ಜ್ಞಾನ ಮತ್ತು
ಆರೋಗ್ಯಕ್ಕೆ ಮೂಲ ಕುಂಡಲಿನಿ ವಿದ್ಯೆ
ಕುಂಡಲಿನಿ ಜಾಗ್ರತವಾಗುವವರೆಗೆ ಆಧ್ಯಾತ್ಮಿಕ ಶಕ್ತಿ ಜಾಗ್ರತವಾಗುವುದಿಲ್ಲ.
ಕುಂಡಲಿನಿ ಮೂಲಾಧಾರದಲ್ಲಿ ಸುಪ್ತಾವಸ್ಥೆ ಯಲ್ಲಿರುವುದು. ಅದನ್ನು ಎಚ್ಚರಿಸಿದಾಗ ಸುಷುಮ್ನಾ ಮೂಲಕ
ಸ್ವಾಧಿಷ್ಠಾನ ಮಣಿಪುರ ಮುಂತಾದ ಚಕ್ರಗಳಮೂಲಕ ಸಹಸ್ರಾರಕ್ಕೆ ಹೋಗುವುದು. ದೇವರ ಸಾಕ್ಷಾತ್ಕಾರದ
ಒಂದು ಚಿಹ್ನೆ ಏನೆಂದರೆ, ಮಹಾವಾಯು ತಕ್ಷಣವೇ ಜಾಗ್ರತವಾಗಿ ಶಿರಸ್ಸಿನ ಕಡೆಗೆ ಹೋಗುವುದು.
-- ಶ್ರೀ ರಾಮಕೃಷ್ಣ ಪರಮಹಂಸ
ಯಡತೊರೆ
ಸುಬ್ಬರಾಯಶರ್ಮ ಬರೆದಿರುವ ಲಲಿತಾ ಸಹಸ್ರನಾಮ ರಹಸ್ಯ ಪುಸ್ತಕದಲ್ಲಿ ಕುಂಡಲಿನಿ ಬಗ್ಗೆ ವಿವರಣೆ
ಇದೆ, "87 ನೇ ನಾಮ "ಶಕ್ತಿ
ಕೂಟೈಕತಾಪನ್ನ ಕಟ್ಯಧೋಭಾಗಧಾರಿಣೈ ನಮಃ" ಇದನ್ನು ಶರ್ಮರು ಸೊಂಟದ ಕೆಳಕ್ಕೆ ಶಕ್ತಿಕೂಟ
ಸ್ವರೂಪಿಣಿಯೇ ಎಂದು ಅನುವಾದಿಸಿದ್ದಾರೆ. ಈ ಸ್ಥಳವನ್ನೇ ವೀರಭ್ರಹ್ಮೇಂದ್ರ ಸ್ವಾಮಿಗಳು ಸುಷುಮ್ನಾ
ಇಡಾ ಪಿಂಗಳ ಸಂಪರ್ಕ ಇರುವ ತ್ರಿಕೂಟ ಎನ್ನುತ್ತಾರೆ. 99 ರಲ್ಲಿ "ಮೂಲಾಧಾರೈಕ ನಿಲಯಾಯೈನಮಃ"
ಎಂದರೆ ಮೂಲಾಧಾರ ಚಕ್ರದಲ್ಲಿ ಪ್ರಧಾನವಾಗಿ ನೆಲಸಿರುವವಳು, ಅಂದರೆ
ಮೂಲಾಧಾರ ಚಕ್ರದಲ್ಲಿರುವ ಶ್ರೀ ಕುಂಡಲಿನೀ ಶಕ್ತಿಯೆ ಶ್ರೀದೇವಿಯು. 100 ರಲ್ಲಿ
ಬ್ರಹ್ಮಗ್ರಂಥಿವಿಭೇದಿನೈ ನಮಃ ಎಂದರೆ ಬ್ರಹ್ಮಗ್ರಂಥಿಯನ್ನು ಭೇದಿಸುವವಳು. ಬ್ರಹ್ಮಗ್ರಂಥಿಯು
ಮೂಲಾಧಾರ ಚಕ್ರದಲ್ಲಿರುವುದು. 101 ರಲ್ಲಿ ಮಣಿಪೂರಾನ್ತರುದಿತಾಯೈನಮಃ ಎಂದರೆ ಮಣಿಪೂರ ಚಕ್ರದಲ್ಲಿ
ಉದಯಿಸುವವಳು. ಮಣಿಪೂರ ಚಕ್ರದಲ್ಲಿ ಉದಯಿಸುವವಳೆಂದು ಹೇಳಿರುವದರ ತತ್ವವೇನೆಂದರೆ ಶ್ರೀ
ಕುಂಡಲಿನಿಯು ಮೂಲಾಧಾರದಿಂದ ಎದ್ದು ಸ್ವಾಧೀಷ್ಟಾನ ಮತ್ತು ಮಣಿಪೂರಕದ ಮುಖೇನ ಅನಾಹತ ಚಕ್ರವನ್ನು
ಸಮೀಪಿಸಿದಾಗ ಓಂಕಾರನಾದೋತ್ಪತ್ತಿಯಾಗುವುದೇ ಉದಯಿಸುವವಳೆಂದು ಹೇಳಿರುವುದರ ತತ್ವವಾಗಿದೆ.
ಎನ್ನುತ್ತಾರೆ ಶರ್ಮರು. 102ರಲ್ಲಿ ವಿಷ್ಣುಗ್ರಂಥಿ-ವಿಭೇದಿನೈನಮಃ ಎಂದರೆ ವಿಷ್ಣು ಗ್ರಂಥಿಯನ್ನು
ಭೇದಿಸುವವಳು. ವಿಷ್ಣುಗ್ರಂಥಿಯು ಆನಾಹತಚಕ್ರದಲ್ಲಿರುವುದು. 103 ರಲ್ಲಿ
ಆಜ್ಞಾಚಕ್ರಾನ್ತರಾಳ-ಸ್ಥಾಯೈನಮಃ ಎಂದರೆ ಆಜ್ಞಾ ಚಕ್ರದೊಳಗಡೆ ಇರುವವಳು. 105 ರಲ್ಲಿ
ರುದ್ರಗ್ರನ್ಥಿವಿಭೇದಿನೈನಮಃ ಎಂದರೆ ರುದ್ರಗ್ರನ್ಥಿಯನ್ನು ಭೇದಿಸುವವಳು. ರುದ್ರಗ್ರನ್ಥಿಯು ಆಜ್ಞಾಚಕ್ರದಲ್ಲಿರುವುದು.
106 ರಲ್ಲಿ ಸಹಸ್ರಾರಾ-ಮ್ಬುಜಾರೂಢಾಯೈನಮಃ ಎಂದರೆ ಸಹಸ್ರಾರ ಕಮಲವನ್ನು ಹತ್ತಿ ನೆಲೆಸಿರುವವಳು.
ಶ್ರೀ ಕುಂಡಲಿನೀ ಶಕ್ತಿಯು ಮೂಲಾಧಾರದಿಂದ ಎದ್ದು ಮೇಲಿನ ನಾಮಗಳಲ್ಲಿ ತಿಳಿಸಿರುವ ಬ್ರಹ್ಮ,
ವಿಷ್ಣು, ರುದ್ರ ಗ್ರನ್ಥಿಗಳನ್ನು ಭೇದಿಸಿಕೊಂಡು
ಶಿರಸ್ಸಿನಲ್ಲಿರುವ ಸಹಸ್ರಾರಕಮಲವನ್ನು ಸೇರುವುದೇ ಹತ್ತಿ ನೆಲೆಸಿರುವವಳು ಎಂಬುದರ ತತ್ವ. 107
ರಲ್ಲಿ ತಟಿಲ್ಲತಾ ಸಮರುಚ್ಯೈನಮಃ ಎಂದರೆ ಮಿಂಚಿನೋಪಾದಿಯಲ್ಲಿ ಪ್ರಕಾಶವುಳ್ಳವಳು.
ವಿದ್ಯುಜ್ಜ್ಯೋತಿ-ಸ್ವರೂಪಳು. ಇದಕ್ಕೆ “ವಿದ್ಯುಲ್ಲೇ ಖೇವ ಭಾಸ್ವರಾ” ಎಂಬ ಶ್ರುತ್ಯಾಧಾರವೂ
ಇರುವುದು. 108 ರಲ್ಲಿ ಷಟ್ಚಕ್ರೋಪರಿ ಸಂಸ್ಥಿತಾಯೈನಮಃ ಎಂದರೆ, ಷಟ್ಟಕ್ರಗಳ ಕಡೆಗೆ ಪೂರ್ತಿಯಾಗಿ ಚಲಿಸಿ ವಾಸಿಸುವವಳು. ಅಂದರೆ ಜೀವಬ್ರಹ್ಮ
ಸಾಕ್ಷಾತ್ಕಾರ ಸ್ವರೂಪವಾಗಿರುವ ಸಾಕ್ಷಾತ್ ಪರಬ್ರಹ್ಮಸ್ವರೂಪಿಣಿಯು. 109 ರಲ್ಲಿ
ಮಹಾಸಕ್ತ್ಯೈನಮಃ ಎಂದರೆ ಮಹಾ ಆಸಕ್ತಿಸ್ಪರೂಪಳು. ಅಂದರೆ ಮೂಲಾಧಾರ ದಿಂದ ಶ್ರೀ ಕುಂಡಲಿನೀ
ಶಕ್ತಿಯನ್ನು ಎಬ್ಬಿಸಿ ಸಹಸ್ರಾರಕ್ಕೆ ಸೇರುವ ತತ್ವವಾದ ಜೀವಬ್ರಹ್ಮರ ಸಾಕ್ಷಾತ್ಕಾರವನ್ನು ಹೊಂದಿ
ಜನನ ಮರಣ ಪ್ರವಾಹದಿಂದ ತಪ್ಪಿಸಿಕ್ಕೊಳ್ಳಬೇಕಾದರೆ ಅತ್ಯಂತ ಪ್ರೀತಿಯಿಂದಲೂ ತೀವ್ರತಮವಾದ
ಮೋಕ್ಷೇಚ್ಚೆಯಿಂದಲೂ ಧ್ಯಾನಾಭ್ಯಾಸದ ಕಾರ್ಯವನ್ನು ಮಾಡಬೇಕೆಂಬುದನ್ನು ಸೂಚಿಸುವುದೇ ಮಹಾ
ಆಸಕ್ತಿಯೆನಿಸುವುದು. ಶ್ರೀದೇವಿಯು ಇಂತಹ ಅಸಕ್ತಿ ಸ್ಪರೂಪಳು. 111 ರಲ್ಲಿ ಬಿಸತನ್ತುತನೀಯಸೈನಮಃ
ಎಂದರೆ ತಾವರೇ ದಂಟಿನಲ್ಲಿರುವ ತಂತುವಿನಂತೆ ಬಹು ಸೂಕ್ಷ್ಮಸ್ವರೂಪಳು. ಇದಕ್ಕೆ “ ಶಕ್ತಿಃ
ಕುಂಡಲಿನಿ: ನಾಮು ಬಿಸತನ್ತು ನಿಭಾಶುಭಾ” ಎಂಬ ಶ್ರುತ್ಯಾ-ಧಾರವಿರುವುದು. ಈಕೆಯನ್ನು
ಜ್ಞಾನಮುದ್ರಾಯಿನೈ ನಮಃ,(ಮುದ್ರೆಗಳ ಜ್ಞಾನ) ಜ್ಞಾನಗಮ್ಯಾಯೈ ನಮಃ (ಜ್ಞಾನದಿಂದ ದೊರಕುವವಳು)
ಜ್ಞಾನಜ್ಞೇಯಸ್ವರೂಪಿಣ್ಣ್ಯೈ ನಮಃ (ಜ್ಞಾನ ತಿಳಿಯುವಿಕೆ) ಎಂಬ ಆಕೆಯ ನಾಮಾವು ಜ್ಞಾನವನ್ನು ಕೊಡುವ
ಶಕ್ತಿ ಎಂದು ತೋರಿಸುತ್ತದೆ. ದಶಮುದ್ರಾ ಸಮಾರಾಧ್ಯಾಯೈ ಎಂಬ ಹೆಸರು ಬೆರಳುಗಳಿಂದ ಹತ್ತು
ಮುದ್ರೆಯಿಂದ ಅರ್ಚಿಸಲ್ಪಡುವವಳು ಎಂಬುದಾಗಿದೆ. ಚಿತ್ಕಲಾಯೈನಮಃ ಎಂದರೆ ಜ್ಞಾನ
ವಿದ್ಯಾಸ್ವರೂಪಿಣಿಯು. ಇಚ್ಚಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ಸ್ವರೂಪಿಣೈನಮಃ. ವಿದ್ಯ ಅವಿದ್ಯಾ ಸ್ವರೂಪಿಣೈ ನಮಃ ವಿದ್ಯೆ ಎಂದರೆ
ಅಕ್ಷರ ವಿದ್ಯೆ ಅದುವೇ ಪರ ವಿದ್ಯೆ. ಅವಿದ್ಯೆ ಎಂದರೆ ಅಪರಾ ವಿದ್ಯೆ ಅದುವೇ ವೇದ ಗ್ರಂಥಗಳಲ್ಲಿನ
ವಿದ್ಯೆ ಲೋಕ ತಿಳುವಳಿಕೆ ನೀಡುವ ವಿದ್ಯೆ ಇತ್ಯಾದಿ. ತುಷ್ಟ್ಯೈನಮಃ ಎಂದರೆ ಸಂತುಷ್ಟ
ಸ್ವರೂಪಿಣಿಯು- ಯಾವಾಗಲೂ ತೃಪ್ತಿಯಾಗಿಯೂ, ಸಂತೋಷವುಳ್ಳ- ವಳಾಗಿಯೂ
ಇರುವವಳು. ಮಾನಸಿಕ ಆರೋಗ್ಯವೇ ದೈಹಿಕ ಆರೋಗ್ಯವರ್ದಕ. ಪುಷ್ಟಯಾಯೈನಮಃ ಎಂದರೆ ಪೋಷಕಳು. ಆರೋಗ್ಯ ಧೃಢಕಾಯವನ್ನುಂಟು ಮಾಡುವವಳು, ಸರ್ವವ್ಯಾಪಕಳು. ಇಂತಹ ಆರೋಗ್ಯ ಮತ್ತು ಜ್ಞಾನವನ್ನು ಉಂಟು ಮಾಡುವ ಕುಂಡಲಿನಿ ವಿದ್ಯಾ
ಸ್ವರೂಪವೇ ನಾವು ತಿಳಿಯಬೇಕಿರುವುದು.
ವೈದ್ಯೋ
ನಾರಾಯಣೋ ಹರಿ ಎಂದು ಸರ್ವರಲ್ಲೂ ವೇದ ವಾಕ್ಯವಾಗಿದೆ. ಇದರ ಲೋಕಾ ರೂಡಿ ಅರ್ಥ ವೈದ್ಯನು ನಾರಾಯಣನು
ಹರಿಯು ಆಗಿದ್ದಾನೆ ಎನ್ನುತ್ತಾರೆ. ಇದರ ಅಕ್ಷರ ಅರ್ಥ ಗಮನಿಸಿ "ಔಷದಕ್ಕೆ ಸಂಭಂದಿಸಿದ
ಸಹಾನುಭೂತಿ (ವೈದ್ಯೋ) ಮಿದುಳಿನ ನಾಸಿಕಕ್ಕೆ (ಸುಷುಮ್ನಾ ನಾಡಿ) ಬೆಳಕನ್ನು ನೀಡಲು
ಅವಿಶ್ರಾಂತವಾಗಿ ಜೀವ ಉಸಿರು ಕರೆಯುವುದು (ನಾರಾಯಣೋ) ಚಲಿಸುವ ವೈದ್ಯ (ಹರಿ). ಹಾಗಾಗಿ ಕುಂಡಲಿನಿ
ಯೋಗವು ಆರೋಗ್ಯಕ್ಕೆ ಪೂರಕವೂ ಆಗಿದೆ.
ಕುಂಡಲಿನಿ
ಪ್ರಾಣಾಯಾಮ ನಾರದೀಯ ಮಹಾಪುರಾಣ ಬೋಧನೆ
ಮೂಲಾಧಾರದಿಂದ ಬ್ರಹ್ಮರಂಧ್ರದವರೆಗೆ
ಮೂಲವಿದ್ಯೆಯನ್ನು ಕಲಿಯುವುದು
ಮೂಲಾದಿ
ಬ್ರಹ್ಮರಂಧ್ರಾಂತಂ ಮೂಲವಿದ್ಯಾಂ ವಿಭಾವಯೇತ್ |
ಮೂಲಾಧಾರಾದಧೋಭಾಗೇ
ವರ್ತುಲಂ ವಾಯುಮಂಡಲಂ ॥ ೬೭
ಶ್ರೀ ನಾರದೀಯ
ಪುರಾಣ ಪೂರ್ವಭಾಗ, ಅಧ್ಯಾಯ 65
ಶ್ಲೋಕ 67 - 75
ಭಾವಾರ್ಥ:- ಮೂಲಾಧಾರದಿಂದ ಬ್ರಹ್ಮರಂಧ್ರದವರೆಗೆ ಮೂಲವಿದ್ಯೆಯನ್ನು ಪರಿಭಾವನೆಮಾಡಬೇಕು. ಮೂಲಾಧಾರದ ಕೆಳಭಾಗದಲ್ಲಿ ಗುಂಡಗಿರುವ ವಾಯುಮಂಡಲವಿದೆ.
ವಿವರಣೆ:- ಮೂಲಾಧಾರದ ಕೆಳಭಾಗದಲ್ಲಿ ಪಂಚವಾಯುಗಳ ವಾಯು
ಮಂಡಲವಿದೆ. ಉಸಿರಾಟವನ್ನು ಅಜಪ ಮಂತ್ರದ ಮೂಲಕ ಅಂತಹ ಪಂಚವಾಯು ಸಮ್ಮಿಲನದ ಬಾಗದವರೆಗೆ
ತೆಗೆದುಕೊಂಡು ಹೋಗಿ ಮೂಲಾಧಾರದಲ್ಲಿ ಇರುವ ಶಕ್ತಿಯನ್ನು ಹಂ ಎಂಬ ಮಾನಸಿಕ ಉಚ್ಚಾರಣೆಯೊಂದಿಗೆ
ಜಾಗೃತಿ ಗೊಳಿಸಬೇಕು. ಮೂಲಾಧಾರದಲ್ಲಿ ನಾಡಿಯಾದ ಸುಷುಮ್ನಾ ಇಡಾ ಪಿಂಗಳ ಸಂಪರ್ಕ ಇರುತ್ತೆ ಇದನ್ನು
ತ್ರಿಕೂಟ ಎನ್ನುತ್ತಾರೆ. ಅಂತಹ ಮುಚ್ಚಿರುವ ಸುಷುಮ್ನಾ ತೆರೆದು ಮೂಲವಿದ್ಯೆಯಾದ ಉಸಿರಾಟ
ವಿದ್ಯೆಯನ್ನು ಮೂಲಾಧಾರದಿಂದ ಬ್ರಹ್ಮರಂಧ್ರದವರೆಗೆ ಚಾಲನೆ ನೀಡುವುದೇ ಕುಂಡಲಿನಿ ಪ್ರಾಣಾಯಾಮ
ವಿದ್ಯೆ
ಹಂ ಎಂಬ ಮಾನಸಿಕ ಶಬ್ದ ಮಂತ್ರದಿಂದ
ಸುಷುಮ್ನಾ ನಾಡಿಯನ್ನು ತೆರೆಯುವುದು
ತತ್ರ
ಸ್ಥವಾಯುಬೀಜೋತ್ಥವಾಯುನಾ ಚ ತದೂರ್ಧ್ವಕಂ |
ತ್ರಿಕೋಣಂ
ಮಂಡಲಂ ವಹ್ನೇಸ್ತತ್ರಸ್ಥಾದ್ವಹ್ನಿ ಬೀಜತಃ || ೬೮
ಉತ್ಪನ್ನೇನಾಗ್ನಿನಾ
ಮೂಲಾಧಾರಾವಸ್ಥಿತವಿಗ್ರಹಾಂ ।
ಪ್ರಸುಪ್ತಭುಜಗಾಕಾರಾಂ
ಸ್ವಯಂಭೂಲಿಂಗವೇಷ್ಠಿ ನೀಂ || 69
ಬಿಸತಂತುನಿಭಾಂ
ಕೋಟ ವಿದ್ಯುದಾಭಾಂ ತನೀಯಸೀಂ ।
ಕುಲಕುಂಡಲಿನೀಂ
ಧ್ಯಾತ್ವಾ ಕೂರ್ಚೇನೋತ್ಥಾಪಯೇಚ್ಚ ತಾಂ ॥ ೭೦
ಭಾವಾರ್ಥ;- ಅಲ್ಲಿರುವ
ವಾಯುಬೀಜದಿಂದ ಹುಟ್ಟಿದ ವಾಯುವಿನಿಂದ ಅದರ ಮೇಲಿರುವ ತ್ರಿಕೋಣಾಕಾರವಾದ ಅಗ್ನಿಮಂಡಲವೂ ಅಲ್ಲಿರುವ
ಅಗ್ನಿ ಬೀಜದಿಂದ ಹುಟ್ಟಿದ ಅಗ್ನಿಯಿಂದ ಮೂಲಾಧಾರದಲ್ಲಿರುವ ವಿಗ್ರಹವುಳ್ಳ, ಮಲಗಿರುವ ಸರ್ಪದ ಆಕಾರವಾಗಿರುವ, ಸ್ವಯಂಭೂಲಿಂಗವನ್ನು ಸುತ್ತಿಕೊಂಡಿರುವ, ಪ್ರಕಾಶಮಾನವಾದ ಕಮಲ
ತಂತು (ಕಮಲದ ನಾಳ) ವಿಗೆ ಸಮಾನವಾದ, ಕೋಟಿ ಮಿಂಚುಗಳಂತೆ ಕಾಂತಿಯುಳ್ಳ, ಸೂಕ್ಷ್ಮವಾದ, ಕುಲಕುಂಡಲಿನೀ ಶಕ್ತಿಯನ್ನು ಧ್ಯಾನಿಸಿ, ಅದನ್ನು 'ಹಂ' ಎಂಬ
ಕೂರ್ಚಬೀಜೋಚ್ಚಾರಣದಿಂದ ಎಬ್ಬಿಸಜೇಕು.
ವಿವರಣೆ:- ಇಲ್ಲಿ ವಾಯು ಬೀಜದಿಂದ ಹುಟ್ಟಿದವಾಯು ಎಂದರೆ
ಉಸಿರಾಟದಿಂದ ಒಳಸೆಳೆದ ವಾಯುವಿನಲ್ಲಿ ನಾಸಾ ಸಂಶೋಧನೆ ಪ್ರಕಾರ ಸುಮಾರು 78% ನಟ್ರೋಜನ್ ಇರುತ್ತದೆ, ಸುಮಾರು 21% ಆಕ್ಸಿಜನ್ ಇರುತ್ತದೆ.
ಇಲ್ಲಿ ಇಂತಹ ವಾಯು ಮೂಲಾಧಾರಕ್ಕೆ ಹೋದಾಗ ಅಲ್ಲಿನ ಉಪಯುಕ್ತ ಜೀವಾಂಶಗಳಾದ ಬ್ಯಾಕ್ಟೀರಿಯಾದಿಂದ
ನೈಟ್ರಿಕ್ ಆಕ್ಸೈಡ್ ಎಂಬ ಅಮೃತದ ವಾಯು ತಯಾರಾಗುತ್ತದೆ. (ಇದನ್ನು ಜಪಾನ್ ಸಂಶೋಧಕರು
ಘೋಷಿಸಿದ್ದಾರೆ ಆದರೆ ಯಾಕೆ ತಯಾರಾಗುತ್ತೆ ಹೇಳಿಲ್ಲ) ಇದೇ ವಾಯು ಬೀಜದಿಂದ ವಾಯು ತಯಾರಿಕೆ ವಿಧಾನ
ಮೇಲಾಗಿ ದೇಹದಲ್ಲಿ ಎಲ್ಲಾ ಜೀವಕೋಶಗಳು ಕಾರ್ಬನ್
ಡೈಯಾಕ್ಸೈಡ್ ಉತ್ಪಾದನೆ ಮಾಡುತ್ತವೆ.
ಇವೆಲ್ಲಾ ವಾಯುಬೀಜದಿಂದಲೇ ಉತ್ಪಾದಿತ ವಾಯು ಆಗಿರುವುದು. ಅಗ್ನಿ ಬೀಜದಿಂದ ಉಂಟಾದ ಅಗ್ನಿ ಎಂದರೆ
ಶಾಖ ಎಂತಾದರೂ ಆಗಬಹುದು, ಆವಿ ಎಂತಾದರೂ ಆಗಬಹುದು, ಆಸಿಡ್ ನಿಂದ ಆಸಿಡ್ ಉತ್ಪಾದನೆ ಎಂತಾದರೂ ಆಗಬಹುದು, ನಮ್ಮ
ದೇಹ ಅನೇಕ ಗ್ರಂಥಿಗಳಿಂದ ಜೀವರಸವನ್ನು ಆಸಿಡ್ ಮಾದರಿಯಲ್ಲಿ ಉತ್ಪಾದಿಸುತ್ತದೆ, ಇಂತಹ ಆಸಿಡ್ ಮಾದರಿಯ ಅಗ್ನಿ ಬೀಜಗಳಿಂದ ಹುಟ್ಟಿರುವ ತ್ರಿಕೋನಾಕಾರದ ಅಗ್ನಿ ಮಂಡಲ
ಮೂಲಾಧಾರದಲ್ಲಿ ಇದೆ ಎನ್ನುವ ವಿವರ ಇದೆ. ಇಲ್ಲಿ ಮೂರು ನಾಡಿಗಳ ತ್ರಿಕೂಟ ಇದೆ, ಇಂತಹ ತ್ರಿಕೂಟದಲ್ಲಿ ದೇಹದ ಎಲ್ಲಾ ಭಾಗದ ಗ್ರಂಥಿಗಳಿಂದ ಉತ್ಪಾದಿತರಸವು ಶೇಖರಣೆಯಾಗುವ
ತ್ರಿಕೋನಾಕಾರದ ಅಗ್ನಿ ಮಂಡಲ ಇರಬಹುದು. ಇಲ್ಲಿ ಉಸಿರಾಟದ ವಾಯು ಪ್ರವೇಶಿಸಿದಾಗ ಅಲ್ಲಿನ ಹೆಚ್ಚಿನ
ಶಾಖದಿಂದ ಜಲದಿಂದ ಮತ್ತು ಅನ್ನ ಆಹಾರಾದಿ ಸಂಸ್ಕರಿತ ಸಾರದಿಂದ ಉತ್ಪಾದನೆಯಾಗುವುದೇ ಕುಂಡಲಿನಿ
ಶಕ್ತಿ ಅಂತಹ ಶಕ್ತಿಯನ್ನು ಹಂ ಎಂಬ ಅಜಪ ಮಂತ್ರದಿಂದ ಸುಷುಮ್ನಾ ತೆರೆದು ಆದರಲ್ಲಿ ವಿವಿದ
ಚಕ್ರಗಳಿಗೆ ಮತ್ತು ಅಂತಹ ಚಕ್ರಗಳಲ್ಲಿನ ವಿವಿದ ಸಂಪರ್ಕಿತ ಲೆಕ್ಕವಿಲ್ಲದ ನಾಡಿಗಳಿಗೆ ಹರಿಸುವುದೇ
ಕುಂಡಲಿನಿ ಶಕ್ತಿ ಅರ್ಥಾತ್ ಆತ್ಮ ಶಕ್ತಿ ಅರ್ಥಾತ್ ಸರಸ್ಪತಿ ನದಿ.
ಷಟ್ಚಕ್ರ ಭೇದನಾ ವಿಧಾನದಲ್ಲಿ ಸೃಷ್ಟಿಕರ್ತ ಅಮೃತ ವಾಯು ತುಂಬಿ
ಹರಿಯುವುದು
ಸುಷುಮ್ನಾ
ವರ್ತ್ಮನಾ ತಾಂ ಚ ಷಟ್ಚಕ್ರಕ್ರಮಭೇದಿನೀಂ ।
ಗುರೂಪದಿಷ್ಟವಿಧಿನಾ
ಬ್ರಹ್ಮರಂದ್ರಂ ನಯೇತ್ಸುಧೀಃ || 71
ಭಾವಾರ್ಥ:- ಜ್ಞಾನಿಯು ಗುರುಗಳು ಉಪದೇಶಮಾಡಿದ ಪ್ರಕಾರ ಷಟ್ಚಕ್ರ ಕ್ರಮವನ್ನು ಭೇದಿಸುವಂತಹ ಆ
ಕುಂಡಿಲಿನಿಯನ್ನು 'ಸುಷುಮ್ನಾ' ನಾಡಿಯ ಮಾರ್ಗವಾಗಿ
ಬ್ರಹ್ಮರಂಧ್ರಕ್ಕೆ ತುಂಬಿ ಹರಿಯುವ ಹಾಗೆ ಒಯ್ಯಬೇಕು.
ವಿವರಣೆ:- ಕುಂಡಲಿನಿ ಎಂದರೆ ಅಕ್ಷರಶಃ ಅರ್ಥ
"ಜಲಾಂತರ್ಗಾಮಿ ನೀರು ಮತ್ತು ಬೆಂಕಿಯ ಮನೆಯಿಂದ ವಾಯುವನ್ನು ಹಿಡಿತಕ್ಕೆ ಕರೆದು, ಒಬ್ಬ ಸೃಷ್ಟಿಕರ್ತ ಮಿದುಳಿನ ನಾಸಿಕಕ್ಕೆ
(ಸುಷುಮ್ನಾ ನಾಡಿಗೆ) ಆಗಮಿಸುತ್ತಾನೆ"
ಎಂದು ಬರುತ್ತದೆ. ಮೂಲಾಧಾರದ ಸುತ್ತ ನೀರಿನ ಮತ್ತು ಬೆಂಕಿಯ ಮನೆ ಇದೆ ಅಲ್ಲಿ ವಾಯುವನ್ನು
ಹಿಡಿತಕ್ಕೆ ಕರೆದು 'ಸುಷುಮ್ನಾ' ನಾಡಿಯ
ಮಾರ್ಗವಾಗಿ ಬ್ರಹ್ಮರಂಧ್ರಕ್ಕೆ ತುಂಬಿಹರಿಯುವಹಾಗೆ ಒಯ್ಯಬೇಕು. ಇದರಿಂದ
ಸೃಷ್ಟಿಕರ್ತ ಅಮೃತ ವಾಯು ಸಹಸ್ರಾರಕ್ಕೆ ಬರುತ್ತಾನೆ. ಅಂತಹ ಸೃಷ್ಟಿಕರ್ತ ವಾಯು ಮೂಲಾಧಾರದಲ್ಲಿ
ಉತ್ಪನ್ನನಾಗಿ ಬಾಕಿ ಆರು ಚಕ್ರಗಳನ್ನು ಬೇಧಿಸುತ್ತಾನೆ ಅದುವೇ ಷಟ್ಚಕ್ರ ಭೇದನಾ ಕುಂಡಲಿನಿ
ವಿಧಾನ.
ಇಂದ್ರಿಯಗಳ ನಿರ್ವಾಹಕ ಆತ್ಮನನ್ನು
ಅಮೃತ ವಾಯುವಿನಲ್ಲಿ ಮುಳುಗಿಸಿ
ತತ್ರಸ್ಥಾಮೃತಸಂಮಗ್ನಂ
ಕೃತ್ವಾತ್ಮಾನಂ ವಿಭಾವಯೇತ್ ।
ತತ್ಪ್ರಭಾಪಟಲವ್ಯಾಪ್ತಂ
ವಿಮಲಂ ಚಿನ್ಮಯಂ ಪರಂ || ೭೨
ಭಾವಾರ್ಥ:- ಆತ್ಮನನ್ನು
ಅಲ್ಲಿರುವ ಅಮೃತದಲ್ಲಿ ಮುಳುಗಿಸಿ, ಅದರ ಕಾಂತಿ ಫುಂಜದಿಂದ ವ್ಯಾಪಿಸಲ್ಪಟ್ಟ, ನಿರ್ಮಲ ಮತ್ತು
ಜ್ಞಾನಮಯನೂ ಆದ ಪರಮಾತ್ಮನನ್ನು ಚಿಂತಿಸಬೇಕು.
ವಿವರಣೆ:- ಇಂದ್ರಿಯಗಳ ನಿರ್ವಾಹಕನೇ ನಮ್ಮಲ್ಲಿ ಇರುವ ಆತ್ಮ.
ಅಂತಹ ಆತ್ಮನು ನಮ್ಮ ಮಿದುಳಿನಲ್ಲೇ ಇದ್ದಾನೆ ಅವನನ್ನು ಅಮೃತ ವಾಯು ಸರಸ್ಪತಿ ದೇವಿ ನದಿಯಿಂದ
ಮುಳುಗಿಸಿದಾಗ ಅಲ್ಲಿನ ಜೀವಕೋಶಗಳು ಪುನರಾವರ್ತನೆ ಆಗಿ ಶೇಖಡ 100 ಭಾಗ ನಿಮ್ಮ ಮಿದುಳು ಕಾರ್ಯ
ಪ್ರವೃತ್ತವಾಗುತ್ತದೆ,
ಜ್ಞಾನವೂ ಅಪಾರವಾಗುತ್ತದೆ ಅಂತಹ ವ್ಯಕ್ತಿಯು ಕಾಲಜ್ಞಾನಿಯಾಗುತ್ತಾನೆ. ಅಂತಹ ವ್ಯಕ್ತಿಯು
ಅಪಾರವಾದ ಜ್ಞಾನಶಕ್ತಿಯಿಂದ ಅಹಂ ಬ್ರಹ್ಮಾಸ್ಮಿ ಎಂದೆನಿಸಿಕೊಳ್ಳುತ್ತಾನೆ. ಅಂತಹ ಪರಮಾತ್ಮ
ಸ್ವರೂಪದ ಬಗ್ಗೆ ಚಿಂತನೆ ಇರಬೇಕು ಅದನ್ನು ಹೊಂದಬೇಕು.
ಪುನಸ್ತಾಂ ಸ್ವ
ಸ್ಥಲಂ ನೀತ್ವಾ ಹೃದಿ ದೇವಂ ವಿಚಿಂತಯನ್ |
ದೃಷ್ಟ್ವಾ ಚ
ಮಾನಸೈರ್ದ್ರವ್ಯೈಃ ಪ್ರಾರ್ಥಯೇನ್ಮನುನಾ ಮುನಿಂ ॥
೭೩
ಭಾವಾರ್ಥ:- ಆ ಕುಂಡಿಲಿನಿಯನ್ನು ಪುನಃ ಅದರ ಸ್ಥಾನದಲ್ಲಿ ಹೊಂದಿಸಿ, ಮನಸ್ಸಿನಲ್ಲಿ ದೇವರನ್ನು ಚಿಂತಿಸಿ ಮಾನಸಿಕ ವಾಸನಾಮಯ ದ್ರವ್ಯಗಳಿಂದ
ಸಾಕ್ಷಾತ್ತಾಗಿ ನೋಡಿ, ಮುಂದಿನ ಮಂತ್ರ ದಿಂದ ಪ್ರಾರ್ಥಿಸಬೇಕು.
ವಿವರಣೆ:- ಕುಂಡಲಿನಿ ಎಂದರೆ ಅಕ್ಷರಶಃ ಅರ್ಥ ಜಲಾಂತರ್ಗಾಮಿ
ನೀರು ಮತ್ತು ಬೆಂಕಿಯ ಮನೆಯಿಂದ ವಾಯುವನ್ನು ಹಿಡಿತಕ್ಕೆ ಕರೆದು, ಒಬ್ಬ ಸೃಷ್ಟಿಕರ್ತ ಮಿದುಳಿನ ನಾಸಿಕಕ್ಕೆ
ಆಗಮಿಸುತ್ತಾನೆ, ಎಂದಾಗುವಾಗ ಅಂತಹ ಕುಂಡಲಿನಿಯನ್ನು ಅದರ ಸ್ಥಾನದಲ್ಲಿ
ಹೊಂದಿಸಿ ಎಂದರೆ ಸುಷುಮ್ನಾ ನಾಡಿಯ ಸಂಪರ್ಕದಲ್ಲಿ ಇರುವ ಅನೇಕ ನಾಡಿಗಳು ಅದರಲ್ಲಿ ನೆಲೆಗೊಳಿಸಿ
ಎಂದರ್ಥ. ಕುಂಡಲಿನಿ ಚಕ್ರ ಎಂಬುದಾಗಿಯೂ ಏಳು ಚಕ್ರಗಳನ್ನು ಕರೆಯಲಾಗುತ್ತೆ ಇಲ್ಲಿ ಚಕ್ರ ಎಂದರೆ
ಅನೇಕ ನಾಡಿಗಳ ಸಂಪರ್ಕ ಇರುವ ಕೇಂದ್ರ. ಚಕ್ರ ಎಂದರೆ ಅಕ್ಷರಶಃ ಅರ್ಥ "ನೀರು ಬೆಂಕಿಯನ್ನು (ಆವಿಯನ್ನು) ಅತ್ತಿಂದಿತ್ತ
(ಸುಷುಮ್ನಾ ನಾಡಿಯಲ್ಲಿ) ಚಲಿಸುವುದು" ಏಳು ಚಕ್ರಗಳಲ್ಲಿ ಆವಿ ರೂಪದ ಅಮೃತವು ನಾಡಿಗಳಲ್ಲಿ
ಚಾಲನೆ ಮಾಡುವುದಕ್ಕಾಗಿದೆ. ಇಲ್ಲಿ ದೈವ
ಸಾಕ್ಷಾತ್ಕಾರದ ವಿಧಾನ ಸರಸ್ಪತಿ ನದಿಯನ್ನು ಸಹಸ್ರಾರದಲ್ಲಿ ನೆಲೆಸುವಂತೆ ಮಾಡಿ ದೇಹದಲ್ಲಿ
ಉಂಟಾಗುವ ಬದಲಾವಣೆಯನ್ನು ಮಾನಸಿಕ ವಾಸನೆಯ ದ್ರವ್ಯಗಳಲ್ಲಿ ದೇವರ (ದೇವ ಎಂದರೆ ಅಕ್ಷರಶಃ ಅರ್ಥ “ರಕ್ಷಿಸಲು
ಶಕ್ತಿಯುತವಾದುದ್ದು”) ಸಾಕ್ಷಾತ್ಕರಿಸಿ ಕೊಳ್ಳಬಹುದು, ಅರ್ಥಾತ್
ರಕ್ಷಿಸಲು ಶಕ್ತಿಯುತವಾದ ಅಮೃತ ಶಕ್ತಿಯನ್ನು ಅನುಭವಿಸಬಹುದು.
ಜ್ಞಾನ ಬೆಳಕನ್ನು ರಕ್ಷಿಸುವ ಕಾರ್ಯದಲ್ಲಿ ದೈವ ಹೆಸರಿನಲ್ಲೇ
ರಹಸ್ಯ
ವಿಷ್ಣೋರಿತಿ
ಸ್ಥಲೇ ವಿಪ್ರ ಕಾರ್ಯ ಊಹೋನ್ಯ ದೈವತೇ ।
ತತಃ
ಕುರ್ಯಾತ್ಸರ್ವಸಿಧ್ಯೈ ತ್ವಜಪಾಯಾ ನಿವೇದನಂ ॥ ೭೫
ಭಾವಾರ್ಥ:- ವಿಪ್ರನೇ! ಈ
ಮಂತ್ರದಲ್ಲಿ ವಿಷ್ಣು ಎಂಬುದಕ್ಕೆ ಬದಲಾಗಿ ಇತರ ದೇವತೆಗಳ ಹೆಸರನ್ನು ಊಹೆಮಾಡಿ ಅನ್ಯದೇವತೆಗಳನ್ನೂ
ಹೀಗೆಯೇ ಪ್ರಾರ್ಥಿಸಬೇಕು. ಅನಂತರ ಸರ್ವಸಿದ್ಧಿ ಗೋಸ್ಕರ 'ಅಜಪಾ' ಎಂದರೆ ಹಂಸ ಗಾಯತ್ರೀ ಮಂತ್ರವನ್ನು ನಿವೇದನೆಮಾಡಬೇಕು.
ವಿವರಣೆ:- ಅಕ್ಷರಶಃ ವಿಷ್ಣು ಎಂದರೆ "ಗರ್ಭದಲ್ಲಿನ
ಹಿರಿಮೆಯನ್ನು ಮಿದುಳಿನ ನಾಸಿಕಕ್ಕೆ ಕರೆದು ನಿರ್ದೇಶಿಸುವುದು", ಅಕ್ಷರಶಃ ವಿಪ್ರ ಎಂದರೆ "ಹೊಳಪನ್ನು
ರಕ್ಷಿಸುವ ಶ್ರೇಷ್ಠತೆ". ಹೊಳಪನ್ನು
ರಕ್ಷಿಸುವ ಶ್ರೇಷ್ಠತೆ ಕಾರ್ಯದಲ್ಲಿ ಅನ್ಯ ದೈವ ಹೆಸರಿನಲ್ಲೂ ಗೋಪ್ಯ ಸಂದೇಶ ಇದೆ ಎನ್ನುವ ಬೋಧನೆ
ಇಲ್ಲಿ ಅಡಗಿದೆ.
ವಿವರಣೆ:- ಜೀವನು ಯಾವಾಗಲೂ ಅಹೋರಾತ್ರಿಗಳಲ್ಲಿ ಇಪ್ಪತ್ತೊಂದು
ಸಾವಿರದ ಆರುನೂರು 'ಅಜಪಾ'
ಎಂಬ ಗಾಯತ್ರಿಯನ್ನು (ಹಂಸ) ಜಪಿಸುತ್ತಾನೆ.
ಆ ಮಂತ್ರಕ್ಕೆ
ಹಂಸನು ಋಷಿಯು ; ಗಾಯತ್ರೀ ಛಂದಸ್ಸು, ಶ್ರೇಷ್ಠನಾದ
ಹಂಸನೇ ದೇವತೆಯು; ಮೊದಲು ಕೊನೆಗಳಲ್ಲಿ ಬೀಜ ಮತ್ತು ಶಕ್ತಿಗಳಿವೆಯೆಂದು
ಉಕ್ತವಾಗಿದೆ. ಅನಂತರ ಷಡಂಗನ್ಯಾಸವನ್ನು ಮಾಡಬೇಕು. ಕ್ರಮವಾಗಿ ಸೂರ್ಯ, ಸೋಮ, ನಿರಂಜನ,
ನಿರಾಭಾಸ, ಧರ್ಮ ಮತ್ತು ಜ್ಞಾನ ಎಂಬಿವುಗಳನ್ನು
ನಮಃಸ್ವಾಹೇತ್ಯಾದಿ ಜಾತಿಗಳಿಂದ ಸಹಿತವಾದ, ಆದಿಯಲ್ಲಿ ಹಂಸಪದ, ಆಮೇಲೆ 'ಆತ್ಮನೇ' ಎಂಬ ಪದ ಎಂದರೆ
'ಹಂಸಾತ್ಮನೇ' ಎಂಬ ಪದವನ್ನೂ ಸಂಯೋಜನೆಮಾಡಿ,
"ಹಂಸಾತ್ಮನೇ ನಿರಂಜನಾಯ ಹೃದಯಾಯ ನಮಃ, ಹಂಸಾತ್ಮನೇ
ನಿರಾಭಾಸಾಯ ಶಿರಸೇ ಸ್ವಾಹಾ” ಮುಂತಾದರೀತಿಯಿಂದ ಸಾಧಕವರ್ಯನು
ಷಡಂಗಗಳಲ್ಲಿ ನಿಯೋಜನೆಮಾಡಿ ನ್ಯಾಸಮಾಡಬೇಕು. ಸೂರ್ಯನಿಗೆ ಸಮಾನವಾದ
ತೇಜಸ್ಸುಳ್ಳ ಹಕಾರವು ಬಾಹ್ಯದಲ್ಲಿ ಸಂಬದ್ಧವಾಗುವುದು. ಸಕಾರವೂ
ಅಂತಹುದೇ ಆಗಿ ಪ್ರವಿಷ್ಟವಾದರೆ ಧ್ಯಾನವೆಂದು ಉಕ್ತವಾಗಿದೆ.[1]
ಐದು ವಾಯುಗಳು ಜೀವನನ್ನು
ಸುತ್ತಿಕೊಂಡಿರುತ್ತವೆ
ಪ್ರಾಣಾತ್ಪ್ರೀಣಯತೇ
ಪ್ರಾಣೀ ವ್ಯಾನಾದ್ವ್ಯಾಯಚ್ಛತೇ ತಥಾ ॥ ೭೯
ಗಚ್ಛತ್ಯಪಾನೋsಧಶ್ಚೈವ ಸಮಾನೋ ಹೃದ್ಯ ವಸ್ಥಿ ತಃ |
ಉದಾನಾದುಚ್ಛ್ವಸಿತೀತಿ
ಪಂಚ ಭೇದಾಚ್ಚ ಭಾಷತೇ ॥ ೮೦
ಇತ್ಯೇತೇ ವಾಯವಃ
ಪಂಚ ನೇಷ್ಟಯಂತೀಹ ದೇಹಿನಂ ।
ಭೂಮೇರ್ಗಂಧಗುಣಾನ್ವೇತ್ತಿ
ರಸಂಚಾದ್ಭ್ಯಃ ಶರೀರವಾನ್ ॥ ೮೧
ಶ್ರೀ ನಾರದೀಯ
ಪುರಾಣ ಪೂರ್ವಭಾಗ - ಅಧ್ಯಾಯ 42 ಶ್ಲೋಕ
79 - 81
ಭಾವಾರ್ಥ:- ಪ್ರಾಣಿಯು ಪ್ರಾಣವಾಯುವಿನಿಂದ ಸಂತುಷ್ಟನಾಗುವನು. ವ್ಯಾನವಾಯುವಿನಿಂದ ವ್ಯಾಯಾಮವನ್ನು ಹೊಂದುವನು. ಅಪಾನವಾಯುವು ಅಧೋದ್ವಾರದಲ್ಲಿ ಹೋಗುವುದು. ಹೃದಯದಲ್ಲಿರುವುದು
ಸಮಾನವು. ಉದಾನದಿಂದ ಶ್ವಾಸವನ್ನು ಸ್ವೀಕರಿಸುವನು. ಹೀಗೆ ಕಾರ್ಯಭೇದದಿಂದ ವಾಯುವು ಐದು ವಿಧವಾಗಿ ವ್ಯವಹರಿಸಲ್ಪಡುತ್ತದೆ. ಈ ಐದು ವಾಯುಗಳು ಜೀವನನ್ನು ಸುತ್ತಿಕೊಂಡಿರುತ್ತವೆ. ಶರೀರಿಯು
ಭೂಮಿಯಿಂದ ಗಂಧವನ್ನೂ ಜಲದಿಂದ ರಸವನ್ನೂ ಗ್ರಹಿಸುತ್ತಾನೆ.
ವಿವರಣೆ
ನಾರದೀಯ ಪುರಾಣದಿಂದ:-
ಮಹಾತೇಜಸ್ವಿಯಾದ ಆ ಬ್ರಹ್ಮನ ಪಂಚಧಾತುಗಳಲ್ಲಿ ಮೂಳೆಯ ಸಮೂಹಗಳೇ ಪರ್ವತಗಳು, ಕೊಬ್ಬು ಮತ್ತು ಮಾಂಸಗಳು ಪೃಥಿವಿಯು,
ರಕ್ತವೇ ಸಮುದ್ರವು, ಹೊಟ್ಟೆಯು ಆಕಾಶವು, ನಿಶ್ವಾಸವೇ ವಾಯುವು, ಮುಖವೇ ತೇಜಸ್ಸು, ನಾಡಿಗಳೇ ನದಿಗಳೂ ಆದುವು. ಚೇಷ್ಟೆಯಿಂದ ಸಹಿತವಾದ ವಾಯು,
ಇಂದ್ರಿಯಯುಕ್ತವಾದ ಆಕಾಶ, ಆವಿನಿಮಿತ್ತವಾದ ಅಗ್ನಿ,
ದ್ರವವಾದ ನೀರು, ಮತ್ತು ಪೃಥಿವಿಯೂ ಇಲ್ಲಿ ಒಟ್ಟು
ಗೂಡಿದೆ. ಆದುದರಿಂದ ಈ ಶರೀರವು ಪಾಂಚಭೌತಿಕವೆನಿಸುವುದು. ಈ ರೀತಿ ಚರಾಚರಾತ್ಮಕ ಪ್ರಪಂಚವು
ಪಂಚಭೂತಗಳಿಂದ ಯುಕ್ತವಾದ ಶರೀರದಿಂದ ಕೂಡಿರುವುದು. ಕಿವಿಗಳು, ಮೂಗು, ನಾಲಿಗೆ, ತ್ವಕ್ಕು,
(ಚರ್ಮ) ನೇತ್ರ ಈ ಐದೂ ಇಂದ್ರಿಯಗಳೆನಿಸುವುವು.
........................ ಚೇಷ್ಟೆಯಿಂದ ಸಹಿತವಾದ ಶರೀರವುಳ್ಳ, ಸಕಲ ಚರಪ್ರಾಣಿಗಳ ಶರೀರದಲ್ಲಿಯೂ ಐದು ಧಾತುಗಳೂ ಪ್ರತ್ಯೇಕವಾಗಿ ಎಂದರೆ ಒಂದೊಂದೂ ಐದು
ವಿಧವಾಗಿ ವಿಭಾಗಿಸಲ್ಪಡುತ್ತದೆ. ಚರ್ಮ, ಮಾಂಸ,
ಮೂಳೆ, ಕೊಬ್ಬು ಮತ್ತು ಐದನೆಯದಾದ ನರ ಇವುಗಳೇ ಈ
ಪಾರ್ಥಿವ ಶರೀರದಲ್ಲಿನ ಸಂಘಾತವು. ಅಗ್ನಿ ಸಂಬಂಧಿಗಳಾದ ತೇಜಸ್ಸು, ಅಗ್ನಿ, ಕ್ರೋಧ, ಚಕ್ಷುಸ್ಸು (ಕಂಗೊಳಿಸುವುದು),
ಆವಿ ಈ ಐದು ಶರೀರದಲ್ಲಿನ ತೇಜಸ್ಸಂಘಾತವು (ಹೊಳಪಿನ
ಗುಂಪು). ಶ್ರೋತ್ರ,
ಘ್ರಾಣ, ಬಾಯಿ, ಹೃದಯ,
ಕೋಷ್ಠ, ಈ ಐದು ಪ್ರಾಣಿ ಶರೀರದಲ್ಲಿರುವ ಆಕಾಶದಿಂದ
ಸಂಭವಿಸುವ ಪಂಚ ಧಾತುಗಳು. ಶ್ಲೇಷ್ಮ, ಪಿತ್ತ, ಬೆವರು,
ಕೀವು ಮತ್ತು ರಕ್ತ ಇವುಗಳು ಪ್ರಾಣಿಗಳ ಶರೀರದಲ್ಲಿ ನೀರಿನಿಂದ ಆಗುವ ಐದು
ಪರಿಣಾಮಗಳು.
ಪೃಥಿವಿಯ ಗುಣವಾದ ಗಂಧವು ಇಷ್ಟ, ಅನಿಷ್ಟ, ಮಧುರ, ಕಟು, ನಿರ್ಹಾರೀ, ಸಂಹತ, ಸ್ನಿಗ್ಧ,
ರೂಕ್ಷ ಮತ್ತು ವಿಶದ ಎಂಬುದಾಗಿ ಒಂಭತ್ತು ವಿಧವೆಂದು ತಿಳಿಯಬೇಕು. ತೈಜಸೇಂದ್ರಿಯವಾದ ಕಣ್ಣುಗಳಿಂದ ಪ್ರಕಾಶವನ್ನು ಗ್ರಹಿಸುತ್ತಾನೆ. ವಾಯವೀಯೇಂದ್ರಿಯವಾದ ತ್ವಕ್ಕಿನಿಂದ ಸ್ಪರ್ಶವನ್ನು ತಿಳಿಯುವನು. ಶಬ್ದ, ಸ್ಪರ್ಶ, ರೂಪ ಮತ್ತು ರಸ
ಇವುಗಳೂ ಗುಣಗಳು. ರಸಜ್ಞಾನಪ್ರಕಾರವನ್ನು
ಹೇಳುತ್ತೇನೆ. ಅದನ್ನು ಕೇಳು. ಪ್ರಸಿದ್ಧರಾದ
ಋಷಿಗಳಿಂದ ರಸವು ಬಹುವಿಧವೆಂದು ಹೇಳಲ್ಪಟ್ಟಿದೆ.
ಜಲಗುಣವಾದ ರಸವು ಮಧುರ, ಲವಣ, ತಿಕ್ತ, ಕಷಾಯ, ಆಮ್ಲ, ಕಟು (ಸಿಹಿ, ಉಪ್ಪು, ಕಹಿ, ವಗರು ಹುಳಿ ಕಾರ) ಎಂಬುದಾಗಿ
ಆರು ವಿಧವು. ತೇಜಸ್ಸು
ಶಬ್ದ, ಸ್ಪರ್ಶ ಮತ್ತು ರೂಪಗಳೆಂಬ ಮೂರು ಗುಣಗಳುಳ್ಳದು. ತೇಜಸ್ಸು (ಕಣ್ಣು) ರೂಪಗಳನ್ನು
ಗ್ರಹಿಸುತ್ತದೆ. ರೂಪವೂ ಬಹುವಿಧವೆಂದು ಉಕ್ತವಾಗಿದೆ. ತೇಜೋಗುಣವಾದ ರೂಪವು ಹ್ರಸ್ವ,
ದೀರ್ಫ, ಸ್ಥೂಲ, ಚತುರಸ್ರ
(ಚದರ) ಅಣು, ವೃತ್ತ
(ಗುಂಡಗಿರುವುದು) ಶುಕ್ಲ (ಬಿಳಿ)
ಕೃಷ್ಣ (ಕಪ್ಪು) ರಕ್ತ
(ಕೆಂಪು) ನೀಲ, ಪೀತ
(ಹಳದಿ), ಅರುಣ, ಕಠಿಣ,
ಚಿಕ್ಕಣ, ಶ್ಲಕ್ಷ್ಣ, ಪಿಚ್ಛಲ,
ಮೃದು, ದಾರುಣ ಎಂಬುದಾಗಿ ಹದಿನಾರು ವಿಧವೆಂದು
ವಿಭಾಗಿಸಲ್ಪಟ್ಟದೆ. ಅವುಗಳಲ್ಲಿ ಆಕಾಶವು ಒಂದೇ ಗುಣವುಳ್ಳುದು.
ಆ ಗುಣವು ಶಬ್ದವೆಂದು ಉಕ್ತವಾಗಿದೆ. ಆ ಶಬ್ದದ ನಾನಾ ವಿಧವಾದ ವಿಭಾಗವನ್ನು ಹೇಳುವೆನು. ಆಕಾಶದಿಂದುತ್ಪನ್ನವಾದ
ಶಬ್ದವು ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ, ಮತ್ತು ನಿಷಾದ ಎಂಬುದಾಗಿ ಏಳು ವಿಧವೆಂದು ಹೇಳಲ್ಪಟ್ಟಿದೆ. ಸಾಮರ್ಥ್ಯ ವಿಶೇಷದಿಂದ ಪಟಹ ಮುಂತಾದ
ಸಕಲ ವಾದ್ಯಗಳಲ್ಲಿದ್ದಾಗ್ಯೂ ಆಕಾಶದಲ್ಲಿ ಹುಟ್ಟಿದ ಶಬ್ದವು ತಬಲ, ನಗಾರಿ,
ಶಂಖ, ಮೇಘೆ, ರಥ ಇವುಗಳಿಂದ
ಸಂಭವಿಸಿ ಬಹು ರೂಪವನ್ನು ಹೊಂದುತ್ತದೆ.
ಸ್ಪರ್ಶವು ವಾಯುವಿನಲ್ಲಿರುವ ಗುಣವು. ಅದೂ ಬಹುವಿಧವಾಗಿದೆ. ವಾಯುಗುಣವಾದ ಸ್ಪರ್ಶವು ಉಷ್ಣ,
ಶೀತ, ಸುಖ, ದುಃಖ, ಸ್ನಿಗ್ದ, ವಿಶದ, ಖರ, ಮೃದು, ಶ್ಲಕ್ಷ್ಣ, ಲಘು ಮತ್ತು ಗುರುತರ ಎಂಬುದಾಗಿ
ಹನ್ನೊಂದು ವಿಧವು. ಶಬ್ದ ಮತ್ತು ಸ್ಪರ್ಶಗಳೆರಡೂ ವಾಯುಗುಣಗಳೆಂದು
ತಿಳಿಯಬೇಕು. ಶಬ್ದವು
ಆಕಾಶದಿಂದ ಉತ್ಪನ್ನವೆಂದು ಹೇಳುವರು. ತಡೆಯಿಲ್ಲದ ಈ ವಾಯುಗುಣಗಳಿಂದ
ಶಬ್ದವು ಒಂದು ಕಾಲದಲ್ಲಿ ತಿಳಿಯುತ್ತದೆ. ಇನ್ನೊಂದು ಕಾಲದಲ್ಲಿ
ತಿಳಿಯುವುದಿಲ್ಲವಾದ ಕಾರಣ ಅದರ ಗತಿಯು ವಿಷಮವು.
ಧಾತುಗಳು ಆ ಧಾತುಗಳಿಂದಲೇ ಯಾವಾಗಲೂ ತೃಪ್ತಿಹೊಂದುತ್ತವೆ. ಜಲ, ಅಗ್ನಿ, ವಾಯು ಇವುಗಳು ಯಾವಾಗಲೂ
ಪ್ರಾಣಿಗಳ ಶರೀರಗಳಲ್ಲಿ ಜಾಗರೂಕವಾಗಿರುತ್ತವೆ. ಈ ಶರೀರಕ್ಕೆ ಧಾತುಗಳು
ಮೂಲಕಾರಣ. ಅವು ಪ್ರಾಣಗಳಲ್ಲಿ ವ್ಯಾಪಿಸಿರುತ್ತವೆ. ಪಾರ್ಥಿವಧಾತುವಿನಿಂದ ಬಲವನ್ನು ಪಡೆದು ಚೇಷ್ಟೆ (ಕ್ರಿಯೆ; ಚಟುವಟಿಕೆ; ಕಾರ್ಯಕ್ಷಮತೆ;
ನಡವಳಿಕೆ, ಕಾರ್ಯಗಳು) ಮಾಡುವುದು.
ತೇಜಸ್ಸು ಶಿರಸ್ಸನ್ನಾಶ್ರಯಿಸಿ ಶರೀರವನ್ನು ರಕ್ಷಿಸುವುದು. ಪ್ರಾಣವಾಯುವು ಶಿರಸ್ಸು ಅಥವಾ ಆಗ್ನಿಯಲ್ಲಿದ್ದು ತನ್ನ ವ್ಯಾಪಾರವನ್ನು ಮಾಡುತ್ತದೆ. ಅವನೇ ಚೇತನನು. ಅವನೇ ಸಮಸ್ತ ಪ್ರಾಣಿಗಳಿಗೂ ಜೀವನ. ಪುರುಷನು ಅನಾಧಿಯು.
ಮನಸ್ಸು, ಬುದ್ಧಿ, ಅಹಂಕಾರ,
ಭೂತ ಮತ್ತು ವಿಷಯ ಇವೆಲ್ಲವೂ ಅವನೇ ಎಂದರೆ ಅವನ ಅಧೀನವೆಂದು ಭಾವ. ಈ ರೀತಿ ಅವನು ಎಲ್ಲಾ ಶರೀರಗಳಲ್ಲಿಯೂ
ಪ್ರಾಣಗಳನ್ನು ಕೊಟ್ಟು ಕಾಪಾಡುವನು.
ಪೃಷ್ಠ ಭಾಗದಲ್ಲಿ ಸಮಾನವಾಯುವಿನಿಂದ ತನ್ನ
ವ್ಯಾಪಾರವನ್ನು ನಡೆಯಿಸುವನು. ಅಪಾನವಾಯುವು ನಾಭಿಯ ಕೆಳಭಾಗ್ಯ ಗುದಪ್ರದೇಶ ಮತ್ತು ತೇಜಸ್ಸುಗಳನ್ನಾ ಶ್ರಯಿಸಿ ಮೂತ್ರ
ಪುರೀಷಗಳ ವಿಸರ್ಜನೆಯನ್ನು ಮಾಡಿಸುತ್ತದೆ.
ಅಧ್ಯಾತ್ಮಜ್ಞಾನಕುಶಲರು ಪ್ರಯತ್ನ, ಕರ್ಮ,
ನಿಯಮಗಳೆಂಬ ಮೂರರಲ್ಲಿಯೂ ಇರುವ ಒಂದೇ ವಾಯುವನ್ನ ಉದಾನವೆಂದು ಹೇಳುವರು.
ಮನುಷ್ಯರ ದೇಹಗಳಲ್ಲಿ ಸಕಲಸಂಧಿಪ್ರದೇಶಗಳಲ್ಲಿಯೂ ಇರುವ ವಾಯುವನ್ನು ವ್ಯಾನವೆಂದು
ಕರೆಯುತ್ತಾರೆ. ಅಗ್ನಿಯು
ಬಹುಸ್ಥಳಗಳಲ್ಲಿ ವ್ಯಾಪಿಸಿ, ಸಮಾನವಾಯುವಿನಿಂದ ಪ್ರೇರಿತವಾಗಿ
ಬಹುರಸಗಳು ಮತ್ತು ದೋಷಗಳನ್ನು ನಿಯಮಿಸುತ್ತಾ ಅತ್ಯಂತವಾಗಿ ಕೆಲಸಮಾಡುತ್ತದೆ. ಅಗ್ನಿಯು ಅಪಾನ ಪ್ರಾಣವಾಯುಗಳ
ಮಧ್ಯದಲ್ಲಿ ಅವುಗಳಿಂದ ಪ್ರೇರಿತವಾಗಿ, ಉದರದಲ್ಲಿ ನಿಂತು ತಿಂದ
ಆಹಾರವನ್ನು ಚೆನ್ನಾಗಿ ಜೀರ್ಣ ಮಾಡಿಸುತ್ತದೆ.
ಪಾಯುಪರ್ಯಂತವಾಗಿ ಮುಖವು. ಗುದವೆಂಬ ಕೊನೆಯ
ಭಾಗದಲ್ಲಿ ರೇತಸ್ಸುಂಟಾಗುತ್ತದೆ. ಅದರಿಂದ ಆತ್ಮರ ಸಕಲೇಂದ್ರಿಯ
ವ್ಯಾಪಾರಗಳೂ ಸಿದ್ಧಿಸುವುವು. ಪ್ರಾಣವಾಯುಗಳು ಒಟ್ಟಿಗೆ ಸಂಧಿಸುವುದರಿಂದ ಸನ್ನಿಪಾತವುಂಟಾಗುತ್ತದೆ. ಪ್ರಾಣಿಗಳ ದೇಹದಲ್ಲಿ ಅನ್ನವನ್ನು ಜೀರ್ಣಮಾಡಿಸುವ ಊಷ್ಮಾ ಎಂಬ ತೇಜಸ್ಸೇ ಅಗ್ನಿಯೆಂದು
ತಿಳಿಯಬೇಕು. ಅಗ್ನಿವೇಗವನ್ನು ವಹಿಸಿದ ಪ್ರಾಣವು ಗುದದ ಕೊನೆಯ
ಭಾಗದಲ್ಲಿ ತಡೆಯಲ್ಪಡುತ್ತದೆ. ಆ ಪ್ರಾಣವು ಮೇಲಕ್ಕೆ ಬಂದು ಪುನಃ
ಅಗ್ನಿಯನ್ನು ಎಬ್ಬಿಸುತ್ತದೆ. ಶರೀರದ ನಾಭಿಯ ಕೆಳಭಾಗದಲ್ಲಿ ಜೀರ್ಣಿಸಿದ ಪದಾರ್ಥಗಳ ಕೋಶವು, ಮೇಲ್ಭಾಗದಲ್ಲಿ
ಜೀರ್ಣವಾಗದಿರುವ ವಸ್ತುಗಳ ಕೋಶವೂ ಇದೆ. ಶರೀರದ ನಾಭಿಮೂಲದಲ್ಲಿ
ಪ್ರಾಣಗಳೆಲ್ಲಾ ಇರುತ್ತವೆ. ಹೃದಯಪ್ರದೇಶದಿಂದ ಮೇಲೆ ಕೆಳಗೆ ಉಭಯಪಾರ್ಶ್ವಗಳಲ್ಲಿಯೂ ಹೊರಟಿರುವ ನಾಡಿಗಳೆಲ್ಲವೂ
ಹತ್ತು ಪ್ರಾಣಗಳಿಂದ ಪ್ರೇರಿಸಲ್ಪಟ್ಟು ಅನ್ನ ರಸಗಳನ್ನು ಎಲ್ಲಾ ಭಾಗಗಳಿಗೂ ಒಯ್ಯುವುವು. ಶ್ರಮವನ್ನು ಸಹಿಸುವ, ಸುಖದುಃಖಾದಿ ದ್ವಂದ್ವಸಹಿಷ್ಣುಗಳಾದ ಧೀರರಾದ ಯೋಗಿಗಳು ಪ್ರಾಣವನ್ನು ಶಿರಸ್ಸಿಗೆ ತಂದು
ಪರಮಪದಕ್ಕೆ ಹೋಗುವ ಮಾರ್ಗವೂ ಇದೇ ಆಗಿದೆ. ಈ ರೀತಿಯಾಗಿ ವಿಹಿತವಾದ
ಪ್ರಾಣಾಪಾನಗಳುಳ್ಳ ಆತ್ಮರ ದೇಹಗಳೆಲ್ಲೆಲ್ಲಾ ಅಗ್ನಿಯು, ಕುಂಡದಲ್ಲಿ
ಆಧಾನಮಾಡಲ್ಪಟ್ಟ ಅಗ್ನಿಯು ಪ್ರಜ್ವಲಿಸುವಂತೆ ಯಾವಾಗಲೂ ಪ್ರಜ್ವಲಿಸುತ್ತದೆ.
ಮೂಲಾಧಾರದ ಶ್ರೇಷ್ಟತೆಯನ್ನು
ಹಿಡಿತಕ್ಕೆ ತರುವ ವಿಷ್ಣು ಸ್ವರೂಪ
ನಮಃ ಪರಾಯ
ದೇವಾಯ ಪರಸ್ಮಾತ್ಪರಮಾಯ ಚ।
ಪರಾವರ ನಿವಾಸಾಯ
ಸಗುಣಾಯಾಗುಣಾಯ ಚ || 21
ಅಮಾಯಾಯಾತ್ಮಸಂಜ್ಞಾಯ
ಮಾಯಿನೇ ವಿಶ್ವರೂಪಿಣೇ |
ಯೋಗೀಶ್ವರಾಯ
ಯೋಗಾಯ ಯೋಗಗಮ್ಯಾಯ ವಿಷ್ಣುವೇ ॥ ೨೨॥
ಜ್ಞಾನಾಯ
ಜ್ಞಾನಗಮ್ಯಾಯ ಸರ್ವಜ್ಞಾನೈಕಹೇತವೇ
|
ಜ್ಞಾನೇಶ್ವರಾಯ
ಜ್ಞೇಯಾಯ ಜ್ಞಾತ್ರೇವಿಜ್ಞಾನಸಂಪದೇ ॥
೨೩ ॥
ಧ್ಯಾನಾಯ
ಧ್ಯಾನಗಮ್ಯಾಯ ಧ್ಯಾತೃಪಾಪಹರಾಯ ಚ |
ಧ್ಯಾನೇಶ್ವರಾಯ
ಸುಧಿಯೇ ತಸ್ಮೈ ಶುದ್ಧಾತ್ಮನೇ ನಮಃ ॥
೨೪
ನಾರದೀಯಪುರಾಣ -
ಪೂರ್ವಭಾಗ - ಅಧ್ಯಾಯ 2 - ಶ್ಲೋಕ 21-24
ಭಾವಾರ್ಥ:- ಉತ್ತಮನು, ಕ್ರೀಡಾದಿಗುಣ
ವಿಶಿಷ್ಟನು, ಉತ್ತಮರಾದ
ಬ್ರಹ್ಮಾದಿದೇವತೆಗಳಿಂತಲೂ ಶ್ರೇಷ್ಠನು, ಉತ್ತಮ ಮತ್ತು ಅಥವ ವಸ್ತುಗಳೆರಡರಲ್ಲಿಯೂ ನಿಯಾಮಕನಾಗಿ ವಾಸಿಸುತ್ತಿರುವವನು, ಮಂಗಳಕರವಾದ ಗುಣಗಳುಳ್ಳವನು, ಪ್ರಾಕೃತಗುಣರಹಿತನು, ಮಾಯೆಗೆ ಅಧೀನನಲ್ಲದವನು, ಆತ್ಮಪದಮುಖ್ಯವಾಚ್ಯನು, ಮಾಯೆಗೆ ಸ್ವಾಮಿಯು, ಸರ್ವಾಂತರ್ಯಾಮಿಯು, ಯೋಗಿಗಳೊಡೆಯನು ಯೋಗಪ್ರವರ್ತಕನು, ಯೋಗದಿಂದ ತಿಳಿಯಲ್ಪಡುವವನು, ಜ್ಞಾನಸ್ವರೂಪನು, ಅಪರೋಕ್ಷ ಜ್ಞಾನದಿಂದ ಗಮ್ಯನು, ಸರ್ವರಿಗೂ ಜ್ಞಾನವುಂಟಾಗುವುದಕ್ಕೆ ಮುಖ್ಯಕಾರಣನು, ಜ್ಞಾನ ಸ್ವಾಮಿಯು, ಭಕ್ತರಿಂದ ಜ್ಞೇಯನು, ಜ್ಞಾನವುಳ್ಳವನು, ವಿಜ್ಞಾನವೆಂಬ ಸಂಪತ್ತುಳ್ಳವನು, ಧ್ಯಾನನಿಯಾಮಕನು, ಧ್ಯಾನದಿಂದ ಪ್ರಸನ್ನ ನಾಗುವವನು, ಧ್ಯಾನ ಮಾಡುವವರ ಪಾಪಗಳನ್ನು ಪರಿಹಾರಮಾಡುವವನು, ಧ್ಯಾನ ಸ್ವಾಮಿಯು, ಸರ್ವಜ್ಞನು ಮತ್ತು ನಿರ್ದೋಷನೂ ಆಗಿರುವ ವಿಷ್ಣುವಿಗೆ
ನಮಸ್ಕಾರ.
