರಾಯಣಾಯ" ಎಂಬುದಕ್ಕೆ ಅಕ್ಷರ ಅರ್ಥ “ಶ್ರೇಷ್ಠತೆಯು ಮಾಂತ್ರಿಕ
ಸೂತ್ರದ ಹಿಡಿತವನ್ನು ಕರೆಯುವ ಓಂಕಾರವು, ಅವಿಭಜಿತ ನೀರಿನ
ಕರುಣೆಯೊಂದಿಗೆ, ಅವಿಶ್ರಾಂತವಾಗಿ ಜೀವದ ಉಸಿರು ವಿಶೇಷವಾದ
ಪರಿಣಾಮಕಾರಿ ಮಂತ್ರದೊಂದಿಗೆ ಸೇರಿಕೊಂಡು ಮಿದುಳಿನ ನಾಸಿಕಕ್ಕೆ ಬೆಳಕನ್ನು ನೀಡುವುದು”. ಅಥವಾ “ಶ್ರೇಷ್ಠತೆಯು
ಮಾಂತ್ರಿಕ ಸೂತ್ರದ ಹಿಡಿತವನ್ನು ಕರೆಯುವ ಓಂಕಾರವು, ಅವಿಭಜಿತ
ನೀರಿನ ಕರುಣೆಯೊಂದಿಗೆ, ಅವಿಶ್ರಾಂತವಾಗಿ ವಿಶೇಷವಾದ ಪರಿಣಾಮಕಾರಿ
ಮಂತ್ರದೊಂದಿಗೆ ಜ್ವಾಲಾ ಗಂಜಿಯನ್ನು ಉತ್ಪಾದಿಸುತ್ತಾ
ಮಿದುಳಿನ ನಾಸಿಕಕ್ಕೆ ಜೀವ ಉಸಿರು ಸರಿಸುವುದು’
ನಾರಾಯಣ = नारायण = न अ रा य ण = न अ र अ य ण
ಅಕ್ಷರಶಃ
ಅರ್ಥ:- ಅವಿಶ್ರಾಂತವಾಗಿ ಜೀವದ ಉಸಿರು ಮಿದುಳಿನ ನಾಸಿಕಕ್ಕೆ
ಬೆಳಕನ್ನು ನೀಡುವುದು ಅಥವಾ ಅವಿಶ್ರಾಂತವಾಗಿ ವಿಶೇಷವಾದ ಪರಿಣಾಮಕಾರಿ ಮಂತ್ರದೊಂದಿಗೆ ಜ್ವಾಲಾ
ಗಂಜಿಯನ್ನು ಮಿದುಳಿನ ನಾಸಿಕಕ್ಕೆ ಉತ್ಪಾದಿಸುವುದು.
ನಾರಾಯಣ
ಉಪನಿಷತ್ತಿನಲ್ಲಿ ಹೇಳುವಂತೆ “ಅಂತರ್ಬಹಿಶ್ಚ ತತ್-ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ”. ನಮ್ಮ
ಒಳಗೆ ಮತ್ತು ಹೊರಗೆ ತುಂಬಿ, ಎಲ್ಲವನ್ನೂ ವ್ಯಾಪಿಸಿ ನಿಂತಿರುವ
ಭಗವಂತ ನಾರಾಯಣ. ಒಂದು ಅತಿಕ್ಷುದ್ರ ಜೀವದಿಂದ ಹಿಡಿದು ಚತುರ್ಮುಖ ಬ್ರಹ್ಮನ ತನಕ ಎಲ್ಲರ ಒಳಗೂ
ಹೊರಗೂ ಭಗವಂತ ತುಂಬಿದ್ದಾನೆ. ನಮ್ಮ ಒಳಗೆ ಅಂತರ್ಯಾಮಿಯಾಗಿ ಬಿಂಬರೂಪದಲ್ಲಿದ್ದು ನಮ್ಮನ್ನು
ನಡೆಸುತ್ತಿದ್ದಾನೆ ಮತ್ತು ನಮ್ಮ ಹೊರಗೆ ನಿಂತು ನಮ್ಮನ್ನು ಧಾರಣೆ ಮಾಡಿದ್ದಾನೆ. ಜ್ಞಾನಿಗಳಿಗೆ
ಅವರ ಅಂತರಂಗದಲ್ಲಿ ದರ್ಶನ ಕೊಡುವ ಭಗವಂತ ಅಜ್ಞಾನಿಗಳಿಗೆ ಬಹಿ(ಬಹುದೂರ). ಸರ್ವಗತನಾದ ಭಗವಂತ ಅಚಲ
ಆದರೆ ಆತನ ಅನಂತ ರೂಪಗಳು ಸದಾ ಚಲಿಸುತ್ತಿರುತ್ತವೆ. ಸಮಸ್ತ ಚರಾಚಾರಾತ್ಮಕ ಜೀವದೊಳಗೆ ಭಗವಂತ
ತುಂಬಿ ನಿಂತಿದ್ದಾನೆ. ಭಗವಂತ ಅಣುವಿನೊಳಗೆ ಅಣುವಾಗಿ ತುಂಬಿದ್ದಾನೆ.
ಆಶ್ಚರ್ಯವತ್ ಪಶ್ಯತಿ ಕಶ್ಚಿದೇನಂ
ಆಶ್ಚರ್ಯವದ್ ವದತಿ ತಥೈವ
ಚಾನ್ಯಃ । ಆಶ್ಚರ್ಯವಚ್ಚೈನಮನ್ಯಃ ಶೃಣೋತಿ ಶ್ರುತ್ವಾSಪ್ಯೇನಂ ವೇದ ನಚೈವ ಕಶ್ಚಿತ್॥
ಭಗವದ್ಗೀತೆ 2-೨೯
ಭಾವಾರ್ಥ:- ಯಾರಾದರೂ ಈ ಜೀವತತ್ವವನ್ನು ಅಥವಾ ಭಗವಂತನನ್ನು ಕಂಡುಕೊಂಡರೆ ಅದೊಂದು
ಅಚ್ಚರಿಯಂತೆ. ಇನ್ನೊಬ್ಬ ಆ ಕುರಿತು ಉದ್ಗರಿಸಿದರೆ ಅದೊಂದು ಅಚ್ಚರಿಯಂತೆ. ಮಗದೊಬ್ಬ ಅದನ್ನು
ಕೇಳಿ ತಿಳಿದರೆ ಅದೂ ಒಂದಚ್ಚರಿಯಂತೆ. (ಯಾರೋ ಒಬ್ಬ ಭಗವಂತನನ್ನು ಅಚ್ಚರಿಗೊಂಡು ನೋಡುತ್ತಾನೆ.
ಯಾರೋ ಒಬ್ಬ ಅಚ್ಚರಿಗೊಂಡು ಆಡುತ್ತಾನೆ. ಯಾರೋ ಒಬ್ಬ ಅವನನ್ನು ಅಚ್ಚರಿಗೊಂಡು ಕೇಳುತ್ತಾನೆ)
ಎಷ್ಟು ಕೇಳಿದರೂ ಜೀವವನ್ನಾಗಲೀ, ಭಗವಂತನನ್ನಾಗಲೀ ಸರಿಯಾಗಿ
ಅರಿತವನು ಯಾರೂ ಇಲ್ಲ.
ಜಗನ್ನಾಥದಾಸರು
ವ್ಯಾಖ್ಯಾನಿಸಿದಂತೆ, ಪರಮಾತ್ಮ ನಾರಾಯಣನ ಮಹಿಮೆಯನ್ನು
ಧ್ಯಾನೋಪಾಸಕ್ತನು ತಿಳಿಯುವುದೇನೆಂದರೆ ಐದು ಮನೋವೃತ್ತಿಗಳ ಪೈಕಿ ನಾರಾಯಣ ಎಂದರೆ ಅಂತಃಕರಣ ಎಂತಲೂ
ಫಲಭೋಗಕ್ಕೆ ಕಾರಣನೆಂತಲೂ, ಆನಂದಮಯಕೋಶದಲ್ಲಿ ನಾರಾಯಣನ ಉಪಸ್ಥಿತಿ
ಎಂತಲೂ ವ್ಯಾಖ್ಯಾನಿಸುತ್ತಾರೆ. ಹಾಗೆ ಮನಸ್ಸಿಗೆ ಮನೋಮಯಕೋಶಕ್ಕೆ ಸಂಕಲ್ಪ ವಿಕಲ್ಪ ಕಾರ್ಯಕ್ಕೆ
ಸಂಕರ್ಷಣ ನಾಮವನ್ನು, ಸ್ಮರಣೇಚ್ಛಾ ಕಾರ್ಯದ ಚಿತ್ತ ವಿಜ್ಞಾನಮಯಕೋಶ
ವಾಸುದೇವ ನಾಮವನ್ನು, ನಿಶ್ಚಯ ಜ್ಞಾನ ಕಾರ್ಯದ ಬುದ್ಧಿ ಪ್ರಾಣಮಯಕೋಶ
ಪ್ರದ್ಯುಮ್ನ ನಾಮವನ್ನು, ಸ್ವರೂಪ ಅಸ್ವರೂಪ ಕಾರ್ಯದ ಅಹಂಕಾರ
ಅನ್ನಮಯಕೋಶಕ್ಕೆ ಅನಿರುದ್ಧ ನಾಮವನ್ನು ನೀಡಿದ್ದಾರೆ.
ಸಂಸ್ಕೃತದಲ್ಲಿ ಇಂದ್ರ, ವರುಣ, ಯಾರು?
"ಇಂದ್ರ" = इन्द्र = इ न द र
ಅಕ್ಷರಶಃ
ಅರ್ಥ:- "ಪ್ರಕಾಶಮಾನವನ್ನು ನೀಡುವ
ಪ್ರಶಂಸನೀಯವಾದುದ್ದನ್ನು ನಿರ್ದಿಷ್ಟ ಸ್ಥಿತಿಗೆ
ಇಳಿಸಲಾಗಿದೆ" ಇಂದ್ರನನ್ನು ಸಿಡಿಲಿನ ಪ್ರಕಾಶಮಾನತೆಗೂ ವಿದ್ವಾಂಸರು ಹೋಲಿಸುತ್ತಾರೆ.
ಇಂದ್ರನನ್ನು ಪ್ರಜಾಪತಿ ಎಂದೂ ಹೇಳುತ್ತಾರೆ. ಧ್ಯಾನದಲ್ಲಿ ಪ್ರಕಾಶಮಾನತೆಯನ್ನು ಕಾಣುವುದು ಅಂತಿಮ
ವಿಮೋಚನಾ ಹಂತ ಎಂದು ಹೇಳುತ್ತಾರೆ, ಈ ಪ್ರಕಾಶಮಾನತೆಯನ್ನು
ನೀಡುವುದು ಗಾಳಿ, ಅಮೃತ, ಮತ್ತು ಅನೇಕ
ವಿಸ್ಮಯ ಸರಸ್ಪತಿ ಜಲದಾರೆ ಸಹಸ್ರಾಕ್ಕೆ ಕೊಂಡೊಯ್ಯುವುದು ಆಗಿದೆ. ಸರಸ್ಪತಿಯನ್ನು ಶುಭ್ರ ಬಿಳಿ
ಬಣ್ಣದಲ್ಲಿ ಕಾಣುತ್ತಾರೆ, ಬಿಳಿ ಬಣ್ಣವೇ ಪ್ರಕಾಶಮಾನತೆ
ನೀಡುವುದಾಗಿದೆ, ಧ್ಯಾನ ಮತ್ತು ಉಸಿರಾಟದಲ್ಲಿ ಪ್ರಕಾಶಮಾನತೆಯನ್ನು
ನೀಡುವ ಅದ್ಬುತವಾದವುಗಳನ್ನು ನಿರ್ದಿಷ್ಟ ಸ್ಥಿತಿಗೆ ಇಳಿಸುವವನು ಈ ದೇಹದ ಅಧಿಪತಿ/ರಾಜ ಅವನೇ
ಇಂದ್ರ. ಇಂದ್ರ ಎಂದರೆ ಇಂದ್ರಿಯಗಳಿಗೂ ಅಧಿಪತಿ ಎಂದು ಹೇಳಲಾಗುತ್ತದೆ. ಅಂತಹ ನಿರ್ದಿಷ್ಟ
ಸ್ಥಿತಿಗೆ ಇಳಿಸುವ ಅಧಿಪತಿ ಪ್ರಕಾಶಮಾನವಾಗಿ ಯಾವ ಮನುಜನಲ್ಲಿ ಕಂಗೊಳಿಸುತ್ತಾನೆ ಅವನು
ರಾಜನಾಗಿದ್ದಾನೆ ಅರ್ಥಾತ್ ರಾಜಯೋಗಿ ಆಗಿದ್ದಾನೆ ಎನ್ನುವ ಪದದ ಹಿನ್ನೆಲೆ ಇರುವುದಾಗಿದೆ.
"ವರುಣ" = वरुण = व र उ ण
ಅಕ್ಷರಶಃ
ಅರ್ಥ:-
"ಶಕ್ತಿಯುತ ಘರ್ಜಿಸುವ ನೀರಿನ ಮನೆ" ಎಂದು ಬರುತ್ತದೆ. ರೂಡಿಯಲ್ಲಿ ವರುಣದೇವ
ಎಂದರೆ ಮಳೆ ಎಂದೂ ಬಿಂಬಿಸುತ್ತಾರೆ. ನೀರಿನ ಮನೆ ದೇಹದಲ್ಲಿ ಮೂಲಾಧಾರದ ಬಳಿ ಇರುವುದಾಗಿದೆ. ಅಂತಹ
ನೀರಿನ ಮನೆಯಲ್ಲಿ ಅದ್ಬುತವಾದ ಆಯುದ ಅದುವೇ ಮನುಜನಿಗೆ ಅನುಕೂಲಕರ ಬ್ಯಾಕ್ಟೀರಿಯಾ ಆಗಿದೆ. ಅಂತಹ
ನೀರಿನ ಮನೆಯಲ್ಲಿ ಆಹಾರದಿಂದ ಉಂಟಾದ ಗಿಡಮೂಲಿಕೆ ಇರುತ್ತದೆ. ಅಂತಹ ನೀರಿನ ಮನೆಯಲ್ಲಿ ಜೀರ್ಣ
ಕ್ರಿಯೆ ಮಾಡುವ ಬೆಂಕಿಯ ದ್ರವ ಇರುತ್ತದೆ. ಅಂತಹ ನೀರಿನ ಮನೆಯಲ್ಲಿ ಅನೇಕ ರಾಸಾಯಣಿಕ ಪ್ರಕ್ರಿಯೆ
ನಡೆದು ಅಮೃತ, ಅಮೃತದ ವಾಯು, ಅಮೃತದ
ವಸ್ತುಗಳು ಉತ್ಪತ್ತಿಯಾಗುತ್ತದೆ. ಇಂತಹ ನೀರಿನ ಮನೆಗೆ ವರುಣ ದೇವ ಎಂದೂ, ಇಲ್ಲಿ ರಾಸಾಯಣಿಕ ಪ್ರಕ್ರಿಯೆಗಳಿಂದ ಶಕ್ತಿಯುತ ಘರ್ಜನೆ ಉಂಟಾಗುತ್ತದೆ. ಇದರ
ವಿಚಾರ ವಿಸ್ತಾರವಾಗಿ ಮುಂದೆ ಹೇಳಲಾಗಿದೆ.
ಪ್ರಕೃತಿಯ ಅಧಿಪತಿ ಸರ್ವಶಕ್ತ ಶಕ್ತಿಯ ಇಂದ್ರ
ಅಥರ್ವ ವೇದ - ಖಾಂಡ-4 ಸೂಕ್ತ 24
ಶ್ಲೋಕ 1 - 3
ರಲ್ಲಿ ಇಂದ್ರನ ಬಗ್ಗೆ ವರ್ಣನೆ ಮತ್ತೆ ರಕ್ಷೆ ಕೋರುವಿಕೆ ಇದೆ.
"ಇನ್ದ್ರಸ್ಯ ಮನ್ಮಹೇ ಶಶ್ವದಿದಸ್ಯ
ಮನ್ಮಹೇ ವೃತ್ರಘ್ನ ಸ್ತೋಮಾ ಉಪ ಮೇಮ ಆಗುಃ ।
ಯೋ ದಾಶುಷಃ ಸುಕೃತೋ ಹವಮೇತಿ ಸ ನೋ
ಮುಞ್ಚತ್ವಂಹಸಃ । ೧ ॥"
ಭಾವಾರ್ಥ:- ನಾವು ಪ್ರಕೃತಿಯ ಅಧಿಪತಿಯಾದ ಇಂದ್ರನ ಸರ್ವಶಕ್ತ ಶಕ್ತಿಯ ಬಗ್ಗೆ ಯೋಚಿಸುತ್ತೇವೆ,
ಅನ್ವೇಶನೆ ಮಾಡುತ್ತೇವೆ ಮತ್ತು ಪ್ರತಿಬಿಂಬಿಸುತ್ತೇವೆ. ನಾವು ಯಾವಾಗಲೂ,
ನಿರಂತರ ರೀತಿಯಲ್ಲಿ, ಬ್ರಹ್ಮಾಂಡದ
ಸರ್ವಶಕ್ತನಾದ ಇಂದ್ರನ ಸ್ವಭಾವ ಮತ್ತು ಇರುವಿಕೆಯನ್ನು ಧ್ಯಾನಿಸುತ್ತೇವೆ ಮತ್ತು ರಾಕ್ಷಸ ದುಷ್ಟ,
ಕತ್ತಲೆ ಮತ್ತು ಅಜ್ಞಾನವನ್ನು ನಾಶಮಾಡುವವನು. ದಾನ ಮತ್ತು ಉದಾತ್ತ ಕ್ರಿಯೆಯ
ಉದಾರ ಮನುಷ್ಯನ ಕರೆಗೆ ಕಿವಿಗೊಟ್ಟು ಪ್ರತಿಕ್ರಿಯಿಸುವ ಭಗವಂತನ ಗೌರವಾರ್ಥವಾಗಿ ಆರಾಧನೆಯ
ಮಾತುಗಳು ಈಗ ನನಗೆ ಬಂದಿವೆ.
ಇಂದ್ರ ನಮ್ಮನ್ನು ಪಾಪ ಮತ್ತು ಸಂಕಟದಿಂದ ರಕ್ಷಿಸಲಿ.
ಯ ಉಗ್ರೀಣಾಮುಗ್ರಬಾಹುರ್ಯಯುಯೋಂ
ದಾನವಾನಾಂ ಬಲಮಾರುರೋಜ।
ಯೇನ ಜಿತಾ: ಸಿನ್ಧವೋ ಯೇನ ಗಾವಃ ಸ ನೋ
ಮುಞ್ಚತ್ವಂಹಸಃ ॥೨॥
ಭಾವಾರ್ಥ:- ನಾವು ಧೈರ್ಯಶಾಲಿ ಯೋಧರನ್ನು
ಬಲಪಡಿಸುವ ಮತ್ತು ರಾಕ್ಷಸ ವಿಧ್ವಂಸಕರ ಶಕ್ತಿಯನ್ನು ಒಡೆಯುವ, ಧೈರ್ಯಶಾಲಿಗಳ
ಮೇಲೆ ಪ್ರಬಲವಾದ ತೋಳುಗಳ ಅಧಿಪತಿಯಾದ ಇಂದ್ರನನ್ನು ನಾವು ಧ್ಯಾನಿಸುತ್ತೇವೆ. ಅವನು ಹರಿಯುವ
ಪ್ರವಾಹವನ್ನು ಹೊಂದಿಸುತ್ತಾನೆ, ಉರುಳುತ್ತಿರುವ ಸಾಗರಗಳನ್ನು
ನಿಯಂತ್ರಿಸುತ್ತಾನೆ, ನಕ್ಷತ್ರಗಳನ್ನು ಹೊಳೆಸುತ್ತಾನೆ ಮತ್ತು
ಗ್ರಹಗಳನ್ನು ಸುತ್ತುತ್ತಾನೆ, ಬೆಳಕಿನ ಕಿರಣಗಳನ್ನು
ಹೊರಸೂಸುತ್ತಾನೆ ಮತ್ತು ಪವಿತ್ರ ಧ್ವನಿಯನ್ನು (ಅಜಪ ಮಂತ್ರವನ್ನು) ಆಶೀರ್ವದಿಸುತ್ತಾನೆ. ಶಕ್ತಿ
ಮತ್ತು ಆನಂದದ ಆ ಭಗವಂತ ನಮ್ಮನ್ನು ಪಾಪ ಮತ್ತು ಸಂಕಟದಿಂದ ರಕ್ಷಿಸಲಿ.
ಯಶ್ಚರ್ಷಣಿಪ್ರೋ ವೃಷಭಃ ಸ್ವರ್ವಿದ್
ಯಸ್ಮೈ ಗ್ರಾವಾಣ: ಪ್ರವದನ್ತಿ ನೃಮ್ಣಮ್।
ಯಸ್ಯಾಧ್ವರ: ಸಪ್ತಹೋತಾ ಮದಿಷ್ಠ: ಸ ನೋ
ಮುಞ್ಚತ್ವಂಹಸಃ ॥೩॥
ಭಾವಾರ್ಥ:- ಶ್ರಮಜೀವಿಗಳಿಗೆ
ನೆರವೇರಿಸುವವನು, ಉದಾರ-ತೆಯ ಮಳೆಯನ್ನು ತರುವವನು, ಆನಂದದ ಹಾದಿಯನ್ನು ಬೆಳಗಿಸುವವನು, ಯಾರಿಗಾಗಿ ಯಜ್ಞ
ಆಚರಣೆಗಳು ಉತ್ಕೃಷ್ಟತೆಯ ಹಾಡುಗಳನ್ನು ಹಾಡುತ್ತವೆ, ಅವರ ಪ್ರೀತಿ
ಮತ್ತು ಅಹಿಂಸೆಯ ಅತ್ಯಂತ ಭಾವೋದ್ರಿಕ್ತ ಸೃಜನಶೀಲ ಯಜ್ಞವನ್ನು ಏಳು ಪುರೋಹಿತರು (ಏಳು ಕುಂಡಲಿನಿ
ಚಕ್ರಗಳು) ನಡೆಸುತ್ತಾರೆ, ಆತನು ನಮ್ಮನ್ನು ಪಾಪ ಮತ್ತು ಸಂಕಟದಿಂದ
ರಕ್ಷಿಸಲಿ.
ಋಗ್ವೇದದ ಪ್ರಕಾರ ಬೆಳಕಿನ ಅಧಿದೇವತೆ ಇಂದ್ರ
ಋಗ್ ವೇದ - ಮಂಡಲ 1 - ಸೂಕ್ತ 2 - ಶ್ಲೋಕ
4 ರಿಂದ 6
ಇನ್ದ್ರವಾಯೂ ಇಮೇ ಸುತಾ ಉಪ ಪರಯೋಭಿರಾ
ಗತಮ | ಇನ್ದವೋ ವಾಮುಶನ್ತಿ ಹಿ || 4
ವಾಯವಿನ್ದ್ರಶ್ಚ ಚೇತಥಃ ಸುತಾನಾಂ
ವಾಜಿನೀವಸೂ | ತಾವಾ ಯಾತಮುಪ ದರವತ || 5
ವಾಯವಿನ್ದ್ರಶ್ಚ ಸುನ್ವತ ಆ ಯಾತಮುಪ
ನಿಷ್ಕ್ರ್ತಮ | ಮಕ್ಷ್ವಿತ್ಥಾ ಧಿಯಾ ನರಾ || 6
ಭಾವಾರ್ಥ:- (4) ಬೆಳಕಿನ ಅಧಿಪತಿ ಇಂದ್ರ, ಮತ್ತು ಜೀವನ ಮತ್ತು
ಶಕ್ತಿಯ ಉಸಿರು, ವಾಯು, ಬಟ್ಟಿ
ಇಳಿಸಿದ ಈ ಪ್ರಮುಖ ಸಾರಗಳು ಯಜ್ಞದ ಸಂತೋಷದಾಯಕ ಪ್ರಯೋಗಗಳು. ಅವರು ನಿಮ್ಮ ದೈವಿಕ ಬೆಳಕು ಮತ್ತು
ಶಕ್ತಿಯನ್ನು ಪ್ರಕಟಿಸುತ್ತಾರೆ ಮತ್ತು ವೈಭವೀಕರಿಸುತ್ತಾರೆ. ಬಂದು ನಮ್ಮನ್ನು ಆಶೀರ್ವದಿಸಿ. (5)
ವಾಯು ಮತ್ತು ಇಂದ್ರ, ಅಧಿಪತಿಯ ಉಸಿರು ಮತ್ತು ಬೆಳಕಿನ ಶಕ್ತಿಗಳು,
ನೀವು ಸೃಷ್ಟಿಯ ವಸ್ತುಗಳ ಸತ್ವ, ಶಕ್ತಿ ಮತ್ತು
ಬುದ್ಧಿವಂತಿಕೆಯನ್ನು ಚೈತನ್ಯಗೊಳಿಸುವಿರಿ ಮತ್ತು ಬೆಳಗಿಸುವಿರಿ. ಸೃಷ್ಟಿಯ ದೈವತ್ವಗಳು,
ವೇಗವಾಗಿ ಬಂದು ಜೀವನ ಮತ್ತು ಪ್ರಕೃತಿಯನ್ನು ಸ್ಫೂರ್ತಿಗೊಳಿಸಿ. (6) ವಾಯು
ಮತ್ತು ಇಂದ್ರ, ಜೀವನದ ದೈವಿಕ ಉಸಿರು ಮತ್ತು ಬುದ್ಧಿವಂತಿಕೆಯ
ದೈವಿಕ ಬೆಳಕು, ಪ್ರಕೃತಿಯ ದೈವತ್ವಗಳು, ಸೃಷ್ಟಿಯ ವಸ್ತುಗಳನ್ನು ಜೀವನದ ರಸದಿಂದ ಪ್ರೇರೇಪಿಸುತ್ತದೆ. ಆದ್ದರಿಂದ ಅವರು
ಮಾನವನನ್ನು ಚೈತನ್ಯ ಮತ್ತು ಬುದ್ಧಿವಂತಿಕೆಯೊಂದಿಗೆ ಅಲಂಕಾರ ಮಾಡುತ್ತಾರೆ ಮತ್ತು ವಿಕಾಸದ ತಮ್ಮ ಸೃಜನಶೀಲ ಯಜ್ಞವನ್ನು
ಸಾಧಿಸುತ್ತಾರೆ.
ಬೀಜಾಕ್ಷರ ಮಂತ್ರದ ಮಹತ್ವ
ರಾಮ ಎನ್ನುವ ಬೀಜ ಮಂತ್ರದ ಅಕ್ಷರ
ಅರ್ಥ “ಜೀವದ ಉಸಿರು ಮಾಂತ್ರಿಕ
ಸೂತ್ರವನ್ನು ಪಡೆದುಕೊಳ್ಳುತ್ತದೆ”
ಕ್ರೀಂ ಎನ್ನುವ ಬೀಜ ಮಂತ್ರದ ಅಕ್ಷರ ಅರ್ಥ
“ಒಂದು ಮಾಂತ್ರಿಕ ಸೂತ್ರವನ್ನು ತಲುಪಲು ಹೊಂದಿರುವ ಶಬ್ದ”
ಹ್ರೀಂ ಎನ್ನುವ ಬೀಜ ಮಂತ್ರದ ಅಕ್ಷರ ಅರ್ಥ
“ಒಂದು ಮಾಂತ್ರಿಕ ಸೂತ್ರವನ್ನು ತಲುಪಲು ಹೊಂದಿರುವ ಬೆರಗು”
ಕ್ಲೀಮ್ ಎನ್ನುವ ಬೀಜ ಮಂತ್ರದ ಅಕ್ಷರ ಅರ್ಥ
“ಒಂದು ಮಾಂತ್ರಿಕ ಸೂತ್ರವನ್ನು ತಲುಪಲು ಸೃಷ್ಟಿಕರ್ತ ಆತ್ಮ”
ಶ್ರೀಮ್ ಎನ್ನುವ ಬೀಜ ಮಂತ್ರದ ಅಕ್ಷರ ಅರ್ಥ
ಮಾತಿನ ಒಂದು ಮಾಂತ್ರಿಕ ಸೂತ್ರ,
ಕಾಳೀಮ್ ಎನ್ನುವ ಬೀಜ ಮಂತ್ರದ ಅಕ್ಷರ ಅರ್ಥ
ಜೀವ ಉಸಿರು ಸೃಷ್ಟಿಕರ್ತ ಮಾಂತ್ರಿಕ ಸೂತ್ರವನ್ನು ತಲುಪಲು ಆತ್ಮವು”
ಶಾಸ್ತ್ರ
ಶಬ್ದದ ಹಿನ್ನೆಲೆ ಏನು?
"ಶಾಸ್ತ್ರ" = शास्त्र, = शा स त्र ಶಾಸ್ತ್ರವು ಅಕ್ಷರಶಃ "ಮೂರು ಜ್ಞಾನವನ್ನು
ತಿಳಿಸು" ಅಥವಾ “ಮೂರು ಜ್ಞಾನವನ್ನು ಸಂವಹನ ಮಾಡುವ” ಎಂದರ್ಥ.
ಇಲ್ಲಿ ಮೊದಲಿಗೆ ಇದ್ದದ್ದು ಮೂರು ವೇದಗಳು ಮಾತ್ರ ಅದು ಋಗ್ವೇದ,
ಯಜುರ್ವೇದ, ಸಾಮವೇದ ಎಂಬ ಮೂರು ಜ್ಞಾನವನ್ನು ತಿಳಿಸು ಎಂದು
ವ್ಯಾಖ್ಯಾನಿಸಬಹುದು, ಆದರೆ ಇದಕ್ಕಿನ್ನ ಉತ್ತಮವಾದ ವ್ಯಾಖ್ಯಾನ
ಎಂದರೆ ಮೂರು ಅಕ್ಷರಗಳ/ಪದಗಳ ಅಜಪ ಮಂತ್ರದ ಗೋಪ್ಯತಾ ಮಂತ್ರಬೋಧನಾ ಮೂಲವೇ ಶಾಸ್ತ್ರ ಎಂಬುದು
ಸರಿಯಾದ ಅರ್ಥವಾಗಿದೆ. ಇನ್ನೊಂದು ಅರ್ಥದಲ್ಲಿ ಮೂರು ನಾಡಿಗಳಾದ ಇಡಾ ಪಿಂಗಳಾ ಮತ್ತು ಸುಷುಮ್ನಾ
ನಾಡಿ ಬಗ್ಗೆ ಜ್ಞಾನವನ್ನು ತಿಳಿಸುವುದೇ ಶಾಸ್ತ್ರ ಎಂದು ಹೇಳಬಹುದು.
ಡಾ.
ತುಳಸಿ ರಾಮ್ ಶರ್ಮಾ ರವರು ವ್ಯಾಖ್ಯಾನಿಸಿರುವ ಅಥರ್ವ ವೇದ - ಖಾಂಡ ೧೮ ಸೂಕ್ತ 1 ಶ್ಲೋಕ 17
ರಲ್ಲಿ ಶಾಸ್ತ್ರದ ಬಗ್ಗೆ ಹೀಗೆ ಹೇಳಿದ್ದಾರೆ "ಶಾಸ್ತ್ರ ಮತ್ತು ವೇದಗಳಲ್ಲಿ ಋಷಿಗಳು ಮತ್ತು
ವಿದ್ವಾಂಸರು ಪ್ರಕೃತಿ ಮತ್ತು ದೈವತ್ವದ ಮೂರು ಸಂತೋಷದಾಯಕ ಉಡುಗೊರೆಗಳನ್ನು ಅಧ್ಯಯನ ಮಾಡುತ್ತಾರೆ
ಮತ್ತು ಪೋಷಿಸುತ್ತಾರೆ, ಬಹುಮುಖ ರೂಪದಲ್ಲಿ, ಸೂಕ್ಷ್ಮವಾಗಿ ತೃಪ್ತಿಯನ್ನು ನೀಡುವ ಮತ್ತು ದೇಹ, ಇಂದ್ರಿಯ
ಮತ್ತು ಮನಸ್ಸು ಮತ್ತು ಆತ್ಮಕ್ಕೆ ಸಾರ್ವತ್ರಿಕವಾಗಿ ಉಜ್ವಲಗೊಳಿಸುತ್ತದೆ. ಈ ಉದ್ದೇಶಕ್ಕಾಗಿ,
ಅವುಗಳು: ರುಚಿ ಮತ್ತು ಮಾಧುರ್ಯಕ್ಕಾಗಿ ನೀರು, ಪ್ರಾಣದ ಶಕ್ತಿಗಾಗಿ ಗಾಳಿ, ಮತ್ತು ಶಕ್ತಿ ಮತ್ತು
ನೋವು ನಿವಾರಣೆಗೆ ಗಿಡಮೂಲಿಕೆಗಳು. ಮತ್ತು ಈ ಮೂರೂ ಸ್ವಾಭಾವಿಕ ಮತ್ತು ಒಂದೇ ಒಂದು ಮೂಲದಲ್ಲಿ
ಕೇಂದ್ರೀಕೃತವಾಗಿವೆ."
ವ್ಯಾಸರು ಉಸಿರಾಟ ಮತ್ತು ಧ್ಯಾನ ರಹಸ್ಯ ಪಿತಾಮಹ
ವ್ಯಾಸ = व्यास = व या स
"ವ್ಯಾಸ" = व्यास ಎಂಬುವವರು ಅಥರ್ವ
ವೇದದಲ್ಲಿ ಉಸಿರಾಟ ಮತ್ತು ಧ್ಯಾನದ ರಹಸ್ಯವನ್ನು ನೀಡಿದ ವ್ಯಕ್ತಿಯು ಈ ಪದದ ಅಕ್ಷರಶಃ ಅರ್ಥ
"ಶಕ್ತಿಯುತ ಧಾರ್ಮಿಕ ಧ್ಯಾನವನ್ನು ನೀಡುವುದು" ಎಂಬುದಾಗಿದೆ. ಹಿಂದೂಗಳು ಸಾಂಪ್ರದಾಯಿಕವಾಗಿ
ವ್ಯಾಸರು ಮೂಲ ಏಕ ವೇದವನ್ನು ಮೂರು ಅಂಗೀಕೃತ ಸಂಗ್ರಹಗಳಾಗಿ ವರ್ಗೀಕರಿಸಿದ್ದಾರೆ ಮತ್ತು
ಅಥರ್ವವೇದ ಎಂದು ಕರೆಯಲ್ಪಡುವ ನಾಲ್ಕನೆಯದನ್ನು ವೇದವೆಂದು ಗುರುತಿಸಲಾಯಿತು ಎಂದು ನಂಬುತ್ತಾರೆ.
ಆದ್ದರಿಂದ ಅವರನ್ನು ವೇದವ್ಯಾಸ ಅಥವಾ "ವೇದಗಳ ವಿಭಜಕ" ಎಂದು ಕರೆಯಲಾಗುತ್ತಿತ್ತು,
ಇದು ವೇದದ ದೈವಿಕ ಜ್ಞಾನವನ್ನು ಅರ್ಥಮಾಡಿಕೊಳ್ಳಲು ಜನರಿಗೆ ಅವಕಾಶ
ಮಾಡಿಕೊಟ್ಟ ಒಂದು ಸಾಧನೆಯಾಗಿದೆ. ಅವರು ವೇದಗಳ ಮಂತ್ರಗಳ ಸಂಯೋಜಕರಾಗಿ ಸಂಪ್ರದಾಯದಿಂದ
ಪರಿಗಣಿಸಲಾಗುತ್ತದೆ, ಹಾಗೆಯೇ ಹದಿನೆಂಟು ಪುರಾಣಗಳು ಮತ್ತು ಬ್ರಹ್ಮ
ಸೂತ್ರಗಳ ಲೇಖಕರು. ಅವರು ಏಳು ಚಿರಂಜೀವಿಗಳಲ್ಲಿ ಒಬ್ಬರು.
ವೇದಗಳ
ಪ್ರಕಾರ ಬ್ರಹ್ಮನು ವಸಿಷ್ಠ ಮಹಾ ಋಷಿಗೆ ತಂದೆ ಎನ್ನಲಾಗಿದೆ. ವಸಿಷ್ಠರು ಮತ್ತು ಅರುಂದತಿಯವರಿಗೆ
ಜನಿಸಿದವರೇ ಶಕ್ತಿ ಮಹರ್ಷಿ, ಅದೃಷ್ಯವಂತಿ ಮತ್ತು ಶಕ್ತಿ ಮಹರ್ಷಿಗೆ ಜನಿಸಿದವರೇ ಪರಾಷರ ಮಹರ್ಷಿ.
ಪರಾಷರ ಮಹರ್ಷಿ ಮತ್ತು ಮೀನುಗಾರರ ಕುಲದ ಸತ್ಯವತಿಗೆ ಹುಟ್ಟಿದ್ದೇ ವ್ಯಾಸ ಮಹರ್ಷಿ. ನಂತರ
ಸತ್ಯವತಿ ‘ಸಂತನು’ ಮಹಾರಾಜನನ್ನು
ವರಿಸಿದಳು. ಇವರಿಗೆ ಚಿತ್ರಾಂಗದ ಮತ್ತು ವಿಚಿತ್ರವೀರ್ಯ ಎಂಬ ಮಕ್ಕಳು ಹುಟ್ಟಿದ್ದರು. ಇಬ್ಬರೂ
ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಆಸು ನೀಗಿದರು. ವಿಚಿತ್ರವೀರ್ಯನಿಗೆ ಅಂಬಿಕಾ ಮತ್ತು ಅಂಬಾಲಿಕಾ
ಎಂಬ ಇಬ್ಬರು ಪತ್ನಿಯರು. ಅಂದಿನ ನಿಯೋಗ ಸಂಸೃತಿಯಿಂದ ವ್ಯಾಸ ಮಹರ್ಷಿ ಮತ್ತು ಅಂಬಿಕೆಗೆ
ಹುಟ್ಟಿದ್ದು ದ್ರುತರಾಷ್ಟ್ರ ಆದರೆ, ಅಂಬಾಲಿಕೆ ಮತ್ತು ವ್ಯಾಸ ಮರ್ಷಿಗೆ ಹುಟ್ಟಿದ್ದು ಪಾಂಡುರಾಜ.
ವ್ಯಾಸ ಮಹರ್ಷಿ ಮತ್ತು ದಾಸಿಗೆ ಹುಟ್ಟಿದ್ದು ವಿದುರ. ವಶಿಷ್ಟರು, ಪರಾಷರರು, ಮತ್ತು
ವ್ಯಾಸರಾದಿಯಾಗಿ ವೇದಗಳು, ಪುರಾಣಗಳು ಇತರೆ ಹಿಂದು ಗ್ರಂಥಗಳನ್ನು ರಚಿಸಿದ್ದಾರೆ.
ಕೃಷ್ಣ = कृष्ण = कृ ष ण
"ಕೃಷ್ಣನ" = कृष्ण ಹೆಸರನ್ನು ನೋಡಿ
ಅವನನ್ನು "ಜಗತ್ತಿನ ಏಕೈಕ ಗುರು" ಎಂದು ಕರೆಯುತ್ತಾರೆ ಕೃಷ್ಣನ ಅಕ್ಷರಶಃ ಅರ್ಥ
"ಅತ್ಯುತ್ತಮ ಜ್ಞಾನವನ್ನು ರಚಿಸುವುದು". ಭಗವದ್ಗೀತೆಯಲ್ಲಿ ಜೀವನದ ಮೂಲ ತತ್ವಗಳನ್ನು
ಕಲಿಸಿದ ಗುರು ಕೃಷ್ಣ. ಅವರ ಬೋಧನೆಗಳು ಎಲ್ಲರಿಗೂ ಸಮಾನವಾಗಿ ಅನ್ವಯಿಸುವುದರಿಂದ ಅವರನ್ನು ಜಗದ್ಗುರು
ಎಂದು ಕರೆಯಲಾಗುತ್ತದೆ. "ಅರ್ಜುನ" = अर्जुन = ಎಂಬ ಸಂಸ್ಕೃತ
ಪದವನ್ನು ಅಕ್ಷರಗಳಾಗಿ ವಿಂಗಡಿಸಿ ಅರ್ಥ ಹುಡುಕಿದಾಗ "ಕೃಷ್ಣನ ಪರಿಣಾಮದಿಂದ
ಅವಿಶ್ರಾಂತವಾಗಿ ಹೋಗುವ" ಎಂಬ ಅರ್ಥ ಬರುತ್ತದೆ ಅಂದರೆ "ಅತ್ಯುತ್ತಮ ಜ್ಞಾನವನ್ನು
ರಚಿಸುವ ಪರಿಣಾಮದಿಂದ ಅವಿಶ್ರಾಂತವಾಗಿ ಹೋಗುವ".
"ರಾಮ" = राम = ಎಂಬ
ಸಂಸ್ಕೃತ ಪದವನ್ನು ಅಕ್ಷರಗಳಾಗಿ ವಿಂಗಡಿಸಿ ಅರ್ಥ ಹುಡುಕಿದಾಗ "ಮಾಂತ್ರಿಕ ಸೂತ್ರವನ್ನು
ಅನುಗ್ರಹಿಸುವ" ಎಂದು ಬರುತ್ತದೆ. ಮಾಂತ್ರಿಕ ಸೂತ್ರ ಎಂದರೆ ಉಸಿರಾಟದಲ್ಲಿ ಅನೇಕ ಮಾಂತ್ರಿಕ
ಸೂತ್ರದ ಪರಿಣಾಮ ದೇಹದಲ್ಲಿ ಅಮೃತದ ವಾಯು, ನೀರು, ಬೆಂಕಿ, ಗಿಡಮೂಲಿಕೆ,
ಆಹಾರ, ಗಂಜಿ, ಇತ್ಯಾದಿ
ಉತ್ಪತ್ತಿಯಾಗುತ್ತದೆ, ಇಂತಹ ಅಮೃತ ಉತ್ಪಾದಿಸುವ ಮಾಂತ್ರಿಕ ಸೂತ್ರದ
ಪವಿತ್ರ ಜ್ಞಾನ "ರಾಮ" ನಾಮದಲ್ಲಿ ಇದೆ. ಇದೇ ರೀತಿಯಲ್ಲಿ ಸೀತಾ = सिता = ಎಂಬ ನಾಮದಾಲ್ಲಿ "ಅದೃಷ್ಟವನ್ನು ಬೆಳಗಿಸಲು
ಆಶೀರ್ವಾದ" ಎಂಬ ಅರ್ಥ ಬರುತ್ತದೆ. ಸೀತಾ ಮಾತೆಯು ವಾಯು ಪುತ್ರ ಆಂಜಿನೇಯನನ್ನು
ಆಶೀರ್ವಾದಿಸಿದ ತಾಯಿ. ಇಲ್ಲಿ ವಾಯು, ಉಸಿರಾಟ, ಬೆಳಗಿಸುವ ಬೆಂಕಿ,
ಪ್ರಾಣವಾಯು, ಅಪಾನವಾಯು ಇತ್ಯಾದಿ ಸಾಂಕೇತಿಕ
ಬೋಧನಾ ಪಾತ್ರಗಳನ್ನು ಸೂಚಿಸುವ ವ್ಯಾಸರ ಭೋಧನಾ ಗೋಪ್ಯತೆಯೇ ಸಂಸ್ಕೃತ ನಾಮಾಗಳಲ್ಲಿಯೂ ವಿಸ್ಮಯತೆ.
ಬ್ರಹ್ಮ ಬ್ರಹ್ಮಜ್ಞಾನ ಬ್ರಹ್ಮನ್ ಇತ್ಯಾದಿ ಪದಗಳ ಅಕ್ಷರಾರ್ಥ
ಬ್ರಹ್ಮ = ब्रह्म = ब र ह म =
ಅಕ್ಷರಶಃ
ಅರ್ಥ :- ನೀರು, ಬೆಂಕಿ, ವೈದ್ಯ ಮಾಂತ್ರಿಕ ಸೂತ್ರ. (ನೀರು, ಬೆಂಕಿ, ಶಾಖ, ಹೊಳಪು, ಧ್ಯಾನ,
ಜ್ಞಾನವನ್ನು ಪಡೆದುಕೊಳ್ಳುವ
ವೈದ್ಯ ಮಾಂತ್ರಿಕ ಸೂತ್ರ). ವೈಧಿಕ ಧರ್ಮದಲ್ಲಿ ವಾಯುವನ್ನು
ಬ್ರಹ್ಮ ಎಂದು ತಿಳಿದುಕೋ ಎಂದು ಪ್ರಾರಂಭಿಕವಾಗಿ ಕಲಿಸಲಾಗುತ್ತದೆ. ಆದ್ದರಿಂದಲೇ 'ನಮಸ್ತೇ ವಾಯೋ, ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ'
ಎಂಬ ಶ್ರದ್ಧಾಪೂರ್ವಕ ಪ್ರಾರ್ಥನೆ ಇದೆ. “ಸತ್ಯಂ ಜ್ಞಾನಮನಂತಂ ಬ್ರಹ್ಮ”
(ತೈ. 2-1) ಎಂಬ ಉಪನಿಷದ್ವಾಕ್ಯದಲ್ಲಿ ಇದು ಅಡಕಗೊಂಡಿದೆ. ಸತ್ಯಂ, ಜ್ಞಾನಂ, ಅನಂತಂ ಎಂಬ ಪದಗಳು ಬ್ರಹ್ಮನೊಡನೆ ಸಾಕ್ಷಾತ್
ಸಂಬಂಧವನ್ನು ಹೊಂದಿವೆ. ಸತ್ಯವೂ ಜ್ಞಾನವೂ ಅನಂತವೂ ಆದ ಬ್ರಹ್ಮ. ಬ್ರಹ್ಮ ಎಂದರೆ ಶಾಶ್ವತವಾದ ವಿಶ್ವಚೈತನ್ಯ. ಅದು
ಎಲ್ಲದರಲ್ಲೂ ಇದೆ, ಎಲ್ಲೆಲ್ಲೂ ಇದೆ, ಚಿಕ್ಕ
ದೊಡ್ಡ ಸಕಲ ಪದಾರ್ಥಗಳಲ್ಲೂ ಇದೆ. ಬ್ರಹ್ಮ ಎಂದರೆ ಶರೀರವೇ ಬ್ರಹ್ಮ-ವೆಂದರ್ಥವಲ್ಲ. ಈ ಶರೀರದೊಳಗೆ
ಇರುವವನು ಬ್ರಹ್ಮ. ಪರಮ-ಶ್ರೇಷ್ಠವಾದ ಅಕ್ಷರವೇ ಬ್ರಹ್ಮ. “ವಿಜ್ಞಾನವೂ
ಆನಂದವೂ (ಆಗಿರು-ವದು) ಬ್ರಹ್ಮವು” (ಬೃ. ೩-೯-೨೦). "ಈತನು ಮಾತೆಂಬ ಜ್ಯೋತಿ-ಯಿಂದಲೇ
(ಕತ್ತಲೆಯಲ್ಲಿ) ಕುಳಿತುಕೊಳ್ಳುತ್ತಾನೆ” (ಬೃ. ೪-೩-೫).
ಬ್ರಹ್ಮವು ಚೈತನ್ಯ ರೂಪವಾಗಿರುವದರಿಂದ ಜಗತ್ತೆಲ್ಲವೂ ತೋರುವದಕ್ಕೆ ಕಾರಣವಾಗಿ-ರುವದರಿಂದ
(ಅದಕ್ಕೂ) ಜ್ಯೋತಿ ಎಂಬ ಶಬ್ದವು ಒಪ್ಪುತ್ತದೆ. “ಆತನು ಬೆಳಗುವದನ್ನು ಅನುಸರಿಸಿಯೇ ಎಲ್ಲವೂ
ಬೆಳಗುತ್ತಿರುವದು, ಆತನ ಬೆಳಕಿನಿಂದ ಇದೆಲ್ಲವೂ ಬೆಳಗುತ್ತಿರುವದು''
(ಮುಂ. ೨-೨-೧೧), "ಆ ಜ್ಯೋತಿಗಳ
ಜ್ಯೋತಿಯನ್ನು ದೇವತೆಗಳು ಆಯುಸ್ಸು, ನಾಶವಿಲ್ಲದ್ದು ಎಂದು
ಉಪಾಸನೆಮಾಡುತ್ತಾರೆ'' (ಬೃ. ೪-೪-೧೬), "ಪ್ರಾಣೋ ಬ್ರಹ್ಮ ಕಂ ಬ್ರಹ್ಮ ಖಂ ಬ್ರಹ್ಮ” (ಛಾಂ. ೪-೧೦-೪) ಅಂದರೆ,
“ಪ್ರಾಣವು ಬ್ರಹ್ಮವು, ಕಂ (ಸುಖವು) ಬ್ರಹ್ಮನು,
ಖಂ (ಆಕಾಶವು) ಬ್ರಹ್ಮವು”. “ಅಕ್ಷರದಿಂದ ಇಲ್ಲಿ ಎಲ್ಲವೂ ಉಂಟಾಗುತ್ತದೆ?”
(ಮುಂ. ೧-೧-೭) ಎಂದು ಪ್ರಕೃತನಾಗಿರುವ ಭೂತ ಯೋನಿಯನ್ನು ಹುಟ್ಟುವದಕ್ಕೆಲ್ಲ
ಮೂಲ ಕಾರಣವೆಂದು ತಿಳಿಸಿ, ಆ ಬಳಿಕವೂ "ಯಾವನು ಸರ್ವಜ್ಞನೋ
ಸರ್ವವಿತ್ತೋ ಯಾವನ ತಪಸ್ಸು ಜ್ಞಾನಮಯವಾಗಿರುವದೋ, ಆತನಿಂದ ಈ
ಬ್ರಹ್ಮವೂ ನಾಮವೂ ರೂಪವೂ ಅನ್ನವೂ ಉಂಟಾಗುತ್ತದೆ” (ಮುಂ. ೧-೧-೯). “ಬ್ರಹ್ಮವನ್ನು ಅರಿತು ಕೊಳ್ಳುತ್ತಾನಾದರೆ ಬ್ರಹ್ಮನೇ ಆಗುತ್ತಾನೆ” (ಮುಂ. ೩-೨-೯).
ಇತ್ಯಾದಿಯಾಗಿ ಋಷಿ ಮುನಿಗಳು ವ್ಯಾಖ್ಯಾನಿಸಿದ್ದಾರೆ.ರೆ
ಪರಮಾತ್ಮನೋ ವಿದ್ಯಾ ಬ್ರಹ್ಮವಿದ್ಯಾ | (ಪರಮಾತ್ಮ ವಿಷಯಾ
ವಿದ್ಯಾ)
ಬ್ರಹ್ಮಣಾ ವಾsಗ್ರ ಜೇನೋಕ್ತೇತಿ
ಬ್ರಹ್ಮವಿದ್ಯಾ ||
ಮುಂಡಕ 1-1-1
ಭಾವಾರ್ಥ:- (ಬ್ರಹ್ಮದ ವಿದ್ಯೆಯು ಬ್ರಹ್ಮವಿದ್ಯೆ) ಬ್ರಹ್ಮ ಎಂದರೆ ಪರಮಾತ್ಮ. ಆತನ ವಿಷಯದ ವಿದ್ಯೆ
ಬ್ರಹ್ಮವಿದ್ಯೆ. ಅಥವಾ
ಮೊದಲು ಆವಿರ್ಭವಿಸಿದ ಬ್ರಹ್ಮನಿಂದ ಉಕ್ತವಾದದ್ದು
ಬ್ರಹ್ಮವಿದ್ಯೆ. ಶಾಶ್ಚತವಾದ ವಿಶ್ವಚೈತನ್ಯ. ಅದು ಎಲ್ಲದರಲ್ಲೂ ಇದೆ, ಎಲ್ಲೆಲ್ಲೂ ಇದೆ, ಚಿಕ್ಕ ದೊಡ್ಡ ಸಕಲ ಎಲ್ಲ,
ಚಿಕ್ಕ ದೊಡ್ಡ ಸಕಲ
ಸತ್ಯಂ
ಬ್ರಹ್ಮ =
सत्यम् ब्रह्म = सत् य म् ब र ह म =
ಅಕ್ಷರಶಃ
ಅರ್ಥ :- ಮಾಂತ್ರಿಕ ಸೂತ್ರವನ್ನು ಸೇರುವ ಗಾಳಿ ಅಮೃತ
ಮತ್ತು ನೀರು, ಬೆಂಕಿ,
ವೈದ್ಯ ಮಾಂತ್ರಿಕ ಸೂತ್ರ.
“ಆಪಃ: ಸತ್ಯಮಸೃಜಂತ, ಸತ್ಯಂ ಬ್ರಹ್ಮ, ಬ್ರಹ್ಮ ಪ್ರಜಾಪತಿಂ, ಪ್ರಜಾಪತಿರ್ದೇವಾನ್”
ಬೃಹದಾರಣ್ಯಕ (೫--೫-೧)
ಭಾವಾರ್ಥ:- “ನೀರಿನಿಂದ ಸತ್ಯವೂ, ಸತ್ಯದಿಂದ ಹಿರಣ್ಯಗರ್ಭನೆಂಬ
ಬ್ರಹ್ಮನೂ, ಬ್ರಹ್ಮನಿಂದ ಪ್ರಜಾಪತಿಯೂ, ಪ್ರಜಾಪತಿಯಿಂದ ದೇವತೆಗಳೂ ಉತ್ವನ್ನರಾದರೆಂದು” ಹೇಳಿದೆ.
ಆತ್ಮಾ ದೇವಾನಾಂ ಭುವನಸ್ಯ ಗರ್ಭೋ ಯಥಾವಶಂ
ಚರತಿ ದೇವ ಏಷಃ ಘೋಷಾ
ಇದಸ್ಯ ಶೈಣ್ವಿರೇ ನ ರೂಪಂ ತಸ್ಮೈವಾತಾಯ
ಹವಿಷಾ ವಿಧೇಮ”
ಖುಗ್ವೇದ - ೧೦-೧೬೮-೪
ಭಾವಾರ್ಥ:- ಪ್ರಚಂಡ ಗಾಳಿಯ ಒಳಗೆ ಭೂಮಿ, ಜಲ, ಅಗ್ನಿ ಇವುಗಳ ಕಣಗಳು ಇರುತ್ತವೆ. ಆ ಗಾಳಿಯು ನೀರಿಗೆ ಜನ್ಮ ಕೊಡುವವನಾಗಿ ತನಗೆ
ಇಚ್ಛೆ ಬಂದ ರೀತಿಯಲ್ಲಿ ಬೇರೆ ಬೇರೆ ದಿಕ್ಕುಗಳತ್ತ ಚಲಿಸುವುದು ಗಾಳಿಯ ರಭಸದಿಂದ ಬೀಸುವ ಶಬ್ದ
ಕೇಳಿಸುತ್ತದೆ, ಆದರೆ ಅವನ ರೂಪವು ಗೋಚರವಾಗುವುದಿಲ್ಲ, ನಾವು ವಾಯುದೇವನಿಗೆ ಹವಿಸ್ಸನ್ನು ನೀಡಿ ಹೋಮ ಮಾಡಿ ನಮಗೆ ಅನುಕೂಲಕರನನ್ನಾಗಿ
ಮಾಡಿಕೊಳ್ಳಬೇಕು. (ವಾಯುದೇವನು ಇಂದ್ರಾದಿ ದೇವತೆಗಳಿಗೆಲ್ಲ ಆತ್ಮರೂಪನಾಗಿಯೂ ಸಮಸ್ತ ಜಗತ್ತಿನ
ಗರ್ಭ ಎಂದರೆ ಜನನಕ್ಕೆ ಸ್ಥಾನನಾಗಿಯೂ ಇದ್ದಾನೆ ಎಂದು ಮೊದಲಾಗಿ ವಾಯುವು ಸ್ತುತಿಸಲ್ಪಟ್ಟಿದ್ದಾನೆ.
ವಾಯುವು ಇಲ್ಲದೆ ಯಾವ ಪ್ರಾಣಿಯೂ ಬದುಕಿರಲಾರದಾದುದರಿಂದ ವಾಯವಿನ ವಿಷಯದಲ್ಲಿ ಅದು ಪ್ರಾಣಿಗಳಿಗೆ
ಗರ್ಭರೂಪವಾದುದೆಂದು ಹೇಳಿದೆ.)
ನಾರದೀಯ ಪುರಾಣದಿಂದ:- ಪ್ರಾಣಗಳು ಕಂಠಗತವಾಗಿ ಸಾಯುವ ಸಂದರ್ಭದಲ್ಲಿಯೂ ಸಹ ಸುಳ್ಳನ್ನು ಹೇಳಬಾರದು. ಸತ್ಯಧರ್ಮದಲ್ಲಿಯೇ
ವ್ಯವಸ್ಥಿತನಾಗಿ ಸಾಕ್ಷಾತ್ತಾಗಿ ಸತ್ಯವನ್ನೇ ಆಚರಿಸಬೇಕು ಬ್ರಹ್ಮನು ಸತ್ಯನಿಷ್ಠನಾಗಿರುವನು, ಸಜ್ಜನರು ಸತ್ಯದಲ್ಲಿಯೇ ನಿರತರಾಗಿರುವರು. ಚರಾಚರಾತ್ಮಕವಾದ ಪ್ರಪಂಚವು ಯಾವಾಗಲೂ
ಸತ್ಯದಲ್ಲಿಯೇ ನಿಂತಿರುವುದು. “ಸತ್ಯಂ ಬ್ರೂಯಾತ್” “ಸತ್ಯವನ್ನೇ
ಹೇಳಬೇಕು” ಎಂಬುದಾಗಿ ಉಪನಿಷತ್ತುಗಳಲ್ಲಿ ಹೇಳಿದೆ. ಸತ್ಯವು
ಬ್ರಹ್ಮಸ್ವರೂಪವು, ಸತ್ಯನಾದ ಆ ಬ್ರಹ್ಮನನ್ನೇ ಧ್ಯಾನಿಸುವೆವು.
ಯಾವಾಗಲೂ ಸತ್ಯವು ಶುಭ ಮತ್ತು ಶ್ರೇಯಸ್ಕರವೂ ಆಗಿದೆ.
ಬ್ರಹ್ಮಜ್ಞಾನ = ब्रह्मज्ञान = ब र ह म ज्ञा न
"ಬ್ರಹ್ಮಜ್ಞಾನ" ಎಂದರೆ ಅಕ್ಷರಶಃ ಅರ್ಥ "ನೀರು, ಬೆಂಕಿ, (ಶಾಖ, ಹೊಳಪು,
ಧ್ಯಾನ, ಜ್ಞಾನವನ್ನು ಪಡೆದುಕೊಳ್ಳುವ) ವೈದ್ಯ ಮಾಂತ್ರಿಕ ಸೂತ್ರ ಅವಿಶ್ರಾಂತವಾಗಿ
ತಿಳಿದುಕೊಳ್ಳುವುದು"
ಬೃಹದಾರಣ್ಯಕದಿಂದ:-
ಬ್ರಹ್ಮಜ್ಞಾನವಾದ ಮೇಲೆ ಸಂನ್ಯಾಸವು ಸ್ವತಃ ಸಿದ್ಧವಾಗಿರುತ್ತದೆ. ಇದನ್ನು ವಿದ್ವತ್
ಸಂನ್ಯಾಸವೆನ್ನುತ್ತಾರೆ. ಇನ್ನು ಬ್ರಹ್ಮಜ್ಞಾನವನ್ನು ಪಡೆಯಲು ಸಹಕಾರಿಯಾಗಲೆಂದು ಆತ್ಮ ವಿದ್ಯಾಂಗವಾಗಿ
ಸಂನ್ಯಾಸವನ್ನು ಸ್ವೀಕರಿಸುವುದೂ ಉಂಟು. ಇದನ್ನು ವಿವಿದಿಷಾ ಸಂನ್ಯಾಸನೆನ್ನುತ್ತಾರೆ.
ಹದಿನೇಳನೆಯ
ಶತಮಾನದ ಕೊನೆಯ ಭಾಗದಲ್ಲಿದ್ದ ಮಹಾಲಿಂಗರಂಗ ಕವಿಯ “ಅನುಭವಾಮೃತ''ವು ಕನ್ನಡದಲ್ಲಿ ಬಂದ ಅದ್ವೈತದರ್ಶನದ ಉತ್ತಮ ಕಾವ್ಯವಾಗಿದೆ. “ಸತ್ಯ ಶೌಜಾಚಾರ
ನಿರತರು, ಚಿತ್ತದಲಿ ನಿರ್ಮಲರು ನಿಸ್ಪೃಹ, ವೃತ್ತಿಯಲಿ ವರ್ತಿಸುವ ರಾಶಾಪಾಶವರ್ಜಿತರು, ಉತ್ತಮೋತ್ತಮರಾದ
ಗುರುಪದ ಭಕ್ತಿಯುಕ್ತರು ಭವದ ಬೇರನು ಕಿತ್ತು ಬಿಸುಡುವ ಶಾಂತರೇ ತತ್ವಾಧಿಕಾರಿಗಳು (೧-೨೦). “ಅನ್ನಮದ.
ಅರ್ಥಮದ. ಯೌವನಮದ, ಕುಲಮದ, ಶೀಲಮದ,
ವಿದ್ಯಾಮದ, ಸ್ತ್ರೀಮದ. ಅಧಿಕಾರಮದ, ಎಂಬ ಅಷ್ಟಮದಗಳೆಂಬ ಪಾಶವನ್ನು ಹರಿದು, ಆಧ್ಯಾತ್ಮಿಕ,
ಆದಿಭೌತಿಕ, ಆದಿದೈವಿಕಗಳೆಂಬ ತಾಪತ್ರಯದ ಕೋಟಲೆಯನ್ನು
ಪರಿಹರಿಸಿ, ಮನಸ್ಸಿನ ದುಷ್ಟತನ ಬಿಡಿಸಿ ಕಾಮ. ಕ್ರೋಧ, ಮದ, ಲೋಭ, ಮೋಹ,
ಮತ್ಸರಗಳೆಂಬ ಅರಿಷಡ್ ವೈರಿಗಳನ್ನು ಗೆದ್ದು ಗುರುಹಿರಿಯರಲ್ಲಿ
ಭಕ್ತಿಯಿಟ್ಟು ಬ್ರಹ್ಮಜ್ಞಾನದ ಮಾರ್ಗವನ್ನು ತಿಳಿಯಲು ಯತ್ನಿಸಬೇಕು” (೧-೨೨).
ಅಜ್ಞಾನಿಗಳಾದವರು ಬ್ರಹ್ಮವಿದ್ಯೆಯನ್ನು ತಿಳಿಯಲಾರದೆ ಹಳಿಯುತ್ತಾರೆ. ವೇದದಲ್ಲಿ
“ನಾನ್ಯಃ ಪಂಥಾ ಅಯನಾಯ ವಿದ್ಯತೇ'' ಅಂದರೆ ಬ್ರಹ್ಮವಿದ್ಯೆ ಬಿಟ್ಟರೆ
ಅಮೃತತ್ವಕ್ಕೆ ಬೇರೆ ಮಾರ್ಗವಿಲ್ಲ ಎಂದು ಹೇಳಿರುವಾಗ ಭೋಗಮೂಲವಾದ ಸಂಸಾರದ ಸುಖವನ್ನು ಬಿಟ್ಟು ಮೋಕ್ಷಮಾರ್ಗ
ಸಾಧನೆಗೆ ವೈರಾಗ್ಯಭಾವವನ್ನು ತಳೆಯಬೇಕು ಎನ್ನುತ್ತಾರೆ ಋಷಿವರ್ಯರು. ದೇಹೇಂದ್ರಿಯಾದಿಗಳಿಗಿಂತ
ಭಿನ್ನನಾದವನು ನಾನು, ನಿತ್ಯ ಶುದ್ಧಬುದ್ಧನಾದ ಆತ್ಮನೇ ನಾನು ಎಂದು
ತನ್ನ ಸತ್ಯಸ್ವರೂಪವನ್ನು ಅರಿತುಕೊಳ್ಳುವುದೇ ಆತ್ಮಜ್ಞಾನ, ಅದೇ
ಬ್ರಹ್ಮಜ್ಞಾನ.
ಸ ಸಂಧಾರ್ಯಃ ಪ್ರಯತ್ನೇನ
ಸ್ವರ್ಗಮಕ್ಷಯಮಿಚ್ಛತಾ |
ಸುಖಂ ಚೇಹೇಚ್ಛತಾ ನಿತ್ಯಂ ಯೋsಧಾರ್ಯೋ
ದುರ್ಬಲೇಂದ್ರಿಯೈಃ||
ಮನುಸ್ಮೃತಿ 3-೩೯
ಭಾವಾರ್ಥ:- ಈ ಲೋಕದಲ್ಲಿ ಪರಲೋಕದಲ್ಲಿ ಕ್ಷೇಮಕರವಾದ ಗೃಹಸ್ಥಾಶ್ರಮವನ್ನು ಸರಿಯಾಗಿ
ಪಾಲಿಸಬೇಕು. ಸ್ತ್ರೀಸುಖ, ಪುಷ್ಕಲಾನ್ನ, ಆಶ್ರಮಾಂತರ ರಕ್ಷಣೆ, ಬ್ರಹ್ಮಜ್ಞಾನ ಆಗ ಲಭಿಸುವುದು.
ದುರ್ಬಲ ಮನಸ್ಸಿನಿಂದ ಇವುಗಳ ಸಾಧನೆಯು ಆಗಲಾರದು. ಬೇರಾರಿಗೂ ಇಂತಹ ಸಕಲ ಸೌಲಭ್ಯವಿಲ್ಲ.
ಬ್ರಹ್ಮೆಜ್ಞಾನಮಿದಂ ದೇಹಂ ಯತ್ತ್ವಹಂ
ಪರಿಕೀರ್ತಯೇ |
ಪದ್ಮಪುರಾಣ 128-86
ಭಾವಾರ್ಥ:- ನಾನು ಎಂದಿನಿಸಿಕೊಳ್ಳುವ ಈ ದೇಹವೇ. ಬ್ರಹ್ಮಜ್ಞಾನ ರೂಪವಾದುದು.
