Friday, November 26, 2021

ಪ್ರಾಣ ವಿದ್ಯಾ ವೇದ ರಹಸ್ಯ - 3

 

ಅಧ್ಯಾಯ – 2

ಮಂತ್ರದಲ್ಲಿ ಉಸಿರಾಟದ ರಹಸ್ಯ 

 

ಪಾವಮಾನೀರ್ಯೊ ಅಧ್ಯೇತ್ಯ ಋಷಿಭಿಃ ಸಂಭೃತಂ ರಸಂ |

ತಸ್ಮೈ ಸರಸ್ವತೀ ದುಹೇ ಕ್ಷೀರಂ ಸರ್ಪಿರ್ಮಧೂದಕಂ ॥ ೩೨ ||

ಋಗ್ವೇದ ಮಂ.೯, ಅ.3, ಸೂ.೬೭, ಶ್ಲೋ. 32

ಭಾವಾರ್ಥ:- ಯಾವ ಮಾನವನು ಪವಮಾನ ದೇವತೆಯನ್ನು (ವಾಯು ದೇವನನ್ನು)  ಉದ್ದೇಶಿಸಿರುವುದೂ,  ಋಷಿಗಳಿಂದ ಸಂಪಾದಿತವಾದುದೂ, ವೇದಗಳ ಸಾರ ಭೂತವಾದುದೂ ಆದ ಸೂಕ್ತಗಳನ್ನು ಪಠಿಸುವನೋ ಅವನಿಗೆ ಸರಸ್ವತೀದೇವಿಯು ಕ್ಷೀರವನ್ನೂ, ಫೃತವನ್ನೂ ಮಧುವನ್ನೂ ಮತ್ತು ಸೋಮವನ್ನೂ (ಅಮೃತವನ್ನು) ಕೊಡುತ್ತಾಳೆ.

            ವಿವರಣೆ:- ಮಂತ್ರದ ಒಂದು ವಿಶೇಷ ಉಸಿರಾಟ ವಿಧಾನಕ್ಕೆ ಸಂಬಂಧಿಸಿದ್ದಾಗಿದೆ. ವಾಯುದೇವನ ಅರ್ಥಾತ್ ಉಸಿರಾಟದಲ್ಲಿರುವ ದೇವನ ಉಪಾಸನೆಗಾಗಿ ವೇದಗಳ ಸಾರಭೂತವಾಗಿ ತಿಳಿಸಿರುವ ಮಂತ್ರಗಳು, ಋಷಿಗಳು ತಮ್ಮ ಅನುಭವಾಮೃತದಿ ಭೋದಿಸಿರುವ ಮಂತ್ರಗಳು ಧ್ಯಾನ ಪ್ರಾಣಾಯಾಮದಲ್ಲಿ ಮನನ ಮಾಡಿದಾಗ, ನಮ್ಮಲ್ಲಿ ಮೂಲಾಧಾರದಿಂದ ಸಹಸ್ರಾರದವರೆಗೆ ಹರಿಯುವ ಗುಪ್ತಗಾಮಿನಿ ಸರಸ್ಪತಿ ದೇವಿಯು (ಅಂದರೆ ವಾಯು ರೂಪದ, ಆವಿ ರೂಪದ, ದ್ರವ ರೂಪದ ಅಮೃತ ಉಸಿರು ಸುಷುಮ್ನಾ ನಾಡಿಯಲ್ಲಿ ಸಹಸ್ರಾಕ್ಕೆ ಹರಿಯುವವಳೇ ಸರಸ್ಪತಿ ದೇವಿಯಾಗಿದ್ದಾರೆ) ಈಕೆ ಕ್ಷೀರ, ತುಪ್ಪ, ಜೇನುತುಪ್ಪ ಮತ್ತು ಸೋಮ[1] ರೂಪದ ಶ್ರೇಷ್ಟತೆಗಳನ್ನು ದೇಹಕ್ಕೆ ನೀಡುತ್ತಾಳೆ ಎಂದು ಹೇಳಿರುವುದಾಗಿದೆ.  

 

ಓಂ ಮೂಲದಲ್ಲಿ ಉಸಿರಾಟದ ರಹಸ್ಯ  

            " = = ओम् "  "ಅ ಉ ಮ" = ಓಂ ಎಂದರೆ ಸಂಸ್ಕೃತದಲ್ಲಿ ಏನು ಸೂಚಿಸುತ್ತದೆ ಅಂತಹ ಒಂದು ಅರ್ಥವಿವರಣೆಯಲ್ಲಿ, ಧ್ಯಾನದಲ್ಲಿ ಉಸಿರಾಡುವಾಗ ಈ ಮೂರು ರತ್ನ ಮಂತ್ರಗಳನ್ನು ಅಜಪ ವಿದವಾಗಿ (ಮನಸ್ಸಿನಲ್ಲಿ ಜಪಿಸುವುದು) ಹೇಳಬೇಕು. ""  ಎಂಬ ಅಜಪ ಮಂತ್ರದ ಮುಖೇನ ಉಸಿರನ್ನು ಶ್ವಾಸಕೋಶಕ್ಕೆ ಮತ್ತು ಹೊಟ್ಟೆಯ ಹಾದು ಮೂಲಾಧಾರದವರೆಗೆ ತುಂಬುವುದು, "" ಎಂದು ಅಜಪ ಮಂತ್ರದ ಮುಖೇನ ಕೆಳ ಹೊಟ್ಟೆಯನ್ನು ಸ್ವಲ್ಪ ಒಳ ಎಳೆಯುವುದು, ಈ ಎರಡು ಪ್ರಕ್ರಿಯೆಯಲ್ಲಿ ಕರುಳಿನಲ್ಲಿರುವ ಹಲವಾರು ಉಪಯುಕ್ತ ಬ್ಯಾಕ್ಟೀರಿಯಾಗಳು ಗಾಳಿಯಲ್ಲಿ ಇರುವ ಸಾರಜನಕವನ್ನು (ನೈಟ್ರೋಜನ್) ಒಡೆಯುತ್ತದೆ. ಗಾಳಿಯಿಂದ ಅಣುಸಂಬಂಧಿ ಸಾರಜನಕವನ್ನು (N2) ನೈಟ್ರಿಕ್ ಆಕ್ಸೈಡ್ (NO) ಗೆ ಪರಿವರ್ತಿಸುತ್ತದೆ.  ಈ ನೈಟ್ರಿಕ್ ಆಕ್ಸೈಡ್ ಸಸಾರ ಜನಕ ಆಹಾರ ಪದಾರ್ಥ (ಪ್ರೋಟೀನ್) ಸಂಗ್ರಹಕ್ಕೆ ಸಹಾಯ ಮಾಡುತ್ತದೆ, ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಅಮೈನೋ ಆಸಿಡ್, ಹಾರ್ಮೋನುಗಳು, ಮೆದುಳಿನ ಕಾರ್ಯಗಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತದೆ. ಪ್ರಾಣವಾಯು ಅಪಾನ ವಾಯು ಮತ್ತು ಉದಾನ ವಾಯು ಜೊತೆ ಸೇರಿ ಶುದ್ದೀಕರಿಸುತ್ತದೆ, ನಾಗ ವಾಯುವಾಗಿ ದೇಹದಲ್ಲೆಲ್ಲಾ ಜ್ವಾಲೆಯಾಗಿ ಚಲಿಸುತ್ತದೆ.    ಅಜಪ ಮಂತ್ರದಿಂದ ಮೂಲಾಧಾರದಿಂದ  ಸುಷುಮ್ನಾ ನಾಡಿ ಮುಖೇನ ನಾಗವಾಯು, ವ್ಯಾನ ಮತ್ತು ಇತರೆ ವಾಯುಗಳಾಗಿ  ಸಹಸ್ರಾರ ಚಕ್ರಕ್ಕೆ ಉಸಿರನ್ನು ಕೊಂಡೊಯ್ಯುತ್ತೇವೆ. ಇದು ನಾವು ಆರೋಗ್ಯ ಮತ್ತು ಮೆದುಳಿನ ಬಳಕೆಯ ಸಾಮರ್ಥ್ಯವನ್ನು 100% ಗೆ ಪಡೆಯುವ ವಿಧಾನವಾಗಿದೆ. (ವೇದವು ಇದನ್ನು ಸುಮಾರು 5000 ವರ್ಷಗಳ ಹಿಂದೆ ವಿವರವಾಗಿ ಕಲಿಸುತ್ತದೆ)" ಅಕ್ಷರಶಃ = = ओम् ಈ ಕೆಳಗಿನ ಹಲವು ಅರ್ಥಗಳನ್ನು ನೀಡುತ್ತದೆ:-

1. "ಜೀವ ಉಸಿರು ಚಂದ್ರನಿಗೆ (ಸಹಸ್ರಾರಕ್ಕೆ) ಹಿಡಿತವನ್ನು ಕರೆಯುತ್ತದೆ"

2. "ಮಾಂತ್ರಿಕ ಸೂತ್ರವನ್ನು ಘರ್ಜಿಸಲು ವಿಶೇಷವಾಗಿ ಪರಿಣಾಮಕಾರಿ ಮಂತ್ರ"

3. "ಮಾಂತ್ರಿಕ ಸೂತ್ರದ ಜ್ವಾಲೆಯ ಹಿಡಿತವನ್ನು ಕರೆಯುವುದು".

4. "ಶ್ರೇಷ್ಠತೆಯು ಮಾಂತ್ರಿಕ ಸೂತ್ರದ ಹಿಡಿತವನ್ನು ಕರೆಯುವುದು"

 

ಅಮಂತ್ರಮಕ್ಷರಂ ನಾಸ್ತಿ ನಾಸ್ತಿ ಮೂಲಮನೌಷಧಂ |

ಅಯೋಗ್ಯಃ ಪುರುಷೋ ನಾಸ್ತಿ ಯೋಜಕಸ್ತತ್ರ ದುರ್ಲಭಃ || ೪೯

ಸುಭಾಷಿತರತ್ನ-ಭಾಂಡಾಗಾರ

ಭಾವಾರ್ಥ;- ಮಂತ್ರವಾಗದ ಅಕ್ಷರವಿಲ್ಲ. ಔಷಧವಾಗದ ಮೂಲಿಕೆ ಇಲ್ಲ. ಕಾರ್ಯಸಮರ್ಥನಾಗದ ಮನುಷ್ಯನಿಲ್ಲ. ಆದರೆ ಪ್ರಯೋಜನಕಾರಿ ಯಾಗುವಂತೆ ಇದನ್ನು ಜೋಡಿಸತಕ್ಕವನು ದುರ್ಲಭ.”

ಧರ್ಮಾರ್ಥಕಾಮಮೋಕ್ಷಾಣಾಮಾರೋಗ್ಯಂ ಸಾಧನಂ ಯತಃ |

| ತಸ್ಮಾದಾರೋಗ್ಯದಾನೇನ ತದ್ದತ್ತಂ ಸ್ಯಾಚ್ಚತುಷ್ಟಯಂ ॥೩॥

(ಸ್ಕಂದಪುರಾಣ)

ಭಾವಾರ್ಥ:- ಧರ್ಮ-ಅರ್ಥ-ಕಾಮ. ಮೋಕ್ಷಗಳನ್ನು ಪಡೆಯಲು ಆರೋಗ್ಯವೇ ಮುಖ್ಯ ಕಾರಣವಾಗಿರುವುದರಿಂದ, ಆರೋಗ್ಯ ದಾನ ಮಾಡಿದ್ದಾದರೆ, ಪುರುಷಾರ್ಥ ಚತುಷ್ವಯವನ್ನೂ ನೀಡಿದಂತೆಯೇ.

ಏಕಂ ವಿಷರಸೋ ಹಂತಿ ಶಸ್ತ್ರೇಣೈಕಶ್ಚ ಹನ್ಯತೇ |

ಸಬಂಧುರಾಷ್ಟ್ರಂ ರಾಜಾನಂ ಹಂತ್ಯೇಕೋ ಮಂತ್ರ ವಿಪ್ಲವಃ ॥ 3

ಯಶಸ್ತಿಲಕಚಂಪೂ

ಭಾವಾರ್ಥ:- ವಿಷವು ಒಬ್ಬನನ್ನು ಕೊಲ್ಲುತ್ತದೆ. ಆಯುಧದಿಂದ ಒಬ್ಬನು ಹತನಾಗುತ್ತಾನೆ. ಆದರೆ ಕೆಟ್ಟ ಮಂತ್ರಾಲೋಚನೆ ಬಂಧು ರಾಷ್ಟ್ರ ಸಮೇತವಾಗಿ ರಾಜನನ್ನು ನಾಶಮಾಡುತ್ತದೆ.'

            ಶ್ರೀ ಪ್ರಸನ್ನ ಶ್ರೀನಿವಾಸದಾಸರ ಕೀರ್ತನೆಯಲ್ಲಿ ಹೀಗೆ ಹೇಳುತ್ತಾರೆ, “ಮಂತ್ರ ಪ್ರತಿಪಾದ್ಯ ಹರಿಪ್ರಿಯ ಕ್ಷೇತ್ರವಾಗಿಹುದು, ಮಂತ್ರ ಶುದ್ದಿ ಕ್ಷೇತ್ರ ಮಂತ್ರಾಲಯವು, ಮಂತ್ರ ತಂತ್ರ ವಿಹಿಪ ಜಪ ಪೂಜೆ ಚರಿಸಿ ವೃಂದಾವನದಿ ತಾನೇ ಪ್ರವೇಶ ಮಾಡಿಹರು”

            ಶೈವರ ವಾದ ವಿವರಣೆ:- “ಓಂ ಎಂದರೆ ಜನನ ಮರಣವನ್ನು ನಾಶಮಾಡುವ ಶಿವ. ಸಾಧಿಸಿದರೆ ಜನನ-ಮರಣಗಳನ್ನು ನಾಶಮಾಡುವ ಶಿವ ವಿದ್ಯೆಯನ್ನೇ ಸಾಧಿಸಬೇಕು. ಈ ದೇಹ ಅಸ್ಥಿರ, ಈ ಜೀವನವೂ ಅಸ್ಥಿರ, ಧರ್ಮವೊಂದೇ ಸ್ಥಿರ. ಓಂಕಾರವು ಶಿವಸ್ವರೂಪ. ಅದಕ್ಕೇ ಅಕ್ಷರಗಳನ್ನು ಬರೆಯುವ ಮೊದಲು ಓಂ ನಮಃ ಎಂದು ಬರೆಸುವುದು. : ಓಂ ನಮಃ ಎಂದರೆ ಸತ್ಯವಾದ ಶಿವನಿಗೆ ನಮಸ್ಕಾರ ಎಂದರ್ಥ” ಎನ್ನುತ್ತಾರೆ ಶೈವರು.  

            ದಾಸ ಸಾಹಿತ್ಯದ ಬೇಟೆರಾಯ ದೀಕ್ಷಿತರ ಕೀರ್ತನೆಗಳಲ್ಲಿ ಹೀಗೆ ಹೇಳುತ್ತಾರೆ, ನರಸಿಂಹ[2] ಮಂತ್ರವೊಂದಿದು ಸಾಲದೆ ದುರಿತಕೋಟಿಗಳ ತಾಂ ಪರಿಹರಿಸುವುದಕೆ, ಭೂತ ಬೇತಾಳಗಳ ನಿಗ್ರಹಿಸುವೀ ಮಂತ್ರ, ಪಾತಕ ಗೃಹ ಬೃಂದ ಬಂಧನದ ಮಂತ್ರ, ಕಾತರವ ವಿಧ್ವಂಸ ಗೈಯುತಿಹ ವರ ಮಂತ್ರ, ಮಾತೆಯಂದದಿ ಪಾಲಿಸುತ್ತಲಿಹ ಮಂತ್ರ, ನಿತ್ಯ ಸಂಪದವಿತ್ತು ರಕ್ಷಿಸುವುದೀ ಮಂತ್ರ, ಶಕ್ತಿ ಸೌಖ್ಯವ ಮುದವ ಕರುಣಿಸುವ ಮಂತ್ರ, ಭಕ್ತಿ ಸೌಭಾಗ್ಯ ಪರಮಾಯವೀಯುವ ಮಂತ್ರ, ಸತ್ಯ ನಿರ್ಮಲ ಮನವನಾಗಿಸುವ ಮಂತ್ರ, ಮೃತ್ಯು ಮುಖದಿಂದತ್ತಿ ಮುದ್ದಿಸುವುದೀ ಮಂತ್ರ, ಸತ್ವಗುಣವನು ಪೆರ್ಚಿಸುತ್ತಲಿಹ ಮಂತ್ರ, ಭಕ್ತರನು ವಾತ್ಸಲ್ಯದಿಂದ ಸಲಹುವ ಮಂತ್ರ, ಅತ್ಮಾದರದಿ ಬಿಡದೆ ಜೊತೆಯೊಳಿಹ ಮಂತ್ರ ……… ಪ್ರೇಮದಿಂ ಜಪಗೈವ ವರದೀಕ್ಷಿತಂ ಗರಿವು ಭೂಮಿಯೊಳಗೀ ಮಂತ್ರ ಸರ್ವ ಸಾಧನವು.

 

ಓಂ ಜ್ಞಾನದ ಮೂಲ

ಋಗ್ ವೇದ - ಮಂಡಲ 1 - ಸೂಕ್ತ 3 - ಶ್ಲೋಕ 7 ರಿಂದ 9

ಓಮಾಸಶ್ಚರ್ಷಣೀಧ್ರ್ತೋ ವಿಶ್ವೇ ದೇವಾಸ ಆ ಗತ | ದಾಶ್ವಾಂಸೋ ದಾಶುಷಃ ಸುತಮ || 7

ವಿಶ್ವೇ ದೇವಾಸೋ ಅಪ್ತುರಃ ಸುತಮಾ ಗನ್ತ ತೂರ್ಣಯಃ | ಉಸ್ರಾ ಇವಸ್ವಸರಾಣಿ || 8

ವಿಶ್ವೇ ದೇವಾಸೋ ಅಸ್ರಿಧ ಏಹಿಮಾಯಾಸೋ ಅದ್ರುಹಃ |

ಮೇಧಂ ಜುಷನ್ತ ವಹ್ನಯಃ || 9

ಭಾವಾರ್ಥ:- (7). ಬನ್ನಿ, ಓಂ ಪ್ರೇಮಿಗಳು, ಭಗವಂತನ ಸೃಷ್ಟಿಕರ್ತ ಮತ್ತು ಬ್ರಹ್ಮಾಂಡದ ರಕ್ಷಕ, ಬೆಳಕಿನ ಒಡೆಯರು ಮತ್ತು ಮಾನವೀಯತೆಯ ಪ್ರೇಮಿಗಳು, ವಿಶ್ವದ ಉದಾತ್ತ ದಾರ್ಶನಿಕರು, ಉದಾರವಾಗಿ ಕೊಡುವವರು ಮತ್ತು ಎಲ್ಲರಿಗೂ ಹಿತೈಷಿಗಳು, ಬಂದು ನಮಗೆ ನೀಡಿ ಜೀವನ ಮತ್ತು ಸಾಹಿತ್ಯದಿಂದ ಬಟ್ಟಿ ಇಳಿಸಿದ ಸಾರ ಮತ್ತು ಬುದ್ಧಿವಂತಿಕೆ. (8). ಪ್ರಪಂಚದ ದಾರ್ಶನಿಕರು, ಉದಾರವಾಗಿ ಕೊಡುವವರು, ಜೀವನ ಮತ್ತು ಸಾಹಿತ್ಯದ ಬುದ್ಧಿವಂತ ವಿದ್ವಾಂಸರು, ಗಾಳಿಯಂತೆ ವೇಗವಾಗಿ ಮತ್ತು ಮುಂಜಾನೆಯ ಉತ್ಸುಕರಾಗಿ ಮತ್ತು ಸಂಜೆ ಡೇರೆಯಲ್ಲಿರುವ ಕರುವಿಗೆ ತಾಯಿ-ಹಸುವಿನ ವೇಗದಂತೆ, ನಿಮ್ಮ ಸ್ವಂತಕ್ಕೆ ಬಂದು ನಮಗೆ ಜ್ಞಾನ ಮತ್ತು ಬುದ್ಧಿವಂತಿಕೆಯ ಸಾರವನ್ನು ತರುತ್ತದೆ. (9). ಪ್ರಪಂಚದ ದೈವತ್ವಗಳು, ದ್ವೇಷ ಮತ್ತು ಭಯವಿಲ್ಲದ ಸರ್ವಜ್ಞರ ಅಪ್ರತಿಮ ಮತ್ತು ಅಹಿತಕರ ಪ್ರೇಮಿಗಳು ವೇಗವಾಗಿ ಬರುತ್ತಾರೆ ಮತ್ತು ಪ್ರೀತಿ, ಸಹಾನುಭೂತಿ ಮತ್ತು ಜ್ಞಾನ ಯಜ್ಞದ ಅದ್ಭುತ ಬೆಂಕಿಯ ಸಂಭ್ರಮವನ್ನು ಸೇರುತ್ತಾರೆ.

 

ಶಕ್ತಿಯುತ ಓಂ ನಮೋ ನಾರಾಯಣಾಯ ಅಜಪ ಮಂತ್ರ

            "ನಾರಾಯಣಾಯ" = नारायणाय = ಅಕ್ಷರಶಃ ಅರ್ಥ "ಮಿದುಳಿನ ನಾಸಿಕಕ್ಕೆ ಬೆಳಕು ನೀಡಲು ಅವಿಶ್ರಾಂತವಾದ ಜೀವ ಉಸಿರು ನಿರ್ದಿಷ್ಟವಾಗಿ ಪರಿಣಾಮಕಾರಿ ಮಂತ್ರದೊಂದಿಗೆ ಸೇರಿ". ಇಲ್ಲಿ "ಓಂ ನಮೋ ನಾರಾಯಣಾಯ" ಎಂಬ ಮಂತ್ರವನ್ನು ನೋಡಿ, ಓಂ ಎಂಬ ಅಜಪ ಮಂತ್ರದ ಮುಖೇನ ಉಸಿರನ್ನು ಶ್ವಾಸಕೋಶಕ್ಕೆ ಮತ್ತು ಹೊಟ್ಟೆಯ ಹಾದು ಮೂಲಾಧಾರದವರೆಗೆ ತುಂಬುವುದು, "ನಮೋ" ಎಂದು ಅಜಪ ಮಂತ್ರದ ಮುಖೇನ ಕೆಳ ಹೊಟ್ಟೆಯನ್ನು ಸ್ವಲ್ಪ ಒಳ ಎಳೆಯುವುದು ಸುಷುಮ್ನಾ ದ್ವಾರವನ್ನು ತೆರೆಯುವುದು,  "ನಾರಾಯಣಾಯ" ಎಂದು ಅಜಪ ಮಂತ್ರದ ಮುಖೇನ ಸುಷುಮ್ನ ನಾಡಿಯಲ್ಲಿ ಉಸಿರನ್ನು ಸಹಸ್ರಾರ ಚಕ್ರಕ್ಕೆ ಕಳಿಸುವುದು. ಇಂತಹ ಮಂತ್ರೋಪದೇಶವನ್ನು ಪಡೆದು ಜಗತ್ತಿಗೆ ಬಹಿರಂಗವಾಗಿ ಸಾರಿದವರು ರಾಮಾನುಜಾಚಾರ್ಯರು. ಅಕ್ಷರ ಅರ್ಥದಲ್ಲಿ “ಶ್ರೇಷ್ಠತೆಯು ಮಾಂತ್ರಿಕ ಸೂತ್ರದ ಹಿಡಿತವನ್ನು ಕರೆಯುವ ಓಂಕಾರವು, ಅವಿಭಜಿತ ನೀರಿನ ಕರುಣೆಯೊಂದಿಗೆ,  ಮಿದುಳಿನ ನಾಸಿಕಕ್ಕೆ (ಅಂದರೆ ಸುಷುಮ್ನಾ ನಾಡಿಯು ಮೆದುಳಿನ ನಾಸಿಕವಾಗಿದೆ) ಬೆಳಕು ನೀಡಲು (ಅಮೃತಸ್ವರೂಪದ ಜ್ವಾಲೆಯಿಂದ ಕೂಡಿದ ಜ್ಯೋತಿ ಸ್ವರೂಪವು) ಜೀವ ಉಸಿರು ಅವಿಶ್ರಾಂತವಾಗಿ ಅಜಪ ಮಂತ್ರದೊಂದಿಗೆ ಸೇರಿ ಬೆಳಕು ನೀಡುವುದು”, ಅದುವೇ ನಾರಾಯಣಾಯ ಮಂತ್ರ ವಿಸ್ಮಯ ಅರ್ಥ.  

 

ಕುಂಡಲಿನಿ, ಧ್ಯಾನ, ಪ್ರಾಣಾಯಾಮ ಅಂದರೆ ಏನು?

            ಕುಂಡಲಿನಿ ಅಂದರೆ ಏನು? = कुण्डलिनि, ಕುಂಡಲಿನಿ ಎಂದರೆ ದುರ್ಗಾ ಶಕ್ತಿಯ ರೂಪ, ಹಾವಿನ ಸುರುಳಿಯ ರೂಪ. ಅಕ್ಷರಶಃ ಒಂದು ರೀತಿಯಲ್ಲಿ ವ್ಯಾಖ್ಯಾನಿಸಿದಾಗ (कुण्ड्, अलिन, ಎಂಬ ಅಕ್ಷರ ಅರ್ಥ ಹುಡುಕಿದಾಗ).  "ಧ್ಯಾನದಲ್ಲಿ ಮಹತ್ತರವಾಗಿ ಮುಂದುವರಿದದ್ದನ್ನು ರಕ್ಷಿಸಲು ನಿರ್ದಿಷ್ಟ ಸ್ಥಿತಿಗೆ ಇಳಿಸುವುದು" ಅಕ್ಷರಶಃ ವ್ಯಾಖ್ಯಾನದ ಇನ್ನೊಂದು ವಿಧಾನದಲ್ಲಿ, (, , , , , , नि ಇವುಗಳ ಅರ್ಥವನ್ನು ಹುಡುಕಿದಾಗ).  ಇದರ ಅರ್ಥ "ಜಲಾಂತರ್ಗಾಮಿ ಬೆಂಕಿ ನೀರಿನ ಮನೆಯಿಂದ ಗಾಳಿಯನ್ನು ಹಿಡಿತಕ್ಕೆ ಕರೆಯುವುದು, ಸೃಷ್ಟಿಕರ್ತ ಮಿದುಳಿನ ನಾಸಿಕಕ್ಕೆ ಬರಲು".  ಯೋಗದಲ್ಲಿ ಕುಂಡಲಿನಿಯನ್ನು ನಾಡಿಗಳ (ವೇನ್ಸ್) ಕುರಿತು ಬಳಸಲಾಗುತ್ತದೆ. ಕುಂಡಲಿನಿ ಚಕ್ರಗಳಿಗೆ "ದುರ್ಗಾ" = दुर्ग  ದೇವತೆಯ ಹೆಸರನ್ನು ಇಡಲಾಗಿದೆ, ದುರ್ಗದ ಅಕ್ಷರಶಃ ಅರ್ಥವೆಂದರೆ "ಬೆಂಕಿಯೊಡನೆ ಬಳಕೆ ಮಾಡಿ  ಪ್ರಕಾಶಮಾನತೆಯನ್ನು ತಲುಪುತ್ತದೆ".

            ಪದಗಳ ಅರ್ಥ :- ದುರ್ಗಾ ಅಥವಾ ಶಕ್ತಿಯ ರೂಪ, ವೃತ್ತಾಕಾರದ, ಸುರುಳಿಯಾಕಾರದ,  ಸುರುಳಿಯಾಕಾರದ (ಸರ್ಪವಾಗಿ)

            ಪದಗಳ ಅರ್ಥ :- कुण्ड्  अलिन   = ಸಂರಕ್ಷಿಸಲು ಬಹಳ ಮುಂದುವರಿದ ತಪಸ್ಸಿನಲ್ಲಿ ಒಂದು ನಿರ್ದಿಷ್ಟ ಸ್ಥಿತಿಗೆ ಇಳಿಸುವುದು

 

            ಸಂಸ್ಕೃತದಲ್ಲಿ ಧ್ಯಾನ ಎಂದರೆ  ध्यान = 1 ಧ್ಯಾನ, ಪ್ರತಿಬಿಂಬ, ಚಿಂತನೆ; ಅಂತರ್ಮುಖ; -2 ವಿಶೇಷವಾಗಿ, ಅಮೂರ್ತ ಚಿಂತನೆ, ಧಾರ್ಮಿಕ ಧ್ಯಾನ; -3 ದೈವಿಕ ಅಂತಃಪ್ರಜ್ಞೆ ಅಥವಾ ವಿವೇಚನೆ. -4 ದೇವತೆಯ ವೈಯಕ್ತಿಕ ಗುಣಲಕ್ಷಣಗಳ ಮಾನಸಿಕ ಪ್ರಾತಿನಿಧ್ಯ; ಎಂದು ಶಬ್ದ ಕೋಶದಲ್ಲಿ ಇದೆ.   या (ಧ ಯಾ ನ) ಎಂಬ ಅಕ್ಷರಗಳ ಅರ್ಥದಲ್ಲಿ ನೋಡಿದಾಗ "ಅವಿಶ್ರಾಂತವಾಗಿ ಧಾರ್ಮಿಕ ಧ್ಯಾನವನ್ನು ಉಂಟುಮಾಡುವುದು" ಎಂದು ಅರ್ಥ ನೀಡುತ್ತದೆ.

            ನರ-ಮನೋವಿಜ್ಞಾನಿಯಾದ ಡಾ. ಡೇವಿಡ್‌ ಎಚ್‌. ಫಿಂಕ್‌ ಸಂಶೋಧನೆಯ ಮೂಲಕ ಮನಸ್ಸು ಮತ್ತು ದೈಹಿಕ ಒತ್ತಡವನ್ನು ಕಡಿಮೆ ಮಾಡುವುದರಿಂದ ಶೇಕಡ ೫೦ ಭಾಗ ಕಾಯಿಲೆಗಳು ಶೀಘ್ರವಾಗಿ ಗುಣಮುಖವಾಗುತ್ತವೆಂದು ಖಚಿತ ಪಡಿಸಿದ್ದಾರೆ. ಆಧ್ಯಾತ್ಮಿಕ ಶಾಸ್ತ್ರದ ಪ್ರಕಾರ, ಶೇಕಡ ೮೦ ಭಾಗ ಕಾಯಿಲೆಗಳು ಆಧಾತ್ಮಿಕ ಸಾಧನೆಯಿಂದ ಮತ್ತು ಔಷಧೋಪಚಾರದಿಂದ ಗುಣವಾಗುತ್ತವೆ. ಅನೇಕ ಸಮಯಗಳಲ್ಲಿ ಮಾನಸಿಕ ಒತ್ತಡದಿಂದಲೂ ಮತ್ತು ಅನೇಕ ದೈಹಿಕ ಕಾಯಿಲೆಗಳಲ್ಲಿ ಹೃದಯ ನಾಡಿ ಬಡಿತ ಮತ್ತು ಉಸಿರಾಟದ ವೇಗ ಸಹಜ ವೇಗಕ್ಕಿಂತ ಹೆಚ್ಚಾಗಿರುತ್ತದೆ. ಧ್ಯಾನ ಮಾಡಿದ ನಂತರ ಮಿದುಳಿನ ಎರಡು ಭಾಗಗಳು ಸಹ ಕೆಲಸ ಮಾಡುವುವು. ಹೈಪೊಥೆಲಾಮಸ್‌ ಚೆನ್ನಾಗಿ ಕೆಲಸ ಮಾಡಿ ಕಾಯಿಲೆಗಳನ್ನು ಗುಣ ಪಡಿಸುವುವೆಂದು ಸಂಶೋಧನೆಗಳು ಖಚಿತ ಪಡಿಸಿವೆ. ಮಾನಸಿಕ, ದೈಹಿಕ, ಸಾಮಾಜಿಕ, ಆಧ್ಯಾತ್ಮಿಕ, ಭಾವನಾತ್ಮಕ ಆರೋಗ್ಯ ಲಭಿಸುತ್ತದೆ.

            ಸಂಸ್ಕೃತದಲ್ಲಿ प्राणयाम ಎಂಬ ಪದವನ್ನು प्रा या    ಅಕ್ಷರಗಳ ಅರ್ಥದಲ್ಲಿ ನೋಡಿದಾಗ ಈ ಕೆಳಕಂಡ ಅರ್ಥಗಳು  ಬರುತ್ತದೆ.

1. ಮಾಂತ್ರಿಕ ಸೂತ್ರವನ್ನು (ಅಮೃತ ಉತ್ಪಾದನಾ ಸೂತ್ರ ) ಸಾಧಿಸಲು ನೀರಿನ ಮನೆ ತುಂಬಲು.

2. ಮಾಂತ್ರಿಕ ಸೂತ್ರವನ್ನು (ಅಮೃತ ಉತ್ಪಾದನಾ ಸೂತ್ರ ) ಸರಿಸಲು ಪ್ರಾಣ (ಗಾಳಿ).

3. ಧಾರ್ಮಿಕ ಧ್ಯಾನದಲ್ಲಿ ಮಿದುಳಿನ ನಾಸಿಕವನ್ನು ತುಂಬಲು ಒಂದು ಮಾಂತ್ರಿಕ ಸೂತ್ರ(ಅಮೃತ ಉತ್ಪಾದನಾ ಸೂತ್ರ ).

 

ಪ್ರಾಣಾಯಾಮದಿ ಕುಂಡಲಿನಿ ಚಕ್ರದ ಬಾಗಿಲು ತೆರೆಯಬೇಕು

ಋಗ್ ವೇದ - ಮಂಡಲ 1 - ಸೂಕ್ತ 13- ಶ್ಲೋಕ 6

ವಿ ಶರಯನ್ತಾಂ ರತಾವ್ರ್ಧೋ ದವಾರೋ ದೇವೀರಸಶ್ಚತಃ |

ಅದ್ಯಾ ನೂನಂ ಚ ಯಷ್ಟವೇ ||

ಭಾವಾರ್ಥ:- ಜ್ಞಾನಿಗಳು, ವಿದ್ವಾಂಸರು, ಜ್ಞಾನದ ಮಿತಿಯನ್ನು ವಿಸ್ತರಿಸುವ ಶಾಶ್ವತ ಸತ್ಯದ ಸೇವಕರು, ಅಕ್ಷಯ ಬೆಳಕಿನ ಪವಿತ್ರ ಬಾಗಿಲುಗಳನ್ನು ತೆರೆಯಬೇಕು (ಕುಂಡಲಿನಿ ಚಕ್ರಗಳನ್ನು ಜಾಗೃತಗೊಳಿಸಬೇಕು), ಯಜ್ಞವನ್ನು (ಪ್ರಾಣಾಯಾಮವನ್ನು) ಇಂದು ಮಾಡಬೇಕು.

 

ಶಾಶ್ವತ ಜ್ಞಾನದ ಬೆಳಕನ್ನು ನೀಡುವ ಕುಂಡಲಿನಿ

ಋಗ್ ವೇದ - ಮಂಡಲ ೭ - ಸೂಕ್ತ ೬೬ - ಶ್ಲೋಕ ೧೫

ಶೀರ್ಷ್ಣಃ-ಶೀರ್ಷ್ಣೋ ಜಗತಸ್ತಸ್ಥುಷಸ ಪತಿಂ ಸಮಯಾ ವಿಶ್ವಮಾ ರಜಃ |

ಸಪ್ತ ಸವಸಾರಃ ಸುವಿತಾಯ ಸೂರ್ಯಂ ವಹನ್ತಿ ಹರಿತೋ ರಥೇ ||

ಭಾವಾರ್ಥ:- ವ್ಯಕ್ತಿ ಮತ್ತು ಅಭ್ಯಾಸಕ್ಕೆ ಸಂಬಂಧಿಸಿದಂತೆ ಅತ್ಯುನ್ನತ ಮಾನವ ಬುದ್ಧಿವಂತಿಕೆಯಿಂದ, ಏಳು ಕ್ರಿಯಾತ್ಮಕ ಅಧ್ಯಾಪಕರು, ಈ ಸುಂದರ ದೇಹದ ವಾಹನದಲ್ಲಿ ಅದರ ಧ್ಯಾನಸ್ಥ ಪ್ರಯಾಣದ ಸಮಯದಲ್ಲಿ ಅದರ ಒಳ್ಳೆಯದಕ್ಕಾಗಿ ಸರಿಯಾದ ಸಮಯದಲ್ಲಿ ಆತ್ಮಕ್ಕೆ (ಬ್ರಹ್ಮ ಸ್ಥಾನಕ್ಕೆ) ದೈವತ್ವದ ಬೆಳಕನ್ನು ಒಯ್ಯುತ್ತಾರೆ. ಇದು ಸ್ವಯಂ ಮರುಕಳಿಸುವ ಸೂರ್ಯ, ಸೃಷ್ಟಿಕರ್ತ, ಉಳಿಸಿಕೊಳ್ಳುವ ಮತ್ತು ಚಲಿಸುವ ಮತ್ತು ಚಲಿಸದ ಪ್ರಪಂಚದ ಕಣದಿಂದ ಇಡೀ ವಿಶ್ವಕ್ಕೆ ಶಾಶ್ವತತೆಯ ಮೂಲಕ ಬೆಳಕು.

 

ಏಳು ತಾಯಂದಿರು ಜೀವಕ್ಕೆ ಪೋಷಣೆಯನ್ನು ಒದಗಿಸುತ್ತದೆ

ಅಥರ್ವ ವೇದ - ಖಾಂಡ 7 ಸೂಕ್ತ 57 ಶ್ಲೋಕ 2

ಸಪ್ತ ಕ್ಷರನ್ತಿ ಶಿಶವೇ ಮರುತ್ವತೇ ಪಿತ್ರೇ ಪುತ್ರಾಸೋ ಅಪ್ಯವೀವೃತನ್ನೃತಾನಿ।

ಉಭೇ ಇದಸ್ಯೋಭೇ ಅಸ್ಯ ರಾಜತ ಉಭೇ ಯತೇತೇ ಉಭೇ ಅಸ್ಯ ಪುಷ್ಯತಃ ॥೨॥

ಭಾವಾರ್ಥ:- ಪ್ರಕೃತಿ ತಾಯಿಯ ಏಳು ಉಡುಗೊರೆಗಳು, ದೇಹದಲ್ಲಿ ವಾಸಿಸುವ ರೋಮಾಂಚಕ ಆತ್ಮಕ್ಕೆ ಕ್ಷೀರ ಪೋಷಣೆಯ ಮಳೆಯನ್ನು ತರುತ್ತವೆ, ಏಕೆಂದರೆ ಮಕ್ಕಳು ಒಳ್ಳೆಯದನ್ನು ಮಾಡುತ್ತಾರೆ ಮತ್ತು ಪೋಷಕರಿಗೆ ಭರವಸೆ ಮತ್ತು ತೃಪ್ತಿಯನ್ನು ತರುತ್ತಾರೆ, ಮತ್ತು ಅವರು ಶಾಶ್ವತ ಸತ್ಯದ ನಿಯಮಗಳನ್ನು ಅನುಸರಿಸಿ ಅವರು ಆತ್ಮಕ್ಕೆ ಸೇವೆ ಸಲ್ಲಿಸುತ್ತಾರೆ. ಅಲ್ಲದೆ, ಆತ್ಮಕ್ಕೆ ಸೇವೆ ಸಲ್ಲಿಸುವ ಎರಡು ಇತರ ಸಾಮರ್ಥ್ಯಗಳಿವೆ, ಅವುಗಳು ಹೊಳೆಯುತ್ತವೆ ಮತ್ತು ಅದಕ್ಕೆ ಬೆಳಕು ಮತ್ತು ಹೊಳಪನ್ನು ತರುತ್ತವೆ, ಅವರಿಬ್ಬರೂ ಸಕ್ರಿಯರಾಗಿದ್ದಾರೆ, ಮತ್ತು ಇಬ್ಬರೂ ಅದನ್ನು ಪೋಷಿಸುತ್ತಾರೆ, ಜೀವನದಲ್ಲಿ ಉತ್ತೇಜಿಸುತ್ತಾರೆ ಮತ್ತು ಮುನ್ನಡೆಸುತ್ತಾರೆ. ಇವು ಪ್ರಾಣ ಮತ್ತು ಅಪಾನ ಶಕ್ತಿಗಳು ಮನುಷ್ಯನಿಗೆ ಪ್ರಕೃತಿಯು ಉಡುಗೊರೆಯಾಗಿ ನೀಡಿರುವುದಾಗಿರುತ್ತದೆ.

