ಅಧ್ಯಾಯ – 6
ಆತ್ಮ ಮತ್ತು ಪರಮಾತ್ಮ
ಆತ್ಮ ಎಂದರೆ ಏನು”?
ಆತ್ಮ = आत्म = आ त म = अ अ
त म
ಅಕ್ಷರಶಃ ಅರ್ಥ:- "ಲಕ್ಷ್ಮಿ (ಸಂಪತ್ತಿನ) ಅಮೃತ ಮಾಂತ್ರಿಕ
ಸೂತ್ರ", ಅಥವಾ “ಜೀವ ಉಸಿರು
ಶ್ರೇಷ್ಠತೆ ಅಮೃತ ಮಾಂತ್ರಿಕ ಸೂತ್ರ” ಇಂತಹ
ಸಂಪದ್ಬರಿತ ಮಾಂತ್ರಿಕ ಸೂತ್ರದ ಅಮೃತ ವಾಯು ಮೂಲಾಧಾರದಲ್ಲಿ ಉದ್ಭವಿಸಿ ಸಹಸ್ರಾರದವರೆಗೆ
ಚಲಿಸುತ್ತದೆ. ಇದರಿಂದ ಇಂದ್ರಿಯ ಸಮೂಹದ ಆಡಳಿತವನ್ನು ನಡೆಸುವ ಶಕ್ತಿ ಉದ್ಭವಿಸುತ್ತದೆ, ಅಂತಹ ರಕ್ಷಿಸುವ ಮಾಂತ್ರಿಕ ಸೂತ್ರ ಇರುವವರೆಗೆ ನಮ್ಮ
ದೇಹದಲ್ಲಿ ಪ್ರಾಣ ಇರುತ್ತದೆ. ಅದುವೇ ಆತ್ಮ, ಅಂತರಾತ್ಮ, ದೈವಿಕ ಬೆಳಕು
ಇತ್ಯಾದಿ ದೇಹದಲ್ಲಿ ಸಕಲ ಪಂಚಭೂತಗಳಿಂದ ಉದ್ಬವಿಸುವ ಶಕ್ತಿ ಚೈತನ್ಯ ಬೆಳಕಿನ ಸ್ವರೂಪವೇ ಆತ್ಮ
ಅಥವಾ ಆತ್ಮ ಶಕ್ತಿಯಾಗಿದೆ. ಇಂತಹ ಆತ್ಮ ಶಕ್ತಿ ಗುಪ್ತಗಾಮಿನಿ ಸರಸ್ಪತಿ ನದಿರೂಪದಲ್ಲಿ ಸುಷುಮ್ನಾ
ನಾಡಿಯ ಮುಖೇನ ಸಕಲ ಸಂಪರ್ಕಿತ ನಾಡಿಗಳಲ್ಲಿ ಹರಿದಾಗಲೇ ಆತ್ಮ ಶಕ್ತಿ ಮನುಜನಲ್ಲಿ
ಜಾಗೃತ-ವಾಗುವುದು, ಇದರಿಂದ ದೇಹದ
ಎಲ್ಲಾ ಕೋಶಗಳಿಗೆ ಚೈತನ್ಯ ಉಂಟಾಗಿ ಪುನರುಜ್ಜೀವನ ಪಡೆದು ಆರೋಗ್ಯ ಮತ್ತು ಅಪಾರಜ್ಞಾನ
ಉಂಟಾಗುವುದು. ಇಂತಹ ಆತ್ಮಜ್ಞಾನವೇ ಮೋಕ್ಷಕ್ಕೆ ಸಾಧನವು. ಇಂತಹ ಆತ್ಮ ಶಕ್ತಿಯನ್ನು ಹಾಗೂ
ವೈಧ್ಯಕೀಯ ಶಕ್ತಿಯನ್ನು ಹರಿ ಎಂತಲೂ, ಲಕ್ಷ್ಮಿ ಎಂತಲೂ, ಲಕ್ಷ್ಮಿನಾರಾಯಣ
ಎಂತಲೂ, ಲಕ್ಷ್ಮೀನರಸಿಂಹ ಎಂತಲೂ,
ಶಿವಶಕ್ತಿ ಎಂತಲೂ, ಭಗವಂತನೆಂತಲು,
ಮುಖ್ಯ ಪ್ರಾಣನೆಂತಲೂ, ಅನಾದಿಯಿಂದ ಋಷಿ ಮುನಿಗಳು ಸಂಬೋದಿಸುತ್ತಲೇ ದೈವಿಕ
ಭಾವನೆಯನ್ನು ನೀಡಿದ್ದಾರೆ.
ವಿಶ್ವಕರ್ಮನೇ ಯಜ್ಞವು;
ಯಜ್ಞವೇ ವಿಶ್ವಕರ್ಮಾತ್ಮಕವು.
ಸರ್ವೇಷಾಂ ವಾ
ಏಷ ಭೂತಾನಾಗಂ ಸರ್ವೇಷಾಂ
ದೇವಾನಾಮಾತ್ಮಾ
ಯದ್ಯಜ್ಞಸ್ತಸ್ಯ ಸಮೃದ್ಧಿಮನು
ಯಜಮಾನಃ ಪ್ರಜಯಾ
ಪಶುಭಿರ್ಬುಧ್ಯತೇ॥
(ಶ. ಬ್ರಾ. ೧೪-೩-೨-೧)
ಭಾವಾರ್ಥ:- ಸಕಲ ದೇವಮಾನವಾದಿಗಳಿಗೆಲ್ಲ ಈ ಯಜ್ಞವೇ ಆತ್ಮ. ಈ ಯಜ್ಞವನ್ನಾಚರಿಸುವ ಯಜಮಾನನು ಸಕಲ ಸಂಪತ್
ವೃದ್ಧಿಗಳನ್ನು ಹೊಂದುತ್ತಾನೆ ಎಂದು ಯಜ್ಞದ ವೈಶಿಷ್ಟ್ಯವು ಪ್ರಶಂಸಿತವಾಗಿದೆ. ವಿಶ್ವಕರ್ಮನು ಹೇಗೆ ಸಕಲ ದೇವಮಾನ-ವಾದಿಗಳಿಗೆಲ್ಲ
ಆತ್ಮನೋ ಹಾಗೆಯೇ ಯಜ್ಞವೂ ಸರ್ವಾತ್ಮಕವಾಗಿವೆ. ಇವೆರಡೂ ಭಿನ್ನವಲ್ಲ, ವಿಶ್ವಕರ್ಮನೇ ಯಜ್ಞವು; ಯಜ್ಞವೇ ವಿಶ್ವಕರ್ಮಾತ್ಮಕವು. ವಿಶ್ವಕರ್ಮರೂಪನಾದ ಪ್ರಜಾಪತಿಯ
ಪ್ರತಿಬಿಂಬವೇ ಯಜ್ಞವು.
ವಿವರಣೆ:- ವಿಶ್ವಕರ್ಮ ಎಂದರೆ ಜ್ಞಾನವನ್ನು ಆಹ್ವಾನಿಸಿ ಪ್ರತಿಯೊಂದು ವಸ್ತುವನ್ನು ರಚಿಸುವವನು.
ಜ್ಞಾನವನ್ನು ಆಹ್ವಾನಿ-ಸುವುದು ಹೇಗೆ ಅದುವೇ ಕುಂಡಲಿನಿ ಪ್ರಾಣಾಯಾಮ. ಅಕ್ಷರಶಃ ಇದರ ಅರ್ಥ
ಹುಡುಕಿದಾಗ "ಶ್ರೇಷ್ಠತೆಯ ಆಯುಧ, ಮಾಂತ್ರಿಕ ಸೂತ್ರವನ್ನು ಪಡೆದುಕೊಳ್ಳುವ ಶಕ್ತಿಶಾಲಿ ಆತ್ಮ" ಎಂದು ಬರುತ್ತದೆ.
ಯಾವುದರಿಂದ ಜಗತ್ತಿನ ಸಕಲ ವ್ಯವಹಾರಗಳು ನಡೆಯುವುದೋ ಅದೇ ಆತ್ಮನು
ಐತರೀಯ
ಉಪನಿಷತ್ (5-1)
ರಲ್ಲಿ ಹೀಗೆ ಹೇಳಿದೆ, ಜಗತ್ತಿನ ಮೂಲತತ್ತ್ವವಾವುದು? ಎಂಬುದೇ ಪ್ರಶ್ನೆ. ಅದು ಆತ್ಮ ಎಂದು ಉಪಾಸಿಸಬೇಕು
ಎಂಬುದೇ ಉತ್ತರ. ಈ ಆತ್ಮನು ಯಾರು? ಅವನ ಸ್ವರೂಪವೇನು? ಎಂದರೆ
ಯಾವುದರಿಂದ ಜಗತ್ತಿನ ಸಕಲ ವ್ಯವಹಾರಗಳು
ನಡೆಯುವುದೋ ಅದೇ ಆತ್ಮನು. ಈ ಆತ್ಮನೇ ಬ್ರಹ್ಮನು. ಇವನೇ ಇಂದ್ರನು. ಪ್ರಜಾಪತಿಯೂ ಇವನೇ
ಮತ್ತು ಸಕಲ ದೇವತೆಗಳೂ ಇವನೇ. ಪಂಚಭೂತಗಳೂ, ಪೃಥ್ವಿಯೂ, ವಾಯುವೂ, ಆಕಾಶವೂ, ಜಲವೂ, ಜ್ಯೋತಿಗಳೂ ಸಕಲವೂ ಇವನೇ. ಸ್ಥೂಲ ಮತ್ತು ಸೂಕ್ಷ್ಮ ರೂಪವಾದ ಸಕಲ ವಸ್ತುಗಳಿಗೂ ಇವನೇ ಮೂಲವು.
ಆತ್ಮವೇ ಪರಮಾತ್ಮ
ಆತ್ಮನೆಂದರೆ: ಆಪ್ನೋತಿ ಇತಿ ಆತ್ಮಾ, ಎಲ್ಲವನ್ನೂ ತುಂಬಿಕೊಂಡಿರುವ ಪೂರ್ಣತತ್ತ್ವ -
ಆತ್ಮನಿಗೇ ಪ್ರತ್ಯಗಾತ್ಮಾ ಎಂದೂ ಹೆಸರು – ಅಂದರೆ ಪರಮಾತ್ಮ
ಆತ್ಮಾ ಇತಿ, ಆಪ್ನೋತೇಃ
ಅತ್ತೇಃ ಅತತೇರ್ವಾ ಪರಃ ಸರ್ವಜ್ಞಃ
ಸರ್ವಶಕ್ತಿಃ
ನಿತ್ಯಶುದ್ಧಬುದ್ಧಮುಕ್ತಸ್ವಭಾವಃ ಅಜಃ ಅಜರಃ
ಅಮರಃ ಅಮೃತಃ
ಅಭಯಃ ಅದ್ವಯಃ ಆತ್ಮಾ
ಶಂಕರರ ಐತರೋಪನಿಷದ್ಭಾಷ್ಯ ೧.೧.೧
ಭಾವಾರ್ಥ:- ಆತ್ಮನೆಂದರೆ: ಆಪ್ನೋತಿ ಇತಿ ಆತ್ಮಾ, ಎಲ್ಲವನ್ನೂ ತುಂಬಿಕೊಂಡಿರುವ ಪೂರ್ಣತತ್ತ್ವ; ಆತ್ಮನೆಂದರೆ, ಅತ್ತಿ ಇತಿ
ಆತ್ಮಾ: ಜೀವರೂಪದಿಂದ ಶಬ್ದಾದಿವಿಷಯಗಳನ್ನು ಅನುಭವಿಸುತ್ತಿರುವ ಪ್ರತ್ಯಗಾತ್ಮತತ್ತ್ವ; ಅತತೀತ್ಯಾತ್ಮಾ, ನಮ್ಮ ಹತ್ತಿರದಲ್ಲೇ ಇರುವ, ನಮ್ಮೊಳಗೇ ಇರುವ ಅಂತಸ್ತತ್ತ್ವವೇ ಆತ್ಮಾ; ಆತ್ಮನೆಂದರೆ ನಮಗಿಂತ ಭಿನ್ನವಾಗಿ ದೂರದಲ್ಲಿರುವ
ಯಾವುದೋ ಒಂದು ಪರೋಕ್ಷತತ್ವ್ವವಲ್ಲ. ಹತ್ತು ವಿಶೇಷಣಗಳನ್ನು ಕೊಟ್ಟಿರುತ್ತಾರೆ.: ಪರಃ ಆತ್ಮಾ,
ಸರ್ವಜ್ಞ ಆತ್ಮಾ, ಸರ್ವಶಕ್ತಿಃ ಆತ್ಮಾ, ನಿತ್ಯಶುದ್ಧಬುದ್ಧಮುಕ್ತಸ್ವಭಾವಃ ಆತ್ಮಾ, ಅಜಃ ಆತ್ಮಾ, ಅಜರಃ ಆತ್ಮಾ, ಅಮರಃ ಆತ್ಮಾ, ಅಮೃತಃ ಆತ್ಮಾ,
ಅಭಯಃ ಆತ್ಮಾ, ಅದ್ವಯಃ ಆತ್ಮಾ. ಈ ಆತ್ಮನಿಗೇ ಪ್ರತ್ಯಗಾತ್ಮಾ ಎಂದೂ ಹೆಸರು.
ಇವನಿಗೇ ವೇದಾಂತದಲ್ಲಿ ಬ್ರಹ್ಮ, ಅಕ್ಷರ,
ಪುರುಷ, ಸತ್ಯ, ದೇವ, ಈಶ್ವರ, ಭಗವಾನ್, ಪರಮಾತ್ಮಾ ಎಂದೆಲ್ಲಾ ಹೆಸರುಗಳು.
ಆತ್ಮಶಕ್ತಿ ಚಲನೆಗೆ ಮುದ್ರೆಗಳ ಮಹತ್ವ
ಮಹಾವಿದ್ವಾನ್ ಎಚ್ ಪಿ ವೆಂಕಟರಾವ್ ರವರು ತಾವು
ಅನುವಾದಿಸಿದ ಸಾಯಣ್ಣಭಾಷ್ಯ ಋಗ್ವೇದ ಸಂಹಿತೆ ಭಾಗ
೨೯ ರಲ್ಲಿ ಆತ್ಮದ ಬಗ್ಗೆ ಮಹತ್ತರ ವಿವರಣೆ ನೀಡಿದ್ದಾರೆ, ಮೊದಲಿಗೆ ವಿದ್ವಾಂಸರಲ್ಲಿ ಕ್ಷಮೆ ಕೋರುತ್ತಾ ಮಂಡಲ ೧೦
ಅನುವಾಕ-೭ ಸೂಕ್ತ 90 ಶ್ಲೋಕ 1 ನಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತಾ ಗಮನಿಸೋಣ
ಸಹಸ್ರ ಶೀರ್ಷಾ
ಪುರುಷಃ ಸಹಸ್ರ ಅಕ್ಷಃ ಸಹಸ್ರ ಪಾತ್.
ಸ ಭೂಮಿಂ ವಿಶ್ವ
ತೋ ವೃತ್ ವ ಅತ್ ಯತಿ ಷ್ಠ ದ ದಶ ಅಂಗುಲಮ್
ಭಾಷಾರ್ಥ:- ಸಹಸ್ರ (ಅನಂತ) ಶೀರ್ಷಾ (ತುದಿ/ತಲೆ) ಪುರುಷಃ
(ಗರ್ಭದಲ್ಲಿ ವೈದ್ಯತೆಯನ್ನು ಶುದ್ಧೀಕರಿಸುವ ಹಮ್ ಶಬ್ದ) ಸಹಸ್ರ (ಅನಂತ) ಅಕ್ಷಃ (ಅಕ್ಷ ರೇಖೆ)
ಸಹಸ್ರ (ಅನಂತ) ಪಾತ್ (ರಕ್ಷಿಸುವ/ಬೀಳುತ್ತಿರುವ) ಸ (ವಾಯು/ಧ್ಯಾನ) ಭೂಮಿಂ (ಉಸಿರಾಟ ಚಲನೆಯ
ಮಾಂತ್ರಿಕ ಸೂತ್ರ) ವಿಶ್ವ ತೋ (ಶಕ್ತಿಯುತವಾದ ಅಮೃತವನ್ನು ಕರೆಯುವ ಭ್ರೂಣದಲ್ಲಿನ ಹಿರಿಮೆ) ವೃತ್
ವ (ಶಕ್ತಿಯುತ ಆಯ್ಕೆ ಮಾಡಲು) ಅತ್ (ಪಡೆಯಲು) ಯತಿಷ್ಠ
(ಎಲ್ಲರಿಗೂ ಪವಿತ್ರವಾದ ಋಷಿ ಶಿಕ್ಷಕ) ದ (ತಯಾರಿಸುವ/ಕೊಡುವ /ಕೊಡುಗೆ) ದಶ (ಹತ್ತು)
ಅಂಗುಲ (ಬೆರಳುಗಳಿಗೆ ಅಂಟಿರುವ) ಮ (ಮಾಂತ್ರಿಕ
ಸೂತ್ರ)
ಭಾವಾರ್ಥ:- ಅನಂತ ತುದಿಯುಳ್ಳ (ನಾಡಿಗಳ ಸಂಪರ್ಕದ ತುದಿ) ಗರ್ಭದಲ್ಲಿ ವೈದ್ಯನನ್ನು (ಅಮೃತವನ್ನು) ಶುದ್ಧೀಕರಿಸುವ ಹಮ್ ಶಬ್ದ ಅನಂತವಾಗಿ ರಕ್ಷಿಸುವ ಅನಂತ
ಅಕ್ಷ (ಅಕ್ಷ ಎಂದರೆ ಧಾರ್ಮಿಕ ಜ್ಞಾನ, ಹಾವು, ಆತ್ಮ, ಎಂಬುದಾಗಿದೆ) ರೇಖೆ (ಆತ್ಮ ಶಕ್ತಿ ಚಲನೆಯ
ನಾಡಿಗಳು). ವಾಯು ಉಸಿರಾಟ ಚಲನೆಯ ಮಾಂತ್ರಿಕ ಸೂತ್ರ ಶಕ್ತಿಯುತವಾದ ಅಮೃತವನ್ನು ಕರೆಯುವ
ಭ್ರೂಣದಲ್ಲಿನ ಹಿರಿಮೆ ಶಕ್ತಿಯುತ ಆಯ್ಕೆ ಮಾಡಲು ಪಡೆಯಲು ಎಲ್ಲರಿಗೂ ಪವಿತ್ರವಾದ ಋಷಿ ಶಿಕ್ಷಕ
ಕೊಡುಗೆ ಹತ್ತು ಬೆರಳುಗಳಿಗೆ ಅಂಟಿರುವ (ಮುದ್ರೆಗಳ) ಮಾಂತ್ರಿಕ ಸೂತ್ರ.
ವಿವರಣೆ:- ಅನಂತ ನಾಡಿಗಳ ಸಂಪರ್ಕ ತುದಿ ಇರುವ ಗರ್ಭದಲ್ಲಿ
ಅಮೃತವನ್ನು ಶುದ್ದೀಕರಿಸುವ ಹಮ್ ಶಬ್ದದಿಂದ ಅನಂತವಾಗಿ ರಕ್ಷಿಸುವ ಅನಂತ ಆತ್ಮ ಶಕ್ತಿ ಚಲನೆಯ
ನಾಡಿಗಳು. ಉಸಿರಾಟವೇ ಒಂದು ರೀತಿಯ ಚಲನೆಯ ಮಾಂತ್ರಿಕ ಸೂತ್ರ, ಇದು ಶಕ್ತಿಯುತವಾದದ್ದನ್ನು ಆಯ್ಕೆ ಮಾಡಲು ಪಡೆಯಲು
ಅಮೃತವನ್ನು ಸೆಳೆಯುವ ಗರ್ಭದಲ್ಲಿನ ಹಿರಿಮೆ, ಎಲ್ಲರಿಗೂ ಪವಿತ್ರ ಶಿಕ್ಷಕ ಹತ್ತು ಬೆರಳುಗಳಲ್ಲಿ ಇರುವ ಮುದ್ರೆಗಳ ಮಾಂತ್ರಿಕ ಸೂತ್ರ. (ಇಲ್ಲಿ ಆತ್ಮಶಕ್ತಿ
ಚಲನೆಗೆ ಮುದ್ರೆಗಳ ಮಹತ್ವವನ್ನು ಸಾರುತ್ತಿದೆ ವೇದ)
ಅವನ ಸ್ವರೂಪವು ಗೋಚರಾತೀತವಾದುದು
ಪುರುಷ ಏವೇದಂ
ಸರ್ವಂ ಯದ್ಭೂತಂ ಯಚ್ಛ ಭವ್ಯಂ ।
ಉತಾಮೃತತ್ವ
ಸ್ಯೇಶಾನೋ ಯದನ್ನೇನಾತಿರೋಹತಿ ||
2
(ಈ ಶ್ಲೋಕದಲ್ಲಿ
ಪುರುಷ ಎಂಬ ಪದಕ್ಕೆ "ಗರ್ಭದಲ್ಲಿ ಶುದ್ಧೀಕರಿಸುವ ಹಮ್ ಶಬ್ದ" ಎಂಬುದನ್ನೂ ಅಳವಡಿಸಿ
ವಿದ್ವಾಂಸರು ನೀಡಿರುವ ಅರ್ಥವನ್ನೇ ಅಳವಡಿಸಿದೆ)
ಭಾವಾರ್ಥ:- ನಮಗೆ ಗೋಚರವಾಗುವ ಸಕಲ ಜಗತ್ತೂ ಎಂದರೆ ವರ್ತಮಾನಕಾಲದ ಸಕಲ ಜಗತ್ತೂ ಆ ಗರ್ಭದಲ್ಲಿ
ಶುದ್ಧೀಕರಿಸುವ ಹಮ್ ಶಬ್ದ ಅಂಶವೇ ಆಗಿದೆ. ಹಿಂದೆ ಇದ್ದ ಜಗತ್ತೂ ಅವನೇ ಮುಂದೆ ಸಂಭವಿಸುವುದೂ
ಅವನೇ ಎಂದರೆ ಅತ್ಮಾಂಶವಲ್ಲದೆ ಬೇರೆಯಲ್ಲ. ಅವನು ಅಮೃತತ್ವಕ್ಕೆ ಒಡೆಯನು: ಪ್ರಾಣಿಗಳಿಗೆ
ಭೋಗಸಾಧನವಾದ ಅನ್ನದಿಂದ ಅವನು ಬೆಳೆಯುವಂತೆ ಕಾಣುತ್ತಾನೆ. ಆದರೆ ಅವನ ಸ್ವರೂಪವು
ಗೋಚರಾತೀತವಾದುದು.
ಇದರಿಂದ ತಿಳಿದುಬರುವುದೇನೆಂದರೆ ಧಾರ್ಮಿಕ
ಧ್ಯಾನದಲ್ಲಿ ಹಮ್ ಎಂಬ ಮಂತ್ರದೀ ಉಸಿರನ್ನು ಸುಷುಮ್ನಾ ನಾಡಿಗೆ ಕಳಿಸುವ ಪ್ರಕ್ರಿಯೆಯಲ್ಲಿ ಕೆಲವು
ಮುದ್ರೆಯಿಂದ ಕುಂಡಲಿನಿ ಜಾಗೃತಿ ಮಾಡಿ ಎಲ್ಲಾ ನರನಾಡಿಯಲ್ಲಿ ಹರಿಸುವ ಶಕ್ತಿಯೇ ಆತ್ಮ ಶಕ್ತಿ
ಅದುವೇ ನಮ್ಮ ಆತ್ಮ, ದೇಹದ ಹಿಂದಿನ
ಉಸಿರಾಟದಲ್ಲೂ ಅವನೇ ಮುಂದಿನ ಉಸಿರಾಟದಲ್ಲೂ ಅವನೇ ಎನ್ನುವ ಗೋಪ್ಯ ಸೂಚನೆ ಇದೆ. ಗರ್ಭದಲ್ಲಿರುವ
ಅವನ ಬಗ್ಗೆ ವಿಸ್ತಾರ ಅಧ್ಯಾನದಿಂದ ತಿಳಿದು ಬರುವುದೇನೆಂದರೆ ಅವನು ಅನ್ನ ವಾಯು, ನೀರು, ಔಷದಿಗಳ ಅಮೃತ ಸ್ವರೂಪ, ಇಂತಹ
ಶಕ್ತಿಯನ್ನೇ ದುರ್ಗಾ ಶಕ್ತಿಯಾಗಿ ಕಂಡರು, ಶ್ರೀಹರಿಯಾಗಿ ಕಂಡರು, ಶ್ರೀ
ಎಂದರೆ ಸರಸ್ಪತಿ ಎಂತ ಅರ್ಥವೂ ಇದೇ ಲಕ್ಷ್ಮೀ ನಾರಾಯಣನ ಸ್ವರೂಪದಲ್ಲಿ ಕಂಡರು, ಲಕ್ಷ್ಮೀ ನರಸಿಂಹನ ಸ್ವರೂಪದಲ್ಲಿ ಕಂಡರು, ದೇಹದಲೆಲ್ಲಾ ಚಲಿಸುವ ನಾಗವಾಯು ರೂಪದ ಮೇಲೆ
ವಿಶ್ರಾಂತನಾದ ಲಕ್ಷ್ಮೀ (ಸಂಪತ್ತು) ಸಹಿತ
ವಿಷ್ಣು, ರಂಗನಾಥ, ಪಧ್ಮನಾಭಸ್ವಾಮಿ, ಅಲ್ಲಿಗೆ
ಆತ್ಮ ಸ್ವರೂಪನಾಗಿ ಪರಮಾತ್ಮ ನಮ್ಮ ದೇಹದ ಕಣಕಣದಲ್ಲಿ ಇರುವನು ಎಂದು ಹಿರಿಯರ ಮಾತು ಇಂದಿಗಾದರೂ
ಅರ್ಥ ಮಾಡಿಸಿದೆಯಾ ಬ್ರಹ್ಮಮಹರ್ಷಿ.
ವಾಯುರೂಪದಲ್ಲಿ ಸರ್ವಾಂತರ್ಯಾಮಿಯೂ ಸರ್ವವ್ಯಾಪಕನೂ
ಅಯಂ ವಾಯುಃ
......... ಯಶ್ಚಾಯಮಸ್ಮಿನ್ವಾಯೌ ತೇಜೋಮಯೋ ಅಮೃತಮಯಃ ....
ಯಶ್ಚಾಯಮಧ್ಯಾತ್ಮಮ್
ಪ್ರಾಣಃ ...... ಯೋ ಅಯಮಾತ್ಮೇದಂ ಬ್ರಹ್ಮೇದಂ ಸರ್ವಂ।
(ಬೃಹದಾರಣ್ಯಕ ಉಪನಿಷತ್. ೨-೫-೩ )
ಭಾವಾರ್ಥ:- ವಾಯುರೂಪದಲ್ಲಿ ಸರ್ವಾಂತರ್ಯಾಮಿಯೂ ಸರ್ವವ್ಯಾಪಕನೂ ಆದ ಈ ಪರಬ್ರಹ್ಮನು ಪ್ರಾಣರೂಪದಲ್ಲಿ
ಸಕಲ ಶರೀರದಲ್ಲಿಯೂ ಪ್ರವೇಶಿಸಿದ್ದಾನೆ. ಇವನೇ ಸರ್ವಾತ್ಮಕನಾದ ಪರಬ್ರಹ್ಮನು.
ಹೀಗೆ ಬೃಹದಾರಣ್ಯಕ ಉಪನಿಷತ್. ೨-೫-೩ ರಿಂದ 2-5-14 ರವರೆಗೆ ಹೀಗೆ ಹೇಳಿದೆ "ಎಲ್ಲಾ ಪಂಚ
ಭೂತಗಳಿಗೂ ಮಧುವಾಗಿಯೂ, ಸರ್ವವ್ಯಾಪಿಯೂ
ಆಗಿರುವ ಪರಮ ಪುರುಷನು ಅಮೃತಮಯನೂ, ತೇಜೋಮಯನೂ ಆಗಿ ಸಕಲ ಭೂತಗಳಲ್ಲಿ ಕಿವಿಯಾಗಿ ಇರುವ ಇವನೇ ಪರಬ್ರಹ್ಮನು. ಮಾನಸರೂಪವಾದ
ತೇಜೋಮಯನಾಗಿರುತ್ತಾನೆ, ವಾಗ್ಮಯರೂಪದಲ್ಲಿ
ಸ್ಥಾಪಿತನಾಗಿದ್ದಾನೆ, ವಿದ್ಯುದ್ರೂಪದಿಂದ
ಇದ್ದಾನೆ, ಶಬ್ದರೂಪದವನಾಗಿದ್ದಾನೆ,
ಹೃದಯ ಆಕಾಶ ರೂಪದಲ್ಲಿಯೂ ಸ್ಥಾಪಿತನು,
(ಹೃದಯ ಎಂದರೆ ಅಕ್ಷರಾರ್ಥದಲ್ಲಿ
"ಧ್ಯಾನದಲ್ಲಿನ ಹಮ್ ಧ್ವನಿ ಬೆಳಕನ್ನು
ನೀಡುತ್ತದೆ" ಆಕಾಶ ಎಂದರೆ ಅಕ್ಷರಾರ್ಥದಲ್ಲಿ "ಭೂಮಿಯಲ್ಲಿನ (ಮೂಲಾ-ಧಾರದಲ್ಲಿನ) ಜೀವ
ಉಸಿರು ಒಂದು ಆಯುಧ"), ಧರ್ಮ
ರೂಪದಲ್ಲೂ ಬೆಳಗುತ್ತಾನೆ, ಸತ್ಯಾತ್ಮಕನಾಗಿರುತ್ತಾನೆ,
ಮಾನವೀಯತೆಯ ರೂಪದಲ್ಲಿ ಸಕಲ ಭೂತಗಳಲ್ಲೂ
ಪ್ರವೇಶಿಸಿ ಅಮೃತಮಯನೂ ತೇಜೋಮಯನೂ ಆಗಿ ಸರ್ವಾತ್ಮಕನಾಗಿದ್ದಾನೆ. ಇವನೇ ಪರಬ್ರಹ್ಮನು, ಸಕಲ ಭೂತಗಳಿಗೂ ಆತ್ಮಸ್ವರೂಪನಾಗಿದ್ದಾನೆ, ಸಕಲ ಚರಾಚರ ಜಗತ್ತಿಗೂ ಆತ್ಮರೂಪನಾದ ಇವನೇ
ಸಕಾಲಕ್ಕೂ ಪ್ರಭುವು".
ಶುದ್ದಾತ್ಮನೇ ಪರಮಾತ್ಮನು
ಏಕಾದಶವಿಕಾರಾತ್ಮಾ
ಕಲಾಸಮಾರಸಮ್ಭೃತಃ |
ಮೂರ್ತಿಮನ್ತಂ
ಹಿ ತಂ ವಿದ್ಧಿ ನಿತ್ಯಂ ಯೋಗಜಿತಾತ್ಮಕಮ್
ಮಹಾಭಾರತ
ವನಪರ್ವ 213-18
ಭಾವಾರ್ಥ:- ಜೀವನು ಪ್ರಾಣ, ಇಂದ್ರಿಯ
ಮುಂತಾದ ಹನ್ನೊಂದು ಬಗೆಯ ಇಂದ್ರಿಯಗಳ ವಿಕಾರಗಳಲ್ಲಿ (ಲಿಂಗಶರೀರಗಳಲ್ಲಿ) ತಾದಾತ್ಮ್ಯವನ್ನು
ಹೊಂದಿ ಷೋಡಶಕಲೆಗಳಿಂದ ಕೂಡಿ ಮೂರ್ತ-ವಾದ ಸೂಕ್ಷ್ಮ ಸ್ಥೂಲದೇಹಗಳನ್ನು ಹೊಂದುತ್ತಾನೆ. (ನಿತ್ಯನೂ,
ಯೋಗದಿಂದ ಬುದ್ದಿಯನ್ನು
ವಶಪಡಿಸಿಕೊಂಡಿರುವವನೂ ಆದ ಶುದ್ಧಾತ್ಮನೇ ವಿಕಾಸದಲ್ಲಿ ಹೀಗೆ ಮೂರ್ತರೂಪವನ್ನು ತಾಳುತ್ತಾನೆ.
ಇದನ್ನೇ ಯೋಗಬಲದಿಂದ ಜಯಿಸಲ್ಪಡುವ ಆತ್ಮನೆಂದು ನೀನು ತಿಳಿಯುವವನಾಗು. ಜೀವವು ಪ್ರಾಣಾದಿಗಳಿಂದ
ಬೇರೆಯಾದುದು.)
ತಸ್ಮಿನ್ಯಹ್
ಸಂಸ್ಥಿತೋ ಹ್ಯಗ್ನಿರ್ನಿತ್ಯಂ ಸ್ಥಾಲ್ಯಾಮಿವಾಹಿತಃ |
ಆತ್ಮಾನಂ ತಂ
ವಿಜಾನೀಹಿ ನಿತ್ಯಂ ಯೋಗಜಿತಾತ್ಮಕಮ್ ||
ಮಹಾಭಾರತ
ವನಪರ್ವ 213-19
ಭಾವಾರ್ಥ:- ಪಾತ್ರೆಯಲ್ಲಿ ಇಡಲ್ಪಟ್ಟ ಅಗ್ನಿಯು ಉರಿಯುವಂತೆ-ಈ ಷೋಡಶಕಲಾ ಸಮುದಾಯವೆಂಬ ಶರೀರದ
ಮಧ್ಯದಲ್ಲಿ ಜೀವವೆಂಬ ಅಗ್ನಿಯು ಉರಿಯುತ್ತದೆ. ಯೋಗಮಾರ್ಗಗಳಿಂದ ಜಯಿಸಲ್ಪಡುವ ಅದನ್ನೇ ಆತ್ಮನೆಂದು
ತಿಳಿಯುವವನಾಗು.
ದೇವೋ ಯಃ
ಸಂಸ್ಥಿತಸ್ತಸ್ಮಿನ್ನಬ್ಬಿನ್ದುರಿವ ಪುಷ್ಕರೇ |
ಕ್ಷೇತ್ರಜ್ಞಂ
ತಂ ವಿಜಾನೀಹಿ ನಿತ್ಯಂ ಯೋಗಜಿತಾತ್ಮಕಮ್
ಮಹಾಭಾರತ
ವನಪರ್ವ 213-20
ಭಾವಾರ್ಥ:- ಯೋಗದಿಂದ ಬುದ್ದಿಯನ್ನು ವಶಪಡಿಸಿಕೊಂಡು ತಾವರೇ ಎಲೆಯಲ್ಲಿನ ನೀರಿನ ಕಣದಂತೆ ಕ್ಷೇತ್ರಜ್ಞನೂ,
ನಿತ್ಯನೂ ಆದ ಜೀವಾತ್ಮನು ಯಾವುದಕ್ಕೂ
ಅಂಟಿಕೊಳ್ಳದೇ ಹದಿನಾರು ಕಲೆಗಳ ಮಧ್ಯದಲ್ಲಿ ಅಡಗಿದ್ದಾನೆ. ಯೋಗದಿಂದ ಆತ್ಮೋದಯ ಹೊಂದಿದ ಅವನನ್ನೇ
ಕ್ಷೇತ್ರಜ್ಞನನ್ನಾಗಿ ನೀನು ತಿಳಿ.
ಷೋಡಶಕಲಾ ೧೬ - ಪ್ರಾಣ, ಶ್ರದ್ದೆ, ಆಕಾಶ, ವಾಯು, ಅಗ್ನಿ, ಪೃಥಿವೀ, ಇಂದ್ರಿಯ, ಮನಸ್ಸು, ಅನ್ನ, ವೀರ್ಯ, ತಪಸ್ಸು, ಮಂತ್ರ, ಕರ್ಮ, ಲೋಕ, ನಾಮ.
ನಚ
ಪ್ರಾಣಸಂಜ್ಞೋ ನ ವೈ ಪಂಚವಾಯು ರ್ನ ವಾ ಸಪ್ತಧಾತು ರ್ನ ವಾ ಪಂಚಕೋಶಃ।
ನ ವಾ
ಕ್ಪಾಣಿಪಾದೌನ ಚೋಪಸ್ಥಪಾಯೂ ಚಿದಾನಂದ ರೂಪಃ ಶಿವೋಹಂ ಶಿವೋಹಮ್ ॥ 2 ॥
ನಿರ್ವಾಣ ಷಟ್ಕ
ಶ್ರೀ ಶಂಕರಾಚಾರ್ಯರಿಂದ ರಚಿತ
ಭಾವಾರ್ಥ:- ಪಂಚಪ್ರಾಣಗಳು, ಪಂಚವಾಯುಗಳು,
ಏಳು ಧಾತು-ಗಳು, ಐದು ಕೋಶಗಳು, ಬಾಯಿ, ಕೈ, ಕಾಲು, ವಿಸರ್ಜನೇಂದ್ರಿಯ, ಜನನೇಂದ್ರಿಯಗಳು ಯಾವುದೂ ನಾನಲ್ಲ ನಾನು ಚಿದಾನಂದ-ರೂಪನು,
ನಾನು ಶಿವಸ್ವರೂಪನು. ನಮ್ಮ ಶರೀರದ
ರಚನಾಂಶಗಳು, ಶರೀರದೊಳಗಿರುವ
ವಿಷಯಗಳನ್ನು ಗ್ರಹಿಸುವ ಇಂದ್ರಿಯಗಳು, ಯಾವುವೂ ಸ್ವತಂತ್ರವಾಗಿ ಎಲ್ಲವನ್ನು ತಿಳಿಯುವ ಶಕ್ಕಿ ಹೊಂದಿಲ್ವ ಆ ಪರಬ್ರಹ್ಮನ ಮೂಲಕವಾಗಿ
ಎಲ್ಲವನ್ನೂ ತಿಳಿಯುವುದರಿಂದ, ಇವೆಲ್ಲವೂ
ಆ ಆತ್ಮವೇ.
ವೇದಗಳ ಅರ್ಥವನ್ನು ಚೆನ್ನಾಗಿ ತಿಳಿದಿರುವ ಬುದ್ಧಿವಂತರಿಗೆ ಆತ್ಮ
ಜ್ಞಾನ
ವೀತರಾಗಭಯಕ್ರೋಧೈರ್ಮುನಿಭಿರ್ವೇದಪಾರಗೈಃ
।
ನಿರ್ವಿಕಲ್ಪೋ
ಹ್ಯಯಂ ದೃಷ್ಟಃ ಪ್ರಪಞ್ಚೋಪಶಮೋಽದ್ವಯಃ ॥ ೩೫
ಅಧ್ಯಾಯ - 2 - ಮಂಡೂಕ್ಯ ಕಾರಿಕ
ಭಾವಾರ್ಥ:- ಬಾಂಧವ್ಯ, ಭಯ ಮತ್ತು
ಕೋಪದಿಂದ ಮುಕ್ತರಾಗಿರುವ ಮತ್ತು ವೇದಗಳ ಅರ್ಥವನ್ನು ಚೆನ್ನಾಗಿ ತಿಳಿದಿರುವ ಬುದ್ಧಿವಂತರಿಂದ,
ಈ (ಆತ್ಮ) ಸಂಪೂರ್ಣವಾಗಿ ಎಲ್ಲಾ
ಕಲ್ಪನೆಗಳಿಲ್ಲದೆ, ಬಹುವಿಧದ
ಭ್ರಮೆಯಿಂದ ಮತ್ತು ದ್ವಂದ್ವದಿಂದ ಮುಕ್ತವಾಗಿದೆ.