ಬ್ರಹ್ಮತ್ಮ
ಜ್ಞಾನಕ್ಕೆ ಶ್ರವಣವೇ ಸಾಕ್ಷಾತ್ ಸಾಧನವು. ಶ್ರವಣವೆಂದರೆ ವೇದಾಂತ ವಾಕ್ಯಗಳ ಅರ್ಥವನ್ನು
ಸದ್ಗುರುಗಳಿಂದ ಸರಿಯಾಗಿ ಕೇಳುವುದು. ಶ್ರವಣದಿಂದಲೇ ಆತ್ಮಜ್ಞಾನವು ಉಂಟಾಗಿ, ಅದರಿಂದ ಅಜ್ಞಾನವು ನಾಶವಾಗುತ್ತದೆ. ಆದರೆ ಶ್ರವಣವು ಅರ್ಥವಾಗಬೇಕಾದರೆ ಅಂತಃಕರಣವು
ಶುದ್ಧವಾಗಬೇಕು. ಶಮ, ದಮ, ಉಪರತಿ,
ತಿತಿಕ್ಷಾ, ಶ್ರದ್ಧಾ ಮತ್ತು ಸಮಾಧಾನಗಳು; ಅಂತಃಕರಣ ಶುದ್ಧಿಗೆ (ಚಿತ್ತ ಶುದ್ಧಿಗೆ) ಮೆಟ್ಟಿಲು. ಶಮ ಎಂದರೆ ಮನೋನಿಗ್ರಹ. ದಮ
ಎಂದರೆ ಇಂದ್ರಿಯಗಳ ನಿಗ್ರಹ. ಉಪರತಿ ಎಂದರೆ ಅನಾತ್ಮ ಬಾಹ್ಯವ್ಯವಹಾರಗಳನ್ನು ಕಡಿಮೆ ಮಾಡಿಕೊಂಡು
ತನ್ನೊಳಗೇ ತಾನೇ ಸಹಜವಾಗಿರುವ ಅಂತರಂಗ ಸಾಧನ. ತಿತಿಕ್ಷಾ ಎಂದರೆ ಸುಖದುಃಖಗಳು, ಮಾನಾಪಮಾನಗಳು, ಲಾಭನಷ್ಟಗಳು, ಕೀರ್ತಿ ಅಪಕೀರ್ತಿಗಳು ಇವುಗಳನ್ನು ಸಮಚಿತ್ತದಿಂದ ಅನುಭವಿಸುವುದು. ಶ್ರದ್ಧಾ ಎಂದರೆ
ಗುರುಗಳ ಹಾಗೂ ಶಾಸ್ತ್ರಗಳ ಮಾತಿನಲ್ಲಿ ವಿಶ್ವಾಸ. ಸಮಾಧಾನ ಎಂದರೆ ಮನಸ್ಸನ್ನು ಯಾವಾಗಲೂ
ಏಕಾಗ್ರತೆಯಿಂದ ಆತ್ಮನಲ್ಲಿಯೇ ನೆಲೆಗೊಳಿಸಿಕೊಳ್ಳುವ ಉಪಾಯವು. ಇವುಗಳು ಇದ್ದರೆ ಬ್ರಹ್ಮಜ್ಞಾನ
ಉಂಟಾಗುವುದು ಎಂದು ಋಷಿಗಳು ಬೃಹದಾರಣ್ಯಕೋಪನಿಷತ್ತಿನಲ್ಲಿ ವಿವರಿಸಿದ್ದಾರೆ.
ಆವಿರ್ಭೂತಪ್ರಕಾಶಾನಾಮನುಪಪ್ಲುತಚೇತಸಾಮ್
।
ಅತೀತಾನಾಗತಜ್ಞಾನಂ ಪ್ರತ್ಯಕ್ಷಾನ್ನ
ವಿಶಿಷ್ಯತೇ ॥
ಭತೃಹರಿಯು ವಾಕ್ಯಪದಿ
ಭಾವಾರ್ಥ:-
ರಜಸ್ತಮೋಗುಣಗಳು ಯಾರ ಚಿತ್ತವನ್ನು ಆಕ್ರಮಿಸಿಲ್ಲವೋ, ಯಾರಿಗೆ ಜ್ಞಾನಪ್ರಕಾಶವು ತಪಸ್ಸಿನಿಂದ ಒದಗಿದೆಯೋ ಅಂತಹ ಋಷಿಗಳ ಅತೀಂದ್ರಿಯ
ಜ್ಞಾನವು ಪ್ರತ್ಯಕ್ಷ ಜ್ಞಾನಕ್ಕಿಂತ ಬೇರೆಯದ್ದೇನಲ್ಲ, ನಮಗೆ
ಕಾಣದ್ದನ್ನು ಅವರು ಯೋಗಬಲದಿಂದ ಕಾಣುವರು.
ಅತೀಂದ್ರಿಯಾನಸಂವೇದ್ಯಾನ್
ಪಶ್ಯಂತ್ಯಾರ್ಷೇಣ ಚಕ್ಷುಷಾ ।
ಯೇ ಭಾವಾನ್ ವಚನಂ ತೇಷಾಂ ನಾನುಮಾನೇನ
ಬಾಧ್ಯತೇ ||
ಭತೃಹರಿಯು ವಾಕ್ಯಪದಿ
ಭಾವಾರ್ಥ;- ಇಂದ್ರಿಯಗಳಿಗೆ
ಅಗೋಚರಗಳಾದ, ನಮ್ಮ ಊಹೆಗಳಿಗೂ ನಿಲುಕದ ವಿಷಯಗಳನ್ನು ಅಂತರ್ಯಾಮಿಯಾದ
ಈಶ್ವರ, ದೇವತೆಗಳು, ಕರ್ಮಗಳು,
ಸಂಸ್ಕಾರ, ಲಿಂಗಶರೀರ, ವಿಭಿನ್ನಲೋಕಗಳು ಇತ್ಯಾದಿಗಳನ್ನು ಅತೀವ ದೈವಿಕ ಪವಿತ್ರ ಕಣ್ಣುಗಳಿಂದ ಋಷಿಗಳು
ನೋಡಲು ಸಮರ್ಥರಾದವರು, ಅವರ ಮಾತನ್ನು ನಮ್ಮ ತರ್ಕದಿಂದ ನಿರಾಕರಿಸಲು
ಸಾಧ್ಯವಿಲ್ಲ.
ಬ್ರಹ್ಮನ್ = ब्रह्मन् = ब र ह म न
ಬ್ರಹ್ಮನ್
ಎಂದರೆ ಅಕ್ಷರಶಃ ಅರ್ಥ "ಅವಿಶ್ರಾಂತವಾದ ನೀರು, ಬೆಂಕಿ,
(ಶಾಖ, ಹೊಳಪು, ಧ್ಯಾನ,
ಜ್ಞಾನವನ್ನು ಪಡೆದುಕೊಳ್ಳುವ)
ವೈದ್ಯ ಮಾಂತ್ರಿಕ ಸೂತ್ರ"
ಇಡೀ
ಭಗವದ್ಗೀತೆಯಲ್ಲಿ ಶ್ರೀಕೃಷ್ಣನನ್ನು ಭಗವಾನ್ ಎಂದು ಹೇಳಿದೆ. ಪರಮ ಸತ್ಯ ಸ್ವರೂಪದ ಅಂತಿಮವೇ
ಭಗವಾನ್. ಪರಮ ಸತ್ಯವನ್ನು ಮೂರು ಅವಸ್ಥೆಗಳಲ್ಲಿ, ಎಂದರೆ,
ಬ್ರಹ್ಮನ್ ಅಥವಾ ವ್ಯಕ್ತಿ ಶೂನ್ಯ ಸರ್ವವ್ಯಾಪಿ ಚೈತನ್ಯ. ಪರಮಾತ್ಮ ಅಥವಾ
ಸರ್ವ ಜೀವಾತ್ಮರ ಹೃದಯ ಸ್ಥಿತ ಭಗವಂತನ ಸ್ಥಳೀಯ ರೂಪ, ಮತ್ತು ಅ
ಭಗವಾನ್ ಅಥವಾ ಪರಮ ದೇವೋತ್ತಮ ಪುರುಷ ಶ್ರೀಕಷ್ಣ ಈ ಮೂರು ರೂಪಗಳಲ್ಲಿ ಸಾಕ್ಷಾತ್ಕರಿಸಿಕೊಳ್ಳಬಹುದು.
ಶ್ರೀಮದ್ಭಾಗವತದಲ್ಲಿ (1-2-11) ಪರಮ ಸತ್ಯ ಸ್ವರೂಪದ ಕಲ್ಪನೆಯನ್ನು ಹೀಗೆ ವಿವರಿಸಿದೆ “ವದನ್ತಿ
ತತ್ ತತ್ವವಿದಸ್ತತ್ವಂ ಯಜ್ ಜ್ಞಾನಂ ಅದ್ವಯಮ್। ಬ್ರಹ್ಮೇತಿ ಪರಮಾತ್ಮೇತಿ ಭಗವಾನ್ ಇತಿ
ಶಬ್ದ್ಯತೇ॥ ಅಂದರೆ, “ಪರಮ ಸತ್ಯವನ್ನು ಅರಿತವನು, ಅರಿಯುವಿಕೆಯ ಮೂರು ಅವಸ್ಥೆಗಳಲ್ಲಿ ಪರಮ ಸತ್ಯದ ಸಾಕ್ಷಾತ್ಕಾರ ಹೊಂದಿರುತ್ತಾನೆ. ಈ
ಮೂರು ಅವಸ್ಥೆಗಳೂ ಒಂದೇ. ವರಮ ಸತ್ಯದ ಈ ಅವಸ್ಥೆಗಳನ್ನು ಬ್ರಹ್ಮನ್, ಪರಮಾತ್ಮ ಮತ್ತು ಭಗವಾನ್ ಎಂದು ಹೇಳಲಾಗಿದೆ.”
ವಿಪ್ರ, ದ್ವಿಜ, ಬ್ರಾಹ್ಮಣ,
ಬ್ರಹ್ಮಚಾರಿ, ಬ್ರಹ್ಮಚರ್ಯೆ ಅಕ್ಷರಾರ್ಥ
ವಿಪ್ರ = विप्र = वि प र
ಅಕ್ಷರಶಃ
ಅರ್ಥ :- ಹೊಳಪನ್ನು ರಕ್ಷಿಸುವ ಶ್ರೇಷ್ಠತೆ
ವಿಪ್ರ
ಎಂದರೆ ಜ್ಞಾನಿ ಎಂತಲೂ ಅರ್ಥ ಇದೆ. ಪ್ರಾಣಾಯಾಮ ಮತ್ತು ಧ್ಯಾನಾಸಕ್ತರಿಗೆ ಒಂದು ರೀತಿಯ ತೇಜಸ್ಸು
(ಹೊಳಪು) ಉಂಟಾಗುತ್ತದೆ. ಅವರು ಆಂತರಿಕ ಹೊಳಪನ್ನೂ ಬಾಹ್ಯ ಹೊಳಪನ್ನೂ ಕಾಣುತ್ತಾರೆ. ಅಂತಹ
ಹೊಳಪನ್ನು ರಕ್ಷಿಸುವ ಶ್ರೇಷ್ಠತಮರೇ ವಿಪ್ರರು. ವಿಪ್ರರು ಮಾಡಬೇಕಿರುವ ಆರು ಕರ್ಮಗಳು ಇಂತಿದೆ 1.
ಇಜ್ಯ ಅಂದರೆ ಅಗ್ನಿಹೋತ್ರಾನುಷ್ಠಾನವನ್ನು ವಿಪ್ರನು ಮಾಡಬೇಕು. ೨. ಅಧ್ಯಯನ: ಪ್ರತಿದಿನವೂ
ವಿಪ್ರನು ವೇದಾಧ್ಯಯನವನ್ನು ಮಾಡಬೇಕು. ೩. ದಾನ: ತಾನು ಸಂಪಾದಿಸಿದ ಹಣವನ್ನು ಸತ್ಪಾತ್ರಕ್ಕೆ
ದಾನಮಾಡಬೇಕು. ೪. ಯಾಜನ: ಯಜ್ಞಯಾಗಾದಿಗಳನ್ನು ಬೇರೆಯವರಿಗೆ ಮಾಡಿಸಬೇಕು. ೫. ಅಧ್ಯಾಪನ:
ಬೇರೆಯವರಿಗೂ ವೇದಮಂತ್ರಗಳನ್ನು ಹೇಳಿಕೊಡಬೇಕು. ೬. ಪ್ರತಿಗ್ರಹ: ಬೇರೆಯವರಿಂದ ದಾನವನ್ನು
ತೆಗೆದುಕೊಳ್ಳಲೂಬೇಕು. ಆದ್ದರಿಂದಲೇ “ಷಟ್ಕರ್ಮಾ ವಿಪ್ರ ಉಚ್ಯತೇ” ಎಂದಿರುತ್ತಾರೆ.
ಈ ಆರೂ ಕರ್ಮಗಳು ಶಾಸ್ತ್ರವಿಹಿತವೇ ಆಗಿರುತ್ತವೆ. ಗೃಹಸ್ಥನಾದ ವಿಪ್ರನಿಗೆ ಈ ಆರೂ ಕರ್ಮಗಳನ್ನು
ನಿತ್ಯಕರ್ಮಗಳು ಎಂದೇ ಶಾಸ್ತ್ರಗಳಲ್ಲಿ ಹೇಳಿರುತ್ತಾರೆ.
ಧರ್ಮರಾಜನು
ರಾಜಸೂಯ ಯಾಗವನ್ನು ಮಾಡಿದಾಗ ಯಾಗಕಾಲಕ್ಕೆ ಬಂದ ಅತಿಥಿಗಳಿಗೆಲ್ಲ ಅನ್ನಸಂತರ್ಪಣೆಯನ್ನು
ನಡೆಯಿಸುತ್ತಿದ್ದನು. ಒಂದು ಲಕ್ಷ ಜನರು ಶ್ರೋತ್ರಿಯ ವಿಪ್ರರು ಭೋಜನ ಮಾಡಿದ ಕೂಡಲೆ ದೇವಲೋಕದ
ಗಂಟೆಯು ಒಂದು ಬಾರಿ 'ಢಣ್' ಎಂದು
ನಾದ ಮಾಡುತ್ತಿತ್ತಂತೆ. ಒಮ್ಮೆ ಅದು ಒಂದೇ ಸಮನಾಗಿ ಶಬ್ದ ಮಾಡುತಾ ಬಂದಿತು. ಇದು ಎಲ್ಲರಿಗೂ
ಆಶ್ಚರ್ಯವೆನಿಸಿತು. ಇದಕ್ಕೆ ಕಾರಣವೇನೆಂದು ವಿಚಾರ ಮಾಡಲಾಗಿ ಶುಕಮಹಾಮುನಿಗಳು
ಭೋಜನಮಾಡುತಿದ್ದಾರೆ ಎಂದು ತಿಳಿದು ಬಂದಿತು; ಆಗ ಕೃಷ್ಣಭಗವಂತನು
ಧರ್ಮರಾಜನನ್ನು ಕುರಿತು ""ಅಯ್ಯ, ಒಬ್ಬ ಬ್ರಹ್ಮ
ಜ್ಞಾನಿ (ನಿವೃತ್ತಿಧರ್ಮನಿಷ್ಠನು) ಬೋಜನಮಾಡುವ ಒಂದೊಂದು ತುತ್ತಿಗೂ
ಒಂದು ಲಕ್ಷ ವಿಪ್ರ ಭೋಜನದ ಫಲವಿದೆ. ಅದಕ್ಕಾಗಿ ದೇವಲೋಕದ ಗಂಟೆ ನಿರಂತರವಾಗಿ ಶಬ್ದಮಾಡುತ್ತಿದೆ''
ಎಂದನಂತೆ. ಮಾನವನು ಹುಟ್ಟುವಾಗ ಶೂದ್ರನಾಗಿದ್ದು, ಸಂಸ್ಕಾರಗಳ ಆಚರಣೆಯಿಂದ ದ್ವಿಜನಾಗಿ, ವೈದಿಕ
ಜ್ಞಾನದಿಂದ ವಿಪ್ರನಾಗಿ, ಬ್ರಹ್ಮ ಜ್ಞಾನವನ್ನು ಗಳಿಸಿ ಬ್ರಹ್ಮನ್
ಆಗುತ್ತಾನೆ.
ದ್ವಿಜ = द्विज = द वि ज
ಅಕ್ಷರಶಃ
ಅರ್ಥ :- ಸೇರಿರುವಿಕೆಯಿಂದ
ಪ್ರತ್ಯೇಕತೆಯನ್ನು ಉಂಟುಮಾಡುತ್ತದೆ.
"ದ್ವಿಜ
ಎಂದರೆ ಎರಡನೆಯ ಸಲ ಹುಟ್ಟಿದವನು. ಮಾತೃಗರ್ಭದಿಂದ ಹೊರಬಂದಾಗ ಕೇವಲ ಜಂತುವಾಗಿಯೇ ಜನಿಸಿದವನು. ಮುಂದೆ ಬುದ್ಧಿ, ಜ್ಞಾನ,
ಸದಾಚಾರ, ನಿಯಮ, ನಿಷ್ಠೆ
ಮುಂತಾದುವುಗಳನ್ನು ಗಳಿಸಿ ಸುಸಂಸ್ಕೃತನಾದ ಮಾನವನಾಗಿ ಬಾಳಲು ಇನ್ನೊಂದು ಜನ್ಮವನ್ನೇ
ಪಡೆಯುತ್ತಾನೆ. ಮಗುವಿಗೆ ಸೂಕ್ತವಾದ ವಿದ್ಯಾಭ್ಯಾಸವನ್ನು ಯೋಗ್ಯವಾದ ಗುರುವಿನಿಂದ ಕೊಡಿಸಲು
ವ್ಯವಸ್ಥೆ ಮಾಡುವ ಸಂಸ್ಕಾರವೇ ಉಪನಯನ ಸಂಸ್ಕಾರ. ಇಂತಹ ಸಂಸ್ಕಾರದಿಂದ ಪ್ರತ್ಯೇಕತೆಯನ್ನು ಉಂಟು
ಮಾಡುವುದರಿಂದ ದ್ವಿಜ ಎನ್ನುತ್ತಾರೆ.
ಬ್ರಾಹ್ಮಣ = ब्राह्मण = ब र अ ह म ण
ಅಕ್ಷರಶಃ
ಅರ್ಥ :- ನೀರು, ಬೆಂಕಿ, ಜೀವ ಉಸಿರು, ವೈದ್ಯ, ಮಾಂತ್ರಿಕ
ಸೂತ್ರ ಜ್ಞಾನ (ದೇಹದಲ್ಲಿ ಉಸಿರಾಟದಿಂದ ನಡೆಯುವ ಪ್ರಕ್ರಿಯೆಯಲ್ಲಿ ನೀರು, ಬೆಂಕಿ, ಜೀವ ಉಸಿರು, ವೈದ್ಯ,
ಮಾಂತ್ರಿಕ ಸೂತ್ರದ ಪಾತ್ರವನ್ನು ತಿಳಿಯುವುದೇ ಬ್ರಹ್ಮ ಜ್ಞಾನ ಅಂತಹ ಜ್ಞಾನ
ಪಡೆಯುವವನೇ ಬ್ರಾಹ್ಮಣ)
“ಯೋ ವಾ ಏತದಕ್ಷರಂ ಗಾರ್ಗಿ ಅವಿದಿತ್ವಾ
ಅಸ್ಮಾತ್ ಲೋಕಾತ್ ಪ್ರೈತಿ
ಸ ಕೃಪಣಃ।
ಯೋ ವಾ ಏತದಕ್ಷರಂ ಗಾರ್ಗಿ ವಿದಿತ್ವಾ ಅಸ್ಮಾತ್
ಲೋಕಾತ್ ಪ್ರೈತಿ ಸ ಬ್ರಾಹ್ಮಣಃ॥“
ಶುಕ್ಷಯಜುರ್ವೇದ - ಬೃಹದಾರಣ್ಯಕೋಪನಿಷತ್
ಭಾವಾರ್ಥ:- ಯಾರು ಅಕ್ಷರಸ್ವರೂಪವನ್ನು
ತಿಳಿಯದೇ ಮರಣವನ್ನು ಹೊಂದುತ್ತಾನೆಯೋ ಅವನು ಕೃಪಣನು (ದುರ್ಬಲನು). ಯಾವ ಮನುಷ್ಯನು, ನಾಶವಾಗದ ಈ ಆತ್ಮನನ್ನು ತಿಳಿದುಕೊಂಡೇ ಈ ಲೋಕದಿಂದ ತೆರಳುತ್ತಾನೆಯೋ ಅವನೇ ನಿಜವಾದ ಬ್ರಾಹ್ಮಣನು.
(ಪವಿತ್ರವೂ ದುರ್ಲಭವೂ ಆದ ಮಾನವಜನ್ಮವು ಬಂದಿರುವಾಗ ಪ್ರತಿಯೊಬ್ಬನೂ ಪರಬ್ರಹವೆಂಬ ಅಕ್ಷರವನ್ನು
ತಿಳಿದರೆ ಮಾತ್ರವೇ ಜನ್ಮಸಾರ್ಥಕವೆಂದೂ, ತಿಳಿಯದೇ ಹೋದರೆ ಅಂಥವನು
ಕೃಪಣನೆಂದೂ ತಿಳಿಸಿರುತ್ತಾರೆ.)
ವಿವರಣೆ:- ಬ್ರಾಹ್ಮಣ ಎಂದರೆ ಜನ್ಮದಿಂದ ಬ್ರಾಹ್ಮಣನಾಗುವುದಿಲ್ಲ. ಜನ್ಮದಿಂದ ಎಲ್ಲರೂ
ಶೂದ್ರರೇ. “ಬ್ರಹ್ಮ ಜಾನಾತಿ ಇತಿ ಬ್ರಾಹ್ಮಣಃ” ಬ್ರಹ್ಮವನ್ನು ತಿಳಿದವನೇ ಬ್ರಾಹ್ಮಣನು ಎನ್ನುತ್ತಾರೆ.
ಸದ್ಗುರುಗಳಿಂದ ಪರಬ್ರಹ್ಮವನ್ನು, ಆತ್ಮಜ್ಞಾನವನ್ನು, ಆತ್ಮಶಕ್ತಿಯನ್ನು, ತಿಳಿದವರೇ ಬ್ರಹ್ಮನ್, ಬ್ರಾಹ್ಮಣ, ಬ್ರಹ್ಮಜ್ಞಾನಿ, ಇತ್ಯಾದಿಯಾಗಿ ಪ್ರಾಚೀನ ಗ್ರಂಥಗಳು ಹೇಳುತ್ತಿವೆ.
ಸತ್ಯಂ ಬ್ರಹ್ಮ ತಪೋ ಬ್ರಹ್ಮ
ಬ್ರಹ್ಮಚೇಂದ್ರಿಯನಿಗ್ರಹಃ | ಸರ್ವಭೂತೇ ದಯಾಬ್ರಹ್ಮ ಏತದ್ಬ್ರಾಹ್ಮಣ ಲಕ್ಷಣಂ ॥
ವಸಿಷ್ಟ ಸ್ಮೃತಿ ಯೋಗಸ್ತಪೋ ದಮೋ ದಾನಂ
ಸತ್ಯಂ ಶೌಚಂ ದಯಾಕೃತಂ ವಿದ್ಯಾ ವಿಜ್ಞಾನಮಾಸ್ತಿಕ್ಯಂ ಏತದ್ಬ್ರಾಹ್ಮಣ ಲಕ್ಷಣಂ ॥ ವಸಿಷ್ಟ ಸರ್ವತ್ರದಾಂತಾಃ ಕೃತಪೂರ್ಣಕರ್ಣಾ ಜಿತೇಂದ್ರಿಯಾಃ
ಪ್ರಾಣಿವಧಾನ್ನಿವೃತ್ತಾಃ ಪ್ರತಿಗ್ರಹೇ ಸಂಕುಚಿತಾಗ್ರಹಸ್ತಾಃ ತೇ ಬ್ರಾಹ್ಮಣಾಸ್ತಾರಯಿತುಂ
ಸಮಾರ್ಥಾಃ
ಪರಾಶರ ಸ್ಮೃತಿ
ಶ್ಲೋಕಗಳ ಸಮಗ್ರ ಭಾವಾರ್ಥ:- ಕ್ರಿಯೆಯಿಂದ ಶುದ್ಧನಾಗಿ ಇಂದ್ರಿಯಗಳನ್ನು
ತನ್ನ ಸ್ವಾಧೀನ ಇಟ್ಟು ಕೊಂಡಂಥ ಶೂದ್ರನನ್ನೂ ಕೂಡ ಬ್ರಾಹ್ಮಣನಂತೆ ತಿಳಿ. ಅಂದರೆ ಕರ್ಮದಿಂದ
ಮತ್ತು ಸ್ವಭಾವದಿಂದ ಶುದ್ಧನಾಗಿದ್ದವನು ಶೂದ್ರನಿದ್ದರೂ ಬ್ರಾಹ್ಮಣರಲ್ಲಿ ಶ್ರೇಷ್ಠನನ್ನಾಗಿ
ತಿಳಿ. ಯೋನಿ, ಸಂಸ್ಕಾರ, ವಿದ್ಯೆ ಸತ್ಕುಲದಲ್ಲಿ
ಹುಟ್ಟುವಿಕೆ ಇವುಗಳಿಂದ ಮಾತ್ರ ಬ್ರಾಹ್ಮಣ್ಯ ಅವಲಂಬಿಸಿರುವದಿಲ್ಲ. ಸದಾಚಾರವೇ ನಿಜವಾದ
ಬ್ರಾಹ್ಮಣ್ಯದ ಲಕ್ಷಣವಾಗಿರುತ್ತದೆ. ಸದಾಚಾರವು ಶೂದ್ರನಲ್ಲಿದ್ದರೆ ಅವನನ್ನು ಬ್ರಾಹ್ಮಣನೆಂದು
ತಿಳಿ. ಯಾವಾತನ ಜೀವನವು ಧರ್ಮಾರ್ಥವಾಗಿರುತ್ತದೆಯೋ ಯಾವನ ಧರ್ಮವು ದೇವನ ಪ್ರೀತಿಯ ಸಲುವಾಗಿ
ಇರುತ್ತದೆಯೋ, ಯಾವಾಗಲೂ ಯಾವಾತನು ಪುಣ್ಯಕಾರ್ಯಗಳಲ್ಲಿ
ತೊಡಗಿರುತ್ತಾನೆಯೋ ಆತನನ್ನು ಜೀವರೂ ಸಹಿತ ಬ್ರಾಹ್ಮಣನೆಂದು ತಿಳಿಯುತ್ತಾನೆ. ಸತ್ಯವೇ ಬ್ರಹ್ಮ,
ತಪವೇ ಬ್ರಹ್ಮ, ಇಂದ್ರಿಯನಿಗ್ರಹವೇ ಬಹ್ಮ,
ಎಲ್ಲ ಪ್ರಾಣಿಗಳಲ್ಲಿ ದಯೆ ಇರುವದೇ ಬ್ರಹ್ಮ; ಯೋಗ,
ತಪಸ್ಸು, ದಮ, ದಾನ,
ಸತ್ಯ, ಶೌಚ, ದಯಾ,
ಜ್ಞಾನ, ವಿದ್ಯಾ, ವಿಜ್ಞಾನ ಭಕ್ತಿಭಾವ ಇವೇ ಬ್ರಾಹ್ಮಣನ ಲಕ್ಷಣಗಳು.
ಇಮಂ ಯಜ್ಞಮ್ ಸಹಸಾವನ್ ತ್ವಂ ನೋ
ದೇವತ್ರಾ ಧೇಹಿ
ಸುಕ್ರತೋ ರರಾಣಃ |
ಪ್ರ ಯಂಸಿ ಹೋತರ್ಬೃಹತೀರಿಷೋ ನೋsಗ್ನೇ ಮಹಿ
ದ್ರವಿಣಮಾ ಯಜಸ್ವ ||
ಋಗ್ವೇದ 3-1-22
ಭಾವಾರ್ಥ:-
ಭಗವಂತನು ವಿದ್ಯಾವಂತರಿಗೆ ಈ ರೀತಿ ಆಜ್ಞೆ ಮಾಡಿರುವನು. ಎಲ್ಲಿಯವರೆಗೆ
ನೀವು ಬದುಕಿರುವರೋ ಅಲ್ಲಿಯವರೆಗೂ ನೀವು ವಿದ್ಯಾದಾನವೆಂಬ ಜ್ಞಾನಯಜ್ಞವನ್ನು ಉತ್ತಮರೀತಿಯಲ್ಲಿ
ಮಾಡುತ್ತಲೇ ಇರು. ಅದರಿಂದ ಪುಷ್ಕಳವಾದ ಅನ್ನವನ್ನು, ಧನವನ್ನು
ಪ್ರಯೋಜನವನ್ನು ಎಲ್ಲರಿಗೂ ಕೊಡುವವನಾಗಿ ಎಲ್ಲರನ್ನು ಸುಖಿಗಳಾಗಿಸುತ್ತ ನೀನು ಸುಖಿಯಾಗಿರು.
ಬ್ರಹ್ಮಚಾರಿ = ब्रह्मचारी = ब र अ ह म च अ रि
ಅಕ್ಷರಶಃ
ಅರ್ಥ :- ನೀರು,
ಬೆಂಕಿ, ಜೀವ ಉಸಿರು, ವೈದ್ಯ, ಮಾಂತ್ರಿಕ ಸೂತ್ರ ಮತ್ತು ಚಲಿಸುವ ವಿಶೇಷವಾಗಿ
ಪರಿಣಾಮಕಾರಿ ಮಂತ್ರ. (ಇಂತಹ ವಿಚಾರಗಳನ್ನು ತಿಳಿದು ಅಬ್ಯಾಸ ಮಾಡುವವನೇ ಬ್ರಹ್ಮಚಾರಿ)
ಸನಾತನ
ಧರ್ಮದಲ್ಲಿ ನಾಲ್ಕು ಆಶ್ರಮಗಳನ್ನು ಗುರುತಿಸಲಾಗಿದೆ, ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥಾ,
ಮತ್ತು ಸನ್ಯಾಸ. ಬ್ರಹ್ಮಚರ್ಯದಲ್ಲಿ ಎರಡು ವಿಧ, ನೈಷ್ಠಿಕಾ
ಬ್ರಹ್ಮಚಾರಿ ಅಂದರೆ ಜೀವಿತವನ್ನೆಲ್ಲ ಅಭ್ಯಾಸದಲ್ಲಿಯೇ ಕಳೆಯುವವನು, ಭೌತಿಕ ಬ್ರಹ್ಮಚಾರಿ ಎಂದರೆ ಕೆಲ ಅವಧಿ ಮಾತ್ರ ಅಭ್ಯಾಸದಲ್ಲಿ ಕಳೆಯುವವನು. ಬ್ರಹ್ಮಚಾರಿ
ಎಂದರೆ ಗುರುವನುಗ್ರಹಕ್ಕೆ ಪಾತ್ರನಾಗಿ, ಸುಸಂಸ್ಕೃತನಾಗಿ ವೇದಾಧ್ಯಯನವನ್ನು
ಮಾಡುವವನೆಂದೂ ವ್ಯಾಖ್ಯಾನವಿದೆ.
ಬ್ರಹ್ಮಚರ್ಯ
= ब्रह्मचर्य = ब र अ ह म च र य
ಅಕ್ಷರಶಃ
ಅರ್ಥ :- ನೀರು, ಬೆಂಕಿ, ಜೀವ ಉಸಿರು, ವೈದ್ಯ, ಮಾಂತ್ರಿಕ
ಸೂತ್ರ ಮತ್ತು ಉಜ್ವಲತೆ ಸೇರುವುದು.
ಬ್ರಹ್ಮಚರ್ಯೆ
ಪಾಲನೆ ಎಂದರೆ “ಪ್ರಾಣಾಯಾಮದಿಂದ ನೀರು, ಬೆಂಕಿ, ಜೀವ ಉಸಿರು, ವೈದ್ಯ, ಮಾಂತ್ರಿಕ
ಸೂತ್ರ ಮತ್ತು ಉಜ್ವಲತೆ ಚಲಿಸುವ ನಿಪುಣನಾಗುವುದು”. ಅದನ್ನು ಕಲಿತು ನಾವು ಸೇವಿಸುವ ಆಹಾರದ ಕಡೆಯ
ಸಾರವಸ್ತುವಾಗಿರುವ ಈ ವೀರ್ಯದಿಂದ ದೇಹದಲ್ಲಿ ಆರೋಗ್ಯವನ್ನು ಮತ್ತು ಜ್ಞಾನವನ್ನು ಪಡೆಯುವವನಾಗಿ
ಸದಾ ಕರ್ಮಾಸಕ್ತನಾಗಿರುವವನೇ ಬ್ರಹ್ಮಚಾರಿ. ಇಂತಹ ಬ್ರಹ್ಮಚರ್ಯವನ್ನು ಸಂಸಾರಿಯೂ ನಿರ್ವಹಿಸಬಹುದು,
ದೇಹದಲ್ಲಿ ವೀರ್ಯವು ಕೇವಲ ಸಂತಾನಾಭಿವೃದ್ದಿಗೆ ಉತ್ಪತ್ತಿಯಾಗುತ್ತಿರುವ
ದ್ರವ ಮಾತ್ರವಲ್ಲ, ಅದು ಸೋಮ ರಸ, ಅಮೃತ
ಮತ್ತು ದೇಹದ ಸಕಲ ಜೀವಕೋಶಗಳಿಗೂ ಜೀವಾಮೃತವನ್ನು ತುಂಬುವ ದ್ರವ ಎಂದು ಅರ್ಥ ಮಾಡಿಕೊಂಡಾಗ
ಬ್ರಹ್ಮಚರ್ಯ ಎಂದರೆ ನಾವು ವೀರ್ಯ ಸ್ಖಲನ ಮಾಡದೆ ಹೆಣ್ಣು ಸಂಗ ಮಾಡದೆ ಪರಿಶುದ್ಧರಾಗಿರುವುದು ಎಂಬ
ಅರಿವಿನ ಲೋಕದಲ್ಲಿ ಸ್ವಲ್ಪ ಆಲೋಚನಾ ವಿಧಾನ ಬದಲಾಗುವುದು.
ಯದಿದಂ ಬ್ರಹ್ಮಣೋ ರೂಪಂ ಬ್ರಹ್ಮಚರ್ಯಮಿತಿ
ಸ್ಮೃತಂ |
ಫರಂ ತತ್ಸರ್ವಧರ್ಮೇಭ್ಯಸ್ತೇನ ಯಾಂತಿ
ಪರಾಂ ಗತಿಂ
ಮಹಾಭಾರತ
ಭಾವಾರ್ಥ:- ಬ್ರಹ್ಮನ ಈ ರೂಪವೇ ಬ್ರಹ್ಮಚರ್ಯವೆನಿಸಿದೆ. ಆ ಬ್ರಹ್ಮಚರ್ಯವೇ ಎಲ್ಲ ಧರ್ಮಗಳಿಗಿಂತ
ಶ್ರೇಷ್ಠ ಮುತ್ತು ಅದರ ಮುಖಾಂತರವೇ ಎಲ್ಲರೂ ಮೋಕ್ಷವನ್ನು ಹೊಂದುತ್ತಾರೆ.
ಸತ್ಯೇನ ಲಭ್ಯಸ್ತಪಸಾ ಹ್ಯೇಷ ಆತ್ಮಾ |
ಸಮ್ಯಗ್ ಜ್ಞಾನೇನ ಬ್ರಹ್ಮಚರ್ಯೇಣ
ನಿತ್ಯಂ
ಮುಂಡಕೋಪನಿಷತ್
ಭಾವಾರ್ಥ:- ಸತ್ಯ, ತಪಸ್, ಸಮ್ಯಗ್
(ಸರಿಯಾದ) ಜ್ಞಾನ ಮತ್ತು ಬ್ರಹ್ಮಚರ್ಯಗಳಿಂದ ನಿತ್ಯವೂ ಈ ಆತ್ಮನನ್ನು
ಪಡೆಯಲು ಸಾಧ್ಯ.
ಬ್ರಹ್ಮಚರ್ಯೇಣ ತಪಸಾ ದೇವಾ
ಮೃತ್ಯುಮುಪಾಫ್ನುತ |
ಇಂದ್ರೋ ಹ ಬ್ರಹ್ಮಚರ್ಯೇಣ ದೇವೇಭ್ಯಃ
ಸ್ವರಾಭವತ್
ಅಥರ್ವವೇದ
ಭಾವಾರ್ಥ:- ಬ್ರಹ್ಮಚರ್ಯ ಮತ್ತು ತಪಸ್ಸುಗಳಿಂದೆ ದೇವತೆಗಳು ಮೃತ್ಯುವನ್ನು ನಾಶಮಾಡಿದರು.
ದೇವೇಂದ್ರನೂ ಸಹ ಬ್ರಹಚರ್ಯದಿಂದಲೇ ದೇವತೆಗಳಲೆಲ್ಲ ಸರ್ವ ಶ್ರೇಷ್ಠನಾದನು.
ರಾಮಾನುಜಚಾರ್ಯರು ತಮ್ಮ ಬ್ರಹ್ಮಸೂತ್ರ
ಭಾಷ್ಯದಲ್ಲಿ ಹೀಗೆ ಹೇಳುತ್ತಾರೆ:- ಜನನದಿಂದ ಆರಂಭಿಸಿ ಇಪ್ಪತ್ತೈದು
ವರ್ಷ ಪೂರ್ತಿಯಾಗುವವರೆಗಿನ ಮಗುವಿನ ಮೊದಲಿನ ಈ ವಿದ್ಯಾರ್ಥಿ ಜೀವನದ ಆಶ್ರಮವು, ಎಲ್ಲ ಬಗೆಯ ಶಕ್ತಿಗಳನ್ನೂ ಅಭಿವೃದ್ಧಿ ಪಡಿಸಿಕೊಳ್ಳುವ ಸಲುವಾಗಿ ಇದ್ದು
ಮಹತ್ವವೆನಿಸಿ ಕೊಂಡಿದೆ. ಬ್ರಹ್ಮಚರ್ಯ ಆಂದರೆ ಭಗವಂತನಲ್ಲಿ ವಿಹರಿಸುವುದು ಅಥವಾ ಓಡಾಡುವುದು,
ಬ್ರಹ್ಮಚರ್ಯಕ್ಕೆ ಬಾಧಕ ಮಾರಕ ಆದ ಇಂದ್ರಿಯಗಳನ್ನು ನಿಗ್ರಹಿಸುವುದು ಎಂದು
ಅರ್ಥ. ಕೇವಲ ವಿವಾಹ, ಸ್ತ್ರೀಸ್ಪರ್ಶ, ವೀರ್ಯ ಸ್ತಂಭನ ಆಗದಿರುವುದು ಮಾತ್ರ ಬ್ರಹ್ಮಚರ್ಯ ಎನಿಸಲಾರದು. ಬ್ರಹ್ಮವನ್ನು
ಕುರಿತು ನಡೆದ ಸಂಶೋಧನೆ, ಅನುಸಂಧಾನ, ಆನ್ವೇಷಣೆ,
ಆರಾಧನೆ ಇವುಗಳಲ್ಲಿ ನಿರತರಾಗುವುದು ಬ್ರಹ್ಮಚರ್ಯ ಎನಿಸುತ್ತದೆ. ಬ್ರಹ್ಮಚರ್ಯ
ಆಶ್ರಮದಲ್ಲಿ ಯುವಕ ಯುವತಿಯರು ಗಳಿಸಿದ ಅಥವಾ ಅಭಿವೃದ್ಧಿ ಪಡಿಸಿಕೊಂಡ ಶಕ್ತಿ ಸಾಮರ್ಥ್ಯಗಳನ್ನು
ತಮ್ಮ ಹಾಗೂ ತಮ್ಮ ಸಮಾಜ, ರಾಷ್ಟ್ರ, ಜಗತ್ತುಗಳ
ಹಿತಕ್ಕಾಗಿ ಉಪಯೋಗಿಸಲು ಗೃಹಸ್ತಾಶ್ರಮವಿದೆ. ಸೇವೆ, ತ್ಯಾಗಗಳಿಗೆ.
ಇಲ್ಲಿ ವಿಶೇಷ ಅವಕಾಶವಿದೆ. ಬ್ರಹ್ಮಚರ್ಯ, ವಾನಪ್ರಸ್ಥ, ಸಂನ್ಯಾಸ ಈ ಮೂರೂ ಆಶ್ರಮದ ಜನರೆಲ್ಲ ತಮ್ಮ ಉದರ ಪೋಷಣೆಗಾಗಿ ಗೃಹಸ್ಥರನ್ನೇ
ಅವಲಂಬಿಸಿರುತ್ತಾರೆ.
ಬಸವಕಲ್ಯಾಣದ ಸುರೇಶ್ ಸ್ವಾಮಿ ಹಿರೇಮಠ್
ಹೀಗೆ ಬರೆಯುತ್ತಾರೆ,
“ಈ ಚರಾ ಚರ ವಿಶ್ವವು ಯಾವ ವಸ್ತುವಿನಲ್ಲಿ ಉದ್ಭವಿಸಿ ವಿರಾಜಿಸುತ್ತಿದೆಯೋ ಮತ್ತು ಯಾವ
ವಸ್ತುವಿನಲ್ಲಿ ಲಯ ಹೊಂದುತ್ತಿದೆಯೋ ಆ ಮೂಲ ವಸ್ತುವಿಗೆ ಬ್ರಹ್ಮವೆನ್ನುತ್ತಾರೆ.
ಬ್ರಹ್ಮತತ್ವದೆಡೆಗೆ ಹೋಗುವುದಕ್ಕಾಗಿ ಜೀವನು ಭಾವ, ಪ್ರಾಣ,
ಭೂತ ಆವರಣಗಳ ನಿವಾರಣೆಗೊಳಿಸುವ ಜ್ಞಾನ ಕ್ರಿಯೆಗಳ ಸಾಧನೆಗೆ ಬ್ರಹ್ಮಚರ್ಯವೆನ್ನುತ್ತಾರೆ. ಜಗತ್ತಿನ ಸಮಸ್ತ ಸ್ತ್ರೀಪುರುಷರಲ್ಲಿ
ಕರ್ತೃತ್ವ ಶಕ್ತಿಯಿಂದ ತನ್ನ ಜನ್ಮಸಿದ್ಧ ಮಾತೃ ಪಿತೃಭಾವವನ್ನು ವಿಕಾಸಗೊಳಿಸುವದೇ ಬ್ರಹ್ಮಚರ್ಯದ
ಮೂಲ ಉದ್ದೇಶವಾಗಿದೆ. ಮಾನವ ಜೀವನವು ಆಮರಣ ಪರ್ಯಂತ ಪವಿತ್ರವಾಗಿರಿಸ ಬೇಕೆಂಬುದೇ ಬ್ರಹ್ಮಚರ್ಯ
ಆಶ್ರಮದ ಮೂಲೋದ್ಧೇಶಗಿದೆ”.
ಬ್ರಹ್ಮಚರ್ಯೆಯಿಲ್ಲದವನು
ಏನನ್ನೂ ಸಾಧಿಸಲಾರ. ಈ ಸಾಧನೆಯಿಂದ ಸ್ಥಿರ ಮನಸ್ಸು ಲಭ್ಯವಾಗುವುದು, ಮಾನವನು ಬಲಿಷ್ಠ ನಾಗುವನು, ಮಹಾ ತೇಜಸ್ವಿಯಾಗುವನು,
ಅವನಿಗೆ ಅದ್ಭುತ ದೈವೀಶಕ್ತಿಯೂ ಪ್ರಾಪ್ತವಾಗುವುದು, ಅಂತ್ಯದಲ್ಲಿ ಅವನು ಭಗವಂತನೇ ಆಗಿಬಿಡುವನು. ಕಾಯಾ, ವಾಚಾ,
ಮನಸಾ ಬ್ರಹ್ಮಚರ್ಯ ಪಾಲನೆ ಮಾಡಿದವನಿಗೆ ಮಾತ್ರ ಈ ಅದ್ಭುತ ಯೋಗಸಿದ್ದಿ
ಸಾಧಿಸುವುದು ಸಾಧ್ಯ. ಇಂದ್ರಿಯ ಸಂಯಮ, ದೈಹಿಕ ಬಲ, ಮೇಧಾಶಕ್ತಿ, ಸ್ಥೈರ್ಯ, ಧೈರ್ಯ,
ಆನಂದ ಇವೆಲ್ಲಾ ಬ್ರಹ್ಮಚರ್ಯಾಚರಣೆಗಳು. ಹನ್ನೆರಡು ವರ್ಷ ಅಖಂಡ
ಬ್ರಹ್ಮಚರ್ಯೆ ಪಾಲಿಸಿದವನು ಕುಂಡಲಿನೀ ಶಕ್ತಿ ಎಂಬ ಅಪೂರ್ವ ಶಕ್ತಿ ಪಡೆದು ಸರ್ವಜ್ಞ ನಾಗುತ್ತಾನೆ
ಎಂದು ರಾಮಕೃಷ್ಣ ಪರಮಹಂಸರು ಸ್ಪಷ್ಟಪಡಿಸಿದ್ದಾರೆ.
ವೇದಗಳ
ಹೆಸರನ್ನು ಸುಮ್ಮನೆ ಇಟ್ಟಿರುವುದಲ್ಲ.
वेद = ವೇದ ಎಂದರೆ “ಸಂಯೋಜನೆಯನ್ನು ಅನುಗ್ರಹಿಸಲು, ”ವೇದಃ
ಎಂದರೆ “ಉಡುಗೊರೆಯನ್ನು/ ಶುದ್ದತೆಯನ್ನು
ಸಂಯೋಜಿಸಲು” ಎಂದಾಗುತ್ತದೆ, ವೇದಾ ಎಂದರೆ “ಶಾಖ ಸಂಯೋಜನೆ”
ವೇದಂ ಎಂದರೆ “ಶಾಂತತೆಗೆ ಸಂಯೋಜನೆ” ಅಂದರೆ "ಜ್ಞಾನ
ಸಂಯೋಜನೆ" ಎಂದು ಆಗುತ್ತದೆ. ಹಿಂದೂಗಳ ಕಟ್ಟುನಿಟ್ಟಾದ ಸಾಂಪ್ರದಾಯಿಕ ನಂಬಿಕೆಯ
ಪ್ರಕಾರ ವೇದಗಳು ಅಪೌರುಷೇಯ, 'ಮಾನವ ಸಂಯೋಜನೆಗಳಲ್ಲ', ಇದನ್ನು ನೇರವಾಗಿ ಪರಮಾತ್ಮ, ಬ್ರಹ್ಮನಿಂದ
ಬಹಿರಂಗಪಡಿಸಲಾಗಿದೆ ಎಂದು ಭಾವಿಸಲಾಗಿದೆ. ವೇದ ಜ್ಞಾನವನ್ನು ವಿಷಯಾಧಾರಿತವಾಗಿ ಮೂರು ರೀತಿಯಲ್ಲಿ
ವರ್ಗೀಕರಿಸಲಾಗಿದೆ: ಸ್ತುತಿ, ಪ್ರಾರ್ಥನೆ ಮತ್ತು ಉಪಾಸನೆ. ಸ್ತುತಿಯಲ್ಲಿ
ಹೊಗಳಿಕೆ, ಗಂಭೀರವಾದ ಪೂಜ್ಯ ಸ್ಮರಣೆ ಮತ್ತು ಗುಣಲಕ್ಷಣಗಳ ವಿವರಣೆ,
ಸ್ವಭಾವ, ಪಾತ್ರ ಮತ್ತು ದೈವಿಕ ಶಕ್ತಿಗಳ
ಕಾರ್ಯ ವಿವರಣೆ ಇರುತ್ತದೆ. ಪ್ರಾರ್ಥನಾ, ನಮ್ಮ ಮಿತಿಯನ್ನು ಅರಿತುಕೊಳ್ಳಲು ಸ್ವಯಂ ಸೂಚಕ ನಿರ್ಣಯವಾಗಿದೆ. ಕರೆ ಮಾಡುವ ಮೂಲಕ ಮಿತಿಗಳು ಮತ್ತು ಆ ಮಿತಿಗಳ ಮೇಲೆ ನಮ್ಮ ಏರಿಕೆ, ನಾವು ದಣಿದಾಗ ಸಹಾಯ ಮತ್ತು ಆಶೀರ್ವಾದಕ್ಕಾಗಿ ದೈವತ್ವ ಪ್ರಯತ್ನ ಮತ್ತು ಸಾಮರ್ಥ್ಯ.
ಉಪಾಸನೆ ಎಂದರೆ ಧ್ಯಾನ, ದೈವಿಕ ಉಪಸ್ಥಿತಿಯಲ್ಲಿ ಭಾಗವಹಿಸಲು ನಮ್ಮ
ಸೀಮಿತ ಅಸ್ತಿತ್ವದ ಶರಣಾಗತಿ, ಸಮೀಪಿಸುವುದು, ಅನ್ವೇಶಿಸುವುದು ಆಗಿರುತ್ತದೆ. ಸ್ತುತಿಯು (ಜನನ) ಜ್ಞಾನವನ್ನು, ಪ್ರಾರ್ಥನೆಯು ನಮ್ರತೆ ಮತ್ತು ಕ್ರಿಯೆಯನ್ನು (ಕರ್ಮ) ಸೂಚಿಸುತ್ತದೆ, ಮತ್ತು ಉಪಾಸನೆಯು ಸಂಪೂರ್ಣ ಪ್ರೀತಿ ಮತ್ತು ಶರಣಾಗತಿಯನ್ನು (ಭಕ್ತಿ)
ಸೂಚಿಸುತ್ತದೆ. ಪರಿಣಾಮವಾಗಿ, ಔಪಚಾರಿಕವಾಗಿ, ವೇದ ಜ್ಞಾನವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ: ಋಗ್ವೇದವು ಜ್ಞಾನದ
ವೇದವಾಗಿದೆ, ಯಜುರ್ವೇದವು ಕರ್ಮದ ವೇದವಾಗಿದೆ, ಸಾಮವೇದವು ಭಕ್ತಿಯ ವೇದವಾಗಿದೆ, ಮತ್ತು ಅಥರ್ವವೇದವು
ಬ್ರಹ್ಮ ವೇದವಾಗಿದೆ ಎಂದು ವೇದ ಪಂಡಿತರು ವ್ಯಾಖ್ಯಾನಿಸುತ್ತಾರೆ.
ಏಳು
ಕುಂಡಲಿನಿ ಚಕ್ರಗಳನ್ನು ಮೂರು ಅಜಪ ಮಂತ್ರದ ಜ್ಞಾನ ಋಗ್ವೇದ
"ऋग्वेद"/ಋಗ್ವೇದ ऋ/ಋ
ಎಂದರೆ ಸಂಸ್ಕೃತ ವರ್ಣಮಾಲೆಯ ಏಳನೆಯ ಸ್ವರ ಮತ್ತು ಅದಕ್ಕೆ ವಿಶಿಷ್ಟವಾದುದು (ತಕ್ಷಣವೇ ಶಬ್ದವನ್ನು
ಹೋಲುತ್ತದೆ). ಇದರ ಇನ್ನೊಂದು ಅರ್ಥ ಹೋಗುವುದು/ಚಲಿಸುವುದು. "ಗ" ಎಂದರೆ ಸಂಸ್ಕೃತ ವರ್ಣಮಾಲೆಯ 3 ನೇ ವ್ಯಂಜನ, ಮೃದುವಾದ ಗುಟುರು ಶಬ್ದವನ್ನು ಹೊಂದಿದೆ. ಇದರ ಇನ್ನೊಂದು ಅರ್ಥ, ತಲುಪುವುದು, ಉಳಿಯುವುದು, ಇರುವುದು, ಬದ್ಧವಾಗಿರುವುದು. ಸಂಗೀತದ ಮೂರನೇ ಸ್ವರ
ಚಿಹ್ನೆ. ಹೆಸರಿನಲ್ಲೇ ಸೂಚಿಸುವ ಆ ಏಳು, ಮೂರು ಯಾವುದು ಅದರ ಮಹತ್ವ ಏನು, ಗುಟುರು ಶಬ್ದದಿ
ಚಲಿಸುವ ಅದು ಯಾವುದು, ಎಂಬ ವಿಚಾರವನ್ನು ತಿಳಿಸುವುದೇ ಈ ಪದಗಳ
ಉಪಯೋಗದ ವೈಶಿಷ್ಟ್ಯ. ಋಗ್ವೇದ ಎಂದರೆ, ಅಕ್ಷರ ಅರ್ಥ, “ಗುಟುರು ಶಬ್ದದಿ ಚಲಿಸುವ ಸಂಯೋಜನೆಯನ್ನು ಅನುಗ್ರಹಿಸಲು” ಎಂದಾಗುತ್ತದೆ. ಏಳು ಕುಂಡಲಿನಿ ಚಕ್ರಗಳು, ಮೂರು ಅಜಪ ಮಂತ್ರಗಳು "ಅ ಉ ಮ" "ಓಂ ನಮಃ ಶಿವಾಯ"
"ಓಂ ನಮೋ ನಾರಾಯಣಾಯ" "ಈ ಶ್ವ ರ" ಮೊದಲನೇ ಶಬ್ದದಿಂದ ಉಸಿರನ್ನು ಒಳಕ್ಕೆ
ಕಿಬ್ಬೊಟ್ಟೆ ಕೆಳಗಿನವರೆಗೆ ಎಳೆಯುವುದು, ಎರಡನೇ ಶಬ್ದದಿಂದ
ಕಿಬ್ಬೊಟ್ಟೆ ಕೆಳಭಾಗವನ್ನು ಮೂಲಾಧಾರದ ಬಳಿಗೆ ಎಳೆಯುವುದು, ಆಗ
ಸುಷುಮ್ನಾ ನಾಡಿ ತೆರೆದುಕೊಳ್ಳುತ್ತದೆ, ಮೂರನೇ ಶಬ್ದದೊಂದಿಗೆ
ಉಸಿರನ್ನು ಸುಷುಮ್ನಾ ನಾಡಿಯ ಮುಖೇನ ಸಹಸ್ರಾರಕ್ಕೆ ಉಚ್ವಾಸವನ್ನು ಮಾಡುವುದು, ಅಂತಹ ಪವಿತ್ರ ಅಜಪ ಮಂತ್ರವೂ ಆಗಬಹುದು ಹಾಗೆಯೇ ಪ್ರಮುಖ ನಾಡಿಗಳು, (ಇಡ, ಪಿಂಗಳ ಮತ್ತು ಸುಷುಮ್ನಾ) ಇದರಲ್ಲಿ
ಗುಟರಿಕೆಯೊಂದಿಗೆ ಚಲಿಸುವ ಗಾಳಿ, ಇದರಿಂದ ಮುನುಜ ಕುಲಕ್ಕೆ ಆಗುವ
ಹಿತ. ವೇದವೆಂದರೆ ಜ್ಞಾನ. ‘ವೇದ’ ಎಂಬ ಪದದ ಅರ್ಥವೇ ಜ್ಞಾನ ಇದು 'ವಿದ್'
ಮೂಲದಿಂದ ಬಂದಿದೆ, ಇದರರ್ಥ: 'ಆಗಲು, ತಿಳಿಯಲು, ಯೋಚಿಸಲು
ಮತ್ತು ಲಾಭ ಪಡೆಯಲು', ಎಂದು ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ. ಆದ್ದರಿಂದ ಯಾವುದಾದರೂ ವೇದ, ಅಸ್ತಿತ್ವದ ಜಗತ್ತು ವೇದವಾಗಿದೆ. ಅಸ್ತಿತ್ವದ ಪ್ರಪಂಚದ ಜ್ಞಾನವು ವೇದವಾಗಿದೆ.
ಚಿಂತನೆ ಮತ್ತು ಸಂಶೋಧನೆಯ ಮೂಲಕ ಜ್ಞಾನದ ವಿಸ್ತರಣೆ. ಮುಂದೆ ವೇದ ಮತ್ತು ಆ ಜ್ಞಾನವನ್ನು
ಲಾಭಕ್ಕಾಗಿ ಬಳಸುವುದು ಪ್ರಕೃತಿಯ ರಕ್ಷಣೆ ಮತ್ತು ಸಂರಕ್ಷಣೆಯೊಂದಿಗೆ ಮಾನವಕುಲ ಪರಿಸರ, ಜೀವನದ ಯಾವುದೇ ರೂಪವನ್ನು ನೋಯಿಸದಿರುವುದೇ ವೇದ. ದೇಹದಲ್ಲಿನ ಆ ಏಳು ಕುಂಡಲಿನಿ ಚಕ್ರಗಳನ್ನು ಮೂರು ಅಜಪ ಮಂತ್ರದ ಮೂಲಕ ವಾಯು ಚಲನೆಯ
ಮುಖೇನ ಶಬ್ದದಿ ತಲುಪುವ ಪವಿತ್ರ ಜ್ಞಾನ ಬೋಧನೆಯೇ ಋಗ್ವೇದ ಮೂಲ.
ಗಾಳಿಯ
ಚಲಿಸುವಿಕೆ ಸ್ವಾಧೀನಪಡಿಸಿಕೊಳ್ಳುವಿಕೆ ಜ್ಞಾನ ಯಜುರ್ವೇದ
ಯಜುರ್ವೇದ –
ಅಕ್ಷರ ಅರ್ಥ ಯಜುರ್ವೇದ ಎಂದರೆ “ಗಾಳಿ ಬೆಂಕಿಯನ್ನು ಶೀಘ್ರವಾಗಿ ಚಲಿಸುವ ಸಂಯೋಜನೆಯನ್ನು
ಅನುಗ್ರಹಿಸುವ”
ಎಂದಾಗುತ್ತದೆ. ಸಂಸ್ಕೃತದಲ್ಲಿ "ಯ" ಎಂದರೆ ಗಾಳಿ, ಬೆಳಕು, ಹೋಗುವವನು ಅಥವಾ ಚಲಿಸುವವನು, ಸೇರುವುದು, ತಡೆಯುವುದು.
"ಜು" ಎಂದರೆ ಹೋಗುವುದು, ಚಲಿಸುವುದು. "ರ"
ಎಂದರೆ ಸ್ವಾಧೀನಪಡಿಸಿಕೊಳ್ಳುವುದು, ಬೆಂಕಿ, ಶಾಖ, ನೀಡುವಿಕೆ, ಪರಿಣಾಮ,
ಪ್ರೀತಿ, ಆಸೆ, ವೇಗ,
ಚಿನ್ನ, ನೀಡುವಿಕೆ, ಹೊಳಪು. ಯಜುರ್ವೇದವು ಕರ್ಮ ವೇದವಾಗಿದ್ದು, ವೈಯಕ್ತಿಕ
ಮತ್ತು ಸಾಮೂಹಿಕ ಮಟ್ಟದಲ್ಲಿ ಸಕಾರಾತ್ಮಕ, ಸೃಜನಶೀಲ ಮತ್ತು
ರಚನಾತ್ಮಕ ರೀತಿಯಲ್ಲಿ ಪ್ರಾಯೋಗಿಕ ಜೀವನದಲ್ಲಿ ಜ್ಞಾನದ ಅನ್ವಯದ ಜ್ಞಾನ. ಈ ಜೀವನ ಮತ್ತು ಕೆಲಸ
ಮಾಡುವ ವಿಧಾನವು "ಯಜ್ಞ" ಆಗಿದ್ದು, ಸರಳವಾಗಿ
ಹೇಳುವುದಾದರೆ, ನಿಸ್ವಾರ್ಥ ಮತ್ತು ಭಾಗವಹಿಸುವಿಕೆಯ ಜೀವನ
ವಿಧಾನವಾಗಿದೆ ಮತ್ತು ಆ ಮೂಲಕ ಪ್ರಕೃತಿ, ಮಾನವೀಯತೆ, ಪರಿಸರ ಮತ್ತು ಇಡೀ ವಿಶ್ವವನ್ನು ಒಳಗೊಂಡಂತೆ ಸಂಪೂರ್ಣವಾದ ಗರಿಷ್ಠವನ್ನು
ಸೃಷ್ಟಿಸುತ್ತದೆ. ದೇಶ, ಉಸಿರಾಟ, ಸ್ವಯಂ-ಸಂಘಟನೆ,
ಸ್ವಯಂ ಪ್ರಜ್ಞೆ, ಸಾರ್ವಭೌಮ ವ್ಯವಸ್ಥೆಯಲ್ಲಿ
ನಂಬಿಕೆ.
ರಚಿಸುವ, ನಾಶಗೊಳಿಸುವ ಮತ್ತು ಚಲಿಸುವ
ಜ್ಞಾನ ಸಾಮವೇದ
ಸಾಮವೇದ -
ಸಂಸ್ಕೃತದಲ್ಲಿ "ಸಾ" ಎಂದರೆ ಲಕ್ಷ್ಮಿ (ರಚಿಸುವುದು,
ನಾಶಗೊಳಿಸುವುದು ಮತ್ತು ಚಲಿಸುವುದು), ಗೌರಿ, ನೀಡುವುದು. "ಮ" ಎಂದರೆ ಅಧಿಕಾರ; ಜ್ಞಾನ,
ಮಾಂತ್ರಿಕ ಸೂತ್ರ,
"ರಚಿಸುವ, ನಾಶಗೊಳಿಸುವ ಮತ್ತು ಚಲಿಸುವ ಜ್ಞಾನ/
ಮಾಂತ್ರಿಕ ಸೂತ್ರ" ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಿಸಿದಾಗ ಸ ಅ ಮ ಎಂದು ಅಕ್ಷರ ಅರ್ಥ
ನೋಡಿದರೆ “ಧ್ಯಾನದ ಒಂದು ನಿರ್ದಿಷ್ಟವಾದ ಪರಿಣಾಮಕಾರಿ ಮಂತ್ರ ಮಾಂತ್ರಿಕ ಸೂತ್ರ” ಎಂದಾಗುತ್ತದೆ.
ವೇದಗಳು ಜೀವನದ ಸಾರ, ಮತ್ತು ಸಾಮವೇದವು ವೇದಗಳ ಸಾರವಾಗಿದೆ ಎಂದು
ಛಂದೋಗ್ಯೋಪನಿಷತ್ ಹೇಳುತ್ತದೆ, 1, 1,
1-2: "ಈ ಎಲ್ಲ ಅಂಶಗಳಲ್ಲಿ (ಆಕಾಶ, ವಾಯು,
ಅಗ್ನಿ, ನೀರು ಮತ್ತು ಭೂಮಿ) ಭೂಮಿಯು
ಸಾರವಾಗಿದೆ. ಭೂಮಿಯ ಸಾರ ನೀರು. ನೀರಿನ ಸಾರ ಔಷಧಿಗಳು, ಗಿಡಮೂಲಿಕೆಗಳು.
ಔಷಧಿಯ ಸಾರ ಪುರುಷ, ಮನುಷ್ಯ. ಮಾನವರ ಸಾರವೆಂದರೆ ವಾಕ್(ಮಾತು),
ಮಾತಿನ ಸಾರ ಚಲನೆಯ ಆನಂದ. ಚಲನೆಯ ಆನಂದದ ಮೂಲತತ್ವ ಸಾಮ. ಸಾಮದ ಸಾರವೆಂದರೆ
ಉದ್ಗೀತೆ, ಓಂನ ವಿಶ್ವ ಪ್ರತಿಧ್ವನಿ. ಆ ಓಂ, ಜಪಿಸಿ, ಹಾಡಿ ಮತ್ತು ಧ್ಯಾನದಲ್ಲಿ ಪೂಜಿಸಿ." ಸಾಮವೇದವು
ಆನಂದದ ಸ್ಥಿತಿಯಲ್ಲಿ ಸಾರ್ವಕಾಲಿಕ ದಾರ್ಶನಿಕರು ಹಾಡಿದ ಮಾಂತ್ರಿಕ ಹಾಡುಗಳ ಸ್ವರಮೇಳವಾಗಿದೆ
ಎನ್ನುತ್ತಾರೆ ವಿದ್ವಾಂಸರು. ಕೆಲವು ಮಂತ್ರಗಳಲ್ಲಿ ಚಲನೆಯ ಆನಂದದಿಂದ ಸಣ್ಣ ವ್ಯತ್ಯಾಸಗಳಿವೆ,
ವಿವರಣಾತ್ಮಕ ಆಚರಣೆಗಳನ್ನು ಧ್ಯಾನಸ್ಥ ಭಾವಪರವಶತೆಯ ಪ್ರಾರ್ಥನಾ ಹಾಡುಗಳಾಗಿ
ಪರಿವರ್ತಿಸುತ್ತದೆ.
ಬೆಂಕಿ
ಮತ್ತು ವಾಯುವಿನ ಜ್ಞಾನವೇ ಅಥರ್ವ ವೇದ
ಅಥರ್ವವೇದ
ಇದು ನಾಲ್ಕನೇ ವೇದ. ಸಂಸ್ಕೃತದಲ್ಲಿ ಅಥರ್ ಎಂದರೆ ಬೆಂಕಿ,
"ವ" ಎಂದರೆ ಶಕ್ತಿಯುತ, ಇತ್ಯಾದಿ ಅರ್ಥಗಳಿವೆ. ಅಕ್ಷರ
ಅರ್ಥ ಗಮನಿಸಿದಾಗ “ಅಥರ್ವವೇದ” ಎಂದರೆ, “ಜೀವ ಉಸಿರು ಮಂಗಳಕರ ಪ್ರಾರ್ಥನೆ ಶಕ್ತಿಯುತ
ಬೆಂಕಿ ಸಂಯೋಜನೆಯನ್ನು ಅನುಗ್ರಹಿಸುವ” ಎಂದಾಗುತ್ತದೆ. ಅಥರ್ವನ್ ಎಂದರೆ ಬೆಂಕಿ ಮತ್ತು ಸೋಮವನ್ನು
ಪೂಜಿಸುವವ ಎಂಬ ಅರ್ಥವನ್ನು ವಿದ್ವಾಂಸರು ನೀಡಿದ್ದಾರೆ.