 

ನಿತ್ಯ ಪ್ರಾರ್ಥನೆ ರಹಸ್ಯ

ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ ।

ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಮ್ ॥

ಭಾವಾರ್ಥ:- (ಅಕ್ಷರ ವ್ಯಾಖ್ಯಾನ)  ಸರ್ವ ವಿಧ್ಯಾ ಮೂಲ ಸರಸ್ವತೀ ನದಿ (ಪ್ರಾಣಾಯಾಮದಿ ಸುಷುಮ್ನಾ ನಾಡಿಯಲ್ಲಿ ಹರಿಯುವ ಗುಪ್ತಗಾಮಿನಿ ಸರಸ್ವತಿ ನದಿ) ಉಪಸ್ಥಿತಿಯಲ್ಲಿ ಉತ್ಪಾದಿಸುವ ಸಾಗರದ ಮಂಥನದಲ್ಲಿ (ಸಪ್ತ ಸಾಗರವಾದ ಸುಷುಮ್ನೆಯಲ್ಲಿನ ಚಕ್ರಗಳನ್ನು ಉಸಿರಾಟದಲ್ಲಿ ಅಲುಗಾಡಿಸುವುದೇ ಮಂಥನ) ಉತ್ಪತ್ತಿಯಾಗುವ ಸಮೃದ್ಧಿ ಮತ್ತು ಸೌಂದರ್ಯದ ದೇವತೆ (ಲಕ್ಷ್ಮಿ) ಮೊದಲು ಉಂಟುಮಾಡುವ ಅರಿವು ನೀನು. ಉಂಟುಮಾಡುವ ಧೈರ್ಯದಿಂದ, ಬೆಳಗಿನ ವಿಧಿ ಮಾಡು, (ಪ್ರಾಣಾಯಾಮ ಮಾಡು) ವಿಶ್ರಾಂತಿ ಪಡೆಯುತ್ತಿರುವ ಮೂಲಾಧಾರ ದೇವತೆಯನ್ನು ಬಾಷಣದ ಮುಖೇನ (ಅಜಪ ಮಂತ್ರದಲ್ಲಿ ಉಸಿರಾಟದ ಮುಖೇನ) ಮೂಲವನ್ನು ತಾಕಿಸು. (ತಾಕಿಸಿದಾಗ ಸುಷುಮ್ನಾ ನಾಡಿ ತೆರೆಯುವುದು, ಗುಪ್ತಗಾಮಿನಿ ಸರಸ್ಪತಿ ನದಿ ಸಹಸ್ರಾರಕ್ಕೆ ಹರಿಯುವುದು).

 

ಸಂಧ್ಯಾ ವಂದನೆಯಲ್ಲಿ ಕುಂಡಲಿನಿ ಯೋಗ

            ಸಂಧ್ಯಾ ಎಂದರೆ ಮೂರು ಕಾಲ (ಬೆಳಗ್ಗೆ, ಮಧ್ಯಾಹ್ನ ಸಂಜೆ) ಎನ್ನುವ ಅರ್ಥವೂ ಇದೆ, ಇನ್ನೊಂದು ಅರ್ಥ ಧ್ಯಾನ, ಮನನ, ಆಲೋಚನೆ ಎಂದೂ ಇದೆ. ವಂದನಾ ಎಂದರೆ ಏಳು ವಿಧದ ಅತ್ಯುನ್ನತ ಪೂಜೆ ಎಂಬ ಅರ್ಥವೂ ಇದೆ. ಸಂಸ್ಕೃತದಲ್ಲಿ ಪೂಜೆ ಎಂದರೆ ಉಪಾಸನ ಎಂದೂ ಇದೆ, ಇದಕ್ಕೆ ಪರ್ಯಾಯ ಅರ್ಥ ತಲುಪು, ಸಮೀಪಿಸು ಎಂದೂ ಇದೆ.

ಸತ್ಯಾರ್ಥ:- ಮೂರು ಕಾಲದಲ್ಲೂ ಪ್ರಾಣಾಯಾಮದಿ ಏಳು ಕುಂಡಲಿನಿ ಚಕ್ರಗಳನ್ನು ಸಮೀಪಿಸುವುದೇ ಸಂಧ್ಯಾ ವಂದನೆ ಎನ್ನುವುದೇ ಸತ್ಯ.

 

ಗಾಯತ್ರಿ ಮಂತ್ರದ ನಿಜ ಸ್ವರೂಪ ಪ್ರಾಣಾಯಾಮ

ಓಂ ಭೂರ್ಭುವಸ್ಸುವಃ ॥

ತಥ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ।

ಧಿಯೋ ಯೋನಃ ಪ್ರಚೋದಯಾತ್ ॥

ಭಾವಾರ್ಥ:- (ಅಕ್ಷರ ವ್ಯಾಖ್ಯಾನ)  ಭೂಮಿಯ ಮೇಲೆ ಬೀಸಿದ ಘನನರೂಪವಲ್ಲದ, ಘರ್ಜಿಸುವ, ಹೊಳೆಯುವ ಕಿರಣವುಳ್ಳ, ಉತ್ಕೃಷ್ಟವಾದ  ದೈವಿಕ ಆಸ್ತಿಯಾದ ಗಾಳಿಯಿಂದ ಅತ್ಯಂತ ಶ್ರೇಷ್ಠವಾದ ಓಂ ಮೂಲವನ್ನು ಮಾನಸಿಕತೆಯ ಈ ಬುದ್ಧಿವಂತಿಕೆಯಲ್ಲಿ ನೋಡುವೆನು ಪೋಷಿಸುವೆನು.

 

ಓಂ ಭೂಃ, ಓಂ ಭುವಃ, ಓಂ ಸುವಃ, ಓಂ ಮಹಃ, ಓಂ ಜನಃ, ಓಂ ತಪಃ, ಓಂ ಸತ್ಯಂ | ಓಂ ತತ್‌ ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ । ಧಿಯೋಯೋನಃ ಪ್ರಚೋದಯಾತ್‌ | ಓಂ ಆವೋಜ್ಯೋತಿರಸೋ ಅಮೃತಂ ಬ್ರಹ್ಮ ಭೂರ್ಭು ವಸ್ಸುವರೋಂ |

 

ಭಾವಾರ್ಥ:- ಸಮಸ್ತ ವಸ್ತುಗಳ ಒಳಗೂ ಹೊರಗೂ ಇರುವ ಪರಿಪೂರ್ಣನಾದ ಪರಮಾತ್ಮನು ಪ್ರಾಣಸ್ವರೂಪನೂ, ದುಃಖಭಂಜ-ಕನೂ, ಸುಖದಾಯಕನೂ, ವಿರಾಡ್ರೂಪನೂ, ಜಗತ್ಪಿತನೂ,  ಸಹನ ಶೀಲನೂ, ಸತ್ಯಸ್ವರೂಪನೂ, ಓಂಕಾರ ರೂಪನೂ, ಸರ್ವೋತ್ಪಾ ದಕನೂ. ಶ್ರೇಷ್ಠ ರೂಪದವನೂ, ಅಜ್ಞಾನವೆಂಬ ಕತ್ತಲೆಗೆ ಜ್ಯೋತಿ ಸ್ವರೂಪನೂ, ದೇವನೂ ಆದ ಅತನನ್ನು ಧ್ಯಾನಿಸೋಣ. ಆ ಪರಮಾತ್ಮನು ನಮ್ಮೆಲ್ಲರ ಬುದ್ಧಿಗಳನ್ನು ಚಿನ್ನಾಗಿ ಪ್ರೇರೇಪಿಸಲಿ.  ಪ್ರಣವ ಸ್ವರೂಪನು,  ಜಲಸ್ವರೂಪನು, ಸಖಸ್ವರೂಪನೂ, ಅಮೃತ ಸ್ವರೂಪನೂ, ಪ್ರಾಣಸ್ವರೂಪನೂ, ದುಃಖ ನಾಶಕನೂ, ಸ್ವಯಂ ಪ್ರಕಾಶನೂ, ಆನಂದ ಸ್ವರೂಪನೂ ಆದ ಶ್ರೀಮನ್ನಾರಾಯಣನನ್ನು ಹೊಂದುವಂತಾಗಲಿ.

 

ರುದ್ರನಲ್ಲಿ ಧೀರ್ಘಾಯುಷ್ಯ ಪ್ರಾರ್ಥನೆಯ ಅರ್ಥ ಕುಂಡಲಿನಿ ಯೋಗ

ಶುಕ್ಲ ಯಜುರ್ವೇದ 3.60

ಓಂ ತ್ರ್ಯಮ್ಬಕಂ ಯಜಾಮಹೇ ಸುಗನ್ಧಿಂ ಪುಷ್ಟಿವರ್ಧನಮ್ |

ಉರ್ವಾರುಕಮಿವ ಬನ್ಧನಾನ್ಮೃತ್ಯೋರ್ಮುಕ್ಷೀಯ ಮಾಽಮೃತಾತ್ ||

ತ್ರ್ಯಮ್ಬಕಂ ಯಜಾಮಹೇ ಸುಗನ್ಧಿಂ ಪತಿವೇದನಮ್ |

ಉರ್ವಾರುಕಮಿವ ಬನ್ಧನಾದಿತೋ ಮುಕ್ಷೀಯ ಮಾಮುತಃ ||

ಭಾವಾರ್ಥ:- (ಅಕ್ಷರ ವ್ಯಾಖ್ಯಾನ)  ಸಂಭೋಧನ ರೂಪದ ಮೊದಲಿನ ಸುಗಂಧದ ಜೀವ ಗಾಳಿಯಿಂದ ಮೂರು ಬಾತು ಕೋಳಿ ರೂಪವನ್ನು (ಇಡಾ, ಪಿಂಗಳ, ಸುಷುಮ್ನಾ ನಾಡಿಗಳು)  ಓಂ ಮೂಲಕ ಸಮೀಪಿಸು,  ಪೋಷಣಾಯುಕ್ತ ನೀರು ಕೊಡುವವನ (ಹೊಟ್ಟೆಯ ಬಾಗವನ್ನು) ಶರಣಾಗು. ವಿಸ್ತರಿಸಿದ ಚಲನೆಯ ಆನಂದದ ಸಂಪರ್ಕವನ್ನು ಚಲನದಿ ಪ್ರತ್ಯೇಕವಾಗಿ ತಳ್ಳಿ ತೆರೆಯಿರಿ, (ಸುಷುಮ್ನಾವನ್ನು ತೆರೆಯುವ ವಿಧಾನ) ಚಲಿಸುವ ಸಾವು (ಉಸಿರು) ಬಲೆ (ನಾಡಿಗಳು) ಸ್ವಾಧೀನಪಡಿಸಿಕೊಂಡ, (ನಾಡಿಗಳು ಉಸಿರನ್ನು ಸ್ವಾಧೀನಪಡಿಸಿಕೊಂಡು) ಅಮರತ್ವದ ಜ್ಞಾನ (ಲಭಿಸಲಿ).  

            ಸಂಭೋಧನ ರೂಪದ ಮೊದಲಿನ ಸುಗಂಧದ ಜೀವ ಗಾಳಿಯಿಂದ ಮೂರು ಬಾತು ಕೋಳಿ ರೂಪದ (ಇಡಾ, ಪಿಂಗಳ, ಸುಷುಮ್ನಾ ನಾಡಿಗಳು)  ಸ್ವಾಧೀನದವನ ಗ್ರಹಿಕೆ. ವಿಸ್ತರಿಸಿದ ಚಲನೆಯ ಆನಂದದ ಸಂಪರ್ಕವನ್ನು ಚಲನದಿ ಶಬ್ದವನ್ನು ಉಂಟುಮಾಡುತ್ತ ತಳ್ಳಿ ತೆರೆಯಿರಿ, ಅಮೃತವು ಬಲೆಯಿಂದ ಕಟ್ಟಲಾಗಿರುವುದು ಜ್ಞಾನ.

            ಇಲ್ಲಿವರೆಗೆ ವಿದ್ವಾಂಸರು ಮೊದಲನೇ ಪ್ಯಾರಾ ಅನುವಾದ ರೀತಿ:- ನಾವು ಸಂಪೂರ್ಣವಾದ ಮೂರು ಕಣ್ಣುಗಳನ್ನು ಧ್ಯಾನಿಸುತ್ತೇವೆ, ಅದು ಎಲ್ಲವನ್ನೂ ಸಿಹಿ ಸುಗಂಧದಂತೆ ವ್ಯಾಪಿಸುತ್ತದೆ ಮತ್ತು ಪೋಷಿಸುತ್ತದೆ. ಮಾಗಿದ ಸೌತೆಕಾಯಿಯು ಕಾಂಡದ ಬಂಧನದಿಂದ ಬಿಡುಗಡೆಯಾದಂತೆಯೇ, ನಾವು ಅಮರತ್ವದಲ್ಲಿ ವಾಸಿಸಲು ಸಾವಿನಿಂದ ಮುಕ್ತರಾಗೋಣ.

 

ನಾಡಿಗಳ ಮತ್ತು ಚಕ್ರಗಳ ಬಗ್ಗೆ ಗೋಪಾಲದಾಸರ ಜ್ಞಾನ

            ಶ್ರೀ ಗುರುಗೋಪಾಲದಾಸರ ಮಾತಿನಲ್ಲಿ ಈ ಬಗ್ಗೆ ಬೆಳಕು ಚೆಲ್ಲುವ ವಿಷಯ ಗಮನಿಸಿ "ಇಡಾ, ಪಿಂಗಳ, ಸುಷುಮ್ನಾ ನಾಡಿಗಳ ಸಂಧಿ ಸ್ಥಳವೇ ತ್ರಿವೇಣಿ ಸಂಗಮ ಎಂದು ತಿಳಿದು ಮಾನಸಿಕವಾಗಿ ಅದರಲ್ಲಿ ಮುಳುಗುವದೇ ಮಾನಸಿಕ ಸ್ನಾನವೆನಿಸುತ್ತದೆ. - ದೇಹದಲ್ಲಿ ಮೂಲಾಧಾರದಿಂದ ಮೂರು ನಾಡಿಗಳು ಮ್ಯಾಲಕ್ಕೆ ಬಂದಿರುವುವು. ಬಲಗಡೆ ಪಿಂಗಳ (ಯಮುನಾ), ಎಡಗಡಿ ಇಡಾ (ಗಂಗಾ), ಮಧ್ಯದೇಹದಲ್ಲಿ ಸುಷುಮ್ನಾ (ಸರಸ್ಪತಿ), ಇವು ಹೃದಯಸ್ತಾನದವರೆಗೆ ವ್ಯಾಪಿಸಿ, ಅಲ್ಲಿ ಇಡಾನಾಡಿಯ ಎಡದಿಂದ ಬಲಕ್ಕೆ ಸುಷುಮ್ನಾ ನಾಡಿಗೆ ಹೊಂದಿಕೊಂಡು ಬಂದಿದೆ. ಪಿಂಗಳಾನಾಡಿಯ ಬಲದಿಂದ ಎಡಕ್ಕೆ ಸುಷುಮ್ಮನಾಡಿಗೆ ಹೊಂದಿಕೊಂಡುಬಂದಿದೆ. ಈ ಮೂರುನಾಡಿಗಳ ಸಂಧಿಸ್ತಳವೇ ತ್ರಿವೇಣಿಸಂಗಮ. ಇದು ವಕ್ಷಸ್ಥಳದಲ್ಲಿದೆ. ಇದನ್ನೇ ಪ್ರಯಾಗ ಕ್ಷೇತ್ರವೆಂದು ತಿಳಿದು, ಆ ತ್ರಿವೇಣಿಸಂಗಮದಲ್ಲಿ ಅಷ್ಟಾಕ್ಷರ ಮಂತ್ರಾನುಸಂದಾನ ಪೂರ್ವಕ ಅಘಮರ್ಷಣ ಸ್ನಾನವನ್ನು ಮಾಡಿ ಶುದ್ಧನಾಗಿ, ನಿರ್ಜನಸ್ಥಾನದಲ್ಲಿ ಕುಳಿತು ಏಕಾಗ್ರಚಿತ್ತನಾಗಿ ತನ್ನದೇಹ-ದಲ್ಲಿರುವ ಭಗವದ್ರೂಪಗಳನ್ನು ಅನುಸಂಧಾನಕ್ಕೆ ತಂದುಕೊಳ್ಳಬೇಕು."

            "ವೃಷಣ ಗುದ ಇವುಗಳ ನಡುವೆ ಗೆಣಸಿನಗಡ್ಡೆ ಯಂತೆ ಎರಡು ಬೆರಳು ಎತ್ತರವಾಗಿ ನಾಲ್ಕು ಬೆರಳು ಅಗುಲವಾಗಿ ದೇಹಾ-ಧಾರಭೂತ ವಾಗಿದ್ದು ಸಮಸ್ತನಾಡಿಗಳಿಗೂ ಆಶ್ರಯ ಭೂತವಾಗಿದೆ. ನಡುವ ದೊಡ್ಡದಾದ ಒಂದುಗಡ್ಡೆ ಇದೆ. ಅದಕ್ಕೆ ಮೂಲಾಧಾರವೆಂದು ಹೆಸರು. ಇದರ ಮಧ್ಯಭಾಗದಲ್ಲಿ ಸುಷುಮ್ನ ಎಂಬ ನಾಡಿಯು ಮೇಲಕ್ಕೆ ನೆಟ್ಟಗೆ ಹೊರಟು ಬ್ರಹ್ಮರಂದ್ರ ಪರಿಯಂತರ ಸೂಕ್ಷ್ಮರೂಪ-ದಿಂದ ಹೋಗಿ ಇದೆ. ಪೃಷ್ಠಭಾಗದಲ್ಲಿ ವಜ್ರಿಕಾನಾಡಿ ಇದೆ. ಅದರ ಎಡಭಾಗದಲ್ಲಿ ಆರ್ಯಮೆಂಬ ನಾಡಿ ಇದೆ. ಅದಕ್ಕೆ ಇಡಾನಾಡಿ ಎಂತಲು ಹೆಸರು. ಇದನ್ನು ಗಂಗಾ ನದಿ ಎನ್ನುತ್ತಾರೆ.  ಅದರ ಮುಂಭಾಗದಲ್ಲಿ ಪ್ರಕಾಶಿನಿ ಎಂಬ ನಾಡಿ ಇದೆ. ಇದಕ್ಕೆ ಧಾರಿಣಿ ನಂದಿನಿ ಎಂಬ ಹೆಸರುಗಳು ಉಂಟು. ಅದರ ದಕ್ಷಿಣ ಭಾಗದಲ್ಲಿ ವೈಧ್ಯತನಾಡಿ ಇರುತ್ತದೆ. ಅದಕ್ಕೆ ಪಿಂಗಳ ಎಂತಲೂ ಹೆಸರು. ಇದು ಸೂರ್ಯ ತಾಪವಾದದ್ದು. ಇದಕ್ಕೆ ಯಮುನಾ ನದಿ ಅನ್ನುತ್ತಾರೆ. ಅದರ ಎಡಭಾಗದಲ್ಲಿರುವ ಇಡಾ ನಾಡಿಯು, ಪಿಂಗಳ ನಾಡಿಯಂತೆ ಹೃದಯದವರೆಗು ಬಂದು ಅಲ್ಲಿಂದ ಸುಷುಮ್ನಾ ನಾಡಿಯ ಮುಂಭಾಗದಲ್ಲಿ ಹೊಂದಿಕೊಂಡು ಬಲಭಾಗಕ್ಕೆ 500 ಶಾಖೆಗಳಾಗಿ ಬಲಕಿವಿಯ ಪರಿಯಂತ ಹೋಗಿ ಇದೆ. ಈ ಗಂಗಾ ಯಮುನಾ ಸರಸ್ವತಿ ನದಿಗಳು ಹೃದಯಸ್ತಾನದಲ್ಲಿ ಸಂಗಮ ವಾಗಿರುವುದರಿಂದ ಹೃದಯಾಸ್ತ ಪ್ರಯಾಗ ಕ್ಷೇತ್ರವೆಂದು ತಿಳಿದು ಅಲ್ಲಿರುವ ಹರಿಧ್ಯಾನದಲ್ಲಿ ಮುಳುಗಿದರೆ. ಮಾನಸ ಸ್ನಾನದ ಫಲ ಬರುವುದು. ಸುಷುಮ್ನಾಕ್ಕೆ ಬಲಭಾಗಕ್ಕೆ 36000 ಸೂಕ್ಷ್ಮ ನಾಡಿಗಳು ಇವೆ. ಇವು ಪುರುಷ ನಾಡಿಗಳೆಂದು, ಸುಷುಮ್ನಾಕ್ಕೆ ಎಡಭಾಗಕ್ಕೆ  36000 ಸೂಕ್ಷ್ಮ ನಾಡಿ-ಗಳು ಇವೆ. ಇವು ಸ್ತ್ರೀ ನಾಡಿಗಳೆಂದು. ಈ 72000 ನಾಡಿಗಳಿಗೆ ಪುರಾ ಎಂಬ ಹೆಸರು ಇದೆ. 24000 ನಾಡಿಗಳು ಗುದದಲ್ಲಿರುತ್ತವೆ. 28000 ನಾಡಿಗಳು ಮಧ್ಯದೇಹದಲ್ಲಿರುತ್ತವೆ. 8000 ನಾಡಿಗಳು ಬಾಹುಗಳಲ್ಲಿರುತ್ತವೆ. 12000 ನಾಡಿಗಳು ಶಿರಸ್ಸಿನಲ್ಲಿ ಇರುತ್ತವೆ. ಮೂಲದಾರಗಳು ನಾಡಿಗೆ ಇರುವ 500 ಶಾಖಾದಿಗಳು ವಾಮಕರ್ಣದಲ್ಲಿ ಇರುತ್ತದೆ. ಅದಕ್ಕೆ ದಕ್ಷಿಣಾಯನ ಎಂತ ಹೆಸರು. ಅವುಗಳಲ್ಲಿ ಸೂರ್ಯನ ಕಿರಣಗಳು ವ್ಯಾಪಿಸಿಕೊಂಡು ಇರುತ್ತವೆ. ಇದೇ ದಕ್ಷಿಣಾಯನಮಾರ್ಗ. ಇದಕ್ಕೆ ಧೂಮ್ರಮಾರ್ಗವೆಂತಲು, ಪಿತೃಮಾರ್ಗವೆಂತಲು ಹೆಸರು. ಮೂಲ ಇಡಾನಾಡಿಗೆ ಇರುವ 500 ಶಾಖಾ ನಾಡಿಗಳು ದಕ್ಷಿಣಕರ್ಣದಲ್ಲಿ ಇರುತ್ತವೆ. ಇದಕ್ಕೆ ಉತ್ತರಾಯಣ ಎಂತ ಹೆಸರು. ಅವುಗಳಲ್ಲಿ ಸೂರ್ಯನ ಕಿರಣಗಳು ವ್ಯಾಪಿಸಿದೆ. ಸುಷುಮ್ನ ನಾಡಿಯಿಂದ ಉತ್ಕಾಂತಿ ಹೊಂದಿ ಹೋಗುವ ಮಾರ್ಗಕ್ಕೆ ಬ್ರಹ್ಮಯಾನ ಎಂತ ಹೆಸರು. ಈ ಮೂರು ಮಾರ್ಗವನ್ನು ತಿಳಿದ ಜೀವರು ಉತ್ತಮ ಬುದ್ಧಿ ಉಳ್ಳವರಾಗಿ ಮುಕ್ತಿ ಮಾರ್ಗವನ್ನು ಹೊಂದುತ್ತಾರೆ. ಇತಿ ನಾಡಿ ವಿದ್ಯಾ." (ಶ್ರೀ ಗೋಪಾಲದಾಸರು ಕನ್ನಡ ನಾಡಿನ ಹರಿದಾಸರಲ್ಲಿ ಅಗ್ರಗಣ್ಯರು. ಶ್ರೀ ವಿಜಯದಾಸರ ಶಿಷ್ಯರು. ಹದಿನೆಂಟನೆಯ ಶತಮಾನದ ಕಾಲದಲ್ಲಿ ಹರಿದಾಸರ ಪೀಳಿಗೆಯನ್ನು ನಿರೂಪಿಸುವಲ್ಲಿ ಪುರಂದರ ದಾಸರು, ವಿಜಯ ದಾಸರು, ಗೋಪಾಲ ದಾಸರು ಮತ್ತು ಜಗನ್ನಾಥ ದಾಸರುಗಳನ್ನು ದಾಸ ಚತುಷ್ಟಯರೆಂದು ಕರೆಯುತ್ತಾರೆ.)

 

 

ಚಕ್ರಗಳ ಬಗ್ಗೆ ಲೋಕಾ ಅರ್ಥ ಇಲ್ಲಿವರೆಗೆ ನೀಡಿರುವುದು

            ಮೂಲಾಧಾರಚಕ್ರ : ಇದು ಸುಷುಮ್ನ ಮೂಲಭಾಗದಲ್ಲಿ ಕುಂಡಲೀ ಸರ್ವಾಕಾರವಾಗುತ್ತದೆ. ಅಲ್ಲಿ ಅಪಾನ ವಾಯುವು ಸಂಚಾರ ಮಾಡುತ್ತಿರುತ್ತಾನೆ. ಈ ಚಕ್ರದ ಮ್ಯಾಲೆ ಕೆಂಪು ಬಣ್ಣವುಳ್ಳ 4 ಪದ್ಮಗಳು ಇವೆ. ಮೂಲಾಧಾರ ಅಥವಾ ಬೇರು ಚಕ್ರವು ಸ್ವಭಾವ, ರಕ್ಷಣೆ, ಉಳಿಯುವಿಕೆ ಮತ್ತು ಮೂಲ ಮಾನವ ಸಂಭವನೀಯತೆಗಳಿಗೆ ಸಂಬಂಧಿಸಿದೆ. ಈ ಕೇಂದ್ರವು ಜನನಾಂಗಗಳ ಮತ್ತು ಗುದದ ನಡುವಿನ ಪ್ರದೇಶದಲ್ಲಿ ನೆಲೆಸಿದೆ. ಇಲ್ಲಿ ಯಾವುದೇ ಹಾರ್ಮೋನು ಅಂಗ ಇಲ್ಲವಾದರೂ, ವೃಷಣ ಮತ್ತು ಅಡ್ರೀನಲ್‌ ಕೆಲವು ನರತಂತುಗಳ ಮಯಲಿನ್ ಪದರುಗಳಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಅಸ್ತಿತ್ವವು ಅಪಾಯದಲ್ಲಿದ್ದಾಗ, ಇದು ಹೋರಾಟ-ಅಥವಾ-ಪಾರಾಗುವಿಕೆ ಪ್ರತಿಕ್ರಿಯೆಗೆ ಕಾರಣವಾಗುತ್ತದೆ. ಈ ಪ್ರದೇಶದಲ್ಲಿ ಒಂದು ಸ್ನಾಯು ಇರುತ್ತದೆ, ಅದು ಪುರುಷರ ಲೈಂಗಿಕ ಕ್ರಿಯೆಯಲ್ಲಿ ಹೊರಚೆಲ್ಲುವಿಕೆಯನ್ನು ನಿಯಂತ್ರಿಸುತ್ತದೆ ವೀರ್ಯ ಕೋಶ ಮತ್ತು ಬೀಜಾಣು ನಡುವೆ ಒಂದು ಸಮಾನಾಂತರ ರೇಖೆ ಇದೆ, ಅಲ್ಲಿ ಆನುವಂಶಿಕ ಸಂಕೇತ ಮತ್ತು ಕುಂಡಲಿನಿ ಸುರುಳಿಯಾಗಿ ಇರುತ್ತವೆ. ಮೂಲಾಧಾರ ಚಕ್ರವನ್ನು ನಾಲ್ಕು ದಳ ಒಂದು ಕಮಲ ಮತ್ತು ಕೆಂಪು ಬಣ್ಣದ ಮೂಲಕ ಪ್ರತಿನಿಧಿಸಲಾಗುತ್ತದೆ ಇದು ಒಳಗೊಂಡಿರುವ ಪ್ರಮುಖ ವಿಷಯಗಳು ಲೈಂಗಿಕತೆ, ಕಾಮಾಸಕ್ತಿ ಮತ್ತು ಗ್ರಸ್ತತೆ. ದೈಹಿಕವಾಗಿ ಮೂಲಾಧಾರವು ಲೈಂಗಿಕತೆಯನ್ನು ಆಳುತ್ತದೆ, ಮಾನಸಿಕವಾಗಿ ಸ್ಥಿರತೆಯನ್ನು ಆಳುತ್ತದೆ, ಭಾವನಾತ್ಮಕವಾಗಿ ಭೋಗಲಾಲಸೆಯನ್ನು ಆಳುತ್ತದೆ, ಮತ್ತು ಆಧ್ಯಾತ್ಮಿಕವಾಗಿ ಇದು ಸುರಕ್ಷತೆಯ ಭಾವವನ್ನು ಆಳುತ್ತದೆ.

            ಸ್ವಾಧಿಸ್ಠಾನ ಚಕ್ರ:-  ಸ್ವಾಧಿಷ್ಠಾನ ಅಥವಾ ಅದಿಸ್ಥಾನವು ತ್ರಿಕಾಸ್ಥಿಯಲ್ಲಿ ನೆಲೆಸಿದೆ (ಆದ್ದರಿಂದ ಹೆಸರು ಬಂದಿದೆ) ಮತ್ತು ವೃಷಣ ಅಥವಾ ಆಂಡಾಶಯಗಳಿಗೆ ಹೊಂದುತ್ತದೆ, ಸಂತಾನೋತ್ಪತ್ತಿ ಆವೃತ್ತದಲ್ಲಿ ತೊಡಗಿರುವ ಅವುಗಳು ವಿಭಿನ್ನ ಲೈಂಗಿಕತೆಯ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಸ್ವಾಧಿಸ್ಠಾನ ಸಹ, ಹೆಚ್ಚು ಸಾಮಾನ್ಯವಾಗಿ, ಸಂತಾನೋತ್ಪತ್ತಿ ಮಾಡುವ ಅಂಗಗಳ ವ್ಯವಸ್ಥೆ ಮತ್ತು ಅಡ್ರೀನಲ್‌ಗಳಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗಿದೆ. ತ್ರಿಕಾ-ಸ್ಥಿಯ ಚಕ್ರವನ್ನು ಆರು ದಳಗಳ ಒಂದು ಕಮಲದಿಂದ ಪ್ರತಿಬಿಂಬಿ-ಸಲಾಗುತ್ತದೆ ಮತ್ತು ಕಿತ್ತಳೆ ಬಣ್ಣದಲ್ಲಿದೆ. ಸ್ವಾಧಿಸ್ಠಾನ ಒಳಗೊಂಡಿರುವ ಪ್ರಮುಖ ವಿಷಯಗಳು ಸಂಬಂಧಗಳು, ಹಿಂಸೆ, ದುಶ್ಚಟಗಳು, ಭಾವನಾತ್ಮಕ ಅವಶ್ಯಕತೆಗಳು, ಮತ್ತು ಸಂತೋಷ. ದೈಹಿಕವಾಗಿ, ಸ್ವಾಧಿಸ್ಠಾನ ಸಂತಾನೋತ್ಪತ್ತಿಯನ್ನು ನಡೆಸುತ್ತದೆ, ಮಾನಸಿಕವಾಗಿ ಇದು ಕ್ರಿಯಾಶೀಲತೆಯಯನ್ನು ಆಳುತ್ತದೆ, ಭಾವನಾತ್ಮಕವಾಗಿ ಇದು ಸಂತೋಷವನ್ನು ಆಳುತ್ತದೆ ಮತ್ತು ಆಧ್ಯಾತ್ಮಿಕವಾಗಿ ಇದು ಉತ್ಸಾಹ-ವನ್ನು ಆಳುತ್ತದೆ. ಈತನು ಪ್ರಾಣವಾಯುವನ್ನು ಊರ್ಧ್ವಕ್ಕೆ ಅಪಾನ-ವಾಯು ಅಧೋಭಾಗಕ್ಕೆ ಕಳಿಸುತ್ತಾನೆ.

            ಮಣಿಪೂರ ಅಥವಾ ಮಣಿಪೂರಕ ಚಕ್ರವು:-  ಚಯಾಪಚಯ ಮತ್ತು ಪಚನ ವ್ಯವಸ್ಥೆಗಳಿಗೆ ಸಂಬಂಧಿಸಿದೆ. ಮಣಿಪೂರವು ಇನ್ಸುಲಿನ್ ಮತ್ತು ಗ್ಲೂಕಾಗನ್‌ಗಳನ್ನು ಸ್ರವಿಸುವ ಮೇದೋಜೀರಕ ಜೀವಕೋಶಗಳ ತಂಡಗಳಿಗೆ ಹೊಂದಿಕೆಯಾಗುತ್ತದೆ ಎಂದು ನಂಬಲಾಗಿದೆ, ಅವುಗಳು ಮೇದೋಜೀರಕ ಗ್ರಂಥಿಗಳಲ್ಲಿನ ಕೋಶಗಳ ಗುಂಪುಗಳು, ಹಾಗೆಯೇ ಬಾಹ್ಯ ಅಡ್ರಿನಲ್ ಗ್ರಂಥಿಗಳು ಮತ್ತು ಅಡ್ರಿನಲ್ ಸಿಪ್ಪೆ. ಇವುಗಳು ಜೀರ್ಣಕ್ರಿಯೆಯಲ್ಲಿ ಕಣ್ಣಿಗೆ ಕಾಣಿಸುವ ಪಾತ್ರವಹಿಸುತ್ತವೆ, ಶರೀರಕ್ಕೆ ಆಹಾರ ವಿಷಯವನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ. ಹತ್ತು ದಳಗಳ ಒಂದು ಕಮಲದ ಮೂಲಕ ಪ್ರತಿನಿಧಿಸಲಾಗಿದೆ. ಮಣಿಪೂರಕ್ಕೆ ಹೊಂದುವ ಬಣ್ಣ ಹಳದಿ. ಮಣಿಪೂರವನ್ನು ನಿಯಂತ್ರಿಸುವ ಮುಖ್ಯ ವಿಷಯಗಳೆಂದರೆ ವೈಯಕ್ತಿಕ ಬಲ, ಭಯ, ಉದ್ವೇಗ, ಅಭಿಪ್ರಾಯ-ರಚನೆ, ಅಂತ-ರ್ಮುಖ ಮಾಡುವುದು, ಮತ್ತು ಸರಳ ಅಥವಾ ತಳದ ಭಾವದಿಂದ ಜಟಿಲಕ್ಕೆ ದಾಟುವ ಆಂಶಗಳು. ದೈಹಿಕವಾಗಿ, ಮಣಿಪೂರ ಜೀರ್ಣಕ್ರಿಯೆಯನ್ನು ಆಳುತ್ತದೆ, ಮಾನಸಿಕವಾಗಿ ಅದು ವೈಯಕ್ತಿಕ ಬಲವನ್ನು ಆಡಳಿತ ನಡೆಸುತ್ತದೆ, ಭಾವನಾತ್ಮಕವಾಗಿ ಮಣಿಪುರವು ವಿಸ್ತಾರವಾಗಿರುವಿಕೆಯನ್ನು ಆಳುತ್ತದೆ, ಮತ್ತು ಆಧ್ಯಾತ್ಮಿಕವಾಗಿ ಬೆಳವಣಿಗೆಯ ಎಲ್ಲಾ ವಿಷಯಗಳು.

            ಅನಾಹತ ಚಕ್ರ:- ಎದೆಯಲ್ಲಿ ನೆಲೆಸಿರುವ, ಅನಾಹತ, ಅಥವಾ ಅನಹಠ-ಪುರಿ, ಅಥವಾ ಪದ್ಮ-ಸುಂದರವು ತೈಮಸ್‌ಗೆ ಸಂಬಂಧ ಪಟ್ಟಿದೆ. ತೈಮಸ್ ನಿರೋಧಕ ವ್ಯವಸ್ಥೆಯ ಒಂದು ಅಂಶವಾಗಿದೆ ಹಾಗೇ ಹಾರ್ಮೋನು ವ್ಯವಸ್ಥೆಯ ಭಾಗವಾಗಿದೆ. ತೈಮಸ್ ಕೋಶಗಳ ಪಕ್ವತೆಯ ಸ್ಥಳವಾದ ಇದು ಕಾಯಿಲೆಗಳನ್ನು ದೂರಮಾಡಲು ಕಾರಣವಾಗಿದೆ ಮತ್ತು ಒತ್ತಡದಿಂದ ವ್ಯತಿರಿಕ್ತವಾಗಿ ಪರಿಣಾಮವಾಗಬಹುದು. ಅನಾಹತವನ್ನು ಹನ್ನೆರಡು ದಳಗಳ ಒಂದು ಕಮಲದ ಹೂವಿನಿಂದ ಪ್ರತಿನಿಧಿಸಲಾಗಿದೆ. (ಹೃದಯ ಮನಸ್ಸು ಸಹ ನೋಡಿ). ಅನಾಹತವು ಹಸಿರು ಅಥವಾ ಗುಲಾಬಿ ಬಣ್ಣಗಳಿಗೆ ಸಂಬಂಧಿಸಿದೆ. ಅನಾಹತ ಒಳಗೊಂಡಿರುವ ಮುಖ್ಯ ವಿಷಯಗಳೆಂದರೆ ಜಟಿಲ ಭಾವಗಳು, ಕನಿಕರ, ಮೃದುತ್ವ, ಬೇಷರತ್ತಾದ ಪ್ರೀತಿ, ಸಂತುಲನ, ತಳ್ಳಿಹಾಕುವಿಕೆ ಮತ್ತು ಯೋಗ ಕ್ಷೇಮಗಳ ತೊಡಗಿಸುವಿಕೆ. ದೈಹಿಕವಾಗಿ ಅನಾಹತ ರಕ್ತ ಪರಿಚಲನೆಯನ್ನು ನಡೆಸುತ್ತದೆ, ಭಾವನಾತ್ಮಕವಾಗಿ ಅದು ಸ್ವಂತಕ್ಕೆ ಮತ್ತು ಇತರರಿಗಾಗಿ ಬೇಷರತ್ತಾದ ಪ್ರೀತಿಯನ್ನು ಅಳುತ್ತದೆ, ಮಾನಸಿಕವಾಗಿ ಅದು ಭಾವೋದ್ರೇಕವನ್ನು ಆಳುತ್ತದೆ, ಮತ್ತು ಆಧ್ಯಾತ್ಮಿಕವಾಗಿ ಅರ್ಪಣೆಯನ್ನು ಅನಾಹತ ಆಳುತ್ತದೆ.