ವಿವರಣೆ:- ಎಲ್ಲ ಕಳಂಕಗಳಿಂದ ಮುಕ್ತರಾಗಿರುವ ಮತ್ತು
ಉಪನಿಷತ್ತುಗಳ ಸಾರವನ್ನು ಕುರಿತು ಪ್ರಬುದ್ಧರಾಗಿರುವ ಸನ್ಯಾಸಿಗಳು (ಪರಿತ್ಯಾಗದ ಪುರುಷರು)
ಮಾತ್ರ ಪರಮಾತ್ಮನನ್ನು ಸಾಕ್ಷಾತ್ಕರಿಸಿ-ಕೊಳ್ಳಬಹುದು. ಯಾರು ತಮ್ಮ ಭಾವಾವೇಶದಿಂದ ಮನಸ್ಸು ಮಸುಕಾದ ವ್ಯರ್ಥವಾದ
ತರ್ಕಶಾಸ್ತ್ರಜ್ಞರು, ಇತ್ಯಾದಿ.
ಮತ್ತು ಯಾರು ತಮ್ಮ ಸ್ವಂತ ನಂಬಿಕೆಗಳು ಮತ್ತು ಅಭಿಪ್ರಾಯಗಳಲ್ಲಿ ಸತ್ಯವನ್ನು ಮಾತ್ರ ಕಂಡುಕೊಳ್ಳುತ್ತಾರೆ
ಅವರಿಂದ ಅರಿಯಲಾಗುವುದಿಲ್ಲ.
ತಸ್ಮಾದೇವಂ
ವಿದಿತ್ವೈನಮ್ ಅದ್ವೈತೇ ಯೋಜಯೇತ್ಸ್ಮೃತಿಮ್ ।
ಅದ್ವೈತಂ
ಸಮನುಪ್ರಾಪ್ಯ ಜಡವಲ್ಲೋಕಮಾಚರೇತ್ ॥ ೩೬ ॥
ಭಾವಾರ್ಥ:- ಆದುದರಿಂದ ಆತ್ಮನನ್ನು ಹೀಗೆಂದು ತಿಳಿದುಕೊಂಡಾಗ, ನಿಮ್ಮ ಗಮನವನ್ನು ದ್ವಂದ್ವವಲ್ಲದ್ದರ ಮೇಲೆ ಕೇಂದ್ರೀಕರಿಸಿ. ದ್ವಂದ್ವವಲ್ಲದದನ್ನು
ಗ್ರಹಿಸಿದ ನಂತರ ಜಗತ್ತಿನಲ್ಲಿ ಅಸೂಕ್ಷ್ಮ ವಸ್ತುವಿನಂತೆ ವರ್ತಿಸುತ್ತಾರೆ.
ದೇವರನ್ನು ತನ್ನಲ್ಲಿ ಕಾಣಬೇಕು ವಿಗ್ರಹಗಳನ್ನು ಅಜ್ಞಾನಿಗಳಿಗೆ ಸಹಾಯ
ಮಾಡಲು ರಚಿಸಲಾಗಿದೆ
ಆತ್ಮನಿ
ಶಿವದೃಷ್ಟಿಃ ತೀರ್ಥೇ ದಾನೇ ಜಪೇ ಯಜ್ಞೇ ಕಾಷ್ಠೇ ಪಾಷಾಣಕೇ ಸದಾ ।
ಶಿವಂ ಪಶ್ಯತಿ
ಮೂಢತಮ ಶಿವೇ ದೇಹೇ ಪ್ರತಿಷ್ಠಿತೇ ।। ೫೭ ।।
ಅನ್ತಃಸ್ಥಂ ಮಾಂ
ಪರಿತ್ಯಜ್ಯ ಬಹಿಷ್ಠಂ ಯಸ್ತು ಸೇವತೇ ।
ಹಸ್ತಸ್ಥಂ
ಪಿಣ್ಡಮುತ್ಸೃಜ್ಯ ಲಿಹೇತ್ ಕೂರ್ಪರಮಾತ್ಮನಃ ।। ೫೮ ।।
ಶಿವಮಾತ್ಮನಿ
ಪಶ್ಯನ್ತಿ ಪ್ರತಿಮಾಸು ನ ಯೋಗಿನಃ ।
ಅಜ್ಞಾನಾಂ
ಭಾವನಾರ್ಥಾಯ ಪ್ರತಿಮಾಃ ಪರಿಕಲ್ಪಿತಾಃ ।। ೫೯ ।।
ಯೋಗದರ್ಶನ
ಉಪನಿಷತ್
ಭಾವಾರ್ಥ:- ಶಿವನ ಕಲ್ಪನೆ ತನ್ನಲ್ಲಿ. ಮೂರ್ಖ ಜನರು ತೀರ್ಥಗಳಲ್ಲಿ, ಉಡುಗೊರೆಗಳಲ್ಲಿ, ಜಪಗಳಲ್ಲಿ, ಯಜ್ಞಗಳಲ್ಲಿ, ಮರದ ಅಥವಾ
ಕಲ್ಲಿನ ವಿಗ್ರಹಗಳಲ್ಲಿ ಶಿವವನ್ನು ನೋಡುತ್ತಾರೆ, ಆದರೂ ಶಿವ ಯಾವಾಗಲೂ ತಮ್ಮ ದೇಹದಲ್ಲಿ ಉಳಿಯುತ್ತಾನೆ. ಹೀಗೆ, ಬಾಹ್ಯವನ್ನು ಆರಾಧಿಸುವವರು, ಅಂತಃಕರಣವನ್ನು ತ್ಯಜಿಸಿದವರು, ತಮ್ಮ ಕೈಯಿಂದ ಆಹಾರವನ್ನು ತಿರಸ್ಕರಿಸಿ ತಮ್ಮ ಮೊಣಕಾಲನ್ನು
ನೆಕ್ಕುವವರಂತೆ. ಯೋಗಿಗಳು ತಮ್ಮೊಳಗೆ ಶಿವನನ್ನು ಕಾಣುತ್ತಾರೆ, ವಿಗ್ರಹಗಳಲ್ಲಿ ಅಲ್ಲ. ವಿಗ್ರಹಗಳನ್ನು ಅಜ್ಞಾನಿಗಳಿಗೆ ಸಹಾಯ
ಮಾಡಲು ರಚಿಸಲಾಗಿದೆ.
ಪ್ರತ್ಯೇಕತೆಯನ್ನು ಅವಲಂಬಿಸಿರುವವರು ಎಂದಿಗೂ ಆತ್ಮದ ಸಹಜ
ಪರಿಶುದ್ಧತೆಯನ್ನು ಅರಿತುಕೊಳ್ಳಲು ಸಾಧ್ಯವಿಲ್ಲ
ವೈಶಾರದ್ಯಂ ತು
ವೈ ನಾಸ್ತಿ ಭೇದೇ ವಿಚರತಾಂ ಸದಾ ।
ಭೇದನಿಮ್ನಾಃ
ಪೃಥಗ್ವಾದಾಸ್ತಸ್ಮಾತ್ತೇ ಕೃಪಣಾಃ ಸ್ಮೃತಾಃ ॥ ೯೪ ॥
ಭಾವಾರ್ಥ:- ಯಾವಾಗಲೂ ಪ್ರತ್ಯೇಕತೆಯನ್ನು ಅವಲಂಬಿಸಿರುವ-ವರು ಎಂದಿಗೂ ಆತ್ಮದ ಸಹಜ ಪರಿಶುದ್ಧತೆಯನ್ನು
ಅರಿತುಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಪ್ರತ್ಯೇಕತೆಯ ಕಲ್ಪನೆಯಲ್ಲಿ ಮುಳುಗಿರುವವ-ರನ್ನು ಮತ್ತು
(ಘಟಕಗಳ) ಪ್ರತ್ಯೇಕತೆಯನ್ನು ಪ್ರತಿಪಾದಿಸುವವರನ್ನು ಸಂಕುಚಿತ ಮನೋಭಾವದವರು ಎಂದು
ಕರೆಯಲಾಗುತ್ತದೆ.
ಪಂಚಕೋಶಗಳಲ್ಲಿ ಜ್ಞಾನಮಯಕೋಶವನ್ನು ಆತ್ಮ ಎನ್ನುವರು
ಜ್ಞಾನ ಎಂದರೆ ತಿಳುವಳಿಕೆ, ಅರಿವು, ಬುದ್ದಿಯ ಆಕಾರಕ್ಕೆ ಪರಿಣಾಮಕ್ಕೆ ಜ್ಞಾನ ಎನ್ನುವರು,
ಮನದಲ್ಲಿ ಪ್ರತಿಫಲಿಸಿದ ಜೀವಚೈತನ್ಯವೇ
ಜ್ಞಾನವೆನಿ-ಸುವುದು, ಆತ್ಮವಿದ್ಯೆ,
ಜ್ಞಾನಕಾಂಡ ಎಂದರೆ ವೇದಗಳಲ್ಲಿ
ಬ್ರಹ್ಮಸ್ವರೂ-ಪವನ್ನು ತಿಳಿಸತಕ್ಕ ಭಾಗ, ಮೆದುಳಿನಿಂದ ಶರೀರದ ಬೇರೆ ಬೇರೆ ಭಾಗಗಳಿಗೆ ಅಭಿಪ್ರಾಯಗಳನ್ನು ಒಯ್ಯುವ ಮತ್ತು ಶರೀರದ ಬೇರೆ
ಬೇರೆ ಭಾಗಗಳಿಂದ ಮೆದುಳಿಗೆ ಸಂಪರ್ಕ ಕಲ್ಪಿಸುವ ನರಗಳಿಗೆ ಜ್ಞಾನತಂತು ಎನ್ನುವರು, ಇತಿಹಾಸದಲ್ಲಿ ಕರ್ಮಪಂಥ, ಜ್ಞಾನಪಂಥ, ಶಕ್ತಿಪಂಥ, ಭಕ್ತಿಪಂಥ ಎಂಬ
ನಾಲ್ಕು ಪಂಥಗಳ ವಿಕಾಸವನ್ನು ಕಾಣಬಹುದು, ಮೋಕ್ಷ ಮಾರ್ಗಕ್ಕೆ ನಾಲ್ಕು ಭೂಮಿಕೆಗಳು ಎನ್ನುತ್ತಾರೆ, ವಾಗ್ಭೂಮಿಕೆ, ಮನೋಭೂಮಿಕೆ, ಜ್ಞಾನಭೂಮಿಕೆ,
ಶಾಂತಾತ್ಮಭೂ-ಮಿಕೆ, ಪಂಚಕೋಶಗಳಲ್ಲಿ ಜ್ಞಾನಮಯ ಕೋಶವನ್ನು ಆತ್ಮ
ಎನ್ನುವರು, ಜ್ಞಾನಾರ್ಜನೆಗಾಗಿ
ಮಾಡುವ ಪವಿತ್ರವಾದ ಅಭ್ಯಾಸವೇ ಜ್ಞಾನಯಜ್ಞ ಎನ್ನುವರು, ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳ (ವಾಸನೆ) ಜ್ಞಾನವನ್ನುಂಟು ಮಾಡಿ
ಕೊಡುವ ಇಂದ್ರಿಯವನ್ನು ಜ್ಞಾನೇಂದ್ರಿಯ ಎನ್ನುವರು. ಗ್ರಹಣ ಶಕ್ತಿಯುಳ್ಳ ಇಂದ್ರಿಯಗಳು, (ತಿಳಿದುಕೊಳ್ಳುವ ಶಕ್ತಿಯುಳ್ಳ ಇಂದ್ರಿಯಗಳು) ಕಿವಿ,
ಚರ್ಮ, ಕಣ್ಣು, ನಾಲಿಗೆ ಮತ್ತು ಮೂಗು - ಇವು ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯ ಅಂಗಗಳು. ಜ್ಞಾನ ಎಂದರೆ ಅಕ್ಷರಶಃ ಅರ್ಥ "ಅವಿಶ್ರಾಂತವಾಗಿ
ಕಂಡುಹಿಡಿ-ಯುವುದು ಅಥವಾ ಅವಿಶ್ರಾಂತವಾಗಿ ಕಲಿಯುವುದು" ಎಂಬುದಾಗಿದೆ.
ಆತ್ಮನ ಸ್ವರೂಪವನ್ನು ಚೆನ್ನಾಗಿ ಮಥನಮಾಡಿ ಆತ್ಮನು
ಎಂದಿಗೂ ಜನನ ಮರಣಗಳಿಲ್ಲದ ಅಮೃತ ಸ್ವರೂಪನೇ ಎಂಬ ಬ್ರಹ್ಮವಿದ್ಯಾಚಾರ್ಯನಾದ ಯಮದೇವನು ಉಪದೇಶಗಳ
ಖಚಿತ-ವಾದ ಸಿದ್ಧಾಂತವನ್ನೇ ಸರಳವಾದ ಶೈಲಿಯಿಂದ ಪ್ರತಿಪಾದಿಸಿ ಶ್ರೀ ಸಚ್ಚಿದಾನಂದೇಂದ್ರ
ಸರಸ್ವತೀಸ್ವಾಮಿಗಳವರು ತಮ್ಮ ಕಾಠಕೋಪ-ನ್ಯಾಸಮಂಜರಿ
ಗ್ರಂಥದಲ್ಲಿ ಅಳವಡಿಸಿರುತಾರೆ. ನಮ್ಮ ಪರಮಾರ್ಥ ಸ್ವರೂಪಕ್ಕೆ ಬ್ರಹ್ಮ ಅಥವಾ ಆತ್ಮ ಎಂದು
ಹೆಸರು. ಅದನ್ನು ತಿಳಿದುಕೊಳ್ಳುವ ವಿದ್ಯೆಗೆ ಬ್ರಹ್ಮವಿದ್ಯೆ, ಅಧ್ಯಾತ್ಮವಿದ್ಯೆ, ಉಪನಿಷತ್ತು ಎಂಬ ಬೇರೆ ಬೇರೆಯ ಹೆಸರುಗಳಿವೆ.
ಕಾಳಿದಾಸನು "ವಾಗರ್ಥಾವಿವ ಸಂಪೃಕ್ತೌ ವಾಗರ್ಥ
ಪ್ರತಿಪತ್ತಯೇ ಜಗತಃ ಪಿತರೌ ವಂದೇ ಪಾರ್ವತಿ ಪರಮೇಶ್ವರೌ" ಎಂಬ ಶ್ಲೋಕವನ್ನು ರಚಿಸಿ ಆತ್ಮ
ಜ್ಞಾನದ ವಿವರಣೆ ನೀಡಿದ್ದಾರೆ, ಇದರ
ಅಕ್ಷರಾನುವಾದ ಹೀಗಿದೆ "ಒಬ್ಬ ಪವಿತ್ರ ವ್ಯಕ್ತಿ, ಅಂತಿಮ ವಿಮೋಚನೆಯ ಅಪೇಕ್ಷೆಯುಳ್ಳವನು, ಜೀವ ಉಸಿರಾಟದ ರಕ್ಷಕನಾಗಿ, ಶ್ರೇಷ್ಠತೆಯನ್ನು ಶಕ್ತಿಯುತವಾಗಿ ಒಟ್ಟಿಗೆ ಸಂಪರ್ಕಕ್ಕೆ
ತರುವ, ಈ ರೀತಿಯಲ್ಲಿ ಅಮೃತವನ್ನು
ಇಳಿಸಲು ಋಷಿಯು ಶುಭ ಪ್ರಾರ್ಥನೆ ಕರೆಯುವನು. ವಾಯುವು ವೈದ್ಯ ತಂದೆ ಮತ್ತು ತಾಯಿಯಾಗಿ ರಕ್ಷಿಸಲು
ಕಳುಹಿಸಲು, ಶಕ್ತಿಯುತವಾದ ಬೆಂಕಿಯ
ಅಮೃತವನ್ನು ಕುಡಿಯಲು ವ್ಯಾಪಿಸಿ, ಆಯುಧ
ಶಕ್ತಿಯುತವಾದ ಅಗ್ನಿ ಸಹಾನುಭೂತಿಯನ್ನು ವಿನಿಮಯ ಮಾಡಿಕೊಳ್ಳಲು ಹೊಳಪನ್ನು
ರಕ್ಷಿಸುತ್ತದೆ." ಅರ್ಥಾತ್ ಪವಿತ್ರ ವ್ಯಕ್ತಿಗೆ
ವಾಯುವು ವೈದ್ಯ ತಂದೆ ತಾಯಿಯಾಗಿ ಶ್ರೇಷ್ಠತೆಯನ್ನು ಸುಷುಮ್ನಾ ನಾಡಿಯ ಚಕ್ರಗಳಲ್ಲಿ
ಸಂಪರ್ಕಕ್ಕೆ ತರುವ ಋಷಿಯೂ ಅಮೃತವನ್ನು ದೇಹದಲ್ಲಿ ಸಂಗ್ರಹಿಸಲು ಅದರೊಂದಿಗೆ ಅಜಪ
ಪ್ರಾರ್ಥನೆಯನ್ನು ಜೀವ ಉಸಿರಾಟದೊಂದಿಗೆ ಮಾಡುವನು. ಅಂತಹ ಅಮೃತ ಕುಡಿದು ವ್ಯಾಪಿಸಿ ಹರಡುವ ಬೆಳಕು
ಆತ್ಮವಾಗಿದೆ. ಸರ್ವವನ್ನೂ ತಿಳಿಯುವ ಪರಮ ಜ್ಞಾನವೇ ಆತ್ಮ ಜ್ಞಾನ ಎನ್ನುತ್ತಾರೆ ವೇದಾಂತಿಗಳು.
ಆತ್ಮ ಎಂಬ ಅಕ್ಷರ ಅರ್ಥ "ಜೀವ ಉಸಿರು ಅಮೃತ
ಮಾಂತ್ರಿಕ ಸೂತ್ರ". ಜೀವದ ಉಸಿರಲ್ಲಿ ಅಮೃತವನ್ನು ಪಡೆಯುವ ಮಾಂತ್ರಿಕ ಸೂತ್ರ ಅಥವಾ
ಶಕ್ತಿಯೇ ಆತ್ಮ ಎಂಬುದಾಗಿದೆ. ಇಂತಹ ಅಮೃತದಿಂದಲೇ ಆರೋಗ್ಯ ಮತ್ತು ಬ್ರಹ್ಮಜ್ಞಾನ ಉಂಟಾಗುವುದು.
ಸಂಸ್ಕೃತದ ಅಕ್ಷರ ಪದದಲ್ಲಿ ಆತ್ಮ ನೋಡುವ ಬಗ್ಗೆ
ಹೇಗೆ ಎಂದು ಶಂಕರಾಚಾರ್ಯರು ಮತ್ತು ರಾಮಾನುಜಚಾರ್ಯರು ಹೇಳಿದ್ದಾರೆ. ಸಂಸ್ಕೃತದಲ್ಲಿ ಅಕ್ಷ ಎಂದರೆ
ಧಾರ್ಮಿಕ ಜ್ಞಾನ, ಹಾವು, ಆತ್ಮ, ಎಂಬುದಾಗಿದೆ. ಕ್ಷರ
ಎಂದರೆ ನೀರು, ದೇಹ,
ಮೋಡ, ಕರಗುವಂತದ್ದು ಎಂಬುದಾಗಿದೆ. ಅ ಎಂದರೆ ಜೀವ ಉಸಿರು, ಕ್ಷ ಎಂದರೆ ಮಿಂಚು ಎಂಬುದಾಗಿದೆ, ರ ಎಂದರೆ
ಬೆಂಕಿ, ಉಜ್ವಲತೆ. ಅಕ್ಷರ
ಎಂದರೆ ವರ್ಣಮಾಲೆಯ ಅಕ್ಷರ, ಉಚ್ಚಾರಾಂಶ,
ಶಬ್ದ ಎಂಬುದೂ ಆಗಿದೆ. ಸಮಗ್ರವಾಗಿ ಅಕ್ಷರಗಳ
ಅರ್ಥದಲ್ಲಿ (ಅಕ್ಷರ ಎಂದರೆ) ಜೀವ ಉಸಿರು ಮಿಂಚಿನ ಉಜ್ವಲತೆ/, ಉಜ್ವಲತೆಯ ಧಾರ್ಮಿಕ ಜ್ಞಾನ/, ಉಜ್ವಲತೆಯ ಆತ್ಮ/, ಜೀವ ಉಸಿರು ನೀರು/ ಎಂಬುದಾಗಿರುತ್ತದೆ. ಇಲ್ಲಿಯೂ ಜೀವದ
ಉಸಿರಲ್ಲಿ ಉಜ್ವಲತೆಯ ಅಮೃತದ ನೀರು ಆತ್ಮ ಎಂಬುದನ್ನೂ ತೋರಿಸುತ್ತದೆ.
ಶಂಕರಾಚಾರ್ಯರು ಅಕ್ಷರ ಶಬ್ದದ ಅರ್ಥವನ್ನು ವಿವರಿಸುತ್ತ "ವಿನಾಶ ರಹಿತಃ ಭಗವತಃ
ಮಾಯಾಶಕ್ತಿಃ" ಎಂದರೆ ನಾಶರಹಿತನಾದ ಭಗವಂತ ಮಾಯಾಶಕ್ತಿಯೆಂದು ತಿಳಿಸಿದ್ದಾರೆ.
ರಾಮಾನುಜಾಚಾರ್ಯರು ಹೇಳಿರುವಂತೆ, "ಆತ್ಮ ಚೈತನ್ಯ ಸ್ವರೂಪವೂ ಹೌದು; ಜೈತನ್ಯ ಗುಣಕವೂ ಆಗಿರುವುದು. ಆದು ಸ್ವರೂಪತಃ ನಿರ್ವಿಕಾರ; ಗುಣತಃ ಸವಿಕಾರ. ಕ್ರಿಯಾರೂಪಗಳಾದ ಜ್ಞಾತೃತ್ಪ ಕರ್ತೃತ್ವ
ಭೋಕ್ತ್ಯತ್ವಗಳು ಆತ್ಮನ ನೈಜ ಧರ್ಮಗಳಾದುದರಿಂದ ಆತ್ಮ ಬಹುತ್ವವು ಸ್ಥಾಪಿತವಾಗುತ್ತದೆ.”
ಶ್ರೀ ರಾಮಾನುಜ ಎಂಬ 1945 ರಲ್ಲಿ ಬರೆದಿರುವ ಗ್ರಂಥದಲ್ಲಿ ಶ್ರೀ ಎಸ್.ಎನ್.
ರಾಘವಾಚಾರ್ಯರು ಹೀಗೆ ಬರೆಯುತ್ತಾರೆ “ಉಪನಿಷತ್ತುಗಳಲ್ಲಿ ಪ್ರತಿಪಾದಿತವಾಗಿರುವ ಆತ್ಮ ಬ್ರಹ್ಮಗಳ
ಬಗ್ಗೆ ಇರುವ ಸೂತ್ರ ಗ್ರಂಥ ಬಾದರಾಯಣರ "ಬ್ರಹ್ಮಸೂತ್ರ” ಇದಕ್ಕೆ ಶಂಕರ, ರಾಮಾನುಜ ಮಧ್ವ, ವಲ್ಲಭ, ನಿಂಬಾರ್ಕ, ಯಾದವ, ಭಾಸ್ಕರ, ಶ್ರೀಕಂಠ ಮುಂತಾದ ಹಲವು ಜನ ಮಹನೀಯರು ವ್ಯಾಖ್ಯಾನ ಬರೆದು
ತಮ್ಮ ತಮ್ಮ ಮತವನ್ನು ಸ್ಥಾಪಿಸಿದ್ದಾರೆ. ಒಂದೇ ಸೂತ್ರ ಗ್ರಂಥವಾದರೂ ಆಚಾರ್ಯರ ದೃಷ್ಟಿ ಭೇದದಿಂದ
ಬೇರೆ ಬೇರೆ ಮತಗಳ, ಹಲವುಬಾರಿ
ವಿರುದ್ದವಾದ ವಾದಗಳುಳ್ಳ ಮತಗಳ, ಆವಿರ್ಭಾವಕ್ಕೆ
ಕಾರಣವಾಯಿತು. ಮೇಲೆ ಹೇಳಿದ ಮಹನೀಯರ ಭಾಷ್ಯಗಳು ಬರುವ ಮುನ್ನವೇ ಉಪನಿಷದ್ವಾಕ್ಯಗಳ ಅರ್ಥ
ವಿವರಣೆಯಲ್ಲಿ ಹಲವು ಸಂಪ್ರದಾಯಗಳು ಏರ್ಪಟ್ಟಿದ್ದುವು. ಅಂತೆಯೇ ಶ್ರೀ ರಾಮಾನುಜರೂ ತಮ್ಮ
ಭಾಷ್ಯವನ್ನು ಆರಂಭ ಮಾಡುತ್ತ ತಾವು ಸೂತ್ರಗಳನ್ನು ವೃತ್ತಿಕಾರರಾದ ಬೋಧಾಯನ ಮತ್ತು ಟಂಕ, ಗುಹದೇವ, ದ್ರಮಿಡಾಚಾರ್ಯರೆಂಬ ಭಾಷ್ಯಕಾರರು, ಭಾರುಚಿ, ಕಪರ್ದಿ ಮುತಾದವರು ತೋರಿಸಿರುವ ರೀತಿಯಲ್ಲಿಯೇ ವ್ಯಾಖ್ಯಾನ ಮಾಡಲಾಗುತ್ತದೆ ಎಂದು
ಸಾರಿದ್ದಾರೆ. ಆದುದರಿಂದ ಬ್ರಹ್ಮಸೂತ್ರಗಳ ಮೇಲೆ ಬರೆದಿರುವ “ಶ್ರೀಭಾಷ್ಯ” ದಲ್ಲಿ ಏನೋ ಯಾವುದೋ
ಸಂಪ್ರದಾಯ ವಿರುದ್ಧವಾದ ನವೀನವಾದ ಅರ್ಥಕಲ್ಪನೆ ಇರುವುದರ ಬದಲು ಸಂಪ್ರದಾಯದ ಜಾಡನ್ನೇ ಹಿಡಿದು
ಹೊಸ ರೀತಿಯಲ್ಲಿ ಹಳೆಯ ಅರ್ಥವನ್ನು ಸಮಗ್ರವಾಗಿ ಸಮನ್ವಯಿಸಿರುವುದು ಕಂಡು ಬರುತ್ತದೆ.”
ಅಂದಿನ ಕಾಲದಲ್ಲೇ ಅಸ್ಪೃಶ್ಯತೆಯನ್ನು ಸಮಾಜದಿಂದ
ತೊಡೆದು ಹಾಕಿದ ಪ್ರಥಮ ಆಚಾರ್ಯರೇ ಶ್ರೀ ರಾಮಾನುಜಾ-ಚಾರ್ಯರು. ಸಮಾಜದಲ್ಲಿ ತೀರ ಹಿಂದುಳಿದ
ಜನಾಂಗದವರನ್ನು ತಮ್ಮ ಹತ್ತಿರ ಕರೆದು ಅವರಿಗೆ ದೇವಾಲಯ ಪ್ರವೇಶ ಮಾಡಿಸಿ, ಅವರನ್ನು ಶ್ರೇಷ್ಠ ಕುಲದವರು ಎಂದು ಕರೆದ
ಮಹಾಮಹಿಮರು. ವಿಶಿಷ್ಟಾದ್ವೈತ ಸಿದ್ಧಾಂತವು ಭಗವಂತನ ಲೋಕಪಿತೃತ್ವ ಹಾಗೂ ಮಾನವನ ವಿಶ್ವಭ್ರಾತೃತ್ವ
ಎರಡನ್ನೂ ನಿರೂಪಿಸಿ, ಬ್ರಹ್ಮವನ್ನು
ಸಾಧಿಸಿದರೆ ಉಳಿದೆಲ್ಲವನ್ನೂ ಸಾಧಿಸಿದಂತೆ ಎಂಬ ಉಪನಿಷತ್ತಿನ ತತ್ವವನ್ನು ಸಮರ್ಥಿಸಿದರು.
ಪ್ರತ್ಯಕ್ಷ, ಅನುಮಾನ ಮತ್ತು
ಶಬ್ದಗಳ ಮೂಲಕ ಉಂಟಾಗುವ ಜ್ಞಾನವೇ ಸರಿಯಾದುದು, ಎಲ್ಲದರ ಅಸ್ತಿತ್ವಕ್ಕೂ ಪರಮಾಧಾರ, ಎಲ್ಲ ವಸ್ತುಗಳ ಆದಿ ಅಂತಿಮ ಕಾರಣ, ಎಲ್ಲ ಅನುಭವಗಳ ಗುರಿ ಬ್ರಹ್ಮನ್. ಏಕಮೇವಾ ದ್ವಿತೀಯವಾದ ಬ್ರಹ್ಮವು ತಾನು ಅನೇಕವಾಗಬೇಕೆಂದು
ಸಂಕಲ್ಪಿಸಿ ಅಸಂಖ್ಯಾತ ಚೇತನ-ಅಚೇತನ ವ್ಯಕ್ತಿ ವಸ್ತುಗಳಾಗಿ ರೂಪುಗೊಳ್ಳುತ್ತದೆ. ಎಲ್ಲ ಕಾರ್ಯಗಳ
ಪರಮಕರ್ತೃವಾದ ಬ್ರಹ್ಮವು ಜೀವ ಪ್ರಕೃತಿಗಳಿಂದ ವಿಲಕ್ಷಣವಾಗಿದ್ದರೂ, ಅವುಗಳನ್ನು ಅದರಿಂದ ಬೇರ್ಪಡಿಸಲಾಗದು. ಪ್ರಪಂಚವು ಬ್ರಹ್ಮ
ಸ್ವರೂಪವಾದುದಾಗಿದ್ದು, ಪ್ರಕೃತಿಯ
ವ್ಯಾಪಾರಗಳು, ಮಾನವನ ಬೆಳವಣಿಗೆಗೆ
ಎರಡೂ ಭಗವಂತನ ಸಂಕಲ್ಪದ ಸ್ವತಃ ಸಿದ್ಧಿ ಆಗಿದೆ, ಎಂದು ಸಾರಿದರು.
ಪರಮಾತ್ಮ ಅಂದರೆ ಯಾರು ?
ಪರಮಾತ್ಮ = परमात्म
= प र म अ त म ಅಕ್ಷರ ಅರ್ಥ “ಗರ್ಭಾಶಯದ ನೀರಿನಲ್ಲಿ ಜೀವ ಉಸಿರಾಟದಿಂದ
ರಕ್ಷಿಸುವ ಮಾಂತ್ರಿಕ ಸೂತ್ರದ ಹೊಳಪು” ಅಥವಾ “ಜೀವ ಉಸಿರು ಅಮೃತ ಮಾಂತ್ರಿಕ ಸೂತ್ರದಿಂದ
ರಕ್ಷಿಸುವ ಮಾಂತ್ರಿಕ ಸೂತ್ರದ ಪ್ರಕಾಶ ಮಾನತೆ”. ಅಲ್ಲಿಗೆ ಪರಮಾತ್ಮ ಅಂದರೆ ನಮ್ಮಲ್ಲಿ ಇರುವ
ಆತ್ಮಸ್ವರೂಪನೇ ಪರಮಾತ್ಮ ಎಂದು ಅರ್ಥ ಮಾಡಿಕೊಳ್ಳಬೇಕು.
ಇಲ್ಲಿ ಭಗವಂತ, ಭಗವತಿ,
ಭಗವಾನ್, ದೇವ, ದೇವಿ ಎಂಬ ಪದಗಳಿಂದಲೂ ಪರಮಾತ್ಮನನ್ನು
ಕರೆಯಲಾಗುತ್ತದೆ. ಭಗವಂತ ಎಂಬುದರ ಅಕ್ಷರ ಅರ್ಥ, “ಚಂದ್ರ ಭವನವನ್ನು (ಸಹಸ್ರಾರವನ್ನು) ತಲುಪುವ ಶಕ್ತಿಯುತವಾದ ಶ್ಲಾಘಿತ ಅಮೃತ” ಭಗವತಿ ಪದಕ್ಕೆ
ಅಕ್ಷರ ಅರ್ಥ, “ಚಂದ್ರ ಭವನವನ್ನು
(ಸಹಸ್ರಾರವನ್ನು) ತಲುಪುವುದು ಶಕ್ತಿಶಾಲಿ ಶಾಂತತೆ”
ಭಗವಾನ್ ಎಂಬ ಪದಕ್ಕೆ ಅಕ್ಷರ ಅರ್ಥ, “ಚಂದ್ರ ಭವನವನ್ನು (ಸಹಸ್ರಾರವನ್ನು) ತಲುಪುವುದು ಶಕ್ತಿಶಾಲಿ ಆತ್ಮ”, ದೇವ ಎಂದರೆ “ರಕ್ಷಿಸಲು ಶಕ್ತಿಯುತವಾದದ್ದು,”
ದೇವಿ ಎಂದರೆ, “ಸೋಮದಿಂದ (ಅಮೃತದಿಂದ) ರಕ್ಷಣೆ”.
ದೇವರು ಎಲ್ಲೆಲ್ಲೂ ಇದ್ದಾನೆ ನಮ್ಮಲ್ಲೂ ಇದ್ದಾನೆ
ಉಪತ್ವಾಗ್ನೇ
ದಿವೇದಿವೇ ದೋಷಾವಸ್ಪರ್ಧಿಯಾ ವಯಮ್ |
ನಮೋ ಭರಂತ ಏಮಸಿ
|| 7
ಋಗ್ವೇದ 1-1-7
ಭಾವಾರ್ಥ;-
ಸ್ವಾಮಿ ದಯಾನಂದಸರಸ್ಪತಿ:_
ನಾವು ಕೇವಲ ಜಪಮಾಲೆಯನ್ನು ಹಿಡಿದು
ನಾಮಸ್ಮರಣೆ ಮಾಡಿದೊಡನೆ ಅಥವಾ ಪುಸ್ತಕಗಳಲ್ಲಿ ಅಥವಾ ಸಾವಿರಾರು ಬಾರಿ ಭಗವಂತನ ನಾಮವನ್ನು ಬರೆದರೆ
ಸಾಕು ಭಗವಂತನ ಪ್ರಾಪ್ತಿಯಾಗುತ್ತದೆ ಎಂದು ಭಾವಿಸುತ್ತೇವೆ. (ತಜ್ಜಪಸ್ತದರ್ಥಭಾವನಮ್-ಯೋಗದರ್ಶನ)
ಭಗವಂತನ ಸಾನ್ನಿಧ್ಯವನ್ನು ಹೊಂದಬೇಕಾದರೆ ಮೊದಲು ಸುಜ್ಞಾನಿಗಳಾಗಬೇಕು. ತದನಂತರ ಜ್ಲಾನಪೂರ್ವಕ
ಕರ್ಮಗಳನ್ನು ಮಾಡಬೇಕು. ಮಂತ್ರದ ಭಾವ-ಹೇ ಪ್ರಕಾಶಸ್ವರೂಪ ಸರ್ವೋಪಾಸ-ನೀಯನಾದ ಪರಮಾತ್ಮ
ನಾವೆಲ್ಲರೂ ಸುಜ್ಗಾನಿಗಳಾಗಿ ಜ್ಲಾನಪೂ-ರ್ವಕ ಶ್ರೇಷ್ಠಕರ್ಮಗಳನ್ನು ಮಾಡುತ್ತಾ, ಹಾಗೂ ನಿನ್ನ ಶ್ರೇಷ್ಠಗುಣ-ಗಳನ್ನು ನಮ್ಮ
ಜೀವನದಲ್ಲಿ ಅಳವಡಿಸಿಕೊಂಡು ಪ್ರತಿದಿನ ಹಗಲುರಾತ್ರಿ ನಿರಂತರ ನಿನ್ನ ಉಪಾಸನೆಯನ್ನು ಮಾಡುತ್ತಾ
ನಿನ್ನ ಸಾನ್ನಿಧ್ಯವನ್ನು ಹೊಂದುತ್ತೇವೆ. ಭಗವಂತನು ಕೇವಲ ದೇವಸ್ಥಾನದಲ್ಲಿ ಮಾತ್ರವಲ್ಲ, ಎಲ್ಲಾ ಸ್ಥಾನಗಳೂ ದೇವಸ್ಥಾನಗಳೇ ಆಗಿವೆ.
ಎಂಬುದನ್ನು ಯಾವತ್ತೂ ಮರೆಯಬಾರದು.
ಅಷ್ಟಾಂಗಯೋಗದ ಮೂಲಕ ಪರಮಾತ್ಮನ ಆನಂದರಸ ಪ್ರಾಪ್ತ
ವಾಯೋ ತವ
ಪ್ರಪೃಂಚತೀ ಧೇನಾ ಜಿಗಾತಿ ದಾಶುಷೇ |
ಉರೂಚೀ
ಸೋಮಪೀತಯೇ || 3
ಋಗ್ವೇದ 1-2-3
ಭಾವಾರ್ಥ;-
ಸ್ವಾಮಿ ದಯಾನಂದಸರಸ್ಪತಿ:_ ಈ ಮಂತ್ರದಲ್ಲಿ ಶ್ಲೇಷಾಲಂಕಾರದಿಂದ ಉಭಯಾರ್ಥವನ್ನು
ಬೋಧಿಸಲಾಗಿದೆ. ಸರ್ವಜ್ಞನಾದ ಪರಮಾತ್ಮನು ಸೃಷ್ಟಿಯ ಆದಿಯಲ್ಲಿಯೇ ಮಾನವ-ಮಾತ್ರರ ಕಲ್ಕಾಣಕ್ಕೋಸ್ಕರ
ವೇದವಾಣಿಯನ್ನು ಚತುರ್ವೇದಗಳ ಮೂಲಕ ಕೊಟ್ಟಿದ್ದಾನೆ. ಸರ್ವಜ್ಞಾನಗಳ ಆಕರವಾದ ವೇದವಾಣಿಯು ಸಂಪೂರ್ಣ
ಪ್ರಪಂಚದ ಜ್ಞಾನವನ್ನು ಪಡೆದು ಅಷ್ಟಾಂಗಯೋಗದ ಮೂಲಕ ಪರಮಾತ್ಮನ ಆನಂದರಸವನ್ನು ಪಾನ ಮಾಡಿದ ಮತ್ತು
ನಿಸ್ವಾರ್ಥಭಾವದಿಂದ ಸರ್ವಜನ ಹಿತಾರ್ಥ ಸಮಸ್ತ ಜ್ಞಾನವನ್ನು ದಾನ ಮಾಡುವ ವಿದ್ವಾಂಸರಿಗೆ
ಪ್ರಾಪ್ತವಾಗುತ್ತದೆ. ಅಂತಹ ಶ್ರೇಷ್ಠಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಂಡು ಯೋಗಸಾಧನೆಯ ಮೂಲಕ
ನಾವು ಕೂಡಾ ವೇದವಾಣಿಯನ್ನು ಪ್ರಾಪ್ತ ಮಾಡಿಕೊಳ್ಳಬಹುದು. ಅದೇ ರೀತಿ ವಾಯುವಿನ ಸಹಾಯದಿಂದ
ಉಚ್ಚರಿಸಲ್ಪಡುವ ವಾಣಿಯ ನಾಲ್ಕು ಸ್ವರೂಪ ಪರಾ, ಪಶ್ಯಂತಿ, ಮಧ್ಯಮ, ವೈಖರೀ ಮತ್ತು ವಾಣಿಯ ಸ್ವರೂಪವನ್ನು ಬಲ್ಲವನಾಗಿ
ನಿಸ್ವಾರ್ಥಭಾವದಿಂದ ಸರ್ವರಿಗೆ ಸಕಲ ಜ್ಞಾನವನ್ನು ಕೊಡುವ ವಿದ್ವಾಂಸನು ವಾಚಸ್ಪತಿಯಾಗುತ್ತಾನೆ.