ಭಾರತ
ಇತ್ಯಾದಿ ಪದಗಳ ಅಕ್ಷರಶಃ ಅರ್ಥ
भारत = ಭಾರತ ಇದರ
ವ್ಯಾಖ್ಯಾನ ಇಲ್ಲಿವರೆಗೆ ಹಲವು ವಿದ್ವಾಂಸರು ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಸಂಸ್ಕೃತದಲ್ಲಿ
ಭಾರತ ಎಂಬ ಪದವನ್ನು ವಿಂಗಡಿಸಿ ಅರ್ಥವನ್ನು ಹುಡುಕಿದಾಗ "ಪ್ರಕಾಶಮಾನ ರತ್ನವನ್ನು
ಬೆಳಗಿಸುವುದು" ಎಂಬ ಅರ್ಥ ಬರುತ್ತದೆ. भरत = ಭರತ ಎಂಬ ಪದವನ್ನು ವಿಂಗಡಿಸಿ
ಅರ್ಥವನ್ನು ಹುಡುಕಿದಾಗ "ನಕ್ಷತ್ರದ ಹೊಳಪಿನ ರತ್ನ" ಎಂಬ ಅರ್ಥ ಬರುತ್ತದೆ. ಹಿಂದೂಸ್ಥಾನಕ್ಕೆ
ಭಾರತ, ಆರ್ಯಾವರ್ತ ಎಂದು ಹೆಸರು-ಗಳಿರುವುದರಿಂದ ಇಲ್ಲಿದ್ದ ಜನರಿಗೆ ಭಾರತ,
ಭಾರತೀಯ, ಆರ್ಯ ಎಂದೂ ಅನ್ನುವರು.
ಗಾಯಂತಿ ದೇವಾಃ ಕಿಲ ಗೀತಕಾನಿ
ಧನ್ಯಾಸ್ತುತೇ ಭಾರತಭೂಮಿ ಭಾಗೇ |
ಸ್ವರ್ಗಾಪವರ್ಗಾಸ್ಪದಮಾರ್ಗಭೂತೇ ಭವಂತಿ
ಭೂಯಃ ಪುರುಷಾಃ ಸುರತ್ವಾತ್ ॥
(ವಿಷ್ಣುಪುರಾಣ ೨-೩-೨೪)
ಭಾವಾರ್ಥ:- ಭಾರತವರ್ಷದಲ್ಲಿದ್ದವರು ಸರ್ವಧಾ ಧನ್ಯರು. ಸ್ವರ್ಗ ಮೋಕ್ಷಗಳಿಗೂ ಮಾರ್ಗದರ್ಶಕವಾದ
ಈ ದಿವ್ಯ ಭೂಮಿಯಲ್ಲಿ ಜನಿಸಿದವರು ಖಂಡಿತವಾಗಿಯೂ ಧನ್ಯರು ಎಂದು ಹಿಂದೂ ಜನರನ್ನು ದೇವತೆಗಳೆಲ್ಲ
ಪಾಡಿ ಪೊಗಳುವರು. ತಮ್ಮ ಜನ್ಮವು ಅಲ್ಲಿ ಆಗಬೇಕೆಂದು ಕೋರುವರು.
ಅಹೋ ಅಮಿಷಾಂ ಕಿಮಕಾರಿ ಶೋಭನಂ ಪ್ರಸನ್ನ
ಏಷಾಂ ಸ್ವಿದುತ ಸ್ವಯಂ ಹರಿಃ ।
ಯೈರ್ಜನ್ಮ ಲಬ್ಧಂ ನೃಷು ಭಾರತಾಜಿರೇ
ಮುಕುಂದಸೇವೌಪಯಿಕಂ ಸ್ಪೃಹಾ ಹಿನಃ॥
(ಶ್ರೀಮದ್ಭಾಗವತ ೫-೧೯-೨೧)
ಭಾವಾರ್ಥ:- ಸ್ಟಯಂ ಪರಮಾತ್ಮನೇ ಯಾರ ಮೇಲೆ ಪ್ರಸನ್ನನಾಗಿರುವನೋ ಅಂತಹ ಭಾರತೀಯರನ್ನು ಕುರಿತು
ನಾವೇನು ಒಳ್ಳೆಯದನ್ನು ಮಾಡ ಬಲೆವು? ಭರತಭೂಮಿಯಾದ ಹಿಂದೂಸ್ಥಾನದಲ್ಲಿ
ಜನ್ಮವೆತ್ತಿ ಬರುವುದೇ ಮನುಷ್ಯ ಶ್ರೇಷ್ಠನಾಗುವಿಕೆಯು. ಪರಮಾತ್ಮನ ಸೇವೆಗೆ ಉಪಯುಕ್ತವಾದ ದೇಶ
ಮತ್ತು ಜನ್ಮವೇ ಇದು. ಇದರ ಆಶೆ ನಮಗೆ ಹೆಚ್ಚು ಎಂದು ದೇವತೆಗಳೇ ಹೇಳುವರು. ಈ ಭಾಗ್ಯಕ್ಕಾಗಿ ನಾವು
ಹಾತೊರೆಯುವೆವು ಎಂದು ದೇವತೆಗಳ ಉಕ್ತಿ ಇದೆ.
ಯ ಇಮೇ ರೋದಸೀ ಉಭೇ ಅಹಮಿಂದ್ರಮತುಷ್ಟವಮ್
|
ವಿಶ್ವಾಮಿತ್ರಸ್ಯ ರಕ್ಷತಿ ಬ್ರಹ್ಮೇದಂ
ಭಾರತಂ ಜನಮ್||
ಋಗ್ವೇದ 3-53-12
ಭಾವಾರ್ಥ:- ಆಕಾಶ ಭೂಮಿಗಳ ಮಧ್ಯೆ ಅಂತರಿಕ್ಷದಲ್ಲಿದ್ದ ಇಂದ್ರನನ್ನು ಸ್ತುತಿಸುತ್ತಿದ್ದೇನೆ. ಅವನ
ಪ್ರಾರ್ಥನೆಯನ್ನು ಮಾಡಿದ್ದೇನೆ. ವಿಶ್ವಾಮಿತ್ರನ ಬ್ರಹ್ಮರೂಪವಾದ
ಉಪಾಸ್ಯ ದೈವತವು ಭಾರತದ ಜನರನ್ನು ರಕ್ಷಿಸುವುದು.
ವಿದ್ವಾಂಸರು
ವ್ಯಾಖ್ಯಾನಿಸುವಂತೆ “ಭಾಸಿ ವಾ ಭಾಯಾಮ್ ವಾ ರತ್ನಹ ಭಾರತಃ” ಅಂದರೆ ಸ್ವಪ್ರಕಾಶವಾದ
ಆತ್ಮರೂಪದಲ್ಲಿ ರತನವಾಗಿರುವವನೇ ಭಾರತ.
ಭನ್ನಂಜೆ ಗೋವಿಂದಾಚಾರ್ಯರು ಹೇಳುವಂತೆ, “ಐತರೇಯ
ಬ್ರಾಹ್ಮಣದಲ್ಲಿ ‘ವಾಯರ್ವಾವ ಭರತಃ’ ಎನ್ನುವ ಒಂದು ಮಾತಿದೆ. ಸದಾ ಭಗವಂತನಲ್ಲಿ ನಿರತನಾದ ವಾಯು
ದೇವರಿಗೆ ಭರತ ಎಂದು ಹೆಸರು. ಆದ್ದರಿಂದ ‘ಭಾರತ’ ಎಂದರೆ “ಭೀಮ(ಪ್ರಾಣತತ್ವ)ನ ತಮ್ಮ” ಎನ್ನುವ
ಅರ್ಥವನ್ನು ಕೊಡುತ್ತದೆ. (ಸದಾ ಭಗವಂತನಿಗೆ ಅತೀ ಹತ್ತಿರವಿರುವ ಹನುಮಂತ ಅಥವಾ ಪ್ರಾಣತತ್ವದ
ಉಪಾಸನೆ ಭಗವಂತನನ್ನು ತಿಳಿಯುವ ಸುಲಭ ಸಾಧನ.)……… ಅಜ್ಞಾನಿ-ಯಲ್ಲಿ
ಈ ದೃಢ ಭಕ್ತಿ ಇರದು. ಈ ರೀತಿ ದೃಢಭಕ್ತಿ ಮೂಡಬೇಕಾದರೆ ನಾವು ‘ಭಾರತ’ರಾಗಬೇಕು. ನಿರಂತರ ಜ್ಞಾನ
ತೃಷೆ, ಜ್ಞಾನಿಗಳಲ್ಲಿ ಭಕ್ತಿ, ಭಗವದ್ಭಕ್ತರಲ್ಲೇ
ಹಿರಿಯರಾದ ಪ್ರಾಣದೇವರಲ್ಲಿ ಭಕ್ತಿ ನಮ್ಮನ್ನು ಭಾರತರನ್ನಾಗಿ ಮಾಡಬಲ್ಲದು.….”
ಅತ್ರಾಪಿ ಭಾರತಂ ಶ್ರೇಷ್ಠಂ ಜಂಬೂದ್ವೀಪೇ
ಮಹಾಮುನೇ ।
ಯತೋ ಹಿ ಕರ್ಮಭೂರೇಷಾ ಹ್ಯತೋsಭೋಗಭೂಮಯಃ |
ಎಂದು
ಪರಾಶರರು ಹೇಳುತಾರೆ. "ಮಹರ್ಷಿ- ಮೈತ್ರೇಯ, ಈ ಜಂಬೂ ದ್ವೀಪದಲ್ಲಿ ಭರತ ಖಂಡವು ಶ್ರೇಷ್ಠವಾದದ್ದು ಏಕೆಂದರೆ ಇದು ಕರ್ಮ ಭೂಮಿ
ಎನಿಸಿದೆ. ಉಳಿದ ರಾಷ್ಟ್ರಗಳೆಲ್ಲವೂ ಭೋಗ ಭೂಮಿಗಳು.”
ಅತ್ರ ಜನ್ಮಸಹಸ್ರಾಣಾಂ ಸಹಸ್ರೈರಪಿ ಸತ್ತಮ
|
ಕದಾಚಿಲ್ಲಭತೇ ಜಂತುರ್ಮಾನುಷ್ಯಂ ಪುಣ್ಯ
ಸಂಚಯಾತ್ ॥
- ವಿಷ್ಣುಪುರಾಣ, ಅಂಶ--2, ಅಧ್ಯಾಯ-3
ಭಾವಾರ್ಥ:- "ಸತ್ಸರುಷ ಮೈತ್ರೇಯ, ಈ ಭರತ ಖಂಡದಲ್ಲಿ ಮನುಷ್ಯ
ಜನ್ಮ ಬರಬೇಕಾದರೆ ಎಷ್ಟೋ ಸಾವಿರಾರು ವರ್ಷಗಳಲ್ಲಿ ಮಾಡಿದ ಪುಣ್ಯ ಸಂಗ್ರಹವಿರಬೇಕು”.
ಯಾ ದೇವಿ
ಸರ್ವ ಭೂತೇಷು ಮಾತೃರೂಪೇಣ ......... ಅರ್ಥ
ಯಾ ದೇವೀ ಸರ್ವ ಭೂತೇಶು ಮಾತೃ ರೂಪೇಣ
ಸಂಸ್ಥಿತ ನಮಸ್ ತಸೈ ನಮಸ್ ತಸೈ ನಮೋ ನಮಃ
ಭಾವಾರ್ಥ:- ಇಡೀ ಪ್ರಪಂಚದ ಶ್ರೇಷ್ಠತೆಯನ್ನು ರಕ್ಷಿಸಲು ಧಾರ್ಮಿಕ ಧ್ಯಾನ, ಮೆದುಳಿನ ನಾಸಿಕದ ಮೇಲೆ ಪರಿಣಾಮ ಬೀರುವ ದೈವಿಕ ತಾಯಿಯ ರೂಪವನ್ನು ತ್ವರಿತವಾಗಿ
ಸಮೀಪಿಸಲು ಶ್ಲಾಘಿತ ಮಾಂತ್ರಿಕ ಸೂತ್ರವನ್ನು ಕರೆಯುವ ಮೂಲಕ ನಮನ ಸಲ್ಲಿಸಲು ಆಹ್ವಾನಿಸುವ ಅಮೃತ
ಗಾಳಿಯ ಸದ್ಗುಣದ ಕೊಡುಗೆಯೊಂದಿಗೆ ಆಹಾರ ಅಮೃತ ಮತ್ತು ಬೇರ್ಪಡಿಸಲಾಗದ್ದನ್ನು ಆಹ್ವಾನಿಸುವುದು.
देव = ದೇವ = ರಕ್ಷಿಸಲು ಶಕ್ತಿಯುತವಾದುದ್ದು, ದೇವಿ = देवी = ರಕ್ಷಣೆಗೆ ಸಮೀಪಿಸು देवि = ಸೋಮದಿಂದ (ಅಮೃತದಿಂದ)
ರಕ್ಷಣೆ. ಸಂಸ್ಕೃತದಲ್ಲಿನ ಈ ವಿಸ್ಮಯ ಅರ್ಥಗಳನ್ನು ತಿಳಿದರೆ ವೇದ ಮತ್ತು ಪುರಾಣ ಗ್ರಂಥಗಳ ವ್ಯಾಖ್ಯಾನ
ತುಂಬಾ ಅರ್ಥಬದ್ದವಾಗುತ್ತದೆ ಎಂಬುದೇ ನನ್ನ ಅಭಿಪ್ರಾಯ.
ದುರ್ಗಾ, ಕಾಳಿ, ಪದಗಳ ವಿಸ್ಮಯ
ದುರ್ಗಾ
= दुर्ग = ಎಂಬ ಸಂಸ್ಕೃತ ಪದವನ್ನು ವಿಂಗಡಿಸಿ ಅರ್ಥವನ್ನು ಹುಡುಕಿದಾಗ "
ಬೆಂಕಿಯೊಂದಿಗೆ ಸೇವಿಸಿ ಪ್ರಕಾಶತೆಯನ್ನು ತಲುಪುವ" ಎಂಬ ಅರ್ಥ ಬರುತ್ತದೆ. ಕಾಳಿ = काली
= ಎಂಬ ಸಂಸ್ಕೃತ ಪದವನ್ನು ವಿಂಗಡಿಸಿ ಅರ್ಥವನ್ನು
ಹುಡುಕಿದಾಗ "ದುರ್ಗಾ ಮಾತೆಯನ್ನು ಅಪ್ಪಿಕೊಳ್ಳುವುದು" ಅಥವಾ "ಬೆಂಕಿಯೊಂದಿಗೆ ಸೇವಿಸಿ ಪ್ರಕಾಶತೆಯನ್ನು ತಲುಪುವ
ಮಾತೆಯನ್ನು ಅಪ್ಪಿಕೊಳ್ಳುವುದು" ಎಂಬ ಅರ್ಥ ಬರುತ್ತದೆ.
ಬುದ್ಧ್ಯಧಿಷ್ಠಾತೃದೇವೀ ಯಾ
ಸರ್ವಶಕ್ತಿಸ್ವರೂಪಿಣೀ |
ಸರ್ವಜ್ಞಾನಾತ್ಮಿಕಾ ಸರ್ವಾ ಸಾ ದುರ್ಗಾ
ದುರ್ಗನಾಶಿನೀ ॥
ಬ್ರಹ್ಮವೈವರ್ತ ಮಹಾಪುರಾಣ 40-೬೫
ಭಾವಾರ್ಥ:- ಬುದ್ಧಿಗೆ ಅಧಿಷ್ಠಾತೃದೇವಿಯೂ, ಸರ್ವಶಕ್ತಿ
ಸ್ವರೂಪಿಣಿಯೂ, ಸರ್ವ ಜ್ಞಾನಾತ್ಮಳೂ ಪಾಹನಾಶಕಳೂ ಆದ ದೇವಿಯನ್ನ
ದುರ್ಗಿಯೆಂದು ಕರೆದರು,
ಅಹಂ
ರುದ್ರೇಭಿರ್ವಸುಭಿಶ್ಚರಾಮ್ಯಹಮಾದಿತ್ಯೈರುತ ವಿಶ್ವದೇವೈಃ |
ಅಹಂ ಮಿತ್ರಾವರುಣೋಭಾ
ಬಿಭರ್ಮ್ಯಹಮಿಂದ್ರಾಗ್ನೀ ಅಹಮಶ್ವಿನೋಭಾ ||
ಋಗ್ವೇದ 10-125-1
ಭಾವಾರ್ಥ:- ಪರಮೇಶ್ವರನ ಪ್ರತಿನಿಧಿಯಾದ ಪರಮೇಶ್ವರಿಯು ಜ್ಞಾನಶಕ್ತಿ, ಪೃಥಿವ್ಯಾದಿ ಅಷ್ಟ ವಸುಗಳಲ್ಲಿ ಪ್ರಾಣಾದಿಗಳಾದ ಏಕಾದಶ ರುದ್ರಗಳಲ್ಲಿ ೧೨
ಮಾಸಗಳಂತಿರುವ ಆದಿತ್ಯರಲ್ಲಿ ಇವುಗಳಲ್ಲಿ ನೆಲೆಸಿದ್ದು ಅಗ್ನಿ, ವಿದ್ಯುತ್,
ಹಗಲು, ರಾತ್ರಿ, ದ್ಯುಲೋಕ
ಮತ್ತು ಭೂಲೋಕ ಇವುಗಳೆಲ್ಲವನ್ನು ಧಾರಣೆ ಮಾಡಿರುತ್ತಾಳೆ. ಜ್ಞಾನ ಶಕ್ತಿಯು ಯಜ್ಞವನ್ನು ಧಾರಣೆ
ಮಾಡುತ್ತದೆ. (ಪರಮೇಶ್ವರಿಯು ಜ್ಞಾನಶಕ್ತಿಯಾಗಿ ವಸುಗಳು, ರುದ್ರರು
ಆದಿತ್ಯರು ಮತ್ತು ಸೂರ್ಯಚಂದ್ರರನ್ನು ಧಾರಣೆ ಮಾಡಿದವಳಾಗಿ ಸರ್ವತ್ರ ವ್ಯಾಪ್ತಳಾಗಿ ಮನುಷ್ಯರ
ಎಲ್ಲಾ ಕಾಮನೆಗಳನ್ನು ಪೂರ್ಣ ಮಾಡುವವಳಾಗಿದ್ದಾಳೆ).
ವೇದದಲ್ಲಿ,
ಬಲ ಸ್ವರೂಪನಾದ ಮುಖ್ಯ ಪ್ರಾಣನನ್ನು
”ಸಪ್ತಶಿವಾಸು ಮಾತೃಶು” ಎಂದು
ಕರೆಯುತ್ತಾರೆ. ಅಂದರೆ ಏಳು ಜನ ತಾಯಿಯಂದಿರಲ್ಲಿ
ನಿದ್ರಿಸುತ್ತಿರುವವ ವಾಯು ಎಂದರ್ಥ. ಯಾರು ಏಳು ಜನ ತಾಯಂದಿರು ಎಂದರೆ ಅವರು ನಮ್ಮ ದೇಹದಲ್ಲೇ
ಇರುವ ಕುಂಡಲಿನಿ ಚಕ್ರಗಳ ಅಧಿ ದೇವತೆಗಳು. ಪ್ರತಿಯೊಂದು
ಚಕ್ರವು ಒಂದು ನಿರ್ದಿಷ್ಟ ಗ್ರಂಥಿಯನ್ನು ಹಾಗೂ ಉಪಪ್ರಜ್ಞೆ ಮತ್ತು ಜಾಗೃತ ಮನಸ್ಸಿನ
ಸ್ಥಿತಿಗಳನ್ನು ಪ್ರತಿನಿಧಿಸುತ್ತದೆ. ನಮ್ಮ "ಪ್ರಾಣ" ಅಥವಾ "ಜೀವ
ಶಕ್ತಿ" ಯನ್ನು (ಉಸಿರನ್ನು) ಸಮತೋಲನಗೊಳಿಸುವುದರೊಂದಿಗೆ, (ಎಲ್ಲಾ
ಚಕ್ರಗಳಲ್ಲಿ ಹರಿಸುವುದರೊಂದಿಗೆ) ಮನಸ್ಸು, ದೇಹ ಮತ್ತು ಚೈತನ್ಯದ
ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳುವಲ್ಲಿ ಚಕ್ರ ವ್ಯವಸ್ಥೆಯು ಒಂದು
ಅವಿಭಾಜ್ಯ ಅಂಗವಾಗಿದೆ.
ಶ್ರೀಮದ್ಬಾಗವತದಲ್ಲೂ
ಇದರ ಬಗ್ಗೆ ಹೀಗಿದೆ, "ಅದು ದೇಹದಲ್ಲಿ ಏಳು ಮರೆಮಾಚಿದ
ಕಸ್ತೂರಿ ಚೀಲದ ಕೋಶಗಳು ಅದರಲ್ಲಿ ಕಾರ್ಯಕಾರಿ ಆಡಳಿತ ನಡೆಸುವ ದೇವರು ಅವರನ್ನು ಒಂದಾಗಿಸು ಮೂಲ
ಅರ್ಥಮಾಡಿಕೋ", ಋಗ್ವೇದದಲ್ಲೂ ಹೀಗಿದೆ "ಎಂಟು ಸಂಖ್ಯೆಯ ಸಂಗೀತದ ಸ್ತ್ರೀ ವ್ಯಕ್ತಿತ್ವಗಳಲ್ಲಿ
ಒಂದು (ಸ) ಬಲವನ್ನು ನಿಯೋಜಿಸಿ ವಿಸ್ತರಿಸಿ (ಸ ಎಂದು ಅಜಪ ಮಂತ್ರದೀ ಉಸಿರು ಒಳಗೆ ಎಳೆದುಕೊಳ್ಳಿ),
ಏಳು ಮಾತೆಯರನ್ನು (ಕುಂಡಲಿನಿ ಚಕ್ರಗಳನ್ನು) ಓಡುವ (ಹಂ) ಬಲವನ್ನು
ನಿಯೋಜಿಸಿ ಮಾನಸಿಕ ಏಕಾಗ್ರತೆಯಿಂದ ಚಲಿಸುತ್ತಾ ಗುರಿಯತ್ತ ಸಾಗು. (ಹಮ್ ಎಂದು ಮನಸಿನಲ್ಲಿ
ಜಪಿಸುತ್ತಾ ಉಸಿರನ್ನು ಸುಷುಮ್ನಾ ನಾಡಿ ಮುಖೇನ ಸಹಸ್ರಾರಕ್ಕೆ ತನ್ನಿ)" ಪತಂಜಲಿ ಯೋಗ
ಸೂತ್ರದಲ್ಲಿ "ಅವನ ವಿಷಯದಲ್ಲಿ ಜ್ಞಾನೋದಯದ ಅತ್ಯುನ್ನತ ಹಂತವನ್ನು ಏಳು ಹಂತಗಳಿಂದ
ತಲುಪಲಾಗುತ್ತದೆ."
ದುರ್ಗೆಯ
10 ಅವತಾರಗಳಲ್ಲಿ ಕಾಳಿ ಮೊದಲನೆಯ ತಾಯಿ. ಕ್ರೂರ ರಾಕ್ಷಸರಿಂದ ಸ್ವರ್ಗ ಮತ್ತು ಭೂಮಿಯನ್ನು
ರಕ್ಷಿಸಲು ಕಾಳಿಯು ದುರ್ಗೆಯ ಹಣೆಯಿಂದ ಜನಿಸಿದಳು. ಅಜ್ಞಾನದ ಕತ್ತಲೆಯನ್ನು ನಿವಾರಿಸಿ ಜ್ಞಾನದ
ಬೆಳಕನ್ನು ನೀಡುವ ಸನಾತನ ಧರ್ಮದ ವಿರೋದಿಗಳ ಮನಸ್ಸನ್ನು ಸಂಹರಿಸುವ ಜಗನ್ಮಾತೆ. ಕಾಳಿಯು ಅಹಂಕಾರ
ಮತ್ತು ಅಜ್ಞಾನವನ್ನು ನಾಶಪಡಿಸುತ್ತಾಳೆ ಮತ್ತು ಭಕ್ತರ ಹೃದಯದಲ್ಲಿ ಸುಜ್ಞಾನದ ದೀಪವನ್ನು
ಬೆಳಗಿಸುತ್ತಾಳೆ. ಕಾಳಿ ದೇವತೆಯು ಸುತ್ತಲಿನ ನಕಾರಾತ್ಮಕ ಅಲೆಗಳನ್ನು ನಿವಾರಿಸುತ್ತದೆ, ಎಲ್ಲಾ ರೀತಿಯ ಕಲ್ಮಶಗಳನ್ನು ಕಿತ್ತು ಸಂತೋಷವನ್ನು ತುಂಬುತ್ತದೆ ಎಂದು ನಂಬಲಾಗಿದೆ.
ಗಾಯತ್ರಿ = गायत्री = ग अ य त्र इ = ಅಕ್ಷರ
ಅರ್ಥದಲ್ಲಿ “ಮೂರನ್ನು ಸೇರಿಸಿ ಜೀವ ಉಸಿರನ್ನು
ಸರಿಸುತ್ತಾ ಒಂದು ನಿರ್ದಿಷ್ಟ ಸ್ಥಿತಿಗೆ ಇಳಿಸುವುದು”
ಮೂರು ಅಜಪ ಮಂತ್ರಗಳನ್ನು ಸೇರಿಸಿ ಜೀವ ಉಸಿರನ್ನು ಸರಿಸುತ್ತಾ ಒಂದು ನಿರ್ದಿಷ್ಟ ಧ್ಯಾನ
ಸ್ಥಿತಿಗೆ ಇಳಿಸುವುದೇ ಗಾಯತ್ರಿ ಎಂಬ ದೇವರ ಕೆಲಸವಾಗಿದೆ.
ಸಾವಿತ್ರಿ =
सावित्री = स अ व ई त्र इ = ಅಕ್ಷರ ಅರ್ಥದಲ್ಲಿ “ನಿರ್ದಿಷ್ಟವಾಗಿ ಪರಿಣಾಮಕಾರಿಯಾದ ಮಂತ್ರದಿಂದ ವಾಯುವು ಮೂರು ತಲುಪಿ ವ್ಯಾಪಿಸುತ್ತದೆ” ನಾಡಿಗಳಲ್ಲಿ ಮುಖ್ಯ
ನಾಡಿಗಳಾದ ಇಡಾ ಪಿಂಗಳ ಸುಷುಮ್ನಾ ಎಂಬ ಮೂರು
ನಾಡಿಗಳನ್ನು ವಾಯುವು ಪರಿಣಾಮಕಾರಿ ಮಂತ್ರದಿಂದ ಸೇರಿ ದೇಹದಾದ್ಯಂತ ವ್ಯಾಪಿಸುತ್ತದೆ. ಇಂತಹ
ಕಾರ್ಯದಲ್ಲಿ ಮಗ್ನರಾದ ದೇವರ ನಾಮವೇ ಸಾವಿತ್ರಿ.
ಸವಿತೃ
= सवितृ =
स व इ त र उ = ಅಕ್ಷರ
ಅರ್ಥದಲ್ಲಿ ಶಕ್ತಿಯುತವಾದ ಧ್ಯಾನ / ವಾಯು ಅಮೃತವನ್ನು ತಲುಪಲು ಘರ್ಜಿಸುವಂತೆ ಮಾಡುತ್ತದೆ, ಧ್ಯಾನದಲ್ಲಿ
ಅಮೃತವನ್ನು ತಲುಪಲು ಅರ್ಥಾತ್ ಉಸಿರಾಟದ ಧ್ಯಾನದಲ್ಲಿ ಅಮೃತವನ್ನು ಪಡೆಯುವಾಗ ಗಂಟಲಿನಲ್ಲಿ
ಗರ್ಜನೆಯ ಶಬ್ದ ಮಾಡುತ್ತದೆ.
ಸೂರ್ಯ = सूर्य = स ऊ र य = ಅಕ್ಷರ ಅರ್ಥದಲ್ಲಿ ಬೆಂಕಿ ಮತ್ತು ಬೆಳಕನ್ನು ರಕ್ಷಿಸುವ ಗಾಳಿ / ಧ್ಯಾನ. =
ಬೆಂಕಿ ಮತ್ತು ಬೆಳಕು ರಕ್ಷಿಸುವ ವಾಯು. ಅಥವಾ
ಬೆಂಕಿ ಮತ್ತು ಬೆಳಕು ರಕ್ಷಿಸುವ ಧ್ಯಾನ. ಇಲ್ಲಿ ಸೂರ್ಯ ಅಂದರೆ ಅಂತರಿಕ ಸೂರ್ಯ ಬೆಂಕಿ
ಮತ್ತು ಬೆಳಕನ್ನು ಧ್ಯಾನದಿ ರಕ್ಷಿಸುವವನು ಎಂದು ಒಂದು ಅರ್ಥವಾದರೆ. ಬಾಹ್ಯ ಸೂರ್ಯ ಬೆಂಕಿ ಮತ್ತು
ಬೆಳಕನ್ನು ರಕ್ಷಿಸುವ ವಾಯು ಸ್ವರೂಪನು ಎಂದೆನಿಸುವನು.
ವಿವರಣೆ:- ಇಲ್ಲಿವರೆಗೆ ವಿದ್ವಾಂಸರ ಪ್ರಕಾರ, "ಗಾಯತ್ರಿ' ದೇವಿ ಎಂದರೆ - ಇಂದ್ರಿಯಗಳ
ಸೂಕ್ಷ್ಮ ಶಕ್ತಿ, ಶತ್ರು ನಿಗ್ರಹ ಶಕ್ತಿ ಸಮರ್ಥಳು. ಜ್ಞಾನ ತೇಜೋರೂಪಿ.
ಇಂದ್ರಾದಿ ದೇವತೆಗಳ ನಿವಾಸಸ್ಥಾನಳು. ಸಮಸ್ತ ಜಗದ್ರೂಪಳು. ಪ್ರಪಂಚದ ಆಯುಷ್ಯ ಸ್ವರೂಪಳು. ಅವಳು
ಸರ್ವಾಯು. ಸಕಲಳು ಸಮಸ್ತ ಪಾಪ ಪರಿಹಾರಕ ಪ್ರಣವ ಸ್ವರೂಪಳು. ಇವಳು ಪರಾಶಕ್ತಿ ಇವಳನ್ನು
"ಸಾವಿತ್ರಿ' ಎಂದು ಕರೆಯುವಾಗ ಸೂರ್ಯ ಶಕ್ತಿಯ ಆರೋಪಣೆಯನ್ನು
ಅವಳಲ್ಲಿ ಹೊಂದಿಸುತಾರೆ. ಗಾಯಕರನ್ನು ರಕ್ಷಿಸುವ ಅಂಶವನ್ನು ಅವಳಲ್ಲಿ ಆರ್ವಿಭವಿಸಿ ಗಾಯತ್ರಿ
ಎನ್ನುತಾರೆ. ಶಬ್ದಬ್ರಹ್ಮ ಸ್ವರೂಪಿಣಿಯಾದದ್ದರಿಂದ ಅವಳು ಸರಸ್ವತಿ. ಅಂಥ ಆನಂದ ಸ್ವರೂಪಳು
ಆದ್ದರಿಂದ ಲಕ್ಷ್ಮಿ ಸಂಧಿಶಕ್ತಿಯಾಗಿ ಸಂಧ್ಯಾ ಅವಳ ವಿವಿಧ ಕಾರ್ಯಶಕ್ತಿಗಳನ್ನು ಅರ್ಥೈಸಿ
ಬೇರೆಬೇರೆ ಹೆಸರುಗಳಿಂದ ಕರೆಯುತ್ತಾರೆ.
ಓಂ ನಮೋ
ಸವಿತೃ ಸೂರ್ಯ ನಾರಾಯಣಾಯ ನಮಃ
ಅಕ್ಷರ ಅರ್ಥ:- “ಶ್ರೇಷ್ಠತೆಯು ಮಾಂತ್ರಿಕ ಸೂತ್ರದ ಹಿಡಿತವನ್ನು ಕರೆಯುವ ಓಂಕಾರವು, ಅವಿಭಜಿತ ನೀರಿನ ಕರುಣೆಯೊಂದಿಗೆ, ವಾಯು
ಅಮೃತವನ್ನು ತಲುಪಲು ಘರ್ಜಿಸು-ವಂತೆ
ಮಾಡುತ್ತದೆ, ಬೆಂಕಿ ಮತ್ತು ಬೆಳಕು ರಕ್ಷಿಸುವ ಧ್ಯಾನ, ಅವಿಶ್ರಾಂತವಾದ ಜೀವದ ಉಸಿರು ವಿಶೇಷವಾದ ಪರಿಣಾಮಕಾರಿ ಮಂತ್ರದೊಂದಿಗೆ ಸೇರಿಕೊಂಡು
ಮಿದುಳಿನ ನಾಸಿಕಕ್ಕೆ ಬೆಳಕನ್ನು ನೀಡುವುದು, ಅಂತಹ ಅವಿಭಜಿತ ನೀರು
ವೈದ್ಯತೆಯನ್ನು ನೀಡುವುದು”.
ವೈದ್ಯೋ ನಾರಾಯಣೋ ಹರಿ = वैद्यो नारायणो हरि
ಅಕ್ಷರಶಃ
ಅರ್ಥ :- ನಿಸ್ಸಂಶಯವಾಗಿ ಗಾಳಿ ಸಹಾನುಭೂತಿಯನ್ನು ನೀಡುವ, ಅವಿಶ್ರಾಂತವಾದ ಜೀವದ ಉಸಿರು ಕರೆದು ಮಿದುಳಿನ ನಾಸಿಕಕ್ಕೆ ಬೆಳಕನ್ನು ನೀಡುವ, ಚಲಿಸುವ ವೈದ್ಯತೆ. (वै ध य ओ = ನಿಸ್ಸಂಶಯವಾಗಿ ಗಾಳಿ
ಸಹಾನುಭೂತಿಯನ್ನು ನೀಡುವ, न अ रा य ण ओ = ಅವಿಶ್ರಾಂತವಾದ ಜೀವದ ಉಸಿರು ಕರೆದು ಮಿದುಳಿನ
ನಾಸಿಕಕ್ಕೆ ಬೆಳಕನ್ನು ನೀಡುವುದು, ह रि = ಚಲಿಸುವ ವೈದ್ಯತೆ)
"ಶರೀರೆ ಜರ್ಜರಿ ಭೂತೆ,
ವ್ಯಾಧಿಗ್ರಸ್ತೆ ಕಳೇಬರೆ ಔಷಧಂ ಜಾಹ್ನವೀ ತೋಯಂ ವೈದ್ಯೊ ನಾರಯಣೋಹರಿ''
ಎಂದು ಹೇಳುತ್ತಾ ಹಿಂದೆ ಔಷಧಿ ಸೇವಿಸುತ್ತಿದ್ದರು, ಇದರ ಮೂಲ ಅರ್ಥವನ್ನು ಗ್ರಹಿಸಿ.
ಭಾವಾರ್ಥ:-
ದೇಹವು ಕೃಶತೆಯನ್ನು ಪಡೆದಾಗ ರೋಗದಿಂದ ಪೀಡಿತ ದೇಹಕ್ಕೆ
ಔಷದವು, ಗಂಗಾ ನದಿಯ ವಿಶೇಷಣ ನೀರು, ನಿಸ್ಸಂಶಯವಾಗಿ ಗಾಳಿ ಸಹಾನುಭೂತಿಯನ್ನು ನೀಡುವ,
ಅವಿಶ್ರಾಂತವಾದ ಜೀವದ ಉಸಿರು ಕರೆದು ಮಿದುಳಿನ ನಾಸಿಕಕ್ಕೆ ಬೆಳಕನ್ನು ನೀಡುವ, ಚಲಿಸುವ ವೈದ್ಯತೆ.
ವಿವರಣೆ:-
ದೇಹದ ಪಂಚಭೂತಗಳು ಕೃಶತೆಯನ್ನು ಹೊಂದಿದಾಗ ದೇಹಕ್ಕೆ ರೋಗಗಳು ಪೀಡಿಸುತ್ತವೆ, ಅದಕ್ಕೆ ಔಷದವು ಪ್ರಾಣಾಯಾಮದಿಂದ ಸುಷುಮ್ನಾ ನಾಡಿಯಲ್ಲಿ ಹಾವಿ ರೂಪದ ಗಂಗೆಯಂತಾ
ಶ್ರೇಷ್ಠ ನೀರನ್ನು ಸಹಸ್ರಾರಕ್ಕೆ ತೆಗೆದುಕೊಂಡು ಹೋಗುವುದೇ ಚಲಿಸುವ ವೈದ್ಯತೆ, ಎನ್ನುವ ಅರ್ಥ ಇದೆ.
ವಾಸುದೇವ, ವಸುದೈವ ಕುಟುಂಬಕಮ್
ವಾಸುದೇವ = वासुदेव = वा सु दे व
ಅಕ್ಷರಶಃ
ಅರ್ಥ :- ಶಕ್ತಿಯುತವಾಗಿ ರಕ್ಷಿಸಲು ಅತ್ಯುತ್ತಮವಾದುದ್ದನ್ನು
ಚಲಿಸುವ (ಅಮೃತದಂತಹ ಚಲನೆಗೆ ಕಾರಣನಾಗುವ ವಾಸುದೇವ ಅದರಿಂದ ಶಕ್ತಿಯುತವಾಗಿ ರಕ್ಷಣೆ
ಮಾಡುತ್ತಾನೆ.)
"ಸತ್ತ್ವಂ
ವಿಶುದ್ಧಂ ವಸುದೇವ ಶಬ್ದಿತಮ್” ಎಂದು ಶ್ರೀಮದ್ ಭಾಗವತದಲ್ಲಿ (4.3.23) ಇದರ ಭಾವಾರ್ಥ, “ಒಬ್ಬನು ಶುದ್ಧ ಸತ್ತ್ವದಲ್ಲಿ ದಿವ್ಯ ಸನ್ನಿವೇಶಿತನಾದಾಗ, ವಸುದೇವನನ್ನು ಆರಾಧಿಸುತ್ತಾನೆ” ಅಂದರೆ ಭೌತಿಕ ಪ್ರಕೃತಿ ಗುಣಗಳಿಂದ ಸಂಪೂರ್ಣ
ಶುದ್ಧರಾದವರು ಮತ್ತು ದಿವ್ಯವಾಗಿ ಸನ್ನಿವೇಶಿತರು ಪರಮ ದೇವೋತ್ತಮ ಪುರುಷನನ್ನು (ಆತ್ಮಶಕ್ತಿಯನ್ನು)
ಸಮೀಪಿಸಬಹುದು. ವಾಸುದೇವನು ಸಾತ್ವಿಕರ ನಿರ್ಮಲಾಂತಃರಣದಲ್ಲಿ ಅಭಿವ್ಯಕ್ತನಾಗಿ-ರುವುದರಿಂದ
ಶ್ರೀಹರಿಯು ವಾಸುದೇವ ಎನಿಸುವನು. ಎಲ್ಲೆಡೆ ವಾಸಿಸಿಕೊಂಡಿರುವವನು, ಎಲ್ಲದರ
ವಾಸಕ್ಕೆ ಆಶ್ರಯನು, ಪ್ರಕಾಶಿಸುವವನು, ಬಲಸ್ವರೂಪಿ, ಪ್ರಾಣರೂಪಿ, ದಾನಮಾಡುವವನು, ಎಲ್ಲವನ್ನು ನಡೆಸುವವನು, ಈ ಎಲ್ಲ ಕಾರಣಗಳಿಗಾಗಿ ವೇದಗಳು ಅವನನ್ನು ವಾಸುದೇವ ಎಂದು ಕರೆಯುವವು. ಹೀಗೆ
ಸಾತ್ತ್ವಿಕರ ಅಂತಃಕರಣದಲ್ಲಿ ಪ್ರಕಾಶಿಸುವವನೆಂಬ ವಾಸು ದೇವನಾಮದ ವಿಮರ್ಶೆಯನ್ನು ಹಿಂದಿನ
ವಿದ್ವಾಂಸರು ಮಾಡಿರುವುದರಿಂದ ಇಂತಹ ಅರ್ಥಕ್ಕೆ ಪೂರಕವಾಗಿ ಅಕ್ಷರಶಃ ಅರ್ಥ ಬರುತ್ತದೆ.
ವಸುದೈವ ಕುಟುಂಬಕಮ್ = वसुदैव कुटुम्बकं = व सु द ऐ व क उ ट उ म ब क म =
ಅಕ್ಷರಶಃ
ಅರ್ಥ :- “ನೀರು ಬೆಂಕಿಯ ಮಾಂತ್ರಿಕ ಸೂತ್ರವನ್ನು ತುಟಿಯಂತ
ನಾಸಿಕಕ್ಕೆ (ಮೂಲಾಧಾರದಲ್ಲಿ ಇರುವ ಸುಷುಮ್ನಾ ನಾಡಿಯ ತುಟಿಯಂತಾ ನಾಸಿಕಕ್ಕೆ) ಘರ್ಜಿಸುವ ಧ್ವನಿಯ
ಶಕ್ತಿಯುತ ಗಾಳಿಯ ಹಿಡಿತಕ್ಕೆ ಕರೆದು ಆಹ್ವಾನಿಸುವ ಶಕ್ತಿಯುತ ಅತ್ಯುತ್ತಮ ಕೊಡುಗೆ”. ಪದಗಳ
ರೂಪದಲ್ಲಿ ವ್ಯಾಖ್ಯಾನಿಸಿದಾಗ “ಒಳ್ಳೆಯ ದೈವಿಕ ಕುಟುಂಬ” ಅಥವಾ “ದೇವತಾ ಕುಟುಂಬ” ಅಥವಾ “ಎಂಟು ದೈವಿಕ ಕುಟುಂಬ”, (ವಿಷ್ಣು ಪುರಾಣದಲ್ಲಿ ಅಷ್ಟವಸು (ಎಂಟು ವಸು ಯಾವುದೆಂದಾರೆ, - ಆಪ, (ಚಟುವಟಿಕೆಯಿಂದಿರುವ/ ನೀರು) ದೃವ,
(ಸ್ಥಿರವಾಗಿರುವ) ಸೋಮ, (ಅಮೃತ), ಧರ್ಮ (ನಡವಳಿಕೆ) ಅನಿಲ, (ವಾಯು) ಅನಾಲ, (ಅಗ್ನಿ) ಪ್ರತ್ಯಿಸ, (ವಿಸ್ತರಿಸಿರುವುದು) ಪ್ರಭಾಸ
(ಉಜ್ವಲ ಪ್ರಕಾಶದ) - ಇನ್ನೊಂದು ವ್ಯಾಖ್ಯಾನದಂತೆ, ಎಂಟು
ವಸುಗಳು, ಭೂಮಿ, ನೀರು, ಬೆಂಕಿ, ಗಾಳಿ, ಅಂತರಿಕ್ಷ,
ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು.), ಈ ಎಂಟು ದೈವಿಕ ಕುಟುಂಬ ಎಂದೂ ಹೇಳಬಹುದು. ಇಂತಹ ಎಂಟು ದೈವಿಕ ಕುಟುಂಬವನ್ನು
ಬಲ್ಲವರು ಅನುಷ್ಠಾನ ಮಾಡಿದವರು ವಸುದೈವ ಕುಟುಂಬಕಮ್ ವ್ಯಾಪ್ತಿಗೆ ಬರುತ್ತಾರೆ ಎನ್ನಬಹುದು.
ಇಲ್ಲಿ
ಕೆಲವು ಪದಗಳ ಅರ್ಥ ಸೂಕ್ತವಲ್ಲದ ಅರ್ಥ ಕೊಡುತ್ತಿದೆ. ಅಕ್ಷರಶಃ ಅರ್ಥದಲ್ಲಿ ಪ್ರಾಣಾಯಾಮದಲ್ಲಿ ಘರ್ಜಿಸುವ
ಧ್ವನಿಯ ಶಕ್ತಿಯುತ ಗಾಳಿಯ ಹಿಡಿತಕ್ಕೆ ಕರೆದು ಆಹ್ವಾನಿಸುವ ಶಕ್ತಿಯುತ ಅತ್ಯುತ್ತಮ ಕೊಡುಗೆ
ಎಂದರೆ ಅಜಪ ಮಂತ್ರದಿ ಉಸಿರಾಟ ಪ್ರಕ್ರಿಯೆ ಅತ್ಯುತ್ತಮ ಕೊಡುಗೆ ಇದು ಮಾಂತ್ರಿಕ ಸೂತ್ರವಾದ ಆತ್ಮ
ಶಕ್ತಿಯನ್ನು ಸಹಸ್ರಾರಕ್ಕೆ ಸುಷುಮ್ನಾ ನಾಡಿಯ ಮುಖೇನ ಚಲಿಸುವಂತೆ ಮಾಡುವುದು. ಇಂತಹ ದೈವಿಕ
ಶಕ್ತಿಯನ್ನು ಬಲ್ಲಂತವರನ್ನು ವಸುದೈವ
ಕುಟುಂಬಕಮ್ ಎಂದು ಕರೆಯಲಾಗುತ್ತಿತ್ತು, ಅದನ್ನು ವಿದ್ವಾಂಸರು ಕಾಲಕ್ಕೆ ತಕ್ಕನಾಗಿ ವಿವಿಧತೆಯಲ್ಲಿ ವ್ಯಾಖ್ಯಾನಿಸಿದ್ದಾರೆ.
“ಎಂಟು ದೈವಿಕ ಕುಟುಂಬ” ಎಂಬುದಕ್ಕೆ ಮೇಲಿನ ವಿವಾರಣಾತ್ಮಕ ಪದದ ಅರ್ಥವೂ ಇದರ ಸಮೀಪದಲ್ಲೇ ಇದೆ.
ಸಚ್ಚಿದಾನಂದ, ಇಂದ್ರಿಯ, ಮುದ್ರಾ
ಅಕ್ಷರಾರ್ಥ
ಸಚ್ಚಿದಾನಂದ
= ಸತ್ಚಿತಾನಂದ = सत्चितआनन्द
ಸತ್ ಚಿತ್
ಆನಂದ =
स त च इ त अ अ न न द
सत् = ಗಾಳಿ ಅಮೃತ,
चित् = ಅಮೃತವನ್ನು
ಸಂಗ್ರಹಿಸುವ, आनंद = ಬಾಗಿದ ಕೊಡುಗೆ
ಕಡೆಗೆ = ಅಕ್ಷರಶಃ ಅರ್ಥ :- ಗಾಳಿಯ ಅಮೃತವು
ಅಮೃತವನ್ನು ಸಂಗ್ರಹಿಸಿ ಬಾಗಿದ ಕೊಡುಗೆ ಕಡೆಗೆ (ಸುಷುಮ್ನಾ ನಾಡಿಯ ಕಡೆಗೆ) – ಇಲ್ಲಿ ಗಾಳಿಯ
ಅಮೃತ ಮತ್ತು ದ್ರವ ಅಮೃತ ಸಂಗ್ರಹಣೆ ಸುಷುಮ್ನಾ ನಾಡಿಯ ಕಡೆಗೆ ಚಲಿಸುವ ಪ್ರಕ್ರಿಯೆ. ಅಥವಾ “ವಾಯು ಅಮೃತವು ಗರ್ಭವನ್ನು ತಲುಪಲು
ಅತ್ತಿಂದಿತ್ತ ಚಲಿಸುತ್ತದೆ ಹಿರಿಮೆಯ ಜೀವದ ಉಸಿರು ಅವಿಶ್ರಾಂತ ಅವಿಭಜಿತ ಕೊಡುಗೆ.”
ಸ್ವಾಮಿ ದಯಾನಂದರು ಹೇಳುವಂತೆ – “ಯಾವಾಗ ಮಾನವ ಅಷ್ಟಾಂಗಯೋಗದ ಸಾಧನೆಯ
ಮೂಲಕ ಹಾಗೂ ಉಪಾಸನೆಯ ಮೂಲಕ, ಸಕಲ ಕ್ಲೇಶ ಅರ್ಥಾತ್ ಅವಿದ್ಯಾ,
ಅಸ್ಮಿತಾ, ರಾಗ ದ್ವೇಷ ಮೊದಲಾದ ಸಕಲ
ಕ್ಲೇಶಗಳಿಂದ ಮುಕ್ತನಾಗಿ, ಪರಿಶುದ್ಧ ಆತ್ಮ ಮತ್ತು
ಬುದ್ಧಿಯುಳ್ಳವನಾಗುತ್ತಾನೋ, ಆಗ ಅವನು ಸಚ್ಚಿದಾನಂದ ಸ್ವರೂಪನಾದ
ಪರಮಾತ್ಮನ ಸಾನ್ನಿಧ್ಯದಲ್ಲಿ ಇದ್ದು, ತನ್ಮೂಲಕ, ಸಕಲ ಶ್ರೇಷ್ಠಗುಣ ಮತ್ತು ಶಕ್ತಿಗಳನ್ನು ಪ್ರಾಪ್ತ ಮಾಡಿಕೊಂಡು, ಸಂಪೂರ್ಣ ಜ್ಞಾನ ಜ್ಯೋತಿಯಿಂದ ಕಂಗೊಳಿಸುತ್ತಾ, ಅತ್ಯಂತ
ಉತ್ತಮ ಹಾಗೂ ಉನ್ನತವಾದ ಸ್ಥಾನವನ್ನು ಹೊಂದಿ, ಸದಾಕಾಲ ಆನಂದವನ್ನು
ಅನುಭವಿಸುತ್ತಾನೆ ಹಾಗೂ ಪ್ರಾಣಿಮಾತ್ರರಿಗೆ ಸದಾ ಸುಖ ಮತ್ತು ಕಲ್ಯಾಣವನ್ನೇ ಉಂಟು ಮಾಡುತ್ತಾನೆ.
ಅವನ ಸಂಪರ್ಕದಲ್ಲಿ ಮತ್ತು ಸಾನ್ನಿಧ್ಯದಲ್ಲಿ ಬಂದ ಪ್ರತಿಯೊಬ್ಬ ಮಾನವನು ಮಾತ್ರವಲ್ಲ, ಪ್ರಾಣಿಗಳು ಕೂಡ ಸುಖ ಮತ್ತು ಶಾಂತಿಯನ್ನೇ ಪ್ರಾಪ್ತ ಮಾಡುತ್ತವೆ”.
ಶಂಕರಾಚಾರ್ಯರ ಮಾತಿನಲ್ಲಿ ಅದ್ವೈತವಾದ ಸತ್-ಚಿತ್-ಆನಂದ. ಸದ್ವಿಚಾರದಿಂದ
ಬ್ರಹ್ಮನೇ ಆತ್ಮ ಅದು "ಅಹಂ' ಅಥವಾ "ನಾನು' ಎನ್ನುವುದರಿಂದ ಮುಚ್ಚಿದೆ ಎಂಬುದನ್ನು ತಿಳಿಯಬೇಕು. ಹೀಗೆ ದಶಶ್ಲೋಕಿಯಲ್ಲಿ ಶಂಕರರು
ಪರಮ ತತ್ವದ ಪರಾಸತ್ಯವನ್ನು ಸಾರಿದ್ದಾರೆ. “ಆತ್ಮವೆನ್ನುವುದು
ಸಚ್ಚಿದಾನಂದ ಸ್ವರೂಪವಾದುದು. ಅದು ವಿರೂಪಗೊಳ್ಳದ್ದು, ವ್ಯತ್ಯಾಸವಾಗದ್ದು
ಕ್ಷೋಭೆಗೊಳ್ಳದ, ಕ್ಷೋಭೆಗೊಳಿಸಲಾರದ ಸಮುದ್ರದಂತೆ. ಅದರ ಮುಖ್ಯ
ಸ್ವಭಾವವು ಸತ್-ಚಿತ್-ಅನಂದ ಎಂಬ ಸೂತ್ರದಲ್ಲಿ ವ್ಯಕ್ತವಾಗಿದೆ. ಸತ್-ಚಿತ್-ಆನಂದ ಎಂಬುದು
ಪರಸ್ಪರ ಭೇದವುಳ್ಳ ಅತ್ಮದ ಸ್ವಭಾವಗಳೆಂದು ತಿಳಿಯಬಾರದು”. ಮಹನೀಯರ ಬೋಧನೆಗಳು ಅಕ್ಷರ ಅರ್ಥದ
ವಿಸ್ತಾರ ನಿರೂಪಣೆಯಾಗಿದೆ.
ಇಂದ್ರಿಯ = इन्द्रिय = इ न द रि य
ಅಕ್ಷರಶಃ
ಅರ್ಥ :- ಅವಿಶ್ರಾಂತವಾಗಿ
ಬರಲು ಬೆಳಕಿನ ಚಲನೆಗೆ ಕಾರಣವಾಗುತ್ತದೆ. (ಶಬ್ದ, ಸ್ಪರ್ಶ,
ರೂಪ, ರಸ ಮತ್ತು ಗಂಧ ಅವಿಶ್ರಾಂತವಾಗಿ ಬರಲು ದೈಹಿಕ
ಮತ್ತು ಮಾನಸಿಕ ಪ್ರಕಾಶಮಾನತೆ ಚಲನೆಗೆ ಕಾರಣವಾಗುತ್ತದೆ,)
ಸಾಮಾನ್ಯವಾಗಿ
ಇಂದ್ರಿಯಗಳನ್ನು ಪಂಚ ವಿಷಯಗಳನ್ನಾಗಿ ವಿಂಗಡಿಸಬಹುದು. ಇವುಗಳನ್ನು ಶಬ್ದ, ಸ್ಪರ್ಶ, ರೂಪ, ರಸ
ಮತ್ತು ಗಂಧ ಎಂದು ತಿಳಿಯಬೇಕು. ಇಡೀ ವಿಶ್ವದಲ್ಲಿರುವ ಸಕಲ ವಸ್ತುಗಳನ್ನೂ ಐದು ಇಂದ್ರಿಯಗಳಿಂದಲೇ
ನಾವು ತಿಳಿಯುತ್ತೇವೆ. ಒಂದೊಂದು ಇಂದ್ರಿಯವೂ ತನ್ನ ತನ್ನ ವಿಷಯವನ್ನು ವಿಜ್ಞಾನಾತ್ಮನಾದ
ಶರೀರಿಯೆಂಬ ಜೀವಾತ್ಮನಿಗೆ ತಿಳಿಸುತ್ತವೆ. ಪ್ರಾಣಮಯಕೋಶ ಎಂದರೆ ಇಂದ್ರಿಯ ಪ್ರಾಣಗಳಿಂದಾಗಿರುವ
ಕೋಶ. ಪ್ರಾಣನಿಂದಲೇ ಶರೀರವು ತನ್ನ ವ್ಯಾಪಾರಗಳನ್ನು ಮಾಡುತ್ತಾ ಇದೆ. ಎಲ್ಲಾ ಇಂದ್ರಿಯಗಳನ್ನೂ
ತಮ್ಮ ತಮ್ಮ ಕೆಲಸಕಾರ್ಯಗಳಲ್ಲಿ ಚೆನ್ನಾಗಿ ಪ್ರೇರಿಸುವವನೇ ಪ್ರಾಣನು. ಇವನೇ ಮುಖ್ಯ ಪ್ರಾಣನು.
ಭಿನ್ನಭಿನ್ನ ವ್ಯಾಪಾರಗಳಿಂದ ಈ ಪ್ರಾಣನಿಗೇ ಐದು ಭಿನ್ನ ಭಿನ್ನ ಹೆಸರುಗಳು ಬಂದಿರುತ್ತವೆ. ಪ್ರಾಣ,
ಅಪಾನ, ವ್ಯಾನ, ಉದಾನ
ಮತ್ತು ಸಮಾನಗಳು. ಪಂಚಪ್ರಾಣಗಳಿಂದಲೇ ಈ ದೇಹವು ಬದುಕಿರುತ್ತದೆ. ಇಂತಹ ಇಂದ್ರಿಯ ಪ್ರೇರಕ ಪ್ರಾಣನು
ನಿರಂತರವಾಗಿ ಬರಲು ಬೆಳಕಿನ ಚಲನೆಗೆ ಕಾರಣವಾಗುತ್ತದೆ. ನಮ್ಮ ಶರೀರದಲ್ಲಿ ಜೀವಾತ್ಮ ಹಾಗೂ
ಪ್ರಾಣವಾಯು ಜೀವನ ಪರ್ಯಂತ ಸದಾಕಾಲ ವಿದ್ಯಮಾನವಾಗಿದ್ದು ಸಪ್ತಧಾತುಗಳಲ್ಲಿ ಮತ್ತು ಸಮಸ್ತ
ಇಂದ್ರಿಯಗಳಲ್ಲಿ ಪ್ರಾಣಶಕ್ತಿಯನ್ನು ಚೈತನ್ಯತೆಯನ್ನು ಉಂಟು ಮಾಡುತ್ತವೆ ಹಾಗೂ ಈ ಶರೀರದ ಧಾರಣ,
ಪಾಲನೆ, ಪೋಷಣೆ ವೃದ್ಧಿ ಮತ್ತು ವಿಕಾಸವನ್ನುಂಟು
ಮಾಡುತ್ತವೆ. ಬಾಹ್ಯ ಶುಚಿಯುಳ್ಳವರಾಗಬೇಕು ಮನಸ್ಸು, ಅಂತಃಕರಣ,
ಇಂದ್ರಿಯಗಳನ್ನು ನಿರ್ಮಲವನ್ನಾಗಿ ಮಾಡಬೇಕು ಇದರಿಂದ ಸರ್ವಾರ್ಥಸಿದ್ಧಿಯು ಬೆಳಕಿನ
ಚಾಲನೆ ಪ್ರಾಪ್ತವಾಗುತ್ತದೆ. ಪರಮಾತ್ಮನು
ನಿರಾಕಾರನೂ, ನಿರ್ವಿಕಾರನೂ, ಸರ್ವವ್ಯಾಪಕನೂ,
ಸರ್ವಾಂತರ್ಯಾಮಿಯೂ ಆಗಿದ್ದಾನೆ. ಪರಮಾತ್ಮನು ಸಕಲ ವಸ್ತುವಿನಲ್ಲಿ ಇದ್ದಾನೆ,
ಸಕಲ ವಸ್ತುವಲ್ಲ. ಸಕಲ ಪದಾರ್ಥದಲ್ಲಿಯೂ ಇದ್ದಾನೆ, ಸಕಲ ಪದಾರ್ಥವಲ್ಲಿ ಮಾತ್ರವಲ್ಲ ಜೀವಮಾತ್ರರಲ್ಲಿ ಇದ್ದಾನೆ, ಆದರೆ ಜೀವಮಾತ್ರನಲ್ಲಿ ಮಾತ್ರವಲ್ಲ ಅವನು ಸರ್ವಪ್ರಕಾಶ ಸ್ವರೂಪನೂ, ಎಲ್ಲವನ್ನೂ ಪ್ರಕಾಶಿಸುವವನೂ ಆಗಿದ್ದಾನೆ, ಪ್ರಕಾಶಿಸಲ್ಪಡದ
ಯಾವುದೇ ವಸ್ತು ಪರಮಾತ್ಮನಲ್ಲ. ಅವನಿಂದ ಶಕ್ತಿಯನ್ನು ಪಡೆದು ಎಲ್ಲಾ ಇಂದ್ರಿಯಗಳು ಕೆಲಸ
ಮಾಡುತ್ತವೆ. ಆದರೆ ಅವನು ಇಂದ್ರಿಯಾತೀತನೂ ಯಾವುದೇ ಇಂದ್ರಿಯಗಳಿಂದಲೂ ತಿಳಿಯಲಸಾಧ್ಯನಾದವನೂ,
ಅವರ್ಣನೀಯನೂ, ಅನಿರ್ವಚನೀ-ಯನೂ, ಗುಣಾತೀತನೂ ಆಗಿದ್ದಾನೆ. ನಮ್ಮೆಲ್ಲರ ಸಮಸ್ತ ಇಂದ್ರಿಯಗಳಲ್ಲಿರುವ ದೋಷಗಳನ್ನು
ನಿವಾರಣೆ ಮಾಡುತ್ತಾ, ಸದಾ ಶ್ರೇಷ್ಠ ಕರ್ಮಗಳಲ್ಲಿಯೇ
ಪ್ರವೃತ್ತವಾಗುವಂತೆ ಮಾಡುತ್ತಾ ಅವನ ಜ್ಞಾನ ಪ್ರಕಾಶದ ಮೂಲಕ ನಮ್ಮೆಲ್ಲರ ಆಜ್ಞಾನಾಂಧಕಾರವನ್ನು
ನಷ್ಟ ಮಾಡುತ್ತಾನೆ. ಜೀವಾತ್ಮ ಮತ್ತು ಪರಮಾತ್ಮ ಇವರಿಬ್ಬರು ಅತ್ಯಂತ ಪ್ರಕಾಶವುಳ್ಳವರು.
ಇಬ್ಬರಲ್ಲಿಯೂ ಅಪರಿಮಿತವಾದ ಬಲವಿದೆ. ಪರಮಾತ್ಮನಿಂದ ಜೀವಾತ್ಮನು ಪ್ರಕಾಶವನ್ನೂ ಬಲವನ್ನೂ
ಪ್ರಾಪ್ತ ಮಾಡಿಕೊಳ್ಳುತ್ತಾನೆ. ಆತ್ಮನಿಂದ ಇಂದ್ರಿಯಗಳು ಮತ್ತು ಅಂತಃಕರಣ ಎಂದರೆ ಬುದ್ಧಿ ಚಿತ್ತ
ಮತ್ತು ಅಹಂಕಾರ ಇವೆಲ್ಲವೂ ಪ್ರಕಾಶಿತವಾಗುತ್ತವೆ.
ಮುದ್ರಾ = मुद्रा = मु द रा
ಅಕ್ಷರಶಃ
ಅರ್ಥ :- ಕಟ್ಟುವಿಕೆಯಿಂದ ಪ್ರಕಾಶಮಾನವಾದ ಚಿನ್ನ ನೀಡುತ್ತದೆ
ಪದ
ಅರ್ಥದಲ್ಲಿ “ಭಕ್ತಿ ಅಥವಾ ಧಾರ್ಮಿಕ ಆರಾಧನೆಯಲ್ಲಿ ಅಭ್ಯಾಸ ಮಾಡುವ ಬೆರಳುಗಳ ಕೆಲವು ಸ್ಥಾನಗಳು” – ಅಕ್ಷರ ಅರ್ಥದಲ್ಲಿ ಬೆರಳುಗಳನ್ನು ಇತರೆ ಅಂಗಗಳನ್ನು ವಿಶಿಷ್ಟ ರೀತಿಯಲ್ಲಿ
ಬಂದಿಸುವ ಕೆಲವು ಕ್ರಿಯೆಗಳಿಂದ ಚಿನ್ನದಂತಾ ಪ್ರಕಾಶಮಾನತೆಯನ್ನು ದೈಹಿಕವಾಗಿ ಹೊಂದಬಹುದು ಎಂದು
ತಿಳಿಸುತ್ತಿದೆ.
ಮುದ್ರೆಗಳು
ದೇಹದ ನಿರ್ದಿಷ್ಟ ಅಂಗಕ್ಕೆ ಅಗತ್ಯವಿರುವಲ್ಲಿ ಶಕ್ತಿಯ ಹರಿವನ್ನು ಸಕ್ರಿಯಗೊಳಿಸುತ್ತವೆ ಮತ್ತು
ನಿರ್ದೇಶಿಸುತ್ತವೆ. ಈ ವರ್ಧಿತ ಶಕ್ತಿಯ ಹರಿವು ನಂತರ ಆ ಅಂಗದಲ್ಲಿನ ಅನಾರೋಗ್ಯದ ವಿರುದ್ಧ
ಹೋರಾಡುತ್ತದೆ. ಇದರ ಜೊತೆಗೆ ದೇಹದ ಸುತ್ತಲೂ ಕ್ರಿಯಾತ್ಮಕ ರಕ್ಷಣಾತ್ಮಕ ಹೊದಿಕೆಯನ್ನು
ರಚಿಸಲಾಗುತ್ತದೆ ಇದರಿಂದ ಅನಾರೋಗ್ಯದ ಮತ್ತಷ್ಟು ಆಕ್ರಮಣವನ್ನು ತಡೆಯಲಾಗುತ್ತದೆ. ಮುದ್ರೆಗಳು
ಸೂಕ್ಷ್ಮ ಕಪ್ಪು ಶಕ್ತಿಯನ್ನು ಹೊರಹಾಕಲು ರೋಗಗ್ರಸ್ತ ಕೋಶಗಳ ಶಕ್ತಿಯನ್ನು ಹೆಚ್ಚಿಸುತ್ತವೆ,
ಇದರಿಂದಾಗಿ ಸೂಕ್ಷ್ಮ ಮಟ್ಟದಲ್ಲಿ ಹೋರಾಡಲು ದೇಹದ ಜೀವಕೋಶದ ಶಕ್ತಿಯನ್ನು
ಹೆಚ್ಚಿಸುತ್ತದೆ.
ಕಾಲಿಕಾಪುರಾಣ:- ಯೋಗಾಭ್ಯಾಸದಲ್ಲಿ, ದೇವತಾ ಧ್ಯಾನ ಅರ್ಚನಾದಿಗಳಲ್ಲಿ ಮುದ್ರೆಗಳನ್ನು
ಉಪಯೋಗಿಸದೆ ಮಾಡುವ ಪ್ರಾಣಾಯಾಮ ಧ್ಯಾನ ಅರ್ಚನೆಗಳು ನಿಷ್ಟಲವಾಗುವವು. ದೇವತೆಗಳನ್ನು
ವೂಜೆಮಾಡುವಾಗ, ಧ್ಯಾನಮಾಡುವಾಗ, ಯಜ್ಞಾ-ದಿಕರ್ಮಗಳಲ್ಲಿ,
ಸ್ತೋತ್ರಮಾಡುವಾಗ, ಹಸ್ತಶುದ್ಧಿಗೋಸ್ಕರ ಎರಡು ಕೈಗಳಿಂದಲೂ
ಮುದ್ರಾ ಪ್ರದರ್ಶನವನ್ನು ಮಾಡಿದರೆ ಇಷ್ಟಾರ್ಥವು ಕೈಗೂಡುವುದು.
ಭವಿಷ್ಯಪುರಾಣ:- ಮುದ್ರಾಬಂಧನ ಮಾಡಿದ ಕ್ಷಣದಲ್ಲಿ, ಆ ಮನುಷ್ಯನಲ್ಲಿ ಇರಬಹುದಾದ
ವ್ಯಾಧಿಗಳೆಲ್ಲಾ ನಾಶವಾಗುತ್ತವೆ. ಮುದ್ರಾ ಬಂಧನ ಮಾಡದಿದ್ದರೆ ಯಾವ ಸಾಧಕನೂ ಸಿದ್ದಿ ಹೊಂದಲಾರನು.