            ವಿಶುದ್ಧ ಚಕ್ರ :- ವಿಶುದ್ಧಯನ್ನು (ವಿಶುದ್ಧಿ) ಸಂಪರ್ಕ ಮತ್ತು ಭಾವದ ಮೂಲಕ ಬೆಳೆವಣಿಗೆಗೆ ಸಂಬಂಧಿಸಿದ್ದು ಎಂದು ಅರ್ಥೈಸಬಹುದು. ಈ ಚಕ್ರವು ಥೈರಾಯಿಡ್‌ ಗ್ರಂಥಿಗೆ ಸಮಾನಂತರವಾಗಿದೆ, ಅದು ಸಹ ಗಂಟಲಿನಲ್ಲಿರುವ ಒಂದು ಗ್ರಂಥಿ ಮತ್ತು ಬೆಳವಣಿಗೆ ಮತ್ತು ಪಕ್ವತೆಗೆ ಕಾರಣವಾದ, ಥೈರಾಯಿಡ್ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಹದಿನಾರು ದಳಗಳ ಒಂದು ಕಮಲದ ಮೂಲಕ ಪ್ರತಿನಿಧಿಸಲಾಗಿದೆ. ವಿಶುದ್ಧವನ್ನು ಲಘು ಅಥವಾ ತಿಳಿ ನೀಲಿ, ಅಥವಾ ಹಸಿರು ನೀಲಿ ಬಣ್ಣದ ಮೂಲಕ ನಿರೂಪಿಸಲಾಗಿದೆ. ಮೇಲೆ ವಿವರಿಸಲಾದ ಆತ್ಮಾಭಿವ್ಯಕ್ತಿ ಮತ್ತು ಸಂವಹನ ವಿಷಯಗಳನ್ನು ಇದು ಆಳುತ್ತದೆ. ದೈಹಿಕವಾಗಿ, ವಿಶುದ್ಧ ಸಂವಹನವನ್ನು ಆಳುತ್ತದೆ, ಭಾವನಾತ್ಮಕವಾಗಿ ಇದು ಸ್ವತಂತ್ರವನ್ನು ಆಳುತ್ತದೆ, ಮಾನಸಿಕವಾಗಿ ಇದು ಸರಾಗ ಯೋಚನೆಯನ್ನು ಆಳುತ್ತದೆ, ಮತ್ತು ಅಧ್ಯಾತ್ಮಿಕವಾಗಿ, ಅದು ರಕ್ಷಣೆಯ ವಿವೇಕವನ್ನು ಆಳುತ್ತದೆ.

            ಆಜ್ಞಾ ಚಕ್ರ :-     ಆಜ್ಞಾ (ಬಿಂದುವಿನ ಜೊತೆ, ಮೂರನೆಯ ಕಣ್ಣು ಚಕ್ರ ಎಂದು ಸಹ ಪರಿಚಿತ) ಮೆದುಳಿನ ಮೂರನೆಯ ಕುಹರದಲ್ಲಿರುವ ಒಂದು ಗ್ರಂಥಿಯ ಜೊತೆ ಸಂಪರ್ಕಹೊಂದಿದೆ, ಅದು ಅದರ ಕಲ್ಪಿಸಿಕೊಳ್ಳುವ ಒಂದು ಮಾದರಿಯನ್ನು ತಿಳಿಸಬಹುದು. ಮೆದುಳಿನ ಮೂರನೆಯ ಕುಹರದಲ್ಲಿರುವ ಪೀನಲ್ ಗ್ರಂಥಿಯು ಒಂದು ಲಘುವಾದ ಸೂಕ್ಷ್ಮಸಂವೇದನೆಯ ಗ್ರಂಥಿ. ನಿದ್ರೆ ಮತ್ತು ಎಚ್ಚರಗೊಳ್ಳುವುದನ್ನು ನಿಯಂತ್ರಿಸುವ ಈ ಗ್ರಂಥಿಯು ಮೆಲಟೊನಿನ್ ಹಾರ್ಮೋನನ್ನು ಉತ್ಪಾದಿಸುತ್ತದೆ. ಆಜ್ಞಾವನ್ನು ಎರಡು ದಳವನ್ನು ಹೊಂದಿದ ಒಂದು ಕಮಲವು ಪ್ರತಿನಿಧಿಸುತ್ತದೆ ಮತ್ತು ಬಿಳಿ, ನೀಲಿ ಅಥವಾ ಕಡು ನೀಲಿಯ ಬಣ್ಣಗಳ ಜೊತೆ ತಾಳೆಯಾಗುತ್ತದೆ. ಗರಿಷ್ಟ ಮತ್ತು ಕನಿಷ್ಟ ಅಸ್ತಿತ್ವಗಳ ಸಮತೋಲನ ಮತ್ತು ಅಂತರಿಕ ಮಾರ್ಗದರ್ಶನವನ್ನು ನಂಬುವುದನ್ನು ಆಜ್ಞಾದ ಮುಖ್ಯ ವಿಷಯಗಳು ಒಳಗೊಳ್ಳುತ್ತವೆ. ಆಜ್ಞಾದ ಅಂತರಿಕ ಅಂಶವು ಅಂತರ್ದೃಷ್ಟಿಯ ಪ್ರವೇಶಕ್ಕೆ ಸಂಬಂಧಿಸಿದೆ. ಮಾನಸಿಕವಾಗಿ, ಆಜ್ಞಾ ಕಣ್ಣಿಗೆ ಕಾಣಿಸುವ ಅರಿವಿನ ಜೊತೆ ವ್ಯವಹರಿಸುತ್ತದೆ. ಭಾವನಾತ್ಮಕವಾಗಿ, ಆಜ್ಞಾ ಅಂತರ್ಬೋಧೆಯ ಮಟ್ಟದ ಮೇಲಿನ ಸ್ಪಷ್ಟತೆ ಜೊತೆ ವ್ಯವಹರಿಸುತ್ತದೆ.

            ಸಹಸ್ರಾರ ಚಕ್ರ:-            ಸಹಸ್ರಾರ ವನ್ನು ಸಾಮಾನ್ಯವಾಗಿ ಶುದ್ಧ ಅರಿವಿನ ಚಕ್ರ ಎಂದು ಪರಿಗಣಿಸಲಾಗುತ್ತದೆ. ಇದರ ಪಾತ್ರವು ಬೆಳವಣಿಗೆಗೆ ಮುಖ್ಯ ಪ್ರಭಾವ ಬೀರುವ ಪಿಟ್ಯುಟರಿ ಗ್ರಂಥಿಯ ಪಾತ್ರವನ್ನು ಹೋಲುತ್ತದೆ ಎಂದು ಅಂದಾಜು ಮಾಡಲಾಗಿದೆ. ಇದು ಹಾರ್ಮೋನುಗಳನ್ನು ಸ್ರವಿಸುವ ಮೂಲಕ ದೇಹದಲ್ಲಿನ ಉಳಿದ ನಿರ್ನಾಳ ಗ್ರಂಥಿ ವ್ಯವಸ್ಥೆಯೊಂದಿಗೆ ಸಂವಹನ ನಡೆಸುತ್ತದೆ ಅಲ್ಲದೇ ಹೈಪೋಥಾಲಮಸ್‌ ಮೂಲಕ ಕೇಂದ್ರ ನರ ವ್ಯವಸ್ಥೆಯೊಂದಿಗೆ ಸಂಪರ್ಕ ಸಾಧಿಸುತ್ತದೆ. ಅರಿವಿನ ದೈಹಿಕ ಆಧಾರದಲ್ಲಿ ಥಾಲಮಸ್‌ವು ಒಂದು ಮುಖ್ಯ ಪಾತ್ರವನ್ನು ಹೊಂದಿದೆ ಎಂದು ಭಾವಿಸಲಾಗಿದೆ. ಇದನ್ನು ನೂರು ದಳಗಳ ಒಂದು ಕಮಲದ ಮೂಲಕ ಪ್ರತಿನಿಧಿಸಲಾಗುತ್ತದೆ, ಇದು ತಲೆಯ ಮುಕುಟದಲ್ಲಿ ನೆಲೆಸಿರುತ್ತದೆ. ಸಹಸ್ರಾರವನ್ನು ನೇರಳೆ ಬಣ್ಣದ ಮೂಲಕ ಪ್ರತಿನಿಧಿಸಲಾಗುತ್ತದೆ ಮತ್ತು ಅದು ಅಂತರಿಕ ಬುದ್ಧಿವಂತಿಕೆ ಮತ್ತು ಶರೀರದ ಸಾವುಗಳಂತಹ ವಿಷಯಗಳನ್ನು ಒಳಗೊಂಡಿದೆ. ಸಹಸ್ರಾರದ ಅಂತರಿಕ ಅಂಶವು ಕರ್ಮದ ಬಿಡುಗಡೆ, ಧ್ಯಾನದೊಂದಿಗೆ ದೈಹಿಕ ಕ್ರಿಯೆ, ವಿಶ್ವವ್ಯಾಪಿ ಅರಿವು ಮತ್ತು ಏಕತೆಯೊಂದಿಗಿನ ಮಾನಸಿಕ ಕ್ರಿಯೆ, ಮತ್ತು ಅಸ್ತಿತ್ವತೆಯೊಂದಿಗೆ ಭಾವನತ್ಮಕ ಕ್ರಿಯೆಗಳ ಜೊತೆ ವ್ಯವಹರಿಸುತ್ತದೆ. ಕಾಲಚಕ್ರವನ್ನು ವಾಯುಪಾಶಗಳಿಂದ ನಿಯಂತ್ರಿಸುವ ಧೃವಸ್ಥಾನವೂ, ಮೇಲಿನ ಇಂದ್ರಲೋಕವೂ ಸ್ವರ್ಗವೆಂದು ಗಣಿಸಲ್ಪಟ್ಟಿವೆ. ಸಹಸ್ರ ಶಬ್ದಕ್ಕೆ ಅನೇಕ ಎಂದರ್ಥ. ಸತ್ಯಲೋಕದಲ್ಲಿ ಭಗವಂತನ ಸಹಸ್ರಾರು ಬಗೆಯ ತಲೆಗಳ ಅಂಶಗಳು ಸಂಘಟಿಸಿಕೊಂಡಿರುವಂತೆ ನಮ್ಮ ತಲೆಗಳಲ್ಲಿಯೂ ಮೆದುಳು ಸಹಸ್ರಾರ ಕಮಲವೆನಿಸಿಕೊಂಡು ಸಹಸ್ರಾರು ಕಾರ್ಯಗಳನ್ನು ನಿರ್ವಹಿಸುವ ಕೇಂದ್ರ.

 

ಸೌಂದರ್ಯಲಹರಿಯಲ್ಲಿ ಚಕ್ರಗಳ ಬಗ್ಗೆ ಶಂಕಾರಾಚಾರ್ಯರ ವರ್ಣನೆ

ಶ್ರೀ ಶಂಕರಭಗವತ್ಪಾದ ರವರು ಸೌಂದರ್ಯಲಹರಿ ೧೦ನೆಯ ಶ್ಲೋಕದಲ್ಲಿ,

ಸುಧಾಧಾರಾಸಾರೈ ಶ್ಚರಣಯುಗಳಾಂತರ್ವಿಗಳಿತ್ವೈಃ |

ಪ್ರಪಂಚಂ ಸಿಂಚಂತೀ ಪುನರಪಿ ರಸಾಮ್ನಾಯಮಹಸಃ |

ಆವಾಪ್ಯಂ ಸ್ವಾಂಭೂಮಿಂ ಭುಜಗನಿಭ ಮಧ್ಯುಷ್ಟವಲಯಂ |

ಸ್ವಮಾತ್ಮಾನಂ ಕೃತ್ವಾ ಸ್ವಪಿಷಿಕುಲಕುಂಡೇ ಕುಹರಿಣಿ ||

ಭಾವಾರ್ಥ:- "ಎಲೌ ಜನನಿಯೆ! ನೀನು ಸಹಸ್ರಾರಕಮಲದಲ್ಲಿರುವ ನಿನ್ನ ಚರಣಯುಗಳ ದಿಂದ ಜನಿಸಿದ ಅಮೃತವೃಸ್ಟಿ ಪ್ರವಾಹದಿಂದ ದೇಹದಲ್ಲಿರುವ ಎಪ್ಪತ್ತೆರಡುಸಾವಿರ ನಾಡಿಗಳನ್ನೂ ತೋಯಿಸಿ ಅಮೃತರಸದ ಅತೀಯವಾದ ಕಾಂತಿಯುಳ್ಳ ಚಂದ್ರನ ಮೂಲಕವಾಗಿ ಪುನಃ ಮೂಲಾಧಾರ ಚಕ್ರವನ್ನು ಸೇರಿ ಸರ್ಪದಂತೆ ಕುಂಡಲಾ-ಕಾರವಾಗಿ ತೆಕ್ಕೆಹಾಕಿಕೊಂಡು ನಿನ್ನ ಶಕ್ತಿರೂಪವನ್ನು ತಾಳಿ ತಾವರೇ-ದಂಟಿನೊಳಗಿರುವ ರಂಧ್ರದಂತೆ ಸೂಕ್ಷ್ಮವಾದ ರಂಧ್ರವುಳ್ಳ, ಪೃಥ್ವೀ-ತತ್ವವು ಲಯವಾಗುವ ಸುಷುಮ್ನಾ ನಾಡಿಯ ಮೂಲದಲ್ಲಿರುವ, ಆಧಾರ ಚಕ್ರದಲ್ಲಿ ನಿದ್ದೆಗೈಯ್ಯುವೆ" ಎಂದು ಹೇಳಿರುತ್ತಾರೆ.

 

ಈ ಕುಂಡಲಿನೀ ಶಕ್ತಿಯು ಮೂಲಾಧಾರ ಚಕ್ರದಿಂದ ಎದ್ದು ಷಟ್ಟಕ್ರಗಳನ್ನು ಭೇದಿಸಿಕೊಂಡು ಸಹಸ್ರಾರ ಕಮಲವನ್ನು ಸೇರಬೇಕೆಂಬ ತಾತ್ಪರ್ಯಕ್ಕೆ

 

ಶ್ರೀ ಶಂಕರಭಗವತ್ಪಾದರವರು ಕೂಡ ಸೌಂದರ್ಯಲಹರಿಯಲ್ಲಿ,

ಮಹೀಂ ಮೂಲಾಧಾರೇ ಕಮಪಿಮಣಿಪೂರೇ ಹುತವಹಂ |

ಸ್ಥಿತಂ ಸ್ವಾಧಿಷ್ಕಾನೇ ಹೃದಿಮರುತ ಮಾಕಾಶ ಮುಪರಿ |

ಮನೋಪಿ ಭ್ರೂಮಥ್ಯೆ ಸಕಲಮಪಿ ಭಿತ್ವಾಕುಲಪಥಂ |

ಸಹಸ್ರಾರೇ ಪದ್ಮೇ ಸಹರಹಸಿ ಪತ್ಯಾ ವಿಹರಸೇ ||

ಭಾವಾರ್ಥ:- ಮಾತೆಯೆ! ನೀನು ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧ, ಆಜ್ಞಾಚಕ್ರಗಳೆಂಬ ಪೃಥ್ವಿ, ಅಪ್ಪು, ಅಗ್ನಿ, ವಾಯು ಆಕಾಶ ಮತ್ತು ಅಂತಃಕರಣದ ತತ್ವಗಳನ್ನೆಲ್ಲಾ ಅತಿಕ್ರಮಿಸುವಂತೆ ಸುಷುಮ್ನೆಯ ಮಾರ್ಗವನ್ನು ಭೇದಿಸಿಕೊಂಡು ಸಹಸ್ರಾರಕಮಲದಲ್ಲಿ ನಿನ್ನ ವಲ್ಲಭನಾದ ಸದಾಶಿವನೊಂದಿಗೆ ಕ್ರೀಡಿಸುತ್ತಿರುವೆ." ಎಂದು ಹೇಳಿರುವರು.

 

ವಿವರಣೆ:- ನಿದ್ದೆಯನ್ನು ಕುರಿತು ಛಾಂದೋಗ್ಯದಲ್ಲಿ ಸಿದ್ಧಾಂತವಿದೆ. ಆತ್ಮವು ನಾಡಿಗಳಲ್ಲಿ ಸೇರಿಕೊಂಡು ನಿದ್ದೆಗೆ ಕಾರಣವೆಂದು ಅದರ ಅಭಿಪ್ರಾಯವು. "ಮನುಷ್ಯನು ಗಾಢನಿದ್ದೆಯಲ್ಲಿದ್ದಾಗ ಸುಖಿಯಾಗಿ ಕನಸು ಕಾಣುವುದಿಲ್ಲ; ಆಗ ಅವನ ಆತ್ಮವು ನಾಡಿಗಳಲ್ಲಿ ಸೇರಿರುತ್ತದೆ? (ಛಾಂ ಅ 8 ಖಂ 6 ಮಂ 3). ಬೃಹದಾರಣ್ಯಕದಲ್ಲಿ ಇದೇ ಕಲ್ಪನೆಯು ವಿಕಾಸಗೊಂಡಿದೆ. ಪುರೀತತ್‌ ಇದು ಹೃದಯದ ಸುತ್ತಲಿರುವ ತಿಳುದೊಗಲಿನ ಒಂದು ಬಗೆಯ ಚೀಲವೆಂದೇ ಅರ್ಥ ಮಾಡಬೇಕಾಗುತ್ತದೆ ಎನ್ನುತ್ತಾರೆ. ಗಾಢನಿದ್ರೆಯಲ್ಲಿ ಜೀವಾತ್ಮನು ನಾಡಿಗಳ ಮುಖಾಂತರ ಪುರೀತತ್‌ದಲ್ಲಿ ಪ್ರವೇಶಿಸುವನು; ಹೀಗಾದಾಗ ನಿದ್ದೆ ಬರುವುದು, ಎಂದು ಆ ಪುರಾತನರು ಕಲ್ಪಿಸಿದ್ದರು. ನೈಯ್ಯಾಯಿಕರು ಇದೇ ಕಲ್ಪನೆಯನ್ನು ಮುಂದೆ ವಿಸ್ತರಿಸಿದರು. ಜೀವಾತ್ಮನು ಪುರೀತತ್‌ದ ಒಳಗಿದ್ದಾಗ ನಿದ್ದೆ ಬರುವುದೆಂದೂ, ಪುರೀತತ್‌ದ ಒಳಸೇರುವುದಕ್ಕಾಗಿ ಅದರ ಹೊಸ್ತಿಲಮೇಲೆ ಇದ್ದಾಗ ಕನಸುಬೀಳುವವೆಂದೂ ಹೃದಯದಿಂದ ಪುರೀತತ್‌ದ ಹೊರೆಗೆ ಅಲೆದಾಡುತ್ತಿದ್ದಾಗ ಎಚ್ಚತ್ತಿರುವನೆಂದೂ ಅವರ ಭಾವನೆಯು.

            "ಅಥ ಯದಾ ಸುಷುಪ್ರೋಭವತಿ ಯದಾ ನಕಸ್ಯಚ ನವೇದ ಹಿತಾನಾಮ ನಾಡ್ಯೋ ದ್ವಾಸಪ್ತತಿ ಸಹಸ್ರಾಣಿ ಹೃದಯಾ-ತ್ಪುರೀತತಮಭಿ ಪ್ರಕಿಷ್ಠನ್ತೇ ತಾಭಿಃ ಪ್ರತ್ಯವಸೃಪ್ಯಪುರೀತತಿಶೇತ'' (ಬೃ. ಉ. ೨-೧-೯) ಎಂದರೆ-ಜೀವನು ಸುಷುಪ್ತಿ ದಿಸೆಯಲ್ಲಿ ಹೃದಯದಿಂದ ಹೊರಟು ವ್ಯಾಪಿಸಿರುವ ಎಪ್ಪತ್ತೆರಡುಸಾವಿರ ನಾಡಿಗಳಲ್ಲಿ "ಪುರೀತತ್‌'' ಎಂಬ ಸುಷುಮ್ನಾ  ನಾಡಿಯಲ್ಲಿ ಸುಖವಾಗಿ ನಿದ್ರಿಸುವನು ಎಂದು ಅರ್ಥವು. – ಇದು ಪುರೀತತ್ ಎಂಬುದಕ್ಕೆ ಅರ್ಥ ಸರಿಯಿದೆ ಎನ್ನಿಸುತ್ತದೆ.

 

ಜಗನಾಥದಾಸರು ರಚಿಸಿದ ಶ್ರೀಮದ್ಧರಿಕಥಾಮೃತಸಾರ ದಿಂದ ಸಂಗ್ರಹ

ಸುಷುಮ್ನಾ ನಾಡಿಗೆ ನಾಲ್ಕು ದಿಕ್ಕಿಗೂ ನಾಲ್ಕು ನಾಡಿಗಳು, ಅಂತು ಐದು.

೧. ಸುಷುಮ್ನಾ  - ಮಧ್ಯಗತ ನಾಡೀ

. ಪ್ರಕಾಶಿನೀ _ ಪೊರ್ವಗತ ನಾಡೀ

೩. ವೈದ್ಯುತಾ - ದಕ್ಷಿಣಗತ ನಾಡೀ

. ವಜ್ರಿಕಾ  -  ಪಶ್ಚಿಮಗತ ನಾಡೀ

೫. ಆರ್ಯಾ — ಉತ್ತರಗತ ನಾಡೀ

 

ಇಡಾ-ಎಡದ ಮೂಗು   …… ಪಿಂಗಳಾ_ ಬಲದ ಮೂಗು 

ಸುಷುಮ್ಮಾ-ಬ್ರಹ್ಮರಂಧ್ರ  ………… ಗಾಂಧಾರಿ-ಎಡದ ಕಣ್ಣುಗಳು 

ಹಸ್ತಿ ಜಿಹ್ಹಾ ಬಲದ ಕಣ್ಣು  ……. ಪೂಷಾ - ಬಲದ ಕಿವಿ 

ಯಶಸ್ವಿನೀ-ಎಡದ ಕವಿ   ……….. ಅಲಂಬುಸಾ-ಮುಖದ್ವಾರ

ಕುಹು-ಲಿಂಗ, ಶಿಶ್ನ ………….. ಶಂಖಿನೀ- ಗುದಸ್ಥಾನ

            ಇವುಗಳು ದಶದ್ವಾರಗಳ ಆಶ್ರಯಿಸಿ ಇರತಕ್ಕ ನಾಡಿಗಳು. ಅಲ್ಲಿ ಆ ಏಕಾದಶೇಂದ್ರಿಯಗಳಲ್ಲಿ,  ರವಿ ಶಶಿ ಸಿಂಧು ನಾಸತ್ಯಾದಿಗಳು ಸೂರ್ಯ, ಚಂದ್ರ, ವರುಣ, ಅಶ್ವಿನೀ ದೇವತೆಗಳು, ಮೊದಲಾದವರು, ಇವರು ಯಾವತ್ತೂ ಮಂದಿ ಇಂದ್ರಿಯಾಭಿಮಾನಿಗಳು. ನೆಲೆಗೊಂಡಿ-ಹರು ಸತತ-ನಿರಂತರ ಆವಾಸರಾಗಿ ಇದ್ದಾರೆ ಎಂತ ತಿಳಿಯಬೇಕು. ಸುಷುಮ್ನಾ ನಾಡಿಯಲ್ಲಿ ವಾಯು ದೇವರು ದೈತ್ಯರನ್ನ ಪ್ರವೇಶ ಮಾಡಿಸೋದಿಲ್ಲ ಎಂತ ಹೇಳತ್ತಾರೆ.

 

ಸುಷುಮ್ನಾ ನಾಡಿಯನ್ನು ದೈವಿಕ ವೀಣೆಗೆ ಹೋಲಿಕೆ

 

ದರ್ಶನೋಪನಿಷತ್ತಿನಲ್ಲಿ :---

ಪೃಷ್ಠ ಮಧ್ಯಸ್ದಿತೇ ನಾಸ್ದ್ನಾ ವೀಣಾದಂಡೇನ ಸುವ್ರತ |

ಸಹ ಮಸ್ತಕ ಪರ್ಯಂತಂ ಸುಷುಮ್ನಾ ಸಂಪ್ರತಿಷ್ಠಿತಾ |

ಭಾವಾರ್ಥ:- ಪೃಷ್ಠ  ಮಧ್ಯೆ ವೀಣಾದಂಡದಂತೆ ಇರುವ ಮೂಳೆಯು ಶಿರಸ್ಸಿನ ವರೆಗೂ ಹೋಗಿರುವುದು. ಅದರಲ್ಲಿ ಸುಷುಮ್ನಾ (ಬ್ರಹ್ಮರಂಧ) ನಾಡಿಯು ಬಹು ಚೆನ್ನಾಗಿ ನೆಲೆಸಿರುವುದು ಎಂದು ಹೇಳಿರುವುದು.

 

ಶಾಂಡಿಲ್ಯೋಪನಿಷತ್ತಿನಲ್ಲಿ :-

ಗುದಸ್ಯ ಪೃಷ್ಠಭಾಗೇsಸ್ಮಿನ್ ವೀಣಾದಂಡ ಸ್ಸದೇಹಭೃತ್‌ |

ದೀರ್ಫಾಸ್ಥಿ ದೇಹಪರ್ಯಂತಂ ಬ್ರಹ್ಮನಾಡೀತಿ ಕಥ್ಯತೇ |

ಉಚ್ಚಾರಯೇ ತ್ಪರಾಂಶಕ್ತಿಂ ಬ್ರಹ್ಮೆರಂಧ್ರ ನಿವಾಸಿನೀಂ |

ಭಾವಾರ್ಥ:- ಗುದದ ಹಿಂದೆ ದೇಹವನ್ನು ಹೊತ್ತಿರುವ ವೀಣಾದಂಡದಂತೆ ದೀರ್ಫವಾದ ಮೂಳೆಯು ಶಿರಸ್ಸಿನವರೆಗೂ ಇರುವುದು. ಇದರಲ್ಲಿ ಬ್ರಹ್ಮರಂಧ್ರ (ಸುಷುಮ್ನಾ) ನಾಡಿಯು ಇರುವುದು. ಈ ನಾಡಿಯಲ್ಲಿರುವ ಪರಾಶಕ್ತಿಯನ್ನು ಉಚ್ಚರಿಸಬೇಕು. ಅಂದರೆ ನಾದಬ್ರಹ್ಮನಾದ ಓಂಕಾರವನ್ನು ಉಚ್ಚರಿಸಬೇಕು. ಎಂದು ಹೇಳಿರುವುದು.

 

ಧ್ಯಾನಬಿಂದೂಪನಿಷತ್ತಿನಲ್ಲಿ:- 

ಮೂಲಾಧಾರಾ ತ್ಸುಷುಮ್ನಾಚ ಪದ್ಮತಂತು ನಿಭಾ ಶುಭಾ |

ಅಮೂರ್ತೋ ವರ್ತತೇ ನಾದೋ ವೀಣಾದಂಡ ಸಮುತ್ಥಿತಃ |

ಭಾವಾರ್ಥ:- ಮೂಲಾಧಾರದಿಂದ ಹೊರಟಿರುವ ಸುಷುಮ್ನೆಯು ಕಮಲದ ತಂತು ವಿನಂತಿರುವುದಾಗಿಯೂ ಮಂಗಳರೂಪವಾದದ್ದಾಗಿಯೂ ಇದೆ. ಈ ಸುಷುಮ್ನಾ ನಾಡಿಯಲ್ಲಿ ವೀಣೆಯಿಂದುತ್ಪನ್ನವಾಗುವ ನಾದದಂತೆ ಅವ್ಯಕ್ತನಾದನಿದೆ.

 

ಬ್ರಹ್ಮವಿದ್ಯೋಪನಿಷತ್ತಿನಲ್ಲಿ

ಅನಾಹತ ಧ್ವನಿಯುತಂ ಹಂಸಂ ಯೋ ವೇದಹೃದ್ಗತಂ |

ಸ್ವಪ್ರಕಾಶಂ ಚಿದಾನಂದಂ ಸಹಂಸ ಇತಿ ಗೀಯತೇ ||

ಭಾವಾರ್ಥ:- ಅನಾಹತಚಕ್ರದಲ್ಲಿ ಉತ್ಪನ್ನವಾಗುವ ನಾದದ ಅಂತರ್ಗತನಾಗಿಯೂ ಹಂಸಸ್ವರೂಪನಾದ ಆದಿತ್ಯನ ಅಂತರ್ಗತನಾಗಿಯೂ ಚಿದಾನಂದನಾಗಿಯೂ ಇರುವ ಪರಬ್ರಹ್ಮವನ್ನು ಯಾವನು ತಿಳಿಯುವನೋ ಅವನೇ ಪರಮಾತ್ಮ ಸ್ವರೂಪನು ಎಂದು ಹೇಳಿರುವುದು.

 

ಐತರೇಯಾರಣ್ಯಕ ದ್ವಿತೀಯಾಧ್ಯಾಯ ಪಂಚಮ ಖಾಂಡದಲ್ಲಿ.

ಅಥ ಖಲ್ವಿಯಂ ದೈವೀ ವೀಣಾಭವತಿ |

ತದನುಕೃತಿರಸೌ ಮಾನುಷೀ ವೀಣಾಭವತಿ ॥

ಭಾವಾರ್ಥ:- ಅಂದರೆ ದೈವಿಕ ವೀಣೆಯು ಮನುಷ್ಯ ಶರೀರವಾಗಿರುವುದು ಮನುಷ್ಯರು ನುಡಿಸುವ ವೀಣೆಯು ದೈವಿಕ ವೀಣೆಗನುಸಾರವಾಗಿರುವುದು ಎಂದು ಹೇಳದೆ.

 

ಯಾಜ್ಞವಲ್ಕ್ಯ ಸ್ಮೃತಿಯಲ್ಲಿ:--

ವೀಣಾವಾದನ ತತ್ವಜ್ಞಃ ಶ್ರುತಿಜಾತಿ ವಿಶಾರದಃ |

ತುಳಜ್ಞ ಶ್ಚಾ ಪ್ರಯಾಸೇನ ಮೋಕ್ಷಮಾರ್ಗಂಹಿ ಗಚ್ಛತಿ |

ಭಾವಾರ್ಥ:- ಶ್ರುತಿ, ತುಳ, ವೀಣೆಗಳ ಯಧಾರ್ಥ ರಹಸ್ಯಗಳನ್ನು ತಿಳಿದು ಅನುಸಂಧಾನ ಮಾಡುವವನು ಮೋಕ್ಷಮಾರ್ಗವನ್ನು ಹೊಂದುತ್ತಾನೆ.

 

ಐತರೇಯ ತೃತೀಯಾರಣ್ಯಕ ದ್ವಿತೀಯಾಧ್ಯಾಯ ಪಂಚಮಖಂಡದಲ್ಲಿ:--

ಸಯೋಹೈತಾಂ ದೈವೀಂ ವೀಣಾಂ ವೇದಶ್ರುತ ವದನೋ ಭವತಿ |

ಭೂಮಿಪ್ರಾಸ್ಯ ಕೀರ್ತಿರ್ಭವತಿ ಯತ್ರಕ್ವಚಾsರ್ಯಾ ವಾಚೋಭಾಷಂತೇ ವಿದುರೇನಂತತ್ರ ||

ಭಾವಾರ್ಥ:- ಅಂದರೆ ಈ ದೈವಿಕ ವೀಣೆಯನ್ನು ಚೆನ್ನಾಗಿ ತಿಳಿದು ಉಪಾಸಿಸಿದವನು ಸರ್ವಸಿದ್ಧಿಯನ್ನೂ ಪ್ರಪಂಚದಲ್ಲಿ ಕೀರ್ತಿಯನ್ನೂ ಹೊಂದುತ್ತಾನೆ ವಿದ್ವಾಂಸರು ಇವನನ್ನು ಪೂಜ್ಯನನ್ನಾಗಿ ತಿಳಿಯುತ್ತಾರೆ.

 

ತಾವರೆ/ಕಮಲ ಪುಷ್ಪಗಳನ್ನು ಚಕ್ರಗಳ ಗುರುತಾಗಿ ಸೂಚಿಸಲಾಗಿದೆ

            ಯಡತೊರೆ ಸುಬ್ರಾಯಶರ್ಮ ರವರು ಬರೆದಿರುವ ಶ್ರೀಮದ್ರಾಮಾಯಣದ ಅಂತರಾರ್ಥ ಅಥವಾ ಮೋಕ್ಷಮಾರ್ಗ ಪ್ರದೀಪಿಕೆ ಗ್ರಂಥದಲ್ಲಿ ನಾಡಿಯ ಬಗ್ಗೆ ಹೀಗೆ ಬರೆದಿದ್ದಾರೆ "ಸುಷುಮ್ನಾ ನಾಡಿಯ ಎಡಭಾಗದಲ್ಲಿರುವ ರೇಖೆಯು ಚಂದ್ರನಾಡಿ ಆಥವಾ ಇಡಾ ಯೆನಿಸಿಕೊಳ್ಳುತ್ತದೆ. ಈ ಸುಷುಮ್ನಾ ನಾಡಿಯ ಬಲಭಾಗದಲ್ಲಿರುವ ರೇಖೆಯು ಪಿಂಗಳಾ ಅಥವಾ ಸೂರ್ಯನಾಡಿ ಎನಿಸಿಕೊಳ್ಳುತ್ತದೆ. ಸುಷುಮ್ನಾ ನಾಡಿಯು ತಾವರೆಗಿಡದನಾಳಕ್ಕೆ  ಹೋಲಿಕೆಯಾಗಿದೆ. ಈ ನಾಡಿಗಳು ಶಕ್ತಿರೂಪದಲ್ಲಿ ನಮ್ಮ ಬೆನ್ನಿನ ಹುರಿಯಲ್ಲಿರುವುವು. ಈ ನಾಡಿಗಳಲ್ಲಿ ತಾವರೆದಂಟಿಗೆ ಹೋಲಿಕೆಯಾಗಿರುವ ಸುಷುಮ್ನಾ ನಾಡಿಯು ನಮ್ಮ ಸೊಂಟದ ಕೆಳಗಿರುವ ಮೂಲಾಧಾರ ಚಕ್ರದಿಂದ ಪ್ರಾರಂಭವಾಗಿ ಬೆನ್ನಿನ ಹುರಿಯಲ್ಲಿಯೇ ಶಿರಸ್ಸಿಗೆ ಬರುತ್ತದೆ.  

            ಈ ತಾವರೆ ದಂಟಿನ ಮೇಲ್ಬಾಗದಲ್ಲಿರುವ ತಾವರೆ ಪುಷ್ಟದ ಕುಸುಮಗಳು ಅಂತಃಕರಣಕ್ಕೆ ಹೋಲಿಕೆಯಾಗಿರುತ್ತವೆ. ಈ ಅಂತಃ-ಕರಣ ಸ್ವರೂಪವಾದ ಕುಸುಮಗಳು ಎಲ್ಲಿರುವುವೋ ಅಲ್ಲಿ ಪರಮಾ-ತ್ಮನು ಪ್ರತಿಫಲಿತನಾಗುತ್ತಾನೆ.  ತಾವರೇ ಗಿಡದಲ್ಲಿ, ಗೆಡ್ಡೆಯಿಂದ ಬೇರುಗಳು ಅಧೋಮುಖವಾಗಿ ಹೊರಟಿರುತ್ತವೆ. ಮತ್ತೊಂದು ಕಡೆಯಿಂದ ನಾಳವು ಮೇಲ್ಮುಖವಾಗಿ ಹೊರಟಿರುತ್ತದೆ. ಈ ಗೆಡ್ಡೆಯ ಕೆಳಗಿರುವ ಬೇರಿಗೂ ಮೇಲಕ್ಕೆ ಹೊರಟಿರುವ ನಾಳಕ್ಕೂ ಅಧಿಷ್ಠಾನವೆಂದರೆ ಆಶ್ರಯವಾಗಿರುವುದರಿಂದ ಈ ಕಂದಕ್ಕೆ ಸ್ವಾದಿ-ಷ್ಠಾನ ಚಕ್ರವೆಂದು ಹೆಸರು. ನಾಳವು ಗೆಡ್ಡೆಯ ಒಳಭಾಗದಲ್ಲಿಯೂ ಮೂಲಾಧಾರಚಕ್ರದವರೆಗೆ ಇರುತ್ತದೆ. ಈ ಗೆಡ್ಡೆಯು ನಮ್ಮ ದೇಹದಲ್ಲಿ ನಾಭಿಗೂ ಲಿಂಗಕ್ಕೂ ಮಧ್ಯೆ ಹಕ್ಕಿಯ ಮೊಟ್ಟೆಯಂತೆ ಇರುತ್ತದೆ. ಇದು ನಮ್ಮ ದೇಹದಲ್ಲಿರುವ ಎಪ್ಪತ್ತೆರಡು ಸಾವಿರ ನಾಡಿಗಳು ಸೇರುವ ಸ್ಥಳವಾಗಿದೆಯೆಂದು ಧ್ಯಾನ  ಬಿಂದೂಪನಿಷತ್ತಿನಲ್ಲಿ,

ಉರ್ಧ್ವಮ್ ಮೇಡ್ರಾ ದದೋನಾಭೇಃ ಕಂದಯೋಸ್ತಿ ಖಗಾಣ್ಡವತ್

ತತ್ರ ನಾಡ್ಯಸ್ಸಮುತ್ಪನ್ನಾ ಸ್ಸಹಸ್ರಾಣಿ ದ್ವಿಸಪ್ತತಿ ||

ಭಾವಾರ್ಥ:- ಮೇಢ್ರ ಅಥವಾ ಜನನಾಂಗ ಪ್ರದೇಶಕ್ಕೂ ನಾಭಿಗೂ ಮಧ್ಯದಲ್ಲಿ ಪಕ್ಷಿಯ ಮೊಟ್ಟೆಯಂತಿರುವ ಕಂದವಿರುತ್ತದೆ. ಈ ಕಂದವಿರುವ ಪ್ರದೇಶದಲ್ಲಿ ಎಪ್ಪತ್ತೆರಡು ಸಹಸ್ರ ನಾಡಿಗಳೂ ಸಮುತ್ಪನ್ನವಾಗಿರುತ್ತವೆ. ಎಂಬದಾಗಿ ಹೇಳಿರುವುದು.

            ನಮ್ಮ ದೇಹವನ್ನು ಧಾರಣೆಮಾಡಿಕೊಂಡಿರುವ ಮುಖ್ಯವಾದ ಎಪ್ಪತ್ತೆರಡು ಸಾವಿರ ನಾಡಿಗಳಲ್ಲದೆ ಇನ್ನೂ ಅಸಂಖ್ಯಾತವಾದ ನಾಡಿಗಳು ಈ ಗೆಡ್ಡೆಯಿಂದ ಬಂಧಿಸಲ್ಪಟ್ಟರುತ್ತವೆ.

 

            ತಾವರೆ ಭಾರತದ ಸಂಸ್ಕೃತಿಯ ಪ್ರತೀಕವಾಗಿದೆ. ಭಾರತದ ಸಾಹಿತ್ಯ, ಧರ್ಮ ಕಲೆಗಳಲ್ಲಿ ಇದಕ್ಕೆ ಉತ್ಕೃಷ್ಟ  ಸ್ಥಾನ ಇದೆ. ಪುರಾಣ ಪುಣ್ಯ ಕಥೆಗಳಲ್ಲಿ ಪೂಜೆ ಪುರಸ್ಕಾರಗಳಲ್ಲಿ ಈ ಪುಷ್ಪಕ್ಕೆ ಅದ್ವಿತೀಯ ಸ್ಥಾನವನ್ನು ಕೊಟ್ಟಿದೆ. ವಿಷ್ಣು ದೇವತೆಯ ಪತ್ನಿಗೆ ಪದ್ಮಾ ಎಂದೇ ಹೆಸರು. ವಿಷ್ಣುವಿನ ನಾಭಿಕಮಲದಿಂದ ಸೃಷ್ಟಿಕರ್ತನಾದ ಬ್ರಹ್ಮ ಹುಟ್ಟಿದನೆಂಬುದು ಪುರಾಣ ಪ್ರಸಿದ್ಧವಾಗಿದೆ. ಚತುರ್ಮುಖ ಬ್ರಹ್ಮ ಅರಳಿದ ತಾವರೆಯ ಮೇಲೆ ಕುಳಿತಿರುವರು. ಯಾವ ದೇವತೆಗೇ ಆಗಲಿ ಒಂದಲ್ಲ ಒಂದು ರೀತಿಯಲ್ಲಿ ಕಮಲದ ಸಂಬಂಧವಿಲ್ಲದೆ ಇಲ್ಲ. ಮಹಾಕಾಳಿಯ ಚಿತ್ರವನ್ನೂ ತೆಗೆದುಕೊಳ್ಳೋಣ. ಕಾಳರಾತ್ರಿಯಂತೆ ಈ ದೇವತೆ ಅಚ್ಚ ಕಪ್ಪುವರ್ಣದವಳು. ಪುಷ್ಟಮಾಲೆಯ ಬದಲು ಮಾನವ ರುಂಡಗಳ ಮಾಲೆಗಳನ್ನು ಧರಿಸಿರುವವಳು. ಈಕೆಗೂ ಎಡಗೈಯ್ಯಲ್ಲಿ ಕಮಲ ಪುಷ್ಪ ಇದೆ. ಕೆಸರಿನಿಂದ ಕಮಲ ಹುಟ್ಟುವಂತೆ, ಅಶುಭವಾದ ಲಯದಿಂದ ಶುಭ ಸೃಪ್ಟಿಯಾಗುತ್ತದೆ. ಋಗ್ವೇದದಲ್ಲಿ  ಕಮಲವನ್ನು ಶ್ರೀ ಮತ್ತು ಲಕ್ಷ್ಮಿ ಎಂತಲೂ ಕರೆಯಲಾಗಿದೆ. ಪದ್ಮಸಂಭವ ಕಮಲದಿಂದ ಉದ್ಭವಿಸಿದವಳು,  ಪದ್ಮಸ್ಥಿತ ಕಮಲದಲ್ಲಿ ನಿಂತಿರುವವಳು, ಪದ್ಮವರ್ಣ ಕಮಲದ ವರ್ಣದವಳು, ಪದ್ಮಾಕ್ಷಿ ಕಮಲದ ಕಣ್ಣಿನವಳು.