ಅನುದಿನವೂ ಪರಮಾತ್ಮನನ್ನು ಆರ್ಜಿಸೋಣ
ಯೋ ರಾಯೋsವನಿರ್ಮಹಾನ್
ತ್ಸುಪಾರಃ ಸುನ್ವತಃ ಸಖಾ |
ತಸ್ಮಾ ಇಂದ್ರಾಯ
ಗಾಯತ || ೧೦
ಋಗ್ವೇದ 1-4-10
ಭಾವಾರ್ಥ;-
ಸ್ವಾಮಿ ದಯಾನಂದಸರಸ್ಪತಿ:_
ಪರಮಾತ್ಮನು ಸರ್ವಜ್ಯೇಷ್ಠನೂ, ಸರ್ವಶ್ರೇಷ್ಠನೂ, ಸರ್ವಜ್ಞನೂ, ಸರ್ವಗಮ್ಯನೂ, ಭಕ್ತವತ್ಸಲನೂ,
ಸರ್ವೋಪಾಸ್ಯನೂ ಸರ್ವರಕ್ಷಕನೂ ಆಗಿದ್ದಾನೆ.
ಯಾರು ಪರಿಪೂರ್ಣ ಸತ್ಯಜ್ಞಾನವುಳ್ಳವರಾಗಿ ಧರ್ಮಾಚರಣೆಯಲ್ಲಿ, ಸತ್ಯಾಚರಣೆಯಲ್ಲಿ ನಿಸ್ವಾರ್ಥಭಾವನೆಯಿಂದ ಪರೋಪಕಾರದಲ್ಲಿ
ನಿರತರಾಗಿರುತ್ತಾರೋ ಹಾಗೂ ಅನನ್ಯ ಭಕ್ತಿಯಿಂದ ಅತ್ಯಂತ ಶ್ರದ್ಧೆಯಿಂದ ಅವನನ್ನು ಉಪಾಸಿಸುತ್ತಾರೋ
ಅವರೆಲ್ಲರ ಸಮಸ್ತ ಮನೋಕಾಮನೆಗಳನ್ನು ಇಷ್ಟಾರ್ಥಗಳನ್ನು ಪರಿಪೂರ್ಣವಾಗಿ ಈಡೇರಿಸುತ್ತಾನೆ. ಉತ್ತಮ
ಸನ್ಮಿತ್ರನಾಗಿ ಸರ್ವವಿಧದಲ್ಲಿ ಸುಖವನ್ನು ಕೊಡುತ್ತಾನೆ. ಜ್ಞಾನ ಐಶ್ವರ್ಯವನ್ನೂ, ಆಯುರಾರೋಗ್ಯವನ್ನೂ ಕೊಟ್ಟು ಸಕಲ ವಿಧದಲ್ಲಿ
ರಕ್ಷಣೆಯನ್ನು ಮಾಡುತ್ತಾ ಎಲ್ಲವನ್ನು ಸಕಾಲದಲ್ಲಿ ಪ್ರಾಪ್ತವಾಗುವಂತೆ ಮಾಡುತ್ತಾನೆ. ಅಂತಹ
ಶರಣಾಗತ ಭಕ್ತವತ್ಸಲನನ್ನು ನಾವೆಲ್ಲರೂ ಅನನ್ಯ ಭಕ್ತಿಯಿಂದ ಅತ್ಯಂತ ಶ್ರದ್ಧೆಯಿಂದ ಅನುದಿನವೂ
ಸ್ತುತಿಸೋಣ, ಅರ್ಜಿಸೋಣ, ಉಪಾಸಿಸೋಣ.
ಮೋಕ್ಷ ಪಡೆದ ನಂತರವೂ ಜನ್ಮವಿರುತ್ತದೆ
ಕಸ್ಯ ನೂನಂ
ಕತಮಸ್ಯಾಮೃತಾನಾಂ ಮನಾಮಹೇ ಚಾರು ದೇವಸ್ಯ ನಾಮ |
ಕೋ ನೋ ಮಹ್ಯಾ
ಅದಿತಯೇ ಪುನರ್ದಾತ್ ಪಿತರಂ ಚ ದೃಶೇಯಂ ಮಾತರಂ ಚ ||
1
ಋಗ್ವೇದ 1-24-1
ಭಾವಾರ್ಥ;-
ಸ್ವಾಮಿ ದಯಾನಂದಸರಸ್ಪತಿ:_ ಈ ಮಂತ್ರದಲ್ಲಿ ಬಹಳ ಸುಂದರವಾದ ಪ್ರಶ್ನೆಯನ್ನು
ಕೇಳಲಾಗಿದೆ. ಯಾವ ಅತ್ಯುತ್ತಮ ಗುಣಕರ್ಮ ಸ್ವಭಾವಗಳುಳ್ಳ, ಅನಾದಿ ಅನಂತ ಮತ್ತು ಅವಿನಾಶಿ ಹಾಗೂ ನಿತ್ಯ ಸ್ವರೂಪರಾದ
ಪ್ರಕೃತಿ, ಜೀವಾತ್ಮ ಮತ್ತು
ಪರಮಾತ್ಮ ಇವುಗಳ ಮಧ್ಯದಲ್ಲಿ ಕೇವಲ ಏಕಮಾತ್ರನೂ, ಅನಾದಿ ಅನಂತನೂ, ಆನಂದ
ಸ್ವರೂಪನೂ ಆದ ಯಾವ ದೇವನು ಮೋಕ್ಷವನ್ನು ಪ್ರಾಪ್ತ ಮಾಡಿದ ನಂತರವೂ ನಮಗೆ ಪುನಃ ಈ ಅಖಂಡನೀಯವಾದ
ಅರ್ಥಾತ್ ಯಾವುದೇ ರೀತಿಯಲ್ಲಿ ನಾಶವನ್ನು ಮಾಡಬಾರದೋ ಅಂತಹ ಪೃಥ್ವಿಯ ಮಧ್ಯದಲ್ಲಿ ಪುನಃ
ಜನ್ಮವನ್ನು ಕೊಟ್ಟು ಮಾತಾ ಪಿತರರನ್ನು ನೋಡುವಂತೆ, ಪ್ರಾಪ್ತವಾಗುವಂತೆ ಮಾಡುತ್ತಾನೆ. ಅ ದೇವನ ಅತ್ಯಂತ ಸುಂದರವಾದ
ನಾಮವನ್ನು ನಾವು ತಿಳಿಯಬೇಕು. ತಿಳಿದು ಅವನನ್ನೇ ಉಪಾಸಿಸಬೇಕು. ಮೋಕ್ಷವನ್ನು ಪಡೆದ ನಂತರವೂ ನಾವು
ಪುನಃ ಜನ್ಮವನ್ನು ಪಡೆಯುತ್ತೇವೆ, ಎಂಬ
ವಿಷಯವು ಈ ಮಂತ್ರದಿಂದ ಸ್ಪಷ್ಟವಾಗುತ್ತದೆ.
ಪರಮಾತ್ಮನ ಪ್ರಕಾಶವನ್ನು ಪ್ರಾಪ್ತಮಾಡಿಕೊಳ್ಳಬೇಕು
ಶುನಃ ಶೇಪೋ
ಹ್ಯಹ್ವದ್ ಗೃಭೀತ-ಸ್ತ್ರಿಷ್ವಾದಿತ್ಯಂ ದ್ರುಪದೇಷು ಬದ್ಧಃ |
ಅವೈನಂ ರಾಜಾ
ವರುಣಃ ಸಸೃಜ್ಯಾ ದ್ವಿದ್ದಾ ಅದಬ್ಧೋ ವಿ ಮುಮೋಕ್ತು ಪಾಶಾನ್ ||
ಋಗ್ವೇದ 1-24-13
ಭಾವಾರ್ಥ:- ಸ್ವಾಮಿ ದಯಾನಂದಸರಸ್ಪತಿ:_ ಶ್ರೇಷ್ಠಕ್ರಿಯಾ ಶೀಲನಾದ ವಿದ್ದಾಂಸನು ಜ್ಞಾನಕರ್ಮ ಮತ್ತು ಉಪಾಸನಾ ಯಜ್ಞದಲ್ಲಿ ಸರ್ವಜ್ಞನೂ
ಸರ್ವಪ್ರಕಾಶ ಸ್ವರೂಪನೂ ಆದ ಪರಮಾತ್ಮನನ್ನು ತಮ್ಮ ಅಂತಃಕರಣದಲ್ಲಿಯೇ ಉಪಾಸಿಸುತ್ತಾರೆ. ಆ
ಸರ್ವಾಂತರ್ಯಾಮಿ ಯಾದ ಪರಮಾತ್ಮನು, ನಮ್ಮೆಲ್ಲರ ಜ್ಞಾನಕರ್ಮ ಮತ್ತು ಉಪಾಸನಾ ಯಜ್ಞದಲ್ಲಿ ತನ್ನ ಪ್ರಕಾಶವನ್ನು ಬೀರುತ್ತಾನೆ. ಆ
ಪರಮಾತ್ಮನ ಪ್ರಕಾಶವನ್ನು ಪ್ರಾಪ್ತಮಾಡಿಕೊಳ್ಳುವುದಕ್ಕೋಸ್ಕರ ನಾವು ಪ್ರತಿಯೊಂದು ಕರ್ಮವನ್ನು
ಸಮರ್ಪಣಾಭಾವದಿಂದ ಮತ್ತು ನಿಷ್ಕಾಮಭಾವದಿಂದ ಮಾಡಬೇಕು.
ದ್ವಾ ಸುಪರ್ಣಾ
ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿ ಷಸ್ವಜಾತೇ |
ತಯೋರನ್ಯಃ
ಪಿಪ್ಪಲಂ ಸ್ವಾದ್ವ-ತ್ತ್ಯನಶ್ಚನ್ನನ್ಯೋ ಅಭಿ ಚಾಕಶೀತಿ ||
ಋಗ್ವೇದ 1-164-20
ಭಾವಾರ್ಥ:- ಸ್ವಾಮಿ ದಯಾನಂದಸರಸ್ಪತಿ:_ ಈ ಮಂತ್ರದಲ್ಲಿ ರೂಪಕಾಲಂಕಾರವಿದೆ. ಶರೀರವೆಂಬ ವೃಕ್ಷ.
ಅದರಲ್ಲಿ ಪರಮಾತ್ಮ ಮತ್ತು ಜೀವಾತ್ಮ ಎಂಬ ಪ್ರಾಣ ಪಕ್ಷಿಗಳು. ಪರಮಾತ್ಮನು ಸೂಕ್ಷ್ಮ ಜೀವಾತ್ಮನು
ಸ್ಥೂಲ ರೂಪ, ವಿಲಕ್ಷಣ ಸ್ವಭಾವ
ಇಬ್ಬರದ್ದೂ, ಆದರೂ ವ್ಯಾಪ್ಯ -
ವ್ಯಾಪಕಭಾವದಿಂದ ಎರಡೂ ಸಂಯುಕ್ತವಾಗಿವೆ. ಜೀವಾತ್ಮನು ಈ ಶರೀರದ ಮೂಲಕ ಎಲ್ಲ ಭೋಗಗಳನ್ನೂ
ಅನುಭವಿಸುತ್ತಾನೆ. ಅವನು ಎಲ್ಲಾ ಜೀವಿಗಳಲ್ಲೂ ವ್ಯಾಪಕನಾಗಿರುತ್ತಾನೆ. ಪರಮಾತ್ಮ ಅಥವಾ ಈಶ್ವರನು
ಎಲ್ಲಾ ಜೀವಿಗಳಲ್ಲೂ ವ್ಯಾಪ್ತನಾಗಿ ಜೀವಿಗಳು ನಡೆಸುವ ಎಲ್ಲಾ ಕ್ರಿಯಾಕಲಾಪಗಳನ್ನು
ಪರಿವೀಕ್ಷಿಸುತ್ತಾನೆ. ಅವನಿಗೆ ಪಾಪ-ಪಣ್ಯಗಳಿಗೆ ಕಾರಣವಾದ ಕರ್ಮ ಬಂಧವಾಗಲಿ, ಅವುಗಳ ಫಲರೂಪವಾದ ದುಃಖ - ಸುಖಗಳ ಭೋಗವಾಗಲೀ
ಯಾವುದೂ ಇರುವುದಿಲ್ಲ. ಆದರೆ ಆಯಾಯ ಫಲವನ್ನು ಕೊಡುವುದಕ್ಕಾಗಿ ನ್ಯಾಯಾಧೀಶನಂತೆ
ಪರಿವೀಕ್ಷಿಸಿರುತ್ತಾನೆ.
ಸದಾಕಾಲ ಪ್ರಾಣವಿದ್ಯೆಯನ್ನೂ, ಆತ್ಮವಿದ್ಯೆಯನ್ನೂ ಪ್ರಾಪ್ತ ಮಾಡಿಕೊಳ್ಳಲು ಅಪೇಕ್ಷಿಸಬೇಕು
ಅವ ತೇ ಹೇಳೋ
ವರುಣ ನಮೋಭಿ ರವ ಯಜ್ಞೇ ಭಿರೀಮಹೇ ಹವಿರ್ಭಿಃ |
ಕ್ಷಯನ್ನಸ್ಮಭ್ಯಮಸುರ
ಪ್ರಚೇತಾ ರಾಜನ್ನೇನಾಂಸಿ ಶಿಶ್ರಥಹ್ ಕೃತಾನಿ ||
14
ಋಗ್ವೇದ 1-24-14
ಭಾವಾರ್ಥ:- ಸ್ವಾಮಿ ದಯಾನಂದಸರಸ್ಪತಿ:_ ಸರ್ವಾಂತರ್ಯಾಮಿ
ಯೂ, ಸರ್ವಜ್ಞನೂ, ಸಕಲಪ್ರಾಣಿಮಾತ್ರರಿಗೆ ಪ್ರಾಣಶಕ್ತಿ ಯನ್ನು
ಕೊಡುವವನೂ, ಸೃಷ್ಟಿಯ ಆದಿಯಲ್ಲಿಯೇ
ಜೀವಮಾತ್ರರಿಗೆ ವೇದಗಳ ಮೂಲಕ ಸಂಪೂರ್ಣ ಜ್ಞಾನವನ್ನು ಕೊಟ್ಟು ಪ್ರತಿಯೊಂದು ಕ್ಷಣದಲ್ಲಿಯೂ
ಆತ್ಮನಲ್ಲಿ ಪ್ರೇರಣೆಯನ್ನು ಮಾಡುವ ಪರಮಾತ್ಮನನ್ನು, ಶ್ರೇಷ್ಠ ಕರ್ಮಗಳ ಮೂಲಕ ಉಪಾಸನೆಯನ್ನು ಮಾಡುತ್ತಾ, ಜ್ಞಾನ ಪೂರ್ವಕ. ಕರ್ಮಗಳನ್ನು ಮಾಡುತ್ತಾ, ನಿರ್ಗತಿಕರಿಗೆ, ದೀನರಿಗೆ ದರಿದ್ರರಿಗೆ ಅನ್ನ ಜಲಾದಿಗಳನ್ನು ಕೊಡುತ್ತಾ,
ಯಜ್ಞಾನುಷ್ಠಾನದ ಮೂಲಕ ಉಪಾಸಿಸಬೇಕು.
ಎಂದಿಗೂ ಅವನ ಆಜ್ಞೆಯನ್ನು ಧಿಕ್ಕರಿಸದೇ ಅವನ ಅವಹೇಳನವನ್ನು ಮಾಡದೇ, ಪರಮಾತ್ಮನ ಆಜ್ಞಾನುವರ್ತಿಯಾಗಿ ಅವನ ಸಾನ್ನಿಧ್ಯದಲ್ಲಿಯೇ
ಇರಬೇಕು. ಸದಾಕಾಲ ಪ್ರಾಣವಿದ್ಯೆಯನ್ನೂ, ಆತ್ಮವಿದ್ಯೆಯನ್ನೂ ಪ್ರಾಪ್ತ ಮಾಡಿಕೊಳ್ಳಲು ಅಪೇಕ್ಷಿಸಬೇಕು. ಆಗ ಪರಮಾತ್ಮನು ನಾವು ಮಾಡಿದ,
ಪಾಪಕರ್ಮಗಳ ಫಲವನ್ನು ಶಿಥಿಲವನ್ನಾಗಿ
ಮಾಡುತ್ತಾನೆ. ಸುಜ್ಞಾನಿಯಾದವನಿಗೆ ಎಂದಿಗೂ ಪಾಪದ ಬೀತಿ ಇರುವುದಿಲ್ಲ. ಅಜ್ಞಾನಿಯಾದವನು. ಪಾಪದ ಭೀತಿಯಿಂದ ತತ್ತರಿಸುತ್ತಾ,
ತನ್ನ ಪಾಪಕರ್ಮಗಳ ಫಲವನ್ನು ನಾಶ: ಮಾಡಲು
ಸಕಲ : ತೀರ್ಥ ಕ್ಷೇತ್ರಾದಿಗಳಿಗೆ ಅಲೆಯುತ್ತಾನೆ.
ಪರಮಾತ್ಮನನ್ನು ಜ್ಞಾನ ಜ್ಯೋತಿಯಿಂದ ಬೆಳಗಿಸಿದ ಹಾಗೂ ಪರಿಶುದ್ಧನಾದ ಜೀವಾತ್ಮನಿಂದ ಮಾತ್ರ
ನೋಡಲು, ಸಾಕ್ಷಾತ್ಕಾರ ಮಾಡಲು
ಸಾಧ್ಯ. ಅವನೆಂದಿಗೂ ಬಾಹ್ಯೇಂದ್ರಿಯಗಳಿಗೆ ಲಭ್ಯನಾಗುವುದಿಲ್ಲ. ಆ ಪರಮಾತ್ಮನು ಸರ್ವತ್ರ
ಗಮನಶೀಲನೂ, ಸರ್ವವ್ಯಾಪಿಯೂ,
ಪ್ರಾಣಸ್ಟರೂಪನೂ ಜೀವ-ಮಾತ್ರರಿಗೆ
ಪ್ರಾಣಶಕ್ತಿಯನ್ನು ಕೊಡುವವನೂ ಆಗಿದ್ದಾನೆ. ಅವನಿಂದ- ಲೇ ಸಂಪೂರ್ಣ ಚರಾಚರ ಜಗತ್ತು
ಸೃಷ್ಟಿಸಲ್ಪಟ್ಟಿದೆ. ಅವನು ಸರ್ವಾಂತರ್ಯಾಮಿಯಾಗಿದ್ದಾನೆ. ಅವನಿಂದಲೇ ಈ ಸಂಪೂರ್ಣ ಚರಾಚರ
ಜಗತ್ತು. ಸುಂದರವೂ, ಮನೋಹರವೂ
ಆಗಿದೆ. ಆ ಪರಮಾತ್ಮನು ಸದಾಕಾಲ ನಮ್ಮೆಲ್ಲರ ಹೃದಯಮಂದಿರದಲ್ಲಿ ವಿರಾಜಮಾನನಾಗಿ ತನ್ನ ದಿವ್ಯವಾದ
ಪ್ರಕಾಶದಿಂದ ಪ್ರಕಾಶಿತವನ್ನಾಗಿ ಮಾಡಿ ಸಮಸ್ತ ಅಜ್ಞಾನಾಂಧಕಾರವೂ ದುರ್ಗುಣ ದುರ್ವ್ಯಸನಗಳೂ,
ದುಃಖದಾರಿದ್ರಗಳೂ, ವೈರಮನಸ್ತಾಪಗಳೂ ಹಾಗೂ ಅಶಾಂತಿಯೂ ನಾಶವಾಗಲಿ.
ಸರ್ವರಕ್ಷಕನಾದ ಪರಮಾತ್ಮ ನೀನು ಎಲ್ಲರನ್ನೂ ರಕ್ಷಿಸುವವನಾಗಿದ್ದೀಯೆ. ನಾವು ಕೂಡಾ ವಿನಾಶದ
ಮಾರ್ಗದಿಂದ ದೂರ ಸರಿದು ನಮ್ಮಲ್ಲಿರುವ ಹಿಂಸಾಪ್ರವೃತ್ತಿಯನ್ನೇ ಕಿತ್ತುಹಾಕಿ ಈ ಪ್ರಪಂಚವನ್ನು
ಸುಂದರವನ್ನಾಗಿಯೂ ಸುಭದ್ರವನ್ನಾಗಿಯೂ ಮಾಡೋಣ
ಪೂರಾಣಗಳಲ್ಲಿ ಭೋಧಿತವಾದುದ್ದು
ಪುರಾಣ ಎಂಬ ಸಂಸ್ಕೃತ ಪದದ ಅಕ್ಷರಾನುಸಾರ ಅರ್ಥ
"ಜ್ಞಾನವನ್ನು ನೀಡಲು ಶುದ್ಧೀಕರಿಸುವುದು" ಎಂಬುದಾಗಿದೆ, ಇದರಲ್ಲಿ ಜ್ಞಾನವನ್ನು ನೀಡುವುದಕ್ಕೆ ಮನುಜ ಹೇಗೆ
ಶುದ್ಧನಾಗಬೇಕು ಎಂಬ ಬೋಧನೆ ಇದೆ. ಅಥವಾ ಪುರಾಣವು ಶುದ್ದೀಕರಿಸಿದ ಜ್ಞಾನವೆಂದು ಆಗಬಹುದು.
ಅತ್ರ ಜನ್ಮ
ಸಹಸ್ರಾಣಾಂ ಸಹಸ್ರೈರಪಿ ಸತ್ತಮ|
ಕದಾಚಿಲ್ಲಭತೇ
ಜಂತುಃ ಮಾನುಷ್ಯಂ ಪುಣ್ಯ ಸಂಚಯಾತ್॥
ಗಾಯಂತಿ ದೇವಾಃ
ಕಿಲ ಗೀತಕಾನಿ ಧನ್ಯಾಸ್ತು ಯೇ ಭಾರತಭೂಮಿಭಾಗೇ|
ಸ್ವರ್ಗಾಪವರ್ಗಾಸ್ವದಮಾರ್ಗಭೂತೇ
ಭವಂತಿ ಭೂಯಃ ಪುರುಷಾಃ ಸುರತ್ವಾತ್ ॥
ವಿಷ್ಣು ಪುರಾಣ
- 2-3-23, 24
ಭಾವಾರ್ಥ:- "ಸಾವಿರಾರು ಜನ್ಮಗಳಲ್ಲಿ ಪುಣ್ಯವಿಶೇಷದಿಂದ ಯಾವುದೋ ಒಂದು ಜನ್ಮ ಮನುಷ್ಯನಿಗೆ ಈ
ಭಾರತ ಭೂಮಿಯಲ್ಲಿ ಲಭಿಸುತ್ತದೆ. ಇಲ್ಲಿ ಹುಟ್ಟಿದವರೇ ಧನ್ಯರು ಎಂದು ದೇವತೆಗಳು
ಹಾಡಿಹೊಗಳುತ್ತಾರೆ. ಯಾಕೆಂದರೆ ಈ ಭರತ ಖಂಡವು ಸ್ವರ್ಗ ಮತ್ತು ಮೋಕ್ಷಗಳಿಗೆ ಮಾರ್ಗವನ್ನು
ತೋರಿಸುತ್ತದೆ. ದೇವತಾ ಜನ್ಮಕಳೆದ ನಂತರ ಅವರು ಮತ್ತೆ ಇಲ್ಲಿ; ಮನುಷ್ಯರಾಗಿ ಹುಟ್ಟುತ್ತಾರೆ.
ಜ್ಞಾನಾರ್ಜನೆಯಿಂದ ನಿತ್ಯನಾಗಬೇಕು
ಜ್ಞಾನಶೂನ್ಯಾ
ನರಾ ಯೇತು ಪಶವಃ ಪರಿಕೀರ್ತಿತಾಃ |
ತಸ್ಮಾತ್ಸಂಸಾರನೋಕ್ಸಾಾಯ
ಪರಂ ಜ್ಞಾನಂ ಸಮಭ್ಯಸೇತ್ ॥
ಶ್ರೀ ನಾರದೀಯ
ಪುರಾಣಂ - ಪೂ.ಭಾ - ಅಧ್ಯಾಯ
32
ಶ್ಲೋಕ 40
ಭಾವಾರ್ಥ:- ಜ್ಞಾನವಿಲ್ಲದ ಮನುಷ್ಯರು ಪಶುಗಳೆಂದು ಜ್ಞಾನಿಗಳು
ಹೇಳಿದ್ದಾರೆ. ಆದುದರಿಂದ ಈ ಸಂಸಾರಬಂಧ ನಿವೃತ್ತಿಗಾಗಿ ಉತ್ತಮ ಜ್ಞಾನವನ್ನು ಅಡಿಗಡಿಗೂ
ಹೊಂದಬೇಕು.
ವಿವರಣೆ:- ಸಂಸ್ಕೃತದಲ್ಲಿ ಸಂಸಾರ ಎಂಬ ಪದದ
ಅಕ್ಷರಶಃ ಅರ್ಥ "ಹೊಳಪನ್ನು ಪಡೆಯಲು ಗೊಂದಲಕ್ಕೊಳಗಾಗುವುದು" ಎಂಬುದಾಗಿದೆ. ಇದನ್ನು
ವಿವರಿಸಲು ಸಂಸಾರ ಎಂದರೆ ಭವಸಾಗರ, ಪ್ರಪಂಚ, ಲೋಕವ್ಯವಹಾರಗಳು
ಎಂತಲೂ ವಿದ್ವಾಂಸರು ಹೇಳಿದ್ದಾರೆ. ಇಂತಹ ಲೋಕ ವ್ಯವಹಾರಗಳಲ್ಲಿ ಮುಳುಗಿ ಜ್ಞಾನದ ಬೆಳಕನ್ನು
ಪಡೆಯಲು ಗೊಂದಲಕ್ಕೀಡಾಗುವ ವಿಧ್ಯಮಾನವೇ ಸಂಸಾರ. ಇದರಲ್ಲಿ ಹೆಂಡತಿ ಮಕ್ಕಳು ತಂದೆ ತಾಯಿ
ಬರುವರೆಂದು ತಪ್ಪು ವ್ಯಾಖ್ಯಾನವಾಗಿದೆ. ಹೆಂಡತಿ ಮಕ್ಕಳನ್ನು ಹೊಂದಿಯೂ ಜ್ಞಾನದ ಬೆಳಕನ್ನು
ಕಂಡವರಿದ್ದಾರೆ. ಬ್ರಹ್ಮಚರ್ಯೆ ಎಂದು ವೇಷವನ್ನು ಹಾಕಿ ಆಜ್ಞಾನಿಗಳೂ ಆದವರಿದ್ದಾರೆ. ಇಲ್ಲಿ
ಗೊಂದಲಕ್ಕೆ ಒಳಗಾಗದೆ ಬ್ರಹ್ಮಚರ್ಯೆ (ಇದರ ಬಗ್ಗೆ ಈ ಮುಂದಿನ ಪುಟದಲ್ಲಿ ವಿವರಿಸಿದೆ) ಪರಿಪಾಲನೆ
ಮಾಡಿ ಜ್ಞಾದ ಬೆಳಕನ್ನು ಕಾಣುವುದು ಮುಖ್ಯ. ಸಂಸಾರ ಮಾರ್ಗವು ಸರಿಯಿಲ್ಲ ಸನ್ಯಾಸ ಮಾರ್ಗವು ಸರಿ
ಎಂಬ ತತ್ವ ಇದ್ದದ್ದೇ ಆದರೆ ಧ್ಯಾನ ಸಂದೇಶದ ಶಿವ ಸಂಸಾರಿಯಾಗುತ್ತಿರಲಿಲ್ಲ, ಪುರುಷೋತ್ತಮನಾದ ರಾಮ ಸಂಸಾರಿಯಾಗುತ್ತಿರಲಿಲ್ಲ,
ಜಗದ್ಗು-ರುವಾದ ಕೃಷ್ಣ
ಸಂಸಾರಿಯಾಗುತ್ತಿರಲಿಲ್ಲ. ವೇದ ರಚಿಸಿದ ವೇದವ್ಯಾಸರು ಅವರ ತಂದೆ ಪರಾಶರರು
ಸಂಸಾರಿಯಾಗುತ್ತಿರಲಿಲ್ಲ. ಕಾಲಜ್ಞಾನಿ
ವೀರಬ್ರಹ್ಮೇಂದ್ರ ಸ್ವಾಮಿಗಳು ಸಂಸಾರಿಯಾಗುತ್ತಿರಲಿಲ್ಲ. ಸಂಸಾರಿಯಾಗಿ ಬ್ರಹ್ಮಚರ್ಯೆ ಪಾಲನೆ
ಮುಖಾಂತರ ಜ್ಞಾನಾರ್ಜನೆ ಮತ್ತು ಆರೋಗ್ಯ ಮೂಲವಾಗಿದೆ ಎಂಬುದು ಎಲ್ಲರೂ ಅರಿಯಬೇಕು.
ಬ್ರಹ್ಮಚರ್ಯೆ ಪಾಲನೆ ಎಂದರೆ “ಪ್ರಾಣಾಯಾಮದಿಂದ
ನೀರು, ಬೆಂಕಿ, ಜೀವ ಉಸಿರು, ವೈದ್ಯ, ಮಾಂತ್ರಿಕ ಸೂತ್ರ ಮತ್ತು ಉಜ್ವಲತೆ ಚಲಿಸುವ ನಿಪುಣನಾಗುವುದು”. ಅದನ್ನು ಕಲಿತು ನಾವು
ಸೇವಿಸುವ ಆಹಾರದ ಕಡೆಯ ಸಾರವಸ್ತುವಾಗಿರುವ ಈ ವೀರ್ಯದಿಂದ ದೇಹದಲ್ಲಿ ಆರೋಗ್ಯವನ್ನು ಮತ್ತು
ಜ್ಞಾನವನ್ನು ಪಡೆಯುವವನಾಗಿ ಸದಾ ಕರ್ಮಾಸಕ್ತನಾಗಿರುವವನೇ ಬ್ರಹ್ಮಚಾರಿ. ಇಂತಹ ಬ್ರಹ್ಮಚರ್ಯವನ್ನು
ಸಂಸಾರಿಯೂ ನಿರ್ವಹಿಸಬಹುದು, ದೇಹದಲ್ಲಿ
ವೀರ್ಯವು ಕೇವಲ ಸಂತಾನಾಭಿವೃದ್ದಿಗೆ ಉತ್ಪತ್ತಿಯಾಗುತ್ತಿರುವ ದ್ರವ ಮಾತ್ರವಲ್ಲ, ಅದು ಸೋಮ ರಸ, ಅಮೃತ ಮತ್ತು ದೇಹದ ಸಕಲ ಜೀವಕೋಶಗಳಿಗೂ ಜೀವಾಮೃತವನ್ನು
ತುಂಬುವ ದ್ರವ ಎಂದು ಅರ್ಥ ಮಾಡಿಕೊಂಡಾಗ ಬ್ರಹ್ಮಚರ್ಯ ಎಂದರೆ ನಾವು ವೀರ್ಯ ಸ್ಖಲನ ಮಾಡದೆ ಹೆಣ್ಣು
ಸಂಗ ಮಾಡದೆ ಪರಿಶುದ್ಧರಾಗಿರುವುದು ಎಂಬ ಅರಿವಿನ ಲೋಕದಲ್ಲಿ ಸ್ವಲ್ಪ ಆಲೋಚನಾ ವಿಧಾನ
ಬದಲಾಗುವುದು.
ಈ ಪ್ರಕೃತಿ, ಪುರುಷ, ಮಾಯೆಗಳಿಂದ ಕೂಡಿದ ಲೋಕದಲ್ಲಿ ಸ್ಪಂದಿಸುವುದು - ಅದರಿಂದ ಬರುವ ತಾಪತ್ರಯಗಳು - ಇವು ಸಂಸಾರ.
ಈ ಸಂಸಾರದಲ್ಲಿರುವ ಕಷ್ಟ, ಕಾರ್ಪಣ್ಯಗಳಿಗೆ
ವೈದ್ಯನು ಪರಮಾತ್ಮನೇ. ಸಂಸಾರ - ಎಂದರೆ ಜಗತ್ತು, ಜಗತ್ತಿನಲ್ಲಿ ಏನೇನಿದೆಯೋ ಎಲ್ಲವೂ ಸೇರಿರುತ್ತದೆ. ಸಂಸಾರವು ಜೀವಿಗಳಿಗೆ ಅತ್ಯವಶ್ಯಕವಾದ್ದು,
ಏಕೆಂದರೆ ದೇಹಗಳನ್ನು ಭವಸಾಗರವನ್ನು
ಸೇರಿರುವ ಆತ್ಮಗಳು ದಾಟಲು ಇದು ಬೇಕಾದ ದೋಣಿ. ಪಂಚ ಜ್ಞಾನೇಂದ್ರಿಯಗಳು, ಪಂಚಕರ್ಮೇಂದ್ರಿಯಗಳು, ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳು, ಸತ್ವರಜಸ್ತಮೋ-ಗುಣಗಳು, ಸಂಸಾರವೆಂಬ
ಕಾನನಗಳು, ಪ್ರಕೃತಿ, ಪುರುಷ, ಮಾಯೆಗಳು, ಕಾಮನೆಗಳನ್ನು ಹುಚ್ಚೆಬ್ಬಿಸುವ ಕಾಡು ಅರಣ್ಯಗಳು - ಪರ್ವತದ ಗರ್ಭದ ರೀತಿಯಲ್ಲಿರುವ ಇವುಗಳ
ಮಧ್ಯದಲ್ಲಿ ದೇಹವೆಂಬ ದೇವಾಲಯದಲ್ಲಿ ವಾಸ-ಮಾಡುವ ಜೀವಾತ್ಮನೇ ಪರಮಾತ್ಮನ ರೂಪ. ಸಂಸಾರ ಸಾಗರಕ್ಕೆ
ಬಂದ ಮೇಲೆ ಅವನಿಗೆ ಪ್ರಕೃತಿ, ಮಾಯೆ,
ಪುರುಷ, ಸಂಸಾರದ ಸಂಪರ್ಕದಿಂದ ಅಂಟಿದ ಅಂಟಿಗೆ ಸಂಸ್ಕಾರ
ಎನ್ನುತ್ತೇವೆ. ಈ ಸಂಸ್ಕಾರಗಳು ಆತ್ಮನ ನಿಜ ಭಾವವನ್ನು ಮುಚ್ಚಿಹಾಕುತ್ತವೆ. ಈ ಕಾರಣದಿಂದ ಆತ್ಮನು
ಪರಮಾತ್ಮನ ದಯೆಗಾಗಿ ಸಂಸಾರದಲ್ಲಿ ದೇಹಗಳನ್ನು ಪಡೆದು ಅವನ ಕರುಣೆಯಿಂದಲೇ ಭವಸಾಗರದಿಂದ
ಹೊರಬರಬೇಕಾಗುತ್ತದೆ ಮತ್ತು ನಂತರ ಪರಮಾತ್ಮನನ್ನು ಸೇರಬೇಕಾಗುತ್ತದೆ. ಆಗಲೇ ತನ್ನ ನಿಜವಾದ
ಶುಭ್ರತೆಯನ್ನು ವ್ಯಕ್ತಪಡಿಸಬೇಕಾಗುತ್ತದೆ. ಆಗಲೇ ಆತ್ಮ, ಪರಮಾತ್ಮರು ಶುಬ್ರತೆಯನ್ನು ಹೊಂದಿರುತ್ತಾರೆ, ಸಮಾನವಾಗುತ್ತಾರೆ ಎಂಬ ಅರಿವು ಮೂಡುತ್ತದೆ.