ಮುದ್ರಾಬಂಧನವು ಯಾವಾಗಲೂ ಆಯಸ್ಸು ಆರೋಗ್ಯ ಇವುಗಳನ್ನು ವೃದ್ಧಿಮಾಡುವುದು.
ಎರಡು
ಹಸ್ತಗಳನ್ನು ಕೂಡಿಸಿ ಕರ್ಮಜ್ಞಾನ ಸಮುಚ್ಛಯವೆಂಬ ಸೂಚನೆ ಮಾಡುವದಾಗಿ ಮೋಕ್ಷವೆಂಬ ಪಕ್ಷಿಗೆ ಕರ್ಮಜ್ಞಾನ
ಎರಡು ರೆಕ್ಕೆಗಳಿದ್ದಂತೆ ಎಂದು ರಾಮಾನುಜಾ-ಚಾರ್ಯರು ವಂದನಾ ಮುದ್ರೆಯ ಸೂಚನೆಯನ್ನು ಹೇಳಿದ್ದಾರೆ.
ಬಲಗೈ ಹೆಬ್ಬೆರಳು ಮತ್ತು ಅದರ ಹತ್ತಿರವಿರುವ ಎರಡನೆಯ ಬೆರಳು ಇವುಗಳ ತುದಿಯನ್ನು ಕೂಡಿಸಿ ಎಡಗೈ
ಕೆಳಗೆ ಮಾಡಿ ಅದರ ಅಂಗೈಯಲ್ಲಿ ಬಲಗೈಯನ್ನು ಇರಿಸಿದರೆ ಅದಕ್ಕೆ ಜ್ಞಾನ ಮುದ್ರೆಯೆಂದು ಹೇಳುವರು.
ಕೈ
ಬೆರಳುಗಳನ್ನು ಬಳಸಿ ನೂರಾರು ರೀತಿಯ ಗೌರವ ಸೂಚನೆಯ ಅಭಿವ್ಯಕ್ತಿಗಳನ್ನು ಮಾಡಲಾಗುತ್ತದೆ.
ನಮಸ್ಕಾರ ಮುದ್ರೆಯಿಂದ ನಾಡಿಗಳು ಉದ್ದೀಪನಗೊಂಡು
ಜ್ಞಾನಾಂಜನ ಎಚ್ಚರಗೊಳ್ಳುತ್ತದೆ. ಕಿರಿಯರು ಹಿರಿಯರಿಗೆ ಮತ್ತು ಗುರುಗಳಿಗೆ ನಮಸ್ಕರಿಸುವಾಗ
ದೇಹದಲ್ಲಿನ ಪರಮೋಚ್ಚ ಶಕ್ತಿಗಳು ಜಾಗೃತವಾಗುತ್ತವೆ. ರಜೋ ಮತ್ತು ತಮೋ ಗುಣಗಳು ಕಡಮೆಯಾಗಿ ಸತ್ವ
ಉಜ್ಜಲವಾಗುತ್ತವೆ. ಇದನ್ನು ಮನುಸ್ಮೃತಿ ಅಧ್ಯಾಯ: 2.120 ರಲ್ಲಿ, ಮಹಾಭಾರತ
ಉದ್ಯೋಗ ಪರ್ವದ ಅಧ್ಯಾಯ 38.1 ರಲ್ಲಿ ಹೇಳಲಾಗಿದೆ. ದೇವರಿಗೆ ನಮಸ್ಕರಿಸುವಾಗ ಕೈ ಬೆರಳುಗಳನ್ನು
ಸಡಿಲವಾಗಿ ಬಿಡಬೇಕು, ಬೆರಳುಗಳು ಒಂದಕ್ಕೊಂದು ಸೇರಿಕೊಂಡಿರಬೇಕು,
ಹೆಬ್ಬೆರಳು ಉಳಿದ ಬೆರಳುಗಳಿಂದ ದೂರವಿರಬೇಕು, ಹಸ್ತದ
ಒಳಭಾಗ ಪರಸರ ಒತ್ತಿಕೊಂಡಂತೆ ಇರದೆ ಸ್ವಲ್ಪ ಸ್ಥಳವಿರಬೇಕು. ತಲೆಯನ್ನು ಸ್ಪಲ್ಪ ಬಾಗಿಸಿ
ಕೈಗಳನ್ನು ಹಣೆಯ ಬಳಿ ತರಬೇಕು. ಹೆಬ್ಬೆರಳುಗಳನ್ನು ಭ್ರೂ ಮಧ್ಯವನ್ನು ತಾಕುವಂತೆ ಇರಿಸಬೇಕು.
ದೃಷ್ಟಿಯು ದೈವದ ಪಾದಗಳ ಮೇಲೆ ಕೇಂದ್ರೀಕರಿಸಲ್ಪಟ್ಟಿರಬೇಕು. ಇದರಿಂದ ನಾಭಿಯ ಮೇಲೆ ಒತ್ತಡ
ಬಿದ್ದು ಆತ್ಮಶಕ್ತಿ ಜಾಗೃತವಾಗುತ್ತದೆ. ಆತ್ಮ ಶಕ್ತಿಯೂ ಆಜ್ಞಾಚಕ್ರದ ಮೂಲಕ ಹಾಗೂ ಶಿರಸ್ಸಿನ
ಬ್ರಹ್ಮರಂಧ್ರದ ಮೂಲಕ ಎದೆಯ ಭಾಗದಲ್ಲಿನ ಅನಾಹತ ಚಕ್ರದಲ್ಲಿ ಪ್ರವೇಶಿಸಿ ದೇಹದಲ್ಲಿ
ಹರಡಿಕೊಳ್ಳುತ್ತದೆ. ನಂತರ ಕೈಗಳನ್ನು ಬಿಡಿಸದೇ ಹಾಗೇಯೇ ಕೆಳ ತಂದು ಎದೆಯ ಭಾಗಕ್ಕೆ ತರಬೇಕು. ಆಗ
ಧನಾತ್ಮಕ ಶಕ್ತಿಯು ಸೃಷ್ಟಿಯಾಗಿ ಅದರ ಫಲ ನಮಸ್ಕರಿಸುವ ವ್ಯಕ್ತಿಗೆ ದೊರೆಯುತ್ತದೆ. ನಮಸ್ಕರಿಸುವಾಗ
ಹಸ್ತಗಳು ಬಿಗಿದುಕೊಂಡಿದ್ದಲ್ಲಿ ಮನಸ್ಸು ಉದ್ದಿಜ್ಞತೆಗೊಳಗಾಗಿ ಸತ್ವದ ಅಂಶ
ಬಿಡುಗಡೆಯಾಗುವುದಿಲ್ಲ. ಒಟ್ಟುಗೂಡಿಸಲ್ಪಟ್ಟ ಶಕ್ತಿಯ ಅಂಶ ಚದುರಿ ಹೋಗುತ್ತದೆ. ದೇಹದ ಚಕ್ರಗಳಾದ ವಿಶುದ್ಧ ಚಕ್ರವು ಉದ್ದೀಪ-ನಗೊಳ್ಳಲೆಂಬ
ಉದ್ದೇಶದಿಂದ ದೇವಾಲಯದಲ್ಲಿ ವಸ್ತ್ರ ಮುಚ್ಚಿ-ಕೊಳ್ಳುವುದನ್ನು ಮತ್ತು ಅಂಗಿ ಧರಿಸುವುನ್ನು ತಡೆಯುತ್ತಾರೆ.
ದೇವಾಲಯಗಳಲ್ಲಿ
ನಮಸ್ಕರಿಸುವಾಗ ತಲೆಗೆ ವಸ್ತ್ರಗಳನ್ನು ಧರಿಸಿರಬಾರದು ಎನ್ನುತ್ತಾರೆ. ನಮಸ್ಕರಿಸುವಾಗ ದೇಹದಲ್ಲಿನ
ಕುಂಡಲಿನಿ ಶಕ್ತಿಗಳು ಜಾಗೃತವಾಗುತ್ತಾ ಹೋಗುವುದರಿಂದ ಅವು ಬಹ್ಮರಂಧ್ರದಿಂದ ದೇಹವನ್ನು
ಪ್ರವೇಶಿಸುತ್ತವೆ.
ದೇಹದ ಆಧ್ಯಾತ್ಮಿಕ ಶಕ್ತಿಗಳನ್ನು ಜಾಗೃತಗೊಳಿಸುವ
ಅಂಜಲಿ ಮುದ್ರಾ ನಮಸ್ಕಾರಗಳನ್ನು ಮೃತ ದೇಹಕ್ಕೆ. ಮಾಡಬಾರದು ಎನ್ನುತ್ತಾರೆ. ಪ್ರಜ್ಞೆ ಇಲ್ಲದ
ದೇಹಕ್ಕೆ ನಿದಿಸುತ್ತಿರುವವರಿಗೆ ನಮಸ್ಕರಿಸುವುದು ಅಶ್ರೇಯಸ್ಸು ಎನ್ನಲಾಗುತ್ತದೆ.
ದೇವರ ವಿಗ್ರಹಕ್ಕೆ ಅಥವಾ ಸಂತರಿಗೆ
ನಮಸ್ಕರಿಸುವಾಗ ಕಣ್ಣುಗಳನ್ನು ಮುಚ್ಚಿರಬೇಕು ಎನ್ನುತ್ತಾರೆ. ಇದರಿಂದ ದೇಹದಲ್ಲಿನ ದೈವೀಕ
ಪ್ರಜ್ಞೆ ಜಾಗೃತವಾಗುತ್ತದೆ ಎನ್ನಲಾಗಿದೆ. ನಮಸ್ಕರಿಸುವಾಗ ಪಾದರಕ್ಷೆಗಳನ್ನು ಧರಿಸಿರಬಾರದು, ಇದು ನಮ್ಮಲ್ಲಿ ಇರುವ
ನಕಾರಾತ್ಮಕ ಶಕ್ತಿ ದೇಹದಲ್ಲೇ ಉಳಿದು ಬಿಡುತ್ತದೆ ಎಂಬ ಪ್ರತೀತಿ ಇದೆ.
ಕರ್ಮ, ಜ್ಞಾನ, ಕ್ಷತ್ರಿಯ, ವೈಶ್ಯ,
ಶೂದ್ರ, ವರ್ಣ ಅಕ್ಷರಶಃ ಅರ್ಥ
ಕರ್ಮ = कर्म = क र म
ಅಕ್ಷರಶಃ
ಅರ್ಥ :- ದೇಹವು ಮಾಂತ್ರಿಕ ಸೂತ್ರವನ್ನು ಪಡೆಯುತ್ತದೆ (ನಮ್ಮ
ಕಾರ್ಯ ಹೇಗಿರುತ್ತದೋ ಅಂತಹ ನಿಗೂಡ ವಿಧಾನ ದೇಹ ಪಡೆಯುತ್ತದೆ)
ಛಾಂದೋಗ್ಯ ಉಪನಿಷತ್ತಿನಲ್ಲಿ ಹೇಳಿರುವಂತೆ: "ಯದೇವ ವಿದ್ಯಯಾ ಕರೋತಿ ಶ್ರದ್ಧೆಯ ಉಪನಿಷದಾ, ತದೇವ ವೀರ್ಯವತ್ತರಂ ಭವತಿ,
ವಿಜ್ಞಾನಂ ಯಜ್ಞಾಂ ತನುತೇ". ಇದರ
ಅರ್ಥ, “ನೀನು ಏನನ್ನು ಮಾಡಿದರೂ ತಿಳಿದು ಮಾಡು. ಜ್ಞಾನಪೂರ್ವಕವಾಗಿ
ಮಾಡಿದ ಕರ್ಮ ಸಫಲ. ಇಲ್ಲದಿದ್ದರೆ ಅದು ವ್ಯರ್ಥ”. ಅಂತಹ ಜ್ಞಾನ ಪೂರ್ವಕ ಕರ್ಮ ಮಾಡುವುದರಿಂದ
ದೇಹಕ್ಕೆ ಮಾಂತ್ರಿಕ ಸೂತ್ರವು ಒದಗಿ ಬರುತ್ತದೆ.
ರಂಗನಾಥ
ರಾಮಚಂದ್ರ ದಿವಾಕರ ಅವರ ಕರ್ಮಯೋಗ ಗ್ರಂಥದಲ್ಲಿ ಹೀಗೆ ಹೇಳಿದ್ದಾರೆ,
“ಶ್ರೀಕೃಷ್ಣನು ಅರ್ಜುನನಿಗೆ ಕರ್ಮಾಕರ್ಮದ ವಿವೇಕವನ್ನು ಹೇಳುವಾಗ ಮೇಲಿಂದ ಮೇಲೆ
ಯೋಗವನ್ನಾಶ್ರಯಿಸು, ಎಂದು ಉಪದೇಶ ಮಾಡುವನು: ಯೋಗಸ್ಥಃ ಕುರು
ಕರ್ಮಾಣಿ (೨.೪೮) "ಯೋಗಸ್ಥನಾಗಿ ಕರ್ಮ ಮಾಡು; ಯೋಗಮಾತಿಷ್ಯೋತ್ತಿಷ್ಠ
ಭಾರತ (೪.೪೨) “ಭಾರತನೇ, ಯೋಗವನ್ನಾಶ್ರಯಿಸು ಮುತ್ತು ಎದ್ದೇಳು;”
ತಸ್ಮಾದ್ಯೋಗೀ ಭವಾರ್ಜುನ, (೬.೪೬)
"ಆದುದರಿಂದ ಅರ್ಜುನನೇ, ನೀನು ಯೋಗಿಯಾಗು;” ಈ ವಚನಗಳೆಲ್ಲ ಕರ್ಮಪ್ರೇರಕವಿರುವದರಿಂದ ಇಲ್ಲಿ ಯೋಗವೆಂದರೆ ಸಮಾಧಿಯೆಂದು
ಅರ್ಥವಾಗಲರಿಯದು. ಅರ್ಜುನನಾದರೂ ಯೋಗವೆಂದರೆ ಸಾಮ್ಯಬುದ್ದಿಯೆಂದೇ ತಿಳಿದಿರುವನೆಂಬುದು, ಯೋsಯಂ ಯೋಗಸ್ತ್ವ ಯಾ ಪ್ರೋಕ್ತಃ ಸಾಮ್ಯೇನ ಮಧುಸೂದನ (೬.೩೩)
"ಮಧು- ಸೂದನನೆ ಸಾಮ್ಯ ಬುದ್ಧಿಯಿಂದ ಪ್ರಾಪ್ತವಾಗತಕ್ಕ ಯಾವ ಯೋಗವನ್ನು ನೀನು ಹೇಳಿರುವಿಯೋ,
ಅದೇ ಯೋಗ”, ಎಂಬ ಅವನ ವಚನದ ಮೇಲಿಂದ ವ್ಯಕ್ತವಾಗುವದು.
ಇದಕ್ಕೂ ಮುಂಚಿನ, ಸರ್ವಥಾ ವರ್ತಮಾನೋsಪಿ
ಸಯೋಗೀ ಮಯಿ ವರ್ತತೇ (೬.೩೧) “ಆ ಯೋಗಿಯು ಯಾವ ರೀತಿ ವರ್ತಿಸಿದರೂ ನನ್ನಲ್ಲಿಯೇ ವರ್ತಿಸುವನು”,
ಮತ್ತು ಸುಖಂ ವಾ ಯದಿ ವಾ ದುಃಖಂ ಸಯೋಗೀ ಪರಮೋ ಮತ (೬.೩೨) "ಸುಖದುಃಖಗಳು
ಸಮವೆಂದು. ಭಾವಿಸುವವನೆ ಪರಮ ಯೋಗಿಯು”, ಎಂಬ ಶ್ರೀಕೃಷ್ಣನ ಎರಡು
ವಾಕ್ಯಗಳು ಅನು ಕ್ರಮವಾಗಿ ಕರ್ಮಪರಾಯಣತೆಯನ್ನೂ ಸಮತ್ವಬುದ್ದಿಯನ್ನೂ ವಿವರಿಸುವವು, ಎಂಬುದನ್ನು ನಾವು ಲಕ್ಷದಲ್ಲಿಡತಕ್ಕದ್ದು. ನಾಲ್ಕನೇ ಅಧ್ಯಾಯದ ಆರಂಭದಲ್ಲಿ ತನ್ನ
ಉಪದೇಶದ ಪರಂಪರೆಯನ್ನು ಹೇಳುವಾಗ ಶ್ರೀಕೃಷ್ಣನು ಅದಕ್ಕೆ ಯೋಗವೆಂದಿರುವನು ಮತ್ತು ಗೀತೆಯ
ಕೊನೆಯಲ್ಲಿ ಸಂಜಯನು ಇದೇ ಉಪದೇಶಕ್ಕೆ ಪರಮಯೋಗ, ಎಂದಿರುವನು,
ಈ ಪ್ರಕಾರ ಗೀತೆಯಲ್ಲಿಯ ಎಲ್ಲ ಪಾತ್ರಗಳ ಮನಸಿನಲ್ಲಿ ಯೋಗವೆಂದರೆ ಕರ್ಮಯೋಗ
ಎಂಬ ಒಂದೇ ಅರ್ಥವು ಇತ್ತು ಎಂಬುದು ಸಿದ್ದವು. ಭಗವಂತನಿಂದ ಪಡೆದ ಈ ಯೋಗ ಧರ್ಮದ ಪ್ರಚಾರವನ್ನು
ಮಾಡುವ ಮತ್ತು ಆದರ ಪರಂಪರೆಯನ್ನು ನಡೆಸುವ ವಿವಸ್ವಾನ್, ಮನು,
ಮತ್ತು ಇಕ್ಷ್ವಾಕು ಇವರಾದರೂ ಸನ್ಯಾಸಿಗಳಿದ್ದಿಲ್ಲ, ಅವರು ಕರ್ಮ ಮಾಡುವವರೇ ಇದ್ದರು; ಆದುದರಿಂದ ಅವರು
ದೊರಕಿಸಿದ ಮತ್ತು ಆಶ್ರಯಿಸಿದ ಯೋಗವೂ ಕರ್ಮಯೋಗವೇ ಇತ್ತು, ಎಂಬುದು
ನಿಃಸಂದೇಹವು”.
ಕರ್ಮಣಾ ಜಾಯತೇ ಸರ್ವಂ ಕರ್ಮೈವ ಗತಿಸಾಧನಂ
|
ತಸ್ಮಾತ್ಸರ್ವಪ್ರಯತ್ನೇನ ಸಾಧು ಕರ್ಮ
ಸಮಾಚರೇತ್ ॥
ವಿಷ್ಣುಪುರಾಣ, ೧-೧೮-೩೨
ಭಾವಾರ್ಥ:- ಕರ್ಮದಿಂದಲೇ ಎಲ್ಲವೂ ಆಗುತ್ತದೆ. ಕರ್ಮವೇ ನಮ್ಮ ಬೇರೆ ಬೇರೆ ಗತಿಗಳಿಗೆ ಕಾರಣ. ಆದುದರಿಂದ
ಪ್ರಯತ್ನಪೂರ್ವಕವಾಗಿ ಒಳ್ಳೆಯ ಕೆಲಸವನ್ನೇ ಮಾಡಬೇಕು.
ಜ್ಞಾನ = ज्ञान = ज्ञा न
ಅಕ್ಷರಶಃ
ಅರ್ಥ :- ಅವಿಶ್ರಾಂತವಾಗಿ ಕಂಡುಹಿಡಿಯುವುದು/ ಅವಿಶ್ರಾಂತವಾಗಿ
ಕಲಿಯುವುದು
ವೇದಾಂತದಲ್ಲಿ
ಜ್ಞಾನ ಎಂದರೆ ಬ್ರಹ್ಮಜ್ಞಾನ, ಬ್ರಹ್ಮಜ್ಞಾನ ಎಂದರೆ ಬ್ರಹ್ಮಾತಜ್ಞಾನ. ಅಹಂ ಬ್ರಹ್ಮಾಸ್ಮಿ ಎಂಬ ಅಪರೋಕ್ಷಾನುಭವಕ್ಕೇ ವೇದಾಂತದಲ್ಲಿ ಬ್ರಹ್ಮಜ್ಞಾನ ಎಂದು
ಹೆಸರು, ಸ್ವಾನುಭವದ ನಿಶ್ಚಯ ಜ್ಞಾನವಿದು. ಬ್ರಹ್ಮಜ್ಞಾನವನ್ನು
ಪಡೆದುಕೊಂಡು ಯಾರು ಬೇಕಾದರೂ ಮೋಕ್ಷವನ್ನು ಈ ಜನ್ಮದಲ್ಲಿಯೇ ಹೊಂದಬಹುದು ಎಂದು ನೂರಾರು ವಾಕ್ಯಗಳಲ್ಲಿ
ಶ್ರೀಶಂಕರರು ಸಾರಿಸಾರಿ ಹೇಳಿದ್ದಾರೆ.
ಅನುಭವಾವಸಾನಂ ಚ ಬ್ರಹ್ಮವಿಜ್ಞಾನಮ್, ಅವಿದ್ಯಾಯಾಃ
ನಿವರ್ತಕಂ ಮೋಕ್ಷಸಾಧನಂ ಚ ದೃಷ್ಟಫಲತಯಾ
ಇಷ್ಯತೇ ।
ಶಂಕರಾಚಾರ್ಯರ ಬ್ರ. ಸೂ. ಭಾ. ೨.೧.೪
ಭಾವಾರ್ಥ:-
ಬ್ರಹ್ಮಜ್ಞಾನವು ಅನುಭವದಲ್ಲಿ ಕೊನೆಗೊಂಡು ಅವಿದ್ಯೆಯನ್ನು ನಾಶ
ಮಾಡುವ ಮೂಲಕ ಮೋಕ್ಷಕ್ಕೆ ಸಾಧನವಾಗಿರುತ್ತದೆ. ಆದ್ದರಿಂದ ಮೋಕ್ಷವು ದೃಷ್ಟಫಲವೇ ಹೊರತು
ಜನ್ಮಾಂತರದ ಫಲವಲ್ಲ.
ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ ಸಂಯತೇಂದ್ರಿಯಃ।
ಜ್ಞಾನಂ ಲಬ್ಧ್ವಾ ಪರಾಂ
ಶಾಂತಿಮಚಿರೇಣಾಧಿಗಚ್ಛತಿ || ಭಗವದ್ಗೀತಾ - ೪-೩೯
ಶ್ರೀ ಶಂಕರರು ಭಾಷ್ಯ:- ಶ್ರದ್ಧಾವಂತನೂ ತತ್ಪರನೂ ಸಂಯತೇಂದ್ರಿಯನೂ ಆದ ಮುಮುಕ್ಷು[3]
ಸಾಧಕನು ಆತ್ಮ ಜ್ಞಾನವನ್ನು ಪಡೆದು ಪರಮಶಾಂತಿಯನ್ನು ಕೂಡಲೇ ಹೊಂದುತ್ತಾನೆ.
ಯಥೋದಕಂ ಶುದ್ಧೇ ಶುದ್ಧಮಾಸಿಕ್ತಂ
ತಾದೃಗೇವ ಭವತಿ!
ಏವಂ ಮುನೇರ್ವಿಜಾನತಃ ಆತ್ಮಾ ಭವತಿ ಗೌತಮ
॥
ಕಾಠಕೋಪನಿಷತ್ತಿನ (೪-೧೫)
ಶ್ರೀಶಂಕರರು
ಭಾಷ್ಯ:- ವಿಶುದ್ಧ
ಆತ್ಮನನ್ನು ತಾನೆಂದು ತಿಳಿದ ಆತ್ಮವಿದನಿಗೆ ಈ ವಿಶ್ವವೆಲ್ಲವೂ ಆತ್ಮನೇ ಆಗಿಬಿಡುತ್ತದೆ.
ಬ್ರಹ್ಮಜ್ಞಾನಿಗೆ ಯಾವ ನಾಮ ರೂಪಭೇದಗಳೂ ಸತ್ಯವಾಗಿ ಉಳಿಯುವುದಿಲ್ಲ; ಶುದ್ಧವಾದ ನೀರಿನಲ್ಲಿ ಶುದ್ಧವಾದ ನೀರನ್ನು ಹಾಕಿದಾಗ ಎರಡೂ ಸೇರಿಕೊಂಡು ಒಂದೇ
ನೀರಾಗಿಬಿಡುವಂತೆ.
ಭಗವದ್ಗೀತೆಯ
(10-11) ರಲ್ಲಿ ಜ್ಞಾನದೀಪದಿಂದ, ನನ್ನ ಭಕ್ತರುಗಳ ಅಜ್ಞಾನವನ್ನು
ನಾನು ನಾಶಮಾಡುತ್ತೇನೆ ಎಂದು ಶ್ರೀಕೃಷ್ಣನು ಹೇಳಿರುತ್ತಾನೆ. ಇದನ್ನು ವಿವರಿಸುತ್ತಾ
ಶಂಕರಾಚಾರ್ಯರು ಹೀಗೆ ಬರೆಯುತ್ತಾರೆ. “ವಿವೇಚನೆಯ
ಅವಲಂಭನೆಯೆಂಬ ಜ್ಞಾನದೀಪದಿಂದ ಅಜ್ಞಾನವು ದೂರವಾಗುತ್ತದೆ. ಈ ದೀಪಕ್ಕೆ ಭಕ್ತಿಯ ಪ್ರಸಾದವೆಂಬ
ಎಣ್ಣೆ, ಭಗವದ್ಭಕ್ತಿಯೆಂಬ ಗಾಳಿ, ಬ್ರಹ್ಮಚರ್ಯಾದಿ
ಸಾಧನ ಸಂಸ್ಕಾರವೇ ಬತ್ತಿ, ವಿರಕ್ತಾಂತಃಕರಣವೇ ಕಂಬ, ರಾಗ ದ್ವೇಷಗಳಿಲ್ಲದ ಕೋಣೆ, ಏಕಾಗ್ರತೆಯಿಂದ ಮತ್ತು
ಧ್ಯಾನದಿಂದುಂಟಾದ ಸಮ್ಯಗ್ ದರ್ಶನವೇ (ಸರಿಯಾದ ಗ್ರಹಿಕೆ ಅಥವಾ ಒಳನೋಟ) ಜ್ಞಾನದೀಪ”.
ಕ್ಷತ್ರಿಯ = क्षत्रिय = क्ष त्र इ य
ಅಕ್ಷರಶಃ
ಅರ್ಥ :- ಖ್ಯಾತಿಯನ್ನು ಪಡೆಯಲು ಮಿಂಚು ಮೂರು
ಕ್ಷತ್ರಿಯರು
ಭೂಮಿ ರಕ್ಷಣೆ, ಧರ್ಮ ಸಂಸ್ಥಾಪನೆ, ದುಷ್ಟರನ್ನು
ಶಿಕ್ಷಿಸಿ, ಶಿಷ್ಟರನ್ನು ಪಾಲಿಸುವ ಈ ಮೂರು ಖ್ಯಾತಿಯನ್ನು ಪಡೆಯುವ
ಪ್ರಕಾಶಮಾನತೆಯ ಸತ್ವಗಳು ಕ್ಷತ್ರಿಯನಲ್ಲಿ ಇರುತ್ತದೆ.
ಬ್ರಹ್ಮಕ್ಷತ್ರೇ ಪರಿಪಾಲಿತೇ ಜಗತ್
ಪರಿಪಾಲಯಿತುಮ್ ಅಲಮ್ |
ಭಗವದ್ಗೀತಾ 4-1
ಭಾವಾರ್ಥ:- ಬ್ರಾಹ್ಮಣ ಮತ್ತು ಕ್ಷತ್ರಿಯ ಧರ್ಮಗಳನ್ನು ಪರಿಪಾಲಿಸಿರೆ ಅವರು ಜಗತ್ತನ್ನೇ ಪಾಲಿಸುವುದಕ್ಕೆ
ಸಮರ್ಥವಾಗುತ್ತವೆ.
ವಿಶ್ವಾಮಿತ್ರನು
ಹುಟ್ಟಿನಿಂದ ಕ್ಷತ್ರಿಯ, ಅದು ದೈವಕೃತ; ತನ್ನ ಪೌರುಷದಿಂದ ಆತನಿಗೆ ಬ್ರಾಹ್ಮಣ್ಯ ಲಭಿಸಿತು - ಎಂದು ಯೋಗವಾಸಿಷ್ಠದಲ್ಲಿ
ವಿಸ್ತಾರವಾದ ವರ್ಣನೆ ಇದೆ.
ವೈಶ್ಯ = वैश्य = व ऐ श य
ಅಕ್ಷರಶಃ
ಅರ್ಥ :- ವಿಭಾಗಿಸುವ ಚಲನೆಯನ್ನು ಶಕ್ತಿಯುತವಾಗಿ ಕರೆಯುವುದು (ವಿವಿಧತೆಯ
ಕಾರ್ಯ ಚಲನೆಯನ್ನು ಶಕ್ತಿಯುತವಾಗಿ ಕರೆಯುವವರು)
ಕಕುಹಂ ಚಿತ್ತ್ವಾ ಕವೇ ಮಂದಂತು
ಧೃಷ್ಣವಿಂದವಃ | ಆ ತ್ವಾ ಪಣಿಂ ಯದೀಮಹೇ ॥
ಯಸೇ ರೇವಾ ಅದಾಶುರಿಃ ಪ್ರಮಮರ್ಷ ಮಘತ್ತಯೇ
! ತಸ್ಯ
ನೋ ವೇದ ಆ ಭರ ||
ಋಗ್ವೇದ 8-45-(೧೪-15)
ಭಾವಾರ್ಥ:- ರಾಷ್ಟ್ರದ ಸಂಪತ್ತನ್ನು ಹೆಚ್ಚಿಸುವವನು ವೈಶ್ಯ. ಅವನು ಪೂಜನೀಯನೂ, ವ್ಯವಹಾರ ಕುಶಲನೂ, ಮೇಧಾವಿಯೂ ದೃಢನೂ ಆಗಿರಬೇಕು.
ವಿನಯಶೀಲರಾದ ಜನರು ಅವನನ್ನು ಸಂತೋಷ ಪಡಿಸಲಿ ಮತ್ತು ದಾನವನ್ನು ಕೇಳಲಿ. ಸ್ವಭಾವತಃ ವೈಶ್ಯನು
ಉದಾರನೇ ಆದರೆ ಐಶ್ವರ್ಯವುಳ್ಳ ಕೆಲವರು ಸ್ವಾರ್ಥಿಗಳಾಗಿರುತ್ತಾರೆ. ಉದಾರನಾದ ವೈಶ್ಯನು ಕೊಡುವ
ಧನವನ್ನು ಬಲವಂತದಿಂದ ಕಿತ್ತುಕೊಳ್ಳುತ್ತಾರೆ. ಅಂತಹ ಸ್ವಾರ್ಥಿಗಳ ಹಣವನ್ನು ಪ್ರಜೆಗಳ ಹಿತಕ್ಕಾಗಿ
ಬಳಸಬೇಕು.
ಶೂದ್ರ = शुद्र = शु द र
ಅಕ್ಷರಶಃ
ಅರ್ಥ :- ವೇಗವಾಗಿ ಬೆಂಕಿಯನ್ನು ಉತ್ಪಾದಿಸುವ (ಹೆಚ್ಚು ಪರಿಶ್ರಮದಿ
ವೇಗವಾಗಿ ದೈಹಿಕ ಶಾಖವನ್ನು ಉತ್ಪಾದಿಸುವವ)
ಭನ್ನಂಜೆ
ಗೋವಿಂದಾಚಾರ್ಯರು ಹೇಳುತ್ತಾರೆ, “ಶೂದ್ರ ಎಂದರೆ ಇನ್ನೊಬ್ಬರ
ದುಃಖಕ್ಕೆ ಕರಗಿ ಅವರ ನೆರವಿಗೆ ಧಾವಿಸುವ ಕರುಣಾಳು ಎಂದರ್ಥ (ಶುಚಾ ದ್ರವತಿ). ....... ಪುರುಷಸೂಕ್ತದಲ್ಲಿ ಈ ನಾಲ್ಕು ವರ್ಣಗಳನ್ನು ಆಯಾ ವರ್ಣದ
ಕರ್ಮಕ್ಕನುಗುಣವಾಗಿ ದೇಹದ ನಾಲ್ಕು ಭಾಗವಾಗಿ ಈ
ರೀತಿ ವಿವರಿಸಿದ್ದಾರೆ: “ಬ್ರಾಹ್ಮಣೋಸ್ಯ ಮುಖಮಾಸೀತ್ | ಬಾಹೂ
ರಾಜನ್ಯಃ ಕೃತಃ | ಊರೂ ತದಸ್ಯ ಯದ್ವೈಶ್ಯಃ | ಪದ್ಭ್ಯಾಗಮ್
ಶೂದ್ರೋ ಅಜಾಯತ ॥“ ಅಂದರೆ ದೇಹಕ್ಕೆ ಪಂಚ ಅಂಗವಾಗಿರುವ ಹಾಗೂ ಪೂಜೆಯಲ್ಲಿ ಶ್ರೇಷ್ಠ ಎನಿಸಿದ
ಪಾದವನ್ನು ಶೂದ್ರನಿಗೆ ಹೋಲಿಸಿದರು. ಇದು ದೇಹದ ಅಡಿಪಾಯ. ಶೂದ್ರ ಎಂದರೆ ದುಃಖದಲ್ಲಿ ಕರಗಿದವ
ಎಂದರ್ಥ. ಈತನಲ್ಲಿ ಅರಸೊತ್ತಿಗೆ ಇರುವುದಿಲ್ಲ. ಆದರೆ ಇನ್ನೊಬ್ಬರ ಸೇವೆ ಮಾಡುವ ಸೇವಾ ಗುಣ
ಮಹತ್ವವಾಗಿರುತ್ತದೆ. ಈ ಗುಣ ಇಲ್ಲದವ
ಮನುಷ್ಯನೇ ಅಲ್ಲ. ಯಾರೂ ಏಕವರ್ಣದವರಲ್ಲ.
ಎಲ್ಲರಲ್ಲೂ ಎಲ್ಲಾ ಸ್ವಭಾವವಿರುತ್ತದೆ. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಾಗಿದೆಯೋ ನಾವು ಆ
ವರ್ಣಕ್ಕೆ ಸೇರುತ್ತೇವೆ. ಶೂದ್ರ ಸ್ವಭಾವ ಎಷ್ಟು ಮುಖ್ಯ ಎಂದರೆ ಈ ಸ್ವಭಾವ ಇಲ್ಲದೆ ಬೇರೆ
ಸ್ವಭಾವಕ್ಕೆ ಬೆಲೆಯೇ ಇಲ್ಲ. ಯಾವಾಗಲೂ ನಾವು
ಮಾಡುವ ಕರ್ಮವನ್ನು ಸೇವಾ ಮನೋವೃತ್ತಿಯಿಂದ ಮಾಡಬೇಕು”.
ಶ್ರಮಜೀವಿಗೆ
ತನ್ನ ದೈಹಿಕ ಶ್ರಮದಿಂದ ಹೆಚ್ಚಿನ ದೈಹಿಕ ಶಾಖ ಉತ್ಪತ್ತಿ ಆಗುತ್ತದೆ. ಅಂತಹ ಬೆಂಕಿಯನ್ನು
ವೇಗವಾಗಿ ಶ್ರಮದಿಂದ ಉತ್ಪಾದಿಸುವವನೇ ಶೂದ್ರ.
ವರ್ಣ = वर्ण = व र ण
ಅಕ್ಷರಶಃ
ಅರ್ಥ :- ಖಚಿತತೆಯನ್ನು ಶಕ್ತಿಯುತವಾಗಿ ಪರಿಣಾಮ ಬೀರುವ (ಅಕ್ಷರ
ಜ್ಞಾನ ಖಚಿತವಾಗಿ ಪರಿಣಾಮಕಾರಿ ಅರ್ಥವನ್ನು ನೀಡುತ್ತೆ)
ವಿವರಣೆ:- ವರ್ಣ ಎಂದರೆ ಜಾತಿ ಅಲ್ಲ. ಜಾತಿ ಪದ್ಧತಿ ಜನರಿಂದ ಬಂದ ಪದ್ಧತಿ. ಆದರೆ ವರ್ಣ
ಭಗವಂತನ ಸೃಷ್ಟಿ . ನಾಲ್ಕು ವರ್ಣವನ್ನು ನಾವು ಪ್ರಪಂಚದ ಎಲ್ಲಾ ಭಾಗದಲ್ಲಿ ಕಾಣಬಹುದು.
ಅವುಗಳೆಂದರೆ: ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ. ೧. ಬ್ರಾಹ್ಮಣ: ಅಧ್ಯಯನ ಮಾಡಿ ಅಧ್ಯಾಪನ ಮತ್ತು ಸಂಶೋಧನೆ
ಮಾಡುವ ಜ್ಞಾನಿಗಳು ೨. ಕ್ಷತ್ರಿಯ: ರಕ್ಷಣೆ ಮತ್ತು ವ್ಯವಸ್ಥಾಪಕ ಗುಣ ಇರುವವರು 3. ವೈಶ್ಯ:
ಉತ್ಪಾದನೆ ಮತ್ತು ವಿತರಣೆಯಲ್ಲಿ ಚಾಣಾಕ್ಷರು ೪. ಶೂದ್ರ: ಶುಶ್ರೂಷೆ ಅಥವಾ ಸೇವೆಯಲ್ಲಿ
ಚಾಣಾಕ್ಷರು. ಈ ನಾಲ್ಕು ವರ್ಣಗಳನ್ನು ಒಂದೇ ಕುಟುಬದಲ್ಲಿ ನೋಡಬಹುದು. ಅವರವರ ಜೀವ ಗುಣಕ್ಕೆ
ಸರಿಹೊಂದುವ ಕೆಲಸವನ್ನು ಮಾಡುವವರು ಶೀಘ್ರ ಯಶಸ್ಸನ್ನು ಕಾಣುತ್ತಾರೆ. ಸಂಸ್ಕೃತದಲ್ಲಿ ವರ್ಣ
ಎಂದರೆ ಬಣ್ಣ ಮತ್ತು ಅಕ್ಷರ ಎರಡೂ ಆಗುತ್ತದೆ.
ಭನ್ನಂಜೆ
ಗೋವಿಂದಾಚಾರ್ಯರು ಹೇಳುತ್ತಾರೆ, “ವರ್ಣ ಪದ್ಧತಿಯನ್ನು ನನ್ನ ಆಡಳಿತದಲ್ಲಿ
ನಾನು ಹೇಗೆ ಪಾಲಿಸಬೇಕು” ಎಂದು ಪ್ರಶ್ನೆ ಮಾಡಿದ
ಧರ್ಮರಾಯನಿಗೆ ಭೀಷ್ಮಾಚಾರ್ಯರು
ಹೇಳುತ್ತಾರೆ: “ವರ್ಣ ವಿಭಾಗವೇ ಇಲ್ಲ, ಎಲ್ಲರೂ ದೇವರ ಮಕ್ಕಳು,
ರಾಜನಾದವನಿಗೆ ವರ್ಣಭೇದ
ಮಾಡುವ ಅಧಿಕಾರವಿಲ್ಲ” ಎಂದು. ಇಲ್ಲಿ ವರ್ಣ
ಎನ್ನುವುದು ಜಾತಿ ಎನ್ನುವ ಅರ್ಥದಲ್ಲಿ ಬಳಕೆಯಾಗಿದೆ. ..... “ವರ್ಣ ಅಂದರೆ ಬಣ್ಣ. ಒಬ್ಬ
ಮನುಷ್ಯನ ಬಣ್ಣ ಅಂದರೆ ಏನು ? "ಆತನ ಬಣ್ಣ ಬಯಲಾಯಿತು"
ಎಂದು ಸಾಮಾನ್ಯವಾಗಿ ನಾವು ಹೇಳುವುದಿದೆ. ಒಬ್ಬನ ಬಣ್ಣ ಬಯಲಾಗುವುದು ಎಂದರೆ ಆತನ ನಿಜ
ವ್ಯಕ್ತಿತ್ವ ಬಯಲಾಗುವುದು. ...... ವರ್ಣ ಎನ್ನುವುದು ನಮ್ಮ ಅಂತರಂಗ ಪ್ರಪಂಚ-ನಮ್ಮ ಮೂಲ
ಸ್ವಭಾವ. ............. ಹೀಗೆ ಈ ನಾಲ್ಕು ವರ್ಣಗಳು
ಸೇರಿದರೆ ಮಾತ್ರ ಒಂದು ಪರಿಪೂರ್ಣ ಸಮಾಜ ನಿರ್ಮಾಣವಾಗಲು ಸಾಧ್ಯ. ಇಲ್ಲಿ ಮೇಲು-ಕೀಳು
ಎನ್ನುವ ಭಾವನೆ ಸಲ್ಲದು. ಎಲ್ಲರೂ ಮೋಕ್ಷ ಯೋಗ್ಯ ಜೀವರೇ. ಇದು ಆಧ್ಯಾತ್ಮಿಕ ವರ್ಗೀಕರಣ ಮತ್ತು ವ್ಯವಸ್ಥೆ. 'ಇದನ್ನು ಅನಾದಿನಿತ್ಯವಾದ ಜೀವದ ಮೂಲ ಸ್ವಭಾವಕ್ಕನುಗುಣವಾಗಿ ಮತ್ತು
ಕರ್ಮಕ್ಕನುಗುಣವಾಗಿ ನಾನು ಈ ಭೂಮಿ ಮೇಲೆ ಸೃಷ್ಟಿಸಿದೆ' ಎಂದಿದ್ದಾನೆ
ಕೃಷ್ಣ.”
ಸಂಸ್ಕೃತದಲ್ಲಿ
ಪೂರಕ, ರೇಚಕ ಮತ್ತು ಕುಂಭಕ ಎಂದರೆ ಅಕ್ಷರ ಸಹ ಅರ್ಥ
ಕುಂಭಕ
ಉಸಿರು ಬಿಗಿ ಹಿಡಿಯುವಿಕೆ ಎಂದು ಸಂಸ್ಕೃತ ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ, ಆದರೆ ಅಕ್ಷರ ರೀತಿಯಲ್ಲಿ ನೋಡಿದಾಗ "ಚಂದ್ರನ ಮಹಲಿಗೆ (ಸಹಸ್ರಾರಕ್ಕೆ) ಸಂಪತ್ತು ಮಾಂತ್ರಿಕ ಸೂತ್ರವನ್ನು ಧ್ವನಿಸುವ ಆತ್ಮ"
ಎಂಬ ಅರ್ಥ ಬರುತ್ತದೆ. ಪೂರಕ ಎಂದರೆ ಉಸಿರು ಒಳ ಎಳೆಯುವುದು ಎಂದು ಸಂಸ್ಕೃತ ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ, ಆದರೆ ಅಕ್ಷರ ರೀತಿಯಲ್ಲಿ ನೋಡಿದಾಗ "ಸ್ವಾಧೀನಪಡಿಸಿಕೊಂಡಿರುವ ಗಾಳಿಯನ್ನು
ಶುದ್ಧಗೊಳಿಸಲು" ಎಂಬ ಅರ್ಥ ಬರುತ್ತದೆ. ರೇಚಕ ಎಂದರೆ ಉಸಿರು ಹೊರಹಾಕುವುದು ಎಂದು ಸಂಸ್ಕೃತ
ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ, ಆದರೆ ಅಕ್ಷರ ರೀತಿಯಲ್ಲಿ
ನೋಡಿದಾಗ "ನೀರಿನಲ್ಲಿ ಅತ್ತಿಂದಿತ್ತ ಚಲಿಸುವಿಕೆಯಿಂದ ದ್ವಿಗುಣಗೊಳಿಸಲಾಗಿದೆ". ಇಲ್ಲಿ
ಅಕ್ಷರಶಃ ವ್ಯಾಖ್ಯಾನದಲ್ಲಿ ಕುಂಡಲಿನಿ ಪ್ರಾಣಾಯಾಮದ ವಿಧಾನ ಸ್ವಷ್ಟವಾಗಿದೆ. ಆದುದರಿಂದ ಕುಂಭಕ
ಎಂದರೆ ಉಸಿರುಕಟ್ಟುವುದು ಎಂಬ ವ್ಯಾಖ್ಯಾನ ತಪ್ಪಾಗುತ್ತದೆ. ಬಹಳ ವಿದ್ವಾಂಸರು
ಉಸಿರುಕಟ್ಟುವಿಕೆಯಿಂದ ದೇಹ ಮತ್ತು ಮನಸ್ಸಿಗೆ ತುಂಬಾ ಹಾನಿಯಾಗಿದೆ ಅದರಲ್ಲಿ ವ್ಯರ್ಥ ಸಾಧನೆ ಇದೆ
ಎಂಬ ಗಮನವೂ ಹಲವರಲ್ಲಿ ಬಂದಿದೆ. ಉಸಿರನ್ನು ಒಳ ಎಳೆದು ಅಪಾನ ವಾಯುವಿನೊಡನೆ ಬೆರೆಸಿ
ಶುದ್ದೀಕರಿಸುವ ಕ್ರಿಯೆ ಪೂರಕ ಆಗಿದೆ. ಕೆಳಹೊಟ್ಟೆಯಲ್ಲಿನ ನೀರಿನಲ್ಲಿ ಉಸಿರನ್ನು ಬೆರೆಸಿ
ಉಸಿರನ್ನು ದ್ವಿಗುಣಗೊಳಿಸುವ ಕ್ರಿಯೆಗೆ ರೇಚಕ ಎನ್ನಲಾಗಿದೆ.
ಪೂರಕ = पूरक = पू र क
ಅಕ್ಷರಶಃ
ಅರ್ಥ :- ಸ್ವಾಧೀನಪಡಿಸಿಕೊಂಡಿರುವ ಗಾಳಿಯನ್ನು ಶುದ್ಧಗೊಳಿಸಲು
ರೇಚಕ = रेचक = रे च क
ಅಕ್ಷರಶಃ
ಅರ್ಥ :- ಗಾಳಿಯನ್ನು ಅತ್ತಿಂದಿತ್ತ ಚಲಿಸುವಿಕೆಯಿಂದ ದ್ವಿಗುಣಗೊಳಿಸಲಾಗಿದೆ
ಕುಂಭಕ = कुम्भक = क उ म भ क
ಅಕ್ಷರಶಃ
ಅರ್ಥ :- ಚಂದ್ರನ ಮಹಲಿಗೆ (ಸಹಸ್ರಾರಕ್ಕೆ) ಸಂಪತ್ತು ಮಾಂತ್ರಿಕ ಸೂತ್ರವನ್ನು ಧ್ವನಿಸುವ ಆತ್ಮ
ಶೂನ್ಯಕ, ನಿರೋಧ ಅಕ್ಷರ ಅರ್ಥ
ಶೂನ್ಯಕ = शुन्यक = शु न य क
ಅಕ್ಷರಶಃ
ಅರ್ಥ :- ಬೆಂಕಿಯಲ್ಲಿ ತ್ವರಿತವಾಗಿ ಒಂದೇ ರೀತಿಯ ಗಾಳಿ. (ಬೆಂಕಿ ಇರುವ ಪ್ರದೇಶ ನಮ್ಮ ದೇಹದ ಗ್ಯಾಸ್ಟ್ರಿಕ್ ಬೆಂಕಿಯಾಗಿದೆ, ಇಲ್ಲಿ ಉಸಿರಾಟದ ಕ್ರಿಯೆಯಲ್ಲಿ ವಾಯು ಉದ್ಬವಿಸುತ್ತದೆ.)
ವಿವರಣೆ:- ನಾರದೀಯ ಪುರಾಣದಲ್ಲಿ 33-120 ರಲ್ಲಿ ಹೀಗೆ
ಹೇಳಿದ್ದಾರೆ “ಜ್ಞಾನಿಗಳು ರೇಚಕ, ಪೂರಕ, ಕುಂಭಕ ಮತ್ತು ಶೂನ್ಯಕ ಎಂಬುದಾಗಿ ಪ್ರಾಣಾಯಾಮವನ್ನು ನಾಲ್ಕುಭಾಗವೆಂದು ಹೇಳುವರು”.
ಬೆಂಕಿಯ ಅಂಶ ಇರುವುದು ನಮ್ಮ ಹೊಟ್ಟೆ ಮತ್ತು ಅದರ ಕೆಳಗಿನ ಪ್ರದೇಶದಲ್ಲಿ, ಪ್ರಾಣಾಯಾಮದಲ್ಲಿ ನಾವು ಸೆಳೆಯುವ ಉಸಿರು ಇಡಾ ಮತ್ತು ಪಿಂಗಳ ನಾಡಿಯಿಂದ ಮೂಲಾಧಾರ
ಸೇರಿ ಬೆಂಕಿಯಲ್ಲಿ ಪ್ರವೇಶಿಸಿದಾಗ ಬೆಂಕಿಯಲ್ಲಿ ಒಂದು ರೀತಿಯ ಗಾಳಿ ಉದಯಸುವ ಕ್ರಿಯೆಗೆ ಶೂನ್ಯಕ
ಎನ್ನುತ್ತಾರೆ. ನಾರದೀಯ ಪುರಾಣದಲ್ಲಿ ಕೊಟ್ಟಿರುವ ಅರ್ಥ ಪರ ವಿದ್ಯೆ ಅರ್ಥವಲ್ಲ. ಅಕ್ಷರ
ಅರ್ಥದಲ್ಲಿ ಪೂರಕ, ರೇಚಕ, ಕುಂಭಕ, ಶೂನ್ಯಕ ಗಂಭೀರ ಅರ್ಥ ನೀಡುತ್ತದೆ.
ನಿರೋಧಹ = निरोधः = नि र ओ धः
ಅಕ್ಷರಶಃ
ಅರ್ಥ :- ಹಿಮ್ಮುಖ ಕರೆ ಹೊಳಪು ಒಂದು ಸದ್ಗುಣ /ಹೊಳಪನ್ನು
ಹಿಮ್ಮುಖಕ್ಕೆ ಕರೆಯುವ ಸದ್ಗುಣ (ಸುಷುಮ್ನಾ ನಾಡಿಯು ಹಿಂಬದಿಯ ಬೆನ್ನುಹುರಿಯಲ್ಲಿ ಇರುತ್ತದೆ, ಪ್ರಾಣಾಯಾಮ ಧ್ಯಾನದಲ್ಲಿ ಹೊಳಪಿನ ಸಾರವನ್ನು ಸುಷುಮ್ನಾ ನಾಡಿಗೆ ಕರೆಯುವ
ಸದ್ಗುಣಕ್ಕೆ ನಿರೋಧಹ ಎನ್ನುತ್ತಾರೆ)
ಅಪಾನೇ ಜುಹ್ವತಿ ಪ್ರಾಣಂ ಪ್ರಾಣೇ ಅಪಾನಂ
ತಥಾಪರೇ.
ಪ್ರಾಣಾಪಾನಗತೀರುದ್ವಾ ಪ್ರಾಣಾಯಾಮ
ಪರಾಯಣಃ,
ಭಗವದ್ಗೀತೆ 4-29
ಭಾವಾರ್ಥ :- ಪ್ರಾಣ ಮತ್ತು ಅಪಾನಗಳ ಸಂಚಾರವನ್ನು ನಿರೋಧ ಮಾಡಿ (ಹೊಳಪಿನ ಸಾರವನ್ನು ಸುಷುಮ್ನಾ
ನಾಡಿಗೆ ಕರೆಯುವ) ಪ್ರಾಣಾಯಾಮವನ್ನು ಅಭ್ಯಾಸ ಮಾಡುವವರು ಕೂಡ ಚಿತ್ತವನ್ನು ಜಯಿಸಬಲ್ಲರು.
ವಿಂಧ್ಯಾ, ಪೂಜಾ ಅಕ್ಷರ ಅರ್ಥ
ವಿಂಧ್ಯಾ = विन्ध्या = व इ न ध या
ಅಕ್ಷರಶಃ
ಅರ್ಥ :- ಅವಿಶ್ರಾಂತವಾಗಿ ಅನುಗ್ರಹಿಸುವ ಧಾರ್ಮಿಕ ಧ್ಯಾನವನ್ನು
ತಲುಪಲು ಶಕ್ತಿಯುತವಾಗಿದೆ. (ಪರ್ವತ ಶ್ರೇಣಿಯಲ್ಲಿ ಧ್ಯಾನ ಮಾಡಿದರೆ
ಅವಿಶ್ರಾಂತವಾಗಿ ಧಾರ್ಮಿಕ ಧ್ಯಾನ ಉಂಟಾಗುತ್ತದೆ ಅದು ಶಕ್ತಿಯುತವಾಗಿರುತ್ತದೆ ಎಂದು ಸೂಚಿಸುವ
ಅಕ್ಷರ ಅರ್ಥ ಇದೆ.)
ಭರತವರ್ಷದಲ್ಲಿ
ಏಳು ಪ್ರಮುಖ ಪರ್ವತ ಶ್ರೇಣಿಗಳಿವೆ ಮತ್ತು ಅವುಗಳ ಹೆಸರುಗಳು: ಮಹೇಂದ್ರ, ಮಲಯ, ಸಾರಾ, ಶಕ್ತಿಮಾನ್,
ಕ್ಷವನ್, ವಿಂಧ್ಯಾ ಮತ್ತು ಪರಿಯಾತ್ರೆ.
ಯತಃ ಸ್ವರ್ಗಶ್ಚ ಮೋಕ್ಷಶ್ಚ ಮಧ್ಯಮಶ್ಚಾಪಿ
ಹಿ ಸ್ಮೃತಃ /
ನ ಖಲ್ವಾನ್ಯತ್ರ ಮರ್ತ್ಯಾನಂ ಭೂಮೌ
ಕರ್ಮವಿಧಿಃ ಸ್ಮೃತಃ//
ಮತ್ಸ್ಯಪುರಾಣ 114. 5-6
ಭಾವಾರ್ಥ:- ಭಾರತಕ್ಕೆ ಸಮಾನವಾದ ದೇಶವಿಲ್ಲ. ಅದು ಸ್ವರ್ಗಕ್ಕಿಂತಲೂ ಶ್ರೇಷ್ಠವಾಗಿದೆ,
ಏಕೆಂದರೆ ಸ್ವರ್ಗದಲ್ಲಿರುವ ದೇವತೆಗಳು ಭರತದಲ್ಲಿ ಹುಟ್ಟಲು ಬಯಸುತ್ತಾರೆ.
ಭಾರತವು ಕರ್ಮಭೂಮಿ. ಇದು ಕ್ರಿಯೆಯ ಭೂಮಿ. ಮಾನವ ಜೀವನದ ಎಲ್ಲಾ ಫಲಗಳು, ಬೀಜಗಳು ಭರತನ ಮಣ್ಣಿನಲ್ಲಿವೆ.
ವಿವರಣೆ:- ಎಲ್ಲಾ
ಧರ್ಮಗಳು ಕೆಲವು ಸ್ಥಳಗಳು, ಪ್ರದೇಶಗಳು, ಪರ್ವತಗಳು, ನದಿಗಳು, ಸಂಗಮಗಳು,
ಬಾವಿಗಳು, ಪಟ್ಟಣಗಳು, ನಗರಗಳು ಇತ್ಯಾದಿಗಳ ಪವಿತ್ರತೆ ಮತ್ತು ಪರಿಶುದ್ಧತೆಗೆ ಒತ್ತು ನೀಡಿವೆ ಮತ್ತು ಈ
ಪವಿತ್ರ ಸ್ಥಳಗಳಿಗೆ ತೀರ್ಥಯಾತ್ರೆಯನ್ನು ಶಿಫಾರಸು ಮಾಡಿದೆ. ಮುಕ್ತಿಯನ್ನು ಪಡೆಯಲು ಒಂದು ಮಾರ್ಗ
ಅಥವಾ ಮಾರ್ಗವೆಂದರೆ ತೀರ್ಥಯಾತ್ರೆಗೆ ಹೋಗುವುದು ಎಂಬುದು ಸಾಮಾನ್ಯ ನಂಬಿಕೆಯಾಗಿದೆ.
ಪೂಜಾ = पूजा = पु ज अ
ಅಕ್ಷರಶಃ
ಅರ್ಥ :- ಜೀವ ಉಸಿರಾಟದಿಂದ ಉಂಟಾಗುವ ಶುದ್ಧೀಕರಣ (ಪೂಜೆಯಲ್ಲಿ
ಮುಖ್ಯವಾಗಿ ಪ್ರಾಣಾಯಾಮ ಇರುತ್ತದೆ, ಪೂಜೆಯಲ್ಲಿ ಹದಿನಾರು
ಉಪಚಾರಗಳಾದ ಆವಾಹನ, ಆಸನ, ಆರ್ಘ್ಯ
ಆಚಮನ, ಸ್ನಾನ, ಇತ್ಯಾದಿ ಎಲ್ಲವೂ
ಉಸಿರಾಟದ ವಿವಿದ ಉಪಯೋಗಗಳನ್ನು ಸೂಚಿಸುತ್ತದೆ. ಇಲ್ಲಿ ಶುದ್ಧೀಕರಣ ಉಂಟಾಗುವ ಕ್ರಿಯೆ
ಇದೆ).
ವಿವರಣೆ:- ಪುರುಷ ಸೂಕ್ತ ವಿಧಾನ ಪೂಜೆಯನ್ನು ಎಲ್ಲಾ ಆಧಾರ ಗ್ರಂಥಗಳಲ್ಲಿಯೂ ಆವಾಹನ (ಅವಿಶ್ರಾಂತವಾದ
ವೈದ್ಯನನ್ನು ಪಡೆಯುವ ಬಯಕೆಯ ಕಡೆಗೆ)[4], ಆಸನ (ಅವಿಶ್ರಾಂತವಾದ ಧ್ಯಾನದ ಕಡೆಗೆ), ಪಾದ್ಯ (ಜೀವ
ಉಸಿರನ್ನು ರಕ್ಷಿಸುವುದು ಬೆಳಕನ್ನು ನೀಡುತ್ತದೆ), ಅರ್ಘ್ಯ (ಒಂದು
ನಿರ್ದಿಷ್ಟವಾಗಿ ಪರಿಣಾಮಕಾರಿ ಮಂತ್ರವು ಸದ್ದು ಮಾಡುವ ಗಾಳಿಯನ್ನು ಪಡೆದುಕೊಳ್ಳುತ್ತದೆ),
ಆಚಮನ (ಅವಿಶ್ರಾಂತವಾಗಿ ಶುದ್ಧ ಮಾಂತ್ರಿಕ ಸೂತ್ರದ ಕಡೆಗೆ), ಸ್ನಾನ[5] (ಅವಿಭಜಿತ ಜೀವ
ಉಸಿರನ್ನು ಅವಿಶ್ರಾಂತವಾಗಿ ಸಂಪಾದಿಸುವುದು), ವಸ್ತ್ರ (ಮೂರರ
ಒಕ್ಕೂಟವನ್ನು ಶಕ್ತಿಯುತವಾಗಿ ವ್ಯಕ್ತಪಡಿಸುವುದು), ಉಪವೀತ (ಅಮೃತವನ್ನು
ತಲುಪಲು ಗಾಳಿಯನ್ನು ಶಕ್ತಿಯುತವಾಗಿ ಕರೆಯುವುದು), ಗಂಧ (ಅದೇ
ರೀತಿಯಾದದ್ದನ್ನು ಹಿಡಿದು ಚಲಿಸುವುದು), ಪುಷ್ಪ (ವಾಯುವು ಅತ್ತ್ಯುತ್ತಮ
ಗಿಡಮೂಲಿಕೆ ಹಿಡಿತಕ್ಕೆ ಕರೆಯುವುದು), ಧೂಪ (ದ್ವನಿಸುವ ವಾಯುವನ್ನು
ಅನುಗ್ರಹಿಸುವುದು), ದೀಪ (ಗಾಳಿಯಲ್ಲಿ ಬರುವ ಉಡುಗೊರೆ), ನೈವೇದ್ಯ (ಬೆಳಕನ್ನು ನೀಡುವ ಶಕ್ತಿಯುತ ಉಡುಗೊರೆಯನ್ನು ಅವಿಶ್ರಾಂತವಾಗಿ
ಆಹ್ವಾನಿಸುವುದು), ನಮಸ್ಕಾರ (ಭೂಮಿಯ (ಮೂಲಾಧಾರದ) ಬೆಂಕಿಯನ್ನು
ನೀಡುವ ಅವಿಶ್ರಾಂತ ಮಾಂತ್ರಿಕ ಸೂತ್ರ), ಪ್ರದಕ್ಷಿಣೆ (ಜೀವ
ಉಸಿರಿನೊಂದಿಗೆ ಮಿದುಳಿನ ನಾಸಿಕಕ್ಕೆ ಆಗಮಿಸುವ ಪೋಷಣೆಯ ಉಡುಗೊರೆಯ ಮಿಂಚು), ಉದ್ವಾಸನ (ಅವಿಶ್ರಾಂತವಾಗಿ ಧ್ಯಾನವನ್ನು ಆಹ್ವಾನಿಸುವ ಹಿಡಿತಕ್ಕೆ ಕರೆಯುವ ಉಡುಗೊರೆ) ಹೀಗೆ ಹದಿನಾರು ಉಪಚಾರಗಳಿಗೆ ಕ್ರಮವಾಗಿ
ಹದಿನಾರು ಖುಕ್ಕುಗಳನ್ನು (ಮಂತ್ರಗಳನ್ನು) ಸೇರಿಸಿ ಮಾಡಬೇಕೆಂದು ಹೇಳಿದ್ದಾರೆ. ಇಲ್ಲಿ ಹದಿನಾರು
ಉಪಚಾರದ ಪೂಜೆ ನಮ್ಮ ಆಂತರಿಕವಾಗಿ ಪ್ರಾಣಾಯಾಮ ಧ್ಯಾನದಿಂದ ಆಗುವ ಉಪಚಾರಗಳಾಗಿವೆ.
ಉಪಾಸನೆ, ಎಂಬ ಸಂಸ್ಕೃತ ಪದ ಅರ್ಥ ವಾಯು, ಪರಿಣಾಮಕಾರಿ ಮಂತ್ರ,
ಧ್ಯಾನ ಅವಿಭಜಿತ ಉಡುಗೊರೆ ಹಿಡಿತಕ್ಕೆ ಕರೆಯುವುದು. - ಅದೇ ರೀತಿಯಲ್ಲಿ, ಉಪಾಸ್ಮಹೇ,
ಎಂಬ ಸಂಸ್ಕೃತ ಪದ ಅರ್ಥ ವಾಯು, ಪರಿಣಾಮಕಾರಿ
ಮಂತ್ರ, ಧ್ಯಾನ, ಮಾಂತ್ರಿಕ ಸೂತ್ರ,
ವೈದ್ಯರ ಉಡುಗೊರೆಯನ್ನು
ಹಿಡಿತಕ್ಕೆ ಕರೆಯುವುದು
ಸ್ವಾಮಿ
ವಿರಜಾನಂದ ತಮ್ಮ ಪರಮಾರ್ಥ ಪ್ರಸಂಗ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ, “ದೇವ ಅಥವಾ ದೇವತೆಯನ್ನು ಜಡವಾದ, ಅಜೇತನವಾದ
ವಸ್ತುವಿನಲ್ಲಿ ಎಂದರೆ ಮಣ್ಣು, ಮರ, ಲೋಹ,
ಶಿಲೆಯ ವಿಗ್ರಹ ಅಥವಾ ಪಠ ಇವುಗಳಲ್ಲಿ ವಾಸಿಸುವ ಪರಮಾತ್ಮನೆಂದು ಪೂಜಿಸಬಲ್ಲೆವಾದರೆ,
ದೇವರ ಅತ್ಯಂತ ಮಹತ್ವದ ಸೃಷ್ಟಿಯಾದ ಜೀವಂತ ಮನುಷ್ಯನನ್ನು ಏಕೆ ಪೂಜಿಸಬಾರದು?
ಮಾನವ ಪೂಜೆ ಎಂದರೆ ಕೇವಲ ಆತನ ಸ್ಥೂಲ ದೇಹದ ಪೂಜೆಯಲ್ಲ. ಅವನ
ಆಂತರ್ಯದೊಳಗಿರುವ ಆತ್ಮನ ಪೂಜೆ, ನನ್ನಲ್ಲಿ ಆತ್ಮವಾಗಿರುವ ಆ
ನಾರಾಯಣನೇ ಎಲ್ಲಾ ಸ್ತ್ರೀಪುರುಷರ ಆಂತರ್ಯದಲ್ಲೂ ಇರುವನೆಂದೂ ಅಜ್ಞಾನಿಯ, ನಿರ್ಗತಿಕನ, ರೋಗಿಯ,
ರೂಪದಲ್ಲಿ ನನ್ನ ಮುಂದಿರುವನೆಂದೂ ಭಾವಿಸಿ ಅವರನ್ನು ಏಕ ರೀತಿಯಾಗಿ ಭಕ್ತಿ ಮತ್ತು ಜಾಗರೂಕತೆಯಿಂದ
ಸೇವಿಸಿ ಅವರಿಗೆ ಆಹಾರ, ಬಟ್ಟೆ, ಔಷಧಿಯನ್ನು
ಕೊಟ್ಟು ಶುಶ್ರೂಷೆ ಮಾಡುವುದು ಅಕ್ಷರಶಃ ಮನಃ ಪೂರ್ವಕವಾದ ಮಾನವ ಪೂಜೆ. ಇತರ ದೇವದೇವಿಯರ
ಪೂಜೆಯಂತೆ ಈ ಪೂಜೆಯಲ್ಲೂ ಆತ್ಮನ ವಿಷಯದಲ್ಲಿ ಭೇದಭಾವನೆಯಿದ್ದರೆ ಎಲ್ಲವೂ ವ್ಯರ್ಥವಾಗುವುದು.
ಶಾಸ್ತ್ರಗಳೂ ಕೂಡ "ಶಿವನನ್ನು ಶಿವನಾಗಿ ಪೂಜಿಸು” "ದೇವನನ್ನು
ನೀನು ದೇವನಾಗಿ ಪೂಜಿಸು'' ಎಂದು ಸಾರುವುದು”.