 

ವಾಯುದೇವ ಹನುಮ ದೇವರ ವೇದ ವರ್ಣನೆ

ಸರ್ವೇಷಾಂ ಚ ಪ್ರಾಣಿನಾಂ ಪ್ರಾಣಭೂತಃ.... ಎಲ್ಲ ಪ್ರಾಣಿಗಳಲ್ಲಿ ಜೀವಿಸುವ ಪ್ರಮುಖ ಲಕ್ಷಣಗಳು ಎರಡು ಉಸಿರಾಟ ಹಾಗೂ ಚಟುವಟಿಕೆ.  ವಾಯುದೇವ ಉಸಿರಿನ ದೇವತೆಯಾಗಿ, ಇಂದ್ರಿಯಗಳ ಮೂಲಕ ಚೇಷ್ಟಗಳನ್ನು ಅಂದರೆ ಚಟುವಟಿಕೆಗಳನ್ನು ಪೂರೈಸುವನು. ಹೀಗೆ ಎಲ್ಲ ಪ್ರಾಣಿಗಳಿಗೆ ವಾಯುವೇ ಪ್ರಾಣಧಾರನು.  

ಜ್ಞಾನೇ ವಿರಾಗೇ ಹರಿಭಕ್ತಿಭಾವೇ ಧೃತಿಸ್ಥಿತಿಪ್ರಾಣಬಲೇಷು ಯೋಗೇ ।

ಬುದ್ಧೌ ಚ ನಾನ್ಯೋ ಹನುಮತ್ಸಮಾನಃ ಪುಮಾನ್‌ ಕದಾಚಿತ್‌ ಕ್ವ ಚ ಕಶ್ಚ ನೈವ ॥

(ಮ.ಭಾರತ.ತಾತ್ಪರ್ಯ.ನಿ. 2-155)

ಭಾವಾರ್ಥ:- ವಾಯು ದೇವನಾದ ಹನುಮಂತನ ಭಗವದ್‌ ಜ್ಞಾನ, ವಿರಕ್ತಿ, ಭಗವದ್‌ ಭಕ್ತಿ, ಧೈರ್ಯ, ನ್ಯಾಯನಿಷ್ಠ, ಪ್ರೇರಕತ್ವ, ಬಲ, ಯುಕ್ತಿವಂತಿಕೆ ಹಾಗೂ ಭಗವದಿತರ ವಿಷಯಕ ಬುದ್ದಿ -ಎಂಬ ಒಂಬತ್ತು ಗುಣಗಳನ್ನು ಉಲ್ಲೇಖಿಸಿ, ಹೇಳುತ್ತಾ ಅವುಗಳಲ್ಲಿಯ ಒಂದೊಂದು ಗುಣದಲ್ಲೂ ಹನುಮಂತನಿಗೆ ಸರಿದೂಗುವ ವ್ಯಕ್ತಿ ಎಂದೂ ಎಲ್ಲೂ ಇಲ್ಲವೇ ಇಲ್ಲ ಎನ್ನುತ್ತಾರೆ.

ವಿವರಣೆ:- ಭಗವದ್ ಎಂದರೆ ಅಕ್ಷರಶಃ ಅರ್ಥ “ಚಂದ್ರ ಭವನವನ್ನು (ಸಹಸ್ರಾರವನ್ನು) ತಲುಪಲು ನೀಡುವ” -ಜ್ಞಾನ- ಭಕ್ತಿ- ಅಂತಹ ವಿಷಯದ ಬುದ್ದಿ, ವಾಯುದೇವನಿಗೆ ಅಂತರ್ಗತವಾಗಿರುವುದು.

ಆಧಾರಃ ಸರ್ವವೇದಾನಾಂ ವೇದಾಣೀ ಪ್ರಾಣ ಉಚ್ಯತೇ ।

- ಶಬ್ದತತ್ವ್ವ

ಭಾವಾರ್ಥ:- ಸಕಲವೇದಗಳಿಗೆ ಆಧಾರ ವಾಯು. ಮುಖ್ಯಪ್ರಾಣನು ಸರ್ವವೇದಗಳಿಗೂ ಆಧಾರನಾಗಿರುವುದರಿಂದ "ವೇದಾಣೀ' ಎನಿಸುವನೆಂದು “ಶಬ್ದತತ್ವ' ತಿಳಿಸಿದೆ.

            "ನಮಸ್ತೇ ವಾಯೋ ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ” ತೈತ್ತಿರೀಯೋಪನಿಷತ್ತು ಪ್ರಸ್ತುತಪಡಿಸುವ ಯಜುರ್ವೇದದ ಶಾಂತಿಪಾಠದಲ್ಲಿ “ನಿನ್ನನ್ನು ಪರಬ್ರಹ್ಮನ ಪ್ರತಿಮೆಯನ್ನಾಗಿ ಇಟ್ಟುಕೊಂಡು ಶಾಸ್ತ್ರಪ್ರವಚನ ನಡೆಸುವೆನೆಂದು ವಾಯುದೇವನಲ್ಲಿ ಪ್ರಾರ್ಥಿಸಲಾಗಿದೆ.

 

ಈ ಹಿಂದೆ ಮಹಾತ್ಮರೂ ಹೇಳಿರುವುದೇನು

 

ಸ್ವಾಮಿ ವಿವೇಕಾನಂದರು ಹೇಳುತ್ತಾರೆ: “ನಮ್ಮ ಹೊರಗೆ ದೇವರನ್ನು ಕಾಣುವುದು ಅಸಾಧ್ಯ. ನಮ್ಮ ಆತ್ಮಗಳು ನಮ್ಮ ಹೊರಗಿನ ಎಲ್ಲಾ ದೈವಿಕತೆಯನ್ನು ಕೊಡುಗೆಯಾಗಿ ನೀಡುತ್ತವೆ. ನಮ್ಮಲೇ ಶ್ರೇಷ್ಠ ದೇವಾಲಯವಿದೆ. ವಸ್ತುನಿಷ್ಠೀಕರಣವು ನಮ್ಮೊಳಗೆ ನಾವು ನೋಡುವ ಮಸುಕಾದ ಅನುಕರಣೆಯಾಗಿದೆ. ಮನಸ್ಸಿನ ಶಕ್ತಿಗಳ ಏಕಾಗ್ರತೆಯು ದೇವರನ್ನು ನೋಡಲು ನಮಗೆ ಸಹಾಯ ಮಾಡುವ ಏಕೈಕ ಸಾಧನವಾಗಿದೆ. ನೀವು ಒಂದು ಆತ್ಮವನ್ನು ತಿಳಿದಿದ್ದರೆ - ನಿಮ್ಮ ಸ್ವಂತ - ನೀವು ಎಲ್ಲಾ ಹಿಂದಿನ, ಪ್ರಸ್ತುತ ಮತ್ತು ಮುಂಬರುವ ಆತ್ಮಗಳನ್ನು ತಿಳಿದಿದ್ದೀರಿ. ಚಿತ್ತವು ಮನಸ್ಸನ್ನು ಕೇಂದ್ರೀಕರಿಸುತ್ತದೆ; ಕಾರಣ, ಪ್ರೀತಿ, ಭಕ್ತಿ ಮತ್ತು ಉಸಿರಾಟದಂತಹ ಕೆಲವು ವಿಷಯಗಳು ಈ ಇಚ್ಛೆಯನ್ನು ಪ್ರಚೋದಿಸುತ್ತವೆ ಮತ್ತು ನಿಯಂತ್ರಿಸುತ್ತವೆ. ಏಕಾಗ್ರ ಮನಸ್ಸು ನಮಗೆ ಆತ್ಮದ ಪ್ರತಿಯೊಂದು ಮೂಲೆಯನ್ನು ತೋರಿಸುವ ದೀಪವಾಗಿದೆ”.       “ಸುಷುಮ್ನಾವನ್ನು ಧ್ಯಾನಿಸುವುದು ತುಂಬಾ ಉಪಯುಕ್ತ-ವಾಗಿದೆ. ನೀವು ಅದರ ದೃಷ್ಟಿಯನ್ನು ಹೊಂದಿರಬಹುದು ಮತ್ತು ಇದು ಅತ್ಯುತ್ತಮ ಮಾರ್ಗವಾಗಿದೆ. ಆಮೇಲೆ ಅದರ ಬಗ್ಗೆ ಬಹಳ ಹೊತ್ತು ಧ್ಯಾನಿಸಿ. ಇದು ಅತ್ಯಂತ ಸೂಕ್ಷ್ಮವಾದ, ಅದ್ಭುತವಾದ ದ್ವಾರವಾಗಿದೆ, ಬೆನ್ನುಹುರಿಯ ಮೂಲಕ ಈ ಜೀವಂತ ಮಾರ್ಗವಾಗಿದೆ, ಈ ಮೋಕ್ಷದ ದ್ವಾರದ ಮೂಲಕ ನಾವು ಕುಂಡಲಿನಿಯನ್ನು ಮೇಲಕ್ಕೆತ್ತಬೇಕು.... ನಾವು ಕುಂಡಲಿನಿಯನ್ನು ಜಾಗೃತಗೊಳಿಸಬೇಕು, ನಂತರ ಅದನ್ನು ನಿಧಾನವಾಗಿ ಒಂದು ಕಮಲದಿಂದ ಇನ್ನೊಂದಕ್ಕೆ ಮೆದುಳು ತಲುಪುವವರೆಗೆ ಏರಿಸಬೇಕು. ಪ್ರತಿಯೊಂದು ಹಂತವು ಮನಸ್ಸಿನ ಹೊಸ ಪದರಕ್ಕೆ ಅನುರೂಪವಾಗಿದೆ”.

            “ಮೊದಲನೆಯದಾಗಿ, ನೀವು ದೀರ್ಘಕಾಲ ಕುಳಿತುಕೊಳ್ಳ-ಬಹುದಾದ ಭಂಗಿಯಲ್ಲಿ ಕುಳಿತುಕೊಳ್ಳಿ. ಕೆಲಸ ಮಾಡುವ ಎಲ್ಲಾ ನರ ಪ್ರವಾಹಗಳು ಬೆನ್ನುಮೂಳೆಯ ಉದ್ದಕ್ಕೂ ಹಾದು ಹೋಗುತ್ತವೆ. ಬೆನ್ನುಮೂಳೆಯು ದೇಹದ ತೂಕವನ್ನು ಬೆಂಬಲಿಸುವ ಉದ್ದೇಶವನ್ನು ಹೊಂದಿಲ್ಲ. ಆದ್ದರಿಂದ ದೇಹದ ಭಾರ ಬೆನ್ನುಮೂಳೆಯ ಮೇಲೆ ಇರದಂತೆ ಭಂಗಿ ಇರಬೇಕು. ಅದು ಎಲ್ಲ ಒತ್ತಡದಿಂದ ಮುಕ್ತವಾಗಿರಲಿ. ನಾವು (ದೇಹದ) ಒಳಗೆ ಧ್ಯಾನ ಮಾಡಲು ಪ್ರಯತ್ನಿಸಬೇಕು. ಮನಸ್ಸು ಇಲ್ಲಿ ಅಥವಾ ಅಲ್ಲಿರುವುದು, ನಾವು ಮಾನಸಿಕ ಸಮತಲವನ್ನು ತಲುಪಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಈಗ ನಮ್ಮ ಹೋರಾಟ ದೇಹದೊಂದಿಗೆ. ಯಾವಾಗ ಒಬ್ಬ ವ್ಯಕ್ತಿಯು ಭಂಗಿಯಲ್ಲಿ ಪರಿಪೂರ್ಣ ಸ್ಥಿರತೆಯನ್ನು ಪಡೆಯುತ್ತಾನೆ, ಮತ್ತು ನಂತರ ಒಬ್ಬನೇ ಮನಸ್ಸಿನೊಂದಿಗೆ ಹೋರಾಡಲು ಪ್ರಾರಂಭಿಸುತ್ತಾನೆ. ಆಸನ (ಭಂಗಿ) ವಶಪಡಿಸಿಕೊಂಡ ನಂತರ, ಒಬ್ಬರ ಅಂಗಗಳು ಚಲನರಹಿತವಾಗಿರುತ್ತವೆ ಮತ್ತು ಒಬ್ಬರು ಇಷ್ಟಪಡುವಷ್ಟು ಕಾಲ ಕುಳಿತುಕೊಳ್ಳಬಹುದು. ಕುಳಿತುಕೊಳ್ಳುವಲ್ಲಿ ಸುಲಭವಾದ ಭಂಗಿಯನ್ನು ತೆಗೆದುಕೊಳ್ಳಿ. ಮೂರು ಭಾಗಗಳನ್ನು ನೇರಗೊಳಿಸಿ-ಪಕ್ಕೆಲುಬುಗಳು, ಭುಜಗಳು ಮತ್ತು ತಲೆ-ಬೆನ್ನುಮೂಳೆಯನ್ನು ಮುಕ್ತವಾಗಿ ಮತ್ತು ನೇರವಾಗಿ ಬಿಟ್ಟುಬಿಡಿ, ಹಿಂದಕ್ಕೆ ಅಥವಾ ಮುಂದಕ್ಕೆ ವಾಲಬೇಡಿ. ನಂತರ ಮಾನಸಿಕವಾಗಿ ದೇಹವನ್ನು ಭಾಗದಿಂದ ಭಾಗವಾಗಿ ಪರಿಪೂರ್ಣವಾಗಿ ಹಿಡಿದುಕೊಳ್ಳಿ. ನಂತರ ಪ್ರಪಂಚದಾದ್ಯಂತ ಪ್ರೀತಿಯ ಪ್ರವಾಹವನ್ನು ಕಳುಹಿಸಿ; ನಂತರ ಜ್ಞಾನೋದಯಕ್ಕಾಗಿ ಪ್ರಾರ್ಥಿಸಿ. ಮತ್ತು ಕೊನೆಯದಾಗಿ, ನಿಮ್ಮ ಮನಸ್ಸನ್ನು ನಿಮ್ಮ ಉಸಿರಿಗೆ ಸೇರಿಸಿ ಮತ್ತು ಕ್ರಮೇಣ ಅದರ ಚಲನೆಗಳ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸುವ ಶಕ್ತಿಯನ್ನು ಪಡೆದುಕೊಳ್ಳಿ”.

            “ಕುಂಡಲಿನಿಯ ಪ್ರಚೋದನೆಯು ಸ್ವಯಂ ಜ್ಞಾನ ಅಥವಾ ಸ್ವಯಂ ಸಾಕ್ಷಾತ್ಕಾರಕ್ಕೆ ಏಕೈಕ ಮಾರ್ಗವಾಗಿದೆ ಮತ್ತು ಪ್ರಾಣಾಯಾಮವನ್ನು ಪರಿಗಣಿಸಲಾಗುತ್ತದೆ ಅದನ್ನು ಸಾಧಿಸುವ ಸಾಧನಗಳಲ್ಲಿ ಒಂದಾಗಿದೆ”.   

ಶ್ವೇತಾಶ್ವತರ ಉಪನಿಷತ್ತು ಹೇಳುತ್ತದೆ: ಎಲ್ಲಾ ವಸ್ತುಗಳ ಸೃಷ್ಟಿಕರ್ತ, ಸ್ವಯಂ ಪ್ರಕಾಶಕ ಮತ್ತು ಸರ್ವವ್ಯಾಪಿ, ಅವನು ಯಾವಾಗಲೂ ಮನುಷ್ಯರ ಹೃದಯದಲ್ಲಿ ವಾಸಿಸುತ್ತಾನೆ. ನಕಾರಾತ್ಮಕ ಬೋಧನೆಗಳು, ತಾರತಮ್ಯ ಬುದ್ಧಿವಂತಿಕೆ ಮತ್ತು ಪ್ರತಿಬಿಂಬದ ಆಧಾರದ ಮೇಲೆ ಏಕತೆಯ ಜ್ಞಾನದಿಂದ ಅವನು ಬಹಿರಂಗಗೊಳ್ಳುತ್ತಾನೆ. ಆತನನ್ನು ತಿಳಿದವರು ಅಮರರಾಗುತ್ತಾರೆ.... ಅವನ ರೂಪ ದೃಷ್ಟಿಯ ವಸ್ತುವಲ್ಲ; ಯಾರೂ ಅವನನ್ನು ಕಣ್ಣುಗಳಿಂದ ನೋಡುವುದಿಲ್ಲ. ಶುದ್ಧ ಬುದ್ಧಿ ಮತ್ತು ಪ್ರತಿಬಿಂಬದ ಆಧಾರದ ಮೇಲೆ ಏಕತೆಯ ಜ್ಞಾನದ ಮೂಲಕ, ಅವರು ಹೃದಯದಲ್ಲಿ ನೆಲೆಸಿದ್ದಾರೆ ಎಂದು ಅರಿತುಕೊಳ್ಳುತ್ತಾರೆ.

ಶ್ರೀ ರಾಮಕೃಷ್ಣರ ಅಗ್ರಗಣ್ಯ ಶಿಷ್ಯರಲ್ಲಿ ಒಬ್ಬರಾದ ಸ್ವಾಮಿ ಬ್ರಹ್ಮಾನಂದರು ಹೇಳುತ್ತಾರೆ: "ಬ್ರಹ್ಮನ್ ಪಾಲಿಸಬೇಕಾದ ಕೆಲವು ನಿಯಮಗಳಿವೆ. ಅವರು ರೋಮಾಂಚಕಾರಿ ಆಹಾರ, ಅತಿಯಾದ ನಿದ್ರೆ, ಅತಿಯಾದ ವ್ಯಾಯಾಮ, ಸೋಮಾರಿತನ, ಕೆಟ್ಟ ಸಹವಾಸ ಮತ್ತು ಕೆಟ್ಟ ಸಂಭಾಷಣೆಗಳನ್ನು ತಪ್ಪಿಸಬೇಕು." ಸಂಯಮವನ್ನು ಅಭ್ಯಾಸ ಮಾಡಲು ಬಯಸುವವರು ಆರೋಗ್ಯಕರ, ಶುದ್ಧ, ಗಣನೀಯ, ಸಮ್ಮತಿಸುವ ಮತ್ತು ಶಕ್ತಿಯನ್ನು ನೀಡುವ ಆಹಾರವನ್ನು ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ. ಅವನು ತನ್ನ ಹೊಟ್ಟೆಯ ಅರ್ಧಭಾಗವನ್ನು ಆಹಾರದಿಂದ ಮತ್ತು ಕಾಲುಭಾಗವನ್ನು ನೀರಿನಿಂದ ತುಂಬಿಸಬೇಕು, ಕಾಲು ಭಾಗವನ್ನು ಗಾಳಿಯ ಮಾರ್ಗಕ್ಕಾಗಿ ಖಾಲಿ ಬಿಡಬೇಕು. ಯಾವುದೇ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ತಿನ್ನುವ ಬದಲು ದಿನವಿಡೀ ವಿವಿಧ ಸಮಯಗಳಲ್ಲಿ ಸಣ್ಣ ಪ್ರಮಾಣದಲ್ಲಿ ಪೌಷ್ಟಿಕಾಂಶದ ಆಹಾರವನ್ನು ಸೇವಿಸಬೇಕು. ಅವನ ಹಸಿವನ್ನು ನಿಯಂತ್ರಿಸಲು ಮತ್ತು ಸೂರ್ಯಾಸ್ತದ ನಂತರ ಬಹಳ ಕಡಿಮೆ ತಿನ್ನಲು ಕೇಳಲಾಗುತ್ತದೆ. ನಿದ್ರೆ ಮತ್ತು ವಿಶ್ರಾಂತಿಯಲ್ಲಿ ಅವನು ಮಿತವಾಗಿರಬೇಕು. ಧ್ಯಾನದ ಅಭ್ಯಾಸಕ್ಕೆ ರಾತ್ರಿಯ ಸಮಯವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ.

ಶಂಕರಾಚಾರ್ಯರು ಹೇಳುತ್ತಾರೆ: "ಯಾರ ಮನಸ್ಸು ಸಂಪೂರ್ಣವಾಗಿ ಪರಿಶುದ್ಧವಾಗಿದೆಯೋ ಅವರಿಗೆ ಇದು (ರಾಜ-ಯೋಗ) ಮಾತ್ರ ಪರಿಪೂರ್ಣತೆಯನ್ನು ಉಂಟುಮಾಡುತ್ತದೆ. ಮನಸ್ಸಿನ ಶುದ್ಧತೆ, ಮತ್ತೆ, ಗುರು ಮತ್ತು ದೇವರಿಗೆ ನಿಷ್ಠರಾಗಿರುವವರಿಗೆ ತ್ವರಿತವಾಗಿ ಪ್ರವೇಶಿಸಬಹುದು."

ಶ್ರೀ ಗೌಡಪಾದಾಚಾರ್ಯರು ರಚಿಸಿದ "ಸುಭಗೋದಯ ಸ್ತೋತ್ರಮ್‌' ಎಂಬ ಗ್ರಂಥ. ಈ ಗ್ರಂಥದಲ್ಲಿ ಸುಭಗ ಅಂದರೆ ಭಗವತಿ ದೇವಿ. ಉದಯ ಅಂದರೆ ಪ್ರಕಾಶನ. ಶ್ರೀಚಕ್ರ ಹಾಗೂ ಶರೀರದ ಕುಂಡಲಿನಿ ಚಕ್ರಗಳ ಜಾಗೃತಿಯ ವರ್ಣನೆಗಳಿವೆ. ಭಗವತಿ ದೇವಿಯ ಪ್ರಕಾಶನವಾದುದರಿಂದ “ಸುಭಗೋದಯ'. ಇನ್ನೊಂದು ಅರ್ಥದಲ್ಲಿ ನೋಡಿದರೆ, ಸುಭಗ ಅಂದರೆ ಕುಂಡಲಿನಿ, ಉದಯ ಅಂದರೆ ಜಾಗೃತಿ. ಕುಂಡಲಿನಿಯನ್ನು ಜಾಗೃತಗೊಳಿಸುವುದೇ  ಸುಭಗೋದಯ. ಶ್ರೀ ಗೌಡಪಾದಾಚಾರ್ಯರು ಆಧ್ಯಾತ್ಮ ಸಾಧಕರಿಗೆ ಧ್ಯಾನ ಸುಲಭವಾಗಲು ರಚಿಸಿದ ಗ್ರಂಥ "ಸುಭಗೋದಯ ಸ್ತೋತ್ರಮ್‌' ಹಾಗೂ ಜಗದ್ಗುರು ಶ್ರೀ ಶಂಕರಾಚಾರ್ಯರು "ಸೌಂದರ್ಯ ಲಹರಿ' ಎಂಬ ಗ್ರಂಥ ರಚಿಸಿ ಶ್ರೀಚಕ್ರೋಪಾಸನೆಯನ್ನು ವಿಸ್ತಾರವಾಗಿ ವರ್ಣಿಸಿದ್ದಾರೆ. ವಿದ್ಯಾಧಿದೇವತೆಯಾದ 'ಸರಸ್ಪತೀ' ದೇವಿಯನ್ನು ಶ್ರೀ ಶಂಕರಾಚಾರ್ಯರು ಶಾರದಾ ದೇವಿಯ ರೂಪದಲ್ಲಿ ಶೃಂಗೇರಿಯಲ್ಲಿ ಪ್ರತಿಷ್ಠಾಪಿಸಿದರು. ಈ 'ಶಾರದಾ' ದೇವಿಯನ್ನು "ಆದಿಶಕ್ತಿ' ಪಾರ್ವತಿಯಲ್ಲಿ ಅಂತರ್ಭಾವ-ಗೊಳಿಸಿರುವುದನ್ನು ನಾವು "ಸೌಂದರ್ಯ ಲಹರೀ' ಸ್ತೋತ್ರದಲ್ಲಿ ಕಾಣುತ್ತೇವೆ. ಮಾನವನ ದೇಹ ಪಂಚಭೂತಗಳಿಂದ ಸೃಷ್ಟಿಯಾದದ್ದು ಎಂದು ತಾನೆ ಹೇಳುವುದು. ಇದು ಪಂಚಭೂತಾತ್ಮಕವಾದ ದೇಹ. ಪೃಥ್ವಿ, ಅಪ್‌, ಅಗ್ನಿ, ವಾಯು ಮತ್ತು ಆಕಾಶ. ಇವೇ ಪಂಚಭೂತಗಳು. ಈ "ಭೂತ'ಗಳನ್ನು ದೇಹದಲ್ಲಿ ಪ್ರತಿಷ್ಠವಾಗಿರುವ 'ಚಕ್ರ'ಗಳಲ್ಲಿ ಗುರುತಿಸುತ್ತಾರೆ. ಪೃಥ್ವಿ ತತ್ತ್ವ ಮೂಲಾಧಾರ ಚಕ್ರದಲ್ಲೂ 'ಅಪ್‌'ತತ್ತ್ವ "ಸ್ವಾಧಿಷ್ಟಾನ' ಚಕ್ರದಲ್ಲೂ ಅಗ್ನಿ ತತ್ತ್ವ ಮಣಿಪೂರ ಚಕ್ರದಲ್ಲೂ ವಾಯುತತ್ವ್ವ "ಅನಾಹತ' ಚಕ್ರದಲ್ಲೂ ಆಕಾಶ ತತ್ತ್ವ ವಿಶುದ್ಧ ಚಕ್ರದಲ್ಲೂ ಅಂತರ್ಗತವಾಗಿದೆಯೆಂದು ವಿವರಿಸಲಾಗಿದೆ. “ಪಂಚ-ಭೂತಾತ್ಮಕವಾದ ದೇಹದಲ್ಲಿ ದಿವ್ಯಶಕ್ತಿ ಸುಪ್ತವಾಗಿದೆ'. ಇವುಗಳನಂತರ ಇನ್ನೊಂದು ಚಕ್ರವಿದೆ. ಅದು ಆಜ್ಞಾಚಕ್ರ. ಇದು ಚಂದ್ರನಂತೆ ಶೀತಲವಾದ ಕಾಂತಿಯುಳ್ಳದ್ದು. ಇದು ಹುಬ್ಬುಗಳ ನಡುವೆ ಪ್ರತಿಷ್ಠಿತವಾಗಿದೆ. ಆರಾಧಕ ತನ್ನ ಆರಾಧ್ಯ ದೇವತೆಯ ರೂಪವನ್ನು ಚರ್ಮ ಚಕ್ಷಸ್ಸುವಿನಿಂದ ನೋಡುವಂತೆ ನೋಡಬಲ್ಲನು. ಅಲ್ಲಿಂದ ಮುಂದೆ ಸಹಸ್ರಾರ ಚಕ್ರ. ಇದು ಸಹಸ್ರದಳದ ಪದ್ಮ. ಮೂಲ ಶಕ್ತಿಯು ಎಲ್ಲ ಪದ್ಮಗಳನ್ನು ಸ್ಪರ್ಶಿಸಿ, ಬೆಳಕು ಮೊಗ್ಗನ್ನು ಅರಳಿಸುವಂತೆ ಅರಳಿಸುತ್ತದೆ. ಅನಂತರ ಸಹಸ್ರಾರದಲ್ಲಿನ ಶಿವನ ಸಾಯುಜ್ಯವನ್ನು ಪಡೆಯುತ್ತದೆ. ಇದು ಶಿವಶಕ್ತಿ ಸಂಗಮ. ಆಗ ಮಾನವ ನಾಮ, ರೂಪ ಪ್ರಪಂಚವನ್ನು ದಾಟಿ ಅನಿರ್ವಚನೀಯವಾದ ಅವ್ಯಕ್ತ ಮಧುರವಾದ ಆನಂದವನ್ನು ಅನುಭವಿಸುತ್ತಾನೆ. 'ಶ್ರೀ ಚಕ್ರ' ದ ಆರಾಧನೆಯ ಸಾಧನೆಯ ಉದ್ದೇಶವೂ ಈ ಆನಂದಾನು ಭೂತಿಯ ಗಮ್ಯವೇ ಆಗಿರುವುದರಿಂದ ವಿಗ್ರಹ ರೂಪದ ಭಗವಂತನಲ್ಲಿಯೂ ಈ “ಚಕ್ರ' ಕಲ್ಪನೆಯೂ ಅಂತರ್ಗತವಾಗಿರುವುದರಿಂದ "ವಿಗ್ರಹ' ರೂಪದ 'ಶಿವ ಶಕ್ತಿ'ಯ ಆರಾಧನೆಯೇ ಸಾಧಕನ ಸಾಧನೆಯ ಶಿಖರವಾಗಿ "ಮುಕ್ತಿ' ಫಲ ಲಭಿಸುತ್ತದೆ.

ದೇಹದ ಮೂಲದಲ್ಲಿ ಈ 'ದಿವ್ಯಶಕ್ತಿ' ನಿದ್ರಿಸುತ್ತಿರುವ ಸರ್ಪದಂತೆ ಸುತ್ತಿಕೊಂಡು ಮಲಗಿದೆ. ಆಗ ಅದು ಇಲ್ಲಿ ಜಡವಸ್ತು. ಇದನ್ನೇ ಶಾಸ್ತ್ರಜ್ಞರು 'ಕುಂಡಲಿನಿ'ಎಂದು ಕರೆಯುತ್ತಾರೆ. ಇದು ಮಲಗಿರುವ ಜಾಗಕ್ಕೆ "ಮೂಲಾಧಾರ' ಎಂದು ಹೆಸರು. ಇದರ ಸ್ಥಾನ ಬೆನ್ನು ಮೂಳೆಯ ಬುಡ. ಇದನ್ನು ಅರಿಯಲು ಸಾಧಕ ಆರಾಧನೆಯ (ಉಸಿರಾಟ ಧ್ಯಾನದ) ಮೂಲಕ ಯತ್ನಿಸುತ್ತಾನೆ. ಈ ಕುಂಡಲಿಯನ್ನು ಎಚ್ಚರಿಸಿ ಊರ್ಧ್ವಮುಖವಾಗಿ ಚಲಿಸುವಂತೆ ಮಾಡಲು ಯತ್ನಿಸುವುದೇ ಸಾಧಕನ ಕಾರ್ಯ. "ಇದು ಎಚ್ಚರಿಕೆಗೊಂಡು ಮೂಲಾಧಾರದಿಂದ ಬೆನ್ನು ಮೂಳೆಯ ಮುಖಾಂತರ ಮೆದುಳಿನವರೆಗೆ ಹರಿದು ಹೋಗಬೇಕು. ಈ ಹರಿಯುವಿಕೆ ಸುಷುಮ್ನಾ ನಾಡಿಯ ಮೂಲಕ ಮೆದುಳನ್ನು ತಲಪಬೇಕು. ಇದರ ಯತ್ನವೇ ಪ್ರಾಣಾಯಾಮ. ಇದು ಊರ್ಧ್ವಮುಖವಾಗಿ. ಚಲಿಸುವಾಗ ದೇಹದ ಚೈತನ್ಯದ ಕೇಂದ್ರಗಳಾದ ಚಕ್ರಗಳನ್ನು ಅಥವಾ ಪದ್ಮಗಳನ್ನು ಸ್ಪರ್ಶಿಸಿ ಅವುಗಳನ್ನು ಜಾಗ್ರತಗೊಳಿಸುತ್ತದೆ.

ಶಾಕ್ತರು ಹಾಗೂ ವಚನಕಾರರ ಪ್ರಕಾರ, ಪರಶಿವನೇ ಚೈತನ್ಯ, ಪ್ರಕೃತಿಯೇ ಅವನ ಶಕ್ತಿ. ಪರಶಿವನಿಲ್ಲದೆ ಶಕ್ತಿಯಿಲ್ಲ, ಶಕ್ತಿಯಲ್ಲದೆ ಪರಶಿವನಿಲ್ಲ. ಚೈತನ್ಯ ಮತ್ತು ಶಕ್ತಿ ಎರಡು ಪ್ರತ್ಯೇಕ ವಸ್ತುಗಳಾಗಿರದೆ, ಒಂದೇ ವಸ್ತುವಿನ ಎರಡು ಗುಣಗಳಾಗಿವೆ. ಅಂದರೆ, ಪರಶಿವನ ಚಿತ್ತಿಗೆ ಚೈತನ್ಯವೆಂದೂ ಅವನ ಶಕ್ತಿಗೆ ಮಾಯೆ ಅಥವಾ ಪ್ರಕೃತಿಯೆಂದೂ ಹೆಸರು. ಈ ದೃಷ್ಟಿಯಿಂದ ನೋಡಿದಾಗ, ಇರುವುದೆಲ್ಲಾ ಚೈತನ್ಯಮಯವಾದ ಶಕ್ತಿಯ ವಿವಿಧ ರೂಪುಗಳು. ಅಧ್ಯಯನದ ದೃಷ್ಟಿಯಿಂದ ನಾವು ಇಡೀ ಸತ್ಯವನ್ನು (ಇರುವುದೆಲ್ಲವನ್ನೂ) ಎರಡು ಭಾಗ ಮಾಡಿ, ಒಂದನ್ನು ಬ್ರಹ್ಮಾಂಡವೆಂದೂ, ಮತ್ತೊಂದನ್ನು ಪಿಂಡಾಂಡವೆಂದೂ ಕರೆಯಬಹುದು. ಬ್ರಹ್ಮಾಂಡ ಅಥವಾ ಮನುಷ್ಯನ ಹೊರಗಿರುವ ಜಗತ್ತು ಶಕ್ತಿಯ ದೊಡ್ಡ ಅಂಶವಾದರೆ ಪಿಂಡಾಡವು ಮನುಷ್ಯನಾಗಿ ಶಕ್ತಿಯ ಸಣ್ಣ ಅಂಶವಾಗಿದೆ. ಬ್ರಹ್ಮಾಂಡದಲ್ಲಿ ಚೈತನ್ಯ (ಪರಶಿವ) ಅವ್ಯಕ್ತವಾಗಿ ಅಡಗಿರುವಂತೆ ಪಿಂಡಾಡದಲ್ಲಿ ಅಡಗಿದ್ದಾನೆ. ಇವೆರಡರಲ್ಲಿರುವ ಪರಶಿವಯೋಗಿಗಳ ಅಂತಶ್ಚಕ್ಷು ಅಥವಾ ಜ್ಞಾನ ಚಕ್ಷುವಿಗೆ ಮಾತ್ರ ಗೋಚರವಾಗುತ್ತಾನೆ. ಆದರೆ ಯೋಗಿಗಳು ಅಂತಶ್ಚಕ್ಷುವಿನಿಂದ ಪರಶಿವನನ್ನು ಕಾಣಬೇಕಾದರೆ, ಅವರು ತಮ್ಮ ಪಿಂಡಾಂಡವನ್ನು ಆಧ್ಯಾತ್ಮಿಕ ಶಿಕ್ಷಣಕ್ಕೊಳಪಡಿಸಬೇಕು, ಹಾಗೂ ಆ ಅಂತಶ್ಚಕ್ಷುಗಳನ್ನು ಪಡೆಯಬೇಕು. ಈ ಶಿಕ್ಷಣಕ್ಕೆ ಕುಂಡಲಿನಿ ಯೋಗವೆನ್ನುತ್ತಾರೆ. ವಚನಕಾರರು ಕುಂಡಲಿನಿ ಯೋಗದ ಬಹಳಷ್ಟು  ಅಂಶಗಳನ್ನು ಒಪ್ಪಿಕೊಂಡಿದ್ದಾರೆ.