ವಿವರಣೆ:- "ವಿಷ್ಣು" = "विष्णु" ಎಂಬ ಪದವು
ಅಕ್ಷರಶಃ ಈ ಅರ್ಥವನ್ನು ನೀಡುತ್ತದೆ, "ಮಿದುಳಿನ ನಾಸಿಕಕ್ಕೆ (ಸುಷುಮ್ನಾ) ಭ್ರೂಣದಲ್ಲಿನ
(ಗರ್ಭದಲ್ಲಿನ/ಮೂಲಾಧಾರದಲ್ಲಿನ) ಉತ್ಕೃಷ್ಟತೆಯನ್ನು ಹಿಡಿತಕ್ಕೆ ಕರೆಯುವ".
ಅಮೃತಕ್ಕಾಗಿ ಸಹಾಯಮಾಡುವ ಆತ್ಮಸ್ವರೂಪ
ಭಗವಂತಾ
ಸರ್ವಸಂಗನಿವೃತ್ತಾನಾಂ
ಧ್ಯಾನಯೋಗರತಾತ್ಮನಾಂ |
ಸರ್ವತ್ರ ಭಾತಿ
ಜ್ಞಾನಾತ್ಮಾ ತಮಸ್ಮಿ ಶರಣಂ ಗತಃ ॥
೩೬॥
ದಧಾರ ಮಂದರಂ
ಪೃಷ್ಠೇ ಕ್ಷೀರೋದೇಮೃತಮಂಥನೇ ।
ದೇನತಾನಾಂ
ಹಿತಾರ್ಥಾಯ ತಂ ಕೂರ್ಮಂ ಶರಣಂ ಗತಃ ||
೩೭॥
ನಾರದೀಯಪುರಾಣ -
ಪೂರ್ವಭಾಗ - ಅಧ್ಯಾಯ 2 - ಶ್ಲೋಕ 36-37
ಭಾವಾರ್ಥ:- ಸರ್ವಸಂಗ ಪರಿತ್ಯಾಗಮಾಡಿ ಕೇವಲ ಧ್ಯಾನಯೋಗದಲ್ಲಿ ಆಸಕ್ತರಾದ ಯೋಗಿಗಳಿಗೆ ಯಾವ
ಜ್ಞಾನರೂಪಿಯಾದ ಪರಮಾತ್ಮನು ಎಲ್ಲಾ ಸ್ಥಳಗಳಲ್ಲಿಯೂ ಪ್ರತ್ಯಕ್ಷಗೋಚರನಾಗುತ್ತಾನೆಯೋ ಅಂತಹ
ಭಗವಂತನಿಗೆ ಶರಣಾಗತನಾಗುತ್ತೇನೆ. ಕ್ಷೀರಸಮುದ್ರದಲ್ಲಿ
ಅಮೃತಕ್ಕೋಸ್ಕರ ಮಥನ ಮಾಡುವಾಗ ದೇವತೆಗಳಿಗೆ ಅನುಕೂಲ ಮಾಡುವುದಕ್ಕಾಗಿ ಬೆನ್ನಿನಿಂದ ಮಂದರ ಪರ್ವತವನ್ನು
ಎತ್ತಿದ ಕೂರ್ಮರೂಪಿಯಾದ ಭಗವಂತನನ್ನು ಶರಣುಹೊಂದುತ್ತೇನೆ.
ವಿವರಣೆ:- ಶ್ರೀ ಪುರಂದರದಾಸರು "ಮಂದರಧರ ದೇವ ಮೊರೆಹೊಕ್ಕವರ ಕಾಯ್ವ"
ಎನ್ನುತ್ತಾ ಕೂರ್ಮಾವತಾರಿ ಭಗವಂತನು ಶರಣಾದವರನ್ನು ಸದಾ ರಕ್ಷಿಸುತ್ತಾನೆಂದು ಭರವಸೆ ಕೊಡುತ್ತಾ
’ಗೋಚರನಂದದಲಿ - ಗಿರಿಯ ತಾಳಿದೆ ಬೆನ್ನಿನಲಿ’ ಎಂದು ಸ್ತುತಿಸಿದ್ದಾರೆ. ಪ್ರತಿಯೊಬ್ಬ ಸಾಧಕ
ಭಕ್ತನೂ ಭಗವಂತನನ್ನು (ವಾಯುದೇವ ಮೂಲಾಧಾರಕ್ಕೆ ನುಗ್ಗಿ ಅಲ್ಲಿನ ಶ್ರೇಷ್ಟತೆಯನ್ನು ಹಿಡಿತಕ್ಕೆ
ಕರೆಯುವವವ) ಬೆನ್ನಲ್ಲಿನ ಮಂದರ ಪರ್ವತ ಬೆಟ್ಟಕ್ಕೆ (ಸುಷುಮ್ನಾ ನಾಡಿಗೆ) ಪ್ರತಿದಿನವೂ
ಹೊರಿಸುತ್ತಲೇ ಇದ್ದಾನೆ. ಸಮುದ್ರ ಮಂಥನವನ್ನು ನಮ್ಮ ಅಂತರಂಗದ ಮಂಥನವೆಂಬ ದೃಷ್ಟಿಕೋನದಿಂದ
ನೋಡಿದಾಗ ಮಂದರ ಪರ್ವತವು ನಮ್ಮ ಸುಷುಮ್ನಾ ನಾಡಿಯಾಗುತ್ತದೆ. ಶಾಸ್ತ್ರಾಧ್ಯಯನವನ್ನು ಮಾಡಿ, ಪ್ರಾಣಾಯಾಮದಿ ಉಸಿರಾಟವನ್ನು ನಮ್ಮ
ಅಂತರಂಗಕ್ಕಿಳಿಸಿಕೊಂಡು (ಮೂಲಾಧಾರಕ್ಕೆ ಇಳಿಸಿಕೊಂಡು), ಅದನ್ನು ಸುಷುಮ್ನಾ ನಾಡಿಯಲ್ಲಿರುವ ಸಪ್ತ ಸಮುದ್ರಗಳೆಂಬ ಕುಂಡಲಿನಿ
ಚಕ್ರಗಳಲ್ಲಿ ತೀವ್ರವಾಗಿ ಸಹಸ್ರಾರದೆಡೆಗೆ ಚಲಿಸಲು ಕಾರಣವಾಗುವ ಮಂಥನದಿಂದ ಅಮೃತ ಉತ್ಪತ್ತಿಯಾಗುವುದು.
ಪ್ರಾಣಾದಿ ವಾಯುಗಳು ಸಕಲ ನಾಡಿಯಲ್ಲೂ
ಹೇಗೆ ಇರುತ್ತದೆ
ಪ್ರಾಣಾದಿವೃತ್ತಿಭೇದೇನ
ವಾಯುಶ್ಚೈವಾತ್ರ ಸಂಸ್ಥಿತಃ ।
ವಿಯತ್ಸರ್ವಾಸು
ನಾಡೀಷು ಗರ್ಭವೃತ್ಯನುಷಂಗತಃ
|| ೮೮ ॥
ನಾರದೀಯಪುರಾಣ -
ಅಧ್ಯಾಯ 63 - ಶ್ಲೋಕ 88
ಭಾವಾರ್ಥ:- ಪ್ರಾಣಾದಿ ವಾಯುಗಳು ಈ ಶರೀರದ ಹೃದಯಾದಿ ಭಿನ್ನ ಭಿನ್ನ ಸ್ಥಾನಗಳಲ್ಲಿರುತ್ತವೆ.
ಆಕಾಶವು (ಸಹಸ್ರಾರ)
ಕುಕ್ಷಿದೇಶದ (ಹೊಟ್ಟೆ ಜಠರ ಪ್ರದೇಶ - ಮೂಲಾಧಾರ) ಸಂಬಂಧದಿಂದ ಸಕಲ
ನಾಡಿಗಳಲ್ಲಿಯೂ ಇರುತ್ತದೆ.
ಇಮಾನಿ ಪಂಚ
ಭೂತಾನಿ ಸನ್ನಿ ವಿಷ್ಟಾನಿ ಸರ್ವತಃ ।
ಪಂಚಭೂತಾತ್ಮಕಂ
ಸರ್ವಂ ಜಗತ್ಥ್ಸಾವರಜಂಗಮಂ || ೮೫
॥
ನಾರದೀಯಪುರಾಣ -
ಅಧ್ಯಾಯ 63 - ಶ್ಲೋಕ 85
ಭಾವಾರ್ಥ:- ಈ ಪಂಚಭೂತಗಳು ಎಲ್ಲಾ ಕಡೆಗಳಲ್ಲಿಯೂ ಸೇರಿಕೊಂಡಿವೆ. ಚರಾಚರಾತ್ಮಕವಾದ ಪ್ರಪಂಚವೆಲ್ಲವೂ ಪಂಚಭೂತಾತ್ಮಕವು.
ನ ನಶ್ಯತಿ ನ
ಚೋದೇತಿ ನಿವೃತ್ತಿಂ ಚ ಪ್ರಯಚ್ಛತಿ |
ವರ್ವರ್ತಿದೃಕ್ಕ್ರಿಯಾರೂಪಂ
ತತ್ತೇಜಃ ಶಾಂಭವಂ ಪರಮ್ || ೨೬
ನಾರದೀಯಪುರಾಣ -
ಅಧ್ಯಾಯ 63 - ಶ್ಲೋಕ 26
ಭಾವಾರ್ಥ:- ಅವನು ನಾಶವಾಗುವುದಿಲ್ಲ. ಹುಟ್ಟುವುದಿಲ್ಲ. ನಿವೃತ್ತಿಯನ್ನು ಕೊಡುವನು. ಜ್ಞಾನಕ್ರಿಯಾ ರೂಪನಾಗಿರುವನು. ಅಂತಹ ಉತ್ಕೃಷ್ಟವಾದ ತೇಜಸ್ಸು
ಈಶ್ವರ ಸಂಬಂಧಿಯಾದುದು.
ವಿವರಣೆ:- ಶರೀರದಲ್ಲಿನ ಮೂಳೆ, ಮಾಂಸ, ಕೂದಲು, ಚರ್ಮ, ಉಗುರು ಮತ್ತು ಹಲ್ಲು ಇವುಗಳು ಪೃಥಿನೀಮಯವು. ಮೂತ್ರ, ರಕ್ತ, ಶ್ಲೇಷ್ಮ,
ಬೆವರು, ವೀರ್ಯ ಮುಂತಾದವುಗಳು ಜಲಮಯವು. ಮನಸ್ಸು, ಕಣ್ಣುಗಳು- ಪಿತ್ಥ
ಇವುಗಳಲ್ಲಿ ತೇಜಸ್ಸಿನ ಧರ್ಮವು ಕಂಡುಬರುವುದರಿಂದ ಅವು ತೇಜೋಮಯವು. ಚರಾಚರಗಳಲ್ಲಿ ಒಟ್ಟು ಎಂಭತ್ತುನಾಲ್ಕು ಲಕ್ಷ ಯೋನಿಗಳಿವೆ. ಜೀವನು ಅವುಗಳಲ್ಲಿ ತಿರುಗುತ್ತಾ, ಒಂದಾನೊಂದು ಕಾಲದಲ್ಲಿ ಸಕಲಪುರುಷಾರ್ಥಗಳಿಗೆ ಸಾಧಕವಾದ, ಉತ್ಕೃಷ್ಟವಾದ
ಮನುಷ್ಯಶರೀರವನ್ನು ಹೊಂದುವನು. ಅದರಲ್ಲಿಯೂ
ಭರತಖಂಡದಲ್ಲಿ ಬ್ರಹ್ಮಜ್ಞಾನಿಗಳ ವಂಶಗಳಲ್ಲಿ ಹುಟ್ಟುವುದು ದುರ್ಲಭವು. ಅತ್ಯಂತ ಪುಣ್ಯಮಾಡಿದ್ದರೇ ಅಂತಹ ಉತ್ಪತ್ತಿಯು ಲಭಿಸುವುದು.[2]
ದೀಕ್ಷಾಜ್ಞಾನಾಖ್ಯಯಾ ಶಕ್ತ್ಯಾಹ್ಯ ಪಧ್ವಂಸಿತಬಂಧನಃ ।
ಶುದ್ಧಾತ್ಮತತ್ವನಾಮಾsಸೌ ನಿರ್ವಾಣಪದಮಶ್ನುತೇ ॥ ೧೦೮ ॥
ಸ್ವಶಕ್ತ್ಯಾತ್ಮಿಕಯಾ ದೃಷ್ಟ್ಯಾ ಶಿವಂ ಧ್ಯಾಯತಿ ಪಶ್ಯತಿ ।
ಯಜತೇ ಶಿವಮಂತ್ರೈಶ್ಚ
ಸ್ವಪರೇಷಾಂ ಹಿತಾಯ ಸಃ ॥ ೧೦೯ ॥
ನಾರದೀಯಪುರಾಣ - ಅಧ್ಯಾಯ 63 - ಶ್ಲೋಕ 108-109
ಭಾವಾರ್ಥ:- ದೀಕ್ಷೆಯ ಜ್ಞಾನವೆಂಬ ಶಕ್ತಿಯಿಂದ ನಾಶಪಡಿಸಲ್ಪಟ್ಟ ಬಂಧನವುಳ್ಳ ಈ ಪುರುಷನು ಪರಿಶುದ್ಧವಾದ
ಆತ್ಮ ತತ್ವವೆನಿಸಿ ನಿರ್ವಾಣ (ಮುಕ್ತಿ) ಪದವಿಯನ್ನು ಹೊಂದುವನು. ಅವನು
ತನ್ನ ನೈಜಶಕ್ತಿರೂಪವಾದ ಜ್ಞಾನದಿಂದ ಈಶ್ವರನನ್ನು ಧ್ಯಾನಮಾಡುವನು, ಸಾಕ್ಷಾತ್ಕರಿಸುವನು
ಮತ್ತು ಸ್ವಪರಹಿತಕ್ಕೋಸ್ಕರವಾಗಿ ಶಿವ ಮಂತ್ರಗಳಿಂದ ಈಶ್ವರನನ್ನು ಪೂಜಿಸುವನು.
ವಿವರಣೆ:- ಲೋಕಕ್ಕೆಲ್ಲಾ ಉಪಕಾರಮಾಡುವುದಕ್ಕೆ ಅನುಕೂಲವಾದ,
ದುರ್ಲಭ ಮನುಷ್ಯ ಜನ್ಮವನ್ನು ತಾಳಿದಾಗ
ಆತ್ಮೋದ್ಧಾರ ಮಾಡಿಕೊಳ್ಳದಿರುವವನಿಗಿಂತಲೂ ಹೆಚ್ಚು ಪಾಪಿಯು ಈ ಲೋಕದಲ್ಲಿ ಯಾರು? ಆಹಾರ ತಿನ್ನುವುದು, ನಿದ್ರೆ, ಭಯ, ಸಂಭೋಗ, ಇವು ಪಶುಗಳೇ ಮುಂತಾಗಿ ಮನುಷ್ಯರವರೆಗೆ ಸರ್ವರಿಗೂ
ಸಮಾನವು. ಆಹಾರ ಮುಂತಾದ ನಾಲ್ವರಲ್ಲಿಯೇ ಅನುರಾಗವುಳ್ಳವನು ಮೂರ್ಖನು ಮತ್ತು ಆತ್ಮಘಾತಕನು
(ಸ್ವನಾಶಕಾನು). ತನ್ನ ಬಂಧವನ್ನು ವಿಭಜಿಸಸುವ ಸ್ವಭಾವವನ್ನು ಹೊಂದುವುದು ಮನುಷ್ಯರ ಧರ್ಮವು. ದೀಕ್ಷೆಯಿಂದಲೇ ಪಾಶನೆಂಬ
ಬಂಧನವನ್ನು ವಿಭಜಿಸಲಾವಾಗುವುದು. ಆದಕಾರಣ ಬಂಧನ
ವಿಚ್ಛೇದಕ್ಕೋಸ್ಕರ ಮಂತ್ರ ದೀಕ್ಷೆಯನ್ನಾಚರಿಸಬೇಕು. ಆತ್ಮ ಸ್ವರೂಪ ಜ್ಞಾನವು ಈಶ್ವರನೆಂಬ ಸೂರ್ಯನ
ಶಕ್ತಿಯೆಂಬ ಕಿರಣದಿಂದ ಶಕ್ತಿಯುಳ್ಳುದಾಗಿ ಮಾಡಲ್ಪಟ್ಟ ಚೈತನ್ಯವೆಂಬ ದೃಷ್ಟಿಯಿಂದ ಶಕ್ತ್ಯಾದಿಗಳ
ಸಹಿತವಾಗಿ ಈಶ್ವರನನ್ನು ನೋಡುವನು. ಬೋಧವೆಂಬ ಅಂತಃಕರಣವೃತ್ತಿಯು ಬೇಡಿ ಮುಂತಾದುವುಗಳಂತೆ ಪಾಶರೂಪವಾಗಿರುವುದರಿಂದ
ಮಹೇಶ್ವರನನ್ನು ಪ್ರಕಾಶಪಡಿಸಲು ಸಮರ್ಥವಾಗುವುದಿಲ್ಲ. ಸಂಸಾರಪಾಶವನ್ನು
ಬಿಡಿಸಿಕೊಳ್ಳಲು ದೀಕ್ಷೆಯೇ ಉತ್ತಮವಾದ ಸಾಧನವು. ಆದಕಾರಣ ಶಾಸ್ತ್ರೋಕ್ತ
ವಿಧಾನ ಪ್ರಕಾರ ಮಂತ್ರದೀಕ್ಷೆಯನ್ನ ಅವಲಂಬಿಸಬೇಕು. (ನಾರದೀಯಪುರಾಣದಿಂದ)
ದೀಕ್ಷೆ ಪಡೆದರೂ ವರ್ಣಾಶ್ರಮ ಧರ್ಮವನ್ನು ಉಲ್ಲಂಘಿಸಬಾರದು
ನಿಜವರ್ಣಾಶ್ರಮಾಚಾರಾನ್ಮನಸಾsಪಿ ನ ಲಂಘಯೇತ್ ।
ಯೋ ಯಸ್ಮಿನ್ನಾ
ಶ್ರಮೇ ತಿಷ್ಠನ್ ದೀಕ್ಷಾಂ ಪ್ರಾಪ್ನೋತಿ ಮಾನವಃ ॥ ೧೧೪॥
ಸ ತಸ್ಮಿನ್ನಾ
ಶ್ರಮೇ ತಿಷ್ಠೇತ್ತದ್ಧರ್ಮಾನನುಪಾಲಯೇತ್ ।
ಕೃತಾನ್ಯಪಿ ನ
ಕರ್ಮಾಣಿ ಬಂಧನಾಯ ಭವಂತಿ ಹಿ ॥ ೧೧೫ ॥
ನಾರದೀಯಪುರಾಣ -
ಅಧ್ಯಾಯ 63 - ಶ್ಲೋಕ 114-115
ಭಾವಾರ್ಥ:- ತನ್ನ ವರ್ಣಾಶ್ರಮ, ಆಶ್ರಮಗಳಿಗೆ
ವಿಹಿತವಾಗಿರುವ ಧರ್ಮವನ್ನು ಮನಸ್ಸಿನಲ್ಲಿಯೂ ಸಹ ಉಲ್ಲಂಘಿಸುವ ಯೋಚನೆ ಮಾಡಬಾರದು. ಮನುಷ್ಯನು ಯಾವ ಆಶ್ರಮದಲ್ಲಿದ್ದು ದೀಕ್ಷೆಯನ್ನು ಪಡೆಯುವನೋ ಅವನು ಅದೇ
ಆಶ್ರಮದಲ್ಲಿದ್ದು ಅದರ ಧರ್ಮಗಳನ್ನು ಕಾಪಾಡಿಕೊಳ್ಳಬೇಕು. ಅಂತಹವನಿಂದ
ಕರ್ಮಗಳು ಮಾಡಲ್ಪಟ್ಟಾಗ್ಯೂ ಅವು ಅವನಿಗೆ ಬಂಧಕವಾಗುವುದಿಲ್ಲ.
ವಿವರಣೆ:- ದೀಕ್ಷಿತನು ತಂತ್ರದಲ್ಲಿ ಹೇಳಿರುವ ಮೇರೆಗೆ ತನ್ನ
ವರ್ಣ ಧರ್ಮದಲ್ಲಾಸಕ್ತನಾಗಿ ನಿತ್ಯ ನೈಮಿತ್ತಿಕ (ವಿಶೇಷ) ಕರ್ಮಗಳ ಅನುಷ್ಠಾನವನ್ನು ಮಾಡಬೇಕು.
ದೀಕ್ಷೆಯ ಮಂತ್ರಾನುಷ್ಠಾನದಿಂದುಂಟಾದ ಧರ್ಮವನ್ನೇ ಫಲಪ್ರದವನ್ನಾಗಿ ಮಾಡುವುದು.
ಈ ದೀಕ್ಷಿತನು ಯಾವಯಾವಲೋಕಗಳಲ್ಲಿನ ಭೋಗಗಳನ್ನ ಅಪೇಕ್ಷಿಸುವನೋ ಅಂತಹ
ಭೋಗಗಳೆಲ್ಲವನ್ನೂ ಮಂತ್ರಾರಾಧನೆಯ ಶಕ್ತಿಯಿಂದ ಅನುಭವಿಸಿ ಅನಂತರ ಮೋಕ್ಷವನ್ನು ಪಡೆಯುವನು.
ದೀಕ್ಷೆಯನ್ನು ಹೊಂದಿ ನಿತ್ಯ ನೈಮಿತ್ತಿಕ ಕರ್ಮಗಳನ್ನು ಆಚರಿಸದಿರುವ ಮನುಷ್ಯನು
ಸ್ವಲ್ಪ ಕಾಲ ಪಿಶಾಚವಾಗಿದ್ದು ಕೊನೆಯಲ್ಲಿ ಮೋಕ್ಷವನ್ನು ಹೊಂದುವನು. ಆದಕಾರಣ
ದೀಕ್ಷಿತನು ನಿತ್ಯ ನೈಮಿತ್ತಿಕಗಳನ್ನು ಆಚರಿಸಬೇಕು. ನಿತ್ಯ ನೈಮಿತ್ತಿಕ
ಧರ್ಮಗಳನ್ನು ಪಾಲಿಸುತ್ತಿರುವ ಈ ಮನುಷ್ಯನ ಅನುಷ್ಠಾನವು ದೀಕ್ಷೆಯನ್ನು ಸ್ವೀಕರಿಸಿದ ಮೇಲೆ
ಅದರಿಂದ ಗಣನೆಗೆ ಬರುತ್ತದೆ. ಅಂಗಲೋಪಬರದಂತೆ ದೀಕ್ಷೆಯನ್ನು ವಹಿಸಿರುವವನಿಗೆ ತಕ್ಷಣದಲ್ಲಿಯೇ ಮೋಕ್ಷವಾಗುವುದು. ಅದರಲ್ಲಿಯೂ ಗುರುಭಕ್ತನ ದೀಕ್ಷೆಯಿಂದ
ಗುರುಮೂರ್ತ್ಯಂತರ್ಗತನಾದ, ಸರ್ವರಿಗೂ
ಅನುಗ್ರಹ ಮಾಡುವ ಈಶ್ವರನು ಸದ್ಗತಿಯನ್ನು ಕೊಡುವನು. ಬೇರೆ ಮಾರ್ಗವಿಲ್ಲ ಐಹಿಕ ಪ್ರಯೋಜನಕ್ಕಾಗಿ ಕಪಟದಿಂದ
ಗುರುಭಕ್ತಿವಾಡುವವನು. ಕರ್ಮಮಾಡಿದಾಗ್ಯೂ
ಅದು ನಿಸ್ಫಲವಾಗುವುದು. ಅಂತಹವನಿಗೆ
ಪ್ರತಿಯೊಂದು ಹೆಜ್ಜೆಗೂ ಪ್ರಾಯಶ್ಚಿತ್ತವಾಗುವುದು. ಶರೀರ ಮನಸ್ಸು ವಾಕ್ಕುಗಳೆಂಬ ತ್ರಿಕರಣಗಳಿಂದಲೂ ಗುರುಭಕ್ತಿ
ನಿಷ್ಠನಾದವನಿಗೆ ಪ್ರಾಯಶ್ಚಿತ್ತವಾಗುವುದೇ ಇಲ್ಲ. ಹೆಜ್ಜೆ ಹೆಜ್ಜೆಗೂ ಸಿದ್ಧಿ ಯಾಗುವುದು. ಗುರು ಭಕ್ತಿಯುಳ್ಳವನಾಗಿ ಸರ್ವಸ್ವವನ್ನೂ ನಿವೇದಿಸುತ್ತಿರುವ ಶಿಷ್ಯನಿಗೆ ವಿಪರೀತವಾಗಿ
ಮಂತ್ರವನ್ನು ಉಪದೇಶಿಸುವ ಗುರುವು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು.[3]
ಶ್ರೀಮದ್ವಾಯುಪುರಾಣ - ಕುಂಡಲಿನಿ ಮತ್ತು ಪ್ರಾಣಾಯಾಮ
ಪ್ರಾಣಾಯಾಮಸ್ತಥಾ ಧ್ಯಾನಂ ಪ್ರತ್ಯಾಹಾರೋಃಥ ಧಾರಣಾ ।
ಸ್ಮರಣಂ ಚೈವ ಯೋಗೇರ್ಸ್ಮಿ ಸಂಚಧರ್ಮಾಃ ಪ್ರಕೀರ್ತಿತಾಃ ॥ ೭೧ ॥
ಶ್ರೀಮದ್ವಾಯುಪುರಾಣ - ಅಧ್ಯಾಯ ೧0
-
ಶ್ಲೋಕ 71
ಭಾವಾರ್ಥ:- ಈ
ಯೋಗಾಭ್ಯಾಸ ಕ್ರಮದಲ್ಲಿ ಪ್ರಾಣಾಯಾಮ, ಧ್ಯಾನ, ಪ್ರತ್ಯಾಹಾರ,
ಧಾರಣ, ಮತ್ತು ಸ್ಮರಣನೆಂಬ ಐದು ಧರ್ಮಗಳು ಉಕ್ತಗಳಾಗಿವೆ.
ವಿವರಣೆ:- ಜ್ಞಾನ, ವೈರಾಗ್ಯ,
ಐಶ್ವರ್ಯ, ತಪಸ್ಸು, ಸತ್ಯ,
ಕ್ಷಮಾ, ಧೃತಿ, ಸ್ರಷ್ಟೃತ್ವ,
ಆತ್ಮಜ್ಞಾನ ಮತ್ತು ಆಶ್ರಯವೆಂಬ ಈ ಹತ್ತು ಗುಣಗಳು ಈಶ್ವರನಲ್ಲಿ ನಿರಂತರವಾಗಿ ಇರುವುವು.
ಯಾವ ಈಶ್ವರನು ದಿವ್ಯ ತೇಜಸ್ಸಿನಿಂದ ಸಮಸ್ತರಾದ ದೇವತೆಗಳು ಖುಷಿಗಳು, ಅಸುರರು,
ಇವರೇ ಮೊದಲಾದವರನ್ನು ಅತಿಕ್ರಮಿಸಿರುತ್ತಾನೋ, ಅದರಿಂದ ಅವನು
ಮಹಾದೇವನೆಂದು ಪ್ರಖ್ಯಾತನಾಗಿರುವನು. ಪರಮೇಶ್ವರನು ದೇವತೆಗಳನ್ನು ಐಶ್ವರ್ಯದಿಂದಲೂ,
ಅಸುರರನ್ನು ಬಲದಿಂದಲೂ, ಮುನಿಗಳನ್ನು ಜ್ಞಾನದಿಂದಲೂ, ಸಮಸ್ತ
ಭೂತಗಳನ್ನು ಯೋಗ ಬಲದಿಂದಲೂ ಅತಿಕ್ರಮಿಸಿರುವನು. ರುದ್ರದೇವನು ಪುರಾಣದಲ್ಲಿ
ಪಂಚಧರ್ಮಗಳನ್ನು ನಿರೂಪಿಸಿರುವನು. ಆಯಾಸವವಿಲ್ಲದ ಕರ್ಮಗಳನ್ನು ಮಾಡತಕ್ಕ ರುದ್ರಾದಿಗಳು
ಪುರಾಣದಲ್ಲಿ ಮಹೇಶ್ವರನ ಧರ್ಮಗಳನ್ನು ಹೇಳಿರುತ್ತಾರೆ. ಆದಿತ್ಯರು,
ವಸುಗಳು, ಸಾಧ್ಯರು, ಅಶ್ವಿನೀದೇವತೆಗಳು,
ಮರುತ್ತಗಳು, ಭೃಗು, ಯಮ,
ಶುಕ್ರ, ಪಿತೃ, ಕಾಲಾಂತಕರು
ಇವರೇ ಮೊದಲಾದ ಸ್ವರ್ಗ ಲೋಕವಾಸಿಗಳೂ, ಅಸಂಖ್ಯಾತರೂ ಆದ ಮಹಾತ್ಮರು ಆ ಪೂರ್ವೋಕ್ತಗಳಾದ
ಧರ್ಮಗಳನ್ನು ಆಚರಿಸಿದರು. ನಷ್ಟವಾದ
ಕರ್ಮಗಳುಳ್ಳವರೂ, ಶರತ್ಕಾಲದ ಆಕಾಶದಂತೆ ನಿರ್ಮಲರೂ ಆದ ಮುನಿಗಳು
ಪರಮಾತ್ಮನಲ್ಲಿ ಮನಸ್ಸನ್ನು ನಿಲ್ಲಿಸಿ ಅಂದರೆ ಪರಮಾತ್ಮನನ್ನು ಧ್ಯಾನಿಸಿ ಆ ಧರ್ಮವನ್ನು
ಆಚರಿಸುವರು. ಗುರುಗಳ ಹಿತದಲ್ಲಿ ನಿಯುಕ್ತರೂ, ಮತ್ತು
ಅವರ ಹಿತಾಪೇಕ್ಷಿಗಳೂ, ಆದ ಜ್ಞಾನಿಗಳು ಆ ಮನುಷ್ಯ ಜನ್ಮವನ್ನು ತ್ಯಜಿಸಿ
ದೇವತೆಗಳಂತೆ ಸರ್ವದಾ ಆಚರಿಸುವರು.[4]
ಹೊಳಪಿನ ವಾಯುವನ್ನು ಸುಷುಮ್ನಾ
ನಾಡಿಗೆ ಕರೆಯುವ ಅವಧಿ ವಿವರಣೆ
ಪ್ರಾಣಾನಾಂ ಚ
ನಿರೋಧಸ್ತು ಸ ಪ್ರಾಣಾಯಾಮ ಸಂಜ್ಞಿತಃ ।
ಪ್ರಾಣಾಯಾನು
ಪ್ರಮಾಣಂ ತು ಮಾತ್ರಾ ವೈ ದ್ವಾದಶ ಸ್ಮೃತಾಃ ॥೭೪॥
ಶ್ರೀಮದ್ವಾಯುಪುರಾಣ
- ಅಧ್ಯಾಯ
೧0 - ಶ್ಲೋಕ 74
ಭಾವಾರ್ಥ:- ಪ್ರಾಣವಾಯುವನ್ನು ನಿರೋಧಿಸುವುದಕ್ಕೆ ಪ್ರಾಣಾಯಾಮವೆಂದು
ಹೆಸರು. ಅದರ ಪ್ರಮಾಣವಾದರೋ, ಹನ್ನೆರಡು
ಮಾತ್ರೆಗಳುಳ್ಳದ್ದಾಗಿದೆ (ಒಂದು ಮಾತ್ರೆಯೆಂದರೆ ರೆಪ್ಪೆಯ ಕಣ್ಣು
ರೆಪ್ಪೆಯನ್ನು ಒಮ್ಮೆ ಮಿಟುಕಿಸುವ ಕಾಲಾವಧಿ)
ಹನ್ನೆರಡು ಮಾತ್ರೆಗಳ ಕಾಲದವರೆಗೂ ಪ್ರಾಣವಾಯುವನ್ನು ನಿರೋಧಿಸುವುದಕ್ಕೆ
ಪ್ರಾಣಾಯಾಮವು.
ವಿವರಣೆ:- ಪ್ರಾಣಾಯಾಮವೆಂದರೆ
ಪ್ರಾಣವಾಯುವಿನ ಸಂಚಾರದ ಅಳತೆಯಾಗಿದೆ. ಅದೂ ಕೂಡ, ಮಂದ, ಮಧ್ಯಮ, ಉತ್ತಮವೆಂದು ಮೂರು ವಿಧವಾಗಿದೆ. ಪ್ರಾಣವಾಯುವನ್ನು ನಿರೋಧಿಸುವುದಕ್ಕೆ (ನಿರೋಧಹ ಎಂಬ ಸಂಸ್ಕೃತದ ಅಕ್ಷರಶಃ ಅರ್ಥ
"ಹೊಳಪನ್ನು ಹಿಮ್ಮುಖಕ್ಕೆ ಕರೆಯುವ ಸದ್ಗುಣ" ಎಂದು ಬರುತ್ತದೆ. ಇಲ್ಲಿ ಹೊಳಪಿನ
ವಾಯುವನ್ನು ಸುಷುಮ್ನಾ ನಾಡಿಗೆ ಕರೆಯುವ ಆಚಾರವೇ ನಿರೋಧ ಎಂಬುದಾಗಿದೆ. ಸಂಸ್ಕೃತ ಕೋಶದಲ್ಲಿ
ನೀಡಿರುವ ಅರ್ಥದಲ್ಲಿ ಕುಂಭಕ ಮಾಡಬಾರದು). ಪ್ರಾಣಾಯಾಮವೆಂದು ಹೆಸರು. ಅದರ ಪ್ರಮಾಣವಾದರೋ, ಹನ್ನೆರಡು ಮಾತ್ರೆಗಳುಳ್ಳದ್ದಾಗಿದೆ (ಒಂದು ಮಾತ್ರೆಯೆಂದರೆ ರೆಪ್ಪೆಯ ಕಣ್ಣು
ರೆಪ್ಪೆಯನ್ನು ಒಮ್ಮೆ ಮಿಟುಕಿಸುವ ಕಾಲಾವಧಿ)
ಹನ್ನೆರಡು ಮಾತ್ರೆಗಳ ಕಾಲದವರೆಗೂ
ಪ್ರಾಣವಾಯುವನ್ನು ಸುಷುಮ್ನಾ ನಾಡಿಗೆ ಕರೆಯುವ ಆಚಾರವೇ ಪ್ರಾಣಾಯಾಮವು. ಹನ್ನೆರಡು ಸಾರಿ ರೆಪ್ಪೆಗಳನ್ನು ಹೊಡೆಯುವಕಾಲದವರೆಗೂ ಪ್ರಾಣ
ವಾಯುವನ್ನು ಸುಷುಮ್ನಾ ನಾಡಿಗೆ ಕರೆಯುವ ಆಚಾರಕ್ಕೆ ಮಂದ ಪ್ರಾಣಾಯಾಮವೆಂತಲೂ ಅಥವಾ ಉದ್ಭಾತವೆಂತಲೂ
ಸಂಜ್ಞೆಯಾಗಿದೆ. ಮಧ್ಯಮ
ಪ್ರಾಣಾಯಾಮವು ಇಪ್ಪತ್ತನಾಲ್ಕು ಮಾತ್ರೆಯುಳ್ಳದ್ದಾಗಿದೆ. ಅದಕ್ಕೆ ಎರಡು ಉದ್ಘಾತವೆಂದೂ ಸಂಜ್ಞೆಯುಂಟು. ಉತ್ತಮ ಪ್ರಾಣಾಯಾಮಕ್ಕೆ ಮೂರು ಉದ್ಘಾತಗಳಿರಬೇಕು
ಎಂದರೆ ಮೂವತ್ತಾರು ಮಾತ್ರೆಕಾಲಗಳು ಪ್ರಾಣ ವಾಯುವನ್ನು ಸುಷುಮ್ನಾ ನಾಡಿಗೆ ಕರೆಯುವುದನ್ನು
ಮಾಡಿದರೆ ಉತ್ತಮ ಪ್ರಾಣಾಯಾಮವಾಗುವುದು. ಇದರಿಂದ ಬೆವರು, ಕಂಪ ಮತ್ತು
ದುಃಖ ಇವುಗಳು ಉಂಟಾಗುವುವು. ಈ
ರೀತಿಯಾಗಿ ಪ್ರಾಣಾಯಾಮಕ್ಕೆ ಮೂರು ವಿಧವಾದ ಲಕ್ಷಣ ಪ್ರಮಾಣಗಳು ಉಕ್ತವಾಗಿವೆ.[5]
ಎಂತಹ ಕ್ರೂರಿಯೂ ಇದರ ಅಭ್ಯಾಸದಿಂದ ಸಾದು ಆಗುವನು
ಸಿಂಹೋವಾ
ಕುಂಜರೋ ವಾಪಿ ತಥಾನ್ಯೋವಾ ಮೃಗೋ ವನೇ
ಗೃಹೀತಃ
ಸೇವಮಾನಸ್ತು ಮೃದುಃ ಸಮುಪಜಾಯತೇ ॥
ಶ್ರೀಮದ್ವಾಯುಪುರಾಣ
- ಅಧ್ಯಾಯ
೧0 - ಶ್ಲೋಕ 78
ಭಾವಾರ್ಥ:- ಅರಣ್ಯದಲ್ಲಿರುವ ಸಿಂಹ, ಗಜ ಮತ್ತು ಇತರ ದುಷ್ಟಮೃಗಗಳು
ಇವುಗಳನ್ನು ಹಿಡಿದು ಅಭ್ಯಾಸಮಾಡಿಸಿದರೆ ಅವು ಸಾಧುಪ್ರಾಣಿಗಳಾಗುತ್ತವೆ.
ವಿವರಣೆ:- ಅದರಂತೆ ಅಜಿತೇಂದ್ರಿಯಗಳಿಗೆ ವಶ್ಯವಾಗದ ಈ ಪ್ರಾಣವು ಯೋಗಾಭ್ಯಾಸದಿಂದ ಕ್ರಮವಾಗಿ ಅಭ್ಯಾಸ
ಮಾಡಿದರೆ ಸ್ವಾಧೀನವಾಗುವುದು. ಅರಣ್ಯದಲ್ಲಿರುವ
ದುರ್ಬಲಗಳಾದ ಆನೆ, ಸಿಂಹ, ಮೊದಲಾದ ದುಷ್ಟ ಪ್ರಾಣಿಗಳನ್ನು ಹಿಡಿದು ತಂದು
ಅಭ್ಯಾಸ ಮೂಲಕ, ಯುಕ್ತಿಯಿಂದಲೂ,
ಮರ್ದನದಿಂದಲೂ, ಅವನ್ನು ಹೇಗೆ ಸ್ವಾಧೀನ ಮಾಡಿಕೊಳ್ಳುವರೋ, ಹಾಗೆಯೇ ಅಭ್ಯಾಸದಿಂದ ಪ್ರಾಣಾಯಾಮವನ್ನು ಸ್ವಾಧೀನ
ಮಾಡಿಕೊಳ್ಳಬಹುದು. ಮನಸ್ಸು
ಅತಿವೇಗದಿಂದ ಸಂಚಾರ ಮಾಡುವದಾದರೂ, ಪುರುಷ ಪ್ರಯತ್ನದಿಂದ ಅವನ ವಶದಲ್ಲಿದ್ದು ಹೇಗೆ ಶರೀರದಲ್ಲಿ ಅಡಗಿರುತ್ತದೆಯೋ, ಹಾಗೆಯೇ ಪ್ರಾಣವಾಯುವೂ ಕೂಡ, ಭಗವಂತನನ್ನು ಆಶ್ರಯಿಸಿ ಅವನ ಅಧೀನದಲ್ಲಿರುತ್ತದೆ. ಸಿಂಹ ಗಜ ಮೊದಲಾದ ದುಷ್ಟಮೃಗಗಳು ಪುರುಷನಿಗೆ
ವಶವಾದರೆ ಅವುಗಳಿಂದಲೂ, ಮತ್ತು ಇತರ
ಪ್ರಾಣಿಗಳಿಂದಲೂ ಹೇಗೆ ಭಯವುಂಟಾಗುವುದಿಲ್ಲವೋ, ಹಾಗೆಯೇ ಪ್ರಾಣಾಯಾಮದಿಂದಲೂ ಕೂಡ ಸರ್ವ ವಿಕಾರಗಳು ನಿಯಂತ್ರಣಕ್ಕೆ ಬಂದು ಅವುಗಳ ಪರಿಣಾಮ
ನಶವಾಗುವುವು.[6]
ಸುಷುಮ್ನಾ ನಾಡಿ ಸ್ವಾಧೀನಕ್ಕೆ ಪಡೆದು
ವಾಯು ವಿಲೇ ಮಾಡುವುದು
ವಶ್ಯತ್ವಂ ಹಿ ಯಥಾವಾಯುರ್ಗಚ್ಛತೇ ಯೋಗಮಾ ಸ್ಥಿತಃ ।
ತದಾ ಸ್ವಚ್ಛಂದತಃ ಪ್ರಾಣಂ ನಯತೇ ಯತ್ರ ಚೇಚ್ಛತಿ ||
ಶ್ರೀಮದ್ವಾಯುಪುರಾಣ - ಅಧ್ಯಾಯ ೧0
-
ಶ್ಲೋಕ 82
ಭಾವಾರ್ಥ:- ಯೋಗಾಭ್ಯಾಸದಲ್ಲಿ ನಿರತನಾದ ಪುರುಷನು.
ಅಭ್ಯಾಸದಿಂದ ವಾಯು ನಿರೋಧ ಮಾಡಿ ಸ್ವಾಧೀನಕ್ಕೆ ತಂದುಕೊಂಡು, ತನಗೆ ಇಷ್ಟಬಂದ ಜಾಗಕ್ಕೆ ಆ ವಾಯುಗಳನ್ನು ಕಳುಹಿಸಬಲ್ಲನು.
ವಿವರಣೆ:- ನಿರೋಧಯೇತ = ನಿರೋಧ + ಯೇತ = ನಿರೋಧ ಎಂಬ ಪದಕ್ಕೆ
ಸಂಸ್ಕೃತ ಅರ್ಥ ಹಲವಾರು ಇದೆ, ಇದರಲ್ಲಿ "ನಿಯಂತ್ರಿಸು",
"ಹಿಡಿತದಲ್ಲಿಡು", "ಅಧಿಕಾರ ನಡೆಸು" ಎಂಬುದು
ಸೂಕ್ತವಾಗಿದೆ. ಯೇತ ಎಂಬ ಪದಕ್ಕೆ ಸಂಸ್ಕೃತದಲ್ಲಿ "ಹತ್ತಿರದಿಂದ", "ಸಮೀಪದಿಂದ" ಎಂಬ ಅರ್ಥ ಇದೆ.
"ಹತ್ತಿರದಿಂದ ನಿಯಂತ್ರಿಸು" ಎಂಬುದು ಸೂಕ್ತವಾದ ವ್ಯಾಖ್ಯಾನ. ಕನ್ನಡದಲ್ಲಿ
ನಿಗ್ರಹಿಸು ಎಂದರೆ "ಅಂಕೆಗೊಳಪಡಿಸು" "ಹತೋಟಿಯಲ್ಲಿ ಇಡು" ಎಂದು
ಸರಿಯಾಗೇ ಇದೆ. ಆದರೆ ನಿರೋಧಯೇತ ಎಂಬ ಸಂಸ್ಕೃತ ಪದದಲ್ಲಿನ ಇನ್ನೊಂದು ಅರ್ಥ ಬಂಧಿಸು, ತಡೆಹಿಡಿ ಎಂಬ ಅರ್ಥದಲ್ಲಿ ಉಪಯೋಗಿಸುವುದು ಒಳಿತಲ್ಲ. ನಿರೋಧಹ ಎಂಬ ಸಂಸ್ಕೃತದ
ಅಕ್ಷರಶಃ ಅರ್ಥ "ಹೊಳಪನ್ನು ಹಿಮ್ಮುಖಕ್ಕೆ ಕರೆಯುವ ಸದ್ಗುಣ" ಎಂದು ಬರುತ್ತದೆ.
ಇಲ್ಲಿ ಹೊಳಪಿನ ವಾಯುವನ್ನು ಸುಷುಮ್ನಾ ನಾಡಿಗೆ ಕರೆಯುವ ಆಚಾರವೇ ನಿರೋಧ ಎಂಬುದಾಗಿದೆ. ಸಂಸ್ಕೃತ
ಕೋಶದಲ್ಲಿ ನೀಡಿರುವ ಅರ್ಥದಲ್ಲಿ ಕುಂಭಕ ಮಾಡಬಾರದು.
ದೇಹದ ಸಕಲ ದೋಷ ನಿವಾರಕ ಪ್ರಾಣಾಯಾಮದ ಒಂದು ವಿಧಿ
ಯಥಾ
ಪರಿಚಿತಶ್ಚಾಯಂ ವಾಯುರ್ವೈ ವಿಶ್ವತೋ ಮುಖಃ ।
ಪರಿಧ್ಯಾಯಮಾನಃ
ಸಂರುದ್ಧಃ ಶರೀರೇ ಕಿಲ್ಮಿಷಂ ದಹೇತ್ ॥
ಶ್ರೀಮದ್ವಾಯುಪುರಾಣ
- ಅಧ್ಯಾಯ
೧0 - ಶ್ಲೋಕ 84
ಭಾವಾರ್ಥ:- ಸರ್ವತ್ರ ಸಂಚರಿಸುವ ವಾಯುವನ್ನು ಪ್ರಾಣಾಯಾಮದ ಅಭ್ಯಾಸದಿಂದ ಶರೀರದಲ್ಲಿ ನಿರೋಧಮಾಡಿದರೆ
ಅದು ಮನುಷ್ಯನ ದೇಹಗತವಾದ ಸಕಲ ದೋಷಗಳನ್ನೂ ಪರಿಹರಿಸುತ್ತದೆ.
ವಿವರಣೆ:- ನಿರೋಧಯೇತ = ನಿರೋಧ + ಯೇತ = ನಿರೋಧ ಎಂಬ ಪದಕ್ಕೆ
ಸಂಸ್ಕೃತ ಅರ್ಥ ಹಲವಾರು ಇದೆ, ಇದರಲ್ಲಿ "ನಿಯಂತ್ರಿಸು",
"ಹಿಡಿತದಲ್ಲಿಡು", "ಅಧಿಕಾರ ನಡೆಸು" ಎಂಬುದು
ಸೂಕ್ತವಾಗಿದೆ. ಯೇತ ಎಂಬ ಪದಕ್ಕೆ ಸಂಸ್ಕೃತದಲ್ಲಿ "ಹತ್ತಿರದಿಂದ", "ಸಮೀಪದಿಂದ" ಎಂಬ ಅರ್ಥ ಇದೆ.
"ಹತ್ತಿರದಿಂದ ನಿಯಂತ್ರಿಸು" ಎಂಬುದು ಸೂಕ್ತವಾದ ವ್ಯಾಖ್ಯಾನ. ಕನ್ನಡದಲ್ಲಿ
ನಿಗ್ರಹಿಸು ಎಂದರೆ "ಅಂಕೆಗೊಳಪಡಿಸು" "ಹತೋಟಿಯಲ್ಲಿ ಇಡು" ಎಂದು
ಸರಿಯಾಗೇ ಇದೆ. ಆದರೆ ನಿರೋಧಯೇತ ಎಂಬ ಸಂಸ್ಕೃತ ಪದದಲ್ಲಿನ ಇನ್ನೊಂದು ಅರ್ಥ ಬಂಧಿಸು, ತಡೆಹಿಡಿ ಎಂಬ ಅರ್ಥದಲ್ಲಿ ಉಪಯೋಗಿಸುವುದು ಒಳಿತಲ್ಲ. ನಿರೋಧಹ ಎಂಬ ಸಂಸ್ಕೃತದ
ಅಕ್ಷರಶಃ ಅರ್ಥ "ಹೊಳಪನ್ನು ಹಿಮ್ಮುಖಕ್ಕೆ ಕರೆಯುವ ಸದ್ಗುಣ" ಎಂದು ಬರುತ್ತದೆ.
ಇಲ್ಲಿ ಹೊಳಪಿನ ವಾಯುವನ್ನು ಸುಷುಮ್ನಾ ನಾಡಿಗೆ ಕರೆಯುವ ಆಚಾರವೇ ನಿರೋಧ ಎಂಬುದಾಗಿದೆ. ಸಂಸ್ಕೃತ
ಕೋಶದಲ್ಲಿ ನೀಡಿರುವ ಅರ್ಥದಲ್ಲಿ ಕುಂಭಕ ಮಾಡಬಾರದು.
ವಿವರಣೆ:- ಪ್ರಾಣಾಯಾಮ ನಿರತನೂ, ಇಂದ್ರಿಯ ನಿಗ್ರಹವುಳ್ಳವನೂ, ಆದ ಜ್ಞಾನಿಗೆ ಸಮಸ್ತದೋಶಗಳೂ, ಪರಿಹಾರವಾಗಿ ಸತ್ವರೂಪದಲ್ಲಿ, ಅಂದರೆ ಪರಿಶುದ್ಧನಾಗಿ ಇರುವನು. ತಪಸ್ಸು, ವ್ರತ, ನಿಯಮ, ಸರ್ವಯಜ್ಞ ಇವುಗಳಿಂದ ಯಾವ ಮಹಾ ಫಲಗಳು ಲಭಿಸುವುವೋ,
ಅಂತಹ ಫಲಗಳು ಪ್ರಾಣಾಯಾಮದಿಂದ
ಸಿದ್ಧವಾಗುತ್ತವೆ. ಮಾಸೋಪವಾಸವನ್ನು
ಮಾಡಿ ಮಾಸಾಂತ್ಯದಲ್ಲಿ ದರ್ಭೆಯ ತುದಿಯಲ್ಲಿರುವ ಜಲಬಿಂದುಗಳನ್ನು ಕುಡಿದುಕೊಂಡು, ನೂರು ವರ್ಷಗಳ ಕಾಲ ತಪಸ್ಸು ಮಾಡಿದರೆ ಯಾವ ಫಲವು
ದೊರೆಯುವುದೊ, ಅಂತಹ ಫಲವು
ಪ್ರಾಣಾಯಾಮದಿಂದಲೇ ಸಿದ್ಧವಾಗುತ್ತದೆ. ಪ್ರಾಣಾಯಾಮಗಳಿಂದ ದೋಷಗಳನ್ನೂ, ಧಾರಣೆಗಳಿಂದ ಪಾಪಗಳನ್ನೂ ಪ್ರತ್ಯಾಹಾರದಿಂದ ವಿಷಯಗಳನ್ನೂ ಧ್ಯಾನದಿಂದ ತನ್ನ
ಪ್ರಾಕೃತಗುಣಗಳನ್ನೂ, ದಹಿಸಬೇಕು
(ಸರಿಪರಿಸಿಕೊಳ್ಳಬೇಕು). ಆದುದರಿಂದ ಯೋಗಿಯು ಸದಾ ಪ್ರಾಣಾಯಾಮ ಪರನಾಗಬೇಕು.
ಅದರಿಂದ ಸರ್ವಪಾಪವೂ ಪರಿಹಾರವಾಗಿ
ಪರಬ್ರಹ್ಮನನ್ನು ಹೊಂದುವನು.[7]
ಪ್ರಯೋಜನಾನಿ ಚತ್ವಾರಿ ಪ್ರಾಣಾಯಾಮಸ್ಯ ವಿದ್ಧಿ ವೈ ।
ಶಾಂತಿಃ ಪ್ರಶಾಂತಿರ್ದೀಪ್ರಿಶ್ಚ ಪ್ರಸಾದಶ್ಚ ಚತುಷ್ಪಯಂ ||
4
ಶ್ರೀಮದ್ವಾಯುಪುರಾಣ - ಅಧ್ಯಾಯ 11
-
ಶ್ಲೋಕ 4
ಭಾವಾರ್ಥ:-
ಯೋಗಿಗಳು ಮಾಡತಕ್ಕ ಪ್ರಾಣಾಯಾಮಕ್ಕೆ ಶಾಂತಿ, ಪ್ರಶಾಂತಿ(ಅಧಿಕ ಶಾಂತಿ), ದೀಪ್ತಿ(ಕಾಂತಿಯುಕ್ತ), ಪ್ರಸಾದವೆಂಬ ನಾಲ್ಕು ವಿಧಗಳಾದ ಪ್ರಯೋಜನಗಳು ಇವೆ
ಎಂದು ತಿಳಿಯಬೇಕು.
ಸೂರ್ಯೇಂದು
ಗ್ರಹತಾರಾಣಾಂ ತುಲ್ಯಸ್ತು ವಿಷಯೋ ಭವೇತ್ ।
ಋಷೀಣಾಂ ಚ
ಪ್ರಸಿದ್ಧಾನಾಂ ಜ್ಞಾನವಿಜ್ಞಾನಸಂಪದಾಂ || 8
ಶ್ರೀಮದ್ವಾಯುಪುರಾಣ
- ಅಧ್ಯಾಯ
11 - ಶ್ಲೋಕ 8
ಭಾವಾರ್ಥ:- ಸೂರ್ಯ,
ಚಂದ್ರ, ಗ್ರಹ, ನಕ್ಷತ್ರ ಮತ್ತು
ಸುಪ್ರಸಿದ್ದರು, ಜ್ಞಾನ ವಿಜ್ಞಾನ ಸಂಪತ್ತುಳ್ಳ ಮಹರ್ಷಿಗಳು ಇವರಿಗೆ
ಯಾವ ಯಾವ ವಿಷಯಗಳು ಸಿದ್ದಿಸುತ್ತವೆಯೋ ಅಂತಹ ವಿಷಯಗಳು ಪ್ರಾಣಾಯಾಮ ಸಿದ್ಧಿಯುಳ್ಳವರಿಗೂ
ಸಂಭವಿಸುತ್ತವೆ.
ವಿವರಣೆ:- ಲೋಭಿಗಳು ಮತ್ತು ಪಾಪಿಗಳು ತಾವು ಮಾಡಿದ
ಪಾಪಗಳನ್ನು ಪರಿಹರಿಸಿಕೊಂಡು ಇಹಪರಗಳಲ್ಲಿ ದಿವ್ಯ ಸುಖಗಳನ್ನು ಪಡೆಯಲಪೇಕ್ಷಿಸಿದರೆ ಅವರು
ಯೋಗ್ಯವೂ, ಶಾಂತಿರೂಪವೂ ಆದ ತಪಸ್ಸನ್ನು
ಆಚರಿಸಬೇಕು. ಇಂದ್ರಿಯಗಳೂ, ಇಂದ್ರಿಯಾರ್ಥಗಳೂ,
ಮನಸ್ಸು, ಪಂಚಪ್ರಾಣಗಳು ಇವು ಏತರಿಂದ ಪ್ರಸನ್ನವಾಗುತ್ತವೆಯೋ ಅದಕ್ಕೆ
ಪ್ರಸಾದವೆಂದು ನಾಮವು ಪ್ರಾಪ್ತವಾಗಿದೆ. ಪ್ರಾಣಾಯಾಮಕ್ಕೆ ಪ್ರಸಾದವೇ ಮೊದಲನೆಯ ಧರ್ಮವಾಗಿದೆ. ಪ್ರಾಣಾಯಾಮವು
ನಾಲ್ಕು ವಿಧವಾಗಿದೆ. ಶೀಘ್ರವಾಗಿ ಆಗತಕ್ಕ ಫಲವೇ ಪ್ರಸಾದ ಜನ್ಯವು. ಅಂದರೆ ಈ ಪ್ರಸಾದದಿಂದ
ಶೀಘ್ರವಾಗಿ ಯೋಗಫಲಗಳು ಸಿದ್ಧಿಸುತ್ತವೆ. ಯೋಗಿಯು ಮೊದಲು
ಓಂಕಾರವನ್ನು ಉಚ್ಚರಿಸಿ ಸೂರ್ಯ, ಚಂದ್ರರಿಗೆ
ನಮಸ್ಕರಿಸಿ ಸ್ವಸ್ತಿಕಾಸನ, ಪದ್ಮಾಸನ, ಅರ್ಧಾಸನ
ಇವುಗಳನ್ನು ಮಾಡಿ ಕೊಂಡು ಎರಡು ಮೊಳಕಾಲುಗಳನ್ನು ಒಂದೇ ಸಮನಾಗಿ ಮಾಡಿಕೊಂಡು ಅಥವಾ ಒಂದು
ಜಾನುವನ್ನು ಮೇಲಕ್ಕೆ ಹಾಕಿಕೊಡು ಸುಸ್ಥಿರನೂ,
ದೃಢಾಸನೂ ಆಗಿ ಎರಡು ಚರಣಗಳನ್ನು ಕೂಡಿಸಿಕೊಂಡಿರಬೇಕು ಮತ್ತು ಮುಖ ನೇತ್ರಗಳನ್ನು
ಮುಚ್ಚಿಕೊಂಡು ಎದೆಯನ್ನು ಮುಂದಕ್ಕೆ ಚಾಚಿ ಹಿಮ್ಮಡಿಗಳಿಂದ ಬೀಜಗಳನ್ನು, ಲಿಂಗವನ್ನು
ಮುಚ್ಚಿಕೊಂಡು ಧ್ಯಾನಿಸಜೀಕು. ಯೋಗಾಭ್ಯಾಸವನ್ನು ಮಾಡುವವನು ಕತ್ತು ತಲೆಗಳನ್ನು ಸ್ವಲ್ಪ ಮೇಲಕ್ಕೆತ್ತಿಕ್ಕೊಂಡು
ನಾಸಿಕಾಗ್ರದಲ್ಲಿ ದೃಸ್ಟಿಯನ್ನಿಟ್ಟು ಸುತ್ತಮುತ್ತಲೂ ನೋಡದೆಯೇ ರಜಸ್ಸಿನಿಂದ ತಮಸ್ಸನ್ಮೂ,
ಸತ್ವಗುಣದಿಂದ ರಜೋಗುಣವನ್ನೂ ಆಚ್ಚಾದಿಸಿ
ಸತ್ವರೂಪಿಯಾಗಿ ಸ್ಥಿರಮನಸ್ಸಿನಿಂದ ಯೋಗಾಭ್ಯಾಸವನ್ನು ಮಾಡಬೇಕು. ಇಂದ್ರಿಯಗಳು, ಅವುಗಳ ವಿಷಯಗಳು, ಮನಸ್ಸು, ಪಂಚಪ್ರಾಣಗಳು ಇವುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿಯೂ, ಸಾಮೂಹಿಕವಾಗಿಯೂ ಹಿಡಿತಕ್ಕೆ ಪಡೆದು ಪ್ರತ್ಯಾಹಾರವನ್ನು
ಆಚರಿಸಬೇಕು. ಆಮೆಯು ಅಂಗಗಳನ್ನು ಸಂಕುಚಿತ ಮಾಡುವಂತೆ ಯೋಗಿಯು
ಕಾಮಕ್ರೋಧಾದಿಗಳನ್ನು ಸಂಕುಚಿತ ಮಾಡಿ ಸಂತೋಷಯುಕ್ತನಾಗಿ ತನ್ನಲ್ಲಿ ಅಂತರ್ಯಾಮಿಯಾಗಿರುವ
ಪರಮಾತ್ಮನನ್ನು ಧ್ಯಾನಮಾಡಬೇಕು. ಯೋಗಿಯು ತನ್ನ ದೇಹದಲ್ಲಿ ಭಗವಂತನನ್ನು ಧ್ಯಾನಿಸುತ್ತಾ
ಬಾಹ್ಯಾಭ್ಯಂತರ ಶುದ್ಧನಾಗಿ ನಾಭಿಯಿಂದ ಕಂಠದವರೆಗೂ ಪ್ರಾಣನಿರೋಧರೂಪವಾದ ಪ್ರತ್ಯಾಹಾರವನ್ನು
ಮಾಡಬೇಕು.[8]
ಭೂತಭವಿಷ್ಯದ್ವರ್ತಮಾನಕಾಲಗಳ ಜ್ಞಾನವೂ ಸಂಭವಿಸುತ್ತವೆ
ಅತೀತಾನಾಗತಾನಂಚ
ದರ್ಶನಂ ಸಾಂಪ್ರತಸ್ಯಚ |
ಬುದ್ಧಸ್ಯಸಮತಾಂ
ಯಾಂತಿ ದೀಪ್ತಿಃ ಸ್ಯಾತ್ತಪ ಉಚ್ಕತೇ ||
೯ ॥
ಶ್ರೀಮದ್ವಾಯುಪುರಾಣ
- ಅಧ್ಯಾಯ
11 - ಶ್ಲೋಕ 9
ಭಾವಾರ್ಥ:- ಯೋಗಿಗೆ ಭೂತಭವಿಷ್ಯದ್ವರ್ತಮಾನಕಾಲಗಳಲ್ಲಿರುವ ವಸ್ತುಗಳ ಜ್ಞಾನವೂ,
ಬುದ್ಧಿಯ ಶಾಂತಿಯೂ ಮತ್ತು ಪ್ರಕಾಶವೂ ಈ ತಪಸ್ಸಿನಿಂದ ಸಂಭವಿಸುತ್ತವೆ.
ವಿವರಣೆ:- ಮಹಾತ್ಮರಾದ ಋಷಿಗಳು ಹಗಲು, ರಾತ್ರಿ, ದಿವಸ, ಪಕ್ಷ, ಮಾಸ, ಅಯನ ವರ್ಷ, ಯುಗ, ಮಹಾಯುಗಸಹಸ್ರ, ಇವುಗಳಲ್ಲಿ
ತಪಸ್ಸನ್ನು ಮಾಡಿ ದಿವ್ಯ ಸಿದ್ಧಿಯನ್ನು ಪಡೆದು ದಿವ್ಯಜ್ಞಾನದಿಂದ ಪ್ರಾಣ ದೇವನನ್ನು ಸೇವಿಸುತ್ತಾರೆ.
ಮನುಷ್ಯರು ತಾವು ಮಾಡುವ ಘೋರ, ಮತ್ತು ಮಂಗಳಕರವಾದ ಕರ್ಮಗಳ ಫಲಗಳನ್ನು ಕೆಲವು ಕಾಲದ
ತರುವಾಯ ಈ ಲೋಕದಲ್ಲಿಯೂ, ಪರಲೋಕದಲ್ಲಿಯೂ
ತಾವೇ ಪಡೆಯುತ್ತಾರೆ. ಶುಭಕರ್ಮಗಳಿಂದ
ಇಹಪರಲೋಕಗಳಲ್ಲಿ ಸುಖವೂ, ದುಷ್ಕರ್ಮಗಳಿಂದ
ದುಃಖವೂ ಉಂಟಾಗುವುವು.[9]
ಪ್ರಾಣಾಯಾಮ ಮತ್ತು
ಯೋಗಾಭ್ಯಾಸಕ್ರಮ
ಓಂಕಾರಂ ಪ್ರಥಮಂ
ಕೃತ್ವಾ ಚಂದ್ರಸೂರ್ಯೌ ಪ್ರಣಮ್ಯಚ ।
ಆಸನಂ
ಸ್ವಸ್ತಿಕಂ ಕೃತ್ವಾ ಪದ್ಮಮರ್ಧಾಸನಂ ತಥಾ ॥ ೧೩ ॥
ಸಮಜಾನುರೇಕಜಾನುರುತ್ತಾನಃ
ಸುಸ್ಥಿತೋಪಿಚ ।
ಸಮೋ ದೃಢಾಸನೋ
ಭೂತ್ವಾ ಸಂಹೃತ್ಯ ಚರಣಾವುಭೌ ॥ ೧೪॥
ಸಂವೃತಾಸ್ಯೋವಬದ್ಧಾಕ್ಷ
ಉರೋನಿಸ್ಟಭ್ಯಜಾಗ್ರತಃ |
ಪಾರ್ಷ್ಣಿಭ್ಯಾಂ
ವೃಷಣೇಛಾದ್ಯ ತಥಾಪ್ರಜನನಂ ತತಃ 1
೧೫ ॥
ಶ್ರೀಮದ್ವಾಯುಪುರಾಣ
- ಅಧ್ಯಾಯ
11 - ಶ್ಲೋಕ 13-15
ಭಾವಾರ್ಥ:- ಯೋಗಿಯು ಮೊದಲು ಓಂಕಾರವನ್ನು ಉಚ್ಚರಿಸಿ ಸೂರ್ಯ, ಚಂದ್ರರಿಗೆ ನಮಸ್ಕರಿಸಿ ಸ್ವಸ್ತಿಕಾಸನ, ಪದ್ಮಾಸನ, ಅರ್ಧಾಸನ ಇವುಗಳನ್ನು ಮಾಡಿಕೊಂಡು ಎರಡು ಮೊಳಕಾಲುಗಳನ್ನು
ಒಂದೇ ಸಮನಾಗಿ ಮಾಡಿಕೊಂಡು ಅಥವಾ ಒಂದು ಜಾನುವನ್ನು ಮೇಲಕ್ಕೆ ಹಾಕಿಕೊಡು ಸುಸ್ಥಿರನೂ, ದೃಢಾಸನೂ ಆಗಿ ಎರಡು ಚರಣಗಳನ್ನು
ಕೂಡಿಸಿಕೊಂಡಿರಬೇಕು ಮತ್ತು ಮುಖ ನೇತ್ರಗಳನ್ನು ಮುಚ್ಚಿಕೊಂಡು ಎದೆಯನ್ನು ಮುಂದಕ್ಕೆ ಚಾಚಿ
ಹಿಮ್ಮಡಿಗಳಿಂದ ಬೀಜಗಳನ್ನು, ಲಿಂಗವನ್ನು
ಮುಚ್ಚಿಕೊಂಡು ಧ್ಯಾನಿಸಜೀಕು.
ವಿವರಣೆ:- ಯೋಗಾಭ್ಯಾಸವನ್ನು ಮಾಡುವವನು ಕತ್ತು ತಲೆಗಳನ್ನು
ಸ್ವಲ್ಪ ಮೇಲಕ್ಕೆತ್ತಿಕ್ಕೊಂಡು ನಾಸಿಕಾಗ್ರದಲ್ಲಿ ದೃಸ್ಟಿಯನ್ನಿಟ್ಟು ಸುತ್ತಮುತ್ತಲೂ ನೋಡದೆಯೇ
ರಜಸ್ಸಿನಿಂದ ತಮಸ್ಸನ್ಮೂ, ಸತ್ವಗುಣದಿಂದ
ರಜೋಗುಣವನ್ನೂ ಆಚ್ಚಾದಿಸಿ ಸತ್ವರೂಪಿಯಾಗಿ ಸ್ಥಿರಮನಸ್ಸಿನಿಂದ ಯೋಗಾಭ್ಯಾಸವನ್ನು ಮಾಡಬೇಕು.
ಮತು ಇಂದ್ರಿಯಗಳು, ಅವುಗಳ ವಿಷಯಗಳು, ಮನಸ್ಸು, ಪಂಚಪ್ರಾಣಗಳು ಇವುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿಯೂ, ಸಾಮೂಹಿಕವಾಗಿಯೂ ನಿಗ್ರಹಿಸಿ ಪ್ರತ್ಯಾಹಾರವನ್ನು ಆಚರಿಸಬೇಕು.