ಶ್ರೀ ನಾರದೀಯ ಪುರಾಣಂ ನಿಂದ ಹೆಚ್ಚುವರಿ ವಿವರಣೆ
:- ಮಲಮೂತ್ರಗಳು ಸ್ರವಿಸುತ್ತಿರುವ ಅಶಾಶ್ವತವಾದ ಈ ಶರೀರವನ್ನು ಶಾಶ್ವತವೆಂದು ಮಹಾಮೋಹದಿಂದ
ಅಜ್ಞಾನಿಗಳು ಭಾವಿಸುವರು. ಸಕಲ ಪಾಪಗಳೂ (ದೋಷಗಳು, ದುರಾಚಾರ, ತಪ್ಪುಗಳು, ಅಪರಾದಗಳು,
ದುರದೃಷ್ಟ, ಕೇಡು, ಅನಿಷ್ಟ, ಕೆಟ್ಟ ಕೆಲಸ,
ದುಷ್ಕರ್ಮ, ಕೆಟ್ಟ ಮನಸ್ಸು,) ನಷ್ಟವಾದರೆ
ಶುದ್ಧವಾದ ಬುದ್ಧಿಯುಂಟಾಗುತ್ತದೆ. ಜ್ಞಾನಿಗಳು ಆ ಬುದ್ದಿಯನ್ನೆೇ ಜ್ಞಾನಶಬ್ದದಿಂದ
ವ್ಯವಹರಿಸಿರುವರು. ಜ್ಞಾನವೇ ಮೋಕ್ಷಪ್ರದವೆಂದು ಹೇಳುತ್ತಾರೆ. ಅಂತಹ ಜ್ಞಾನವು ಯೋಗಿಗಳಿಗೆ
ಲಭಿಸುತ್ತದೆ. ಯೋಗವು ಕರ್ಮ, ಜ್ಞಾನ
ಎಂಬುದಾಗಿ ಎರಡು ವಿಧವೆಂದು ಉಕ್ತವಾಗಿದೆ. ಮನುಷ್ಯರಿಗೆ ಕರ್ಮಯೋಗ ಹೊರತು ಜ್ಞಾನೆಯೋಗವು
ಸಿದ್ದಿಸುವುದಿಲ್ಲ. ಅಹಿಂಸೆ ಸತ್ಯವಚನ, ಕ್ರೋಧವಿಲ್ಲದಿರುವಿಕೆ, ಬ್ರಹ್ಮಚರ್ಯೆ,
ದಾನಗಳನ್ನು ಸ್ವೀಕರಿಸದಿ-ರುವುದು, ಅಸೂಯೆಯಿಲ್ಲದಿರುವುದು ಮತ್ತು ದಯೆ ಇವುಗಳು
ಜ್ಞಾನಯೋಗಿ, ಕರ್ಮಯೋಗಿಗಳಿಬ್ಬರಿಗೂ
ಸಮಾನವಾದುವುಗಳು ಎಂದರೆ ಉಭಯರೂ ಇವುಗಳನ್ನು ಅನುಷ್ಠಾನಮಾಡಬೇಕು. ಸಕಲ ಪ್ರಾಣಿಗಳೂ
ಪರಮಾತ್ಮಸ್ವಾಮಿಕವೆಂದು (ಪರಮಾತ್ಮಾಧೀನ) ತಿಳಿಯುವವರೇ ಜ್ಞಾನಿಗಳು. ಜ್ಞಾನವಿಲ್ಲದವರಿಗೆ
ನಾನಾವಿಧವಾಗಿ ಜಗತ್ತು ಕಾಣುತ್ತದೆ. ಪರಮಜ್ಞಾನಿಗಳಿಗೆ ಅದು ಪರಬ್ರಹ್ಮಸ್ವಾಮಿ-ಕವೆಂದು
ತೋರುತ್ತದೆ. ಮಾಯೆಯೇ ಅಜ್ಞಾನದಾಯಕವಾದುದರಿಂದ ಅಜ್ಞಾನಶಬ್ದ ಬೋಧ್ಯವಾಗಿದೆ. ಆದಕಾರಣ ಮಾಯೆಯನ್ನು
ಜಯಿಸಿದವರಿಗೆ ಅಜ್ಞಾನಪರಿಹಾರವಾಗುತ್ತದೆ. ಮಾಯೆಯು ಸತ್ತಲ್ಲ (ಇರುವುದಲ್ಲ) ಅಸತ್ತಲ್ಲ
(ಇಲ್ಲದಿರುವುದಲ್ಲ) ಉಭಯಾತ್ಮಕವಲ್ಲ (ಗುಣ ಮತ್ತು ರೀತಿಗಳಿಂದ ಕೂಡಿರತಕ್ಕದ್ದಲ್ಲ) ಆದುದರಿಂದ
ಅದು ಇಂತಹುದೆಂದು ನಿರೂಪಿಸಲು ಸಾಧ್ಯವಿಲ್ಲ. ಅದು ಪರಮಾತ್ಮನಲ್ಲಿ ಭೇದಬುದ್ದಿ ಪ್ರದವೆಂದೂ
(ಕಲ್ಪನೆಯ ಮಾರ್ಗವೆಂದು) ತಿಳಿಯಬೇಕು. ಅನಾದಿ ಪರಬ್ರಹ್ಮನು ಜ್ಞಾನಶಬ್ದದಿಂದ ಉಕ್ತನಾಗುವನು
(ಪರಿಗಣಿಸಲಾಗಿದ್ದಾನೆ). ಪರಮಾತ್ಮನು ಜ್ಞಾನಿಗಳ ಮನಸ್ಸಿನಲ್ಲಿ ಯಾವಾಗಲೂ
ಪ್ರಕಾಶಿಸುತ್ತಾನೆ.
ಕರ್ಮ ಎಂದರೆ ಕೆಲಸ, ಕಸುಬು, ಉದ್ಯೋಗ, ವೇದದಲ್ಲಿ ಕರ್ಮಕಾಂಡ
ಜ್ಞಾನಕಾಂಡ ಎಂದು ಎರಡು ಭಾಗವುಳ್ಳದ್ದು, ಕರ್ಮಜ ಎಂದರೆ ಪುಣ್ಯ ಪ್ರಭಾವದಿಂದ ದೇವತ್ವವನ್ನು ಪಡೆದವನು, ಕರ್ಮಜೀವಿ ಎಂದರೆ ಜ್ಞಾನಹೀನವಾದ ಕರ್ಮಾಚರಣೆಯಿಂದ
ಜೀವಿಸುವವನು. ಕರ್ಮಠ ಎಂದರೆ ಕೆಲಸದಲ್ಲಿ ನಿಪುಣನಾದವನು, ಕರ್ಮಠತನ ಎಂದರೆ ಧರ್ಮಾಚರಣೆಯಲ್ಲಿ ಕಟ್ಟುನಿಟ್ಟಾಗಿರುವವನು,
ಕರ್ಮಾನುಷ್ಠಾನಕ್ಕೆ ಅವಕಾಶವಿರುವ ಸ್ಥಳವನ್ನು
ಕರ್ಮ ಭೂಮಿ ಎನ್ನುವರು, ಪರಲೋಕ
ಸಾಧನೆಯ ಮೂರು ಮಾರ್ಗದಲ್ಲಿ ಜ್ಞಾನಮಾರ್ಗ, ಭಕ್ತಿಮಾರ್ಗ, ಕರ್ಮಮಾರ್ಗ,
ಫಲಾಪೇಕ್ಷೆಯಿಲ್ಲದೆ ಕರ್ಮವನ್ನು
ಮಾಡುವುದಕ್ಕೆ ಕರ್ಮಯೋಗವೆನ್ನುವರು. ಕರ್ಮೇಂದ್ರಿಯ ಎಂದರೆ ಕೆಲಸ ಮಾಡುವ ಅಥವಾ ಕರ್ಮಕ್ಕೆ
ಕಾರಣವಾಗುವ ಇಂದ್ರಿಯ - ಕೈ, ಕಾಲು,
ನಾಲಿಗೆ, ಜನನೇಂದ್ರಿಯ ಹಾಗೂ ಆಸನದ್ವಾರ. ಕರ್ಮ ಎಂದರೆ ಅಕ್ಷರಶಃ ಅರ್ಥ "ದೇಹವು ಮಾಂತ್ರಿಕ
ಸೂತ್ರವನ್ನು ಪಡೆಯುತ್ತದೆ" ಎಂಬುದಾಗಿದೆ.
ಜ್ಞಾನಾರ್ಜನೆಯ ಸಂಕಲ್ಪದಿಂದ ದ್ವಿಜನಾಗುತ್ತಾನೆ.
ಸಂಸ್ಕೃತದಲ್ಲಿ ಹಲವಾರು ಕಡೆ ವಿಪ್ರ, ದ್ವಿಜ, ಬ್ರಹ್ಮನ್, ಬ್ರಾಹ್ಮಣ ಎಂದು ಬಂದಿರುವ ಕಡೆಯಲ್ಲೆಲ್ಲಾ ಹಿಂದೆ ವಿದ್ವಾಂಸರು ಇದು ಏಕರೂಪವಾಗಿ ಬ್ರಾಹ್ಮಣ
ಎಂದು ವ್ಯಾಖ್ಯಾನಿಸಿ ಹೇಳಿದ್ದಾರೆ, ಆದರೆ ಇದು ತಪ್ಪು ವ್ಯಾಖ್ಯಾನ ಎಂದು ಹೇಳಲಾಗದು ಅಂದು ಅವರು ವ್ಯಾಖ್ಯಾನಿಸಿದ ಸಂಧರ್ಬ
ಕಾಲದಲ್ಲಿ ಯಾವ ಜಾತಿಯವರು ಹೆಚ್ಚಾಗಿ ಇದರಲ್ಲಿ ನಿರತರಾಗಿದ್ದರು, ಎಂಬ ಅರ್ಥದಲ್ಲಿ ಹೇಳಿರಬಹುದು ಎಂದು ಹೇಳುವವರು ಇದ್ದಾರೆ.
ಆದರೆ ಸಂಸ್ಕೃತದಲ್ಲಿ ಅಂತಹ ಪದಗಳಿಗೆ ಇರುವ ಅರ್ಥಗಳನ್ನು ಗಮನಿಸಿದರೆ ನಿಜವಾದ ಅರ್ಥ ಮೂಡುತ್ತದೆ.
ವಿಪ್ರ:-
ಬುದ್ಧಿವಂತ, ಪ್ರೇರಕನು, ಗಾಯಕ, ಕವಿ, ನೋಡುವವನು, ಕಲಿತ ದೇವತಾ ಶಾಸ್ತ್ರಜ್ಞ, ಕಲಿತವ, ಬ್ರಹ್ಮನ್, ಬ್ರಾಹ್ಮಣ, ಋಷಿ, ಬುದ್ದಿವಂತ ಮನುಷ್ಯ, ಇತ್ಯಾದಿ. (ಅಕ್ಷರಶಃ ಅರ್ಥದಲ್ಲಿ "ಹೊಳಪನ್ನು
ರಕ್ಷಿಸುವ ಶ್ರೇಷ್ಠತೆ" ಎಂದು ಬರುತ್ತದೆ. ಇಲ್ಲಿ ಹೊಳಪು ಎಂದರೆ ಪ್ರಾಣಾಯಾಮದಿಂದ ಆರೋಗ್ಯ
ಮತ್ತು ಜ್ಞಾನದ ಹೊಳಪನ್ನು ಪಡೆದ ಜನರು, ಅಥವ ಅದನ್ನು ರಕ್ಷಿಸುವ ಶ್ರೇಷ್ಠೆತೆಯನ್ನು ಪಡೆದ ಜನರು ಎನ್ನಬಹುದು)
ಬ್ರಾಹ್ಮಣ:- ದೈವಿಕವಾದದ್ದು, ಬ್ರಾಹ್ಮಣ ಮನುಷ್ಯ, ದೈವಿಕ ಶಕ್ತಿ, ಪವಿತ್ರವಾದದ್ದು, ದೈವಿಕ ಜ್ಞಾನವನ್ನು ಹೊಂದಿರುವವನು, ಪವಿತ್ರ ಜ್ಞಾನದ ಅಥವ ಸಿದ್ದಾಂತದ ವಿವರಣೆಗಳು, ಸಮಾವೇಶ,
ಬ್ರಾಹ್ಮಣ ವಿವರಣೆ, ಬ್ರಹ್ಮನ್, ನಾಲ್ಕು ವರ್ಣಗಳಲ್ಲಿ ಮೊದಲನೇ ಗುಂಪು. (ಅಕ್ಷರಶಃ ಅರ್ಥದಲ್ಲಿ
"ನೀರು, ಬೆಂಕಿ, ಜೀವ ಉಸಿರು, ವೈದ್ಯ, ಮಾಂತ್ರಿಕ ಸೂತ್ರ ಜ್ಞಾನ" ಎಂದು ಬರುತ್ತದೆ, ಈ ಎಲ್ಲಾ ವಿಚಾರಗಳಲ್ಲಿ ಜ್ಞಾನ ಹೊಂದಿರುವವನು ಮಾತ್ರ
ಬ್ರಾಹ್ಮಣ ಆಗುತ್ತಾನೆ.)
ಬ್ರಹ್ಮನ್
:- ಪವಿತ್ರ ಪದ, ಭಕ್ತಿ,
ಪವಿತ್ರ ಜೀವನ, ಬ್ರಹ್ಮಾಂಡದ ತುಲಾಭಾರ, ಸಂಪೂರ್ಣ ಬ್ರಹ್ಮಾಂಡ, ಪ್ರಾರ್ಥನೆ, ಬ್ರಾಹ್ಮಣ ಋಷಿ, ಬ್ರಹ್ಮ
ದೇವರು. (ಬ್ರಹ್ಮನ್ ಎಂದರೆ ಅಕ್ಷರಶಃ ಅರ್ಥ "ಅವಿಶ್ರಾಂತವಾಗಿ ನೀರು, ಬೆಂಕಿ, ಶಾಖ, ಹೊಳಪು, ಧ್ಯಾನ, ಜ್ಞಾನವನ್ನು ಪಡೆದುಕೊಳ್ಳುವ ವೈದ್ಯ ಮಾಂತ್ರಿಕ ಸೂತ್ರ" ಇಂತಹ ವಿಚಾರಗಳಲ್ಲಿ
ವೈದ್ಯ ಮಾಂತ್ರಿಕ ಸೂತ್ರವನ್ನು ಬಲ್ಲವನು ಮಾತ್ರ ಬ್ರಹ್ಮನ್ ಎನಿಸಿಕೊಳ್ಳುತ್ತಾನೆ)
ದ್ವಿಜ:- ಎರಡು ಸಾರಿ ಜನ್ಮ ಉಳ್ಳವರು, (ಒಂದು ತಾಯಿ ಗರ್ಬದಲ್ಲಿ ಇನ್ನೊಂದು
ವಿಧ್ಯಾಭ್ಯಾಸಕ್ಕೆ ತೆರಳುವಾಗ ಆಗುವ ಉಪನಯನದ ವೇಳೆ). (ಅಕ್ಷರಶಃ ಅರ್ಥ
"ಸೇರಿರುವಿಕೆಯಿಂದ ಪ್ರತ್ಯೇಕತೆಯನ್ನು
ಉಂಟುಮಾಡುತ್ತದೆ" ಹುಟ್ಟಿನಿಂದ ಎಲ್ಲರೂ ಶೂದ್ರರೇ ಸಂಸ್ಕಾರವನ್ನು ಜ್ಞಾನವನ್ನು ಕಲಿಯಲು ಸೇರುವಿಕೆಯಿಂದ ಪ್ರತ್ಯೇಕತೆಯನ್ನು ಉಂಟುಮಾಡುವ
ಹಂತವೇ ದ್ವಿಜನಾಗುವುದು ಎನ್ನಬಹುದು)
ನಾಲ್ಕು ವರ್ಣಗಳಲ್ಲಿ ಬ್ರಾಹ್ಮಣ, ಕ್ಷತ್ರಿಯ, ಮತ್ತು ವೈಶ್ಯ ದ್ವಿಜರೆನಿಸಿಕೊಳ್ಳುತ್ತಾರೆ. ಶೂದ್ರನಾಗಿಯೂ
ವಿಧ್ಯಾಭ್ಯಾಸಕ್ಕೆ ತೆರಳುವವನು ಉಪನಯನದಿಂದ (ಜ್ಞಾನಾರ್ಜನೆಯ ಸಂಕಲ್ಪದಿಂದ) ದ್ವಿಜ-ನಾಗುತ್ತಾನೆ.
ಬ್ರಾಹ್ಮಣ, ಕ್ಷತ್ರಿಯ, ಮತ್ತು ವೈಶ್ಯರ ಮಗನಾಗಿ ಹುಟ್ಟಿದರೂ
ವಿಧ್ಯಾಭ್ಯಾಸಕ್ಕೆ ತೆರಳದೆ ಶೂಧ್ರನಾಗಿಯೇ ಮುಂದುವರಿ-ಯುತ್ತಾನೆ. ಜ್ಞಾನಿಗಳ ಪ್ರಕಾರ ಜನ್ಮದಿಂದ
ಎಲ್ಲರೂ ಶೂದ್ರರೇ ಸಂಸ್ಕಾರಾದಿಗಳಿಂದ ವರ್ಣಾಶ್ರಮ ಪಡೆದರು. ಕ್ಷತ್ರಿಯ ಎನ್ನುವ ಪದದ ಅಕ್ಷರಶಃ
ಅರ್ಥ "ಖ್ಯಾತಿಯನ್ನು ಪಡೆಯಲು ಮಿಂಚು ಮೂರು" ಎಂದು ಇದೆ. ಕ್ಷತ್ರಿಯರು ಖ್ಯಾತಿಯನ್ನು
ಪಡೆಯಲು "ಆಡಳಿತ, ಶೌರ್ಯ,
ಜನಾನುರಾಗಿ ಮೂರು ವಿಷಯದಲ್ಲಿ ತಮ್ಮ
ಹೊಳಪನ್ನು ಹೆಚ್ಚಿಸುತ್ತಾರೆ ಎನ್ನಬಹುದು. ವೈಶ್ಯ ಎನ್ನುವ ಪದದ ಅಕ್ಷರಶಃ ಅರ್ಥ
"ವಿಭಾಗಿಸುವ ಚಲನೆಯನ್ನು ಶಕ್ತಿಯುತವಾಗಿ ಕರೆಯುವುದು". ವ್ಯವಹಾರ, ವ್ಯವಸಾಯ ಇವುಗಳ ಆಡಳಿತ ಮತ್ತು ಲಾಭವನ್ನು
ವಿಭಾಗಿಸುವ ಕಲೆಗಳಾಗಿವೆ, ಇಂತಹ
ಕಲೆಯನ್ನು ಕಲಿತವನೇ ವೈಶ್ಯ ಎನ್ನಬಹುದು. ಶೂದ್ರ ಪದದ ಅಕ್ಷರ ಸಹ ಅರ್ಥ "ವೇಗವಾಗಿ
ಬೆಂಕಿಯನ್ನು ಉತ್ಪಾದಿಸುವವ" ಇಲ್ಲಿ ಶ್ರಮ ಜೀವಿಗಳಿಗೆ ಮಾತ್ರ ಅಂತಃ ಬೆಂಕಿ ಮೈಯಲ್ಲಿ
ಉತ್ಪತ್ತಿಯಾಗುವುದು ಇಂತಹ ಶ್ರಮಿಕ ವರ್ಗವೇ ಶೂದ್ರ ಎನ್ನಬಹುದು.
ಸಂಸ್ಕೃತ ಶಬ್ದ ಕೋಶದಲ್ಲಿ ವರ್ಣ ಅಂದರೆ, ಬಾಹ್ಯ ನೋಟ, ಬಾಹ್ಯ, ರೂಪ, ಆಕೃತಿ, ಆಕಾರ, ಬಣ್ಣ, ಜನಾಂಗ, ಜಾತಿಗಳು, ರೀತಿಯ, ವಿಂಗಡಣೆ, ಪಾತ್ರ, ಸ್ವಭಾವ, ಗುಣಮಟ್ಟ, ಎಂಬ ಅರ್ಥ ನೀಡಲಾಗಿದೆ. ಇಲ್ಲಿ ವರ್ಣ ಎಂಬ ಪದವನ್ನು ಜಾತಿ ಎಂದು ಉಪಯೋಗಿಸಿರುವುದು,
ಇಂದು ಜಾತಿ ಎಂಬ ಪದವನ್ನು ತೆಗೆದುಕೊಳ್ಳುವ
ರೀತಿಯಲ್ಲಿ ತಪ್ಪಾಗಿದೆ. ಇಂದಿನ ಜಾತಿ ವ್ಯವಸ್ಥೆಯಲ್ಲಿ ಇದನ್ನು ಅರ್ಥೈಸಬಾರದು. ವರ್ಣ ಎಂದರೇ
ವರ್ಗ, ಸ್ವಭಾವ, ಗುಣ ಎಂಬುದು ಯುಕ್ತವಾಗಿದೆ. ಜ್ಞಾನಿಗಳ ಪ್ರಕಾರ
ಒಬ್ಬ ತಪ್ಪು ಮಾಡಿದಾಗ ಅವನ ಬಣ್ಣ ಬಯಲಾಯಿತು ಅನ್ನುತ್ತಾರೆ, ಅಂದರೆ ಅವನ ನಿಜ ಗುಣ, ಸ್ವಭಾವ ಬಯಲಾಯಿತು ಎಂದು ಅದು ಅವನ ಜಾತಿ ಅಥವಾ ಅವನ ದೇಹದ
ಬಣ್ಣ ಕುರಿತು ಹೇಳುವುದಲ್ಲಾ. (ಆದರೆ ಅಕ್ಷರಶಃ ಅರ್ಥ "ಖಚಿತತೆಯನ್ನು ಶಕ್ತಿಯುತವಾಗಿ
ಪರಿಣಾಮ ಬೀರುತ್ತದೆ" ಎಂದು ಬರುತ್ತದೆ, ಇಲ್ಲಿ ವರ್ಣವು ವ್ಯಕ್ತಿಯ ನಿಜ ಸ್ವಭಾವ ಮತ್ತು ಗುಣವನ್ನು ಖಚಿತತೆಯಿಂದ ಶಕ್ತಿಯುತವಾಗಿ
ಪರಿಣಾಮ ಬೀರುವ ವ್ಯಕ್ತಿತ್ವ ಎಂದು ಹೇಳಬಹುದು).
ಜಾತಿಯಿಂದ ಜ್ಞಾನವು ಬರುವುದಲ್ಲ
ಭವಿಷ್ಯಮಹಾಪುರಾಣ
- ಸಂಪುಟ - 2, ಬ್ರಾಹ್ಮಪರ್ವ
ಭಾಗ-2 - ಅಧ್ಯಾಯ
- 42
ರಲ್ಲಿನ ಶ್ಲೋಕಗಳು
ಜಾತೋ
ವ್ಯಾಸಸ್ತು ಕೈವರ್ತ್ಯಾಃ ಶ್ವಪಾಕ್ಯಾಶ್ಚ ಪರಾಶರಃ ।
ಶುಕ್ಯಾಃ ಶುಕಃ
ಕಣಾದಾಖ್ಯಃ ತೆಥೋಲೂಕ್ಯಾಸ್ಸುತೋಭವತ್ ॥ 22
ಭಾವಾರ್ಥ:- ೨೨. ವ್ಯಾಸರು ಅಂಬಿಗರ ಹುಡುಗಿಯಲ್ಲಿ ಹುಟ್ಟಿದರು. ಪರಾಶರ ಮಹರ್ಷಿಯು ನಾಯಿಯನ್ನು ಬೇಯಿಸಿ
ತಿನ್ನುವ ಹೀನಜಾತಿಯ ಸ್ತ್ರೀಯಲ್ಲಿ ಹುಟ್ಟಿದನು. ಶುಕಮಹರ್ಷಿಗಳು ಹೆಣ್ಣು ಗಿಣಿಯ ಗರ್ಭದಲ್ಲಿ
ಹುಟ್ಟಿದರು. ಮತ್ತು ಕಣಾದರು (ವೈಶೇಷಿಕಶಾಸ್ತ್ರ ಪ್ರವರ್ತಕರು) ಹೆಣ್ಣು ಗೂಬೆಯಲ್ಲಿ ಜನಿಸಿದರು.
ಮೃಗೀಜೋಥರ್ಷಶೃಂಗೋಪಿ
ವಶಿಷ್ಠೋ ಗಣಿಕಾತ್ಮಜಃ ।
ಮಂದಪಾಲೋ
ಮುನಿಶ್ರೇಷ್ಠೋ ನಾವಿಕಾಪತ್ಯಮುಚ್ಯತೇ ||
23
ಭಾವಾರ್ಥ:- ೨೩. ಋಷ್ಯಶೃಂಗಮುನಿಗಳು ಹೆಣ್ಣು ಹುಲ್ಲೆಯಲ್ಲಿ ಹುಟ್ಟಿದರು. ವಸಿಷ್ಠರು ಸೂಳೆಯಲ್ಲಿ
ಹುಟ್ಟಿದವರು, ಮುನಿಶ್ರೇಷ್ಠರಾದ
ಮಂದಪಾಲರು ನಾವಿಕನ ಮಗನಾಗಿ ಹುಟ್ಟಿದರೆಂದು ಹೇಳಲ್ಪಟ್ಟಿದೆ.
ಮಾಂಡವ್ಕೋ
ಮುನಿರಾಜಸ್ತು ಮಂಡೂಕೀ ಗರ್ಭಸಂಭವಃ ।
ಬಹವೋsನ್ಯೇಪಿ
ವಿಪ್ರತ್ವಂ ಪ್ರಾಪ್ತಯೇ ಪೂರ್ವವದ್ವಿಜಾಃ ॥
ಭಾವಾರ್ಥ:- ೨೪. ಶ್ರೇಷ್ಠಮುನಿಗಳಾದ ಮಾಂಡವ್ಯರು ಹೆಣ್ಣುಕಪ್ಪೆಯ ಗರ್ಭದಲ್ಲಿ ಹುಟ್ಟಿದರು. ಇನ್ನೂ ಅನೇಕ
ಬ್ರಾಹ್ಮಣರು ಹಿಂದೆ ಹೇಳಿದಂತೆ ತಾವು ಹುಟ್ಟುವ ಸ್ಥಾನಗಳು ಪ್ರಶಸ್ತಗಳಲ್ಲದಿದ್ದರೂ ಶ್ರೇಷ್ಠವಾದ
ಬ್ರಾಹ್ಮಣ್ಯವನ್ನು ಪಡೆದರು.
ಯಚ್ಚೈತಚ್ಚಾರುಚರಿತೈಃ
ಆರ್ಚ್ಯಮುಚ್ಚರಿತಂ ವಚಃ ।
ತದ್ವಿಚಾರ್ಯಾಚರನ್
ಉಚ್ಚೈಃ ಆಚಾರೋಪಚಿತದ್ಯುತಿಃ ॥
ಭಾವಾರ್ಥ:- ೨೫. ಇಲ್ಲಿ ಹೇಳಿರುವ ಮಹಾತ್ಮರ ಶ್ರೇಷ್ಠವಾದ ನಡತೆಗಳಿಂದ ಅವರ ವಿಷಯವಾಗಿ ಹೇಳಿದ ಮಾತು
ಪೂಜ್ಯವಾಗಿರುವುದು. ಅದನ್ನು ವಿಚಾರಮಾಡಿ ಆ ರೀತಿ ನಡೆದವನು ಶ್ರೇಷ್ಠವಾದ ಆಚಾರದಿಂದ ಒಳ್ಳೆಯ
ತೇಜಸ್ವಿಯಾಗುವನು.
ಹರಿಣೀಗರ್ಭಸಂಭೂತಃ
ಖುಷ್ಯಶೃಂಗೋ ಮಹಾಮುನಿಃ ।
ತಪಸಾ
ಬ್ರಾಹ್ಮಣೋ ಜಾತಃ ಸಂಸ್ಕಾರಸ್ತೇನ ಕಾರಣಮ್ ॥
ಭಾವಾರ್ಥ:- ೨೬. ಜಿಂಕೆಯ ಗರ್ಭದಲ್ಲಿ ಋಷ್ಯಶೃಂಗಮ-ಹಾಮುನಿಯು ಹುಟ್ಟಿದನು. ಅನಂತರ ತಪಸ್ಸಿನಿಂದ
ಬ್ರಾಹ್ಮಣನಾದನು. ಆದುದರಿಂದ ಸಂಸ್ಕಾರವೇ ಬ್ರಾಹ್ಮಣ್ಯಕ್ಕೆ ಕಾರಣ.
ಶ್ವಪಾಕೀಗರ್ಭಸಂಭೂತಃ
ಪಿತಾ ವ್ಯಾಸಸ್ಯ ಪಾರ್ಥಿವಾ ।
ತಪಸಾ
ಬ್ರಾಹ್ಮಣೋ ಜಾತಃ ಸಂಸ್ಕಾರಸ್ತೇನ ಕಾರಣಂ ॥
ಭಾವಾರ್ಥ:- ೨೭. ಚಂಡಾಲ ಸ್ರ್ರೀಗರ್ಭದಲ್ಲಿ ಹುಟ್ಟಿದ ವ್ಯಾಸರ ತಂದೆ ಪರಾಶರಮಹರ್ಷಿಗಳೂ ತಪಸ್ಸಿನಿಂದಲೇ
ಬ್ರಾಹ್ಮಣರಾದರು. ಆದುದರಿಂದ ಸಂಸ್ಕಾರವೇ ಬ್ರಾಹ್ಮಣ್ಯಕ್ಕೆ ಕಾರಣ.
ಉಲೂಕೀ
ಗರ್ಭಸಂಭೂತಃ ಕಣಾದಾಖ್ಯೋ ಮಹಾಮುನಿಃ ।
ತಪಸಾ
ಬ್ರಾಹ್ಮಣೋ ಜಾತಃ ಸಂಸ್ಕಾರಸ್ತೇನ ಕಾರಣಂ ॥
ಭಾವಾರ್ಥ:- ೨೮. ಕಣಾದನೆಂಬ ದೊಡ್ಡಮುನಿಯ ಹೆಣ್ಣು ಗೂಬೆಯಲ್ಲಿ ಜನಿಸಿ ತಪಸ್ಸು ಮಾಡಿ
ಬ್ರಾಹ್ಮಣನಾದನು. ಆದುದರಿಂದ ಸಂಸ್ಕಾರವು ಬ್ರಾಹ್ಮಣ್ಯಕ್ಕೆ ಕಾರಣವು.
ಗಣಿಕಾಗರ್ಭಸಂಭೂತಃ
ವಶಿಷ್ಠಶ್ಚ ಮಹಾಮುನಿಃ ।
ತಪಸಾ
ಬ್ರಾಹ್ಮಣೋ ಜಾತಃ ಸಂಸ್ಕಾರಸ್ತೇನ ಕಾರಣಂ ॥
ಭಾವಾರ್ಥ:- ೨೯. ಸೂಳೆಯ ಗರ್ಭದಲ್ಲಿ ಹುಟ್ಟಿದ ವಸಿಷ್ಠನೂ ತಪಸ್ಸಿನಿಂದ ಬ್ರಾಹ್ಮಣನಾದನು. ಆದುದರಿಂದ
ತಪಸ್ಸು ಬ್ರಾಹ್ಮಣ್ಯಕ್ಕೆ ಕಾರಣ.
ನಾವಿಕಾ
ಗರ್ಭಸಂಭೂತೋ ಮಂದಪಾಲೋ ಮಹಾಮುನಿಃ ।
ತಪಸಾ
ಬ್ರಾಹ್ಮಣೋ ಜಾತಃ ಸಂಸ್ಥಾರಸ್ತೇನ ಕಾರಣಂ ॥
ಭಾವಾರ್ಥ:- ೩೦. ಮಂದಪಾಲನೆಂಬ ಮಹರ್ಷಿಯು ಬೆಸ್ತಜಾತಿಯ ಹೆಂಗಸಿನ ಹೊಟ್ಟಿಯಲ್ಲಿ ಹುಟ್ಟಿದವನು. ಆದಾಗ್ಯೂ
ತಪಸ್ಸಿನಿಂದ ಬ್ರಾಹ್ಮಣನಾದನು. ಆದ್ದರಿಂದ ಸಂಸ್ಕಾರವೇ ಬ್ರಾಹ್ಮಣ್ಯಕ್ಕೆ ಕಾರಣವು.
ವೇದತಂತ್ರಜ
ಸಂಸ್ಥಾರ ಕಲಾಪನಿಪುಣೈರಪಿ |
ವಿದ್ಯಾ
ತಪೋಧನಬಲಾತ್ ಉತ್ಕೃಷ್ಟಂ ಲಭ್ಯತೇ ಫಲಂ ॥
ಭಾವಾರ್ಥ:- 31. ವೇದೋಕ್ತ ತಂತ್ರಗಳಿಂದ ಏರ್ಪಟ್ಟ ಸಂಸ್ಕಾರಗಳನ್ನು
ಮಾಡಿಕೊಳ್ಳುವುದರಲ್ಲಿ ನಿಪುಣರಾದವರು ವಿದ್ಯಾಬಲ, ತಪೋಬಲ, ಧನಬಲ ಇವುಗಳ
ಸಾಧನಗಳಿಂದ ಉತ್ಕೃಷ್ಟವಾದ ಫಲವನ್ನು ಹೊಂದುತ್ತಾರೆ.
ವಿವರಣೆ:- ವೇದಗಳ ಪ್ರಕಾರ ಬ್ರಹ್ಮನು ವಸಿಷ್ಠ ಮಹಾ ಋಷಿಗೆ
ತಂದೆ ಎನ್ನಲಾಗಿದೆ. ವಸಿಷ್ಠರು ಮತ್ತು ಅರುಂದತಿಯವರಿಗೆ ಜನಿಸಿದವರೇ ಶಕ್ತಿ ಮಹರ್ಷಿ, ಅದೃಷ್ಯವಂತಿ ಮತ್ತು ಶಕ್ತಿ ಮಹರ್ಷಿಗೆ ಜನಿಸಿದವರೇ
ಪರಾಷರ ಮಹರ್ಷಿ. ಪರಾಷರ ಮಹರ್ಷಿ ಮತ್ತು ಮೀನುಗಾರರ ಕುಲದ ಸತ್ಯವತಿಗೆ ಹುಟ್ಟಿದ್ದೇ ವ್ಯಾಸ
ಮಹರ್ಷಿ. ನಂತರ ಸತ್ಯವತಿ ಸಂತನು ಮಹಾರಾಜನನ್ನು ವರಿಸಿದಳು. ಇವರಿಗೆ ಚಿತ್ರಾಂಗದ ಮತ್ತು
ವಿಚಿತ್ರವೀರ್ಯ ಎಂಬ ಮಕ್ಕಳು ಹುಟ್ಟಿದ್ದರು. ಇಬ್ಬರೂ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಆಸು
ನೀಗಿದರು. ವಿಚಿತ್ರವೀರ್ಯನಿಗೆ ಅಂಬಿಕಾ ಮತ್ತು ಅಂಬಾಲಿಕಾ ಎಂಬ ಇಬ್ಬರು ಪತ್ನಿಯರು. ಅಂದಿನ ನಿಯೋಗ
ಸಂಸೃತಿಯಿಂದ ವ್ಯಾಸ ಮಹರ್ಷಿ ಮತ್ತು ಅಂಬಿಕೆಗೆ ಹುಟ್ಟಿದ್ದು ದ್ರುತರಾಷ್ಟ್ರ ಆದರೆ, ಅಂಬಾಲಿಕೆ ಮತ್ತು ವ್ಯಾಸ ಮಹರ್ಷಿಗೆ ಹುಟ್ಟಿದ್ದು
ಪಾಂಡುರಾಜ. ವ್ಯಾಸ ಮಹರ್ಷಿ ಮತ್ತು ದಾಸಿಗೆ ಹುಟ್ಟಿದ್ದು ವಿದುರ. ವಶಿಷ್ಟರು, ಪರಾಷರರು, ಮತ್ತು ವ್ಯಾಸರಾದಿಯಾಗಿ ವೇದಗಳು, ಪುರಾಣಗಳು ಇತರೆ ಹಿಂದು ಗ್ರಂಥಗಳನ್ನು ರಚಿಸಿದ್ದಾರೆ. ಬ್ರಾಹ್ಮಣ ಅಂದರೆ 'ಬ್ರಹ್ಮ ಅಣತೀತಿ'; ಅಂದರೆ ಬ್ರಹ್ಮ ತತ್ವವನ್ನು ಅರ್ಥ ಮಾಡಿಕೊಂಡವ ಎಂದರ್ಥ. 'ಬ್ರಹ್ಮ' ಎಂದರೆ ಎಲ್ಲಕ್ಕಿಂತ ದೊಡ್ಡದಾದದ್ದು. ಎಲ್ಲಕ್ಕಿಂತ ದೊಡ್ಡದು
ವೇದ ಮತ್ತು ವೇದವೇದ್ಯನಾದ ಭಗವಂತ. ಆದ್ದರಿಂದ ವೇದವನ್ನು ಅರಿತವನು, ವೇದವೇದ್ಯ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವನು ಬ್ರಾಹ್ಮಣ.
ತಪಸ್ಸು ಮತ್ತು ಧ್ಯಾನದಿಂದ ಬ್ರಹ್ಮಜ್ಞಾನವನ್ನು ಪಡೆದ ಬಗ್ಗೆ ಮೇಲಿನ ಉಲ್ಲೇಕಗಳನ್ನು
ಗಮನಿಸುವುದು.
ಇಂದ್ರಿಯ ಸಮುದಾಯವನ್ನು ನಿಗ್ರಹಿಸಬೇಕು
ಅನಿರ್ಜಿತ್ಯೇಂದ್ರಿಯಗ್ರಾಮಂ
ಯಸ್ತು ಧ್ಯಾನಪರೋ ಭವೇತ್ ।
ಮೂಢಾತ್ಮಾನಂ ಚ
ತಂ ವಿದ್ಯಾದ್ಧ್ಯಾನಂ ಚಾಸ್ಯ ನ ಸಿಧ್ಯತಿ ॥
ಶ್ರೀ ನಾರದೀಯ
ಪುರಾಣಂ - ಪೂ.ಭಾ – ಅಧ್ಯಾಯ 33
ಶ್ಲೋಕ ೧೩೧
ಭಾವಾರ್ಥ:- ಇಂದ್ರಿಯ ಸಮುದಾಯವನ್ನು ನಿಗ್ರಹಿಸದೆ ವಿಷಯಾಸಕ್ತನಾಗಿ ಧ್ಯಾನಪರನಾದವನನ್ನು ಮೂಢನೆಂದು
ತಿಳಿಯಬೇಕು. ಅಂತಹವನಿಗೆ ಧ್ಯಾನ ಸಿದ್ಧಿಯಾಗುವುದಿಲ್ಲ.
ಇಂದ್ರಿಯ
ಸಮುದಾಯ ವಿವರಣೆ:-
ಜ್ಞಾನೇಂದ್ರಿಯಗಳು ಐದು. (ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ.), ಕರ್ಮೇಂದ್ರಿಗಳು ಐದು, (ಕೈ,
ಕಾಲು, ಮಾತು, ಪಾಯು(ಗುದದ್ವಾರ), ಉಪಸ್ಥಾ(ಶಿಶ್ನ))
ದೃಷ್ಟವಾದ ಸಕಲಪದಾರ್ಥಗಳು ಪರಮಾತ್ಮಸ್ವಾಮಿಕವಾಗಿ ಅವನ ಅಧೀನವಾದುವುಗಳೆಂದು ತಿಳಿಯಬೇಕು.
ವಿಷಯಗಳಲ್ಲಿ ಪ್ರಸಕ್ತವಾದ ಇಂದ್ರಿಯಗಳನ್ನು ಪ್ರತ್ಯಾಹರಣಮಾಡಿ ಧರಿಸುವುದು ಧಾರಣೆಯೆನಿಸುವುದು.
ಯೋಗಾಭ್ಯಾಸದಿಂದ ಇಂದ್ರಿಯ ಸಂಘವನ್ನು ನಿಗ್ರಹಿಸಿ ಎಂದರೆ ವಿಷಯಗಳ ಕಡೆ ಹೋಗದಂತೆ ಸ್ಥಿರವಾಗಿ
ನಿಲ್ಲಿಸಿ ಅಂತರ್ಯಾಮಿಯು, ಉತ್ತಮನು,
ಸಕಲ ಜಗತ್ ಸೃಷ್ಠಿಯೂ ಆದ ಅಚ್ಯುತನನ್ನು
ಚಿತ್ತೈಕಾಗ್ರ್ಯದಿಂದ ಧ್ಯಾನಿಸಬೇಕು. ಇತರ ವಸ್ತುಗಳನ್ನು ದೂರಮಾಡಿ ಕೇವಲ ಧ್ಯೇಯ ವಸ್ತುವನ್ನೇ
ವಿಷಯಾಕರಿಸುತ್ತಿರುವ ಜ್ಞಾನಪರಂಪರೆಯು ಧ್ಯಾನವೆಂದು ಸಾಧುಗಳಿಂದ ಉಕ್ತವಾಗಿದೆ. ಮನುಷ್ಯನು ಒಂದು
ಮುಹೂರ್ತ ಕಾಲವಾದರೂ ಧ್ಯಾನಮಾಡಿ ಉತ್ಕೃಷ್ಟವಾದ ಮೋಕ್ಷವನ್ನು ಪಡೆಯಬೇಕು. ಧ್ಯಾನದಿಂದ ಪಾಪ
ಪರಿಹಾರ, ಮೋಕ್ಷಪ್ರಾಪ್ತಿ ಮತ್ತು
ಹರಿಪ್ರಸಾದ ಇವುಗಳು ಸಂಭವಿಸುತ್ತವೆ. ಅಷ್ಟೇ ಅಲ್ಲ; ಧ್ಯಾನದಿಂದ ಸಕಲೇಷ್ಟ ಸಿದ್ಧಿಯೂ ಆಗುವುದು. ಅದರಿಂದ
ಜ್ಞಾನವೆಂಬ ಆಮೃತವು ಲಬ್ಧವಾಗಿ ಅದರ ಸೇವನೆಯಿಂದ ಮೋಕ್ಷವುಂಟಾಗುವುದು. ನಿರಂತರವಾಗಿ
ಧ್ಯಾನಮಾಡುವುದರಿಂದ ಚಿದಾನಂದಾದ್ಯಾತ್ಮಕತತ್ವವು (ಸತ್ - ಚಿತ್ - ಆನಂದ - ಸತ್ಯ, ಪ್ರಜ್ಞೆ, ಆನಂದ ಆಧ್ಯಾತ್ಮಕ ತತ್ವವು) ವ್ಯಕ್ತವಾಗುತ್ತದೆ.