ಪುರಂದರದಾಸರು ಹೇಳುವಂತೆ 'ಹನುಮನ ಮತವೇ ಹರಿಯಮತ'. ಪ್ರಾಣದೇವರ ಮುಖಾಂತರ ಹೋದರೆ ಮಾತ್ರವೇ ಶ್ರೀಹರಿ ದೊರಕುತ್ತಾನೆ, ಇಲ್ಲದಿದ್ದರೆ ದೊರಕವುದಿಲ್ಲವೆಂದು ಅನೇಕ ನಿದರ್ಶನ ಕೊಟ್ಟು ತೋರಿಸಿದ್ದಾರೆ. ವಾಯುಪುರಾಣವು ಆಚಮನ ನಡೆಸದೆ ಯಾವ ಕ್ರಿಯೆಯನ್ನು ನಡೆಸಿದರೂ ಆ ಕ್ರಿಯೆ ಫಲದಾಯಕವಾಗದೆಂದು ತಿಳಿಸಿದೆ. ಬೃಹದ್ದಬ್ರಹ್ಮಸಂಹಿತೆಯು ಕರ್ಮಾರಂಭ ಹಾಗೂ ಕರ್ಮದ ಕೊನೆಯಲ್ಲಿಯೂ ಆಚಮನವನ್ನು ವಿಧಿಸಿದೆ. ಮಿಂದು ಬಂದ ಬಳಿಕ ಬೆಚ್ಚನೆಯ ಬಟ್ಟೆ ತೊಟ್ಟ ಮೇಲೂ ಆಚಮನ ವಿದಿಸಿದೆ. ಸ್ನಾನ ಬಾಹ್ಯಶುದ್ಧಿಯನ್ನು ನೀಡಿದರೆ ಆಂತರಶುದ್ದಿಗೆ ಮಂತ್ರರೂಪವಾದ ನೀರಿನಿಂದ ನಡೆಸಲ್ಪಡುವ ಆಚಮನೆಯೇ ಮೂಲ ಎನ್ನುತ್ತಾರೆ. ಬಲಕಿವಿಯಲ್ಲಿ ತೀರ್ಥಾಭಿಮಾನಿ ದೇವತೆಗಳ ಸನ್ನಿಧಾನವಿದ್ದು, ಕಿವಿಯ ಸ್ಪರ್ಶದಿಂದ ಪಾವಿತ್ರ್ಯವನ್ನು ಪಡೆಯಬಹುದಾಗಿದೆ ಎಂದು ಪರಾಶರಸ್ಮೃತಿ ಹೇಳಿದೆ. ಬಲಕೈಯ ಹೆಬ್ಬೆರಳ ತುದಿ ಬಲಕೈಯ ನಡುಬೆರಳ ನಡುಗಂಟಿಗೆ ತಾಗುವಂತೆ ಅಂಗೈಮಾಡಿ ಆಚಮನ ಮಾಡಬೇಕು. ಇದು ನೋಡಲು ದನದ ಕಿವಿಯಂತೆ ಕಾಣುವುದರಿಂದ ಇದನ್ನು ಗೋಕರ್ಣಮುದ್ರೆ ಎಂದು ಕರೆದಿರುವರು. ಗೋಕರ್ಣಾಕೃತಿಯ ಅಂಗೈಯಿಂದ ಆಚಮನವನ್ನು ನಡೆಸಬೇಕು,

ವೈದಿಕ ಬೋಧನೆಗಳಲ್ಲಿ, ಹನ್ನೆರಡು ಅಂಗಗಳ ಸ್ಪರ್ಶ ಅಂದರೆ ಮಲ ಸುರಿಸುವ ದ್ವಾರಗಳನ್ನು ನೀರಿನಿಂದ ಪ್ರೋಕ್ಷಿಸಿ ತೊಳೆಯುವ ಕ್ರಮ ಎಂಬ ವಿಶಿಷ್ಟ ಚಿಂತನೆಯನ್ನು ಕಾಣಬಹುದು. ಅದರಲ್ಲಿಯೂ ಮಲಮೂತ್ರ ವಿಸರ್ಜನ ದ್ವಾರಗಳನ್ನು ಹೊರತುಪಡಿಸಿ ತಲೆಯಲ್ಲಿರುವ ಉಳಿದೇಳು ದ್ವಾರಗಳನ್ನು (ಬಾಯಿ, ಮೂಗಿನ ಹೊರಳೆಗಳೆರಡು, ಕಣ್ಣೆರಡು, ಕಿವಿಯೆರೆಡು) ನೀರು ಅದ್ದಿದ ಬೆರಳುಗಳಿಂದ ಮುಟ್ಟಬೇಕು. ನಾಭಿ ಹಾಗೂ ನೆತ್ತಿ ಇನ್ನೆರಡು ರಂಧ್ರಗಳಾಗಿವೆ. ಇವನ್ನೂ ಸ್ಪರ್ಶಿಸಬೇಕು. ಹೆಬ್ಬೆರಳು ಮತ್ತು ಉಂಗುರಬೆರಳು ಜೋಡಿಸಿದ ಬೆರಳ ತುದಿಯಿಂದ ಎರಡು ಕಣ್ಣುಗಳನ್ನು ಎರಡು ಬಾರಿ ಸೂರ್ಯಾಯ ನಮಃ ಎನ್ನುತ್ತಾ ಪ್ರಪ್ರತ್ಯೇಕವಾಗಿ ಮುಟ್ಟಬೇಕು. ಹೀಗೆಯೇ ಹೆಬ್ಬೆರಳ ಜತೆ ತೋರುಬೆರಳಿನಿಂದ ಮೂಗಿನ ಹೊರಳೆಗಳನ್ನು ವಾಯವೇ ನಮಃ ಎನ್ನುತ್ತ ಮುಟ್ಟಬೇಕು. ಹೆಬ್ಬೆರಳ ಜೊತೆ ಕಿರುಬೆರಳಿನಿಂದ ಕಿವಿಗಳೆರಡನ್ನು ದಿಗ್ಭ್ಯೋ ನಮಃ ಎನ್ನುತ್ತ ಮುಟ್ಟಬೇಕು. ಎಡ ಅಂಗೈಯನ್ನು ಬಲಕೈಯ ಎಲ್ಲ ಬೆರಳುಗಳಿಂದ ವಸಿಷ್ಠಾಯ ನಮಃ ಎನ್ನುತ್ತ ನೀರಿನಿಂದ ಒರೆಸಬೇಕು. ಶ್ರಿಯೈ ನಮಃ ಎನ್ನುತ್ತ ನೆತ್ತಿಯನ್ನೂ ಹೆಬ್ಬೆರಳು ನಡುಬೆರಳುಗಳಿಂದ ಮುಟ್ಟಬೇಕು, ಎಲ್ಲ ಬೆರಳುಗಳ ತುದಿಯಿಂದ ಪರಾತ್ಮನೇ ನಮಃ ಎನ್ನುತ್ತ ಎದೆಯನ್ನು ಮುಟ್ಟಬೇಕು. ಬೆರಳ ತುದಿಗಳಿಂದ ಮುಟ್ಟುವ ಈ ತಂತ್ರಗಾರಿಕೆ ಪಂಚಪ್ರಾಣಮುದ್ರೆಗಳ ವಿನ್ಯಾಸದಲ್ಲಿದೆ. ಬೆರಳ ತುದಿ ದೇವತೀರ್ಥವಾದ್ದರಿಂದ ದೇವರಿಗೆ ನೀಡುವ ಅರ್ಘ್ಯವನ್ನು ಬೆರಳ ತುದಿಯಿಂದಲೇ ನೀರು ಕೆಳಗೆ ಹರಿಯುವಂತೆ ನೀಡಬೇಕು. ಭವಿಷ್ಯಪುರಾಣದಲ್ಲಿ ಅಂಗೈಯಲ್ಲಿನ ರೇಖೆಗಳನ್ನು ಗಂಗಾದಿ ತೀರ್ಥ ಗಳೆಂದು ಹೇಳಲಾಗಿದೆ.

ಹೋಮಹವನಗಳಿಗಿಂತ ಜಪವು ಶ್ರೇಷ್ಠ ಜಪಕ್ಕಿಂತ ಜ್ಞಾನಸಂಪಾದನೆ ಮಿಗಿಲು. ಶ್ರವಣ-ಮನನಗಳಿಗಿಂತ ಹೆಚ್ಚು ಶ್ರೇಷ್ಠ ಧ್ಯಾನವೆಂದು ಲಿಂಗಪುರಾಣ ಹೇಳಿದೆ. ಮಹಾಭಾರತವು ಜಪ ವಿಷಯದಲ್ಲಿ ಹೇಳಿದ ಮಾತಿದು ಅತಿ ಮಹತ್ವದ್ದೆನಿಸಿದೆ “ದರ್ಭೆಯಲ್ಲಿ ಎಲ್ಲ ದೇವತೆಗಳ ಸನ್ನಿಧಾನವೂ ಇದೆ. ಮುಖ್ಯವಾಗಿ ಬ್ರಹ್ಮವಿಷ್ಣುರುದ್ರರ ವಿಶೇಷ ಸನ್ನಿಧಾನದಿಂದ ಮನಸ್ಸಿನಲ್ಲಿ ಚಿಂತನೆ ದೃಢವಾಗಿ ಭಗವಧ್ಯಾನಕ್ಕೆ, ಭಗವದ್ದರ್ಶನಕ್ಕೆ ದರ್ಭೆ ಅಂತರಂಗದ ಸಾಧನೆಗೆ ಬಹು ಉಪಯುಕ್ತವಾಗಿದೆ.” ದರ್ಭೆಯನ್ನು ಪೂರ್ವಕ್ಕೆ ತುದಿ ಬರುವಂತೆ ಹಾಸಬೇಕೆಂದು ಕೂರ್ಮಪುರಾಣದಲ್ಲಿ ಹೇಳಲಾಗಿದೆ. ಮಂತ್ರ ಜಪಿಸುವ ಮೊದಲು ಮಂತ್ರದಲ್ಲಿನ ಅಕ್ಷರಗಳನ್ನು ದೇಹದಲ್ಲಿ ಗುರುತಿಸಿಕೊಳ್ಳಬೇಕು. ದೇಹ ಮಂತ್ರಮಯವಾಗಬೇಕು. ಮಾನವನ ಶರೀರದಲ್ಲಿನ 5 ಬೆರಳುಗಳು 5 ಭೂತಗಳನ್ನು ಸೂಚಿಸುವುದಕ್ಕಿಂತ ಹೆಚ್ಚಿಗೆ 5 ದೇವತೆಗಳ ಸನ್ನಿಧಾನವನ್ನು ವ್ಯಾಸರು ಭವಿಷ್ಯ ಪುರಾಣದಲ್ಲಿ ಬಹಿರಂಗಪಡಿಸಿದ್ದಾರೆ. ಇದರಿಂದ ಸಂಖ್ಯೆಯಲ್ಲಿ ಇತರ ಪ್ರಾಣಿಗಳಲ್ಲಿನ ಬೆರಳುಗಳಿಗಿಂತ ಮನುಷ್ಯ ಶರೀರದ ಬೆರಳುಗಳ ವೈಶಿಷ್ಟ್ಯ ಎದ್ದುಕಾಣುವುದು. ಇದರಿಂದ ಮುದ್ರೆಗಳ ಪ್ರಾಮುಖ್ಯ ಸಿದ್ಧಿಸುವುದು. ಮಂತ್ರಜಪದ ಆರಂಭದಲ್ಲಿ ದಕ್ಷಿಣದಲ್ಲಿ ರೇಚಕ ವಾಮದಲ್ಲಿ ಪೂರಕವಾದರೆ ಜಪಾನಂತರದಲ್ಲಿ ದಕ್ಷಿಣದಲ್ಲಿ ಪೂರಕ ವಾಮದಲ್ಲಿ ರೇಚಕ ಎನ್ನುವುದನ್ನು ಈಶ್ವರಗೀತೆ, ದೇವಜಾನೀಯ ತಿಳಿಸಿದೆ.

ನಾದ ಯೋಗದೊಂದಿಗೆ ಮಂತ್ರ ಯೋಗದ ಸಾಧನವು ಕುಂಡಲಿನಿಯ ಜಾಗೃತಿ ಮತ್ತು ಓಂಕಾರದ ಮೂಲಕ ಬ್ರಹ್ಮದ ಸಾಕ್ಷಾತ್ಕಾರದ ಆಧ್ಯಾತ್ಮಿಕ ಪ್ರಯೋಗಗಳ ಅವಿಭಾಜ್ಯ ಅಂಗಗಳಾಗಿವೆ.

            ಗೌತಮಿಯ ತಂತ್ರದ ಪ್ರಕಾರ, ಆಹಾರ-ದೋಷವು ಮಂತ್ರ-ಸಿದ್ಧಿಗೆ ಅಡ್ಡಿಯಾಗಿದೆ. ಆದ್ದರಿಂದ, ಮಂತ್ರಗಳನ್ನು ಸಾಧಿಸಿದ ಸಾಧಕರು ದಿನಕ್ಕೆ ಒಮ್ಮೆ ಸಂಜೆ ಅಥವಾ ಪ್ರದೋಷಕಾಲದಲ್ಲಿ ಪ್ರಾರ್ಥಿಸಬೇಕು. ಹವಿಷ್ಯನ್ನ ತಿನ್ನಬೇಕು. ಹಸುವಿನ ಹಾಲು, ಮೊಸರು, ತುಪ್ಪ, ಬೆಣ್ಣೆ, ಸಕ್ಕರೆ, ಎಳ್ಳು, ಕೀರು, ಹೆಸರು ಬೇಳೆ, ಗೆಣಸು, ತೆಂಗಿನಕಾಯಿ, ಬಾಳೆಹಣ್ಣು, ಹಣ್ಣುಗಳು, ಬೀಜಗಳು, ಆಮ್ಲಾ, ಧಾನ್ಯಗಳು, ಸೇಂಧಾ ಉಪ್ಪು ಮತ್ತು ಎಣ್ಣೆಯಲ್ಲಿ ಬೇಯಿಸದ ವಸ್ತುಗಳನ್ನು ಹವಿಷ್ಯನ್ನ ಎಂದು ಕರೆಯಲಾಗುತ್ತದೆ.

            ವಾಲ್ಮೀಕಿಯು ಕಾಡಿನಲ್ಲೊಮ್ಮೆ ಸಪ್ತ ಖಷಿಗಳನ್ನು ಕಂಡು ಅವರಿಂದ ರಾಮಮಂತ್ರ ಉಪದೇಶ ಪಡೆದ. ಮಂತ್ರ ಜಪಿಸುತ್ತಾ ಮೈಮರೆತಾಗ ಮೈಮೇಲೆ ಹುತ್ತ ಬೆಳೆದದ್ದನ್ನು ನೋಡಿದ ಸಪ್ತ ಋಷಿಗಳು ಇವರನ್ನು ವಾಲ್ಮೀಕಿ ಎಂದು ಕರೆದರು. ಒಮ್ಮೆ ಆನಂದವಾಗಿದ್ದ ಕ್ರೌಂಚ ಪಕ್ಷಿಗಳಲ್ಲಿಯ ಗಂಡನ್ನು ಒಬ್ಬ ಬೇಡ ಕೊಂದುದನ್ನು ಕಂಡ ವಾಲ್ಮೀಕಿ ಶೋಕತಪ್ತನಾಗಿ ಶಪಿಸಿದ. ಶೋಕ ಶ್ಲೋಕವಾಗಿ ಬಂತು. ಚಿಂತಾಲೋಕದಲ್ಲಿ ಮುಳುಗಿದ ಇವನನ್ನು ಸಂತೈಸಿದ ಬ್ರಹ್ಮದೇವರು ರಾಮಾಯಣವನ್ನು ಬರೆಯಲು ಆದೇಶವಿತ್ತರು. ನಾರದರು ಸಾರರೂಪದಲ್ಲಿ ಹೇಳಿದುದನ್ನು ವಿಶದಪಡಿಸಿ ಏಳು ಕಾಂಡಗಳ ರಾಮಾಯಣವನ್ನು ಕಾವ್ಯಮಯ-ವಾಗಿ ರಚಿಸಿ ಆದಿಕವಿ ಎನ್ನಿಸಿದರು.

            ಏಳು ಎಂಬ ಸಂಖ್ಯೆ ಈ ಸಂಸಾರದಿಂದ ಎಬ್ಬಿಸುವಂತಹ ಏಳಾಗಿದೆ. ಪರೀಕ್ಷಿತ ಶುಕರಿಂದ ಏಳು ದಿನ ಭಾಗವತವನ್ನು ಕೇಳಿ ಉದ್ಧಾರನಾದ. ಭಗವಂತನನ್ನು ಕಾಣಲು ಬೇಕಾದ ದರ್ಶನ ಸಪ್ತಸದಾಗಮಗಳಿನಿಸಿದೆ ಚತುರ್ವೇದಗಳು, ಮಹಾಭಾರತ, ಪಂಚರಾತ್ರ, ಮೂಲರಾಮಾಯಣಗಳಲ್ಲಿ ತುಂಬಿದೆ. ಏಳು ಎಂದಾಗ ಜ್ಞಾಪಕಕ್ಕೆ ಬರುವುದು ಮಹಾಜ್ಞಾನಿಗಳಾದ ಸಪ್ತಋಷಿಗಳು. ಇವರು ಮಂತ್ರದೃಷ್ಟಾರರು - ಗೋತ್ರ ಪ್ರವರ್ತಕರು. ಸರಿಗಮಪದನಿ ಎಂಬ ಸಂಗೀತ ಶಾಸ್ತ್ರದ ಸ್ವರಗಳು. ಬ್ರಹ್ಮಾಂಡದ ಮೇಲಿನ ಕೆಳಗಿನ ಸಪ್ತಲೋಕಗಳು. ಕರ್ಮಾನುಸಾರವಾಗಿ ಭಗವಂತ ಜೀವರನ್ನು ಈ ಲೋಕಗಳಲ್ಲಿಡುವ. ಭೂಲೋಕವನ್ನು ಆವರಿಸಿಕೊಂಡು ಸಪ್ತಸಾಗರಗಳಿವೆ. ಜೀವರು ತಮ್ಮ ಸಾಧನೆಗಳನ್ನು ಪೂರೈಸಿಕೊಳ್ಳಲು ಭಗವಂತ ಸಪ್ತಮಹಾಕ್ಷೇತ್ರಗಳನ್ನು ಸಪ್ತಮಹಾ ನದಿಗಳನ್ನು ಸೃಷ್ಟಿಸಿರುವ. ಸಪ್ತ ಚಿರಂಜೀವಿಗಳು ಎಲ್ಲರಿಗೂ ಮಾರ್ಗದರ್ಶಕರು. ಹೀಗೆ ಏಳು ಸಂಖ್ಯೆಯ ವಿಷಯಗಳು ಅನೇಕ ತೆರನಾಗಿ ಬಿಚ್ಚಿಕೊಳ್ಳುತ್ತದೆ. ಸಪ್ತಋಷಿಗಳು : ಅತ್ರಿ, ವಸಿಷ್ಯ ಕಶ್ಯಪ, ಗೌತಮ, ಭರದ್ವಾಜ, ವಿಶ್ವಾಮಿತ್ರ, ಜಮದಗ್ನಿ (ವೈವಸ್ವತಮನ್ಮಂತರಕ್ಕೆ). ಮರೀಚಿ, ಅತ್ತಿ, ಅಂಗಿರಸ, ಪುಲಸ್ಯ, ಪುನಹ, ಕ್ರತು, ವಸಿಷ್ಠ (ಸ್ವಾಯಂಭು ಮನ್ವಂತರಕ್ಕೆ). ಸಪ್ತಸಾಗರಗಳು : ಲವಣ, ಇಕ್ಷು, ಸುರಾ, ಘೃತ, ಕ್ಷೀರ, ದಧಿ, ಶುದ್ಧೋದಕ. ಸಪ್ತ ನದಿಗಳು - ಗಂಗಾ, ಯಮುನಾ, ಗೋದಾವರೀ, ಸರಸ್ವತೀ, ನರ್ಮದಾ, ಸಿಂಧು, ಕಾವೇರಿ. ಸಪ್ತ ಧಾತುಗಳು; ತ್ವಕ್‌, ಚರ್ಮ, ಮಾಂಸ, ರಕ್ತ ಮೇಧಸ್ಸು ಮಜ್ಜ ಅಸ್ಥಿ. ಸಪ್ತನಾಡಿಗಳು (ಅಧ್ಯಾತ್ಮ ಚಕ್ರಗಳು) : ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧಿ ಆಜ್ಞಾ, ಸಹಸ್ರಾರ. ಊರ್ದ್ವಲೋಕಗಳು : ಭೂಲೊಕ, ಭುವರ್ಲೋಕ, ಸುವರ್ಲೋಕ, ಮಹರ್ಲೋಕ, ಜನೋಲೋಕ, ತಪೋಲೋಕ, ಸತ್ಯಲೋಕ. ಅಧೋಲೋಕಗಳು : ಅತಲ, ವಿತಲ, ಸುತಲ, ತಲಾತಲ, ರಸಾತಲ, ಮಹಾತಲ, ಪಾತಾಲ. ರಾಮ-ರಾವಣರಿಗೆ ನಡೆದ ಮಹಾಯುದ್ಧ ಏಳು ದಿನಗಳು. ಸಪ್ತಪದಿ (ವಿವಾಹದಲ್ಲಿಯ ನೆಲೆ) : ಸ್ವಾಗತ, ಆಸನ, ಹಿತಭಾಷಣ, ಶುದ್ಧಾಹಾರನಿವೇದನೆ, ನೋಯಿಸದ ವರ್ತನೆ, ಹಿತೋಪದೇಶ, ಸೌಹಾರ್ದತೆ.

            ಪೂಜೆಗಳಲ್ಲಿ ನವವಿಧ ಇದೆ. ಅರ್ಚನ, ಮಂತ್ರ ಪಠನ, ಯಾಗ, ಯೋಗ, ನಾಮ, ಸಂಕೀರ್ತನ, ಸೇವಾ, ಚಿನ್ನಧಾರಣ, ಆರಾಧನ.

            ಕಾಲಜ್ಞಾನಿ ವೀರಬ್ರಹ್ಮೇಂದ್ರಸ್ವಾಮಿಗಳ ಬೋಧನೆಯಂತೆ ನಮ್ಮ ದೇಹ 96 ತತ್ವಗಳಿಂದ ಕೂಡಿದೆ, ಐದು ಪಂಚ ಭೂತಗಳು, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಹತ್ತು ರೀತಿಯ ವಿಷಯಗಳು, ಏಳು ಧಾತುಗಳಿಂದ (ಲೋಹ) ಕೂಡಿದೆ, ಹತ್ತು ನಾಡಿ (ಪಲ್ಸ್), ಎಂಟು ರಾಗಗಳು, ನಾಲ್ಕು ಅಂತಃಕರಣಗಳು, ಆರು ಶಾದೂರ್ಮ (ಹಸಿವು, ಆಸೆ, ವ್ಯಾಮೋಹ, ದುಃಖ, ವಯಸ್ಸಾಗುವುದು, ಸಾವು), ನರಗಳ ಮೂರು ಮಂಡಲ, ಮೂರು ಶಾಂತ ಚಲನೆಗಳು, ಮೂರು ಗುಣಗಳು, ಮೂರು ಅವಸ್ಥೆ, ಮೂರು ತಾಪತ್ರಯ, ಐದು ಕೋಶಗಳು, ಏಳು ಕಮಲದ ಚಕ್ರಗಳಿಂದ ಕೂಡಿದೆ. ಇಂತಹ ತತ್ವಗಳಿಂದ ಕೂಡಿರುವುದು ಜೀವಾತ್ಮವಾಗಿದೆ. ಈ ದೇಹದಲ್ಲಿ 33 ಕೋಟಿ ಸಂಧುಗಳು (ಪೋರ್ಸ್) ತುಂಬಿದೆ. 15 ಯಾರ್ಡ್ ಕರುಳು ಇದೆ, 206 ಮೂಳೆ 72 ಜಾಯಂಟ್ಸ್ ಇವೆ, 24 ತೊಲ ಹೃದಯ, 40 ತೊಲ ರಕ್ತ.   ಈ ಏಳು ಚಕ್ರಗಳಲ್ಲಿ ಪ್ರವಹಿಸುವ ವಾಯುವಿಗೆ ಪ್ರಾಣಂ ಎಂದು ಹೆಸರಿಸಿದ್ದಾರೆ. ದಶವಾಯು ಬಗ್ಗೆ ಹೇಳಿದ್ದಾರೆ, ಈ ಹತ್ತು ವಾಯುಗಳು ಗಾಂಧಾರ ನಾಡಿಯಲ್ಲಿ ಮತ್ತು ಇತರೆ ನಾಡಿಯಲ್ಲಿ ಪ್ರವಹಿಸುತ್ತವೆ. ಪ್ರಾಣವಾಯುವು ಇಡಾ ಮತ್ತು ಪಿಂಗಳ ನಾಡಿಯಲ್ಲಿ ಮೇಲಿಂದ ಕೆಳಕ್ಕೆ ಕೆಳಗಿಂದ ಮೇಲಕ್ಕೆ ಪ್ರವಹಿಸುತ್ತವೆ. ಇದರಲ್ಲಿ ನರಗಳು ಮೂಲಾಧಾರದಿಂದ ಆಜ್ಞಾ ಚಕ್ರದವರೆಗೆ ಮಾತ್ರ ಪ್ರವಹಿಸುತ್ತವೆ. ಆದರೆ ಸುಷುಮ್ನಾ ನಾಡಿಯು ಮೂಲಾಧಾರದಿಂದ ಸಹಸ್ರಾರದ ವರೆಗೆ ಎಲ್ಲಾ ಚಕ್ರಗಳಲ್ಲಿ ಪ್ರವಹಿಸುತ್ತವೆ. ಸಹಸ್ರಾರವನ್ನು ಬ್ರಹ್ಮರಂಧ್ರ ಎಂದೂ ಕರೆಯಲಾಗುತ್ತೆ. ಜೀವಾತ್ಮನು ಮೂಲಾಧಾರದಿಂದ ಆಗ್ನೇಯದವರೆಗೆ ಪ್ರವಹಿಸು-ತ್ತಿರುವಾಗ ಹಮ್ ಶಬ್ದವು ಮೂಲಾಧಾರದಲ್ಲೂ ಸ ಎಂಬ ಶಬ್ದವು ಅಜ್ಞೇಯದಲ್ಲೂ ಉಂಟಾಗುತ್ತದೆ. ಇಂತಹ ಹಂಸ ಜಪವು 21600 ಬಾರಿ ವಿವಿದ ಚಕ್ರಗಳಲ್ಲಿ ಉಂಟಾಗುತ್ತದೆ. ನಮ್ಮ ದೇಹದಲ್ಲಿಯೇ ಇರುವ ಮಹಾನ್ ಭಗವಂತನ ಉಪಸ್ಥಿತಿಯ ಬಗ್ಗೆ ಈ ಎಲ್ಲಾ ರಹಸ್ಯಗಳ ಅಜ್ಞಾನದಿಂದ, ಮಾನವರು 'ಸಾಲೋಕ್ಯ ಮುಕ್ತಿ' ಪಡೆಯಲು 'ಕಾಶಿ', 'ಗಯಾ', 'ಪ್ರಯಾಗ', 'ದ್ವಾರಿಕಾ' ರೀತಿಯ ಸ್ಥಳಗಳಿಗೆ ಭೇಟಿ ನೀಡಲು ಬಯಸುತ್ತಾರೆ. ಈ ಕನಸನ್ನು ಸಾಧಿಸಲು ಅವರು ಅನೇಕ ತೊಂದರೆಗಳಿಗೆ ಒಳಗಾಗುತ್ತಾರೆ ಮತ್ತು 'ಮಾಯಾ' (ಭ್ರಮೆ) ಅಡಿಯಲ್ಲಿ ಸುಖ ಮತ್ತು ದುಃಖದ ಕ್ಷಣಗಳನ್ನು ಅನುಭವಿಸುತ್ತಾರೆ. ಆ 'ಸಹಸ್ರಾರಂ' 'ಪರಮ ಜ್ಯೋತಿ' (ದೈವಿಕ ಜ್ವಾಲೆ), ಅದು 'ಊರ್ಧ್ವ ಕುಂಡಲಿ' (ಮೇಲಿನ ಕುಂಡಲಿನಿ), ಅದು 'ಅಮೃತ' ಸ್ಥಳವಾಗಿದೆ, ಅದು ಎಲ್ಲಾ ಸೃಷ್ಟಿಗಳಿಗೆ ಕಾರಣವಾಗಿದೆ, ಅದು ತನ್ನೊಳಗೆ ಎಲ್ಲಾ ವಿಶ್ವಗಳನ್ನು ಒಳಗೊಂಡಿದೆ. ಆ ಬಾಗಿಲು ಸ್ವಲ್ಪ ಸಮಯದವರೆಗೆ ಮಿಂಚಿನಂತೆ ತೆರೆದುಕೊಳ್ಳುತ್ತದೆ ಮತ್ತು ಮತ್ತೆ ಮುಚ್ಚುತ್ತದೆ. ಆದರೆ 'ಜೀವ/ಪ್ರಾಣ' ಯಶಸ್ವಿಯಾಗಿ ಅದನ್ನು ಪ್ರವೇಶಿಸಲು ಸಾಧ್ಯವಾದಾಗ, ಅವನು ತನ್ನೊಳಗೆ ಎಲ್ಲವನ್ನೂ ಕಂಡುಕೊಳ್ಳುತ್ತಾನೆ. ಅಂತಹ ಸ್ಥಿತಿಯನ್ನು ತಲುಪಿದಾಗ, ಯಾವುದೇ ಪಾಪಗಳು ಅವನನ್ನು ಸ್ಪರ್ಶಿಸುವುದಿಲ್ಲ, ಅವನು ಬ್ರಹ್ಮ ಜ್ಞಾನವನ್ನು ಪಡೆಯುತ್ತಾನೆ (ಅತ್ಯಂತ ಪರಮಾತ್ಮನ ಜ್ಞಾನ), ಅವನು ಪರಮಾತ್ಮನಲ್ಲದೆ ಬೇರೆ ಯಾರೂ ಅಲ್ಲ. ಅವನು 'ಅಹಂ ಬ್ರಹ್ಮಾಸ್ಮಿ...ಶಿವೋಹಂ' (ನಾನು ಬ್ರಹ್ಮ/ನಾನು ಶಿವ) ಎಂಬ ಭಾವನೆಯನ್ನು ಅನುಭವಿಸುತ್ತಾನೆ. ಆದರೆ ದುಃಖಕರವೆಂದರೆ ಬಹುತೇಕ ಎಲ್ಲಾ ಮಾನವರು ತಮ್ಮ ಆತ್ಮಗಳನ್ನು 'ಅಧೋ ಕುಂಡಲಿ' (ಕೆಳಗಿನ ಕುಂಡಲಿನಿ) ಮಟ್ಟಗಳಲ್ಲಿ ಇಟ್ಟುಕೊಳ್ಳುತ್ತಾರೆ ಮತ್ತು ಪಂಜರದೊಳಗಿನ ಹಕ್ಕಿಯಂತೆ ತಮ್ಮ ಹೆಂಡತಿ, ಮಕ್ಕಳು ಮತ್ತು ಇತರ ಸಂಬಂಧಿಕರ ಮೇಲೆ ಬಾಂಧವ್ಯ ಮತ್ತು ವ್ಯಾಮೋಹದಲ್ಲಿ ಮುಳುಗಿರುತ್ತಾರೆ. 'ಸಹಸ್ರಾರ'ದಿಂದ ಅಮೃತವನ್ನು ಕುಡಿಯುವ ಬದಲು ಅವನು ತನ್ನ ನಶಿಸುವ ದೇಹವನ್ನು ತನ್ನ ಗುರುತಾಗಿ ಪರಿಗಣಿಸುತ್ತಾನೆ ಮತ್ತು 'ಕರ್ಮ ಸಂಸಾರ'ದ ಸಾಗರದಲ್ಲಿ ಆಳವಾಗಿ ಮುಳುಗುತ್ತಾನೆ. ಅವನು ತನ್ನ ದೇಹವನ್ನು 'ಗಂಗಾ' ನದಿಯಲ್ಲಿ ಎಷ್ಟು ಬಾರಿ ಮುಳುಗಿಸುವುದರಿಂದ, ಅಥವಾ ಅವನು ಯಾವುದೇ ಮಾಡುವ ಪುಣ್ಯ ಕರ್ಮದಿಂದ ಅವನು ಮೋಕ್ಷವನ್ನು ಪಡೆಯುವುದಿಲ್ಲ. ಈ ನಾಡಿಗಳ ಮೂಲಕ 'ಹಂಸ' ವಿರಾಮವಿಲ್ಲದೆ ನಿಯಮಿತವಾಗಿ 'ಗಾಯತ್ರಿ' ಪಠಣ ಮಾಡುತ್ತಾನೆ. 'ಇಡಾ ನಾಡಿ'ಯನ್ನು 'ಚಂದ್ರ' ಎಂದೂ, 'ಪಿಂಗಲ ನಾಡಿ'ಯನ್ನು 'ಸೂರ್ಯ' ಎಂದೂ, ಇವೆರಡನ್ನೂ 'ತ್ರಿಕೂಟ' ಸ್ಥಳದಲ್ಲಿ ವಿಲೀನಗೊಳಿಸಲು 'ಕುಂಭಕ' ಎಂದೂ ಕರೆಯುತ್ತಾರೆ. ಹಾಗೆಯೇ 'ಇಡಾ ನಾಡಿ' ಗಂಗಾ, 'ಪಿಂಗಲ ನಾಡಿ ಯಮುನೆ' ಮತ್ತು 'ಕುಂಭಕ ನಾಡಿ' ಎಂದರೆ 'ಸರಸ್ವತಿ' ಎಂದೂ ಇದೆ. 'ಇಡಾ ನಾಡಿ' ಎಂಬುದು 'ಕೈಲಾಸಗಿರಿ' (ಕೈಲಾಸ ಪರ್ವತ), 'ಪಿಂಗಲ ನಾಡಿ' 'ಮಂದರಗಿರಿ' (ಮಂದಾರ ಪರ್ವತ) ಮತ್ತು 'ಕುಂಭಕ ನಾಡಿ' ಎಂಬುದು 'ಮಹಾ ಮೇರು' (ಮಹಾ ಮೇರು ಪರ್ವತ). 'ರೇಚಕಂ' ಕೆಂಪು, 'ಪೂರಕಂ' ಬಿಳಿ ಮತ್ತು 'ಕುಂಭಕಂ' ಕಪ್ಪು. ಈ ರೀತಿಯಲ್ಲಿ 'ಪರಮಹಂಸ' (ಆತ್ಮ) ನಮ್ಮೊಳಗೆ ಇಡೀ ವಿಶ್ವವನ್ನು ಸಾಕಾರಗೊಳಿಸುತ್ತದೆ ಮತ್ತು ಚಕ್ರಗಳ ಮೂಲಕ ನಿರಂತರವಾಗಿ ಚಲಿಸುತ್ತದೆ, - ಇದು ವೀರಬ್ರಹ್ಮೇಂದ್ರರ ಬೋಧನೆ.              

            ಪ್ರಶ್ನೋಪನಿಷತ್ ಹೀಗೆ ಹೇಳಿದೆ, ಪ್ರಾಣನು ತನ್ನಿಂದ ಉತ್ಪನ್ನಗಳಾದ ಭೂತಾತ್ಮಕ ಪಂಚ ಪ್ರಾಣಗಳಿಗೆ ತನ್ನ ಸ್ವರೂಪ ಭೂತಗಳಾದ ಪ್ರಾಣಾಪಾನಾದಿ ಪಂಚರೂಪಗಳಿಂದ ತತ್ತಸ್ಥಾನದಲ್ಲಿ ಪ್ರವೃತ್ತಿ ನಿವೃತ್ತಿಗಳನ್ನುಂಟುಮಾಡುತ್ತಾನೆ. ......... ಶರೀರಗತ ವಾಯುವು ನಿರಂತರ ಪಸರಣೆಯನ್ನು ಮಾಡುವುದರಿಂದ ಅಪಾನನೆಂದು. ಕಣ್ಣು, ಕಿವಿ, ಬಾಯಿ, ಮೂಗು ಇವುಗಳಲ್ಲಿ ಶ್ವಾಸ ಪಯಣಮಾಡಿಸುವ ಇವ ಪ್ರಾಣನೆಂದೂ,  ಆಹಾರ ರಸಗಳನ್ನು ಆಯಾ ಸ್ಥಾನಗಳಿಗೆ ಒಯ್ಯುವ ಪ್ರಯುಕ್ತ ಪ್ರಾಣಾ ಅಪಾನಗಳ ಮಧ್ಯ ಪ್ರದೇಶವಾದ ನಾಭಿಯಲ್ಲಿದ್ದು ಸಮಾನನೆಂದೂ ಹೇಳಲ್ಪಡುತ್ತಾನೆ.  ಈ ವಾಯುಗಳಲ್ಲಿ ಮುಖ್ಯ ಪ್ರಾಣನು ವಿವಿದ ನಾಮದಿಂದ  ಪ್ರವೃತ್ಯಾದಿಗಳನ್ನು ಮಾಡಿಸುತ್ತಾನೆ. ಅನ್ನಾದಿಗಳನ್ನು ಸಕಲ  ಅವಯವಗಳಿಗೆ ಒಯ್ಯುವ ಆಯಾ ಇಂದ್ರಿಯಗಳಿಗೆ ಶಕ್ತಿಯನ್ನು ಕೊಡುವುದರಿಂದ ಏಳು ಜ್ಞಾನೇಂದ್ರಿಯ ವ್ಯಾಪಾರಗಳೂ ವಾಯು ಅಧೀನವಾಗಿವೆ. ಜೀವನು ಅಣುರೂಪನಾದುದರಿಂದ ವಿಷಯಗಳನ್ನು ಅನುಭವಿಸಲು ಈ ಏಳು ಜ್ಞಾನೇಂದ್ರಿಯ ವ್ಯಾಪಾರವೂ ಅತ್ಯಾವಶ್ಯಕವಾಗಿದೆ. ....... ಈ ದೇಹದಲ್ಲಿ 72000 ನಾಡಿಗಳಿವೆ. ಸಕಲ ನಾಡಿಗಳಲ್ಲಿ ಅನೇಕ ರಸಾಡಿಗಳನ್ನು ಅನೇಕ ರೀತಿ ಒಯ್ಯುವ ವ್ಯಾನ ವಾಯು ಇರುತ್ತದೆ. ಈ ನಾಡಿಗಳ ಮಧ್ಯದ ಸುಷುಮ್ನಾ ನಾಡಿಯಲ್ಲಿ ಮೇಲ್ಮುಕವಾಗಿ ಸಂಚರಿಸುವ ಉದಾನನೆಂಬ ವಾಯುವು ಜೀವ ನೀಡುವ ವಿಶೇಷಣಗಳಿಂದ ಜ್ಞಾನ ಮೋಕ್ಷವನ್ನು ನೀಡುತ್ತಾನೆ. ಪಾಪ ಪ್ರಜ್ಞೆಯುಳ್ಳವರಿಗೆ ಜೀವನ ನರಕಮಯ ಮಾಡುತ್ತಾನೆ. ಹೀಗೆ ವ್ಯಾನ ಉದಾನರಲ್ಲಿ ಮುಖ್ಯಪ್ರಾಣನು ವಿವಿದ ಪ್ರವೃತ್ತಿಯನ್ನು ಮಾಡಿಸುತ್ತಾನೆ.

            ಯುಕ್ತಿಮಲ್ಲಿಕಾ ಎಂಬ ಗ್ರಂಥ ರಚಿಸಿದ ಯತಿ ವಾದಿರಾಜರು ತಮಗೆ ಗ್ರಂಥರಚನೆಗೆ ಹಯಗ್ರೀವರ ಉಪಾಸನೆಯಿಂದ ಆದ ಮೂಲ ಪ್ರೇರಣೆಯನ್ನು ನೆನೆಯುತ್ತಾರೆ. (ಹಯಗ್ರೀವ ಎಂದರೆ “ಹಯ” ಏಳು ಸಂಕೇತ, ಗ್ರೀವ ಎಂದರೆ ಸಂಧು, (ಕುತ್ತಿಗೆಯ ಹಿಂಬಾಗ) ಸುಷುಮ್ನಾ ಎಂಬ ಸಂಧುವಿನಲ್ಲಿ ಇರುವ ಏಳು ಚಕ್ರಗಳನ್ನು ಉಪಾಸನೆ ಮಾಡುವ ಮೂಲಕ ಅಂದರೆ ಸಮೀಪಿಸುವ ಮೂಲಕ, ಅಂದರೆ ಉಸಿರಾಟದಲ್ಲಿ ಸಮೀಪಿಸುವ ಮೂಲಕ ಮಾಡುವ ನಿತ್ಯ ಧ್ಯಾನ ವಿಧಾನಕ್ಕೆ ಹಯಗ್ರೀವ ಉಪಾಸನೆ ಎನ್ನುತ್ತಾರೆ. (ಇದನ್ನು ಇನ್ನೊಂದು ರೀತಿಯಲ್ಲಿ ಕುದುರೆ ಮುಖದ ದೇವರ ಉಪಾಸನೆ ಎನ್ನಬಹುದು. ಆದರೆ ಗೌಪ್ಯ ಅರ್ಥ ನಾವು ಮೊದಲು ಹೇಳಿದ್ದಾಗಿದೆ.) ವಾದಿರಾಜರ ಮಾತಿನಲ್ಲಿ

ನ ವಿತ್ತೈರುನ್ಮತ್ತಾ ನಚ ಕುಹಕದುರ್ಮಂತ್ರಬಲಿನೋ

ನವಾ ಮಿಶ್ರೈರ್ಮಿಶ್ರಾ ನಚ ಕುಜನಸಾಚಿವ್ಯಸಹಿತಾಃ ।

ನ ದುಶ್ಯಾಸ್ತ್ರಂ ಶಸ್ತ್ರಂ ವಿರಸಮುಪಜೀವ್ಯೋದ್ಧತಧಿಯ:

ಹಯಗ್ರೀವ ದೇವಂ ವಯಮಿಮಮುಪಾಸ್ಯೈ ಕೃತಿನಃ

ಭಾವಾರ್ಥ:- ಶ್ರೀವಾದಿರಾಜಯತಿಗಳೆನಿಸಿದ ನಾವು ಧನದ ಮದವುಳ್ಳವರಲ್ಲ - ಧನದ ಮದದಿಂದ ವಿದ್ವಾಂಸರನ್ನು ಪೋಷಿಸಿ ಅವರ ಕೈಯಲ್ಲಿ ಬರೆಸಿದ ಗ್ರಂಥವಿದಲ್ಲ. ವಾಮಾಚಾರ ಮಂತ್ರಗಳಿಂದ ಬಲಿಷ್ಠರಾಗಿ ದುರ್ಮಂತ್ರಬಲದಿಂದ ಬರೆದ ಗ್ರಂಥವಿದಲ್ಲ. ಎಲ್ಲ ವಿಚಾರಗಳನ್ನು ಸ್ವಲ್ಪ ಸ್ವಲ್ಪ ತಿಳಿದ ಅನೇಕರ ಜೊತೆ ಸೇರಿಕೊಂಡು ಬರೆದ ಗ್ರಂಥವೂ ಇದಲ್ಲ. ದುಷ್ಟರ ಸಂಗದಿಂದ ಕೂಡಿದವರು ಅಲ್ಲ. ನೀರಸ ದುಶ್ಯಾಸ್ತ್ರಗಳೆಂಬ ಶಸ್ತ್ರಗಳನ್ನು ಆಶ್ರಯಿಸಿ ಉದ್ಧತರಾದವರು ಅಲ್ಲವೇ ಅಲ್ಲ. ಕಿಂತು ಕ್ರೀಡಾದಿಗುಣವಿಶಿಷ್ಟನಾದ ಈ ಹಯಗ್ರೀವ ದೇವನನ್ನು ಉಪಾಸನೆ ಮಾಡಿಯೇ ನಾವು ಇಂಥಹ ಗ್ರಂಥವನ್ನು ರಚಿಸಿರುತ್ತೇವೆ.