ಆಮೆಯು ಅಂಗಗಳನ್ನು ಸಂಕುಚಿತಮಾಡುವಂತೆ
ಯೋಗಿಯು ಕಾಮಕ್ರೋಧಾದಿಗಳನ್ನು ಸಂಕುಚಿತಮಾಡಿ ಸಂತೋಷಯುಕ್ತನಾಗಿ ತನ್ನಲ್ಲಿ ಅಂತರ್ಯಾಮಿಯಾಗಿರುವ
ಪರಮಾತ್ಮನನ್ನು ಧ್ಯಾನಮಾಡಬೇಕು. ಯೋಗಿಯು
ತನ್ನ ದೇಹದಲ್ಲಿ ಭಗವಂತನನ್ನು ಧ್ಯಾನಿಸುತ್ತಾ ಬಾಹ್ಯಾಭ್ಯಂತರ ಶುದ್ಧನಾಗಿ ನಾಭಿಯಿಂದ ಕಂಠದವರೆಗೂ
ಪ್ರಾಣನಿರೋಧರೂಪವಾದ ಪ್ರತ್ಯಾಹಾರವನ್ನು ಮಾಡಬೇಕು. ಹನ್ನೆರಡು ಮಾತ್ರೆಗಳ ಕಾಲದವರೆಗೂ ಪ್ರಾಣನಿರೋಧಮಾಡಿದರೆ ಅದು
ಪ್ರಾಣಾಯಾಮವಾಗುವುದು. ಹನ್ನೆರಡು
ನಿಮಿಷಕಾಲ ಪ್ರಾಣನಿರೋಧನವನ್ನು ಮಾಡುವುದಕ್ಕೆ ಧಾರಣೆಯೆಂದೂ ಆ ಧಾರಣಾದ್ವಯಗಳಿಗೆ ಯೋಗವೆಂದೂ
ಹೆಸರು ಬಂದಿದೆ. ಅಂತಹ
ಯೋಗಯುಕ್ತನಾದ ಯೋಗಿಯು ಮಹದೈಶ್ವರ್ಯವನ್ನು ಪಡೆಯುವನು. ಮತ್ತು ಆ ಯೋಗಿಯು ದಿವ್ಯತೇಜಸ್ಸಿನಿಂದ ಪ್ರಕಾಶಿಸುತ್ತಿರುವ
ಪರಮಾತ್ಮನನ್ನು ನೋಡುವನು. ಪ್ರಾಣಾಯಾಮದಲ್ಲಿ
ಆಸಕ್ತನೂ, ಜಿತೇಂದ್ರಿಯನೂ,
ಆದ ಜ್ಞಾನಿಯ ಸಕಲ ದೋಷಗಳೂ
ನಾಶವಾಗುವುದಲ್ಲದೇ ಸತ್ವಗುಣಸಂಪನ್ನನೂ ಆಗುವನು. ಹೀಗೆ ನಿಯತಾಹಾರಿಯೂ ಪ್ರಾಣಾಯಾಮ ಪಾರಾಯಣನೂ, ಆದ ಯೋಗಿಯು ಕಾಮಕ್ರೋಧಾದಿಗಳನ್ನು ಜಯಿಸಿ ಈ ಭೂಮಿಯಿಂದ ಉನ್ನತ ಮನುಕುಲಕ್ಕೆ ಹೋಗುವನು
(ಮೇಲಕ್ಕೆ ಏರುವನು). ಅಜಿತೇಂದ್ರಿಯರಿಗೆ ಭೂಮಿಯು ಮಹಾದೋಷವನ್ನು ಮತ್ತು
ಭ್ರಾಂತಿಯನ್ನುಂಟುಮಾಡುತ್ತದೆ. ಆದುದರಿಂದ
ಅವನು ಈ ಭೂಲೋಕದಿಂದ ಮೇಲಕ್ಕೆ (ಊರ್ಧ್ವಲೋಕಗಳಿಗೆ
- ಉನ್ನತ ಮನುಕುಲಕ್ಕೆ) ಹೋಗಲಾರನು.[10]
ವಿವರಣೆ:- ನಿರೋಧಯೇತ = ನಿರೋಧ + ಯೇತ = ನಿರೋಧ ಎಂಬ ಪದಕ್ಕೆ ಸಂಸ್ಕೃತ ಅರ್ಥ ಹಲವಾರು ಇದೆ, ಇದರಲ್ಲಿ "ನಿಯಂತ್ರಿಸು", "ಹಿಡಿತದಲ್ಲಿಡು", "ಅಧಿಕಾರ
ನಡೆಸು" ಎಂಬುದು ಸೂಕ್ತವಾಗಿದೆ. ಯೇತ ಎಂಬ ಪದಕ್ಕೆ ಸಂಸ್ಕೃತದಲ್ಲಿ
"ಹತ್ತಿರದಿಂದ", "ಸಮೀಪದಿಂದ" ಎಂಬ ಅರ್ಥ
ಇದೆ. "ಹತ್ತಿರದಿಂದ ನಿಯಂತ್ರಿಸು"
ಎಂಬುದು ಸೂಕ್ತವಾದ ವ್ಯಾಖ್ಯಾನ. ಕನ್ನಡದಲ್ಲಿ ನಿಗ್ರಹಿಸು ಎಂದರೆ "ಅಂಕೆಗೊಳಪಡಿಸು"
"ಹತೋಟಿಯಲ್ಲಿ ಇಡು" ಎಂದು ಸರಿಯಾಗೇ ಇದೆ. ಆದರೆ ನಿರೋಧಯೇತ ಎಂಬ ಸಂಸ್ಕೃತ ಪದದಲ್ಲಿನ
ಇನ್ನೊಂದು ಅರ್ಥ ಬಂಧಿಸು, ತಡೆಹಿಡಿ ಎಂಬ ಅರ್ಥದಲ್ಲಿ ಉಪಯೋಗಿಸುವುದು
ಒಳಿತಲ್ಲ. ನಿರೋಧಹ ಎಂಬ ಸಂಸ್ಕೃತದ ಅಕ್ಷರಶಃ ಅರ್ಥ "ಹೊಳಪನ್ನು ಹಿಮ್ಮುಖಕ್ಕೆ ಕರೆಯುವ
ಸದ್ಗುಣ" ಎಂದು ಬರುತ್ತದೆ. ಇಲ್ಲಿ ಹೊಳಪಿನ ವಾಯುವನ್ನು ಸುಷುಮ್ನಾ ನಾಡಿಗೆ ಕರೆಯುವ ಆಚಾರವೇ
ನಿರೋಧ ಎಂಬುದಾಗಿದೆ. ಸಂಸ್ಕೃತ ಕೋಶದಲ್ಲಿ ನೀಡಿರುವ ಅರ್ಥದಲ್ಲಿ ಕುಂಭಕ ಮಾಡಬಾರದು.
ಯೋಗಿಗಳು ಪ್ರಾಣಾದಿವಾಯುಗಳನ್ನು ತಮ್ಮ ಸ್ವಾಧೀನಮಾಡಿಕೊಳ್ಳುವರು
ನಾಲೇನ ತು ಯಥಾ
ತೋಯಂ ಯಂತ್ರೇಣೈವ ಬಲಾನ್ವಿತಃ ।
ಆಪಿಬೇತ
ಪ್ರಯತ್ನೇನ ತಥಾ ವಾಯಂ ಜಿತಶ್ರಮಃ ॥
೨೬॥
ಶ್ರೀಮದ್ವಾಯುಪುರಾಣ
- ಅಧ್ಯಾಯ
೧೧ - ಶ್ಲೋಕ 26
ಭಾವಾರ್ಥ:- ಶಕ್ತರಾದ ಪುರುಷರು ಯಂತ್ರದ ಶಕ್ತಿಯಿಂದ ಕೊಳಾಯಿಗಳ ಮೂಲಕ ನೀರನ್ನು ದೂರದಿಂದ ತಂದು
ಹೇಗೆ ಬೇಕಾಗುವ ಸ್ಥಳಗಳಲ್ಲಿ ಉಪಯೋಗಿಸಿಕೊಳ್ಳುವರೋ, ಹಾಗೆಯೇ, ಜಿತೇಂದ್ರಿಯರಾದ ಯೋಗಿಗಳು ಪ್ರಾಣಾದಿವಾಯುಗಳನ್ನು ತಮ್ಮ
ಸ್ವಾಧೀನಮಾಡಿಕೊಳ್ಳುವರು.
ಪ್ರಾಣವಾಯುಗಳನ್ನು ನಿರೋಧಿಸುವ ವಿಧಾನ
ನಾಭ್ಯಾಂ ಚ
ಹೃದಯೇ ಚೈವ ಕಂಠೇ ಉರಸಿ ಚಾನನೇ ।
ನಾಸಾಗ್ರೇ ತು
ತಥಾ ನೇತ್ರೇ ಭ್ರುವೋರ್ಮದ್ಧ್ಯೇಥ ಮೂರ್ದ್ಧನೀ ॥೨೭॥
ಕಿಂಚಿದೂರ್ದ್ಧ್ವಂ
ಪರಸ್ಮಿಂಶ್ಚ ಧಾರಣಾ ಪರಮಾ ಸ್ಮೃತಾ ।
ಪ್ರಾಣಾಪಾನಸಮಾರೋಧಾತ್ ಪ್ರಾಣಾಯಾಮಃ ಸ
ಕಥ್ಯತೇ ॥ ೨೮॥
ಶ್ರೀಮದ್ವಾಯುಪುರಾಣ
- ಅಧ್ಯಾಯ
೧೧ - ಶ್ಲೋಕ 27-28
ಭಾವಾರ್ಥ:- ಯೋಗಿಯು ಪ್ರಾಣಾದಿವಾಯುಗಳನ್ನು ನಾಭಿ, ಹೃದಯ, ಕಂಠ, ಎದೆ, ಮುಖ, ನಾಸಾಗ್ರ, ನೇತ್ರ, ಹುಬ್ಬುಗಳ
ನಡುವೆ, ಮತ್ತು ಶಿರಸ್ಸು ಇವುಗಳಲ್ಲಿಯೂ ಮತ್ತು ಸ್ವಲ್ಪ
ಊರ್ಧ್ವಭಾಗದಲ್ಲಿಯೂ, (ಶಿರಸ್ಸಿನಿಂದ ಮೇಲೆ) ಇತರ
ವಸ್ತುಗಳಲ್ಲಿಯೂ, "ಮನಸ್ಸನ್ನು ಚಲಿಸದಂತೆ ಸ್ಥಿರವಾಗಿ
ನಿಲ್ಲಿಸುವುದಕ್ಕೆ "ಧಾರಣೆ"ಯೆಂಬ
ಶ್ರೇಷ್ಠವಾದ ಸಂಜ್ಞೆಯು ಬಂದಿದೆ. ಹೀಗೆ ಪ್ರಾಣಾದಿವಾಯು ನಿರೋಧವನ್ನು
ಮಾಡುವುದಕ್ಕೆ ಪ್ರಾಣಾಯಾಮವೆಂದು ಹೆಸರುಂಟಾಗಿದೆ.
ವಿವರಣೆ:- ನಿರೋಧಯೇತ = ನಿರೋಧ + ಯೇತ = ನಿರೋಧ ಎಂಬ ಪದಕ್ಕೆ
ಸಂಸ್ಕೃತ ಅರ್ಥ ಹಲವಾರು ಇದೆ, ಇದರಲ್ಲಿ "ನಿಯಂತ್ರಿಸು",
"ಹಿಡಿತದಲ್ಲಿಡು", "ಅಧಿಕಾರ ನಡೆಸು" ಎಂಬುದು
ಸೂಕ್ತವಾಗಿದೆ. ಯೇತ ಎಂಬ ಪದಕ್ಕೆ ಸಂಸ್ಕೃತದಲ್ಲಿ "ಹತ್ತಿರದಿಂದ", "ಸಮೀಪದಿಂದ" ಎಂಬ ಅರ್ಥ ಇದೆ.
"ಹತ್ತಿರದಿಂದ ನಿಯಂತ್ರಿಸು" ಎಂಬುದು ಸೂಕ್ತವಾದ ವ್ಯಾಖ್ಯಾನ. ಕನ್ನಡದಲ್ಲಿ
ನಿಗ್ರಹಿಸು ಎಂದರೆ "ಅಂಕೆಗೊಳಪಡಿಸು" "ಹತೋಟಿಯಲ್ಲಿ ಇಡು" ಎಂದು
ಸರಿಯಾಗೇ ಇದೆ. ಆದರೆ ನಿರೋಧಯೇತ ಎಂಬ ಸಂಸ್ಕೃತ ಪದದಲ್ಲಿನ ಇನ್ನೊಂದು ಅರ್ಥ ಬಂಧಿಸು, ತಡೆಹಿಡಿ ಎಂಬ ಅರ್ಥದಲ್ಲಿ ಉಪಯೋಗಿಸುವುದು ಒಳಿತಲ್ಲ. ನಿರೋಧಹ ಎಂಬ ಸಂಸ್ಕೃತದ
ಅಕ್ಷರಶಃ ಅರ್ಥ "ಹೊಳಪನ್ನು ಹಿಮ್ಮುಖಕ್ಕೆ ಕರೆಯುವ ಸದ್ಗುಣ" ಎಂದು ಬರುತ್ತದೆ.
ಇಲ್ಲಿ ಹೊಳಪಿನ ವಾಯುವನ್ನು ಸುಷುಮ್ನಾ ನಾಡಿಗೆ ಕರೆಯುವ ಆಚಾರವೇ ನಿರೋಧ ಎಂಬುದಾಗಿದೆ. ಸಂಸ್ಕೃತ
ಕೋಶದಲ್ಲಿ ನೀಡಿರುವ ಅರ್ಥದಲ್ಲಿ ಕುಂಭಕ ಮಾಡಬಾರದು.
ವಿವರಣೆ:- ಹೀಗೆ ಮನೋನಿಗ್ರಹ ಮಾಡುವುದಕ್ಕೆ ಧಾರಣೆಯಂತಲೂ
ವಿಷಯಗಳನ್ನು ನಿಗ್ರಹಿಸುವುದಕ್ಕೆ ಪ್ರತ್ಯಾಹಾರವೆಂತಲೂ ಸಂಜ್ಞೆಯು ಉಂಟಾಗಿದೆ. ಏಕಕಾಲದಲ್ಲಿ ಮೇಲೆ
ಹೇಳಿದ ಸರ್ವಸಿದ್ದಿಗಳೂ ಉಂಟಾದರೆ ಅದಕ್ಕೆ ಯೋಗಸಿದ್ಧಿಯೆಂದು ಹೆಸರು ಬಂದಿದೆ. ಆ ಸಿದ್ಧಿಯಿಂದ
ಉಂಟಾದ ಯೋಗಕ್ಕೆ “ಧ್ಯಾನ" ವೆಂದು ಸಂಜ್ಞೆಯುಂಟಾಗಿದೆ. ಹೀಗೆ ಧ್ಯಾನವಂತನಾದ
ಯೋಗಿಯು ಸೂರ್ಯಚಂದ್ರರನ್ನು ನೋಡುವಂತೆ ಪರಮಾತ್ಮನನ್ನು ನೋಡಬಲ್ಲನು.
ಯಾರಿಗೆ ಯೋಗ ಸಿದ್ಧಿಯುಂಟಾಗುವುದಿಲ್ಲ
ಸತ್ವಸ್ಯಾನುಪಪತ್ತೌತು
ದರ್ಶನಂತು ನವಿದ್ಯತೇ
ಅದೇಶಕಾಲಯೋಗಸ್ಯ
ದರ್ಶನಂ ತು ನ ವಿದ್ಯತೇ || 31
ಶ್ರೀಮದ್ವಾಯುಪುರಾಣ
- ಅಧ್ಯಾಯ
೧೧ - ಶ್ಲೋಕ
31
ಭಾವಾರ್ಥ:- ಸತ್ವಗುಣಪ್ರಾಚುರ್ಯರಹಿತನೂ, ದೇಶಕಾಲಜ್ಞಾನಶೂನ್ಯನೂ ಆದ ಯೋಗಿಗೆ, ಪರಮಾತ್ಮನ ದರ್ಶನ ಉಂಟಾಗುವುದಿಲ್ಲ.
ವಿವರಣೆ:- ಧ್ಯಾನಾಸಕ್ತನಾದ ಯೋಗಿಯು, ಅಗ್ನಿಯ ಸಮೀಪ, ವನ, ಒಣಗಿದ ಎಲೆಗಳ ಗುಂಪು, ದುಷ್ಟಸತ್ವಗಳಿರುವ
ವನ, ಸ್ಮಶಾನ, ಜೀರ್ಣಗೋಷ್ಠ, ಚೌಕ, ಶಬ್ದ ಮತ್ತು ಭಯಂಕರವಾದ ಪ್ರದೇಶ, ದೇವಾಲಯ, ವಲ್ಮೀಕವಿರುವಸ್ಥಾನ (ಗೆದ್ದಲು ಇರುವ ಜಾಗ), ಜಲಾಶಯ, ನದಿ ಮತ್ತು ಬಾಧಿತಪ್ರದೇಶ ಇವುಗಳಲ್ಲಿ ಕ್ಷುತ್ಪಿಪಾಸಾ (ಸೀನುತ್ತಾ ಬಾಯಾರಿದವನಾಗಿ) ಪೀಡಿತನಾಗಿ ಚಾಂಚಲ್ಯದಿಂದ
ಯೋಗಾಭ್ಯಾಸವನ್ನು ಮಾಡಿದರೆ ಎಂದಿಗೂ ಸಿದ್ಧಿಯುಂಟಾಗುವುದಿಲ್ಲ. ಈ ದೋಷಗಳು ಕಂಡುಬಂದರೂ ಕೂಡ ಯಾವನು ಅಜ್ಞಾನದಿಂದ
ಯೋಗದಲ್ಲಿ ಆಸಕ್ತನಾಗುವನೋ ವಿಫ್ಲಕಾರಿಗಳಾದ ದೋಷಗಳು ಅವನ ಶರೀರಕ್ಕೆ ತೊಂದರೆಗಳನ್ನು ಉಂಟುಮಾಡಿ
ಕೋಪಗೊಳ್ಳುತ್ತವೆ. ದೋಷಯುಕ್ತನಾದ
ಯೋಗಿಯು ಅಜ್ಞಾನದಿಂದ ಯೋಗಾಭ್ಯಾಸವನ್ನು ಮಾಡಿದರೆ ಅವನು ಮೂರ್ಖನೂ, ಕಿವುಡನೂ ಮೂಕನೂ, ಅಂಧನೂ, ಸ್ಮೃತಿರಹಿತನೂ, ಜರಾವಂತನೂ
ಕುರೂಪಿಯೂ, ಆಗುವನು, ಆದುದರಿಂದ ಯೋಗಿಯು ಶುದ್ಧ ಚಿತ್ತನೂ, ನಿರ್ಮಲಜ್ಞಾನಿಯೂ, ಸ್ತಿರಮನಸ್ಕನೂ, ಆಗಿ ಯೋಗಾಭ್ಯಾಸವನ್ನು ಮಾಡಬೇಕು.[11]
ಪ್ರಾಣಾಯಾಮದಿಂದ ಈ ದೋಷಗಳು ಪರಿಹಾರವಾಗುತ್ತವೆ
ಸ್ನಿಗ್ಧಾಂ
ಯವಾಗೂಮತ್ಯುಷ್ಣಾಂ ಭುಕ್ತ್ವಾ ತತ್ರಾವಧಾರಯೇತ್ ।
ಏತೇನ
ಕ್ರಮಯೋಗೇನ ವಾತಗುಲ್ಮಂ ಪ್ರಶಾಮ್ಯತಿ ॥ ೩೯ ॥
ಶ್ರೀಮದ್ವಾಯುಪುರಾಣ
- ಅಧ್ಯಾಯ
೧೧ - ಶ್ಲೋಕ
39
ಭಾವಾರ್ಥ:- ಯೋಗಿಯು ಮನೋಹರವೂ, ಬಿಸಿಯಾಗಿಯೂ
ಇರುವ ಗಂಜಿಯನ್ನು ಕುಡಿದು ಕ್ರಮವಾಗಿ ಯೋಗಾಭ್ಯಾಸವನ್ನು ಮಾಡಬೇಕು. ಈ
ಕ್ರಮದಿಂದ ಯೋಗಾಭ್ಯಾಸವನ್ನು ಮಾಡಿದರೆ ವಾಯುರೋಗವು ಪರಿಹಾರವಾಗುವುದು.
ವಿವರಣೆ:- ಯೋಗಿಯು ಆ ದೋಷಪರಿಹಾರಕ್ಕಾಗಿ ಗುದಾವರ್ತ
ಪ್ರತೀಕಾರನೆಂಬ ಚಿಕಿತ್ಸೆಯನ್ನು ಮಾಡಬೇಕು. ಅದು ಹೇಗೆಂದರೆ ವಾಯುವು
ಅಧೋಗತಿಯಾಗದಂತೆ ತಡೆದು ಮೊಸರು ಗಂಜಿ ಇವನ್ನು ಸೇವಿಸಿ, ಆ ವಾಯುವನ್ನು ಊರ್ಧ್ವಕ್ಕೆ ಹೋಗುವಂತೆ ಪ್ರೇರಿಸಬೇಕು.
ವಾಯುವು ಅಥೋಗತಿಯಾಗದಂತೆ ತಡೆದು ಆ ವಾಯುವನ್ನು ಊರ್ಧ್ವಕ್ಕೆ ಹೋಗುವಂತೆ ಪ್ರೇರಿಸಬೇಕು. ವಾಯುಗ್ರಂಥಿಯನ್ನು ಬಿಡಿಸಿ ಅದನ್ನು ವಾಯು
ಸಂಚಾರಮಾಡುವ ದೇಶದಲ್ಲಿ ಪ್ರಯೋಗಿಸಬೇಕು, ಅದರಿಂದ ಏನೂ
ವಿಶೇಷವಾಗದಿದ್ದರೆ ಆ ವಾತವನ್ನು ಶಿರಸ್ಸಿನಲ್ಲಿ ಧಾರಣೆಮಾಡಬೇಕು. ಕೇವಲ
ಸತ್ವಗುಣಪ್ರಾಚುರ್ಯವುಳ್ಳ ಯೋಗಿಯು ಯೋಗಾಭ್ಯಾಸದಲ್ಲಿ ತನ್ನ ಶರೀರವನ್ನು ನೇಮಿಸಿ ವಾತವನ್ನು
ಅಥೋಗಮನವಾಗದಂತೆ ತಡೆದು ಈ ಚಿಕಿತ್ಸೆಯನ್ನು ಮಾಡಬೇಕು.
ಯೋಗಾಭ್ಯಾಸದಲ್ಲಿ ನಿರತನಾದ ಯೋಗಿಯ ದೇಹದಲ್ಲಿ ಸರ್ವತ್ರ ಕಂಪವಾದರೆ ಈ ಚಿಕಿತ್ಸೆ ಮಾಡುವುದರಿಂದ
ಅವನು ಸುಖಿಯಾಗುವನು. (ಇಲ್ಲಿ ಪ್ರಾಣಾಯಾಮದ ಉಸಿರಾಟದ ಸಮಯದಲ್ಲಿ
ಉಸಿರನ್ನು ಕೆಳ ಮುಖವಾಗಿ ಬಿಡಬಾರದು ಎಂದಿದ್ದಾರೆ. ನಿತ್ಯ ಕೆಳ ಮುಖವಾಗಿ ಹೋಗುವ ಊಸಿನ
ವಿಚಾರವಾಗಿ ಹೇಳಿರುವುದಲ್ಲ, ಅದು ಆರೋಗ್ಯಕ್ಕೆ ಒಳ್ಳೆಯದೇ ಆಗಿದೆ.)
ಮನಸಾ
ಯದ್ವ್ರ್ರತಂ ಕಿಂಚಿತ್ ವಿಷ್ಟಂಭೀಕೃತ್ಯ ಧಾರಯೇತ್ ।
ಉರೋದ್ಛಾತೇ
ಉರಃಸ್ಥಾನಂ ಕಂಠದೇಶೇ ಚ ಧಾರಯೇತ್ ॥ ೪೪ ॥
ಶ್ರೀಮದ್ವಾಯುಪುರಾಣ
- ಅಧ್ಯಾಯ
೧೧ - ಶ್ಲೋಕ
44
ಭಾವಾರ್ಥ:- ಯೋಗಿಯು ಮನಸ್ಸಿನಲ್ಲಿ ಯಾವ ವ್ರತವನ್ನು ಯೋಚಿಸಿ ಧಾರಣೆ ಮಾಡುತ್ತಾನೋ ಅದನ್ನು ಹೃದಯದಲ್ಲಿಯೂ, ಕಂಠಸ್ಥಾನದಲ್ಲಿಯೂ, ಮಾಡಬೇಕು.
ವಿವರಣೆ:- ಹಾಗೆಯೇ ಯೋಗಿಯು ಎಚ್ಚರವನ್ನು ಹೊಂದಿ
ಶಿರಸ್ಸಿನಲ್ಲಿ ವಾಯು ನಿರೋಧವನ್ನು ಮಾಡಬೇಕು.
ಅವನು ಮೃದುವೂ, ಅಲ್ಪವೂ ಆದ ಆಹಾರವನ್ನು
ತೆಗೆದುಕೊಂಡರೆ ಸುಖಿಯಾಗುವನು. ಯೋಗಿಯು ಅಮಾನುಷಿಕವಾದ ಸತ್ವಗುಣದಿಂದ
ಯಾವಾಗ ಸ್ವರ್ಗ, ಭೂಮಿ, ವಾಯು ಮತ್ತು ಅಗ್ನಿ
ಇವುಗಳನ್ನು ತಿಳಿಯುತ್ತಾನೆಯೋ ಆಗ ಧಾರಣೆಯನ್ನು ಮಾಡಬೇಕು. ಯೋಗಿಯು
ಪ್ರಾಣಾಯಾಮದಿಂದ ದಗ್ಧವಾದ ಎಲ್ಲವನ್ನೂ ವಶಪಡಿಸಿಕೊಳ್ಳುವನು. ಆದರೂ
ದೇಹವನ್ನು ವಶಪಡಿಸಿಕೊಳ್ಳುವನು. ಅನಂತರ ಅದನ್ನು ತಡೆಯುವನು. ಅನಂತರ ಯೋಗಾಭ್ಯಾಸದಿಂದ ಶಿರಸ್ಸಿನಲ್ಲಿ ಧಾರಣಮಾಡಿದವನ ಪಾಪಗಳೆಲ್ಲವೂ
ಪ್ರಾಣಾಯಾಮಾಗ್ನಿಯಿಂದ ಸುಟ್ಟು ಲಯವಾಗುವುದು. ಕೃಷ್ಣಸರ್ಪದ
ವಿಷಸಿದ್ಧಿಯನ್ನು ಪಡೆಯುವ ಯೋಗಿಯು ಹೃದಯ ಗುಹೆಯಲ್ಲಿ ಮಹರ್ಲೋಕ, ಜನೋಲೋಕ,
ತಪೋಲೋಕ ಮತ್ತು ಸತ್ಯಲೋಕ ಇವುಗಳನ್ನು ಧಾರಣಮಾಡಬೇಕು. ವಿಷಯುಕ್ತನಾದ
ಯೋಗಿಯು ಮನಸ್ಸಿನಲ್ಲಿ ಸಮುದ್ರಗಳನ್ನೂ, ದೇವತೆಗಳನ್ನೂ ಧ್ಯಾನಿಸಿ
ಸಹಸ್ರಸಂಖ್ಯಾಕವಾದ ಕುಂಭಗಳ ಜಲದಿಂದ ಸ್ನಾನಮಾಡಿದರೆ (ಕುಂಬಕದಿಂದ)
ಆ ವಿಷವು ಪರಿಹಾರವಾಗುವುದು. (ಶ್ರೀಮದ್ವಾಯುಪುರಾಣದಿಂದ)
ಸತ್ವಂ ತಥಾರೋಗ್ಯಮಲೋಲುಪತ್ವಂ । ವರ್ಣಪ್ರಭಾ ಸುಸ್ವರ ಸೌಮ್ಯತಾಚ ॥
ಗಂಧಃ ಶುಭೋ ಮೂತ್ರ ಪುರೀಷಮಲ್ಪಂ । ಯೋಗಃ
ಪ್ರವೃತ್ತಿಃ ಪ್ರಥಮಾಶರೀರೇ ॥ ೬೦॥
ಶ್ರೀಮದ್ವಾಯುಪುರಾಣ - ಅಧ್ಯಾಯ ೧೧ -
ಶ್ಲೋಕ 60
ಭಾವಾರ್ಥ:-
ಬಲ, ಆರೋಗ್ಯ, ಅಚಾಂಚಲ್ಯ,
ಕಾಂತಿ, ಸುಸ್ವರ, ಶಾಂತತೆ,
ಸುಗಂಧ, ಅಲ್ಪವಾದ ಮೂತ್ರ, ಮಲ
ಇವುಗಳು ಶರೀರದಲ್ಲಿ ಉಂಟಾದರೆ ಯೋಗಸಿದ್ದಿಯಾಗಿದೆಯೆಂದು ಈ ಲಕ್ಷಣದಿಂದ ತಿಳಿಯಬೇಕು.
ವಿವರಣೆ:- ಶ್ವಾಸೋಚ್ಚ್ವಾಸಗಳನ್ನೂ ಜಯಿಸಿರುವ ಯೋಗಿಗೆ ಸಾತ್ವಿಕ ರಾಜಸ ತಾಮಸಗಳಾದ
ಬಾಧೆಗಳುಂಟಾಗುವುದಿಲ್ಲ. ನೂತನವಾದ
ಬುದ್ಧಿಶಕ್ತಿ, ಶ್ರವಣ ದೇವತೆಗಳ
ದರ್ಶನ, ಸಂಚಾರ, ಭ್ರಮಣ ಇವುಗಳು ಯೋಗಾಭ್ಯಾಸದಿಂದ ಉಂಟಾಗುವ
ಫಲಗಳಾಗಿವೆ. ಯೋಗ ಪ್ರಭಾವದಿಂದ
ಯೋಗಿಗಳಿಗೆ ವಿದ್ಯೆ, ಕಾವ್ಯ,
ಶಿಲ್ಪ, ವಾಕ್ಚಾತುರ್ಯ, ವಿದ್ಯಾಫಲ, ಇವುಗಳುಂಟಾಗುತ್ತವೆ. ಯೋಗಿಯಾದವನು
ನೂರಾರು ಯೋಜನಗಳ ದೂರದಿಂದ ಉತ್ಪನ್ನವಾಗುವ ಧ್ವನಿಯನ್ನು ಕೇಳಬಲ್ಲನು. ಮತ್ತು ಸರ್ವಜ್ಞನೂ, ಸರ್ವವಿಧಿಗಳನ್ನೂ ತಿಳಿದವನೂ ಆಗಿ ಉನ್ಮತ್ತನಂತೆ
ನಿರ್ಲಿಪ್ತನಾಗುವನು. ಮಹಾಯೋಗಿಯು
ಉಪಸರ್ಗಸಿದ್ಧಿಯನ್ನು ಪಡೆದರೆ ಯಕ್ಷರು, ರಾಕ್ಷಸರು, ಗಂಧರ್ವರು,
ದಿವ್ಯ ಪುರುಷರು, ಇವರನ್ನು ಪ್ರತ್ಯಕ್ಷವಾಗಿ ನೋಡುವನು. ಯೋಗಸಿದ್ಧಿಯನ್ನು ಹೊಂದಿದ ಯೋಗಿಯು ದೇವ, ದಾನವ, ಗಂಧರ್ವ, ಖುಷಿ ಮತ್ತು ಪಿತೃ ಇವರನ್ನು ಸರ್ವತ್ರದಲ್ಲಿಯೂ ಸಾಕ್ಷಾತ್ತಾಗಿ ನೋಡುವನು. ಅವನನ್ನು ಜನರು ಉನ್ಮತ್ತನೆಂದು ಹೇಳುವರು. ಯೋಗಿಯು ಅಂತರಾತ್ಮನಿಂದ ಪ್ರೇರಿತನಾಗಿ
ಭ್ರಾಂತಿಯಿಂದ ಅಲೆದಾಡುತ್ತಾನೆ. ಹೀಗೆ
ಭ್ರಾಂತಿಯಿಂದ ಬುದ್ಧಿಯು ಸಂಪೂರ್ಣವಾಗಿ ಕೂಡಿದ್ದೇ ಆದರೆ ಜಗದ್ವಿಷಯಕವಾದ ಜ್ಞಾನವೆಲ್ಲವೂ ಹೋಗಿ
ಬ್ರಹ್ಮಜ್ಞಾನಿಯಾಗುವನು. ಅವನ
ಅತ್ಯಧಿಕವೂ ಜಗದ್ವಿಷಯಕವೂ ಆದ ತಿಳುವಳಿಕೆಯು ಅಂತರಾತ್ಮನಿಂದ ಪ್ರೇರಿತವಾಗಿ ಚಿತ್ತವನ್ನೇ
ಭ್ರಾಂತಿಗೊಳಿಸುತ್ತದೆ. ಈ ರೀತಿಯಾದ
ತಿಳುವಳಿಕೆಯಿಂದ ಸಾಮಾನ್ಯವಾದ ಬುದ್ಧಿಯೆಲ್ಲವೂ ನಷ್ಟವಾಗಿ ಕೊನೆಗೆ ಬ್ರಹ್ಮವಿಷಯಕವಾದ ಜ್ಞಾನವು
ಉದಯಿಸುವುದು. ಯೋಗಿಯು ಶುಭ್ರವಾದ
ವಸ್ತ್ರವನ್ನು ಅಥವಾ ಕಂಬಳಿಯನ್ನಾಗಲ್ಲೀ ಹೊದ್ದುಕೊಂಡು ತನ್ಮಮನಸ್ಸಿನಿಂದ ಸರ್ವದಾ
ಪರಬ್ರಹ್ಮನನ್ನು ಬೇಗನೆ ಚಿಂತಿಸಬೇಕು. ಆದುದರಿಂದ ಮೇಧಾವಿಯಾದ ಪುರುಷನು ತನಗೆ ಯೋಗಸಿದ್ದಿಯನ್ನು ಬಯೆಸಿದವನಾದರೆ ತನ್ನಲ್ಲಿ
ದೋಷರೂಪವಾದ ಉಪದ್ರವಗಳು ಬಾರದಂತೆ ಜಾಗರೂಕನಾಗಿರಬೇಕು. ಆದುದರಿಂದ ಯೋಗಿಯು ಯೋಗಾಭ್ಯಾಸನಿರತನೂ, ಮಿತಾಹಾರಿಯೂ ಜಿತೇಂದ್ರಿಯನೂ,
ಸುಪ್ತನೂ, ಆಗಿ ಸೂಕ್ಷ್ಮಗಳಾದ ವಿಷಯಗಳನ್ನು ಶಿರಸ್ಸಿನಿಂದ ಧಾರಣೆ
ಮಾಡಬೇಕು. ಯೋಗಿಯು ಮೊದಲು
ಸಮಸ್ತವಾದ ಭೂಮಂಡಲವನ್ನೂ, ಅನಂತರ
ಜಲವನ್ನೂ, ತರುವಾಯ ಅಗ್ನಿಯನ್ನೂ,
ಅನಂತರ ಆಕಾಶ ಮತ್ತು ಮನಸ್ಸನ್ನೂ ಕೂಡ
ಧಾರಣೆಮಾಡಬೇಕು. ನಂತರ ಯತಿಯು
ಪ್ರಯತ್ನಪೂರ್ವಕವಾಗಿ ಬೇರೊಂದು ಸಿದ್ಧಿಯನ್ನು ಉತ್ತಮವೆಂದು ಭಾವಿಸಿ ಧಾರಣೆಮಾಡಜೀಕು. ತರುವಾಯ ಸಿದ್ಧಿಗಳ ಚಿನ್ನೆಗಳನ್ನು ತಿಳಿದು
ಅವುಗಳನ್ನು ಬಿಡುತ್ತಾ ಬರಬೇಕು. ಪೃಥ್ವಿಯನ್ನು
ಧಾರಣೆಮಾಡಿ ಸಿದ್ಧಿಯನ್ನು ಪಡೆದ ಯೋಗಿಗೆ ಪೃಥ್ವಿಯು ಸೂಕ್ಷ್ಮರೂಪವಾಗಿಯೂ, ಆಗುತ್ತದೆ. ಶೀತವಾದ ರಸಗಳೂ ಸಹ ಅವನಿಗೆ ಅಮೃತ ಪ್ರಾಯಗಳಾಗುತ್ತವೆ.
ತೇಜಸ್ಸನ್ನು ಧಾರಣೆಮಾಡಿದವನಿಗೆ ಅಗ್ನಿಯು
ಸೂಕ್ಷ್ಮರೂಪವಾಗಿ ತಿಳಿಯಬರುವುದು. ತರುವಾಯ ಯೋಗಿಯು ತನ್ನನ್ನು ತೇಜೋಮಯನನ್ನಾಗಿ ಭಾವಿಸುವನು. ವಾತವನ್ನು ಧಾರಣೆಮಾಡಿದ ಯೋಗಿಗೆ ಆತ್ಮನು ವಾಯುಮಂಡಲ ರೂಪನಾಗಿ
ಕಾಣಿಸುತ್ತಾನೆ. ಹೀಗೆಯೇ
ಆಕಾಶವನ್ನು ಧಾರಣೆಮಾಡಿದವನಿಗೆ ಆಕಾಶವು ಸೂಕ್ಷ್ಮರೂಪವಾಗಿ ಗೋಚರವಾಗುವುದು. ಆಕಾಶವನ್ನು ಧಾರಣೆಮಾಡಿದ ಯೋಗಿಗೆ ಶಬ್ದವು
ಸೂಕ್ಷ್ಮರೂಪವಾಗಿ ತಿಳಿದುಬರುತ್ತದೆ. ವಾಯುವನ್ನು ಧಾರಣೆಮಾಡಿದ ಯತಿಗೆ ವಾಯುವು ಸೂಕ್ಷ್ಮ ರೂಪವಾಗಿ ಗೋಚರವಾಗುವುದು. ಆಗ ತನ್ನನ್ನು ನಿತ್ಯನನ್ನಾಗಿ ಭಾವಿಸುವನು.
ಅನಂತರ ಮನಸ್ಸಿದ್ಧಿಯುಳ್ಳ ಯೋಗಿಗೆ ಮನಸ್ಸು
ಸೂಕ್ಷ್ಮರೂಪವಾಗುತ್ತದೆ. ಅವನು
ಸೂಕ್ಷ್ಮರೂಪವಾದ ಸರ್ವರ ಮನಸ್ಸನ್ನೂ ಪ್ರವೇಶಿಸಿ ಅದನ್ನು ತಿಳಿಯುತ್ತಾನೆ. ಮತ್ತು ಬುದ್ಧಿ ಸಿದ್ಧಿಯುಳ್ಳವನು ಸೂಕ್ಷ್ಮವಾದ ಪರರ
ಬುದ್ಧಿಯನ್ನು ತಿಳಿದು ಅದನ್ನು ತನ್ನ ವಶವನ್ನಾಗಿ ಮಾಡಿಕೊಳ್ಳುವನು. ಯಾವ ಯೋಗಿಯು ಸೂಕ್ಷ್ಮವಾದ ಈ ಏಳು ವಿಷಯಗಳನ್ನೂ ತಿಳಿದು
ತ್ಯಜಿಸುತ್ತಾನೆಯೋ ಅಂತಹ ಜ್ಞಾನಿಯಾದ ಯೋಗಿಯು ತನ್ನ ಬುದ್ಧಿಶಕ್ತಿಯಿಂದ ಉತ್ತಮಗತಿಯನ್ನು
ಪಡೆಯುವನು. ಯೋಗಿಯು
ಐಶ್ವರ್ಯರೂಪವಾದ ಯಾವ ಯಾವ ಭೂತಗಳಲ್ಲಿ ಸಿದ್ಧಿಯನ್ನು ಪಡೆಯುತ್ತಾನೋ ಆಯಾ ವಿಷಯಗಳಲ್ಲಿಯೇ
ಆಸಕ್ತನಾಗುವನು. ಅದರಿಂದಲೇ ಕೊನೆಗೆ
ನಾಶವಾಗುವನು. ಆದುದರಿಂದ ಯಾವ
ಯೋಗಿಯು ಪರಸ್ಪರ ಸಂಬಂಧಗಳಾದ ಈ ಸೂಕ್ಷ್ಮ ವಿಷಯಗಳನ್ನು ತಿಳಿದು ಅವುಗಳ ಗುಣದೋಷಗಳನ್ನು ತನ್ನ
ಬುದ್ಧಿಶಕ್ತಿಯಿಂದ ಯೋಚಿಸಿ ಅವುಗಳನ್ನು ತ್ಯಜಿಸುತ್ತಾನೋ ಅಂತಹ ಯೋಗಿಯು ಉತ್ತಮಗತಿಯನ್ನು
ಪಡೆಯುವನು. ದಿವ್ಯಜ್ಞಾನಿಗಳೂ
ಮಹಾತ್ಮರೂ ಆದ ಮಹರ್ಷಿಗಳನೇಕರು ಪ್ರಾಪಂಚಿಕ ವಿಷಯಗಳಲ್ಲಿ ಆಸಕ್ತರಾದರೆ ದೋಷಿಗಳಾಗಿಯೂ, ಬದ್ಧರಾಗಿಯೂ ಕೊನೆಗೆ ವಿವೇಚನೆಯಿಂದ ಮುಕ್ತರಾಗಿಯೂ
ಆಗುವರು ಎಂಬ ವಿಷಯವು ತಿಳಿದುಬರುತ್ತದೆ. ಆದುದರಿಂದ ಯೋಗಿಯು ಸೂಕ್ಷ್ಮವಿಷಯಗಳಲ್ಲಿ ಆಸಕ್ತನಾದರೇ ಬದ್ಧನಾಗುವನು. ಆದುದರಿಂದ ಅವುಗಳಲ್ಲಿ ಆಸಕ್ತನಾಗಿರಬಾರದು.
ಆಸಕ್ತಿಯಿಂದ ಅನುರಾಗವೂ, ವೈರಾಗ್ಯದಿಂದ ಬ್ರಹ್ಮಪ್ರಾಪ್ತಿಯೂ ಆಗುವುದು. ಯೋಗಿಯು ಸೂಕ್ಷ್ಮವಾದ ಸಪ್ತವಿಷಯಗಳನ್ನೂ
ಈಶ್ವರ ಸಂಬಂಧಿಯಾದ ಷಡಂಗಗಳನ್ನೂ, ಪ್ರಕೃತಿಯನ್ನೂ ತಿಳಿದು
ಪರಬ್ರಹ್ಮನನ್ನು ಪಡೆಯುವನು. ಜ್ಞಾನಿಗಳು ಸರ್ವಜ್ಞತೇ, ತೃಪ್ತಿ, ಅನಾದಿಬೋಧ, ಸ್ವತಂತ್ರತೇ,
ನಿತ್ಯವೂ ಲುಪ್ತವೂ ಆದ ಶಕ್ತಿ, ಅನಂತಶಕ್ತಿ ಇವು ಆರೂ
ಸ್ವಾಮಿಯಾದ ಮಹೇಶ್ವರನ ಅಂಗಗಳೆಂಬುದಾಗಿ ಹೇಳುವರು. ಬ್ರಹ್ಮನೇ
ಧನವಾಗಿಯುಳ್ಳ ಯೋಗಿಯು ಅಂದರೆ ಬ್ರಹ್ಮಜ್ಞಾನಿಯಾದ ಯೋಗಿಯು, ಉಪಸರ್ಗಗಳಿಂದ
ಬಿಡಲ್ಪಡುತ್ತಾನೆ. ಹೀಗೆ ಜಿತೇಂದ್ರಿಯನೂ, ದೋಷಶೂನ್ಯನೂ,
ಜಿತರಾಗನೂ ಆದ ಯೋಗಿಗೆ ಬಾಹ್ಯಶರೀರದಲ್ಲಿ ಧಾರಣೆಯುಂಟಾಗಿ ಸಕಲೇಷ್ಟ ಸಿದ್ದಿಗಳೂ
ಉಂಟಾಗುತ್ತವೆ. ಯೋಗಿಯು ಈ ಯೋಗಶಕ್ತಿಯಿಂದ ತನ್ನ ದೇಹವನ್ನು ಬಿಟ್ಟು,
ಮತ್ತೊಂದು ಶರೀರವನ್ನು ಪ್ರವೇಶಿಸಿ ಪುನಃ ತನ್ನ ಶರೀರವನ್ನೇ ಹೊಂದಬಲ್ಲನು.
ಸರ್ವಕ್ಕೂ ಮನಸ್ಸೇ ಮುಖ್ಯಕಾರಣವಾಗಿದೆ. ಇಂತಹ
ಸ್ಥಿರಮನಸ್ಕನಾದ ಯೋಗಿಯು ಅಕಾಲದಲ್ಲಿಯೂ ಸೂರ್ಯನನ್ನು ತೋರಿಸಬಲ್ಲನು. ಸಕಲೈಶ್ವರ್ಯ
ಸಂಪನ್ನನ್ನೂ ಸಕಲಗುಣವಂತನೂ, ಬ್ರಹ್ಮಸ್ವರೂಪನೂ ಸ್ವಾಮಿಯೂ ಆದ ಆ
ಮಹೇಶ್ವರನು ಸರ್ವದೇವಾಲಯಗಳಲ್ಲಿಯೂ, ಮತ್ತು ಸರ್ವಜಗತ್ತಿನಲ್ಲಿಯೂ
ಇರುವುದನ್ನು ಯೋಗಿಯು ತಿಳಿಯುವನು. ಯೋಗಿಯು ಪಿಶಾಚರೂಪದಿಂದ ಪಿಶಾಚಗಳ
ಸ್ಥಾನವನ್ನೂ, ರಾಕ್ಷಸರರೂಪದಿಂದ ರಾಕ್ಷಸರ ಸ್ಥಾನವನ್ನೂ, ಗಂಧರ್ವಾಕಾರದಿಂದ ಗಂಧರ್ವರ ಸ್ಥಾನವನ್ನೂ, ಕುಬೇರಾಕಾರದಿಂದ
ಕುಬೇರನ ಸ್ಥಾನವನ್ನೂ, ಇಂದ್ರ ರೂಪದಿಂದ ಇಂದ್ರನ ಸ್ಥಾನವನ್ನೂ,
ಚಂದ್ರ ರೂಪದಿಂದ ಅವನ ಪ್ರದೇಶವನ್ನೂ ಬ್ರಹ್ಮ ರೂಪದಿಂದ ಬ್ರಹ್ಮನ ಸ್ಥಾನವನ್ನೂ,
ಸಾಧಿಸಬೇಕು. ಯೋಗಿಯು ಹೀಗೆ ಬ್ರಹ್ಮ ಸ್ವರೂಪದಿಂದ
ಬ್ರಹ್ಮನನ್ನು ಹೊಂದಿ ಆ ಪ್ರಭುವನ್ನು ಸೇವಿಸಬೇಕು. ಬ್ರಹ್ಮಾಸಕ್ತನಾದ
ಯೋಗಿಯು ಉನ್ಮತ್ತನಂತೆ ವಿರಕ್ತನಾಗುವನು. ಅವನಿಗೆ ಸರ್ವಸಿದ್ಧಿಯೂ ಉಂಟಾಗುವುದು.
ಆದುದರಿಂದ ಯೋಗಾಸಕ್ತನಾದ ಜ್ಞಾನಿಯು ನಿರಂತರದಲ್ಲಿಯೂ ಬ್ರಹ್ಮಜ್ಞಾನಿಯಾಗಿ
ಪೂರ್ವೋಕ್ತಗಳಾದ ಸರ್ವಸ್ಥಾನಗಳನ್ನೂ ತ್ಯಜಿಸಬೇಕು. ಹೀಗೆ
ಸರ್ವತ್ರದಲ್ಲಿಯೂ ವಿರಕ್ತನಾದ ಯೋಗಿಯು ಸರ್ವವ್ಯಾಪಿಯಾಗುವನು.[12]
ಯೋಗಿಗಳಿಗೆ ಎಂಟುವಿಧವಾದ ಐಶ್ವರ್ಯಸಿದ್ಧಿಗಳು ಉಂಟಾಗುತ್ತವೆ.
ಅಣಿಮಾ ಲಘಿಮಾ ಚೈವ ಮಹಿಮಾ ಪ್ರಾಪ್ತಿರೇವ ಚ ।
ಪ್ರಾಕಾಮ್ಯಂ ಚೈವ ಸರ್ವತ್ರ ಈಶತ್ವಂ ಚೈವ ಸರ್ವತಃ ||
ಶ್ರೀಮದ್ವಾಯುಪುರಾಣ - ಅಧ್ಯಾಯ ೧3
-
ಶ್ಲೋಕ 3
ಭಾವಾರ್ಥ:- ಅಣಿಮಾ, ಮಹಿಮಾ,
ಗರಿಮಾ, ಲಘಿಮಾ, ಪ್ರಾಪ್ತಿ,
ಪ್ರಾಕಾಮ್ಯ, ಈಶತ್ವ, ವಶಿತ್ವ
ಎಂಬ ಈ ಅಷ್ಟ ವಿಧವಾದ ಐಶ್ವರ್ಯಗಳು ಯೋಗಾಭ್ಯಾಸದಿಂದ ಉಂಟಾಗುತ್ತವೆ.
ಅಣಿಮಾ : ಒಬ್ಬರ ಗಾತ್ರವನ್ನು ಕಡಿಮೆ
ಮಾಡುವ ಸಾಮರ್ಥ್ಯ
ಮಹಿಮಾ : ಒಬ್ಬರ ಗಾತ್ರವನ್ನು ಹೆಚ್ಚಿಸುವ
ಸಾಮರ್ಥ್ಯ
ಗರಿಮಾ : ಭಾರವಾಗಲು ಸಾಮರ್ಥ್ಯ
ಲಘಿಮಾ : ಹಗುರಾಗುವ ಸಾಮರ್ಥ್ಯ
ಪ್ರಾಪ್ತಿ : ಏನನ್ನೂ ಪಡೆಯುವ ಸಾಮರ್ಥ್ಯ
ಪ್ರಾಕಾಮ್ಯ : ನಿಮ್ಮ ಆಸೆಗಳನ್ನು ಪೂರೈಸುವ
ಸಾಮರ್ಥ್ಯ
ಈಶಿತ್ವ : ಸೃಷ್ಟಿಯ ಮೇಲಿನ ಪ್ರಭುತ್ವ
ವಶಿತ್ವ : ಎಲ್ಲದರ ಮೇಲೆ ನಿಯಂತ್ರಣ
ವಿವರಣೆ:- ಯಾವ ವಸ್ತುಗಳಲ್ಲಿ ಮನಸ್ಸು ಇಷ್ಟಾರ್ಥಗಳನ್ನು ಪಡೆದು ಕೊನೆಯನ್ನು ಹೊಂದುತ್ತದೆಯೋ ಅಂತಹ
ಸರ್ವ ವಸ್ತುಗಳ ವಶೀಕರಣಕ್ಕೆ "ವಶಿತ್ವ" ವೆಂದು ಸಂಜ್ಞೆಯುಂಟಾಗಿದೆ. ಅಂತಹ ವಶಿತ್ವಗಳು ನಾನಾ ಪ್ರಕಾರಗಳಾಗಿಯೂ, ಸಮಸ್ತ ಐಶ್ಚರ್ಯಪ್ರದವಾಗಿಯೂ ಇವೆ. ಲೋಕದಲ್ಲಿ ತತ್ವವು ಸಾವದ್ಯ, ನಿರವದ್ಯ ಮತ್ತು ಸೂಕ್ಷ್ಮವೆಂಬುದಾಗಿ ಮೂರು ವಿಧಗಳು.
ಅವುಗಳಲ್ಲಿ ಪಂಚಭೂತಾತ್ಮಕವಾದ ತತ್ವವು
ಸಾವದ್ಯವೆಂದು ಪ್ರಸಿದ್ಧವಾಗಿದೆ. ಪಂಚಭೂತಾತ್ಮಕವಾದ
ತತ್ವಗಳು, ಇಂದ್ರಿಯಗಳು, ಮನಸ್ಸು ಅಹಂಕಾರ ಇವುಗಳಿಗೆ ನಿರವದ್ಯವೆಂದು ನಾಮವು
ಸಂಭವಿಸಿದೆ. ಪಂಚಭೂತಗಳಲ್ಲಿ ಇಂದ್ರಿಯಗಳು,
ಮನಸ್ಸು ಮತ್ತು ಅಹಂಕಾರ ಇವುಗಳು
ಸೂಕ್ಷ್ಮವಾಗಿ ಪ್ರವರ್ತಿಸಿದರೆ ಅದಕ್ಕೆ “ಸೂಕ್ಷ್ಮ” ವೆಂದು ಸಂಜ್ಞೆಯು
ಉಂಟಾಗಿದೆ. ಸಂಯೋಗವು ಸರ್ವಮಯ
ಆತ್ಮಗತ ಮತ್ತು ಖ್ಯಾತಿಯೆಂದು ಮೂರು ವಿಧವಾಗಿದೆ. ಅದೂ ಸಹ ಸೂಕ್ಷ್ಮವಸ್ತುಗಳಲ್ಲಿಯೇ ಪ್ರವರ್ತಿಸುತ್ತದೆ.[13]
ಪೂರ್ವೋಕ್ತಗಳಾದ ಅಸ್ಟಗುಣಗಳೂ ಕೂಡ ಆ ಪಂಚಭೂತಗಳ
ಸೂಕ್ಷ್ಮ ವಸ್ತುಗಳಲ್ಲಿಯೇ ಪ್ರವರ್ತಿಸುತ್ತವೆ. ಮೂರುಲೋಕಗಳಲ್ಲಿಯೂ, ಸರ್ವಭೂತಗಳಲ್ಲಿಯೂ ಇರುವ ಜೀವನು ಅಸ್ಥಿರನೆಂಬುದು
ವ್ಯಕ್ತವಾಗಿದೆ... ಅಣುರೂಪವಾದ
ಅವ್ಯಕ್ತತತ್ವದಲ್ಲಿ ಈ ಸರ್ವ ಭೂತಗಳೂ ಮತ್ತು ಜಗತ್ತೂ ಸಹ ಅಡಕವಾಗಿದೆ. ಸರ್ವ ಪ್ರಾಣಿಗಳಿಗೂ ಮೂರುಲೋಕಗಳಲ್ಲಿಯೂ ಕೂಡ ಯಾವುದು
ಹೊಂದಲಶಕ್ಯವಾಗಿದೆಯೋ ಅದನ್ನು ನಿಮಗೆ ತಿಳಿಸಿರುತ್ತೇನೆ, ಅಂತಹ ವಸ್ತುವೂ ಕೂಡ ಯೋಗಿಗಳಿಗೆ ಯೋಗಶಕ್ತಿಯಿಂದ ಪಡೆಯಲು
ಸಾಧ್ಯವಾಗಿದೆ. ಅದೇ ಮೊದಲನೆಯ ಯೋಗ
ಮಹಿಮೆಯು. ಯೋಗಸಿದ್ಧಿ ಯಾದರೆ
ಯೋಗಿಯ ಸ್ವರೂಪವು ಸರ್ವಭೂತಗಳಲ್ಲಿರುವ ಹಾರುವ, ನೆಗೆಯುವ ಮತ್ತು ಶೀಘ್ರವಾಗಿ ನಡೆಯುವ ಶಕ್ತಿಯನ್ನು ಪಡೆಯುತ್ತದೆ. ಇದೇ ಯೋಗಸಿದ್ದಿಯ ಎರಡನೆಯ ಲಕ್ಷಣವು. ಮೂರುಲೋಕಗಳಲ್ಲಿರುವ ಸರ್ವಭೂತಗಳ ಪ್ರಾಪ್ತಿಯೇ
ಪ್ರಾಕಾಮ್ಯವಾಗಿದೆ... ಅಂದರೆ
ಹಸ್ತಾಗ್ರದಿಂದ ಚಂದ್ರಸ್ಪರ್ಶಾದಿಗಳು ಆದರೆ ಅದು ಪ್ರಾಪ್ತಿಯೆಂಬ ಸಿದ್ದಿಯ ಫಲವಾಗುತ್ತದೆ.
ಈ ಮಹಿಮೆಯೆ ಮೂರನೆಯ ಯೋಗದ ಮಹಿಮೆಯಾಗಿದೆ.
ಮೂರು ಲೋಕಗಳಲ್ಲಿರುವ ಸರ್ವಭೂತಗಳ
ವಿಸಯವೆಲ್ಲವೂ ಯೋಗಿಗೆ ಅಗಮ್ಯವಾಗದೇ ಗಮ್ಯವಾಗಿಯೇ ಇರುತ್ತದೆ. ಸ್ವೇಚ್ಛೆಯಾಗಿ ಅವನು ವಿಷಯ ಸುಖಗಳನ್ನು
ಪ್ರತಿಬಂಧಕವಿಲ್ಲದೆಯೇ ಅನುಭವಿಸಬಹುದು. ಮೂರು ಲೋಕಗಳಲ್ಲಿರುವ ಸರ್ವಭೂತಗಳಿಗೆ ಉಂಟಾಗುವ ಸುಖದುಃಖಗಳನ್ನು ತಿಳಿಯಬಲ್ಲನು. ಯೋಗಿಯು ವಿಚ್ಛೇದವಿಲ್ಲದೆಯೇ ಸರ್ವಕಾಲಗಳಲ್ಲಿಯೂ
ಸ್ವಾತಂತ್ರ್ಯವನ್ನು ಹೊಂದಿ ಒಡೆಯನಾಗುವನು. ಈ ವಿಷಯದಲ್ಲಿ ಪರಾಧೀನತೆ ಇಲ್ಲ. ಚರಾಚರಾತ್ಮಕವಾದ ಜಗತ್ತೆಲ್ಲವೂ, ಸರ್ವಕಾರ್ಯಗಳೂ ಅವನ ಅಧೀನದಲ್ಲಿರುತ್ತದೆ. ಇಷ್ಟವಿಲ್ಲದಿದ್ದರೆ ಅವನ್ನು ಬಿಡಲೂಬಹುದು. ಚರಾಚರಾತ್ಮಕವಾದ ಜಗತ್ತಿನಲ್ಲಿರುವ ಯಾವ ವಸ್ತುವಿನಲ್ಲಿ ಪುರುಷನ ಕಾಮವು
ಪ್ರವೃತ್ತಿಸುತ್ತದೆಯೋ ಅವುಗಳಲ್ಲಿ ಯೋಗಿಯ ಇಂದ್ರಿಯಗಳು ಸ್ವೇಚ್ಛೆಯಾಗಿ ಸುಖಗಳನ್ನು
ಅನುಭವಿಸಬಹುದು. ಯೋಗಿಯು ಇಚ್ಛೆ
ಪಟ್ಟರೆ ವಿಷಯ ಸುಖಗಳನ್ನು ಅನುಭವಿಸಬಹುದು ಇಲ್ಲವಾದರೆ ತ್ಯಜಿಸಬಹುದು. ಯೋಗಿಯ ಇಚ್ಛಾನುಸಾರವಾಗಿ ಶಬ್ದ, ಸ್ಪರ್ಶ, ರಸ, ಗಂಧ, ರೂಪ ಇವುಗಳಲ್ಲಿ ಮನಸ್ಸು ಪ್ರವರ್ತಿಸುತ್ತದೆ.
ಇಚ್ಛೆಯಿಲ್ಲದಿದ್ದರೆ ಮನಸು ವಿಷಯಗಳಲ್ಲಿ
ಪ್ರವರ್ತಿಸುವುದಿಲ್ಲ. ಅಣಿಮಾದಿ
ಸಿದ್ದಿವಂತನಾದ ಪುರುಷನು ಜನನ ಮರಣಗಳನ್ನು, ಭೇದನ ಛೇದನಗಳನ್ನು,
ದಹನ ಮೋಹಗಳನ್ನು, ಕ್ಷಯ ಲೇಪನಗಳನ್ನು, ನಾಶಕ್ಷರಣಗಳನ್ನು ಮತ್ತು ಖೇದನವನ್ನೂ ಕೂಡ ಎಂದಿಗೂ ಪಡೆಯುವುದಿಲ್ಲ. ಮೇಲೆ ನಿರೂಪಿಸಿರುವ ಛೇದನಾದಿಗಳನ್ನು ಇತರರಿಗೆ ಉಂಟುಮಾಡಬಲ್ಲನು. ತಾನು ಅವುಗಳಿಗೆ ಅಧೀನವಾಗದೆಯೇ ಅವುಗಳನ್ನು ತನ್ನ ಅಧೀನದಲ್ಲಿ ಇಟ್ಟುಕೊಳ್ಳಬಲ್ಲನು.
ಸಿದ್ಧ ಪುರುಷನು ರೂಪ, ರಸ, ಗಂಧ,
ಶಬ್ದ, ಸ್ಪರ್ಶ ವರ್ಣ, ಅವರ್ಣಗಳಿಂದ
ವರ್ಜಿತನೂ ತನಗೆ ಬೇಕಾದರೆ ಇವುಗಳಿಂದ ಸಹಿತನೂ ಆಗುವನು. ಯೋಗಿಯು
ವಿಷಯಸುಖಗಳನ್ನು ಅನುಭವಿಸುವನು. ಆದರೆ ಆ ವಿಷಯಸುಖಗಳಿಗೆ
ಅಧೀನವಾಗುವುದಿಲ್ಲ. ಉತ್ತಮವಾದ ಸೂಕ್ಷ್ಮ ವಸ್ತುಗಳನ್ನರಿತು ತಾನೂ
ಸೂಕ್ಷ್ಮರೂಪಿಯಾಗುವನು. ಇದರಿಂದ ಮೋಕ್ಷವನ್ನೂ ಕೂಡ ಹೊಂದುವನು.
ಪುರುಷನು ಅಪವರ್ಗಕ್ಕಿಂತಲೂ ವ್ಯಾಪಕನೂ,
ಸರ್ವತ್ರವ್ಯಾಪಿಯೂ ಆಗಿರುತ್ತಾನೆ. ಮತ್ತು ಸೂಕ್ಷ್ಮ
ರೂಪಿಯಾಗಿರುವುದರಿಂದ ಪರಮೈಶ್ವರ್ಯವುಳ್ಳವನೂ ಆಗಿರುವನು. ಅತಿಸೂಕ್ಷ್ಮ
ರೂಪವೇ ಐಶ್ವರ್ಯದ ಮತ್ತೊಂದು ಗುಣ. ಅಂತಹ ಶಾಶ್ವತವಾದ ಐಶ್ವರ್ಯವನ್ನು
ಪಡೆದಬಳಿಕ ಅತಿಸೂಕ್ಷ್ಮವೂ ಉತ್ತಮವೂ ಆದ ಮೋಕ್ಷಪದವಿಯನ್ನು ಪಡೆಯಬಹುದು.[14]
ಭ್ರಾಂತರಾಗದೇ ಬ್ರಹ್ಮಜ್ಞಾನಿಗಳಾಗಿ ಮುಕ್ತಿಗೆ ಧ್ಯಾನಿಸಬೇಕು
ಯುಕ್ತಾ ಯೋಗೇನ
ಚೇಶಾನಂ ಸರ್ವತಶ್ಚ ಸನಾತನಂ ।
ಪುರುಷಂ
ಸರ್ವಭೂತಾನಾಂ ತಸ್ಮಾದ್ಧ್ಯಾತಾನ ಮುಹ್ಯತೇ ॥ ೧೩ ॥
ಶ್ರೀಮದ್ವಾಯುಪುರಾಣ
- ಅಧ್ಯಾಯ
೧4 - ಶ್ಲೋಕ 13
ಭಾವಾರ್ಥ:- ಯೋಗಿಗಳಾದ
ಮಹಾತ್ಮರು ಶ್ರೀ ಭಗವಂತನನ್ನು ಸಕಲೈಶ್ವರ್ಯವಂತನೂ, ಸರ್ವ ವ್ಯಾಪಿಯೂ, ಸನಾತನೂ, ಸರ್ವ ಭೂತಾಂತರ್ಯಾಮಿಯೂ, ಎಂಬುದಾಗಿ
ಧ್ಯಾನಮಾಡಿದರೆ (ಭ್ರಾಂತರಾಗದೆಯೇ)
ಜ್ಞಾನಿಗಳಾಗುವರು ಮತ್ತು ಮುಕ್ತರಾಗುವರು.
ವಿವರಣೆ:- ಯಾವನು ಶ್ರೀ ಪರಮಾತ್ಮನನ್ನು ಸಕಲ
ಭೂತಾಂಶರ್ಯಾಮಿಯೂ, ಮಹಾತ್ಮನೂ, ಉತ್ತಮ
ಸ್ವರೂಪಿಯೂ, ನಾಶರಹಿತನೂ ಸರ್ವಪ್ರೇರಕನೂ, ಪರಬ್ರಹ್ಮನೂ
ಎಂಬುದಾಗಿ ಧ್ಯಾನಮಾಡುವನೋ, ಅವನು ಎಂದಿಗೂ ಭ್ರಾಂತನಾಗುವುದಿಲ್ಲ.[15]
ವಿವರಣೆ:- ಹೀಗೆ ಯೋಗದಿಂದ ಬ್ರಹ್ಮಜ್ಞಾನವನ್ನು ಹೊಂದಿದ
ಪುರುಷನು ರಾಗಕ್ಕೆ ವಶನಾಗಿ ಕರ್ಮಾನುಷ್ಠಾನವನ್ನು ಮಾಡಬಾರದು. ಹಾಗೆ ಮಾಡಿದರೆ ರಾಜಸ, ತಾಮಸಗಳಾದ ವಿಷಯಗಳನ್ನು
ಅನುಭವಿಸಿ ಸಂಸಾರದಲ್ಲಿಯೇ ಮುಳುಗಿ ತೇಲುವನು. ಪೂರ್ವೋಕ್ತಕ್ರಮದಲ್ಲಿ
ಪುಣ್ಯ ಕರ್ಮಗಳನ್ನು ಮಾಡಿದ ಪುರುಷನು ಸ್ವರ್ಗಲೋಕದಲ್ಲಿ ದಿವ್ಯ ಸುಖಗಳನ್ನು ಅನುಭವಿಸಿ ಆ
ಪುಣ್ಯವು ಕ್ಷೀಣವಾಗಲು ಸ್ವರ್ಗಲೋಕದಿಂದ ಚ್ಯುತನಾಗಿ ಮನುಷ್ಯ ಲೋಕವನ್ನೇ ಹೊಂದುವನು. ಆದುದರಿಂದ ಬ್ರಹ್ಮನೇ ಸೂಕ್ಷ್ಮನೂ, ಸರ್ವೋತ್ತಮನೂ, ಶಾಶ್ವತನೂ ಆಗಿರುವದರಿಂದ ಅವನನ್ನೇ ಸೇವಿಸಬೇಕು. ಹೀಗೆ
ಸೇವಿಸಿದರೆ ಪರಮಸುಖರೂಪವಾದ ಬ್ರಹ್ಮಪದವಿಯು ದೊರೆಯುವುದು. (ಬ್ರಹ್ಮನೇ
ಸುಖರೂಪಿಯಾಗಿರುವನು.) ಯಜ್ಞ ಯಾಗಾದಿಗಳಿಗೆ ಮಹತ್ತಾದ ದ್ರವ್ಯಗಳನ್ನು
ವ್ಯಯಮಾಡಿ ಮಹಾ ಪ್ರಯಾಸವನ್ನು ಹೊಂದಿ ಸ್ವರ್ಗಸುಖವನ್ನು ಪಡೆದರೂ ಮತ್ತೆ ಈ ಭೂಮಿಯಲ್ಲಿ ಜನಿಸಿ
ಯಮನ ವಶಕ್ಕೆ ಸಿಲುಕಿ ದುಃಖವನ್ನು ಹೊಂದುವನು. ಆದುದರಿಂದ ಮೋಕ್ಷವೇ
ಶಾಶ್ವತವೂ, ಸುಖಪ್ರದವೂ ಆದ ಪರಮ ಪದವಾಗಿದೆ. ಧ್ಯಾನಪರನೂ,
ಬ್ರಹ್ಮಯಜ್ಞಪಾರಾಯಣನೂ ಆದ ಪುರುಷನು ನೂರಾರು ಮನ್ವಂತರಗಳಿಂದಲೂ ಕೂಡ ಆ ಪರಬ್ರಹ್ಮನನ್ನು
ಅತಿಕ್ರಮಿಸಲು ಶಕ್ತನಾಗುವುದಿಲ್ಲ. ಯೋಗಿಯು ಪುರುಷನಾಮಕನೂ, ದೇವರೂಪನೂ, ವಿಶ್ವನಾಯಕನೂ, ವಿಶ್ವರೂಪಿಯೂ,
ಅಸಂಖ್ಯಾತವಾದ, ಪಾದ, ಶಿರಸ್ಸು,
ಕತ್ತು ಇವುಗಳುಳ್ಳವನೂ, ವಿಶ್ವೇಶನೂ, ವಿಶ್ವಜ್ಞನೂ, ನಿಶ್ವಗಂಧಿಯೂ, ಜಗತ್ತಿಗೆ.