ತಪಸ್ವಿಭ್ಯೋSಧಿಕೋ ಯೋಗೀ
ಜ್ಞಾನಿಭ್ಯೋSಪಿ ಮತೋSಧಿಕಃ ।
ಕರ್ಮಿಭ್ಯಶ್ಚಾಧಿಕೋ ಯೋಗೀ ತಸ್ಮಾದ್ ಯೋಗೀ
ಭವಾರ್ಜುನ॥
ಭಗವದ್ಗೀತೆ 06-೪೬
ಭಾವಾರ್ಥ:-
ಧ್ಯಾನ ಯೋಗದ ಸಾಧಕ ಉಪವಾಸ ಮೊದಲಾದ ವ್ರತಸಾಧಕರಿಗಿಂತ ಮಿಗಿಲು;
ಬರಿಯ ಧ್ಯಾನಯೋಗದ ಮನಸ್ಸನ್ನು ಬಲ್ಲವರಿಗಿಂತಲೂ ಮಿಗಿಲು ಎನ್ನುವುದು
ತೀರ್ಮಾನ. ಕರ್ಮ ಯೋಗಿಗಳಿಗಿಂತಲೂ ಮಿಗಿಲು. ಆದ್ದರಿಂದ ಓ ಅರ್ಜುನ, ನೀನು
ಧ್ಯಾನಯೋಗಿಯಾಗು.
ಈ
ಮೇಲಿನ ಶ್ಲೋಕವನ್ನು ವ್ಯಾಖ್ಯಾನಿಸುತ್ತಾ ಭನ್ನಂಜೆ ಗೋವಿಂದಾಚಾರ್ಯರು ಹೀಗೆ ಹೇಳುತ್ತಾರೆ, “ನಮ್ಮ ಪೂಜೆ ಕೇವಲ ದೇವರ ಪ್ರತಿಮೆಗೆ ಮೀಸಲಾಗದೇ ಅದು ಅಂತರಂಗದಲ್ಲಿ ಭಗವಂತನನ್ನು
ಕಾಣಲು ಸಹಾಯ ಮಾಡುವ ಸಂಕೇತ ಎನ್ನುವ ಜ್ಞಾನ ನಮಗಿರಬೇಕು. ಮಾನಸ ಪೂಜೆ ಇಲ್ಲದೇ ಬಾಹ್ಯ ಪೂಜೆ
ಪೂಜೆಯೇ ಅಲ್ಲ. ಆದ್ದರಿಂದ ಬರೇ ಕರ್ಮಠನಾಗಿ
ಬಾಹ್ಯಪೂಜೆ ಮಾಡುವವನಿಗಿಂತ ಮಾನಸ ಪೂಜೆ ಮಾಡುವ ಧ್ಯಾನಯೋಗಿ ದೊಡ್ಡವ. “ಆದ್ದರಿಂದ ನೀನು
ಜೀವನದಲ್ಲಿ ಧ್ಯಾನಯೋಗಿಯಾಗು, ಅಂತರಂಗದ ಧ್ಯಾನದಲ್ಲಿ ತೊಡಗು. ಆ
ಧ್ಯಾನದಲ್ಲಿ ತೊಡಗಿದ ಮೇಲೆ ನಿನ್ನ ಬಾಹ್ಯಕರ್ಮಗಳು ನಿನಗೆ ಲೇಪವಾಗುವುದಿಲ್ಲ. ಆಗ ಯುದ್ಧವೂ ಕೂಡಾ
ಭಗವದ್ ಪೂಜೆಯಾಗುತ್ತದೆ” ಎನ್ನುವುದು ಅರ್ಜುನನಿಗೆ ಶ್ರೀಕೃಷ್ಣನ ಸಂದೇಶ”.
ಶಂಕರಾಚಾರ್ಯರ
ಪ್ರಕಾರ “ಪ್ರಥಮಾ
ಪ್ರತಿಮಾಪೂಜಾ,
ಜಪಸ್ತೋತ್ರಾಣಿ ಮಧ್ಯಮಾ, ಉತ್ತಮಾ ಮಾನಸೀಪೂಜಾ, ಸೋಹಂ ಪೂಜೋತ್ತಮೋತ್ತಮಾ”. ಅಂದರೆ, ಪ್ರಥಮ
ಹಂತವು ವಿಗ್ರಹಾರಾಧನೆ; ಮುಂದಿನದು ಜಪ ಮತ್ತು ಸ್ತೋತ್ರ
ಧ್ಯಾನಗಳಿಂದ ಕೂಡಿರುತ್ತದೆ; ಅದಕ್ಕಿಂತ ಮೇಲಿನದು ಮಾನಸಿಕ ಪೂಜೆ,
ಸೋಹಂ ಎಂದು ತಿಳಿಯುವುದೇ ಅತ್ಯುತ್ತಮವಾದ ಪೂಜೆ. ...... ಭಕ್ತಿ
ಪೂಜಾಕ್ರಮಗಳಿಂದ ತನನ್ನು ಸಿದ್ಧಗೊಳಿಸದೆ ಹೋದವನಿಗೆ ಸಾವು ಹತ್ತಿರ ಬಂದಾಗ ಮನಸ್ಸನ್ನು
ದೇವರೆಡೆಗೆ ತಿರುಗಿಸುವುದು ಸಾಧ್ಯವಾಗುವುದಿಲ್ಲ. ........... “ಹರಿಮೀಡೇ ಸ್ತೋತ್ರ'ದಲ್ಲಿ ಶಂಕರರು ಹೀಗೆ ಹೇಳಿದ್ದಾರೆ: “ಸಂಸಾರವೆಂಬ ಕತ್ತಲೆಯನ್ನು ನಾಶಮಾಡುವ
ಹರಿಯನ್ನು ಸ್ತೋತ್ರಮಾಡು. ಬುದ್ಧಿಯ ವೈವಿಧ್ಯದಿಂದ ಆ ಒಂದು ಸತ್ಯವನ್ನು ಅನೇಕ ವಿಧಗಳಲ್ಲಿ
ಬ್ರಹ್ಮ ವಿಷ್ಣು, ರುದ್ರ, ಅಗ್ನಿ ಸೂರ್ಯ,
ಚಂದ್ರ ಇಂದ್ರ, ವಾಯು, ಯಜ್ಞ ಎಂದು ಮುಂತಾಗಿ ಕರೆಯುತ್ತಾರೆ.”
ಶ್ರೀಹರಿ, ಗಣೇಶ, ಗಣೇಶಾಯ ಅಕ್ಷರ ಅರ್ಥ
ಶ್ರೀಹರಿ = श्रीहरि = श्री ह रि
ಅಕ್ಷರಶಃ
ಅರ್ಥ :- ಚಲಿಸುವ ಸರಸ್ಪತಿ ವೈದ್ಯೆ (ಹರಿ ಎಂದರೆ ಚಲಿಸುವ ವೈದ್ಯ, ಪ್ರಾಣಾಯಾಮದಲ್ಲಿ ಮೂಲಾಧಾರದಿಂದ ಸಹಸ್ರಾರದವರೆಗೆ ಗುಪ್ತಗಾಮಿನಿ ಸರಸ್ಪತಿ ನದಿ
ಹರಿಯುತ್ತದೆ. ಇದು ನಮ್ಮ ದೇಹದ ಉತ್ಕೃಷ್ಟ ಸಾರಾಂಶವಾಗಿರುತ್ತದೆ. ಇದು ಎಲ್ಲಾ ನಾಡಿಗಳಲ್ಲಿ
ಹರಿಯುವ ವೈದ್ಯತೆ ಉಂಟು ಮಾಡುತ್ತದೆ. ಇದರಿಂದ ಜ್ಞಾನವೂ ಉಂಟಾಗುತ್ತದೆ. ಇದಕ್ಕೆ ಮಧ್ವ ಮತದವರು
ಹರಿದಾಸರು ಹರಿ ಸರ್ವೋತ್ತಮ ವಾಯು ಜೀವೋತ್ತಮ ಎಂದದ್ದು. ಇದು ವೈಧ್ಯ ಸಂಪತ್ತಿನ ಲಕ್ಷ್ಮೀ ಎಂತಲೂ
ಕರೆಯುತ್ತಾರೆ.)
“ನೀವು
ಯಾವ ದೇವತೆಯನ್ನು ಪೂಜಿಸುತ್ತೀರೋ ಆ ದೇವತೆಯನ್ನು ಸೇರುತ್ತೀರೇ ಹೊರತು ಮೋಕ್ಷವನ್ನಲ್ಲ”
ಎನ್ನುತ್ತಾನೆ ಕೃಷ್ಣ. (ಭಗವದ್ಗೀತೆ 7-೨೩) ಈ ವಿಚಾರಕ್ಕೆ ಕಾಠಕೋಪನಿಷತ್ತಿನಲ್ಲಿ ಸಮಾಧಾನವಿದೆ “ನಿತ್ಯೋ ನಿತ್ಯಾನಾಂ ಚೇತನಶ್ಚೇತನಾನಾಂ
ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್ । ತಮಾತ್ಮಸ್ದಮ್ ಯೇsನುವಶ್ಯಂತಿ ಧೀರಾಃ ತೇಷಾಂ
ಶಾಂತಿಃ ಶಾಶ್ವತೀ ನೇತರೇಷಾಮ್ ॥“
ಅಂದರೆ, "ನಿತ್ಯಗಳಿಗೆ ನಿತ್ಯ, ಚೇತನರಿಗೆ
ಚೇತನ, ಎಲ್ಲರಿಗೂ ಎಲ್ಲಾ ಅಭೀಷ್ಟ ನೀಡುವವ, ಸರ್ವೋತ್ತಮ ಹರಿ ಅವನನ್ನು ತಮ್ಮೊಳಗೆ ಕಾಣಬಲ್ಲ ಜ್ಞಾನಿಗಳಿಗೇ ಶಾಶ್ವತ ಸುಖ ಹೊರತು
ಕಾಣದವರಿಗಲ್ಲ”.
“ಸರ್ವಕರ್ಮಾ ಸರ್ವಗಂಧಃ ಸರ್ವರಸಹ್” ಎಂದು ಛಾಂದೋಗ್ಯದಲ್ಲಿ ಹೇಳುವಂತೆ ಶ್ರೀಹರಿ ಸರ್ವಗಂಧಾದಿ ರೂಪನಾಗಿದ್ದಾನೆ. “ತಾನಿ ಚಾಸ್ಯ ಸುದಿವ್ಯಾನಿ ಸುಗಂಧಾನಿ
ಸುಭಾಂತಿ ಚ” ಎಂದು ಭಾಗವತ ದಶಮಸ್ಕಂಧ ತಾತ್ಪರ್ಯದಲ್ಲಿ ಹೇಳುವಂತೆ
ಸರ್ವವಿಧ ಸುಗಂಧ ಉಳ್ಳವನು ಶ್ರೀಹರಿ. “ತಸ್ಮಿನ್ನಪೋ ಮಾತರಿ-ಶ್ವಾದಧಾತಿ”
ಸರ್ವ ಜೀವರ ಕರ್ಮಗಳನ್ನೂ ವಾಯುದೇವ ಹರಿಗೆ ಅರ್ಪಿಸುತಾನೆ ಎಂಬ ಈಶಾವಾಸ್ಯೋಪನಿಷದ್
ವಾಣಿ.
ಉತ್ತಮ
ಜ್ಞಾನ ಬರಬೇಕಾದರೆ ಪ್ರತಿಕ್ಷಣದಲ್ಲೂ ಮಾನವನ ನರನರದಲ್ಲೂ ಶ್ರೀಹರಿ ಶ್ರೀಹರಿ ಸಂಚರಿಸುತ್ತಿರಬೇಕು.
ಯಾರು ಶ್ರೀಹರಿಯನ್ನು ತನ್ನ ಯೋಗ್ಯತೆಯಂತೆ ಅರ್ಥ ಮಾಡಿಕೊಳ್ಳುತ್ತಾರೋ ಅವರು ಮಾತ್ರ ಜ್ಞಾನಿಯಾಗಿ
ಅವರಿಗೆ ಮೋಕ್ಷದ ಮಾರ್ಗವು ಸುಗಮವಾಗಿ ದೊರಕುತ್ತದೆಂಬುದರಲ್ಲಿ ಸಂಶಯವಿಲ್ಲ. 'ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ' - ಎಂಬ
ಕನಕದಾಸರ ಪ್ರಸಿದ್ದವಾದ ಕೀರ್ತನೆಯಲ್ಲಿ ಸುಷುಮ್ನಾ ನಾಡಿಯ ಬಾಗಿಲನ್ನು ತೆರೆದು ದೇಹದ ನಾಡಿಗಳಿಗೆ
ಚಲಿಸುವ ವೈದ್ಯತೆಯ ಸೇವೆಯನ್ನು ನೀಡು ಎಂಬ ಸಂದೇಶವಿದೆ. ಹಾಗೆಯೇ ಕನಕದಾಸರ ಕೀರ್ತನೆಯಲ್ಲಿ ಹರಿಯ
ಬಗ್ಗೆ ಒಳ್ಳೆ ವ್ಯಾಖ್ಯಾನ ನೋಡಿ “ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ, ನೀ ದೇಹದೊಳಗೊ ನಿನ್ನೊಳು ದೇಹವೊ, ಬಯಲೊಳಗೆ ಆಲಯವೊ ಆಲಯದೊಳಗೆ ಬಯಲೊ ?
ಬಯಲು ಆಲಯವೆರಡು ನಯನದೊಳಗೊ, ನಯನ ಬುದ್ಧಿಯ
ಒಳಗೊ, ಬುದ್ಧಿ ನಯನದ ಒಳಗೊ ? ನಯನ
ಬುದ್ಧಿಗಳೆರಡು ನಿನ್ನೊಳಗೊ ಹರಿಯೆ? ಸವಿಯು ಸಕ್ಕರೆಯೊಳಗೊ,
ಸಕ್ಕರೆಯು ಸವಿಯೊಳಗೊ? ಸವಿಯು ಸಕ್ಕರೆಯೆರಡು ಜಿಹ್ವೆಯೊಳೆಗೊ,
ಜಿಹ್ವೆ ಬುದ್ಧಿಯ ಒಳಗೊ, ಬುದ್ದಿ ಜಿಹ್ವೆಯ
ಒಳಗೊ? ಜಿಹ್ವೆ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ, ಕುಸುಮದೊಳು ಗಂಧವೊ, ಗಂಧದೊಳು ಕುಸುಮವೊ? ಕುಸುಮ ಗಂಧಗಳೆರಡು ಘ್ರಾಣದೊಳಗೊ, ಅಸಮಭವ
ಕಾಗಿನೆಲೆಯಾದಿಕೇಶನ ನಿನ್ನ ಉಸುರಲೆನ್ನೊಶವೆ ಸರ್ವವು ನಿನ್ನೊಳರಿಯೆ”
ಕನಕದಾಸರ
“ಹರಿಭಕ್ತಿ ಸಾರ” ಇದರಲ್ಲಿ ಹೀಗೆ ಹೇಳಿದ್ದಾರೆ “ದೀನ ನಾನು ಸಮಸ್ತ ಲೋಕಕೆ ದಾನಿ ನೀನು
ವಿಚಾರಿಸಲು ಮತಿ ಹೀನ ನಾನು ಮಹಾಮಹಿಮ ಕೈವಲ್ಯಪತಿ (ಆತ್ಮ ಬ್ರಹ್ಮರಾಯಿಕ್ಯ ಗೊಳಿಸುವ ಅಧಿಪತಿ
ನೀನು) ನೀನು ಏನ ಬಲ್ಲೆನು ನಾನು ನೆರೆ (ಸಮಗ್ರ) ಸುಜ್ಞಾನ ಮೂರುತಿ ನೀನು ನಿನ್ನ ಸಮಾನರುಂಟೇ ದೇವ
ರಕ್ಷಿಸು ನಮ್ಮನನವರತ”
ಪುರಂದರದಾಸರು
“ಹರಿನಾರಾಯಣ ಹರಿನಾರಾಯಣ ಹರಿನಾರಾಯಣ ಎನು ಮನವೆ ನಾರಾಯಣನೆಂಬ ನಾಮದ ಬೀಜವ ನಾರದ ಬಿತ್ತಿದ
ಧರೆಯೊಳಗೆ” (ಮನಸ್ಸಿನಲ್ಲಿ ನಾರಾಯಣ ಎಂಬ ಮಂತ್ರವನ್ನು ಧಾರೆಯೊಳಗೆ ಅಂದರೆ ಮೂಲಾಧಾರದಲ್ಲಿ
ಜಪಿಸಿದಾಗ ಹರಿ ಎಂಬ ಚಲಿಸುವ ವೈದ್ಯತೆ ಉಂಟಾಗುತ್ತದೆ ಎಂಬ ಬಾವ ಇದೆ) ಮುಂದುವರಿದು ಹರಿಯೇ
ಸರ್ವೊತ್ತಮ ಹರಿಯೇ ಪರದೇವತೆ, ಹರಿ ಸರ್ವವಿಶ್ವಮಯಂ ಜಗತ್” (ಇಲ್ಲಿ
ಪರ ವಿದ್ಯೆಯ ದೇವತೆ ಹರಿ, ಚಲಿಸುವ ವೈದ್ಯತೆ ಇಂತಹ ವಿಸ್ಮಯವನ್ನು
ಮಾಡುತ್ತದೆ ಎಂದು ಅದರ ವಿಶೇಷವನ್ನು ತಿಳಿಸಿದ್ದಾರೆ ಪುರಂದರದಾಸರು).
ಗಣೇಶ = गणेश = ग ण ए श
ಅಕ್ಷರಶಃ
ಅರ್ಥ :- ನೀರಿನ ಮನೆಯನ್ನು ತಲುಪಿ ಆಯುಧದ ಮೇಲೆ ಪರಿಣಾಮಬೀರುವ. (ನಮ್ಮ
ಉದರದಲ್ಲಿರುವ ನೀರಿನ ಮನೆಯನ್ನು ತಲುಪುವ ವಾಯು ಆಯುಧದ ಮೇಲೆ ಅಂದರೆ ಅಲ್ಲಿನ ಶಕ್ತಿ ರೂಪದ ಅಂಶಗಳ
ಮೇಲೆ ಪರಿಣಾಮ ಬೀರುವ, ಅಂತಹ ಪರಿಣಾಮದಿಂದ ಉತ್ಕೃಷ್ಟಅಂಶಗಳನ್ನು
ದೇಹಕ್ಕೆ ಒದಗಿಸುವ ಸ್ವರೂಪನೇ ಗಣೇಶ)
ಗಣೇಶಾಯ = गणेशाय = ग ण ए शा य
ಅಕ್ಷರಶಃ
ಅರ್ಥ :- ಗಾಳಿಯನ್ನು ಬಲಪಡಿಸಲು ನೀರಿನ ಮನೆಗೆ ತಲುಪುವ ಪರಿಣಾಮ
ಗಣೇಶ
ಸ್ತ್ರೋತ್ರಗಳಲ್ಲೂ ಪ್ರಾಣಾಯಾಮದ ಬಾವ ವಿವರಣೆ
ಶ್ರೀ ಗಣೇಶ ಭುಜಂಗ ಪ್ರಯಾತಾಷ್ಟಕ
ಸ್ತೋತ್ರದಲ್ಲಿ ಹೀಗಿದೆ
ಯಮೇಕಾಕ್ಷರಂ ನಿರ್ಮಲಂ ನಿರ್ವಿಕಲ್ಪಂ । ಗುಣಾತೀತಮಾನಂದಮಾಕಾರ
ಶೂನ್ಯಂ ||
ಪರಂ ಪಾರಮೋಂಕಾರಮಾಮ್ನಾಯ ಗರ್ಭಂ । ವದಂತಿ ಪ್ರಗಲ್ಲಂ ಪುರಾಣಂ
ತಮೀಡೇ ॥ 7
ಭಾವಾರ್ಥ - ಬ್ರಹ್ಮವನ್ನು ಪ್ರತಿನಿಧಿಸುವ ಒಂದೇ ಅಕ್ಷರದವನೂ, ವೇದವನ್ನು
ತನ್ನ ಶರೀರದಲ್ಲಿರಿಸಿ ಕೊಂಡಿರುವವನೂ ಓಂಕಾರವಾಚ್ಯನೂ, ಉಪಾಧಿ ರಹಿತನು (ಮೋಸ
ರಹಿತನು), ಕಲ್ಪರಹಿತನೂ (ಕಾಲ ರಹಿತನು), ಕೊಳೆಯಿಲ್ಲದವನೂ, ಸಂಶಯಾತೀತನೂ, ಗುಣಾಗುಣಗಳಿಗೆ ನಿಲುಕದವನೂ, ಆಕಾರರಹಿತನೂ, ಆನಂದ-ಸ್ವರೂಪನೂ, ಸರ್ವ ಶ್ರೇಷ್ಠನೂ, ವಾಗ್ಮಿಯಾಗಿರುವ ಪುರಾಣ ಪುರುಷನೂ ಗಣಗಳ ಅಧೀಶನೂ ಈಶ ಪುತ್ರನೂ ಆಗಿರುವ ಗಣೇಶನನ್ನು
ನಾನು ಸ್ತುತಿಸುವೆ. ( ಗಣದ ಅರ್ಥ "ಸಮೂಹ, ಪಡೆ, ಜನಸ್ತೋಮ, ಸಂಖ್ಯೆ, ಗುಂಪು,
ಸರಣಿ ಅಥವಾ ವರ್ಗ".)
ಚಿದಾನಂದ ಸಾಂದ್ರಾಯ ಶಾಂತಾಯತುಭ್ಯಂ । ನಮೋ ವಿಶ್ವಕರ್ತೇ ಚ ಹರ್ತೇ
ಚ ತುಭ್ಯಂ ॥
ನಮೋsನಂತ ಲೀಲಾಯ ಕೈವಲ್ಯ ಭಾಸೇ । ನಮೋ ವಿಶ್ವಬೀಜಾಯ ಪ್ರಸೀದೇಶಸೂನೋ
॥ 8
ಭಾವಾರ್ಥ - ಚಿದಾನಂದಮಯಿಯೂ, ಶಾಂತ ಸ್ವರೂಪಿಯೂ, ಬ್ರಹ್ಮಾಂಡದ ಉತ್ಪತ್ತಿಕಾರನೂ, ಲಯಕಾರಿಯೂ, ಅದ್ವಿತೀಯನೂ, ಅನಂತಲೀಲಾಮಯಿಯೂ, ತೇಜೋಮಯಿಯೂ, ಪ್ರಪಂಚದ ಬೀಜ ಸ್ವರೂಪನೂ ಆಗಿರುವ
ಈಶ್ವರತನಯನೇ ಪ್ರಸನ್ನನಾಗು.
ಶ್ರೀ ಗಣೇಶ
ಸ್ತೋತ್ರಮಾಲಾ ಹೀಗೆ ಹೇಳುತ್ತೆ,
ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ । ನಿರಾನಂದಮಾನಂದ ಮದ್ದ್ವೈತ
ಪೂರ್ಣಂ ॥
ಪರಂ ನಿರ್ಗುಣಂ ನಿರ್ವಿಶೇಷಂ ನಿರೀಹಂ | ಪರಬ್ರಹ್ಮರೂಪಂ ಗಣೇಶಂ ಭಜೇಮ
॥ 1
ಭಾವಾರ್ಥ - ಅನಾದಿಯೂ, ಸಮಾಧಿಸ್ಥನೂ, ಆಕಾರರಹಿತನೂ, ಅದ್ವಿತೀಯನೂ, ಆನಂದರಹಿತನೂ, ಆನಂದಸ್ವರೂಪನೂ, ಸರಿಸಾ-ಟಿಯಿಲ್ಲದವನೂ, ಪರಿಪೂರ್ಣನೂ, ಗುಣರಹಿತನೂ, ಅಂತರ ರಹಿತನೂ, ಇಚ್ಛಾರಹಿತನೂ, ಪರಬ್ರಹ್ಮ ಸ್ವರೂಪನೂ ಆಗಿರುವ
ಗಣೇಶನನ್ನು ಭಜಿಸೋಣಾ.
ಗುಣಾತೀತಮಾದ್ಯಂ ಚಿದಾನಂದರೂಪಂ । ಚಿದಾಭಾಸಕಂ ಸರ್ವಗಂ
ಜ್ಞಾನಗಮ್ಯಂ ॥
ಮುನಿಧ್ಯೇಯ ಮಾಕಾಶ ರೂಪಂ ಪರೇಶಂ । ಪರಬ್ರಹ್ಮರೂಪಂ ಗಣೇಶಂ ಭಜೇಮ
॥ 2
ಭಾವಾರ್ಥ - ಗುಣಗಳನ್ನು ಮೀರಿದವನೂ, ಚಿದಾನಂದ ಸ್ವರೂಪನೂ,
ಆತ್ಮಸ್ವರೂಪನೂ, ಸಮಸ್ತರಿಗೂ ಜ್ಞಾನ
ಪ್ರದಾಯಕನೂ, ಸರ್ವ ವ್ಯಾಪಿಯೂ, ಮುನಿಗಳ
ಧ್ಯಾನದ ಗುರಿಯಾಗಿರುವವನೂ, ಗಗನ ಸ್ವರೂಪನೂ, ಪರಮೇಶನೂ, ಪರಬ್ರಹ್ಮ ರೂಪನೂ ಆಗಿರುವ ಗಣೇಶನನ್ನು
ಭಜಿಸೋಣಾ.
ಸದಾಸತ್ವ ಯೋಗಂ ಮುದ್ರಾಕ್ರೀಡಮಾನಂ । ಸುರಾರೀನ್ ಹರಂ ತ್ವಂ
ಜಗತ್ಪಾಲಯಂತಂ ॥
ಅನೇಕಾವತಾರಂ ನಿಜ ಅಜ್ಞಾನಹಾರಂ । ಸದಾ ವಿಷ್ಣುರೂಪಂ ಗಣೇಶಂ
ನಮಾಮಃ ॥ 5
ಭಾವಾರ್ಥ - ಯಾವಾಗಲೂ ಸಾತ್ವಿಕ ಯೋಗ ಕ್ರಿಯೆಗಳಲ್ಲಿ ನಿರತನಾಗಿ ವಿನೋದಿಸುವವನೂ, ದೇವತೆಗಳ ವೈರಿಗಳನ್ನು ವಧಿಸುವವನೂ, ಜಗತ್ತಿನ ಪಾಲಕನೂ,
ಅನೇಕ ರೂಪಗಳನ್ನು ತಾಳಿದವನೂ, ಅಜ್ಞಾನವನ್ನು
ಪರಿಹರಿಸಿ ಜ್ಞಾನದಾಯಕನಾಗಿ ಉದ್ಧರಿಸುವವನೂ, ಮಹಾವಿಷ್ಣು ಶಕ್ತಿ
ಸ್ವರೂಪನೂ ಆಗಿರುವ ಗಣೇಶನಿಗೆ ನಾನು ನಮಿಸುವೆನು.
ತಮೋ ಯೋಗಿನಂ ರುದ್ರರೂಪಂ ತ್ರಿನೇತ್ರಂ । ಜಗತ್ಕಾರಕಂ ತಾರಕಂ ಜ್ಞಾನ
ಹೇತುಂ ॥
ಅನೇಕಾಗಮೈಃ ಸ್ವಜನಂ ಬೋಧಯಂತಂ । ಸದಾ ಶರ್ವರೂಪಂ ಗಣೇಶಂ
ನಮಾಮಃ ॥ 6
ಭಾವಾರ್ಥ - ಅಂಧಕಾರವನ್ನು ಜಯಿಸಿದ ಯೋಗಿಸ್ವರೂಪನೂ, ರುದ್ರ
ಸ್ವರೂಪಿಯೂ, ತ್ರಿನಯನನೂ, ಜಗತ್ತಿನ
ಒಡೆಯನೂ, ಜಗದ ಉದ್ದಾರಕನೂ, ಜಗತ್ತಿನ
ಜ್ಞಾನಕ್ಕೆ ಕಾರಣೀಭೂತನಾದವನೂ, ತನ್ನ ನೈಜ ಭಕ್ತರಿಗೆ ಅನೇಕ
ಆಗಮಗಳನ್ನು ಭೋಧಿಸುವವನೂ, ಯಾವಾಗಲೂ ಪರಮೇಶ್ವರ ಸ್ವರೂಪನೂ ಆಗಿರುವ
ಗಣೇಶನಿಗೆ ನಾನು ನಮಸ್ಕರಿಸುವೆನು.
ತಮಸ್ತೋಮ ಹಾರಂ ಜನಜ್ಞಾನ ಹಾರಂ । ತ್ರಯೀ ವೇದಸಾರಂ ಪರಬ್ರಹ್ಮ
ಪಾರಂ ॥
ಮುನಿಜ್ಞಾನಕಾರಂ ವಿದೂರೇ ವಿಕಾರಂ । ಸದಾ ಬ್ರಹ್ಮರೂಪಂ ಗಣೇಶಂ
ನಮಾಮಃ ॥ 7
ಭಾವಾರ್ಥ - ಜಗತ್ತಿನ ಅಂಧಕಾರವನ್ನು ನಿವಾರಿಸುವವನೂ, ಜನರ
ಅಜ್ಞಾನಗಳನ್ನು ಹೋಗಲಾಡಿಸುವವನೂ, ವೇದಗಳ ಸಾರ ಸರ್ವಸ್ವವೂ,
ಪರಬ್ರಹ್ಮದ ಎಲ್ಲೆಯೂ, ಮುನಿಗಳಿಗೆ
ಜ್ಞಾನವನ್ನು ಕರುಣಿಸುವವನೂ, ಇಂದ್ರಿಯ ಚಾಪಲ್ಯಗಳಿಗೆ ಬಹಳ
ದೂರದಲ್ಲಿರುವವನೂ, ಯಾವಾಗಲೂ ಬ್ರಹ್ಮ ಸ್ವರೂಪನೂ ಆಗಿರುವ ಆಗಿರುವ
ಗಣೇಶನಿಗೆ ನಾನು ನಮಸ್ಕರಿಸುವೆನು.
ನಿಜೈರೋಷಧೀಸ್ತರ್ಪಯಂತಂ ಕಶಾಪೈಃ | ಸುರೋಫಾನ್ ಕಲಾಭೀಃ
ಸುಧಾಸ್ರಾವಿಣಿಭೀಃ ॥
ದಿನೇಶಾಂಶು ಸಂತಾಪಹಾರಂ ದ್ವಿಜೇಶಂ । ಶಶಾಂಕ ಸ್ವರೂಪಂ ಗಣೇಶಂ
ನಮಾಮಃ ॥ 8
ಭಾವಾರ್ಥ - ಅರಿಷಡ್ವರ್ಗಗಳ ಸಂಹಾರಕನೂ, ದೇವತೆಗಳಲ್ಲಿರುವ
ರಸವಿದ್ಯಗಳಿಗೆ ಅಮೃತಪ್ರಾಯನೂ, ಸೂರ್ಯನ ತಾಪವನ್ನು ಪರಿಹರಿಸುವವನೂ,
ವಿಪ್ರರಿಗೆ ಒಡೆಯನೂ, ಚಂದ್ರನಂತೆ ಮನೋಹರ
ರೂಪವುಳ್ಳವನೂ ಆಗಿರುವ ಗಣೇಶನಿಗೆ ನಾನು ನಮಸ್ಕರಿಸುವೆನು.
ಉಪನಿಷತ್, ಉಪನಿಷದ್, ಪುರಾಣ ಅಕ್ಷರ ಅರ್ಥ
ಉಪನಿಷತ್ = उपनिषत् = उ प नि ष त
ಅಕ್ಷರಶಃ
ಅರ್ಥ :- ಗಾಳಿ ಜ್ಞಾನ ಶಿಕ್ಷಕ ಸದ್ಗುಣವನ್ನು ಒಪ್ಪಿಕೊಳ್ಳುವುದು
ಉಪನಿಷದ್ = उपनिषद् = उ प नि ष द्
ಅಕ್ಷರಶಃ
ಅರ್ಥ :- ಗಾಳಿ ಜ್ಞಾನವನ್ನು ಒಪ್ಪಿಕೊಳ್ಳುವುದು ಅತ್ಯುತ್ತಮ
ಕೊಡುಗೆ (ಒಟ್ಟಿನಲ್ಲಿ ಉಪನಿಷತ್ ಯಾ ಉಪನಿಷದ್ ಗಾಳಿಯ ಜ್ಞಾನವಾಗಿದೆ, ಇದರ ಭೋಧಕ ಸದ್ಗುಣವನ್ನು ಒಪ್ಪಿಕೊಳ್ಳುವುದು ಉಪನಿಷತ್ ಎಂದಾದರೆ, ಇದನ್ನು ಒಪ್ಪಿಕೊಳ್ಳುವುದರಿಂದ ಮಾನವನಿಗೆ ಉತ್ತಮ ಕೊಡುಗೆಯಾಗುತ್ತದೆ ಎಂಬುದೇ
ಪರವಿದ್ಯಾ ರಹಸ್ಯವಾಗಿದೆ.)
ಶಂಕರಾಚಾರ್ಯರ ಭಾಷ್ಯಗಳಲ್ಲಿ ಉಪನಿಷತ್ ಎಂಬುದಕ್ಕೆ ಬ್ರಹ್ಮವಿದ್ಯೆ ಎಂದು ಯಾವ ಮುಮುಕ್ಷುಗಳು ಈ
ವಿದ್ಯೆಯನ್ನು ಪಡೆದು ಸದಾ ಅದನ್ನೆ ಆಲಂಬಿಸಿರುತ್ತಾರೊ ಅವರ ಅವಿದ್ಯೆಯನ್ನು ನಾಶಮಾಡುವುದರಿಂದ
ಅಥವಾ ಅಂಥವರನ್ನು ಪರಬ್ರಹ್ಮದ ಬಳಿಗೆ ಒಯ್ಯುವುದರಿಂದ ಅಥವಾ ಅವರಿಗೆ ಮತ್ತೆ ಮತ್ತೆ ಬರುವ
ಗರ್ಭವಾಸಾದಿ ದುಃಖಗಳನ್ನು ಕೊನೆಗೊಳಿಸುವುದರಿಂದ ಈ ವಿದ್ಯೆಗೆ ಉಪನಿಷತ್ ಎಂದು ಹೆಸರು. ಈ ವಿದ್ಯೆಯಲ್ಲಿ ಪರಮಶ್ರೇಯಸ್ಸು ಅಡಗಿರುವುದರಿಂದಲೂ ಇದು
ಉಪನಿಷತ್ ಎಂದು ಹೆಸರಾಗಿದೆ. ಆಚಾರ್ಯರು ತಮ್ಮ ಭಾಷ್ಯವನ್ನು ಕೊನೆಯವರೆಗೂ ಈ ಅರ್ಥಗಳಿಗೆ
ಪೋಷಕವಾಗುವಂತೆ ನೋಡಿಕೊಂಡಿದ್ದಾರೆ.
ವಿದ್ವಾನ್ ಎ. ಕೆ. ಶಂಕರನಾರಾಯಣ ಭಟ್ ರವರ ಪ್ರಕಾರ “ಉಪನಿಷತ್ತುಗಳು ವೇದದ ಜ್ಞಾನಕಾಂಡಾತ್ಮಕ ಮಂತ್ರಸಮೂಹ-ಗಳಾಗಿವೆ.
ಇವುಗಳಲ್ಲಿ ಆತ್ಮ, ಬ್ರಹ್ಮ ಎಂಬ ವಿಚಾರಗಳು ಪ್ರಧಾನವಾಗಿ
ಪ್ರತಿಪಾದಿಸಲ್ಪಟ್ಟಿರುತ್ತವೆ. ಮಾನವನನ್ನು ಪರಮಾತ್ಮನೆಡೆಗೆ ಒಯ್ಯುವ ಜ್ಞಾನ, ಅಥವಾ ಮನುಷ್ಯನಿಗೂ ಜಗತ್ತು ಪರಮಾತ್ಮನಿಗೂ ಇರುವ ಸಂಬಂಧವನ್ನು ತಿಳಿಸುವ ಜ್ಞಾನ
ಎಂದು ಅರ್ಥ ಹೇಳಬಹುದು”.
ಷಣ್ಮುಖಯ್ಯ ಅಕ್ಕೂರಮಠ ರವರ ಪ್ರಕಾರ “ಉಪನಿಷತ್ತು ಮತ್ತು ಆಗಮಗಳಲ್ಲಿ ಬರುವ ಗುರು ಶಿಷ್ಯ ಸಂಬಂಧ
ಪವಿತ್ರವಾದ ಸಂಬಂಧ. ಗುರುವಿನ ಸಮೀಪದಲ್ಲಿ ಕುಳಿತು ಕೇಳಿದ್ದು ಎಂಬುದೇ ಉಪನಿಷತ್ ಶಬ್ದದ ಅರ್ಥ.
"ಗುರು ಪಾರಂಪರ್ಯಾಗತಂ ಶಾಸ್ತ್ರಂ'' ಗುರು ಪರಂಪರೆಯಿಂದ ಹರಿದುಬಂದ
ಜ್ಞಾನರಾಶಿ ಆಗಮ.
ವಿದ್ವಾನ್ ಎಂ. ಸಿ. ರಾಮರಾವ್ ಪ್ರಕಾರ “ಉಪನಿಷತ್ ಎಂಬುದರ ಭಾಹ್ಯಾರ್ಥ ಶಿಷ್ಯನೇ ಬಂದು ಕುಳಿತುಕೋ, ಜ್ಞಾನವನ್ನು ಕಲಿ”. ಮುಂಡಕೋಪನಿಷತ್ ನಲ್ಲಿ ಹೀಗೆ ಹೇಳಿದೆ (2-2-3) “ಎಲೈ ಸೋಮ್ಯನೇ
ಉಪನಿಷತ್ ಎಂಬ ಬಿಲ್ಲನ್ನು ತೆಗೆದುಕೋ; ಆ ಮಹತ್ತರವಾದ ಬಿಲ್ಲಿಗೆ
ಆರಾಧನೆಯಿಂದ ಹರಿತಮಾಡಿದ ಬಾಣವನ್ನು ಅನು ಸಂಧಾನುಮಾಡು ; ಆ
ಪರಮಾತ್ಮನನ್ನು ತಿಳಿದುಕೊಳ್ಳುವ ಮಹತ್ವಾಕಾಂಕ್ಷೆ ಎಂಬ ಗುರಿಯನ್ನಿಟ್ಟುಕೋ; ಬಿಲ್ಲನ್ನು ಎಳೆದು ಈ ಗುರಿಯನ್ನು ಸಾಧಿಸಲು ಬಾಣವನ್ನು ಬಿಡು”.
ವಿದ್ವಾನ್ ಹೆಚ್ ಎನ್ ರಘವೇಂದ್ರಚಾರ್ಯ ರವರ ಪ್ರಕಾರ ಉಪನಿಷತ್ತೆಂದರೆ ರಹಸ್ಯ
ಎಂದು ಅರ್ಥ ಹೇಳುವುದು ಯುಕ್ತವಾ-ಗಿರುವುದು, ಎನ್ನುತ್ತಾರೆ
ಮುಂದುವರಿದು, ಶಂಕರಾಚಾರ್ಯರು ಉಪನಿಷತ್ತೆಂದರೆ ರಹಸ್ಯ ವಸ್ತುವಿನ
ಜ್ಞಾನವನ್ನು ಉಂಟುಮಾಡುವ ವಿದ್ಯೆ ಎನ್ನುವರು; ರಹಸ್ಯ ವಸ್ತು ಎಂದರೆ
ಬ್ರಹ್ಮನೆಂಬ ಅರ್ಥವು ಉಪನಿಷತ್ತೆಂದರೆ ಬ್ರಹ್ಮಜ್ಞಾನವನ್ನು ಕೊಡುವ ವಿದ್ಯೆ ಎಂಬುದೇ ಅವರ
ಅಭಿಪ್ರಾಯ, ಈ ಅರ್ಥವೇ ವೇದಾಂತ ದರ್ಶನವನ್ನು ಅವಲಂಬಿ-ಸಿರುವ ಎಲ್ಲ
ಆಚಾರ್ಯರಿಗೂ ಸಮ್ಮತವಾದುದು, ..... ಮೊಟ್ಟ-ಮೊದಲು ಉಪನಿಷತ್
ಎಂದರೆ “ತತ್ವ ಮುಸಿ” ಮುಂತಾದ ಪುಟ್ಟ ವಾಕ್ಯಗಳೆಂದೂ ಅನಂತರ ಅವುಗಳ ವ್ಯಾಖ್ಯಾನವೂ ಸೇರಿ ಒಟ್ಟು
ಗ್ರಂಥ ಉಪನಿಷತ್ ಎಂಬ ಪದದಿಂದ ವ್ಯವಹೃತವಾಯಿತೆಂದೂ ಪ್ರತೀಚ್ಯರ ವಾದ …… ವೇದ, ಉಪನಿಷತ್ ಮತ್ತು ಆಗಮ ಮುಂತಾದುವು ಅಮೃತ ರೂಪವನ್ನು
ತಿಳಿಸುವುವು. ....... ಉಪನಿಷತ್ ಎಂದರೆ ಪ್ರಕೃತ ವೇದ ಎನ್ನುತ್ತಾರೆ.
ರಾಮಕೃಷ್ಣ ಆಶ್ರಮದ ಸ್ವಾಮಿ
ರಂಗನಾಥಾನಂದರು ಹೀಗೆ ಅರ್ಥೈಸುತ್ತಾರೆ, ಯೋಗದ ಅಂಶಗಳಲ್ಲಿ ಒಂದಾದ ಈ ಬಗೆಯ
ನೈಪುಣ್ಯತೆಯನ್ನು ಛಾಂದೋಗ್ಯ ಉಪನಿಷತ್ತಿನಲ್ಲಿ ಒತ್ತಿ ಹೇಳಲಾಗಿದೆ. ಆ ಉಪನಿಷತ್ತಿನಲ್ಲಿ
ನೈಪುಣ್ಯತೆಯನ್ನು ಒಂದು ಸುಂದರವಾದ ಶ್ಲೋಕದಲ್ಲಿ ಹೀಗೆ ವಿವರಿಸಲಾಗಿದೆ (೧.೧.೧೦) : “ಯದೇವ
ವಿದ್ಮಯಾ ಕರೋತಿ ಶ್ರದ್ಧಯಾ ಉಪನಿಷದಾ ತದೇವ ವೀರ್ಯವತ್ತರಂ ಭವತಿ...” ಅಂದರೆ “ಯಾವ ಕರ್ಮವನ್ನು
ಜ್ಞಾನದಿಂದ, ಶ್ರದ್ಧೆಯಿಂದ, ಮತ್ತು
ಗಾಢ ಆಲೋಚನೆಯಿಂದ ಮಾಡುವೆವೊ ಅದು ಮಾತ್ರವೇ ಅತ್ಯಂತ ಕೌಶಲದಿಂದ ಕೂಡಿರುವುದು”. ವಿವರಿಸುತ್ತಾ
ಹೀಗೆನ್ನುತ್ತಾರೆ, ನೈಪುಣ್ಯತೆಯ ಮೊದಲ ಅಂಶ ವಿದ್ಯಾ, ಎಂದರೆ ವಸ್ತು ಜ್ಞಾನ ಅಥವಾ ಒಂದು ವಿಷಯದ ತಂತ್ರಜ್ಞಾನದ ತಿಳಿವಳಿಕೆ. ನಂತರ
ಬರುವುದೇ ಶ್ರದ್ಧಾ, ಎಂದರೆ ನಮ್ಮಲ್ಲಿ ನಮಗೆ ವಿಶ್ವಾಸ, ಮತ್ತು ಯಾವುದಕ್ಕಾಗಿ ಶ್ರಮಿಸುತ್ತಿರುವೆವೊ ಅದರ ಮೇಲೆ ವಿಶ್ವಾಸ. ಕೊನೆಗೆ ಬರುವುದು
ಉಪನಿಷತ್, ಎಂದರೆ ಒಂದು ವಿಷಯದ ಮೇಲೆ ಗಾಢವಾದ ಚಿಂತನೆ. ಇದರಿಂದ
ಅದನ್ನು ಆಳವಾಗಿ ತಿಳಿದು ಕೊಳ್ಳಲು ಸಾಧ್ಯ. ವಿದ್ಯಾ, ಶ್ರದ್ಧಾ,
ಮತ್ತು ಉಪನಿಷತ್, ಈ ಮೂರು, ನಮ್ಮ ನೈಪುಣ್ಯತೆಯನ್ನು ಯಾವುದೇ ಕ್ಷೇತ್ರದಲ್ಲಾದರೂ ವೃದ್ಧಿಪಡಿಸಿಕೊಳ್ಳಲು ಆವಶ್ಯಕ”.
ಮುಂದುವರಿದು ಶ್ವೇತಾಶ್ವತರ ಉಪನಿಷತ್ ಶ್ಲೋಕವನ್ನು ಉಲ್ಲೇಕಿಸಿ ಮಾನವನ ಅಂತರಂಗದ ದಿವ್ಯತೆಯ
ಜ್ಞಾನದ ಮಹತ್ವ ತಿಳಿಸುತ್ತಾರೆ.
ಯದಾ ಚರ್ಮವತ್ ಆಕಾಶಂ ವೇಷ್ಟಯಿಷ್ಯಂತಿ
ಮಾನವಾಃ |
ತದಾ ದೇವಂ ಅವಿಜ್ಞಾಯ ದುಃಖಸ್ಯಾಂತೋ
ಭವಿಷ್ಯತಿ ॥
ಶ್ವೇತಾಶ್ವತರ ಉಪನಿಷತ್, ೬.೨೦
ಭಾವಾರ್ಥ;- (ತಾಂತ್ರಿಕ ಜ್ಞಾನದ
ಸಹಾಯದಿಂದ) ಮಾನವನು ಆಕಾಶವನ್ನು ಚರ್ಮವನ್ನು ಸುತ್ತುವಂತೆ ಸುತ್ತಿ ಬಿಡಬಹುದು. ಆದರೂ ಅಂತರಗಂದ
ದಿವ್ಯತೆಯನ್ನು ಅರಿಯದೆ ಅವರಿಗೆ ದುಃಖ ವಿಮುಕ್ತಿಯು ಸಾಧ್ಯವಿಲ್ಲ.
ವಿದ್ವಾನ್ ಎನ್. ರಂಗನಾಥಶರ್ಮ ಅಭಿಪ್ರಾಯದಂತೆ, ಉಪನಿಷತ್ತುಗಳಿಗೆ ವೇದಾಂತವೆಂಬ
ಹೆಸರಿದೆ. ಆದ್ದರಿಂದ ಉಪನಿ-ಷತ್ ಪ್ರತಿಪಾದ್ಯವಾದ ಅಧ್ಯಾತ್ಮಶಾಸ್ತ್ರವು ವೇದಾಂತಶಾಸ್ತ್ರವೆಂದು
ಪ್ರಸಿದ್ಧವಾಯಿತು. ವೇದಾಂತಿಗಳನ್ನು ಉಪನಿಷದ್ವಾದಿಗಳೆಂದೂ ಔಪನಿಷದರೆಂದೂ ವ್ಯವಹರಿಸುವುದುಂಟು.
ವಿದ್ವಾನ್ ಹೆಚ್. ಜೆ. ರಾಮಯ್ಯಂಗಾರ್ ಅಭಿಪ್ರಾಯದಂತೆ, “ಜಗತ್ತಿನಲ್ಲಿ ನಿರ್ಲಿಪ್ತತೆ,
ನಿರಭಿಮಾನ, ವೈರಾಗ್ಯಗಳಿಂದ ಬಾಳುವೆ ನಡೆಸಿ,
ತಮ್ಮ ಅತೀಂದ್ರಿಯ ಶಕ್ತಿಯಿಂದ ದೊರೆತ ಬ್ರಹ್ಮಾನಂದವನ್ನು ಅನುಭವಿಸಿದ
ಖುಷಿಗಳು, ಯೋಗಿಗಳು, ಸಂತರು,
ಮಹಾತ್ಮರು ಜಗತ್ತಿನ ಕಲ್ಯಾಣಕ್ಕಾಗಿ ತಿಳಿಸಿರುವ ಅಮರವಾಣಿಗಳೇ ಉಪನಿ-ಷತ್ತುಗಳು
ಎನಿಸಿಕೊಳ್ಳುತ್ತವೆ. ಉಪನಿಷತ್ ಎಂದರೆ ಪರಮಾತ್ಮನಿಗೆ ನೇರವಾಗಿ ಅನ್ವಯಿಸುವ ಜ್ಞಾನ ಎಂದರ್ಥ ಅನೇಕ
ಶತಮಾನಗಳ ಕಾಲ ಶ್ರಮಿಸಿ ಸತ್ಯದ ಅನ್ವೇಷಣೆ ಮಾಡಿ; ಕಣ್ಣುಗಳಿಂದ
ನೋಡಿ, ಕಿವಿಯಿಂದ ಕೇಳಿ, ಆತ್ಮವೆಂಬ
ಪ್ರಯೋಗಶಾಲೆಯಲ್ಲಿ ಪರೀಕ್ಷಿಸಿ ದೃಡಪಡಿಸಿಕೊಂಡು, ಭಿನ್ನ ಭಿನ್ನವಾದ
ದೃಷ್ಟಿ ಕಲ್ಪನೆಗಳಿಗ ಗೋಚರಿಸಿದ ಏಕ ಸತ್ಯದ ಹಲವು ತತ್ವ ಸಿದ್ಧಾಂತಗಳು ಈ ಉಪನಿಷತ್ತುಗಳಲ್ಲಿ ಇವೆ.
ವೇದಗಳ ಕೊನೆಯ ಅಥವಾ ಅಂತ್ಯ ಭಾಗವಾದ ಈ
ಉಪನಿಷತ್ತುಗಳಲ್ಲಿ ಮುಖ್ಯವಾದ ಬ್ರಹ್ಮ ವಿಷಯದ ಜ್ಞಾನವು ವಿವರಿಸಲ್ಪಟ್ಟಿರುವುದರಿಂದ ಇದಕ್ಕೆ ವೇದಾಂತ
ಎಂಬ ಹೆಸರು ಬಂದಿತು. ಉಪನಿಷತ್ತುಗಳಲ್ಲಿ ಅಡಗಿರುವ ಈಶ್ವರ, ಜೀವ,
ಪ್ರಪಂಚ ಈ ಮೂರರ ತತ್ತ್ವ, ಮತ್ತು ಪರಸ್ಪರ
ಸಂಬಂಧಗಳನ್ನು ಬೋಧಿಸುವುದೇ ವೇದಾಂತದ ಉದ್ದೇಶವಾಗಿದೆ. ನಮ್ಮ ಪೂರ್ವಾಚಾರ್ಯರುಗಳು ಉಪನಿಷತ್ತುಗಳ
ಅರ್ಥಗಳನ್ನು ಬಹು ಚೆನ್ನಾಗಿ ವಿವರಿಸಿದ್ದಾರೆ. ಇದರಲ್ಲಿರುವ ವಿಚಾರಗಳು ಗಹನ, ರಹಸ್ಯ ಆಗಿದ್ದು, ಅತಿ ಸಮೀಪದಲ್ಲಿ ಕುಳಿತು
ಗುರುಗಳಿಂದ ಶಿಷ್ಯರಿಗೆ ಪರಂಪರೆಯಾಗಿ ಕೇಳಿ ತಿಳಿದು ಆಚರಣಿಗೆ ಬಂದಿರುವುದರಿಂದ ಇದಕ್ಕೆ ಶ್ರುತಿ
ಎಂದೂ ಹೆಸರು ಬಂದಿತು”.
ಶ್ರೀ ಸಚ್ಚಿದಾನಂದ ಸರಸ್ಪತೀ ಸ್ವಾಮಿಗಳವರ
ಪ್ರಕಾರ ಸಂಸಾ-ರವನ್ನು ಹೋಗಲಾಡಿಸುವದಕ್ಕಾಗಿ ಅಜ್ಞಾನವನ್ನು ಕಳೆಯುವದ-ಕ್ಕೋಸ್ಕರ ಬ್ರಹ್ಮವಿದ್ಯೆಯನ್ನು
ತಿಳಿಸುವದಕ್ಕೇ ಉಪನಿಷತ್ತು ಪ್ರಾರಂಭ-ವಾಗಿರುತ್ತದೆ. ಬ್ರಹ್ಮವಿದ್ಯೆಯನ್ನು ತಿಳಿಸುವ ಉಪನಿಷದ್ರೂಪವಾದ
ಸಾರ. ವಿದ್ಯೆಗೆ ಉಪನಿಷತ್ತು ಎಂಬ ಹೆಸರು
ಬಂದಿರುತ್ತದೆ. ವಿದ್ಯೆ-ಯನ್ನು ತಿಳಿಸುವ ಗ್ರಂಥಕ್ಕೆ ಗೌಣವಾಗಿ ಆ ಹೆಸರು ಬಂದಿದೆ ಎಂದು ಭಾವ, ಎನ್ನುತ್ತಾರೆ.
ಪುರಾಣ = पुराण = पु रा ण
ಅಕ್ಷರಶಃ
ಅರ್ಥ :- ಜ್ಞಾನವನ್ನು
ನೀಡತ್ತಾ ಶುದ್ಧೀಕರಿಸುವುದು (ಜ್ಞಾನ ಭೋದನೆಗಾಗಿಯೇ ರಚಿತವಾದುದ್ದು, ಪುರಾಣ ಸಾಹಿತ್ಯ, ಇದು ಮನುಜನ ಜ್ಞಾನ ಸಂಪಾದನೆಗೆ ಗೊಂದಲವನ್ನು ನಿವಾರಿಸಿ ಶುದ್ದೀಕರಿಸುವುದು)
ವೇದಾರ್ಥಾದಧಿಕಂ ಮನ್ಯೇ ಪುರಾಣಾರ್ಥಂ
ವರಾನನೇ ||
ವೇದಾಃ ಪ್ರತಿಷ್ಠಿತಾಃ ಸರ್ವೇ
ಪುರಾಣೇಷ್ವೇನ ಸರ್ವದಾ | ಬಿ
ಭೇತ್ಯಲ್ಪಶ್ರುತಾದ್ವೇದೋ ಮಾಮಯವಂ
ಪ್ರಹರಿಷ್ಯತಿ ॥
ನಾರದೀಯಪುರಾಣಂ 8-24-17, 18
ಭಾವಾರ್ಥ:- ವರಾನನೇ! ವೇದಾರ್ಥಕ್ಕಿಂತಲೂ ಪುರಾಣಾರ್ಥವು ಹೆಚ್ಚೆಂದು ತಿಳಿದಿರುವೆನು. ಸಕಲ
ವೇದಗಳೂ ಪುರಾಣಗಳಲ್ಲಿಯೇ ಯಾವಾಗಲೂ ಪ್ರತಿಷ್ಠಿತವಾಗಿವೆ. ಪುರಾಣಾದಿಗಳನ್ನು ಸಂಪೂರ್ಣ-ವಾಗಿ ಓದಿ
ರಹಸ್ಯವನ್ನು ತಿಳಿದುಕೊಳ್ಳದೇ ಸ್ವಲ್ಪವಾಗಿ ಓದಿಕೊಂಡಿ-ರುವವನನ್ನು ನೋಡಿ ವೇದವು ಇವನು ಅಪಾರ್ಥಗಳನ್ನು ಹೇಳಿ ನನ್ನನ್ನು ಕೆಡಿಸುವನು ಎಂಬುದಾಗಿ
ಭಯಪಪಡುತ್ತದೆ.
ಇತಿಹಾಸಪುರಾಣಾಭ್ಯಾಂ ವೇದಂ
ಸಮುಪಬೃಂಹಯೇತ್ ।
ಬಿಭೇತ್ಕಲ್ಪಶ್ರುತಾದ್ವೇದೋ ಮಾಮಯಂ
ಪ್ರತರಿಷ್ಯತಿ ॥
ಶ್ರೀ ಮದ್ವಾಯುಪುರಾಣಂ 1-1-184
ಭಾವಾರ್ಥ:- ಯಾವ ಬ್ರಾಹ್ಮಣನು ಜ್ಞಾನಿಯಾಗಲು ಬಯಿಸುವನೋ ಅವನು ಮೊದಲು ಇತಿಹಾಸ ಪುರಾಣಗಳನ್ನು ಅಭ್ಯಾಸಮಾಡಿ
ತನ್ಮೂಲಕವಾಗಿ ವೇದಾರ್ಥಗಳನ್ನು ತಿಳಿಯಬೇಕು. ಹಾಗೆ ಪುರಾಣಾ-ದಿಗಳನ್ನು
ತಿಳಿಯದ ಅಲ್ಪಜ್ಞನಾದ ಮನುಷ್ಯನು ವೇದಗಳಿಗೆ ಅಪಾರ್ಥವನ್ನು ಮಾಡುವುದರಿಂದ ವೇದಗಳೂ ಸಹ ಅವನಿಗೆ
ಹೆದರುತ್ತವೆ.
ಭಾಗವತವನ್ನು
ಪರೀಕ್ಷಿತನಿಗೆ ಉಪದೇಶಿಸುವ ಮುನ್ನ ಶುಕಾಚಾರ್ಯರು ಪುರಾಣದ ಹತ್ತು ಪ್ರಮುಖ ಲಕ್ಷಣಗಳನ್ನು ಆತನಿಗೆ
ವಿವರಿಸಿರುವುದನ್ನು ಕಾಣುತ್ತೇವೆ. ಸರ್ಗ, ವಿಸರ್ಗ, ಸ್ಥಾನ, ಪೋಷಣ, ಊತಿ,
ಮನ್ವಂತರ, ಈಶಕಥಾ, ನಿರೋಧ, ಮುಕ್ತಿ ಮತ್ತು ಆಶ್ರಯ. ಇವು ಪುರಾಣದ
ದಶಲಕ್ಷಣಗಳು. (ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು ದಶಲಕ್ಷಣಗಳನ್ನು ಹೀಗೆ
ವಿವರಿಸುತ್ತಾರೆ :- ಸರ್ಗ-ವಿಸರ್ಗ: ಈ
ಬ್ರಹ್ಮಾಂಡ ಸೃಷ್ಟಿಯಾಗುವ ಮೊದಲು ಬ್ರಹ್ಮಾಂಡದ ಮೂಲದ್ರವ್ಯಗಳ ಸೃಷ್ಟಿಯಾಯಿತು. ಇದನ್ನು
ಸೂಕ್ಷ್ಮಸೃಷ್ಟಿ ಎನ್ನುತ್ತಾರೆ. ಪಂಚಭೂತಗಳು, ಪಂಚತನ್ಮಾತ್ರೆಗಳು,
ಪಂಚಜ್ಞಾ-ನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು ಮತ್ತು ಪಂಚವಿಧದ ಅಂತಃಕರಣ ಎನ್ನುವ ಪಂಚಕಗಳ ಸೃಷ್ಟಿ
ಬ್ರಹ್ಮಾಂಡ ಸೃಷ್ಟಿಗೆ ಪೂರ್ವಭಾವಿಯಾಗಿ ನಡೆದ ಸೃಷ್ಟಿ. ಇದನ್ನೇ ‘ಸರ್ಗ’ ಎನ್ನುತ್ತಾರೆ. ಈ
ಎಲ್ಲಾ ಮೂಲದ್ರವ್ಯಗಳಿಂದ ಮುಂದೆ ಸೃಷ್ಟಿಯ
ವಿಸ್ತಾರವಾಯಿತು. ಅದನ್ನು ‘ವಿಸರ್ಗ’ ಎನ್ನುತ್ತಾರೆ. ಸ್ಥಾನ ಅಥವಾ ‘ಸ್ಥಿತಿ’ ಎಂದರೆ ಸೃಷ್ಟಿಯಾದ
ಪ್ರಪಂಚವನ್ನು ಅದರ ಇರುವಿಕೆಯ ನಿಯಮದಲ್ಲಿಟ್ಟು ಸಂರಕ್ಷಿಸುವುದು ಎಂದರ್ಥ. ಉದಾಹರಣೆಗೆ ಹಿರಣ್ಯಾಕ್ಷರಂತಹ
ದೈತ್ಯರು ಸೃಷ್ಟಿ ವ್ಯವಸ್ಥೆಯನ್ನು ಕೆಡಿಸಲು ಪ್ರಯತ್ನಿಸಿದಾಗ, ಭಗವಂತ
ಅವತಾರರೂಪಿಯಾಗಿ ಬಂದು ಅವರನ್ನು ಸಂಹಾರಮಾಡಿ,
ಸೃಷ್ಟಿಯನ್ನು ತನ್ನ ನಿಯಮದಂತೆ ಯಥಾಸ್ಥಿತಿಯಲ್ಲಿರಿಸಿ, ಧರ್ಮರಕ್ಷಣೆ ಮಾಡಿ ಪೋಷಿಸುತ್ತಾನೆ. ಪುರಾಣಗಳಲ್ಲಿ ‘ಮನ್ವಂತರ’ದ ಕಥೆಯನ್ನು
ಕಾಣುತ್ತೇವೆ. ಒಂದು ದಿನಕಲ್ಪದಲ್ಲಿ ಒಟ್ಟು ಹದಿನಾಲ್ಕು ಮನ್ವಂತರಗಳಿವೆ. ಮನ್ವಂತರದ
ಮೂಲಪುರುಷನನ್ನು ‘ಮನು’ ಎಂದು ಕರೆಯುತ್ತಾರೆ. ‘ಊತಯಃ’ ಎಂದರೆ ‘ಜೀವ’ರುಗಳ ಅನಾದಿ ಕರ್ಮಗಳು
ಮತ್ತು ಸಂಸ್ಕಾರಗಳು. ನಮ್ಮ ಇಂದಿನ ಜೀವನಕ್ರಮದ ಹಿಂದೆ ಪೂರ್ವ ಜನ್ಮಗಳ ಸಂಸ್ಕಾರ
ಬೆಸೆದುಕೊಂಡಿರುತ್ತದೆ. ಕೆಲವೊಮ್ಮೆ ಹಿಂದಿನ ಜನ್ಮದ ಸಂಸ್ಕಾರ ಜಾಗೃತಗೊಳ್ಳುತ್ತದೆ. ನಮ್ಮ ಮನಸ್ಸು ಹಿಂದೆ
ಅನುಭವಿಸಿದ್ದನ್ನು ನೆನಪಿಸಿಕೊಂಡು ಈ ಜನ್ಮದಲ್ಲಿ
ಅದಕ್ಕೆ ಬೇಕಾದ ಚಟುವಟಿಕೆಗಳನ್ನು, ಆಕರ್ಷಣೆಗಳನ್ನು
ಸೃಷ್ಟಿ ಮಾಡಿಕೊಳ್ಳುತ್ತದೆ. ಭಗವಂತ ಯಾವಯಾವ ಮನ್ವಂತರದಲ್ಲಿ ಏನೇನು ರೂಪತಾಳಿ ಏನೇನು
ಲೀಲೆಗಳನ್ನು ತೋರುತ್ತಾನೆ ಮತ್ತು ಆತನ ಅನುವರ್ತಿಗಳಾಗಿ ದೇವತೆಗಳು, ಋಷಿಗಳು, ಚಕ್ರವರ್ತಿಗಳು ಭೂಮಿಯಲ್ಲಿ ಏನೇನು ಮಾಡಿದರು
ಎನ್ನುವ ಕಥೆಯೇ ಈಶಕಥಾ. ನಿರೋಧ ಮತ್ತು ಮುಕ್ತಿ: ಬದುಕಿನಿಂದ ಕಳಚಿಕೊಳ್ಳುವ ಪ್ರಳಯದ ಕಥೆಯನ್ನು
ನಿರೋಧ ಎನ್ನುತ್ತಾರೆ. ಪ್ರಳಯ ಕಾಲದಲ್ಲಿ ಜ್ಞಾನ-ಸ್ಮರಣೆಯನ್ನು ಕಳೆದುಕೊಂಡು, ಜೀವರು ಭಗವಂತನ ಉದರದಲ್ಲಿ ಸುಪ್ತಾವಸ್ಥೆಯಲ್ಲಿರುತ್ತಾರೆ. ಈ ರೀತಿ ಇರುವ ಜೀವರಲ್ಲಿ
ಕೆಲವರು ಮತ್ತೆ ಸಂಸಾರದಲ್ಲಿ ಹುಟ್ಟಿ ಬರುತ್ತಾರೆ. ಇನ್ನು ಕೆಲವರು ಮೋಕ್ಷವನ್ನು ಪಡೆಯುತ್ತಾರೆ.
ಈ ನಮ್ಮ ರೂಪ ನಮ್ಮ ನಿಜರೂಪವಲ್ಲ. ನಮ್ಮ ಮೂಲರೂಪ ಜ್ಞಾನಾನಂದಮಾಯವಾದುದು. ಜಡರೂಪವನ್ನು
ಶಾಶ್ವತವಾಗಿ ಕಳಚಿಕೊಂಡು ಜ್ಞಾನಾನಂದರೂಪದಲ್ಲಿ ನೆಲೆಗೊಳ್ಳು-ವುದು
ಮುಕ್ತಿ. ಆಶ್ರಯ: ಈ ಜಗತ್ತಿಗೆಲ್ಲಾ ಆಶ್ರಯವಾದ, ಜಗತ್ತಿನ
ಸೃಷ್ಟಿ-ಸ್ಥಿತಿ-ಸಂಹಾರಗಳನ್ನು ಕೊಡತಕ್ಕಂತಹ ಶಕ್ತಿ ಯಾವುದು ಎಂದು ಚಿಂತನೆ ಮಾಡುವುದನ್ನು ಆಶ್ರಯ
ಎನ್ನುತ್ತಾರೆ. ಯಾವುದನ್ನು ಪರಂಬ್ರಹ್ಮ, ಪರಮಾತ್ಮಾ, ಇತ್ಯಾದಿಯಾಗಿ ಶಾಸ್ತ್ರಗಳು ಉಲ್ಲೇಖಿಸಿ ಮಾಹಿತಿ ಕೊಡುತ್ತವೋ ಅದನ್ನು ‘ಆಶ್ರಯ’
ಎನ್ನುತ್ತಾರೆ.)
ಸಂಸಾರ
ಎಂದರೇನು?