            ಹಯಗ್ರೀವ ಎಂದರೆ, ಶ್ರೀಹರಿಯು ಧರಿಸಿದ ಒಂದು ರೂಪವೆಂದು ಮಹಾಭಾರತ ಹೇಳುತ್ತದೆ- "ಬ್ರಹ್ಮನ ಪ್ರಾರ್ಥನೆಯನ್ನು ಕೇಳಿ ಭಗವಂತನು ನಿದ್ದೆ ಬಿಟ್ಟು ಎದ್ದನು ವೇದಗಳಿಗಾಶ್ರಯವಾದ ನಿರ್ಮಲವಾದ ಹಯಗ್ರೀವ ರೂಪವನ್ನು ಸ್ವಶಕ್ತಿಯಿಂದ ತನ್ನಿಚ್ಛೆಯಂತೆ ಧರಿಸಿದನು, ಅವನು ಯಾವ ಯಾವ ರೂಪವನ್ನು ಭಕ್ತರ ಕಾರ್ಯ ಸಿದ್ಧಿಗಾಗಿ ಧರಿಸಲು ಬಯಸುವನೋ ಆ ಎಲ್ಲ ರೂಪವನ್ನೂ ಆತ ಸ್ವಶಕ್ತಿಯಿಂದ ತಾನಾಗಿಯೇ ಧರಿಸುತ್ತಾನೆ” ಹರಿವಂಶದಲ್ಲಿಯೂ ಹೀಗೆ ಹೇಳಿದೆ, "ದೇವತೆಗಳ ಸ್ತುತಿಯನ್ನು ಕೇಳಿ ಶ್ರೀಹರಿ ತನ್ನ ಹಯಗ್ರೀವಾಕೃತಿಯ ಮಹಾಕಾಯವನ್ನು ನೆನೆದನು. ಎಲ್ಲ ವೇದಗಳಿಗೂ ಎಲ್ಲ ದೇವತೆಗಳಿಗೂ ಆಶ್ರಯವೆನಿಸಿದ ಆ ರೂಪವನ್ನು ಧರಿಸಿದನು."ಹಯಗ್ರೀವ ಎಂಬ ಹೆಸರಿನ ಧ್ವನಿ ವೈಕುಂಠ ನಗರ ಮಹಾದ್ವಾರವನ್ನು ತೆರೆದು ಕೊಡಬಲ್ಲದು'' ಎಂದು ವಾದಿರಾಜರು ಘೋಷಿಸಿದ್ದಾರೆ. ಮಧುಕೈಟಭರನ್ನು ಕೊಲ್ಲಲು ಹಯರಗ್ರೀವಾವತಾರವಾಯಿತೆಂದು ಮಹಾಭಾರತ ಹೇಳುತ್ತಿದೆ ಮಧುವನ್ನು ಕೊಲ್ಲುವುದು ಉದ್ದೇಶವಾಗಿತ್ತೆಂದು ಹರಿವಂಶ ಹೇಳುತ್ತಿದೆ. ಹಯಗ್ರೀವಾಸುರನನ್ನು ಕೊಲ್ಲುವುದು ಉದ್ದೇಶವೆಂದು ದೇವೀ ಭಾಗವತ ಹೇಳುತ್ತಿದೆ.

            ಸಂಸ್ಕೃತ ಅಕ್ಷರ ಅನುವಾದದಲ್ಲಿ ಹಯಗ್ರೀವ ಎಂದರೆ “ವೈದ್ಯ ಗಾಳಿಯು ಶಕ್ತಿಯುತವಾಗಿ ವ್ಯಾಪಿಸಲು ಹೊಳಪನ್ನು ಚಲಿಸುತ್ತದೆ, ಹೊಳಪು ನೀಡುವುದು ಅಗ್ನಿ, ಗಾಳಿಯು (ಪ್ರಾಣ ವಾಯು) ವೈದ್ಯಕೀಯ ಅಂಶಗಳನ್ನು ಹೊಂದಿದೆ, ಅದು ಅಪಾನ ವಾಯು ಜೊತೆಯಲ್ಲಿ ಸೇರಿದಾಗ ಅಲ್ಲಿ ವಾಯು ಉಲ್ಭಣಗೊಂಡು ವೈಧ್ಯಕೀಯ ಅಂಶ, ಅಗ್ನಿ, ಆವಿ ಮುಂತಾಗಿ ನಿರ್ಮಾಣವಾಗಿ ಅಂತಹ ಹೊಳಪಿನಿಂದ ಕೂಡಿದ ಅಂಶವೂ (ಲಕ್ಷ್ಮಿ) ದೇಹದಾದ್ಯಂತ ವ್ಯಾಪಿಸಲು ನರಸಮೂಹ (ನರಸಿಂಹ) ಸಂಪರ್ಕವನ್ನು ನೀಡುವ ಸುಷುಮ್ನಾ ನಾಡಿ ಕುತ್ತಿಗೆಯ ಹಿಂಭಾಗದಲ್ಲಿ ಇರುವುದು ಅದರಲ್ಲಿ ಮೂಲಾಧಾರದಿಂದ ಸಹಸ್ರಾರದವರೆಗೆ ಚಲಿಸುತ್ತದೆ. ಇಂತಹ ಚಲನೆಯನ್ನು ನೀಡುವ ಆಕೃತಿಯೇ ಹಯಗ್ರೀವ ಅರ್ಥಾತ್ ಕುತ್ತಿಗೆಯ ಹಿಂದಿರುವ ಸುಷುಮ್ನಾ ನಾಡಿಯಲ್ಲಿನ ಏಳು ಚಕ್ರಗಳು. ಈ ಸಮಗ್ರ ವೈದ್ಯ ಸಂಪತ್ತನ್ನು ಲಕ್ಷ್ಮೀ ಎಂತಲೂ ಸರಸ್ಪತಿ ಎಂತಲೂ ಪಾರ್ವತಿ ಎಂತಲೂ, ಹರಿ ಎಂತಲೂ ಸಂಭೋದಿಸಲಾಗಿದೆ.

            ಹಯಗ್ರೀವಾಸುರ ಎಂದರೆ ಅಕ್ಷರ ಸಂಸ್ಕೃತದಲ್ಲಿ, ಅಸುರ ಎಂದರೆ, “ಬೆಂಕಿಯ ಧ್ಯಾನದಲ್ಲಿ ಶಾಖದ ಹಿಡಿತವನ್ನು ಕರೆಯುವವರು”   ಹಯಗ್ರೀವಾಸುರ ಎಂದರೆ “ವೈದ್ಯ ಗಾಳಿಯು ಶಕ್ತಿಯುತವಾಗಿ ವ್ಯಾಪಿಸಲು ಹೊಳಪನ್ನು ಚಲಿಸುವ ಕ್ರಿಯೆಯಲ್ಲಿ ಬೆಂಕಿಯ ಧ್ಯಾನ ಮಾಡಿ ಶಾಖದ ಹಿಡಿತವನ್ನು ಕರೆಯುವವರು” ಇಂತಹ ಸಮೂಹ ದೇಹಕ್ಕೆ ಶಾಖವನ್ನು ನೀಡಿ ಅನೇಕ ವ್ಯಾಘ್ರತೆಗೆ ಮತ್ತು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಇವರ ಸಂಹಾರ ಎಂದರೆ ಇವರನ್ನು ಸರಿದಾರಿಗೆ ತರುವುದು, ಅದೇ ಹಯಗ್ರೀವ ಉಪಾಸನೆ. ಸಂಸ್ಕೃತ ಅಕ್ಷರ ಅರ್ಥದಲ್ಲಿ ಮಧು ಎಂದರೆ “ನಾಶಪಡಿಸಲು ಒಂದು ಮಾಂತ್ರಿಕ ಸೂತ್ರ” ಎಂತಲೂ, ಸಕ್ಕರೆ ಎಂತಲೂ ವ್ಯಾಖ್ಯಾನ ಇದೆ, ಇಂತಹ ರಾಕ್ಷಸಾಕೃತಿ ನಮ್ಮ ದೇಹದಲ್ಲಿಯೇ ಉದಯ-ವಾಗುವುದಾಗಿದ್ದು, ಇದನ್ನು ಸಂಹರಿಸುವುದೇ ಹಯಗ್ರೀವ ಉಪಾಸನೆ. ಕೈಟಭ ಎಂಬ ಪದದ ಸಂಸ್ಕೃತ ಅಕ್ಷರ ವ್ಯಾಖ್ಯಾನದಲ್ಲಿ “ಇಂದ್ರಿಯ ಭ್ರಮೆಯ ವಸ್ತುವನ್ನು ಆಹ್ವಾನಿಸುವ ಗಾಳಿ” ಇದರ ಸಂಹಾರವೇ ಹಯಗ್ರೀವ ಉಪಾಸನೆ.

            ಹರಿ, ನಾರಾಯಣ, ನರಸಿಂಹ, ಹಯಗ್ರೀವ, ವಿಷ್ಣು ಎಲ್ಲವನ್ನೂ ಒಂದೇ ಅವತಾರವೆನ್ನುವ ವೈಷ್ಣವರು ಹರಿ ಎಂದರೆ ಚಲಿಸುವ ವೈಧ್ಯತೆ ಎಂದು ನೇರವಾಗಿ ಹೇಳದಿದ್ದರೂ ಪರೋಕ್ಷವಾಗಿ ಹೇಳಿದ್ದಾರೆ. ಚಲಿಸುವ ವೈಧ್ಯತೆ ಹರಿಯ ಜೊತೆಯಲ್ಲಿ ಸಂಪತ್ತಿನಿಂದ ಕೂಡಿದ ಲಕ್ಷ್ಮೀ ಚಲನೆಯನ್ನೂ ಸೇರಿಸುತ್ತಾರೆ. ಓಂ ನಮೋ ನಾರಾಯಣ ಎಂಬ ಮಂತ್ರದಲ್ಲಿ ನಾರಾಯಣನ ಜೊತೆಯಲ್ಲಿ ಲಕ್ಷ್ಮಿ ಸುಷುಮ್ನಾ ನಾಡಿಯಲ್ಲಿ ಚಲಿಸುವ ವೈಜ್ಞಾನಿಕ ಆವಿಷ್ಕಾರ ಇದೆ. ನರ ಸಮೂಹದಿಂದ ಮಾಡಲಾಗಿರುವ ನರಮಾನವನಲ್ಲಿರುವ ನರಗಳ  ರಾಜ ನರಸಿಂಹ ದೇವರು (ಸಿಂಹ ಅಂದರೆ ರಾಜ) ಆ ನರಸಿಂಹ ದೇವರು ಲಕ್ಷ್ಮೀಯೊಡನೆ ಸೇರಿದಾಗ ಎಲ್ಲಾ ಸೌಭಾಗ್ಯವೂ ಲಭ್ಯವಾಗುವುದು ಎಂಬ ವೈಜ್ಞಾನಿಕ ಚಿಂತನೆ ಇದೆ.

            ಅಂಭ್ರಿಣಿ ಸೂಕ್ತದಲ್ಲಿ ದೇವಿ, "ಮಮ ಯೋನಿರಪ್ವ ಅಂತಃ ಸಮುದ್ರೇನನ್ನೆಲ್ಲ ಪ್ರವೃತ್ತಿಗೂ ಕಾರಣನಾದವನು ಸಮುದ್ರಶಾಯಿ ಶ್ರೀಹರಿ. ಮಹಾಲಕ್ಷ್ಮಿ ವರಲಕ್ಷ್ಮಿ ಎನಿಸುವುದು ಆಕೆ ಶ್ರೀಹರಿಯ ಎದೆಯನ್ನೇರಿ ಕುಳಿತಾಗ... "ಶ್ರೀಹರಿಯೆಂಬ ನೀಲಮೇಘದಲ್ಲಿ ಮಿಂಚಿನಂತೆ ದೇವಿ ಕಂಗೋಳಿಸಿದಾಗಲೆ ಸಂಪತ್ತಿನ ಸುರಿಮಳೆ' ಎಂದು ರುಕ್ಮಿಣೀಶ ವಿಜಯದಲ್ಲಿ ವಾದಿರಾಜರೇ ಹೇಳುತ್ತಾರೆ.

            "ನ ಮೇ ಹೃಷೀಕಾಣಿ ಪತಂತ್ಯಸತ್ಸಧೇ ಯನ್ನೇ ಹೃದೌತ್ಯಂರ್ಯತಾ ಧೃತೋ ಹರಿಃ !' - "ನನ್ನ ಮನಸ್ಸಿನಲ್ಲಿ ಸದಾ ಹರಿಧ್ಯಾನವೇ ಇರುವುದರಿಂದ ನನ್ನ ಇಂದ್ರಿಯಗಳು ದುರ್ಮಾರ್ಗಕ್ಕೆ ಬೀಳುವುದಿಲ್ಲ' ಎಂದು ಬ್ರಹ್ಮದೇವರು ಹೇಳುತ್ತಾರೆ

            ಲಕ್ಷ್ಮೀನಾರಾಯಣರನ್ನು ಚಿಂತಿಸಿ ಕನ್ಯಾದಾನ ಮಾಡಿದರೆ ಮಹಾಫಲವಿದೆ ಎಂದು ವಾಯುಪುರಾಣ ಹೇಳಿದೆ.

ಮರುಳು ಮಾಡಿಕೊಂಡೆಯಲ್ಲೇ ಮಾಯಾದೇವಿ ! ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಿಪ್ಪಂತೆ

-ಪುರಂದರದಾಸರು

ಹಯಗ್ರೀವನಿಗೆ. ಮಾತೆಂದರೇ ಉಸಿರಾಟದಷ್ಟು ಸಹಜವಾಗಿರುವುದರಿಂದ ಇದೇನೂ ಅಸಂಭಾವಿತವಲ್ಲ. ಅವನ ಉಸಿರಾಟ-ದಿಂದಲೆ ವೇದಾದಿ ಶಾಸ್ತ್ರಗಳ ಧ್ವನಿ ಹೊರಡುತ್ತದೆ ಎಂದು ಬೃಹದಾ-ರಣ್ಯಕೋಪನಿಷತ್ತು ಹೇಳುತ್ತದೆ-  ಅಸ್ಯ ಮಹತೋ ಭೂತಸ್ಯ ನಿಶ್ವಸಿತ ಮೇತದ್‌ ಯದ್‌ ಋಗ್ವೇದೋ ಯಜುರ್ವೇದಃ ಸಾಮವೇದಃ..... ॥ ಭಾಗವತವೂ ಹಾಗೇ ಹೇಳುತ್ತದೆ ವಾಚೋ ಬಭೂವುರುಶತೀಃ ಶ್ವಸತೋತಸ್ಯ ನಸ್ತಃ ॥ ತಂತ್ರಸಾರ ಸಂಗ್ರಹವೂ ಹಾಗೇ ಹೇಳುತ್ತದೆ ಹಯಗ್ರೀವಾದಿಮಾ ವಿದ್ಯಾಃ ಶ್ವಸಿತತ್ವೇನ ನಿಃಸ್ಫತಾಃ | - ಹರಿ ಮೂಗಿನಿಂದ ವಿದ್ಯೋಪದೇಶ ಮಾಡುವುದು ಅಚ್ಚರಿಯೇನಲ್ಲ. ಏಕೆಂದರೆ ಅವನ ಪ್ರತಿಯೊಂದು ಇಂದ್ರಿಯವೂ ಅವಯವವೂ ಅವನ ಇತರ ಎಲ್ಲ ಇಂದ್ರಿಯಗಳ ಅವಯವಗಳ ಕಾರ್ಯವನ್ನೂ ಅಷ್ಟೇ ಸಮರ್ಥವಾಗಿ ಮಾಡಬಲ್ಲವು.

            ಸಿದ್ದಾಂತೀ ಪ್ರೊಫೆಸರ್ ಗುರುಪಾದ ಕೆ. ಹೆಗ್ಗಡೆ ರವರು ತಮ್ಮ ಚಿತ್ಪ್ರಕಾಶದರ್ಶಿಕಾ ಗ್ರಂಥದಲ್ಲಿ ಹೀಗೆ ಬರೆಯುತ್ತಾರೆ

“ಪ್ರಾಣಾಯಾಮದಲಿ ವಾಯುವಿನ ನಡೆ ಸುಷುಮ್ನಾನಾಡಿಯಲ್ಲಿ

ಸುಷುಮ್ನೆಯೇ ಬಾಲವಾಗಿಹುದು ಮಾರುತಿಯ ದೇಹದಲ್ಲಿ

ಸುಷುಮ್ನೆಯಲಿ ವಾಯುಸಂಚಾರ ಷಟ್ಟಕ್ರಸಾಧನೆಗೆ ಮೂಲ

ಅದಕಾಗಿ ಯೋಗಮಾರ್ಗದಲಿ ಮಾರುತಿಗೆ ಪ್ರಥಮ ಪೂಜೆ

ಪ್ರಾಣಾಯಾಮದಿಂ ಮನುಜನಾರೋಗ್ಯರಕ್ಷಣೆ .........

ಆತ್ಮಕ್ಕೆ ಪರಮಾತ್ಮಪದಕೇರಲು ಬೇಕು ಪ್ರಾಣಾಯಾಮ.....

ಗಣೇಶಮಾರುತಿಯರೋಂಕಾರದೆರಡು ರೂಪಗಳು.....”

            “ಯೋಗಸಾಧನೆಯಲ್ಲಿ ಗಾಯತ್ರಿಯು ಮೂಲಾಧಾರ-ಸ್ಥಾಧಿಷ್ಠಾನ-ಮಣಿಪೂರಕ ಚಕ್ರಗಳನ್ನು ದಾಟಿ ಅನಾಹತಕ್ಕೆ ಸಾಧಕನು ಹೋದಾಗ ಓಂಕಾರಾದಿ ಅನಾಹತನಾದದ ಅನುಭವವನ್ನು ನೀಡುತ್ತ ಅಲ್ಲಿಂದ ವಿಶುದ್ಧಿಯನ್ನು ದಾಟಿ ಆಜ್ಞಾಚಕ್ರದಲ್ಲಿ ಯೋಗಿಯು ಕೇಂದ್ರೀಕೃತನಾದಾಗ ಜ್ಯೋತಿರ್ಮಯ ಬಿಂದುವಿನ ರೂಪದಲ್ಲಿ ದರ್ಶನ ಕೊಡುತ್ತಾಳೆ. ಅದೇ ಗಾಯಿತ್ರಿಯೇ ಶ್ರೀಚಕ್ರದಲ್ಲಿಯ ಬಿಂದು; ಪುರಾಣಗಳಲ್ಲಿಯ ಶ್ರೀಮಾತೆ ಲಲಿತೆ”.

            “ಗೋ ಅಂದರೆ ಜ್ಞಾನ ಅನ್ನುವ ಅರ್ಥವೇ ಪ್ರಮುಖ. ಕೃಷ್ಣನನ್ನು ಕುರಿತು ಗೋಪಾಲ ಅಂದಾಗ ಆತ ಕೇವಲ ಆಕಳುಗಳನ್ನು ಸಲಹಿದವ ಅನ್ನುವುದು ಮೇಲು ನೋಟದ ಅರ್ಥ ಮಾತ್ರ ಅಂತ-ರಂಗದ ಅರ್ಥವು ಜ್ಞಾನ ಅನ್ನುವುದೇ ಆಗಿದೆ. ಮಾನವ ಶರೀರದಲ್ಲಿಯ 72 ಸಾವಿರ ನಾಡಿಗಳಲ್ಲಿ 16 ಸಾವಿರ ನಾಡಿಗಳು ಜ್ಞಾನ ನಾಡಿಗಳು; ಅಧ್ಯಾತ್ಮಕ್ಕೆ ಸಂಬಂಧಿಸಿ ಈ ಜ್ಞಾನನಾಡಿಗಳು ಬರುತ್ತವೆ. ಕೃಷ್ಣನಿಗೆ 16 ಸಾವಿರ ಹೆಂಡಂದಿರು ಅನ್ನುವುದು ಇದೇ ಅರ್ಥದಲ್ಲಿದೆ. ಕೃಷ್ಣ ಅಂದರೆ ಜ್ಞಾನ ಅನ್ನುವ ಅರ್ಥವೂ ಇದೆ. ... ಈ ಜ್ಞಾನಕ್ಕೆ ಸಂಬಂಧಿಸಿದ ನಾಡಿಗಳನ್ನು ಕೃಷ್ಣನ ಹೆಂಡಂದಿರನ್ನಾಗಿ ಮಹಾ-ಭಾರತದಲ್ಲಿ ಹಾಗೂ ಭಾಗವತದಲ್ಲಿ ರೂಪಕಕ್ಕೆ ಅಳವಡಿಸಲಾಗಿದೆ. ಇಲ್ಲಿ ಗೋ ಅಂದಾಗ ಭೂಮಿ ಎಂದೂ ಆಗುವುದು. ಜ್ಞಾನ ಎಂದೂ ಆಗುವುದು”.

            “ಪುರುಷ ಶಬ್ದವನ್ನು "ಪುರಿ ಶೇತೇ” - ದೇಹವೆಂಬ ಪುರದಲ್ಲಿ ವಾಸಿಸುವವನು ಎಂದೂ "ಪುರಿ ಉಷತಿ' - ದೇಹವೆಂಬ ಪುರದಲ್ಲಿ ಪ್ರಕಾಶಿಸುವವನು ಎಂದೂ "ಪುರಿ ಓಷತೇ' ಎಂದಾಗ - ದೇಹದಲ್ಲಿ ಉಷ್ಣರೂಪದಲ್ಲಿ ವಿರಾಜಿಸುವವನು ಎಂದೂ ಅರ್ಥೈಸಿ-ಕೊಳ್ಳಲಾಗುವುದು. ....... ನಾರ ಅನ್ನುವ ಶಬ್ದಕ್ಕೆ ನೀರು ಅನ್ನುವ ಅರ್ಥವು ಇರುವಂತೆಯೇ ಜ್ಞಾನ ಅನ್ನುವ ಅರ್ಥವೂ ಇದೆ. ಜ್ಞಾನ ಮಾರ್ಗಗಾಮಿಯೇ ನಾರಾಯಣ, ಈ ಅರ್ಥದಲ್ಲಿಯೇ "ನಾರ' ಅಂದರೆ ಜ್ಞಾನವನ್ನು ಆತ್ಮಜ್ಞಾನವನ್ನು "ದ' ಅಂದರೆ ಕೊಡಬಲ್ಲ ಗುರುತತ್ತ್ವವೇ ನಾರದ. ...... “ನಾರ' ಅಂದರೆ ನೀರೂ ಆಗುವುದರಿಂದ ಹಾಗೂ ನೀರಿಗೆ ಜೀವನವೆಂಬ ಪರ್ಯಾಯ ಶಬ್ದವೂ ಇರುವುದರಿಂದ ಹಾಗೂ ಜೀವನವೇ ಸ್ಥಿತಿತತ್ತ್ವದ ವ್ಯಕ್ಷಭಾವವಾದುದರಿಂದ ಸ್ಥಿತಿತತ್ತ್ವದ ಅಧಿದೇವನನ್ನು ನಾರಾಯಣ ಎಂದೂ ಕರೆಯಲಾಗುವುದು.”

            “ಪುರುಷಸೂಕ್ತದಲ್ಲಿ ಬರುವ ಯಜ್ಞವು ಭೌತಿಕವಾದ ಹೋಮ ಕುಂಡದಲ್ಲಿ ನಡೆಸುವ ಯಜ್ಞಕ್ಕೆ ಸೀಮಿತವೆಂದು ಖಂಡಿತವಾಗಿ ಭಾವಿಸಲಾಗದು. ಇಲ್ಲಿ ಯಜ್ಞದ ನಿಜವಾದ ಅರ್ಥ ಪಂಚಭೂತಗಳಿಂದ ನಿರ್ಮಾಣಗೊಳ್ಳುವ, ಪಾಂಚಭೌತಿಕ ಪುರವೆ-ನಿಸಿದ ದೇಹಗಳ ಅರ್ಥಾತ್‌, ಸಮಸ್ತ ಪ್ರಾಣಿವರ್ಗಗಳ ಆವಾಸಗಳ ಸೃಷ್ಟಿ-ಪುನಃಸೃಷ್ಟಿ ಎಂಬುದೇ ಆಗಿದೆ. ಆ ಪರಮ ಪುರುಷನು ದೇಹಗಳಿಗೆ ಅರ್ಪಿತವಾದ ಆಹಾರದಲ್ಲಿ ತಾನೇ ಅಣುವಾಗಿ ಪ್ರತ್ಯಣುವಾಗಿ ಜೀವಾಣುವಾಗಿ ವೀರ್ಯಸ್ಥಗೊಂಡು ಭ್ರೂಣವಾಗಿ ಶಿಶುವಾಗಿ ಹೆಣ್ಣು ಗಂಡು ಪ್ರಾಣಿಗಳಾಗಿ (ಅರ್ಥಾತ್‌ ಮನುಷ್ಯ ಮುಂತಾದವುಗಳಾಗಿ) ರೂಪುಗೊಳ್ಳುವುದೇ ಆಗಿದೆ. ಕರ್ತವ್ಯ ಕರ್ಮಗಳೆಂಬ ನಿತ್ಯ ಯಜ್ಞದಲ್ಲಿ ಆಹುತಿಯು ನಿರಂತರವಾಗಿ ಸಲ್ಲುವಂತೆ ಪುನರಾಹಾರ ವೀರ್ಯಾಣು ಮುಂತಾದವುಗಳಿಗೆ ಕಾರಣವಾಗುವಂತೆ ನಡೆಯುವ, ನಿರಂತರವಾಗಿ ಸಂಪನ್ನಗೊಳ್ಳುವ ಯಜ್ಞವೇ ಇಲ್ಲಿ ಬರುವ ಪುರುಷನು ನಡೆಸುವ ಯಜ್ಞವಾಗಿದೆ”.

            “ಮಹಾಲಕ್ಷ್ಮಿಯು ಹಿರಣ್ಮಯಿ; ಅಷ್ಟೇ ಅಲ್ಲ ಹಿರಣ್ಯವೇ ಅಂದರೆ,  ಬಂಗಾರವೇ ಮಹಾಲಕ್ಷ್ಮಿ ಅವಳ ಬಣ್ಣವೂ ಬಂಗಾರದ್ದು, ಅವಳನ್ನು ನಮಗೆ ಅನುಗ್ರಹಿಸಲು ಕರೆತರುವವನು ಅಗ್ನಿ,  ಜಾತವೇದ. ಎಲ್ಲರನ್ನೂ ಎಲ್ಲವನ್ನೂ ಬಲ್ಲವನು ಜಾತವೇದ, ಸಾಕ್ಷಾತ್‌ ಪರಮಾತ್ಮ, ಪರಮಪುರುಷ. ಅಗ್ನಿಯೆಂದರೆ ತೇಜಸ್ಸು ; ತೇಜಸ್ಸಿದ್ದಲ್ಲಿ ಶೌರ್ಯ, ಉತ್ಸಾಹಗಳು. ಉತ್ಸಾಹ-ಶೌರ್ಯಗಳಿಲ್ಲದಿದ್ದಲ್ಲಿ ಲಕ್ಷ್ಮಿಯು ಎಂದಿಗೂ  ಸುಳಿಯಳು. ........ ಹಿರಣ್ಯ ಅನ್ನುವ ಶಬ್ದಕ್ಕೆ ವೀರ್ಯ ಅನ್ನುವ ಅರ್ಥವೂ ಇದೆ. ಸಂತಾನಕಾರಕ ಧಾತು ವೀರ್ಯ ; ಮನೆತನವನ್ನು  ಮುನ್ನಡೆಸುವುದು ಸಂತಾನ; ..... "ಹರಿಃ ನಿಯತೇ ಅನಯಾ ಇತಿ ಹರಿಣೀ' - ಹರಿಯನ್ನು, ಸ್ಥಿತಿ ತತ್ತ್ವಾಧಿದೇವನನ್ನು, ಅರ್ಥಾತ್‌ ಸ್ಥಿತಿ ತತ್ವವನ್ನು ಅಂದರೆ ಬದುಕನ್ನು ಮುನ್ನಡೆಸುವವಳು ಲಕ್ಷ್ಮೀ ಅರ್ಥಾತ್‌ ಸಂಪತ್ತು. ...... ಲಕ್ಷ್ಮಿಯನ್ನು ಮೊದಲನೆಯ ಮಂತ್ರದಲ್ಲಿಯೇ "ಸುವರ್ಣ ರಜತಸ್ಯಜಾಂ' ಎಂದೂ ಸ್ತುತಿಸಲಾಗಿದೆ. ಸುವರ್ಣವು, ಅಂದರೆ ಬಂಗಾರವು ಗುರುಗ್ರಹವಾದರೆ ಬೆಳ್ಳಿಯು ಶುಕ್ರಗಹವನ್ನು ಸೂಚಿಸುವುದು. .... ವೀರ್ಯಾಣು ಅಂಡಾಣುಗಳ ಸಂಯೋಗದಿಂದ

ಪ್ರಜೋತ್ಪತ್ತಿ ಈ ಅರ್ಥದಲ್ಲಿ ಶುಕ್ರ ಗ್ರಹವನ್ನಾಗಿಯೂ ಲಕ್ಷ್ಮಿಯನ್ನು ದರ್ಶಿಸಲಾಗುವುದು. .....” (ಹಿರಣ್ಯವರ್ಣ ಅಂದರೆ ಬಂಗಾರದ ಬಣ್ಣ, ಅರ್ಥಾತ್‌ ಹಳದಿ ಬಣ್ಣ. ದೇಹದಲ್ಲಿ, ಇಲ್ಲಿ ಭ್ರೂಣದಲ್ಲಿ ಈ ಬಣ್ಣವನ್ನು ಉಂಟುಮಾಡುವುದು ಕಾಮಾಲೆ ಎಂಬ ರೋಗ. ಈ ಕಾಮಾಲೆ ರೋಗವನ್ನು ಹಿರಣ್ಯಾಕ್ಷ ಎಂದು ಕರೆಯಲಾಯಿತು. ಏಕೆಂದರೆ ಕಣ್ಣು ಹಳದಿಯಾದದ್ದರ ಮೂಲಕ ಈ ರೋಗವನ್ನು ಗುರುತಿಸಲಾಗುವುದು. ಗರ್ಭದಲ್ಲಿಯ ಪಿಂಡಕ್ಕೆ ಪೀಡಾಕಾರಕವಾಗಿ ಬರಬಹುದಾದ ರೋಗವಿದು. ಇದನ್ನು “ಸೂತಿಕಾರೋಗವೆಂದೂ ಗುರುತಿಸ-ಲಾಗುವುದು. ಗರ್ಭಿಣಿಯ ಆಶೆಗನುಗುಣದ ಆಹಾರದ ದೋಷ-ದಿಂದಾಗಿ ಪಿತ್ತವು ಉಲ್ಬಣಗೊಂಡು ಬರುವ ರೋಗವಿದು. ಇದೇ ಹಿರಣ್ಯಾಕ್ಷ).

            “ಯೋಗಮಾರ್ಗದಲ್ಲಿ ಪ್ರವರ್ತಿಸ ಬೇಕೆನ್ನುವವರು ಈ ಸುಷುಮ್ನೆಯನ್ನು ಪ್ರಧಾನವಾಗಿ ಭಾವಿಸುವರು ಏಕೆಂದರೆ ಸುಷುಮ್ನಾನಾಡಿಯಲ್ಲಿಯ ಶ್ವಾಸೋಚ್ಛ್ಯಾಸವು ಮನಸ್ಸನ್ನು ಪ್ರಸನ್ನ-ವಾಗಿಡುತ್ತದೆ. ಸಮಸ್ಥಿತಿಯಲ್ಲಿ ಇಡುತ್ತದೆ. ಲೌಕಿಕ ಸ್ಥಿತಿಯಿಂದ ಅಲೌಕಿಕ ಸ್ಥಿತಿಗೆ ಕೊಂಡೊಯ್ಯುತ್ತದೆ. ಶ್ವಾಸವು ಸುಷುಮ್ನೆಯಲ್ಲಿಯೇ ಚಲಿಸಬೇಕು ಎಂದು ಬಯಸುವವರು ಪ್ರಾಣಾಯಾಮಕ್ಕೆ ಶರಣಾಗ-ಬೇಕಾಗುತ್ತದೆ. ಪ್ರಾಣಾಯಾಮದಿಂದ. ಅಂದರೆ ನಿಯಮಿತವಾದ ಶ್ವಾಸೋಚ್ಚ್ವಾಸದಿಂದ ಮನಸ್ಸು ನಿಯಂತ್ರಣಕ್ಕೆ ಬಂದು ಯೋಗ-ಸಾಧಕನಿಗೆ ಧ್ಯಾನಕ್ಕೆ ಹಾಗೂ ಧ್ಯಾನದಲ್ಲಿ ಅಂತರಂಗಕ್ಕೆ ಧಾವಿಸಲಿಕ್ಕೆ ಅನುಕೂಲವಾಗುತ್ತದೆ. ಸಮಾಧಿಸ್ಥಿತಿಗೆ ಸುಷುಮ್ನೆಯಲ್ಲಿಯ ಶ್ವಾಸೋ-ಚ್ಚ್ವಾಸವೇ ಪ್ರಮುಖವಾಗಿ ಅವಶ್ಯವಾದುದು.

            “ವಾಕ್‌-ಪಾದ-ಪಾಣಿ-ಪಾಯು (ಗುದ) - ಉಪಸ್ಥಾನ (ಜನನೇಂದ್ರಿಯ) ಗಳೆಂಬ ಐದು ಕರ್ಮೇಂದ್ರಿಯಗಳು ಹಾಗೂ ತ್ವಕ್‌ (ಚರ್ಮ) - ಚಕ್ಷು-ಶ್ರೋತ್ರ (ಕಿವಿ) - ರಸನಾ (ನಾಲಿಗೆ) ನಾಸಿಕಾ (ಮೂಗು) ಗಳೆಂಬ ಪಂಚಜ್ಞಾನೇಂದ್ರಿಯಗಳೂ ಸೇರಿ ಒಟ್ಟು ಹತ್ತು ಇಂದ್ರಿಯಗಳಾಗುತ್ತವೆ. ಇವೆಲ್ಲ ಸುಖಲೋಲುಪತೆಯಲ್ಲಿ ತೊಡಗಿ-ದಾಗ ಅಧ್ಯಾತ್ಮಸಾಧನೆ ಶೂನ್ಯವಾಗುವುದು; ಇಷ್ಟೇ ಅಲ್ಲ ಕಣ್ಣಿಗೆ ಕಾಣದ ಆತ್ಮ-ಪರಮಾತ್ಮರನ್ನು ಕಟ್ಟಿಕೊಂಡು ಮಾಡಬೇಕಾದುದೇನು ಎಂಬ ಭಾವನೆಯೂ ಬಲಿತು ಅಧ್ಯಾತ್ಮವಾದಿ ಸಾಧಕರೊಂದಿಗೆ ತರ್ಕಕ್ಕೆ ತೊಡಗುವುದೂ ಇದೆ. ಅಂತಹ ಪುವೃತ್ತಿ ಯವರು ಅಧ್ಯಾತ್ಮದೆಡೆಗೆ, ಯೋಗಸಾಧನೆಯೆಡೆಗೆ ಪ್ರಾಣಾಯಾಮವೇ ಮುಂತಾದ ಕಾಠಿಣ್ಯಕ್ಕೆ ಒಗ್ಗಿಕೊಳ್ಳುವ ಸಂದರ್ಭವು ಒಂದೊಮ್ಮೆ ಬಂದರೆ ಅದಕ್ಕಾಗಿ ಅವರು ಈ ದಶೇಂದ್ರಿಯಗಳೊಂದಿಗೆ ಯುದ್ಧವನ್ನೇ ಮಾಡಬೇಕಾಗುತ್ತದೆ. ಇದು ಶಸ್ತ್ರಾಸ್ತ್ರ ಸಹಿತವಾದ ಯುದ್ಧವಾಗಿರದೆ ಅಂತರಂಗದಲ್ಲಿ ನಡೆಯುವ ಘನಘೋರ ಯುದ್ಧವೇ ಸರಿ”.

            “ಗುಜರಾತ್‌ ಮೂಲದ ಇಂಜಿನಿಯರ್‌ ಹೀರಾರತನ್‌ ಮಾಣೇಕ್‌ ಶಾ ಅನ್ನುವವರು ಈ 20, 21ನೆಯ ಶತಮಾನಗಳ ಅದ್ಭುತ ಸಾಧಕರಾದುದು ತುಂಬ ವಿಶೇಷ. ಅವರು ಪ್ರಾಚೀನ ಕಾಲದ ಋಷಿಗಳು ಆಹಾರರಹಿತ ಸ್ಥಿತಿಯಲ್ಲಿ ಬದುಕುವ ಬಗೆಯನ್ನು ಅರಿಯಲು ಸಂಶೋಧಿಸಿ ಸೂರ್ಯೋಪಾನಪದ್ದತಿಯನ್ನು ಕಂಡು ಹಿಡಿದರು. ದಿನವೂ 10 10 ಸೆಕೆಂಡುಗಳ ಸೂರ್ಯದರ್ಶನದ ಸಮಯವರ್ಧನೆಯಂತೆ ಹೆಚ್ಚಿಸುತ್ತ ತಾಸುಗಟ್ಟಲೆ ಸೂರ್ಯನನ್ನು ನಿಟ್ಟಿಸಿ ನೋಡುತ್ತ ಅದ್ಭುತ ಶಕ್ತಿಯನ್ನು ಗಳಿಸಿದರು”. ಎನ್ನಲಾಗುತ್ತದೆ.

 

 

ಪಂಚಬ್ರಹ್ಮ

ಸಂಸ್ಕೃತ ಸಾಹಿತ್ಯದಲ್ಲಿ ಬರುವ ಪಂಚಬ್ರಹ್ಮರು ಯಾರು.

            ವಿಶ್ವವನ್ನು ರಚಿಸಿದ ವಿಶ್ವಕರ್ಮನ ಬಳಿ ಪಂಚ ಬ್ರಹ್ಮರ ಸಾನಿಧ್ಯವಿರುತ್ತದೆ. ಲಲಿತಾ ಸಹಸ್ರನಾಮದಲ್ಲಿ ಪಂಚಬ್ರಹ್ಮಸಂಸ್ಥಿತಾ ಎಂಬ ಹೆಸರೂ ಇದೆ. ಪಂಚಬ್ರಹ್ಮರು ಶಿವನ ಐದು ಅಭಿವ್ಯಕ್ತಿಗಳು ಮತ್ತು ಅವರನ್ನು ಸದ್ಯೋಜಾತ, ತತ್ಪುರುಷ, ಅಘೋರ, ವಾಮದೇವ ಮತ್ತು ಈಶನ ಎಂದು ಹೆಸರಿಸಲಾಗಿದೆ. ಪ್ರತಿಯೊಂದು ಐದು ಅಭಿವ್ಯಕ್ತಿಗಳು ಐದು ದೇವತೆಗಳಾಗಿದ್ದು, ಅವರುಗಳು ಸಧ್ಯೋಜತ-ದಿಂದ ಬ್ರಹ್ಮ, ವಾಮದೇವನಿಂದ ವಿಷ್ಣು, ಅಘೋರನಿಂದ ರುದ್ರ, ತತ್ಪುರುಷನಿಂದ ಮಹೇಶ್ವರ ಮತ್ತು ಈಶನದಿಂದ ಸದಾಶಿವ ಎನ್ನುತ್ತಾರೆ.