ಮೂಲಕಾರಣನೂ, ವಿಶ್ವಾಂಭರಧರನೂ, ಸ್ವಾಮಿಯೂ ಆದ ಪರಬ್ರಹ್ಮನನ್ನು ತಿಳಿದರೂ ಅವನನ್ನು ಮಾರಲು ಅಸಾಧ್ಯವು. ಜ್ಞಾನಿಗಳೂ ಪ್ರಾಕೃತೇಂದ್ರಿಯರಹಿತನೂ, ಸುವರ್ಣರೂಪಿಯೂ,
ಆದ ಪರಬ್ರಹ್ಮನನ್ನು ಯೋಗಮಹಿಮೆಯಿಂದ ನೋಡುತ್ತಾರೆ. ಈ
ಚರ್ಮಚಕ್ಷುಸ್ಸಿನಿಂದ ಅವನನ್ನು ನೋಡಲು ಸಾಧ್ಯವಿಲ್ಲವು. ಯೋಗಿಗಳು ಯೋಗಮಹಿಮೆಯಿಂದ
ಲಿಂಗಶೂನ್ಯನೂ, ಪುರುಷನೂ, ಸುವರ್ಣರೂಪಿಯೂ,
ಪುಲ್ಲಿಂಗಾದಿ ಶಬ್ದವಾಚ್ಯನೂ, ಪ್ರಾಕೃತಗುಣ ಶೂನ್ಯನೂ,
ನಿತ್ಯನೂ, ಸರ್ವವ್ಯಾಪಿಯೂ, ಶುದ್ಧನೂ,
ಅಚಲನೂ, ಪ್ರಕಾಶಕನೂ, ಆದ
ಬ್ರಹ್ಮನನ್ನು ಸದಾ ನೋಡುತ್ತಾರೆ. ಜ್ಞಾನಿಗಳಿಂದ ಹೊಗಳಲ್ಪಡುವವನೂ,
ತೇಜಸ್ವಿಯೂ, ಪ್ರಾಕೃತವಾದ ಹಸ್ತ, ಪಾದ, ಉದರ, ಪಾರ್ಶ್ವ, ರಸನ, ಇವುಗಳಿಲ್ಲದವನೂ, ಇಂದ್ರಿಯಾತೀತನೂ,
ಸೂಕ್ಷ್ಮನೂ, ಅಸದೃಶನೂ, ಆದ
ಭಗವಂತನು ಅಪ್ರಾಕೃತವಾದ ಕರ್ಣಗಳಿಂದ ಕೇಳತಕ್ಕವನೂ ಆಗುವನು. ಪ್ರಾಕೃತ
ನೇತ್ರವಿಲ್ಲದಿದ್ದರೂ ದಿವ್ಯನೇತ್ರಗಳಿಂದ ನೋಡಬಲ್ಲನು. ಆ
ಪರಮೇಶ್ವರನಿಗೆ ತಿಳಿಯದ ವಿಷಯವೇ ಇಲ್ಲ. ಅವನು ಪ್ರಾಕೃತ
ಬುದ್ದಿಶೂನ್ಯನು. ಅವನು ಸರ್ವಜ್ಞನು (ಎಲ್ಲವನ್ನೂ
ತಿಳಿಯುತ್ತಾನೆ.) ಅವನನ್ನು ವೇದಗಳೂ ಸಹ ಸಂಪೂರ್ಣವಾಗಿ ಹೊಗಳಲಾರವು. ಜ್ಞಾನಿಗಳು ಅವನನ್ನು ಉತ್ತಮನೂ, ಮಹಾತ್ಮನೂ, ಜೇತನನೂ, ಸರ್ವಗತನೂ, ಸೂಕ್ಷ್ಮನೂ
ಆದ ಪರಮ ಪುರುಷನೆಂದು ಹೊಗಳುತ್ತಾರೆ. ಲೋಕದಲ್ಲಿ ಮಹಾತ್ಮರಾದ ಮುನಿಗಳು
ಆ ಪರಮಪುರುಷನನ್ನು, ಸಮಸ್ತಲೋಕ ಸೃಷ್ಟಿಗೂ ಮೂಲ ಕಾರಣನೆಂಬುದಾಗಿಯೂ,
ಸರ್ವಭೂತಗಳಿಗೂ, ಕಾರಣವಾದ ಪ್ರಕೃತಿ ನಿಯಾಮಕನೆಂದೂ,
ತಿಳಿದು ತಮ್ಮ ಜ್ಞಾನದೃಷ್ಟಿಯಿಂದ ಅವನನ್ನು ನೋಡುತ್ತಾರೆ. ಈ ಲೋಕದಲ್ಲಿ ಪರಮೇಶ್ವರನು ಸರ್ವತ್ರದಲ್ಲಿಯೂ ಪಾಣಿ, ಪಾದ,
ನೇತ್ರ, ಶಿರಸ್ಸು, ಮುಖ
ಮತ್ತು ಕಿವಿ ಇವುಗಳುಳ್ಳವನೂ, ಸರ್ವವನ್ನೂ ಆವರಿಸಿ ಕೊಂಡಿರುವವನೂ,
ಸರ್ವವ್ಯಾಪಿಯೂ, ಅಂದರೆ ವಿಶ್ವರೂಪಿಯೂ, ಆಗಿರುತ್ತಾನೆ.
ವಾಯುವಿನ ಹಾಗೆ ಪರಮಾತ್ಮ ಸರ್ವಾಂತರ್ಯಾಮಿ
ಪವನೋ ಹಿ ಯಥಾ
ಗ್ರಾಹ್ಯೋ ವಿಚರನ್ ಸರ್ವಮೂರ್ತಿಷು
|
ಪುರಿ ಶೇತೇ
ತಥಾಭ್ರೇ ಚ ತಸ್ಮಾತ್ ಪುರುಷ
ಉಚ್ಯತೇ ।
ಅಥ
ಚೇಲ್ಲುಪ್ತಧರ್ಮಾತ್ತು ಸ ವಿಶೇಷೈಶ್ಚ ಕರ್ಮಭಿಃ ॥ ೧೫ ॥
ಶ್ರೀಮದ್ವಾಯುಪುರಾಣ
- ಅಧ್ಯಾಯ
೧4 - ಶ್ಲೋಕ 15
ಭಾವಾರ್ಥ:- ವಾಯುವು ಸರ್ವತ್ರ ಸಂಚರಿಸುತ್ತಾ ಸರ್ವರ ಹೃದಯದಲ್ಲಿಯೂ, ಹೊರಗೂ ವ್ಯಾಪಿಸಿಕೊಂಡು ಹೇಗೆ ಇರುತ್ತದೆಯೋ,
ಹಾಗೆಯೇ ಪರಮಾತ್ಮನೂ ಕೂಡ, ಸರ್ವರ ಹೃದಯದಲ್ಲಿ ಅಂತರ್ಯಾಮಿಯಾಗಿಯೂ, ಹೊರಗಡೆಯಲ್ಲಿ ನಿಯಾಮಕನಾಗಿಯೂ ಇದ್ದು, ಜಗತ್ತನ್ನೇ ವ್ಯಾಪಿಸಿಕೊಂಡಿರುವನು. ಶರೀರದಲ್ಲಿರುವುದರಿಂದ ಪುರುಷ
ಶಬ್ದವಾಚ್ಯನಾಗಿರುವನು. ಜೀವನು
ವಿಶೇಷ ಕರ್ಮಗಳಿಂದ ಧರ್ಮ ಲೋಪಿಯಾದರೆ ಜನನಮರಣಗಳನ್ನು ಪುನಃ ಪಡೆಯುವನು.
ವಿವರಣೆ:- ಅನಂತರ ಜೀವನು ತನ್ನ ಪೂರ್ವಾರ್ಜಿತ
ಕರ್ಮಶೇಷದಿಂದ ಶುಕ್ರ ಶೋಣಿತ ಸಂಬಂಧವುಳ್ಳವನಾಗಿ ಪುರುಷರ ಮೂಲಕ ಪುನಃ ಪುನಃ ಜನನ ಮರಣಗಳನ್ನು
ಹೊಂದುವನು.[16]
ಆಹಾರ ತೆಗೆದುಕೊಳ್ಳುವ ಮೊದಲು
ಮಾಡಬೇಕಾದಾಗ ಉಸಿರಾಟದ ವಿಧಾನ
ಹುತ್ವಾಷ್ಟಾವಾಹುತೀಃ
ಸಂಯಕ್ ಶುಚಿಸ್ತಡ್ಗತಮಾನಸಃ ।
ವೈಶ್ವಾನರಂ
ಹೃಧಿಸ್ಥಂ ತು ಯಥಾವದನುಪೂರ್ವಶಃ ।
ಆಪಃ ಪೂರ್ವಂ
ಸಕೃತ್ ಪ್ರಾಶ್ಯ ತೂಷ್ಣೀಂ ಭೂತ್ವಾ ಉಪಾಸತೇ ॥
ಶ್ರೀಮದ್ವಾಯುಪುರಾಣ
- ಅಧ್ಯಾಯ
೧5 - ಶ್ಲೋಕ 5
ಭಾವಾರ್ಥ:- ಯೋಗಿಯು ಪರಿಶುದ್ಧನಾಗಿ ಪರಮಾತ್ಮನನ್ನು ಧ್ಯಾನಿಸುತ್ತಾ, ತನ್ನ ಅಂತರ್ಯಾಮಿಯೂ, ಹೃದಯ ಕಮಲದಲ್ಲಿರತಕ್ಕವನೂ, ಅಗ್ನಿ ರೂಪನೂ, ಆದ ಭಗವಂತನಿಗೆ ಎಂಟು ಅಹುತಿಗಳನ್ನು (ಸಂಸ್ಕೃತದಲ್ಲಿ ಆಹುತಿ
ಎಂದರೆ ಆಹ್ವಾನಕೊಡುವುದು) ಕ್ರಮವಾಗಿ ಕೊಟ್ಟು, ಮೊದಲು ಆಚಮನವನ್ನು ಮಾಡಿ ತರುವಾಯ ಅವನನ್ನು ಸೇವಿಸಬೇಕು. (ಮೊದಲು
ಆಚಮನ ಮಾಡಿ ಎಂಟು ಬಾರಿ ವಾಯುವನ್ನು ಸೇವಿಸಬೇಕು ಎಂದು ಹೇಳಲಾಗಿದೆ)
ಪ್ರಾಣಾಯೇತಿ
ತತಸ್ತಸ್ಯ ಪ್ರಥಮಾ ಹ್ಯಾಹುತಿಃ ಸ್ಮೃತಾ ।
ಅಪಾನಾಯ
ದ್ವಿತೀಯಾ ತು ಸಮಾನಾಯೇತಿ ಚಾಪರಾ || 6
ಉದಾನಾಯ
ಚತುರ್ಥೀತಿ ವ್ಯಾನಾಯೇತಿ ಚ ಪಂಚಮಿ ।
ಸ್ವಾಹಾಕಾರೈಃ
ಪರಂ ಹುತ್ವಾ ಶೇಷಂ ಭುಂಜೀತಿ ಕಾಮತಃ ।
ಅಪಃ ಪುನಃ
ಸಕೃತ್ ಪ್ರಾಶ್ಯ
ತ್ರ್ಯಾಚಮ್ಯ ಹೃದಯಂ ಸ್ಪೃಶೇತ್
॥ ೭ ॥
ಶ್ರೀಮದ್ವಾಯುಪುರಾಣ
- ಅಧ್ಯಾಯ
೧5 - ಶ್ಲೋಕ 6 -7
ಭಾವಾರ್ಥ:- ಯೋಗಿಯು ಒಂದು ಸಲ ಆಚಮನವನ್ನು ಮಾಡಿ, ಪ್ರಾಣಾಯ ಸ್ವಾಹ,
ಅಪಾನಾಯ ಸ್ವಾಹ, ಸಮಾನಾಯ ಸ್ವಾಹ, ಉದಾನಾಯ ಸ್ವಾಹ, ವ್ಯಾನಾಯ ಸ್ವಾಹ, ಎಂಬುದಾಗಿ
ಕ್ರಮವಾಗಿ ಐದು ಅಹುತಿಗಳನ್ನು (ಸಂಸ್ಕೃತದಲ್ಲಿ ಆಹುತಿ ಎಂದರೆ
ಆಹ್ವಾನಕೊಡುವುದು) ಕೊಟ್ಟು ಅನಂತರ ಸ್ವೇಚ್ಛೆಯಾಗಿ ಭೋಜನವನ್ನು
ಮಾಡಬೇಕು. ಭೋಜನದಿಂದ ಏಳುವಾಗಲೂೂ ಸಹ ಒಂದು ಸಲ ಆಚಮನವನ್ನು ಮಾಡಬೇಕು.
ಹಸ್ತ ಪ್ರಕ್ಷಾಳನೆಯಾದ (ಶುದ್ದೀಕರಣ ಆದ) ಮೇಲೆ ತ್ರಿರಾಚಮನವನ್ನು ಮಾಡಬೇಕು. ಅದು ಹೃದಯಗತವಾಗುತ್ತದೆ.
ಅನಂತರ ಹೃದಯವನ್ನು ಒಂದುಸಲ ಮುಟ್ಟಿ ಕೊಳ್ಳಬೇಕು.
ವಿವರಣೆ:- ಎಲೈ ಭಗವಂತನೇ ನೀನು ಸರ್ವೋತ್ತಮನೂ ಭಯಂಕರನೂ, ಚತುರನೂ, ಸಕಲೈಶ್ವರ್ಯವಂತನೂ,
ಮೃತ್ಯುಪರಿಹಾರಕನೂ, ಆಗಿರುತ್ತೀಯೇ. ಆದುದರಿಂದ ಹೋಮಮಾಡಿದ ಈ ಹವಿಸ್ಸಿನಿಂದ (ಅನ್ನ ಬ್ರಹ್ಮನ
ರೂಪದಲ್ಲಿ ಸೇವಿಸಿದ ಆಹಾರವನ್ನು ಹೊಟ್ಟೆ ಎಂಬ ಹೋಮ ಕುಂಡದಲ್ಲಿ ಹವಿಸ್ಸನ್ನು ನೀಡಿದ ಎಂಬ ಬೋಧನೆ
ಇದೆ) ನೀನು ನಮಗೆ ಮಂಗಳವನ್ನು ಕೊಡು ಎಂದು ಪ್ರಾರ್ಥಿಸಬೇಕು.[17]
ಪ್ರಾಣವಾಯುಗಳ ಆಧಾರ ಓಂಕಾರ ಧ್ಯಾನಿಸುವ ಇಂದ್ರಿಯ ಸಮೂಹದ ನಿಯಂತ್ರಕ
ಆತ್ಮ
ಓಂ ಪ್ರಾಣಾನಾಂ
ಗ್ರಂಥಿರಸ್ಯಾತ್ಮಾ ರುದ್ರೋ ಹ್ಯಾತ್ಮಾ ವಿಶಾಂತಕಃ ।
ಸ ರುದ್ರೋ
ಹ್ಯಾತ್ಮಾನಃ ಪ್ರಾಣಾ ಏವಮಾಪ್ಯಾಯಯೇತ್ವಯಂ ||
ಶ್ರೀಮದ್ವಾಯುಪುರಾಣ
- ಅಧ್ಯಾಯ
೧5 - ಶ್ಲೋಕ 8
ಭಾವಾರ್ಥ:- ಓಂಕಾರ ಶಬ್ದವಾಚ್ಯನಾದ ಆತ್ಮನೇ ಪ್ರಾಣಗಳಿಗೆ ಆಧಾರನಾಗಿರುವನು. ಆ ಆತ್ಮನೇ ರುದ್ರನಾಗಿರುವನು ಆ ರುದ್ರದೇವನೇ ಆತ್ಮನಿಗೆ ಪ್ರಾಣನಾಗಿರುವನೆಂದು ತಿಳಿದು
ತನ್ನನ್ನು ಪ್ರೀತಿಸಿಕೊಳ್ಳಬೇಕು.
ವಿವರಣೆ:- ತರುವಾಯ ಕಣ್ಣು, ಮೂಗು, ಕಿವಿ
ಹೃದಯ ಇವುಗಳಿಗೆ ಪ್ರಾಣಾಪಾನಗಳೆಂದೂ, ಎರಡು ವಿಧಗಳಾದ
ಆತ್ಮಗಳಿರುತ್ತವೆಯೆಂದೂ, ತಿಳಿಯಬೇಕು. ಪ್ರಾಣಾಪಾನಗಳಲ್ಲಿ
ಪ್ರಾಣವು, ಜೀವನಿಗೆ ಅಂತರ್ನಿಯಾಮಕವಾಗಿಯೂ ಅಪಾನವು
ಬಹಿರ್ನಿಯಾಮಿಕವಾಗಿಯೂ ಆಗಿವೆ. ಅನ್ನ ಶಬ್ದ ವಾಚ್ಯನಾದ ಭಗವಂತನು
ಪ್ರಾಣಾಪಾನ ಶಬ್ದ ವಾಚ್ಯನೂ, ಮೃತ್ಯುರೂಪಿಯೂ ಮತ್ತು ಜೀವನ ಪ್ರದನೂ
ಆಗಿರುತ್ತಾನೆ. ಅದೇ ಅನ್ನವೇ ಬ್ರಹ್ಮರೂಪಿಯೂ, ಪ್ರಜೆಗಳ ಸೃಷ್ಟಿಕರ್ತೃವೂ ಆಗಿದೆ. ಅನ್ನಶಬ್ದವಾಚ್ಯನಾದ ಆ
ಬ್ರಹ್ಮನಿಂದಲೇ ಸರ್ವಭೂತಗಳೂ ಉತ್ಪನ್ನವಾಗುತ್ತವೆ. ಅದರಿಂದಲೇ
ಜೀವಿಸುತ್ತದೆ ಮತ್ತು ವೃದ್ಧಿಯಾಗುತ್ತದೆ. ಆದುದರಿಂದ ಬ್ರಹ್ಮನಿಗೆ
ಅನ್ನ ಬ್ರಹ್ಮನೆಂದು ಹೆಸರು ಬಂದಿದೆ. ಆ ಅಗ್ನಿಯಲ್ಲಿ
ಪ್ರಕಾಶನಾಗಿರತಕ್ಕ ಅನ್ನ ಶಬ್ದ ವಾಚ್ಯನೂ, ಆದಿಕರ್ತನೂ ಆದ ಭಗವಂತನನ್ನೇ
ಗಂಧರ್ವ, ಯಕ್ಷ, ರುಕ್ಷಸ, ಪಿಶಾಚ, ದೇವ ಮತ್ತು ದಾನವ ಇವರು ಪಾಲನಕರ್ತನೆಂದು
ತಿಳಿಯುತ್ತಾರೆ.[18]
ಯೋಗಿಯ ಉತ್ತಮ ಆಹಾರ ಪದ್ದತಿ
ಭೈಕ್ಷಂ
ಯಾವಾಗೂಂ ತಕ್ರಂ ವಾ ಪಯೋಯಾವಕಮೇವ ಚ ।
ಫಲಮೂಲಂ
ವಿಪಕ್ವಂ ವಾ ಪಿಣ್ಯಾಕಂ ಶಕ್ತಿತೋಪಿ ವಾ ॥ ೧೩ ॥
ಇತ್ಯೇತೇ ವೈ
ಮಯಾ ಪ್ರೋಕ್ತಾ ಯೋಗಿನಾಂ ಸಿದ್ಧಿವರ್ಧನಾಃ ।
ಅಹಾರಾಸ್ತೇಷು
ಸಿದ್ಧೇಷು ಶ್ರೇಷ್ಠಂ ಭೈಕ್ಷಮಿತಿ ಸ್ಮೃತಂ ॥ ೧೪ ॥
ಶ್ರೀಮದ್ವಾಯುಪುರಾಣ
- ಅಧ್ಯಾಯ
೧6 - ಶ್ಲೋಕ 13-14
ಭಾವಾರ್ಥ:- ಯೋಗಿಗಳಿಗೆ ಅನ್ನ, ಗಂಜಿ,
ಮಜ್ಜಿಗೆ, ಹಾಲು, ಅಲಸಂದಿ,
ಫಲ, ಗೆಡ್ಡೆ ಗೆಣಸು, ಕಾಯಿ,
ಹಿಂಡಿ ಇವುಗಳು ಸಿದ್ಧಿದಾಯಕವಾದ ಆಹಾರಗಳಾಗಿವೆ.[19]
ವಿವರಣೆ:- ಯೋಗಿಯು ತನಗೆ ಹೇಗೆ ಅಪಮಾನವೂ ಮತ್ತು ತಿರಸ್ಕಾರವೂ
ಆಗುವುದೋ ಕೂಡಿದ ಮಟ್ಟಿಗೂ ಹಾಗೆಯೇ ಭಿಕ್ಷೆಗಾಗಿ ನಡೆದುಕೊಳ್ಳಬೇಕು. ಇದೇ ಯತಿಗೆ ಧರ್ಮದ ಮಾರ್ಗವು. ಸಜ್ಜನರ ಧರ್ಮವನ್ನು ದೂಷಿಸಬಾರದು. ಯತಿಯು ಯೋಗ್ಯರಾದ ಗೃಹಸ್ಥರ ಮನೆಗಳಲ್ಲಿ ಭಿಕ್ಷವನ್ನು
ಸ್ವೀಕರಿಸಬೇಕು. ಆಚಾರ ಶೀಲರಾದ
ಗೃಹಸ್ಥರ ಭಿಕ್ಷೆಯೇ ಪರಮ ಶ್ರೇಷ್ಟವೆಂದು ಉಕ್ತವಾಗಿದೆ. ಇದೇ ಇವನ ಉತ್ತಮ ಜೀವನವು. ಯಾವನು ಪ್ರತಿಮಾಸದಲ್ಲಿಯೂ ದರ್ಭೆಯ ಅಗ್ರದಿಂದ ಬೀಳುವ
ಜಲಬಿಂದುಗಳನ್ನು ಪಾನಮಾಡುವನೋ ಮತ್ತು ಸರಿಯಾದ ರೀತಿಯಿಂದ ಯೋಗ್ಯ ಗೃಹಸ್ಥರ ಭಿಕ್ಷವನ್ನು
ಸ್ವೀಕರಿಸುವನೋ ಅವನು ಎಲ್ಲರಿಗಿಂತಲೂ ಉತ್ತಮನಾಗಿರುವನು. ಯತಿಗಳಗೆ ಕೋಪರಾಹಿತ್ಯ, ಗುರುಸೇವ, ಶೌಚ, ಅಲ್ಪಾಹಾರ, ಸದಾ ಶಾಸ್ತ್ರಾಭ್ಯಾಸ ಇವುಗಳು ನಿಯತನಾದ
ಧರ್ಮಗಳಾಗಿವೆ ಎಂದು ಜ್ಞಾನಿಗಳು ಹೇಳುವರು.
ವೇದಗಳಲ್ಲಿನ ಯಜ್ಞ ಕರ್ಮಗಳ
ಪಾಲನೆಯಿಂದ ರಾಗರಹಿತವಾದ ಧ್ಯಾನ ಪ್ರಾಪ್ತಿ
ವೇದೈ ಸ್ತುತ್ಯಾ
ಸರ್ವಯಜ್ಞ ಕ್ರಿಯಾಸ್ತು । ಯಜ್ಞೇಜಪ್ಯಂ ಜ್ಞಾನಿನಾಮಾಹುರಗ್ರ್ಯಂ ||
ಜ್ಞಾನಾದ್ಧ್ಯಾನಂ
ಸಂಗರಾಗವ್ಯಪೇತಂ | ತಸ್ಮಿನ್ ಪ್ರಾಪ್ತೇ ಶಾಶ್ವತಸೋಪಲಬ್ಧಿಃ || 21
ಶ್ರೀಮದ್ವಾಯುಪುರಾಣ
- ಅಧ್ಯಾಯ
೧6 - ಶ್ಲೋಕ 21
ಭಾವಾರ್ಥ:- ವೇದಗಳು ಸಂಪೂರ್ಣವಾಗಿ ಯಜ್ಞ ಕರ್ಮಗಳನ್ನು ಸ್ತುತಿಸುತ್ತವೆ. ಆ ಕರ್ಮಗಳನ್ನು ಜ್ಞಾನಿಗಳು ಆಚರಿಸುವರು ಇದರಿಂದ ಜ್ಞಾನಿಗಳು
ಮರ್ಯಾದಾರ್ಹರಾಗಿರುವರು. ಅವರ
ಜ್ಞಾನದಿಂದ ರಾಗ ರಹಿತವಾದ ಧ್ಯಾನವೂ ಉಂಟಾಗಿ ಅದರಿಂದ ಶಾಶ್ವತವಾದ ಪರಮಪದವಿಯು ಯೋಗಿಗಳಿಗೆ
ಪ್ರಾಪ್ತವಾಗುವುದು.
ದಮಃ ಶಮಃ
ಸತ್ಯಮಕಲ್ಮಷತ್ವಂ ।
ಮೌನಂಚ ಭೂತೇಷ್ವಖಿಲೇಷ್ವಥಾರ್ಜವಂ ॥
ಅತೀಂದ್ರಿಯ
ಜ್ಞಾನಮಿದಂ ತಥಾರ್ಜವಂ ।
ಪ್ರಾಹುಸ್ತಥಾ ಜ್ಞಾನವಿಶುದ್ಧಸತ್ವಾಃ ॥ ೨೨ ॥
ಸಮಾಹಿತೋ
ಬ್ರಹ್ಮಪರೋಃಪ್ರಮಾದೀ ।
ಶುಚಿಸ್ತಥೈವಾತ್ಮ ರತಿರ್ಜಿತೇಂದ್ರಿಯಃ ॥
ಸಮಾಪ್ನುಯುರ್ಯೋಗಮಿಮಂ
ಮಹಾಧಿಯೋ । ಮಹರ್ಷಯಶ್ಚೈವ
ಮನಿಂದಿತಾಮಲಾಃ ॥
೨೩
ಶ್ರೀಮದ್ವಾಯುಪುರಾಣ
- ಅಧ್ಯಾಯ
೧6 - ಶ್ಲೋಕ 22-23
ಭಾವಾರ್ಥ:- ಜ್ಞಾನಿಗಳು ಶಮ, ದಮ,
ಸತ್ಯ, ಪಾಪರಾಹಿತ್ಯ, ಮೌನ, ಸಕಲಭೂತ ಸಮತ್ವ,
ಇಂದ್ರಿಯಾತೀತವಾದ ಜ್ಞಾನ, ಶಾಸ್ತ್ರ ಜ್ಞಾನ, ರುಜುಮಾರ್ಗ (ಸಾಕ್ಷ್ಯದಿಂದ ರುಜುವಾತಾದ ಮಾರ್ಗ) ಇವುಗಳು
ಬ್ರಹ್ಮಜ್ಞಾನಕ್ಕೆ ಸಾಧಕಗಳೆಂದು ಹೇಳುವರು. ಸ್ಥಿರಚಿತ್ತನೂ, ಬ್ರಹ್ಮಪರನೂ, ಜಾಗರೂಕನೂ,
ಶುಚಿಯೂ, ಆತ್ಮರತನೂ, ಜಿತೇಂದ್ರಿಯನೂ, ಬುದ್ದಿ ವಂತನೂ, ಗಣ್ಯುನೂ,
ಅನಿಂದಿತನೂ, ಅಮಲನೂ, ನಿರ್ದೋಷಿಯೂ ಆದ ಮಹರ್ಷಿಯು ಈ ಯೋಗಾಭ್ಯಾಸದ ಫಲವನ್ನು ಪಡೆಯುವನು. ಅಂದರೆ ಇಂತಹ ಯೋಗಿಗಳು ಪರಮಪದವಿಯನ್ನು ಹೊಂದುವರು.
ವಿವರಣೆ:- ಯೋಗಿಯು ನಿರ್ಜನ ಪ್ರದೇಶಗಳಲ್ಲಿಯೂ, ಗುಹೆಗಳಲ್ಲಿಯೂ, ವನದಲ್ಲಿಯೂ, ನದಿಗಳ ಮರಳಿನಲ್ಲಿಯೂ ಕೂಡ ಸದಾ ವಿರಕ್ತನಾಗಿ ಧ್ಯಾನವನ್ನು ಮಾಡಬೇಕು. ಯಾವನು ವಾಕ್, ಕರ್ಮ, ಮನಸ್ಸು ಎಂಬ ಮೂರು ವಸ್ತುಗಳನ್ನು ತನ್ನ ಅಧೀನದಲ್ಲಿಟ್ಟುಕೊಂಡಿರುತ್ತಾನೋ ಅಂದರೆ ವಾಜ್ಞಿಯಮ
ಮನೋನಿಯಮ, ಕಾಮನಿಯಮಗಳನ್ನು
ಹೊಂದಿರುವನೋ ಅವನಿಗೆ ತ್ರಿದಂಡಿಯೆಂದು ಹೆಸರುಬಂದಿದೆ. ಯೋಗಿಯು ಭಗವಂತನನ್ನು ಪ್ರಾಣ, ನೇತ್ರ, ಸ್ವರ್ಶ,
ಶ್ರೋತ್ರ, ಮನಸ್ಸು, ಬುದ್ಧಿ
ಮತ್ತು ಹೃದಯ ಇವುಗಳಲ್ಲಿ ಸ್ಥಿರವಾಗಿ ನಿಲ್ಲಿಸಿ ಧ್ಯಾನಿಸಿಸಬೇಕು, ಸಂತೋಷ ಚಿತ್ತನಾಗಬೇಕು. ಕಾಲಧರ್ಮಗಳಿನ್ನೂ, ಸಾಂಫಿಕ ಧರ್ಮಗಳನ್ನೂ ಸಂಪೂರ್ಣವಾಗಿ
ತಿಳಿದು ದ್ವಾದಶಾಧ್ಯಾತ್ಮನನ್ನು ಧ್ಯಾನಮಾಡಿದರೆ ಯೋಗ ಧಾರಣೆಯಾಗುವುದು. ಯೋಗಿಯು ನೂರುಸಲ ಅಥವಾ ನೂರೆಂಟುಬಾರಿ ಶಿರಸ್ಸಿನಲ್ಲಿ ಈಶ್ವರನನ್ನು ಧ್ಯಾನಿಸಬೇಕು.
ಹೀಗೆ ಧಾರಣೆಯಾಗದಿದ್ದರೆ ಪ್ರಾಣವಾಯುವು ಎಲ್ಲಾ ಕಡೆಯಲ್ಲೂ ಅಲೆದಾಡುವುದು.
ಅನಂತರ ಜ್ಞಾನಿಯು ಓಂಕಾರದಿಂದ ತನ್ನ ಶರೀರವನ್ನು ತುಂಬಿ ಕೊಂಡು ಅಂದರೆ ಓಂಕಾರ
ಶಬ ವಾಚ್ಯನಾದ ಭಗವಂತನನ್ನು ಧ್ಯಾನಿಸಿ ಶಾಂತಚಿತ್ತನಾಗಿ ಓಂಕಾರ ಪ್ರಚುರನಾಗಿ ಧ್ಯಾನಿಸಿದರೆ
ಸ್ಥಿರವೂ ಅಕ್ಷಯವೂ ಆದ ಪರಮಪದವಿಯನ್ನು ಹೊಂದುವನು.[20]
ಪರಮ ಪದವಿ ಪುರುಷಾರ್ಥ ಮತ್ತು ಉತ್ತಮ
ಲೋಕ ಪ್ರಾಪ್ತಿ
ಯೋಗೇನ ಯೋಗ
ಸಂಪನ್ನಾಃ ಪ್ರವಿಶ್ಯ ಮನಸಾ ಶಿವಂ!
ಅಮಲಂ ನಿರ್ಗುಣಂ
ಸ್ಥಾನಂ ಪ್ರವಿಷ್ಠಾ ವಿಶ್ವಮೀಶ್ವರಂ ||
೩1
ಶ್ರೀಮದ್ವಾಯುಪುರಾಣ
- ಅಧ್ಯಾಯ
23 - ಶ್ಲೋಕ 31
ಭಾವಾರ್ಥ:- ಯೋಗಸಿದ್ಧಿಯುಳ್ಳ ಆ ಮಹಾತ್ಮರು ತಮ್ಮ ಯೋಗಬಲದಿಂದ ಮನಸ್ಸಿನಲ್ಲಿ ಶಿವಂ ಧ್ಯಾನಿಸಿ,
ದೋಷರಹಿತನೂ, ನಿರ್ಗುಣನೂ, ಆದ
ಭಗವಂತನ ಶಾಶ್ವತವಾದ ರುದ್ರಲೋಕವನ್ನು ಹೊಂದಿದರು.
ವಿವರಣೆ:- ಹೀಗೆ ಜ್ಞಾನಿಗಳು ಮೊದಲಾದ ಮಹಾತ್ಮರೂ ಸಹ ಈ ವಿಧವಾದ ಯೋಗಾಭ್ಯಾಸದಿಂದ ಆ ಪರಮಪುರುಷನನ್ನು ಧ್ಯಾನಿಸಿದರೆ
ಶಾಶ್ವತವಾದ ರುದ್ರದೇವನ ಪರಮಪದವಿಯನ್ನು ಹೊಂದುವರು.[21]
ಮೋಕ್ಷೋ
ಧರ್ಮಸ್ತಥಾರ್ಥಶ್ಚ ಕಾಮಶ್ಚೇತಿ ಚತುಷ್ಠಯಂ
|
ತಸ್ಮಾದ್ವೇತ್ತಾ
ಚ ವೇದ್ಯಂ ಚ ಚತುರ್ಧಾ ವೈ ಭವಿಷ್ಯತಿ
|| 75
ಶ್ರೀಮದ್ವಾಯುಪುರಾಣ
- ಅಧ್ಯಾಯ
23 - ಶ್ಲೋಕ 75
ಭಾವಾರ್ಥ:- ಈ ಲೋಕದಲ್ಲಿ ಧರ್ಮ, ಅರ್ಥ, ಕಾಮ,
ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳು ಇರುವುವು. ಇವುಗಳನ್ನು
ತಿಳಿಯುವ ಪುರುಷನು ವೇದ್ಯನಾದ ಭಗವಂತನ ಅನುಗ್ರಹದಿಂದ ಆ ನಾಲ್ಕು ವಿಧಗಳಾದ ಪುರುಷಾರ್ಥಗಳನ್ನೂ
ಪಡೆಯುವನು.
ತಸ್ಮಾಚ್ಚತುರ್ಯುಗಾವಸ್ಥಂ
ಜಗದ್ವೈ ಸ ಚರಾಚರಂ ।
ಚತುರ್ಧಾವಸ್ಥಿತಂ
ಚೈವ ಚತುಷ್ಪಾದಂ ಭವಿಷ್ಯತಿ || ೭೭॥
ಶ್ರೀಮದ್ವಾಯುಪುರಾಣ
- ಅಧ್ಯಾಯ
23 - ಶ್ಲೋಕ 77
ಭಾವಾರ್ಥ:- ಆದುದರಿಂದ
ಚರಚರಾತ್ಮಕವಾದ ಈ ಲೋಕವು ಕೃತ, ತ್ರೇತಾ, ದ್ವಾಪರ, ಕಲಿ ಎಂಬುದಾಗಿ
ನಾಲ್ಕು ಯುಗವುಳ್ಳದ್ದಾಗಿಯೂ, ನಾಲ್ಕು ಧರ್ಮಗಳು ಮತ್ತು ನಾಲ್ಕು
ಪಾದಗಳುಳ್ಳದ್ದಾಗಿಯೂ ಇರುವುದು.
ಭೂರ್ಲೋಕೋಥ
ಭುವರ್ಲೋಕಃ ಸ್ವರ್ಲೋಕೋಥ ಮಹಸ್ತಥಾ।
ಜನಸ್ತಪಶ್ಚ
ಶಾಂತಶ್ಚ ರುದ್ರಲೋಕಸ್ತತಃ ಪರಂ ॥
೭೮॥
ಶ್ರೀಮದ್ವಾಯುಪುರಾಣ
- ಅಧ್ಯಾಯ
23 - ಶ್ಲೋಕ 78
ಭಾವಾರ್ಥ:- ಭೂಲೋಕ, ಭುವರ್ಲೋಕ, ಸ್ವರ್ಲೋಕ,
ಮಹೋಲೋಕ, ಜನೋಲೋಕ, ತಪೋಲೋಕ
ಶಾಂತವಾದ ರುದ್ರಲೋಕವೆಂಬುದಾಗಿ ಸಪ್ತಲೋಕಗಳು ಪ್ರಖ್ಯಾತಗಳಾಗಿವೆ.
ವಿವರಣೆ:- ಆ ಲೋಕಗಳಲ್ಲಿ ಮೂರನೆಯ ಲೋಕವು ಸ್ವರ್ಗಲೋಕವಾಗಿಯೂ, ನಾಲ್ಕನೆಯದು ಮಹರ್ಲೋಕವಾಗಿಯೂ ಇವೆ.
ಅವುಗಳಲ್ಲಿ ಯೋಗಿಗಳಿಗೆ ಉತ್ತರೋತ್ತರ ಲೋಕಗಳು ಶ್ರೇಷ್ಠಗಳಾಗಿವೆ. ಅಂದರೆ ಯೋಗಿಗಳು ತಂತಮ್ಮ ಯೋಗ್ಯತಾನುಸಾರವಾಗಿ ಉತ್ತಮೋತ್ತಮಗಳಾದ ಲೋಕಗಳನ್ನು ಪಡೆಯುವರು. ಜೀವನು ಕರ್ಮಾನುಗುಣವಾಗಿ ಸೃಷ್ಟಿಯನ್ನು ಮಾಡಿರುವನು. ಈ ರೀತಿಯಾಗಿ ಬ್ರಹ್ಮನ ಸತ್ಯಲೋಕ ವಾಸಿಗಳಾದ ಯೋಗಿಗಳೆಲ್ಲರೂ
ಬ್ರಹ್ಮನನ್ನು ತಿಳಿದು ಅಂತರ್ಯಾಮಿಯಾದ ಈಶ್ವರನ ವಿಷಯದಲ್ಲಿ ದ್ವೇಷಾಸೂಯಾದಿಗಳನ್ನು ಬಿಡುವರು.
ಸೃಷ್ಟಿಯಲ್ಲಿರುವ ಪ್ರಜೆಗಳು ದೋಷಗಳಿಂದ ಜನನ ಮರಣಗಳನ್ನು, ವೈರಾಗ್ಯದಿಂದಲೂ, ಜ್ಞಾನದಿಂದಲೂ, ಮುಕ್ತಿಯನ್ನೂ ಪಡೆಯುವರು. ಹೀಗೆ ಜ್ಞಾನಿಗಳಿಗೆ ನಾನು ತಾನೆಂಬ
ಆಹಂಭಾವವು ತೊಲಗಿ ಜ್ಞಾನದಿಂದ ವೈರಾಗ್ಯವು ಸಂಭವಿಸುವುದು. ಮತ್ತು ಇದು ಭೋಜ್ಯವು, ಇವನು ಭೋಕ್ತೃವು ಎಂಬ ನಾನಾ ತತ್ವಜ್ಞಾನದಿಂದ
ಸಂಸಾರಿಗಳಿಗೆ ಭವಬಂಧ ವಿಮೋಚನೆಯು ಉಂಟಾಗುವುದು. ಚೇತನಾಚೇತನಾತ್ಮಕರೂ, (ನಿರಂಜರೂ)
ದೋಷವಿದೂರರೂ, ಶುದ್ಧರೂ ಪ್ರಶಾಂತರೂ
ಆದ ಜ್ಞಾನಿಗಳೆಲ್ಲರೂ ಪರಮಾತ್ಮಗತವಾದ ಮನಸ್ಸುಳವರಾಗಿ ನಿತ್ಯಮುಕ್ತರಾಗುವರು. ವಿರಕ್ತರೂ
ಜಿತೇಂದ್ರಿಯರೂ ಆದ ಬ್ರಹ್ಮಜ್ಞಾನಿಗಳು ಆ ಪರಮಪುರುಷನಲ್ಲಿಯೇ, ಆಸಕ್ತರಾಗುವರು. ಸೃಷ್ಟಿಗೆ ವಿಷಯರಾದ ಜೀವರು ಹಾಗೆ
ಜ್ಞಾನಿಗಳಾಗುವುದಿಲ್ಲ. ಅವರು ಪರಮಾತ್ಮನನ್ನು ತಿಳಿಯದೇ ಪ್ರಪಂಚದ ನಾನಾ ವಿಷಯಕ ಜ್ಞಾನದಿಂದ
ಪ್ರಕೃತಿ ವಶರಾಗಿ ಜನನ ಮರಣ ಪ್ರವಾಹಕ್ಕೆ ಸಿಕ್ಕುವರು. ಅನರ್ಥಗಳಿಗೆ ಅಜ್ಞಾನವೇ ಮುಖ್ಯಕಾರಣವೆಂದು
ಜ್ಞಾನಿಗಳು ತಿಳಿಸುವರು. ಬ್ರಹ್ಮ ಜ್ಞಾನವೇ ಸುಖಕ್ಕೆ ಕಾರಣವೆಂದು ತಿಳಿದು ಜ್ಞಾನ ಸಂಪಾದನೆಯಲ್ಲಿ
ಪ್ರಯತ್ನವನ್ನು ಮಾಡಬೇಕು. ಜ್ಞಾನದಿಂದ ಸಕಲೇಷ್ಟಾರ್ಥಗಳೂ ಸಂಭವಿಸುವುದು. ಬುದ್ಧಿಯು ತ್ಯಾಗದಿಂದ
ವೈರಾಗ್ಯವನ್ನು ಪಡೆಯುವುದು. ಅಂತಹ ವೈರಾಗ್ಯದಿಂದ ಮನಸ್ಸು ಶುದ್ಧ ವಾಗುವುದು. ಹೀಗೆ ಶುದ್ಧವಾದ
ಮನಸ್ಸು ಇತರ ಗುಣಗಳಿಂದ ರಹಿತವಾಗಿ ಕೇವಲ ಸತ್ವ ರೂಪವಾಗುವುದು. ಸಂಬಂಧ ರಹಿತನೂ, ಮನೋವಿಕಾರ ಶೂನ್ಯನೂ, ಆದ ಯೋಗಿಯು ಪರಮಾತ್ಮನಲ್ಲಿಯೇ ಆಶ್ರಯಿಸಿಕೊಂಡಿರುವನು.
ಪರಮಾತ್ಮನನ್ನೇ ಆಶ್ರಯಿಸಿದ ಯೋಗಿಯು ವಿರೂಪನೆಂದೂ, ಪ್ರಾಕೃತ ರೂಪನೆಂದೂ ಹೊಗಳಲ್ಪಡುತ್ತಾನೆ. (
ಶ್ರೀಮದ್ವಾಯುಪುರಾಣದಿಂದ ಸಂಗ್ರಹ)
ಶರೀರವನ್ನು ವಿಮರ್ಶಾಪೂರ್ವಕವಾಗಿ
ತಿಳಿಯುವ ಜ್ಞಾನ
ಯಸ್ಮಾತ್ ಕ್ಷೇತ್ರಂ ವಿಜಾನಾತಿ ತಸ್ಮಾತ್ ಕ್ಷೇತ್ರಜ್ಞ
ಉಚ್ಯತೇ!
ಕ್ಷೇತ್ರ
ಪ್ರತ್ಯಯತೋ ಯಸ್ಮಾತ್ ಕ್ಷೇತ್ರಜ್ಞಃ
ಶುಭ ಉಚ್ಯತೇ ॥ 109॥
ಶ್ರೀಮದ್ವಾಯುಪುರಾಣ
- ಅಧ್ಯಾಯ
40 - ಶ್ಲೋಕ 109
ಭಾವಾರ್ಥ:- ಕ್ಷೇತ್ರವೆಂದರೆ ಶರೀರವೆಂದರ್ಥವು. ಇಂತಹ
ಶರೀರವನ್ನು (ವಿಚಾರ) ವಿಮರ್ಶಾಪೂರ್ವಕವಾಗಿ ತಿಳಿಯುವುದರಿಂದ ಜೀವನು ಕ್ಷೇತ್ರಜ್ಞನಾಗುವನು. ಇಂತಹ
ಶರೀರ ಜ್ಞಾನವು ಅಥವಾ ಜೀವ ಪರಮಾತ್ಮ ಜ್ಞಾನವು ಪರಮಮಂಗಳದಾಯಕವಾಗಿರುವುದು.
ವಿವರಣೆ:-
ಕ್ಷೇತ್ರವೆಂದರೆ ಶರೀರವು. ಕ್ಲೇತ್ರಜ್ಞನೆಂದರೆ ಜೀವನೆಂದು ಸಿದ್ಧವಾಗಿದೆ. ಇಂತಹ ಕ್ಷೇತ್ರಜ್ಞನಾದ
ಜೀವನು ಜ್ಞಾನರೂಪನಾಗಿರುವನು. ಅವನನ್ನು ತಿಳಿದಿರುವ ಪರಮಾತ್ಮರು ಜ್ಞಾನಿಯಾಗಿರುವರು.
ಇದು
ವ್ಯಾಸ ಮಹರ್ಷಿಗಳು ಬರೆದದ್ದು ಬ್ರಹ್ಮವೈವರ್ತ ಎಂಬುದರ ಅಕ್ಷರಶಃ ಅರ್ಥ ಇಂತಿದೆ, "ನೀರು ಅಗ್ನಿ ಒಂದು ವೈದ್ಯ ಮಾಂತ್ರಿಕ ಸೂತ್ರ, ಶಕ್ತಿಯುತವಾಗಿ
ಪ್ರಕಾಶಮಾನವಾದ ಅಮೃತವನ್ನು ಆಹ್ವಾನಿಸುತ್ತದೆ". ಪುರಾಣ ಎಂದರೆ, ಅಕ್ಷರಶಃ ಅರ್ಥ "ಜ್ಞಾನವನ್ನು ನೀಡಲು ಶುದ್ಧೀಕರಿಸುವುದು". ಇದು ಪರ
ವಿದ್ಯೆಯಲ್ಲಿ ಮಹರ್ಷಿಗಳು ಕಂಡುಕೊಳ್ಳುವ ಸತ್ಯ. ಪರ ವಿದ್ಯೆ ಎಂದರೆ ಗೋಪ್ಯ ವಿದ್ಯೆ, ಅಕ್ಷರ ವಿದ್ಯೆ, ಆತ್ಮ ವಿದ್ಯೆ ಎಂದು ಹೇಳುತ್ತಾರೆ.
ಅಮೃತ ರೂಪದ ಈ ಪುರಾಣ ಅರಿತು ಜ್ಞಾನಿಯಾಗುವರು
ಅಮೃತ ಪರಮ ಪೂರ್ವಂ ಭಾರತೀ ಕಾಮಧೇನುಂ ಶ್ರುತಿ ಗಣ ಕೃತ ವತ್ಸೋ
ವ್ಯಾಸದೇವೋ ದುದೋಹ |
ಅತಿರುಚಿರಪುರಾಣಂ ಬ್ರಹ್ಮವೈವರ್ತಮೇತತ್ ಪಿಬತ ಪಿಬತ ಮುಗ್ಧಾ ದುಗ್ಧ
ಮಕ್ಷಯ್ಯಮಿಷ್ಟಂ || 2
ಬ್ರಹ್ಮವೈವರ್ತ ಪುರಾಣ - ಬ್ರಹ್ಮಖಂಡ - ಅಧ್ಯಾಯ 1
ಭಾವಾರ್ಥ:- ಮಹರ್ಷಿಯಾದ
ವ್ಯಾಸನು ವೇದಗಳನ್ನೇ ಕರುವಾಗಿ ಪಡೆದ ಸರಸ್ವತಿಯೆಂಬ ಕಾಮಧೇನುವಿನ ಅಮೃತೋಪಮವಾದ ಹಾಲನ್ನು
ಕರೆದಿರುವನು. ಬಹಳ ಮನೋಹರವಾದ ಬ್ರಹ್ಮವೈವರ್ತ ಮಹಾ ಪುರಾಣ ವೆಂಬುದೇ ಆ ಹಾಲು. ಎಷ್ಟು ಸವಿದರೂ
ತೃಪ್ತಿಯಾಗದ ಈ ಪುರಾಣ ರೂಪವಾದ ಹಾಲನ್ನು ಅಜ್ಞಾನಿಗಳೆಲ್ಲರೂ ಸವಿದು ಜ್ಞಾನಿಗಳಾಗಲಿ.
ಆರೋಗ್ಯಕ್ಕೆ
ಪೂರಕ ಸಲಹೆಗಳು
ವ್ಯಾಧೇಸ್ತತ್ವ
ಪರಿಜ್ಞಾನಂ ವೇದನಾಯಾಶ್ಚ ನಿಗ್ರಹಃ ।
ಏತದ್
ವೈದ್ಯಸ್ಯ ವೈದ್ಯತ್ವಂ ನ ವೈದ್ಯಃ ಪ್ರಭುರಾಯುಷಃ ॥
ಬ್ರಹ್ಮವೈವರ್ತ
ಪುರಾಣ - ಬ್ರಹ್ಮಖಂಡ -
ಅಧ್ಯಾಯ 16 -ಶ್ಲೋಕ 25
ಭಾವಾರ್ಥ:- ರೋಗದ ಯಥಾರ್ಥ ಸ್ವರೂಪವನ್ನು ತಿಳಿದು ವೇದನೆಯನ್ನೂ ಪರಿಹರಿಸ ಬಲ್ಲವನಾದರೆ ಸಾಕು. ಅದರಿಂದ
ವೈದ್ಯ ವೈದ್ಯನೆನಿಸುತ್ತಾನೆ ಹೊರತು ರೋಗಿಗೆ ಆಯುಷ್ಯವಿಲ್ಲದಿದ್ದರೆ ಕೊಡಲಾರ, ಇದ್ದರೆ ತೆಗೆಯಲಾರ. ಆಯುರ್ವೇದ ವಿದ್ಯೆಯರಿತು
ಚಿಕಿತ್ಸಾ ಕ್ರಮ ತಿಳಿದು ಧರ್ಮಿಷ್ಠನೂ ದಯಾಳುವೂ ಆದವನೆ ವೈದ್ಯನೆನಿಸುತ್ತಾನೆ.
ವಿವರಣೆ:- ಜ್ವರಗಳಿಗೆ ಮಂದಾಗ್ನಿ ಜನಕ. ಮಂದಾಗ್ನಿಗೆ
ವಾತಪಿತ್ತಕಫಗಳು. ಅದರಿಂದ ಜ್ವರಗಳು ವಾತಜನ್ಯ ಪಿತ್ತಜನ್ಯ ಕಫಜನ್ಯ ತ್ರಿದೋಷಜನ್ಯಗಳೆಂದು.
ಕಣ್ಣಿಗೆ ನೀರಿನ ಸೇಕ, ವ್ಯಾಯಾಮ,
ಅಂಗಾಲಿಗೆ ಎಣ್ಣೆ ತಿಕ್ಕುವುದು ಕಿವಿಗಳಿಗೂ
ನೆತ್ತಿಗೂ ಎಣ್ಣೆ ಹಾಕುವುದು ಇವೆಲ್ಲ ಜರಾವ್ಯಾಧಿ ನಾಶಕ. ವಸಂತದಲ್ಲಿ ಓಡಾಟವನ್ನೂ ಬೆಂಕಿ ಕಾಯಿಸುವುದನ್ನೂ
ಕಡಿಮೆ ಮಾಡಬೇಕು. ಸೆಕೆಗಾಲದಲ್ಲಿ ಬಾವಿನೀರಿನ ಸ್ನಾನ. ಮೈಗೆ ಚಂದನ ಲೇಪ, ಗಾಳಿಸೇವನೆ. ಮಳೆಗಾಲದಲ್ಲಿ ಬಿಸಿನೀರ ಸ್ನಾನ.
ಮಳೆಯಲ್ಲಿ ನೆನೆಯದಿರುವುದು, ಕಾಲಕ್ಕೆ
ಮಿತವಾಗಿ ಉಣ್ಣುವುದು. ಶರತ್ಕಾಲದಲ್ಲಿ ಭೂಸಂಚಾರ ವರ್ಜನ, ಬಾವಿನೀರಿನ ಸ್ನಾನ, ಮಿತಾಹಾರ. ಹೇಮಂತದಲ್ಲಿ ಬಾವಿ ನೀರಿನ ಸ್ನಾನ, ಆಗಾಗ ಬೆಂಕಿ ಕಾಯಿಸಿಕೊಳ್ಳುವುದು. ಆಗತಾನೆ ಪಾಕ
ಮಾಡಿದ ಬೆಚ್ಚನೆ ಅನ್ನ ಉಣ್ಣುವುದು, ಶಿಶಿರದಲ್ಲಿ ಬಿಸಿನೀರಿನ ಸ್ನಾನ ಆಗಾಗ ಬೆಂಕಿ ಕಾಯಿಸಿಕೊಳ್ಳುವುದು, ಆಗತಾನೆ ಪಾಕ ಮಾಡಿದ ಬೆಚ್ಚನೆ ಅನ್ನ ಉಣ್ಣುವುದು -
ಹೀಗೆ ಮಾಡುತ್ತಿದ್ದರೆ ಮುಪ್ಪು ಬರುವುದಿಲ್ಲ. ಹಸಿದಾಗ ಆಹಾರ ಉಣದಿದ್ದರೆ ನಾಭಿ ದೇಶದಲ್ಲಿರುವ
ಮಣಿಪೂರ ಚಕ್ರದಲ್ಲಿ ಪಿತ್ತದೋಷ ಉತ್ಪನ್ನವಾಗುವುದು. ತಾಳೆಯ ಹಣ್ಣು ಬೇಲದ ಹಣ್ಣು ತಿಂದು ಒಡನೆ
ನೀರು ಕುಡಿದರೆ ಅದೇ ಪಿತ್ತವಾಗಿ ಬೇಗನೆ ಪ್ರಾಣನಾಶಕವಾಗುವುದು. ನೆತ್ತಿಗೆ ಬಹಳ ಬಿಸಿಯಾದ ನೀರು
ಎರೆದುಕೊಂಡರೆ ಭಾದ್ರಪದದಲ್ಲಿ (ಆಗಸ್ಟ, ಸೆಪ್ಟೆಂಬರ್ ನಲ್ಲಿ ಬರುವುದು) ಕಹಿ ಪದಾರ್ಥ ತಿಂದರೆ ಪಿತ್ತ ಪ್ರಕೋಪ ಉಂಟಾಗುವುದು.
ಸಕ್ಕರೆಯೊಡನೆ ಕೊತ್ತಂಬರಿ ಬೀಜದ ಪುಡಿ, ತಣ್ಣೀರಲ್ಲಿ ಕಲಸಿದ ಹಿಟ್ಟು, ಕಡಲೆಗಳು, ಮೊಸರು ಮಜ್ಜಿಗೆ
ಹೊರತಾಗಿ ಬೇರೆ ಎಲ್ಲ ಗವ್ಯಗಳು ಅಂದರೆ ಹಾಲು ತುಪ್ಪ ಸೆಗಣಿ ಗಂಜಲಗಳು, ಪಕ್ವವಾದ ಬೇಲದ ಹಣ್ಣು ತಾಳೆ ಹಣ್ಣುಗಳು, ಶುಂಠಿ, ಹೆಸರುಕಾಳಿನ ಕಟ್ಟು ಸಕ್ಕರೆ ಬೆರೆಸಿದ ಎಳ್ಳಿನ ಪುಡಿ ಇವನ್ನು
ಸೇವಿಸಿದರೆ ಬೇಗನೆ ಪಿತ್ತ ಶಮನವಾಗುವುದು ಬಲ ಪುಷ್ಟಿ ದೊರೆಯುವುದು. ಊಟವಾದೊಡನೆ ಸ್ನಾನ,
ಬಾಯಾರಿಕೆ ಇಲ್ಲದಾಗ ನೀರು ಕುಡಿಯುವುದು,
ಎಳ್ಳಣ್ಣೆ, ತಂಗಳನ್ನ, ಮಜ್ಜಿಗೆ, ಹೆಚ್ಚು ಕಳಿತ ಬಾಳೆಹಣ್ಣು, ಮೊಸರು, ಮಳೆನೀರು, ಸಕ್ಕರೆ ಬೆರೆಸಿದ ನೀರು, ಎಳನೀರು, ಮೈಗೆ ಎಣ್ಣೆ ಹಚ್ಚದೆ ಹಳೆ ನೀರಲ್ಲಿ ಸ್ನಾನ, ಕಳಿತ ಮುಂಜಾಹಣ್ಣು, ಬಲಿತ
ಸೌತೆಕಾಯಿ, ಮಳೆಗಾಲದಲ್ಲಿ
ಬಾವಿನೀರಿನ ಸ್ನಾನ -ಇವೆಲ್ಲ ಕಫದೋಷ ಉಂಟುಮಾಡುವುವು. ಕಫ ಮಾನವನ ಬ್ರಹ್ಮರಂಧ್ರದಲ್ಲಿ
ಉತ್ಪನ್ನವಾಗುವುದು, ಬಹಳ ವೀರ್ಯ
ನಾಶಮಾಡುವುದು, ಬೆಂಕಿಕಾಯಿಸಿ ಮೈ
ಬೆವರಿಸಿಕೊಳ್ಳುವುದು, ಕಣ್ಣಿಗೆ
ಅಂಜನ, ಕಾಸಿದ ಎಣ್ಣೆ ಹೆಚ್ಚು
ಸಂಚಾರ, ಒಣಗಿದ ಪದಾರ್ಥ, ಹೆಚ್ಚು ಕಳಿತಿಲ್ಲದ ಬಾಳೆಹಣ್ಣು, ಮಸಾಲೆ ಪದಾರ್ಥಗಳು, ಲಕ್ಕಿ ಸೊಪ್ಪು, ಅನ್ನಪಾನ ಬಿಡುವುದು, ತುಪ್ಪದೊಂದಿಗೆ ಬೂರುಗಚೂರ್ಣ, ತುಪ್ಪ ಬೆರೆಸಿದ ಸಕ್ಕರೆ, ಮೆಣಸು, ಹಿಪ್ಪಲಿ ಒಣಶುಂಠಿ ಜೀವಕ ಬೇರು ಜೇನುತುಪ್ಪ ಇವೆಲ್ಲ ಬೇಗನೆ ಕಫ ನಾಶಮಾಡಿ ಬಲಪುಷ್ಟಿ
ನೀಡುವುವು. ಊಟವಾದೊಡನೆ ನಡೆಯುವುದು, ಓಡುವುದು, ಕಟ್ಟಿಗೆ
ಒಡೆಯುವುದು, ಸದಾ ಚಿಂತೆ, ಜಿಡ್ಡೆ ಇಲ್ಲದ ಆಹಾರ, ಉಪವಾಸ, ಯುದ್ಧ ಜಗಳ, ಕ್ರೂರಮಾತು,
ಭಯ ಶೋಕ ಇವೆಲ್ಲ ವಾತದೋಷಕ್ಕೆ ಕಾರಣಗಳು.
ಭ್ರೂಮಧ್ಯದಲ್ಲಿರುವ ಆಜ್ಞಾಚಕ್ರದಲ್ಲಿ ಇದರ ಉತ್ಪತ್ತಿ. ಕಳಿತ ಬಾಳೆಹಣ್ಣು, ಮಾದಳದ ಹಣ್ಣಿನೊಂದಿಗೆ ಸಕ್ಕರೆ ಬೆರೆಸಿದ ನೀರು,
ಎಳನೀರು, ಆಗತಾನೆ ಕಡೆದ ಮಜ್ಜಿಗೆ ಬೆರೆಸಿದ ಹಿಟ್ಟು, ಎಮ್ಮೆಯ ಹಾಲಿನ ಮೊಸರು, ಸಿಹಿಮೊಸರು, ತಂಗಳನ್ನ, ಯಗಚಿಹಣ್ಣು, ತಣ್ಣೀರು,
ಕಾಸಿದ ಎಣ್ಣೆ, ಎಳ್ಳೆಣ್ಣೆ
ನೀರು ಹಿಪ್ಪಲಿ, ತಾಳಹಣ್ಣು ಖರ್ಜೂರ,
ಬಿಸಿಮಾಡಿದ ನೆಲ್ಲಿರಸ, ತಣ್ಣಗಾಗದ ಬಿಸಿನೀರಸ್ನಾನ, ಚಂದನಗಂಧ ಲೇಪನ, ತಾವರೆ ಎಲೆ ಹಾಸಿ ಮಲಗುವುದು, ಬೀಸಣಿಗೆಯಿಂದ ಬೀಸಿಕೊಳ್ಳುವುದು ಇವೆಲ್ಲ ವಾತ ದೋಷಹರ. ಕ್ಲೇಶ
ಸಂತಾಪ ಕಾಮಬಾಧೆಗಳಿಂದ ಎಂದು ವಾತ ಮೂರು ಬಗೆಯಾಗಿ ಹುಟ್ಟುತ್ತದೆ.[22]
ಪ್ರಜ್ವಲಿಸುವ ಮಂತ್ರವನ್ನು ನುಂಗುವುದರಿಂದ ಚಲಿಸುವ ಅವನು ನಿಜವಾದ
ಗುರು
ಸರ್ವೇಷಾಂ ಚ
ಗುರೂಣಾಂ ಚ ಜನ್ಮದಾತಾ ಪರೋ ಗುರುಃ |
ಪಿತುಃ ಶತಗುಣಾ
ಮಾತಾ ಪೂಜ್ಯಾ ವಂದ್ಯಾ ಗರೀಯೆಸೀ ||
೧೪೩ ||
ವಿದ್ಯಾದಾತಾ
ಮಂತ್ರದಾತಾ ಜ್ಞಾನದೋ ಹರಿಭಕ್ತಿದಃ |
ಪೂಜ್ಯೋ
ವಂದ್ಯಶ್ಚ ಸೇವ್ಯಶ್ಚ ಮಾತುಃ ಶತಗುಣೋ ಗುರುಃ |
೧೪೪ ॥
ಮಂತ್ರಾದ್ಯುದ್ಗಿರಣೇನೈವ[23]
ಗುರುರಿತ್ಯುಚ್ಯತೇ ಬುಧೈಃ 1
ಅನ್ಯೋ ವಂದ್ಯೋ
ಗುರುರಯಮನ್ಯಶ್ಚಾರೋಪಿತೋ ಗುರುಃ ॥ ೧೪೫ ॥
ಸಂಪುಟ 9, ಅಧ್ಯಾಯ-59 - ಶ್ರೀ ಕೃಷ್ಣ ಜನ್ಮ ಖಂಡ
ಭಾವಾರ್ಥ:- ಎಲ್ಲ ಗುರುಗಳಿಗಿಂತಲೂ ಜನ್ಮದಾತೃವಾದವನು ಪರಮಗುರು ವೆನಿಸುವನು. ತಾಯಿಯಾದವಳು ತಂದೆಗಿಂತ
ನೂರರಷ್ಟು ಪೂಜ್ಯಳೂ, ವಂದ್ಯಳು,
ಶ್ರೇಷ್ಠಳು ಆಗಿರುವಳು. ವಿದ್ಯಾಬೋಧಕನು, ಮಂತ್ರೋಪದೇಶಕನು, ಜ್ಞಾನ ಮತ್ತು ಹರಿಭಕ್ತಿಯನ್ನು (ಹರಿ
ಎಂದರೆ ಸಂಸ್ಕೃತ ಅಕ್ಷರ ಅರ್ಥದಲ್ಲಿ 'ಚಲಿಸುವ ವೈದ್ಯ' ಇದು ಆತ್ಮ ಶಕ್ತಿಯಿರಬಹುದು, ವಾಯು ಶಕ್ತಿ ಇರಬಹುದು)
ಕೊಡುವವನು ಆದ ಗುರುವು ತಾಯಿಗಿಂತಲೂ ನೂರರಷ್ಟು ಪೂಜ್ಯನು, ವಂದ್ಯನು, ಸೇವ್ಯನು ಎನಿಸುವನು. ಪ್ರಜ್ವಲಿಸುವ
ಮಂತ್ರವನ್ನು ನುಂಗುವುದರಿಂದ ಚಲಿಸುವ ಅವನು "ಗುರು" ವೆಂದು ಪಂಡಿತರು ಹೇಳುವರು. ಈ
ಗುರುವೊಬ್ಬನೇ ನಿಜನಾಗಿ ವಂದ್ಯನು. ಉಳಿದವರೆಲ್ಲರೂ ಗುರುತ್ವವನ್ನು ಆರೋಪಿಸಲ್ಪಟ್ಟವರು.
ಆತ್ಮಜ್ಞಾನ ಜನ್ಮಮೃತ್ಯು
ಜರಾವ್ಯಾಧಿಗಳ ಪರಿಹಾರಕ
ಪರಮಾಧ್ಯಾತ್ಮಿಕಂ
ಜ್ಞಾನಂ ಜ್ಞಾನಿನಾಂ ಚ ಸುದುರ್ಲಭಂ!
ವೇದಶಾಸ್ತ್ರೇ
ಗೋಪನೀಯಂ ತುಭ್ಯಮೇವ ದದಾಮ್ಯಹಂ ॥ 14 ||
ಸಂಪುಟ 9, ಅಧ್ಯಾಯ-78 - ಶ್ರೀ ಕೃಷ್ಣ ಜನ್ಮ ಖಂಡ
ಭಾವಾರ್ಥ:- ಜ್ಞಾನಿಗಳಿಗೂ ಸುದುರ್ಲಭವಾದ ವೇದಶಾಸ್ತ್ರಗಳಲ್ಲಿ ವ್ಯಕ್ತವಾಗದಿರುವ ದಿವ್ಯವಾದ
ಆಧ್ಯಾತ್ಮಿಕ ಜ್ಞಾನವನ್ನು ನಾನು ನಿನಗೆ ಬೋಧಿಸುವೆನು, ಸಾವಧಾನದಿಂದ ಕೇಳು.
ಮುಂದುವರಿದ
ವಿವರಣೆ:- ಎಲೈ ನಂದನೇ, ಯಾವ ದಿವ್ಯಜ್ಞಾನವನ್ನು ಅಭ್ಯಾಸ ಮಾಡುವುದರಿಂದ
ಜನ್ಮಮೃತ್ಯು ಜರಾವ್ಯಾಧಿಗಳು ಪರಿಹಾರವಾಗುವುವೋ ಆ ದಿವ್ಯ ಜ್ಞಾನವನ್ನು ಬೋಧಿಸುವೆನು, ಸಾವಧಾನದಿಂದ ಕೇಳುವವನಾಗು. ಎಲೈ ವ್ರಜೇಶ್ವರನೇ,
ನೀನು ಸ್ಥಿರಚಿತ್ತನಾಗಿ ಗೋಕುಲಕ್ಕೆ
ಹಿಂತಿರುಗುವವನಾಗು, ನಾನು ಬೋಧಿಸುವ
ದಿವ್ಯಜ್ಞಾನವನ್ನು ಪಡೆದು ಶೋಕ ಮೋಹರಹಿತನಾಗಿ ಸರ್ವದಾ ಆನಂದದಿಂದಿರು. ಸಚರಾಚರಾತ್ಮಕವಾದ ಸಕಲ
ಸಂಸಾರವೂ ಸಹ ನೀರಿನ ಗುಳ್ಳಿಯಂತೆ ಚಂಚಲವೂ ಮೋಹಕಾರಣವೂ ಆಗಿರುವುದಲ್ಲದೆ ಸ್ವಪ್ನವು ಎಚ್ಚರವಾದಾಗ
ಹೇಗೆ ಸುಳ್ಳಾಗುವುದೋ ಹಾಗೆ ನಶ್ವರವಾದುದು. ಮಿಥ್ಯಾರೂಪವಾದ ಮತ್ತು ಕೃತ್ರಿಮವಾದ ಜಗತ್ತಿನ
ನಿರ್ಮಾಣಕ್ಕೆ ಪಂಚ ಮಹಾಭೂತಗಳು ಕಾರಣವಾಗಿವೆ. ಮಾಯೆಗೊಳಗಾದ ಮನುಜನು ಈ ಜಗತ್ತಿನಲ್ಲಿ ಸತ್ಯಬುದ್ಧಿಯನ್ನು
ಹೊಂದುವನು. ಮನುಜನು ಕಾಮ ಕ್ರೋಧ ಲೋಭ ಮತ್ತು ಮೋಹಕ್ಕೆ ಒಳಗಾಗಿ ಸಕಲ ಕಾರ್ಯಗಳಲ್ಲೂ
ನಿರತನಾಗುವನು. ದುರ್ಬಲನಾದ ಮನುಜನು ಮಾಯೆಯಿಂದ ಮೋಹಿತನಾಗಿ ಜ್ಞಾನ ಹೀನನಾಗುವನು. ನಿದ್ರೆ,
ಸೊಮಾರಿತನ, ಹಸಿವು, ಬಾಯಾರಿಕೆ, ಅಸಹನೆ, ಅಶ್ರದ್ಧೆ,
ಲಜ್ಜೆ, ಶಾಂತಿ, ಧೃತಿ ತುಪ್ಪಿ, ಪುಷ್ಟಿ
ಮುಂತಾದ ಭಾವಗಳಿಂದ ಕೂಡಿ ಮನುಜನು ಚಂಚಲನಾಗುವನು.