ಸಂಸಾರ = संसार = सं सा र
ಅಕ್ಷರಶಃ
ಅರ್ಥ :- “ಹೊಳಪನ್ನು ಪಡೆಯಲು ಗೊಂದಲ-ಕ್ಕೊಳಗಾಗುವುದು”
ಸಂಸ್ಕೃತದಲ್ಲಿ
ಸಂಸಾರ ಎಂಬ ಪದದ ಅಕ್ಷಾರಾನುವಾದ ಅರ್ಥ “ಹೊಳಪನ್ನು ಪಡೆಯಲು ಗೊಂದಲಕ್ಕೊಳಗಾಗುವುದು” ಎಂದು
ಬರುತ್ತದೆ, ಕನ್ನಡದಲ್ಲಿ ಮಾರ್ಗ, ಪಾಠ,
ದಾರಿ, ಕುಟುಂಬ, ಪ್ರಪಂಚ,
ಜಗತ್ತು, ಜೀವನ, ಬದುಕು,
ಇತ್ಯಾದಿ ಅರ್ಥವನ್ನು ಶಬ್ದಕೋಶದಲ್ಲಿ ನೀಡಿದ್ದಾರೆ, ಪ್ರಾಣಾಯಾಮ ಧ್ಯಾನದಿ ಬೆಳಕನ್ನು ಹೊಂದುವುದರ ಬಗ್ಗೆ ಅರಿವಿಲ್ಲದವನು
ಗೊಂದಲದಲ್ಲಿರುವವನು ಸಂಸಾರಿಯಾಗುತ್ತಾನೆ ಎಂದರೆ ಸರಿಯಾದ ಅರ್ಥ ಬರುತ್ತದೆ.
ಭಾಗವತ, ೧೧-೨-೪೯ ರಲ್ಲಿ ಹೀಗೆ
ವ್ಯಾಖ್ಯಾನವಿದೆ. “ಯಾರು ಹುಟ್ಟು, ಸಾವು, ಹಸಿವು, ಭಯ,
ಬಾಯಾರಿಕೆ ಮೊದಲಾದ ಕಷ್ಟಗಳಿಂದ ಕೂಡಿದ ಸಂಸಾರ ಧರ್ಮಗಳಿಂದ, ಶರೀರ, ಇಂದ್ರಿಯ, ಪ್ರಾಣ,
ಮನಸ್ಸು ಬುದ್ಧಿಗಳ ಮೋಹವನ್ನು ಹೊಂದದೇ ಪರಮಾತ್ಮನ ನಾಮಸ್ಮರಣೆಯನ್ನು
ಮಾಡುತ್ತಾನೆಯೋ ಅವನೇ ಭಾಗವತಶ್ರೇಷ್ಠನು (ಸಂಸಾರ ಸಾಗರದಿಂದ
ದೂರವಿರುವವನು)”.
ವೈರಾಗ್ಯಶತಕ - ೩೬ ಹೀಗೆಂದಿದೆ, “ಆಯುಸ್ಸು ನೀರಿನ ಅಲೆಗಳಂತೆ ಚಂಚಲ, ಯೌವನದ ಸೊಬಗು
ಸ್ವಲ್ಪ ದಿವಸಗಳೇ ಇರುವಂಥದ್ದು, ಹಣವೂ ಬರೀ ಆಸೆ ಮಾತ್ರ. ಭೋಗಗಳು
ಮಳೆಗಾಲದ ಮಿಂಚಿನಂತೆ ಅತಿ ಚಂಚಲ. ಪ್ರಿಯೆಯರಿಂದ ಕೊಡಲ್ಪಟ್ಟ ಆಲಿಂಗನಾದಿಗಳೂ ಕೂಡ ಅಸ್ಥಿರ.
ಆದುದರಿಂದ ಸಂಸಾರ ಭವಸಾಗರವನ್ನು ದಾಟಲು ಪರಬ್ರಹ್ಮವಲ್ಲಿ ನೆಟ್ಟಮನಸ್ಸುಳ್ಳವರಾಗಿರಿ”.
ಸಮಯೋಚಿತ ಪದ್ಯ ರತ್ನಮಾಲಿಕಾದಲ್ಲಿ ಹೇಳಿರುವಂತೆ “ಸ್ಮಶಾನದಲ್ಲಿ ಮತ್ತು ರೋಗಿಗಳಲ್ಲಿ ಯಾವ (ವೈರಾಗ್ಯ) ಬುದ್ಧಿ ಇರುತ್ತದೆಯೋ ಅದು
ಯಾವಾಗಲೂ ಉಳಿದಿದ್ದರೆ ಸಂಸಾರ ಬಂಧನದಿಂದ ಯಾರಿಗೆ ಬಿಡುಗಡೆಯಾಗದು.
ಈ ಬಗ್ಗೆ ವಿದ್ವಾನ್
ಹೆಚ್.ಎನ್ ನರಸಿಂಹಮೂರ್ತಿ ಹೀಗೆ ಬರೆಯುತ್ತಾರೆ, “ಕಾಯಾ, ವಾಚಾ, ಮನಸಾ,
ಬುದ್ಧಿ ಮುಂತಾದುವುಗಳಲ್ಲಿ ಪ್ರಕಾಶಮಾನವಾಗುವ ತೇಜಸ್ಸುಗಳು ಇರುತ್ತದೆ. ಇವು
ಹೊಳೆಯುವ ಕ್ಷಣಗಳು ಸಾತ್ವಿಕವಾದರೆ ಬಹಳ ಶ್ರೇಯಸ್ಸು ಬರುತ್ತದೆ. ಆದರೆ ತಾಮಸ, ರಾಜಸವಾದರೆ ಇಹಲೋಕದಲ್ಲಿ ಸಂಸಾರ ಸಾಗರದಲ್ಲಿಯೇ ಇರಬೇಕಾಗುತ್ತದೆ. ಸಾತ್ವಿಕ
ಕ್ಷಣಗಳು ಜಾಸ್ತಿಯಾದಂತೆ ಸಂಸಾರ ಸಾಗರದ ಗೊಂದಲಗಳು ದೂರವಾಗುತ್ತದೆ. ಉದಾಹರಣೆ, ಧ್ಯಾನ, ಪೂಜೆ, ಜಪಗಳ
ಅವಧಿ ಸಾತ್ವಿಕವಾಗಿ ಜಾಸ್ತಿಯಾದಷ್ಟು ಮನಸ್ಸಿಗೆ ಶಾಂತಿ ಹೆಚ್ಚು ಬರುತ್ತದೆ. ಉತ್ತಮ ಪರಿಸರದಲ್ಲಿ ಬುದ್ದಿಯು ವಿವೇಕವನ್ನು ಅನುಸರಿಸಿ
ಮನಸ್ಸನ್ನು ನಿಗ್ರಹಿಸಿ, ಇಂದ್ರಿಯಗಳನ್ನು ಸ್ವತಂತ್ರವಾಗಿ ಹಾರಾಡಲು
ಬಿಡದೆ ಸತ್ವಗುಣವನ್ನು ಆಶ್ರಯಿಸುವಂತೆ ಮಾಡಿ ಆತ್ಮಕ್ಕೆ ಸಂಸಾರ ಬಂಧನದಿಂದ ಬಿಡುಗಡೆ ಹೊಂದಲು ಸಹಾಯಕವಾಗುತ್ತದೆ.
ಆತ್ಮಜ್ಯೋತಿಯನ್ನು ಕಂಡುಕೊಳ್ಳುವುದೇ ಪರಮಗುರಿ. ದೇಹವೇ ನಾನು ಎಂಬ ಅಭಿಮಾನದಿಂದ ಸಂಸಾರ ಸಾಗರದಲ್ಲಿ
ಮುಳುಗಿ ತೇಲುತ್ತಿರುವಾಗ ಆತ್ಮವೆಂಬ ಒಂದು ತೇಜಸ್ಸು ತನ್ನಲ್ಲಿಯೇ ಇದೆ ಎಂಬುದು ಅರಿವಿಗೆ
ಬರುವುದಿಲ್ಲ. ಯಾವಾಗ ಇದು ಅರಿವಿಗೆ ಬರುವುದೋ ಆಗ “ನಾನು” ಎಂಬುದು
ಹೋಗಿ ಆತ್ಮಜ್ಯೋತಿಯು ಬುದ್ದಿ ಮನಸ್ಸಿನಲ್ಲಿ ಪ್ರಕಾಶಿಸುತ್ತದೆ. ಪರಮಾತ್ಮನೇ ದಿವ್ಯಜ್ಯೋತಿ,
ಜ್ಯೋತಿಗಳಿಗೆ ಜ್ಯೋತಿ – “ತೇಜಸಾಂ ಅಪಿ ತೇಜಸ್ವಿ”. ಈ ರಹಸ್ಯವನ್ನು ತಿಳಿದವನಿಗೆ ಈ ಸಂಸಾರ ಸಾಗರದಲ್ಲಿ ಸಂಪರ್ಕಕ್ಕೆ ಬರುವ ದೇಹ -
ದೇಹಿಗಳ ಸಂಯೋಗ ವಿಯೋಗಗಳು ಸಾಮಾನ್ಯವಾಗಿಬಿಡುತ್ತವೆ ಮತ್ತು ಅವನು ಅಂಟಿದರೂ ಅಂಟದಂತೆಯೇ ಈ
ಜಗತ್ತಿನಲ್ಲಿರುತ್ತಾನೆ. ಇತರರಿಗೆ ಸಾಕ್ಷಾತ್ಕಾರ ದಾರಿಯನ್ನೂ ತೋರಬಲ್ಲನು”.
ಭಾಗವತ, ಶ್ರೀಮದ್, ಶ್ರೀಮದ್ ಭಾಗವತ, ಭಗ, ಭಗವಾನ್, ಭಗವತಿ
ಅಕ್ಷರ ಅರ್ಥ
ಭಾಗವತ = भागवत = भा ग व त
ಅಕ್ಷರಶಃ
ಅರ್ಥ :- ಬೆಳಕು ಚಲಿಸುವ ಶಕ್ತಿಯುತವಾದ ಅಮೃತ
ಶ್ರೀಮದ್ = श्रीमद् = श्री म द्
ಅಕ್ಷರಶಃ
ಅರ್ಥ :- ದೇವಿ ಸರಸ್ವತಿ ಮಾಂತ್ರಿಕ ಸೂತ್ರವನ್ನು ನೀಡುವುದು
ಶ್ರೀಮದ್
ಭಾಗವತ = श्रीमद् भागवत
ಅಕ್ಷರಶಃ
ಅರ್ಥ :- ದೇವಿ ಸರಸ್ವತಿ ಮಾಂತ್ರಿಕ ಸೂತ್ರವನ್ನು ನೀಡುವುದು, ಬೆಳಕು ಚಲಿಸುವ ಶಕ್ತಿಯುತವಾದ ಅಮೃತ
ಭಗ = भग = भ ग =
ಅಕ್ಷರಶಃ
ಅರ್ಥ :- ಚಂದ್ರ ಭವನವನ್ನು (ಸಹಸ್ರಾರವನ್ನು) ತಲುಪುವುದು
ಭಗವಾನ್ = भगवान् = भ ग व अन् = भ ग व अ न
ಅಕ್ಷರಶಃ
ಅರ್ಥ :- ಚಂದ್ರ
ಭವನವನ್ನು (ಸಹಸ್ರಾರವನ್ನು) ತಲುಪುವುದು ಶಕ್ತಿಶಾಲಿ ಆತ್ಮ ಅಥವಾ ಚಂದ್ರ ಭವನವನ್ನು
(ಸಹಸ್ರಾರವನ್ನು) ತಲುಪುವುದು ಶಕ್ತಿಶಾಲಿ ಅವಿಶ್ರಾಂತವಾದ ಜೀವ ಉಸಿರು
ಭಗವತಿ = भगवति = भ ग व ति
ಅಕ್ಷರಶಃ
ಅರ್ಥ :- ಚಂದ್ರ
ಭವನವನ್ನು (ಸಹಸ್ರಾರವನ್ನು) ತಲುಪುವುದು ಶಕ್ತಿಶಾಲಿ ಶಾಂತತೆ
(ಪ್ರಾಣಾಯಾಮದಲ್ಲಿ ಶಕ್ತಿಯುತವಾದ ಅಮೃತ
ಸಹಸ್ರಾರಕ್ಕೆ ಚಲಿಸಿದಾಗ ದೇಹಕ್ಕೆ ಚೈತನ್ಯವನ್ನು ನೀಡುತ್ತದೆ,
ಅಂತಹ ಚೈತನ್ಯದಿಂದ ಸಮಗ್ರವಾದ ಐಶ್ವರ್ಯ, ಧರ್ಮ, ಯಶಸ್ಸು, ಸಂಪತ್ತು,
ಜ್ಞಾನ, ವೈರಾಗ್ಯ ಎಂಬ ಆರು ಗುಣಗಳು ಉಂಟಾಗುತ್ತವೆ, ಅಂತಹ ಗುಣವುಳ್ಳವನು ಭಗವಾನ್ ಎಂತಲೂ ವಿದ್ವಾಂಸರು ವ್ಯಾಖ್ಯಾನಿ-ಸುತ್ತಾರೆ,
ಅದುವೇ ಆತ್ಮಶಕ್ತಿ, ಸರ್ವವನ್ನೂ ಅನುಗ್ರಹಿಸುವ
ಭಗವಾನ್ ಸ್ವರೂಪದ ಅಮೃತ).
ಭಗವಾನ್
ಎಂಬ ಸಂಸ್ಕೃತ ಪದವನ್ನು ವೇದವ್ಯಾಸರ ತಂದೆಯಾದ, ಪರಾಶರ ಮುನಿಗಳು
ವಿವರಿಸಿದ್ದಾರೆ. ಸಕಲೈಶ್ವರ್ಯವನ್ನು, ಸಕಲ ಬಲವನ್ನು, ಸಕಲ ಯಶವನ್ನು, ಸಕಲ ಸೌಂದರ್ಯವನ್ನು, ಸಕಲ ಜ್ಞಾನವನ್ನು ಮತ್ತು ಸಕಲ ವೈರಾಗ್ಯವನ್ನು ಹೊಂದಿರುವ ಪರಮ ದೇವೋತ್ತಮ ಪುರುಷನೇ
ಭಗವಾನ್. ಬಹಳ ಐಶ್ವರ್ಯ, ಶಕ್ತಿ, ಸೌಂದರ್ಯ,
ಕೀರ್ತಿ, ಜ್ಞಾನ ಮತ್ತು ವೈರಾಗ್ಯವನ್ನು
ಹೊಂದಿರುವ ಅನೇಕ ವ್ಯಕ್ತಿ ಗಳಿದ್ದಾರೆ. ಆದರೆ, ಸಕಲ ಸಂಪತ್ತು,
ಸಕಲ ಬಲ, ಇತ್ಯಾದಿಗಳನ್ನು ಪರಿಪೂರ್ಣವಾಗಿ ಹೊಂದಿದ್ದೇವೆಂದು
ಹೇಳಬಲ್ಲವರು ಯಾರೂ ಇಲ್ಲ.
ಕೃಷ್ಣನೇ
ಪರಮ ದೇವೋತ್ತಮ ಪುರುಷನೆಂದು ಸ್ವಯಂ ಬ್ರಹ್ಮನೇ ಬ್ರಹ್ಮ ಸಂಹಿತೆಯಲ್ಲಿ ನಿರ್ಣಯಿಸಿದ್ದಾನೆ. ಕೃಷ್ಣನಿಗೆ
ಸಮಾನರು ಅಥವಾ ಅಧಿಕರು ಯಾರೂ ಇಲ್ಲ. ಆವನೇ ಆದಿ ಪುರುಷನು, ಅಥವಾ
ಭಗವಂತನು, ಗೋವಿಂದನು, ಮತ್ತು ಅವನೇ
ಸಕಲ ಕಾರಣಗಳ ಕಾರಣನು.
ಈಶ್ವರಃ ಪರವಂಃ ಕೃಷ್ಣಃ ಸಜ್ಜಿ ದಾನಂದ
ವಿಗ್ರಹಃ।
ಅನಾದಿರ್ ಆದಿರ್ ಗೋವಿಂದಃ ಸರ್ವ ಕಾರಣ
ಕಾರಣಮ್॥
(ಬ್ರಹ್ಮ ಸಂಹಿತೆ 5.1)
ಭಾವಾರ್ಥ:- ಭಗವಂತನ ಗುಣಗಳನ್ನು ಹೊಂದಿರುವ ಅನೇಕ ವ್ಯಕ್ತಿಗಳಿದ್ದಾರೆ, ಆದರೆ ಶ್ರೀಕೃಷ್ಣನು ಶ್ರೇಷ್ಠನಾಗಿರುವುದರಿಂದ, ಅವನನ್ನು
ಮೀರಿಸುವವರು ಬೇರೊಬ್ಬರಿಲ್ಲ. ಅವನು ಪರಮ ಪುರುಷ ಮತ್ತು ಅವನದು ಸಚ್ಚಿದಾನಂದ ದೇಹ. ಅವನೇ ಅದಿ
ಪುರುಷನಾದ ಗೋವಿಂದನು ಮತ್ತು ಸರ್ವ ಕಾರಣಗಳಿಗೆ ಕಾರಣನು.”
ಭಾಗವತದಲ್ಲಿಯೂ
ಕೂಡ ಪರಮ ದೇವೋತ್ತಮ ಪ್ರರುಷನ ಅನೇಕ ಅವತಾರಗಳ ಪಟ್ಟಿಯಿದೆ, ಆದರೆ,
ಕೃಷ್ಣನೇ ಮೂಲ ಸರ್ವೋತ್ತಮ ಪುರುಷನೆಂದು ಮತ್ತು, ಅವನಿಂದಲೇ ಅನೇಕಾನೇಕ ಅವತಾರಗಳೂ ವಿಸ್ತರಿಸುತ್ತಿವೆ ಎಂದೂ ವಿವರಿಸಿದೆ.
ಏತೇ ಚಾಂಶಕಲಾಃ ಪುಂಸಃ ಕೃಷ್ಣಸ್ತು
ಭಗವಾನ್ ಸ್ವಯಮ್!
ಇಂದ್ರಾರಿವ್ಯಾಕುಲಂ ಲೋಕಂ ಮೃಡಯನ್ತಿ
ಯುಗೇ ಯುಗೇ॥
(ಭಾಗವತ 1.3.28)
ಭಾವಾರ್ಥ:-
ಇಲ್ಲಿ ಪ್ರಸ್ತಾಪಿತವಾದ ದೇವೋತ್ತಮನ ಎಲ್ಲ ಅವತಾರಗಳು ಪರಮ ಪುರುಷನ
ತದೇಕಾಂಶ ವಿಸ್ತರಣೆಗಳು ಅಥವಾ ತದೇಕಾಂತ ಆಂಶಿಕ ವಿಸ್ತರಣೆಗಳು. ಆದರೆ ಕೃಷ್ಣನೇ ಸ್ವಯಂ ಪರಮ
ದೇವೋತ್ತಮ ಪುರುಷನು.”
ಭನ್ನಂಜೆ
ಗೋವಿಂದಾಚಾರ್ಯರು ಭಗವಾನ್ ಬಗ್ಗೆ ಹೀಗೆ ಹೇಳುತ್ತಾರೆ, “ಭಗ'
ಎಂದರೆ ಭಾಗ್ಯ; ಭಗವಾನ್ ಎಂದರೆ ಭಾಗ್ಯ ಸ್ವರೂಪ.
ಮಹಾಭಾರತದಲ್ಲಿ ಹೇಳಿದಂತೆ: "ಐಶ್ವರ್ಯಸ್ಯ ಸಮಗ್ರಸ್ಯ ವೀರ್ಯಸ್ಯ ಯಶಸಶ್ರೀಹ ಜ್ಞಾನ
ವೈರಾಗ್ಯ ಯೋಗಸ್ವೈವ ಶನ್ನುಂ ಭಗಃ". ಆರು ಗುಣಗಳನ್ನು 'ಭಗ'
ಶಬ್ದ ಹೇಳುತ್ತದೆ. ಐಶ್ವರ್ಯ, ವೀರ್ಯ,
ಯಶಸ್ಸು, ಶ್ರೀ, ಜ್ಞಾನ
ಮತ್ತು ವೈರಾಗ್ಯ. ಐಶ್ವರ್ಯ: ಪೂರ್ಣೈಶ್ವರ್ಯ ಎಂದರೆ ಸರ್ವ ಸಮರ್ಥತೆ, ವೀರ್ಯ: ಶತ್ರುಗಳನ್ನು, ದೋಷವನ್ನು ನಿರ್ನಾಮ ಮಾಡುವ
ಶಕ್ತಿ, ಯಶಸ್ಸು: ಯಶಸ್ಸು ಎಂದರೆ ಕೀರ್ತಿ. ಭಗವಂತನ ಸರ್ವ
ನಿಯಾಮಕತ್ವವನ್ನು ಎಲ್ಲರೂ ಕೀರ್ತನೆ ಮಾಡುತ್ತಾರೆ, ಅದರಿಂದ ಯಶಸ್ಸು,
ಶ್ರೀ: ಶ್ರೀ ಎಂದರೆ
ಸಂಪತ್ತು. ಇಡೀ ಜಗತ್ತಿನ ಸಮಸ್ತ ವಸ್ತುವು ಯಾರಿಗೆ ಸೇರಿದ್ದೋ ಅವನು ನಿಜವಾದ ಶ್ರೀ, ಜ್ಞಾನ: ಜ್ಞಾನಪೂರ್ಣ, ಸರ್ವಜ್ಞ, ವೈರಾಗ್ಯ: ಯಾವುದರ ಬಗ್ಗೆಯೂ 'ನನ್ನದು' ಅನ್ನುವ ಭಾವನೆ ಇಲ್ಲದಿರುವುದು. ಈ ಆರು
ಗುಣಗಳು ಪೂರ್ಣ ಪ್ರಮಾಣದಲ್ಲಿರುವ, ಸತ್ವ-ರಜ-ತಮೋಗುಣಗಳ ಸ್ಪರ್ಶವೇ
ಇಲ್ಲದವ ಭಗವಾನ್.
ವದಂತಿ ತತ್ ತತ್ತ್ವವಿದಃ ತತ್ತ್ವಂ ಯತ್
ಜ್ಞಾನಮದ್ವಯಮ್ ।
ಬ್ರಹ್ಮೇತಿ ಪರಮಾತ್ಮೇತಿ ಭಗವಾನ್ ಇತಿ
ಶಬ್ದೃತೇ ॥
ಭಾಗವತ 1-11-11
ಭಾವಾರ್ಥ:- ವೇದಾಂತಿಗಳು ಬ್ರಹ್ಮವೆಂದು, ಅನುಭಾವಿಗಳು ಪರಮಾತ್ಮನೆಂದು,
ಭಕ್ತರು ಭಗವಂತನೆಂದು ಹೇಳುವುದು ಅವ್ಯಯ ಜ್ಞಾನದ ಒಂದೇ ತತ್ತ್ವವನ್ನು ಎಂದು
ತತ್ತ್ವವೇದಿಗಳು ಹೇಳುತ್ತಾರೆ.
ಪಿಬಂತಿ ಯೇ ಭಗವತ ಆತ್ಮನಃ ಸತಾಮ್ ಕಥಾಮೃತಂ ಶ್ರವಣ ಪುಟೇಷು
ಸಂಭೃತಮ್ |
ಪುನಂತಿ ತೇ ವಿಷಯ ವಿದೂಷಿತಾಶಯಮ್
ವ್ರಜಂತಿ ತಚ್ಚರಣಸರೋರುಹಾಂತಿಕಮ್ ||
ಭಾಗವತ 2-೨-೩೭
ಭಾವಾರ್ಥ:-
ಭಗವಂತನ ಕಥಾಮೃತವನ್ನು ಕಿವಿಗಳಲ್ಲಿ ಯಾವ ಭಾಗವತರು
ಕುಡಿಯುತ್ತಾರೆಯೋ ಯಾವ ಸಂತರು ಆತನನ್ನು ತಮ್ಮ ಆತ್ಮನೆಂದು ಸಾಕ್ಷಾತ್ಕಾರಮಾಡಿಕೊಳ್ಳುತ್ತಾರೆಯೋ,
ಅವರು ವಿಷಯಗಳ ಆಸೆಯಿಂದ ದೂಷಿತವಾದ ಅಂತಃಕರಣವನ್ನು ಪರಿಶುದ್ಧವಾಗಿ
ಮಾಡಿಕೊಂಡು ಆತನ ಪಾದ ಕಮಲಗಳನ್ನು. ಸೇರುತ್ತಾರೆ.
ಬಹಿರಂತಶ್ಚ ಭೂತಾನಾಂ ಅಚರಂ ಚರಮೇವ ಚ |
ಸೂಕ್ಷ್ಮತ್ವಾದವಿಜ್ಞೇಯಂ ದೂರಸ್ಥಂ
ಚಾಂತಿಕೇ ಚ ತತ್ ॥
ಭಗವದ್ಗೀತೆ 13-15
ಭಾವಾರ್ಥ:- ಅದು ಜೀವಿಗಳ ಹೊರಗೂ ಒಳಗೂ ಇದೆ ; ಚರವೂ ಅಚರವೂ
ಆಗಿದೆ. ಅದು ಸೂಕ್ಷ್ಮ ವಾಗಿರುವುದರಿಂದ ಅರಿಯಲಸಾಧ್ಯವಾಗಿದ್ದು ದೂರವೂ ಇದೆ ಸಮೀಪವೂ ಇದೆ.
ಜ್ಯೋತಿಷಾಮಪಿ ತತ್‌ಜ್ಯೋತಿಸ್ತಮಸಃ
ಪರಮುಚ್ಛತೇ |
ಜ್ಞಾನಂ ಜ್ಞೇಯಂ ಜ್ಞಾನಗಮ್ಯಂ
ಹೃದಿಸರ್ವಸ್ಯಧಿಷ್ಟತಮ್ ॥
ಭಗವದ್ಗೀತೆ 13-17
ಭಾವಾರ್ಥ:-
ಅದನ್ನು ಬೆಳಕಿನ ಬೆಳಕು ಎನ್ನುತ್ತಾರೆ ಅಥವಾ ತಮಸ್ಸಿನ (ಅಜ್ಞಾನ
ಮತ್ತು ಭ್ರಾಂತಿ) ಆಚೆಗಿದೆ ಎನ್ನುತ್ತಾರೆ ಅದು ಜ್ಞಾನವೂ ಜ್ಞಾನವಿಷಯವೂ ಆಗಿದೆ ಮತ್ತು
ಜ್ಞಾನಗಮ್ಯವೂ ಆಗಿದೆ ಅದು ಎಲ್ಲಾ ಜೀವಿಗಳ ಹೃದಯದಲ್ಲಿ ನೆಲೆಸಿರುತ್ತದೆ.
ಸಮಂ ಸರ್ವೇಷು ಭೂತೇಷು ತಿಷ್ಠಂತಂ
ಪರಮೇಶ್ವರಮ್ ।
ವಿನಶ್ಶತ್ಸ್ವವಿನಶ್ಶಂತಂ ಯಃ ಪಶ್ಯತಿ ಸ
ಪಶೃತಿ |
ಭಗವದ್ಗೀತೆ 13-27
ಭಾವಾರ್ಥ:-
ಯಾವನು ಸರ್ವ ಜೀವಿಗಳಲ್ಲಿ ಸಮನಾಗಿ ಇರುವ ನಶ್ವರ ವಸ್ತುಗಳಲ್ಲಿ
ಅವಿನಾಶಿಯಾಗಿ ಇರುವ ಪರಮೇಶ್ವರನನ್ನು ನೋಡುತ್ತಾನೆಯೋ ಅವನು ನಿಜವಾಗಿ ನೋಡುತ್ತಾನೆ.
ಯದಾ ಭೂತಪೃಥಗ್ಭಾವಮೇಕಸ್ಥಮನುಪಶ್ಯತಿ |
ತತ ಏವ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ
ತದಾ ॥
ಭಗವದ್ಗೀತೆ 13-30
ಭಾವಾರ್ಥ:- ಯಾವಾಗ ಜೀವಿಗಳ ವಿವಿಧತೆಯು ಅದ್ವಯಾತ್ಮನಲ್ಲಿಯೇ ನೆಲೆಸಿದೆ ಎಂದು ಮತ್ತು
ಆತ್ಮನಿಂದಲೇ ವಿಕಾಸಗೊಳ್ಳುವನು ಎಂದು ನೋಡುತ್ತಾನೆಯೋ ಆಗ ಆ ಬ್ರಹ್ಮನನ್ನು ಹೊಂದುತ್ತಾನೆ.
ತೈತ್ತಿರೀಯೋಪನಿಷತ್
ಹೇಳುವಂತೆ "ಯತೋ
ವಾಚೋ ನಿರ್ವತಂತೇ ಅಪ್ರಾಪ್ಯ ಮನಸಾ ಸಹ”
ಅಂದರೆ ಎಲ್ಲಿ ಮಾತು ಮತ್ತು ಮನಸ್ಸು ಮುಟ್ಟಲಾರದೆ ಹಿಂತಿರುಗುತ್ತವೆಯೋ
ಅದರಾಚೆ ಐದು ಇಂದ್ರಿಯಗಳು ವ್ಯಕ್ತಪಡಿಸದ ಪ್ರಪಂಚದಿಂದಾಚೆ ಅನುಭವದಲ್ಲಿ ನಿಹಿತವಾಗಿರುವ ಆ ಸತ್ಯಕೋಸ್ಕರ
ಅರಸುತ್ತಾನೆ. ಆತ್ಮ ಮತ್ತು ದೇವರು ಈ ವರ್ಗಕ್ಕೆ ಸೇರುತ್ತವೆ.
ಶ್ರೀಮದ್ಭಾಗವತದಲ್ಲಿ
(8-3-10) ಹೀಗೆ ಹೇಳಿದೆ, “ನಮ
ಆತ್ಮಪ್ರದೀಪಾಯ ಸಾಕ್ಷಿಣೇ ಪರಮಾತ್ಮನೇ ನಮೋ ಗಿರಾಂ ವಿದೂರಾಯ ಮನಸಶ್ಚೇತಸಾಂ ಅಪಿ” ಅಂದರೆ ಆತ್ಮದ ಬೆಳಕಾದ, (ಪ್ರಪಂಚದ/ ದೇಹದ
ಪ್ರತಿಯೊಂದು ಘಟನೆಗೂ) ಸಾಕ್ಷಿಯಾದ, (ಎಲ್ಲರ ಪರಮಾತ್ಮನಾದ ಅವನಿಗೆ
ನಮಸ್ಕಾರ, ಮಾತಿಗೆ ಮೀರಿದವನಾದ, (ಎಲ್ಲ)
ಮನಸ್ಸು ಮತು ಚಿಂತನೆಗೂ ಮೀರಿದವನಾದ ಅವನಿಗೆ ನಮಸ್ಕಾರ.'
ಶ್ರೀಕೃಷ್ಣನು
ಭಾಗದ್ಗೀತೆಯಲ್ಲಿ ಹೀಗೆ ಹೇಳುತ್ತಾನೆ. (೭-4) : “ಭೂಮಿ ರಾಪೋsನಲೋವಾಯುಃ ಖಂ ಮನೋ ಬುದ್ಧಿರೇವಚ ; ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ”
ಅಂದರೆ “ಭೂಮಿ, ನೀರು, ಅಗ್ನಿ, ವಾಯು ಆಕಾಶ ಮನಸ್ಸು ಬುದ್ದಿ ಅಹಂಕಾರ ಎಂದು ಈ
ನನ್ನ ಪ್ರಕೃತಿಯು ಭಿನ್ನವಾದ ಅಷ್ಟರೂಪಗಳಲ್ಲಿರುತ್ತದೆ”. (7-5) ಅಪರೇಯಮಿತಸ್ತ್ವನ್ಯಾಂ ಪ್ರಕೃತಿಂ ವಿದ್ಧಿ ಮೇ ಪರಾಮ್ ; ಜೀವಭೂತಾಂ ಮಹಾಬಾಹೋ ಯಯೇದಂ
ಧಾರ್ಯತೇ ಜಗತ್” ಅಂದರೆ, “ಇದು
ನನ್ನ ಅಪರಾ ಪ್ರಕೃತಿ, ಇದಕ್ಕಿಂತ ಭಿನ್ನವಾದ ಜೀವರೂಪವಾದ ನನ್ನ
ಪರಾಪ್ರಕೃತಿಯನ್ನು ತಿಳಿದುಕೋ. ಅದರಿಂದಲೇ ಈ ಜಗತ್ತು ಧರಿಸಲ್ಪಟ್ಟಿದೆ”. (7-6) “ಏತತ್ ಯೋನೀನಿ ಭೂತಾನಿ
ಸರ್ವಾಣೀತ್ಯಪಧಾರಯ; ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಲಯಸ್ತಥಾ” ಅಂದರೆ, “ಸರ್ವಭೂತಗಳೂ ನನ್ನ ಈ ಎರಡು ಪ್ರಕೃತಿಗಳಿಂದ
ಉಂಟಾಗಿವೆಯೆಂದು ತಿಳಿ: ನಾನು ಸಮಸ್ತ ಜಗತ್ತಿನ ಸೃಷ್ಟಿಲಯಗಳಿಗೆ ಕಾರಣನಾಗಿದ್ದೇನೆ”.
ನಷ್ಟ-ಪ್ರಾಯೇಷ್ವಭದ್ರೇಷು ನಿತ್ಯಂ
ಭಾಗವತಸೇವಯಾ |
ಭಗವತ್ಯುತ್ತಮ ಶ್ಲೋಕೇ ಭಕ್ತಿರ್ಭವತಿ
ನೈಷ್ಠಿಕೀ ॥
ಶ್ರೀಮದ್ಭಾಗವತದಲ್ಲಿ (1-2-18)
ಭಾವಾರ್ಥ:- ನಿರಂತರ ಭಗವತ್ಸೇವೆಯ ಮೂಲಕ ಹೃದಯದ ಬಹುತೇಕ ಅಶುದ್ಧಿಗಳು ನಾಶವಾದಮೇಲೆ ಮಾನವನಿಗೆ
ಪರಮಪಾವನನಾದ ಭಗವಂತನ ಮೇಲೆ ನಿಷ್ಠಾಭಕ್ತಿ ಉಂಟಾಗುತ್ತದೆ.
ಭಿದ್ಯತೇ ಹೃದಯಗ್ರಂಥಿಃ ಛಿದ್ಯಂತೇ
ಸರ್ವಸಂಶಯಾಃ |
ಕ್ಷೀಯಂತೇ ಚಾಸ್ಯ ಕರ್ಮಾಣಿ ದೃಷ್ಟ
ಏವಾತ್ಮನೀಶ್ವರೇ ॥
ಶ್ರೀಮದ್ಭಾಗವತದಲ್ಲಿ (1-2-21)
ಭಾವಾರ್ಥ:- ತನ್ನೊಳಗೇ ಭಗವಂತನ ಸಾಕ್ಷಾತ್ಕಾರವಾದ ಮೇಲೆ ಹೃದಯದ ಗಂಟುಗಳೆಲ್ಲಾ
ಕತ್ತರಿಸಲ್ಪಡುತ್ತವೆ. ಎಲ್ಲ ಸಂಶಯಗಳೂ
ನಾಶವಾಗುತ್ತವೆ ಮತ್ತು ಎಲ್ಲಾ ಕರ್ಮಗಳೂ ಮತ್ತು ಅವುಗಳ ಸಂಸ್ಕಾರಗಳೂ ಅಳಿಸಿಹೋಗುತ್ತವೆ.
ವಿದ್ವಾಂಸರಾದ ಕೆ.ಎಸ್. ನಾರಾಯಣಾಚಾರ್ಯ ಬೃಹದ್ದೇವತಾ 8-130 ಉಲ್ಲೇಕಿಸಿ - “ಯೋಗೇನ ದಾಕ್ಷ್ಯೇಣ ದಮೇನ ಬುದ್ಧ್ಯಾ ಬಾಹುಶ್ರುತ್ಯೇನ ತಪಸಾ
ನಿಯೋಗೈಃ | ಉಪಾಸ್ಯಾಃ ತಾಃ ಕೃತ್ಸ್ನ ಶೋ ದೇವತಾ ಯಾ ಋಚೋ ಹ ಯೋ ವೇದ ಸವೇದ ದೇರ್ವಾ | ಯಜೂಂಷಿ ಯೋ ವೇದ ಸವೇದ ಯಜ್ಞಾನ್
ಸಾಮಾನಿ ಯೋ ವೇದ ಸ ವೇದ ತತ್ತ್ವಂ ॥“ ಹೀಗೆ
ಹೇಳುತ್ತಾರೆ,
ಇದು, ಈಗ
೩೦೦೦ ವರ್ಷಗಳಿಗಿಂತಲೂ ಹಿಂದೆಯೇ, ಶೌನಕರೆಂಬ: ಮಹರ್ಷಿಗಳು.
ವೇದದಲ್ಲಿ ಪ್ರತಿಪಾದಿತರಾಗಿರುವ ದೇವತೆಗಳ ಸ್ವರೂಪ, ಗುಣ, ಕರ್ಮ, ಸ್ಥಾನಮಾನ ಇತ್ಯಾದಿಗಳನ್ನು ತಿಳಿಯಲು
ಬಯಸಿದವನಿಗೆ ಕೊಟ್ಟಿರುವ ಎಚ್ಚರಿಕೆಯ ಮಾತು. – ಭಾವಾರ್ಥ:- “ಏಕಾಗ್ರತೆಯುಳ್ಳ ಮನಸ್ಸಿನ ಯೋಗ ಬಲದಿಂದಲೂ, ತಪಸ್ಸಿನ
ದಕ್ಷತೆಯೆಂಬ ಸಾಮರ್ಥ್ಯದಿಂದಲೂ ಇಂದ್ರಿಯ ಸಂಯಮದಿಂದಲೂ, ಚುರುಕಾದ
ಮತ್ತು ಪರಿಶುದ್ಧವಾದ ಬುದ್ಧಿಯಿಂದಲೂ, ವೇದಗಳನ್ನು ಬಹುವಾಗಿ
ಅಭ್ಯಸಿಸಿಯೂ (ಬಹಳ ವೇದಾಧ್ಯಯನದಿಂದಲೂ), ಶರೀರ ದಂಡನಾಪೂರ್ವಕವಾದ
ಕರಣತ್ರಯಗಳ ತಪಸ್ಸಿನಿಂದಲೂ ಪೂರ್ವಿಕರ ಆದೇಶಗಳೊಡನೆ ಕೂಡಿದ ಪ್ರಮಾಣ ಗ್ರಂಥಗಳ ಮಾರ್ಗದರ್ಶನ ದಿಂದಲೂ,
ಸಮಸ್ತ ದೇವತೆಗಳನ್ನೂ ಸರ್ವಪ್ರಕಾರಗಳಲ್ಲಿಯೂ, ಉಪಾಸನೆ
ಮಾಡಬೇಕು. (ಪ್ರೇಮಪೂರ್ವಕವಾಗಿ ಸತತವೂ ಅನುಧ್ಯಾನಿಸಿ ಪ್ರತ್ಯಕ್ಷ ಮಾಡಿಕೊಳ್ಳಬೇಕು.) ಸ್ತೋತ್ರ
ರೂಪವಾದ ಋಗ್ಭಾಗದ ವೇದದಲ್ಲಿ ಕೊಂಡಾಡಲ್ಪಟ್ಟಿರುವ ಈ ದೇವತೆಗಳನ್ನು “ತಿಳಿಯಲು", ಖಕ್ಕುಗಳನ್ನು ಮೊದಲು ಚೆನ್ನಾಗಿ ತಿಳಿಯಬೇಕು. ನಂತರ ಯಜುರ್ವೇದವನ್ನು “ಅರಿತವನು”,
ಈ ದೇವತೆಗಳ (ಆರಾಧಕನಾಗಲು ಯೋಗ್ಯನಾಗಿ, ಅವರ ಅರ್ಚನಾ
ರೂಪವಾದ) ಯಜ್ಞ ತತ್ತ್ವವನ್ನು ಅರಿಯುವನು. (ಕೊನೆಯಲ್ಲಿ) ಸಾಮವೇದ ಅಧ್ಯಯನದಿಂದ ಈ ದೇವತೆಗಳ
(ಸಾಕ್ಷಾತ್ಕಾರ ರೂಪವಾದ ಅನುಭೂತಿಯಿಂದ, ಅವರ ತತ್ತ್ವವನ್ನು
ಆರಿಯುವನು”.
ಕೋ ಅದ್ಧಾ ವೇದ ಕ ಇಹ ಪ್ರವೋಚದ್ದೇವಾಂ
ಅಚ್ಛಾಪಥ್ಯಾ ಕಾ ಸಮೇತಿ|
ದದೃಶ್ರ ಏಷಾಮವಮಾ ಸದಾಂಸಿ ಪಠೇಷು ಯಾ
ಗುಹ್ಯೇಷು ವ್ರತೇಷು||
ಋಗ್ವೇದ : 3-54-5
ಭಾವಾರ್ಥ:- ”ಸತ್ಯಾರ್ಥವನ್ನು ತಿಳಿಸುವ (ದೇವ) ಮಾರ್ಗ ಯಾವನಿಗೆ ತಾನೇ ತಿಳಿದಿರುವುದು? ಯಾವನು ತಾನೇ ನಮಗೆ ಈ ವಿಷಯದಲ್ಲಿ ನಿಶ್ಚಯಮಾಡಿ ಹೇಳಬಲ್ಲನು? ದೇವತೆಗಳೆಡೆಗೆ, ಅವರಿಗೆ ಅಭಿಮುಖವಾಗಿ ಕರೆದು ಕೊಡು
ಹೋಗುವ ಮಾರ್ಗವನ್ನು ಯಾರೂ ತಿಳಿಯಲಾರರು ನಕ್ಷತ್ರ
ರೂಪದಲ್ಲಿರುವ ದೇವತೆಗಳ ಕೆಳಗಿನ ವಾಸಸ್ಥಾನಗಳು ಮಾತ್ರ (ಕಣ್ಣಿಗೆ) ಕಾಣಿಸುತ್ತವೆ. ಉತ್ತಮವಾದ
ಗೂಢ ಕರ್ಮಗಳಲ್ಲಿ ನಿರತರಾಗಿರುವ ದೇವತೆಗಳ ಗುಹ್ಯವಾದ (ರಹಸ್ಯಮಯವಾದ) ಸ್ಥಾನಗಳನ್ನು ಯಾರೂ
ತಿಳಿಯಲಾರರು.” (ಈ ಪ್ರಪಂಚದಲ್ಲಿ ಭಗವಂತನನ್ನು ತಿಳಿದುಕೊಂಡು ಅವನ ಆದೇಶಕ್ಕೆ ಅನುಗುಣವಾಗಿ
ಆಚಾರಗಳನ್ನು ಮಾಡುವವನಾಗಿ ಸತ್ಯೋಪದೇಶವನ್ನು ಮಾಡುವಂತಹ ವಿದ್ಯಾವಂತ ಜನರು ಅತಿ
ವಿರಳವಾಗಿರುತ್ತಾರೆ. ಅವರೇ ಪರಲೋಕದ ಜ್ಞಾನ ತಿಳಿದವರಾಗಿರುತ್ತಾರೆ. ಅಂತಹವರು ಇರುವರೋ ಇಲ್ಲವೋ
ಗೊತ್ತಿಲ್ಲ,
ಎನ್ನುತ್ತಾರೆ ದಯಾನಂದ ಸರಸ್ಪತಿಗಳು)
ಕವಿರ್ನೃಚಕ್ಷಾ ಅಭಿ ಷೀಮಚಷ್ಟ ಖುತಸ್ಯ
ಯೋನಾ ವಿಘೃತೇ ಮದಂತೀ |
ನಾಸಾ ಚಕ್ರಾತೇ ಸದನಂ ಯಥಾ ವೇಃ ಸಮಾನೇನ
ಕ್ರತುನಾ ಸಂವಿದಾನೇ ||
ಋಗ್ವೇದ : 3-54-6
ಭಾವಾರ್ಥ: ಮನುಷ್ಯರೇ! ಭಗವಂತನು ಅನೇಕ ವಿಧವಾದ ಬೆಳಕಿನ ಲೋಕವನ್ನೂ ಮತ್ತು ಬೆಳಕಿಲ್ಲದ
ಲೋಕವನ್ನೂ ರಚಿಸಿರುವನು. ಹಾಗೂ ಅವನೇ ಆ ಎಲ್ಲ ಲೋಕಗಳ ವ್ಯವಹಾರಗಳನ್ನು ನೋಡಿಕೊಳ್ಳುವವನು.
ನೀವೆಲ್ಲರೂ ಅಂತಹ ಪರಮಾತ್ಮನ ಉಪಾಸನೆಯನ್ನು ನಿರಂತರ ಮಾಡುವವರಾಗಿ. (ಇಲ್ಲಿ ಹೇಳಿರುವುದು
ಪ್ರಾಣಾಯಾಮದ ಧ್ಯಾನದಿ ಕಾಣುವ ಬೆಳಕಾಗಿದೆ)
ನೂ ನೋ ರಾಸ್ವ ಸಹಸ್ರವತ್ತೋಕವತ್
ಪುಷ್ಟಿಮದ್ವಸು |
ದ್ಯುಮದಗ್ನೇ ಸುವೀರ್ಯಂ
ವರ್ಷಿಷ್ಠಮನುಪಕ್ಷಿತಮ್||
ಋಗ್ವೇದ : 3-13-7
ಭಾವಾರ್ಥ:- ಮನುಷ್ಯರು ಪರಮೈಶ್ವರ್ಯ ಸಂಪನ್ನ ಭಗವಂತನನ್ನು ಅಥವಾ ತತ್ಸದೃಶನಾದ
ವಿದ್ಯಾವಂತನನ್ನು(ಗುರುಗಳನ್ನು), ಪ್ರಾಪ್ತಿಗೆ ಯೋಗ್ಯವಾದ ವಿದ್ಯೆ,
ಐಶ್ವರ್ಯ, ಉತ್ತಮ ಸಂತಾನ, ಶ್ರೇಷ್ಠಬಲ, ಪುರುಷಾರ್ಥದಿಂದ ಏಳಿಗೆ ಇವೆಲ್ಲವೂ
ಶೀಘ್ರವಾಗಿ ಲಭಿಸುವಂತೆ ಮತ್ತು ವೃದ್ಧಿ ಹೊಂದುವಂತೆ ಪ್ರಾರ್ಥಿಸಿಕೊಳ್ಳಬೇಕು.
ಕಿಂ ತೇ ಕೃಣ್ವಂತಿ ಕೀಕಟೇಷು ಗಾವೋ
ನಾಶಿರಂ ದುಹ್ರೇ ನ ತಪಂತಿ ಘರ್ಮಮ್ ।
ಆ ನೋ ಭರ ಪ್ರಮಗಂದಸ್ಯ ವೇದೋ ನೈಚಾಶಾಖಂ
ಮಘವನ್ರಂಧಯಾ ನಃ ||
ಋಗ್ವೇದ : 3-53-14
ಭಾವಾರ್ಥ:-
ಮ್ಲೇಚ್ಛರು ವಾಸಿಸುವಂತಹ ಪ್ರದೇಶಗಳಲ್ಲಿ ಗೋವುಗಳ ಧಾರ್ಮಿಕ ಗುಣಗಳ
ಅಭಿವೃದ್ಧಿಯು ಹೇಗೆ ಆಗುವುದಿಲ್ಲವೋ ಹಾಗೆಯೇ ವಿದ್ವಾಂಸರಲ್ಲಿ ಭಗವಂತನನ್ನು ಒಪ್ಪದ ನಾಸ್ತಿಕರ
ಪ್ರಾಬಲ್ಯವು ಹೆಚ್ಚುವುದಿಲ್ಲ. ಆದ್ದರಿಂದ ವಿದ್ಯಾವಂತರು ನಾಸ್ತಿಕತೆಯನ್ನು ಸರ್ವದಾ ನಿರಾಕರಣ
ಮಾಡಬೇಕು.
ಸ್ವಾಮಿ
ದಯಾನಂದ ಸರಸ್ಪತಿಯವರು ಹೀಗೆ ಹೇಳುತ್ತಾರೆ, “ದೇವೋ ಭೂತ್ವಾ ದೇವಂ ಅರ್ಚಯೇತ್”
ಭಗವಂತನ ದಿವ್ಯಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭಗವಂತನನ್ನು ಉಪಾಸಿಸಬೇಕು ಎಂದು
ಖುಷಿ ಮಹರ್ಷಿಗಳು ನಮಗೆ ಬೋಧಿಸಿದ್ದಾರೆ. ಭಗವಂತನ ವಾಸ್ತವಿಕ ಸ್ವರೂಪವನ್ನು ಅರಿಯಬೇಕಾದರೆ,
ಸರಿಯಾದ ರೀತಿಯಲ್ಲಿ ತಿಳಿಯಬೇಕಾದರೆ ಭಗವಂತನ ವಾಣಿಯಾದ ವೇದವಾಣಿಯನ್ನೇ,
ವೇದಗಳನ್ನೇ ಅಧ್ಯಯನ ಮಾಡಬೇಕು. ಭಗವಂತನ ಜ್ಞಾನವನ್ನು ಪ್ರಾಪ್ತಮಾಡಿಕೊಳ್ಳಲು,
ಕರ್ಮಗಳನ್ನು ಮಾಡಿ
ಅದಕ್ಕನುಗುಣವಾಗಿ ಫಲವನ್ನು ಅನುಭವಿಸಲು, ಭಗವಂತನ ಸೃಷ್ಟಿಯನ್ನು
ಸಂರಕ್ಷಿಸಲು. ಯಾರು ಭಗವಂತನ ಜ್ಞಾನವನ್ನು ಪ್ರಾಪ್ತ ಮಾಡಿಕೊಂಡು ಶ್ರೇಷ್ಠಕರ್ಮಗಳನ್ನು ಮಾಡುತ್ತಾ
ಸೇವಾಭಾವದಿಂದ ಹಾಗೂ ಸಮರ್ಪಣಾ ಭಾವದಿಂದ ಭಗವಂತನ ಸೃಷ್ಟಿಯನ್ನು ಸಂರಕ್ಷಿಸುತ್ತಾರೋ ಭಗವಂತನು
ಅವರನ್ನು ಸಂರಕ್ಷಿಸುತ್ತಾನೆ ಹಾಗೂ ಭಗವಂತನು ಅವರಿಗೆ ಮಾತ್ರ ಪ್ರಾಪ್ತನಾಗುತ್ತಾನೆ. ಭಗವಂತನ
ಉಪಾಸನೆ ಎಂದರೆ ಕಣ್ಣು ಮುಚ್ಚಿಕೊಂಡು ಧ್ಯಾನ ಮಾಡುವುದು ಮಾತ್ರವಲ್ಲ. ಭಗವಂತನು ಸೃಷ್ಟಿಸಿದ ಸಕಲ
ಪದಾರ್ಥಗಳನ್ನೂ, ಪ್ರಾಣಿಮಾತ್ರರನ್ನೂ ಪ್ರೀತಿಸಬೇಕು, ಗೌರವಿಸಬೇಕು, ರಕ್ಷಿಸಬೇಕು. ಪ್ರತಿಯೊಂದು
ಕಣಕಣದಲ್ಲಿಯೂ, ಪ್ರಾಣಿಮಾತ್ರರಲ್ಲಿಯೂ ಭಗವಂತನ ಸ್ವರೂಪವನ್ನೇ
ಕಾಣಬೇಕು. ಇದೇ -ನಿಜವಾದ ರೀತಿಯಲ್ಲಿ ಭಗವಂತನ ಉಪಾಸನೆಯಾಗಿದೆ. ಅಗ್ನಿಯು (ಪ್ರಕಾಶಮಾನತೆಯು) ವಾಯುವಿನ
ಸಹಾಯದಿಂದ ಪ್ರಜ್ವಲಿತವಾಗುತ್ತದೆ. ಸೃಷ್ಟಿಕ್ರಮದ ಪ್ರಕಾರ ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ ಪ್ರಕಟವಾಗುತ್ತದೆ. ಸಕಲ ಲೋಕ ಲೋಕಾಂತರಗಳ ಜ್ಞಾನವನ್ನೂ,
ಭಗವಂತನ ಜ್ಞಾನ ಜ್ಯೋತಿಯ ಮೂಲಕ ಪ್ರಾಪ್ತಮಾಡಿಕೊಳ್ಳುತ್ತಾರೆ. ಯಾರು,
ಪ್ರಾಣಾಯಾಮದ ಮೂಲಕ ತಮ್ಮ ಕುಂಡಲಿನೀ ಶಕ್ತಿಯನ್ನು ಜಾಗೃತವನ್ನಾಗಿ ಮಾಡಿ,
ಪ್ರಾಣ ಶಕ್ತಿಯನ್ನು ಸಹಸ್ರಾರ ಚಕ್ರದಲ್ಲಿ ಸ್ಥಿರಗೊಳಿಸಿ, ಯೋಗ-ಸಾಧನೆಯ ಮೂಲಕ ಸಮಾಧಿ ಸ್ಥಿತಿಯಲ್ಲಿ, ಸರ್ವ
ಪ್ರಕಾಶ ಸ್ಟರೂಪನೂ, ಸರ್ವಜ್ಞನೂ ಆದ ಪರಮಾತ್ಮನನ್ನು ತಮ್ಮ ಅಂತಃಕ-ರಣದಲ್ಲಿಯೇ
ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೆ.
ಇಂದ್ರಮಿದ್ಗಾಥಿನೋ
ಬೃಹದಿಂದ್ರಮರ್ಕೇಭಿರರ್ಕಿಣಃ |
ಇಂದ್ರಂ ವಾಣೀರನೂಷತ ||
ಋಗ್ವೇದ : 1-7-1
ಭಾವಾರ್ಥ:- ಭಗವಂತನ ಗುಣಗಳನ್ನು ಗಾನ ಮಾಡುವ ಅತ್ಯಂತ ವಿಚಾರಶೀಲ ಹಾಗೂ ವಿವೇಕಿಗಳಾದ
ವಿದ್ವಾಂಸರೇ ! ನೀವೆಲ್ಲರೂ ಸತ್ಯವಂತರಾಗಿ, ಅನಂತಜ್ಞಾನವುಳ್ಳ,
ಸದಾಶ್ರೇಷ್ಠಕರ್ಮಗಳ ಕಡೆಗೆ, ಅರ್ಥಾತ್
ಸತ್ಯರ್ಮಗಳನ್ನೇ ಮಾಡಲು ಪ್ರೇರೇಪಿಸುವ, ಸರ್ವೋಭ್ಯದಯ ಮತ್ತು
ನಿಶ್ರೇಯಸ್ಸಿಗೆ ಕಾರಣೀಭೂತವಾದ ವೇದಮಂತ್ರಗಳ ಮೂಲಕ
ಚತುರ್ವೇದಗಳಲ್ಲಿ ಬೋಧಿಸಿದ ಸಂಪೂರ್ಣ ಜ್ಞಾನದ ಪ್ರಾಪ್ತಿಗಾಗಿ ಸರ್ವಜ್ಞನಾದ
ಪರಮಾತ್ಮನನ್ನು ಅನನ್ಯ ಭಕ್ತಿ ಹಾಗೂ ಶ್ರದ್ಧೆಯಿಂದ ಉಪಾಸಿಸಿರಿ. ಪ್ರಕಾಶ ಮತ್ತು ಶಕ್ತಿಗಾಗಿ
ಸೂರ್ಯನ ಪ್ರಕಾಶ ಮತ್ತು ಶಕ್ತಿಯನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಿರಿ.
ಪ್ರಾಣಶಕ್ತಿಯನ್ನು ವರ್ಧಿಸಲು ಮತ್ತು ಸಂಪೂರ್ಣ ಚೈತನ್ಯವನ್ನು ಪಡೆದು ಆಯುರಾರೋಗ್ಯವು
ಪ್ರಾಪ್ತವಾಗಲು ಪ್ರಾಣಾಯಾಮಾದಿಗಳ ಮೂಲಕ ವಾಯುವಿನ ಸದ್ವಿನಿಯೋಗವನ್ನು ಮಾಡಿರಿ.
ಸೇಮಂ ನಃ ಕಾಮಮಾ ಪೃಣ ಗೋಭಿರಶ್ವೈಃ
ಶತಕ್ರತೋ |
ಸ್ತವಾಮ ತ್ವಾ ಸ್ವಾಧ್ಯಾಹ್ ||
ಋಗ್ವೇದ : 1-16-9
ಭಾವಾರ್ಥ:-
ಭಗವಂತನು ಅನಂತ ಜ್ಞಾನವುಳ್ಳವನೂ, ಅನಂತ
ಜ್ಞಾನಪ್ರದನೂ, ಸರ್ವಶಕ್ತನೂ ತನ್ನ ಭಕ್ತಾದಿಗಳಿಗೆ ಅಸಂಖ್ಯಾತ
ಕರ್ಮಗಳನ್ನು ಮಾಡುವ ಸಾಮರ್ಥ್ಯವನ್ನೂ, ಶಾರೀರಿಕ ಬಲವನ್ನೂ,
ಆತ್ಮಿಕ ಬಲವನ್ನೂ, ಮಾನಸಿಕ ಬಲವನ್ನೂ,
ಆಯುರಾರೋಗ್ಯವನ್ನೂ ಕೊಡುತ್ತಾನೆ. ಶರಣಾಗತ ಭಕ್ತವತ್ಸಲನಾದ ಪರಮಾತ್ಮನು ವಿಚಿಂತ್ಯನು ಅರ್ಥಾತ್
ವಿಶೇಷವಾದ ರೀತಿಯಲ್ಲಿ ಚಿಂತನೆ, ಮನನ, ನಿಧಿಧ್ಯಾಸನ (ಆಳವಾದ ಮತ್ತು ಪುನರಾವರ್ತಿತ ಧ್ಯಾನ), ಆತ್ಮಸಮರ್ಪಣದಿಂದ
ಪ್ರಾಪ್ತನಾಗುವವನು ಆಗಿದ್ದಾನೆ. ಆ ಪರಮಾತ್ಮನನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಉಪಾಸಿಸಬೇಕು.
ವೀರ್ಯ
ಅಂದರೇನು?
ವೀರ್ಯ = विर्य = वि र य
ಅಕ್ಷರಶಃ
ಅರ್ಥ :- ಶ್ರೇಷ್ಟತೆಯು
ಗಂಜಿಯನ್ನು ಉತ್ಪಾದಿಸುವುದು (ಇದು ಸಾಮಾನ್ಯವಾಗಿ ತಿಳಿದುಕೊಂಡಂತೆ ಪುರುಷನಲ್ಲಿ ಉದ್ಬವಿಸುವ
ಸಂತಾನಾಭಿವೃದ್ದಿ ವೀರ್ಯ ಮಾತ್ರವೇ ಅಲ್ಲ. ಶ್ರೇಷ್ಟತೆಯ ಗಂಜಿ ಮನುಜನಲ್ಲಿ ಹೆಣ್ಣು ಗಂಡು
ಇಬ್ಬರಲ್ಲೂ ಪಂಚ ಕೋಶಗಳಾದ ಪ್ರಾಣಮಯ, ಅನ್ನಮಯ, ಮನೋಮಯ, ವಿಜ್ಞಾನಮಯ ಆನಂದಮಯ ಎಂಬ ಅಂಶಗಳಿಂದ ದೇಹದಲ್ಲಿನ
ವಿವಿದ ಗ್ರಂಥಿಗಳ ಸಾರ, ನಾವು ತಿನ್ನುವ ಅನ್ನದ ಸಾರ, ಉಸಿರಾಡುವ ಗಾಳಿಯಲ್ಲಿನ
ಗಿಡಮೂಲಿಕೆ ಸಾರ, ದೇಹದಲ್ಲಿ ಉದ್ಬವಿಸುವ ವಾಯು ಸಾರ, ಇವುಗಳ ಮಿಶ್ರಿತ ಶಕ್ತಿಶಾಲಿ ಗಂಜಿ ಅಂಶವೇ ವೀರ್ಯ ಎಂಬುದಾಗಿದೆ.).
ವಿದ್ವಾಂಸರು
ವೀರ್ಯ ಎಂದರೆ ಈರೀತಿಯಾದ ವಿವಿಧ ಅರ್ಥ ನೀಡಿದ್ದಾರೆ, ವೀರ್ಯ ಎಂದರೆ
ಶತ್ರುಗಳನ್ನು, ದೋಷವನ್ನು ನಿರ್ನಾಮ ಮಾಡುವ ಶಕ್ತಿ, ಪರಾಕ್ರಮ-ದುಷ್ಟ ಶಕ್ತಿಯನ್ನು ಸಂಹಾರ ಮಾಡುವ ಶಕ್ತಿ ಉಳ್ಳವನು. ಭಗವಂತನ ಉಪಾಸನೆ
ಮಾಡುವ ಆರು ಮೂಲ ಗುಣ. ಐಶ್ವರ್ಯ, ವೀರ್ಯ, ಯಶಸ್ಸು, ಸಂಪತ್ತು , ಜ್ಞಾನ
ಹಾಗು ವೈರಾಗ್ಯ.
ಅಷ್ಟಾಂಗ ಹೃದಯದಲ್ಲಿ ಹೀಗೆ ಹೇಳಿದೆ, “ಉಷ್ಣ
ಶೀತ ಗುಣೋತ್ಕರ್ಷಾತ್ ತತ್ರ ವೀರ್ಯಂ ದ್ವಿಧಾ ಸ್ಮೃತಂ” ಅಂದರೆ “ದ್ರವ್ಯದಲ್ಲಿರುವ
೨೦ ಗುಣಗಳೊಳಗೆ ಉಷ್ಣ ಶೀತಗಳ ಶಕ್ತಿಯೇ ಹೆಚ್ಚು. ಆದ್ದರಿಂದಲೇ ಉಷ್ಣ ಶೀತ ಇವೆರಡು ವೀರ್ಯವೆಂದು
ಕರೆಯಲ್ಪಡುತ್ತವೆ”. ....... ವೀರ್ಯವು ಗುರು, ಸ್ನಿಗ್ಧ, ಶೀತ, ಮೃದು, ಲಘು,
ರುಕ್ಷ, ಉಷ್ಣ, ತೀಕ್ಷ್ಣವೆಂದು
ಎಂಟು ಪ್ರಕಾರ ಎಂದು ಕೆಲವರು ಹೇಳುತ್ತಾರೆ. ಆದರೆ ಯಾತರಿಂದ ಯಾವದಾದರೂ ಕೆಲಸ ಮಾಡಲ್ಪಡುತ್ತದೋ
ಅದೇ ವೀರ್ಯವು. ವೀರ್ಯವಲ್ಲದ್ದು ಯಾವದನ್ನೂ ಮಾಡಲಾರದು.
ಆಯುರ್ವೇದಾಚಾರ್ಯರಾದ
ಶ್ರೀಚರಕರ ಪ್ರಕಾರ “ಚರಕಸ್ತ್ವಾಹ
ವೀರ್ಯಂ ತದೇತೇನ ಕ್ರಿಯತೇ ಕ್ರಿಯಾ ನಾವೀರ್ಯಂ ಕುರುತೇ ಕಿಂಚಿತ್ಸರ್ವಾ ವೀರ್ಯಕೃತಾ ಹಿ ಸಾ ||” ಅಂದರೆ, “ಪ್ರತಿಯೊಂದು ವಸ್ತುವಿನಲ್ಲಿಯೂ ಮತ್ತು ಪ್ರತಿವ್ಯಕ್ತಿಯಲ್ಲಿಯೂ ಧಾರಣ ಮಾಡಲಿಕ್ಕೂ
ಮತ್ತು ಕಾರ್ಯ ಮಾಡಲಿಕ್ಕೂ ಇದ್ದ ಶಕ್ತಿಯೆ ವೀರ್ಯವು”
ಮನಃ ಪ್ರಸಾದಃ ಸೌಮ್ಯತ್ವಂ
ಮೌನಮಾತ್ಮವಿನಿಗ್ರಹಃ |
ಭಾವಸಂಶುದ್ಧಿರಿತ್ಯೇತತ್ತಪೋ
ಮಾನಸಮುಚ್ಯತೇ॥
ಭಾಗವದ್ಗೀತಾ ೧೭-೧೬
ಭಾವಾರ್ಥ:-
ಮನಸ್ಸಿನ ಪ್ರಸನ್ನತೆ, ಹೃದಯದ ಕೋಮಲತೆ,
ಮೌನ, ಆತ್ಮ ಸಂಯಮನ ಮತ್ತು ಚಿತ್ತದ ಶುದ್ಧತೆ
ಅಂದರೆ ವಿಚಾರಗಳ ಶುದ್ಧತೆ ಇವುಗಳಿಗೆ ಭಗವಾನ್ ಕೃಷ್ಣನು ಮಾನಸಿಕ ತಪಸ್ಸೆಂದು ಹೇಳಿದ್ದಾನೆ. (ಪ್ರಸನ್ನತೆಯಿಂದ ಚಿತ್ತವು ಮತ್ತು ವೀರ್ಯವು ಶರೀರದಲ್ಲಿ ಸ್ಥಿರವಾಗಿ ಉಳಿಯುತ್ತವೆ.
ಅಪ್ರಸನ್ನತೆಯಿಂದ ಚಿತ್ತ ಹಾಗು ವೀರ್ಯ ಗಳೆರಡೂ ಚಂಚಲವಾಗಿ ಅವುಗಳ ನಾಶವಾಗುತ್ತದೆ.
“ಚಿತ್ತಾಯತ್ತಂ ಧಾತು ಬದ್ಧಂ ಶರೀರಂ ನಷ್ಟೇ ಚಿತ್ತೇ ಧಾತವೋ ಯಾಂತಿ ನಾಶಮ್” ಅಂದರೆ ಚಿತ್ತದ ಆಧೀನದಲ್ಲಿ ವೀರ್ಯವು ಇದ್ದು, ಚಿತ್ತದ
ನಾಶವಾಗುತ್ತಲೇ ಶರೀರ ದಲ್ಲಿದ್ದ ವೀರ್ಯವೂ ಸ್ಥಾನ ಭ್ರಷ್ಟವಾಗಿ ನಾಶಹೊಂದುತ್ತದೆ, ಎಂದು ಶಾಸ್ತ್ರ ಸಿದ್ಧಾಂತವೂ ಇರುವುದಲ್ಲದೆ ಜಗತ್ತಿನ ಅನುಭವಕ್ಕೆ ಬಂದ ಮಾತೂ ಆಗಿದೆ
ಏನ್ನುತ್ತಾರೆ ವಿ. ಶಿವಾನಂದಸ್ವಾಮಿ ರವರು.)