            ವ್ಯಾಯವಿಯ ಸಂಹಿತ ಶಿವ ಪುರಾಣ ಅಧ್ಯಾಯ 3 ರಲ್ಲಿ, ಉಪಮನ್ಯು ಶ್ರೀಕೃಷ್ಣನಿಗೆ ಹೀಗೆ ಹೇಳುತ್ತಾನೆ:

ಶ್ರೋತ್ರಸ್ಯ ವಾಚಃ ಶಬ್ದಸ್ಯ ವಿಭೋರ್ವ್ಯೋಮ್ನಸ್ತಥೈವ ಚ ।
ಈಶ್ವರೀಮೀಶ್ವರಸ್ಯೇಮಾಮೀಶಾಖ್ಯಾಂ ಹಿ ವಿದುರ್ಬುಧಾ ।।
ತ್ವಕ್ಪಾಣಿಸ್ಪರ್ಶವಿಯೂನಾಮೀಶ್ವರೀಂ ಮೂರ್ತಿಮೈಶ್ವರೀಮ್ ।
ಪುರುಷಾಖ್ಯಂ ವಿದುಃ ಸರ್ವೇ ಪುರಾಣಾರ್ಥ ವಿಶಾರದಾಃ ।।
ಚಕ್ಷುಷಶ್ಚರಣಸ್ಯಾಪಿ ರುಪಸ್ಯಾಗ್ನೇಸ್ತಥೈವ ಚ ।
ಅಘೋರಾಖ್ಯಮಧಿಷ್ಠಾತ್ರೀ ಮೂರ್ತಿಮಾಹುರ್ಮನೀಷಿಣಾ ।।
ರಸನಾಯಶ್ಚ ಪಾಯೋಶ್ಚ ರಸಸ್ಯಾಪಾಂ ತಥೈವ ಚ ।
ಈಶ್ವರೀ ವಾಮದೇವಾಖ್ಯಾಂ ಮೂರ್ತಿಂ ತನ್ನಿರತಾಂ ವಿದುಃ ।।
ಘ್ರಾಣಸ್ಯ ಚೈವಪಸ್ಥಸ್ಯ ಗನ್ಧಸ್ಯ ಚ ಭುವಸ್ತಥಾ ।
ಸದ್ಯೋಜಾತಹ್ವಯಾಂ ಮೂರ್ತಿಮೀಶ್ವರೀಂ ಸಮ್ಪ್ರಚಕ್ಷತೇ ।।

ಭಾವಾರ್ಥ:- ಬುದ್ಧಿವಂತಿಕೆಯ ಜನರು, ಇಶಾನನನ್ನು ಕಿವಿ, ಮಾತು, ಧ್ವನಿ ಮತ್ತು ಎಲ್ಲಾ ವ್ಯಾಪಕವಾದ ನಿರ್ಮಲ ಆಕಾಶಗಳ ಪ್ರಧಾನ ದೇವತೆ ಎಂದು ಪರಿಗಣಿಸುತ್ತಾರೆ. ಪುರಾಣಗಳಲ್ಲಿ ಚೆನ್ನಾಗಿ ತಿಳಿದಿರುವ ವ್ಯಕ್ತಿಗಳು ತತ್ಪುರುಷನನ್ನು ಚರ್ಮ, ಕೈಗಳು, ಸ್ಪರ್ಶ ಮತ್ತು ವಾಯುಗಳ ಪ್ರಧಾನ ದೇವತೆಯಾಗಿ ಕಾಣುತ್ತಾರೆ. ಅಘೋರಾ ಕಣ್ಣು, ಕಾಲು, ಬಣ್ಣ ಮತ್ತು ಬೆಂಕಿಯ ಪ್ರಧಾನ ದೇವತೆ ಎಂದು ಬುದ್ಧಿವಂತ ಜನರಿಗೆ ತಿಳಿದಿದೆ. ವಾಮದೇವರು ನಾಲಿಗೆ, ಗುದದ್ವಾರ, ರುಚಿ ಮತ್ತು ನೀರಿನ ಪ್ರಧಾನ ದೇವರು ಎಂದು ಭಕ್ತರು ಅರ್ಥಮಾಡಿಕೊಳ್ಳಬೇಕು. ಅವರ ಪ್ರಕಾರ ಸದ್ಯೋಜಾತ ಮೂಗು, ಲೈಂಗಿಕ ಅಂಗಗಳು, ವಾಸನೆ ಮತ್ತು ಭೂಮಿಯ ಪ್ರಧಾನ ದೇವರು.

            "ಪಂಚ ಬ್ರಹ್ಮ ಸ್ವರೂಪ”ವೆಂದರೆ, (1) ಅನ್ನಮಯ, (2) ಪ್ರಾಣಮಯ, (3) ಮನೋಮಯ, (4) ವಿಜ್ಞಾನಮಯ, (5) ಆನಂದಮಯ ಬ್ರಹ್ಮನೆಂಬುವರು.

ಪಾಙ್ಕ್ತಿಮ್  ವಾ ಇದಗ್‌ಂ ಸರ್ವಂ |

ಪಾಙ್ಕೀನೈವ ಪಾಙ್ಕಗ್  ಸ್ಪೃಣೋತಿತಿ |

(ತೈ. ಉ. ೧-೭)

ಭಾವಾರ್ಥ:- ಈ ಸಕಲ ವಿಶ್ವವೂ ಐದು ವಿಧವುಳ್ಳದ್ದಾಗಿರುತ್ತದೆ. ಈ ಐದು ವಿಧವಾದ ತತ್ತ್ವಗಳನ್ನೊಳಗೊಂಡ ವಿಶ್ವವನ್ನರಿತ ಪಂಡಿತನೂ ಪಂಚವಿಧವಾದ ಶ್ರೇಯಸ್ಸನ್ನೂ ಪಡೆಯುತ್ತಾನೆ ಎಂದು ಪ್ರಶಂಸಿಸಿದೆ.

 

ಪಂಚಬ್ರಹ್ಮರು ಪ್ರಾಥಮಿಕ ಮತ್ತು ದೈಹಿಕ ಮಟ್ಟವನ್ನು ನಡೆಸುತ್ತಾರೆ

ಈಶನ - ಆಕಾಶ, ಧ್ವನಿ, ಕಿವಿ, ಬಾಯಿ

ತತ್ಪುರುಷ - ಗಾಳಿ, ಸ್ಪರ್ಶ, ಚರ್ಮ, ಕೈಗಳು

ಅಘೋರ - ಬೆಂಕಿ, ಬಣ್ಣ, ಕಣ್ಣುಗಳು, ಕಾಲುಗಳು

ವಾಮದೇವ - ನೀರು, ರುಚಿ, ನಾಲಿಗೆ, ಗುದದ್ವಾರ

ಸದ್ಯೋಜಾತ  - ಭೂಮಿ, ವಾಸನೆ, ಮೂಗು, ಲೈಂಗಿಕ ಅಂಗಗಳು.

 

ತಾಂತ್ರಿಕ ಸಾಹಿತ್ಯದಲ್ಲಿ ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಪಂಚಭೂತ

ಬ್ರಹ್ಮ - ಪೃಥ್ವಿ (ಎಲ್ಲ ಜೀವಿಗಳು ಇವರಿಂದ ಸೃಷ್ಟಿಯಾಗುತ್ತವೆ) - ಭೂಮಿ

ವಿಷ್ಣು - ಆಪ (ಒಳಗೆ ಬರಬಹುದಾದ ಒಂದು) ಅಂದರೆ ನೀರು. ಅಕ್ಷರಶಃ ಅರ್ಥವು ಒಳಗೆ ಹೋಗುವುದು

ರುದ್ರ - ಅಗ್ನಿ (ಬೆಂಕಿ)

ಈಶ್ವರ - ವಾಯು (ಗಾಳಿ) ಏಕೆಂದರೆ ಗಾಳಿ ಅಥವಾ ಜೀವವಿಲ್ಲದೆ ಜೀವನವು ಅಸ್ತಿತ್ವದಲ್ಲಿಲ್ಲ

ಸದಾಶಿವ - ಆಕಾಶ (ಆಕಾಶ ಎಂದರೆ ಅಕ್ಷರಾರ್ಥದಲ್ಲಿ "ಭೂಮಿಯಲ್ಲಿನ (ಮೂಲಾಧಾರದಲ್ಲಿನ) ಜೀವ ಉಸಿರು ಒಂದು ಆಯುಧ")

            ललित = ಲಲಿತ = ಎಂಬ ಸಂಸ್ಕೃತ ಪದವನ್ನು ವಿಂಗಡಿಸಿ ಅರ್ಥವನ್ನು ಹುಡುಕಿದಾಗ "ಸೃಷ್ಟಿಕರ್ತ ವಿಧ್ವಂಸಕ ಅಮೃತ" ಎಂಬ ಅರ್ಥ ಬರುತ್ತದೆ. ಲಲಿತಾದೇವಿಯು, ದುರ್ಗಾದೇವಿ ಅಥವಾ ಲಕ್ಷ್ಮಿಯ ರೂಪವನ್ನು ಸೂಚಿಸುತ್ತಾಳೆ, ಪಂಚಭೂತಗಳ ಮೇಲೆ ಆಸೀನವಾಗಿರುವ ದೇವತೆ.

 

ಪಂಚಬ್ರಹ್ಮ ಉಪನಿಷತ್  ವಾಸ್ತವದ ಐದು ರೂಪಗಳು

            ಪಂಚಬ್ರಹ್ಮ ಉಪನಿಷತ್  ವಾಸ್ತವದ ಐದು ರೂಪಗಳನ್ನು (ಬ್ರಹ್ಮನ್) ಅಥವಾ ಅತ್ಯುನ್ನತ ವಾಸ್ತವದಿಂದ ಹುಟ್ಟಿದ ಶಿವನನ್ನು ವಿವರಿಸುತ್ತದೆ. ಸದ್ಯೋಜಾತ ಭೂಮಿಯನ್ನು ಪ್ರತಿನಿಧಿಸುತ್ತದೆ ಮತ್ತು ಕ್ರಿಯಾ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ (ಕ್ರಿಯೆಯ ಶಕ್ತಿ), ಎಂದು ಪ್ರತಿಪಾದಿಸುತ್ತದೆ. ಅಘೋರವು ಬೆಂಕಿಯನ್ನು ಪ್ರತಿನಿಧಿಸುತ್ತದೆ ಮತ್ತು ಇಚ್ಛಾ ಶಕ್ತಿಯನ್ನು (ಇಚ್ಛೆಯ ಶಕ್ತಿ, ಬಯಕೆ) ಮತ್ತು ವಾಮದೇವ ನೀರನ್ನು ಪ್ರತಿನಿಧಿಸುತ್ತದೆ ಮತ್ತು ಜ್ಞಾನ ಶಕ್ತಿಯನ್ನು (ಜ್ಞಾನದ ಶಕ್ತಿ) ಪ್ರಚೋದಿಸುತ್ತದೆ. ತತ್ಪುರುಷವು ಗಾಳಿಯನ್ನು ಪ್ರತಿನಿಧಿಸುತ್ತದೆ ಮತ್ತು ಇದು ಜೀವನದ ಶಕ್ತಿಯಾಗಿದೆ (ಉಸಿರು, ಪ್ರಾಣ), ಈಶನವು ಆಕಾಶ[3]-ಅಂತರಿಕ್ಷ  ಮತ್ತು ಅತೀಂದ್ರಿಯವನ್ನು ಪ್ರತಿನಿಧಿಸುತ್ತದೆ.

 

ವಿಶ್ವಕರ್ಮ

ವಿಶ್ವಕರ್ಮ ಪದವನ್ನು ವೇದದಲ್ಲಿ ಹೇಗೆ ಬಾವಿಸಲಾಗಿದೆ.

            "ಋಷಿ ಪಂಚಮಿ ದಿನಂ" "ಋಷಿ ಪಂಚಮಿ ದಿನಂ" ಎಂದರೆ ಅಕ್ಷರಶಃ 'ಐದು ಋಷಿಗಳ ಒಗ್ಗಟ್ಟಿನ ದಿನ.' ಈ ದಿನವನ್ನು ಆಚರಿಸುವವರು ವಿಶ್ವಕರ್ಮನಿಗೆ ನಶಿಸುವ ಮಾನವರಂತೆ ಹುಟ್ಟುಹಬ್ಬವಿಲ್ಲ, ಆದರೆ ಅವರ ಐದು ಮಕ್ಕಳು (ಐವರು ಋಷಿಗಳು - ಪಂಚ ಬ್ರಹ್ಮರು) ಬಂದ ನೆನಪಿನ ದಿನ ಮಾತ್ರ ಎಂದು ನಂಬುತ್ತಾರೆ. ಒಟ್ಟಿಗೆ ತಮ್ಮ ಒಗ್ಗಟ್ಟನ್ನು ಘೋಷಿಸಲು ಮತ್ತು ಅವರ ಪ್ರಖ್ಯಾತ ತಂದೆಗೆ ಪ್ರಾರ್ಥಿಸಲು, ವಿಶ್ವಕರ್ಮ ಪೂಜಾ ದಿನವಾಗಿ ಆಚರಿಸುತ್ತಾರೆ.  

            ಋಗ್ವೇದದ ಹತ್ತನೇ ಪುಸ್ತಕದಲ್ಲಿ ವಿಶ್ವಕರ್ಮನ್ ಎಂಬ ಹೆಸರು ಐದು ಬಾರಿ ಬರುತ್ತದೆ. ಋಗ್ವೇದದ ಎರಡು ಸ್ತುತಿಗೀತೆಗಳು ವಿಶ್ವಕರ್ಮನನ್ನು ಎಲ್ಲರು ನೋಡುವಂತೆ ಗುರುತಿಸುತ್ತಾರೆ ಮತ್ತು ಕಣ್ಣುಗಳು, ಮುಖಗಳು, ತೋಳುಗಳು ಮತ್ತು ಪಾದಗಳನ್ನು ಪ್ರತಿ ಬದಿಯಲ್ಲಿಯೂ ಹೊಂದಿದ್ದಾರೆ ಮತ್ತು ರೆಕ್ಕೆಗಳನ್ನು ಸಹ ಹೊಂದಿದ್ದಾರೆ. ಅವರನ್ನು ಸೃಷ್ಟಿಯ ನಂತರದ ಬ್ರಹ್ಮ ದೇವರು ಎನ್ನುತ್ತಾರೆ, ಅವರು ನಾಲ್ಕು ಮುಖಗಳು ಮತ್ತು ನಾಲ್ಕು ತೋಳುಗಳನ್ನು ಹೊಂದಿದ್ದು ಈ ಅಂಶಗಳಲ್ಲಿ ಬ್ರಹ್ಮನನ್ನು ಹೋಲುತ್ತಾರೆ. ಅವರು ಎಲ್ಲಾ ಸಮೃದ್ಧಿಯ ಮೂಲವಾಗಿ ಪ್ರತಿನಿಧಿಸುತ್ತಾರೆ, ಅವರ ಆಲೋಚನೆಗಳಲ್ಲಿ ಶೀಘ್ರವಾಗಿರುತ್ತಾರೆ ಮತ್ತು  ಋಷಿಗಳು, ಆರಾಧಕರು, ಮತ್ತು ಮಾತಿನ ಅಧಿಪತಿ ಎಂದು ಹೆಸರಿಸಲ್ಪಟ್ಟಿದ್ದಾರೆ. ಋಗ್ವೇದದ ಕೆಲವು ಭಾಗಗಳ ಪ್ರಕಾರ, ವಿಶ್ವಕರ್ಮನು ಅಂತಿಮ ವಾಸ್ತವದ ವ್ಯಕ್ತಿತ್ವದ ವ್ಯಕ್ತೀಕರಣ,  ಈ ವಿಶ್ವದಲ್ಲಿ ಜೀವಂತ ಮತ್ತು ನಿರ್ಜೀವವಾಗಿರುವ ಶಕ್ತಿಯು ದೇವತೆಗಳಲ್ಲಿ, ಸೃಷ್ಠಿಶೀಲ ಅಂತರ್ಗತವಾಗಿರುತ್ತದೆ. ಅವರನ್ನು ಐದನೇ ಏಕದೇವತಾವಾದಿ ದೇವರ ಪರಿಕಲ್ಪನೆ ಎಂದು ಪರಿಗಣಿಸಲಾಗಿದೆ: ಅವರು ಕಾಲಮಾನದ ಆಗಮನಕ್ಕೆ ಮುಂಚಿನಿಂದಲೂ ಬ್ರಹ್ಮಾಂಡದ ವಾಸ್ತುಶಿಲ್ಪಿ ಮತ್ತು ದೈವಿಕ ಎಂಜಿನಿಯರ್ ಎಂದು ಪರಿಗಣಿಸಲಾಗಿದೆ.

            ವಿಶ್ವಕರ್ಮನ ಶಕ್ತಿಯನ್ನು ಪರಾಶಕ್ತಿ, ಆದಿಶಕ್ತಿ, ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿ ಎಂದು ಐದು ವಿಧವಾಗಿ ವಿಂಗಡಿಸುತ್ತಾರೆ. ವಿಶ್ವಕರ್ಮ ಸಂಜಾತ ಪಂಚ ಬ್ರಹ್ಮರನ್ನು ಕೂಡಿಕೊಂಡು ಸೃಷ್ಟಿಕಾರ್ಯವನ್ನು ಮುಂದುವರಿಸಿದವರು ಇವರು. ಏಳೇಳು ಯುಗದಲ್ಲಿ ಕಾಳಿಯ ಮಗ ನಾನು ಎನ್ನುವ ವಿಶ್ವಕರ್ಮರ ಮಾತಿನಲ್ಲಿ ಕಾಳಿ ಕುಲದೇವತೆಯಾದಂತೆ ಕರ್ತೃತ್ವ ಶಕ್ತಿಯುಳ್ಳವಳೂ ಆಗಿದ್ದಾಳೆ.  ವಿಶ್ವದ ಮೂಲದಲ್ಲಿರುವ ವಿಶಿಷ್ಟ ಶಕ್ತಿಯೇ ಅಗ್ನಿ. ಇದನ್ನೇ ಇಚ್ಛಾಶಕ್ತಿ ಎಂದು ಹೇಳಲಾಗುತ್ತದೆ. ಸೂಕ್ಷ್ಮರೂಪನಾದ ವಿಶ್ವಕರ್ಮನು ಯಜ್ಞದ ಮೂಲಕ ಸ್ಥೂಲರೂಪವನ್ನು ಪಡೆಯುವುದೇ ಸೃಷ್ಟಿ, ಸಮಿತ್ತು ಅಂದರೆ ಸುಡುವುದು. ಸುಡುವುದರಿಂದಲೇ ಅಗ್ನಿ ಅಂದರೆ ಶಕ್ತಿ ಪ್ರತ್ಯಕ್ಷವಾಗುತ್ತದೆ. ಅಗ್ನಿಯು ಮನ, ಪ್ರಾಣ ಮತ್ತು ವಾಕ್‌ನ ಸಂಕಲಿತರೂಪ. ಮನವು ಪ್ರಾಣವಿಷ್ಠವಾಗುವುದು ಅದೇ ಕ್ರಿಯೆಯಲ್ಲಿ ವಾಕ್‌ನೊಂದಿಗೆ ನಡೆಯುವುದು ಒಂದು ಮತ್ತೊಂದಾಗಿ ಪರಿವರ್ತಿತವಾಗುವುದು. ಈ ಅರ್ಥದಲ್ಲಿಯೇ ವಿಶ್ವಶಿಲ್ಪಿಯಾದ ವಿಶ್ವಕರ್ಮನನ್ನು ಅಗ್ನಿಯೆಂದು ಕರೆಯಲಾಗಿದೆ.  

 

ಅಕ್ಷರಶಃ ವಿಶ್ವಕರ್ಮ ಸಂಸ್ಕೃತ ಪದಕೋಶದ ವಿಸ್ಮಯ

            ವಿಶ್ವಕರ್ಮ = ವಿಶ್ವಕ + ರ + ಮ = ವಿಶ್ವಕ ಎಂದರೆ ಪ್ರತಿಯೊಂದು ವಸ್ತುವನ್ನು ರಚಿಸುವವನು + ಆಹ್ವಾನಿಸುವುದು + ಜ್ಞಾನ = ಜ್ಞಾನವನ್ನು ಆಹ್ವಾನಿಸಿ ಪ್ರತಿಯೊಂದು ವಸ್ತುವನ್ನು ರಚಿಸುವವನು. ಇನ್ನೊಂದು ರೀತಿಯಲ್ಲಿ, ವಿಶ್ವಕರ್ಮ = ವಿಶ್ವ + ಕರ್ಮ = ವಿಶ್ವದ ಶ್ರಮದಾಯಕ/ ಶ್ರಮಶೀಲ. ಜ್ಞಾನವನ್ನು ಆಹ್ವಾನಿಸುವುದು ಹೇಗೆ ಅದುವೇ ಕುಂಡಲಿನಿ ಪ್ರಾಣಾಯಾಮ. ಅಕ್ಷರಶಃ ಇದರ ಅರ್ಥ ಹುಡುಕಿದಾಗ " ಶ್ರೇಷ್ಠತೆ ಶಕ್ತಿಯುತ ಶಿಕ್ಷಕ ಮಾಂತ್ರಿಕ ಸೂತ್ರವನ್ನು ಪಡೆದುಕೊಳ್ಳುವ ಆತ್ಮ " ಎಂದು ಬರುತ್ತದೆ. ಈ ಮೂರು ಅರ್ಥದಲ್ಲೂ ಒಂದು ಆಳವಾದ ಅಧ್ಯಯನದ ಮಾರ್ಗ ಇದೆ,

 

ಯಜುರ್ವೇದದಲ್ಲಿ ವಿಶ್ವಕರ್ಮ

ಧ್ಯಾನದ ಮೂಲಕ ಜ್ಞಾನವನ್ನು ಆಹ್ವಾನಿಸಿ ಪ್ರತಿಯೊಂದು ವಸ್ತುವಿನ ಸೃಷ್ಟಿಕರ್ತ

ಯಜುರ್ವೇದ - ಅಧ್ಯಾಯ 1 ಶ್ಲೋಕ 4

ಸಾ ವಿಶ್ವಾಯುಃ ಸಾ ವಿಶ್ವಕರ್ಮಾ ಸಾ ವಿಶವಧಾಯಾಃ |

ಇನ್ದ್ರಸ್ಯ ತ್ವಾ ಭಾಗಮ್ ಸೋಮೇನಾತನಚ್ಮಿ ವಿಷ್ಣೋ ಹವ್ಯಂ ರಕ್ಷ || 4

ಭಾವಾರ್ಥ:- ಧ್ಯಾನದ ಮೂಲಕ ಗಾಳಿಯನ್ನು ಹರಡಲು ಆರ್ಜಿಸುವುದು, ಬಿಡುವುದು, ಜ್ಞಾನವನ್ನು ಆಹ್ವಾನಿಸಿ ಪ್ರತಿಯೊಂದು ವಸ್ತುವಿನ ಸೃಷ್ಟಿಕರ್ತನ (ವಿಶ್ವಕರ್ಮನ) ಸರ್ವವ್ಯಾಪಿಯನ್ನು ಪಡೆಯುವುದು. ವೈದಿಕ ದೇವರುಗಳ ಮುಖ್ಯಸ್ಥರು ತುಂಬಾ ಶ್ರೇಷ್ಠರು, ಸಂಜೆಯ ಜ್ಞಾನವಲ್ಲ, (ವೇದ ಅಧ್ಯಯನದ ಜ್ಞಾನವಲ್ಲ) ದೇವರ ಸಂಪತ್ತನ್ನು ಸಂಗ್ರಹಿಸಿದರು, ಸೋಮ ಯಜ್ಞವನ್ನು ಮಾಡುತ್ತಾರೆ, ಕೆಲವು ರೀತಿಯ ಬ್ಲೀಟ್‌ನಲ್ಲಿ (ಪಿಸುಮಾತು/ ಅಜಪ ಮಂತ್ರದಲ್ಲಿ) ಕಂಡುಬರುತ್ತಾರೆ, ಶುದ್ಧ ಬೆಣ್ಣೆಯನ್ನು (ಅಮೃತವನ್ನು) ಸಂರಕ್ಷಣೆಗಾಗಿ ಬೆಂಕಿಯ ಮೂಲಕ ಹರಡುವರು.  

 

ನಮ್ಮ ರಕ್ಷಣೆ ಮತ್ತು ಪ್ರಗತಿಗಾಗಿ ಜ್ಞಾನದ ಅಧಿಪತಿ

ಯಜುರ್ವೇದ - ಅಧ್ಯಾಯ 8 ಶ್ಲೋಕ 45

ವಾಚಸ್ಪತಿಂ ವಿಶ್ವಕರ್ಮಣಮೂತಯೇ ಮನೋಜುವಂ ವಾಜೇ ಅ ಅಧ್ಯಾ ಹುವೇಮ |

ಸ ನೋ ವಿಶ್ವಾನಿ ಜೋಷದ್ವಿಷ್ವಶಮ್ಭೂರವಸೇ ಸಾಧುಕರ್ಮಾ | ಉಪಯಾಮಗ್ರುಹೀತೋ ಅ

ಸಿನ್ದ್ರಾಯ ತ್ವಾ ವಿಶ್ವಕರ್ಮಣ ಅ ಏಷ ತೇ ಯೋನಿರಿನ್ದ್ರಾಯ ತ್ವಾ ವಿಶ್ವಕರ್ಮಣೇ ||

ಭಾವಾರ್ಥ:- ಇಂದು, ಯಜ್ಞದಲ್ಲಿ (ಮತ್ತು ಜೀವನದ ಕದನಗಳಲ್ಲಿ) ನಮ್ಮ ರಕ್ಷಣೆ ಮತ್ತು ಪ್ರಗತಿಗಾಗಿ, ನಾವು ವಿಶ್ವಕರ್ಮರನ್ನು ಕರೆಯುತ್ತೇವೆ, ಮಾತು ಮತ್ತು ಜ್ಞಾನದ ಅಧಿಪತಿ, ಎಲ್ಲಾ ಕ್ರಿಯೆಗಳು ಮತ್ತು ಧರ್ಮಗಳ ಅಧಿಪತಿ, ಸಾರ್ವತ್ರಿಕ ಹಿತಚಿಂತಕ ಮತ್ತು ಉದಾತ್ತ ಕಾರ್ಯದ ಅಧಿಪತಿ, ಕ್ರಿಯೆಯಲ್ಲಿ, ಮನಸ್ಸಿನಂತೆ ವೇಗವಾಗಿ ಗುರುತು ಹೊಡೆಯುವವರು. ಆತನು ನಮ್ಮ ಎಲ್ಲಾ ಪ್ರಾರ್ಥನೆ ಮತ್ತು ಕೊಡುಗೆಗಳನ್ನು ಆಲಿಸಿ ಮತ್ತು ನಮ್ಮ ರಕ್ಷಣೆ ಮತ್ತು ಬೆಂಬಲಕ್ಕಾಗಿ ಬರಲಿ.

 

ಯದೀ ಭೂಮಿಂಜನರ್ಯವಿಶ್ವಕರ್ಮಾವಿದ್ಯಾಮೌರ್ಣೋನ್ಮಹಿನಾ ವಿಶ್ವಚಕ್ಸಾಃ (ಯಜು ೪:೬;೨)

ಭಾವಾರ್ಥ:- ಈ ಸಮಸ್ತ ಜಗತ್ತಿನ ಜನಕನೂ ನಿರ್ಮಾತೃವೂ ಕಾರಣ ರೂಪನೂ ಸಮಸ್ತ ಕಾರ್ಯಗಳಿಗೂ ಅಂತರ್ಯಾಮಿಯಾಗಿದ್ದು ಚೈತನ್ಯ ಕೊಡುವವನೂ ಸರ್ವಾರ್ಥತಃ ವಿಶ್ವಕರ್ಮ ಶಬ್ದವಾಚ್ಯನೇ ಸರಿಯೆಂದು ಸಿದ್ಧಾಂತೀಕರಿಸಿ,

 

ಯ ಇಮಾ ವಿಶ್ವಾ ಭುವನಾನಿ ಜುಹ್ಹದೃಷಿರ್ಹೋತಾ ನಿಷಸಾದಾ ಪಿತಾನಃ!

ಸಆಶಿಷಾ ದ್ರವಿಣಮಿಚ್ಛಮಾನಃ ಪರಮಚ್ಛದೋ ವರ ಆ ವಿವೇಶ (ಯಜುಃ ೪:೬;೨)

ಭಾವಾರ್ಥ:- ವಿಶ್ವಕರ್ಮನು ಸೃಷ್ಟಿಗೆ ಪೂರ್ವದಲ್ಲಿ ಎಂದರೆ ಪ್ರಳಯ ಕಾಲದಲ್ಲಿ ಏನೊಂದೂ ಇಲ್ಲದಿದ್ದಾಗ ಎಲ್ಲ ಲೋಕಗಳನ್ನೂ .... ಸಮಸ್ತ ಮಹಾ ಭೂತತತ್ತ್ವಗಳನ್ನೂ .....  ತನ್ನಲ್ಲಿ ಅಡಗಿಸಿಕೊಂಡ-ವನಾಗಿದ್ದನು. ಹೀಗಿದ್ದರೂ ಆತನಿಗೆ ಸರ್ವಸೃಷ್ಟಿ ಕರ್ತೃತ್ವ ಸರ್ವ-ಸಂಹಾರಕರ್ತತ್ವ ಸರ್ವಪೋಷಣಕರ್ತತ್ವಗಳೂ ಇದ್ದು, ಎಲ್ಲಾಕಾಲ-ದಲ್ಲಿಯೂ ಎಲ್ಲವನ್ನೂ ತಿಳಿಯುವ ಅತೀಂದ್ರಿಯ ದ್ರಷ್ಟನೂ ಆತನೇ ಆಗಿರುತ್ತಾನೆ. ತನ್ನ ಸಂಕಲ್ಪದಂತೆ ಇಚ್ಛಾ ಮಾತ್ರದಿಂದ ಈ ಜಗತ್ತನ್ನು ಕ್ರಮವಾಗಿ ಸೃಷ್ಟಿಸಿ, ತನ್ನ ಸ್ವರೂಪ ಚೈತನ್ಯದಿಂದಲೇ ಸರ್ವ ಶರೀರಗಳ ಹೃನ್ಮಧ್ಯಸ್ಥಾನದಲ್ಲಿ ವಾಸಿಸುತ್ತಾ ಎಲ್ಲವನ್ನೂ ಬೆಳಗುತ್ತಿದ್ದಾನೆ.

 

ವಿಶ್ವಕರ್ಮಾ ಹ್ಯಜನಿಷ್ಠದೇವ ಆದಿದ್ಗಂಧರ್ವೋಅಭವದ್ದ್ವಿತೀಯಃ | ತೃತೀಯಃ ಪಿತಾ

ಜನಿತೌಷಧೀನಾಂ ಅಸಾಂ ಗರ್ಭಂ ವ್ಯದ ಧಾತ್ಪುರುತ್ರಾ || (ಯಜುಃ ೪;೬:೨)

ಭಾವಾರ್ಥ:-  ಬ್ರಹ್ಮಾಂಡ ಮಧ್ಯದಲ್ಲಿ ದೇವ ತಿರ್ಯಗಾದಿ ವಿವಿಧ ಭೇದವನ್ನುಂಟುಮಾಡಿರುವ, ವಿಶ್ವಕರ್ಮನು ಮೊದಲು ತಾನೇ ಬ್ರಹ್ಮೆನಾಗಿಯೂ, ಅನಂತರ ಗಂಧರ್ವನಾಗಿಯೂ, ತರುವಾಯ ಸೋಮನಾಗಿಯೂ ಬಹುವಿಧನಾದ ರೂಪಿನಿಂದ ತಾನೇ ಕಾಣಿಸಿ ಕೊಂಡವನಾದನು.

 

ವಾಯುರೂಪದಲ್ಲಿ ನೀರಿನಲ್ಲೆಲ್ಲಾ ಸಂಚರಿಸಿದ ವಿಶ್ವಕರ್ಮ

 

ಆಪೋವಾ ಇದಮಗ್ರೇ ಸಲಿಲಮಾಸೀತ್ತಸ್ಮಿನ್‌ ಪ್ರಜಾಪತಿರ್ವಾ-ಯುರ್ಭೂತ್ವಾ ಚರಥ್ಸ ಇಮಾ ಪಶ್ಯತ್ತಾಂ ವರಾಹೋ ಭೂತ್ವಾ ಹರತ್ತಾಂ ವಿಶ್ವಕರ್ಮಾಭೂತ್ವಾ ವ್ಯಮಾರ್ಟ್‌ಥ್‌ ಸಾಪ್ರಥತ ಸಾಪೃಥಿವ್ಯ ಭವತ್ತತ್‌ ಪೃಥಿವೈ ಪೃಥಿವಿತ್ವಂ ತಸ್ಯಾಮಶ್ರಾಮ್ಯ ತ್ಪ್ರಜಾಪತಿ ಸ್ಸದೇವಾನಸೃಜತ ವಸೂನ್‌ ರುದ್ರಾನಾದಿತ್ಯಾನ್‌ ತೇ ದೇವಾಃ ಪ್ರಜಾಪತಿ ಮಬ್ರುವನ್‌ ಪ್ರಜಾಯಾ ಮಹಾ ಇತಿ ಸೋsಬ್ರವೀತ್‌॥ ' (ಯುಜರ್ವೇದ 8-1-5)

ಸಾಯಣ್ಣ ಭಾಷ್ಯ ಭಾವಾರ್ಥ:-  ಈ ಕಣ್ಣುಗಳಿಗೆ ಕಾಣಿಸುವಂತಹ ನದಿ ಸಾಗರಾದಿಗಳು ಜಗತ್ತಿನ ಸೃಷ್ಟಿಗೆ ಮೊದಲು ನೀರಿನ ರೂಪದ-ಲ್ಲಿಯೇ ಇತ್ತು. ಆ ಜಲದಲ್ಲಿ ವಿಶ್ವಕರ್ಮ ಪ್ರಜಾಪತಿ ಸ್ವಶರೀರದಲ್ಲಿ ವಾಸಿಸುವ ಅವಕಾಶವಿರಲಿಲ್ಲ. ಏಕೆಂದರೆ ಈತನು ನಿರೂಪನು ನಿರ್ಗುಣನೂ ಆದ ಪರಮ ಪರಮೇಶ್ವರನು. ಆದ್ದರಿಂದ ವಾಯುರೂಪದಲ್ಲಿ ನೀರಿನಲ್ಲೆಲ್ಲಾ ಸಂಚರಿಸಿದ. ಹೀಗೆ ಜನಿಸಿ ಜಲಮಗ್ನವಾಗಿದ್ದ ಭೂಮಿಯನ್ನು ವರಾಹಮೂರ್ತಿಯಾಗಿ ತನ್ನ ಕೋರೆಯಿಂದ ಭೂಮಿಯನ್ನು ಹೊರಕ್ಕೆ ತೆಗೆದು ಉದ್ದರಿಸಿ, ವರಾಹ ರೂಪವನ್ನು ಉಪಸಂಹಾರಗೊಳಿಸಿ ವಿಶ್ವಕರ್ಮರೂಪವನ್ನು ದರಿಸಿ ಭೂದೇವಿಯ ಅಂಗಾಂಗಗಳಿಂದ ನೀರನ್ನು ಒರೆಸಿ ಭೂಮಿಯನ್ನು ವಿಸ್ತಾರಗೊಳಿಸಿದನು. ನಂತರ ಕಾಣಿಸುವ ಈ ಭೂಮಿಯು ಸಕಲ ಪ್ರಾಣಿಗಳಿಗೆ ಆಧಾರವಾಗುವಂತೆ ನೀರನ್ನು ಪ್ರತ್ಯೇಕಿಸಿದ್ದರಿಂದ ಭೂಮಿಗೆ ಪೃಥ್ವೀ ಎಂಬ ಹೆಸರಾಯಿತು. ವಿಶ್ವಕರ್ಮ ಪ್ರಜಾಪತಿಯು (ವಿಶ್ವಕರ್ಮ ಮತ್ತು ಪ್ರಜಾಪತಿ ಒಂದೇ ಶಕ್ತಿಯ ಭಿನ್ನ ರೂಪಗಳೆಂದು ಸಾಯಣರು ಈ ಮೊದಲೇ ಹೇಳಿದ್ದಾರೆ) ಪೃಥ್ವೀ ಭೂತದಲ್ಲಿ ಅಧಿವಾಸವನ್ನು ನಡೆಸಿ, ತಪಸ್ಸು ಮಾಡಿ, ಅಷ್ಟವಸುಗಳನ್ನು ಏಕಾದಶ ರುದ್ರರನ್ನು, ದ್ವಾದಶ ಆದಿತ್ಯರನ್ನೂ ಸೃಷ್ಟಿಮಾಡಿದ. ಹೀಗೆ ಜಗದೀಶ್ವ-ರನಾದ ವಿಶ್ವಕರ್ಮನು ಸರ್ವಪ್ರಪಂಚಗಳ ಸೃಷ್ಟಿಕರ್ತನಾದನು. ಸ್ವಕೀಯ ತೇಜಃ ಪ್ರತಿಬಿಂಬ ಮೂರ್ತಿಯನ್ನು ಲೋಕ ಸರ್ಜನಾ-ಕಲಾತಿರೇಕನಿಗೆ ತ್ವಷ್ಟನಾಮದ ಪ್ರತ್ಯೇಕ ಪುತ್ರ ರೂಪವಾಗಿ ವ್ಯಕ್ತಗೊಂಡ. ಆದ್ದರಿಂದಲೇ ವಿಶ್ವಕರ್ಮಣ ಸ್ಸಮವರ್ತತಾದಿ ತಸ್ಯ ತ್ವಷ್ಟಾವಿದಧದ್ರೂಪಮೇತಿ ಎಂಬ ಯಜುರಾರಣ್ಯಕದ ವಚನವನ್ನು ಜಗತ್ಕಾರಣ ಕರ್ತನಾದ ವಿಶ್ವಕರ್ಮನಿಂದ ಸಮಸ್ತ ಜಗತ್ತು ಸೃಷ್ಟಿಗೊಂಡಿತು, ಆ ವಿರಾಟ್‌ಮೂರ್ತಿಯ ಶಕ್ತಿಯಿಂದ ನಾನಾ ರೂಪಗಳನ್ನು ನಿರ್ಮಿಸುತ್ತಾ ತ್ವಷ್ಟ (ದೇವಶಿಲ್ಪಿ) ಪ್ರವರ್ತಿಸುತ್ತಿದ್ದಾನೆ ಎಂದು ಭಾಷ್ಯಕಾರರು ವಿವರಿಸಿರುತ್ತಾರೆ.

            ಪುರುಷಸೂಕ್ತದಲ್ಲಿ ಉತ್ತರಭಾಗದಲ್ಲಿ ಮೊದಲ ಮಂತ್ರದಲ್ಲಿ ವಿಶ್ವಕರ್ಮ ತ್ವಷ್ಟ ಎಂಬ ವಿಶೇಷ ನಾಮಗಳಿಂದ ಪುರುಷ ಸಂಬೋಧಿತನಾಗಿದ್ದರೂ ಅವು ವಿಷ್ಣುವಿನ ಹೆಸರುಗಳು ಎಂದೇ ವಿಷ್ಣು ಸಹಸ್ರನಾಮದಲ್ಲಿ ಗ್ರಹಿಸಲಾಗಿದೆ.