ಮನೋಬುದ್ಧಿ
ಚೇತನಾಭಿಃ ಪ್ರಾಣಜ್ಞಾನಾತ್ಮಭಿಃ ಸಹ |
ಸಂಸಕ್ತಃ
ಸರ್ವದೇವೈಶ್ಚ ಯಥಾ ವೃಕ್ಷಶ್ಚ ವಾಯಸೈಃ ||
೨೧
ಅಹಮಾತ್ಮಾ ಚ
ಸರ್ವೇಶಃ ಸರ್ವಜ್ಞಾನಾತ್ಮಕಃ ಸ್ಮೃತಃ |
ಮನೋ ಬ್ರಹ್ಮಾ ಚ
ಪ್ರಕೃತಿರ್ಬುದ್ಧಿರೂಪಾ ಸನಾತನೀ ||
೨೨
ಪ್ರಾಣಾ
ವಿಷ್ಣುಶ್ಚೇತನಾ ಸಾ ಪದ್ಮಾ ತು ಚಾಧಿದೇವತಾ |
ಮಯಿ ಸ್ಥಿತೇ
ಸ್ಥಿತಾಃ ಸರ್ವೇ ಗತಾಸ್ತೇsಪಿ ಗತೇ ಮಯಿ ॥ ೨೩
ಸಂಪುಟ 9, ಅಧ್ಯಾಯ-78 - ಶ್ರೀ ಕೃಷ್ಣ ಜನ್ಮ ಖಂಡ
ಭಾವಾರ್ಥ:- ಮರವು ಕಾಗೆಗಳಿಂದ ಪರಿವೃತವಾಗಿರುವಂತೆ ಜೀವಿಯು ಮನಸ್ಸು ಬುದ್ಧಿ, ಚೇತನ, ಪ್ರಾಣ, ಜ್ಞಾನ ಮುಂತಾದ ರೂಪದಿಂದಿರುವ ದೇವತೆಗಳಿಂದ ಪರಿವೃತನಾಗಿರುವನು. ಸರ್ವೇಶ್ವರನಾದ ನಾನು ಸಕಲ
ಜೀವಿಗಳ ಆತ್ಮ ಸ್ವರೂಪನೂ ಜ್ಞಾನಾತ್ಮಕನೂ ಆಗಿರುವೆನು. ಬ್ರಹ್ಮನು ಮನೋರೂಪದಿಂದಲೂ, ಸನಾತನಿಯಾದ ಪ್ರಕೃತಿಯು ಬುದ್ಧಿ ರೂಪದಿಂದಲೂ
ಇರುವರು. ವಿಷ್ಣುವು ಪ್ರಾಣಗಳ ರೂಪದಿಂದಲೂ, ಲಕ್ಷ್ಮಿಯು ಪ್ರಾಣದೇವತೆಯಾದ ಚೇತನಾ
ರೂಪದಿಂದಲೂ ಇರುವರು. ನಾನು ದೇಹದಲ್ಲಿರುವವರೆವಿಗೂ ಆ ದೇವತೆಗಳೆಲ್ಲ ದೇಹದಲ್ಲಿರುವರು. ನಾನು
ಹೊರಟು ಹೋದರೆ ಅವರೂ ಹೊರಟು ಹೋಗುವರು.
ಹೆಚ್ಚುವರಿ
ವಿವರಣೆ:- ಮೇಲೆ ಹೇಳಿದ ಈ
ದೇವತೆಗಳೆಲ್ಲ ಹೊರಟುಹೋದರೆ ಕೂಡಲೇ ದೇಹದ ಪತನವಾಗುವುದು. ಕೂಡಲೇ ಪಂಚಭೂತಗಳು ಮಹಾ ಭೂತಗಳಲ್ಲಿ
ಲೀನವಾಗುವುವು. ಜೀವಿಗಳ ಸಂಕೇತಾತ್ಮಕವಾದ ನಾಮ ರೂಪಾದಿಗಳೆಲ್ಲ ಅಜ್ಞಾನ ಮಯವಾದುದು, ಆದುದರಿಂದ ಎಲೈ ತಾತನೇ, ದೇಹವು ನಾಶವಾದರೆ ಅಜ್ಞಾನಿಗಳಿಗೆ ಶೋಕವುಂಟಾಗುವುದೇ ಹೊರತು
ಜ್ಞಾನಿಗಳಿಗೆ ಅಲ್ಲ. ನಿದ್ರಾದಿ ಸಕಲ ಶಕ್ತಿಗಳೂ
ಸಹ ಪ್ರಕೃತಿಯ ಅಂಶದಿಂದಿರುವವು ಲೋಭಾದಿಗಳೂ, ಪ್ರಾಣ, ಮನಸ್ಸು. ಬುದ್ದಿ,
ಚಿತ್ತ ಮತ್ತು ಅಹಂಕಾರಗಳೂ ಸಹ ಅಧರ್ಮದ
ಅಂಶಗಳು. ಸತ್ವ, ರಜಸ್ಸು ಮತ್ತು
ತಮಸ್ಸೆಂಬ ಗುಣಗಳು ಬ್ರಹ್ಮ, ವಿಷ್ಣು ಮತ್ತು ರುದ್ರನ ಅಂಶರೂಪವಾಗಿರುವುವು. ಶಿವನು
ಜ್ಞಾನಾತ್ಮಕನಾಗಿರುವನು ಜ್ಯೋತಿರ್ಮಯನೂ ನಿರ್ಗುಣನೂ ಆದ ನಾನು ಆತ್ಮಸ್ವರೂಪನಾಗಿರುವೆನು. ನಾನು
ಪ್ರಕೃತಿಯೊಡನೆ ಸೇರಿದಾಗ ಸಗುಣಾತ್ಮಕನೆನಿಸುವೆನು ವಿಷ್ಣು, ಬ್ರಹ್ಮ, ರುದ್ರಾದಿಗಳೆಲ್ಲರೂ ಸಗುಣರು. ಇಂದ್ರಿಯ ವಿಷಯಗಳೆಲ್ಲವೂ ಸಗುಣಾತ್ಮಕವಾದುವು.
ಹದಿನಾರು ನಾಡಿಗಳನ್ನೂ ಸೇರಿಕೊಂಡು,
ಯೋಗಶಕ್ತಿಯಿಂದ
ಬ್ರಹ್ಮರಂಧ್ರಕ್ಕೆ
ಮೂಲಾಧಾರಂ
ಸ್ವಾಧಿಷ್ಠಾನಂ ಮಣಿಪೂರಮನಾಹತಂ |
ವಿಶುದ್ಧ
ಮಾಜ್ಞಾಖ್ಯಂ ಚೇತಿ ಭಿತ್ವಾ ಷಟ್ಚಕ್ರಮೇವ ಚ ॥ ೧೩
ಇಡಾಂ
ಸುಷುಮ್ಣಾಂ ಮೇಧಾಂ ಚ ಪಿಂಗಲಾಂ ಪ್ರಾಣಹಾರಿಣೀಂ |
ಸರ್ವಜ್ಞಾನಪ್ರದಾಂ
ಚೈವ ಮನಸ್ಸಂಯಮಿನೀಂ ತಥಾ ॥ 14
ವಿಶುದ್ಧಾಂ ಚ
ನಿರುದ್ಧಾಂ ಚ ವಾಯುಸಂಚಾರಿಣೇಂ ತಥಾ |
ತೇಜಶ್ಯುಷ್ಕಕರೀಂ
ಚೈವ ಬಲಪುಷ್ಟಿ ಕರೀಂ ತಥಾ ॥ ೧5
ಬುದ್ಧಿ
ಸಂಚಾರಿಣೀಂ ಚೈವ ಜ್ಞಾನಜೃಂಭನಕಾರಿಣೀಂ |
ಸರ್ವಪ್ರಾಣಹರಾಂ
ಚೈವ ಪುನರ್ಜೀವನಕಾರಿಣೀಂ ॥ 16
ಏತಾಃ ಷೋಡಶಧಾ
ನಾಡೀರ್ಭಿತ್ವಾವೆ ಹಂಸಮೇವ ಚ |
ಮನಸಾ ಸಹಿತಂ
ಬ್ರಹ್ಮರಂಧ್ರಮಾನೀಯ ಯೋಗತಃ ॥ ೧೭
ಸ್ಥಿತ್ವಾ ಮುಹೂರ್ತಮಾತ್ಮಾನಮಾತ್ಮನ್ಯೇವ
ಯುಯೋಜ ಹ |
ಜಾತಿಸ್ಮರಶ್ಚ
ಯೋಗೀಂದ್ರಃ ಸಂಪ್ರಾಪ ಬ್ರಹ್ಮ ಶೌನಕ ||
೧೮
ವೀಣಾಂ
ತ್ರಿತಂತ್ರೀಂ ದುಷ್ಟ್ರಾಪ್ಯಾಂ ವಾಮಸ್ಕಂಧೇ ನಿಧಾಯ ಚ |
ಶುದ್ಧಸ್ಫಟಿಕಮಾಲಾಂ
ಚ ವಿಧೃತ್ವಾ ದಕ್ಷಿಣೇ ಕರೇ ॥ 19
ಸಂಜಲ್ಪನ್
ಪರಮಂ ಬ್ರಹ್ಮ ವೇದಸಾರಂ ಪರಾತ್ಪರಂ |
ಪರಂ
ನಿಸ್ತಾರಬೀಜಂ ಚ ಕೃಷ್ಣ ಇತ್ಯಕ್ಷರದ್ವಯಂ ॥ ೨೦
ಪ್ರಾಚ್ಯಾಂ
ಕೃತ್ವಾ ಶಿರಃ ಸ್ಥಾನಂ ಪಶ್ಚಿಮೇ ಚರಣದ್ವಯಂ |
ನಿಧಾಯ
ದರ್ಭಶಯನೇ ಶಯಾನಃ ಪುರುಷೋ ಯಥಾ ॥ ೨1
ಬ್ರಹ್ಮವೈವರ್ತ
ಪುರಾಣ - ಬ್ರಹ್ಮಖಂಡ -
ಅಧ್ಯಾಯ 1೩
ಭಾವಾರ್ಥ:- ಪೃಷ್ಠಭಾಗದಿಂದ, ಶಿರಸ್ಸಿನವರೆಗೆ
ಬೆನ್ನಿನ ಹುರಿಯಲ್ಲಿರುವ "ಮೂಲಾಧಾರ, ಸ್ವಾದಿಷ್ಠಾನ, ಮಣಿಪೂರ,
ಅನಾಹತ, ವಿಶುದ್ಧ, ಆಜ್ಞಾ" ಎಂಬ ಆರು ಚಕ್ರಗಳನ್ನು ಬೇದಿಸಿಕೊಂಡು "ಇಡಾ,
ಸುಷುಮ್ನಾ, ಮೇಧಾ, ಪಿಂಗಲಾ, ಪ್ರಾಣಹಾರಿಣೀ, ಸರ್ವಜ್ಞಾನಪ್ರದಾ, ಮನಸ್ಸಂಯಮಿನೀ, ವಿಶುದ್ಧಾ, ನಿರುದ್ಧಾ, ವಾಯುಸಂಚಾರಿಣೀ, ತೇಜಃ, ಶುಷ್ಕಕರೀ, ಬಲಪುಷ್ಟಕರೀ,
ಬುದ್ಧಿ ಸಂಚಾರಿಣೀ, ಜ್ಞಾನಜೃಂಭನಕಾರಿಣೀ, ಸರ್ವಪ್ರಾಣಹರಾ, ಪುನರ್ಜೀವನ ಕಾರಿಣೀ" ಎಂಬ ಹದಿನಾರು
ನಾಡಿಗಳನ್ನೂ ಉಪಸಂಹಾರಮಾಡಿಕೊಂಡು, ಯೋಗಶಕ್ತಿಯಿಂದ ಮನಸ್ಸನ್ನು ಬ್ರಹ್ಮರಂಧ್ರಕ್ಕೆ ತಂದು, ಮುಹೂರ್ತಕಾಲ ಸುಮ್ಮನಿದ್ದು ಆ ಜೀವಾತ್ಮನು ಸ್ವಸ್ವರೂಪವಾದ
ಪರಮಾತ್ಮನಾದನು. ................ ಅಕಾರ,
ಉಕಾರ ಮಕಾರ ರೂಪವಾದ ತಂತ್ರೀತ್ರಯಗಳಿಂದ
ಕೂಡಿದ ಓಂಕಾರಾತ್ಮಕವಾದ ವೀಣೆಯನ್ನು ವಾಮ ಹಸ್ತದಲ್ಲೂ, ನಾದಬ್ರಹ್ಮದ ವರ್ಣಮಾಲಾರೂಪವಾದ ಸ್ಪಟಿಕಾಕ್ಷರ ಮಾಲೆಯನ್ನು
ದಕ್ಷಿಣ ಹಸ್ತದಲ್ಲೂ, ಧರಿಸಿ,
ವೇದಸಾರವೂ, ಪರಾತ್ಪರವೂ, ಜ್ಞಾನಾಂಧಕಾರ ನಾಶಕವೂ ಆದ ಪರಬ್ರಹ್ಮವನ್ನು ಸೋSಹಂ ಭಾವದಿಂದ ಜಪಿಸುತ್ತ, ಪೂರ್ವದಿಕ್ಕಿಗೆ ತಲೆಯನ್ನೂ, ಪಶ್ಚಿಮಕ್ಕೆ ಕಾಲನ್ನೂ ಇಟ್ಟು, ದರ್ಭಶಯನದಲ್ಲಿ ಪವಡಿಸಿ ಜ್ಞಾನಾನಂದಮಯನಾದ ಪುರುಷನಂತಿದ್ದನು.
ಭರತ ಖಂಡವು ಪ್ರಣ್ಯಕರವಾದ ಕರ್ಮ ಭೂಮಿ
ವಿಶ್ವಕರ್ಮನ್
ಇದಂ ಪುಣ್ಯಂ ಕರ್ಮಕ್ಷೇತ್ರಂ ಚ ಭಾರತಂ |
ಅತ್ರ
ಯತ್ಕ್ರಿಯತೇ ಕರ್ಮ ಭೋಗೋSನ್ಯತ್ರ ಶುಭಾಶುಭಂ || 77
ಬ್ರಹ್ಮವೈವರ್ತ
ಪುರಾಣ - ಬ್ರಹ್ಮಖಂಡ -
ಅಧ್ಯಾಯ 10
ಭಾವಾರ್ಥ:_
ವಿಶ್ವಕರ್ಮನೇ ! ಈ ಭರತಖಂಡವು ಪ್ರಣ್ಯಕರವಾದ ಕರ್ಮ ಭೂಮಿ.
ಮನುಜನು ಇಲ್ಲಿ ಆಚರಿಸುವ ಕರ್ಮವು ಶುಭವಾಗಲೀ, ಅಶುಭವಾಗಲೀ ಅದರ ಫಲವನ್ನು ಇಹಪರಗಳೆರಡರಲ್ಲೂ ಅನುಭವಿಸಬೇಕಾಗುವುದು. (ಗಂಗಾ ತೀರದಲ್ಲಿ
ತಪಸ್ಸು ಮಾಡುವ ಗೋಪಿಕಾ ಎಂಬವವರು, ವಿಶ್ವಕರ್ಮರಲ್ಲಿ ಹೀಗೆ ಹೇಳುರುವುದು).
ಮುಂದುವರಿದು:- ಧರ್ಮಿಷ್ಠನು ಎಷ್ಟೋ ಜನ್ಮದ ತಪಸ್ಸಿನ ಫಲವಾಗಿ
ಮೋಕ್ಷೋಚಿತವಾದ ಜನ್ಮವನ್ನು ಪಡೆದಿದ್ದರೂ, ವಿಷ್ಣು (ವಿಷ್ಣು ಎಂದರೆ
ಅಕ್ಷರಶಃ ಅರ್ಥ " ಗರ್ಭದಲ್ಲಿನ ಹಿರಿಮೆಯನ್ನು
ಮಿದುಳಿನ ನಾಸಿಕಕ್ಕೆ ಕರೆದು ನಿರ್ದೇಶಿಸುವುದು") ಮಾಯೆಗೊಳಗಾಗಿ ಕರ್ಮ (ದೇಹವು ಮಾಂತ್ರಿಕ ಸೂತ್ರವನ್ನು
ಪಡೆಯುತ್ತದೆ, ಅರ್ಥಾತ್ ಮಾಂತ್ರಿಕ
ಸೂತ್ರವನ್ನು ಪಡೆಯುವ ದೇಹವು ತನ್ನ ಕಾರ್ಯದಲ್ಲಿ ನಿರತವಾಗುವುದು) ಬಂಧನಕ್ಕೆ ಸಿಲುಕುವನು. ಯಾರು
ಕರ್ಮ ಬಂಧನಕ್ಕೊಳಗಾಗದೆ ಇರುವರೋ ಅವರ ವಿಷಯದಲ್ಲಿ ಮಾಯೆಯು ತುಷ್ಟಳಾಗುವಳು. ಆಗ ಅವರಿಗೆ ಶ್ರೀ
ಶ್ರೀಕೃಷ್ಣನಲ್ಲಿ (ಕೃಷ್ಣ ಎಂದರೆ ಸಂಸ್ಕೃತದ ಅಕ್ಷರಶಃ ಅರ್ಥ "ಅತ್ಯುತ್ತಮ ಜ್ಞಾನವನ್ನು
ಸಂಯೋಜಿಸುವ". ಇಂತಹ ಜ್ಞಾನಕ್ಕೆ ಮಹತ್ವ ಕೊಡುವವರಿಗೆ ಅದಕ್ಕೆ ತಕ್ಕ ಸಾಧನಗಳು ಲಭಿಸುವವು.
ಅದಕ್ಕೆ ಕೃಷ್ಣಮ್ ಒಂದೇ ಜಗದ್ಗುರುಮ್ ಎಂದದ್ದು.) ಅಚಲವಾದ ಭಕ್ತಿಯೂ, ಅದಕ್ಕೆ ತಕ್ಕ ಸಾಧನಗಳೂ ಸಿದ್ಧಿಸುವುವು. ಭರತಖಂಡದಲ್ಲಿ ಜನ್ಮ
ವೆತ್ತಿಯೂ, ಯಾರು ಕೃಷ್ಣ ಪರಮಾತ್ಮನ ಸೇವೆಯನ್ನುಳಿದು
ಸಂಸಾರಸುಖದಲ್ಲಿ ಆಸಕ್ತರಾಗಿರುವರೋ ಅವರನ್ನು ಮಾಯೆಯು ಸರ್ವದಾ ಆವರಿಸಿರುವುದು.
ದಿವ್ಯ ಜ್ಞಾನದ ಮಹತ್ವ ಪರಮಾತ್ಮನ ಆಜ್ಞೆಗೆ ಶರಣಾಗಿರುವುದು
ಐಶ್ವರ್ಯಂ ವಾ
ಧನಂ ವಾಪಿ ವಿದ್ಯಾ ವಾ ವಿಕ್ರಮೋsಥವಾ।
ಜ್ಞಾನಸ್ಯ
ಪರಮಾರ್ಥಸ್ಯ ಕಲಾಂ ನಾರ್ಹಂತಿ ಷೋಡಶೀಂ || 75
ಬ್ರಹ್ಮವೈವರ್ತ
ಪುರಾಣ - ಬ್ರಹ್ಮಖಂಡ -
ಅಧ್ಯಾಯ 13
ಭಾವಾರ್ಥ:- ಐಶ್ಚರ್ಯವಾಗಲೀ, ಹಣವಾಗಲೀ,
ವಿದ್ಯೆಯಾಗಲೀ, ವಿಕ್ರಮವಾಗಲೀ, ದಿವ್ಯಜ್ಞಾನದ ಹದಿನಾರನೆಯ ಒಂದು ಭಾಗಕ್ಕೂ ಸರಿದೂಗಲಾರದು.
ದಿವ್ಯಜ್ಞಾನ
ಎಂತದ್ದು:- ಅಧ್ಯಾಯ 15 ರಲ್ಲಿ
ಇಂತಿದೆ, ರೋಗದಿಂದ ನರಳಿ,
ಸಾಯುವ ಸ್ಥಿತಿಗೆ ಬಂದಿರುವವನನ್ನೂ;
ಒಂದು ವಾರದೊಳಗೆ ಸತ್ತಿರುವವನನ್ನೂ,
ನನ್ನ ದಿವ್ಯಜ್ಞಾನದಿಂದ ಸುಲಭವಾಗಿ
ಬದುಕಿಸಬಲ್ಲೆನು. ಬೇಡನೊಬ್ಬನು ದುಷ್ಟಪ್ರಾಣಿಗಳನ್ನು ತನ್ನ ಬಲೆಯಲ್ಲಿ ಹಿಡಿದು ತರುವಂತೆ,
ಮೃತ್ಯುರಾಜನಾದ ಯಮನನ್ನೂ, ಕಾಲಪುರುಷನನ್ನೂ, ಸಕಲರೋಗಗಳನ್ನೂ ಹಿಡಿದು ಕಟ್ಟಿ ನಿನ್ನ ಮುಂದೆ ತಂದು
ನಿಲ್ಲಿಸಬಲ್ಲೆನು. ಮನುಷ್ಯರ ದೇಹದಲ್ಲಿ ರೋಗವು ಉತ್ಪತ್ತಿಯಾಗಲು ಕಾರಣವೇನು? ಅದು ದೇಹದಲ್ಲೆಲ್ಲಾ ಹರಡುವುದೆಂತು? ಅದರ ನಿವಾರಣೆ ಹೇಗೆ? ಎಂಬ ವಿಚಾರಗಳನ್ನು ನಾನು ಚೆನ್ನಾಗಿ ಬಲ್ಲೆನು. ರೋಗಕ್ಕೆ
ಮೂಲಕಾರಣವನ್ನೂ, ಆ ಅಮಂಗಲದ
ನಿವಾರಣೋಪಾಯವನ್ನೂ, ವೈದ್ಯಶಾಸ್ತ್ರತತ್ವಾನುಸಾರವಾಗಿ
ನಾನು ಬಲ್ಲೆನು. ಯಾರು ಕಷ್ಟಸಾಧ್ಯವಾದ ಯೋಗಶಕ್ತಿಯಿಂದ ದೇಹತ್ಯಾಗಮಾಡುವರೋ ಅಂಥವರನ್ನೂ
ಯೋಗಶಾಸ್ತ್ರ ಬಲದಿಂದಲೇ ಜೀವಿಸುವ ಉಪಾಯವನ್ನೂ ತಿಳಿದಿರುವೆನು. ....... ಕಾಲಪುರುಷನಿಗಾಗಲೀ,
ಯಮನಿಗಾಗಲೀ, ಮೃತ್ಯು ಕನ್ಯೆಗಾಗಲೀ, ವ್ಯಾಧಿಗಳಿಗಾಗಲೀ ಏನು ಸ್ವಾತಂತ್ರ್ಯವಿದೆ? ಯಾವಾಗಲೂ ಈಶ್ವರನ ಆಜ್ಞೆಯನ್ನು ಶಿರಸಾವಹಿಸಿ
ನಡೆಯುವವರು.......... ಸೃಷ್ಟಿಕಾರಣಳಾದ ಪ್ರಕೃತಿದೇವಿಯೂ, ಬ್ರಹ್ಮ, ವಿಷ್ಣು. ಮಹೇಶ್ವರರೂ ಪರಮಾತ್ಮನ ಆಜ್ಞೆಯನ್ನು ಮೀರಲಾರರು. ದೇವತೆಗಳೂ, ಖುಷಿಗಳೂ, ಮನುಗಳೂ ಮತ್ತು ಮಾನವರೂ, ಇತರ ಜಂತುಗಳೂ ಕೂಡ ಪರಮಾತ್ಮನ ಇಚ್ಛೆಯಂತೆ ನಡೆಯುವರು.
ಯೋಗಿಗಳೂ ಕೂಡ ಪರಮಾತ್ಮನ ದಿವ್ಯನಾಮಗಳನ್ನು ಯಾವಾಗಲೂ ಜಪಿಸುತ್ತಾ, ಮನಸ್ಸಿನಲ್ಲೇ ಆತನ ಪಾದಾರವಿಂದಗಳನ್ನು ಧ್ಯಾನ ಮಾಡುವರು.
ಪರಮಾತ್ಮನ ಭಯದಿಂದಲೇ ವಾಯುದೇವನು ಎಲ್ಲೆಡೆಯಲ್ಲೂ ಚಲಿಸುವನು. ಸೂರ್ಯನು ಬೆಳಗುವುದೂ ಆತನ
ಭಯದಿಂದಲೇ. ಬ್ರಹ್ಮ, ವಿಷ್ಣು
ಮಹೇಶ್ವರರು ಪರಮಾತ್ಮನ ಆಜ್ಞಾನುಸಾರವಾಗಿ ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಹೊಣೆಗಾರರಾಗಿರುವರು. ಕರ್ಮಸಾಕ್ಷಿಯಾದ ಧರ್ಮ ಪುರುಷನೂ ಆತನ ಆಜ್ಞೆಯನ್ನು
ಮೀರುವಂತಿಲ್ಲ. ಪರಮಾತ್ಮನ ಅಪ್ಪಣೆಯಂತೆಯೇ ರಾಶಿ ಚಕ್ರವೂ, ನವ ಗ್ರಹಗಳೂ, ಚಲಿಸುವುವು. ದಿಕ್ಪಾಲಕರೆಲ್ಲರೂ ಪರಮಾತ್ಮನ ಆಜ್ಞಾಧಾರಿಗಳೇ ಆಗಿರುವರು. ಮರಗಳು
ಕಾಲಕಾಲದಲ್ಲಿ ಹೂವು, ಹಣ್ಣುಗಳನ್ನು
ಧರಿಸಿ ಜನರಿಗೆ ಕೊಡುವುದೂ ಪರಮಾತ್ಮನ ನಿಯಮದಂತೆಯೇ. ನೀರಿಗೂ ಮತು ಎಲ್ಲಾ ವಸ್ತುಗಳಿಗೂ ಆಧಾರ
ಭೂತವಾದ ವಸುಂಧರೆಯು (ಭೂದೇವಿಯು) ಚಲಿಸದೆ, ಸಹನಶೀಲಳಾಗಿರುವುದೂ ಪರಮಾತ್ಮನ ಆಜ್ಞೋಲ್ಲಂಘನೆಯ ಭಯದಿಂದಲೇ ಅಲ್ಲವೇ. ಪರಮಾತ್ಮನ ಮಾಯೆಗೆ
ಮೋಹಗೊಂಡ ಪ್ರಕೃತಿದೇವಿಯೂ ಕೂಡ ಎಲ್ಲಕ್ಕೂ ಮೂಲಕಾರಣಳಾಗಿರುವುದೂ ಪರಮಾತ್ಮನ ನಿಯಮವನ್ನು
ಮೀರಲಾಗದಿರುವುದರಿಂದಲ್ಲವೇ. ಎಲ್ಲಾ ಪ್ರಾಣಿಗಳ
ಮನೋಭಿಪ್ರಾಯವನ್ನೂ ತಿಳಿಯಬಲ್ಲ ಇಂಗಿತಜ್ಞರೂ ಕೂಡ ಆ ಪರಮಾತ್ಮನ ಆದ್ಯಂತಗಳನ್ನು ಅರಿಯಲಾರರು.
ಎಲ್ಲಾ ಪುರಾಣಗಳೂ ಕೂಡ ಆತನನ್ನು ಹೊಗಳಿ ಮುಗಿಯುವುವೇ ಹೊರತು ಆತನ ನೆಲೆಯನ್ನು ನಿಲುಕಲಾರವು.
ಪರಮಾತ್ಮನ ಹದಿನಾರನೆಯ ಒಂದಂಶದಿಂದ ಅವತರಿಸಿ ವಿರಾಡ್ರೂಪಿಯಾದ ಮಆವಿಷ್ಣುವೂ, ಬ್ರಹ್ಮ, ವಿಷ್ಣು ಮುಂತಾದವರೂ ಕೂಡ, ಯಾವ ಪರಮಾತ್ಮನ ದಿವ್ಯನಾಮಗಳನ್ನು ಭಜಿಸಿ
ಸ್ತುತಿಸುವರು. ಆದುದರಿಂದ ಎಲ್ಲರೊಡೆಯನೂ, ಕಾಲಕಾಲನೂ, ಮೃತ್ಯುವಿಗೆ ಮೃತ್ಯು ಸ್ವರೂಪನೂ, ಶ್ರೇಷ್ಠರಲ್ಲಿ ಶ್ರೇಷ್ಠನೂ ಆದ ಆ ಪರಮಾತ್ಮನನ್ನು ಭಜಿಸಿ,
ನಿನ್ನ ಎಲ್ಲ ತೊಂದರೆಗಳನ್ನೂ ಪರಿಹರಿಸಿಕೋ, ...."
ಸ್ವಪ್ರಕಾಶವಾದ ಆತ್ಮಸ್ವರೂಪ
ಜ್ಞಾನದಿಂದ ಪರಮಾತ್ಮ ಸ್ವರೂಪ ಜ್ಞಾನ
ಸಾರಭೂತಂ ಚ
ತತ್ವಾ ನಾಮ ಜ್ಞಾನಾಂಧಕ ಲೋಚನಂ |
ದ್ವೈಧಭ್ರಮತಮೋಧ್ವಂಸಸುಪ್ರಕೃಷ್ಟಪ್ರದೀಪಕಂ
|| 11
ಪರಮಾತ್ಮಸ್ವರೂಪಂ
ಚ ಪರಬ್ರಹ್ಮ ಸನಾತನಂ |
ಸರ್ವದೇಹಸ್ಥಿ
ತಂ ಸಾಕ್ಷಿ ಸ್ವರೂಪಂ ದೇಹಿ ಕರ್ಮಣಾಂ || 12
ಬ್ರಹ್ಮವೈವರ್ತ
ಪುರಾಣ - ಬ್ರಹ್ಮಖಂಡ -
ಅಧ್ಯಾಯ 28
ಭಾವಾರ್ಥ:- ಪ್ರಪಂಚದಲ್ಲಿ ಹುಟ್ಟಿ ತಿಳಿಯಬೇಕಾದ ತತ್ವಗಳಲ್ಲಿ ಪರಮಾತ್ಮ ಸ್ವರೂಪ ಜ್ಞಾನವೇ ಅತ್ಯಂತ
ಸಾರವಾದದ್ದು. ಅಜ್ಞಾನವೆಂಬ ಅಂಧಕಾರವು ಆತ್ಮ ಜ್ಞಾನವೆಂಬ ಜ್ಯೋತಿಯಿಂದೆ ದೂರವಾಗುವುದು. ಜೀವಾತ್ಮ
ಪರಮಾತ್ಮರು ಬೇರೆ ಬೇರೆ ಎಂಬ ಭೇದಜ್ಞಾನವು ಸ್ವಪ್ರಕಾಶವಾದ ಆತ್ಮಸ್ವರೂಪ ಜ್ಞಾನದಿಂದ
ಪರಿಹಾರವಾಗುವುದು. ಅನಾದಿಯೂ (ಸನಾತನಂ), (ಸನಾತನಂ ಎಂದರೆ ಸಂಸ್ಕೃತ ಅಕ್ಷರ ಅನುವಾದದಲ್ಲಿ ಅವಿಶ್ರಾಂತವಾಗಿ ಜೀವ ಉಸಿರನ್ನು, ಆದೇ ರೀತಿಯ ಅಮೃತವನ್ನು ಸಂಪಾದಿಸುವ ಮಾಂತ್ರಿಕ
ಸೂತ್ರ ಎಂದಾಗುತ್ತದೆ.) ಸರ್ವಶ್ರೇಷ್ಠನೂ ಆದ ಆ ಪರಮಾತ್ಮ
ಎಲ್ಲ ಪ್ರಾಣಿಗಳ ದೇಹದಲ್ಲೂ ಅವರವರ ಪುಣ್ಯ ಪಾಪ ಕರ್ಮಗಳಿಗೆ ಸಾಕ್ಷಿಯಾಗಿ ನೆಲೆಸಿರುವನು.
ಶಿವಮಹಾಪುರಾಣ - ಕುಂಡಲಿನಿ ಮತ್ತು ಪ್ರಾಣಾಯಾಮ
ಓಂಕಾರ ಧ್ಯಾನವು ವಿವೇಕವನ್ನು ನೀಡುವುದು
ನಾಮರೂಪಾತ್ಮಕಂ ಸರ್ವಂ ವೇದಭೂತಕುಲದ್ವಯಂ |
ವ್ಯಾಪ್ತಮೇತೇನ ಮಂತ್ರೇಣ ಶಿವಶಕ್ತ್ಯೋಶ್ಚ ಬೋಧಕಃ ॥ ೨೦॥
ಭಾಗ-1 - ವಿದ್ಯೇಶ್ವರ ಸಂಹಿತ-
ಅಧ್ಯಾಯ-10 - ಶ್ಲೋಕ - 20
ಭಾವಾರ್ಥ:-
ನಾಮರೂಪಾತ್ಮಕವಾದ ಎಲ್ಲಾ ಪ್ರಪಂಚಗಳೂ, ಪಂಚ ಭೂತಗಳೂ ಈ ಓಂಕಾರದಿಂದಲೇ ವ್ಯಾಪಿಸಿ ಶಿವ ಶಕ್ತಿಯಿಂದ
ತಿಳುವಳಿಕೆಯನ್ನು ಕೊಡುವಂತಹದ್ದಾಗಿದೆ.
ವಿವರಣೆ:- ಈ ಓಂಕಾರದಿಂದಲೇ ಸಕಲ ಸ್ವರೂಪವನ್ನು ಬೋಧಿಸುವ,
ಪಂಚಾಕ್ಷರೀ ಮಂತ್ರವು ಕೂಡ 'ಆ'ಕಾರದಿಂದ ಕ್ರಮವಾಗಿ 'ನ'ಕಾರಾದಿಯಾಗಿ
ಉತ್ಪತ್ತಿಯಾಯಿತು. ಎಂದರೆ 'ಅ'ಕಾರದಿಂದ 'ನ'ಕಾರವೂ
ಜನಿಸಿತು. 'ಉ'ಕಾರದಿಂದ 'ಮ'ಕಾರವೂ,
'ಮ'ಕಾರದಿಂದ : 'ಶಿ'ಕಾರವೂ,
ಸೊನ್ನೆಯಿಂದ 'ವ'ಕಾರವೂ, ನಾದದಿಂದ
'ಯ'ಕಾರವೂ ಜನಿಸಿ 'ನಮಃ
ಶಿವಾಯ' ಎಂಬ ಪಂಚಾಕ್ಷರೀ ಮಂತ್ರವಾಯಿತು. ಕುಂಡಲಿನಿ ಶಕ್ತಿಯಿಂದ
ಕೂಡಿದ ಶಿವನಾದ್ದರಿಂದ ಶಿವನ ಶಕ್ತಿಯೇ ಉಪದೇಶಿಸಿರುವುದು ಎಂದರ್ಥ. ಆದ್ರಾಃ ನಕ್ಷತ್ರದಲ್ಲಿ,
ಚತುರ್ದಶಿಯಲ್ಲಿ ಇದನ್ನು ಜಪಿಸಿದರೆ ಎಂದಿಗೂ ನಾಶವಾಗದ ಫಲವುಂಟಾಗುವುದು. 'ಆರ್ದ್ರಾ' ನಕ್ಷತ್ರದಲ್ಲಿ ಸೂರ್ಯನು ಸಂಚರಿಸುವ ಕಾಲದಲ್ಲಿ ಈ
ಮಂತ್ರವನ್ನು ಜಪಿಸಿದರೆ ಒಂದು ಜಪವು ಒಂದು ಕೋಟಿಯಷ್ಟು ಫಲವೀಯುವುದು. ಹಾಗೆಯೇ 'ಮೃಗಶಿರಾ' ನಕ್ಷತ್ರದ ಅಂತ್ಯಭಾಗವೂ, 'ಪುನರ್ವಸು' ನಕ್ಷತ್ರದ ಆದಿಭಾಗವೂ ಸಹ ಶ್ರೇಷ್ಠವು. ಪುನರ್ವಸು,
ಮೃಗಶಿರಾ ನಕ್ಷತ್ರಗಳೂ ಸಹ ಆರ್ದ್ರಾ ನಕ್ಷತ್ರದಂತೆಯೇ ಈಶ್ವರನ, ಜಪ,
ಪೂಜಾ, ಹೋಮ, ತರ್ಪಣ, ದರ್ಶನಗಳಿಗೆ
ಶ್ರೇಷ್ಠವಾಗಿವೆ. ಈ ದಿನಗಳಲ್ಲಿ ಪ್ರಾತಃಕಾಲ, ಸಂಗಮ ಕಾಲಗಳು ಅತ್ಯಂತ
ಶ್ರೇಷ್ಟವು. ಆರ್ದ್ರಾ ನಕ್ಷತ್ರದ ವಿಶೇಷವೆಂದರೆ ಆ ನಕ್ಷತ್ರಕ್ಕೆ ದೇವತೆ ರುದ್ರನೇ ಆಗಿದ್ದಾನೆ.
ಎಲ್ಲಾ ಶಾಸ್ತ್ರದಲ್ಲೂ ಆರ್ದ್ರಾನಕ್ಷತ್ರದಲ್ಲಿ ಈಶ್ವರಾರಾಧನೆಗೆ ವಿಶೇಷವೆಂದು ಹೇಳಿದ್ದಾರೆ.
ಚತುರ್ದಶಿಯಲ್ಲಿ ನನ್ನನ್ನು ಆರಾಧಿಸಬೇಕಾದರೆ ರಾತ್ರಿ ವ್ಯಾಪಿನಿಯಾದ ಚತುರ್ದಶಿಯು ಶ್ರೇಷ್ಟವು.
ಪ್ರದೊಷಕಾಲ ವ್ಯಾಪ್ತಿಯಿದ್ದು ಮುಂದಿನ ತಿಥಿಯುಕ್ತವಾಗಿದ್ದರೆ ವಿಶೇಷ ಫಲದಾಯಕವು. ಲಿಂಗದಲ್ಲಿ
ಹಾಗೂ ವಿಗ್ರಹದಲ್ಲಿ ನನ್ನನ್ನು ಪೂಜಿಸುವುದು ಸಮಾನವು. ಆದರೆ ಲಿಂಗದಲ್ಲಿ ನನ್ನನ್ನು ಪೂಜಿಸುವುದು
ಉತ್ತಮ. ಆದ್ದರಿಂದ ವಿಗ್ರಹಕ್ಕಿಂತ ಲಿಂಗದಲ್ಲಿ ಮೋಕ್ಷೇಚ್ಛಗಳು ನನ್ನನ್ನು ಪೂಜಿಸಬೇಕು. ಲಿಂಗವು
ಓಂಕಾರ ರೂಪವಾದುದು. ವಿಗ್ರಹವು ಪಂಚಾಕ್ಷರೀ ರೂಪವು. ಅದಕ್ಕಾಗಿ ಲಿಂಗವನ್ನು ವಿಶೇಷವಾಗಿ
ಓಂಕಾರದಿಂದಲೂ, ವಿಗ್ರಹವನ್ನು ಪಂಚಾಕ್ಷರದಿಂದಲೂ ಸಹ ತಾನೇ ಉತ್ತಮ
ದ್ರವ್ಯಗಳಿಂದಲೂ ಪ್ರತಿಷ್ಠಾಪಿಸಬೇಕು. ಶಿವ-ಪಾರ್ವತಿಯರ ಸಂಬಂಧದ ಶ್ರೇಷ್ಠತೆ ಕಾಣುತ್ತದೆ. ಅಂದರೆ
‘ನ ಶಕ್ತಿರಹಿತಃ ಶಿವಃ’ ಎಂದರೆ ಶಿವನಿಲ್ಲದೇ
ಶಕ್ತಿ ಇಲ್ಲ. ಶಕ್ತಿ ಇಲ್ಲದೇ ಶಿವನಿಲ್ಲ. ಇದನ್ನೇ ಆಚಾರ್ಯಶ್ರೇಷ್ಠರಾದ ಶ್ರೀ ಶಂಕರ ಭಗವತ್ಪಾದರು
ತಮ್ಮ ಸೌಂದರ್ಯ ಲಹರಿಯಲ್ಲಿ ಪ್ರಾರಂಭದಲ್ಲಿಯೇ 'ಶಿವಃ
ಶಕ್ತ್ಯಾಯುಕ್ತೋ' ಎಂದು ಸ್ತೋತ್ರ ಮಾಡಿದ್ದಾರೆ. ಶಿವನು ಶಕ್ತಿ
ಇಲ್ಲದೇ ಕಾರ್ಯಪ್ರವೃತ್ತನಾಗಲಾರ ಶಕ್ತಿಯೂ ಹಾಗೆಯೇ ಆದ್ದರಿಂದಲೇ ಅದರ ಸಂಬಂಧ ವಿಶೇಷವಾದದ್ದು.
ಆದ್ದರಿಂದಲೇ ಶ್ರೀ ಅನ್ನಪೂರ್ಣಾಷ್ಟಕ ರಚನಾಕಾರರೂ ಕೊನೆಯಲ್ಲಿ ಮಾತಾ ಚ ಪಾರ್ವತೀ ದೇವಿ ಪಿತಾದೇವೋ
ಮಹೇಶ್ವರಃ ಎಂದಿದ್ದಾರೆ. ತಾಯಿ-ತಂದೆ ಎಂದ ಮೇಲೆ ಯಾರೋಬ್ಬರಿಲ್ಲದಿದ್ದರೂ ಜನನವಾಗಲಾರದು. ಈ ತಾಯಿ
ತಂದೆಗಳು ಜಗತ್ತಿನ ಸೃಷ್ಟಿಗೆ ಕಾರಣರಾದವರು. ಇಲ್ಲಿ ಶಿವನನ್ನು ರುದ್ರ ಅಥವಾ ವಾಯು ದೇವನೆಂತಲೂ
ದೇಹದಲ್ಲಿ ಇರುವ ಕುಂಡಲಿನಿ ಚಕ್ರಗಳು ಶಕ್ತಿ ಮಾತೆಯಂತಲೂ ಶಿವನೆಂಬ ಪಂಚವಾಯು ಶಕ್ತಿಗಳು
ಕುಂಡಲಿನಿ ಚಕ್ರದಲ್ಲಿ ಹರಿದಾಗ ದೇಹದಲ್ಲಿ ಆರೋಗ್ಯ ಮತ್ತು ಸಹಸ್ರಾರದಲ್ಲಿ ಜ್ಞಾನವೂ
ಉಂಟಾಗುವುದೆಂದು ತಿಳಿಯಬೇಕು.
ಲಿಂಗ ಸ್ವರೂಪ
ಶಿವನು ಯಾರು ?
ಪ್ರಣವಂ ಧ್ವನಿಲಿಂಗಂ ತು ನಾದಲಿಂಗಂ ಸ್ಪಯಂಭುವಃ |
ಬಿಂದುಲಿಂಗಂ ತು ಯಂತ್ರಂ ಸ್ಯಾನ್ಮಕಾರಂ ತು ಪ್ರತಿಷ್ಠಿತಂ || ೧೧೩ ||
ಉಕಾರಂ ಚರಲಿಂಗಂ ಸ್ಯಾದಕಾರಂ ಗರುವಿಗ್ರಹಂ |
ಷಡ್ಲಿಂಗಪೂಜಯಾ ನಿತ್ಯಂ ಜೀವನ್ಮುಕ್ತೋ ನ ಸಂಶಯಂ || ೧೧೪ ||
ಭಾಗ-1 - ವಿದ್ಯೇಶ್ವರ ಸಂಹಿತ- ಅಧ್ಯಾಯ-16 -
ಶ್ಲೋಕ - 113-114
ಭಾವಾರ್ಥ:-
ಓಂಕಾರವು ಧ್ವನಿಲಿಂಗವು, ಉದ್ಭವಿಸಿದ ಲಿಂಗವು, ನಾದ
ಲಿಂಗವು, ಯಂತ್ರವು ಬಿಂದು ಲಿಂಗವು ಮಕಾರವು ಪ್ರತಿಷ್ಠಿತ ಲಿಂಗವು.
ಉಕಾರವು ಚರಲಿಂಗವು ಆಕಾರವು ದೊಡ್ಡದಾದ ಲಿಂಗವು, ಈ ಆರು ಲಿಂಗಗಳನ್ನು
ನಿತ್ಯವೂ ಪೂಜಿಸಿದವನು. ಜೀವನ್ಮುಕ್ತನಾಗುವನು ಇದರಲ್ಲಿ ಸಂಶಯವಿಲ್ಲ.
ತೂಷ್ಣೀಂ ಸಕಲಮಾತ ತ್ರತ್ವಾದಚ್ಯಂನತೇ ಬೇರಮಾತ್ರ ಕೇ
ಜೀವತ್ವಂ ಶಂಕರಾನ್ಯೇಷಾಂ ಬ್ರಹ್ಮತ್ವಂ ಶಂಕರಸ್ಯ ಚ || ೧೫
ಭಾಗ-1 - ವಿದ್ಯೇಶ್ವರ ಸಂಹಿತ- ಅಧ್ಯಾಯ-5 -
ಶ್ಲೋಕ - 15
ಭಾವಾರ್ಥ:-
ವಿಗ್ರಹ ರೂಪದಿಂದಲೇ ಇನ್ನುಳಿದ ದೇವತೆಗಳು ಪೂಜಿಸಲ್ಪಡುತ್ತಾರೆ. ಆದ್ದರಿಂದ ಅವರುಗಳು ಜೀವರುಗಳು.
ಶಂಕರನು ಮಾತ್ರ ಬ್ರಹ್ಮ ಸ್ವರೂಪನು ಇದೇ ನಿರಾಕಾರ ಸ್ವರೂಪವನ್ನೇ ವೇದಗಳೂ ಸಹ ಓಂಕಾರ ರೂಪವಾಗಿ
ಹೊಗಳಿವೆ. ಅದೇ ಬ್ರಹ್ಮವೆಂದು ಸಾರಿವೆ.
ವಿವರಣೆ:- ಲಿಂಗ = लिङ्ग = लि ङ ग = ಅಕ್ಷರಶಃ
ಅರ್ಥ "ಅವಿಶ್ರಾಂತವಾಗಿ
ಸಂವೇದನೆ ನೀಡುವಂತಹ ವಸ್ತು ಚಲಿಸುವಿಕೆ" ಎಂದು ಬರುತ್ತದೆ. ಅದುವೇ
ವಾಯು. ಶಕ್ತಿ = शक्ति = श क ति =
ಅಕ್ಷರಶಃ ಅರ್ಥ "ದೇಹದಲ್ಲಿರುವ ಆಯುದ ವಿಭಜಿಸುವುದು". ಅದುವೇ ಕುಂಡಲಿನಿ
ಚಕ್ರಗಳು. ರುದ್ರ ದೇವ ಎಂದರೆ 10 ವಾಯು ದೇವರು
ಒಂದು ಆತ್ಮ. ಇದು ಶಿವನ ಸ್ವರೂಪ. ಇಲ್ಲಿ ಐದು ವಾಯು ಮತ್ತು ಒಂದು ಆತ್ಮ ಆರೋಗ್ಯಕ್ಕೆ
ಮುಖ್ಯವಾದುದ್ದು. ಇವುಗಳೆ ಆರು ಲಿಂಗಗಳು. ಶಿವ ಎಂದರೆ ಅಕ್ಷರಶಃ ಅರ್ಥ "ಉತ್ತಮ ಆರೋಗ್ಯದಲ್ಲಿ / ಶಕ್ತಿಯುತವಾಗಿ ಗಮನಹರಿಸಬೇಕು (ಧ್ಯಾನ)". ಶಿವ
ಎನ್ನುವ ಪದವೇ ಧ್ಯಾನ ಆಗಿರುತ್ತದೆ. ಇಲ್ಲಿ
ಲಿಂಗ, ಶಿವ, ಶಕ್ತಿ, ರುದ್ರ ಇವುಗಳ ಸೂಚ್ಯ ಗೋಪ್ಯತಾ ಬಾವವೇ ಕುಂಡಲಿನಿ ಪ್ರಾಣಾಯಾಮದ ಧ್ಯಾನ, ಲಿಂಗವು ಸರ್ವಾಂತರ್ಯಾಮಿಯಾದ ವಾಯು ಸಂಕೇತವಾದರೆ ಅದನ್ನು ಪೂಜಿಸುವ ವಿಧಾನ ಅದರ
ವಿವಿದತೆಯ ಮುಖ್ಯ 6 ರುದ್ರರನ್ನೂ ಯಾವ
ರೀತಿಯಲ್ಲಿ ಶುದ್ದೀಕರಿಸಿ ಆಸ್ವಾಧಿಸಬೇಕು, ಅದನ್ನು ಆಸ್ವಾಧಿಸುವುದಕ್ಕೆ
ಶಕ್ತಿ ದೇವತೆ ಹೇಗೆ ಸಹಾಯಕಳು ಆಕೆ ಲಿಂಗ ಸ್ವರೂಪ ವಾಯುವನ್ನು ಹೇಗೆ ದೇಹದ ನಾಡಿಗಳಿಗೆ
ವಿಭಜಿಸುವಳು ಎಂದು ಅರಿಯುವುದು ಅಂತಹ ಎಲ್ಲಾ ಕೆಲಸವನ್ನು ನಿರ್ವಹಿಸುವ ಆತ್ಮ ಪ್ರಭುವಿನ
ಸಾಕ್ಷಾತ್ಕಾರವೇ ಭಾಗವಂತನ ಸಾಕ್ಷಾತ್ಕಾರ.
ಇದನ್ನೇ ಶೈವಾಗಮದಲ್ಲಿ ಅಂತರ್ಯಾಗವೆಂಬ ಹೆಸರಿನಿಂದ ವಿವರಿಸಿದ್ದಾರೆ. ಜ್ಯೋತಿ ಸ್ವರೂಪನಾದ
ಈಶ್ವರನನ್ನು (ವಾಯುವನ್ನು) ಬ್ರಹ್ಮರಂಧ್ರದಿಂದ
ಸುರಿದ ಅಮೃತ ಧಾರೆಯಿಂದ ಅಭಿಷೇಕ ಮಾಡಿ, ಅಷ್ಟ-ಪುಷ್ಪದಿಂದ (ಅಷ್ಟಾಂಗ ಯೋಗದಿಂದ) ಪೂಜಿಸಿ, ಧೂಪ (ಅಂತರಂಗದ ಆಹಾರದ
ಆವಿಯಿಂದ), ಶಿವಜ್ಞಾನವೆಂಬ ದೀಪ (ವಾಯುಜ್ಞಾನವೆಂಬ ಬೆಳಕಿನಿಂದ),
ದೇಹದ ಪೌಷ್ಟಿಕಾಂಶಗಳನ್ನೇ ನೈವೇದ್ಯವೆಂದು
ಕಲ್ಪಿಸಿ ಅಂತರಂಗದಲ್ಲಿ ಶಿವನನ್ನು ಆರಾಧಿಸಬೇಕು.
ಈ ರೀತಿಯಾದ ಪೂಜೆಯಿಂದ ಮನುಷ್ಯನು ಅರಿಷಡ್ವರ್ಗಗಳನ್ನು ಗೆದ್ದು 'ಸೋಹಂ
ಭಾವೇನ ಪೂಜಯೇತ್' (ಸೋಹಂ ಅಜಪ ಮಂತ್ರದಿಂದ ಉಸಿರಾಟ) ಶಿವಃ
ಶಿವಮರ್ಚಯೇತ್ ಎಂಬ ಉಕ್ತಿಯಂತೆ ತಾನೇ ಶಿವನಾಗಿ ಬಾಹ್ಯದಲ್ಲಿ ಶಿವನನ್ನು (ಧ್ಯಾನವನ್ನು)
ಪೂಜಿಸಬೇಕು. ಶ್ರೀ ಲಲಿತಾಸಹಸ್ರನಾಮದ ಬಿಂದು ನಾಮದಲ್ಲಿ ಸಹ ಆಂತರಿಕವಾದ ಪೂಜೆಯೇ ಬಾಹ್ಯಪೂಜೆಗಿಂತ
ಶ್ರೇಷ್ಟವೆಂತಲೂ ಅದರಿಂದಲೇ ದೇವರು ತೃಪ್ತನಾಗುವನೆಂತಲೂ ಹೇಳಿದೆ. ಅದೇ 'ಅಂತರ್ಮುಖ
ಸಮಾರಾಧ್ಯಾ ಬಹಿರ್ಮುಖ ಸುಮಲಾಭಾ' ಎಂಬ ನಾಮ. ಆದ್ದರಿಂದ ಆಂತರಿಕವಾದ ಪೂಜೆಯು
ಶ್ರೇಷ್ಠವಾದುದ್ದು. ವಾಯುವಿಗೆ ಹೇಗೆ ಆಕಾರವಿಲ್ಲವೋ ಆ ಆರು ಲಿಂಗ ಸ್ವರೂಪಗಳಿಗೆ ಆಕಾರವಿಲ್ಲ ಅವು
ನಿರಾಕಾರವೂ ಅಂತಹ ನಿರಾಕಾರ ಸ್ವರೂಪ ಲಿಂಗಾರ್ಚನೆ ವಿಧಿಯೇ ವೇದ ಪುರಾಣಗಳು ಭೋದಿಸಿರುವುದು.
ಲಿಂಗವೇದಿರ್ಮಹಾದೇವೀ ಲಿಂಗಂ ಸಾಕ್ಷಾನ್ಮಹೇಶ್ವರಃ ।
ಲಯನಾಲ್ಲಿಂಗಮಿತ್ಯುಕ್ತಂ ತತ್ರೈವ ನಿಖಿಲಂ ಜಗತ್ ॥ ೩೮॥
ಭಾಗ-2 - ಸೃಷ್ಟಿ ಕಾಂಡ - ಅಧ್ಯಾಯ-10-
ಶ್ಲೋಕ - 38
ಭಾವಾರ್ಥ:- ಲಿಂಗದ
ವೇದಿಕೆಯು (ವಾಯುವಿನ ವೇದಿಕೆ) ಮಹಾದೇವಿಯಾದ ಪಾರ್ವತಿಯೆಂದು ತಿಳಿ (ಕುಂಡಲಿನಿ ಚಕ್ರಗಳೆಂದು
ತಿಳಿ), ಲಿಂಗವು ಸಾಕ್ಷಾತ್ಮಹೇಶ್ವರನೇ, ಎಲ್ಲವೂ
ಇದರಲ್ಲಿ ಲೀನವಾಗಿ ಹೋಗುವುದರಿಂದಲೇ (ಸಕಲ ಜಗತ್ತು ವಾಯುವಿನಲ್ಲಿ ಲೀನವಾಗುತ್ತದೆ) ಇದಕ್ಕೆ
ಲಿಂಗವೆಂಬ ಹೆಸರುಂಟಾಯಿತು. ಸಮಸ್ತ ಪ್ರಪಂಚವೂ ಆ ಲಿಂಗದಲ್ಲೇ ಅಡಕವಾಗಿಬಿಟ್ಟಿದೆ.
ವಿವರಣೆ:- ಸ್ಪಟಿಕದಂತೆ ದೇಹಕಾಂತಿಯುಳ್ಳವನೂ, ನಿಷ್ಕಲನೂ,
ನಾಶ ರಹಿತನೂ, ಎಲ್ಲ ಲೋಕಗಳಿಗೂ ಕಾರಣನಾದವನೂ, ಸರ್ವಜಗತ್ಸ್ವರೂಪನೂ,
ಸರ್ವ ಶ್ರೇಷ್ಠನೂ ಬ್ರಹ್ಮ ಇಂದ್ರ ವಿಷ್ಣು
ಮೊದಲಾದ ದೇವತೆಗಳಿಗೂ ಅಗೋಚರನೂ, ವೇದಾಂತವನ್ನು ಬಲ್ಲ ವೇದವಿದರಿಂದಲೂ ಸಹ
ಅಗೋಚರನೆಂದು ಸ್ಮರಿಸಲ್ಪಡುವವನೂ, ಆದಿ ಮಧ್ಯ ಅಂತ್ಯಗಳೊಂದೂ ಇಲ್ಲದವನೂ,
ಎಲ್ಲ ರೋಗಿಗಳಿಗೂ, ಔಷಧ ಸ್ವರೂಪನೂ, ಆದ
ಶಿವನ ಶಿವತತ್ವವೆಂಬ ಶಿವಲಿಂಗವನ್ನು (ಧ್ಯಾನ ವಾಯುವನ್ನು) ಭಾವಿಸಬೇಕು.
ಧ್ಯಾನ ಯಜ್ಞವು ಜ್ಞಾನ ಸಾಧಕವಾದುದ್ದು
ಧ್ಯಾನಯಜ್ಞಾತ್ಪರಂ
ನಾಸ್ತಿ ಧ್ಯಾನಂ ಜ್ಞಾನಸ್ಯ ಸಾಧನಂ ।
ಯತಸ್ಸಮರಸಂ
ಸ್ವೇಷ್ಟಂ ಯೋಗೀ ಧ್ಯಾನೇನ ಪಶ್ಯತಿ ॥
೪೬॥
ಧ್ಯಾನಯಜ್ಞರತಸ್ಯಾಸ್ಯ
ಸದಾ ಸನ್ನಿಹಿತಶ್ಶಿವಃ ।
ನಾಸ್ತಿ
ವಿಜ್ಞಾನಿನಾಂ ಕಿಂಚಿತ್ಪ್ರಾಯಶ್ಚಿತ್ತಾದಿಶೋಧನಂ ॥೪೭॥
ಭಾಗ-2 - ಸೃಷ್ಟಿ ಖಾಂಡ - ಅಧ್ಯಾಯ-12 -
ಶ್ಲೋಕ -೪೬-47
ಭಾವಾರ್ಥ:- ಧ್ಯಾನಯಜ್ಞಕ್ಕಿಂತಲೂ ಉತ್ತಮವಾದುದಿನ್ನೊಂದಿಲ್ಲ. ಧ್ಯಾನವು ಜ್ಞಾನಕ್ಕೆ ಸಾಧಕವಾದುದು. ಯೋಗನಿರತನಾದವನು ಧ್ಯಾನದಿಂದ ತನಗಿಷ್ಟ ವಾದುದನ್ನು
ಸಮರಸವಾಗಿ ನೋಡುವನಲ್ಲವೆ? ಧ್ಯಾನಯಜ್ಞನಿರತರಾದವರ ಬಳಿಯಲ್ಲಿ ಸದಾ, ಶಿವನು ನೆಲಸಿರುವನು. ವಿಜ್ಞಾನಶೀಲರಾದವರಿಗೆ ಪ್ರಾಯಶ್ಚಿತ್ತಾದಿ ಪಾಪನಿರ್ಮೂಲನ
ಕಾರ್ಯಗಳು ಆವಶ್ಯಕವಿಲ್ಲ.
ಎಲ್ಲವೂ ಶಿವಮಯ ವೆಂಬ ಧ್ಯಾನದಿ ಜ್ಞಾನ
ಬರುವವರೆಗೆ ಮೂರ್ತಿಪೂಜೆ
ತಾವಚ್ಚ
ಪ್ರತಿಮಾ ಪೂಜ್ಯಾ ಯಾವದ್ವಿ ಜ್ಞಾನಸಂಭವಃ
|
ಜ್ಞಾನಾಭಾವೇ ನ
ಪೂಜ್ಯೇತ ಪತನಂ ತಸ್ಯ ನಿಶ್ಚಿತಂ ॥
೬೭ ॥
ಭಾಗ-2 - ಸೃಷ್ಟಿ ಖಾಂಡ - ಅಧ್ಯಾಯ-12 -
ಶ್ಲೋಕ -67
ಭಾವಾರ್ಥ:- ಎಲ್ಲವೂ ಶಿವಮಯವೆಂಬ ಶುದ್ಧವಾದ, ಜ್ಞಾನವು ಹುಟ್ಟುವವರೆಗೂ, ದೇವತಾಮೂರ್ತಿಗಳನ್ನು
ಪೂಜಿಸುತ್ತಿರಬೇಕು. ಅಂತಹ ಜ್ಞಾನವಿಲ್ಲದೆ ಆ ರೀತಿ ವಿಗ್ರಹಾರಾಧನೆಯೂ ಇಲ್ಲದಿದ್ದರೆ, ಅಂಥವನು ನರಕದಲ್ಲಿ ಬೀಳುವುದು ಖಂಡಿತ.
ವಿವರಣೆ:- ಪರಮಾನಂದಕಾರಕವೂ, ಶುದ್ಧವೂ, ಮಂಗಲಮಯವೂ, ನಾಶವಿಲ್ಲದುದೂ,
ಕಲಾತೀತವೂ, ಸರ್ವವ್ಯಾಪಿಯೂ ಆದ ಶಿವಲಿಂಗವು ಯೋಗಿಗಳ ಹೃದಯದಲ್ಲೇ
ಇದೆಯೆಂದು ಅರಿಯಿರಿ. ಯಾರು ಕರ್ಮಯಜ್ಞನಿರತರೋ ಯಾರು ಬಾಹ್ಯ ಲಿಂಗವನ್ನು ಪೂಜಿಸುವರೋ ಅವರು,
ಅಜ್ಞಾನಿಗಳ ತಿಳುವಳಿಕೆಗಾಗಿ
ಸ್ಥೂಲಲಿಂಗಾರ್ಚನೆಯಲ್ಲಿ ತೊಡಗಿರುವರೆಂದು ಭಾವಿಸಬೇಕು.
ಸ್ವಯಂ ಶಿವನಾಗಲು ಗುರುವಿನಿಂದ ಮಂತ್ರೋಪದೇಶ ಮಂತ್ರಧ್ಯಾನದಿ ಜ್ಞಾನ
ಸಂಗತ್ಯಾ
ಗುರುರಾಪ್ಯೇತ ಗುರೋರ್ಮಂತ್ರಾದಿ ಪೂಜನಂ ।
ಪೂಜ ಜನಾಜ್ಜಾ
ಯತೇ ಭಕ್ತಿ ರ್ಭಕ್ತ್ಯಾ ಜ್ಞಾನಂ ಪ್ರಜಾಯತೇ || ೭೫॥
ವಿಜ್ಞಾನಂ
ಜಾಯತೇ ಜ್ಞಾನಾತ್ಪರಬ್ರಹ್ಮಪ್ರಕಾಶಕಂ ।
ವಿಜ್ಞಾನಂ ಚ
ಯದಾ ಜಾತಂ ತದಾ ಭೇದೋ ನಿವರ್ತತೇ ॥ ೭೬॥
ಭೇದೇ ನಿವೃತ್ತೇ
ಸಕಲೇ ದ್ವಂದ್ವ ದುಃಖವಿಹೀನತಾ ।
ದ್ವಂದ್ವ ದುಃಖ
ವಿಹೀನಸ್ತು ಶಿವರೂಪೋ ಭವತ್ಯಸೌ ॥೭೭॥
ಭಾಗ-2 - ಸೃಷ್ಟಿ ಖಾಂಡ - ಅಧ್ಯಾಯ-12 -
ಶ್ಲೋಕ -75-77
ಭಾವಾರ್ಥ:- ಸಾಧು ಸಜ್ಜನರ ಸಹವಾಸದಿಂದ ಗುರುವು ದೊರೆಯುವನು. ಗುರುವಿನಿಂದ ಮಂತ್ರಗಳು ದೊರೆತು
ದೇವನನ್ನು ಪೂಜಿಸಲು ಅನುಕೂಲವಾಗುವುದು. ಆ ಪೂಜೆಯಿಂದ ಭಕ್ತಿಯುಂಟಾಗುವುದು. ಭಕ್ತಿಯಿಂದ ಜ್ಞಾನವು
ಲಭಿಸುವುದು. ಪರಬ್ರಹ್ಮನನ್ನು ಸಾಕ್ಷಾತ್ಕರಿಸಲು ಬೇಕಾದ ಆ ವಿಜ್ಞಾನವು ಜ್ಞಾನದಿಂದ ಹುಟ್ಟುವುದು.
ವಿಜ್ಞಾನವು ಹುಟ್ಟಿದ ಮೇಲೆ ಭೇದವೆಲ್ಲಾ ಹೋಗಿ ಅಭೇದ ಜ್ಞಾನವುಂಟುಗುವುದು. ಈ ರೀತಿ ಭೇದವು
ಮಾಯವಾಗಲು ಶೀತೋಷ್ಣಾದಿ ದುಃಖಗಳು ಇಲ್ಲದೆ ಹೋಗುವುವು. ಯಾವಾಗ ಈ ದ್ವಂದ್ವಗಳ ಬಾಧೆಯಿಲ್ಲವೋ ಆಗ
ಸಾಕ್ಷಾತ್ ಶಿವನೇ ಇವನಾಗುವನು.
ಧರ್ಮಜಾತ್ಯಾದಿಭಿಶ್ಶಂಭುರ್ನಾನುಗೃಹ್ಣಾತಿ
ವೈ ದ್ವಿಜಾಃ ।
ಗುರೋರನುಗ್ರಹೇಣೈವ
ಶಿವಂ ಜಾನಾತಿ ತತ್ತ್ವತಃ ॥ ೬೭॥
ಭಾಗ-4 - ಪಾರ್ವತಿಖಾಂಡ - ಅಧ್ಯಾಯ 25 - ಶ್ಲೋಕ 67
ಭಾವಾರ್ಥ:- ಧರ್ಮ ಜಾತಿ ಮುಂತಾದುವುಗಳಿಂದ ಶಿವನು ಸಂತುಷ್ಟನಾಗುವುದಿಲ್ಲ. ಗುರುವಿನ ಅನುಗ್ರಹದಿಂದಲೇ
ಶಿವನನ್ನು ನಿಜವಾಗಿ ತಿಳಿಯಬಹುದು.
ವಿವರಣೆ:- ಪೂಜೆ ಎಂದರೆ ನಾವು ಹೀಗೆ ವಿಚಾರ ಮಾಡಬಹುದು. ಭೂಮಿ,
ನೀರು, ಅಗ್ನಿ, ವಾಯು, ಆಕಾಶಗಳೆಂಬ
ಪಂಚಭೂತಗಳಿಂದ ಉಪಕಾರವನ್ನು ಹೊಂದುತ್ತಿರುವ ನಾವು ಈ ಐದರಿಂದಾದ ಶರೀರವುಳ್ಳವರು. ಇದಕ್ಕೆ
ಕೃತಜ್ಞತೆಯನ್ನು ಸಲ್ಲಿಸುವುದೇ ಪೂಜೆಯು ಎನ್ನುತ್ತಾರೆ ವಿದ್ವಾಂಸರು. ಭೂಮಿ ಅಂದರೆ ಭೂಮಿಯ
ವಿಶೇಷತೆಯನ್ನು ಗಮನಿಸುವುದು, ಅದು ಆಹಾರ ನೀಡುವುದು, ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು
ಭೂಮಿಯಿಂದಲೇ ಉತ್ಪತ್ತಿಯಾಗುವುದು, ಇಂತಹ ಬಾಹ್ಯ ಭೂಮಿ ನಮ್ಮ ಕಣ್ಣ
ಮುಂದಿದ್ದರೆ ನಮ್ಮಲ್ಲಿ ಅಂತರಿಕ ಭೂಮಿ ಇದೆ ಅದುವೇ ಮನುಜನ ಮೂಲಾಧಾರ ಚಕ್ರ. ಆಕಾಶ ಎಂದರೆ
ಅಕ್ಷರಶಃ ಅರ್ಥ “ಭೂಮಿಯಲ್ಲಿನ (ಮೂಲಾಧಾರದಲ್ಲಿನ) ಜೀವ ಉಸಿರು ಒಂದು ಆಯುಧ” ಇದು ಅಮೃತ ವಾಯು
ಹೇಗೆ ಆಕಾಶದಲ್ಲಿ ಆವಿಯಾಗಿ ಭೂಮಿಯ ಎಲ್ಲಾ ಸತ್ವವನ್ನೂ ಶೇಖರಿಸಿರುತ್ತದೋ ಅದೇ ಅಮೃತ ವಾಯು
ನಮ್ಮಲ್ಲಿ ಮೂಲಾಧಾರದಲ್ಲಿ ಉತ್ಪತ್ತಿಯಾಗುತ್ತದೆ ಅದರ ಹೆಸರೇ ಆಕಾಶ.
ಧ್ಯಾನದಲ್ಲಿ ಕಾಣುವ ವಿಜ್ಞಾನವು
ಎಲ್ಲಾ ದೇವರಿಗಿಂತ ಶ್ರೇಷ್ಟವಾದುದ್ದು
ತೀರ್ಥಾನಿ
ಶ್ಲಾಘಯಂತೀಹ ತಾದೃಶಂ ಜ್ಞಾನವಿತ್ತಮಂ ।
ದೇವಾಶ್ಚ
ಮುನಯಸ್ಸರ್ವೇ ಪರಬ್ರಹ್ಮಾತ್ಮಕಂ ಶಿವಂ ॥ ೮೦॥
ತಾದೃಶಾನಿ ನ
ತೀರ್ಥಾನಿ ನ ದೇವಾ ಮೃಚ್ಛಿಲಾಮಯಾಃ |
ತೇ
ಪುನಂತ್ಯುರುಕಾಲೇನ ವಿಜ್ಞಾನೀ ದರ್ಶನಾದಪಿ ॥ ೮೧ ॥
ಭಾಗ-2 - ಸೃಷ್ಟಿ ಖಾಂಡ -
ಅಧ್ಯಾಯ-12 - ಶ್ಲೋಕ -80-81
ಭಾವಾರ್ಥ:- ಅಂತಹ ಜ್ಞಾನಿಶ್ರೇಷ್ಠನನ್ನು, ತೀರ್ಥಗಳೂ ದೇವತೆಗಳೂ, ಋಷಿಗಳೂ
ಎಲ್ಲರೂ ಪರಬ್ರಹ್ಮಸ್ವರೂಪನಾದ ಶಿವನೇ ಇವನೆಂದು ಹೊಗಳುವರು. ತೀರ್ಥಗಳೂ ಮತ್ತು ಮಣ್ಣಿ ನಲ್ಲಿ
ಮಾಡಿದ, ಕಲ್ಲಿನಲ್ಲಿ ಕಡೆದ
ದೇವರುಗಳೂ, ಆ ವಿಜ್ಞಾನಿಯನ್ನು
ಹೋಲಲಾರವು. ತೀರ್ಥಾದಿಗಳು ಬಹಳ ದಿವಸಗಳ ಮೇಲೆ ಮನುಷ್ಯನನ್ನು ಪಾವನನನ್ನಾಗಿ ಮಾಡುತ್ತವೆ.