ಇಂದ್ರಿಯಾಣಿ ಚ
ಸರ್ವಾಣಿ ವಿಜೇತವ್ಯಾನಿ ಧೀಮತಾ ||
ಶ್ರೀ ನಾರದೀಯ
ಪುರಾಣಂ - ಪೂ.ಭಾ - ಅಧ್ಯಾಯ 44
ಶ್ಲೋಕ 48
ಭಾವಾರ್ಥ:- ಜ್ಞಾನಿಯಾದವನು ಇಂದ್ರಿಯಗಳನ್ನೆಲ್ಲಾ ಜಯಿಸಬೇಕು.
ಹೆಚ್ಚುವರಿ
ವಿವರಣೆ :- ಅಧ್ಯಾತ್ಮವು ಅತ್ಯಂತ
ಶ್ರೇಯಸ್ಕರವು ಮತ್ತು ಸುಖಕರವು. ಅದನ್ನು ತಿಳಿಯುವವನು ಪ್ರೀತಿ ಸೌಖ್ಯಗಳನ್ನು ಹೊಂದುತ್ತಾನೆ.
ಅವನಿಗೆ ಅದರ ಫಲಪ್ರಾಪ್ತಿಯೂ ಆಗುತ್ತದೆ. ಅದು ಸಕಲ ಪ್ರಾಣಿಗಳಿಗೂ ಹಿತಕರವಾದುದು. ಪೃಥಿವೀ, ವಾಯು,
ಆಕಾಶ, ಜಲ,
ಐದನೆಯದಾದ ತೇಜಸ್ಸು (ಅಗ್ನಿ) ಇವುಗಳು
ಮಹಾಭೂತಗಳು. ಇವುಗಳಿಗೆಲ್ಲಾ ಉತ್ಪತ್ತಿನಾಶಗಳಿವೆ. ಇವು ಯಾವುದರಿಂದ ಉತ್ಸನ್ನವಾಗುವುವೋ ಅಲ್ಲಿಯೇ
ಲಯವನ್ನು ಹೊಂದುತ್ತವೆ. ಸಮುದ್ರದಲ್ಲಿ ಹುಟ್ಟಿದ ಅಲೆಗಳು ಹೇಗೆ ಅಲ್ಲಿಯೇ ಲೀನವಾಗುತ್ತವೆಯೋ,
ಕೂರ್ಮ (ಆಮೆ) ವು ತನ್ನ ಅವಯವಗಳನ್ನು
ವಿಸ್ತರಿಸಿ ತಾನೇ ಹೇಗೆ ಸೆಳೆದುಕೊಳ್ಳುತ್ತದೆಯೋ, ಅದರಂತೆ ಭೂತ ಸೃಷ್ಠಿಕರ್ತನಾದ ಆತ್ಮನು ಭೂತಗಳಿಂದ ಭೂತಗಳನ್ನು ಸೃಷ್ಟಿಸಿ ಉತ್ಪನ್ನವಾದ ಭೂತಗಳನ್ನು
ಪುನಃ ಅಲ್ಲಿಯೇ ಲೀನವಾಗುವಂತೆ ಮಾಡುವನು. ಭೂತಕರ್ತನು ಸಕಲ ಪ್ರಾಣಿಗಳಲ್ಲಿಯೂ ಪಂಚಮಹಾಭೂತಗಳನ್ನೇ
ಸಂಯೋಜನೆ ಮಾಡಿದನು. ಅವನನ್ನು ಜೀವನು ನೋಡುವುದಿಲ್ಲ. ಶಬ್ದ, ಶ್ರೋತ್ರ (ಕಿವಿ) ಮತ್ತು ಇಂದ್ರಿಯ ಈ ಮೂರು ಆಕಾಶದಿಂದ
ಹುಟ್ಟಿ ಆಕಾಶ ಸಂಬಂಧಿಗಳಾಗಿವೆ. ಸ್ಪರ್ಶ, ಚೇಷ್ಟೆ, ತ್ವಕ್ಕು ಈ ಮೂರು
ವಾಯುಸಂಬಂಧಿಗಳೆಂದೂ, ರೂಪ,
ಚಕ್ಷುರಿಂದ್ರಿಯ್ಯ ಪಾಕಗಳೆಂಬ ಮೂರು
ತೇಜಸ್ಸಂಬಂಧಿಗಳೆಂದೂ ಉಕ್ತವಾಗಿದೆ. ರಸ, ಕ್ಲೇದ, (ಒದ್ದೆಯಾಗಿಸುವಿಕೆ,
ತೇವವಾಗಿಸುವಿಕೆ) ನಾಲಗೆ ಈ ಮೂರು
ಜಲಸಂಬಂಧಿಗಳು. ಗಂಧ, ಫ್ರಾಣೇಂದ್ರಿಯ,
ಶರೀರ ಇವುಗಳು ಪಾರ್ಥಿವಗಳು. ಮಹಾಭೂತಗಳು
ಐದು, ಆರನೆಯದು ಮನಸ್ಸು ಎಂದು
ಉಕ್ತವಾಗಿದೆ. ಆತ್ಮನಿಗೆ ಫ್ರಾಣಾದಿ ಪಂಚಬಾಹ್ಯೇಂದ್ರಿಯಗಳು ಮತ್ತು ಮನಸ್ಸು ಜ್ಞಾನಸಾಧನಗಳು.
ಏಳನೆಯದು ಬುದ್ಧಿಯು, ಕ್ಷೇತ್ರಜ್ಞನು
(ಅಂತರಾತ್ಮನು) ಎಂಟನೆಯವನು ಎಂದು ವಿದ್ವಾಂಸರು ಹೇಳುತ್ತಾರೆ. ಶಬ್ದವನ್ನು ಕೇಳುವುದಕ್ಕಾಗಿ
ಶ್ರೋತ್ರೇಂದ್ರಿಯವೂ, ಸ್ಪರ್ಶವನ್ನು
ತಿಳಿಯುವುದಕ್ಕೋಸ್ಕರ ತ್ವಗಿಂದ್ರಿಯವೂ ರಸವನ್ನು ಗ್ರಹಿಸಲು ರಸನೇಂದ್ರಿಯವೂ, ಗಂಧ ಗ್ರಹಣಾರ್ಥವಾಗಿ ಘ್ರಾಣೇಂದ್ರಿಯವೂ, ನೋಡುವುದಕ್ಕೋಸ್ಕರ ಚಕ್ಷುರಿಂದ್ರಿಯವೂ
ನಿರ್ಮಿತವಾಗಿವೆ. ಮನಸ್ಸು ವಿಚಾರ ಮಾಡಲು ಸಾಧನವು.
ಜಪ ಮಾಡುವವರ ಬಗ್ಗೆ ಪುರಾಣ ಉಲ್ಲೇಖ
ಜಪೋಪಜೀವಿನೇ
ದತ್ತಂ ಯದಾತ್ಮಾನಂ ಪ್ರಪಶ್ಯತಿ ।
ನೃತ್ಯತಿಸ್ಮ
ತದಾ ರಾಜನ್ ಕರಾವುದ್ಧೃತ್ಯ ಭಾರತ ॥
ಭವಿಷ್ಯಮಹಾಪುರಾಣ
, ಬ್ರಾಹ್ಮಪರ್ವ
ಭಾಗ-1 - ಅಧ್ಯಾಯ
- 4
ರಲ್ಲಿನ 113 ನೇ ಶ್ಲೋಕ
ಭಾವಾರ್ಥ:- ಜಪಮಾಡುವವನಿಗೆ ಕೊಟ್ಟ ಅನ್ನವು ತನ್ನನ್ನು ನೋಡಿಕೊಂಡಾಗ ಸಂತೋಷದಿಂದ ಕೈಗಳನ್ನು
ಎತ್ತಿಕೊಂಡು ಕುಣಿಯುವುದು.
ದಾನದಲ್ಲಿ ಅಜ್ಜನಿಗೆ ಮಾಡಿದ ದಾನ ನಿಷ್ಪಲವು.
ವಿದ್ಯಾಸಂಪನ್ನನೂ, ತಪಸ್ ಸಂಪನ್ನನೂ
ಆದ ಜ್ಞಾನಿಯು ಮನೆಗೆ ಬರಲು ಔಷಧಿಗಳೆಲ್ಲವೂ ತಮಗೆ ಉತ್ತಮ ಗತಿ ಪ್ರಾಪ್ತಿಯಾಗುವುದೆಂದು
ವಿನೋದದಿಂದ ಕುಣಿದಾಡಿಕೊಳ್ಳುತ್ತವೆ. ವ್ರತ ಶೂನ್ಯರೂ, ಮಂತ್ರ ಶೂನ್ಯರೂ, ಜಪಶೂನ್ಯರೂ ಆದವರಿಗೆ ದಾನವನ್ನು ಕೊಡಬಾರದು. ಒಂದು ಹಗುರವಾದ
ಬೆಂಡು ಭಾರವಾದ ಕಲ್ಲನ್ನು ಧರಿಸುವುದು. ಆದರೆ ಒಂದುಕಲ್ಲು ಮತ್ತೊಂದು ಕಲ್ಲನ್ನು ದಾಟಿಸಲಾರದು
ಹಾಗೆಯೇ ತಾವೇ ಉದ್ದಾರವಾಗದ ಅವರು ದಾನವನ್ನು ಪ್ರತಿಗ್ರಹಿಸಿದರೂ ಫಲ ಕೊಡಲಾರರು.
ಅನ್ನದಾನ ಮಾಡುವವನಿಗೆ ಸಕಲ ದಾನಗಳ ಫಲವೂ
ಬರುವುದರಿಂದ ಅನ್ನದಾನಮಾಡುವವನು ಪ್ರಾಣದಾನಿಯು, ಮುಖ್ಯವಾದ ಪ್ರಾಣವನ್ನೇ ದಾನಮಾಡಿದವನು ಸಕಲವನ್ನೂ ದಾನಮಾಡಿದವನೆಂದು ಉಕ್ತವಾಗಿದೆ. ಸಕಲ
ದಾನಗಳಲ್ಲಿಯೂ ವಿದ್ಯಾದಾನವು ಶ್ರೇಷ್ಠ. ಸತ್ಯ, ದಾನ, ಅದ್ರೋಹ, ಮೃದುತ್ವ, ದಯೆ, ವಿಷಯ ಜುಗುಪ್ಸೆ ಮತ್ತು ತಪಸ್ಸು ಇವುಗಳು ಯಾರಲ್ಲಿ ಉಪಲಬ್ಧವಾಗುವುವೋ ಅವನು ಜ್ಞಾನಿ ಎಂದು
ವಿಹಿತವಾಗಿದೆ. ಸತ್ಪಾತ್ರದಲ್ಲಿ ದಾನ ಕೊಡದೆ ಲೋಭದಿಂದ ಕೂಡಿಟ್ಟ ಹಣವು ನಿಷ್ಫಲ. ಕೃತಯುಗದಲ್ಲಿ
ತಪಸ್ಸು, ತ್ರೇತಾಯುಗದಲ್ಲಿ
ಧ್ಯಾನವು, ದ್ವಾಪರಯುಗದಲ್ಲಿ
ಯುಜ್ಞವು, ಕಲಿಯುಗದಲ್ಲಿ ದಾನವು
ಪ್ರಶಸ್ತವೆಂದು ಹೇಳಿರುತ್ತಾರೆ.
ವಿದ್ಯಾಮಾಪ್ನು
ಹಿ ಭಕ್ತಿಂ ಚ ಜ್ಞಾನೀ ತ್ವಂ ಮಮ ರೂಪಧೃಕ್ ||
ಶ್ರೀ ನಾರದೀಯ
ಪುರಾಣಂ - ಪೂರ್ವಭಾಗ - ಅಧ್ಯಾಯ 62
ಶ್ಲೋಕ 67
ಭಾವಾರ್ಥ:- ಜ್ಞಾನಿಯಾದ ನೀನು ನನ್ನ ರೂಪವನ್ನು ಮನಸ್ಸಿನಲ್ಲಿ ಧರಿಸುವವನಾಗು. ನೀನು
ಜ್ಞಾನಭಕ್ತಿಗಳನ್ನು ಹೊಂದುವೆ. (ಜ್ಞಾನಿಗೆ ಸಾಕ್ಷಾತ್ಕರಿಸಿದ ಬಗವಂತ ಹೇಳುವುದು)
ಯಮಾಶ್ಚ ನಿಮಯಾಶ್ಚೈವ ಆಸನಾನಿ ಚ ಸತ್ತಮ ।
ಪ್ರಾಣಾಯಾಮಃ ಪ್ರತ್ಯಾಹಾರೋ ಧಾರಣಾ ಧ್ಯಾನಮೇವ ಚ ॥
ಸಮಾಧಿಶ್ಚ ಮುನಿಶ್ರ್ಯೇಷ್ಠ ಯೋಗಾಂಗಾನಿ ಯಥಾಕ್ರಮಂ |
ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 33 ಶ್ಲೋಕ 73 ರಿಂದ ೭4
ಭಾವಾರ್ಥ:-
ಯೋಗಿಯು ತನ್ನ ಯೋಗಾಭ್ಯಾಸದಿಂದ ಅಜ್ಞಾನವನ್ನು ನಾಶಪಡಿಸಿಕೊಳ್ಳುವನು. ಯೋಗವು ಎಂಟು ಅಂಗಗಳಿಂದ
ಸಿದ್ಧಿ-ಸುತ್ತದೆ. ಯಮ, ನಿಯಮ, ಆಸನ,
ಪ್ರಾಣಾಯಾಮ, ಪ್ರತ್ಯಾಹಾರ, ಧಾರಣೆ,
ಧ್ಯಾನ ಮತ್ತು ಸಮಾಧಿ ಇವುಗಳು ಯೋಗಾಂಗಗಳು.
ವಿವರಣೆ:-
ಯೋಗ ಎಂಬುದಕ್ಕೆ ಅಕ್ಷರ ಅನುವಾದದಲ್ಲಿ "ಗಾಳಿಯನ್ನು ಅಥವಾ ಬೆಳಕನ್ನು ಕರೆದು ಚಲಿಸುವುದು"
ಎಂಬುದಾಗಿದೆ. ಇಲ್ಲಿ ಯೋಗದಲ್ಲಿ ವಾಯುವಿನ ಮತ್ತು ಬೆಳಕಿನ ಮಹತ್ವ ಕುಂಡಲಿನಿ ಪ್ರಾಣಾಯಾಮದಲ್ಲಿ
ತಿಳಿದು ಬರುತ್ತದೆ.
(1). ಯಮ ಎಂಬ ಯೋಗಾಂಗ:-
ಅಹಿಂಸಾ ಸತ್ಯಮಸ್ತೇಯಂ ಬ್ರಹ್ಮಚರ್ಯಾಪರಿಗ್ರಹೌ ।
ಅಕ್ರೋಧಶ್ಚಾನಸೂಯಾ ಚ ಪ್ರೋಕ್ತಾಃ ಸಂಕ್ಷೇಪತೋ ಯಮಾಃ ॥
ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 33 ಶ್ಲೋಕ 75
ಭಾವಾರ್ಥ:-
ಅಹಿಂಸೆ, ಸತ್ಯವಚನ, ಅಸ್ತೇಯ (ಕಳ್ಳತನ
ಮಾಡದಿರುವಿಕೆ) ಬಹ್ಮಚರ್ಯೆ, ಅಪರಿಗ್ರಹ (ದಾನತೆಗೆದು-ಕೊಳ್ಳದಿರುವುದು) ಆಕ್ರೋಧ
(ಕೋಪ ಮಾಡದಿರುವುದು) ಮತ್ತು ಅನಸೂಯೆ (ಹೊಟ್ಟೇ ಕಿಚ್ಚು ಪಡದಿರುವುದು) ಇವು ಸಂಕ್ಷೇಪವಾಗಿ
ಯಮಗಳೆಂದು ಹೇಳಲ್ಬಟ್ಟವೆ.
ವಿವರಣೆ:- ಸಮಸ್ತ ಪ್ರಾಣಿಗಳಿಗೂ ದುಃಖವುಂಟು ಮಾಡದಿರುವಿಕೆಯೇ
ಯೋಗಸಿದ್ದಿ ಪ್ರದವಾದ ಅಹಿಂಸೆಯೆಂದು ಉಕ್ತವಾಗಿದೆ. ಧರ್ಮ, ಅಧರ್ಮ
ಇವುಗಳ ವಿವೇಚನ ಪೂರ್ವಕ-ವಾಗಿ ನಿಜವಾದುದನ್ನೆೇ ಹೇಳುವುದನ್ನು ಸತ್ಯವೆಂದು ಹೇಳುತ್ತಾರೆ.
ಸಕಲಕಡೆಗಳಲ್ಲಿಯೂ ಮೈಥುನವನ್ನು ಬಿಡೋಣವೇ ಬ್ರಹ್ಮಚರ್ಯೆ-ಯೆಂದು ಹೇಳಿದೆ. ಅದನ್ನು (ಬ್ರಹ್ಮಚರ್ಯವನ್ನು) ಬಿಟ್ಟರೆ ಅವನು
ಜ್ಞಾನಿಯಾಗಿದ್ದರೂ ಪಾಪಿಯೇ ಸರಿ. ಯೋಗಾಭ್ಯಾಸ ನಿರತನಾಗಿ ವಿಷಯ ಭೋಗಾಶೆಯಿಂದ ಕೂಡಿರುವವನ ಸಂಗಡ
ಮಾತನ್ನೂ ಸಹ ಆಡಬಾರದು. ಸರ್ವಸಂಗ ಪರಿತ್ಯಾಗಮಾಡಿ ಪುನಃ ವಿಷಯ ಭೋಗಾದಿಗಳಲ್ಲಿ ಪ್ರಸಕ್ತನಾಗುವವನ
ಸಂಬಂಧವನ್ನು ಸಾಕ್ಷಾತ್ತಾಗಿ ಅಥವಾ ಪರೋಕ್ಷವಾಗಿಯೂ ಮಾಡಬಾರದು. ಆಪತ್ಕಾಲದಲ್ಲಿಯೂ ಸಹ
ದ್ರವ್ಯವನ್ನು ಪರರಿಂದ ಸ್ವೀಕರಿಸದಿರುವಿಕೆಯು ಯೋಗಸಂಸಿದ್ಧಿ ಕಾರಣವಾದ ಅಪರಿಗ್ರಹ ಎಂದು
ಹೇಳಲ್ಪಟ್ಟಿದೆ. ತನ್ನ ದೊಡ್ಡಸ್ತಿಕೆಯಿಂದ ಮತ್ತನಾಗಿ ಇತರ ವಿಷಯದಲ್ಲಿ ಅತ್ಯಂತ ನಿಷ್ಟುರವಾಗಿ
ಮಾತನಾಡುವುದು ಕ್ರೋಧವೆಂದು ಧರ್ಮಜ್ಞಾನಿಗಳು ಹೇಳುವರು, ಅದಕ್ಕೆ
ವ್ಯತಿರಿಕ್ತವಾದುದು ಆಕ್ರೋಧವೆನಿಸುವುದು. ಐಶ್ವರ್ಯ ಮುಂತಾದುವುಗಳಿಂದ ತನಗಿಂತ ಹೆಚ್ಚಾದವನನ್ನು
ನೋಡಿ ಮನಸ್ಸಿನಲ್ಲಿ ಬಹಳವಾಗಿ ಕುದಿಯುವುದು ಅಸೂಯೆಯೆಂದು ಸಜ್ಜನರಿಂದ ಉಕ್ತವಾಗಿದೆ. ಅಂತಹ
ಅಸೂಯೆಯನ್ನು ಬಿಡುವುದು ಅನಸೂಯೆಯು.
(2). ನಿಯಮ ಎಂಬ ಯೋಗಾಂಗ:-
ತಪಃಸ್ವಾಧ್ಯಾಯಸಂತೋಷಾಃ ಶೌಚಂ ಚ ಹರಿಪೂಜನಂ ।
ಸಂಧ್ಕೋಪಾಸನಮುಖ್ಯಾಶ್ಚ ನಿಯಮಾಃ ಪರಿಕೀರ್ತಿತಾಃ ॥
ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 33 ಶ್ಲೋಕ 87
ಭಾವಾರ್ಥ:-
ತಪಸ್ಸು, ವೇದಶಾಸ್ತ್ರಾಧ್ಯಯನ, ತೃಪ್ತಿ,
ಶೌಚ, ಹರಿಪೂಜೆ ಮತ್ತು ಸಂಧ್ಯಾವಂದನಾದಿ ಆಚರಣೆ ಮುಂತಾದುವುಗಳು
ನಿಯಮಗಳೆಂದು ಹೇಳಲ್ಪಟ್ಟಿವೆ.
ಹೆಚ್ಚುವರಿ ವಿವರಣೆ :- ಚಾಂದ್ರಾಯಣ ಮುಂತಾದ
ವ್ರತಗಳಿಂದ ದೇಹವನ್ನು ದಂಡಿಸುವುದು ತಪಸ್ಸು ಎಂಬುದಾಗಿ ಉಕ್ತವಾಗಿದೆ. ಪ್ರಣವಮಂತ್ರ (ಓಂಕಾರ)
ಉಪನಿಷತ್ತು, ದ್ವಾದಶಾಕ್ಷರ ಮತ್ತು ಅಷ್ಟಾಕ್ಷರ ಮಂತ್ರಗಳು ಮತ್ತು
ಮಹಾವಾಕ್ಯ ಇವುಗಳನ್ನು ಜಪಿಸುವುದೇ ಸ್ವಾಧ್ಯಾಯವೆಂದು ಉಕ್ತವಾಗಿದೆ. ಅದು ಉತ್ತಮ ಯೋಗ ಸಾಧನವು.
ಸ್ವಾಧ್ಯಾಯವನ್ನು ಬಿಟ್ಟಿರುವ ಮನುಷ್ಯನಿಗೆ ಯೋಗಸಿದ್ಧಿ ಯಾಗುವುದಿಲ್ಲ. ಯೋಗವಿಲ್ಲದೆಯೇ
ಮನುಷ್ಯರಿಗೆ ಸ್ವಾಧ್ಯಾಯದಿಂದ ಪಾಪನಾಶವಾಗುವುದು, ಸ್ವಾಧ್ಯಾಯಗಳಿಂದ ಸಂತೋಷ
ಪಡಿಸಲ್ಪಟ್ಟ ದೇವತೆಗಳು ಪ್ರಸನ್ನರಾಗುತ್ತಾರೆ.
ಜಪವು ವಾಚನಿಕ, ಉಪಾಂಶು
ಮತ್ತು ಮಾನಸಿಕ ಎಂದು ಮೂರುವಿಧವು. ಅಕ್ಷರ ಪದಗಳು ಅತ್ಯಂತ ಸ್ಫುಟವಾಗಿ ತಿಳಿಯುವಂತೆ ಮಂತ್ರವನ್ನು
ಉಚ್ಚರಿಸುವುದೇ ವಾಚನಿಕ ಜಪವೆನಿಸುವುದು. ಅದು ಸಕಲ ಯಜ್ಞಗಳ ಫಲವನ್ನು ಕೊಡುತ್ತದೆ. ಪದದಿಂದ
ಪದವನ್ನು ವಿವೇಕಮಾಡಿ ಮೆಲ್ಲಗೆ ಮಂತ್ರೋಚ್ಚಾರಣೆ ಮಾಡವುದು ಉಪಾಂಶು ಜಪವು, ಅದು
ವಾಚನಿಕ ಜಪಕ್ಕಿಂತ ಎರಡರಷ್ಟು ಹೆಚ್ಚು ಎಂದು ಉಕ್ತವಾಗಿದೆ. ಮಂತ್ರಾದಿಗಳಲ್ಲಿರುವ ಅಕ್ಷರ
ವರ್ಗದಲ್ಲಿ ಆಯಾಯಾ ಅಕ್ಷರಗಳ ಅರ್ಥ ವಿಚಾರ ಪೂರ್ವಕವಾಗಿ ಮಂತ್ರಾನು ಸಂಧಾನ ಮಾಡುವುದು ಮಾನಸಿಕ
ಜಪವೆನಿಸುವುದು. ಅದು ಯೋಗ ಸಿದ್ದಿಯನ್ನು ಉಂಟುಮಾಡುತ್ತದೆ. ಜಪದಿಂದ ಯಾವಾಗಲೂ ಸ್ತೋತ್ರ
ಮಾಡುವವನಿಗೆ ದೇವತೆಯು ಪ್ರಸನ್ನವಾಗುವುದು, ಆದ ಕಾರಣ
ಸ್ವಾಧ್ಯಾಯವನ್ನು ಮಾಡುವವನು ಸಕಲೇಷ್ಟಾರ್ಥಗಳನ್ನೂ ಪಡೆಯುವನು.
ವಿಶೇಷವಾಗಿ ತನ್ನ
ಪ್ರಯತ್ನ ವಿಲ್ಲದೇ ಕೇವಲ ಭಗವಂತನ ಅನುಗ್ರಹದಿಂದ ಲಬ್ಧವಾದುದರಲ್ಲಿ ತೃಪ್ತಿ ಪಡುವುದು, ಸಂತೋಷ-ವೆಂದು
ಹೇಳಲ್ಪಟ್ಟದೆ. ಸಂತೋಷವಿಲ್ಲದ ಪುರುಷನು ಎಲ್ಲಿಯೂ ಸುಖಪಡುವುದಿಲ್ಲ. ಯಾವಾಗಲೂ ಕಾಮಗಳನ್ನು
ಅನುಭವಿಸುವುದ-ರಿಂದ ಕಾಮ ಶಾಂತಿಯಾಗುವುದಿಲ್ಲ. ಇದಕ್ಕಿಂತ ಹೆಚ್ಚಿನದನ್ನು ಯಾವಾಗ ಹೊಂದಿಯೇನು?
ಮುಂತಾಗಿ ಕಾಮವು ಅಭಿವೃದ್ಧಿ-ಯಾಗುತ್ತದೆ. ಆದುದರಿಂದ ದೇಹವು ಶೋಷಿಸುವುದಕ್ಕೆ ಕಾರಣವಾದ
ಕಾಮವನ್ನು ತ್ಯೆಜಿಸಿ ಭಗವದನುಗ್ರಹದಿಂದ ಲಬ್ಧವಾದುದರಲ್ಲಿ ಸಂತೋಷಡುವವನಾಗಿ
ಧರ್ಮನಿರತನಾಗಬೇಕು.
ಶೌಚವು ಹೊರಗಿನದು
(ಬಾಹ್ಯ) ಒಳಗಿನದು (ಆಂತರ) ಎಂಬುದಾಗಿ ಎರಡು ವಿಧವೆಂದು ಸ್ಮೃತ್ಯುಕ್ತವಾಗಿದೆ. ಮಣ್ಣು ನೀರು
ಇವುಗಳಿಂದ ಕೈ ಕಾಲು ಮುಂತಾದ ಬಾಹ್ಯವಾದ ಅವಯವಗಳನ್ನು ಶುದ್ಧಿ ಮಾಡುವುದಕ್ಕೆ ಬಹಿಃ ಶುದ್ಧಿಯೆಂತಲೂ,
ಹಾಗೆಯೇ ಅಂತರಶುದ್ಧಿಯು ಭಾವಶುದ್ಧಿಯೆಂತಲೂ ಸ್ಮೃತವಾಗಿದೆ, ಮನಃಶುದ್ಧಿಯೇ
ಭಾವಶುದ್ಧಿಯು. ಆಂತರ್ ಶುದ್ಧಿಯಿಲ್ಲದವರಿಂದ ಅನುಷ್ಠಿತವಾದ ನಾನಾವಿಧ ಯಜ್ಞಾದಿಧರ್ಮಗಳು
ಬೂದಿಯಲ್ಲಿ ಮಾಡಿದ ಹೋಮದಂತೆ ಫಲಕಾರಿಯಾಗುವುದಿಲ್ಲ. ಭಾವಶುದ್ಧಿ-ಯಿಲ್ಲದವರಿಂದ ಕೃತವಾದ ಸಕಲ
ಕರ್ಮಗಳೂ ನಿಷ್ಫಲವು, ಆದಕಾರಣ ರಾಗದ್ವೇಷಾದಿಗಳೆಲ್ಲವನ್ನೂ ಬಿಟ್ಟು
ಸುಖಿಯಾಗಬೇಕು.
(3). ಆಸನ ಎಂಬ ಯೋಗಾಂಗ:-
ಪದ್ಮಕಂ ಸ್ವಸ್ತಿಕಂ ಪೀಟಂ ಸೈಂಹಂ ಕೌಕ್ಕುಟಕೌಂಜರೇ |
ಕೌರ್ಮಂ ವಜ್ರಾಸನಂ ಚೈವ ವಾರಾಹಂ ಮೃಗಚೈಲಿಕಂ ॥
ಕ್ರೌಂಚಂ ಚ ನಾಲಿಕಂ ಚೈವ ಸರ್ವತೋಭದ್ರಮೇವ ಚ ।
ವಾರ್ಷಭಂ ನಾಗಮಾತ್ಸ್ಯೇ ಚ ವೈಯಾಘ್ರಂ ಚಾರ್ಧಚಂದ್ರಕಂ ॥
ದಂಡವಾತಾಸನಂ ಶೈಲಂ ಸ್ವಭ್ರಂ ಮೌದ್ಗರಮೇವ ಚ ।
ಮಾಕರಂ ತ್ರೈಪಥಂ ಕಾಷ್ಠಮ್ ಸ್ಥಾಣುಂ ವೈಕರ್ಣಿಕಂ ತಥಾ ॥
ಭೌಮಂ ವೀರಾಸನಂ ಚೈವ ಯೋಗಸಾಧನಕಾರಣಂ |
ತ್ರಿಂಶತ್ಸಂಖ್ಯಾನ್ಯಾಸನಾನಿ ಮುನೀಂದ್ರೈಃ ಕಥಿತಾನಿ ವೈ ॥
ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 33 ಶ್ಲೋಕ 112 ರಿಂದ 115
ಭಾವಾರ್ಥ:- ಪದ್ಮ,
ಸ್ವಸ್ತಿಕ, ಪೀಠ, ಸಿಂಹಾಸನ, ಕುಕ್ಕುಟ,
ಕುಂಜರಾಸನ, ಕೂರ್ಮ, ವಜ್ರಾಸನ,
ವಾರಾಹಾಸನ, ಮೃಗ, ಚೈಲಿಕ, ಕ್ರೌಂಚ,
ನಾಲಿಕ, ಸರ್ವತೋಭದ್ರ, ಋಷಭ,
ನಾಗ, ಮತ್ಸ್ಯ, ವೈಯಾಘ್ರ, ಅರ್ಧಚಂದ್ರ,
ದಂಡ, ವತಾಸನ, ಶೈಲ, ಸ್ವಭ್ರ,
ಮೌದ್ಗರ, ಮಕರ, ತ್ರೈಪಥಾಸನ, ಕಾಷ್ಠ,
ಸ್ಥಾಣು, ವೈಕರ್ಣಿಕ, ಭೌಮ,
ವೀರಾಸನ ಎಂಬುದಾಗಿ ಯೋಗಾಭ್ಯಾಸಾಂಗವಾದ ಆಸನವು ಮೂವತ್ತು ವಿಧವೆಂಬುದಾಗಿ ಮುನಿಶ್ರೇಷ್ಠರಿಂದ
ಉಕ್ತವಾಗಿದೆ.
ಹೆಚ್ಚುವರಿ ವಿವರಣೆ :- ಗುರುಭಕ್ತಿನಿರತನು
ಸುಖದುಃಖ, ಲಾಭಾಲಾಭ, ಜಯಾ ಜಯ ಮುಂತಾದ
ದ್ವಂದ್ವಗಳನ್ನು ಅತಿಕ್ರಮಿಸಿದವನು ಎಂದರೆ ದುಃಖಾದಿಗಳಂತೆ ಸುಖಾದಿಗಳೂ ಹೇಯವೆಂಬ ಭಾವನೆಯಿಂದ ಅವು
ಪ್ರಾಪ್ತವಾದಾಗ ಹಿಗ್ಗದೆಯೂ ದುಃಖಾದಿಗಳು ಬಂದಾಗ ತಗ್ಗದೆಯೂ ಇರುವವನು ಮತ್ತು ಮಾತ್ಸರ್ಯರಹಿತನೂ
ಅಗಿರುವ ಉಪಾಸಕನು ಉಕ್ತವಾದ ಮೂವತ್ತು ಆಸನಗಳಲ್ಲಿ ಯಾವುದಾದರೊಂದನ್ನು ಅನುಷ್ಠಾನಮಾಡಿ ಪ್ರಾಣ
ವಾಯುವನ್ನು ಜಯಿಸಬೇಕು. ಗಲಾಟೆಯಿಲ್ಲದ ನಿರ್ಜನಪ್ರದೇಶದಲ್ಲಿ ಪೂರ್ವ, ಉತ್ತರ
ಅಥವಾ ಪಶ್ಚಿಮದಿಕ್ಕುಗಳಿಗೆ ಎದುರಾಗಿ ಕುಳಿತು ಯೋಗಾಭ್ಯಾಸಮಾಡಿ ಪ್ರಾಣವಾಯುವನ್ನು ಜಯಿಸಬೇಕು.
(4). ಪ್ರಾಣಾಯಾಮ ಎಂಬ ಯೋಗಾಂಗ:-
ಪ್ರಾಜ್ಮುಖೋsನದಜ್ಮುಖೋ ವಾsಪಿ ತಥಾ ಪ್ರತ್ಯ ಜ್ಮುಖೋsಪಿ ವಾ |
ಅಭ್ಯಾಸೇನ ಜಯೇತ್ಪ್ರಾಣಾನ್ನಿಃ ಶಬ್ದೇ ಜನವರ್ಜಿತೇ ॥
ಪ್ರಾಣೋ ವಾಯುಃ ಶರೀರಸ್ಥ ಆಯಾಮಸ್ತಸ್ಯ ನಿಗ್ರಹಃ ।
ಪ್ರಾಣಾಯಾಮ ಇತಿ ಪ್ರೋಕ್ತೋ ದ್ವಿವಿಧಃ ಸ ಪ್ರಕೀರ್ತಿತಃ ॥
ಅಗರ್ಭಶ್ಚ ಸಗರ್ಭಶ್ಚ ದ್ವಿತೀಯಸ್ತು ತಯೋರ್ವರಃ ।
ಜಪಧ್ಯಾನಂ ವಿನಾsಗರ್ಬಃ ಸಗರ್ಭಸ್ತತ್ಸಮನ್ವಿತಃ ||
ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 33 ಶ್ಲೋಕ 117 - 119
ಭಾವಾರ್ಥ:-
ಗಲಾಟೆಯಿಲ್ಲದ ನಿರ್ಜನಪ್ರದೇಶದಲ್ಲಿ ಪೂರ್ವ, ಉತ್ತರ ಅಥವಾ
ಪಶ್ಚಿಮದಿಕ್ಕುಗಳಿಗೆ ಎದುರಾಗಿ ಕುಳಿತು ಯೋಗಾಭ್ಯಾಸಮಾಡಿ ಪ್ರಾಣವಾಯುವನ್ನು ಜಯಿಸಬೇಕು.
ಶರೀರದಲ್ಲಿರುವ ವಾಯುವೇ ಪ್ರಾಣವು. ಅದರ ನಿಗ್ರಹಕ್ಕೆ ಆಯಾಮವೆಂದು ಹೆಸರು. ಆ ಪ್ರಾಣಾಯಾಮವು
ಅಗರ್ಭ ಮತ್ತು ಸಗರ್ಭ ವೆಂಬುದಾಗಿ ಎರಡು ವಿಧ. ಅವುಗಳಲ್ಲಿ ಎರಡನೆಯದಾದ ಸಗರ್ಭವು ಉತ್ತಮ.
ಜಪಧ್ಯಾನಗಳಿಲ್ಲದೆ ಕೇವಲ ಶ್ವಾಸ ನಿರೋಧ ಮಾಡುವುದು ಅಗರ್ಭ ಪ್ರಾಣಾಯಾಮವು. ಜಪಧ್ಯಾನಗಳಿಂದ
ಸಹಿತವಾದುದು ಸಗರ್ಭವೆನಿಸುವುದು.
ಹೆಚ್ಚುವರಿ ವಿವರಣೆ:- ಜ್ಞಾನಿಗಳು ರೇಚಕ,
ಪೂರಕ, ಕುಂಭಕ ಮತ್ತು ಶೂನ್ಯಕ ಎಂಬುದಾಗಿ ಪ್ರಾಣಾಯಾಮವನ್ನು
ನಾಲ್ಕುಭಾಗವೆಂದು ಹೇಳುವರು. ಪ್ರಾಣಿಗಳ ಬಲಭಾಗದಲ್ಲಿರುವ ನಾಡಿಯು ಪಿಂಗಳಾ ಎಂದು ಉಕ್ತವಾಗಿದೆ.