ಪ್ರಶ್ನೋಪನಿಷತ್ 1-4 ರಲ್ಲಿ ಹೀಗೆಂದಿದ್ದಾರೆ, “ಸ ಪ್ರಾಣಮಸೃಜತ;
ಪ್ರಾಣಾಚ್ಛ್ರದ್ಧಾಂ, ಖಂ ವಾಯುರ್ಜ್ಯೋತಿರಾಪಃ,
ಪೃಥಿವೀಂದೃಯಂ, ಮನಃ, ಅನ್ನಮನ್ನಾದ್ವೀರ್ಯಂ, ತಪೋ ಮಂತ್ರಾಃ, ಕರ್ಮ, ಲೋಕಾ, ಲೋಕೇಷು ಚ
ನಾಮ ಚ” ಅಂದರೆ “ಆ ಪುರುಷನು ಪ್ರಾಣನನ್ನು ಸೃಷ್ಟಿಸಿದನು. ಪ್ರಾಣನಿಂದ ಶ್ರದ್ದೆ, ಆಕಾಶ, ವಾಯು, ಜ್ಯೋತಿ, ನೀರು, ಪೃಥ್ವಿ,
ಇಂದ್ರಿಯ ಮನಸ್ಸು ಅನ್ನ (ಇವುಗಳನ್ನೂ), ಅನ್ನದಿಂದ ವೀರ್ಯ ತವಸ್ಸು ಮಂತ್ರಗಳು ಕರ್ಮ ಲೋಕಗಳು (ಇವುಗಳನ್ನೂ), ಮತ್ತು ಲೋಕಗಳಲ್ಲಿ ನಾಮವನ್ನೂ (ಹೆಸರುಗಳನ್ನೂ ಸೃಷ್ಠಿಸಿದನು)
ದೇವರ
ನಾಮದಲ್ಲಿ ಘೋರವೀರ್ಯಾಯ ನಮಃ ಎನ್ನುತ್ತಾರೆ, ಅಂದರೆ ಕ್ರೂರವಾದ,
ಅತಿ ಕೋಪವುಳ್ಳ, ಏನನ್ನೇ ಆದರೂ, ಸೃಷ್ಟಿಯಲ್ಲಿ ಎನನ್ನೇ ಆದರೂ ನಾಶಮಾಡುವ ವೀರ್ಯ ಅಂದರೆ ಶಕ್ತಿಯುಳ್ಳವನು. ಮಹಾವೀರ್ಯಾಯ
ನಮಃ, ವೀರ್ಯ - ಎಂದರೆ ಶಕ್ತಿ, ತೇಜಸ್ಸು,
ಇಂದ್ರಿಯ ಶಕ್ತಿ, ಬಲ, ಪ್ರಜಾಭಿವೃದ್ದಿಗೆ ಫಲಕಾರಿಯಾಗುವ ಶಕ್ತಿ. ತೇಜಸ್ಸು ಅಂದರೆ ಪ್ರಕಾಶ, ಶಕ್ತಿ, ವೀರ್ಯ, ಅಗ್ನಿ,
ತಪಶೃಕ್ತಿಯ ಲಕ್ಷಣ - ತೇಜಸ್ಸು.
ವೇದಾಂತ
ವಿದ್ವಾಂಸರ ಪ್ರಕಾರ "ಆತ್ಮನಿಂದ
ವೀರ್ಯವು ದೊರಕುತ್ತದೆ, ವಿದ್ಯೆಯಿಂದ ಬಲವು ದೊರಕುತ್ತದೆ” ಎಂಬುದು
ಶ್ರುತಿ ವಚನವೆಂದು. ನಾವು ನಮ್ಮೊಳಗೆ ಹುದುಗಿಕೊಂಡಿರುವ ಆತ್ಮನ ಚಿಂತನೆಯನ್ನು ಮನಸ್ಸಿಗೆ
ತಂದುಕೊಂಡರೆ ಸಾಕು, ಕೂಡಲೆ ನಮ್ಮಲ್ಲಿ ಒಂದು ಹೊಸ ಬಗೆಯ ವೀರ್ಯವೂ
ಬಲವೂ ಉಂಟಾಗುವವು. ಜನರು ಹಣದಿಂದಲೂ ಜನಸಹಾಯದಿಂದಲೂ ಮಂತ್ರಶಕ್ತಿಯಿಂದಲೂ ಔಷಧಿಯಿಂದಲೂ ತಪಸ್ಸಿನಿಂದಲೂ
ಯೋಗದಿಂದಲೂ ಬೇರೆಬೇರೆಯ ಬಲವನ್ನು ಸಂಪಾದಿಸಿಕೊಳ್ಳುವರು. “ಆತ್ಮನಾ ವಿನ್ನತೇ ವೀರ್ಯಂ ವಿದ್ಯಯಾ ವಿನ್ನತೇsಮೃತಮ್” ಅಂದರೆ,
"ಆತ್ಮನಿಂದ ವೀರ್ಯವನ್ನು ಹೂಂದಬಹುದು, ಆತ್ಮವಿದ್ಯಯಿಂದ
ಅಮೃತತ್ವವನ್ನು ಹೊಂದಬಹುದು” ಎಂಬ ಉಪನಿಷದ್ವಾಕ್ಯವು. ವಿದ್ಯೆಗೆ ಸರಿಯಾದ ವೀರ್ಯವುಂಟಾಗಿ
ಸಂಸಾರಕ್ಕೆ ಕಾರಣವಾಗಿರುವ ಅವಿದ್ಯೆಯ ನಾಶವೂ ಆನಂದರೂಪವಾದ ಫಲದ ಪ್ರಾಪ್ತಿಯೂ ಆಗುತ್ತದೆ.
ಸಹ ನಾವವತು | ಸಹ ನೌ ಭುನಕ್ತು ।
ಸಹ ವೀರ್ಯಂ ಕರವಾವಹೈ |
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ |
ಓಂ ಶಾನ್ತಿಃ ಶಾನ್ತಿಃ ಶಾನಿಃ
ಶಿಷ್ಯನು ಗುರುಶಿಷ್ಯರಿಬ್ಬರ ಪರವಾಗಿ ಪ್ರಾರ್ಥನೆ
ಭಾವಾರ್ಥ:- ನಮ್ಮಿಬ್ಬರನ್ನೂ ಕಾಪಾಡಲಿ, ನಮ್ಮಿಬ್ಬರನ್ನೂ
ಪಾಲಿಸಲಿ, ನಾವಿಬ್ಬರೂ ಜೊತೆಯಲ್ಲಿಯೇ ಸಾಮರ್ಥ್ಯವನ್ನುಂಟು ಮಾಡುವಂತಾಗಲಿ, ನಾವು ಅಧ್ಯಯನಮಾಡಿದ್ದು ತೇಜಸ್ವಿಯಾಗಲಿ, ನಾವು
ಒಬ್ಬರನ್ನೊಬ್ಬರು ದ್ವೇಷಿಸದಂತಾಗಲಿ, ಓಂ ಶಾಂತಿಃ ಶಾಂತಿಃ|
ಶಾಂತಿಃ.
ಕೇನೋಪನಿಷತ್ತು
ಪ್ರಸ್ತಾಪಿಸುತ್ತದೆ. (೨.೫): ಆತ್ಮನಾ ವಿಂದತೇ ವೀರ್ಯಂ ಎಂದರೆ, “ಮಾನವನು
ಆತ್ಮನ ಮೂಲಕ ಉನ್ನತ ಶಕ್ತಿಯನ್ನು ಪಡೆಯುತ್ತಾನೆ.” ಶಂಕರಾಚಾರ್ಯರು ಇದನ್ನು ವ್ಯಾಖ್ಯಾನಿಸುತ್ತ,
ಆತ್ಮಜ್ಞಾನ ಎಂದರೆ ಅಮೃತತ್ವದ ಜ್ಞಾನ ಮತ್ತು ಇದು ಮೃತ್ಯುವನ್ನು ಗೆಲ್ಲುವ
ಶಕ್ತಿಯನ್ನು ಕೊಡುತ್ತದೆ ಎನ್ನುತ್ತಾರೆ.
ಆಹಾರಸ್ಯ ಪರಂ ಧಾಮ ಶುಕ್ರಂ
ತದ್ರಕ್ಷ್ಯಮಾತ್ಮನಃ
ಕ್ಷಯೇಹ್ಯಸ್ಯ ಬರ್ಹೂ ರೋಗಾನ್ಮರಣಂ ವಾ
ನಿಯಚ್ಛತಿ
ಚರಕಸಂಹಿತೆ ಅ ೬
ಭಾವಾರ್ಥ:- ವೀರ್ಯವು ನಾವು ಸೇವಿಸುವ ಆಹಾರದ ಕಡೆಯ ಸಾರವಸ್ತುವಾಗಿದೆ. ಈ ವೀರ್ಯದಿಂದ ಓಜ ಎಂಬ
ತೇಜೋರೂಪವಾದ ಸೂಕ್ಷ್ಮ ವಸ್ತುವು ಹುಟ್ಟಿ ಸಮಸ್ತ ಶರೀರವನ್ನು ವ್ಯಾಪಿಸಿ ಶರೀರದ ಸಕಲ ಕಾರ್ಯಗಳಿಗೂ
ಸಹಾಯವನ್ನುಂಟುಮಾಡುತ್ತದೆ. ಈ ಓಜವು ಎಂದು ಕ್ಷೀಣವಾಗುವುದೋ ಅಂದೇ ಮನುಷ್ಯನು ತನ್ನ ಇಹಲೋಕ
ಯಾತ್ರೆಯನ್ನು ಮುಗಿಸಿಕೊಂಡು ಯಮರಾಜನ ಅತಿಥಿಯಾಗುವನು. ಈ ಓಜಕ್ಕೆ ಕಾರಣವಾದ ವೀರ್ಯವನ್ನು
ರಕ್ಷಿಸಿಕೊಳ್ಳದಿದ್ದರೆ ಅನಂತರೋಗಗಳು ಶರೀರವನ್ನು ಆಕ್ರಮಿಸುವವು.
ರಸ ಇಕ್ಷೌ ಯಥಾ ದಧ್ನಿ ಸರ್ಪಿಸ್ತೈಲಂ
ತಿಲೇ ಯಥಾ |
ಸರ್ವತ್ರಾನುಗತಮ್ ದೇಹೇ ಶುಕ್ರಂ
ಸಂಸ್ಪರ್ಶನೇ ತಥಾ ||
ಚರಕಸಂಹಿತೆ ಅ 2
ಭಾವಾರ್ಥ:- ಕಬ್ಬಿನ ಸರ್ವಾಂಗದಲ್ಲಿ ರಸವು ವ್ಯಾಪಕವಾಗಿರುವಂತೆಯೂ, ಮೊಸರಿನ ಪ್ರತಿಯೊಂದು ಕಣದಲ್ಲಿ ತುಪ್ಪವು ಸೂಕ್ಷ್ಮರೂಪದಿಂದ ವ್ಯಾಪಿಸಿರುವಂತೆಯೂ,
ಎಳ್ಳಿನ ಸರ್ವಾವಯವದಲ್ಲಿ ಎಣ್ಣೆಯು ವ್ಯಾಪಿಸಿರುವಂತೆಯೂ ವೀರ್ಯವು ಸಂಪೂರ್ಣ ಶರೀರ
ಮತ್ತು ಚರ್ಮದಲ್ಲಿ ವ್ಯಾಪಿಸಿಕೊಂಡಿರುವುದಾಗಿದೆ. ಆದುದರಿಂದ ಹಿತವಾದ ಆಹಾರ ವಿಹಾರಗಳಿಂದಲೂ
ಸದಾಚರಣೆ ಗಳಿಂದಲೂ, ಶರೀರ ಧಾರಣೆಗೆ ಮೂಲಕಾರಣವಾದ ವೀರ್ಯವನ್ನು
ರಕ್ಷಿಸಿಕೊಳ್ಳುವುದರಲ್ಲಿ ಬಹಳ ಎಚ್ಚರಿಕೆಯಿಂದಿರಬೇಕಾದುದು ವಿವೇಕಿಗಳ ಕರ್ತವ್ಯವಾಗಿರುತ್ತದೆ.
ಸ ಖಲು ತ್ರೀಣಿ ತ್ರೀಣಿ ಕಲಾಸಹಸ್ರಾಣಿ
ಪಂಚದಶ ಚ |
ಕಲಾ ಏಕೈಕಸ್ಮಿನ್ ಧಾತೌ ಅವತಿಷ್ಠತೇ ಏವಂ
ಮಾಸೇನ ರಸಃ
ಶುಕ್ರೀಭವತಿ ಸ್ತ್ರೀಣಾಂ ಚಾರ್ತವಂ॥
ಸುಶ್ರುತ ಸೂತ್ರ ಅ ೧೪
ಭಾವಾರ್ಥ:- ಆಹಾರವು ೨೪ ಗಂಟೆಗಳಲ್ಲಿ ರಸವಾಗಿ ಪರಿಣಾಮವನ್ನು ಹೊಂದಿ ಆ ರಸವೇ ಐದೈದು
ದಿವಸಗಳವರೆಗೆ ಒಂದೊಂದು ಧಾತುವಿನಲ್ಲಿದ್ದು, ಆಯಾಯ ಧಾತುವಿನ
ರೂಪವನ್ನು ಹೊಂದಿ ಅದನ್ನು ಪೋಷಿಸುತ್ತ, ಕ್ರಮವಾಗಿ ರಕ್ತ, ಮಾಂಸ, ಮೇದಸ್ಸು, ಅಸ್ತಿ,
ಮಜ್ಜೆಗಳ ರೂಪದಿಂದ ಪರಿಣತವಾಗಿ ಕಡೆಗೆ ವೀರ್ಯದ ರೂಪವನ್ನು ಧರಿಸುತ್ತದೆ.
ಹೀಗೆ ಇಂದು ಉಂಡ ಅನ್ನವು ೩೦ ದಿನಗಳ ಅವಧಿಯೊಳಗೆ ವೀರ್ಯವಾಗುವುದೆಂದು ಸುಶ್ರುತ ಮುನಿಯು
ಪ್ರತಿಪಾದಿಸಿರುತ್ತಾರೆ.
ಚರಕಮಹರ್ಷೀಯು “ಸಂತತ್ಯಾ ಭೋಜ್ಯ ಧಾತೂನಾಂ ಪರಿವೃತ್ತಿಸ್ತು
ಚಕ್ರವತ್ (ಚ.ಚಿ. ಅ 1೫) ಎಂದು ಪ್ರತಿ ಪಾದಿಸಿರುತ್ತಾನೆ. “ಧಾತವೋ ಹಿ ಧಾತ್ವಾಹಾರಾಃ” (ಚ.ಚಿ.ಅ ೧೫) ಎಂಬ
ನಿಯಮವನ್ನನುಸರಿಸಿ ಧಾತುಗಳು ಒಂದಕ್ಕೊಂದು ಆಹಾರವಾಗಿರುತ್ತವೆ. ರಸವು ರಕ್ತಕ್ಕೂ, ರಕ್ತವು ಮಾಂಸಕ್ಕೂ, ಮಾಂಸವು ಮೇದಸ್ಸಿಗೂ, ಮೇದಸ್ಸು (ಕೊಬ್ಬು) ಅಸ್ತಿಗೂ, ಅಸ್ಥಿಯು ಮಜ್ಜಕ್ಕೂ
(ಮೂಳೆಯೊಳಗಿನ ತಿರುಳು), ಮಜ್ಜವು ವೀರ್ಯಕ್ಕೂ ಆಹಾರವಾಗಿದೆ. ರಸವು
ಸಕಲ ಧಾತುಗಳನ್ನೂ ಪೋಷಿಸುತ್ತದೆ. ರಸದಿಂದ ಪರಿಪೋಷಿತಗಳಾದ ಈ ಧಾತುಗಳು ಸಂಪೂರ್ಣ ಶರೀರದಲ್ಲಿ ವಿಶ್ರಾಂತಿಯಿಲ್ಲದೆ
ಚಕ್ರದಂತೆ ಸುತ್ತುತ್ತ ತಮ್ಮ ತಮ್ಮ ಅಗ್ನಿ ಬಲಾನುಸಾರವಾಗಿ ಪರಿಪಾಕ ಮತ್ತು ಪರಿಣಾಮವನ್ನು ಹೊಂದುತ್ತಿರುವುವು.
ಆಹಾರ ರಸವು ವೀರ್ಯರೂಪವನ್ನು ಹೊಂದಲು ಧಾತುಗಳ ಅಗ್ನಿಬಲವೇ ಕಾರಣವಾಗಿರುವುದರಿಂದ ಇಷ್ಟೇ
ದಿನಗಳಿಗೆ ಆಹಾರದಿಂದ ವೀರ್ಯವುಂಟಾಗುತ್ತದೆಂದು ನಿರ್ಧರಿಸುವುದು ಅಸಂಭವವಾಗಿರುತ್ತದೆ.
“ಶತಾಯುರ್ವೈ ಪುರುಷಃ ತತ ವೀರ್ಯ”
ಎಂಬ ಶ್ರುತಿವಾಕ್ಯದಂತೆ ಮರಣಪರ್ಯಂತವಾಗಿ ಜ್ಞಾನೇಂದ್ರಿಯ ಕರ್ಮೇಂದ್ರಿಯಗಳಲ್ಲಿ
ಕುಂಠಿತವಾಗದ ಶಕ್ತಿಯನ್ನು ಹೊಂದಿ ವ್ಯಾಧಿರಹಿತನಾಗಿ ನೂರು ವರ್ಷಗಳ ಪೂರ್ಣಾಯುಷ್ಯವನ್ನು
ಹೊಂದುವನು.
ಪುರುಷನಲ್ಲಿ
ಸಂತಾನ ಅಭಿವೃದ್ದಿಗಾಗಿ ತಯಾರಾಗುವ ವೀರ್ಯ ಒಂದು
ಸಾರಿ ವಿಸರ್ಜನೆಯಾಗುವ ವೀರ್ಯದಲ್ಲಿ ಸುಮಾರು 50 ಕೋಟಿ
ವೀರ್ಯಾಣುಗಳು ಸ್ತ್ರೀಯ ಯೋನಿಯಲ್ಲಿ ಶೇಖರವಾಗುತ್ತವೆಂಬ ಅಂದಾಜಿದೆ. ಇಂತಹ ವಿವಿದ ಶಕ್ತಿ ಅಂಶಗಳು ಮನುಜನ ದೇಹದಲ್ಲಿ ಎಸ್ಟು ತಯಾರಾಗುತ್ತಿರಬಹುದು
ಊಹಿಸಿ.
ನಾಡಿ, ಮಂತ್ರ, ಪುರುಷ,
ವಿಶ್ವತೋ, ಹೃದಯ, ಆಕಾಶ ಅಕ್ಷರ ಅರ್ಥ
ನಾಡಿ = नाडी = न अ ड इ
ಅಕ್ಷರಶಃ
ಅರ್ಥ :- ಜಲಾಂತರ್ಗಾಮಿ
ಬೆಂಕಿಯನ್ನು ತಲುಪುವ ಅವಿಭಜಿತ ಶ್ರೇಷ್ಠತೆ (ಹೊಟ್ಟೆ ಪ್ರದೇಶದ ಅಗ್ನಿಯ ನೀರನ್ನು ಸೇರುವ
ಅವಿಭಜಿತವಾದ ಶ್ರೇಷ್ಠ ದೇಹದ ಬಾಗವೇ ನಾಡಿ, ಇದು ಬೇರೆ ಬೇರೆ
ರೀತಿಯಲ್ಲಿ ಇದ್ದರೂ ಒಂದಕ್ಕೊಂದು ಸಂಪರ್ಕದಿಂದ ಕೂಡಿದೆ). ನಾಡಿಯ ಬಗ್ಗೆ ಪುಸ್ತಕದ ಪ್ರಾರಂಬದಿಂದ
ಕೊನೆಯವರೆಗೆ ವಿವರಣೆ ಬಹಳ ಇದೆ.
ಮಂತ್ರ = मन्त्र = म न त्र
ಅಕ್ಷರಶಃ
ಅರ್ಥ :- ಶ್ಲಾಘನೀಯ
ಮೂರು ಮಾಂತ್ರಿಕ ಸೂತ್ರ (ಮಂತ್ರ ಹೆಸರಿನಲ್ಲೇ ಮೂರು ಶ್ಲಾಘನೀಯವಾದ ಮಾಂತ್ರಿಕ ಸೂತ್ರ ಅಡಗಿದೆ
ಅದು ಅ ಉ ಮ, ಇರಬಹುದು, ಓಂ ನಮಃ
ಶಿವಾಯ ಇರಬಹುದು, ಓಂ ನಮೋ ನಾರಾಯಣಾಯ ಇರಬಹುದು, ಓಂ ಸೋ ಹಮ್ ಇರಬಹುದು ಈಗಾಗಲೇ
ತಿಳಿಸಿರುವಂತೆ ಉಸಿರಾಟದಲ್ಲಿ ಮೂರು ಮಾಂತ್ರಿಕ ಸೂತ್ರ ಅಜಪ ವಿಧಾನದಲ್ಲಿ ಜಪಿಸಿದಾಗ ದೇಹದಲ್ಲಿ
ಅದ್ಬುತ ಧಾರ್ಮಿಕ ಧ್ಯಾನ ಉಂಟಾಗುವುದು.
ಪುರುಷ = पुरुष = पु रु ष
ಅಕ್ಷರಶಃ
ಅರ್ಥ :-
ಗರ್ಭದಲ್ಲಿ ಶುದ್ದೀಕರಿಸುವ ಹಮ್ ಶಬ್ದ (ಪುರುಷಮ್ ಎಂದರೆ ಗರ್ಭದಲ್ಲಿ ಶುದ್ದೀಕರಿಸುವ ಹಮ್
ಶಬ್ದದ ಮಾಂತ್ರಿಕ ಸೂತ್ರ, ಪುರುಷಃ ಎಂದರೆ ಗರ್ಭದಲ್ಲಿ
ಶುದ್ದೀಕರಿಸುವ ಹಮ್ ಶಬ್ದದ ವೈದ್ಯತೆ).
ಪುರುಷ
ಶಬ್ದವನ್ನು "ಪುರಿ ಶೇತೇ” - ದೇಹವೆಂಬ ಪುರದಲ್ಲಿ ವಾಸಿಸುವವನು ಎಂದೂ "ಪುರಿ ಉಷತಿ'
- ದೇಹವೆಂಬ ಪುರದಲ್ಲಿ ಪ್ರಕಾಶಿಸುವವನು ಎಂದೂ "ಪುರಿ ಓಷತೇ' ಎಂದಾಗ - ದೇಹದಲ್ಲಿ ಉಷ್ಣರೂಪದಲ್ಲಿ ವಿರಾಜಿಸುವವನು ಎಂದೂ ವಿದ್ವಾಂಸರು
ಅರ್ಥೈಸುತ್ತಾರೆ. ವಿದ್ವಾಂಸರು. ಸಹಸ್ರಶೀರ್ಷಾ ಪುರುಷಃ ಎಂದರೆ ಅಕ್ಷರ ಅರ್ಥದಲ್ಲಿ “ವಾಯು
ವೈದ್ಯನು ಉಜ್ವಲತೆಯನ್ನು ನೀಡುವನು, ಪ್ರಶಾಂತತೆಯು ಅತ್ಯುತ್ತಮ ಜೀವ
ಉಸಿರ ಮೇಲೆ ಪರಿಣಾಮ ಬೀರುವ, ಗರ್ಭದಲ್ಲಿ ಶುದ್ದೀಕರಿಸುವ ಹಮ್
ಶಬ್ದದ ವೈದ್ಯತೆ” ಸಹಸ್ರಶೀರ್ಷಾ ಎಂದರೆ ಅನಂತ
ತುದಿಯುಳ್ಳ (ನಾಡಿಗಳ ಸಂಪರ್ಕದ ತುದಿ) ಎಂತಲೂ ಇದೆ. ಇನ್ನೊಂದು ಅರ್ಥದಲ್ಲಿ ಪುರ ಎಂದರೆ ಮುನ್ನಡೆಸಲು ಉ ಎಂದರೆ ಕರೆಯುವ ಷ ಎಂದರೆ ಶಾಶ್ವತ
ಸಂತೋಷ – ಮುನ್ನಡೆಸಲು ಕರೆಯುವ ಶಾಶ್ವತ ಸಂತೋಷ. ಎಲ್ಲಾ ಅರ್ಥವೂ ದೇಹದಲ್ಲಿನ ಆ ಆತ್ಮ ಶಕ್ತಿಯ
ಬಗ್ಗೆ ಹೇಳಿರುವುದು ಎಂದು ಸಮಗ್ರವಾಗಿ ಸೂಚಿಸುತ್ತದೆ. ಪುರುಷನು ಎಂದರೆ ಜೀವಾತ್ಮನು.
ಶರೀರದಲ್ಲಿರುವುದರಿಂದಲೇ ಮನುಷ್ಯನನ್ನು "ಪುರುಷ' ಎಂದೇ
ಕರೆಯುತ್ತಾರೆ. ಸಾವಿರ ತಲೆಗಳುಳ (ನಾಡಿ) ಸರ್ವವ್ಯಾಪಕನಾದ ಪರಮಾತ್ಮನೂ ಪುರುಷನೇ ಮನುಷ್ಯನ
ಶರೀರದಲ್ಲಿ ಪರಮಾತ್ಮನ ಏಕಾಂಶನಾಗಿ ಜೀವಾತ್ಮನಾಗಿರುವವನೂ ಪುರುಷನೇ.
ಓಂ ಅವ್ಯಕ್ತೋsಕ್ಷರ
ಇತ್ಯುಕ್ತಸ್ತಮಾಹುಃ ಪರಮಾಂ ಗತಿಮ್ |
ಯಂ ಪ್ರಾಪ್ಯ ನ ನಿವರ್ತನ್ತೇ ತದ್ಧಾಮ
ಪರಮಂ ಮಮ ||
ಮಹಾಭಾರತ – ಭೀಷ್ಮಪರ್ವ 32-21
ಭಾವಾರ್ಥ:- ಅವ್ಯಕ್ತವೇ ಅಕ್ಷರವೆಂದೂ ಹೇಳಲ್ಪಟ್ಟಿದೆ. ಅದನ್ನೇ ಪರಮಗತಿಯೆಂದೂ ಹೇಳುತ್ತಾರೆ.
ಯಾವ ಅವ್ಯಕ್ತವನ್ನು ಸೇರಿದರೆ ಹಿಂದಿರುಗುವುದಿಲ್ಲವೋ ಆ ಅವ್ಯಕ್ತವೇ ಅಥವಾ ಅಕ್ಷರವೇ ನನ್ನ
ಶ್ರೇಷ್ಠವಾದ ಧಾಮವಾಗಿದೆ.
ಓಂ ಪುರುಷಃ ಸ ಪರಃ ಪಾರ್ಥ ಭಕ್ತ್ಯಾ
ಲಭ್ಯಸ್ತ್ವನನ್ಯಯಾ |
ಯಶ್ಯಾನ್ತಃಸ್ಥಾನಿ ಭೂತಾನಿ ಯೇನ
ಸರ್ವಮಿದಂ ತತಮ್ ||
ಮಹಾಭಾರತ – ಭೀಷ್ಮಪರ್ವ 32-21
ಭಾವಾರ್ಥ:-
ಪಾರ್ಥ! ಎಲ್ಲ ಭೂತಗಳೂ ಯಾವನ ಒಳಗೆ ಅಡಗಿವೆಯೋ, ಯಾವನು ಇವೆಲ್ಲವನ್ನೂ ವ್ಯಾಪಿಸಿದ್ದಾನೆಯೋ, ಆ ಪರಮ ಪುರುಷನು
ಅನನ್ಯವಾದ ಭಕ್ತಿಯಿಂದಲೇ ದೊರಕುತ್ತಾನೆ. (ಹಿಂದಿನ ಶ್ಲೋಕದಲ್ಲಿ ಅವ್ಯಕ್ತ, ಅಕ್ಷರ ಎಂದು ಹೇಳಿದ ಪರಬ್ರಹ್ಮ ವಸ್ತುವನ್ನೇ ಶ್ರೀಕೃಷ್ಣನು ಈ ಶ್ಲೋಕದಲ್ಲಿ ಪುರುಷ
ಎಂದು ಕರೆದಿರುವುದು)
ಓಂ ತ್ವಮಕ್ಷರಂ ಪರಮಂ ವೇದಿತವ್ಯಂ ತ್ವಮಸ್ಯ
ವಿಶ್ವಸ್ಯ
ಪರಂ ನಿಧಾನಮ್ | ತ್ವಮವ್ಯಯಃ
ಶಾಶ್ವತಧರ್ಮಗೋಪ್ತಾ
ಸನಾತನಸ್ತ್ವಮ್ ಪುರುಷೋ ಮತೋ ಮೇ ||
ಮಹಾಭಾರತ – ಭೀಷ್ಮಪರ್ವ 35-18
ಭಾವಾರ್ಥ:- ಅರಿತುಕೊಳ್ಳಬೇಕಾಗಿರುವ ಶ್ರೇಷ್ಠವಾದ ಅಕ್ಷರವು ನೀನು. ಈ ವಿಶ್ವಕ್ಕೇ ನೀನು
ಶ್ರೇಷ್ಠವಾದ ಆಶ್ರಯಸ್ಥಾನನು. ಅಳಿವಿಲ್ಲದವನು, ಶಾಶ್ವತವಾದ ಧರ್ಮವನ್ನು
ರಕ್ಷಿಸತಕ್ಕವನು. ಸನಾತನನಾದ ಪುರುಷನೂ ಸಹ ನೀನೇ ಎಂದು ನನ್ನ ಅಭಿಮತವಾಗಿದೆ. (ಅರ್ಜುನ
ಕೃಷ್ಣಣಿಗೆ ಹೇಳಿದ್ದು)
ವಿದ್ವಾಂಸರು
ಪುರುಷ ಎಂಬ ಶಬ್ದವನ್ನು ವ್ಯಾಖ್ಯಾನಿಸುತ್ತಾ ಹಲವು ಉಪಯುಕ್ತ ಮಾಹಿತಿಯನ್ನು ಹೊರಹಾಕಿದ್ದಾರೆ, “ಧರ್ಮ, ಅರ್ಥ, ಕಾಮ,
ಮೋಕ್ಷ - ಇವು ನಾಲ್ಕು ಪುರುಷಾರ್ಥಗಳು. ಪುರುಷ ಎಂದರೆ ಮನುಷ್ಯ ಎಂದರ್ಥ.
ಗಂಡಸು ಎಂದಲ್ಲ. ಮನುಷ್ಯಜನ್ಮದ ಗುರಿ ಇವು ನಾಲ್ಕು - ಎಂಬುದು ನಮ್ಮ ಶಾಸ್ತ್ರ ಕಾರರ ನಿರ್ಣಯ”. ದಾಸ ಸಾಹಿತ್ಯದಲ್ಲಿ ಪುರುಷ ಎಂದರೆ ಶ್ರೀಹರಿ (ಅಕ್ಷರ ಅರ್ಥದಲ್ಲಿ ಶ್ರೀಹರಿ
ಎಂದರೆ ಸರಸ್ಪತಿ ಚಲಿಸುವ ವೈದ್ಯತೆ) ಎಂತಲೂ. ವಾಯುದೇವರು ಹರಿಯ ಪ್ರಾಣದಿಂದ ಸೃಷ್ಟಿಯಾದವರೆಂದು
ಪುರುಷಸೂಕ್ತ ತಿಳಿಸುತ್ತದೆ. (ಪ್ರಾಣಾದ್ವಾಯು ರಜಾಯತ).
ಇಮೇ ವೈ ಲೋಕಾಃ ಪೂರಯಮೇನ ಪುರುಷೋ ಯೋsಯಂ
ಪವತೇ ಸೋsಸ್ಯಾಂ ಪುರಿ ಶೇತೇ
ತಸ್ಮಾತ್ಪುರುಷ: ||
(ಶ. ಬ್ರಾ. ೧೩-೬. ೨-೧)
ಭಾವಾರ್ಥ:- ಸಕಲ ಲೋಕಗಳೂ ಕೋಟಿಯ ರೂಪದಂತಿವೆ. ಪುರುಷನು ಇವುಗಳಲ್ಲಿ ವಾಯುವನ್ನು
(ಚೈತನ್ಯವನ್ನು) ತುಂಬುತ್ತಾನೆ ಮತ್ತು ಈ ಕೋಟೆಯಂತಿರುವ ಸಕಲ ವಿಶ್ವಗಳಲ್ಲೂ ವ್ಯಾಪಿಸಿ
ಸ್ಥಿತನಾಗಿರುವುದರಿಂದ ಇವನಿಗೆ (ಪುರಿ ಶೇತೇ) ಪುರುಷ ನೆಂಬ ಹೆಸರು ಎಂದು ತಿಳಿಸಿದೆ.
ಪುರುಷ ಏವೇದಂ ಸರ್ವಂ ಯದ್ಭೂತಂ ಯಚ್ಚ
ಭವ್ಯಮ್ |
ಉತಾಮೃತತ್ವಸ್ಯೇಶಾನೋ ಯದನ್ನೇನಾತಿರೋಹತಿ ||
ಋಗ್ವೇದ 10-90-2
ಭಾವಾರ್ಥ;- ನಮಗೆ ಗೋಚರವಾಗುವ ಸಕಲ
ಜಗತ್ತೂ ಎಂದರೆ ವರ್ತಮಾನಕಾಲದ ಸಕಲ ಜಗತ್ತೂ ಆ ಆದಿಪುರುಷನ ಅಂಶವೇ ಆಗಿದೆ. ಹಿಂದೆ ಇದ್ದ ಜಗತ್ತೂ
ಅವನೇ, ಮುಂದೆ ಸಂಭವಿಸುವುದೂ ಅವನೇ ಎಂದರೆ ಈಶ್ವರಾಂಶವಲ್ಲದೆ
ಬೇರೆಯಲ್ಲ. ಅವನು ಅಮೃತತ್ವಕ್ಕೆ ಒಡೆಯನು. ಪ್ರಾಣಿಗಳಿಗೆ ಭೋಗಸಾಧನವಾದ ಅನ್ನದಿಂದ ಅವನು ಬೆಳೆಯು
ವಂತೆ ಕಾಣುತ್ತಾನೆ. ಆದರೆ ಅವನ ಸ್ವರೂಪವು ಗೋಚರಾತೀತವಾದುದು.
“ಅಯಂ ವಾಯುಃ............
ಯಶ್ಚಾಯಮಸ್ಮಿನ್ವಾಯೌ ತೇಜೋಮಯೋs ಮೃತಮಯಃ ........
ಯಶ್ಚಾಯಮಧ್ಯಾತ್ಮಂ ಪ್ರಾಣಃ ಯೋsಯಮಾತ್ಮೇದಂ ಬ್ರಹ್ಮೇದಂ
ಸರ್ವಂ”. (ಬೃ. ಉ. ೨-೫-೩),
ಅಂದರೆ “ವಾಯುರೂಪದಲ್ಲಿ ಸರ್ವಾಂತರ್ಯಾಮಿಯೂ ಸರ್ವವ್ಯಾಪಕನೂ ಆದ ಈ ಪರಬ್ರಹ್ಮನು ಪ್ರಾಣರೂಪದಲ್ಲಿ
ಸಕಲ ಶರೀರದಲ್ಲಿಯೂ ಪ್ರವೇಶಿಸಿದ್ದಾನೆ. ಇವನೇ ಸರ್ವಾತ್ಮಕನಾದ ಪರಬಹ್ಮನು”.
ದಿವ್ಯೋ ಹ್ಯಮೂರ್ತಃ ಪುರುಷಃ
ಸಬಾಹ್ಯಾಭ್ಯಂತರೋ ಹ್ಯಜಃ |
ಅಪ್ರಾಣೋ ಹೈಮನಾ: ಶುಭ್ರೋ
ಹ್ಯಕ್ಷರಾತ್ಪರತಃ ಪರಃ ||
(ಮು. ಉ. ೨-೧-೨)
ಭಾವಾರ್ಥ:- ದಿವ್ಯಲೋಕಸ್ಥಿತನೂ, ರೂಪರಹಿತನೂ ಆದ ಪುರುಷನು ಒಳಗೂ
ಹೊರಗೂ ವ್ಯಾಪಿಸಿದ್ದಾನೆ. ಅವನು ಅಜನು, ಅಪ್ರಣನು, ಮನೋರಹಿತನು ಮತ್ತು ಶುದ್ಧನು, ಪರಾತ್ಪರನಾದ
ಅಕ್ಷರನಿಗಿಂತಲೂ ಅಧಿಕನು ಎಂದು ಪುರುಷನ ವರ್ಣನವಿರುತ್ತದೆ.
ಪುರುಷ ಏವೇದಂ ವಿಶ್ವಂ ಕರ್ಮ ತಪೋ ಬ್ರಹ್ಮ
ಪರಾಮೃತಂ |
ಏತದ್ಯೋ ವೇದ ನಿಹಿತಂ ಗುಹಾಯಾಂ
ಸೋವಿದ್ಯಾಗ್ರಂಥಿಂ ವಿಕರತೀಹ ಸೋಮ್ಯ ||
(ಮು. ಉ. ೨-೧-೧೦ )
ಭಾವಾರ್ಥ:- ವಿಶ್ವವ್ಯಾಪಿಯಾದ ಪರಮಾತ್ಮನೇ ಸಕಲ ಯಜ್ಞ ಕರ್ಮರೂಪನು, ತಪೋರೂಪನು, ಪರಾತ್ಪರನಾದವನೂ, ಹೃದಯದ ಗುಹ್ಯಾಕಾಶದಲ್ಲಿ ಅಡಗಿರುವವನೂ ಆದ ಈ ಪರಮಪುರುಷನನ್ನು ಯಾವನು ಪೂರ್ಣವಾಗಿ
ಆರಿಯುವನೋ ಅವನು ತನ್ನ ಅವಿದ್ಯಾರೂಪದ ಗ್ರಂಥಿಗಳನ್ನು ಬಿಡಿಸಿ ಮುಕ್ತನಾಗುತ್ತಾದೆ.
ಶತಂ ಚೈಕಾ ಚ ಹೃದಯಸ್ಯ ನಾಡ್ಯಸ್ತಾಸಾಂ
ಮೂರ್ಧಾನಮಭಿನಿಃಸೃತೈಕಾ |
ತಯೋರ್ಧ್ವಮಾಯನ್ನಮೃತತ್ವಮೇತಿ
ವಿಷ್ವಜ್ಞ್ಜನ್ಯಾ ಅಮೃತತ್ವ ಮೇತಿ ॥
( ಕಠ. ೨.೧೬ )
ಭಾವಾರ್ಥ:-
ಹೃದಯದ ನಾಡಿಗಳು ನೂರೊಂದಿವೆ. ಅವುಗಳಲ್ಲಿ ಒಂದು ಮಾತ್ರ
ಊರ್ಧ್ವಮುಖವಾಗಿ ಹೊರಟು ಶಿರಸ್ಸಿನ ಅಗ್ರ ಸೇರುತ್ತವೆ. ಆದರ ಮಾರ್ಗವನ್ನನುಸರಿಸಿ ಪುರುಷನನ್ನು
ಹುಡುಕುವನನು ಅಮೃತತ್ವವನ್ನು ಹೊಂದುತ್ತಾನೆ.
ವಿವರಣೆ:- ಇತರ ನಾಡಿಗಳು ಬೇರೆಬೇರೆಯಾಗಿ ಪಸರಿಸುತ್ತವೆ. ಈ ಉಪನಿಷತ್ತಿನ ವರ್ಣನೆಯ ಪ್ರಕಾರ
ಹೃದಯದ ಒಂದು ನಾಡಿಯು ಮಾತ್ರ ಪರಮಪುರುಷನ ಸಾಕ್ಷಾತ್ಕಾರಕ್ಕೆ ಸಾಧಕವಾಗುತ್ತದೆ. ಸಂಸ್ಕೃತದಲ್ಲಿ
ಹೃದಯ ಎಂದರೆ ಅಕ್ಷರಾರ್ಥದಲ್ಲಿ "ಧ್ಯಾನದಲ್ಲಿನ
ಹಮ್ ಧ್ವನಿ ಬೆಳಕನ್ನು ನೀಡುತ್ತದೆ", ಎಂದಾಗಿದೆ,
ಹಮ್ ಮಂತ್ರವು ಮೂಲಾಧಾರದಲ್ಲಿ ಉಚ್ಚರಿಸುವುದಾಗಿದೆ, ಮೂಲಾಧಾರದಿಂದ ಸಹಸ್ರಾರಕ್ಕೆ ಸಂಪರ್ಕ ಇರುವುದು ಸುಷುಮ್ನಾ ನಾಡಿ, ಹಾಗಾಗಿ ಹೃದಯ ಎಂದರೆ ಮೂಲಾದ್ವಾರದ ಪ್ರದೇಶದಲ್ಲಿ ಹಮ್ ದ್ವನಿಯ ಪ್ರದೇಶಕ್ಕೆ ಹೃದಯ
ಎಂದು ವ್ಯಾಖ್ಯಾನಿಸುವುದು ಸೂಕ್ತ.
ವಿಶ್ವತೋ = विश्वतो = वि ष व त ओ
ಅಕ್ಷರ
ಅರ್ಥ:- ಶಕ್ತಿಯುತವಾದ ಅಮೃತವನ್ನು ಕರೆಯುವ ಗರ್ಭದಲ್ಲಿನ ಹಿರಿಮೆ (ವಚನ ಸಾಹಿತ್ಯದಲ್ಲಿ ಹೀಗೆ ಹೇಳುತ್ತಾರೆ, “ವಿಶ್ವತೋ
ಮುಖ ವಿಶ್ವತೋ ಪಾದ ವಿಶ್ವತೋ ಬಾಹು ವಿಶ್ವತೋ ಚಕ್ಷು ವಿಶ್ವತೋ ವ್ಯಾಪಕನೆನಿಸಿ ಬಂದಿರಯ್ಯ ಎನ್ನ
ಕರಸ್ಥಲಕ್ಕೆ (ಸಹಸ್ರಾರಕ್ಕೆ) ಅಖಂಡೇಶ್ವರಾ”, ಅಂದರೆ ಅಮೃತವನ್ನು ಉತ್ಪಾದಿಸುವ ಹಿರಿಮೆ ಮುಖದಿಂದ ಪಾದದವರೆಗೆ ಅಂಗಾಂಗಗಳಿಂದ
ಕಣ್ಣುಗಳವರೆಗೆ ವ್ಯಾಪಿಸಿ ಸಹಸ್ರಾರಕ್ಕೆ ತರುವ ಪರಿಯನ್ನು ನುಡಿದಿದ್ದಾರೆ)
ಹೃದಯ = हृदय = ह् रु द य
ಅಕ್ಷರ
ಅರ್ಥ:- ಧ್ಯಾನದಲ್ಲಿ
ಹಮ್ ಧ್ವನಿ ಬೆಳಕನ್ನು ನೀಡುತ್ತದೆ (ವಿದ್ವಾಂಸರು ಹೃದಯ ಎಂದರೆ ಕಾರುಣ್ಯವನ್ನು ಹೊರ
ಚಿಮ್ಮಿಸುವ ಸ್ಥಳ ಎನ್ನುತ್ತಾರೆ.) ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ, ಮೂಲಾಧಾರ ಹೃದಯ ಮತ್ತು ಭ್ರೂಮಧ್ಯೆ
“ಜ್ಯೋತಿರ್ಲಿಂಗಂ ಸದಾ ಭಾತಿ”, ಪರಶಿವ
ಬ್ರಹ್ಮವು ಸದಾ ಪರಂಜ್ಯೋತಿ ರೂಪದಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿರುವುದೆಂದು ಹೇಳಿದೆ.
"ಈ ಪುರುಷನಿಗೆ ನಾಭಿ, ಹೃದಯ, ಕಂಠ, ಶಿರಸ್ಸುಗಳೆಂಬ ನಾಲ್ಕು ಸ್ಥಾನಗಳಿವೆ. ಇಲ್ಲಿ
ಬ್ರಹ್ಮವು ನಾಲ್ಕು ಪಾದವುಳ್ಳದ್ದಾಗಿ ಪ್ರಕಾಶಿಸುವುದು. ಜಾಗ್ರತ್ತಿನಲ್ಲಿ ಬ್ರಹ್ಮ ಸ್ವಪ್ನದಲ್ಲಿ
ವಿಷ್ಣು ಸುಷುಪ್ತಿಯಲ್ಲಿ ರುದ್ರ; ನಾಲ್ಕನೆಯದು ಅಕ್ಷರ'' - ಬ್ರಹ್ಮೋಪನಿಷತ್
ವಿಜ್ಞಾನ ನೇತ್ರಾಂಜನರವರ ಶ್ರೀಮದ್ ಭಾಗವತಂ ನಲ್ಲಿ ಹೀಗೆ ಹೇಳಿತ್ತಾರೆ, “ಹೃದಯ
ವಿವರದ ಸ್ಥಾನವಿರುವುದು ಮೆದುಳು ಬಳ್ಳಿಯಲ್ಲಿ, ಎದೆಯಗೂಡಿನ
ನೇರದಲ್ಲಿ “ರಕ್ತಚಲನೆಗೆ ಸಂಬಂಧಿಸಿದ ಹೃದಯವಿರುವುದೂ ಆ ನೇರದಲ್ಲಿಯೇ; ಎರಡಕ್ಕೂ ನರಾಂಶಗಳ ಸಂಬಂಧ ಉಂಟು. (ಟೆಲಿಪತಿ) ಜೀವಿಗೆ
ಅನಾದಿ ಆವರಕವಾದ ಲಿಂಗ ಶರೀರದಲ್ಲಿ ಅನಾದಿ ಮೂಲ ಮನಸ್ಸುಂಟು. ಅದರ ಪ್ರತಿಯಾದ ಮನಸ್ಸು ಅದಕ್ಕೆ
ಅವರಕವಾದ ಅನಿರುದ್ಧ ಶರೀರದಲ್ಲಿದೆ. ಅನಂತರ ಬಂದು ಬಂದು ಹೋಗುವ ಸ್ಥೂಲ ಶರೀರಗಳಲ್ಲಿ ಸ್ಥೂಲ
ಮನಸ್ಸಿರುವುದು ಹೃದಯ ವಿವರದಲ್ಲಿ, ನರಮಂಡಲದ ಮಧ್ಯಪ್ರದೇಶದಲ್ಲಿ.
ಮೆದುಳಿಗೆ ಆಧಾರ, ಈ ಮನಸ್ಸು.”
........ “ಈ ನಾಡೀ ಅಂಶಗಳೆಲ್ಲಾ ಪ್ರಾರಂಭವಾದುದು ನಾಭೀ ಪ್ರದೇಶಕ್ಕಿಂತಲೂ ಕೆಳಗಿರುವ ನಾಭೀ ಮೂಲದಲ್ಲಿ.
ಅಲ್ಲಿಂದ ಮೇಲಕ್ಕೆ ಎಳೆಗಳು ಹೊರಟು, ಅವು ಬೆನ್ನು ಹುರಿಯ ರೂಪಹೊಂದಿ,
ತಲೆಯ ಮೆದುಳಿನಲ್ಲಿ ಪರ್ಯವಸಾನ ಹೊಂದುವುವು. ಬೆನ್ನು ಹುರಿಯಿಂದ (ಸ್ಪೈನಲ್
ಕಾರ್ಡ್ ನಿಂದ) ಹೊರಟ ಶಾಖಾನರಗಳು ದೇಹದ ವಿವಿಧ ಭಾಗಗಳಿಗೆ ಹಂಚಿ ಹೋಗುವುವು. ಹೃದಯ ಕಮಲದಲ್ಲಿರುವ
ಮನಸ್ಸಿಗೆ ಸಂಬಂಧ ಹೊಂದಿರುವುದು "ಅಹಂ' ನಾಡಿ; ನೇರವಾಗಿ ಮೆದುಳಿಗೆ ಸಂಬಂಧ ಹೊಂದಿರುವುದು "ಸತ್ವ” ನಾಡಿ; ಅದೇ ಸುಷುಮ್ನಾ ನಾಡಿ. ಎಲ್ಲಾ ನಾಡಿಗಳಿಗೂ ಇದೇ ಪ್ರಧಾನವಾದುದು, ಅದರಲ್ಲಿ ಪ್ರವಿಷ್ಠರಾದ ಬ್ರಹ್ಮದೇವರು ಎಲ್ಲಾ ನಾಡಿಗಳಲ್ಲಿಯೂ ವ್ಯಾಪ್ತರಾಗಿರುವರು.
ಅವರು ಮುಖ್ಯ ಚಿತ್ತಾಭಿಮಾನಿಗಳು; ಮುಖ್ಯ ಚಿದ್ರೂಪನಾದ ಶ್ರೀಹರಿಯು
(ಚಲಿಸುವ ಸರಸ್ಪತಿ ವೈದ್ಯತೆ) ಅವರಲ್ಲಿದ್ದು, ಅವರ ಮುಖಾಂತರ
ಅವಾಂತರ ಚಿದಭಿಮಾನಿಗಳಾದ ಗರುಡ ರುದ್ರೇಂದ್ರಾದಿಗಳಿಗೆ ವಿಜ್ಞಾನದಾಯಕನಾಗಿರುವನು. ಅವರ ಬಲದಿಂದ
ಸಾಮಾನ್ಯ ಮಾನವರಿಗೆ ಅವರವರ ಯೋಗ್ಯತಾನುಸಾರ ತತ್ವಜ್ಞಾನ ಉಂಟಾಗುವುದು”.
ಈ
ಚಕ್ರಗಳ ಮಧ್ಯ ಪ್ರದೇಶದ ತತ್ವವು ನಮ್ಮ ದೇಹದಲ್ಲಿರತಕ್ಕ ಮೂಲಾಧಾರ ಮೊದಲಾದ ಏಳುಚಕ್ರಗಳ
ಮಧ್ಯದಲ್ಲಿರುವ ಬ್ರಹ್ಮರಂಧ್ರದ ನಾಡಿ ಅಥವಾ ಸುಷುಮ್ನಾ ನಾಡಿಯಾಗಿರುವುದು, ಎನ್ನುತ್ತಾರೆ ವಿಧ್ವಾನ್ ಯಾಡುತೊರೆ ಸುಬ್ರಾಯಶರ್ಮ. (ಆದರೆ ಕೆಲವು ವಿದ್ವಾಂಸರು
ಚಕ್ರಗಳ ಮಧ್ಯ ಪ್ರದೇಶವು ಅನಾಹತ ಚಕ್ರ ಅದುವೇ ಹೃದಯ ಚಕ್ರ ಎಂದೂ ಅರ್ಥ ಕೊಟ್ಟು
ವ್ಯಾಖ್ಯಾನಿಸುತ್ತಾರೆ.
ಹೃದಯವೆಂದರೆ,
"ಹೃತ್ ಅಯತ ಇತಿ ಹೃದಯಂ'' ಅಂದರೆ
ಅಂತರ್ಗತವಾಗಿರುವುದು ಅಥವಾ ಒಳಗಡೆ ಇರುವುದು ಎಂಬದಾಗಿ ರಾಮಾಯಣದ ವ್ಯಾಖ್ಯಾನದಲ್ಲಿ
ಬರುತ್ತದೆ.
ಆಕಾಶ = अकाश = अ का श
ಅಕ್ಷರ
ಅರ್ಥ:- ಭೂಮಿಯ (ಮೂಲಾಧಾರ) ಮೇಲಿನ ಜೀವ ಉಸಿರು ಒಂದು ಆಯುಧ. (ಮೂಲಾಧಾರದಲ್ಲಿ
ಜೀವ ಉಸಿರು ಉತ್ಪತ್ತಿಯಾಗುತ್ತದೆ ಅದುವೇ ನಮ್ಮ ಉಸಿರಾಟದಿಂದ ವಾಯುವಿನಲ್ಲಿ ಇರುವ ನೈಟ್ರೋಜನ್
ಮೂಲಾಧಾರದಲ್ಲಿ ಉಪಯುಕ್ತ ಬ್ಯಾಕ್ಟೀರಿಯಾ ಸಹಾಯದಿಂದ ನೈಟ್ರಿಕ್ ಆಕ್ಸೈಡ್ ಎಂಬ ಜೀವ ಉಸಿರು
ತಯಾರಿಸುತ್ತದೆ. ಇದು ಮನುಜನಿಗೆ ತುಂಬಾ ಉಪಯುಕ್ತ ಅಮೃತದಂತಾ ಉಸಿರಾಗಿರುತ್ತದೆ. ಮಳೆ ಬರುವಾಗ
ಸಿಡಿಲು ಬರುವುದರಿಂದ ಕೂಡ ನೈಟ್ರಿಕ್ ಆಕ್ಸೈಡ್ ಪರಿಸರದಲ್ಲಿ ಉತ್ಪತ್ತಿಯಾಗುತ್ತದೆ ಎನ್ನಲಾಗಿದೆ.
ಆದರೆ ಅಂತಹ ನೈಟ್ರಿಕ್ ಆಕ್ಸೈಡ್ ಪರಿಸರದಲ್ಲಿ ಬೇರೆ ಸ್ವರೂಪ ಪಡೆದುಕೊಳ್ಳುತ್ತದೆ. ಇತ್ತೀಚೆಗೆ ನೈಟಿಕ್ ಆಕ್ಸೈಡ್ ನೀಡಿ ಹೃದಯಾಘಾತ ಆದ
ವ್ಯಕ್ತಿಯನ್ನು ಅಮೇರಿಕಾ ವೈದ್ಯರು ಉಳಿಸಿದ್ದಾರೆ. ಇದು ನಮ್ಮ ದೇಹದಲ್ಲಿನ ಅನೇಕ ರೋಗಗಳನ್ನು
ನಾಶಮಾಡುವ ಅಮೃತದಂತಾ ಆಯುಧವಾಗಿದೆ.)
“ವಾಯೋರಂತರಿಕ್ಷಂ
ಚೇತ್ತದಮೃತಂ” ಅಂದರೆ “ವಾಯುವಿನಿಂದ ಅಂತರಿಕ್ಷ ಹುಟ್ಟಿತು ಅದೇ
ಅಮೃತ” ಎಂಬ ಶ್ರುತಿಯಲ್ಲಿ ವಾಯು ಆಕಾಶಗಳನ್ನು ಅಮೃತವೆಂದು ಹೇಳಿದೆ.
“ಖಂ ಬ್ರಹ್ಮ”, “ಆತ್ಮನ ಆಕಾಶಸ್ಸಂಭೂತಃ”, “ತತ್ತೇಜೋsಸೃಜತ” ಎಂದರೆ “ಆಕಾಶವೇ ಬ್ರಹ್ಮ”, ಆತ್ಮನಿಂದ ಆಕಾಶ ಹುಟ್ಟಿತು”, “ಅದು ತೇಜಸ್ಸನ್ನು
ಸೃಷ್ಠಿಸಿತು” ಎಂಬ ಶ್ರುತಿ ವಾಕ್ಯ ಅಕ್ಷರ ಅರ್ಥವನ್ನು ಸಮರ್ಥಿಸುತ್ತದೆ.
ತೈತ್ತಿರಿಯೋಪನಿಷತ್ತಿನಲ್ಲಿ
ಹೇಳಿದಂತೆ. “ಆತ್ಮನ ಆಕಾಶಃ ಸಂಭೂತಃ, ಆಕಾಶಾದ್ವಾಯುಃ, ವಾಯೋರಾಗ್ನಿಹಿ, ಆಗ್ನೇರಾಪಃ ಅದ್ ಭ್ಯಃ ಪೃಥಿವೀ” ಎಂದರೆ
ಆತ್ಮನಿಂದ ಆಕಾಶವೂ, ಆಕಾಶದಿಂದ ವಾಯುವೂ, ವಾಯುವಿನಿಂದ ಅಗ್ನಿಯೂ, ಅಗ್ನಿಯಿಂದ ಜಲವೂ, ಜಲದಿಂದ ಪೃಥಿವಿತತ್ತ್ವವೂ,
ಹುಟ್ಟುವುದು, ಸೃಷ್ಟಿಯ ಕ್ರಮ.
ಟಿ.ಎನ್. ಮಲ್ಲಪ್ಪ ನಿವೃತ್ತ ಕರ್ನಾಟಕ
ಹೈಕೋರ್ಟ್ ನ್ಯಾಯಮೂರ್ತಿ ತಮ್ಮ ಪುರುಷ ಸೂಕ್ತ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ, “ಪೃಥ್ವಿಯನ್ನು
(ಮೂಲಾಧಾರವನ್ನು) ಜಲತತ್ತ್ವದಲ್ಲಿಯೂ, ಜಲತತ್ತ್ವವನ್ನು ಅಗ್ನಿ ತತ್ತ್ವದಲ್ಲಿಯೂ, ಅಗ್ನಿ ತತ್ತ್ವವನ್ನು ವಾಯುತತ್ತ್ವದಲ್ಲಿಯೂ, ವಾಯುತತ್ತ್ವವನ್ನು
ಆಕಾಶತತ್ತ್ವದಲ್ಲಿಯೂ, ಆಕಾಶತತ್ತ್ವವನ್ನು ಆತ್ಮನಲ್ಲಿಯೂ
ಧ್ಯಾನಯೋಗದಲ್ಲಿ ಲಯಗೊಳಿಸಿದರೆ ಆತ್ಮದರ್ಶನವಾಗುವುದು”.
ಪಂಚಭೂತಾತ್ಮಕವಾದ
ದೇಹದಲ್ಲಿ ಪೃಥ್ವಿ, ಅಪ್, ಅಗ್ನಿ,
ವಾಯು ಮತ್ತು ಆಕಾಶ ಇವೇ ಪಂಚಭೂತಗಳು. ಈ "ಭೂತ'ಗಳನ್ನು ದೇಹದಲ್ಲಿ ಪ್ರತಿಷ್ಠವಾಗಿರುವ 'ಚಕ್ರ'ಗಳಲ್ಲಿ ಗುರುತಿಸುತ್ತಾರೆ. ಪೃಥ್ವಿ ತತ್ತ್ವ ಮೂಲಾಧಾರ ಚಕ್ರದಲ್ಲೂ 'ಅಪ್ ತತ್ತ್ವ "ಸ್ವಾಧಿಷ್ಕಾನ' ಚಕ್ರ ದಲ್ಲೂ
ಅಗ್ನಿ ತತ್ತ್ವ ಮಣಿಪೂರ ಚಕ್ರದಲ್ಲೂ ವಾಯುತತ್ವ್ವ "ಅನಾಹತ' ಚಕ್ರದಲ್ಲೂ
ಆಕಾಶ ತತ್ತ್ವ ವಿಶುದ್ಧ ಚಕ್ರದಲ್ಲೂ ಅಂತರ್ಗತವಾಗಿದೆಯೆಂದು ವಿವರಿಸುತ್ತಾರೆ. ಆಕಾಶ ತತ್ತ್ವ
ಅದನ್ನೇ ತಮಿಳುನಾಡಿನ ಚಿದಂಬರದಲ್ಲಿ "ಚಿದಂಬರ ರಹಸ್ಯ” ಎಂದು ಕರೆಯುವುದು.
ವಿದ್ವಾನ್ ಹೆಚ್.ಪಿ. ವೆಂಕಟರಾವ್ ರವರು ಈ ಬಗ್ಗೆ ಹೀಗೆ ವಿವರಿಸುತ್ತಾರೆ, “ಆಕಾಶವಿಲ್ಲದೇ
ನಾವಾಗಲಿ ಇತರೆ ಪ್ರಾಣಿಗಳಾಗಲಿ ಇರುವುದೇ ಅಸಾಧ್ಯವು. ನಮ್ಮ ಚಲನವಲನಗಳಿಗೂ ಶರೀರದ ಅವಶ್ಯಕತೆಗೂ
ಆಕಾಶವು ಬೇಕೇಬೇಕು. ತೇಜಸ್ಸು, ವಾಯು,
ಆಕಾಶ ಎಂಬ ಮೂರು ವಸ್ತುಗಳೂ ನಮ್ಮ ಕಣ್ಣಿಗೆ ಕಾಣಿಸದಿದ್ದರೂ ಅವುಗಳು ನಮ್ಮ ಶರೀರ ಪೋಷಣೆಗೆ
ಅತ್ಯವಶ್ಯಕವು. ಇದಲ್ಲದೆ ನಮಗೆ (ಪ್ರಾಣಿಗಳಿಗೂ ಸಹ) ಪೃಥ್ವಿ ಅಂಶವಾದ ಘಟ್ಟಿಯಾದ ಆಹಾರಕ್ಕಿಂತ
ಉದಕವು (ಆಪ್/ನೀರು) ಒಂದು ಪಾಲು ಹೆಚ್ಚಾಗಿ ಬೇಕು. ಉದಕಕ್ಕಿಂತ ತೇಜಸ್ಸು
ಹೆಚ್ಚಾಗಿ ಬೇಕು. ತೇಜಸ್ಸಿಗಿಂತ ವಾಯುವು ಹೆಚ್ಚಾಗಿರಬೇಕು, ವಾಯುವಿಗಿಂತ
ಆಕಾಶವು ಹೆಚ್ಚಾಗಿಬೇಕು. ಮತ್ತು ಇನ್ನೊಂದು ವಿಶೇಷವೇನೆಂದರೆ ಪೃಥ್ವಿ ಅಂಶ ಸಂಬಂಧವಾದ ಆಹಾರದಲ್ಲಿ
ಉದಕ, ತೇಜಸು, ವಾಯು, ಆಕಾಶ ಇವುಗಳು ಮಿಶ್ರವಾಗಿರುವುವು ; ತೇಜಸ್ಸಿನಲ್ಲಿ
ವಾಯು ಆಕಾಶಗಳಿರುವವು. ವಾಯುವಿನಲ್ಲಿ ಆಕಾಶವು ಸೇರಿರುವುದು.
ಈ ರೀತಿ ಪಂಚಭೂತಗಳೂ ಅವುಗಳ ಮಿಶ್ರಣವೂ (ಎಂದರೆ) ಔಷಧಿ ವನಸ್ಪತಿಗಳು ಪ್ರಾಣಿಗಳಿಗೆ ಆಹಾರ ರೂಪವಾಗಿ
ಏರ್ಪಟ್ಟಿರುವವು. ಈ ವಿಧವಾದ ಆಹಾರಕ್ಕೆ ಅನ್ನವೆಂದು ಹೆಸರು, ಆದುದರಿಂದ
ಅದಕ್ಕೆ (ಅನ್ನಕ್ಕೆ) ಸರ್ವೌಷಧವೆನ್ನುವರು.
ಯೋಗ, ಸೋಮ, ಚಕ್ರ, ಪೃಥ್ವಿ, ಅಕ್ಷರ ಅರ್ಥ
ಯೋಗ = योग = य ओ ग
ಅಕ್ಷರ
ಅರ್ಥ:- ಗಾಳಿ ಸಹಾನುಭೂತಿ ಚಲಿಸುತ್ತಿದೆ (ಯೋಗ ದೇಹಾರೋಗ್ಯಕ್ಕೆ
ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ರಹದಾರಿ ಎಂಬುದು ಇಲ್ಲಿ ವೇದ್ಯವಾಗುತ್ತದೆ. ಯೋಗ ಶರೀರ ಮತ್ತು
ಉಸಿರಾಟ ಕ್ರಿಯೆಯನ್ನು ಸಮತೋಲನದೊಂದಿಗೆ ಬಳಸಿಕೊಂಡು ಆರೋಗ್ಯದಿಂದ ಆಧ್ಯಾತ್ಮದೆಡೆಗೆ ಕರೆದೊಯ್ಯುವ
ವಿದ್ಯೆ. ಲೌಕಿಕದಲ್ಲೇ ಅಲೌಕಿಕ ಆನಂದ ನೀಡುವ ವಿದ್ಯೆ.)
ಪ್ರೊ
ರಾಮಚಂದ್ರ ಜಿ. ಭಟ್ಟ (ಕೋಟೆಮನೆ) ತಮ್ಮ ಅಧ್ಯಯನ ಅನುಭವ ಹೀಗೆ ಹಂಚಿಕೊಳ್ಳುತ್ತಾರೆ, “ಯೋಗ ಮತ್ತು ಯಜ್ಞಗಳು ಬೇರೆಯಲ್ಲ. ಅತ್ಯಂತ ಪ್ರಾಚೀನವಾದ ಋಗ್ವೇದದಲ್ಲಿ
"ಯೋಗ- ಜೀವನಕ್ಕೆ ಯಜ್ಞವೆಂಬ ಶಬ್ದದ ಬಳಕೆಯಿದೆ. ಕಾಲಾಂತರದಲ್ಲಿ ಯೋಗ ಯಜ್ಞವೆಂಬ ಪದದ
ಬಳಕೆಯೂ ಗೀತೆಯಲ್ಲಾಗಿದೆ. ಗೀತೆಯ ಪ್ರಕಾರ ಯೋಗವೆಂದರೆ ದುಃಖ ದುಮ್ಮಾನಗಳಿಂದ ತನ್ನನ್ನು ತಾನು
ಬಿಡಿಸಿಕೊಳ್ಳುವುದು ಎಂಬ ಅರ್ಥವಿದೆ. ಸಮದೃಷ್ಟಿ ಎಂಬ ಅರ್ಥವಿದೆ. ಕಾರ್ಯಕೌಶಲ್ಯ ವೆಂಬ ಅರ್ಥವೂ
ಇದೆ. ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಿಗೂ ಬೇರೆ ಬೇರೆ ಯೋಗದ ಹೆಸರಿದೆ. ಇಡೀ ಭಗವದ್ಗೀತೆಗೆ
ಯೋಗಶಾಸ್ತ್ರವೆಂಬ ಹೆಸರೂ ಇದೆ. ಭಗವದ್ಗೀತೆಯ ಪ್ರಕಾರ ನರನನ್ನು ನಾರಾಯಣನ ಜೊತೆ ಜೊಡಿಸುವುದೇ ಯೋಗ.