ವಿಜ್ಞಾನಿಯಾದರೋ ಧರ್ಶನ ಮಾತ್ರದಿಂದಲೇ ಪಾವನಗೊಳಿಸುವನು.
ಭಕ್ತಿಯಿಲ್ಲದೆ ಜ್ಞಾನವುಂಟಾಗದು
ಭಕ್ತೌ ಜ್ಞಾನೇನ
ಭೇದೋ ಹಿ ತತ್ಕರ್ತುಸ್ಸರ್ವದಾ ಸುಖಂ ।
ವಿಜ್ಞಾನಂ ನ
ಭವತ್ಯೇವ ಸತಿ ಭಕ್ತಿವಿರೋಧಿನಃ ॥ ೧೬ ॥
ಭಾಗ-3 - ಸತೀಖಂಡ - ಅಧ್ಯಾಯ-23 - ಶ್ಲೋಕ
-16
ಭಾವಾರ್ಥ:- ಭಕ್ತಿಯೂ, ಜ್ಞಾನವೂ ಎರಡು
ಒಂದೇ, ಭಿನ್ನವಲ್ಲ. ಒಂದೇ
ರೀತಿಯಾಗಿ ಫಲವನ್ನುಂಟುಮಾಡುವವು. ಭಕ್ತಿಯುಳ್ಳವನು ಸದಾ ಸುಖವನ್ನು ಹೊಂದುವನು.
ಭಕ್ತಿಯುಂಟಾಗದಿದ್ದರೆ ಜ್ಞಾನವು ಉಂಟಾಗುವುದೇ ಇಲ್ಲ. ಎಂದರೆ ಜ್ಞಾನಕ್ಕೆ ಭಕ್ತಿಯು ದ್ವಾರವು.
ಭಕ್ತಿಯಿಂದ ಜ್ಞಾನವನ್ನು ಪಡೆದು ತನ್ಮೂಲಕ ಮುಕ್ತಿಯನ್ನು ಪಡೆಯಬೇಕು.
ಶ್ರವಣಂ
ಕೀರ್ತನಂ ಚೈವ ಸ್ಮರಣಂ ಸೇವನಂ ತಥಾ।
ದಾಸ್ಯಂ
ತಥಾರ್ಚನಂ ದೇವಿ ವಂದನಂ ಮಮ ಸರ್ವದಾ ॥ ೨೨ ॥
ಭಾಗ-3 - ಸತೀಖಂಡ - ಅಧ್ಯಾಯ-23 - ಶ್ಲೋಕ
-22
ಭಾವಾರ್ಥ:- ಶ್ರವಣ, ಕೀರ್ತನ, ಸ್ಮರಣ, ಸೇವನ, ದಾಸ್ಯ, ಅರ್ಚನ, ವಂದನ, ಸಖ್ಯ, ಆತ್ಮಾರ್ಪಣೆ ಇವು ಒಂಭತ್ತೂ ಆ ಭಕ್ತಿಯ ಅಂಗಗಳು.
ಸದಾ
ಸೇವ್ಯಾನುಕೂಲ್ಯೇನ ಸೇವನಂ ತದ್ದಿಗೋಗಣ್ಯೆಃ
ಹೃದಯಾಮೃತಭೋಗೇನ
ಪ್ರಿಯಂ ದಾಸ್ಯಮುದಾಹೃತಂ ॥ ೨೯ ॥
ಭಾಗ-3 - ಸತೀಖಂಡ - ಅಧ್ಯಾಯ-23 - ಶ್ಲೋಕ
-29
ಭಾವಾರ್ಥ:- ಪಂಚಕರ್ಮೇಂದ್ರಿಯಗಳು, ಪಂಚ
ಜ್ಞಾನೇಂದ್ರಿಯಗಳು, ಮನಸ್ಸು
ಇವುಗಳಿಂದ ಸದಾ ನನ್ನನ್ನು ಸೇವಿಸುತ್ತಾ ಅದರಿಂದುಂಟಾಗುವ ಆನಂದಾಮೃತದಿಂದ ಸಂತೋಷಪಡುವದೇ
ದಾಸ್ಯವೆನಿಸುವದು. ಈ ದಾಸ್ಯವು ನನಗೆ ಬಹು ಪ್ರಿಯವಾದುದು.
ಜ್ಞಾನ ಸಾಧನೆಗೆ ಸಂಸಾರ
ಮುಕ್ತನಾಗಬೇಕು ಎಂಬುದಿಲ್ಲ
ಪ್ರವೃತ್ತಂ ಚ
ನಿವೃತ್ತಂ ಚ ದ್ವಿವಿಧಂ ಕರ್ಮ ಚೋದಿತಂ ।
ವೇದೇ ವಿವಿಚ್ಯ
ವೃತ್ತಂ ಚ ತದ್ವಿಚಾರ್ಯ ಮನೀಷಿಭಿಃ ||
೫೪॥
ವಿರೋಧೆಯೌಗಪದ್ಯೈ
ಕಕರ್ತೃಕೇ ಚ ತಥಾ ದ್ವಯಂ।
ಪರಬ್ರಹ್ಮಣಿ
ಶಂಭೌ ತು ಕರ್ಮರ್ಚೈಂತಿ ನ ಕಂಚಿನ || ೫೫
ಭಾಗ-3 - ಸತೀಖಂಡ - ಅಧ್ಯಾಯ-29 - ಶ್ಲೋಕ
-54-55
ಭಾವಾರ್ಥ:- ವೇದದಲ್ಲಿ ಪ್ರವೃತ್ತಿ ಮಾರ್ಗ ಎಂದರೆ ಸಂಸಾರ[24]
ಸುಖ ಪರವಾದಂತಹ ಮತ್ತು ನಿವೃತ್ತಿ ಅಂದರೆ ಮುಕ್ತಿ ಪರವಾದಂತಹ ಎರಡು ಕರ್ಮಗಳನ್ನು ಹೇಳಿರುವುದು, ತಿಳಿವಳಿಕೆಯುಳ್ಳವರು ಅವೆರಡು
ಕರ್ಮಗಳನ್ನೂ ವಿಮರ್ಶಿಸಿ ನಿಶ್ಚಯಿಸಬೇಕು. ಆ ಎರಡು ಕರ್ಮಗಳೂ ಪರಸ್ಪರ ವಿರುದ್ಧವಾಗಿರುವುವು.
ಆದಕಾರಣ ಒಬ್ಬನು ಎರಡು ಕರ್ಮಗಳನ್ನೂ ಮಾಡಲಸದಳವು. ಆದರೆ ಪರಬ್ರಹ್ಮನಾದ ಪರಮೇಶ್ವರನಲ್ಲಿ ಈ ಎರಡು
ಕರ್ಮಗಳ ಅವಶ್ಯಕತೆಯೂ ಇಲ್ಲ. ಜ್ಞಾನದಿಂದಲೇ ಮುಕ್ತಿಯು.
ವಿವರಣೆ:- ಭವಿಷ್ಯ ಮಹಾಪುರಾಣ ಮಧ್ಯಮ ಪರ್ವ ಅಧ್ಯಾಯ 1 ರಲ್ಲಿ ಶ್ಲೋಕ 15 ಹೀಗಿದೆ, ತ್ರಯಾಣಾಮಾಶ್ರಮಾಣಾಂ ಚ ಗೃಹಸ್ಥೋ
ಯೋನಿರುಚ್ಯತೆ | ಅನ್ಯೇSಪಿ ಸೂಪಜೀವಂತಿ ತಸ್ಮಾಚ್ಛ್ರೇಷ್ಠೋ ಗೃಹಾಶ್ರಮೀ ॥ ಅಂದರೆ
"ಗೃಹಸ್ಥನೇ ಬ್ರಹ್ಮಚರ್ಯಾದಿ ಮೂರು ಆಶ್ರಮಗಳಿಗೂ ಕಾರಣನೆಂದು ಹೇಳಬಹುದು. ಇತರ
ಆಶ್ರಮಗಳವರೆಲ್ಲರೂ ಗೃಹಸ್ಥನನ್ನೇ ಅನುಸರಿಸಿ ಸುಖವಾಗಿ ಜೀವಿಸುತ್ತಾರೆ. ಆದುದರಿಂದ
ಗೃಹಸ್ಥಾಶ್ರಮಿಯೇ ಶ್ರೇಷ್ಠನು". ಅದರಲ್ಲೇ ಮುಂದುವರಿದ ವಿವರಣೆ ಹೀಗಿದೆ, "ಗೃಹಸ್ಥಾಶ್ರಮವೊಂದೇ ಇತರ ಆಶ್ರಮಗಳ ಉತ್ಪತ್ತಿಗೆ ಸಾಧನವಾಗುತ್ತದೆ. ಆದುದರಿಂದ
ಗೃಹಸ್ಥಾಶ್ರಮವೊಂದೇ ಧರ್ಮೋಪದೇಶಕವಾದುದೆಂದು ತಿಳಿಯಬೇಕು. ಧರ್ಮ ವಿರುದ್ದವಾಗಿ ಸಂಪಾದಿಸಿದ
ಹಣವನ್ನು ವರ್ಜ್ಯ ಮಾಡಬೇಕು. ಕಾಮಾಭಿಲಾಷೆಯು ಧರ್ಮ ವಿರುದ್ದವಾಗಿ ಉಂಟಾಗುವುದಾದರೆ ಅದನ್ನೂ
ಪರಿತ್ಯಾಗ ಮಾಡಬೇಕು. ಇದರಲ್ಲಿ ಒಂದು ವಿಚಾರವುಂಟು ಲೋಕದಲ್ಲಿ ಬಹುಜನರಿಗೆ ವಿರೋಧವಾಗುವಂತಹ
ವಿಷಯವು ಧರ್ಮ ಸಮ್ಮತವಾಗಿದ್ದರೂ ಅದನ್ನು ಬಿಟ್ಟುಬಿಡಬಹುದು. ಧರ್ಮಾ ಚರಣದದಿಂದಲೇ ಅರ್ಥ
ಸಂಗ್ರಹವಾಗುವುದು. ಧರ್ಮಾ ಚರಣದಿಂದಲೇ ಕಾಮ (ಇಷ್ಟಾರ್ಥ) ಸಾಧನೆಯುಂಟಾಗುವುದು. ಧರ್ಮಾ ಚರಣದಿಂದಲೇ ಮೋಕ್ಷವೂ ಉಂಟಾಗುವುದು. ಆದುದರಿಂದ ಮುಖ್ಯವಾಗಿ
ಧರ್ಮವನ್ನಾಶ್ರಯಿಸಬೇಕು. ಪ್ರಾಜ್ಞನು
ನಿವೃತ್ತಿಧರ್ಮವನ್ನೇ ಅನುಸರಿಸ ಬೇಕು ಹಾಗಿಲ್ಲದೆ ಪ್ರವೃತ್ತಿ ಮಾರ್ಗಾವಲಂಬಿಯಾದರೆ ಮತ್ತೆ ಸಂಸಾರ
ಬಂಧನಕ್ಕೆ ಸಿಕ್ಕಿಕೊಳ್ಳುತ್ತಾನೆ. ನಿವೃತ್ತಿ ಮಾರ್ಗ ಎಂದರೆ, ಎಲ್ಲರನ್ನೂ ತೊರೆದು ಹೋಗುವುದಲ್ಲ
ಅಂತರಿಂದ್ರಿಯನಿಗ್ರಹ (ಶಮ) ಬಹಿರಿಂದ್ರಿಯನಿಗ್ರಹ (ದಮ) ದಯಾ, ದಾನ, ಲೋಭವಿಲ್ಲದಿರುವಿಕೆ, ದಾನಶೀಲತೆ, ಋಜುತ್ವ, ಅಸೂಯೆಯಿಲ್ಲದಿರುವುದು,
ಸದಾ ಗುರುಹಿರಿಯರನ್ನಾಶ್ರಯಿಸುವುದು. ಸತ್ಯ, ಸದಾ ಸಂತೋಷಚಿತ್ತತೆ,
ದೈವಭಕ್ತಿ, ಆಸ್ತಿಕ್ಯಬುದ್ಧಿ, ಶ್ರದ್ಧೆ, ಇಂದ್ರಿಯನಿಗ್ರಹ, ದೇವತಾರ್ಚನೆ
ಇವು ವಿಧ್ಯಾವಂತರಲ್ಲಿ ವಿಶೇಷವಾಗಿ ಇರಬೇಕು. ಅಹಿಂಸೆ ಸತ್ಯವಾದಿತ್ವ, ಚಾಡಿಯ ಸಂಪರ್ಕವಿಲ್ಲದಿರುವುದು, ಕಾರ್ಯನಿರ್ವಾಹದಲ್ಲಿ ಒಳ್ಳೆಯ ಸಾಮರ್ಥ್ಯ, ಪರಿಶುದ್ಧವಾದ ನಡತೆ, ದಯಾವಂತರಾಗಿರುವುದು ಈ ಗುಣಗಳು ಸಮಸ್ತ ವರ್ಣದವರಲ್ಲಿಯೂ
ಇರಬೇಕಾದುವು. ಎಲ್ಲಾ ಧರ್ಮಗಳಿಗೂ ಶ್ರದ್ಧೆಯೇ ಮೂಲವಾದುದು. ಶ್ರದ್ಧೆ ಎಂಬುದು ಈ ಧರ್ಮಗಳಲ್ಲಿ
ಸೇರಿರತಕ್ಕದ್ದು. ಶ್ರದ್ಧೆಯೆಂಬುದೇ ನಿಷ್ಠೆ. ಶ್ರದ್ಧೆಯೇ ಪ್ರತಿಷ್ಠೆ. ಶ್ರದ್ದೆಯೇ ಧರ್ಮಗಳು ಎಂಬದಾಗಿದೆ. ಹೀಗೆ ವಿವರಣೆ ಕೊಡುತ್ತಾ, ಅದೇ ಪುರಾಣದಲ್ಲಿ "ಪ್ರಜಾಪತ್ಯಂ ಗೃಹಸ್ಥಾನಾಂ ಸ್ಥಾನಮುಕ್ತಮ್
ಸ್ವಯಂಭುವಾ" ಎಂದರೆ "ಬ್ರಹ್ಮಜ್ಞರಾದ (ಬ್ರಹ್ಮಜ್ಞಾನವನ್ನು ಪಡೆದ) ಗೃಹಸ್ಥರಿಗೆ
ಪ್ರಾಜಾಪತ್ಯ (ಬ್ರಹ್ಮಲೋಕ[25])
ಪ್ರಾಪ್ತಿಯೆಂದು ತಿಳಿಯಚೇಕು". ಅಲ್ಲಿಗೆ ಬ್ರಹ್ಮ ಜ್ಞಾನ ಪಡೆಯಲು ಲೋಕಾ ರೂಡಿಯ ಸನ್ಯಾಸ
ಅಥವಾ ಲೋಕಾ ರೂಡಿಯ ಬ್ರಹ್ಮಚರ್ಯೆ ಬೇಕಿಲ್ಲ, ಗೃಹಸ್ಥನೂ ಮೇಲೆ ಹೇಳಿದ
ಧರ್ಮಾಚರಣೆಯಿಂದ ಅಂತಹ ಬ್ರಹ್ಮ ಲೋಕ ಪ್ರಾಪ್ತಿಯಾಗುವುದು.
ಶೈವಾಗಮದಲ್ಲಿ ಹೇಳಿರುವ ಜ್ಞಾನ
ಸ್ವರೂಪ
ಜ್ಞಾನಂ ಕ್ರಿಯಾ
ಚ ಚರ್ಯಾ ಚ ಯೋಗಶ್ಚೇತಿ ಸುರೇಶ್ವರಿ ।
ಚತುಷ್ಪಾದಃ
ಸಮಾಖ್ಯಾತೋ ಮಮ ಧರ್ಮಸ್ಸನಾತನಃ ॥ ೩೦॥
ಭಾಗ-12 - ವಾಯವೀಯಸಂಹಿತೆ - ಅಧ್ಯಾಯ-10 -
ಶ್ಲೋಕ -30
ಭಾವಾರ್ಥ:- ಅನಾದಿಯಾದ ನನ್ನ ಧರ್ಮವು ಎಂದರೆ ಶಿವಧರ್ಮವು ಜ್ಞಾನ, ಕ್ರಿಯಾ, ಚರ್ಯಾ, ಯೋಗ ಎಂದು ನಾಲ್ಕು
ಭಾಗವಾಗಿರುವುದು. ಈ ಭಾಗ
ಪಾದಗಳೆಂದು ಹೇಳುವರು.
ವಿವರಣೆ:- ಈ ಮನೋವಾಕ್ಕಾಯರೂಪವಾದ ತ್ರಿಕರಣಗಳಿಂದ ಸೇವೆಯನ್ನು
ಶಿವಧರ್ಮವೆಂದು ಹೇಳುವರು. ತಪಸ್ಸು, ಕರ್ಮ, ಜಪ, ಧ್ಯಾನ, ಜ್ಞಾನ ಎಂದು ಶಿವಧರ್ಮವು ಐದು ವಿಧವಾಗಿರುವುದೆಂದು ಪರಮಾತ್ಮನಾದ ಶಿವನೇ ಹೇಳಿರುವನು.
ಶಿವಲಿಂಗವನ್ನು (ಧ್ಯಾನದಿ ವಾಯುವನ್ನು) ಪೂಜಿಸುವುದೇ ಮೊದಲಾದುವು
ಕರ್ಮವೆನಿಸುವುದು. ಚಾಂದ್ರಾಯಣಾದಿ ವ್ರತಗಳನ್ನು ಮಾಡುವುದೇ ತಪಸ್ಸೆನಿಸುವುದು. ಉಪಾಂಶು
(ಮೆಲ್ಲಗೆ ಉಚ್ಚಾರಣೆಮಾಡುವುದು/ ಅಜಪ ಮಂತ್ರ ) ಮಾನಸಿಕ ಅರ್ಥಾನುಸಂಧಾನ ಎಂಬ ಮೂರು ರೂಪಗಳಲ್ಲಿ
ಶಿವಮಂತ್ರವನ್ನು ಮತ್ತೆ ಮತ್ತೆ ಹೇಳುವುದೇ ಜಪವು ಶಿವನ ರೂಪವನ್ನು ಮನಸ್ಸಿನಲ್ಲಿ ಯೋಚಿಸುವುದೇ
ಧ್ಯಾನವು. ಶೈವಾಗಮದಲ್ಲಿ ಹೇಳಿರುವ ಜ್ಞಾನ ಸ್ವರೂಪವೇ ನಿಜವಾದ ಜ್ಞಾನವೆನಿಸುವುದು. ಅನಾದಿಯಾದ
ಶಿವಧರ್ಮಕ್ಕೆ ಭಕ್ತಿಯೇ ಮುಖ್ಯವಾದ ಅಂಗವಾಗಿರುವುದು.
ಶಿವಾಗ್ನೌ ವಾ
ಯಜೇದ್ದೇವಂ ಹೋಮದ್ರವ್ಯೈಶ್ಚ ಸಪ್ತಭಿಃ ।
ಸಮಭ್ಯರ್ಚ್ಯ
ಯಥಾನ್ಯಾಯಂ ಸರ್ವಾವರಣದೇವತಾಃ || 90
ಏಷ ಯೋಗೇಶ್ವರೋ
ನಾನು ತ್ರಿಷು ಲೋಕೇಷು ವಿಶ್ರುತಃ ।
ನ ತಸ್ಮಾದಧಿಕಃ
ಕಶ್ಚಿದ್ಯೋಗೋsಸ್ತಿ ಭುವನೇ ಕ್ವಚಿತ್ || 91
ಭಾಗ-12 - ವಾಯವೀಯಸಂಹಿತೆ - ಅಧ್ಯಾಯ-30 -
ಶ್ಲೋಕ -90-91
ಭಾವಾರ್ಥ:- ಶಿವಾಗ್ನಿಯಲ್ಲಿಯೇ ವಿಧಿಗನುಸಾರವಾಗಿ ಸಮಸ್ತ ಆವರಣದೇವತೆಗಳನ್ನೂ ಪೂಜಿಸಿ ಏಳು ವಿಧವಾದ ಹೋಮ
ದ್ರವ್ಯಗಳಿಂದ (ಏಳು ಕುಂಡಲಿನಿ ಚಕ್ರಗಳಿಂದ) ಹೋಮ
ಮಾಡುವುದರ ಮೂಲಕವಾಗಿಯೇ ಪೂಜಿಸಬಹುದು. ಯೋಗೇಶ್ವರವೆಂಬ ಹೆಸರಿನ ಈ ಪೂಜೆಯು ಮೂರು ಲೋಕದಲ್ಲಿಯೂ ಪ್ರಸಿದ್ಧವಾದುದು. ಮೂರು ಲೋಕದಲ್ಲಿಯೂ ಇದಕ್ಕಿಂತ ಹೆಚ್ಚಾದ ಮತ್ತೊಂದು ಯೋಗ ಕರ್ಮವಿರುವುದಿಲ್ಲ.
ಮಂತ್ರಯೋಗಃ
ಸ್ಪರ್ಶಯೋಗೋ ಭಾವಯೋಗಸ್ತಥಾಪರಃ
ಅಭಾವಯೋಗಃ
ಸರ್ವೇಭ್ಯೋ ಮಹಾಯೋಗಃ ಪರೋ ಮತಃ ॥ 7
ಭಾಗ-12 - ವಾಯವೀಯಸಂಹಿತೆ - ಅಧ್ಯಾಯ-37 -
ಶ್ಲೋಕ -7
ಭಾವಾರ್ಥ:- ಮಂತ್ರಯೋಗ, ಸ್ಪರ್ಶಯೋಗ, ಭಾವಯೋಗ, ಅಭಾವಯೋಗ, ಮಹಾಯೋಗ, ಎಂದು
ಐದು ಯೋಗಗಳು.
ವಿವರಣೆ:- ಮಂತ್ರಯೋಗವೆಂದರೆ ಇದರಲ್ಲಿ ಕೆಲವು ಮಂತ್ರಗಳನ್ನು
ನಿರಂತರವಾಗಿ ಪುನರಾವರ್ತಿಸುವುದರಿಂದ ಮಾನಸಿಕ ಸ್ಥಿತಿಗಳು ಸ್ಥಿರವಾಗಿರುತ್ತವೆ. ಇದು ಉಸಿರಾಟದ ನಿಯಂತ್ರಣದೊಂದಿಗೆ ಸಂಬಂಧ
ಹೊಂದಿದ್ದಾಗ ಅದನ್ನು ಸ್ಪರ್ಶಯೋಗ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯು
ಪ್ರಗತಿಪರ ಪ್ರಮಾಣದಲ್ಲಿ ಮುಂದುವರಿದಾಗ ಮತ್ತು ಮಂತ್ರಗಳನ್ನು ಪಠಿಸುವ ಅಗತ್ಯದಿಂದ
ವಿಘಟಿತಗೊಂಡಾಗ ಅದನ್ನು ಭಾವಯೋಗ ಎಂದು ಕರೆಯಲಾಗುತ್ತದೆ. ಈ ಯೋಗ
ಪ್ರಕ್ರಿಯೆಯ ಮತ್ತಷ್ಟು ಪ್ರಗತಿಯ ಮೂಲಕ, ಪ್ರಪಂಚದ ನೋಟವು ಅದರ ವಿವಿಧ
ರೂಪಗಳಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ ಮತ್ತು ಇದನ್ನು ಅಭಾವಯೋಗ ಎಂದು ಕರೆಯಲಾಗುತ್ತದೆ.
ಈ ಹಂತದಲ್ಲಿ ಯೋಗಿ ಪ್ರಪಂಚದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅವನು ತನ್ನನ್ನು ತಾನು ಶಿವನ ಸ್ವಭಾವದವನಾಗಿದ್ದಾನೆ ಮತ್ತು ಅವನೊಂದಿಗೆ ಒಬ್ಬನೆಂದು
ಭಾವಿಸುತ್ತಾನೆ, ಮತ್ತು ಅವನು ಎಲ್ಲ ಪರಿಸ್ಥಿತಿಗಳಿಂದ
ವಿಮುಖನಾಗುತ್ತಾನೆ. ಇದನ್ನು ಮಹಾಯೋಗ ಸ್ಥಿತಿ ಎಂದು ಕರೆಯಲಾಗುತ್ತದೆ.
ಈ ಹಂತದಲ್ಲಿ ಒಬ್ಬನು ಲೌಕಿಕ ಜಗತ್ತಿನ ಎಲ್ಲಾ ವಸ್ತುಗಳಿಗೆ ವಿಮುಖನಾಗುತ್ತಾನೆ,
ಇಂದ್ರಿಯಗಳಿಂದ ಅನುಭವಗಳಾಗಲಿ ಅಥವಾ ಧರ್ಮಗ್ರಂಥಗಳು ಸೂಚಿಸಿದಂತೆ. ಸಹಜವಾಗಿ, ಯೋಗದ ಈ ಅಭ್ಯಾಸವು ಯೋಗ-ಸೂತ್ರಗಳಲ್ಲಿ
ಸೂಚಿಸಿದಂತೆ ಯಮ ಮತ್ತು ನಿಯಮಗಳ ಅಭ್ಯಾಸಗಳನ್ನು ಒಳಗೊಂಡಿರುತ್ತದೆ, ಮತ್ತು
ವಿವಿಧ ಭಂಗಿಗಳ ಅಭ್ಯಾಸ, ಉಸಿರಾಟದ ನಿಯಂತ್ರಣ (ಪ್ರಾಣಯಾಮಾ), ಇತರ ವಸ್ತುಗಳಿಂದ ಮನಸ್ಸನ್ನು ತಡೆಹಿಡಿಯುವುದು
(ಪ್ರತ್ಯಾಹಾರ), ನಿರ್ದಿಷ್ಟ ವಸ್ತುಗಳ ಮೇಲೆ ಕೇಂದ್ರೀಕರಿಸುವ
ಅಭ್ಯಾಸ (ದಾರಾ), ಮತ್ತು ಧ್ಯಾನ, ಮತ್ತು ವಸ್ತುವಿನೊಂದಿಗೆ (ಸಮಾಧಿ) ಒಂದಾಗುವುದು.[26]
ಪ್ರಾಣಸ್ಯ
ವಿಜಯಾದೇವ ಜೀಯಂತೇ ದೇಹವಾಯವಃ ।
ಪ್ರಾಣೋತಪಾನಸ್ಸಮಾನಶ್ಚ
ಹ್ಯುದಾನೋ ವ್ಯಾನ ಏವ ಚ ॥ ೩೫ ॥
ನಾಗಃ ಕೂರ್ಮಶ್ಚ
ಕೃಕರೋ ದೇವದತ್ತೋ ಧನಂಜಯಃ ।
ಪ್ರಯಾಣಂ
ಕುರುತೇ ಯಸ್ಮಾತ್ತಸ್ಮಾತ್ಪ್ರಾಣೋsಭಿಧೀಯತೇ ॥ ೩೬॥
ಭಾಗ-12 - ವಾಯವೀಯಸಂಹಿತೆ - ಅಧ್ಯಾಯ-37 -
ಶ್ಲೋಕ -35-36
ಭಾವಾರ್ಥ:- ಪ್ರಾಣಾಯಾಮವೊಂದನ್ನು ಜಯಿಸಿದರೆ ದೇಹದ ಸಮಸ್ತ ವಾಯುಗಳನ್ನೂ ಜಯಿಸಿದಂತಾಗುವುದು. ಪ್ರಾಣ, ಅಪಾನ,
ಸಮಾನ, ಉದಾನ, ವ್ಯಾನ ನಾಗ, ಕೂರ್ಮ,
ಕೃಕರ, ದೇವದತ್ತ, ಧನಂಜಯ
ಎಂದು ಹತ್ತು ಪ್ರಾಣವಾಯುಗಳಿರುವುವು. ಅಂತ್ಯಕಾಲದಲ್ಲಿ ಶರೀರವನ್ನು
ಬಿಟ್ಟು ಪ್ರಯಾಣಮಾಡುವುದರಿಂದ ಪ್ರಾಣವೆಂದು ಪ್ರಾಣವಾಯುವಿಗೆ ಹೆಸರು.
ವಿವರಣೆ:- ಆಹಾರವಾಗಿ ಉಪಯೋಗಿಸಿದ ಅನ್ನ ನೀರುಗಳನ್ನು ಶರೀರದ
ಕೆಳಭಾಗಕ್ಕೆ ತೆಗೆದುಕೊಂಡು ಹೋಗುವ ವಾಯುವು ಅಪಾನವೆಂದು ಹೆಸರನ್ನು ಹೊಂದಿದೆ. ಅಂಗಗಳನ್ನು ಅಭಿವೃದ್ಧಿ ಪಡಿಸಿ
ಹೆಚ್ಚಿಸುವ ವಾಯವು ವ್ಯಾನವೆನಿಸುವುದು. ಅಪಾಯಸ್ಥಾನಗಳನ್ನು ಅಥವಾ
ಗೋಪ್ಯವಾದ ಅವಯವಗಳನ್ನು ಉದ್ವೇಗಗೊಳಿಸುವುದು ಉದಾನವಾಯುವು. ಸಮಸ್ತ
ಅವಯವಗಳ ಸ್ಥಿತಿಗಳನ್ನೂ ಒಂದೇ ಸಮನಾಗಿಟ್ಟು ಕೊಂಡಿರುವುದು ಸಮಾನ ವಾಯುವು. ವಾಂತಿಯನ್ನು ಮಾಡುವುದಕ್ಕೆ ಅನುಕೂಲನಾದ ವಾಯುವಿಗೆ ನಾಗವಾಯುವೆಂದೂ, ಕಣ್ಣುರೆಪ್ಪೆಯನ್ನು ತೆರೆಯುವ ವಾಯುವಿಗೆ ಕೂರ್ಮನೆಂದೂ, ಶೀತವನ್ನುಂಟುಮಾಡುವ
ವಾಯುವಿಗೆ ಕೃಕರವೆಂದೂ, ಆಕಳಿಕೆಯನ್ನುಂಟುಮಾಡುವ ವಾಯುವಿಗೆ
ದೇವದತ್ತವೆಂದೂ ಹೆಸರಿರುವುದು. ಶರೀರವನ್ನೆಲ್ಲಾ ವ್ಯಾಪಿಸಿರುವ ಧನಂಜಯ
ವಾಯುವು ಪ್ರಾಣಿಯ ಶರೀರದಲ್ಲಿ ಜೀವವಿಲ್ಲದಿದ್ದರೂ ಆ ಶರೀರವನ್ನು ಬಿಡುವುದಿಲ್ಲ. ಒಂದು ಅಳತೆಯಿಂದ ಕ್ರಮವಾಗಿ ಪ್ರಾಣಾಯಾಮವನ್ನು ಅಭ್ಯಾಸಮಾಡಿದರೆ ಆದು ಯೋಗಿಯ ಸಮಸ್ತ
ಪಾಪಗಳನ್ನೂ ನಾಶಮಾಡಿ, ಅವನ ಶರೀರವನ್ನು ಕಾಪಾಡುವುದು. ಪ್ರಾಣಜಯವುಂಟಾದರೆ ಕೆಲವು ಗುರುತುಗಳು ಕಂಡುಬರುವುವು. ಅವಾವುವೆಂದರೆ
ಶರೀರದಲ್ಲಿ ಮಲ, ಮೂತ್ರ, ಶ್ಲೇಷ್ಮಗಳು
ಅತ್ಯಲ್ಪವಾಗಿ ಉತ್ಪ್ಸತ್ತಿಯಾಗುವುವು. ಹೆಚ್ಚಾಗಿ ಭೋಜನಮಾಡುವ ಶಕ್ತಿಯೂ
ಬಹಳ ಕಾಲಕ್ಕೊಂದು ಸಲ ಉಸಿರುಬಿಡುವ ಸಾಮರ್ಥ್ಯವೂ ಉಂಟಾಗುವುದು. ಶರೀರದಲ್ಲಿ
ಚಟುವಟಿಕೆಯೂ, ವೇಗವಾಗಿ ನಡೆಯುವ ಶಕ್ತಿಯೂ ಯಾವ ಕೆಲಸಮಾಡುವುದಕ್ಕೂ
ಉತ್ಸಾಹವೂ, ಸ್ಪಷ್ಟವಾದ ಕಂಠ ಧ್ವನಿಯೂ, ಸಮಸ್ತ
ರೋಗನಾಶವೂ, ಬಲವೂ, ತೇಜಸ್ಸೂ, ಒಳ್ಳೆಯ ರೂಪವೂ ಉಂಟಾಗುವುದು. ಧೈರ್ಯವೂ ಬುದ್ಧಿಯಲ್ಲಿ
ಜ್ಞಾಪಕಶಕ್ತಿಯ, ಯೌವನವೂ: ಸ್ಥಿರಬುದ್ಧಿಯೂ,
ಸಂತೋಷದಿಂದ ಕೂಡಿದ ಮನಸ್ಸೂ ಉಂಟಾಗುವುದು. ಪಾಪಗಳನ್ನು
ನಾಶಮಾಡತಕ್ಕ ತಪಸ್ಸೂ, ಯಜ್ಞಗಳೂ, ವ್ರತಗಳೂ
ಇವೆಲ್ಲವೂ ಪ್ರಾಣಾಯಾಮದ ಹದಿನಾರನೆಯ ಒಂದು ಭಾಗಕ್ಕೆ ಸಮವಾಗಲಾರವು.
(ಶಿವ ಮಹಾ ಪುರಾಣದಿಂದ ಸಂಗ್ರಹ)
ಕಾಲಿಕಾ
ಪುರಾಣದಲ್ಲಿ ಮುದ್ರೆಗಳ ಬಗ್ಗೆ ಬೋಧನೆ ಇದೆ
ಹಸ್ತದ ಬೆರಳಿನಲ್ಲಿ ಮಾಡುವ ಮುದ್ರಾ
ಯೋಗದ ವೇದ ರಹಸ್ಯ
ಋಗ್ವೇದ ಮಂಡಲ
೧೦ ಅನುವಾಕ-೭ ಸೂಕ್ತ 90 ಶ್ಲೋಕ 1
ಸಹಸ್ರ ಶೀರ್ಷಾ
ಪುರುಷಃ ಸಹಸ್ರ ಅಕ್ಷಃ ಸಹಸ್ರ ಪಾತ್.
ಸ ಭೂಮಿಂ ವಿಶ್ವ
ತೋ ವೃತ್ ವ ಅತ್ ಯತಿಷ್ಠ ದ ದಶ ಅಂಗುಲಮ್
ಭಾಷಾರ್ಥ:-
ಸಹಸ್ರ (ಅನಂತ) ಶೀರ್ಷಾ
(ತುದಿ/ತಲೆ) ಪುರುಷಃ (ಗರ್ಭದಲ್ಲಿ ವೈದ್ಯನನ್ನು ಶುದ್ಧೀಕರಿಸುವ ಹಮ್ ಶಬ್ದ) ಸಹಸ್ರ (ಅನಂತ)
ಅಕ್ಷಃ (ಅಕ್ಷ ರೇಖೆ) ಸಹಸ್ರ (ಅನಂತ) ಪಾತ್ (ರಕ್ಷಿಸುವ/ಬೀಳುತ್ತಿರುವ) ಸ (ವಾಯು/ಧ್ಯಾನ) ಭೂಮಿಂ
(ಉಸಿರಾಟ ಚಲನೆಯ ಮಾಂತ್ರಿಕ ಸೂತ್ರ) ವಿಶ್ವ ತೋ (ಶಕ್ತಿಯುತವಾದ ಅಮೃತವನ್ನು ಕರೆಯುವ ಭ್ರೂಣದಲ್ಲಿನ ಹಿರಿಮೆ) ವೃತ್ ವ (ಶಕ್ತಿಯುತ ಆಯ್ಕೆ ಮಾಡಲು) ಅತ್ (ಪಡೆಯಲು) ಯತಿಷ್ಠ (ಎಲ್ಲರಿಗೂ ಪವಿತ್ರವಾದ ಋಷಿ ಶಿಕ್ಷಕ) ದ
(ತಯಾರಿಸುವ/ಕೊಡುವ/ಕೊಡುಗೆ) ದಶ (ಹತ್ತು) ಅಂಗುಲ (ಬೆರಳುಗಳಿಗೆ ಅಂಟಿರುವ) ಮ (ಮಾಂತ್ರಿಕ ಸೂತ್ರ)
ಭಾವಾರ್ಥ:- ಅನಂತ ತುದಿಯುಳ್ಳ (ನಾಡಿಗಳ ಸಂಪರ್ಕದ ತುದಿ) ಗರ್ಭದಲ್ಲಿ ವೈದ್ಯನನ್ನು (ಅಮೃತವನ್ನು) ಶುದ್ಧೀಕರಿಸುವ ಹಮ್ ಶಬ್ದ ಅನಂತವಾಗಿ ರಕ್ಷಿಸುವ ಅನಂತ
ಅಕ್ಷ (ಅಕ್ಷ ಎಂದರೆ ಧಾರ್ಮಿಕ ಜ್ಞಾನ, ಹಾವು, ಆತ್ಮ, ಎಂಬುದಾಗಿದೆ) ರೇಖೆ
(ಆತ್ಮ ಶಕ್ತಿ ಚಲನೆಯ ನಾಡಿಗಳು). ವಾಯು ಉಸಿರಾಟ ಚಲನೆಯ ಮಾಂತ್ರಿಕ ಸೂತ್ರ ಶಕ್ತಿಯುತವಾದ
ಅಮೃತವನ್ನು ಕರೆಯುವ ಭ್ರೂಣದಲ್ಲಿನ ಹಿರಿಮೆ ಶಕ್ತಿಯುತ ಆಯ್ಕೆ ಮಾಡಲು ಪಡೆಯಲು ಎಲ್ಲರಿಗೂ
ಪವಿತ್ರವಾದ ಋಷಿ ಶಿಕ್ಷಕ ಕೊಡುಗೆ ಹತ್ತು ಬೆರಳುಗಳಿಗೆ ಅಂಟಿರುವ (ಮುದ್ರೆಗಳ) ಮಾಂತ್ರಿಕ ಸೂತ್ರ.
ವಿವರಣೆ:- ಅನಂತ ನಾಡಿಗಳ ಸಂಪರ್ಕ ತುದಿ ಇರುವ ಗರ್ಭದಲ್ಲಿ
ಅಮೃತವನ್ನು ಶುದ್ದೀಕರಿಸುವ ಹಮ್ ಶಬ್ದದಿಂದ ಅನಂತವಾಗಿ ರಕ್ಷಿಸುವ ಅನಂತ ಆತ್ಮ ಶಕ್ತಿ ಚಲನೆಯ
ನಾಡಿಗಳು. ಉಸಿರಾಟವೇ ಒಂದು ರೀತಿಯ ಚಲನೆಯ ಮಾಂತ್ರಿಕ ಸೂತ್ರ, ಇದು ಶಕ್ತಿಯುತವಾದದ್ದನ್ನು ಆಯ್ಕೆ ಮಾಡಲು ಪಡೆಯಲು ಅಮೃತವನ್ನು ಸೆಳೆಯುವ
ಗರ್ಭದಲ್ಲಿನ ಹಿರಿಮೆ, ಎಲ್ಲರಿಗೂ ಪವಿತ್ರ ಶಿಕ್ಷಕ ಹತ್ತು
ಬೆರಳುಗಳಲ್ಲಿ ಇರುವ ಮುದ್ರೆಗಳ ಮಾಂತ್ರಿಕ
ಸೂತ್ರ. (ಇಲ್ಲಿ ಆತ್ಮಶಕ್ತಿ ಚಲನೆಗೆ ಮುದ್ರೆಗಳ ಮಹತ್ವವನ್ನು ಸಾರುತ್ತಿದೆ ವೇದ). ಮುದ್ರಾ ಎಂದರೆ ಸಂಸ್ಕೃತದ ಅಕ್ಷರ ಅರ್ಥದಲ್ಲಿ "ಕಟ್ಟುವಿಕೆಯಿಂದ ಚಿನ್ನ (ಉಜ್ವಲತೆ)
ನೀಡುತ್ತದೆ". ಅಂದರೆ ಬೆರಳುಗಳನ್ನು ವಿವಿದ ರೀತಿಯಲ್ಲಿ ನಿರ್ಬಂದಿಸುವುದರಿಂದ ಅಮೃತವನ್ನು
ಪಡೆಯಬಹುದು. ಯೋಗ ಮುದ್ರೆಯು ಅಕ್ಯುಪಂಕ್ಚರ್ ಮೆರಿಡಿಯನ್‌ಗಳ ಮೂಲಕ ಕೈ ಸನ್ನೆಗಳನ್ನು ಬಳಸಿಕೊಂಡು
ಇಡೀ ದೇಹದಲ್ಲಿ ಶಕ್ತಿಯ ಹರಿವನ್ನು ಬದಲಾಯಿಸುವ ಅಥವಾ ಮರುನಿರ್ದೇಶಿಸುವ ವಿಜ್ಞಾನವಾಗಿದೆ,
ನಮ್ಮ ಶಕ್ತಿಯ ದೇಹವನ್ನು ಪರಿಪೂರ್ಣ ಜೋಡಣೆ
ಅಥವಾ ಸಮತೋಲನಕ್ಕೆ ತರುತ್ತದೆ. ಕೈಗಳು ಎಲ್ಲಾ ಅಕ್ಯುಪಂಕ್ಚರ್ ಮೆರಿಡಿಯನ್ಗಳನ್ನು
ಒಳಗೊಂಡಿರುವುದರಿಂದ ಅವುಗಳನ್ನು ದೇಹದ ನಿಯಂತ್ರಣ ಫಲಕವೆಂದು ಪರಿಗಣಿಸಲಾಗುತ್ತದೆ. ಆಯುರ್ವೇದದ
ಪ್ರಕಾರ, ದೇಹವು ತನ್ನ ಉತ್ತುಂಗದ
ಆರೋಗ್ಯ ಮತ್ತು ಸಮತೋಲನದಲ್ಲಿರಲು ಈ ಶಕ್ತಿಗಳು ಸಾಮರಸ್ಯದಿಂದ ಇರಬೇಕು. ಇನ್ನೊಂದು ವ್ಯಾಖ್ಯಾನದ
ಪ್ರಕಾರ "ಮುದ್ರಾ" ಎಂಬ ಪದವು ಸಂಸ್ಕೃತ ಪದಗಳಾದ ಮುದ ಮತ್ತು ದ್ರಾ, ಆನಂದ ಕರಗುವಿಕೆಯಿಂದ ಬಂದಿದೆ
ಎನ್ನುತ್ತಾರೆ, ಅಂದರೆ ದ್ವಂದ್ವವನ್ನು ಕರಗಿಸುವ ಮತ್ತು ಯೋಗಿ ಮತ್ತು
ದೈವಿಕ ನಡುವೆ ಐಕ್ಯವನ್ನು ತರುತ್ತದೆ ಎನ್ನುತ್ತಾರೆ. ನಾವು ನಮ್ಮ ಬೆರಳುಗಳು ಮತ್ತು ಕೈಗಳನ್ನು
ನಿರ್ದಿಷ್ಟ ರೀತಿಯಲ್ಲಿ ಚಲಿಸಿದಾಗ, ನಾವು ನಮ್ಮ ಬೆರಳುಗಳನ್ನು ಬಾಗಿ, ಒತ್ತಿ, ಅಡ್ಡ, ವಿಸ್ತರಿಸಲು ಅಥವಾ ಇತರ ಬೆರಳುಗಳಿಂದ
ಸ್ಪರ್ಶಿಸಿದಾಗ, ನಾವು ವಾಸ್ತವವಾಗಿ
ಈ ಅಕ್ಯುಪಂಕ್ಚರ್ ಪಾಯಿಂಟ್ಗಳ ಮೂಲಕ ಶಕ್ತಿಯ ಹರಿವನ್ನು ಬದಲಾಯಿಸುತ್ತೇವೆ, ಪ್ರಾಣ, ಇದು ಪ್ರತಿಯಾಗಿ ಪ್ರಭಾವ ಬೀರುತ್ತದೆ ಮತ್ತು ಮೆದುಳಿನ
ನಿರ್ದಿಷ್ಟ ಪ್ರದೇಶಗಳನ್ನು ಉತ್ತೇಜಿಸುತ್ತದೆ ಮತ್ತು ದೇಹದಲ್ಲಿ ಧಾತುರೂಪದ ಸಮತೋಲನವನ್ನು ತರಲು
ಸಹಾಯ ಮಾಡುತ್ತದೆ. ನಮ್ಮ, ಕೈಗಳು,
ಕಣ್ಣುಗಳು ಮತ್ತು ಬೆರಳಿನ ಸ್ಥಾನದೊಂದಿಗೆ
ನಿರ್ದಿಷ್ಟ ಮುದ್ರೆಯನ್ನು ರೂಪಿಸುವ ಮೂಲಕ, ನಾವು ಅತೀಂದ್ರಿಯ ಪ್ರಜ್ಞೆಯ ಸ್ಥಿತಿಗಳಿಗೆ ಚಲಿಸಲು ಸಾಧ್ಯವಾಗುತ್ತದೆ. ಮೊದಲಿಗೆ
ರಕ್ತಪರಿಚಲನೆಯನ್ನು ಪಡೆಯಲು 20 ರಿಂದ 30 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಉಜ್ಜುವುದು ಮೊದಲ
ಹಂತವಾಗಿದೆ. ಘರ್ಷಣೆಯಿಂದ ನಿಮ್ಮ ಕೈಗಳಿಂದ ಉಷ್ಣತೆಯು ಏರುತ್ತಿರುವುದನ್ನು ನೀವು ಅನುಭವಿಸುವಿರಿ,
ಇದು ಕೈಯಲ್ಲಿರುವ ಎಲ್ಲಾ ನರ ತುದಿಗಳ
ಸಕ್ರಿಯಗೊಳಿಸುವಿಕೆಯನ್ನು ಸೂಚಿಸುತ್ತದೆ, ವಿವಿಧ ಅಂಗಗಳಿಗೆ ಸಂಬಂಧಿಸಿದ ಪ್ರತಿಯೊಂದು ಕೋಶವನ್ನು ಉತ್ತೇಜಿಸುತ್ತದೆ. ನಮ್ಮ ಶಕ್ತಿಯ
ದೇಹವು ನಮ್ಮ ಭೌತಿಕ ದೇಹವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸುತ್ತದೆ. ವಿವಿಧ ಅಂಗಗಳಲ್ಲಿ
ಶಕ್ತಿಯ ಅಸಮತೋಲನದ ಕಾರಣದಿಂದಾಗಿ ರೋಗವು ಸಂಭವಿಸುತ್ತದೆ; ಮುದ್ರೆಗಳು ಈ ಶಕ್ತಿಯ ಮಟ್ಟವನ್ನು/ಪ್ರಾಣವನ್ನು
ಸಮತೋಲನಗೊಳಿಸಲು ಸಹಾಯ ಮಾಡುತ್ತವೆ.
ದೈಹಿಕ
ಯೋಗಕ್ಷೇಮ: ಜ್ಞಾನ ಮುದ್ರೆ,
ವಾಯು ಮುದ್ರೆ, ಸೂರ್ಯ (ಅಗ್ನಿ) ಮುದ್ರೆ, ಪ್ರಾಣ ಮುದ್ರೆ, ಪೃಥ್ವಿ ಮುದ್ರೆ, ವರುಣ ಮುದ್ರೆ, ಲಿಂಗ ಮುದ್ರೆ, ಶೂನ್ಯ ಮುದ್ರೆ, ಅಪನ ಮುದ್ರೆ, ಅಪಾನ ವಾಯು ಮುದ್ರೆ, ರುದ್ರ
ಮುದ್ರೆ, ಗಣೇಶ ಮುದ್ರೆ
ಭಾವನಾತ್ಮಕ
ಯೋಗಕ್ಷೇಮ: ವರದ ಮುದ್ರೆ, ಪೂಷನ್ ಮುದ್ರೆ, ಆದಿ ಮುದ್ರೆ, ಕ್ಷೇಪನ ಮುದ್ರೆ, ಸಮಾನ
ಮುದ್ರೆ
ಪ್ರಮುಖ
ಪ್ರಚಲಿತ ಮುದ್ರೆಗಳು:-
ಚಿನ್
ಮುದ್ರ :- ಬಹಳ ಪ್ರಚಲಿತ
ಮುದ್ರೆಯಾದ ಜ್ಞಾನ ಅಥವಾ ಚಿನ್ ಮುದ್ರೆಯನ್ನು ನಿರ್ವಹಿಸುವ ಪ್ರಯೋಜನಗಳು - ಏಕಾಗ್ರತೆಯನ್ನು
ಸುಧಾರಿಸುತ್ತದೆ ಮತ್ತು ಕಲಿಕೆಯನ್ನು ಹೆಚ್ಚಿಸುತ್ತದೆ. ನಿದ್ರಾಹೀನತೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಒತ್ತಡವನ್ನು ನಿವಾರಿಸುತ್ತದೆ ಮತ್ತು ಸಕಾರಾತ್ಮಕ ಭಾವನೆಗಳನ್ನು ಸುಧಾರಿಸುತ್ತದೆ.
ಖಿನ್ನತೆಗೆ ಸಹಾಯ ಮಾಡುತ್ತದೆ. ಮೆದುಳಿನ ಆರೋಗ್ಯ
ಮತ್ತು ಗಮನವನ್ನು ಸುಧಾರಿಸುತ್ತದೆ. ತಲೆನೋವು ನಿವಾರಿಸುವಲ್ಲಿ ಉತ್ತಮ.
ಔಷಧಿಗಳು ಮತ್ತು ಆಹಾರದೊಂದಿಗೆ ಮಧುಮೇಹವನ್ನು ನಿರ್ವಹಿಸಲು ಒಳ್ಳೆಯದು.
ಇದರಲ್ಲಿ ಎರಡು ಚಿತ್ರಗಳಿವೆ, ಅಗ್ನಿ ಮತ್ತು ವಾಯು ಅಂಶದ ಬೆರಳನ್ನು
ಜೋಡಿಸಲಾಗಿದೆ, ಇಲ್ಲಿ ಪ್ರಾಣಾಯಾಮದಲ್ಲಿ ಉಂಟಾಗುವ ದೇಹದಲ್ಲಿನ
ಉಷ್ಣಾಂಶವನ್ನು ಉಸಿರಾಟದಲ್ಲೇ ಸರಿತೂಗಿಸುವ ಪ್ರಕ್ರಿಯೆ ಇದೆ. ಒಂದು ಒಂದನ್ನು ನಿಯಂತ್ರಿಸಿದರೆ
ಅಂತಹ ಅಂಶ ಹೆಚ್ಚುವುದೆಂಬ ಅಭಿಪ್ರಾಯ ಪ್ರಾಜ್ಞರಲ್ಲಿ ಇದೆ.
ವಾಯು ಮುದ್ರ :- ವಾಯು ಮುದ್ರೆಯ ಪ್ರಯೋಜನಗಳು ಹೆಚ್ಚುವರಿ ಗಾಳಿ/ ಅನಿಲವನ್ನು ನಿವಾರಿಸುತ್ತದೆ , ದೇಹದಿಂದ
ಉಬ್ಬುವುದು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಸರ್ವಿಕಲ್ ಸ್ಪಾಂಡಿಲೋಸಿಸ್
ನಿಂದ ಪರಿಹಾರಕ್ಕೆ ಸಹಾಯ ಮಾಡುತ್ತದೆ ಸಂಧಿವಾತ, ಗೌಟ್, ಪಾರ್ಕಿನ್ಸನ್ ಕಾಯಿಲೆ
ಮತ್ತು ಪಾರ್ಶ್ವವಾಯುಗಳಿಂದ ಅಸ್ವಸ್ಥತೆಯನ್ನು ನಿವಾರಿಸುತ್ತದೆ ಎದೆ ನೋವನ್ನು ನಿವಾರಿಸುತ್ತದೆ
ಶೀತ ಮತ್ತು ಕೆಮ್ಮಿನ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ ವಾತ ದೋಷದಿಂದಾಗಿ
ಸುಲಭವಾಗಿ, ಒಣ ಕೂದಲಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ
ಸೂರ್ಯ ಮುದ್ರ :- ಸೂರ್ಯ ಮುದ್ರೆಯ ಪ್ರಯೋಜನಗಳು, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ ಮತ್ತು ತೂಕ ನಷ್ಟವನ್ನು ಉತ್ತೇಜಿಸುತ್ತದೆ, ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಶಿಸ್ತು ಮತ್ತು
ಮಹತ್ವಾಕಾಂಕ್ಷೆಯನ್ನು ಹೆಚ್ಚಿಸುತ್ತದೆ, ಚರ್ಮಕ್ಕೆ ತೇಜಸ್ ಅಥವಾ
ಹೊಳಪನ್ನು ನೀಡುತ್ತದೆ.
ಪ್ರಾಣಮುದ್ರ:- ಪ್ರಾಣ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಆಗುವ ಪ್ರಯೋಜನಗಳು - ಪ್ರತಿರಕ್ಷಣಾ
ವ್ಯವಸ್ಥೆಯನ್ನು ಬಲಪಡಿಸುತ್ತದೆ, ದೇಹದಲ್ಲಿನ ಪ್ರಮುಖ ಶಕ್ತಿಗಳ ಹರಿವನ್ನು ಸುಧಾರಿಸುವುದು, ಅಧಿಕ ರಕ್ತದೊತ್ತಡಕ್ಕೆ ಒಳ್ಳೆಯದು ದೃಷ್ಟಿ ತೀಕ್ಷ್ಣಗೊಳಿಸುತ್ತದೆ, ದೃಷ್ಟಿ ಸುಧಾರಿಸುತ್ತದೆ, ದೇಹದಲ್ಲಿ ಸರಿಯಾದ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ, ಮಾನಸಿಕ ಉದ್ವೇಗ, ಕೋಪ, ಚಡಪಡಿಕೆ, ಹತಾಶೆಯನ್ನು ನಿವಾರಿಸುತ್ತದೆ, ಜೀರ್ಣಕ್ರಿಯೆಯನ್ನು ಶಮನಗೊಳಿಸುತ್ತದೆ,
ಹೊಟ್ಟೆಯಲ್ಲಿ ಉರಿಯುವಿಕೆಯನ್ನು
ನಿವಾರಿಸುತ್ತದೆ.
ಪೃಥ್ವಿ
ಮುದ್ರ:- ದೇಹ ಆಲಾಸ್ಯ ಕಮ್ಮಿ ಮಾಡಲು, ದೇಹ ಭಾರ ಹೆಚ್ಚಿಸಲು, ಜೀರ್ಣಕ್ರಿಯೆ ಸುಧಾರಿಸಲು, ಚರ್ಮ ರೋಗಗಳು ಮತ್ತು ದದ್ದುಗಳಿಗೆ ಒಳ್ಳೆಯದು, ಸುಲಭವಾಗಿ
ಉಗುರುಗಳು ಸೇರಿದಂತೆ ದೇಹದ ಅಂಗಾಂಶಗಳನ್ನು ಬಲಪಡಿಸುತ್ತದೆ, ಅಕಾಲಿಕ
ಬೂದು, ಕೂದಲು ಉದುರುವಿಕೆಗೆ ಸಹಾಯ ಮಾಡುತ್ತದೆ, ತೂಕ ಹೆಚ್ಚಾಗುವುದನ್ನು ಉತ್ತೇಜಿಸುತ್ತದೆ, ಆಯಾಸವನ್ನು
ಹೋಗಲಾಡಿಸಲು ಸಹಾಯ ಮಾಡುತ್ತದೆ , ಮತ್ತು ಚೇತರಿಕೆಯ
ಸಮಯದಲ್ಲಿ, ಮೂಳೆಗಳಿಗೆ ಬಲವನ್ನು ನೀಡುತ್ತದೆ ಮತ್ತು
ಆಸ್ಟಿಯೊಪೊರೋಸಿಸ್, ಆಸ್ಟಿಯೋಮಲೇಶಿಯಾ, ಸಂಧಿವಾತದಲ್ಲಿ
ಸಹಾಯ ಮಾಡುತ್ತದೆ.
ಮುದ್ರೆಗಳು
ಮತ್ತು ಕೂಂಡಲಿನಿ ಚಕ್ರಗಳು
ಮೂಲಾಧಾರ -
ಪೃಥ್ವೀ ಮುದ್ರೆ -- ಉಂಗುರದ ಬೆರಳು ಮತ್ತು ಹೆಬ್ಬೆರಳು ಒಟ್ಟಿಗೆ ಒತ್ತಿರಿ, ಉಳಿದ
ಬೆರಳುಗಳು ನೇರವಾಗಿರಲಿ.
ಸ್ವಾಧಿಷ್ಟಾನ -
ವರುಣ ಮುದ್ರೆ - ಕಿರುಬೆರಳು ಮತ್ತು ಹೆಬ್ಬೆರಳು ಒಟ್ಟಿಗೆ ಒತ್ತಿರಿ, ಉಳಿದ
ಬೆರಳುಗಳು ನೇರವಾಗಿ.
ಮಣಿಪುರ -
ಅಗ್ನಿ - ಉಂಗುರದ ಬೆರಳು ಮತ್ತು ಹೆಬ್ಬೆರಳಿನ ಮೂಲವನ್ನು ಒಟ್ಟಿಗೆ ಒತ್ತಿ,
ಉಳಿದ ಬೆರಳುಗಳು ನೇರವಾಗಿರುತ್ತವೆ.
ಅನಾಹತ -
ವಾಯು- ತೋರುಬೆರಳು ಮತ್ತು ಹೆಬ್ಬೆರಳಿನ ಮೂಲವನ್ನು ಒಟ್ಟಿಗೆ ಒತ್ತಿ, ಉಳಿದ ಬೆರಳುಗಳು ನೇರವಾಗಿರುತ್ತವೆ.
ವಿಶುದ್ಧ -
ಶೂನ್ಯ - ಮಧ್ಯದ ಬೆರಳು ಮತ್ತು ಹೆಬ್ಬೆರಳಿನ ಮೂಲವನ್ನು ಒಟ್ಟಿಗೆ ಒತ್ತಿರಿ, ಉಳಿದ
ಬೆರಳುಗಳು ನೇರವಾಗಿ.
ಅಗ್ನಾ
ಋಣಾತ್ಮಕ - ಜ್ಞಾನ ಮುದ್ರೆ - ತೋರು ಬೆರಳು ಮತ್ತು ಹೆಬ್ಬೆರಳು ಒಟ್ಟಿಗೆ
ಒತ್ತಿರಿ, ಉಳಿದ ಬೆರಳುಗಳು ನೇರವಾಗಿ.
ಕೂಟಸ್ಥ ಅಥವಾ
ಅಗ್ನಾ ಧನಾತ್ಮಕ - ಜ್ಞಾನ ಮುದ್ರೆ- ತೋರು
ಬೆರಳನ್ನು ಮತ್ತು ಹೆಬ್ಬೆರಳು ಒಟ್ಟಿಗೆ
ಒತ್ತಿರಿ, ಉಳಿದ ಬೆರಳುಗಳು ನೇರವಾಗಿ.
ಸಹಸ್ರಾರ -
ಸಹಜ ಮುದ್ರೆ - ಎರಡೂ ಕೈಗಳ ಎಲ್ಲಾ ಬೆರಳುಗಳನ್ನು ಹಿಡಿದುಕೊಳ್ಳಿ,
ಹೊಕ್ಕುಳದ ಕೆಳಗೆ ಒತ್ತಿರಿ. ಎರಡು ಹೆಬ್ಬೆರಳುಗಳನ್ನು ಹಾಕಬೇಕು ಹೊಕ್ಕುಳಲ್ಲಿ.
ಎರಡೂ ಹೆಬ್ಬೆರಳುಗಳಿಂದ ಹೊಕ್ಕುಳನ್ನು ಒತ್ತಿರಿ.
ಹಠಯೋಗದ ಮುದ್ರ ತಂತ್ರ ಬೇರೆ ಇದೆ ಅದರ ಕಾರ್ಯವೂ ಇದೇ ಆಗಿದೆ
ಕ್ರಿಯಾ ಯೋಗದ ವಿವಿಧ ಅಭ್ಯಾಸಗಳು, ವಿಶೇಷವಾಗಿ
ವಿಪರೀತ ಕರಣಿ ಮುದ್ರೆ, ಅಮೃತ ಪಾನ್, ಖೇಚರಿ
ಮುದ್ರೆ, ಮೂಲ ಬಂಧ, ಮಹಾ ಮುದ್ರೆ, ಮಹಾ
ಭೇದ ಮುದ್ರೆ ಇತ್ಯಾದಿಗಳು ನರಮಂಡಲವನ್ನು ನಿಯಂತ್ರಿಸುತ್ತವೆ. ಅವು ದೇಹದಲ್ಲಿನ
ಪ್ರಾಣಶಕ್ತಿಗಳನ್ನು ಸಮನ್ವಯಗೊಳಿಸುತ್ತವೆ ಮತ್ತು ಧನಾತ್ಮಕ ಮತ್ತು ಋಣಾತ್ಮಕ ಅಯಾನುಗಳ ಪ್ರಮಾಣ
ಮತ್ತು ಪರಿಣಾಮಗಳನ್ನು ಸಮೀಕರಿಸುತ್ತವೆ. ಅದಕ್ಕಿಂತ ಹೆಚ್ಚಾಗಿ, ಮನಸ್ಸನ್ನು
ಹೊಡೆಯದೆ, ಒದೆಯದೆ ಮತ್ತು ನಿಂದನೆ ಮಾಡದೆ ಶಾಂತಿ ಮತ್ತು ನೆಮ್ಮದಿಯ
ಸ್ಥಿತಿಯನ್ನು ಸಾಧಿಸಲು ಅವು ನಿಮಗೆ ಸಹಾಯ ಮಾಡುತ್ತವೆ. ಇವೆಲ್ಲವೂ ದೇಹದ ಕೆಲವು ಬಳಕೆಯಾಗದ
ಮತ್ತು ನೈಸರ್ಗಿಕ ರಾಸಾಯನಿಕಗಳ ಹರಿವನ್ನು ಪ್ರೇರೇಪಿಸಿದ ಪರಿಣಾಮವಾಗಿದೆ. ಅಮೃತವು ಆ
ರಾಸಾಯನಿಕಗಳಲ್ಲಿ ಒಂದಾಗಿದೆ ಮತ್ತು ಖೇಚರಿ ಮುದ್ರಾ ಎಂದು ಕರೆಯಲ್ಪಡುವದರ ಅಭ್ಯಾಸದ ಮೂಲಕ
ಅದನ್ನು ಹರಿಯುವಂತೆ ಮಾಡಬಹುದು.
108
ಮುದ್ರೆಗಳಲ್ಲಿ 55 ಮುದ್ರೆಗಳು ದೇವತಾಕಾರ್ಯ ಮುದ್ರೆಗಳು
ಮುದ್ರಾಣಾಂ
ಪರಿಸಂಖ್ಯಾನಂ ಸ್ವರೂಪಂ ಚ ಯಥಾಕ್ರಮಂ || 25
ಕಾಲಿಕಾ ಪುರಾಣ
ಅಧ್ಯಾಯ 70
ಭಾವಾರ್ಥ:- ಮುದ್ರೆಗಳ ಸಂಖ್ಯೆಯನ್ನೂ, ಅವುಗಳ
ಸ್ವರೂಪವನ್ನೂ ವಿಸ್ತಾರವಾಗಿ ವಿವರಿಸುವೆನು
ಬ್ರಹ್ಮನು ಹೇಳಿರುವ ಶ್ರೇಷ್ಠ ವಾದ ೧೦8
ಮುದ್ರೆಗಳಲ್ಲಿ ೫೫ ನ್ನು ಇಲ್ಲಿ ಹೇಳಿದೆ. ಅವುಗಳು ಈ ರೀತಿ ಇವೆ: - ಧೇನು, ಸಂಪುಟ, ಪ್ರಾಂಜಲಿ, ಬಿಲ್ವ, ಪದ್ಮಕ, ನಾರಾಚ, ಮುಂಡ, ದಂಡ, ಯೋನಿ, ಅರ್ಧಯೋನಿ, ವಂದಿನೀ, ಮಹಾಮುದ್ರಾ, ಮಹಾಯೋನಿ, ಭಗ, ಪುಟಕ, ನಿಸ್ಸಂಗ, ಅರ್ಧಚಂದ್ರ, ಅಂಗ, ದ್ವಿಮುಖ, ಶಂಖಮುದ್ರಾ, ಮುಸ್ಟಿಕ, ವಜ್ರ, ಆಬದ್ದ, ಸಾಯೋನಿ,
ನಿರ್ಮಲ, ಘಟ, ಶಿಖರಿಣೀ, ತುಂಗ, ಪುಂಡ್ರ, ಅರ್ಧಧೇನು, ಸಂಮೀಲನೀ, ಕುಂಡ, ಚಕ್ರ,
ಶೂಲ, ಸಿಂಹವಕ್ತ್ರ, ಗೋಮುಖ, ಪ್ರೋಲ್ಲಾಸ, ಉನ್ನಮನ, ಬಿಂಬ, ಪಾಶುಪತ, ಶುದ್ಧ, ತ್ಯಾಗ, ಸಾರಿಣೀ, ಪ್ರಸಾರಿಣೀ, ಉಗ್ರಮುದ್ರಾ,
ಕುಂಡಲೀ, ವ್ಯೂಹ, ತ್ರಿಮುಖಾ, ಅಸಿವಲ್ಲೀ,
ಯೋಗ, ಭೇದ, ಮೋಹನ, ಬಾಣ, ಧನು, ತೂಣೀರ ಎಂಬ ೫೫ ಮುದ್ರೆಗಳು. ಈ ಮುದ್ರೆಗಳು ದೇವತೆಗಳ
ಧ್ಯಾನಕಾಲದಲ್ಲಿಯೂ,
ಯೋಗದಲ್ಲಿಯೂ, ಪೂಜೆಯಲ್ಲಿಯೂ,
ಜಪದಲ್ಲಿಯೂ, ದೇವತಾ ವಿಸರ್ಜನ ಕಾಲದಲ್ಲಿಯೂ ಉಪಯೋಗಿಸಲ್ಪಡುವವು.
ಯೋಗಾಭ್ಯಾಸದಲ್ಲಿಯೂ, ದೇವತಾ
ಧ್ಯಾನಾರ್ಚನಾದಿಗಳಲ್ಲಿಯೂ,
ಮುದ್ರೆಗಳನ್ನು ಉಪಯೋಗಿಸದೆ ಮಾಡುವ ಪ್ರಾಣಾಯಾಮ ಧ್ಯಾನಾರ್ಚನೆಗಳು ನಿಷ್ಪಲವಾಗುವವು.
ಆಕಾಶ ಎಂದರೆ
ಸಂಸ್ಕೃತದ ಅಕ್ಷರ ರೀತ್ಯ ಅರ್ಥದಲ್ಲಿ "ಭೂಮಿಯಲ್ಲಿನ
(ಮೂಲಾಧಾರದಲ್ಲಿನ) ಜೀವ ಉಸಿರು ಒಂದು ಆಯುಧ". ಆಕಾಶದಲ್ಲಿ ಹೇಗೆ ಸಿಡಿಲು ಬಡಿತದಿಂದ ನೈಟ್ರಿಕ್
ಆಕ್ಸೈಡ್ ಉತ್ಪತ್ತಿಯಾಗುತ್ತದೋ ಅದೇ ರೀತಿಯಲ್ಲಿ ಪ್ರಾಣಾಯಾಮದ ಧ್ಯಾನದಲ್ಲಿ, ವಾಯು ಶ್ರೇಷ್ಟತೆಯನ್ನು ಹಮ್ ಎಂಬ ಧ್ವನಿಯ
ಮೂಲಕ ಸುಷುಮ್ನಾ ಕಡೆಗೆ ಕಳಿಸುವಾಗ, ಜಟರದಲ್ಲಿ ಉತ್ಪತ್ತಿಯಾಗುವ
ನೈಟ್ರಿಕ್ ಆಕ್ಸೈಡ್[27]
ಅಮೃತವು ಮತ್ತು ಇತರೇ ಅಮೃತವು ಸುಷುಮ್ನಾ ಕಡೆಗೆ ಉಸಿರಾಟದ
ದಿಕ್ಕು ಬದಲಿಸುತ್ತದೆ ಎಂಬುದೇ ಇದರ ರಹಸ್ಯ. ಅಂತಹ ಆಕಾಶ ಪ್ರಕ್ರಿಯೆ ನಮ್ಮ ಮೂಲಾಧಾರ
ಚಕ್ರದಲ್ಲೇ ನಡೆಯುತ್ತದೆ. ಪೃಥ್ವಿ ಎಂದರೆ ಸಂಸ್ಕೃತದ ಅಕ್ಷರ ರೀತ್ಯ ಅರ್ಥದಲ್ಲಿ
"ವ್ಯಾಪಿಸಲು ರಕ್ಷಕನನ್ನು ತನ್ನಿ" ಎಂದು ಇದೆ, ಇಲ್ಲಿ
ರಕ್ಷಕ ವಾಯು ಅವನನ್ನು ಪೃಥ್ವಿಯಾದ ಮೂಲಾಧಾರ ಚಕ್ರಕ್ಕೆ ತರುವುದೇ ಇದರ ಅಕ್ಷರ ರಹಸ್ಯ.