ಅದಕ್ಕೆ ಸೂರ್ಯನೇ ಅಭಿಮಾನಿದೇವತೆಯು. ಅದು ಪಿತೃಯೋನಿ ಎಂಬುದಾಗಿ ಪ್ರಸಿದ್ಧವಾಗಿದೆ. ಶರೀರದ
ಎಡಭಾಗದಲ್ಲಿರುವ ಇಡಾ ಎಂಬ ನಾಡಿಯು ದೇವ ಯೋನಿಯೆಂದು ಪ್ರಸಿದ್ದವಾಗಿದೆ. ಆ ಇಡಾ ನಾಡಿಗೆ ಚಂದ್ರನನ್ನು ಅಭಿಮಾನಿದೇವತೆ. ಈ ಎರಡು ನಾಡಿಗಳ ಮಧ್ಯದಲ್ಲಿರುವ ನಾಡಿಯು ಸುಷುಮ್ನಾ
ಎಂಬುದಾಗಿ ಉಕ್ತವಾಗಿದೆ. ಅದು ಅತ್ಯಂತ ಸೂಕ್ಷ್ಮ ಮತ್ತು ರಹಸ್ಯವಾದುದೆಂದು ತಿಳಿಯಬೇಕು. ಅದಕ್ಕೆ
ಬ್ರಹ್ಮನೇ ಅಭಿಮಾನಿ ದೇವತೆಯು. ತನ್ನ ದೇಹದಲ್ಲಿ ತುಂಬಿಸಲ್ಪಟ್ಟ ವಾಯುವನ್ನು ನಿಗ್ರಹಿಸಿ ಕೊಂಡು
(ನಿರ್ವಹಣೆ ಮಾಡಿಕೊಂಡು) ಹೊರಗೆ ಬಿಡದೇ ತುಂಬಿದ ಕೊಡದಂತೆ ಅಲ್ಲಾಡದೆ ಸ್ತಿಮಿತವಾಗಿ
ನಿಲ್ಲಸಬೇಕು. ಹೀಗೆ ನಿಲ್ಲಿಸುವುದು ಕುಂಭಕನೆಂದು ಪ್ರಸಿದ್ಧವಾಗಿದೆ. ಹೊರಗಿನ ವಾಯುವನ್ನು
ಸ್ವೀಕರಿಸದೇ ಒಳಗಿನ ವಾಯುವನ್ನು ಹೊರಗೆ ಬಿಡದೆಯೂ ಇದ್ದ ರೀತಿಯಲ್ಲಿಯೇ ಇರುವುದನ್ನು ಶೂನ್ಯಕವೆಂಬ
ಪ್ರಾಣಾಯಾಮವೆಂದು ತಿಳಿ. ಮದಿಸಿದ ಆನೆಯಂತೆ ಪ್ರಾಣವಾಯುವನ್ನು ಮೆಲ್ಲಮೆಲ್ಲಗೆ ಜಯಿಸಬೇಕು. ಹಾಗೆ
ಮಾಡದೆ ಒಟ್ಟಿಗೆ ಜಯಿಸಲು ಯತ್ನಿಸಿದರೆ ಭಯಂಕರವಾದ ಮಹಾವ್ಯಾಧಿಗಳು ಹುಟ್ಟುತ್ತವೆ. (ಇದು ಲೋಕಾ ರೂಡಿ ಅನೇಕ ವಿದ್ವಾಂಸರು ತಿಳಿದಿರುವ ಅರ್ಥ
ಅಕ್ಷರ ಅರ್ಥ ಬೇರೆ ಇದೆ)
ಸೂಚನೆ:- ಕುಂಭಕ ಉಸಿರು ಬಿಗಿ ಹಿಡಿಯುವಿಕೆ ಎಂದು ಸಂಸ್ಕೃತ
ವಿದ್ವಾಂಸರು, ಪುರಾಣಗಳಲ್ಲಿ ವ್ಯಾಖ್ಯಾನಿಸಿದ್ದಾರೆ, ಆದರೆ
ಅಕ್ಷರ ರೀತಿಯಲ್ಲಿ ನೋಡಿದಾಗ "ಚಂದ್ರನ ಮಹಲಿಗೆ (ಸಹಸ್ರಾರಕ್ಕೆ) ಸಂಪತ್ತು ಮಾಂತ್ರಿಕ ಸೂತ್ರವನ್ನು ಧ್ವನಿಸುವ
ಆತ್ಮ" ಎಂಬ ಅರ್ಥ ಬರುತ್ತದೆ. ಪೂರಕ ಎಂದರೆ ಉಸಿರು ಒಳ ಎಳೆಯುವುದು ಎಂದು ಸಂಸ್ಕೃತ ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ,
ಆದರೆ ಅಕ್ಷರ ರೀತಿಯಲ್ಲಿ ನೋಡಿದಾಗ "ಸ್ವಾಧೀನ ಪಡಿಸಿಕೊಳ್ಳುವ ಗಾಳಿಯನ್ನು
ಶುದ್ಧೀಕರಿಸಿ" ಎಂಬ ಅರ್ಥ ಬರುತ್ತದೆ. ರೇಚಕ ಎಂದರೆ ಉಸಿರು ಹೊರಹಾಕುವುದು ಎಂದು ಸಂಸ್ಕೃತ
ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ, ಆದರೆ ಅಕ್ಷರ ರೀತಿಯಲ್ಲಿ ನೋಡಿದಾಗ
"ನೀರಿನಲ್ಲಿ ಅತ್ತಿಂದಿತ್ತ ಚಲಿಸುವಿಕೆಯಿಂದ ದ್ವಿಗುಣಗೊಳಿಸಲಾಗಿದೆ".
ಶೂನ್ಯಕ ಎಂದರೆ ಅಕ್ಷರ ಸಹ ಅರ್ಥ ಗಮನಿಸಿದಾಗ "ಬೆಂಕಿಯಲ್ಲಿ ತ್ವರಿತವಾಗಿ ಒಂದೇ ರೀತಿಯ
ಗಾಳಿ" ಎಂದು ಬರುತ್ತದೆ. ಇಲ್ಲಿ ಅಕ್ಷರಶಃ ವ್ಯಾಖ್ಯಾನದಲ್ಲಿ ಕುಂಡಲಿನಿ ಪ್ರಾಣಾಯಾಮದ
ವಿಧಾನ ಸ್ವಷ್ಟವಾಗಿದೆ. ಆದುದರಿಂದ ಕುಂಭಕ ಎಂದರೆ ಉಸಿರುಕಟ್ಟುವುದು ಎಂಬ ವ್ಯಾಖ್ಯಾನ
ತಪ್ಪಾಗುತ್ತದೆ. ಬಹಳ ವಿದ್ವಾಂಸರು ಉಸಿರುಕಟ್ಟುವಿಕೆಯಿಂದ ದೇಹ ಮತ್ತು ಮನಸ್ಸಿಗೆ ತುಂಬಾ
ಹಾನಿಯಾಗಿದೆ ಅದರಲ್ಲಿ ವ್ಯರ್ಥ ಸಾಧನೆ ಇದೆ ಎಂಬ ಗಮನವೂ ಹಲವರಲ್ಲಿ ಬಂದಿದೆ. ಅದಕ್ಕೆ ಶ್ರೀ
ನಾರದೀಯ ಪುರಾಣದಲ್ಲಿ ಹೀಗೆ ಬೋಧನೆಯಾಗಿರುವುದು "ಮಂತ್ರಾದಿಗಳಲ್ಲಿರುವ ಅಕ್ಷರ ವರ್ಗದಲ್ಲಿ
ಆಯಾಯಾ ಅಕ್ಷರಗಳ ಅರ್ಥ ವಿಚಾರ ಪೂರ್ವಕವಾಗಿ ಮಂತ್ರಾನುಸಂಧಾನ ಮಾಡುವುದು ಮಾನಸಿಕ ಜಪವೆನಿಸುವುದು.
ಅದು ಯೋಗಸಿದ್ದಿಯನ್ನುಂಟುಮಾಡುತ್ತದೆ." (ಅಜಪ ಮಂತ್ರ ನೋಡಿ)
ವಿವರಣೆ:- ನಿರೋಧಯೇತ = ನಿರೋಧ + ಯೇತ = ನಿರೋಧ ಎಂಬ ಪದಕ್ಕೆ
ಸಂಸ್ಕೃತ ಅರ್ಥ ಹಲವಾರು ಇದೆ, ಇದರಲ್ಲಿ "ನಿಯಂತ್ರಿಸು",
"ಹಿಡಿತದಲ್ಲಿಡು", "ಅಧಿಕಾರ
ನಡೆಸು" ಎಂಬುದು ಸೂಕ್ತವಾಗಿದೆ. ಯೇತ ಎಂಬ ಪದಕ್ಕೆ ಸಂಸ್ಕೃತದಲ್ಲಿ
"ಹತ್ತಿರದಿಂದ", "ಸಮೀಪದಿಂದ" ಎಂಬ ಅರ್ಥ ಇದೆ. "ಹತ್ತಿರದಿಂದ ನಿಯಂತ್ರಿಸು" ಎಂಬುದು
ಸೂಕ್ತವಾದ ವ್ಯಾಖ್ಯಾನ. ಕನ್ನಡದಲ್ಲಿ ನಿಗ್ರಹಿಸು ಎಂದರೆ "ಅಂಕೆಗೊಳಪಡಿಸು"
"ಹತೋಟಿಯಲ್ಲಿ ಇಡು" ಎಂದು ಸರಿಯಾಗೇ ಇದೆ. ಆದರೆ ನಿರೋಧಯೇತ ಎಂಬ ಸಂಸ್ಕೃತ ಪದದಲ್ಲಿನ
ಇನ್ನೊಂದು ಅರ್ಥ ಬಂಧಿಸು, ತಡೆಹಿಡಿ ಎಂಬ ಅರ್ಥದಲ್ಲಿ ಉಪಯೋಗಿಸುವುದು
ಒಳಿತಲ್ಲ. ನಿರೋಧಹ ಎಂಬ ಸಂಸ್ಕೃತದ ಅಕ್ಷರಶಃ ಅರ್ಥ "ಹೊಳಪನ್ನು ಹಿಮ್ಮುಖಕ್ಕೆ ಕರೆಯುವ
ಸದ್ಗುಣ" ಎಂದು ಬರುತ್ತದೆ. ಇಲ್ಲಿ ಹೊಳಪಿನ ವಾಯುವನ್ನು ಸುಷುಮ್ನಾ ನಾಡಿಗೆ ಕರೆಯುವ
ಆಚಾರವೇ ನಿರೋಧ ಎಂಬುದಾಗಿದೆ. ಸಂಸ್ಕೃತ ಕೋಶದಲ್ಲಿ ನೀಡಿರುವ ಅರ್ಥದಲ್ಲಿ ಕುಂಭಕ ಮಾಡಬಾರದು.
ದಿವಸೇ ದಿವಸೇ ವೈಶ್ಯ ಪ್ರಾಣಾಯಾಮಾಸ್ತು ಷೋಡಶ ।
ಅಪಿ ಬ್ರಹ್ಮಹಣಂ ಸಾಕ್ಷಾತ್ ಪುನಾತ್ಯಹರಹಃ ಕೃತಾಃ ॥
ಪದ್ಮ ಪುರಾಣ 31- ೮೨
ಭಾವಾರ್ಥ:-
ಹೇ ವೈಶ್ಯನೇ, ಪ್ರತಿದಿವಸವೂ ಹದಿನಾರು ಪ್ರಾಣಾಯಾಮಗಳನ್ನು
ಮಾಡಬೇಕು. ಹಾಗೆ ಮಾಡಿದ ಪ್ರಾಣಾಯಾಮವು ಬ್ರಹ್ಮಹತ್ಯವನ್ನು ನಾಶಮಾಡುತ್ತದೆ.
ವಿವರಣೆ:-
ಪಾಪಿಗಳಾದರೂ ಪ್ರಾಣಾಯಾಮವನ್ನು ಮಾಡಿದರೆ ಅವರ ಪಾಪವು ನಾಶವಾಗಿ ಯಮಲೋಕವನ್ನು ನೋಡುವುದಿಲ್ಲ.
ಮನುಷ್ಯನು ತನ್ನ ಜೀವಮಾನದಲ್ಲಿ ಎಷ್ಟು ತಪಸ್ಸನ್ನು ಮಾಡುತ್ತಾನೋ ಎಷ್ಟು ವ್ರತಗಳನ್ನು
ಆಚರಿಸುತ್ತಾನೋ ಅದಕ್ಕೂ ಸಹಸ್ರ ಗೋದಾನಕ್ಕೂ ಒಂದು ಪ್ರಾಣಾಯಾಮವು ಸಮವಾಗುವುದು. ಮನುಷ್ಯನು
ಮಹಾಪಾತಕ ಉಪಪಾತಕಗಳನ್ನು ಮಾಡಿದ್ದರೂ ಪ್ರಾಣಾಯಾಮ-ಗಳನ್ನು ಮಾಡಿದ ತಕ್ಪಣದಲ್ಲಿ ಆ ಪಾಪವನ್ನು
ಸುಟ್ಟು ಬೂದಿಮಾಡುತ್ತಾನೆ.
(5). ಪ್ರತ್ಯಾಹಾರ ಎಂಬ ಯೋಗಾಂಗ:-
ವಿಷಯೇಷು ಪ್ರಸಕ್ತಾನಿ ಚೇಂದ್ರಿಯಾಣಿ ಮುನೀಶ್ವರ ।
ಸಮಾಹೃತ್ಯ ನಿಗೃಹ್ಣಾತಿ ಪ್ರತ್ಯಾಹಾರಸ್ತು ಸ ಸ್ಮೃತಃ ॥
ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 33 ಶ್ಲೋಕ 129
ಭಾವಾರ್ಥ:-
ವಿಷಯಗಳಲ್ಲಿ ಸಂಚರಿಸುತ್ತಿರುವ ಇಂದ್ರಿಯಗಳನ್ನು ಸೆಳೆದು ನಿಗ್ರಹಿಸುವುದಕ್ಕೆ ಪ್ರತ್ಯಾಹಾರವೆಂದು
ಹೆಸರು.
ವಿವರಣೆ:- ಇಂದ್ರಿಯಗಳನ್ನು ಆಯಾ ವಿಷಯಗಳಿಂದ ಹಿಂತಿರುಗಿಸಿ
ಉದ್ದಿಷ್ಟವಾದ ಕಡೆಯಲ್ಲಿ ಮನಸ್ಸನ್ನು ನಿಲ್ಲಿಸುವುದು, ಇಂದ್ರಿಯಗಳನ್ನು
ವಿಷಯಗಳಿಂದ ನಿಗ್ರಹಿಸಿ ನಿರ್ಬಂಧದಲ್ಲಿ ಇಟ್ಟುಕೊಳ್ಳುವುದು, ನಿಯಂತ್ರಿಸುವುದು.
(6). ಧಾರಣೆ
ಎಂಬ ಯೋಗಾಂಗ:-
ಯದ್ಯತ್ಪಶ್ಯತಿ ತತ್ಸರ್ವಂ ಪಶ್ಯೇದಾತ್ಮನದಾತ್ಮನಾ
ಪ್ರತ್ಯಾಹೃತಾನೀಂದ್ರಿಯಾಣಿ ಧಾರಯೇತ್ಸಾ ತು ಧಾರಣಾ ॥
ಶ್ರೀ ನಾರದೀಯ
ಪುರಾಣಂ - ಪೂರ್ವಭಾಗ - ಅಧ್ಯಾಯ 33 ಶ್ಲೋಕ 129
ಭಾವಾರ್ಥ:- ದೃಷ್ಟವಾದ
ಸಕಲಪದಾರ್ಥಗಳು ಪರಮಾತ್ಮ ಸ್ವಾಮಿಕವಾಗಿ ಅವನ ಅಧೀನವಾದುವುಗಳೆಂದು ತಿಳಿಯಬೇಕು. ವಿಷಯಗಳಲ್ಲಿ
ಪ್ರಸಕ್ತವಾದ ಇಂದ್ರಿಯಗಳನ್ನು ಪ್ರತ್ಯಾಹರಣಮಾಡಿ ಧರಿಸುವುದು ಧಾರಣೆಯೆನಿಸುವುದು.
ಸರ್ವೋತ್ತಮವಾದ
ಧರ್ಮವನ್ನು ಮಾತ್ರ ಎಂದರೆ ಫಲಾಶೆಯಿಲ್ಲದೆ ಕೇವಲ ಭಗವಂತನು ಸಂತುಷ್ಟನಾಗಲೆಂಬ ಅನುಸಂಧಾನದಿಂದ
ಧರ್ಮವನ್ನು ಮಾಡುವವರಿಗೆ ಅದರ ಫಲವು ಶಾಶ್ವತಸುಖವನ್ನುಂಟು ಮಾಡುತ್ತದೆಂದು ತಿಳಿಯಬೇಕು. ಕೆಲಸ,
ಮನಸ್ಸು, ಮತ್ತು ವಾಕ್ಕು ಇವುಗಳಿಂದ ಮಾಡುವ ಸ್ತೋತ್ರ,
ಸಚ್ಚಾಸ್ತ್ರಶ್ರವಣ ಮತ್ತು ಪೂಜೆ ಇವುಗಳಿಂದ ದೃಢೀಕೃತವಾದ ದೇವರ ಮೇಲಿನ ಭಕ್ತಯೇ ದೇವರ
ಪೂಜೆಯೆಂದುಕ್ತವಾಗಿದೆ.
ಇಂದ್ರಿಯ
ಪ್ರವೃತ್ತಿಗಳನ್ನು ನಿರೋಧಿಸಿ ಚಿತ್ತವನ್ನು ಹೃತ್ಕಮಲದಲ್ಲಿರುವ ಪರಮಾತ್ಮನಲ್ಲಿ ನೆಲೆಗೊಳಿಸುವುದು
ಧಾರಣೆ ಎನ್ನುತ್ತಾರೆ. ಧಾರಣೆಯೆಂದರೆ ಶುಭವಾದ ಆಶ್ರಯವಾದ ನಾಭಿಚಕ್ರ, ಹೃದಯ,
ಜಿಹ್ವಾಗ್ರ, ನಾಸಾಗ್ರ, ಶಿರಸ್ಸು
ಮೊದಲಾದ ಶರೀರದವಯವದಲ್ಲಿ ಅಥವಾ ಹೊರಗಿನ ಶುಭವಾದ ಮಂಗಳಕರವಾದ ವಸ್ತುವಿನಲ್ಲಿ ಚಿತ್ತವನ್ನು
ಸ್ತರವಾಗಿ ನಿಲ್ಲಿಸುವ ಅಭ್ಯಾಸ ಮಾಡುವುದು.
(7). ಧ್ಯಾನ ಎಂಬ ಯೋಗಾಂಗ:-
ಯೋಗಾಜ್ಜಿತೇಂದ್ರಿಯಗ್ರಾಮಸ್ತಾನಿ ಹೃತ್ವಾ ದೃಢಂ ಹೃದಿ ।
ಆತ್ಮಾನಂ ಪರಮಂ ಧ್ಯಾಯೇತ್ಸರ್ವಧಾತಾರಮಚ್ಯುತಂ ॥
ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 33 ಶ್ಲೋಕ ೧೩೩
ಭಾವಾರ್ಥ:- ಯೋಗಾಭ್ಯಾಸದಿಂದ
ಇಂದ್ರಿಯಸಂಘವನ್ನು ನಿಗ್ರಹಿಸಿ ಎಂದರೆ ವಿಷಯಗಳ ಕಡೆ ಹೋಗದಂತೆ ಸ್ಥಿರವಾಗಿ ನಿಲ್ಲಿಸಿ
ಅಂತರ್ಯಾಮಿಯು, ಉತ್ತಮನು, ಸಕಲ
ಜಗತ್ ಸೃಷ್ಠಿಯೂ ಆದ ಅಚ್ಯುತನನ್ನು ಚಿತ್ತೈಕಾಗ್ರ್ಯದಿಂದ ಧ್ಯಾನಿಸಬೇಕು.
ಹೆಚ್ಚುವರಿ ವಿವರಣೆ:- ಸಕಲ ಜಗದಂತರ್ಯಾಮಿಯು,
ಸಕಲ ಲೋಕಕ್ಕೂ ಮುಖ್ಯ ಕಾರಣನು, ವಿಕಸಿತವಾದ ಕಮಲಗಳಂತೆ ನೇತ್ರಗಳುಳ್ಳವನು, ಮನೋಹರ
ಕುಂಡಲಗಳಿಂದಲಂಕೃತನು, ಉದ್ದವಾದ ಬಾಹುಗಳುಳ್ಳವನು, ಅಭಿವೃದ್ಧವಾದ
ಅವಯವಗಳುಳ್ಳ-ವನು, ಸಕಲಾಭರಣ ಭೂಷಿತನು, ಪೀತಾಂಬರಧಾರಿಯು,
ಸುವರ್ಣದ ಯಜ್ಞೋಪವೀತವನ್ನು ಧರಿಸಿರುವವನು, ತುಲಸೀಮಾ-ಲಿಕೆಯನ್ನು
ಹಾಕಿಕೊಂಡಿರುವವನು, ಕೌಸ್ತುಭದಿಂದ ಪ್ರಕಾಶಿತನು, ವಕ್ಷಸ್ಥಳದಲ್ಲಿ
ಶ್ರೀವತ್ಸವನ್ನು ಧರಿಸಿರುವವನು, ದೇವದಾನವರಿಂದ ನಮಸ್ಕೃತನು, ಅವ್ಯಕ್ತನು,
ಉತ್ತಮೋತ್ತಮನು, ಸರ್ವಶಕ್ತನೂ ಆಗಿರುವ ವಿಷ್ಣುದೇವನನ್ನು ಹೆನ್ನೆರಡು
ಅಂಗುಲ ವಿಸ್ತಾರವುಳ್ಳ ಪದ್ಮದಂತಿರುವ ಹೃದಯಾಕಾಶದಲ್ಲಿ ಧ್ಯಾನಿಸಬೇಕು. ಇತರ ವಸ್ತುಗಳನ್ನು
ದೂರಮಾಡಿ ಕೇವಲ ಧ್ಯೇಯ ವಸ್ತುವನ್ನೇ ವಿಷಯಾಕರಿಸುತ್ತಿರುವ ಜ್ಞಾನಪರಂಪ-ರೆಯು ಧ್ಯಾನವೆಂದು
ಸಾಧುಗಳಿಂದ ಉಕ್ತವಾಗಿದೆ. ಮನುಷ್ಯನು ಒಂದು ಮುಹೂರ್ತ ಕಾಲವಾದರೂ ಧ್ಯಾನಮಾಡಿ ಉತ್ಕೃಷ್ಟವಾದ
ಮೋಕ್ಷವನ್ನು ಪಡೆಯಬೇಕು. ಧ್ಯಾನದಿಂದ ಪಾಪಪರಿಹಾರ, ಮೋಕ್ಷಪ್ರಾಪ್ತಿ ಮತ್ತು
ಹರಿಪ್ರಸಾದ ಇವುಗಳು ಸಂಭವಿಸುತ್ತವೆ. ಅಷ್ಟೇ ಅಲ್ಲ; ಧ್ಯಾನದಿಂದ
ಸಕಲೇಷ್ಟ ಸಿದ್ಧಿಯೂ ಆಗುವುದು. ಮಹಾ ವಿಷ್ಣುವಿನ ಯಾವ ರೂಪಗಳನ್ನೇ ಆಗಲಿ ಸಮಾಧಾನ ಚಿತ್ತದಿಂದ
ಧ್ಯಾನಿಸಿದರೆ ಅದರಿಂದ ಶ್ರೀಹರಿಯು ಸಂತುಪ್ಪನಾಗಿ ಮೋಕ್ಷವನ್ನು ಕೊಡುತ್ತಾನೆ. ಧ್ಯಾನವಸ್ತು
(ಧ್ಯಾನ ಗುರಿ), ಧ್ಯೇಯ, (ಉತ್ತಮ
ಉದ್ದೇಶ) ಧ್ಯಾತೃತ್ವ (ಧ್ಯಾನ ಮಾಡುವವನು) ಇವುಗಳಲ್ಲಿ ಭರವಿಲ್ಲದೇ ಹೋಗುವಂತೆ ಚಾಂಚಲ್ಯವನ್ನು
ಬಿಟ್ಟು ಧ್ಯೇಯವಸ್ತುವಿನಲ್ಲಿ ಮಾತ್ರ ಮನಸ್ಸನ್ನು ಸ್ಥಿರವಾಗಿ ನಿಲ್ಲಿಸಬೇಕು. ಅದರಿಂದ ಜ್ಞಾನವೆಂಬ ಆಮೃತವು ಲಬ್ಧವಾಗಿ ಅದರ
ಸೇವನೆಯಿಂದ ಮೋಕ್ಷವುಂಟಾ-ಗುವುದು. ನಿರಂತರವಾಗಿ ಧ್ಯಾನಮಾಡುವುದರಿಂದ ಚಿದಾನಂದಾ-ದ್ಯಾತ್ಮಕತ್ವವು
(ಸತ್ - ಚಿತ್ - ಆನಂದ - ಸತ್ಯ, ಪ್ರಜ್ಞೆ, ಆನಂದ
ಆಧ್ಯಾತ್ಮಕ ತತ್ವವು) ವ್ಯಕ್ತವಾಗುತ್ತದೆ.
ಧ್ಯಾನ
ಸಾಮಾನ್ಯ ವಿವರಣೆ:- ಧ್ಯಾನ ಎಂದರೆ ಚಿಂತನೆ, ಮನಸ್ಸಿನಲ್ಲಿ
ಯೋಚನೆ ಮಾಡುವುದು, ಗಮನಿಸಿವುದು, ಲಕ್ಷ್ಯ
ನೀಡುವುದು, ಆತ್ಮಚಿಂತನೆ, ತಪಸ್ಸು, ಮನಸ್ಸನ್ನು
ಒಂದೇ ವಿಷಯದಲ್ಲಿ ಸ್ಥಿರವಾಗಿ ಇಡುವುದು, ಧ್ಯೇಯ ವಸ್ತುವಿನಲ್ಲಿ ಚಿತ್ತ ಸ್ಥಿರೀಕರಣವೂ,
ಏಕಾಗ್ರತೆಯಿಂದ ಕೂಡಿದ ಚಿಂತನೆ, ನಿರ್ಮಲ ಜ್ಞಾನದಿ ಧ್ಯಾನಪರನಾಗುವುದು, ಅಧ್ಯಾತ್ಮಿಕ
ಚೈತನ್ಯವನ್ನು ಗಳಿಸುವುದು. ಧ್ಯಾನ ಯೋಗಿಯೂ ಏಕಾಂತಮನಸ್ಕನಾಗಿ ಪ್ರತ್ಯೇಕವಾಗಿ ಭಾವಗಳನ್ನು
ಚರ್ಚಿಸುತ್ತಾನೆ.
(೮). ಸಮಾಧಿ ಎಂಬ ಯೋಗಾಂಗ:-
ಸುಷುಪ್ತಿವತ್ಪರಾನಂದಯುಕ್ತಶ್ಚೋಪರತೇಂದ್ರಿಯಃ |
ನಿರ್ವಾತದೀಪವತ್ಸಂಸ್ಥಹ್ ಸಮಾಧಿರಭಿಧೀಯತೇ ॥
ಯೋಗೀ ಸಮಾಧ್ಯವಸ್ಥಾಯಾಂ ನ ಶೃಣೋತಿ ನ ಪಶ್ಯತಿ |
ನ ಜಿಘ್ರತಿ ನ ಸ್ಪೃಶತಿ ನ ಕಿಂಚಿದ್ವಕ್ತಿ ಸತ್ತಮ ॥
ಶ್ರೀ ನಾರದೀಯ ಪುರಾಣಂ - ಪೂರ್ವಭಾಗ - ಅಧ್ಯಾಯ 33 ಶ್ಲೋಕ 143 ಮತ್ತು 144
ಭಾವಾರ್ಥ:-
ಸುಷುಪ್ತಿಯೋಪಾದಿಯಲ್ಲಿ (ಆಳವಾದ ನಿದ್ರಾವಸ್ಥೆಯಲ್ಲಿ) ಯಾವ ಬಾಹ್ಯೇಂದ್ರಿಯ ವ್ಯಾಪಾರವೂ ಇಲ್ಲದೆ
ಉತ್ಕೃಷ್ಟಾನಂದ ಯುಕ್ತನಾದವನು (ಉತ್ಕೃಷ್ಟವಾದ ಆನಂದ ಹೊಂದಿದವನು) ಗಾಳಿ ಇಲ್ಲದಿರುವೆಡೆಯಲ್ಲಿ
ದೀಪವು ಚಲಿಸದೆ ಸ್ಥಿರವಾಗಿರುವಂತೆ ಭಗವಂತನಲ್ಲಿ ಚಿತ್ತೈಕಾಗ್ರ್ಯವನ್ನು ಹೊಂದಿರುವುದಕ್ಕೆ ಸಮಾಧಿಯೆಂದು ಹೆಸರು. ಯೋಗಿಯು ಅಸಂಪ್ರಜ್ಞಾತ
(ಅರಿಯಲಾಗದ) ಸಮಾಧಿಯ ಅವಸ್ಥೆಯಲ್ಲಿ ಬಾಹ್ಯ ಶಬ್ದ ಶ್ರವಣಮಾಡುವುದಿಲ್ಲ. ಕಣ್ತೆರೆದು
ಬಾಹ್ಯವಸ್ತುಗಳನ್ನು ನೋಡುವುದಿಲ್ಲ. ಗಂಧವನ್ನು ಗ್ರಹಿಸುವುದಿಲ್ಲ. ಯಾವ ಬಾಹ್ಯವಸ್ತುವನ್ನೂ
ಸ್ಪರ್ಶಮಾಡುವುದಿಲ್ಲ. ಯಾರೊಡನೆಯೂ ಮಾತನಾಡುವುದಿಲ್ಲ.
ಹೆಚ್ಚುವರಿ ವಿವರಣೆ :- ದೋಷರಹಿತನು,
ಶುದ್ಧನು, ಸಚ್ಚಿದಾನಂದಾತ್ಮಕದೇಹವುಳ್ಳವನು (ಸತ್ - ಚಿತ್ -
ಆನಂದ - ಸತ್ಯ, ಪ್ರಜ್ಞೆ, ಆನಂದಾತ್ಮಕ
ದೇಹವುಳ್ಳವನು), ಸಕಲೋಪಾಧಿವಿದೂರನು (ಎಲ್ಲಾ ಲೋಪದಿಂದ ದೂರವಾದವನು)
ಚಾಂಚಲ್ಯರಹಿತನೂ ಆಗಿರುವ ಪರಮಾತ್ಮನು ಯೋಗಿಗಳಿಗೆ ಗೋಚರನಾಗುವನು. ವಿಶುದ್ಧನು, ನಾಶರಹಿತನು,
ನಿತ್ಯನು, ಗುಣಪೂರ್ಣನು, ಹೃದಯಾಕಾರ
ಮಧ್ಯಸ್ಥನು, ಆನಂದಸ್ವರೂಪನು, ನಿರ್ದೋಷನು,
ಶಾಂತನೂ ಆಗಿರುವ ಭಗವಂತನನ್ನು ಪರಬ್ರಹ್ಮನೆಂದು ಹೇಳುತ್ತಾರೆ. ಯೋಗೀಶ್ವರರು ತಮ್ಮ
ಹೃದಯದಲ್ಲಿ ನೋಡುವ ಅನಾದಿಯು, ಉತ್ಕೃಷ್ಟಾತ್ಮನು, ನಿರ್ವಿಕಾರನು,
ಉತ್ಪತಿರಹಿತನೂ ಆಗಿರುವ ನಿರ್ದೋಷಾತ್ಮನು ಪರಬ್ರಹ್ಮನೆಂದು ಉಕ್ತವಾಗಿದೆ.
ಪ್ರಪಂಚವನ್ನು ಮನುಜನನ್ನು ದೇವರನ್ನೂ ಏಕರೂಪವಾಗಿ ಕಾಣಲು ಬೋಧನೆ ಇದೆ
ಬ್ರಹ್ಮಾ ವೈ ಸ
ಮಹಾತೇಜಾ ಯ ಏತೇ ಪಂಚಧಾತವಃ ।
ಶೈಲಾಸ್ತಸ್ಯಾಸ್ಥಿ
ಸಂಘಾಸ್ತು ಮೇದೋ ಮಾಂಸಂ ಚ ಮೇದಿನೀ ||
ಸಮುದ್ರಾಸ್ತಸ್ಯ
ರುಧಿರಮಾಕಾಶಮುದರಂ ತಥಾ ।
ಪವನಶ್ಚೈವ
ನಿಶ್ವಾಸಸ್ತೇಜೋ ನಿರ್ನಿಮ್ನಗಾಃ ಶಿರಾಃ ॥
ಶ್ರೀ ನಾರದೀಯ
ಪುರಾಣ ಪೂರ್ವಭಾಗ - ಅಧ್ಯಾಯ
42
ಶ್ಲೋಕ 19-20
ಭಾವಾರ್ಥ:- ಮಹಾತೇಜಸ್ವಿಯಾದ ಆ ಬ್ರಹ್ಮನ ಪಂಚಧಾತುಗಳಲ್ಲಿ ಮೂಳೆಯ ಸಮೂಹಗಳೇ ಪರ್ವತಗಳು, ಕೊಬ್ಬು ಮತ್ತು ಮಾಂಸಗಳು ಪೃಥಿವಿಯು, ರಕ್ತವೇ ಸಮುದ್ರವು, ಹೊಟ್ಟೆಯು ಆಕಾಶವು, ನಿಶ್ವಾಸವೇ ವಾಯುವು, ಮುಖವೇ ತೇಜಸ್ಸು, ನಾಡಿಗಳೇ ನದಿಗಳೂ ಆದುವು.
ಪಂಚಧಾರಣಕೇ
ತಸ್ಮಿನ್ ಶರೀರೇ ಜೀವಿತಂ ಕೃತಂ ।
ಯೇಷಾಮನ್ಯ
ತಮಾಭಾವಾಚ್ಚತುರ್ಣಾಂ ನಾಸ್ತಿ ಸಂಶಯಃ ॥
ಶ್ರೀ ನಾರದೀಯ
ಪುರಾಣ ಪೂರ್ವಭಾಗ - ಅಧ್ಯಾಯ
4೩
ಶ್ಲೋಕ ೭
ಭಾವಾರ್ಥ:- ಈ ಶರೀರವು ಪೃಥಿವೀ ಜಲ, ತೇಜಸ್ಸು,
ವಾಯು ಮತ್ತು ಆಕಾಶ ಎಂಬ ಪಂಚಭೂತಗಳಿಂದ
ಕೂಡಿರುವಾಗ ಅದು ಜೀವಿತ (ಬದುಕಿರುವುದು) ವೆನಿಸುವುದು. ಅವುಗಳಲ್ಲಿ ಯಾವುದೊಂದು ಹೋದರೂ
ಜೀವಿತವಿಲ್ಲ ಎಂದರೆ ಮೃತನಾಗುವನು ಎಂದು ತಾತ್ಪರ್ಯ. ಸಂದೇಹವಿಲ್ಲ.
ಸಂಸ್ಕೃತದಲ್ಲಿ ಪ್ರಪಂಚ ಎಂದರೆ ಬಹುಮುಖತೆ,
ವೈವಿಧ್ಯತೆ, ವರ್ಧನೆ, ಸಾಮೀಪ್ಯ, ಪ್ರಸರಣ, ವಿಪರೀತತೆ, ನೋಟ, ವಿದ್ಯಮಾನ, (ತತ್ವಶಾಸ್ತ್ರದಲ್ಲಿ) ಬ್ರಹ್ಮಾಂಡದ ವಿಸ್ತರಣೆ,
ಗೋಚರ ಜಗತ್ತು, ಅಂತರ್ ಪ್ರಪಂಚ ಎಂದರೆ ತತ್ವಶಾಸ್ತ್ರದಲ್ಲಿ ಆಂತರಿಕ
ವಿಸ್ತರಣೆ. ಪ್ರ ಎನ್ನುವ ಶಬ್ದವನ್ನು ಸಂಸ್ಕೃತದಲ್ಲಿ ಭರ್ತಿ, ಪೂರೈಸುವುದು ಎಂದು ಉಪಯೋಗಿಸಲಾಗುತ್ತದೆ. ಪಂಚ ಎಂದರೆ
ಸಂಸ್ಕೃತದಲ್ಲಿ ಐದು ಎಂದು ಬರುತ್ತದೆ. ಸಂಸ್ಕೃತದಲ್ಲಿ ಪಂಚಬೌತಿಕ ಎಂದರೆ ಐದು ಅಂಶಗಳ ಸಂಯೋಜನೆ
ಎನ್ನುತ್ತಾರೆ. ಪಂಚಭೂತಗಳು ಎಂದರೆ ಅಗ್ನಿ, ವಾಯು, ಭೂಮಿ, ನೀರು ಮತ್ತು ಆಕಾಶ ಎಂದು ಸಂಸ್ಕೃತಾರ್ಥವಿದೆ.
ಪಂಚಭೂತ ಪರಿತ್ಯಕ್ತಾ ಎಂದರೆ ಮನುಜನ ಸತ್ತ ದೇಹವನ್ನು
ಕುರಿತು ಹೇಳಲಾಗುತ್ತದೆ. ಪಂಚಭೂತಾತ್ಮಕ
ಎಂದರೆ ಮನುಜನ ದೇಹವನ್ನು ಕುರಿತು ಹೇಳಲಾಗುತ್ತದೆ. ಪಂಚ ರತ್ನ ಇವುಗಳಲ್ಲಿ ಚಿನ್ನ, ಡೈಮಂಡ್, ಸಫೈರ್ (ನೀಲಮಣಿ), ರೂಬಿ (ಮಾಣಿಕ್ಯ) ಮತ್ತು ಮುತ್ತು. ಪಂಚಲವಣ ಇದರಲ್ಲಿ ಕಾಚ
(ಗಾಜು), ಸೈಂದವ (ರಾಕ್ ಸಾಲ್ಟ್),
ಸಮುದ್ರ, ವಿಧ (ಬ್ಲಾಕ್ ಸಾಲ್ಟ್), ಸೌವಾರ್ಚಲ (ಕೃತಕ ಉಪ್ಪು). ಪಂಚಲೋಹ ಇದರಲ್ಲಿ, ಕಾಪರ್ (ತಾಮ್ರ), ಬ್ರಾಸ್ (ಹಿತ್ತಾಳೆ), ಟಿನ್ (ಕಲಾಯಿ), ಲೆಡ್ (ಸೀಸ), ಕಬ್ಬಿಣ. ಪಂಚಲೋಹಕ ಇದರಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಕಲಾಯಿ ಮತ್ತು ಸೀಸ. ಪಂಚಮಹಾಯಜ್ಞ ಇದರಲ್ಲಿ ಬ್ರಹ್ಮ
ಯಜ್ಞ, ದೇವ ಯಜ್ಞ, ಪಿತೃ ಯಜ್ಞ, ಮನುಷ್ಯ ಯಜ್ಞ, ಭೂತ ಯಜ್ಞ. (ಯಜ್ಞ ಅಂದರೆ ಪೂಜೆ, ಭಕ್ತಿ, ಪ್ರಾರ್ಥನೆ, ಹೊಗಳಿಕೆ,
ಅರ್ಪಣೆ, ತ್ಯಾಗ, ಆಹುತಿ, ನೈವೇದ್ಯ).
ಪಂಚಕೋಶಗಳು (ಅನ್ನಮಯ ಕೋಶ, ಪ್ರಾಣಮಯ
ಕೋಶ, ವಿಜ್ಞಾನಮಯ ಕೋಶ, ಮನೋಮಯ ಕೋಶ ಹಾಗೂ ಆನಂದಮಯ ಕೋಶ). ಪಂಚಮ
ವೇದವೆನಿಸಿರುವ ಪುರಾಣ ಗ್ರಂಥಗಳು.
ನಾರಾಯಣಂ
ನಮಸ್ಕೃತ್ಯ ನರಂಚೈವ ನರೋತ್ತ ಮಂ |
ಶ್ರೀ ನಾರದೀಯ
ಪುರಾಣ ಪೂರ್ವಭಾಗ - ಅಧ್ಯಾಯ
62
ಶ್ಲೋಕ 76
ಭಾವಾರ್ಥ:- ನರೋತ್ತಮನಾದ ನಾರಾಯಣನನ್ನೂ ಮತ್ತು ನರನನ್ನೂ ನಮಸ್ಕರಿಸುವೆನು.