ಯೋಗೇಶ್ವರನಾದ ನಾರಾಯಣನ ಹತ್ತಿರಕ್ಕೆ ಹೋಗಬೇಕು. ಅದಕ್ಕಿರುವ ದಾರಿಗೇ ಹೆಸರು ಯೋಗ. ಅವುಗಳನ್ನೇ
ಮುಖ್ಯವಾಗಿ ಸಾಂಖ್ಯ ಯೋಗ, ಕರ್ಮಯೋಗ, ಭಕ್ತಿಯೋಗ
ಮತ್ತು ರಾಜಯೋಗ ಶಬ್ದಗಳಿಂದ ಹೆಸರಿಸುತ್ತಾರೆ. ಆಸನ-ಪ್ರಾಣಾಯಾಮ ಮುಂತಾದ ಎಂಟು ಅಂಗಗಳುಳ್ಳ
ಯೋಗವನ್ನೇ ರಾಜಯೋಗವೆಂದು ಕರೆಯುವುದುಂಟು. ಆಸನಸಿದ್ಧಿ, ಮನಃಶುದ್ಧಿ,
ಬುದ್ಧಿವೃದ್ಧಿಗಳು ಈ ಯೋಗಾನುಷ್ಠಾನದಿಂದ ಲಭ್ಯ. ಕರ್ಮಯೋಗವೆಂದರೆ
ಪ್ರಕೃತಿಪ್ರೇಮಿ ಜೀವನ. ಯಾರನ್ನೂ ಹೀರದೆ ತಾನು ಇನ್ನೂ ಕಿರಿಯನೆಂದು ಬಾಗಿ, ಮನಸ್ಸಿನಿಂದ ಮಾಗಿ ಹಲವರಿಗೆ ಹಿತವಾಗುವಂತೆ ಬಾಳುವ ಶೈಲಿ. ಭಕ್ತಿಯೋಗವೆಂದರೆ
ಪ್ರಶಾಂತ ಮನಸ್ಸನ್ನು ಶ್ರದ್ಧೆ ಮುಂತಾದ ಉದಾತ್ತ ಭಾವಗಳಿಂದ ತುಂಬಿ ಅವು ಉದಾತ್ತಗೊಳ್ಳುವ ಹಾಗೆ
ಮಾಡುವುದು”.
ಚರಕಸಂಹಿತೆಯ
ಶಾರೀರಸ್ಥಾನ ಒಂದನೇ ಅಧ್ಯಾಯದಲ್ಲಿ ಯೋಗದ ಕುರಿತು ಉಲ್ಲೇಖವಿದೆ.
ಯೋಗೇ ಮೋಕ್ಷೇ ಚ ಸರ್ವಾಸಾಂ
ವೇದನಾನಾಮವರ್ತನಂ ।
ಮೋಕ್ಷೇ ನಿವೃತ್ತಿರ್ನಿಃಶೇಷೋ ಯೋಗೋ
ಮೋಕ್ಷಃ ಪ್ರವರ್ತಕಃ ||
ಭಾವಾರ್ಥ:- ಎಲ್ಲಾ ರೀತಿಯ ವೇದನೆಗಳ ನಾಶ ಯೋಗ ಹಾಗೂ ಮೋಕ್ಷಗಳಲ್ಲಿ ಉಂಟಾಗುತ್ತದೆ.
ಮೋಕ್ಷದಲ್ಲಿ ಸಂಪೂರ್ಣವಾಗಿ ವೇದನೆಗಳ ನಾಶ ಉಂಟಾದರೆ ಯೋಗವು “ಮೋಕ್ಪಪ್ರವರ್ತಕ” ಎಂಬ ಮಾತನ್ನು
ಹೇಳಿದ್ದಾರೆ.
ಭಾರತೀಯ
ತತ್ವಜ್ಞಾನದ ಪ್ರಕಾರ, ಯೋಗ ಎಂಬುದು ಆರು ಸಾಂಪ್ರದಾಯಿಕ
ಶಾಖೆಗಳಲ್ಲೊಂದು. ಸಾಂಖ್ಯ ದರ್ಶನ, ಯೋಗ ದರ್ಶನ, ನ್ಯಾಯ ದರ್ಶನ, ವೈಶೇಷಿಕ ದರ್ಶನ, ಮೀಮಾಂಸ ದರ್ಶನ, ವೇದಾಂತ ದರ್ಶನ , ಇವು ರೂಢಿಯಲ್ಲಿ ಬಂದ ಭಾರ್ತೀಯ ಷಡ್ ದರ್ಶನಗಳು (ಆರು ತತ್ವ ಸಿದ್ಧಾಂತಗಳು). 'ಯೋಗ' ಶಬ್ದ ಅರ್ಥದಲ್ಲಿ 'ಜೋಡಿಸು' 'ಸೇರಿಸು' 'ಕೂಡಿಸು'
ಎಂಬ ಆರ್ಥ ಬರುತ್ತದೆ. ಯೋಗವೆಂದರೆ 'ಸಮಾಧಿ'
'ಉಪಾಯ' 'ಸಾಧನ' ಎಂಬ
ಅರ್ಥವೂ ಬರುತ್ತದೆ, ಯೋಗದಲ್ಲಿ ದೇಹದ ಜೊತೆ ಮನಸ್ಸು, ಬುದ್ದಿ, ಭಾವನೆ, ಆತ್ಮ
ಹಾಗೂ ಅಹಂಕಾರಗಳನ್ನು ಕೂಡಿಸುವುದನ್ನು ಅಭ್ಯಾಸ ಮಾಡಲಾಗುತ್ತದೆ. ಆಧ್ಯಾತ್ಮದ ದೃಷ್ಟಿಯಲ್ಲಿ
ಆತ್ಮನೊಂದಿಗೆ ಪರಮಾತ್ಮನನ್ನು ಸೇರಿಸುವುದು ಅಥವಾ ಲೀನವಾಗಿಸುವುದು ಎಂದಾಗುತ್ತದೆ.
ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ
ಶರೀರಸ್ಯ
ಚ ವೈದಕೇನ ಯೋಪಾ ಕರೋತ್ತಂ ಪ್ರವರಂ ಮುನೀನಾಂ ಪತಂಜಲಿಂ
ಪ್ರಾಂಜಲಿರಾನತೋಸ್ಮಿ
ಭಾವಾರ್ಥ:- ಯೋಗದಿಂದ ಚಿತ್ತವನ್ನೂ, ಪದಗಳಿಂದ ಮಾತನ್ನೂ,
ವೈದ್ಯಕೀಯದಿಂದ ಶರೀರದ ಕಲ್ಮಶಗಳನ್ನು ಶುಚಿಗೊಳಿಸುವ ವಿವರಗಳನ್ನು
ತಿಳಿಸಿಕೊಟ್ಟ ಪತಂಜಲಿ ಮುನಿಗೆ ಕೈ ಮುಗಿಯುವೆ.
ಜ್ಞಾನಂ ಭಕ್ತಿಂ ಕರ್ಮ ಪ್ರಾಪ್ಯ
ಶ್ರೇಯೋವಂತೋ ರಾಜಂತಾಮ್ |
ಆಶ್ರಿತಸುರಾಜಯೋಗಾ ಧ್ಯಾನೇ ಮಗ್ನಾ ಲೋಕೇ
ಭ್ರಾಜಂತಾಮ್ ||
ಭಾವಾರ್ಥ:- ಜ್ಞಾನ ಭಕ್ತಿ ಹಾಗೂ ಕರ್ಮಗಳನ್ನು ಶ್ರೇಯೋವಂತರಾದವರು ಪಡೆದು ವಿರಾಜಿಸಲಿ.
ರಾಜಯೋಗವನ್ನು ಆಶ್ರಯಿಸಿದ ಜನರು ಧ್ಯಾನದಲ್ಲಿ ಮಗ್ನರಾಗಿದ್ದುಕೊಂಡು ಎದ್ದು ಕಾಣಿಸುವಂತಾಗಲಿ.
"ಯೋಗ"
ಎಂಬ ಪದವು ಮೊದಲಿಗೆ ಕಠೋಪನಿಷತ್‌ನಲ್ಲಿ ಕಂಡುಬರುತ್ತದೆ, ಅದರಲ್ಲಿ
ಇಂದ್ರಿಯಗಳ ನಿಯಂತ್ರಣ ಮತ್ತು ಮಾನಸಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಉತ್ತುಂಗ ಸ್ಥಿತಿಗೆ
ತಲುಪುವುದನ್ನು ಉಲ್ಲೇಖಿಸಲಾಗಿದೆ.
ಸೋಮ = सोम = स ओ म
ಅಕ್ಷರ
ಅರ್ಥ:- ಗಾಳಿ ಕರೆಯುವ ಮಾಂತ್ರಿಕ ಸೂತ್ರ
ಋಗ್ ವೇದ - ಮಂಡಲ 1 - ಸೂಕ್ತ 2 - ಶ್ಲೋಕ
3
ವಾಯೋ ತವ ಪರಪ್ರ್ಞ್ಚತೀ ಧೇನಾ ಜಿಗಾತಿ
ದಾಶುಷೇ |
ಉರೂಚೀ ಸೋಮಪೀತಯೇ ||
ಭಾವಾರ್ಥ;- ವಾಯು, ಜೀವದ ಮತ್ತು ಪ್ರೀತಿಯ ಉಸಿರು, ಸರ್ವಜ್ಞತೆಯ ಧ್ವನಿಯು
ಸ್ವರ್ಗ ಮತ್ತು ಭೂಮಿಯ ಉದ್ದಕ್ಕೂ ಪ್ರತಿಧ್ವನಿಸುತ್ತದೆ ಮತ್ತು ಉದಾರವಾದ ಯಜ್ಞ ಆತ್ಮಕ್ಕಾಗಿ
ತಾಯಿ ಹಸುವಿನಂತೆ ಉಕ್ಕಿ ಹರಿಯುತ್ತದೆ ಮತ್ತು ಅವನಿಗೆ ಸೋಮ, ಅಮರತ್ವದ
ಪಾನೀಯವನ್ನು ನೀಡುತ್ತದೆ.
ಸೋಮರಸ
ಆರೋಗ್ಯಕ್ಕೆ ಪೂರಕವಾಗಿದ್ದು ಮನಸ್ಸನ್ನು ಆಹ್ಲಾದಗೊಳಿಸುತ್ತದೇ ಹೊರತು, ಅದು ಸುರ ಪಾನದಂತೆ ಮೈಮರೆಸುವುದಿಲ್ಲ. ಇದಕ್ಕಾಗಿಯೇ ಶಾಸ್ತ್ರಕಾರರು ‘ಸೋಮಂ ಪಿಭೇತ್
ಸುರಾಂ ನಪಿಬೇತ್’ ಎನ್ನುವ ಮಾತನ್ನು ಹೇಳಿರುವುದು, ಎಂದು ಹಲವು
ವಿದ್ವಾಂಸರು ಹೇಳುತ್ತಾರೆ, ಆದರೆ ಅಂತಹ ಸೋಮರಸ ನಮ್ಮ ದೇಹದಲ್ಲಿಯೇ
ಉತ್ಪತ್ತಿಯಾಗಿ ಗುಪ್ತಗಾಮಿನಿ ಸರಸ್ಪತಿ ನದಿಯ ರೂಪ ತಾಳುತ್ತದೆ ಎಂದು ಅನೇಕ ಪ್ರಾಚಿನ ಗ್ರಂಥ ಸಾರ
ಮತ್ತು ಅಕ್ಷರ ಅನುವಾದದಿಂದ ತಿಳಿದುಬರುತ್ತದೆ.
ಚಕ್ರ = चक्र = च क र
ಅಕ್ಷರ
ಅರ್ಥ:- ನೀರಿನ ಬೆಂಕಿಯನ್ನು (ಆವಿಯನ್ನು) ಅಂತಿಂದಿತ್ತ ಚಲಿಸುವ (ಏಳು ಚಕ್ರಗಳಲ್ಲಿ ದೇಹದ ಎಲ್ಲಾ ನಾಡಿಗಳ
ಸಂಪರ್ಕ ಇರುತ್ತದೆ. ಅಂತಹ ನಾಡಿಗಳಲ್ಲಿ ಅತ್ತಿಂದಿತ್ತ ಅಮೃತಸ್ವರೂಪ ಆವಿಯನ್ನು ಚಾಲನೆ ನೀಡುವಕೆಲಸವನ್ನು
ಚಕ್ರಗಳು ಮಾಡುತ್ತವೆ.)
ವಿವರಣೆ:- ಇಡಾ
ಮತ್ತು ಪಿಂಗಳ ನಾಡಿಯು ಆಜ್ಞಾ ಚಕ್ರದ ಬಾಗದಿಂದ ಪ್ರಾರಂಭವಾಗಿ ಮೂಲಾಧಾರದವರೆಗೆ ಇರುತ್ತದೆ.
ಒಮ್ಮೆ ನಾವು ಉಸಿರನ್ನು ಮೂಗಿನಿಂದ ಎಳೆದಾಗ ಅದು ಆಜ್ಞಾಚಕ್ರ, ವಿಶುದ್ದ
ಚಕ್ರ, ಅನಾಹತ ಚಕ್ರ, ಮಣಿಪೂರಕ ಚಕ್ರ,
ಸ್ವಾಧಿಷ್ಟಾನ ಚಕ್ರ, ಮೂಲಾಧಾರ ಚಕ್ರ
ಸೇರುತ್ತದೆ. ಮೂಲಾಧಾರದಲ್ಲಿನ ಬೆಂಕಿ, ನೀರು ಮತ್ತು ದೇಹದಲ್ಲಿನ
ಸಂಪೂರ್ಣ ದ್ರವದ ಬೆಂಕಿಯೊಂದಿಗೆ ಮತ್ತು ಆವಿಯೊಂದಿಗೆ ಉಸಿರನ್ನು ವ್ಯವಸ್ಥಿತ ರೀತಿಯಲ್ಲಿ ಸುಷುಮ್ನಾ ನಾಡಿಯ ಮುಖೇನ
ಸಹಸ್ರಾರದವರೆಗೆ ಹೊರಹಾಕುವ ವಿಧಾನದಲ್ಲಿ ಸೇವಿಸುತ್ತೇವೆ. ವೇದದಲ್ಲಿ, ಬಲ ಸ್ವರೂಪನಾದ ಮುಖ್ಯ ಪ್ರಾಣನನ್ನು
”ಸಪ್ತಶಿವಾಸು ಮಾತೃಶು” ಎಂದು ಕರೆಯುತ್ತಾರೆ.
ಅಂದರೆ ಏಳು ಜನ ತಾಯಿಯಂದಿರಲ್ಲಿ
ನಿದ್ರಿಸುತ್ತಿರುವವ ವಾಯು ಎಂದರ್ಥ. ಯಾರು ಏಳು ಜನ ತಾಯಂದಿರು ಎಂದರೆ ಅವರು ನಮ್ಮ ದೇಹದಲ್ಲೇ
ಇರುವ ಕುಂಡಲಿನಿ ಚಕ್ರಗಳ ಅಧಿ ದೇವತೆಗಳು.
ಪೃಥ್ವಿ = पृथवी = पृ थ वी
ಅಕ್ಷರ
ಅರ್ಥ:- ಸರಿಸಲು ಮಂಗಳಕರವಾದ ಪ್ರಾರ್ಥನೆಯನ್ನು ಅಲ್ಲಿಗೆ ತರುವುದು,
ಅಕ್ಷರ
ಅರ್ಥ:- ಸರಿಸಲು ರಕ್ಷಕವನ್ನು ಅಲ್ಲಿಗೆ ತರುವುದು,
ಅಕ್ಷರ
ಅರ್ಥ:- ವ್ಯಾಪಿಸಲು ರಕ್ಷಕವನ್ನು ಅಲ್ಲಿಗೆ ತರುವುದು.
ವಿವರಣೆ:- ಉಸಿರಾಟ
ಇಡಾ ಮತ್ತು ಪಿಂಗಳ ನಾಡಿಯಿಂದ ಒಳಗೆ ಸೆಳೆದಾಗ ಅದು ಶ್ವಾಸ ಕೋಶಕ್ಕೆ ಹೋಗುತ್ತೆ ಎಂದು ಮಾತ್ರ
ನಾವು ಸಾಮಾನ್ಯವಾಗಿ ತಿಳಿದಿರುತ್ತೇವೆ. ಆದರೆ ಇಡಾ ಮತ್ತು ಪಿಂಗಳ ನಾಡಿ ಮೂಲಾಧಾರದವರೆಗೆ ತನ್ನ
ಸಂಪರ್ಕವನ್ನು ಹೊಂದಿರುತ್ತದೆ. ಹಾಗಾಗಿ ನಮ್ಮ ನಾಬಿ ಪ್ರದೇಶವೂ ಉಸಿರಾಟದಲ್ಲಿ ಚಲಿಸುವುದು
ಗಮನಿಸುತ್ತೇವೆ. ಉಸಿರಲ್ಲಿ ನೈಸರ್ಗಿಕವಾಗಿ ಸೋ ಹಮ್ ಎಂಬ ಅಜಪ ಮಂತ್ರ
ಪುನರಾವರ್ತಿತವಾಗುತ್ತಿರುತ್ತದೆ. ಬೇರೆ ರೀತಿಯ ಅಜಪ ಮಂತ್ರದಲ್ಲಿ ನಾವು ಉಸಿರಾಟ ಮಾಡಿದಾಗ
ಮೂಲಾಧಾರಪ್ರದೇಶಕ್ಕೆ ಮಂಗಳಕಾರಪ್ರಾರ್ಥನೆ, ರಕ್ಷಕನಾದ ವಾಯುವು
ಅಲ್ಲಿಗೆ ಬರುವುದು ಇದು ಪೃಥ್ವಿ ಬಾಗವೆಂದೂ ಆಧ್ಯಾತ್ಮ ವಿದ್ಯೆಯಲ್ಲಿ ಗುರುತಿಸಲಾಗಿದೆ.
ಸರ್ವಂ ಸಲಿಲಮೇವಾಸೀತ್ ಪೃಥಿವೀ ಯತ್ರ
ನಿರ್ಮಿತಾ। ತತಃ
ಸಮಭವದ್ಬ್ರಹ್ಮಾ ಸ್ವಯಂಭೂರ್ದೈವತೈಃ
ಸಹ॥ ೩ ಸ ವರಾಹಸ್ತತೋ ಭೂತ್ವಾ
ಪ್ರೋಜ್ಜಹಾರ ವಸುಂಧರಾಮ್ । ಅಸೃಜಚ್ಚ
ಜಗತ್
ಸರ್ವಂ ಸಹ ಪುತ್ರೈಃ ಕೃತಾತ್ಮಭಿಃ || ೪ ಆಕಾಶಪ್ರಭವೋ ಬ್ರಹ್ಮಾ
ಶಾಶ್ವತೋ ನಿತ್ಯ ಅವ್ಯಯಃ।
ರಾಮಾಯಣ - ಅಯೋಧ್ಯಾಕಾಂಡ 110. 3-5
ಭಾವಾರ್ಥ:- ಮೊದಲು ಈ ಜಗತ್ತೆಲ್ಲವೂ ಜಲಮಯವಾಗಿತ್ತು. ಅದರಲ್ಲಿಯೇ ಈ ಪೃಥ್ವಿಯು
ಸೃಷ್ಟಿಯಾಗಿದೆ. ಜಲರೂಪನಾಗಿದ್ದ ಆ ಪರಮಾತ್ಮನಿಂದ ಬ್ರಹ್ಮನೂ ದೇವತೆಗಳೂ ಉದ್ಭವಿಸಿದರು. ಆ
ಪರಮಾತ್ಮನು ವರಾಹಾ ಅವತಾರದಿಂದ ಈ ಭೂಮಿಯನ್ನು
ಮೇಲಕ್ಕೆ ಎತ್ತಿ ತಂದನು. ಆಕಾಶವೆಂಬ ಹೆಸರಿನ ಪರಮಾತ್ಮನಿಂದ ಬ್ರಹ್ಮನು ಗೋಚರಿಸಿದನು. ಅವನು
ಅನಾದಿಯೂ ನಾಶರಹಿತನೂ ಪರಿಣಾಮರಹಿತನೂ ಆದವನು. ಆತನು ಜ್ಞಾನಿಗಳಾದ ತನ್ನ ಪುತ್ರರ ನೆರವಿನಿಂದ ಈ
ಪ್ರಪಂಚವನ್ನು ನಿರ್ಮಿಸಿದನು.
ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಮಧ್ವಮತ ಅಕ್ಷರ ಅರ್ಥ
ದ್ವೈತ = द्वैत = द व ऐ त
ಅಕ್ಷರ
ಅರ್ಥ:- ಅಮೃತವನ್ನು ಆಹ್ವಾನಿಸಿ ಶಕ್ತಿಯುತವಾದದ್ದನ್ನು ನೀಡುವುದು
(ವಿದ್ವಾಂಸರ ಪ್ರಕಾರ ದ್ವೈತವು ಈಶ್ವರ ನಿರ್ಮಿತ, ಜೀವನಿರ್ಮಿತ
ಎಂದು ಎರಡು ವಿಧ. ಪಂಚಭೂತಾತ್ಮಕವಾದ ಈ ವಿಶ್ವವೆಂಬ ಪರಿಸರದಲ್ಲಿ ಪಂಚಭೂತಗಳಿಂದ ಅಮೃತ ಆಹ್ವಾನ
ಮತ್ತು ಶಕ್ತಿಯುತ ಅಮೃತ ನೀಡುವಿಕೆ ದ್ವೈತವೆಲ್ಲವೂ ಈಶ್ವರ ನಿರ್ಮಿತವೇ ಆದರೂ, ಮನುಜನ ದೇಹದಲ್ಲಿ ಪಂಚಭೂತಗಳಿಂದ ಅಮೃತ ಆಹ್ವಾನ ಮತ್ತು ಶಕ್ತಿಯುತ ಅಮೃತ ನೀಡುವಿಕೆ
ಮನುಜನ ಮಾನಸಿಕ ಪ್ರಯತ್ನದಿಂದ ನಡೆಯಬೇಕು.)
ತರ್ಕೈರೇತೇ ಹಿ ಮಾರ್ಗಾಸ್ತು ನ
ಹಂತವ್ಯಾಮನೀಷಿಭಿಃ |
ಸೋಪಾನಕ್ರಮತೋ ದೇವಾ ವೇದಮಾರ್ಗಸ್ಯ ಹೇತವಃ
॥
ಸೂತಸಂಹಿತೆಯ ಯಜ್ಞವೈಭವ ಖಂಡ
ಭಾವಾರ್ಥ:- ಬುದ್ಧಿಶಾಲಿಗಳಾದವರು ಈ ವಿಭಿನ್ನ ಮಾರ್ಗಗಳನ್ನೂ ತರ್ಕಬಲದಿಂದ ಖಂಡಿಸುವುದಕ್ಕೆ
ಹೋಗಬಾರದು. ಇವೆಲ್ಲವೂ ವೇದವಮಾರ್ಗಕ್ಕೆ ಸೇರಿಸುವ ಮೆಟ್ಟಿಲುಗಳು.
ತಮೇವ ಧೀರೋ ವಿಜ್ಞಾಯ ಪ್ರಜ್ಞಾಂ ಕುರ್ವೀತ
ಬ್ರಾಹ್ಮಣಃ |
ನಾನುಧ್ಯಾಯಾದ್ ಬಹೂನ್ ಶಬ್ದಾನ್
ವಾಚೋವಿಗ್ಲಾಪನಂ ಹಿ ತತ್॥
ಮುಂಡಕ ಉಪನಿಷತ್ ೨-೨-೫
ಭಾವಾರ್ಥ:-
ಧೀಮಂತನಾದ ಪುರುಷನು ಆ ಪರಮಾತ್ಮನ ಸ್ವರೂಪವನ್ನರಿತು
ಬ್ರಹ್ಮಜ್ಞಾನಿಯಾದ ಮೇಲೆ ಆತ್ಮಜ್ಞಾನತತ್ತರನಾಗಿ ಇದ್ದು ಬಿಡಬೇಕು. ವಾದ ವಿವಾದಗಳಿಗಾಗಿ ಬಹಳ
ಶಬ್ದಗಳನ್ನು ಬಳಸಬಾರದು. ಯಾರೊಡನೆಯೂ ವಾದಕ್ಕೆ ಇಳಿಯಬಾರದು. ವಾದ ಮಾಡುವುದೆಂದರೆ ವಾಗ್ದೇವಿಗೆ
ವೃಥಾ ಆಯಾಸವನ್ನು ಕೊಟ್ಟಂತೆಯೇ ಸರಿ.
ಭಗವಂತ
ಮತ್ತು ನಮ್ಮ ಅಂತರಂಗದ ಆತ್ಮ ಶಕ್ತಿ ಬೇರೆ ಬೇರೆ ಎಂದು ತತ್ತ್ವ ಚಿಂತನೆ ನಡೆಸಿರುವುದು ತಪ್ಪಲ್ಲ.
ಆದರೆ ಅಕ್ಷರ ಅರ್ಥದಲ್ಲಿ ವಿಮರ್ಶಿಸಿದ್ದರೆ, ಈ ಮತಬೇಧಗಳು
ಉದ್ಬವಿಸುತ್ತಿರಲಿಲ್ಲ. ಅಕ್ಷರ ಅರ್ಥದಲ್ಲಿ ದ್ವೈತಿಗಳ ಚಿಂತನೆಯನ್ನು ಇನ್ನೂ ಉನ್ನತೀಕರಿಸಿ
ಅದ್ವೈತಿಗಳು ಅಂತಹ ಅಮೃತ ಆಹ್ವಾನಿಸಿ ಶಕ್ತಿಯುತ ಆತ್ಮ ಶಕ್ತಿಯನ್ನು ಪಡೆಯಲು ಜೀವ ಉಸಿರು ಮತ್ತು
ಮಂತ್ರಸೂತ್ರವನ್ನು ಅಳವಡಿಸಿದ್ದಾರೆ. ವಿಶಿಷ್ಟಾದ್ವೈತಿಗಳು ಉಸಿರಾಟದಲ್ಲಿ ವಿಶೇಷ ದ್ವನಿಯಿಂದ
ಮತ್ತು ಪರಿಣಾಮಕಾರಿ ಮಂತ್ರದಿಂದ ಅಮೃತ ಆಹ್ವಾನಿಸಿ
ಶಕ್ತಿಯುತ ಆತ್ಮ ಶಕ್ತಿಯನ್ನು ಪಡೆಯುವ ವಿಧಾನವನ್ನು ಹೇಳಿದ್ದಾರೆ. ಅದು ನೈಸರ್ಗಿಕ “ಹಮ್”
ಮಂತ್ರದ ಬದಲು “ನಾರಾಯಣಾಯ’ ಎಂಬ ಶಬ್ದವನ್ನು ಮಾನಸಿಕವಾಗಿ
ಸುಷುಮ್ನಾ ನಾಡಿಯಲ್ಲಿ ಪ್ರಯೋಗಿಸುವ ವಿಧವಾಗಿದೆ.
ಮಾಂಡೂಕ್ಯ ಉಪನಿಷತ್ ಪ್ರವಚನದಲ್ಲಿ
ವಿದ್ವಾನ್ ಎನ್. ರಂಗನಾಥಶರ್ಮಾ ರವರು ಹೀಗೆ ಶ್ಲೋಕಗಳ ಬಗ್ಗೆ ಹೇಳುತ್ತಾರೆ,
“ಉಪದೇಶಾದಯಂ ವಾದೋ ಜ್ಞಾತೇ ದ್ವೈತಂ ನ
ವಿದ್ಯತೇ” ಎಂದರೆ, ತತ್ತ್ವೋಪದೇಶವೆಂಬ ಪ್ರಯೋಜನಕ್ಕಾಗಿ ಈ
ವಿಭಾಗವಿರುತ್ತದೆ. ಈ ವಿಭಾಗವಿಲ್ಲದಿದ್ದರೆ ತತ್ತ್ವಜ್ಞಾನವೇ ಹುಟ್ಟುವುದಿಲ್ಲ ಆಗ ಅದ್ವೈತ ಜ್ಞಾನವಿಲ್ಲದಿರುವುದರಿಂದ
ಪ್ರಪಂಚದಂತೆ ಈ ವಿಕಲ್ಪವೂ ಇರುತ್ತದೆ. ಜ್ಞಾನೋದಯವಾದ ಮೇಲೆ ಈ ದ್ವೈತವೇ ಇರುವುದಿಲ್ಲ.
“ಮನೋದೃಶ್ಯಮಿದಂ ದ್ವೈತಂ ಯತ್ಕಿಂಚಿತ್
ಸಚರಾಚರಮ್| ಮನಸೋ ಹ್ಯಮನೀಭಾವೇ ದ್ವೈತಂ ನೈವೋಪಲಭ್ಯತೇ॥“ ಎಂದರೆ
“ದ್ವೈತವೆಲ್ಲವೂ ಮನಃ ಕಲ್ಪಿತವಾದದ್ದು ಮನಸ್ಸಿದ್ದರೆ ದ್ವೈತ ಜಗತ್ತು, ಮನಸ್ಸಿಲ್ಲದಿದ್ದರೆ ಅದಾವುದೂ ಇರುವುದಿಲ್ಲ. ಮನೋದೃಶ್ಯವಾದ ಈ
ದ್ವೈತಪ್ರಪಂಚವೆಲ್ಲವೂ ಮನಸ್ಸು ಎಂಬುದು ನಮ್ಮ ಪ್ರತಿಜ್ಞೆ. ಸತ್ಯವೇನೆಂದರೆ, ಮನಸ್ಸಿದ್ದರೆ ದ್ವೈತ ಪ್ರಪಂಚವಿರುತ್ತದೆ. ಇಲ್ಲದಿದ್ದರೆ ದ್ವೈತಪ್ರಪಂಚವಿರುವುದೇ
ಇಲ್ಲ. ಆದ್ದರಿಂದ ಮನಸ್ಸೇ ದ್ವೈತವೆಂದು ಸಿದ್ಧಾಂತ”.
“ದುಃಖಂ ಸರ್ವಮನುಸ್ಮೃತ್ಯ
ಕಾಮಭೋಗಾನ್ನಿವರ್ತಯೇತ್ | ಅಜಂ ಸರ್ವಮನುಸ್ಮೃತ್ಯ ಜಾತಂ ನೈವ ತು
ಪಶ್ಯತಿ||” ಎಂದರೆ, ಗೋಚರವಾಗುವ
ಸಮಸ್ತ ದ್ವೈತ ವಸ್ತುವೂ, ದುಃಖಜನಕವೆಂಬುದನ್ನು, ಮನಸ್ಸಿಗೆ ತಂದುಕೊಂಡು, ಕಾಮನೆಯಿಂದುಂಟಾಗುವ
ಭೋಗವಿಷದಿಂದ ಮನಸ್ಸನ್ನು, ಹಿಂದಕ್ಕೆ ಸರಿಸಬೇಕು. ಗೋಚರಿಸುವ ಸಮಸ್ತ
ವಸ್ತುವೂ, ಬ್ರಹ್ಮವೆಂಬುದನ್ನು ಸ್ಮರಣೆಗೆ ತಂದು ಕೊಂಡಾಗ, ದ್ವೈತ ವಸ್ತುವನ್ನು ಆತನು ಎಂದೆಂದಿಗೂ ಕಾಣುವುದೇ ಇಲ್ಲ.
“ಯಥಾ ಸ್ವಪ್ನೇ ದ್ವಯಾಭಾಸಂ ಚಿತ್ತಂ
ಚಲತಿ ಮಾಯಯಾ । ತಥಾ ಜಾಗ್ರದ್ದ್ವಯಾಭಾಸಂ ಚಿತ್ತಂ ಚಲತಿ ಮಾಯಯಾ ॥“ ಎಂದರೆ, ಸ್ವಪ್ನದಲ್ಲಿ ಮನಸ್ಸು ದ್ವೈತರೂಪವಾಗಿ ಹೇಗೆ ಸ್ಪಂದಿಸುತ್ತ ಕಾಣಿಸಿಕೊಳ್ಳುವುದೋ
ಹಾಗೆಯೇ ಜಾಗ್ರತ್ತಿನಲ್ಲಿಯೂ ಮನಸ್ಸು ದ್ವೈತರೂಪವಾಗಿ ಮಾಯೆಯಿಂದ ಸ್ಪಂದಿಸುತ್ತ
ಕಾಣಿಸಿಕೊಳ್ಳುತ್ತದೆ.
“ಅದ್ವಯಂ ಚ ದ್ವಯಾಭಾಸಂ ಚಿತ್ತಂ
ಸ್ವಪ್ನೇ ನ ಸಂಶಯಃ | ಅದ್ವಯಂ ಚ ದ್ವಯಾಭಾಸಂ ತಥಾ ಜಾಗ್ರನ್ನ ಸಂಶಯಃ
॥“ ಎಂದರೆ, ಸ್ವಪ್ನದಲ್ಲಿ ಚಿತ್ತವು ಪರಮಾರ್ಥವಾದ ಆತ್ಮ
ಸ್ವರೂಪವಾದ್ದರಿಂದ ಅದ್ವಯವೂ ಮತ್ತು ದೃಶ್ಯವಾಗಿ ದ್ವೈತದಂತೆ ತೋರತಕ್ಕದ್ದೂ ಆಗಿದೆ. ಇದರಲ್ಲಿ
ಸಂದೇಹವಿಲ್ಲ ಹಾಗೆಯೇ ಜಾಗ್ರತ್ತಿನಲ್ಲಿ ಚಿತ್ತವು ಅದ್ವಿತೀಯಾತ್ಮ ಸ್ವರೂಪವಾಗಿದ್ದು ದ್ವೈತ
ರೂಪವಾದ ಜಗತ್ತೂ ಆಗಿದೆ. ಇದರಲ್ಲಿ ಸಂದೇಹವಿಲ್ಲ
ಅದ್ವೈತ = अद्वैत = अ द व ऐ त
ಅಕ್ಷರ
ಅರ್ಥ:- ಜೀವ ಉಸಿರು ಅಥವಾ ವಿಶೇಷವಾಗಿ ಪರಿಣಾಮಕಾರಿ ಮಂತ್ರ
ಅಮೃತವನ್ನು ಆಹ್ವಾನಿಸಿ ಶಕ್ತಿಯುತವಾದದ್ದನ್ನು ನೀಡುವುದು.
“ಬ್ರಹ್ಮಸತ್ಯಂ
ಜಗನ್ಮಿಥ್ಯಾ ಜೀವೋಬ್ರಹ್ಮೈವನಾಪರಃ'” ಎಂದರೆ, ಬ್ರಹ್ಮವೊಂದೇ
ಸತ್ಯ; ಜಗತ್ತು ಮಿಥ್ಯಾರೂಪವಾದದ್ದು (ವಿವಾರಣಾ
ರೂಪವಾದದ್ದು/ ನೋಟದಲ್ಲಿ ಮಾತ್ರ); ಜೀವನು ಬ್ರಹ್ಮನೆ; ಜೀವ ಬ್ರಹ್ಮನಿಂದ ಬೇರೆ ಅಲ್ಲ, ಎಂಬ ಅದ್ವೈತ
ಸಿದ್ಧಾಂತವನ್ನು ಆದಿಶಂಕರರು ತತ್ವಶಃ ಪಾಲಿಸಿ, ಅದನ್ನು ಪ್ರಸಾರ
ಮಾಡಿದರು. ಜ್ಞಾನ, ಭಕ್ತಿ, ಯೋಗ
ಮತ್ತು ಕರ್ಮ ಮಾರ್ಗಗಳ ಅನುಸರಣೆಯಿಂದ ಅದ್ವೈತದ ಅರಿವು ಸಾಧ್ಯವೆಂಬುದನ್ನು ಮನಗಾಣಿಸಿಕೊಟ್ಟರು.
ಅಂತ್ಯದಲ್ಲಿ. ಜ್ಞಾನಮಾರ್ಗವೇ ಸರ್ವಶ್ರೇಷ್ಠ ಎಂಬುದನ್ನೂ ತೋರಿಸಿದವರು ಆದಿಶಂಕರಾಚಾರ್ಯರು.
ಈಗಾಗಲೇ
ವಿವರಿಸಿದಂತೆ, “ಬ್ರಹ್ಮ” ಎಂಬ ಅಕ್ಷರ ಅರ್ಥ ನೀರು, ಬೆಂಕಿ, ವೈದ್ಯ ಮಾಂತ್ರಿಕ ಸೂತ್ರ. (ನೀರು, ಬೆಂಕಿ, ಶಾಖ, ಹೊಳಪು,
ಧ್ಯಾನ, ಜ್ಞಾನವನ್ನು ಪಡೆದುಕೊಳ್ಳುವ ವೈದ್ಯ ಮಾಂತ್ರಿಕ ಸೂತ್ರ) ವೈಧಿಕ ಧರ್ಮದಲ್ಲಿ ವಾಯುವನ್ನು
ಬ್ರಹ್ಮ ಎಂದು ತಿಳಿದುಕೋ ಎಂದು ಪ್ರಾರಂಭಿಕವಾಗಿ ಕಲಿಸಲಾಗುತ್ತದೆ. ಆದ್ದರಿಂದಲೇ 'ನಮಸ್ತೇ ವಾಯೋ, ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ'
ಎಂಬ ಶ್ರದ್ಧಾಪೂರ್ವಕ ಪ್ರಾರ್ಥನೆ ಇದೆ.
ಬ್ರಹ್ಮ
ಎಂದರೆ ಶಾಶ್ವತವಾದ ವಿಶ್ವಚೈತನ್ಯ. ಅದು ಎಲ್ಲದರಲ್ಲೂ ಇದೆ, ಎಲ್ಲೆಲ್ಲೂ
ಇದೆ, ಚಿಕ್ಕ ದೊಡ್ಡ ಸಕಲ ಪದಾರ್ಥಗಳಲ್ಲೂ ಇದೆ. ಬ್ರಹ್ಮ ಎಂದರೆ
ಶರೀರವೇ ಬ್ರಹ್ಮವೆಂದರ್ಥವಲ್ಲ. ಈ ಶರೀರದೊಳಗೆ ಇರುವವನು ಬ್ರಹ್ಮ. ಪರಮಶ್ರೇಷ್ಠವಾದ ಅಕ್ಷರವೇ
ಬ್ರಹ್ಮ. ವಿಜ್ಞಾನವೂ ಆನಂದವೂ (ಆಗಿರುವದು) ಬ್ರಹ್ಮವು” (ಬೃ. ೩-೯-೨೦). "ಈತನು ಮಾತೆಂಬ
ಜ್ಯೋತಿಯಿಂದಲೇ (ಕತ್ತಲೆಯಲ್ಲಿ) ಕುಳಿತುಕೊಳ್ಳುತ್ತಾನೆ” (ಬೃ. ೪-೩-೫). ಬ್ರಹ್ಮವು ಚೈತನ್ಯ ರೂಪವಾಗಿರುವದರಿಂದ ಜಗತ್ತೆಲ್ಲವೂ
ತೋರುವದಕ್ಕೆ ಕಾರಣವಾಗಿ-ರುವದರಿಂದ (ಅದಕ್ಕೂ) ಜ್ಯೋತಿ ಎಂಬ ಶಬ್ದವು ಒಪ್ಪುತ್ತದೆ. “ಆತನು
ಬೆಳಗುವದನ್ನು ಅನುಸರಿಸಿಯೇ ಎಲ್ಲವೂ ಬೆಳಗುತ್ತಿರುವದು, ಆತನ
ಬೆಳಕಿನಿಂದ ಇದೆಲ್ಲವೂ ಬೆಳಗುತ್ತಿರುವದು'' (ಮುಂ. ೨-೨-೧೧),
"ಆ ಜ್ಯೋತಿಗಳ ಜ್ಯೋತಿಯನ್ನು ದೇವತೆಗಳು ಆಯುಸ್ಸು, ನಾಶವಿಲ್ಲದ್ದು ಎಂದು ಉಪಾಸನೆಮಾಡುತ್ತಾರೆ'' (ಬೃ.
೪-೪-೧೬), "ಪ್ರಾಣೋ ಬ್ರಹ್ಮ ಕಂ ಬ್ರಹ್ಮ ಖಂ ಬ್ರಹ್ಮ” (ಛಾಂ.
೪-೧೦-೪) ಅಂದರೆ, “ಪ್ರಾಣವು ಬ್ರಹ್ಮವು, ಕಂ (ಸುಖವು) ಬ್ರಹ್ಮನು, ಖಂ (ಆಕಾಶವು) ಬ್ರಹ್ಮವು”.
“ಅಕ್ಷರದಿಂದ ಇಲ್ಲಿ ಎಲ್ಲವೂ ಉಂಟಾಗುತ್ತದೆ?” (ಮುಂ. ೧-೧-೭) ಎಂದು
ಪ್ರಕೃತನಾಗಿರುವ ಭೂತ ಯೋನಿಯನ್ನು ಹುಟ್ಟುವದಕ್ಕೆಲ್ಲ ಮೂಲಕಾರಣವೆಂದು ತಿಳಿಸಿ, ಆ ಬಳಿಕವೂ "ಯಾವನು ಸರ್ವಜ್ಞನೋ ಸರ್ವವಿತ್ತೋ ಯಾವನ ತಪಸ್ಸು
ಜ್ಞಾನಮಯವಾಗಿರುವದೋ, ಆತನಿಂದ ಈ ಬ್ರಹ್ಮವೂ ನಾಮವೂ ರೂಪವೂ ಅನ್ನವೂ
ಉಂಟಾಗುತ್ತದೆ” (ಮುಂ. ೧-೧-೯). “ಬ್ರಹ್ಮವನ್ನು
ಅರಿತುಕೊಳ್ಳುತ್ತಾನಾದರೆ ಬ್ರಹ್ಮನೇ ಆಗುತ್ತಾನೆ” (ಮುಂ. ೩-೨-೯),
ಮಾಂಡೂಕ್ಯ ಉಪನಿಷತ್
ಪ್ರವಚನದಲ್ಲಿ ವಿದ್ವಾನ್ ಎನ್. ರಂಗನಾಥಶರ್ಮಾ ರವರು ಹೀಗೆ ಹೇಳುತ್ತಾರೆ, “ಉಪಾಸನಾಶ್ರಿತೋ ಧರ್ಮಃ ಜಾತೇ
ಬ್ರಹ್ಮಣಿ ವರ್ತತೇ|”
ಎಂದರೆ ಉಪಾಸನಾವಿಧಿಯನ್ನು ಪಾಲಿಸುವ, ಜೀವನು, ಜಗದ್ರೂಪದಲ್ಲಿ ಉತ್ಪನ್ನವಾದ, ಬ್ರಹ್ಮವಸ್ತುವಿನಲ್ಲಿ,
ಅಭಿಮಾನಿಯಾಗಿರುತಾನೆ. "ಯೋ ವೈ ಭೂಮಾ ತದಮೃತಮ್'' (ಛಾಂ. ೭-೨೪-೧) ಎಂದರೆ, “ಬ್ರಹ್ಮವಾದರೋ ಭೂಮಾ
(ಬಹುತ್ವದ), ಅಮೃತ”. ಬೃಹದಾರಣ್ಯಕದಲ್ಲಿರುವ ಈ ಮಧುಬ್ರಾಹ್ಮಣದಲ್ಲಿ
(ಬೃಹ. ೨-೫-೧) ಹೀಗಿದೆ “ಪೃಥಿವೀ ಎಂಬ ಉಪಾಧಿಯಲ್ಲಿ (ಗುಣವನ್ನು
ಹೇಳುವ ಪದದಲ್ಲಿ) ತೇಜೋಮಯನೂ ಅಮೃತಮಯನೂ ಆದ ಯಾವ
ಪುರುಷನಿದ್ದಾನೋ ಮತ್ತು ಅಧ್ಯಾತ್ಮದಲ್ಲಿ ಶಾರೀರನಾದ ತೇಜೋಮಯನೂ ಅಮೃತಮಯನೂ ಆದ ಯಾವ
ಪುರುಷನಿದ್ದಾನೋ ಈತನೇ ಈ ಜೀವಾತ್ಮನು ಇವನೇ ಬ್ರಹ್ಮ ಸರ್ವವೂ ಬ್ರಹ್ಮವೇ”.
ವಿಶಿಷ್ಟಾದ್ವೈತ = विशिष्टा द्वैत = वि शि ष ट अ
ಅಕ್ಷರ
ಅರ್ಥ:- ಗಾಳಿಯ ಪ್ರದೇಶವು ಅತ್ಯುತ್ತಮ ಧ್ವನಿಯನ್ನು ಪ್ರಚೋದಿಸಲು
ವಿಶೇಷವಾಗಿ ಪರಿಣಾಮಕಾರಿ ಮಂತ್ರ ಅಮೃತವನ್ನು ಆಹ್ವಾನಿಸಿ ಶಕ್ತಿಯುತವಾದದ್ದನ್ನು ನೀಡುವುದು. (ಶ್ರೀ ನಾಥಮುನಿಗಳನಂತರ ಶ್ರೀ ರಾಮಾನುಜಾಚಾರ್ಯರು ಈ ಮತವನ್ನು ಪ್ರಚಾರ ಮಾಡಿದರು)
ಅದ್ವೈತ, ದ್ವೈತ ಮತ್ತು ವಿಶಿಷ್ಟಾದ್ವೈತ
ಸಿದ್ಧಾಂತಗಳು, ದೇವರು, ಜೀವನ ಮತ್ತು
ಪ್ರಕೃತಿಗೆ ಸಂಬಂಧಿಸಿದ ತತ್ತ್ವಗಳ ಮಹಾಪ್ರತಿಪಾದಕರಿಗಿಂತ ತುಂಬ ಪ್ರಾಚೀನವಾದುವು. ಪ್ರಾಚೀನ
ಉಪನಿಷತ್ತುಗಳಲ್ಲಿಯೇ ಈ ಸಿದ್ಧಾಂತಗಳು ಗೋಚರಿಸುತ್ತವೆ. ಆಚಾರ್ಯರು ಅವುಗಳೊಳಗಿನ ಮಂತ್ರಗಳನ್ನು
ಆರಿಸಿಕೊಂಡು, ತಮ್ಮ ಉಪದೇಶಕ್ಕೆ ಪಠ್ಯಗಳನ್ನಾಗಿ ಬಳಸುತ್ತಾರೆ. ವೇದಾಂತದರ್ಶನದ
ಅನುಯಾಯಿಗಳಲ್ಲಿ ಬ್ರಹ್ಮ-ಜೀವ-ಜಗತ್ತು-ಮೋಕ್ಷ ಈ ವಿಚಾರದಲ್ಲಿ ಒಂದಕ್ಕೊಂದು ಸಂಬಂಧದ ಕುರಿತಾಗಿಯೂ,
ಒಂದೊಂದರ ಇರುವಿಕೆ, ಸ್ವರೂಪಗಳ ವಿಚಾರವಾಗಿಯೂ
ಮತಭೇದವುಂಟಾಯಿತು. ಸಿದ್ಧಾಂತ-ವಿವರಣೆಗಳನ್ನು ಕಾಲಕ್ರಮದಲ್ಲಿ ಬೇರೆ ಬೇರೆ ಮತಾಚಾರ್ಯರು ವಿವಿಧ
ರೀತಿಯಲ್ಲಿ ಪ್ರತಿಪಾದಿಸಿ ಒಂದೊಂದು ತೀರ್ಮಾನಕ್ಕೆ ಬಂದರು. ಸತ್ಯದ ಕುರಿತಾಗಿ ಅವರು ಕಂಡ
ದರ್ಶನವನ್ನು ಮತವೆಂದು ಕರೆಯಲಾಯಿತು.
ವಿಶಿಷ್ಟಾದ್ಹೈತದರ್ಶನದಲ್ಲಿ
ಶ್ರೀಲಕ್ಷ್ಮೀನಾರಾಯಣನೆಂದೂ, ಶ್ರೀ ವಿಷ್ಣು ಎಂದೂ ಭಗವಂತನನ್ನು
ಹಲವು ಹೆಸರುಗಳಿಂದ ಸಂಬೋಧಿಸಲಾಗಿದೆ. ಲಕ್ಷ್ಮೀಸಮೇತನಾದ ವಿಷ್ಣುವನ್ನು ಆರಾಧಿಸುವವರಾದ್ದರಿಂದ
ವಿಶಿಷ್ಟಾದ್ವೈತ ಸಂಪ್ರದಾಯದವರಿಗೆ ಶ್ರೀವೈಷ್ಣವರು ಎಂಬ ಪರ್ಯಾಯವಾದ ಹೆಸರಿದೆ. ವಿಶಿಷ್ಟಾದ್ವೈತದ
ರೀತಿಯ ಸಾಧನೆಗೆ ಶ್ರೀವೈಷ್ಣವ ಸಾಧನೆ ಎಂದೂ ಹೇಳುತ್ತಾರೆ. ಜೀವಾತ್ಮನು ಪರಮಾತ್ಮನ ಅನುಗ್ರಹಕ್ಕೆ
ಪಾತ್ರನಾಗುವಂತೆ ಮಾಡುವವಳು “ಶ್ರೀ”, ಎಂದರೆ ಜಗನ್ಮಾತೆಯಾದ
ಲಕ್ಷ್ಮೀದೇವಿ (ಸರಸ್ಪತಿ). ಶ್ರೀಮನ್ನಾರಾಯಣನು ಕರ್ಮದ ಶಕ್ತಿಯಾದರೆ ಶ್ರೀ ಲಕ್ಷ್ಮೀದೇವಿಯು (ಸರಸ್ಪತಿ)
ಕೃಪೆಯ ಶಕ್ತಿ. ಈ “ದ್ವಯ” ಶಕ್ತಿಗಳಲ್ಲಿರುವ ಸಮನ್ವಯವನ್ನು ಗ್ರಹಿಸಿ ಶ್ರೀ ಲಕ್ಷ್ಮೀದೇವಿಯ
(ಸರಸ್ಪತಿ) ಮೂಲಕ ಶ್ರೀಮನ್ನಾರಾಯಣನನ್ನು ಆಶ್ರಯಿಸಬೇಕು ಎನ್ನುವುದು ಈ “ದ್ವಯದ” ಸಾರಾಂಶ.
(ಇಲ್ಲಿ ಓಂ ನಮೋ ನಾರಾಯಣಾಯ ಎಂಬ ಅಜಪ ಮಂತ್ರದಲ್ಲಿ ಸರಸ್ಪತಿ ನದಿಯನ್ನು ಅಥವಾ ಸಂಪದ್ಬರಿತ
ಲಕ್ಷ್ಮಿಯನ್ನು ಸಹಸ್ರಾರಕ್ಕೆ ನಾರಾಯಣಾಯ ಎಂಬ ಮಂತ್ರದೊಂದಿಗೆ ಉಸಿರಾಟದಲ್ಲಿ ಹರಿಸುವುದೇ ಬ್ರಹ್ಮ
ಜ್ಞಾನಕ್ಕೆ ಮೂಲ ಎಂಬುದೇ ಶ್ರೀ ವೈಷ್ಣವರು ಪರಾ ವಿದ್ಯೆಯಲ್ಲಿ ಕಂಡುಕೊಂಡ ಸತ್ಯ.)
“ಶ್ರೀಮನ್ನಾರಾಯಣಚರಣೌ
ಶರಣಂ ಪ್ರಪದ್ಯೇ, ಶ್ರೀಮತೇ ನಾರಾಯಣಾಯ ನಮಃ” ಎನ್ನುವುದೇ ಆ
ಪವಿತ್ರವಾದ ದ್ವಯಮಂತ್ರ.
ಕ್ಷತ್ರಂ ತದಪಿ ವಿಜ್ಞೇಯಮ್ ಬ್ರಹ್ಮ
ಯತ್ಪಾತಿ ಶಾಶ್ವತಂ |
(ಶೌನಕಮಹರ್ಷಿಯ ಬೃಹದ್ದೇವತಾ. ೫-೧೨೬)
ಭಾವಾರ್ಥ:- ಶಾಶ್ವತವಾದ ಬ್ರಹ್ಮವನ್ನು ರಕ್ಷಿಸುವ ಸಾಮರ್ಥ್ಯವು ಯಾವುದಕ್ಕಿದೆಯೋ ಅದೇ ಕ್ಷತ್ರವೆಂದರಿಯಬೇಕು.
ಈ ಶಕ್ತಿಯಿಂದಲೇ ಇತರ ಸಕಲಶಕ್ತಿಗಳೂ ರಕ್ಷಿಸಲ್ಪಡುತ್ತವೆ. (ಕ್ಷತ್ರ ಶಬ್ದಕ್ಕೆ ಬಲವೆಂದರ್ಥ. ಇದು
ಸಾಧಾರಣವಾದ ಬಲವಲ್ಲ. ಅನ್ನವನ್ನೂ ಯಶಸ್ಸನ್ನೂ ಮತ್ತು ಪುರುಷನ ಸರ್ವಸ್ವವನ್ನೂ ರಕ್ಷಿಸತಕ್ಕ
ಶಕ್ತಿಯಾಗಿದೆ. ಈ ಕ್ಪತ್ರ ನಿಲ್ಲದಿದ್ದರೆ ಪುರುಷನಿಗೆ ಯಾವ ವಿಧವಾದ ರಕ್ಷಣೆಯೂ ಇರಲಾರದು).
ಪ್ರಾರಂಭದಲ್ಲಿ
ದೇವತೆಗಳು ಮರ್ತ್ಯರಾಗದ್ದರು. ಅವರು ಬ್ರಹ್ಮನನ್ನು ಸಾಕ್ಷಾತ್ಕರಿಸಿದನಂತರವೇ ಅಮೃತತ್ವವನ್ನು
ಪಡೆದರು. …… ಮನೋರೂಪವಾದುದೂ ವಾಗ್ರೂಪವಾದುದೂ ಆದ ಈ ಬ್ರಹ್ಮ ತತ್ತ್ವವನ್ನರಿಯುವುದರಿಂದ
ಮಾನವನೂ ಸಹ ಬ್ರಹ್ಮತ್ತ್ವವನ್ನು ಎಂದರೆ ಅಮೃತತ್ತ್ವವನ್ನು ಪಡೆಯುತ್ತಾನೆ. - ಶ. ಬ್ರಾ: 11-2-3-6)
ವಿದ್ವಾನ್
ಹೆಚ್.ಪಿ. ವೆಂಕಟರಾವ್ ಹೇಳುತ್ತಾರೆ, `”ಈ. ಆತ್ಮನು ಶುದ್ಧನು. ಅಮೃತನು.
ಇವನನ್ನು ಅರಿಯಬೇಕಾದರೆ ಆತ್ಮಸಾಕ್ಷಾತ್ಕಾರವು ಅತ್ಯವಶ್ಯವಾದುದು. ಶ್ರುತಿಯ ಉಪದೇಶದಿಂದ ತಿಳಿದ
ಬ್ರಹ್ಮ ಜ್ಞಾನವು ಸಾಕ್ಟಾತ್ಕಾರಕ್ಕೆ ಸಾಧನವಾಗುವುದೇ ಹೊರತು ಸಾಕ್ಟಾತ್ಕಾರವೇ ಆಗುವುದಿಲ್ಲ”.
ಈ
ಜೀವನೇ ವಿಜ್ಞಾನಮಯನೂ, ಮನೋಮಯನೂ, ಪ್ರಾಣಮಯನೂ,
ಚಕ್ಷುರ್ಮಯನೂ, ಶ್ರೋತ್ರಮಯನೂ, ಪೃಥಿವೀ-ಮಯನೂ, ಆಪೋಮಯನೂ, ವಾಯುಮುಯನೂ, ಆಕಾಶಮ-ಯನೂ, ತೇಜೋಮಯನೂ, ಅತೇಜೋಮಯನೂ, ಕಾಮಮ-ಯನೂ, ಅಕಾಮಮಯನೂ, ಕ್ರೋಧಮಯನೂ,
ಆಕ್ರೋಧಮ-ಯನೂ, ಧರ್ಮಮಯನೂ, ಅಧರ್ಮಮಯನೂ, ಆದ ಬ್ರಹ್ಮ-ನಾಗಿದ್ದಾನೆ. ಇವನು
ಸರ್ವಮಯನು. ಆದುದರಿಂದಲೇ ಈ ಆತ್ಮನನ್ನು “ಇದಂಮಯಃ ಅದೋಮಯಃ” ಇದರಿಂದ ಪೂರ್ಣ-ನಾದವನು ಅಥವಾ
ಅದರಿಂದ ಪೊರ್ಣನಾದವನು ಎಂದು ವರ್ಣಿಸಿದೆ. (ಬೃ. ಉ. 4-4-5)
ಮಧ್ವಮತ = मध्वमत = म ध व म त
ಅಕ್ಷರ
ಅರ್ಥ:- ಶಕ್ತಿಯುತವಾದ ನೀರಿನ ಅಮೃತವನ್ನು ನೀಡುವ ಮಾಂತ್ರಿಕ ಸೂತ್ರ.
ಮಧ್ವಮತ
ಮುಖ್ಯ ಸಂದೇಶ “ಹರಿ ಸರ್ವೋತ್ತಮ ವಾಯು ಜೀವೋತ್ತಮ”, ಹರಿ ಎಂಬ
ಸಂಸ್ಕೃತ ಅಕ್ಷರ ಅರ್ಥ “ಚಲಿಸುವ ವೈದ್ಯತೆ” ಅದೇ ಅಮೃತ, ಅದುವೇ
ಗುಪ್ತಗಾಮಿನಿ ಸರಸ್ಪತಿ ನದಿ, ಅದುವೇ ಸಂಪದ್ಬರಿತ ಲಕ್ಷ್ಮಿ.
ಶ್ರೀ ವಿಜಯದಾಸರು “ಮಧ್ವಮತವ ಪೊಂದದವನ ಭಕುತಿಯಾತಕೆ? ಎಂದು
ಹೇಳಿ ಮುಂದೆ - ಮಧ್ವಮತವೇ ಮತವು ಸಕಲ ಶ್ರುತಿ ಸಮ್ಮತವು । ಮಧ್ವರಾಯರ ಧ್ಯಾನ ಅಮೃತ ಪಾನ ।“
ಶ್ರೀ
ಪುರಂದರದಾಸರು ಮತಗಳೆಲ್ಲವು ಮಧ್ವಮತಸುಸಾರದ
ಹಿಂದೆ, ಎನ್ನುತ್ತಾರೆ. ಈ ಕಾರಣಕ್ಕಾಗಿಯೇ, ಮಧ್ವಮತದ ಸಿದ್ಧಾಂತದ ಪದ್ಧತಿ ಬಿಡಬೇಡಿ ಬಿಟ್ಟು ಕೆಡಬೇಡಿ, ಹರಿ ಸರ್ವೋತ್ತಮನಹುದೆಂಬ ಜ್ಞಾನವ ತಾರತಮ್ಯದಿಂದ ತಿಳಿಸೋ ಮಾರ್ಗವ ಬಿಡಬೇಡಿ ॥
ಬಿಟ್ಟು ಕೆಡಬೇಡಿ ॥“
ಶ್ರೀ
ವ್ಯಾಸರಾಯರು “ಜನುಮ ಜನುಮದಲ್ಲಿ ಕೊಡು ಕಂಡ್ಯ ಹರಿಯೇ” ಎಂಬ ಪದ್ಯದಲ್ಲಿ “ಹರಿಯೇ ಸರ್ವೋತ್ತಮ
ರಾಣಿ ಲಕುಮಿಬೊಮ್ಮ”. ಎನ್ನುತ್ತಾರೆ.
ಅನೇಕ
ಹರಿದಾಸರು ಹಾಡಿದ ಶ್ಲೋಕಗಳ ಗಮನಿಸಿ “ಹರಿಯ ಬಿಟ್ಟರೆ ಗತಿಯಿಲ್ಲ, ಮಾರುತಿ
ಮರೆತರೆ ಸಾಧನವಿಲ್ಲ.”, “ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು
ಬೇಡಿ ಹುಚ್ಚಪ್ಪಗಳಿರಾ.”, “ಹರಿಯೇ ಸರ್ವೋತ್ತಮ ಹರಿಯೇ ಪರದೇವತೆ
ಹರಿಯಿಲ್ಲದನ್ಯತ್ರ ದೈವಗಳುಂಟೆ.”, “ಸ್ನಾನವ ಮಾಡಿರೋ ಜ್ಞಾನ
ತೀರ್ಥದಲಿ.”, “ನಾರಾಯಣ ನಿನ್ನ ನಾಮಾಮೃತವನು ಎನ್ನ ನಾಲಿಗೆಯಲಿ
ನಿಲ್ಲಿಸಯ್ಯ.”, “ನಾ ಡೊಂಕಾದರೆ ನಿನ್ನ ನಾಮ ಡೊಂಕೇ ವಿಠ್ಠಲ”.
ಶ್ರೀ
ವಾದಿರಾಜರ ಅಂಭೃಣೀಸೂಕ್ತ ಈ ಸೂಕ್ತದ ಸಾರಾಂಶವನ್ನು ವಿದ್ವಾಂಸರು ಹೀಗೆ ಹೇಳುತ್ತಾರೆ, “ಮಹಾಲಕ್ಷ್ಮಿಯು ಬ್ರಹ್ಮ ರುದ್ರ, ಮೊದಾಲಾದ ಎಲ್ಲಾ
ದೇವತೆಗಳ ಸೃಷ್ಟಿ ಸ್ಥಿತಿ, ಲಯಾದಿಗಳಿಗೆ ಕಾರಣಳೂ ಐಶ್ವರ್ಯಪ್ರದಳೂ
ಆಗಿದ್ದಾಳೆ ; ಅದೇ ರೀತಿ ಜಗತ್ತಿನ ಎಲ್ಲಾ ವ್ಯಾಪಾರಗಳಿಗೆ
ನಿಯಾಮಕಳೂ, ರಾಷ್ಟ್ರಕ್ಕೆ ಅಭಿಮಾನಿಯಾಗಿದ್ದು, ದ್ರವ್ಯಾದಿದಾಯಕಳಾಗಿರುವವಳೂ ಆಕೆಯೇ ; ಮೋಕ್ಷ ಕೊಡುವ
ಸಾಮರ್ಥ್ಯವೂ ಕೂಡ ಲಕ್ಷ್ಮೀದೇವಿಗೆ ಉಂಟು; ಆದರೆ ಮಹಾಲಕ್ಷ್ಮಿಯ ಈ
ಎಲ್ಲಾ ಹಿರಿಮೆಗೂ ಕಾರಣ ಪುರುಷನಾದ ಪರದೇವತೆಯು ಸಾಕ್ಷಾತ್ ನಾರಾಯಣನೇ ಆಗಿದ್ದಾನೆ. ಎಲ್ಲಾ
ಕಾರ್ಯಗಳನ್ನೂ ಮುಖ್ಯವಾಗಿ ಮಾಡುವವನೂ ಸಹ ಅವನೇ, ಮಹಾಲಕ್ಷ್ಮಿಯ
ಶ್ರೀರೂಪ ಭೂರೂಪಗಳಿಗಿಂತಲೂ ಶ್ರೇಷ್ಠನಾಗಿರುವ ಸರ್ವೋತ್ತಮದೇವತೆ ; ಅವನ
ಮಹಿಮೆಗೆ ಪಾರವೇ ಇಲ್ಲ'' ಆಚಾರ್ಯ ಮಾಧ್ವರು ಈ ಸೂಕ್ತದ ಹಿರಿಮೆಯನ್ನು “ಅಖಿಲಕಾಮದಂ
ಹರಿತುಷ್ಠಿದಂ” (ಸಕಲ ಕಾಮನೆಗಳನ್ನು ಈಡೇರಿಸುವಂತಹದ್ದು ಶ್ರೀಹರಿಯ ಪ್ರೀತಿಗೆ ಕಾರಣವಾಗುವಂತದ್ದು
ಎಂಬುದಾಗಿ ಬಣ್ಣಿಸಿದ್ದಾರೆ). ಶ್ರೀರಾಘವೇಂದ್ರಸ್ವಾಮಿಗಳು ಅಂಭೃಣೀಸೂಕ್ತವನ್ನು ಲಕ್ಷ್ಮೀಸೂಕ್ತ ಎಂದು
ಕರೆದಿದ್ದಾರೆ. ಸದಾ ಶ್ರೀಹರಿಯ ಜೊತೆಯಿರುವವಳು ಎನ್ನುತ್ತಾರೆ.
ಅಂಭೃಣೀಸೂಕ್ತ
ಋಕ್ 8 ಹೀಗೆ ಹೇಳುತ್ತದೆ, “ನಾನೇ ಸಕಲಲೋಕಗಳನ್ನು ಹುಟ್ಟಿಸುವವಳಾಗಿ
ವಾಯುವಿನಂತೆ ಜಗತ್ತನ್ನು ಪರಿಮಳ ಭರಿತವನ್ನಾಗಿಸುವೆನು. ನನಗೆ ಕಾರಣ ಪುರುಷನಾದ ಆ ಶ್ರೀಹರಿಯು ತ್ರಿಲೋಕಕ್ಕಿಂತ
ಮೇಲಿನವನು. ನಾನು ಮಹಿಮೆಯಲ್ಲಿ ಈ ರೀತಿಯಾಗಿ ಪರಿಮಿತಿಯನ್ನು ಹೊಂದಿದವಳು”.
[1] ಶ್ರೀ ನಾರದೀಯ ಮಹಾಪುರಾಣದಿಂದ ಸಂಗ್ರಹ
[2] ಶ್ರೀ ನಾರದೀಯ ಮಹಾಪುರಾಣದಿಂದ ಸಂಗ್ರಹ
[3] ಒಬ್ಬ ಋಷಿ, ಎಲ್ಲಾ ಮಾನವ ಉತ್ಸಾಹ
ಮತ್ತು ಭಾವನೆಗಳಿಂದ ದೂರ ಉಳಿಯಲು ಮತ್ತು ಶಾಶ್ವತ ವಿಮೋಚನೆಗಾಗಿ ತನ್ನನ್ನು ತಾನು
ಸಿದ್ಧಪಡಿಸಿಕೊಳ್ಳುತ್ತಾನೆ
[4] ಆಕ್ಷರ ಅರ್ಥ
[5] ಇಡಾ ಪಿಂಗಳ ಸುಷುಮ್ನ ನಾಡಿ ದೇಹದಲ್ಲಿ ಇರುತ್ತದೆ. ಅದರೊಳಗೆ ಗಂಗಾ, ಯಮುನಾ, ಸರಸ್ವತಿ ಎಂಬ ನದಿಗಳು ಇರುತ್ತವೆಂದು ಅನುಸಂಧಾನ ಮಾಡಿಕೊಂಡು ನಾಡಿ
ಸ್ನಾನ ಮಾಡಬೇಕು.