ಧೇನುಮುದ್ರೆ :- ಬಲಗೈ ಮಧ್ಯದ ಬೆರಳನ್ನು ಎಡಗೈಯ ತರ್ಜಿನೀ ಬೆರಳಿಗೂ, ಎಡಗೈಯ ಮಧ್ಯದ ಬೆರಳನ್ನು ಬಲಗೈ ತರ್ಜನೀ ಬೆರಳಿಗೂ ಸೇರಿಸುವುದು. ಪುನಃ
ಬಲಗೈಯ್ಯ ಅನಾಮಿಕಾ ಬೆರಳನ್ನು ಎಡೆಗೈಯ್ಯ ಕಿರುಬೆರಳಿಗೂ, ಎಡಗೈಯ್ಯ
ಅನಾಮಿಕಾ ಬೆರಳನ್ನು ಬಲಗೈಯ್ಯ ಕಿರುಬೆರಳಿಗೂ ಸೇರಿಸುವುದು. ಈ ರೀತಿ ಭಕ್ತನು ಬಲಮುಖವಾಗಿ
ಸೇರಿಸಿದರೆ ಅದು ಧೇನುಮುದ್ರೆ ಎನಿಸುವುದು. ಇದು ಸಮಸ್ತ ದೇವತೆಗಳಿಗೂ ಸಂತೋಷವನ್ನುಂಟುಮಾಡುವುದು.
.... ಮೂಳೆ ನೋವಿಗೆ (ಕೆಳಗೆ ಎಡದಲ್ಲಿರುವುದು)
ಪದ್ಮ ಮುದ್ರೆ :- ಎರಡುಕೈಗಳ ಬೆರಳುಗಳಲ್ಲಿ ಗಿಣ್ಣುಗಳಿಂದ
ಉಗುರಿನವರಿಗೆ ಹೆಬ್ಬೆರಳನ್ನೂ, ಕಿರುಬೆರಳನ್ನೂ,
ಮುಚ್ಚಿ ಉಳಿದ ಮೂರು ಬೆರಳುಗಳನ್ನೂ
ವಿರಳವಾಗಿ ನೀಡಿದರೆ ಅವಕ್ಕೆ ಪದ್ಮ ಮುದ್ರೆ ಎಂದು ಹೆಸರು. ಇದು ಮಾನವರಿಗೆ ಚತುರ್ವಿಧ
ಪುರುಷಾರ್ಥವನ್ನು ಕೊಡುವುದು. (ಮೇಲೆ ಬಲದಲ್ಲಿರುವುದು)
ಸಂಪುಟ ಮುದ್ರೆ:- ಎರಡು ಕೈಗಳ ಅಂಗೈಗಳನ್ನು ಸೇರಿಸಿ ಕೈಗಳ ಬೆರಳುಗಳನ್ನು ಒಟ್ಟಾಗಿ ಒಂದಕ್ಕೊಂದು ತಗಲುವಂತೆ
ಸೇರಿಸಿ ಪಕ್ಕದಲ್ಲಿ ಹೆಬ್ಬೆರಳುಗಳನ್ನು ಸೇರಿಸಿದರೆ ಅದು ಸಂಪುಟ ಮುದ್ರೆಯೆಂದು ದೇವತೆಗಳು
ಹೇಳುವರು. ಈ ಮುದ್ರೆಯು ಸಮಸ್ತ ದೇವತೆಗಳ ಧ್ಯಾನ ಪೂಜೆಗಳಲ್ಲಿಯೂ, ಯೋಗದಲ್ಲಿಯೂ
ಶ್ರೇಷ್ಟವೆಂದು ಹೇಳಲ್ಪಡುವುದು. ....... ದೈವಿಕ ಪ್ರಾರ್ಥನೆ ಧ್ಯಾನ
ಶಂಖಮುದ್ರೆ :- ಎರಡು ಕೈಗಳನ್ನೂ
ಒಂದಕ್ಕೊಂದು ದುಂಡಾಗಿ ಸೇರಿಸಿ, ತರ್ಜನೀ
ಬೆರಳುಗಳನ್ನೂ ಒಟ್ಟಾಗಿ ತಗಲುವಂತೆ ಸೇರಿಸಿ, ಅನಂತರ ಹಾಗೆ ಒಟ್ಟಾಗಿ ಕೊಡಿರುವ ಬೆರಳುಗಳನ್ನು ಕೈಯಿಂದ ವಿರಳವಾಗಿ ಅಗಲಿಸಿ, ಅದರಂತೆ ಹೆಬ್ಬೆರಳುಗಳನ್ನೂ ಮಾಡಿದರೆ ಶಂಖಮುದ್ರೆಯಾಗುವುದು...
ಮಾತು, ಜೀರ್ಣಕ್ರಿಯೆ
ಪ್ರಾಂಜಲಿ ಮುದ್ರೆ:- ಎರಡು ಕೈಗಳನ್ನೂ ಸ್ವಲ್ಪ ಬಗ್ಗುವಂತೆ ಜೋಡಿಸಿ, ಮಧ್ಯದಲ್ಲಿ ಟೊಳ್ಳಾಗಿ ಗುಂಡಾಗಿ ಪುಟಾಕಾರದಂತೆ ಸೇರಿಸಿದರೆ
ಅದಕ್ಕೆ ಪ್ರಾಂಜಲಿ ಮುದ್ರೆಯೆಂದು ಹೆಸರು.
ಬಿಲ್ವಮುದ್ರೆ :- ಎರಡುಕೈಗಳ ಹೆಬ್ಬೆರಳುಗಳ ಅಂಗೈಗಳಲ್ಲಿ ಒಳಕ್ಕೆ ಸೇರಿಸಿ, ಬಿಲ್ವ ಫಲದಂತೆ ದುಂಡಾಗಿ ಮುಷ್ಟಿಯನ್ನು ಸೇರಿಸಿದರೆ ಅದು
ಬಿಲ್ವಮುದ್ರೆ ಯೆನಿಸುವುದು
ನಾರಾಚಮುದ್ರೆ :- ಹೆಬ್ಬೆರಳಿನ ತುದಿಗೆ ತರ್ಜನೀಬೆರಳಿನ
ಮೇಲಿನರೇಖಿಗೆ ಸೇರಿಸಿ, ಉಳಿದ
ಬೆರಳುಗಳನ್ನು ಬಗ್ಗಿಸಿ ವಿರಳವಾಗಿ ಹಿಡಿದಲ್ಲಿ ಅದು ನಾರಾಚಮುದ್ರೆಯು. ಈ ಮುದ್ರೆಯೂ ದೇವಿಗೆ
ಶಿವನಿಗೆ ಪ್ರೀತಿದಾಕವಾದುದ್ದು.
ಮುಂಡಮುದ್ರೆ :- ಎಡಗೈಯ ಮುಷ್ಟಿಯನ್ನು ಮಾಡಿ ಅದರಲ್ಲಿ ಹೆಬ್ಬೆರಳನ್ನು ಸೇರಿಸಿ ಬಲಗೈಯ ಮಧ್ಯದ ಬೆರಳನ್ನು
ಪ್ರಯತ್ನದಿಂದ ಬಗ್ಗಿಸಿ, ಬಳಿಕ ಆ
ಮಧ್ಯದ ಬೆರಳನ್ನು ತರ್ಜನೀಬೆರಳಿನ ತುದಿಗೆ ಸೇರಿಸಿ ಹೆಬ್ಬೆರಳನ್ನು ಮೆಧ್ಯದ ಬೆರಳಿಗೆ ಸೇರಿಸಿ,
ಎಡಗೈಯ ಮುಷ್ಟಿಯಲ್ಲಿ ಬಲಗೈಯನ್ನು
ಸೇರಿಸಬೇಕು. ಹೀಗೆ ಸೇರಿಸಿ ಬಲಭಾಗವನ್ನು ಮುಂದಕ್ಕೆ ಹಿಡಿದರೆ, ಅದು ಮುಂಡಮುದ್ರೆಯಾಗುವುದು. ಈ ಮುದ್ರಿಕೆಯು ಗಣಪತಿಗೆ
ಪ್ರೀತಿಯನ್ನುಂಟುಮಾಡುವುದಲ್ಲದೆ, ದೇವತೆಗಳಿಗೂ
ಎಲ್ಲ ಕರ್ಮಗಳಲ್ಲಿಯೂ ಸಂತೋಷವನ್ನುಂಟುಮಾಡುವುದು.
ದಂಡಮುದ್ರೆ :- ಬಲಗೈಯ
ಹೆಬ್ಬೆರಳನ್ನೂ, ಮಧ್ಯದ ಬೆರಳು
ಆದಿಯಾಗಿ ಮೂರು ಬೆರಳುಗಳನ್ನೂ ಚೆನ್ನಾಗಿ ಬಗ್ಗಿಸಿ, ತರ್ಜಿನೀ ಬೆರಳನ್ನು ಅಗಲಿಸಿದಲ್ಲಿ ಅದು ದಂಡಮುದ್ರೆಯು.
ಯೋನಿಮುದ್ರೆ :- ಎರಡು ಕೈಗಳ ಬೆರಳುಗಳೆಲ್ಲವನ್ನೂ ಒಟ್ಟಾಗಿ ಸೇರಿಸಿ, ಅಂಗೈಗಳಲ್ಲಿ ಕಿರುಬೆರಳುಗಳನ್ನು ಹಗ್ಗದಂತೆ ಒಂದಕ್ಕೊಂದು
ಸೇರಿಸಿ ಬಳಿಕ ಎಡಗೈಯ ಅನಾಮಿಕಾ ಬೆರಳಿನ ಮೂಲದಲ್ಲಿ ಬಲಗೈಯ ಮಧ್ಯದ ಬೆರಳಿನ ತುದಿಯನ್ನೂ, ಅದರಂತೆ ಬಲಗೈಯ ಅನಾಮಿಕಾ ಬೆರಳಿನ ಮೂಲದಲ್ಲಿ ಎಡಗೈಯ
ಮಧ್ಯದ ಬೆರಳಿನ ತುದಿಯನ್ನೂ ಸೇರಿಸಿ ಮಧ್ಯದಲ್ಲಿ ಯೋನಿಯ ಆಕಾರದಂತೆ ಹಳ್ಳವನ್ನು ಮಾಡಿದಲ್ಲಿ
ಅದಕ್ಕೆ ಯೋನಿಮುದ್ರೆ ಎಂದು ಹೆಸರು. ಈ ಮುದ್ರೆಯು ಕಾಮಾಖ್ಯಾದೇವಿಯ ಐದು ಮೂರ್ತಿಗಳಿಗೂ, ದುರ್ಗಾದೇವಿಗೂ, ಕಾಮನಿಗೂ, ಶಿವನಿಗೂ ಬಹಳ ಪ್ರೀತಿದಾಯಕವಾದುದು.
ಅರ್ಧಯೋನಿಮುದ್ರೆ :- ಎಲ್ಲಾ ಬೆರಳುಗಳನ್ನೂ ಒಟ್ಟಿಗೆ ಸೇರಿಸಿ, ಹೆಬ್ಬೆರಳಿನ ಗಿಣ್ಣನ್ನು ಅಗಲಿಸಿ ಬಲಗೈಯ ಕಿರುಬೆರಳಿನ ತುದಿಯನ್ನು ಅದರ ತುದಿಗೆ
ಸೇರಿಸಬೇಕು. ಇದಕ್ಕೆ ಅರ್ಧಯೋನಿಮುದ್ರೆ ಎಂದು ಹೆಸರು. (ಮಹಾಯೋನಿಮುದ್ರೆಯೆ ಲಕಣನವು ಉತ್ತಮವಾದ ವೈಸ್ಣವೀತಂತ್ರದಲ್ಲಿ
ಹೇಳಲ್ಪಟ್ಟಿರುವುದು.
ವಂದನೀಯಾ ಮುದ್ರೆ:- ಸಂಪುಟಮುದ್ರೆಯನ್ನಾಗಲ್ಲೀ ಪ್ರಾಂಜಲಿ ಮುದ್ರೆ-ಯನ್ನಾಗಲೀ ರಚಿಸಿ, ಅದನ್ನು ಶಿರಸ್ಸಿನಲ್ಲಿ ಸ್ಪರ್ಶಮಾಡಿ ತೋರಿಸಿದರೆ,
ಅದು ವಂದನೀಯಾ ಎಂಬ ಮುದ್ರೆಯಾಗುವುದು. ಇದು
ವಿಷ್ಣುವಿಗೆ ಸಂತೋಷವನ್ನುಂಟುಮಾಡುವುದು.
ಮಹಾಮುದ್ರಾ :- ಮೇಲೆ ಹೇಳಿದ
ಮುದ್ರೆಯನ್ನೇ ಕಿವಿಯನ್ನು ಸ್ಪರ್ಶಮಾಡಿದರೆ, ಅದು ಮಹಾಮುದ್ರಾ ಎನಿಸುವುದು.
ಮಹಾಯೋನಿ ಮುದ್ರೆ :- ಆ ಮುದ್ರೆಯು ಅಂಗದ ಬಲಭಾಗದಲ್ಲಿ ಸೇರಿಸಲ್ಪಟ್ಟರೆ ಮಹಾಯೋನಿ ಮುದ್ರೆ ಎಂದು ವೈಷ್ಣವೀತಂತ್ರದಲ್ಲಿ ಹೇಳಲ್ಪಟ್ಟಿರುವುದು.
ಭಗಮುದ್ರೆ :- ಎರಡು ಕೈಗಳ ಬುಡದಲ್ಲಿ ಹೆಬ್ಬೆರಳು ಮತ್ತು ಕಿರುಬೆರಳಿನ ತುದಿಗಳನ್ನು ಸೇರಿಸಿ ಅಗಲಿಸಿ,
ಬಳಿಕ ಎರಡು ಕೈಗಳನ್ನೂ ಒಂದಕ್ಕೊಂದು
ಸೇರಿಸಿದರೆ ಆದು ಭಗಮುದ್ರೆಯಾಗುವುದು. ಈ ಮುದ್ರೆಯು ಲಕ್ಷ್ಮೀ, ಸರಸ್ಪತಿ, ಶಿವ ಇವರುಗಳಿಗೆ ಪ್ರೀತಿದಾಯಕವು.
ಪುಟಕಮುದ್ರೆ :- ಬಲಗೈಯ ಎಲ್ಲ ಬೆರಳುಗಳ ತುದಿಗಳೆಲ್ಲವನ್ನೂ ಒಂದೆಡೆಯಲ್ಲಿ ಸೇರಿಸಿ ಮುಂದಕ್ಕೆ ಚಾಚಿ
ನಿರ್ದೇಶಿಸಿದರೆ ಅದು ಪುಟಕಮುದ್ರೆಯು.
ನಿಃಸಂಗಮುದ್ರೆ :- ಕಿರುಬೆರಳು, ಅನಾಮಿಕಾ,
ಹೆಬ್ಬೆರಳು ಇವುಗಳ ತುದಿಗಳನ್ನು
ಒಂದೆಡೆಯಲ್ಲಿ ಒಟ್ಟಾಗಿ ಸೇರಿಸಿ, ಮಧ್ಯದ
ಬೆರಳನ್ನು ಅಗಲಿಸಿ, ಎರಡು
ಕೈಗಳನ್ನೂ ಸಂಕೋಚಮಾಡಿ ಮುಂದಕ್ಕೆ ನಿರ್ದೇಶಿಸಿದರೆ, ಅದು ನಿಃಸಂಗವೆಂಬ ಮುದ್ರೆಯೂ. ಅದು ನರಸಿಂಹಾವರಾಹಮೂರ್ತಿಗೆ
ಪ್ರಿಯವಾದದ್ದು.
ಅರ್ಧಚಂದ್ರಮುದ್ರೆ :- ಬಲಗೈಯ ಕಿರುಬೆರಳು, ಅನಾಮಿಕಾ
ಮತ್ತು ಮಧ್ಯದ ಕಿರುಬೆರಳುಗಳನ್ನು ಬಗ್ಗಿಸಿ, ತರ್ಜನೀ ಮತ್ತು ಹೆಬ್ಬೆರಳುಗಳನ್ನು ಅಗಲಿಸಿದರೆ ಅದು ಅರ್ಧಚಂದ್ರವೆಂಬ ಮುದ್ರೆಯು. ಇದು
ನವಗ್ರಹಗಳಿಗೆ ಪ್ರೀತಿದಾಯಕವಾದದ್ದು.
ಅಂಗಮುದ್ರೆ :- ಬಲಗೈಯ ಹೆಬ್ಬೆರಳನ್ನು ಮೇಲಕ್ಕೆತ್ತಿ ಅದನ್ನು ಮಧ್ಯದಲ್ಲಿ ನಿಲ್ಲಿಸಿ, ಎಡಗೈ ಮುಸ್ಟಿಯನ್ನೂ ಅದರಂತೆ ಮಾಡಿ
ಹೆಬ್ಬೆರಳನ್ನು ಮೇಲಕ್ಕೆತ್ತಿದರೆ ಅದಕ್ಕೆ
ಅಂಗಮುದ್ರೆಯೆಂದು ಹೆಸರು.
ಈ ಮುದ್ರೆಯಲ್ಲಿ ಕಿರುಬೆರಳೇ ಮೊದಲಾದ ಒಂದೊಂದು ಬೆರಳನ್ನು ಒಂದೊಂದು ಮುದ್ರೆಯಲ್ಲಿ ಬೇರೆ
ಬೇರೆಯಾಗಿ ಉಪಯೋಗಿಸಿದರೆ ಎಂಟು ಪ್ರಭೇದಗಳಾಗುವುವು. ಅವುಗಳಿಗೆ ದ್ವಿಮುಖ, ಮುಷ್ಟಿ, ವಜ್ರ, ಅಬದ್ಧ ವಿಮಲ, ಘಟ, ತುಂಗ, ಪುಂಡ್ರ ಎಂದು ಹೆಸರು. ಒಂಭತ್ತು ವಿಷ್ಣು ಮೂರ್ತಿಗಳಿಗೂ,
ಅವರ ಪತ್ನಿಯರಿಗೂ, ಅಂಗಮುದ್ರೆ ಮತ್ತು ಮೇಲೆ ಹೇಳಿದ ಎಂಟು ಮುದ್ರೆಗಳು
ಸೇರಿ ಆಗುವ ಒಂಭತ್ತು ಮುದ್ರೆಗಳು ಕ್ರಮವಾಗಿ ಉಪಯೋಗಿಸಲ್ಪಡುವವು.
ಸಾಯೋನಿ ಮುದ್ರೆ :- ಅಂಜಲಿಯನ್ನು ಮಾಡಿ ಮೇಲಕ್ಕೆತ್ತಿ, ಹೆಬ್ಬೆರಳುಗಳನ್ನು ಕಿರುಬೆರಳುಗಳ ಬುಡದಲ್ಲಿ ಇಟ್ಟು, ಎರಡು ಕೈಗಳನ್ನೂ ಸೇರಿಸಿ ಪ್ರದರ್ಶಿಸಿದರೆ ಅದು ಸಾಯೋನಿ
ಮುದ್ರೆಯೆಂದು ಹೆಸರು ಅದು ದೇವತೆಗಳಿಗೆ ಪ್ರೀತಿದಾಯಕವು.
ಶಿಖರಣೀ ಮುದ್ರೆ :- ಬಲಗೈಯ ಮುಷ್ಟಿಯನ್ನು ಮಾಡಿ, ಅದರ ಹೆಬ್ಬೆರಳನ್ನು ಮೇಲಕ್ಕೆ ಎತ್ತಿದರೆ ಅಮ ಶಿಖರಣೀ ಮುದ್ರೆಯಾಗುವುದು. ಆ ಮುದ್ರೆಯು
ಬ್ರಹ್ಮನಿಗೂ ಸೂರ್ಯನಿಗೂ ಪ್ರಿಯವಾದುದು.
ಅರ್ಧಧೇನು ಮುದ್ರೆ:- ಧೇನುಮುದ್ರೆಯಂತೆ, ಅನಾಮಿಕಾ
ಮತ್ತು ಕಿರುಬೆರಳನ್ನೂ ಹಾಗೆಯೇ ಮಧ್ಯಮಾ ಮತ್ತು ತರ್ಜನೀ ಬೆರಳುಗಳನ್ನೂ ಬಂಧಿಸಿದರೆ ಆ
ಮುದ್ರೆಗೆ ಅರ್ಧಧೇನು ಮುದ್ರೆಯೆಂದು ಹೆಸರು. ಅದು
ಚಂದ್ರನಿಗೆ ಪ್ರೀತಿಯನ್ನುಂಟು ಮಾಡುವುದು.
ಎರಡು ಕೈಗಳ ಎಲ್ಲ ಬೆರಳುಗಳ ತುದಿಗಳನ್ನೂ
ಒಟ್ಟಾಗಿ ಸೇರಿಸಿ, ಅಂಗೈಗಳನ್ನೂ
ಒಂದಕ್ಕೊಂದು ಸ್ಪರ್ಶಮಾಡುವಂತೆ ಸೇರಿಸಿ ಬೆರಳುಗಳ ಒಂದರ ತುದಿಯು ಮತ್ತೊಂದು ಕೈಯ ಬೆರಳಿನ ತುದಿಗೆ
ಸೇರಿಸಿದರೆ ಸಂಮೀಲನೀ ಮುದ್ರೆ ಯಾಗುವುದು. ಇದು ಅಂಗಾರಕ, ಭೂಮಿ,
ಬೃಹಸ್ಪತಿಗಳಗೆ ಪ್ರೀತಿದಾಯಕವು.
ಕುಂಡಮುದ್ರೆ :- ಬಲಗೈಯ ಬೆರಳುಗಳೆಲ್ಲವನ್ನೂ ಸೇರಿಸಿ ಅಂಗೈಯ ಸ್ವಲ್ಪಭಾಗವನ್ನು ಹಳ್ಳವಾಗುವಂತೆ
ಕುಂಡಾಕಾರವಾಗಿ ಬಗ್ಗಿಸಿದರೆ ಅದು ಕುಂಡಮುದ್ರೆಯಾಗುವುದು. ಇದು ಬುಧನಿಗೂ, ಸರಸ್ವತಿಗೂ. ಶಿವನಿಗೂ ಪ್ರಿಯವಾದುದು.
ಚಕ್ರಮುದ್ರೆ :- ಎರಡು ಕೈಗಳ ಬೆರಳುಗಳೆಲ್ಲವನ್ನೂ ಒಂದರಮಧ್ಯವಲ್ಲೊಂದಾಗಿ ಸೇರಿಸಿ ವಿರಳಮಾಡಿ, ಹೆಬ್ಬೆರಳನ್ನೂ ತುದಿಯಲ್ಲಿ ಒಂದಕ್ಕೊಂದು ಸೇರಿಸಿ
ದೇವರ ಅಭಿಮುಖವಾಗಿ ಹಿಡಿದರೆ, ಚಕ್ರಮುದ್ರೆಯಾಗುವುದು.
ಈ ಮುದ್ರೆಯು ಗುರು, ವಿಷ್ಣು,
ಶಿವ ಇವರಿಗೆ ಪ್ರೀತಿಕರವು.
ಶೂಲಮುದ್ರೆ :- ಬಲಗೈಯ ಹೆಬ್ಬೆರಳು, ಮಧ್ಯದ
ಬೆರಳು, ಅನಾಮಿಕೆ ಬೆರಳು ಇವುಗಳನ್ನು ಕ್ರಮವಾಗಿ ಎಡಗೈಯ ಅದೇವಿಧವಾದ ಬೆರಳುಗಳ ತುದಿಗೆ
ಸೇರಿಸಿದರೆ ಶೂಲಮುದ್ರೆ ಯೆಂದು ಹೆಸರಾಗುವುದು. ಇದು ಶುಕ್ರ ಗ್ರಹಕ್ಕೆ ಪ್ರಿಯವಾದುದು.
ಸಿಂಹಮುಖೀ :- ಎಡಗೈಯ ಬೆರಳುಗಳ ತುದಿಗಳನ್ನು ಮಡಿಸಿ ಬಲ ಅಂಗೈಯ ಮಧ್ಯದಲ್ಲಿ ಸೇರಿಸಿ, ಎಡಗೈಯನ್ನು ಕೆಳಗಾಗುವಂತೆ ಮಾಡಿದರೆ ಸಿಂಹಮುಖೀ ಎಂಬ
ಮುದ್ರೆ ಯಾಗುವುದು. ಇದು ಮರ್ಗಾದೇವಿಗೂ, ಬುಧನಿಗೂ ವಿಷ್ಣುವಿಗೂ ಪ್ರೀತಿಪಾತ್ರವಾದುದು.
ಗೋಮುಖ :- ಭಗಮುದ್ರೆಯನ್ನು ರಚಿಸಿ ಕಿವಿಯ ಬುಡದಲ್ಲಿ ಇಟ್ಟರೆ ಅದು ಗೋಮುಖ ಮುದ್ರೆಯು. ಇದು
ವಿಷ್ಣುವಿಗೂ ರಾಹುವಿಗೂ ಯಾವಾಗಲೂ ಪ್ರೀತಿದಾಯಕವು.
ಎರಡು ಕೈಗಳ ಮುಷ್ಟಿಗಳನ್ನು ಮಾಡಿ ಮೇಲಕ್ಕೆತ್ತಿ
ಮುಷ್ಟಿಗಳನ್ನು ಪಕ್ಕದಲ್ಲಿ ತಗಲುವಂತೆ ಸೇರಿಸಿ ಬಲಗೈಯ ಕಿರುಬೆರಳಿಂದ ಪ್ರಾರಂಭಮಾಡಿ ಒಂದೊಂದು
ಬೆರಳನ್ನು ನಿರಳಮಾಡಿದತೆ ಈ ಕೆಳಗಿನ ಮುದ್ರೆಗಳಾಗುವವು. ಒಂದೊಂದು ಬೆರಳನ್ನು ವಿರಳ ಮಾಡಿದರೆ ಈ
ಕೆಳಗಿನ ಮುದ್ರೆಗಳಾಗುವವು. ಒಂದೊಂದು ಮುದ್ರೆಯಲ್ಲಿ ಒಂದೊಂದು ಬೆರಳಿನಂತೆ ತೆಗೆಯುತ್ತಾ
(ಅಗಲಿಸುತ್ತಾ) ಹೋಗಬೇಕು. ಹೇಗೆಂದರೆ ಪ್ರೋಲ್ಲಾಸ, ಮುದ್ರೆಯಲ್ಲಿ
ಕಿರುಬೆರಳನ್ನೂ, ಉನ್ನಮನ
ಮುದ್ರೆಯಲ್ಲಿ ಕಿರುಬೆರಳು ಮತ್ತು ಅನಾಮಿಕೆಗಳನ್ನೂ ಬಿಂಬದಲ್ಲಿ ಕಿರುಬೆರಳು ಅನಾಮಿಕೆ.
ಮಧ್ಯಬೆರಳುಗಳನ್ನು ಪ್ರಸಾರಮಾಡಬೇಕು. ಹೀಗೆಯೇ ಒಂದೊಂದು ಬೆರಳಂತೆ ಹೆಚ್ಚಿಸುತ್ತಾ ಹೋಗಬೇಕು.
ಇದರಿಂದಾಗುವ ಎಂಟು ಮುದ್ರೆಗಳಾವುವೆಂದರೆ:- ಪ್ರೋಲ್ಲಾಸ, ಉನ್ನಮನ,
ಬಿಂಬ, ಪಾಶುಪತ
ಶುದ್ಧ, ತ್ಯಾಗ, ಸಾರಣೀ, ಮತ್ತು
ಪ್ರಸಾರಣೀ.
ಉಗ್ರಮುದ್ರೆ :- ಎರಡೂ ಕೈಗಳ ಬೆರಳುಗಳಲ್ಲಿ ಒಂದೊಂದು
ಮುದ್ರೆ ಯಲ್ಲಿ ಒಂದೊಂದು ಬೆರಳನ್ನು ಮಡಿಸುತ್ತಾ ಹೋದಕ್ಕೆ ಒಟ್ಟು ಹತ್ತು ಮುದ್ರೆಗಳಾಗುವುವು.
ಇವುಗಳಿಗೆ ಉಗ್ರಮುದ್ರೆಗಳೆಂದು ಹೆಸರು. ಇವು ಇಂದ್ರಾದಿಲೋಕಪಾಲಕರಿಗೂ, ಸಮಸ್ತ ದೇವತೆಗಳಿಗೂ ಪ್ರೀತಿಯನ್ನುಂಟು ಮಾಡುವಂತಹವು.
ಕುಂಡಲೀ ಮುದ್ರೆ :- ಹೆಬ್ಬೆರಳಿನ ತುದಿಯನ್ನು ತರ್ಜನೀ ಬೆರಳಿನತುದಿಗೆ ಸೇರಿಸಿ, ಬಲಗೈಯ ಮಧ್ಯದ ಬೆರಳು ಮೊದಲಾದ ಬೆರಳುಗಳನ್ನು
ಕುಂಡಲಾಕಾರವಾಗಿ ಮಡಿಸಿದರೆ ಅದು ಕುಂಡಲೀ ಮುದ್ರೆ ಯಾಗುವುದು. ಈ ಮುದ್ರೆಯು ಶಕ್ತಿದೇವಿಗೂ,
ದೇವೆತೆಗಳಗೂ ಪ್ರೀತಿಯನ್ನುಂಟುಮಾಡುವುದು.
ತ್ರಿಮುಖಮುದ್ರೆ :- ಎಡಗೈಯ ಹೆಬ್ಬೆರಳು, ತರ್ಜನೀ,
ಮಧ್ಯದ ಬೆರಳು ಮತ್ತು ಕಿರುಬೆರಳುಗಳನ್ನು
ಬಗ್ಗಿಸಿದರೆ ತ್ರಿಮುಖವೆಂಬ ಮುದ್ರೆಯಾಗುವುದು. ಈ ಮುದ್ರೆಯು ವಿಶ್ವೇ ದೇವತೆಗಳಿಗೂ, ಕೇತುವಿಗೂ, ಸಪ್ತಮಾತೃಗಳಿಗೂ ಪ್ರೀತಿಕರವಾದುದು.
ಅಸಿವಲ್ಲೀ :- ತರ್ಜನೀಬೆರಳು, ಹೆಬ್ಬೆರಳು
ಇವುಗಳ ತುದಿಗಳನ್ನು ಸೇರಿಸಿ ಉಳಿದ ಮೂರು ಬೆರಳುಗಳನ್ನು ಬಗ್ಗಿಸಿದಲ್ಲಿ ಅಸಿವಲ್ಲೀ ಎಂಬ
ಮುದ್ರೆಯಾಗುವುದು. ಇದು ಪಿತೃದೇವತೆಗಳಿಗೂ, ಸಾಧ್ಯರಿಗೂ, ರುದ್ರರಿಗೂ,
ವಿಶ್ವ ಕರ್ಮನಿಗೂ ಪ್ರೀತಿದಾಯಕವು
ಯೋಗಮುದ್ರೆ :- ಎರಡು ಅಂಗಾಲುಗಳನ್ನು ಒಂದಕ್ಕೊಂದು ಸೇರಿಸಿ, ಅವುಗಳ ಹೆಬ್ಬೆರಳುಗಳನ್ನು ಅದರಂತೆಯೇ ಸೇರಿಸಿ ಅವುಗಳು ಮೇಲ್ಮುಖವಾಗಿ
ನಾಭಿಪ್ರದೇಶವನ್ನ ಸ್ವರ್ಶಮಾಡುವಂತೆ ಮಾಡಿ ಬಳಿಕ ಎರಡು ಕೈಗಳಿಂದ ಅಂಜಲಿಯನ್ನು ರಚಿಸಿದರೆ ಅದು
ಯೋಗಮುದ್ರೆ ಎನಿಸುವುದು. ಈ ಮುದ್ರೆಯು ಯೋಗಿಗಳಿಗೆ ತತ್ವಜ್ಞಾನವನ್ನುಂಟುಮಾಡುವುದು ಮತ್ತು
ದೇವತೆಗಳೆಲ್ಲರ ಧ್ಯಾನ ಪೂಜೆಗಳಲ್ಲಿ ಉಪಯೋಗಿಸಲ್ಪಡುವುದು.
ಭೇದಮುದ್ರೆ :- ಹಿಂದೆ ಹೇಳಿದೆ ಪ್ರಾಂಜಲಿ ಎಂಬ ಹೆಸರಿನ
ಮುದ್ರೆಯನ್ನು ಭಾವಗರ್ಭಿತವಾಗಿ ಮೇಲಕ್ಕೂ ಕೆಳಕ್ಕೂ ಪ್ರಸಾರಣೆ ಮಾಡಿ ತೋರಿಸಿದರೆ ಭೇದಮುದ್ರೆ
ಯಾಗುವುದು. ಇದು ವಿಷ್ಣುವಿಗೂ, ಬ್ರಹ್ಮನಿಗೂ
ಪ್ರೀತಿಕರವಾದುದು.
ಸಂಮೋಹನಮುದ್ರೆ :- ಎರಡು ಕೈಗಳ ಹೆಬ್ಬೆರಳುಗಳ ತುದಿಗಳನ್ನೂ ಅಂಗೈಯಲ್ಲಿಟು ಕಿರುಬೆರಳುಗಳಿಗೆ ಸೇರಿಸಬೇಕು.
ಬಳಿಕ ಎರಡು ಹಸ್ತಗಳ ತರ್ಜನಿಯೇ ಮೊದಲಾದ ಇತರ ಬೆರಳುಗಳ ತುದಿಯನ್ನು ಒಂದಕ್ಕೊಂದು ಸೇರಿಸಿ ಬಳಿಕ
ಕಿರುಬೆರಳನ್ನು ದೂರಮಾಡಿ (ವಿರಳಮಾಡಿ) ತೋರಿಸಬೇಕು. ಇದು ಸಂಮೋಹನಮುದ್ರೆಯು. ಇದು ಕಾಮ, ದುರ್ಗಾ, ಲಕ್ಷ್ಮಿ ಮೊದಲಾದ ಎಲ್ಲ ದೇವತೆಗಳಿಗೂ ಪ್ರೀತಿಕರವಾದುದು.
ಜಾಣಮುದ್ರೆ :- ಎಡಗೈಯ ಮಧ್ಯದ ಮತ್ತು ಅನಾಮಿಕಾ
ಬೆರಳುಗಳನ್ನು ಬಗ್ಗಿಸಿ, ಅವುಗಳ
ಹಿಂಬದಿಯಲ್ಲಿ ಹೆಬ್ಬೆರಳಿನ ತುದಿಯನ್ನು ಇಟ್ಟು, ಬಳಿಕ ಕಿರುಬೆರಳು, ತರ್ಜನೀ ಈ
ಬೆರಳುಗಳನ್ನು ಸೇರಿಸಬೇಕು. ಇದು ಜಾಣಮುದ್ರೆಯು. ಎಲ್ಲಾ ದೇವತೆಗಳಿಗೂ
ಸಂತೋಷವನ್ನುಂಟುಮಾಡುವಂತಹುದು.
ಧನುಮುದ್ರೆ :- ಎಲ್ಲ ಬೆರಳುಗಳನ್ನೂ ಮಡಿಸಿ, ಬಳಿಕ ಹೆಬ್ಬೆರಳು ಮತ್ತು ತರ್ಜನಿ ಬೆರಳುಗಳನ್ನು ಅಗಲಿಸಿ, ಬಳಿಕ ಹೆಬ್ಬೆರಳಿನ ತುದಿಯಿಂದ ತರ್ಜನಿ ಬೆರಳನ್ನು ಸೇರಿಸಿ,
ಎರಡು ಕೈಗಳನ್ನೂ ಶಕ್ತಿಯಿರುವ ಮಟ್ಟಿಗೆ
ದೂರವಾಗಿ ಎಳೆದು ಪ್ರದರ್ಶಿಸಿದರೆ ಅದು ಧನುಮುದ್ರೆಯೆಂದು ಹೇಳಲ್ಪಡುವುದು.
ತೂಣೀರಮುದ್ರೆ :- ಎಲ್ಲ ಬೆರಳುಗಳ ತುದಿಗಳನ್ನೂ ಅಂಗೈ ಹೊರಭಾಗದಲ್ಲಿ ಸೇರಿಸಿ ಅನಾಮಿಕಾಬೆರಳಿನ ಹಿಂಬದಿಯಲ್ಲಿ
ಹೆಬ್ಬೆರಳಿನ ತುದಿಯನ್ನು ಇರಿಸಿ ಬತ್ತಳಿಕೆಯಂತೆ ಒಳಗೆ ಟೊಳ್ಳನ್ನು ಮಾಡಿ ಪ್ರದರ್ಶಿಸಿದರೆ ಅದು
ತೂಣೀರಮುದ್ರೆ ಎನಿಸುವುದು. ಇದು ಎಲ್ಲ ದೇವತೆಗಳಿಗೂ ಪ್ರೀತಿಕರವಾದುದು
ಈ ಮುದ್ರೆಗಳಲ್ಲಿಯೇ ಪೂಜೆಯೂ, ಧ್ಯಾನವೂ, ಯೋಗವೂ ಅಡಗಿರುವುದು. ಆದುದರಿಂದ ಮುದ್ರೆಗಳು ಎಲ್ಲರಿಗೂ
ಸಂತೋಷವನ್ನುಂಟುಮಾಡುವವು. ದೇವತೆಗಳನ್ನು ವೂಜೆಮಾಡುವಾಗಲೂ, ಧ್ಯಾನಮಾಡುವಾಗಲೂ, ಯಜ್ಞಾದಿ ಕರ್ಮಗಳಲ್ಲಿಯೂ, ಸ್ತೋತ್ರಮಾಡುವಾಗಲ್ಲೂ ಹಸ್ತಶುದ್ಧಿ ಗೋಸ್ಕರ ಎರಡು
ಕೈಗಳಿಂದಲೂ ಮುದ್ರಾ ಪ್ರದರ್ಶನವನ್ನು ಮಾಡಿದರೆ ಇಷ್ಟಾರ್ಥವು ಕೈಗೂಡುವುದು. ಯಜ್ಞಮಾಡುವುದರಲ್ಲಿ
ಶಕ್ತನಾಗಿದ್ದು ಮುದ್ರೆಗಳನ್ನು ಸೇರಿಸುವುದರಲ್ಲಿಯೂ ಹಸ್ತಕೌಶಲ್ಯವಿದ್ದರೆ ಆಗ ಅವಶ್ಯವಾಗಿ
ಮುದ್ರೆಗಳನ್ನು ಪ್ರದರ್ಶಿಸಿ, ಆಯಾಯ
ಕರ್ಮಗಳನ್ನು ನೆರವೇರಿಸಬೇಕು. ಹಸ್ತಗಳಿಂದ ಮುದ್ರಾ ಪ್ರದರ್ಶನವನ್ನು ಮಾಡದೆ. ಆಚರಿಸುವ ದೇವತಾ
ಕರ್ಮಗಳು ನಿಷ್ಪಲವಾಗುವುದರಿಂದ, ಮುದ್ರೆಗಳನ್ನು
ಉಪಯೋಗಿಸಿಯೇ ಮಾಡಬೇಕು. ದೇವತೆಗಳ ವಿಸರ್ಜನೆಕಾಲದಲ್ಲಿ ಯಾವ ಮುದ್ರೆಯನ್ನು ಉಪಯೋಗಿಸ ಬೇಕೆಂದು
ಹೇಳಿರುವುದೋ, ಅದೇ ಮುದ್ರೆಯನ್ನು
ಪೂಜಾಕಾಲದಲ್ಲಿಯೂ ಉಪಯೋಗಿಸಬೇಕು. ವಿಸರ್ಜನೆ ಕಾಲದಲ್ಲಿ ಆಯಾಯ ಕರ್ಮಗಳಿಗೆ ಹೇಳಿರುವ
ಮುದ್ರೆಗಳನ್ನು ಉಪಯೋಗಿಸಿ ಕರ್ಮವನ್ನು ಆಚರಿಸಬೇಕು.
ಸಾಂಬ ಪುರಾಣ
ಮುಖ್ಯವಾದ ಮುದ್ರಾ ಬೋಧನೆ
ನಲವತ್ತೆಂಟನೇ
ಅಧ್ಯಾಯ
ರಥಮುದ್ರೆ :- ಜಪಮಾಡುವವನ ಮುಖದ ಮಧ್ಯಭಾಗ ಮತ್ತು ಹಿಂಭಾಗದಲ್ಲಿ ಅಂಗುಸ್ಟ ಮತ್ತು ತರ್ಜನೀಬೆರಳುಗಳನ್ನು ಅಡ್ಡಲಾಗಿಟ್ಟು,
ಅನಾಮಿಕದಿಂದ ಶಿರಸ್ಸಿನ ಮಧ್ಯಭಾಗವನ್ನೂ,
ಕನಿಷ್ಠವನ್ನು ನೇರವಾಗಿಯೂ ಇಡುವ ಮುದ್ರೆಗೆ
ವಿಶ್ವಾತ್ಮಕನ (ಸೂರ್ಯನ) ರಥಮುದ್ರೆ ಎಂದು ಹೆಸರು. ವಾಜಿಮುದ್ರೆ
:- ಎರಡು ಕೈಗಳಮಧ್ಯಮ, ಮತ್ತು ಅನಾಮಿಕ ಬೆರಳುಗಳನ್ನು ಅಂಗುಸ್ಠವನ್ನೂ ಒಟ್ಟಾಗಿ
ಸೇರಿಸಿ, ಉಳಿದವುಗಳನ್ನು
ಮೇಲ್ಮುಖವಾಗಿ ಸೇರಿಸಿ ಹಿಡಿದಿರುವುದೇ ವಾಜಿಮುದ್ರೆ. (ಇದು ಎರಡು ಕಿವಿಗಳುಳ್ಳ ಕುದುರೆಯ
ಮುಖದಂತೆ ತೋರುವುದು). ಅರುಣಮುದ್ರೆ
:- ಎಡ ಮತ್ತು ಬಲಗೈಗಳನ್ನು
ಆವಿನದೇಹದಂತೆ ಹೆಣೆದು ಜೋಡಿಸಿ ಎರಡುಕೈಗಳ ಸಮಾನಾಂಗುಳಿಗಳನ್ನು ಮೂಲ ಮತ್ತು ಪೃಷ್ಠಭಾಗವು
ಒಟ್ಟಾಗಿ ಸೇರುವಂತೆಮಾಡಿ ಎರಡು ತರ್ಜನಿಗಳನ್ನೂ ಸಮನಾಗಿಟ್ಟು, ಎರಡು ಕನಿಷ್ಠಗಳನ್ನೂ ಬಗ್ಗಿಸಿ, ಅಂಗುಷ್ಠಗಳನ್ನೂ ಸರಿಯಾಗಿಟ್ಟು, ತಲೆಯನ್ನು ಸ್ವಲ್ಪಮಟ್ಟಿಗೆ ಬಾಗಿಸಿ ಅಭಿಮುಖನಾಗಿ
ನಿಲ್ಲುವುದಕ್ಕೆ ಅರುಣಮುದ್ರೆಯೆಂದು ಹೆಸರು.
ಹೆಚ್ಚುವರಿ ಸಂಗ್ರಹಿತ ಮುದ್ರ ಮಾಹಿತಿ
ನೀವು ಯಾವುದೇ ಮುದ್ರೆಯನ್ನು ಮಾಡಲು, ಸಂವೇದನೆಗಳನ್ನು ಪ್ರಚೋದಿಸಲು ಕನಿಷ್ಠ 30 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.
ದೇಹವನ್ನು ಶಾಂತಗೊಳಿಸುವ, ಶಮನಗೊಳಿಸುವ
ಅಥವಾ ಸಕ್ರಿಯಗೊಳಿಸುವ ಫಲಿತಾಂಶಗಳನ್ನು ಗಮನಿಸಲು ಮುದ್ರೆಗಳನ್ನು ಕನಿಷ್ಠ 2 ನಿಮಿಷಗಳ ಕಾಲ
ಹಿಡಿದಿಟ್ಟುಕೊಳ್ಳಬೇಕು. ಮುದ್ರೆಗಳನ್ನು ಒಂದು ದಿನದ ಸಮಯದಲ್ಲಿ 45 ನಿಮಿಷಗಳವರೆಗೆ ಒಬ್ಬರಿಗೆ
ಸಾಧ್ಯವಾದಷ್ಟು ಕಾಲ ಹಿಡಿದಿಟ್ಟುಕೊಳ್ಳಬಹುದು. ಅಭ್ಯಾಸವನ್ನು ತರಲು, ಸುಖಾಸನ (ಸುಲಭ ಭಂಗಿ), ವಜ್ರಾಸನ (ವಜ್ರದ ಭಂಗಿ), ಅಥವಾ ಪದ್ಮಾಸನ (ಕಮಲ ಭಂಗಿ) ಯಲ್ಲಿ ಯಾವುದೇ ಆರಾಮದಾಯಕ
ಧ್ಯಾನ ಭಂಗಿಯಲ್ಲಿ ಕುಳಿತುಕೊಳ್ಳಿ . ನೆಲದ ಮೇಲೆ ಕುಳಿತುಕೊಳ್ಳಲು ನಿಮಗೆ
ಅನುಕೂಲಕರವಾಗಿಲ್ಲದಿದ್ದರೆ ನಿಮ್ಮ ಬೆನ್ನನ್ನು ನೇರವಾಗಿ ಕುರ್ಚಿಯ ಮೇಲೆ ಕುಳಿತುಕೊಳ್ಳಲು
ಹಿಂಜರಿಯಬೇಡಿ.
ಧ್ಯಾನ ಮುದ್ರ :- ಮನಸ್ಸು ಕೇಂದ್ರೀಕರಿಸುವುದು, ಮಾನಸಿಕ ಒತ್ತಡ ನಿವಾರಣೆ
ಆಕಾಶ ಮುದ್ರ :- ಹೃದಯ ತೊಂದರೆಗಳಿಗೆ,
ಮೂಳೆ ತೊಂದರೆಗೆ
ಶೂನ್ಯ ಮುದ್ರೆ:- ಕಿವಿ ಮತ್ತು ಥೈರಾಯ್ಡ್ ತೊಂದರೆ ಇರುವವರು ಮಾತ್ರ ಮಾಡಿ
ವರುಣಮುದ್ರ :- ಕರಳು ತೊಂದರೆ, ಬೇಧಿ, ಚರ್ಮ ಕಾಯಿಲೆ, ಕರಳು ಊತ. ಕಮ್ಮಿ ಗೊಳಿಸುವುದು
ಅಪಾನಮುದ್ರ:- ಹೃದಯಾಘಾತ, ಆಸ್ತಮಾ, ಹೈ ಬಿ.ಪಿ., ತಲೆನೋವು, ಗ್ಯಾಸ್ಟ್ರಿಕ್
ಸಮಸ್ಯೆ, ಮೂತ್ರ ಪಿಂಡ
ಮತ್ತು ಮುತ್ರಕೊಶಗಳಲ್ಲಿನ ಹಲವಾರು ತೊಂದರೆಗಳಿಗೆ ಪರಿಹಾರ ದೊರೆಯುತ್ತದೆ. ಮೂಲೆಗೆ ಸಂಬಂದಿಸಿದ
ರೋಗಗಳು ದೂರವಾಗುತ್ತವೆ. ದೇಹದಲ್ಲಿ ಸಂಗ್ರಹವಾದ ಕಲ್ಮಶಗಳು ಮತ್ತು ಹಾನಿಕಾರಕಗಳನ್ನು ಹೊರಹಾಕಲು
ಸಹಾಯಕವಾಗುತ್ತದೆ. ಹಲ್ಲು ನೋವು ದೂರವಾಗುತ್ತದೆ. ಹೆರಿಗೆಯ ನೋವು ಮತ್ತು ಸುಲಭ ಹೆರಿಗೆಗೆ ಈ
ಮುದ್ರೆಯೂ ಸಹಾಯಕವಾಗಿದೆ. ಸ್ತ್ರೀಯರ ಮಾಸಿಕ ಋತುಚಕ್ರ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.
ಮಲಬದ್ಧತೆ, ಉರಿಮೂತ್ರ, ಕೈ ಕಾಲುಗಳಲ್ಲಿ ಉರಿಯುವ ಅನುಭವ ಮತ್ತು
ಎದೆಯುರಿಯಂತಹ ಸಮಸ್ಯೆಯಿಂದ ಬಳಲುವವರು ಈ ಮುದ್ರೆಯನ್ನು ಮಾಡುವುದರಿಂದ ನಿವಾರಣೆ ದೊರೆಯುತ್ತದೆ.
ವಾಕರಿಕೆ ಮತ್ತು ವಾಂತಿಯಂತಹ ತೊಂದರೆ ಇರುವವರು ಈದರಿಂದ ಪರಿಹಾರವನ್ನು ಪಡೆಯಬಹುದು. ಕಣ್ಣು,
ಕಿವಿ ಮೂಗು ಬಾಯಿಯ ಸಮಸ್ಯೆಗಳಿದ್ದರೆ
ಇದರಿಂದ ಉತ್ತಮ ಪರಿಣಾಮ ಪಡೆದುಕೊಳ್ಳಬಹುದು.
ಅಪಾನ ವಾಯು ಮುದ್ರ:-
ಹೃದಯ ಮುದ್ರ:-
ಪ್ರಾಣವನ್ನು ಹೃದಯದ ಕಡೆಗೆ ಮರುನಿರ್ದೇಶಿಸಲು ಸಹಾಯ ಮಾಡುತ್ತದೆ, ರಕ್ತದೊತ್ತಡವನ್ನು ಸಮತೋಲನಗೊಳಿಸುತ್ತದೆ ಮತ್ತು ಹೃದಯದ
ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ. ಹೃದಯವನ್ನು ಪ್ರಾಣ ಮತ್ತು ಭಾವನಾತ್ಮಕ ಮಟ್ಟದಲ್ಲಿ ತೆರೆಯಲು
ಸಹಾಯ ಮಾಡುತ್ತದೆ, ಭಾವನೆಗಳು
ಮತ್ತು ಉದ್ವೇಗಗಳನ್ನು ಬಿಡುಗಡೆ ಮಾಡುತ್ತದೆ.
ನಮಸ್ಕಾರ ಮುದ್ರ:- ಮಿದುಳಿನ ಎರಡೂ ಬಾಗವನ್ನು ಸರಿತೂಗಿಸಲು, ಧ್ಯಾನದಲ್ಲಿ ಮಗ್ನವಾಗುವುದಕ್ಕೆ, ಮನಸ್ಸು
ಶಾಂತವಾಗುವುದಕ್ಕೆ, ... ಹೃದಯ ಕೇಂದ್ರದಲ್ಲಿ ಇರಿಸಲಾದ ಮುದ್ರೆಯು
ಶಾಂತತೆ, ಸಾಮರಸ್ಯ,
ಸಮತೋಲನವನ್ನು ತರಲು ಕೇಂದ್ರೀಕರಿಸಲು ಸಹಾಯ
ಮಾಡುತ್ತದೆ, ಇದರಿಂದಾಗಿ ನರಗಳು
ಮತ್ತು ನಾಡಿಗಳನ್ನು ಶಮನಗೊಳಿಸುತ್ತದೆ. ಮಣಿಕಟ್ಟುಗಳು ಮತ್ತು ತೋಳಿನ ಕೀಲುಗಳಲ್ಲಿ ನಮ್ಯತೆಯನ್ನು
ಒದಗಿಸುತ್ತದೆ. ಅನಾಹತ ಚಕ್ರವನ್ನು ಪ್ರಚೋದಿಸುತ್ತದೆ. ವಿಸ್ತೃತ ಅಭ್ಯಾಸದಲ್ಲಿ ಇದು ಆಜ್ಞಾ
ಚಕ್ರವನ್ನು ಉತ್ತೇಜಿಸುತ್ತದೆ ಮತ್ತು ಸಕ್ರಿಯಗೊಳಿಸುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ.
ಒತ್ತಡವನ್ನು ನಿವಾರಿಸುತ್ತದೆ. ಗಮನವನ್ನು ಸುಧಾರಿಸುತ್ತದೆ. ಆಂತರಿಕ ಅರಿವನ್ನು
ಉತ್ತೇಜಿಸುತ್ತದೆ.
ಮಹಾಶೀರ್ಷಾಮುದ್ರ:- ತಲೆನೋವು,
ಬೆನ್ನುಹುರಿ ಕುತ್ತಿಗೆ ಆರಾಮಗೊಳಿಸುವಿಕೆಗೆ, ಜೀರ್ಣಕ್ರಿಯೆಗೆ, ಕಣ್ಣು ಶಾಂತಗೊಳಿಸುವಿಕೆಗೆ
ನಾಗ ಮುದ್ರ:- ಮೂಲಾಧಾರ ಚಕ್ರ ಚೈತನ್ಯ ಗೊಳಿಸಲು, ಇದು ನಿಮ್ಮಲ್ಲಿಯೇ ಉತ್ತರಗಳನ್ನು ಒದಗಿಸುವ ಮೂಲಕ ಜೀವನದ ದೈನಂದಿನ ಸಮಸ್ಯೆಗಳನ್ನು
ತೊಡೆದುಹಾಕಲು ಸಹಾಯ ಮಾಡುತ್ತದೆ. ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ನಿರ್ಮಿಸಲು ಸಹಾಯ
ಮಾಡುತ್ತದೆ. ನಿಯಮಿತ ಅಭ್ಯಾಸವು ಒಳನೋಟ ಮತ್ತು ದಿವ್ಯದೃಷ್ಟಿಯನ್ನು ಹೆಚ್ಚಿಸುತ್ತದೆ. ಇದು
ಒತ್ತಡವನ್ನು ನಿವಾರಿಸುತ್ತದೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ.
ವ್ಯಾನ ಮುದ್ರ :- ಹೃದಯ, ರಕ್ತ ಪರಿಚಲನೆ, ಈ ಮುದ್ರೆಯ ನಿಯಮಿತ ಅಭ್ಯಾಸವು ಅಧಿಕ ರಕ್ತದೊತ್ತಡದ ರಾಮಬಾಣವಾಗಿದೆ. ಈ ಮುದ್ರೆಯ
ಅಭ್ಯಾಸವು ಅಧಿಕ ರಕ್ತದೊತ್ತಡ ಮತ್ತು ಕಡಿಮೆ ರಕ್ತದೊತ್ತಡವನ್ನು ನಿಯಂತ್ರಿಸಲು ಚಿಕಿತ್ಸಕ
ಪ್ರಯೋಜನಗಳನ್ನು ಹೊಂದಿದೆ. ಗರ್ಭಿಣಿಯರಿಗೂ ಇದು ವರದಾನವಾಗಿದೆ. ವ್ಯಾನ ಮುದ್ರೆಯನ್ನು
ಮಾಡುವುದರಿಂದ ಮೂತ್ರಕ್ಕೆ ಸಂಬಂಧಿಸಿದ ಎಲ್ಲಾ ರೋಗಗಳು ದೂರವಾಗುತ್ತವೆ. ಇದಲ್ಲದೆ,
ಈ ಮುದ್ರೆಯ ನಿಯಮಿತ ಅಭ್ಯಾಸವು ಮಧುಮೇಹ,
ಸೆಳೆತ ಮತ್ತು ದುಃಸ್ವಪ್ನಗಳನ್ನು ಸಹ
ತೆಗೆದುಹಾಕುತ್ತದೆ. ಈ ಮುದ್ರೆಯು ಸ್ವಾದಿಷ್ಠಾನ ಚಕ್ರದೊಂದಿಗೆ ಸಂಪರ್ಕ ಹೊಂದಿದೆ. ಇದು
ಸೋಮಾರಿತನವನ್ನು ಹೋಗಲಾಡಿಸುತ್ತದೆ ಜೊತೆಗೆ ತೂಕಡಿಕೆಯನ್ನು ಕಡಿಮೆ ಮಾಡುತ್ತದೆ. ಇದು ಉತ್ಸಾಹ,
ಉಪಕ್ರಮ ಮತ್ತು ಚಿಂತನೆಯ ವೇಗವನ್ನು
ಹೆಚ್ಚಿಸುತ್ತದೆ ಮತ್ತು ಅತಿಯಾದ ಬೆವರುವಿಕೆ ಮತ್ತು ಬಾಯಾರಿಕೆಯನ್ನು ಸುಧಾರಿಸುತ್ತದೆ. ವ್ಯಾನ
ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಅತಿಸಾರವನ್ನು ನಿಯಂತ್ರಿಸಬಹುದು.
ಕಾಳೀಶ್ವರ ಮುದ್ರ :- ಶಾಂತ ಬುದ್ದಿಗೆ,
ಕೇಂದ್ರೀಕರಿಸುವುದಕ್ಕೆ, ಜೀರ್ಣಕ್ರಿಯೆಗೆ
ರುದ್ರ ಮುದ್ರ
:- ದೇಹದ ತೂಕ ನಿಯಂತ್ರಿಸಲು, ಬೊಜ್ಜು ಕರಗಿಸಲು
ಅನಾಹತ ಚಕ್ರ ಮುದ್ರ :- ಬಲಗೈ ಕಿರುಬೆರಳನ್ನು ಎಡಗೈ ಮಧ್ಯ ಮತ್ತು ಅನಾಮಿಕ ಬೆರಳಿನ ಮಧೆ ಇಡಿ, ಎಡಗೈ ಕಿರುಬೆರಳನ್ನು ಬಲಗೈ ಮಧ್ಯ ಮತ್ತು
ಅನಾಮಿಕ ಬೆರಳಿನ ಮಧೆ ಇಡಿ, ಮಧ್ಯದ ಬೆರಳನ್ನು ಕೆಳಕ್ಕೆ ಮಾಡಿ, ಅನಾಮಿಕ ಬೆರಳುಗಳನ್ನು ಒತ್ತಿ, ತರ್ಜೀನಿ ಬೆರಳುಗಳನ್ನು
ಒತ್ತಿ, ಹೆಬ್ಬೆರಳನ್ನು ಒತ್ತಿ ಹಿಡಿಯಿರಿ. ಹೃದಯ, ಶ್ವಾಸಕೋಶ ಮತ್ತು ಸ್ತನಗಳ ಆರೋಗ್ಯವನ್ನು
ಸುಧಾರಿಸುತ್ತದೆ, ಉಸಿರಾಟವನ್ನು
ನಿಯಂತ್ರಿಸುತ್ತದೆ, ಸಹಾನುಭೂತಿ
ಮತ್ತು ಪ್ರೀತಿಯ ಭಾವನೆಗಳನ್ನು ವಿಸ್ತರಿಸುತ್ತದೆ, ಗುಣಪಡಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಮಣಿಪೂರಕ ಚಕ್ರ:- ಈ ಮುದ್ರೆಯು ಜೀರ್ಣಕ್ರಿಯೆಯನ್ನು ಬಲಪಡಿಸಲು, ಅನೇಕ ಅಂಗಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ
ಎಂದು ಭಾವಿಸಲಾಗಿದೆ. ಇದು ಇಚ್ಛಾಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ವೈಯಕ್ತಿಕ
ಕಾಂತೀಯತೆಯನ್ನು ಹೆಚ್ಚಿಸುತ್ತದೆ.
ಸಹಸ್ರಾರ ಮುದ್ರ:- ಶಿರಸ್ಸಿನ ಮೇಲೆ ಬಾಲ ಚಿತ್ರದ ರೀತಿ ಮುದ್ರೆ ಹಾಕುವುದು, ಇದು ಮೆದುಳಿನ ಕಾರ್ಯಚಟುವಟಿಕೆಗೆ ಪ್ರಯೋಜನಕಾರಿ ಎಂದು ಭಾವಿಸಲಾಗಿದೆ,
ತಲೆನೋವು ಕಡಿಮೆ ಮಾಡುತ್ತದೆ, ಪಿಟ್ಯುಟರಿ ಮತ್ತು ಪೀನಲ್ ಗ್ರಂಥಿಗಳನ್ನು
ಉತ್ತೇಜಿಸುತ್ತದೆ ಮತ್ತು ದೇಹದ ಸ್ವಯಂ-ಗುಣಪಡಿಸುವ ಶಕ್ತಿಯನ್ನು ಸಕ್ರಿಯಗೊಳಿಸುತ್ತದೆ. ಇದು
ಆತ್ಮವನ್ನು ಶಾಂತಗೊಳಿಸುತ್ತದೆ ಮತ್ತು ಎಲ್ಲಾ ಜೀವನದೊಂದಿಗೆ ಸಂಪರ್ಕದ ಭಾವನೆಯನ್ನು
ಪ್ರೇರೇಪಿಸುತ್ತದೆ.
ವಿಷ್ಣು
ಧರ್ಮೋತ್ತರ ಮಹಾ ಪುರಾಣ ತೃತೀಯ ಖಂಡ ಮುದ್ರಾ ಬೋಧನೆ
ಅಧ್ಯಾಯ-32
ಮತ್ತು 33
ಓಂಕಾರ
ಮುದ್ರೆ:- ಹಸ್ತದಲ್ಲಿ ಅಂಗುಷ್ಟವು
ನೀಡಲ್ಪಟ್ಟದ್ದು ಅದರ ಮೇಲ್ಭಾಗದಲ್ಲಿ ತರ್ಜನಿಯು ಬಗ್ಗಿದ್ದಲ್ಲಿ ಅದು ಓಂಕಾರ ಮುದ್ರೆ
ಎನಿಸುತ್ತದೆ.
ಅಂಜಲಿ ಪುರುಷ
ಮುದ್ರೆ:- ಎರಡು ಕೈಗಳೂ ಆ
ಹಿಂಬಾಗದಿಂದ ಅನ್ಯೋನ್ಯ ಸ್ಪರ್ಶವನ್ನು ಹೊಂದಿದ್ದಲ್ಲಿ ಅಂಜಲಿ ಪುರುಷ ಮುದ್ರೆಯಾಗುತ್ತದೆ.
ತಾರ್ಕ್ಷ್ಯಮುದ್ರೆ
:- ಅಂತಹ ಅಂಜಲಿ ಪುರುಷ ಮುದ್ರೆ
ಇರುವಾಗ ಕಿರುಬೆರಳಿನೊಡನೆ ಮತ್ತೊಂದು ಕಿರುಬೆರಳು ಸೇರಿದಲ್ಲಿ ಮತ್ತು ತರ್ಜನಿಯೊಡನೆ ತರ್ಜನಿಯು
ಸೇರಿದ್ದಲ್ಲಿ ಹಾಗೂ ಅಂಗುಷ್ಠದೊಡನೆ ಅಂಗುಷ್ಠವು ಸಹ ಸೇರಿದ್ದಲ್ಲಿ ಇದು
ತಾರ್ಕ್ಷ್ಯಮುದ್ರೆಯಾಗುತ್ತದೆ.
ಕಪಿಲಮುದ್ರೆ
:- ಎಡಗೈಯಿನ ಬೆರಳುಗಳೆಲ್ಲವೂ
ನೀಡಿದ್ದು ಅದರ ಮೇಲೆ ಅಂತಹದೇ ಆದ ಬಲಗೈಯ ಬೆರಳುಗಳು ಸೇರಿದ್ದಲ್ಲಿ ಕಪಿಲಮುದ್ರೆಯಾಗುತ್ತದೆ.
ಅಂತರಾತ್ಮತೋಯ
ಮುದ್ರೆ :- ನಾಲ್ಕು ಬೆರಳುಗಳೂ
ಚಾಚಿದ್ದು ಅವುಗಳ ಬುಡದಲ್ಲಿ ಸಂಕುಚಿತವಾದ ಅಂಗುಷ್ಠವು ಸೇರಿದ್ದಲ್ಲಿ ಅಂತರಾತ್ಮತೋಯ
ಮುದ್ರೆಯಾಗುತ್ತದೆ.
ಖುಗ್ವೇದಮುದ್ರಾ
:- ಅಂತರಾತ್ಮತೋಯ ಮುದ್ರೆಯಲ್ಲಿ
ಕನಿಷ್ಠಾಂಗುಲಿಯು ಚಾಚಿದ್ದಲ್ಲಿ ಖುಗ್ವೇದಮುದ್ರಾ.
ಯಜುರ್ವೇದಮುದ್ರಾ
:- ಋಗ್ವೇದ ಮುದ್ರೆಯಲ್ಲಿ ಅದೇ
ಕನಿಷ್ಠಾಂಗುಲಿಯು ಅನಾಮಿಕೆಯೊಡಗೂಡಿ ಚಾಚಿದ್ದಲ್ಲಿ ಯಜುರ್ವೇದಮುದ್ರಾ.
ಸಾಮವೇದಮುದ್ರಾ
:- ಯಜುರ್ವೇದ ಮುದ್ರೆಯಲ್ಲಿ
ಅಂಗುಷ್ಠವನ್ನು ಚಾಚಿರುವ ಚತುರಾತ್ಮ ಮುದ್ರೆಯೇ ಸಾಮವೇದಮುದ್ರಾ.
ಗಾಯತ್ರೀಮುದ್ರಾ
:- ಎಲ್ಲಾ ಬೆರಳುಗಳೂ ವೇಷ್ಟನ
ಹೊಂದಿ (ಸೇರಿ ಅದುಮುವುದು) ಅಂಗೈಯಿನ ಮಧ್ಯವನ್ನು ಸೇರಿದ್ದಲ್ಲಿ ಗಾಯತ್ರೀಮುದ್ರಾ.
ಶಿಕ್ಷಾಮುದ್ರೆ
:- ಸಾಮವೇದಮುದ್ರೆಯೇ ಅಧೋಮುಖಗಳಾದ
ಬೆರಳುಗಳಿಂದ ಕೂಡಿದ್ದಲ್ಲಿ ಶಿಕ್ಷಾಮುದ್ರೆಯಾಗುತ್ತದೆ. ಅದನ್ನೇ ಬಲಭಾಗದಲ್ಲಿ
ಪ್ರಯೋಗಿಸಿದ್ದಲ್ಲಿ ಕಲ್ಪಮುದ್ರೆಯಾಗುತ್ತದೆ. ತರ್ಜನೀ ಅಂಗುಷ್ಠ ಸಂಬಂಧದಿಂದ ವ್ಯಾಕರಣಮುದ್ರಾ, ಅಂಗುಷ್ಠದ ಶಿಖರಭಾಗವು ತರ್ಜನಿಯ ಮಧ್ಯವನ್ನು ಹೊಂದಿದಲ್ಲಿ
ನಿರುಕ್ತಮುದ್ರಾ.
ಭಸ್ಮಮುದ್ರೆ
:- ಎರಡು ಕೈಗಳನ್ನೂ ಮಗುಚಿ ನಾಲ್ಕು
ಮುಂದಿನ ಬೆರಳುಗಳನ್ನೂ ಬಗ್ಗಿಸಿ ಪಾರ್ಶ್ವಗಳಲ್ಲಿ ಎರಡು ಅಂಗುಷ್ಠಗಳನ್ನೂ ಸೇರಿಸಿದಲ್ಲಿ
ಭಸ್ಮಮುದ್ರೆ ಯಾಗುತ್ತದೆ. ಹಾಗೆಯೇ ಮುಂದಿನ ಬೆರಳುಗಳನ್ನು ಅಡ್ಡಲಾಗಿ ನೀಡಿದ್ದಲ್ಲಿ ಲಿಂಗಮುದ್ರೆಯಾಗುತ್ತದೆ. ಮೂರು ಬೆರಳುಗಳೂ ಅಂಗುಷ್ಠದ ಅಗ್ರ ಭಾಗದಲ್ಲಿ
ಸೇರಿದ್ದು ತರ್ಜನಿಯು ನೀಡಲ್ಪಟ್ಟದ್ದಲ್ಲಿ ಜಟಾಮುದ್ರೆ ಯಾಗುತ್ತದೆ. ಇದೇ ಮುದ್ರೆಯು
ಕಡೆಗಣ್ಣಿ ನಲ್ಲಿ ತರ್ಜನಿ ಇದ್ದಲ್ಲಿ ವೇತ್ರಮುದ್ರೆ ಎನಿಸುತ್ತದೆ.
ದಕ್ಷಾಂಗುಷ್ಠ
ಮುದ್ರೆ :- ಸಂಕುಚಿತವಾದ
ಕಿರುಬೆರಳನ್ನು ಅಂಗುಷ್ಠದ ಮೇಲೆ ಇಡಬೇಕು ಹೀಗೆ ಕಿರುಬೆರಳು ಮತ್ತು ಅನಾಮಿಕೆಯ ಮಧ್ಯದಲ್ಲಿ
ಅಂಗುಷ್ಠವಿದ್ದಲ್ಲಿ ದಕ್ಷಾಂಗುಷ್ಠ ಮುದ್ರೆಯಾಗುತ್ತದೆ.
ಅನಂತಮುದ್ರೆ
:- ಎರಡು ಹಸ್ತಗಳನೂ ಕೆಳಮುಖವಾಗಿ
ಮಾಡಿ ಬೆರಳುಗಳು ಪರಸ್ಪರ ಸೇರಿಕೊಂಡಿದ್ದು ಎರಡು ಹೆಸ್ತಗಳ ಕಿರುಬೆರಳಿನ ಸಮಾಪದಲ್ಲಿ ಎರಡು
ಅಂಗುಷ್ಠಗಳೂ ಬಂದಲ್ಲಿ ಅನಂತಮುದ್ರೆಯಾಗುತ್ತದೆ.