ಪಂಚಭೌತಿಕವಾದದ್ದು ಶ್ರೀ ನಾರದೀಯ ಪುರಾಣದಿಂದ
ಪಂಚಭೌತಿಕವಾದದ್ದು:- ಚೇಷ್ಟೆಯಿಂದ ಸಹಿತವಾದ ವಾಯು, ಇಂದ್ರಿಯಯುಕ್ತವಾದ ಆಕಾಶ, ಆವಿ ನಿಮಿತ್ತವಾದ ಅಗ್ನಿ, ದ್ರವವಾದ ನೀರು, ಮತ್ತು ಪೃಥಿವಿಯೂ ಇಲ್ಲಿ ಒಟ್ಟು ಗೂಡಿದೆ. ಆದುದರಿಂದ ಈ
ಶರೀರವು ಪಾಂಚಭೌತಿಕವೆನಿಸುವುದು. ಈ ರೀತಿ ಚರಾಚರಾತ್ಮಕ ಪ್ರಪಂಚವು ಪಂಚಭೂತಗಳಿಂದ ಯುಕ್ತವಾದ
ಶರೀರದಿಂದ ಕೂಡಿರುವುದು. ಕಿವಿಗಳು, ಮೂಗು, ನಾಲಿಗೆ, ತ್ವಕ್ಕು, (ಚರ್ಮ) ನೇತ್ರ ಈ ಐದೂ ಇಂದ್ರಿಯಗಳೆನಿಸುವುವು. ಚೇಷ್ಟೆಯಿಂದ
ಸಹಿತವಾದ ಶರೀರವುಳ್ಳ, ಸಕಲ ಚರ
ಪ್ರಾಣಿಗಳ ಶರೀರದಲ್ಲಿಯೂ ಐದು ಧಾತುಗಳೂ ಪ್ರತ್ಯೇಕವಾಗಿ ಎಂದರೆ ಒಂದೊಂದೂ ಐದು ವಿಧವಾಗಿ
ವಿಭಾಗಿಸಲ್ಪಡುತ್ತದೆ. ಚರ್ಮ, ಮಾಂಸ,
ಮೂಳೆ, ಕೊಬ್ಬು ಮತ್ತು ಐದನೆಯದಾದ ನರ ಇವುಗಳೇ ಈ ಪಾರ್ಥಿವ
ಶರೀರದಲ್ಲಿನ ಸಂಘಾತವು. ಅಗ್ನಿ ಸಂಬಂಧಿಗಳಾದ ತೇಜಸ್ಸು, ಅಗ್ನಿ, ಕ್ರೋಧ, ಚಕ್ಷುಸ್ಸು
(ಕಂಗೊಳಿಸುವುದು), ಆವಿ ಈ ಐದು
ಶರೀರದಲ್ಲಿನ ತೇಜಸ್ಸಂಘಾತವು (ಹೊಳಪಿನ ಗುಂಪು). ಶ್ರೋತ್ರ, ಘ್ರಾಣ, ಬಾಯಿ, ಹೃದಯ, ಕೋಷ್ಠ, ಈ ಐದು ಪ್ರಾಣಿ ಶರೀರದಲ್ಲಿರುವ ಆಕಾಶದಿಂದ ಸಂಭವಿಸುವ ಪಂಚ
ಧಾತುಗಳು. ಶ್ಲೇಷ್ಮ, ಪಿತ್ತ,
ಬೆವರು, ಕೀವು ಮತ್ತು ರಕ್ತ ಇವುಗಳು ಪ್ರಾಣಿಗಳ ಶರೀರದಲ್ಲಿ ನೀರಿನಿಂದ
ಆಗುವ ಐದು ಪರಿಣಾಮಗಳು.
ಪ್ರಾಣವಾಯು:- ಪ್ರಾಣಿಯು ಪ್ರಾಣವಾಯುವಿನಿಂದ ಸಂತುಷ್ಟನಾಗುವನು.
ವ್ಯಾನವಾಯುವಿನಿಂದ ವ್ಯಾಯಾಮವನ್ನು ಹೊಂದುವನು. ಅಪಾನವಾಯುವು ಅಧೋದ್ವಾರದಲ್ಲಿ ಹೋಗುವುದು.
ಹೃದಯದಲ್ಲಿರುವುದು ಸಮಾನವು. ಉದಾನದಿಂದ ಶ್ವಾಸವನ್ನು ಸ್ವೀಕರಿಸುವನು. ಹೀಗೆ ಕಾರ್ಯಭೇದದಿಂದ
ವಾಯುವು ಐದು ವಿಧವಾಗಿ ವ್ಯವಹರಿಸಲ್ಪಡುತ್ತದೆ. ಈ
ಐದು ವಾಯುಗಳು ಜೀವನನ್ನು ಸುತ್ತಿಕೊಂಡಿರುತ್ತವೆ.
ಗ್ರಹಿಸುವಿಕೆ:- ಶರೀರಿಯು ಭೂಮಿಯಿಂದ ಗಂಧವನ್ನೂ ಜಲದಿಂದ ರಸವನ್ನೂ
ಗ್ರಹಿಸುತ್ತಾನೆ. ವಿಸ್ತಾರವಾಗಿ ಉಕ್ತವಾಗಿರುವ ಆ ಗಂಧದ ವಿಶೇಷ ವಿಭಾಗಗಳನ್ನು ಹೇಳುವೆನು.
ಪೃಥಿವಿಯ ಗುಣವಾದ ಗಂಧವು ಇಷ್ಟ, ಅನಿಷ್ಟ,
ಮಧುರ, ಕಟು, ನಿರ್ಹಾರೀ, ಸಂಹತ, ಸ್ನಿಗ್ಧ, ರೂಕ್ಷ ಮತ್ತು ವಿಶದ ಎಂಬುದಾಗಿ ಒಂಭತ್ತು ವಿಧವೆಂದು
ತಿಳಿಯಬೇಕು. ತೈಜಸೇಂದ್ರಿಯವಾದ ಕಣ್ಣುಗಳಿಂದ ಪ್ರಕಾಶವನ್ನು ಗ್ರಹಿಸುತ್ತಾನೆ.
ವಾಯವೀಯೇಂದ್ರಿಯವಾದ ತ್ವಕ್ಕಿನಿಂದ ಸ್ಪರ್ಶವನ್ನು ತಿಳಿಯುವನು. ಶಬ್ದ, ಸ್ಪರ್ಶ, ರೂಪ ಮತ್ತು ರಸ ಇವುಗಳೂ ಗುಣಗಳು.
ರಸಜ್ಞಾನಪ್ರಕಾರ:- ಪ್ರಸಿದ್ಧರಾದ ಋಷಿಗಳಿಂದ ರಸವು ಬಹುವಿಧವೆಂದು
ಹೇಳಲ್ಪಟ್ಟಿದೆ. ಜಲಗುಣವಾದ ರಸವು ಮಧುರ, ಲವಣ, ತಿಕ್ತ, ಕಷಾಯ, ಆಮ್ಲ, ಕಟು (ಸಿಹಿ, ಉಪ್ಪು, ಕಹಿ, ವಗರು ಹುಳಿ ಕಾರ) ಎಂಬುದಾಗಿ ಆರು ವಿಧವು. ತೇಜಸ್ಸು:- ತೇಜಸ್ಸು ಶಬ್ದ, ಸ್ಪರ್ಶ ಮತ್ತು ರೂಪಗಳೆಂಬ ಮೂರು ಗುಣಗಳುಳ್ಳದು.
ತೇಜಸ್ಸು (ಕಣ್ಣು) ರೂಪಗಳನ್ನು ಗ್ರಹಿಸುತ್ತದೆ. ರೂಪವೂ ಬಹುವಿಧವೆಂದು ಉಕ್ತವಾಗಿದೆ. ತೇಜೋಗುಣವಾದ ರೂಪವು ಹ್ರಸ್ವ, ದೀರ್ಫ, ಸ್ಥೂಲ, ಚತುರಸ್ರ (ಚದರ) ಅಣು, ವೃತ್ತ
(ಗುಂಡಗಿರುವುದು) ಶುಕ್ಲ (ಬಿಳಿ) ಕೃಷ್ಣ (ಕಪ್ಪು) ರಕ್ತ (ಕೆಂಪು) ನೀಲ, ಪೀತ (ಹಳದಿ), ಅರುಣ, ಕಠಿಣ, ಚಿಕ್ಕಣ, ಶ್ಲಕ್ಷ್ಣ , ಪಿಚ್ಛಲ, ಮೃದು, ದಾರುಣ ಎಂಬುದಾಗಿ
ಹದಿನಾರು ವಿಧವೆಂದು ವಿಭಾಗಿಸಲ್ಪಟ್ಟದೆ. ಅವುಗಳಲ್ಲಿ ಆಕಾಶವು ಒಂದೇ ಗುಣವುಳ್ಳುದು. ಆ ಗುಣವು
ಶಬ್ದವೆಂದು ಉಕ್ತವಾಗಿದೆ.
ಶಬ್ದ:-
ಆಕಾಶದಿಂದುತ್ಪನ್ನವಾದ ಶಬ್ದವು
ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ, ಮತ್ತು ನಿಷಾದ ಎಂಬುದಾಗಿ ಏಳು ವಿಧವೆಂದು
ಹೇಳಲ್ಪಟ್ಟಿದೆ. ಸಾಮರ್ಥ್ಯವಿಶೇಷದಿಂದ ಪಟಹ ಮುಂತಾದ ಸಕಲ ವಾದ್ಯಗಳಲ್ಲಿದ್ದಾಗ್ಯೂ ಆಕಾಶದಲ್ಲಿ
ಹುಟ್ಟಿದ ಶಬ್ದವು ತಬಲ, ನಗಾರಿ,
ಶಂಖ, ಮೇಘೆ, ರಥ ಇವುಗಳಿಂದ ಸಂಭವಿಸಿ ಬಹು ರೂಪವನ್ನು ಹೊಂದುತ್ತದೆ.
ಸ್ಪರ್ಶ:- ಸ್ಪರ್ಶವು ವಾಯುವಿನಲ್ಲಿರುವ ಗುಣವು. ಅದೂ
ಬಹುವಿಧವಾಗಿದೆ. ವಾಯುಗುಣವಾದ ಸ್ಪರ್ಶವು ಉಷ್ಣ, ಶೀತ, ಸುಖ, ದುಃಖ, ಸ್ನಿಗ್ದ, ವಿಶದ, ಖರ, ಮೃದು, ಶ್ಲಕ್ಷ್ಣ,
ಲಘು ಮತ್ತು ಗುರುತರ ಎಂಬುದಾಗಿ
ಹನ್ನೊಂದು ವಿಧವು. ಶಬ್ದ ಮತ್ತು ಸ್ಪರ್ಶಗಳೆರಡೂ ವಾಯುಗುಣಗಳೆಂದು ತಿಳಿಯಬೇಕು. ಶಬ್ದವು
ಆಕಾಶದಿಂದ ಉತ್ಪನ್ನವೆಂದು ಹೇಳುವರು. ತಡೆಯಿಲ್ಲದ ಈ ವಾಯುಗುಣಗಳಿಂದ ಶಬ್ದವು ಒಂದು ಕಾಲದಲ್ಲಿ
ತಿಳಿಯುತ್ತದೆ. ಇನ್ನೊಂದು ಕಾಲದಲ್ಲಿ ತಿಳಿಯುವುದಿಲ್ಲವಾದಕಾರಣ ಅದರ ಗತಿಯು ವಿಷಮವು.
ಧಾತುಗಳು:- ಧಾತುಗಳು ಆ ಧಾತುಗಳಿಂದಲೇ ಯಾವಾಗಲೂ
ತೃಪ್ತಿಹೊಂದುತ್ತವೆ. ಜಲ, ಅಗ್ನಿ,
ವಾಯು ಇವುಗಳು ಯಾವಾಗಲೂ ಪ್ರಾಣಿಗಳ
ಶರೀರಗಳಲ್ಲಿ ಜಾಗರೂಕವಾಗಿರುತ್ತವೆ. ಈ ಶರೀರಕ್ಕೆ ಧಾತುಗಳು ಮೂಲಕಾರಣ. ಅವು ಪ್ರಾಣಗಳಲ್ಲಿ
ವ್ಯಾಪಿಸಿರುತ್ತವೆ. ಪಾರ್ಥಿವಧಾತುವಿನಿಂದ ಬಲವನ್ನು ಪಡೆದು ಚೇಷ್ಟೆ (ಕ್ರಿಯೆ; ಚಟುವಟಿಕೆ;
ಕಾರ್ಯಕ್ಷಮತೆ; ನಡವಳಿಕೆ, ಕಾರ್ಯಗಳು) ಮಾಡುವುದು.
ಪ್ರಾಣವಾಯು:- ತೇಜಸ್ಸು ಶಿರಸ್ಸನ್ನಾಶ್ರಯಿಸಿ ಶರೀರವನ್ನು
ರಕ್ಷಿಸುವುದು. ಪ್ರಾಣವಾಯುವು ಶಿರಸ್ಸು ಅಥವಾ ಆಗ್ನಿಯಲ್ಲಿದ್ದು ತನ್ನ ವ್ಯಾಪಾರವನ್ನು
ಮಾಡುತ್ತದೆ. ಅವನೇ ಚೇತನನು. ಅವನೇ ಸಮಸ್ತ ಪ್ರಾಣಿಗಳಿಗೂ ಜೀವನ. ಪುರುಷನು ಅನಾಧಿಯು. ಮನಸ್ಸು,
ಬುದ್ಧಿ, ಅಹಂಕಾರ, ಭೂತ ಮತ್ತು ವಿಷಯ ಇವೆಲ್ಲವೂ ಅವನೇ ಎಂದರೆ ಅವನ ಅಧೀನವೆಂದು ಭಾವ. ಈ ರೀತಿ ಅವನು ಎಲ್ಲಾ ಶರೀರಗಳಲ್ಲಿಯೂ ಪ್ರಾಣಗಳನ್ನು
ಕೊಟ್ಟು ಕಾಪಾಡುವನು. ಪೃಷ್ಠ ಭಾಗದಲ್ಲಿ ಸಮಾನವಾಯುವಿನಿಂದ ತನ್ನ ವ್ಯಾಪಾರವನ್ನು
ನಡೆಯಿಸುವನು. ಅಪಾನವಾಯುವು ನಾಭಿಯ ಕೆಳಭಾಗ,
ಗುದಪ್ರದೇಶ ಮತ್ತು ತೇಜಸ್ಸುಗಳನ್ನಾಶ್ರಯಿಸಿ
ಮೂತ್ರ ಪುರೀಷಗಳ ವಿಸರ್ಜನೆಯನ್ನು ಮಾಡಿಸುತ್ತದೆ. ಅಧ್ಯಾತ್ಮ ಜ್ಞಾನಕುಶಲರು ಪ್ರಯತ್ನ, ಕರ್ಮ, ನಿಯಮಗಳೆಂಬ ಮೂರರಲ್ಲಿಯೂ ಇರುವ ಒಂದೇ ವಾಯುವನ್ನ ಉದಾನವೆಂದು
ಹೇಳುವರು. ಮನುಷ್ಯರ ದೇಹಗಳಲ್ಲಿ ಸಕಲಸಂಧಿ ಪ್ರದೇಶಗಳಲ್ಲಿಯೂ ಇರುವ ವಾಯುವನ್ನು ವ್ಯಾನವೆಂದು
ಕರೆಯುತ್ತಾರೆ. ಅಗ್ನಿಯು ಬಹುಸ್ಥಳಗಳಲ್ಲಿ ವ್ಯಾಪಿಸಿ, ಸಮಾನವಾಯುವಿನಿಂದ ಪ್ರೇರಿತವಾಗಿ ಬಹುರಸಗಳು ಮತ್ತು
ದೋಷಗಳನ್ನು ನಿಯಮಿಸುತ್ತಾ ಅತ್ಯಂತವಾಗಿ ಕೆಲಸಮಾಡುತ್ತದೆ.
ಅಗ್ನಿಯು ಅಪಾನ ಪ್ರಾಣವಾಯುಗಳ ಮಧ್ಯದಲ್ಲಿ ಅವುಗಳಿಂದ ಪ್ರೇರಿತವಾಗಿ, ಉದರದಲ್ಲಿ ನಿಂತು ತಿಂದ ಆಹಾರವನ್ನು ಚೆನ್ನಾಗಿ
ಜೀರ್ಣ ಮಾಡಿಸುತ್ತದೆ.
ಪ್ರಾಣವಾಯುಗಳು ಒಟ್ಟಿಗೆ ಸಂಧಿಸುವುದರಿಂದ ಸನ್ನಿಪಾತವುಂಟಾಗುತ್ತದೆ.
ಪ್ರಾಣಾನಾಂ ಸನ್ನಿ
ಪಾತಾಚ್ಚ ಸನ್ನಿ ಪಾತಃ ಪ್ರಜಾಯತೇ |
ಊಷ್ಮಾ ಚಾಗ್ನಿ
ರತಿಜ್ಞೇಯೋ ಯೋsನ್ನಂ
ಪಚತಿ ದೇಹಿನಾಂ ॥ ೧೦೯॥
ಶ್ರೀ ನಾರದೀಯ
ಪುರಾಣ ಪೂರ್ವಭಾಗ - ಅಧ್ಯಾಯ
42
ಶ್ಲೋಕ 109
ಭಾವಾರ್ಥ:- ಪ್ರಾಣವಾಯುಗಳು ಒಟ್ಟಿಗೆ ಸಂಧಿಸುವುದರಿಂದ ಸನ್ನಿಪಾತ ವುಂಟಾಗುತ್ತದೆ. ಪ್ರಾಣಿಗಳ
ದೇಹದಲ್ಲಿ ಅನ್ನವನ್ನು ಜೀರ್ಣಮಾಡಿಸುವ ಊಷ್ಮಾ ಎಂಬ ತೇಜಸ್ಸೇ ಅಗ್ನಿಯೆಂದು ತಿಳಿಯಬೇಕು.
ವಿವರಣೆ:- ಸನ್ನಿಪಾತ ಎಂದರೆ ಚಡಪಡಿಕೆ, ಉದ್ರೇಕತೆ, ಭ್ರಮೆಗಳು ಇತ್ಯಾದಿಗಳೊಂದಿಗೆ ತಾತ್ಕಾಲಿಕ ಮಾನಸಿಕ
ಅಸ್ವಸ್ಥತೆ ಉಂಟಾಗುವ ಜ್ವರದಿಂದ ಕೂಡಿರಬಹುದಾದ ಸನ್ನಿವೇಶ. ವಾಯುಗುಣವಾದ ಸ್ಪರ್ಶವು ಉಷ್ಣ, ಶೀತ, ಸುಖ, ದುಃಖ, ಸ್ನಿಗ್ದ, ವಿಶದ, ಖರ, ಮೃದು, ಶ್ಲಕ್ಷ್ಣ,
ಲಘು ಮತ್ತು ಗುರುತರ ಎಂಬುದಾಗಿ
ಹನ್ನೊಂದು ವಿಧವು. ಶಬ್ದ ಮತ್ತು ಸ್ಪರ್ಶಗಳೆರಡೂ ವಾಯು ಗುಣಗಳೆಂದು ತಿಳಿಯಬೇಕು. ಜಲ, ಅಗ್ನಿ, ವಾಯು ಇವುಗಳು ಯಾವಾಗಲೂ ಪ್ರಾಣಿಗಳ ಶರೀರಗಳಲ್ಲಿ
ಜಾಗರೂಕವಾಗಿರುತ್ತವೆ. ಈ ಶರೀರಕ್ಕೆ ಧಾತುಗಳು ಮೂಲಕಾರಣ. ಅವು ಪ್ರಾಣಗಳಲ್ಲಿ ವ್ಯಾಪಿಸಿರುತ್ತವೆ.
ಪಾರ್ಥಿವ ಧಾತುವಿನಿಂದ ಬಲವನ್ನು ಪಡೆದು ಚೇಷ್ಟೆ (ಕ್ರಿಯೆ; ಚಟುವಟಿಕೆ;
ಕಾರ್ಯಕ್ಷಮತೆ; ನಡವಳಿಕೆ, ಕಾರ್ಯಗಳು) ಮಾಡುವುದು. ತೇಜಸ್ಸು ಶಿರಸ್ಸನ್ನಾಶ್ರಯಿಸಿ ಶರೀರವನ್ನು ರಕ್ಷಿಸುವುದು.
ಪ್ರಾಣವಾಯುವು ಶಿರಸ್ಸು ಅಥವಾ ಆಗ್ನಿಯಲ್ಲಿದ್ದು ತನ್ನ ವ್ಯಾಪಾರವನ್ನು ಮಾಡುತ್ತದೆ. ಅವನೇ
ಚೇತನನು. ಅವನೇ ಸಮಸ್ತ ಪ್ರಾಣಿಗಳಿಗೂ ಜೀವನ. ಪುರುಷನು ಅನಾಧಿಯು. ಮನಸ್ಸು, ಬುದ್ಧಿ, ಅಹಂಕಾರ, ಭೂತ ಮತ್ತು ವಿಷಯ ಇವೆಲ್ಲವೂ ಅವನೇ ಎಂದರೆ ಅವನ ಅಧೀನವೆಂದು ಭಾವ. ಈ ರೀತಿ ಅವನು ಎಲ್ಲಾ
ಶರೀರಗಳಲ್ಲಿಯೂ ಪ್ರಾಣಗಳನ್ನು ಕೊಟ್ಟು ಕಾಪಾಡುವನು. ಪೃಷ್ಠ ಭಾಗದಲ್ಲಿ ಸಮಾನ ವಾಯುವಿನಿಂದ ತನ್ನ
ವ್ಯಾಪಾರವನ್ನು ನಡೆಯಿಸುವನು. ಅಪಾನವಾಯುವು ನಾಭಿಯ ಕೆಳಭಾಗ, ಗುದಪ್ರದೇಶ ಮತ್ತು ತೇಜಸ್ಸುಗಳನ್ನಾಶ್ರಯಿಸಿ ಮೂತ್ರ ಪುರೀಷಗಳ
ವಿಸರ್ಜನೆಯನ್ನು ಮಾಡಿಸುತ್ತದೆ. ಅಧ್ಯಾತ್ಮ ಜ್ಞಾನಕುಶಲರು ಪ್ರಯತ್ನ, ಕರ್ಮ, ನಿಯಮಗಳೆಂಬ ಮೂರರಲ್ಲಿಯೂ ಇರುವ ಒಂದೇ ವಾಯುವನ್ನ ಉದಾನವೆಂದು ಹೇಳುವರು. ಮನುಷ್ಯರ
ದೇಹಗಳಲ್ಲಿ ಸಕಲ ಸಂಧಿಪ್ರದೇಶಗಳಲ್ಲಿಯೂ ಇರುವ ವಾಯುವನ್ನು ವ್ಯಾನವೆಂದು ಕರೆಯುತ್ತಾರೆ. ಅಗ್ನಿಯು
ಬಹುಸ್ಥಳಗಳಲ್ಲಿ ವ್ಯಾಪಿಸಿ, ಸಮಾನವಾಯುವಿನಿಂದ
ಪ್ರೇರಿತವಾಗಿ ಬಹುರಸಗಳು ಮತ್ತು ದೋಷಗಳನ್ನು ನಿಯಮಿಸುತ್ತಾ ಅತ್ಯಂತವಾಗಿ ಕೆಲಸಮಾಡುತ್ತದೆ.
ಅಗ್ನಿಯು ಅಪಾನ ಪ್ರಾಣವಾಯುಗಳ ಮಧ್ಯದಲ್ಲಿ ಅವುಗಳಿಂದ ಪ್ರೇರಿತವಾಗಿ, ಉದರದಲ್ಲಿ ನಿಂತು ತಿಂದ ಆಹಾರವನ್ನು ಚೆನ್ನಾಗಿ ಜೀರ್ಣ
ಮಾಡಿಸುತ್ತದೆ.
ಪಾಯುಪರ್ಯಂತವಾಗಿ ಮುಖವು ಗುದವೆಂಬ ಕೊನೆಯ
ಭಾಗದಲ್ಲಿ ರೇತಸ್ಸುಂಟಾಗುತ್ತದೆ. ಅದರಿಂದ ಆತ್ಮರ ಸಕಲೇಂದ್ರಿಯ ವ್ಯಾಪಾರಗಳೂ ಸಿದ್ಧಿಸುವುವು.
ಅಗ್ನಿವೇಗವನ್ನು ವಹಿಸಿದ ಪ್ರಾಣವು ಗುದದ ಕೊನೆಯ ಭಾಗದಲ್ಲಿ ತಡೆಯಲ್ಪಡುತ್ತದೆ. ಆ ಪ್ರಾಣವು
ಮೇಲಕ್ಕೆ ಬಂದು ಪುನಃ ಅಗ್ನಿಯನ್ನು ಎಬ್ಬಿಸುತ್ತದೆ. ಶರೀರದ ನಾಭಿಯ ಕೆಳಭಾಗದಲ್ಲಿ ಜೀರ್ಣಿಸಿದ
ಪದಾರ್ಥಗಳ ಕೋಶವು, ಮೇಲ್ಭಾಗದಲ್ಲಿ
ಜೀರ್ಣವಾಗದಿರುವ ವಸ್ತುಗಳ ಕೋಶವೂ ಇದೆ. ಶರೀರದ ನಾಭಿಮೂಲದಲ್ಲಿ ಪ್ರಾಣಗಳೆಲ್ಲಾ ಇರುತ್ತವೆ.
ಹೃದಯಪ್ರದೇಶದಿಂದ ಮೇಲೆ ಕೆಳಗೆ ಉಭಯ
ಪಾರ್ಶ್ವಗಳಲ್ಲಿಯೂ ಹೊರಟಿರುವ ನಾಡಿಗಳೆಲ್ಲವೂ ಹತ್ತು ಪ್ರಾಣಗಳಿಂದ ಪ್ರೇರಿಸಲ್ಪಟ್ಟು ಅನ್ನ
ರಸಗಳನ್ನು ಎಲ್ಲಾ ಭಾಗಗಳಿಗೂ ಒಯ್ಯುವುವು.
ಶ್ರಮವನ್ನು ಸಹಿಸುವ, ಸುಖದುಃಖಾದಿ
ದ್ವಂದ್ವ ಸಹಿಷ್ಣುಗಳಾದ ಧೀರರಾದ ಯೋಗಿಗಳು ಪ್ರಾಣವನ್ನು ಶಿರಸ್ಸಿಗೆ ತಂದು ಪರಮಪದಕ್ಕೆ ಹೋಗುವ
ಮಾರ್ಗವೂ ಇದೇ ಆಗಿದೆ. ಈ ರೀತಿಯಾಗಿ ವಿಹಿತವಾದ ಪ್ರಾಣಾಪಾನಗಳುಳ್ಳ ಆತ್ಮರ ದೇಹಗಳೆಲ್ಲೆಲ್ಲಾ
ಅಗ್ನಿಯು, ಕುಂಡದಲ್ಲಿ
ಆಧಾನಮಾಡಲ್ಪಟ್ಟ ಅಗ್ನಿಯು ಪ್ರಜ್ವಲಿಸುವಂತೆ ಯಾವಾಗಲೂ ಪ್ರಜ್ವಲಿಸುತ್ತದೆ. (ನಾರದೀಯ
ಪುರಾಣದಿಂದ)
ಶರೀರಕ್ಕೆ ಮರಣವುಂಟು ಆತ್ಮಕ್ಕೆ ಮರಣವಿಲ್ಲ
ನಶ್ಶಂತ್ಯಾಪೋ
ಹ್ಯನಾಹಾರಾದ್ವಾಯುರುಚ್ಛ್ಛಾಸನಿಗ್ರಹಾತ್ |
ನಶ್ಯತೇ
ಕೋಷ್ಠಭೇದಾರ್ಥಮಗ್ನಿರ್ನಶ್ಯತ್ಯಭೋಜನಾತ್ ||
ವ್ಯಾಧಿವ್ರಣಪರಿಕ್ಲೇಶೈರ್ಮೆದಿನೀ
ಚೈವ ಶೀರ್ಯತೇ |
ಪೀಡಿತೇsನ್ಯತರೇ
ಹ್ಯೇಷಾಂ ಸಂಘಾತೋ ಯಾತಿ ಪಂಚತಾಂ ||
ಶ್ರೀ ನಾರದೀಯ
ಪುರಾಣ ಪೂರ್ವಭಾಗ - ಅಧ್ಯಾಯ 4೩ ಶ್ಲೋಕ ೨೮ -
೨೯
ಭಾವಾರ್ಥ:- ಆಹಾರವಿಲ್ಲದಿರುವುದರಿಂದ ಜಲಭಾಗವೂ, ಉಸಿರು ಬಿಡದಿರುವುದರಿಂದ ವಾಯುವೂ ಭೋಜನ
ಮಾಡದಿರುವುದರಿಂದ ಜಾಠರಾಗ್ನಿಯೂ ಸಹ ನಾಶವಾಗುತ್ತದೆ. ರೋಗ ಮತ್ತು ಹುಣ್ಣುಗಳ ದುಃಖದಿಂದ
ಪಾರ್ಥಿವಭಾಗವು ನಷ್ಟವಾಗುತ್ತದೆ. ಇವುಗಳಲ್ಲಿ ಯಾವುದೊಂದು ಹೋದಾಗ್ಯೂ ಭೂತ ಸಂಘಾತ ರೂಪವಾದ
ಶರೀರವು ಮರಣ ಹೊಂದುತ್ತದೆ.
ಹೆಚ್ಚುವರಿ
ವಿವರಣೆ :- ಸಮಿತ್ತುಗಳನ್ನು
ಬೆಂಕಿಯಿಂದ ಸುಟ್ಟ ಮೇಲೆ ಕಾಷ್ಠವು ನಷ್ಟವಾದರೂ ಅಗ್ನಿಯು ಕಾಣಿಸುವಂತೆ ಶರೀರವು ನಾಶವಾದರೂ
ಅದರಲ್ಲಿರುವ ಜೀವನು ನಾಶಹೊಂದುವುದಿಲ್ಲ. ಕಾಷ್ಠಾದಿಗಳು ಸುಟ್ಟು ಭಸ್ಮವಾದ ಮೇಲೆ ಅಲ್ಲಿದ್ದ
ಅಗ್ನಿಯು ದೃಶ್ಯವಾಗುವುದಿಲ್ಲ. ಅಷ್ಟು ಮಾತ್ರದಿಂದ ಜ್ಞಾನ, ತತ್ಸಾಧನ, ಆಶ್ರಯ ಇವುಗಳಿಲ್ಲದಿರುವ, ಶಾಂತವಾದ
ಅಗ್ನಿಯನ್ನು ನಷ್ಟವಾಯಿತೆಂದೇ ತಿಳಿಯುವೆನೆಂದು ಹೇಳಬಾರದು. ಏಕೆಂದರೆ ಆಶ್ರಯವಿಲ್ಲದುದನ್ನು
ಗ್ರಹಿಸಲಶಕ್ಯವು. ಆದುದರಿಂದ ಕಟ್ಟಿಗೆಯು ಸುಟ್ಟು ಭಸ್ಮವಾದಮೇಲೆ ಅದರಲ್ಲಿದ್ದ ಅಗ್ನಿಯು
ಆಕಾಶದಲ್ಲಿ ಲೀನವಾಗಿ ದೃಗ್ಗೋಚರ-ವಾಗುವುದಿಲ್ಲ. ಅದರಂತೆ ಶರೀರವನ್ನು ಬಿಟ್ಟ ಮೇಲೆಯೂ ಜೀವನು
ಆಕಾಶದಂತೆ ಇದ್ದೇ ಇರುವನು. ಆಗ್ನಿಯು ಹೇಗೆ ನಷ್ಟವಾಗು-ವುದಿಲ್ಲವೋ ಅದರಂತೆ
ಸೂಕ್ಷ್ಮವಾಗಿರುವುದರಿಂದ ಜೀವನೂ ನಷ್ಟವಾಗುವುದಿಲ್ಲ. ಈ ವಿಷಯದಲ್ಲಿ ಸಂದೇಹವಿಲ್ಲ. ಅಗ್ನಿಯು
ಪ್ರಾಣಗಳನ್ನು ಧರಿಸುತ್ತದೆ. ಆ ಜ್ಯೋತಿಯೇ ಜೀವನವೆಂದು ತಿಳಿ. ವಾಯುಧಾರಕವಾದ ಅಗ್ನಿಯು
ಉಸಿರುಬಿಡುವುದನ್ನು ನಿಗ್ರಹಿಸಿರು-ವುದರಿಂದ ನಷ್ಟವಾಗುತ್ತದೆ. ಆ ಶರೀರಾಗ್ನಿಯು
ನಷ್ಟವಾಗುವುದರಿಂದ ಚೇತನವಲ್ಲದ ದೇಹವು ನಷ್ಟವಾಗಿ ಪೃಥಿವೀಭಾವವನ್ನು ಹೊಂದುತ್ತದೆ. ಅದಕ್ಕೆ
ಮತ್ತು ಚರ, ಸ್ಥಿರವಾದ ಸಕಲ
ವಸ್ತುಗಳಿಗೂ ಸಹ ಪೃಥಿವಿಯೇ ಆಶ್ರಯವು. ವಾಯುವು ಆಕಾಶದಲ್ಲಿ ಲೀನವಾಗುವುದು. ತೇಜಸ್ಸು ವಾಯುವನ್ನು
ಅನುಸರಿಸುತ್ತದೆ. ಆಕಾಶ, ವಾಯು,
ತೇಜಸ್ಸುಗಳು ಒಂದೇ ಆಶ್ರಯದಲ್ಲಿರುವುದರಿಂದ
ಆ ಮೂರೂ ಭೂಮಿಯಲ್ಲಿ ಇರುತ್ತವೆ. ಆಕಾಶವಿದ್ದೆಡೆಯಲ್ಲಿ ವಾಯುವೂ, ವಾಯುವಿದ್ದೆಡೆಯಲ್ಲಿ ಅಗ್ನಿಯೂ ಇರುತ್ತವೆ. ಅವು
ಶರೀರವಿಲ್ಲದುವು, ಆತ್ಮರು
ಶರೀರವುಳ್ಳವರು. ಪಾಂಚಭೌತಿಕವಾದ ಈ ಶರೀರವನ್ನು ಅದರೊಳಗಿರುವ ಒಬ್ಬ ಆತ್ಮನು ಧರಿಸಿರುವನು. ಅವನೇ
ಗಂಧ, ರಸ, ಶಬ್ದ, ಸ್ಪರ್ಶ ರೂಪ ಮತ್ತು ಇತರ ಗುಣಗಳು ಅವುಗಳೆಲ್ಲವನ್ನೂ ಆಯಾಯ
ಇಂದ್ರಿಯಗಳ ಮೂಲಕವಾಗಿ ಗ್ರಹಿಸುತ್ತಾನೆ. ಶರೀರದಲ್ಲೆಲ್ಲಾ ಅನುಗತವಾಗಿರುವ ಅಂತರಾತ್ಮನು
ಪಾಂಚಭೌತಿಕವಾದ ಶರೀರದಲ್ಲಿ ಗಂಧಾದಿ ಐದು ಗುಣಗಳನ್ನೂ ಪ್ರದರ್ಶಿಸುವನು. ಅವನೇ ಶರೀರದಲ್ಲಿ
ಸುಖದುಃಖಗಳನ್ನು ತಿಳಿಯುವನು. ದೇಹಿಯು ಅದರ ವಿಯೋಗವಾದಮೇಲೆ ತಿಳಿಯುವುದಿಲ್ಲ. ರೂಪ, ಸ್ಪರ್ಶ ಅಗ್ನಿಯ ಉಷ್ಣತ್ವ ಇವುಗಳಿಲ್ಲ-ದಿರುವಾಗ
ಶರೀರಾಗ್ನಿಯು ಶಾಂತವಾಗಲು ದೇಹತ್ಯಾಗ ಮಾಡುವುದರಿಂದ ಜೀವನು ನಾಶವಾಗುವನೆಂದು ತಿಳಿಯುವುದು. ಈ ಸಕಲವೂ ಜಲಮಯವು. ಜೀವಾತ್ಮರ ಶರೀರವೂ ಜಲವು.
ಜಗತ್ಕರ್ತನಾದ ಮಾನಸನಾಮಕನಾದ ಬ್ರಹ್ಮನೇ ಸಕಲ ಪ್ರಾಣಿಗಳಲ್ಲಿಯೂ ಇರುವನು. ಪದ್ಮದಲ್ಲಿ ಜಲಬಿಂದುಗಳು
ಆಶ್ರಯಿಸಿರುವಂತೆ ಆ ದೇಹದಲ್ಲಿ ಆಶ್ರಯಿಸಿರುವ, ಲೋಕಕ್ಕೆಲ್ಲಾ ಹಿತಕಾರಿಯಾದ ಆತನನ್ನು ಅಂತರಾತ್ಮನೆಂದು ತಿಳಿ. ಸರ್ವದಾ ಲೋಕಹಿತಕಾರಿಯಾದ
ಅವನನ್ನು ಕ್ಷೇತ್ರಜ್ಞನೆಂದು ತಿಳಿ, ತಮಸ್ಸು, ರಜಸ್ಸು, ಸತ್ವ ಇವುಗಳನ್ನು ಜೀವಗುಣಗಳೆಂದು ತಿಳಿ. ಜೀವಗುಣವು
ಅಚೇತನವೆಂದು ಹೇಳುತ್ತಾರೆ. ಅಂತರಾತ್ಮನೇ ಚೇಷ್ಟೆ ಮಾಡುತ್ತಾನೆ. ಸಕಲವನ್ನೂ ಚೇಷ್ಟೆ (ಚಲನ,
ಚಾಲನೆ, ಚಲನವಲನ) ಮಾಡುವಂತೆಯೂ ನಿಯಮಿಸುವನು. ಕ್ಷೇತ್ರಜ್ಞಾನಿಗಳು
ಇದಕ್ಕಿಂತಲೂ ಅಧಿಕವಾಗಿ ಅವನೇ ಏಳು ಲೋಕಗಳಿಗೂ ಪ್ರವರ್ತಕನೆಂದು ಹೇಳುವರು. ದೇಹವು
ಬದಲಾಯಿಸಿದಾಗ್ಯೂ ಜೀವನಾಶ-ವಾಗುವುದಿಲ್ಲ. ಅಜ್ಞಾನಿಗಳು ಮನಸ್ಸೇ ಜೀವನು, ಅವನು ದೇಹದಲ್ಲಿದ್ದು ಅದರ ಸಂಗಡ ಹೋಗುತ್ತಾನೆ.
ಅವನಿಗೆ ಪಂಚಭೂತಗಳಿಂದ ಶರೀರಭೇದವಾಗುತ್ತದೆ ಎಂಬುದಾಗಿ ಹೇಳುತ್ತಾರೆ. ಅದು ಸುಳ್ಳು. ಈ ರೀತಿಯಾಗಿ
ಅಂತರಾತ್ಮನು ಯಾವಾಗಲೂ ಸಕಲ ಪ್ರಾಣಿಗಳಲ್ಲಿಯೂ ಗೋಪ್ಯವಾಗಿ ಸಂಚರಿಸುತ್ತಿರುವನು. ಅವನು
ತತ್ವಜ್ಞಾನಿಗಳಿಗೆ ಶ್ರೇಷ್ಠವಾದ ಸೂಕ್ಷ್ಮಬುದ್ಧಿಯಿಂದ ದೃಶ್ಯನಾಗುವನು. ತೃಪ್ತನು
ಪರಿಶುದ್ಧಚಿತ್ತನೂ ಆದ ಜ್ಞಾನಿಯು ಪೂರ್ವಾಪರ ರಾತ್ರಿಗಳಲ್ಲಿಯೂ ಅಂತರಾತ್ಮನನ್ನು ಧ್ಯಾನಿಸುತ್ತಾ,
ತನ್ನ ಹೃದಯದಲ್ಲಿಯೇ ಆತ್ಮನನ್ನು
ಸಾಕ್ಷಾತ್ಕರಿಸುವನು. ಶುಭಾಶುಭಕರ್ಮಗಳನ್ನು ಬಿಟ್ಟು ಮನಃಪ್ರಸನ್ನತೆಯಿಂದ ಪ್ರಸನ್ನನಾದ ಆತ್ಮನು
ಆತ್ಮನಲ್ಲಿಯೇ ಇದ್ದು ಅನಂತಸುಖವನ್ನೇ ಪಡೆಯುತ್ತಾನೆ. ಶರೀರಗಳಲ್ಲಿರುವ ಮಾನಸಿಕ ಜ್ಯೋತಿಸ್ಸೇ
ಜೀವವೆನಿಸುವುದು. ಈ ರೀತಿ ಭೂತ ಮತ್ತು ಅಧ್ಯಾತ್ಮಗಳನ್ನು ವಿವೇಚನೆಮಾಡಿರುವುದೇ ಬ್ರಹ್ಮನ
ಸೃಷ್ಟಿಯು.
ಧ್ಯಾನಕ್ಕೆ ವರ್ಣ ಬೇಧವಿಲ್ಲ
ಬ್ರಾಹ್ಮಣಾಃ
ಕ್ಷತ್ರಿಯಾ ವೈಶ್ಯಾಃ ಶೂದ್ರಾಃ ಸ್ವಾಚಾರತತ್ಪರಾಃ ।
ಸದಾ
ನಾರಾಯಣಪರಾಸ್ತಪೋಧ್ಯಾನ ಪರಾಯಣಾಃ ||
ಕಾಮಾದಿ
ದೋಷನಿರ್ಮುಕ್ತಾಃ ಶಮಾದಿಗುಣತತ್ಪರಾಃ ।
ಧರ್ಮಸಾಧನಚಿತ್ತಾಶ್ಚ
ಗತಾಸೂಯಾ ಅದಾಂಭಿಕಾಃ ॥
ಸತ್ಯವಾಕ್ಯರತಾಸ್ಸರ್ವೆೇ
ಚತುರಾಶ್ರಮಧರ್ಮಿಣಃ ।
ವೇದಾಧ್ಯಯನಸಂಪನ್ನಾಃ
ಸರ್ವಶಾಸ್ತ್ರವಿಚಕ್ಷಣಾಃ ||
ಚತುರಾಶ್ರಮಯುಕ್ತೇನ
ಕರ್ಮಣಾ ಕಾಲಯೋನಿನಾ |
ಅಕಾನುಫಲಸಂಯೋಗಾಃ
ಪ್ರಯಾಂತಿ ಪರಮಾಂ ಗತಿಂ ||
ಶ್ರೀ ನಾರದೀಯ
ಪುರಾಣಂ - ಪೂರ್ವಭಾಗ - ಅಧ್ಯಾಯ 41
ಶ್ಲೋಕ 9 ರಿಂದ
12
ಭಾವಾರ್ಥ:- ಬ್ರಾಹ್ಮಣ, ಕ್ಷತ್ರಿಯ,
ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣದವರೂ ತಮ್ಮ ತಮ್ಮ ಸಂಸ್ಕಾರ (ಆಚಾರ)
ಧರ್ಮದಲ್ಲಿ ನಿರತರು (ಶ್ರದ್ದೆಯಿಂದ ತೊಡಗಿರುವವರು), ಸರ್ವದಾ ನಾರಾಯಣ ನಿಷ್ಠರಾಗಿ ತಪಸ್ಸು, ಧ್ಯಾನ ಇವುಗಳಲ್ಲಿಯೇ ಆಸಕ್ತರು, ಧರ್ಮಸಾಧನಮನಸ್ಕರು, ಅಸೂಯೆಯಿಲ್ಲದವರು, ಜಂಭವಿಲ್ಲ-ದವರು, ನಿಜವನ್ನೇ ಹೇಳುವವರು, ಎಲ್ಲರೂ ನಾಲ್ಕು ಆಶ್ರಮಧರ್ಮಗಳನ್ನು ಅನುಷ್ಠಾನ ಮಾಡುವವರು,
ವೇದಾಧ್ಯಯನ ಸಂಪನ್ನರು, ಸಕಲಶಾಸ್ತ್ರ ತತ್ವಜ್ಞರೂ ಆಗಿ ಆಯಾಯಾ ಕಾಲಗಳಲ್ಲಿ
ಪ್ರಾಪ್ತವಾಗುವ ನಾಲ್ಕು ಆಶ್ರಮಗಳ ನಿಹಿತಕರ್ಮಗಳನ್ನು ಫಲಾಶೆಯಿಲ್ಲದೇ ಮಾಡುತ್ತಾ ಉತ್ತಮಗತಿಯನ್ನು
ಹೊಂದುತ್ತಾರೆ.
ಯೋಗಿಯು ಇಂದ್ರಿಯ ಮತ್ತು ಮನಸ್ಸುಗಳನ್ನು ಒಟ್ಟುಗೂಡಿಸುವುದೇ
ಧ್ಯಾನಮಾರ್ಗವು
ವಿಚಾರಶ್ಚ
ವಿತರ್ಕಶ್ಚ ವಿವೇಕಶ್ಚೋಪಜಾಯತೇ ।
ಮುನೇಃ
ಸಮಾಧಿಯುಕ್ತಸ್ಯ ಪ್ರಥಮಂ ಧ್ಯಾನಮಾದಿತಃ ||
ಶ್ರೀ ನಾರದೀಯ
ಪುರಾಣಂ - ಪೂರ್ವಭಾಗ - ಅಧ್ಯಾಯ 44
ಶ್ಲೋಕ 98
ಭಾವಾರ್ಥ:- ಸಮಾಧ್ಯವಸ್ಥೆಯನ್ನು ಹೊಂದಿದ ಮುನಿಗೆ ಮೊದಲು ಧ್ಯಾನವು ಅದಕ್ಕೆ ಕಾರಣವಾಗಿ ವಿಚಾರ,
ವಿತರ್ಕ ಮತ್ತು ವಿವೇಕ ಇವುಗಳು ಹಿಂದೆಯೇ
ಉಂಟಾಗಿರುತ್ತವೆ.
ಹೆಚ್ಚುವರಿ
ವಿವರಣೆ :- ಸಿದ್ಧಿಯನ್ನು ಹೊಂದುವ
ರೀತಿಯಲ್ಲಿ ಯೋಗಿಗಳು ಧ್ಯಾನ ಮಾಡುವರು. ಮೋಕ್ಷಾಂಕ್ಷಿಗಳಾಗಿ ಜ್ಞಾನದಿಂದ ತೃಪ್ತಿಯನ್ನು
ಹೊಂದಿರುವ ಮಹರ್ಷಿಗಳು ಸಂಸಾರ ಬಂಧದಿಂದ ಮುಕ್ತರಾಗುವರು. ಪುನಃ ಸಂಸಾರಕ್ಕೆ ಹಿಂತಿರುಗುವುದಿಲ್ಲ.
ಮುಕ್ತರು ಜನನ ಮರಣವನ್ನು ಪರಿಹರಿಸಿಕೊಂಡು ನೈಜವಾದ ಸ್ವರೂಪವನ್ನ ಅನುಭವಿಸುತ್ತಾ ಸುಖದುಃಖಾದಿ
ದ್ವಂದ್ವಸಹಿಷ್ಣುಗಳು, ಯಾವಾಗಲೂ
ಸತ್ವಗುಣವನ್ನೇ ಅನುಭವಿಸುವವರೂ, ಪರಿಗ್ರಹಮಾಡದಿರುವವರೂ
ಆಗಿ ಫಲಾಪೇಕ್ಷೆಯಿಲ್ಲದೇ ಮನಃಶಾಂತಿಕರವಾದ ಅನಿಷಿದ್ದ ಕರ್ಮಗಳನ್ನೇ ಮಾಡುತ್ತಿರುವರು. ಮುನಿಯು
ಕಾಷ್ಠದಂತೆ ಅಚಲವಾಗಿ ಕುಳಿತು ಇಂದ್ರಿಯ ಸಮೂಹವನ್ನು ಒಟ್ಟುಗೂಡಿಸಿ ಧ್ಯಾನ ಸಂಸಕ್ತಮನಸ್ಸನ್ನು
ಏಕಾಗ್ರವಾಗಿ ಧರಿಸಬೇಕು. ತತ್ವಸಾಕ್ಷಾತ್ಕಾರವನ್ನು ಪಡೆಯಬೇಕೆಂದು ಧ್ಯಾನದಲ್ಲಾಸಕ್ತನಾದವನು
ಕಿವಿಯಿಂದ ಬಾಹ್ಯ ಶಬ್ದವನ್ನು ಕೇಳಬಾರದು. ತ್ವಗಿಂದ್ರಿಯ ದಿಂದ ಸ್ಪರ್ಶವನ್ನು ತಿಳಿಯಬಾರದು.
ಕಣ್ಣಿನಿಂದ ರೂಪವನ್ನು ನೋಡಬಾರದು. ನಾಲಿಗೆಯಂದ ರುಚಿಯನ್ನು ಸವಿಯಬಾರದು. ವಾಸನೆ ನೋಡುವ
ವಸ್ತುಗಳನ್ನು ತ್ಯಜಿಸಬೇಕು. ಜ್ಞಾನಸಾಮರ್ಥ್ಯವುಳ್ಳವನು ಪ್ರಮಾದ-ಕರವಾದ ಈ ಪಂಚ ಗಂಧಾದಿ
ವಿಷಯಗಳನ್ನು ಅಪೇಕ್ಷಿಸಬಾರದು. ಆದಕಾರಣ ವಿವೇಕಿಯು ಪಂಚೇಂದ್ರಿಯಗಳೊಡನೆ ವಿಷಯಗಳಲ್ಲಿ
ತಿರುಗುತ್ತಿರುವ ಮನಸ್ಸನ್ನು ವಿಷಯಗಳಕಡೆಗೆ ಹೋಗದಂತೆ ತಡೆದು ಧ್ಯೇಯತತ್ವದಲ್ಲಿಯೇ
ನಿಲ್ಲಿಸಬೇಕು. ಧೀರನು ಆಲಂಬನರಹಿತವಾಗಿ
ಸಂಚರಿಸುತ್ತಿರುವ ಐದು ದ್ವಾರಗಳುಳ್ಳ ಬಲಾಬಲವಾದ ಮನಸ್ಸನ್ನು ಪೂರ್ವ ಧ್ಯಾನಮಾರ್ಗದಲ್ಲಿ
ಸ್ಥಿರವಾಗಿ ನಿಲ್ಲುವಂತೆ ಮಾಡಬೇಕು. ಯೋಗಿಯು ಇಂದ್ರಿಯ ಮತ್ತು ಮನಸ್ಸುಗಳನ್ನು ಒಟ್ಟುಗೂಡಿಸುವುದೇ
ಪೂರ್ವದಲ್ಲಿ ಹೇಳಲ್ಪಟ್ಟ ಧ್ಯಾನಮಾರ್ಗವು. ಆ ಧ್ಯಾನಮಾರ್ಗಕ್ಕೆ ಪೂರ್ವದಲ್ಲಿ ಗೋಚರಿಸದೇ ಇದ್ದ
ಆರನೆಯನನಾದ ಆತ್ಮನು ಆಮೇಲೆ ಮೇಘದಲ್ಲಿನ ಮಿಂಚು ಸಮುದ್ರಾಂತವಾಗಿ ಪ್ರಕಾಶಿಸುವಂತೆ ಹೊಳೆಯುವನು.
ಎಲೆಯಲ್ಲಿರುವ ನೀರಿನ ತೊಟ್ಟು ಎಲ್ಲಾ ಕಡೆಯಲ್ಲಿಯೂ ಚಲಿಸುತ್ತಾ ಚಂಚಲವಾಗಿರುವಂತೆ ಯೋಗಾಭ್ಯಾಸ
ಮಾಡುವವನ ಚಿತ್ತವು ಧ್ಯಾನ ಮಾರ್ಗದಲ್ಲಿ ಚಂಚಲವಾಗಿರುತ್ತದೆ. ಮನಸ್ಸು ಕ್ಷಣಮಾತ್ರ ಸ್ವಲ್ಪ
ಸಮಾಧಾನವಾಗಿ ಧ್ಯಾನ ಮಾರ್ಗದಲ್ಲಿರುತ್ತದೆ. ಪುನಃ ಅದು ವಾಯು ಮಾರ್ಗದಲ್ಲಿ ವಾಯುವಿನಂತೆ
ತಿರುಗುತ್ತದೆ. ಧ್ಯಾನಯೋಗಜ್ಞಾನಿಯು ಪಶ್ಚಾತ್ತಾಪ, ಕ್ಲೇಶ, ಆಲಸ್ಯ, ಮಾತ್ಸರ್ಯ ಇವುಗಳನ್ನು
ಬಿಟ್ಟು ಪುನಃ ಮನಸ್ಸನ್ನು ಧ್ಯಾನದಲ್ಲಿ ನಿಲ್ಲಿಸಬೇಕು. ಮನಸ್ಸಿನಲ್ಲಿ ಕ್ಲೇಶಪಡುತ್ತಿರುವವನು
ಸಮಾಧಾನ ತಂದುಕೊಳ್ಳಬೇಕು. ಮುನಿಯು ನಿರ್ವೇದವನ್ನು ಹೊಂದಬಾರದು. ಆತ್ಮನಿಗೆ ಹಿತವಾದುದನ್ನು
ಮಾಡಲೇಬೇಕು. ಧೂಳಿ, ಬೂದಿ,
ಬೆರಣಿ ಇವುಗಳ ರಾಶಿಗಳನ್ನು ನೀರಿನಲ್ಲಿ
ನೆನೆಸಿದ ಕೂಡಲೇ ಪರಿಭಾವನೆಯನ್ನು ಹೊಂದದೇ ಹೇಗೆ ಕ್ರಮವಾಗಿ ಪರಿಭಾವನೆಯನ್ನು ಹೊಂದುತ್ತದೆಯೋ,
ಶುಷ್ಕವಾದ ಪಿಂಡೀಭಾವ-ವನ್ನು ಹೊಂದದಿರುವ
ಹಿಟ್ಟಿಗೆ ಸ್ವಲ್ಪ ನೀರನ್ನು ಸೇರಿಸಿದರೆ ಅದೆಲ್ಲವೂ ಹೇಗೆ ಕ್ರಮವಾಗಿ ಪಿಂಡೀಭಾವವನ್ನು
ಹೊಂದುತ್ತದೆಯೋ ಅದರಂತೆಯೇ ವಿಷಯಗಳನ್ನು ಪರಿಹರಿಸಿಕೊಂಡು ಇಂದ್ರಿಯ ಸಮೂಹವನ್ನು
ಸುಖಪರಿಣಾಮವನ್ನಾಗಿ ಮಾಡಿಸಬೇಕು. ಹಾಗೆ ಮಾಡಿದರೆ ಇಂದ್ರಿಯವು ಶಾಂತವಾಗುವುದು. ಈ ಪ್ರಕಾರವಾಗಿ
ಮನಸ್ಸು ತಾನಾಗಿಯೇ ಇಂದ್ರಿಯ ಪಂಚಕವನ್ನು ಪೂರ್ವದಲ್ಲಿಯೇ ಧ್ಯಾನಮಾರ್ಗಕ್ಕೆ ತಂದು ಯಾವಾಗಲೂ
ಧ್ಯಾನಯೋಗವನ್ನು ಆಶ್ರಯಿಸುವುದರಿಂದ ಶಾಂತವಾಗುತ್ತದೆ. ಈ ರೀತಿಯಾಗಿ ಶಾಂತಾತ್ಮನಿಗೆ ಆಗುವ ಸುಖವು
ಪುರುಷ ಪ್ರಯತ್ನದಿಂದಲಾಗಲೀ ಅದೃಷ್ಠ ವಿಶೇಷದಿಂದಲಾಗಲೀ ಆಗುವುದಿಲ್ಲ. ಶಾಂತಾತ್ಮನು ಆ ಸುಖದಿಂದ
ಕೂಡಿ ಧ್ಯಾನಮಾಡುತ್ತಾ ಸಂತೋಷಿಸುವನು. ಯೋಗಿಗಳು ಇದೇ ರೀತಿಯಾಗಿ ನಿರ್ದೋಷವಾದ ಮೋಕ್ಷವನ್ನು
ಪಡೆಯುವರು.
ಆತ್ಮನಿಗೆ ಫ್ರಾಣಾದಿ ಪಂಚಬಾಹ್ಯೇಂದ್ರಿಯಗಳು ಮತ್ತು ಮನಸ್ಸು
ಜ್ಞಾನಸಾಧನಗಳು
ಯಃ
ಪಂಚಸಾಧಾರಣಮತ್ರ ಕಿಂಚಿತ್ ಶರೀರಮೇಕೋ ವಹತೇಂತರಾತ್ಮಾ |
ಸ ವೇತ್ತಿ
ಗಂಧಾಂಶ್ಚ ರಸಾನ್ ಶ್ರುತೀಶ್ಚ ಸ್ಪರ್ಶಂ ಚ ರೂಪಂ
ಚ ಗುಣಾಂಶ್ಚ ಯೇsನ್ಶೇ ||
ಶ್ರೀ ನಾರದೀಯ
ಪುರಾಣ ಪೂರ್ವಭಾಗ - ಅಧ್ಯಾಯ 4೩ ಶ್ಲೋಕ ೩೮
ಭಾವಾರ್ಥ:- ಪಂಚಭೌತಿಕವಾದ ಈ ಶರೀರವನ್ನು ಅದರೊಳಗಿರುವ ಒಬ್ಬ ಆತ್ಮನು ಧರಿಸಿರುವನು. ಅವನೇ ಗಂಧ,
ರಸ, ಶಬ್ದ, ಸ್ಪರ್ಶ ರೂಪ ಮತ್ತು ಇತರ ಗುಣಗಳು ಅವುಗಳೆಲ್ಲವನ್ನೂ ಆಯಾಯ ಇಂದ್ರಿಯಗಳ ಮೂಲಕವಾಗಿ
ಗ್ರಹಿಸುತ್ತಾನೆ.
ನಾರದೀಯ
ಪುರಾಣ ವಿವರಣೆ:-
ಮಹಾಭೂತಗಳು ಐದು, ಆರನೆಯದು ಮನಸ್ಸು ಎಂದು ಉಕ್ತವಾಗಿದೆ. ಆತ್ಮನಿಗೆ ಫ್ರಾಣಾದಿ
ಪಂಚಬಾಹ್ಯೇಂದ್ರಿಯಗಳು ಮತ್ತು ಮನಸ್ಸು ಜ್ಞಾನಸಾಧನಗಳು. ಆತ್ಮನಿಗೆ ಶಾರೀರಕ ಅಥವಾ ಮಾನಸಿಕವಾಗಿ
ಹರ್ಷವುಂಟಾದರೆ ಅದು ಸಾತ್ವಿಕಭಾವದಿಂದುಂಟಾ-ಯಿತೆಂದೂ, ಅಪ್ರೀತಿಕರವಾಗಿ
ದುಃಖವುಂಟಾದಾಗ ಅದು ರಜೋಗುಣ ಸಂಬಂಧದಿಂದ ಬಂದುದೆಂದೂ ತಿಳಿ. ಗುಣಗಳು ಆತ್ಮನನ್ನು
ತಿಳಿಯುವುದಿಲ್ಲ. ಆತ್ಮನಾದರೋ ಗುಣಗಳನ್ನೆಲ್ಲಾ ತಿಳಿಯುವನು. ಗುಣಗಳ ಸೃಷ್ಟಿಕರ್ತನು ಮತ್ತು
ದ್ರಷ್ಟೃವೂ (ನೋಡತಕ್ಕವನೂ) ಆದ ಆತ್ಮನು ಬುದ್ಧಿ
ಸಹಿತವಾದ ಇಂದ್ರಿಯಗಳಿಂದ ಜ್ಞಾನಾರ್ಥವಾಗಿ ಯತ್ನ
ಮಾಡುವನು. ದೇಹವು ವಿನಾಶಶೀಲವು; ಶಾಶ್ವತವಾಗಿರುವುದಲ್ಲ. ಈ ಶರೀರ, ಇಂದ್ರಿಯ, ಬುದ್ಧಿಗಳ
ಸಮಾಹಾರವು ಒಂದನ್ನೊಂದು ಆಶ್ರಯಿಸಿಕೊಂಡು ಕರ್ಮಗಳಲ್ಲಿ ಪ್ರವರ್ತಿಸುತ್ತದೆ. ಪಂಚಧಾತುಗಳು ಜಲ,
ಆಕಾಶ, ವಾಯು, ತೇಜಸ್ಸು ಮತ್ತು ಪೃಥಿವೀ ಎಂಬ ಐದು ವಿಧ ಭೂತಗಳಲ್ಲಿಯೂ ಸೂಕ್ಷ್ಮರೂಪದಿಂದಿರುತ್ತವೆ.
ಸ್ಥೂಲರೂಪದಿಂದ ಇರುವುದಿಲ್ಲ. ಶರೀರವೂ ಸಹ ಆಕಾಶ, ವಾಯು, ತೇಜಸ್ಸು, ಜಲ, ಪೃಥಿವೀ ಈ ಐದರ ಸಮುದಾಯವೇ ಆಗಿದೆ. ಒಂದೇ ಅಲ್ಲ. ಜ್ಞಾನ, ತೇಜಸ್ಸು ಮತ್ತು ವಾಯು ಎಂಬುದಾಗಿ ಕಾರ್ಯಸಂಗ್ರಹವೂ ಮೂರು
ವಿಧ.
ಶರೀರದಲ್ಲಿ ಇಂದ್ರಿಯ, ವಿಷಯ, ಸ್ವಭಾವ, ಬುದ್ದಿ ಮನಸ್ಸು,
ಪ್ರಾಣ, ಅಪಾನಾದಿವಾಯುಗಳು ಮತ್ತು ಧಾತು ಇವುಗಳು ಸಮಾವಿಷ್ಟವಾಗಿವೆ.
ಕಿವಿ, (ಶ್ರೋತ್ರ) ತ್ವಕ್,
ನಾಲಿಗೆ, ಕಣ್ಣು ಮತ್ತು ಮೂಗು ಈ ಐದೂ ಇಂದ್ರಿಯಗಳು. ಇವುಗಳು ಮನಸ್ಸಿನ
ಸಹಕಾರದಿಂದ ಗುಣಗಳನ್ನು ಗ್ರಹಿಸುತ್ತವೆ. ಮನಸ್ಸು ವಿಜ್ಞಾನಸಹಿತವಾಗಿ ಜೇತನವೆನಿಸಿ ಸುಖದಶೆ,
ದುಃಖದಶೆ, ಇವೆರಡೂ ಇಲ್ಲದದಶೆ ಎಂಬುದಾಗಿ ಮೂರು ಅವಸ್ಥೆಗಳನ್ನು
ಹೊಂದುವುದು. ಶಬ್ದ, ಸ್ಪರ್ಶ,
ರೂಪ, ರಸ, ಗಂಧ ಇವುಗಳು ಶರೀರವನ್ನಾಶ್ರಯಿಸಿವೆ. ಈ ಐದೂ
ಮರಣಪರ್ಯಂತವಾಗಿ ಇಂದ್ರಿಯಗಳಿಂದ ಜ್ಞಾನವನ್ನು ಹುಟ್ಟಿಸುತ್ತವೆ. ಅವುಗಳಲ್ಲಿ ಕರ್ಮಫಲತ್ಯಾಗ,
ಸಕಲ ತತ್ವಾರ್ಥನಿಶ್ಚಯ ಇವೆರಡೂ ಎಲ್ಲಕ್ಕೂ
ಮೇಲಾದುದೆಂದೂ, ರಜೋಗುಣವನ್ನತಿ-ಕ್ರಮಿಸಿರುವ
ಪರಿಶುದ್ಧವಾದ ಮೋಕ್ಷಕ್ಕೆ ಸಾಧನನೆಂದೂ ವಿದ್ವಾಂಸರು ಹೇಳುವರು. ಈ ಗುಣಸಮಾಹಾರದಿಂದುಂಟಾದ
ದೇಹವನ್ನೇ ಆತ್ಮನೆಂದು ತಿಳಿಯುವವನು ಮಿಥ್ಯಾಜ್ಞಾನಿಯು (ಆಜ್ಞಾನಿಯು). ಅವನಿಗೆ ದುಃಖವು ನಾಶವಾಗುವುದಿಲ್ಲ.
ಅನಂತವೇ ಆಗುವುದು ಶರೀರವನ್ನು ಆತ್ಮವಲ್ಲವೆಂದು ತಿಳಿದರೆ ನಾನು, ನನ್ನದು ಎಂಬುದು ಸಹ ಇರುವುದಿಲ್ಲ. ದುಃಖಸಂತತಿಯು
ಯಾವುದನ್ನವಲಂಬಿಸಿ ಪ್ರಸಕ್ತವಾದೀತು? ಅದರಲ್ಲಿ ಸಜ್ಜನರು ಸರ್ವೋತ್ತಮವಾದ ತ್ಯಾಗಶಾಸ್ತ್ರವನ್ನು ಶ್ರವಣಮಾಡುವರು. ಅದು
ಮೋಕ್ಷಸಾಧನ-ವಾಗುವುದು. ಉಕ್ತವಾದ ಸಕಲ ಕರ್ಮಗಳಲ್ಲಿಯೂ ತ್ಯಾಗವೇ ಉತ್ತಮವಾದುದು. ಎಂದರೆ
ಫಲಾಶೆಯನ್ನು ಬಿಡಬೇಕೆಂದು ಭಾವ. ಮಿಥ್ಯಾವಿನೀತರಾದವರಿಗೆ ಯಾವಾಗಲೂ ದುಃಖಪ್ರದವಾದ ಮಾನಸಿಕ
ಕ್ಲೇಶವು ಸಂಭವಿಸುವುದು.
ಮಹಾಭಾರತದ
ಜೀವನ್ಮೌಲ್ಯಗಳ ವಿಶ್ಲೇಷಣೆಯಲ್ಲಿ ಜ್ಞಾನ
ಮಹಾಭಾರತವು ಏಳುಪಾತ್ರಗಳ ಮೂಲಕ ಹದಿನೆಂಟು
ಜೀವನ್ಮೌಲ್ಯಗಳ ವಿಶ್ಲೇಷಣೆಯನ್ನು ನಮ್ಮ ಮುಂದಿಡುತ್ತದೆ ಎನ್ನುತ್ತಾರೆ ಇದರ ಬಗ್ಗೆ ಅಧ್ಯಾನ
ನಡೆಸಿರುವ ರಸಋಷಿಗಳು. ಅವುಗಳೆಂದರೆ: (೧) ಧರ್ಮರಾಜ - ಧರ್ಮ(೧); (೨) ಭೀಮಸೇನ - ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ (೧೧); (೩) ಅರ್ಜುನ - ಶ್ರವಣ, ಮನನ ಮತ್ತು ನಿಧಿಧ್ಯಾಸನ (೧೪); (೪,೫) ನಕುಲ-ಸಹದೇವ - ಶೀಲ ಮತ್ತು ವಿನಯ (೧೬); (೬) ದ್ರೌಪದಿ - ವೇದವಿದ್ಯೆ (೧೭); (೭) ಶ್ರೀಕೃಷ್ಣ – ವೇದವೇದ್ಯ (೧೮)
ನಾವು ಧರ್ಮದ ಚೌಕಟ್ಟಿನ ಮೇಲೆ ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ (ವಿವೇಕ),
ಧೃತಿ(ಧೈರ್ಯ), ಸ್ಥಿತಿ, (ಪರಿಶ್ರಮ), ಯೋಗ (ಧ್ಯಾನ,
ವಿಶ್ವಾತ್ಮನೊಂದಿಗೆ ವ್ಯಕ್ತಿಯ ಆತ್ಮ ಮಿಲನ,
ಸ್ವಯಂ ಏಕಾಗ್ರತೆ, ಸಂಪರ್ಕ, ಸೇರ್ಪಡೆ), ಪ್ರಾಣ (ಜೀವದ ಉಸಿರು) ಮತ್ತು ಬಲವೆಂಬ ಹತ್ತು ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಶಾಸ್ತ್ರದ
ಶ್ರವಣ, ಮನನ ಮತ್ತು
ನಿಧಿಧ್ಯಾಸನದೊಂದಿಗೆ (ಗಾಢವಾದ ಮತ್ತು ಪುನರಾವರ್ತಿತ ಧ್ಯಾನ) ಶೀಲ ಮತ್ತು ವಿನಯಗಳು ನಮ್ಮ ನಿತ್ಯ
ಸಂಗಾತಿಗಳಾಗಿರಬೇಕು. ಈ ಹದಿನಾರು
ಜೀವನ್ಮೌಲ್ಯಗಳಿಂದ ಹದಿನೇಳನೇ ವೇದವಿದ್ಯೆಯನ್ನು ಒಲಿಸಿಕೊಂಡು, ಹದಿನೆಂಟನೇ ವೇದವೇದ್ಯ (ವೇದದಿಂದ ತಿಳಿಯಲ್ಪಡುವವನು,
ಭಗವಂತ) ಭಗವಂತನನ್ನು ತಲುಪಬೇಕು. ಆ
ಹದಿನೆಂಟನೇ ಭಗವಂತನನ್ನು ತಲುಪಲು ನಾವು ಈ ಹದಿನೇಳು ಮೆಟ್ಟಿಲುಗಳನ್ನು ಬಳಸಬೇಕು. ............
ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ(ಧೈರ್ಯ),
ಸ್ಥಿತಿ, ಯೋಗ, ಪ್ರಾಣ ಮತ್ತು ಬಲ ಇಷ್ಟನ್ನೂ ಭೀಮಸೇನನು ಪ್ರತಿನಿಧಿಸುತ್ತಾನೆ ಎಂದು ಪಂಚರಾತ್ರದಲ್ಲಿ
ಹೇಳಿದ್ದಾರೆ. ಅದರಿಂದ ಭೀಮನೂ ಕೂಡಾ ಆ ಎಲ್ಲಾ
ಗುಣಗಳನ್ನೂ ಹೊಂದಿದ್ದಾನೆ ಎಂದು ಚಿಂತನೆ ಮಾಡಬೇಕು.
ಎಲ್ಲಾ ವಿದ್ಯೆಗೆ ಅಭಿಮಾನಿಯಾದ ದ್ರೌಪದಿ ವೇದವಿದ್ಯೆಯ ಪ್ರತಿನಿಧಿ. ಹದಿನೆಂಟನೇ
ವೇದವೇದ್ಯ ಭಗವಂತ ಕೃಷ್ಣನಂತೆ ಆಗಬೇಕು (ಕೃಷ್ಣ ಎಂದರೆ ಅಕ್ಷರಶಃ ಅರ್ಥ "ಅತ್ಯುತ್ತಮ
ಜ್ಞಾನವನ್ನು ಸಂಯೋಜಿಸುವವನಾಗಬೇಕು" ಎಂದು ಬರುತ್ತದೆ). ಅದಕ್ಕೆ ಕೃಷ್ಣನನನ್ನು ಕೃಷ್ಣಮ್
ಒಂದೇ ಜಗದ್ಗುರುಮ್ ಎಂದದ್ದು. ಅಂದರೆ ಅತ್ಯುತ್ತಮ ಜ್ಞಾನವನ್ನು ಸಂಯೋಜಿಸುವುದೇ ಜಗತ್ತಿಗೆ
ಗುರುವಾಗುವ ಮಾರ್ಗ.
ಯೋಗ ಸಿದ್ದಿಯನ್ನು ಪಡೆಯುವ ಬಗ್ಗೆ
ಯೋಗಿಯು ತನ್ನ ಮನಸ್ಸನ್ನು ಯೋಗದಲ್ಲಿ ಸಂಯೋಜನೆ
ಮಾಡಿ ಫಲಾಶೆಯಿಲ್ಲದೇ ಕೇವಲ ಭಗತ್ಪ್ರೀತ್ಯರ್ಥವಾಗಿ ಬ್ರಹ್ಮಚರ್ಯೆ, ಅಹಿಂಸೆ, ಸತ್ಯ, ಅಸ್ತೇಯ ಮತ್ತು
ಅಪರಿಗ್ರಹಗಳನ್ನು (ತ್ಯಜಿಸುವಿಕೆ) ಸೇವಿಸಬೇಕು. ಯೋಗಿಯು ಸ್ವಾಧ್ಯಾಯ (ವೇದಾಧ್ಯಯನ) ಶೌಚ,
ಸಂತೋಷ, ಹರಿಪೂಜೆ, ತಪಸ್ಸು ಎಂಬ ನಿಯಮಗಳನ್ನೂ ಆಚರಿಸಿ ಪರಬ್ರಹ್ಮನಲ್ಲಿ ಮನಸ್ಸು ಅತ್ಯಂತ ಆಳತೆಯನ್ನು
ಹೊಂದಬೇಕು. ಈ ರೀತಿ ಐದು ಯಮಗಳು ಐದು ನಿಯಮಗಳೂ ಹೇಳಲ್ಪಟ್ಟಿವು. ಇವನ್ನು ಫಲಾಪೇಕ್ಷೆಯಿಂದ
ಆಚರಿಸಿದರೆ ಆಯಾಯಾ ಫಲಗಳನ್ನು ಮಾತ್ರ ಕೊಡುತ್ತವೆ. ಫಲಾಶೆಯಿಲ್ಲದೆ ಅನುಷ್ಠಾನಮಾಡುವವರಿಗೆ ಇವು
ಮೋಕ್ಷಪ್ರದವಾಗುವುವು. ಈ ಪ್ರಕಾರ ಯತಿಯು ಭದ್ರಾಸನಾದಿಗಳಲ್ಲಿ ಕುಳಿತು ಯಮ ಮತ್ತು ನಿಯಮಗಳೆಂಬ
ಗುಣಗಳಿಂದ ಸಹಿತನಾಗಿ ಯೋಗವನ್ನಾಚರಿಸಬೇಕು. ಅಭ್ಯಾಸದಿಂದ ಪ್ರಾಣವಾಯುವನ್ನು ಅವಲಂಬಸ್ಥಾನದಲ್ಲಿ (ಆಧಾರಸ್ಥಾನದಲ್ಲಿ)
ನಿಲ್ಲುವಂತೆ ಮಾಡುವುದೇ ಪ್ರಾಣಾಯಾಮವೆಂದು ತಿಳಿಯುಬೇಕು. ಅದು ಸಬೀಜ ಮತ್ತು ಅಬೀಜ ಎಂಬುದಾಗಿ
ಎರಡುವಿಧವು. ಪ್ರಾಣಾಪಾನವಾಯುಗಳು ಅನ್ಯೋನ್ಯವಾಗಿ
ತಿರಸ್ಕಾರ ಮಾಡುತ್ತಿರುವಾಗ ಸಮೀಚೀನವಾದ (ಅತ್ಯಾದುನಿಕ) ರೀತಿಯಿಂದ ಅವುಗಳನ್ನು ಸಂಯಮನ
ಮಾಡುವುದರಿಂದ ಮೂರನೆಯ ವಾಯುವು ನಿಷ್ಪನ್ನವಾಗುವುದು. ಅವಲಂಬನೆಯನ್ನು ಹೊಂದಿದ ಆ ವಾಯುವಿನ
ಸ್ಥೂಲರೂಪವೇ ಚಿರಕಾಲದಿಂದ ಬಿಡದೇ ಅಭ್ಯಾಸಮಾಡುತ್ತಿರುವ ಯೋಗಿಗೆ ಆಲಂಬನನೆಂದು ಉಕ್ತವಾಗಿದೆ. ಯೋಗ
ಜ್ಞಾನಿಯು ಪ್ರತ್ಯಾಹಾರದಲ್ಲಿ ಆಸಕ್ತನಾಗಿ ಶಬ್ದಾದಿ ವಿಷಯಸಂಬದ್ಧವಾದ ಇಂದ್ರಿಯಗಳನ್ನು ನಿಗ್ರಹಿಸಿ ಚಿತ್ತವನ್ನ (ಆತ್ಮವನ್ನು) ಅನುಸರಿಸುವಂತೆ
ಮಾಡಬೇಕು. ಯೋಗಿಗಳಿಗೆ ಅಂತಹ ಇಂದ್ರಿಯ ನಿಗ್ರಹದಿಂದ ಉತ್ಕೃಷ್ಟವಾದ ನಿಶ್ಚಲ
ಸ್ಥಿತಿಯುಂಟಾಗುತ್ತದೆ. ಯೋಗಿಯು ನಿಗ್ರಹಿಸದಿರುವ ಇಂದ್ರಿಯಗಳ ಅವಸ್ಥೆಗಳಿಂದ ಯೋಗಸಿದ್ಧಿಯನ್ನು
ಹೊಂದುವುದಿಲ್ಲ. ಪ್ರಾಣಾಯಾ-ಮದಿಂದ ವಶಪಡಿಸಿಕೊಂಡ ವಾಯು, ಪ್ರತ್ಯಾಹಾರದಿಂದ ಅಧೀನ-ಮಾಡಿಕೊಂಡ ಇಂದ್ರಿಯ ಇವುಗಳಿಂದ
ಕಲ್ಯಾಣನಿಧಿಯಾದ ಭಗವಂತನಲ್ಲಿ ಮನಸ್ಸನ್ನು ಸ್ಥಿರವಾಗುವಂತೆ ಮಾಡಬೇಕು.
ಸಂಮಾನೇನ ಪರಾಂ ಹಾನಿಂ ಯೋಗರ್ಧೇಃ ಕುರುತೇ ಯತಃ ॥
ಜನೇನಾಮಮತೋ ಯೋಗೀ ಯೋಗಸಿದ್ಧಿಂ ಚ ವಿಂದತಿ |
ಶ್ರೀ ನಾರದೀಯ ಪುರಾಣ ಪೂರ್ವಭಾಗ - ಅಧ್ಯಾಯ 48 ಶ್ಲೋಕ 37-38
ಭಾವಾರ್ಥ:-
ಮರ್ಯಾದೆ ಮಾಡಿಸಿಕೊಳ್ಳುವುದರಿಂದ ಯೋಗವೃದ್ಧಿಗೆ ಮಹಾ ಹಾನಿಯುಂಟಾಗುವುದು. ಜನರಿಂದ
ಅವಮಾನಮಾಡಿಸಿಕೊಳ್ಳಲ್ಪಟ್ಟ ಯೋಗಿಯು ಯೋಗಸಿದ್ಧಿಯನ್ನು ಪಡೆಯುವನು.
No comments:
Post a Comment