ಕೆಳಮುಖವಾದ
ಬಲಗೈಯನ್ನು ಕೆಳಭಾಗದಲ್ಲಿಟ್ಟು ಆದರ ಮೇಲ್ಭಾಗದಲ್ಲಿ ಎಡಗೈಯನ್ನೂ ಹಾಗೆಯೇ ಇಟ್ಟಲ್ಲಿ ಬೆರಳುಗಳೂ
ಪರಸ್ಪರ ಸಂಯೋಗ ಹೊಂದಿದಲ್ಲಿ ಇದು ಧರ್ಮಮುದ್ರೆಯಾಗುತ್ತದೆ. ಅದೇ ವ್ಯತ್ಯಸ್ತವಾಗಿದ್ದಲ್ಲಿ ಜ್ಞಾನಮುದ್ರೆಯಾಗುತ್ತದೆ.
ವೈರಾಗ್ಯಮುದ್ರೆ
:- ಎರಡು ಹಸ್ತಗಳ ಕನಿಷ್ಠಿಕೆಯನ್ನೂ,
ಅಂಗುಷ್ಠವನ್ನೂ ಜೋಡಿಯಾಗಿ ಸೇರಿಸಿ
ನೀಡಿದಲ್ಲಿ ಇದು ವೈರಾಗ್ಯಮುದ್ರೆ ಯಾಗುತ್ತದೆ. ಇದು ಸರ್ವ ಕರ್ಮಗಳಲ್ಲಿಯೂ ಶುಭಕರವಾದ್ದು.
ಐಶ್ವರ್ಯಮುದ್ರೆ
:- ಎರಡೂ ಕೈಗಳ ಹಿಂಭಾಗವನ್ನು ಒಂದರ
ಮೇಲೊಂದನ್ನಾಗಿ ಯೋಜಿಸಿ ಕಿರುಬೆರಳುಗಳಿಗೂ, ಅಂಗುಷ್ಠಗಳಿಗೂ ಪರಸ್ಪರ ಸಂಬಂಧ ಉಂಟಾದಲ್ಲಿ ಇದು ಐಶ್ವರ್ಯಮುದ್ರೆ ಯಾಗುತ್ತದೆ.
ಸರ್ವದೋಷ
ನಿವಾರಕ ಮುದ್ರೆ :-
ಹಸ್ತದ್ವಯವನ್ನೂ ಪದ್ಮಾಕಾರಮಾಡಿ ಕನಿಷ್ಠಿಕೆಗಳನ್ನೂ, ತರ್ಜನಿಗಳನ್ನೂ ಸೇರಿಸಿ ಮಧ್ಯದ ಎರಡೆರಡು ಬಿರಳುಗಳನ್ನೂ,
ಒಟ್ಟು ನಾಲ್ಕು ಬೆರಳುಗಳನ್ನೂ ನೀಡಿ ಕೈಗಳ
ಕೆಳಭಾಗವನ್ನು ಸೇರಿಸಬೇಕು. ಅಂಗುಷ್ಠಗಳೆರಡೂ ಒಂದೇ ಕಡೆಯಲ್ಲಿ ಸೇರಿ ನಾಳದಂತೆ ತೋರಬೇಕು. ಈ
ಮುದ್ರೆಯು ಸರ್ವದೋಷಗಳಿಗೂ ನಾಶಕವಾಗಿಯೂ, ಶುಭಕರ ವಾಗಿಯೂ ಇರುತ್ತದೆ.
ನಿಷ್ಕಲಮುದ್ರೆ
:- ಅಂಗುಷ್ಠ ಮತ್ತು ಕನಿಷ್ಠಿಕೆಯು
ಸೇರಿದ್ದು ಅದರಲ್ಲಿ ಉಳಿದ ಮೂರು ಬೆರಳುಗಳೂ ಬಗ್ಗಿರಬೇಕು. ಮೇಲ್ಮುಖವಾಗಿರುವ ಬಲ ಅಂಗುಷ್ಠವನ್ನು
ಎಡ ಅಂಗುಷ್ಠದಿಂದ ವೇಷ್ಟನಮಾಡಬೇಕು. (ಸೇರಿ ಅದುಮಬೇಕು)
ಇತರ ಬಲ ಅಂಗುಲಿಗಳಿಂದ ಎಡದ ಅಂಗುಷ್ಠವನ್ನೂ ವೇಷ್ಟಿಸಬೇಕು. (ಸೇರಿ ಅದುಮಬೇಕು) ಎಡದ ಅಂಗುಲಿಗಳಿಂದಲೂ ಬೆರಳುಗಳನ್ನು ವೇಷ್ಟನಮಾಡಿ
ತರ್ಜಿನಿಗಳನ್ನು ಕುಗ್ಗಿಸಿದಲ್ಲಿ ಇದು ನಿಷ್ಕಲಮುದ್ರೆಯಾಗುತ್ತದೆ.
ಸ್ಕಂದ ಮುದ್ರೆ
:- ಅಂಗುಷ್ಠವನ್ನು ಕುಗಿಸಿ
ಕೈಗಳನ್ನು ತಲೆಕೆಳಗಾಗಿ ಮಾಡಿ ಕೈಯಿನ ಮಧ್ಯದಲ್ಲಿ ಸೇರಿರುವ ಎಲ್ಲಾ ಬೆರಳುಗಳ ಉಗುರುಗಳನ್ನು
ಮುಚ್ಚಬೇಕು ಕೈಗಳ ಹಿಂಭಾಗವನ್ನು ಸೇರಿಸಿ ಅಂಗುಷ್ಠವನ್ನು ಸಮವಾಗಿಟ್ಟು ಎರಡು ಕೈಗಳನ್ನೂ
ಮಾಲೆಯಂತೆ ಮಾಡಿದಲ್ಲಿ ಇದು ದೇವೀಮುದ್ರೆಯಾಗುತ್ತದೆ. ಅಂಗುಷ್ಠದೊಡನೆ ಅಂಗುಷ್ಠವನ್ನೂ, ಕನಿಷ್ಠಿಕೆಯೊಡನೆ ಕನಿಷ್ಟಿಕೆಯನ್ನೂ ಸೇರಿಸಬೇಕು.
ಇದನ್ನು ಕುಗ್ಗಿಸಿ ಕೈಮಧ್ಯದಲ್ಲಿಟ್ಟು ಊರ್ಧ್ವಮುಖವಾದ (ಎರಡು ಕೈಗಳೂ ಸೇರಿ) ಆರು ಬೆರಳುಗಳನ್ನೂ
ಸ್ವಲ್ಪ ಕುಗ್ಗಿಸಿ ಶಕ್ತಿಯಂತೆ ಒಂದು ಕಡೆಗೆ ಚಾಚಿದಲ್ಲಿ ಇದು ಸ್ಕಂದಮುದ್ರೆಯಾಗುತ್ತದೆ. ಇದು
ದೇವತೆಗಳಿಗೂ ಅಭೇದ್ಯವಾದುದು (ಒಳಹೋಗಲಾಗದ್ದು).
ವಿಘ್ನರಾಜಮುದ್ರಾ
:- ಕೈಯುನ್ನು ಅಧೋಮುಖವನ್ನಾಗಿ
ಮಾಡಿ ಮೂರು ಬೆರಳುಗಳನ್ನೂ ತಾಳೆಯಮರದಂತೆ ಸ್ವಲ್ಪ ನೀಡಿ ಮಧ್ಯಮಾಂಗುಲಿಯು ಸ್ವಲ್ಪ ಸಂಕೋಚ
ಹೊಂದಿದ್ದು ತರ್ಜನಿಯೊಡನೆ ಅಂಗುಷ್ಠವನ್ನು ಸೇರಿಸಿ ದನ್ತಾಕಾರವಾದ ಮುದ್ರೆ ಯನ್ನು
ಪ್ರದರ್ಶಿಸಬೇಕು. ಇದು ಸರ್ವವಿಘ್ನನಾಶಕವಾದ ವಿಘ್ನರಾಜಮುದ್ರಾ. ತರ್ಜನೀ ಮತ್ತು ಅಂಗುಷ್ಠಗಳು
ಸೇರಿಕೊಂಡಿರುವ ಎರಡು ಹಸ್ತಗಳನ್ನೂ ಮೇಲ್ಮುಖವಾಗಿ ಸೇರಿಸಿದಲ್ಲಿ ಶಕ್ರಮುದ್ರೆಯಾಗುತ್ತದೆ.
ಹುತಾಶನ
ಮುದ್ರೆ :- ಮಧ್ಯಾಂಗುಲಿಯನ್ನು
ಬಗ್ಗಿಸಿ ಅಂಗುಷ್ಠವನ್ನು ವಿಸ್ತರಿಸಿ ಎರಡು ಕೈಗಳನ್ನೂ ಮೇಲ್ಮುಖವಾಗಿ ಯೋಜಿಸಿದಲ್ಲಿ ಹುತಾಶನ
ಮುದ್ರೆಯಾಗುತ್ತದೆ. ಕೈಯನ್ನು ಕೆಳಮುಖಮಾಡಿ
ಬೆರಳುಗಳನ್ನು ಕುಗ್ಗಿಸಿ ಮಧ್ಯಮಾಂಗುಲಿಯು ಚಾಚಲ್ಪಟ್ಟಿದ್ದಲ್ಲಿ ವಿರೂಪಾಕ್ಷ
ಮುದ್ರೆಯಾಗುತ್ತದೆ.
ವಾರುಣೀ
ಮುದ್ರೆ:- ಮೇಲ್ಮುಖವಾದ ಹಸ್ತದಲ್ಲಿ ಎಲ್ಲಾ ಬೆರಳುಗಳೂ
ಚಾಚಲ್ಪಟ್ಟಿದ್ದಲ್ಲಿ ವಾರುಣೀ ಮುದ್ರೆಯಾಗುತ್ತದೆ. ಅದೇ ಮುದ್ರೆಯು ಅಡ್ಡ ಲಾಗಿದ್ದಲ್ಲಿ ಮಾರುತಿ
ಮುದ್ರೆಯಾಗುತ್ತದೆ. ಈ
ಮುದ್ರೆಯಲ್ಲಿ ಬೆರಳುಗಳೆಲ್ಲವೂ ಸಂಕೋಚಹೊಂದಿದ್ದಲ್ಲಿ ಕೌಬೇರೀ
ಮುದ್ರೆಯಾಗುತ್ತದೆ. ಮಧ್ಯದ ಮೂರು
ಬೆರಳುಗಳೂ ಚಾಚಲ್ಪಟ್ಟದ್ದಲ್ಲಿ ಈಶಾನೀ ಮುದ್ರೆಯಾಗುತ್ತದೆ.
ಪದ್ಮಮುದ್ರೆಯು ಬ್ರಹ್ಮನಿಂದ ಉಂಟಾದದ್ದು ಭೋಗಮುದ್ರೆಯು
ಅನಂತನಿಂದ ಉಂಟಾದದ್ದು. ತರ್ಜನಿಯನ್ನು ಬಿಟ್ಟು ಬಲಗೈಯ್ಯಿನ ಬೆರಳುಗಳಿಂದ ಬಲಗೈಯ್ಯು ಆವರಿಸಲ್ಪಟ್ಟರಬೇಕು.
ತರ್ಜನಿಗಳ ಅಗ್ರಭಾಗವನ್ನು ಗ್ರಹಿಸಿ ಆರು ಬೆರಳುಗಳನ್ನೂ ಸಂಕೋಚಮಾಡಿ ಅಂಗುಷ್ಠಗಳ ಮೇಲೆ
ತರ್ಜನಿಯನ್ನು ಇಟ್ಟಲ್ಲಿ ವಜ್ರಮುದ್ರೆ ಎನಿಸುತ್ತದೆ.
ಖಡ್ಗಮುದ್ರೆ
:- ಎರಡೂ ಕೈಗಳ ಕನಿಷ್ಠಿಕೆ ಮತ್ತು
ಅನಾಮಿಕೆಗಳು ಅಂಗುಷ್ಠಗಳೊಡನೆ ಸೇರಿ ಬಗ್ಗಿದ್ದು ಉಳಿದ ನಾಲ್ಕು ಬೆರಳುಗಳೂ (ಹಸ್ತದ್ವಯವೂ ಸೇರಿ)
ಚಾಚಲ್ಪಟ್ಟದ್ದಲ್ಲಿ ಇಂತಹ ಹಸ್ತದ್ವಯವು ಖಡ್ಗಮುದ್ರೆಯಾಗುತ್ತದೆ.
ಶೂಲಮುದ್ರೆ :- ಕನಿಷ್ಠಾಂಗುಷ್ಠಗಳೊಡನೆ ಕೂಡಿರುವ ಹಸ್ತಗಳನ್ನು
ಪರಸ್ಪರವಾಗಿ ಸೇರಿಸಬೇಕು ಹೀಗೆ ಚಾಚಲ್ಪಟ್ಟ ಹಸ್ತದ್ವಯವು ಶೂಲಮುದ್ರೆಯಾಗುತ್ತದೆ.
ದ್ರವ್ಯರೂಪಮುದ್ರೆ
:- ಈ ಮುದ್ರೆಯಲ್ಲಿ ಹಸ್ತವನ್ನು
ಚಾಚಿಯೇ ಇರಬೇಕು. ಸ್ವಲ್ಪ ಭಾಗವನ್ನು ಮಾತ್ರ ಮುದ್ರೆಯಲ್ಲಿ ಯೋಜಿಸಬೇಕು ಎರಡು ಮಧ್ಯಾಂಗುಲಿಯನ್ನೂ
ಜೋಡಿಸಿ ಒಂದಾಗಿ ಯೋಜಿಸಬೇಕು. ಮುಂದಕ್ಕೆ ನೀಡಬೇಕು. ಎರಡು ತರ್ಜಿನಿಗಳನ್ನು ಸ್ವಲ್ಪ ವಕ್ರಮಾಡಿ
ಮಧ್ಯಮಾಂಗುಲಿಯ ಹಿಂಭಾಗದಲ್ಲಿ ಯೋಜಿಸಬೇಕು. ಇದು ದ್ರವ್ಯರೂಪಮುದ್ರೆ ಎನಿಸುತ್ತದೆ. ಇದನ್ನು
ಮಾನಸಿಕ ಭಾವಾನುಕರಣ ಕಾಲದಲ್ಲಿ ಪ್ರಯೋಗಿಸಬೇಕು.
ಘೃತಮುದ್ರೆ :- ಎರಡು ಕೈಗಳನ್ನೂ ಮೇಲ್ಮುಖವಾಗಿಟ್ಟು
ತರ್ಜನಿಗಳೆರಡನ್ನೂ ಬಗ್ಗಿಸಿ ಮಧ್ಯಮಾಂಗುಲಿಯ ಹಿಂಭಾಗದಲ್ಲಿ ನ್ಯಾಸಮಾಡಬೇಕು. ಉಳಿದ ಆರು
ಬೆರಳುಗಳನ್ನೂ ಆಯಾಯ ಬೆರಳುಗಳ ಸಾಮ್ಯಕ್ಕೆ ತಕ್ಕಂತೆ ಜೋಡಿಸಿ ಕನಿಷ್ಠಿಕೆಯ ಮೇಲೆ
ಅಂಗುಷ್ಠಗಳೆರಡನ್ನೂ ನ್ಯಾಸಮಾಡಿದಲ್ಲಿ ಘೃತಮುದ್ರೆ ಯಾಗುತ್ತದೆ.
ಗಂಧಮುದ್ರೆ :- ಎಡಗೈಯ್ಯನ್ನು ಮೇಲ್ಮುಖವಾಗಿಟ್ಟು ಬಲಗೈಯನ್ನು
ಅಧೋ-ಮುಖಮಾಡಿ ಮಧ್ಯಮಾಗಳೆರಡನ್ನೂ ಕುಗ್ಗಿಸಿ ಅಂಗುಷ್ಠದಲ್ಲಿಟ್ಟು ತರ್ಜಿನೀ-ಕನಿಷ್ಠಿಕೆಗಳು
ಮಧ್ಯಮಾಂಗುಲಿಯಿಂದ ಆಕ್ರಮಿಸುವೆಂತೆ ಮಾಡಿದಲ್ಲಿ ಇದು ಎರಡನೆಯ ದ್ರವ್ಯ ರೂಪವಾದ ಗಂಧಮುದ್ರೆ
ಯಾಗುತ್ತದೆ.
ಪುಷ್ಪಮುದ್ರೆ
:- ಎರಡು ಕೈಗಳನ್ನೂ ಮೇಲ್ಮುಖಮಾಡಿ
ಕಿರುಬೆರಳು ಮತ್ತು ಅನಾಮಿಕೆ ಈ ನಾಲ್ಕನ್ನೂ ಕುಗ್ಗಿಸಿ ಎರಡು ಮಧ್ಯಮಾಂಗುಲಿಗಳನ್ನೂ ಮುಂದಕ್ಕೆ
ಚಾಚಬೇಕು. ತರ್ಜನಿಗಳೆರಡೂ ಅಂಗುಷ್ಠದ ಮೇಲ್ಭಾಗ ಹೊಂದಿರಬೇಕು. ಇದಕ್ಕೆ ಪುಷ್ಪಮುದ್ರೆ ಎಂದು
ಹೆಸರು. ಹಾಗೆಯೇ ಎರಡು ಕೈಗಳನ್ನೂ ಮೇಲ್ಮುಖಮಾಡಿ ತರ್ಜನಿಗಳೆರಡನ್ನೂ ಮುಂದಕ್ಕೆ ಚಾಚಿ ಅವುಗಳ
ಅಗ್ರಭಾಗವನ್ನು ಪರಸ್ಪರ ಯೋಜಿಸಬೇಕು. ಆ ತರ್ಜನಿಗಳ ಮೂಲಭಾಗದಲ್ಲಿ ಅಂಗುಷ್ಠಗಳೆರಡನ್ನೂ
ಸೇರಿಸಬೇಕು ಉಳಿದ ಆರು ಬೆರಳುಗಳೂ ಕುಗ್ಗಿರಬೇಕು. ಇದಕ್ಕೆ ಧೂಮಮುದ್ರೆ ಎಂದು ಹೆಸರು.
ದೀಪಮುದ್ರೆ :- ಯಾವ ಹಸ್ತಗಳ ಸನ್ನಿವೇಶದೆಲ್ಲಿ ತರ್ಜನಿಯೊಡನೆ
ತರ್ಜನಿಯೂ, ಕನಿಷ್ಠಿಕೆಯೊಡನೆ ಕನಿಷ್ಠಿಕೆಯೂ ಸೇರಿ ಮುಂದಿನ ನಾಲ್ಕು
ಬೆರಳುಗಳು ಉನ್ನತವಾಗಿ ನಿಲ್ಲುವುವೋ ಮತ್ತು ಎರಡು ಕೈಗಳೂ ಹಿಂಭಾಗದಿಂದ ಸೇರಿ ಅಂಗುಷ್ಠಗಳು
ಮೇಲ್ಮುಖವಾಗಿ ನಿಲ್ಲುವುವೋ ಇಂತಹ ಸನ್ನಿವೇಶವು ದೀಪಮುದ್ರೆ ಎನಿಸುತ್ತದೆ.
ನೈವೇದ್ಯ
ಮುದ್ರೆ :- ಕನಿಷ್ಠಿಕೆಗಳೆರಡೊ
ಅಂಗುಷ್ಠದಲ್ಲಿ ಸೇರಿದ್ದು ಇತರ ಬೆರಳುಗಳೆಲ್ಲವೂ ಚಾಚಲ್ಪಟ್ಟದ್ದು ಪೃಷ್ಠಭಾಗದಲ್ಲಿ ಎರಡು ಕೈಗಳೂ
ಸೇರಿದಲ್ಲಿ ಇದು ಫಲಾಕಾರವಾದ ನೈವೇದ್ಯ ಮುದ್ರೆ ಯಾಗುತ್ತದೆ. ಇದು ಬಹು ಶುಭಪ್ರದವಾದ್ದು. ಬೆರಳುಗಳೆಲ್ಲವೂ
ಸೇರಿ ಸಂಕೋಚಹೊಂದಿದಲ್ಲಿ ಎರಡನೆಯ ಪುಷ್ಪಮುದ್ರೆ ಯಾಗುತ್ತದೆ.
ಸರ್ವದ್ರವ್ಯಸಂಪಾದಕವಾದ
ಮಹಾಮುದ್ರೆ :- ಅಂಗುಷ್ಠಗಳೆರಡನ್ನೂ
ಒಂದುಕಡೆ ಸೇರಿಸಿ ಅನಾಮಿಕ ಮತ್ತು ಕನಿಷ್ಠಿಕೆಗಳನ್ನೂ ಸೇರಿಸಿ ಎರಡು ಮಧ್ಯಮಾಂಗುಲಿಗಳನ್ನೂ
ಕುಗ್ಗಿಸಿ ಅನಾಮಿಕೆಯ ಹಿಂಭಾಗದಲ್ಲಿ ನ್ಯಾಸ ಮಾಡಬೇಕು. ಆ ಮಧ್ಯಮಾಂಗುಲಿಯೊಡನೆ ಹಿಂಭಾಗದಲ್ಲಿ
ತರ್ಜನಿಯನ್ನು ನ್ಯಾಸ ಮಾಡಿರಬೇಕು. ಇದು ಸರ್ವದ್ರವ್ಯಸಂಪಾದಕವಾದ ಮಹಾಮುದ್ರೆ ಎನಿಸುತ್ತದೆ.
ಅಮೃತಮುದ್ರೆ
:- ಅನಾಮಿಕೆ ಮತ್ತು ಮಧ್ಯಮಾ
ಇವನ್ನು (ಎರಡು ಕೈಗಳಿಂದಲೂ) ಒಂದಕ್ಕೊಂದು ಪಕ್ಕದಲ್ಲಿ ಸೇರುವಂತೆ ಮಾಡಿ ಅಗ್ರಸಹಿತವಾದ ಎರಡು
ತರ್ಜನಿಗಳನ್ನೂ ಮಧ್ಯಮಾಂಗುಲಿಯಲ್ಲಿ ಯೋಜಿಸಿ ಎರಡು ಕನಿಷ್ಠಿಕೆಗಳನ್ನೂ ಅಗ್ರಸಹಿತವಾಗಿ
ಅನಾಮಿಕೆಯಲ್ಲಿಡಬೇಕು. ಅಂಗುಷ್ಠಗಳು ಅರ್ಧದ ಮಟ್ಟಿಗೆ ಮೇಲ್ಮುಖ ವಾಗಿರಬೇಕು. ಇದು ಅಮೃತವೆಂಬ
ಮುದ್ರೆಯಾಗುತ್ತದೆ. ಬಗ್ಗಿದ
ತರ್ಜನಿಯುಳ್ಳ ಎರಡು ಕೈಗಳೂ ಸೇರಿ ಚಂಡೀಶಮುದ್ರೆಯಾಗುತ್ತದೆ. ಅಂಜಲಿಯ ಬೆರಳುಗಳು ಸೇರಿಕೊಂಡಿರುವ ಪದ್ಮಮುದ್ರೆಯೇ ಅಸ್ತ್ರಮುದ್ರೆಯಾಗುತ್ತದ.
ಸದ್ಯೋಜಾತ :- ಬಲಗೈಯ್ಯಿನಿಂದ ಪ್ರಯತ್ನ ಪೂರ್ವಕವಾಗಿ
ದೃಢಮುಷ್ಠಿಯನ್ನು ಮಾಡಿ ಮೇಲ್ಮುಖವಾಗಿ ಮಾಡಿರುವ ಅಂಗುಷ್ಠವನ್ನು ಎಡಗೈಯ್ಯಿನ ಅಂಗುಷ್ಠದ ಮೇಲೆ
ಇಡಬೇಕು. ಆ ಬಲಮುಷ್ಠಿಯನ್ನೂ ಸಹ ಎಡಗೈಯ್ಯಿನ ಬೆರಳುಗಳಿಂದ ವೇಷ್ಟನಮಾಡಬೇಕು. ಇದು ಸದ್ಯೋಜಾತ
ಮುದ್ರೆಯಾಗುತ್ತದೆ. ಮತ್ತು ಸರ್ವ-ಪಾಪನಾಶಕವೂ ಆಗಿರುತ್ತದೆ. ಇದೇ ಮುದ್ರೆಯನ್ನು ವಾಮ (ಎಡ)
ದಕ್ಷಿಣ ವ್ಯತ್ಯಾಸದಿಂದ ರಚಿಸಿದಲ್ಲಿ ವಾಮದೇವ ಮುದ್ರೆಯಾಗುತ್ತದೆ.
ಅಘೋರಮುದ್ರೆ
:- ಎರಡು ಕೈಗಳನ್ನೂ ಸಂಪುಟದಂತೆ
ಸೇರಿಸಿ ಆದನ್ನು ಎಡಭಾಗದ ಮೂಗಿನ ಮೇಲೆ ಯೋಜಿಸಬೇಕು. ಬಲಗೈಯ್ಯಿನ ಮಧ್ಯ-ಮಾಂಗುಲಿಯನ್ನು ಬಗ್ಗಿಸಿ
ಅಂಗುಷ್ಠಗಳನ್ನೂ ಕುಗ್ಗಿಸಬೇಕು. ಶೂಲಾಕಾರದಂತೆ ಮಾಡಿದ ಆ ಹಸ್ತಗಳನ್ನು ಹೃದಯ ಪ್ರದೇಶದಲ್ಲಿಡಬೇಕು
ಇದು ಸರ್ವವಿಫ್ನ ನಾಶಕವಾದ ಅಘೋರಮುದ್ರೆ ಎನಿಸುತ್ತದೆ.
ವಜ್ರಮುದ್ರೆ
:- ಅನಾಮಿಕಾದ್ವಯವನ್ನೂ ಕುಗ್ಗಿಸಿ
ಕೈಗಳೆರಡನ್ನೂ ಮೇಲ್ಮುಖಮಾಡಿ ಅದರ ಮೇಲೆ ಅಂಗುಷ್ಠಗಳೆರಡನ್ನೂ, ತರ್ಜನಿಗಳನ್ನೂ ಕುಗ್ಗಿಸಬೇಕು. ಮಧ್ಯಮ ಅನಾಮಿಕ ಗಳೆರಡನ್ನೂ
ಒಂದು ಕಡೆಯ ಕನಿಷ್ಠಿಕೆಯಲ್ಲಿ ನ್ಯಾಸಮಾಡಬೇಕು ಇದು ಸರ್ವದುಷ್ಠನಿವಾರಕವಾದ ವಜ್ರಮುದ್ರೆ
ಎನಿಸುತ್ತದೆ.
ಈಶಾನಮುದ್ರೆ
:- ಕನಿಷ್ಠಿಕೆ ಮತ್ತು
ಅನಾಮಿಕೆಗಳೆರಡನ್ನೂ ಮಧ್ಯದಲ್ಲಿ ಹೊಂದಿಕೊಳ್ಳುವಂತೆ ಸೇರಿಸಿ ಬಗ್ಗಿಸಿ ಕೊನೆಗಳನ್ನೂ ಸೇರಿಸಿ
ಉಳಿದ ಬೆರಳುಗಳನ್ನು ನೀಡಿದಲ್ಲಿ ಇದು ಈಶಾನಮುದ್ರೆ ಯಾಗುತ್ತದೆ ಇದು ಎಲ್ಲಾ ಕರ್ಮಗಳಲ್ಲೂ ಶುಭಕರವವಾದುದು.
ಮ್ಯೋಮಮುದ್ರೆ
:- ತರ್ಜನಿಗಳೆರಡನ್ನೂ ಮತ್ತು
ಕನಿಷ್ಠಿಕೆಯನ್ನೂ ಕುಗ್ಗಿಸಿ ಕೈಗಳ ಮಧ್ಯದಲ್ಲಿ ಯೋಜಿಸಿ ಉಳಿದ ನಾಲ್ಕು ಬೆರಳುಗಳನ್ನೂ ಉಗುರುಗಳು ಕಾಣುವಂತೆ
ಅಧೋಮುಖವಾಗಿ ಧರಿಸಿ ಅಂಗುಷ್ಠಗಳೆರಡನ್ನೂ ನಾಳಗಳಂತೆ ಒಂದೊಂದು ಕಡೆ ಮಾಡಿದಲ್ಲಿ ಮ್ಯೋಮಮುದ್ರೆ
ಎನಿಸುತ್ತದೆ.
ಸರ್ವಾತ್ಮಮುದ್ರೆ
:- ಎಡಗೈಯ್ಯಿನಿಂದ ಮುಷ್ಠಿಯನ್ನು
ಬಂಧಿಸಿ ತರ್ಜನಿಯನ್ನು ನೀಡಬೇಕು. ಬಲಗೈಯಿನ ಮುಷ್ಮಿಯಿಂದ ಆ ತರ್ಜನಿಯನ್ನು ಗ್ರಹಿಸಬೇಕು. ಇದು
ಸರ್ವಾತ್ಮಮುದ್ರೆ ಯೆನಿಸುತ್ತದೆ.
ಶಿವಮುದ್ರೆ :- ಎಡಮುಷ್ಠಿಯಲ್ಲಿ ಬಲದ ಅಂಗುಷ್ಪವನ್ನು ಇಡಬೇಕು.
ಬೆರಳುಗಳೆಲ್ಲವೂ ಹಿಂಭಾಗದಲ್ಲಿ ಸೇರಿರಬೇಕು. ಈ ಮುದ್ರೆಯು ಶಿವಮುದ್ರೆ ಎನಿಸುತ್ತದೆ. ಎಲ್ಲಾ
ಬೆರಳುಗಳೂ ಹೊರೆಗೆ ಕಾಣದಂತೆ ದುಂಡಾಗಿ ಹಸ್ತಮಧ್ಯದಲ್ಲಿ ಲೀನವಾಗಿದು ಮಧ್ಯಮಾಂಗುಲಿಯು ನೀಡಿದಲ್ಲಿ
ಇದು ಶಿಖಾಮುದ್ರೆ ಎನಿಸುತ್ತದೆ.
ಗಾಯತ್ರ
ಮುದ್ರೆ :- ಮೇಲ್ಮುಖವಾಗಿರುವ
ಕೈಗಳೆರಡನ್ನೂ ಒಂದೇ ಕಡೆಗೆ ಸೇರಿಸ ಬೇಕು. ಬೆರಳುಗಳೂ ಹಾಗೆಯೇ ಸೇರಿದ್ದಲ್ಲಿ ಇದು ಗಾಯತ್ರ
ಮುದ್ರೆಯಾಗುತ್ತದೆ.ಮೊದಲು ಮುಷ್ಟಿಯನ್ನು ಮಾಡಿ ಕನಿಷ್ಠಿಕೆಯಿಂದ ಮೊದಲು ಮಾಡಿ ತರ್ಜನಿಯವರಿಗೂ
ಎಲ್ಲಾ ಬೆರಳುಗಳನ್ನೂ ಕ್ರಮವಾಗಿ ನೀಡಿದಲ್ಲಿ ಶಕ್ತಿಮುದ್ರೆ ಯಾಗುತ್ತದೆ.
ಶಶಿಕರ್ಣೀ
ಮುದ್ರೆ :- ತರ್ಜನಿಗಳೆರಡನ್ನೂ
ಅಂಗುಷ್ಠದಲ್ಲಿ ಸೇರಿಸಿ ನೀಡಿದ ಬೆರಳುಗಳುಳ್ಳ ಎರಡು ಹಸ್ತಗಳನ್ನೂ ಮೇಲ್ಮುಖಮಾಡಿ
ಮಣಿಬಂಧಪ್ರದೇಶವನ್ನು ಪರಸ್ಪರ ಮರ್ದಿಸಿದಲ್ಲಿ ಶಶಿಕರ್ಣೀ ಎಂಬ ಮುದ್ರೆಯಾಗುತ್ತದೆ. ಎರಡು
ಹಸ್ತಗಳನ್ನೂ ಸಂಪುಟದಂತೆ ಸೇರಿಸಿ ಸ್ವಲ್ಪಮಟ್ಟಗೆ ಬೆರಳುಗಳನ್ನು ಕುಗ್ಗಿಸಿದಲ್ಲಿ ಮುಕುಲಮುದ್ರೆ ಯಾಗುತ್ತದೆ. ಬೆರಳುಗಳನ್ನು ನೀಡಿದ್ದಲ್ಲಿ ಇದೇ ಪಂಕಜಮುದ್ರೆ ಯಾಗುತ್ತದೆ. ಎರಡು ಹಸ್ತಗಳನ್ನೂ ವಿಸ್ತರಿಸಿ ಮೇಲ್ಮುಖಮಾಡಿ
ಅಂಗುಷ್ಠಗಳನ್ನು ಕುಗ್ಗಿಸಿ ಮಧ್ಯ ಭಾಗದಲ್ಲಿ ಕೈಗಳನ್ನಿಟ್ಟಲ್ಲಿ ಆವಾಹನೀಮುದ್ರೆ ಯ ಲಕ್ಷಣವಾಗುತ್ತದೆ.
ರಿಷ್ಟ್ರರಾ
ಮುದ್ರೆ :- ಎರಡು ಅಂಗುಷ್ಠಗಳನ್ನೂ
ಕುಗಿಸಿ ಇತರ ಬೆರಳುಗಳಿಂದ ವೇಷ್ಟನಮಾಡಿ ಎರಡು ಹಸ್ತಗಳನ್ನೂ ಅಭಿಮುಖವಾಗಿ ಇಟ್ಟಲಿ ರಿಷ್ಟ್ರರಾ
ಎಂಬ ಮುದ್ರೆಯಾಗುತ್ತದೆ ಮೇಲ್ಮುಖವಾಗಿರುವ ಬಲ ಅಂಗುಷ್ಠವನ್ನು ಎಡ ಆಂಗುಷ್ಠದಿಂದ ವೇಷ್ಠನಮಾಡಿ
ವರ್ತುಲಾಕಾರವಾದ ಎರಡು ಆಂಗುಷ್ಠವನ್ನೂ ತಿರುಗಿಸಿದಲ್ಲಿ ವಿಸರ್ಜನ ಮುದ್ರೆ ಯಾಗುತ್ತದೆ.
ಗೇಣುಗಳ ಸನ್ನಿ ವೇಶವುಳ ಎರಡು ಹಸ್ತಗಳನ್ನೂ ಸೇರಿಸಿದಲ್ಲಿ ಛಿದ್ರಮುದ್ರೆಯಾಗುತ್ತದೆ. ಕೇವಲ
ಶುದ್ಧವಾದ ಮುಷ್ಠಿಯು ಲಿಂಗ ಮುದ್ರೆ ಯಾಗುತ್ತದೆ.
ವಿಶ್ವಮುದ್ರೆ
:- ಮಧ್ಯೆಮಾಂಗುಲಿಯು
ಸೇರಿಕೊಂಡಿರುವಂತೆ ಎರಡು ಕೈಗಳನ್ನೂ ಪದ್ಮಾಕಾರ ಮಾಡಿ ಬೆರಳುಗಳ ಸನ್ನಿವೇಶವನ್ನೂ ತಕ್ಕಂತೆ
ಮಾಡಿದ್ದಲ್ಲಿ ವಿಶ್ವಮುದ್ರೆ ಎನಿಸುತ್ತದೆ. ಬೆರಳುಗಳು ಸೇರಿಕೊಂಡಿರುವ ಎರಡು ಕೈಗಳನ್ನೂ ಎದುರು
ಬದುರು ಮಾಡಿ ಕನಿಷ್ಠಿಕೆಗಳನ್ನೂ ತರ್ಜನಿಗಳನ್ನೂ ಮಧ್ಯ ಮಾಂಗುಲಿಯೊಡನೆ ಸೇರಿಸಬೇಕು ಇದನ್ನು
ಹೃದಯದಲ್ಲಿಯೂ ತಲೆಯ ಮೇಲೂ ಕೇಶಬಂಧನ ಸ್ಥಾನದಲ್ಲಿಯೂ ಯೋಜಿಸಿದಲ್ಲಿ ಇದು ವ್ಯೋಮಮುದ್ರೆ ಎನಿಸುತ್ತದೆ. ಮುಷ್ಟಿಬಂಧಮಾಡಿ ತರ್ಜನಿಯನ್ನು
ಮಾತ್ರ ಚಾಚಿ ಮಧ್ಯಹಸ್ತದಲ್ಲಿತಾಲದ ಶಬ್ದವನ್ನು ಮಾಡಿದಲ್ಲಿ ಇದು ಅಸ್ತ್ರಮುದ್ರೆ
ಯಾಗುತ್ತದೆ.
ಅಂಗುಷ್ಠಮುದ್ರೆ
:- ಎಡಭಾಗದ ಹಸ್ತದಲ್ಲಿ ಮಧ್ಯಮ ಮತ್ತು
ತರ್ಜನಿಗಳು ಚಾಚಲ್ಪಟ್ಟದ್ದು ಕನಿಷ್ಠ ಮತ್ತು ಅನಾಮಿಕೆಗಳೆರಡೂ ಕುಗ್ಗಿದಲ್ಲಿ ಇದಕ್ಕೆ
ಅಂಗುಷ್ಠಮುದ್ರೆ ಎಂದೇ ಹೆಸರು. ಈ ಮುದ್ರೆಯೇ ಎತ್ತು, ಹಸು ಇವುಗಳ ಆಗಮನಕಾಲದಲ್ಲಿ ನೇತ್ರಪ್ರದರ್ಶಿತಾ ಎನಿಸುತ್ತದೆ.
ಕೈಗಳನ್ನು ಮೇಲ್ಮುಖಮಾಡಿ ಎಲ್ಲಾ ಬೆರಳುಗಳನ್ನೂ ಕುಗ್ಗಿಸಿ ಅದರ ಮೇಲೆ ಅಂಗುಷ್ಠವನ್ನಿಟ್ಟು
ಪುನಃಪುನಃ ಚಲಿಸುವಂತೆ ಮಾಡಬೇಕು. ಇದು ಎಲ್ಲಾ ಶಕ್ತಿಗಳಿಗೂ ಮುದ್ರೆಯಾಗುತ್ತದೆ.
ಮಧ್ಯಮಾಂಗುಲಿಯ ನಿರ್ದೇಶವು ಸೋಮಮುದ್ರೆ.
ಅನಾಮಿಕೆಯಿಂದ ಅಂಗಾರಕ ಮುದ್ರಾ, ಕಿರುಬೆರಳಿನಿಂದ
ಬುಧಮುದ್ರಾ, ಅದರ ಮೂಲ
ಭಾಗದಿಂದ ಹೊರತು ಉಳಿದ ಭಾಗದಿಂದ ಗುರುಮುದ್ರಾ ಆದರ ಮೂಲಭಾಗ ಮಾತ್ರದಿಂದ ಶುಕ್ರಮುದ್ರಾ, ಮಧ್ಯಮಾಂಗುಲಿಯ ಬುಡದಲ್ಲಿ ಅಂಗುಷ್ಟವು ಸೇರಿದ್ದಲ್ಲಿ ಶನಿಮುದ್ರಾ, ತರ್ಜನಿಯ ಮೂಲದಲ್ಲಿ ಅಂಗುಷ್ಠವು ಸೇರಿದ್ದಲ್ಲಿ ರಾಹುಮುದ್ರಾ,
ಕೈಗಳೆರಡನ್ನೂ ಸಂಪುಟದಂತೆ ಜೋಡಿಸಿ ಎಡಗೈಯನ್ನು ಮೇಲಕ್ಕೆ ಮಾಡಿದ್ದಲ್ಲಿ ಇದು ವರಾಹಮುದ್ರೆ
ಯಾಗುತ್ತದೆ. ಇದು
ಸರ್ವಕರ್ಮಗಳಲ್ಲಿಯೂ ಶುಭಕರವಾದ್ದು. ಎಡಗೈಯ್ಯಿನಿಂದ ವೇಷ್ಟನಮಾಡಲ್ಪಟ್ಟ ಬಲಗೈಯ್ಯಿನಿಂದ ಭೈರವೀಮುದ್ರೆ ಯಾಗುತ್ತದೆ.
ದಿವ್ಯಶಿರೋಮುದ್ರೆ
:- ತರ್ಜನಿಯನ್ನೂ, ಅಂಗುಷ್ಠವನ್ನೂ ಎದುರುಬದರಾಗಿ ಸೇರಿಸಿ ಉಳಿದ
ಬೆರಳುಗಳೆಲ್ಲವೂ ನೀಡಿದ್ದಲ್ಲಿ ಇದು ನೇತ್ರಮುದ್ರೆಯಾಗುತ್ತದೆ. ಸುಕ್ಕು ಇರುವ ಸ್ಥಳದಲ್ಲಿ ಬಗ್ಗಿಸದೆ
ಎರಡು ಮಧ್ಯಮಾಂಗುಲಿಗಳನ್ನೂ ಸ್ವಲ್ಪ ಬಗ್ಗಿದ ತರ್ಜನಿಯ ಆಶ್ರಯ ಹೊಂದಿಸಿ ಅಂಗುಷ್ಟಗಳೆರಡನ್ನೂ
ಸಮವಾಗಿ ಸೇರಿಸಿದಲ್ಲಿ ಇದು ದಿವ್ಯಶಿರೋಮುದ್ರೆ ಎನಿಸುತ್ತದೆ.
ಮುದ್ರೆ ಹೇಗೆ ಮುಖ್ಯ:- ರಿಫ್ಲೆಕ್ಸೋಲಜಿಯನ್ನು ಅಭ್ಯಾಸ ಮಾಡುವವರ ಪ್ರಕಾರ,
ಕೈಗಳಿಗೆ ಸೂಕ್ತವಾದ ಸ್ಪರ್ಶವನ್ನು
ಅನ್ವಯಿಸುವುದರಿಂದ ನೀವು ದಣಿದಿದ್ದರೆ ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದರೆ ಆಂತರಿಕ ಅಂಗಗಳು
ಸೇರಿದಂತೆ ದೇಹದ ಇತರ ಭಾಗಗಳಿಗೆ ಶಕ್ತಿಯನ್ನು ನೀಡುತ್ತದೆ ಮತ್ತು ಆರೋಗ್ಯವನ್ನು
ಪುನಃಸ್ಥಾಪಿಸಬಹುದು. ರಿಫ್ಲೆಕ್ಸೋಲಜಿಯನ್ನು ತಿಳಿಸಿರುವುದೇ ವೇದ ಶಾಸ್ತ್ರದ ಒಂದು ಗುಪ್ತ
ಆವಿಷ್ಕಾರ. ಕನಿಷ್ಠಿಕಾ, ಅನಾಮಿಕಾ, ಮಧ್ಯಮಾ, ತರ್ಜನೀ, ಅಂಗುಷ್ಠ, ಅಂಗೈಗಳಿಂದ ಕೂಡಿದ ಕೈಯನ್ನು ಕರ ಎನ್ನುತ್ತಾರೆ.
ಪ್ರತಿಯೊಂದು ಕ್ರಿಯೆಗಳಿಗಳಲ್ಲಿಯೂ ಇದರ ಪಾತ್ರ ತುಂಬಾ ದೊಡ್ಡದು. ವ್ಯಕ್ತಿಯ ಅಂತರಂಗವನ್ನು ಈ ಕೈ
ಮಾಡುವ ಕರ್ಮಗಳಿಂದ ಅಳೆಯಬಹುದು.
ತಂತ್ರಶಾಸ್ತ್ರದಲ್ಲಿ ದೇವಿಯನ್ನು
"ದಶಮುದ್ರಾ ಸಮಾರಾಧ್ಯಾ? ಎಂದು
ಕರೆಯುತ್ತಾರೆ. ಇದಕ್ಕೆ ವ್ಯಾಖ್ಯಾನ ನೀಡಿರುವ ಚಾಗಂಟಿ ಸೂರ್ಯನಾರಾಯಣಮೂರ್ತಿ ಹೀಗೆಂದಿದ್ದಾರೆ
"ಮುದಂ ದ್ರಾವಯತೀತ ಮುದ್ರ:" ಎಂದು ಹೇಳಿದೆ. ಯಾವುದರಿಂದ ಆನಂದವು ಹರಿದುಬರುತ್ತದೆಯೋ
ಅದೇ ಮುದ್ರೆ. ಅದು ಶರೀರದ ಹಾಗೂ ಅದರ ವಿವಿಧ ಅಂಗಗಳ ವಿನ್ಯಾಸ ಅಥವಾ ಭಾವನೆ. ನೃತ್ಯದಲ್ಲಿ ಶರೀರದ
ವಿವಿಧ ಅಂಗಗಳ ವಿನ್ಯಾಸಗಳು ಅನೇಕ ಭಾವನೆಗಳನ್ನು ಸೂಚಿಸುವುದಲ್ಲದೆ ನೃತ್ಯ ಮಾಡುವವರಿಗೆ ಹಾಗೂ ನೋಡುವವರಿಗೂ
ಸಂತೋಷವನ್ನುಂಟು ಮಾಡುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ ಸರಿ. ಲಲಿತಾ
ಸಹಸ್ರನಾಮದಲ್ಲಿ 'ದಶಾಮುದ್ರಾ
ಸಮಾರಾಧ್ಯಾ' ಎನ್ನುವುದು 977 ನೆಯ
ನಾಮ. 'ಸರ್ವ ಸಂಕ್ಷೋಭಿಣಿ'
ಯಿಂದ ಆರಂಭವಾಗಿ 'ತ್ರಿಖಂಡ' ಎನ್ನುವ ನಾಮದವರೆಗೆ, ಆಕೆಯನ್ನು
ಹತ್ತು ಮುದ್ರೆಗಳಿಂದ ಪೂಜಿಸಬೇಕು. .........ಈ ಮುದ್ರೆಗಳಿಂದ ಕೂಡಿದ ಶ್ರೀಲಲಿತೆಯ ಆರಾಧನೆ
ವಿಶೇಷ ಸಂಕೇತಗಳಿಂದ ಕೂಡಿದ್ದಾಗಿದೆ. ಈ ಎಲ್ಲ ಮುದ್ರೆಗಳೂ ಶಿವ ಮತ್ತು ಶಕ್ತಿಯ ಅಂಶಗಳನ್ನು
ಒಳಗೊಂಡ ಶ್ರೀ ಲಲಿತೆಯ ಸೃಷ್ಟಿಯ ವಿವಿಧ ಕಾರ್ಯ ಮಾಡುವ ಸೂಚನೆಯೇ ಆಗಿದೆ ಎಂದು ಭಾವಿಸಲಾಗಿದೆ.
ಆಕೆಯನ್ನು ಪುಷ್ಪವೇ ಮೊದಲಾದ ವಸ್ತುಗಳಿಂದ ಬಾಹ್ಮ ಪೂಜೆ ಮಾಡುವುದಕ್ಕಿಂತ, ಈ ಮುದ್ರೆಗಳನ್ನೊಳಗೊಂಡ 'ಅಂತರ್ಯಾಗ' ದಿಂದ ಆಕೆ ಹೆಚ್ಚು ಪ್ರಸನ್ನಳಾಗುತ್ತಾಳೆ ಎಂದು ಹೇಳಲಾಗಿದೆ. ಈ ಎಲ್ಲ ಮುದ್ರೆಗಳಲ್ಲಿಯೂ ಎಡ
ಮತ್ತು ಬಲಗೈ ಬೆರಳುಗಳು ಸೇರಿಕೊಂಡು ಸಾಮರಸ್ಯ ಕ್ರಿಯೆ ಸೂಚಿತವಾಗಿವೆ. ಐದು ಬೆರಳುಗಳು
ಪಂಚಭೂತವನ್ನೂ; ಬಲಗೈ ಶಿವನನ್ನೂ,
ಎಡಗೈ ಶಕ್ತಿಯನ್ನೂ ಸಂಕೇತಿಸುತ್ತವೆ. ಎಡಗೈ
ಮತ್ತು ಬಲಗೈ ಬೆರಳುಗಳು ಪೂಜೆಯ ಮುದ್ರೆಯಲ್ಲಿ ಒಟ್ಟಿಗೆ ಸೇರಿದಾಗ, ಶಿವ-ಶಕ್ತಿಯರ ತಾದಾತ್ಮ್ಯವನ್ನು ಸೂಚಿಸುತ್ತದೆ. ಅಷ್ಟೇ
ಅಲ್ಲದೆ ಅದು ಪಂಚಕೃತ್ಯಗಳ ಕಾರ್ಯವನ್ನೂ ಪ್ರತಿನಿಧಿಸುತ್ತದೆ. ಈ ರೀತಿ ಮುದ್ರೆಗಳು ಜೀವ ಮತ್ತು
ಪರಮಾತ್ಮನ ತಾದಾತ್ಮ್ಯವನ್ನು ತೋರಿಸುತ್ತವೆ. ಸಾಧಕನಿಗೆ ಎಲ್ಲ ಮುದ್ರೆಗಳ ಪರಿಚಯವಿಲ್ಲದಿದ್ದರೆ,
ಆಗ ಅವನು ಆಕೆಯನ್ನು ಯೋನಿಮುದ್ರಾ ಅಂದರೆ
ನಮಸ್ಕಾರ ಮುದ್ರೆಯಲ್ಲಿ ಪೂಜಿಸಬೇಕು. ಮಹರ್ಷಿಗಳೂ ಕೂಡ ಇದನ್ನು ಶ್ರೀದೇವಿಯ ಸಂಕೇತ ಎಂದು
ಒಪ್ಪಿಕೊಂಡಿದ್ದಾರೆ. ನವಾವರಣ ಪೂಜೆಯಲ್ಲಿ ಅತ್ಯಂತ ಹೊರವಲಯದಿಂದ ಆರಂಭಿಸಿ ಒಳಗಿನ ಆವರಣದವರೆಗಿನ
ಎಲ್ಲಕ್ಕೂ ಒಂದು ಮುದ್ರೆಯಿದ್ದು ಸಾಧಕನು ಹೊರವಲಯದಿಂದ ಒಳವಲಯವನ್ನು ಮಾನಸಿಕವಾಗಿ ತಲಪಲು
ಸಾಧ್ಯವಾಗುತ್ತದೆ. ಅಂದರೆ ಕಣ್ಣಿಗೆ ಗೋಚರವಾಗುವ ದೃಶ್ಯದ ಹೊರವಲಯದ ಸತ್ ದೃಶ್ಯದ ಮೂಲಕ,
ಮುದ್ರೆಗಳು ದೃಕ್ (ಋಷಿ) ಅಂಶವನ್ನು ಅದರ
ಮೂಲಕ್ಕೆ ಸೇರಿಕೊಂಡಿರುತ್ತವೆ. ಇಷ್ಟೇ ಅಲ್ಲದೆ ಪ್ರಾರಂಭದ ಮುದ್ರೆಯು ಲಲಿತಾ ಸಹಸ್ರನಾಮದ 978ನೆಯ
ನಾಮದಲ್ಲಿ ಜ್ಞಾನಮುದ್ರೆ ಅಥವಾ ಚಿನ್ಮುದ್ರೆಯ ಉಲ್ಲೇಖವಿದೆ. ಈ ಪ್ರಸಿದ್ಧ ಮುದ್ರೆಯನ್ನು ಶ್ರೀ
ಶಂಕರಾಚಾರ್ಯರು ತಮ್ಮ ದಕ್ಷಿಣಾಮೂರ್ತಿ ಸ್ತೋತ್ರದಲ್ಲಿ ಉಲ್ಲೇಖಿಸಿದ್ದಾರೆ. ತ್ರಿಖಂಡ ಮುದ್ರೆಯು
ಮೂಲಾಧಾರ ಚಕ್ರ ಮತ್ತು ಸ್ವಾಧಿಷ್ಠಾನ ಚಕ್ರಗಳ ಸಂಯೋಜನೆಯಾಗಿದೆ, ಶಕ್ತಿಯು ಸಾಮಾನ್ಯವಾಗಿ ವಾಸಿಸುವ ದೇಹದ ಕೆಳಗಿನ ಎರಡು
ಕೇಂದ್ರಗಳು. ಸಹಸ್ರಾರಕ್ಕೆ ಶಕ್ತಿಯನ್ನು ಕರೆತರುವ ಮೂಲಕ, ತಲೆಯ ಮೇಲೆ, ಅವಳು ಮಹಾ ಶಕ್ತಿ ಲಲಿತೆಯಾಗಿ, ಗುರುವಾದ ಪರಮೇಶ್ವರನಲ್ಲಿ ಐಕ್ಯವಾಗುತ್ತಾಳೆ.
ಕನಿಷ್ಠಿಕಾ, ಅನಾಮಿಕಾ, ಮಧ್ಯಮಾ, ತರ್ಜನೀ, ಅಂಗುಷ್ಠ, ಅಂಗೈಗಳಿಂದ ಕೂಡಿದ ಕೈಯನ್ನು ಕರ ಎನ್ನುತ್ತಾರೆ. ಪ್ರತಿಯೊಂದು
ಕ್ರಿಯೆಗಳಿಗಳಲ್ಲಿಯೂ ಇದರ ಪಾತ್ರ ತುಂಬಾ ದೊಡ್ಡದು. ವ್ಯಕ್ತಿಯ ಅಂತರಂಗವನ್ನು ಈ ಕೈ ಮಾಡುವ
ಕರ್ಮಗಳಿಂದ ಅಳೆಯಬಹುದು. ತಂತ್ರಶಾಸ್ತ್ರದಲ್ಲಿ ದೇವಿಯನ್ನು "ದಶಮುದ್ರಾ ಸಮಾರಾಧ್ಯಾ?
ಎಂದು ಕರೆಯುತ್ತಾರೆ. ಸಂಧ್ಯಾವಂದನೆ
ವಿಧಿಯಲ್ಲಿ "ತತ್ಸವಿತುಃ ಅಂಗುಷ್ಠಾಭ್ಯಾಂ ನಮಃ" (ತರ್ಜನಿ ಬೆರಳಿನಿಂದ
ಹೆಬ್ಬೆರಳನ್ನು ತೀಡುವುದು) ವರೇಣ್ಯಂ ತರ್ಜನೀಭ್ಯಾಂ ನಮಃ (ಹೆಬ್ಬೆರಳಿಂದ ತೋರುಬೆರಳುಗಳನ್ನು
ತೀಡುವುದು) ಭರ್ಗೋ ದೇವಸ್ಯ ಮಧ್ಯಮಾಭ್ಯಾಂ ನಮಃ (ಹೆಬ್ಬೆರಳಿಂದ ನಡು ಬೆರಳುಗಳನ್ನು ತೀಡುವುದು)
ಧೀಮಹಿ ಅನಾಮಿಕಾಭ್ಕಾಂ ನಮಃ (ಹೆಬ್ಬೆರಳಿಂದ ಉಂಗುರ ಬೆರಳುಗಳನ್ನು ತೀಡುವುದು) ಧಿಯೋ ಯೋ ನಃ
ಕನಿಷ್ಠಿಕಾಭ್ಯಾಂ ನಮಃ (ಹೆಬ್ಬೆರಳಿಂದ
ಕಿರುಬೆರಳುಗಳನ್ನು ತೀಡುವುದು) ಪ್ರಚೋದಯಾತ್ ಕರತಲಕರಪ್ಪಷ ಷ್ಠಾಭ್ಯಾಂ ನಮಃ (ಬಲ ಅಂಗೈಯಿಂದ ಎಡ
ಅಂಗೈ ಯನ್ನು ತೀಡಿ, ಎಡ ಅಂಗೈಯಿಂದ
ಬಲ ಅಂಗೈಯನ್ನು ತೀಡಿ ಬಲ ಅಂಗೈಯಿಂದ ಎಡ ಮುಂಗೈ ಯನ್ನು ಎಡ ಅಂಗೈಯಿಂದ ಬಲ ಮುಂಗೈಯನ್ನು
ತೀಡಬೇಕು.). ತತ್ಸವಿತುಃ ಹೃದಯಾಯ ನಮಃ (ಹೆಬ್ಬೆರಳು ಒಳಗಿಟ್ಟು ಬಲಗೈ ಮುಷ್ಟಿಯಿಂದ ಹೃದಯವನ್ನು
ಮುಟ್ಟಬೇಕು.) ವರೇಣ್ಯಂ ಶಿರಸೇ ಸ್ವಾಹಾ (ಹೆಬ್ಬೆರಳ ತುದಿಯನ್ನು ತೋರುಬೆರಳಿನ ತುದಿಗಿಟ್ಟು
(ಉಳಿದ ಬೆರಳುಗಳನ್ನು ಮಡಚಿಟ್ಟು) ನೊಸಲಿನ (ಹಣೆ) ತುದಿಗೆ ತಾಗಿಸಬೇಕು). ಭರ್ಗೋ ದೇವಸ್ಯ ಶಿಖಾಯೈ
ವಷಟ್ (ಹೆಬ್ಬೆರಳು ಹೊರಗಿಟ್ಟು ಮುಷ್ಟಿಯನ್ನು ತಲೆಯ ಶಿಖಾ (ಜುಟ್ಟು) ಸ್ಥಾನದಲ್ಲಿ ಹಿಡಿಯಬೇಕು)
ಧೀಮಹಿ ಕವಚಾಯ ಹುಮ್ (ಬಲ ಅಂಗೈಯಿಂದ ಎಡ ತೋಳನ್ನು, ಎಡ ಅಂಗೈಯಿಂದ ಬಲತೋಳನ್ನೂ ಸವರುವುದು) ಧಿಯೋ ಯೋ ನಃ
ನೇತ್ರಾಭ್ಯಾಂ ಔಷಟ್ (ನಡು ಹಾಗೂ ತೋರುಬೆರಳುಗಳಿಂದ ಕಣ್ಣೆರಡನ್ನು ಸ್ಪರ್ಶಿಸುವುದು, ಉಳಿದ ಬೆರಳು ಮಡಚಿರಬೇಕು) ಪ್ರಚೋದಯಾತ್ ಅಸ್ತ್ರಾಯ
ಫಟ್ (ಚಪ್ಪಾಳೆ ತಟ್ಟುವುದು).
ಭಾರತೀಯ ಯೋಗ ಸಂಸ್ಥಾನದ ಕುಲದೀಪ್ ಸಿಂಗ್ ರವರ ಆಸನ ಮತ್ತು ಯೋಗ ವಿಜ್ಞಾನ ಹೀಗೆ ಹೇಳಿದ್ದಾರೆ
"ಮುದ್ರೆಗಳ ಅಥವಾ ಕೈ ಸನ್ನೆಗಳು ಕೈ ಮತ್ತು ಬೆರಳಿನ ಸ್ಥಾನಗಳನ್ನು ಸೂಚಿಸುತ್ತದೆ, ಅದು ನರಮಂಡಲದಲ್ಲಿ ಪ್ರಮುಖ ಸಂಪರ್ಕಗಳನ್ನು ಮಾಡುತ್ತವೆ ಮತ್ತು ನಿರ್ದಿಷ್ಟ ಶಕ್ತಿಯ
ಮಾರ್ಗಗಳನ್ನು ಉತ್ತೇಜಿಸುತ್ತವೆ. ಮುದ್ರೆಗಳು ಮೆದುಳಿನ ವಿವಿಧ ಭಾಗಗಳಿಗೆ, ಪ್ರಮುಖ ನರ ಸಂಧಿಗಳು ಮತ್ತು ಗ್ರಂಥಿಗಳಿಗೆ ಶಕ್ತಿ
ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಎಂದೂ ಹೇಳಲಾಗುತ್ತದೆ. ಮುಂಚಿನ ಯೋಗಿಗಳು ಕೈ
ಪ್ರದೇಶಗಳು ಮತ್ತು ದೇಹ ಮತ್ತು ಮೆದುಳಿನ ವಿವಿಧ ಪ್ರದೇಶಗಳಿಗೆ ಸಂಬಂಧಿಸಿದ ಅವುಗಳ ಸಂಬಂಧಿತ
ಪ್ರತಿವರ್ತನಗಳನ್ನು ನಕಾಶೆಯನ್ನು ಮಾಡಿದ್ದರು."
ರಿಫ್ಲೆಕ್ಸಾಲಜಿ ಎಂಬ ವೈದ್ಯಚಿಕಿತ್ಸೆಗೆ ಮೂಲವೇ
ಮುದ್ರಾ ಶಾಸ್ತ್ರವಾಗಿದೆ. ಅಲ್ಲಿ ಹಸ್ತ, ಪಾದ ಮತ್ತು ದೇಹದ ಅನೇಕ ಬಿಂದುಗಳನ್ನು ಅದುಮಿ ಶಕ್ತಿ ಚಾಲನೆ ಕೊಡುವ ಕಲೆ ಅಡಗಿದೆ.
ಇದಕ್ಕೆ ಅಕ್ಯುಪ್ರೆಷರ್ ಎಂದೂ ಕರೆಯುತ್ತಾರೆ, ಅಕ್ಯುಪಂಚರ್ ಇಲ್ಲಿ
ಹಸ್ತ, ಪಾದ ಮತ್ತು ದೇಹದ ಅನೇಕ ಬಿಂದುಗಳಲ್ಲಿ ಸೂಜಿ ಚುಚ್ಚಿ ಕೆಲವು
ರೋಗ ಲಕ್ಷಣ ವಾಸಿಗೆ ಪ್ರಯತ್ನಿಸಲಾಗುತ್ತೆ. ಇಂತಹ ಎಲ್ಲಾ ವಿಧಾನದ ಸನಾತನ ಧರ್ಮದ ಮೂಲ
ಮುದ್ರಾಯೋಗವಾಗಿದೆ.
ಹಸ್ತದಲ್ಲಿ
ಪಾದದಲ್ಲಿ ದೇಹದ ಅಂಗಗಳ ಸ್ಥಾನಗಳು
[1] ಶ್ರೀ ನಾರದೀಯ
ಮಹಾಪುರಾಣದಿಂದ ಸಂಗ್ರಹ
[2]
ನಾರದೀಯ ಮಹಾ ಪುರಾಣದಿಂದ
ಸಂಗ್ರಹ
[3]
ನಾರದೀಯ ಮಹಾ ಪುರಾಣದಿಂದ
ಸಂಗ್ರಹ
[4] ಶ್ರೀಮದ್ವಾಯುಪುರಾಣದಿಂದ ಸಂಗ್ರಹ
[5] ಶ್ರೀಮದ್ವಾಯುಪುರಾಣದಿಂದ
ಸಂಗ್ರಹ
[6] ಶ್ರೀಮದ್ವಾಯುಪುರಾಣದಿಂದ
ಸಂಗ್ರಹ
[7]
ಶ್ರೀಮದ್ವಾಯುಪುರಾಣದಿಂದ
ಸಂಗ್ರಹ
[8]
ಶ್ರೀಮದ್ವಾಯುಪುರಾಣದಿಂದ
ಸಂಗ್ರಹ
[9]
ಶ್ರೀಮದ್ವಾಯುಪುರಾಣದಿಂದ
ಸಂಗ್ರಹ
[10]
ಶ್ರೀಮದ್ವಾಯುಪುರಾಣದಿಂದ
ಸಂಗ್ರಹ
[11]
ಶ್ರೀಮದ್ವಾಯುಪುರಾಣದಿಂದ
ಸಂಗ್ರಹ
[12]
ಶ್ರೀಮದ್ವಾಯುಪುರಾಣದಿಂದ
ಸಂಗ್ರಹ
[13]
ಶ್ರೀಮದ್ವಾಯುಪುರಾಣದಿಂದ
ಸಂಗ್ರಹ
[14]
ಶ್ರೀಮದ್ವಾಯುಪುರಾಣದಿಂದ
ಸಂಗ್ರಹ
[15]
ಶ್ರೀಮದ್ವಾಯುಪುರಾಣದಿಂದ
ಸಂಗ್ರಹ
[16]
ಶ್ರೀಮದ್ವಾಯುಪುರಾಣದಿಂದ
ಸಂಗ್ರಹ
[17]
ಶ್ರೀಮದ್ವಾಯುಪುರಾಣದಿಂದ
ಸಂಗ್ರಹ
[18]
ಶ್ರೀಮದ್ವಾಯುಪುರಾಣದಿಂದ
ಸಂಗ್ರಹ
[19]
ಶ್ರೀಮದ್ವಾಯುಪುರಾಣದಿಂದ
ಸಂಗ್ರಹ
[20]
ಶ್ರೀಮದ್ವಾಯುಪುರಾಣದಿಂದ
ಸಂಗ್ರಹ
[21]
ಶ್ರೀಮದ್ವಾಯುಪುರಾಣದಿಂದ
ಸಂಗ್ರಹ
[22] ಬ್ರಹ್ಮವೈವರ್ತ ಪುರಾಣ - ಬ್ರಹ್ಮಖಂಡ - ಅಧ್ಯಾಯ 16 ರಿಂದ ಸಂಗ್ರಹ
[23]
ಮಂತ್ರಾದ್ಯುದ್ಗಿರಣೇನೈವ = ಮಂತ್ರಾ + ದ್ಯುತ್ + ಗಿರಣ + ಏನ
+ ಏವ ಇದರ ಅರ್ಥ "ಪ್ರಜ್ವಲಿಸುವ ಮಂತ್ರವನ್ನು ನುಂಗುವುದರಿಂದ ಚಲಿಸುವ ಅವನು"
[24] ಸಂಸ್ಕೃತದಲ್ಲಿ ಸಂಸಾರ ಎಂಬ ಪದದ ಅಕ್ಷಾರಾನುವಾದ ಅರ್ಥ “ಹೊಳಪನ್ನು
ಪಡೆಯಲು ಗೊಂದಲಕ್ಕೊಳಗಾಗುವುದು” ಎಂದು ಬರುತ್ತದೆ, ಕನ್ನಡದಲ್ಲಿ ಮಾರ್ಗ, ಪಾಠ, ದಾರಿ, ಕುಟುಂಬ, ಪ್ರಪಂಚ, ಜಗತ್ತು, ಜೀವನ, ಬದುಕು, ಇತ್ಯಾದಿ ಅರ್ಥವನ್ನು ಶಬ್ದಕೋಶದಲ್ಲಿ ನೀಡಿದ್ದಾರೆ, ಪ್ರಾಣಾಯಾಮ ಧ್ಯಾನದಿ ಬೆಳಕನ್ನು ಹೊಂದುವುದರ ಬಗ್ಗೆ ಅರಿವಿಲ್ಲದವನು
ಗೊಂದಲದಲ್ಲಿರುವವನು ಸಂಸಾರಿಯಾಗುತ್ತಾನೆ ಎಂದರೆ ಸರಿಯಾದ ಅರ್ಥ ಬರುತ್ತದೆ
[25] ಬ್ರಹ್ಮ ಎಂದರೆ
ಸಂಸ್ಕೃತದ ಅಕ್ಷರ ಅರ್ಥದಲ್ಲಿ ನೀರು ಬೆಂಕಿ ಮಾಂತ್ರಿಕ ಸೂತ್ರ ಅಂತಹ ನೀರು ಬೆಂಕಿ ಮಾಂತ್ರಿಕ
ಸೂತ್ರ ಆಗುವುದು ಮೂಲಾಧಾರದಲ್ಲಿ ಅದುವೆ ಆತ್ಮ ಶಕ್ತಿ
ಅಂತಹ ಆತ್ಮ ಶಕ್ತಿಯು ಬ್ರಹ್ಮ ಸ್ಥಾನವಾದ ಸಹಸ್ರಾರಕ್ಕೆ ಹೋಗುತ್ತದೆ, ಅದುವೇ ಬ್ರಹ್ಮ ಲೋಕ. ಅಂತಹ ಬ್ರಹ್ಮ ಲೋಕ ಪ್ರಾಪ್ತಿಯೂ ಸರ್ವೋಚ್ಚ ಜ್ಞಾನ
ಮತ್ತು ಆರೋಗ್ಯವನ್ನು ನೀಡುವುದು.
[26]
ಶಿವಮಹಾಪುರಾಣದಿಂದ ಸಂಗ್ರಹ
[27] ಮಾನವರಲ್ಲಿ ನೈಟ್ರಿಕ್ ಆಕ್ಸೈಡ್ ಅನೇಕ ಶಾರೀರಿಕ ಮತ್ತು
ರೋಗಶಾಸ್ತ್ರೀಯ ಪ್ರಕ್ರಿಯೆಗಳಲ್ಲಿ ಸಂಕೇತಿಸುವ ಅಣುವಾಗಿದೆ. ನೈಟ್ರಿಕ್ ಆಕ್ಸೈಡ್ ಹೆಚ್ಚು
ಪ್ರತಿಕ್ರಿಯಾತ್ಮಕವಾಗಿರುತ್ತದೆ (ಕೆಲವು ಸೆಕೆಂಡುಗಳ ಜೀವಿತಾವಧಿಯನ್ನು ಹೊಂದಿರುತ್ತದೆ), ಆದರೂ ಪೊರೆಗಳಾದ್ಯಂತ ಮುಕ್ತವಾಗಿ ಹರಡುತ್ತದೆ. ರಕ್ತನಾಳಗಳ
ಎಂಡೋಥೀಲಿಯಂ (ಒಳಗಿನ ಒಳಪದರ) ಸುತ್ತಮುತ್ತಲಿನ ನಯವಾದ ಸ್ನಾಯುಗಳನ್ನು ವಿಶ್ರಾಂತಿ ಮಾಡಲು
ನೈಟ್ರಿಕ್ ಆಕ್ಸೈಡ್ ಅನ್ನು ಬಳಸುತ್ತದೆ, ಇದರ ಪರಿಣಾಮವಾಗಿ ವಾಸೋಡಿಲೇಷನ್ (ನಾಳ ಹಿಗ್ಗುವಿಕೆ)
ಮತ್ತು ರಕ್ತದ ಹರಿವು ಹೆಚ್ಚಾಗುತ್ತದೆ. (ವೈಜ್ಞಾನಿಕ ಮಾಹಿತಿ ಸಂಗ್ರಹ)
No comments:
Post a Comment