 

ಪರಾ ಪ್ರಕೃತಿ ದೇವತೆ ವಿಶ್ವಕರ್ಮ

            ಪರಾ ವಿದ್ಯೆ ಎಂದರೆ ಅಕ್ಷರ ವಿದ್ಯೆ, ಅಕ್ಷರದಲ್ಲಿ ಅಡಗಿರುವ ಬ್ರಹ್ಮಜ್ಞಾನದಲ್ಲಿ ಆವಿಷ್ಕಾರ ಆಗುವ ದೇವನೇ ವಿಶ್ವಕರ್ಮ ಎಂದು ಬ್ರಹ್ಮಜ್ಞಾನ ಮಾರ್ಗದತ್ತ ಬೋದನೇ ಈ ಕೆಳಗೆ ಇದೆ.

ಭವಿಷ್ಯಮಹಾಪುರಾಣಂ – ಖಂಡ-4 ಅಧ್ಯಾಯ-20

“ಪ್ರಕೃತಿಯು ಮೊದಲು ಅಪರಾ ಮತ್ತು ಪರಾ ಎಂದು ಎರಡು ರೂಪವನ್ನು ತಾಳಿದಳು. ಆ ಪರಾಪ್ರಕೃತಿಯು ನಾಮಮಾತ್ರಾ, ಪುಷ್ಪ ಮಾತ್ರಾ, ತನ್ಮಾತ್ರಾ, (ಸೂಕ್ಷ್ಮಳೂ) ಶಬ್ದಮಾತ್ರಾ, ಸ್ಪರ್ಶಮಾತ್ರಾ, ರೂಪಮಾತ್ರಾ, ರಸಮಾತ್ರಾ, ಮತ್ತು ಗಂಧಮಾತ್ರಾ ಎಂದು ಎಂಟು ಬಗೆಯಾದಳು. ಪೃಥಿವೀ, ಅಪ್‌, (ನೀರು) ತೇಜಸ್ಸು, ವಾಯು, ಆಕಾಶ, ಮನಸ್ಸು, ಬುದ್ಧಿ, ಮತ್ತು ಅಹಂಕಾರ ಈ ರೀತಿ ಅಪರಾ ಪ್ರಕೃತಿಯು ಎಂಟು ಬಗೆಯಾದಳು. ವಿಷ್ಣು, ಬ್ರಹ್ಮ ಮಹಾದೇವ, ಗಣಪತಿ, ಯಮ, ಷಣ್ಮುಖ, ಕುಬೇರ ಮತ್ತು ವಿಶ್ವಕರ್ಮ ಈ ಎಂಟು ಮಂದಿಯೂ ಪರಾಪ್ರಕೃತಿ ದೇವತೆಗಳು. ಆದಿಶೇಷ ಸೂರ್ಯ, ಚಂದ್ರ, ಸುಮೇರು, ವರುಣ, ಅಗ್ನಿ, ವಾಯು ಮತ್ತು ಧ್ರುವ ಈ ಎಂಟು ಮಂದಿಯೂ ಅಪರಾಪ್ರಕೃತಿಯ ಅಂಶ ಸಂಭೂತ ದೇವತೆಗಳು.

 

ಋಗ್ವೇದದ ಸಾಯಣ್ಣಭಾಷ್ಯದಲ್ಲಿ ಬಿಂಬಿತ ವಿಶ್ವಕರ್ಮ

 “ವಿಶ್ವಕರ್ಮಾ ಸರ್ವಸ್ಯ ಕರ್ತಾ” (ನಿರುಕ್ತ. ೧೦.೨೫), ಸಕಲವನ್ನೂ ನಿರ್ಮಿಸಿ ಪರಿಷ್ಕರಿಸುವುದರಿಂದ ಎಂದರೆ ಸಕಲವನ್ನೂ ಸೃಷ್ಟಿಸಿರು-ವುದರಿಂದ ವಿಶ್ವಕರ್ಮನೆಂದು ಹೆಸರು ಎಂದು ನಿರುಕ್ತಕಾರರ ನಿರ್ವಚನವಿರುತ್ತದೆ. ವಿಶ್ವಕರ್ಮಾಹ್ಯಜನಿಷ್ಟ ದೇವ ಆದಿದ್ಗಂಧರ್ವೋ ಅಭವದ್ದ್ವಿತೀಯಃ | ತೃತೀಯಃ ಪಿತಾ ಜನಿತೌಷಧೀನಾಮಪಾಂ ಗರ್ಭಂ ವೈದಧಾತ್‌ ಪುರುತ್ರಾ ॥  (ತೈ. ಸಂ, 4-೬.೨.೩) ಭಾವಾರ್ಥ:- ದೇವತಾತ್ಮನಾದ ವಿಶ್ವಕರ್ಮನು ಮೊದಲು ಉತ್ಪನ್ನ-ನಾದನು. ಎರಡನೆಯದಾಗಿ ಗಂಧರ್ವನೂ ಮೂರನೆಯದಾಗಿ ಓಷಧಿಗಳಿಗೆ ಉತ್ಪಾದನಾದ ಪಿತೃವೂ ಜನಿಸಿದರು. ಮತ್ತು ಅನೇಕ ಕಡೆಗಳಲ್ಲಿ ಉದಕರೂಪವಾದ ಗರ್ಭವು ಸ್ಥಾಪಿತವಾಯಿತು ಎಂಬ ಈ ವಿವರಣವು ವಿಶ್ವಕರ್ಮನ ಜನ್ಮವನ್ನು ತಿಳಿಸುತ್ತದೆ.

            ವಿಶ್ವವ್ಯಾಪಕನಾದ ವಿಶ್ವಕರ್ಮನು ಯಾವ ರೀತಿ ಸೃಷ್ಟಿ, ಸ್ಥಿತಿ ಮತ್ತು ಲಯಗಳಿಗೆ ಕಾರಣನೋ ಹಾಗೆಯೇ ಅವನ ಸಂಕಲ್ಪವನ್ನನುಸರಿಸಿ ಅವನ ಕ್ರಿಯೆಯಾದುದೂ, ವಿಶ್ವವ್ಯಾಪಕವೂ 'ಆದ ಯಜ್ಞವೂ ಸಹ ಸೃಷ್ಟಿ; ಸ್ಥಿತಿ ಮತ್ತು ಲಯಗಳಿಗೆ ಮೂಲಕಾರ-ಣವಾಗಿರುತ್ತದೆ. ಹಿಂದೆ ಯಜ್ಞೇನ ಯಜ್ಞಮಯಜಂತ ದೇವಾಃ (೧-೧೬೪-೫೦) ಎಂಬ ಖುಕ್ಕನ ತಾತ್ಪರ್ಯವನ್ನು ವಿವರಿಸುವಾಗ ಪ್ರಾಪಂಚಿಕನಾದ ಧರ್ಮಗಳಿಗೆಲ್ಲ ಈ ಯಜ್ಞವೇ ಮೂಲವೆಂಬ ವಿಷಯವನ್ನು ತಿಳಿಸಲಾಗಿದೆ: ಈ ಯಜ್ಞದ ಧರ್ಮಗಳೇ ಅಂತರಿಕ್ಷದಲ್ಲಿ ಸ್ಥಾಪಿತವಾಗಿ ದ್ಯುಲೋಕಸ್ಥರಾದ ದೇವತೆಗಳನ್ನು ಅವರವರ ಸ್ಥಾನಗಳಲ್ಲಿರಿಸುತ್ತವೆ. ಯಜ್ಞದಿಂದಲೇ ಪ್ರಜಾಪತಿಯಿಂದ ಸೃಷ್ಟವಾದ ಸಕಲ ಭೂತಗಳೂ ತಮ್ಮ ಸ್ಥಿತಿ ಹೇತುವಾದ ಅನ್ನವನ್ನೂ ಶಕ್ತಿಯನ್ನೂ ಪಡೆಯುತ್ತವೆ. ..... ವಿಶ್ವಕರ್ಮನ ಬೆಳೆವಣಿಗೆಗೆ ಯಜ್ಞವು ಹೇಗೆ ಸಾಧಕವೋ, ಹಾಗೆಯೇ, ನಾಮರೂಪಗಳಿಂದ ವಿಭಕ್ತನಾದ ವೈಯಕ್ತಿಕವಾದ ಪ್ರಜೆಯ ಬೆಳೆವಣಿಗೆಗೂ ಈ ಯಜ್ಞವೇ ಸಾಧಕವು. ..... ಈ ಯಜ್ಞದಿಂದ ಯಜಮಾನನು ತನ್ನ ದೇವಋಣವನ್ನು ತೀರಿಸುತ್ತಾನೆ. .... ವಿಶ್ವಕರ್ಮನು ಸಕಲದೇಶ (ಪ್ರದೇಶ- Space) ಗಳನ್ನೂ ವ್ಯಾಪಿಸಿರುವಂತೆ, ಯಜ್ಞವೂ ಸಹ ದ್ಯಾವಾಪೃಥಿವೀ ಮತ್ತು ಆಂತರಿಕ್ಷಗಳೊಂದಿಗೆ ಐಕ್ಯತೆಯನ್ನು ಹೋಂದಿರುತ್ತದೆ.

            ಇಂದ್ರನೇ ವಿಶ್ವಕರ್ಮರೂಪದಿಂದ ತನ್ನ ಕರ್ತವ್ಯವನ್ನು ನೆರವೇರಿಸಿದರು ಎಂಬುದಕ್ಕೆ ಐತರೇಯ ಬ್ರಾಹ್ಮಣದಲ್ಲಿ ಐತಿಹಾಸಿಕವಾದ ಸಂದರ್ಭವು ಹೇಳಲ್ಪಟ್ಟಿದೆ. 

 

ಯಜ್ಞರೂಪವಾದ ಆತ್ಮ ಅಂದರೆ ಯಾರು

            ಓಂ ಉಷಾ ವಾ ಅಶ್ವಸ್ಯ ಮೇಧ ಯಸ್ಯ ಶಿರಃ | ಸೂರ್ಯಸ್  ಚಕ್ಷುರ್ ವಾತಃ ಪ್ರಾಣೋ ವ್ಯಾತ್ತಂ ಅಗ್ನಿರ್ ವೈಶ್ವಾನರಃ   ಸಂವತ್ಸರ ಆತ್ಮಾಶ್ವಸ್ಯ ಮೇಧ ಯಸ್ಯ | ದೌ ಯಃ ಪೃಷ್ಠಮಂತರಿಕ್ಷಮುದರಂ ಪೃಥಿವೀ ಪಾಜಸ್ಯಂ ದಿಶಃ ಪಾರ್ಶ್ವೇ ಅವಾಂತರದಿಶಃ ಪರ್ಶವ ಋತವೋಂಗಾನಿ ಮಾಸ ಅಶ್ಚ ಅರ್ಧ ಮಾಸ ಅಶ್ಚ ಪರ್ವಾಣ್ಯಹೋರಾತ್ರಾಣೆ ಪ್ರತಿಷ್ಠಾ ನಕ್ಷತ್ರಾಣ್ಯ ಸ್ಥೀತಿ ನಭೋ ಮಾಂಸಾನಿ | ಊವಧ್ಯಂ ಸಿಕತಾಃ ಸಿಂಧವೋ ಗುದಾಃ ಯಕೃಚ್ಚ ಕ್ಲೋಮಾನಶ್ಚ ಪರ್ವತಾಃ ಓಷಧಯಶ್ಚ ವನಸ್ಪತಯಶ್ಚ ಲೋ ಮಾನಿ, ಉದ್ಯನ್ ಪೂರ್ವಾಧಃ ನಿಮ್ಲೋಚಂಜಘನಾರ್ಧಃ ಯದ್ವಿಜೃಂಭತೇ ತದ್ವಿ ದ್ಯೋತತೇ ಯದ್ವಿ ಧೂನುತೇ ತತ್ ಸ್ತನಯತಿ  ಯನ್ಮೇಹತಿ ತದ್ವರ್ಷತಿ ವಾಗೇವಾಸ್ಯ ವಾಕ್‌ (ಬೃ. ಉ ೧-೧) - ಬೃಹದಾರಣ್ಯಕೋಪನಿಷತ್ತು ಶುಕ್ಷಯಜುರ್ವೇದಕ್ಕೆ ಸೇರಿದ್ದು.

            ಸಾಯಣ್ಣಾಚಾರ್ಯರ ಭಾಷ್ಯ:- ಜಗತ್ತಿಗೆ ಜೈತನ್ಯದಾಯಿ-ಯೂ, ಪ್ರಭಾದಾಯಕಳೂ ಆದ ಉಷಸ್ಸೇ[4] ಈ ಯಜ್ಞಾಶ್ವದ ಶಿರಸ್ಸು, ಸೂರ್ಯನೇ ಚಕ್ಷುಸ್ಸು ವಾತವೇ ಉಚ್ವಾಸನಿಶ್ವಾಸಗಳು, ವೈಶ್ವಾನರಾಗ್ನಿಯೇ ಬಿಚ್ಚಿದ ಬಾಯಿ, ಸಂವತ್ಸರವೇ ಇದರ ದೇಹ ದ್ಯುಲೋಕವೇ ಪೃಷ್ಠವು, ಅಂತರಿಕ್ಷವೇ ಉದರವು, ಪೃಥ್ವಿಯೇ ಗೊರಸು, ದಿಕ್ಕುಗಳೇ ಇದರ ಪಾರ್ಶ್ವಗಳು, ದಿಗಂತರಗಳೇ ಎಲಬುಗಳು, ಆಯನ ಮತ್ತು ಖುತುಗಳೇ ಇದರ ಅವಯವಗಳು, ಮಾಸ ಮತ್ತು ಪಕ್ಷಗಳೇ ಸಂಧಿಸ್ಥಾನಗಳು ಅಹೋರಾತ್ರಗಳೇ ಪಾದಗಳು, ನಕ್ಪತ್ರಗಳೇ ಮೂಳೆಗಳು, ನದಿಗಳೇ ರಕ್ತನಾಳಗಳು, ವೃಕ್ಷಗಳೇ ರೋಮಗಳು, ಅದು ಆಕಳಿಕೆ ಬಿಟ್ಟಾಗ ಪ್ರಕಾಶವು, ಕೆನೆಯುವಾಗಲೇ ಗುಡುಗು, ಈ ರೀತಿ ಯಜ್ಞಾಶ್ವದ, ಅವಯವಗಳೇ ಸಕಲ ದೇಶಕಾಲಗಳು ಎಂದು ತಿಳಿಸಿದೆ. ಆದುದರಿಂದ ಉತ್ಪನ್ನವಾದ ಸಕಲವೂ ಯಜ್ಞ ರೂಪದಲ್ಲಿಯೇ ವೃದ್ಧಿಯನ್ನು ಹೊಂದುತ್ತದೆ. ಸೃಷ್ಟ್ಯ ನಂತರ ಲಯದವರೆಗೂ ಉತ್ಪನ್ನವಾದ ಸಕಲವಸ್ತುಗಳೂ ಮೂರು ಅವಸ್ಥೆಗಳನ್ನು ಹೊಂದುತ್ತವೆ. ಪ್ರಾತಃಕಾಲದ ಅವಸ್ಥೆ ಮಧ್ಯಾಹ್ನದ ಅವಸ್ಥೆ, ಮತ್ತು ಸಂಧ್ಯಾಕಾಲದ ಸ್ಥಿತಿ. ಪ್ರತಿ ಜೀವನದಲ್ಲಿಯೂ ಈ ಮೂರು ಅವಸ್ಥೆಗಳುಂಟು. ಇವೆಲ್ಲವೂ ಯಜ್ಞ ರೂಪವುಳ್ಳವಾಗಿಯೇ ಇರುತ್ತವೆ. ಇವು ಮೂರೂ ಪುಷ್ಕಳವಾಗಿದ್ದರೇ ಆಗ ಮಾತ್ರ ಜೀವನದ ಪೌಷ್ಕಳ್ಯ.

            ಶಂಕರ ಭಾಷ್ಯ :- ಮೇಧ್ಯವಾದ ಅಶ್ವಕ್ಕೆ ಉಷಾ (ಮುಹೂರ್ತವೇ) ತಲೆ. ಸೂರ್ಯನು ಕಣ್ಣು ವಾಯು ಉಸಿರು, ವ್ಯಾತವು ಅಗ್ನಿವೈಶ್ವಾನರನು, ಮೇಧ್ಯವಾದ ಅಶ್ವಕ್ಕೆ ಸಂವತ್ಸರವು ಆತ್ಮವು, ದ್ಯುಲೋಕವು ಬೆನ್ನು ಅಂತರಿಕ್ಟವು ಉದರವು, ಪೃಥಿವಿಯು ಪಾಜಸ್ಯವು, ದಿಕ್ಕುಗಳು ಪಕ್ಕೆಗಳು, ಅವಾಂತರದಿಕ್ಕುಗಳು ಪರ್ಶುಗಳು, ಖುತುಗಳು ಅಂಗಗಳು, ಮಾಸಗಳೂ ಅರ್ಥಮಾಸಗಳೂ ಪರ್ವಗಳು, ಅಹೋರಾತ್ರಿಗಳು ಪ್ರತಿಷ್ಠೆಗಳು, ನಕ್ಪತ್ರಗಳು ಎಲುಬುಗಳು, ನಭವು ಮಾಂಸಗಳು, ಊವಧ್ಯವು ಮರಳುಗಳು, ಸಿಂಧುಗಳು ಗುದಗಳು, ಯಕೃತ್ತೂ ಕ್ಲೋಮವೂ ಪರ್ವತಗಳು, ಓಷಧಿಗಳೂ ವನಸ್ಪತಿಗಳೂ ಲೋಮಗಳು, ಉದಯಿಸುವ (ಸೂರ್ಯನು) ಮೊದಲನೆಯ ಅರ್ಧವು, ಅಸವಾಗುವ (ಸೂರ್ಯನು) ಕೆಳಗಿನ ಅರ್ಧವು, ಬಾಯಿಬಿಡುತದೆಯಲ್ಲ (ಅದು) ಮಿಂಚುತದೆ, ಕೊಡವುತದೆಯಲ್ಲ ಅದು ಗುಡುಗಾಗಿರುತ್ತದೆ, ಮೇಹನವನ್ನು ಮಾಡುತ್ತದೆಯಲ್ಲ ಅದು ಮಳೆಗರೆಯುತ್ತದೆ, ಇದರ ವಾಕ್ಕೇ ವಾಕ್ಕು.

            ಅಕ್ಷರ ಅನುವಾದ:- ಮಲಯ ಪರ್ವತ (ಸುಷುಮ್ನಾ ನಾಡಿ)/ ರಂಧ್ರ  (ಉಷ) ಶಕ್ತಿಯುತ ಜೀವ ಉಸಿರು, ಅಗ್ನಿ, ಜ್ವಾಲೆ ಗರ್ಭದಲ್ಲಿ ಶಕ್ತಿಯುತ ಒಕ್ಕೂಟವನ್ನು ವ್ಯಕ್ತಪಡಿಸಿ ಅರ್ಪಣೆಯನ್ನು  ವಾಯು ಓಂ ಧ್ಯಾನದೊಂದಿಗೆ ಸೆಳೆಯುತ್ತಾ  ಸ್ವರ್ಗ ತಲುಪಲು ಜ್ಞಾನವನ್ನು ಉತ್ಪಾದಿಸುವುದು[5]. ಸೂರ್ಯ ಧ್ಯಾನ  ಕಣ್ಣುಗಳಿಗೆ ಹೊಳಪಿನ ವಾಯು[6] ಗರ್ಭಾಶಯದಲ್ಲಿ ವಿಶೇಷವಾಗಿ ಪರಿಣಾಮಕಾರಿಯಾದ ಮಂತ್ರ ಗಾಳಿ ಅಮೃತ ನೀರು ಬೆಂಕಿಯನ್ನು ಉತ್ಪಾದಿಸುತ್ತದೆ ಮತ್ತು ಶಕ್ತಿಯುತ ಆಯುಧವಾಗಿ ಜ್ವಾಲೆಯನ್ನು ಆಹ್ವಾನಿಸುತ್ತಾ ಅವಿಶ್ರಾಂತವಾದ ಹೊಳಪು ವೈದ್ಯತೆ[7] ಆತ್ಮ ಜ್ವಾಲೆಯನ್ನು ಉತ್ಪಾದಿಸುವ ಶಕ್ತಿಯುತವಾದ ಅಮೃತ ಗಾಳಿಯ ಮಾಂತ್ರಿಕ ಸೂತ್ರವನ್ನು ಪಡೆಯುವ ಧ್ಯಾನ ಗರ್ಭದಲ್ಲಿ ಶಕ್ತಿಯುತ ಒಕ್ಕೂಟವನ್ನು ವ್ಯಕ್ತಪಡಿಸಿ ಅರ್ಪಣೆಯನ್ನು  ವಾಯು ಧ್ಯಾನದೊಂದಿಗೆ ಸೆಳೆಯುತ್ತದೆ[8] ಬ್ರಹ್ಮ ಧ್ಯಾನದ ಉಡುಗೊರೆಯಾದ ಗಂಜಿ, ಬೂದಿಯಾಗಿ ಇಳಿಸಿದ ಮಾಂತ್ರಿಕ ಸೂತ್ರದ ವೈದ್ಯನನ್ನು ಸ್ವರ್ಗ (ಸಹಸ್ರಾರ) ಮತ್ತು ಭೂಮಿಯ (ಮೂಲಾಧಾರ) ನಡುವಿನ ಮಧ್ಯಂತರ ಪ್ರದೇಶಕ್ಕೆ, (ಸುಷುಮ್ನಾ ನಾಡಿಗೆ),  ಹೊಟ್ಟೆಯು ಭೂಮಿಯಾಗಿದೆ.[9] ಹೊಟ್ಟೆಯ ಪ್ರದೇಶ ನೀರಿನ ಪ್ರದೇಶ, ಪಕ್ಕೆಲುಬುಗಳ ಪ್ರದೇಶವು ಹೆಚ್ಚು ಹರಡಿದೆ ಧ್ಯಾನಕ್ಕಾಗಿ ನಿಕಟ ಸಂಪರ್ಕವಿಲ್ಲದ ಸ್ಥಳ[10], ಒರಟು ಗಾಳಿಯು ಶಕ್ತಿಯುತವಾಗಿ ಸದ್ದು ಮಾಡಿತು, ಮಾಸಿಕ ಮಿದುಳಿನ ನಾಸಿಕಕ್ಕೆ ಹೋಗಲು ಮಾಂತ್ರಿಕ ಸೂತ್ರವನ್ನು ಬೀಸುತ್ತದೆ, ಭ್ರೂಣಕ್ಕೆ ನಿರ್ದಿಷ್ಟವಾಗಿ ಪರಿಣಾಮಕಾರಿ ಮಂತ್ರ ಮತ್ತು ಅರ್ಧ ತಿಂಗಳು, ಸ್ವರ್ಗಕ್ಕೆ (ಸಹಸ್ರಾರಕ್ಕೆ) ಜ್ವಾಲೆಯ ಜೊತೆಗೆ ಬಾರ್ಲಿಯನ್ನು ಉಸಿರಾಡಲು ತುಂಬುತ್ತದೆ, ಮೆದುಳಿನ ಮೂಗಿನ (ಸುಷುಮ್ನಾ ನಾಡಿ) ಮೇಲೆ ಜೀವ ಉಸಿರು ಪರಿಣಾಮ ಬೀರುತ್ತದೆ. ವಿಶ್ರಾಂತಿ ನಕ್ಷತ್ರಗಳಿಗೆ (ನರಗಳಿಗೆ)  ಶ್ರೇಷ್ಠತೆ ಉಡುಗೊರೆಯಾಗಿ ಬೆಳಕು ನಿಂತಿರುವುದು ಮಾಂಸದ ಸಹಾನುಭೂತಿ ಮತ್ತು ಮಿದುಳಿನ ಮೂಗಿನ (ಸುಷುಮ್ನಾ ನಾಡಿ)  ಶ್ರೇಷ್ಠತೆಯನ್ನು ನೋಯಿಸುತ್ತದೆ.[11] ಅರ್ಧ ಜೀರ್ಣವಾದ ಆಹಾರ ಮರಳು ಮಿಶ್ರಿತ ಮಣ್ಣಿನ ನೀರು ನದಿಗಳು, ಗುದದ್ವಾರ, ಯಕೃತ್ತು ಹಾಗೂ ಬಲ ಶ್ವಾಸಕೋಶ , ಗರ್ಭ, ಮತ್ತು ಗಿಡಮೂಲಿಕೆಗಳು ಗಂಜಿ ಅತ್ಯುತ್ತಮ ಶುದ್ಧ ವನಸ್ಪತಿ (ಹೂವುಗಳಿಲ್ಲದೆ ಹಣ್ಣುಗಳನ್ನು ಹೊಂದಿರುವ ದೊಡ್ಡ ಅರಣ್ಯ ಮರ) ಒಳಗೊಂಡಿರುವ ಏಳು ಸಂಖ್ಯೆಯ ಪರ್ವತವನ್ನು (ಏಳು ಕುಂಡಲಿನಿ ಚಕ್ರಗಳು) ಶುದ್ದ ಗಾಳಿ ಅತ್ಯುತ್ತಮ ಸೃಷ್ಟಿಕರ್ತ ಮಾಂತ್ರಿಕ ಸೂತ್ರ ಜ್ವಾಲೆಯನ್ನು ಅವಿಶ್ರಾಂತವಾಗಿ  ಮಿದುಳಿನ ನಾಸಿಕಕ್ಕೆ ಏರಲು ಕರೆಯುವ, ಕುಬೇರ (ಸಂಪತ್ತಿನ ಅಧಿಪತಿ) ಎಂಬ ವಿಶೇಷಣವು ಕಣ್ಣು ಮುಚ್ಚಲು ಅವರೆಲ್ಲರನ್ನೂ ತೆರೆಯಲು ಅವರೋಹಣವನ್ನು ಸೇವಿಸಲು ಕರೆಯುತ್ತದೆ, ಅದೇ ಶ್ರೇಷ್ಠತೆಯು ಅವರೆಲ್ಲರನ್ನೂ ಸೇರುವ ಗಂಜಿಯನ್ನು  ಉತ್ಪಾದಿಸುತ್ತದೆ ಅವೆಲ್ಲವನ್ನೂ ಘರ್ಜಿಸುವಂತೆ ಘರ್ಜಿಸುವ ಗಾಳಿಯು ಆಯಾಸವಿಲ್ಲದೆ ನೀರನ್ನು ಶಾಂತವಾಗುವಂತೆ ಮಾಡುತ್ತದೆ, ಚಲಿಸುವ ಗಾಳಿಯನ್ನು ಬೀಸಲು ವ್ಯಾಪಿಸಲು ಈ ರೀತಿ ಸಿಂಪರಣೆ  ಮಾಡಲಾಗುತ್ತದೆ.[12]

            ಸಾಯಣ್ಣ ಭಾಷ್ಯ:- (ಛಾ.ಉ. 3-16-1) -> ಪುರುಷನೇ ಯಜ್ಞವು. ಅವನ ಮೊದಲನೆಯ ಇಪ್ಪತ್ತುನಾಲ್ಕು ವರ್ಷಗಳು ಪ್ರಾತಃಸವನರೂಪಾವು. ಗಾಯತ್ರಿಯು ಇಪ್ಪತ್ತುನಾಲ್ಕು ಮಾತ್ರೆಗಳುಳ್ಳದ್ದು. ಆದುದರಿಂದ ಪ್ರಾತಃಸವನವು ಗಾಯತ್ರ್ಯಾತ್ಮಕವಾದ ಮಂತ್ರದ ಸಹಾಯದಿಂದ ಆಚರಿಸಲ್ಪಡಬೇಕು. ವಸುಗಳು ಈ ಪ್ರಾತಃಸವನಕ್ಕೆ ಸಂಬಂಧಿಸಿದವರು. ಪುರುಷನ ಪ್ರಾಣಗಳೇ ಈ ವಸುಗಳು. ಇಹದಲ್ಲಿ ಸಕಲವನ್ನೂ ವಾಸಕ್ಕೆ ಯೋಗ್ಯವಾಗಿ ಮಾಡುವುದರಿಂದ ಪ್ರಾಣಗಳೇ ವಸುಸಂಜ್ಞಕಗಳಾಗಿವೆ. (ಛಾ.ಉ. 3-16-2) -> ಜೀವನದ ಈ ವಯಸ್ಸಿನಲ್ಲಿ ಪುರುಷನು ಒಂದುವೇಳೆ ವ್ಯಾಧಿಯಿಂದ ಪೀಡಿತನಾದರೆ, ಆಗ, ಅವನು ಎಲೈ ವಸುರೂಪಗಳಾದ ಪ್ರಾಣಗಳೇ, ನನ್ನ ಈ ಪ್ರಾತಃಸವನರೂಪವಾದ ಜೀವನವು ಇಲ್ಲಿಗೆ ಕುಂಠಿತ-ವಾಗದಿರಲಿ. ಇದು ಮಾಧ್ಯಂದಿನ ಸವನರೂಪವಾದ ಮಧ್ಯವಯಸ್ಸಿಗೂ ಮುಂದುವರಿಯಲಿ. ನನ್ನ ಈ ಜೀವನರೂಪವಾದ ಯಜ್ಞವು ಮುಂದುವರಿಯಲಿ'' ಎಂದು ಪ್ರಾರ್ಥಿಸಿದರೆ ಆಗ ಅವನು ವ್ಯಾಧಿಯಿಂದ ಮುಕ್ತನಾಗುತ್ತಾನೆ. “ಅಥ ಯತ್ತಪೋ ದಾನಮಾರ್ಜವಮಹಿಂಸಾ ಸತ್ಯವಚನಮಿತಿ ತಾ ಅಸ್ಯ ದಕ್ಷಿಣಾಃ | (ಛಾ. ಉ ೩-೧೭-೪) ತಪಸ್ಸು, ದಾನ, ಪ್ರಾಮಾಣಿಕತೆ, ಅಹಿಂಸೆ, ಸತ್ಯಪರತಾ, ಇವೇ ಈ ಪುರುಷ ಯಜ್ಞದಲ್ಲಿ ಪುರುಷನು ಅರ್ಪಿಸಬೇಕಾದ ಉತ್ತಮವಾದ ದಕ್ಷಿಣೆಗಳು.

            ಸಾಯಣ್ಣ ಭಾಷ್ಯ:-(ಬೃಹದ್ದೇವತಾ-೨-೫೦) ಹಿಂದಿನ ಶ್ಲೋಕದಲ್ಲಿ ವಿಶ್ವಕರ್ಮ-ಶಬ್ದದ ನಿರ್ವಚನವಿರುತ್ತದೆ. ಅದೇ ವಿಶ್ವಕರ್ಮನು ಸರಸ್ವಾನ್‌ ಎಂದೂ ಪ್ರಸಿದ್ಧ ನಾಗಿದ್ದಾನೆ. ಮೂರು ಲೋಕಗಳಲ್ಲಿಯೂ ಘೃತಪೂರ್ಣವಾದ (ಅಮೃತಪೂರ್ಣವಾದ) ಸರಸ್ಸನ್ನು ಹೊಂದಿರುವುದರಿಂದ ಈ ಹೆಸರು. ವಿಶ್ವಕರ್ಮನು ಸರಸ್ಟಾನ್‌ ಎಂದು ಪ್ರಸಿದ್ಧನಾಗಿದ್ದರೆ, ವಾಗ್ದೇವಿಯು ಸರಸ್ವತೀ ಎಂದು ಪ್ರಸಿದ್ಧಳಾಗಿದ್ದಾಳೆ.

            ಶಬ್ದ ಬ್ರಾಹ್ಮಣ ಹೀಗೆ ಹೇಳಲಾಗಿದೆ, “ಅಗ್ನಿಯೇ ವಿಶ್ವಕರ್ಮ ನಾದುದರಿಂದ. ಅಗ್ನಿಯಲ್ಲಿ ಅರ್ಪಿತವಾದ ಆಹುತಿಯು ಸಕಲ ದೇವತೆಗಳಿಗೂ ಅರ್ಪಿತವಾದಂತೆಯೇ....... ಯಜ್ಞವೇ ಸಕಲಭೂತ-ಗಳನ್ನೂ ಭುಜಿಸುವುದರಿಂದ ಯಜ್ಞಕ್ಕೆ ಭುಜ್ಯುವೆಂಬ ಹೆಸರು ಪ್ರಸಿದ್ಧವಾಗಿದೆ. ಯಾವ ಲೋಕಗಳನ್ನು ಪ್ರಜಾಪತಿಯು ಉತ್ಸನ್ನ-ಮಾಡುವನೋ, ಅದನ್ನೇ ಭುಜಿಸುವುದೂ ಅವನ ಸ್ವಭಾವವಾಗಿದೆ. ಉತ್ಪನ್ನವಾದ ವಸ್ತುಗಳಲ್ಲಿ ಯೂವುದೂ ಶಾಶ್ವತವಾಗಿರಲು ಸಾಧ್ಯವೇ ಇಲ್ಲ. ಪ್ರತಿಯೊಂದೂ ಲಯವನ್ನು ಹೊಂದಲೇ ಬೇಕಾಗಿರುತ್ತದೆ ಸೃಷ್ಟಿಕರ್ತನಾದ ಪ್ರಜಾಪತಿಯೇ ಈ ಲಯಕರ್ತನು. ...... ವಿಶ್ವಕ್ಕೆ ನಾಭಿರೂಪವಾದ ಯಜ್ಞಕ್ಕೆ ವಿಶ್ವಕರ್ಮರೂಪನಾದ ಪ್ರಜಾಪತಿಯೇ ಅವಷ್ಟಂಭಕವು. (ಆಶ್ರಯವು). ವಿಶ್ವವ್ಯವಹಾರಕ್ಕೆ ಆಧಾರಭೂತವಾದ ಯಜ್ಞಕ್ಕೆ ವಿಶ್ವಕರ್ಮನೇ ಆಶ್ರಯವೆಂದಂತಾ-ಯಿತು. ಈ ಆಧಾರವೇ ಶಕ್ತಿರೂಪವು. (ಶಕ್ತಿಯಿಲ್ಲದಿದ್ದರೆ ಆಶ್ರಯವಿಲ್ಲ). ಆದುದರಿಂದ ಯಜ್ಞ ತತ್ತ್ವಕ್ಕೆ ಆಧಾರನಾದ ಪ್ರಜಾಸತಿಯೇ ಈ ಶಕ್ತಿ ಸ್ವರೂಪನು. ಪ್ರಜಾಪತಿಯು ಸಕಲವನ್ನೂ ನಿರ್ಮಿಸುವುದರಿಂದ ಇವನಿಗೆ ವಿಶ್ವಕರ್ಮಾ ಎಂದೂ ಹೆಸರು. ಇತ್ಯಾದಿಯಾಗಿ ವಿಶ್ವಕರ್ಮನ ಸ್ವರೂಪವನ್ನು ಪ್ರಶಂಸಿದೆ. ತೈತ್ತಿರೀಯ ಬ್ರಾಹ್ಮಣದಲ್ಲಿ ಯಾವ ದೇವತೆಗಳನ್ನು ವಿಶ್ವ ಸೃಜಃ ಎಂದು ವರ್ಣಿಸಿದೆಯೋ, ಆ ದೇವತೆಗಳ ಸ್ವರೂಪಗಳೆಲ್ಲವೂ ವಿಶ್ವಕರ್ಮ-ನಲ್ಲಿಯೇ ಅಡಕವಾಗಿದೆ. .... ”.          

 

ವಿಶ್ವಕರ್ಮನನ್ನು ಆತ್ಮ ಸ್ವರೂಪದಲ್ಲಿ ಋಗ್ವೇದದಲ್ಲಿ ಕಾಣಲಾಗಿದೆ

 

ಯಾ ತೇ ಧಾಮಾನಿ ಪರಮಾಣಿ ಯಾವಮಾ ಯಾ ಮಧ್ಯಮಾ ವಿಶ್ವಕರ್ಮನ್ನುತೇಮಾ |

ಶಿಕ್ಷಾ ಸಖಭ್ಯೋ ಹವಿಷಿ ಸ್ವಧಾವಃ ಸ್ವಯಂ ಯಜಸ್ವ ತನ್ವಂ ವೃಧಾನಃ || - ಋಗ್ವೇದ 10-6-81-5

ಭಾವಾರ್ಥ:- ಹವಿಸ್ಸಿನ ರೂಪದ ಅನ್ನವಂತನಾದ ಎಲೈ ವಿಶ್ವಕರ್ಮನೇ, ನಿನ್ನ ಯಾವ ಉತ್ಕೃಷ್ಟವಾದ, ಮಧ್ಯಮರೂಪದ ಮತ್ತು ನಿಕೃಷ್ಟವಾದ ಶರೀರ ಪ್ರಭೇದಗಳುಂಟೋ ಆ ಎಲ್ಲ ವಿಧವಾದ ಶರೀರ ವಿಶೇಷಗಳನ್ನೂ ಸಹ ಹವಿಸ್ಸನ್ನು ಅರ್ಪಿಸುವ ಕಾಲದಲ್ಲಿ ಮಿತ್ರರಾದ ನಮಗೆ ಕೊಡು. ಅನ್ನವಂತನಾದ ಎಲೈ ವಿಶ್ವಕರ್ಮನೇ ನೀನೂ ಸಹ ನಿನ್ನ ಈ ಎಲ್ಲ ರೂಪದ ಶರೀರವನ್ನೂ ಪುಷ್ಠಿಗೊಳಿಸುತ್ತ ಪೊಜಿಸು.

 

ವಿಶ್ವಕರ್ಮನ್ ಹವಿಷಾ ವಾವೃಧಾನಃ ಸ್ವಯಂ ಯಜಸ್ವ ಪೃಥಿವೀಂ ಊಟ ದ್ಯಾಂ |

 ಮಹ್ಯಂತು ಅನ್ಯೇ  ಅಭಿತಃ ಜನಾಸಹ ಇಹ ಅಸ್ಮಾಕಂ ಮಘsವಾ ಸೂರಿಃ ಅಸ್ತು ||

- ಋಗ್ವೇದ 10-6-81-6

ಭಾವಾರ್ಥ:- ಎಲೈ ವಿಶ್ವಕರ್ಮನೇ, ನಮ್ಮ ಹವಿಸ್ಸಿನಿಂದ ನೀನು ವೃದ್ಧಿ ಯನ್ನು ಹೊಂದಿ ನೀನಾಗಿಯೇ ದ್ಯಾವಾಪೃಥಿವಿಗಳನ್ನು ಪೂಜಿಸು. ಕರ್ಮರಹಿತರಾದ ಉಳಿದ ಜನರು ಸರ್ವತ್ರ ಮೋಹದಿಂದ ಆವೃತರಾಗಲಿ. ಧನವಂತನಾದ ವಿಶ್ವಕರ್ಮನು ನಮ್ಮ ಈ ಯಜ್ಞದಲ್ಲಿ ನಮಗೆ ಸ್ವರ್ಗಕ್ಕೆ ಪ್ರೇರಕನಾಗಿರಲಿ.

ವಿವರಣೆ:- ಸಾಯಣಭಾಷ್ಯದಲ್ಲಿ ಹೀಗೆ ವಿವರಿಸಿದೆ, ಯಜ್ಞಮಯನೂ ಯಜ್ಞಮೂಲನೂ ಆದ ವಿಶ್ವಕರ್ಮನ ಪ್ರಶಂಸೆಯೇ ಈ ಸೂಕ್ತದ ವಿಶೇಷ ವಿಷಯವು. ವಿಶ್ವಕರ್ಮನು ಯಜ್ಞ ಕರ್ತನು ಮತ್ತು ಯಜ್ಞ ಭೋಕ್ತವು, ಸೃಷ್ಟಿಗೆ ಮೊದಲು ತಾನೇ ಯಜ್ಞಭೂಮಿ, ಸೃಷ್ಟಿಯ ನಂತರ ವಿಶ್ವವೇ ಯಜ್ಞಭೂಮಿ. ಸೂಕ್ಷ್ಮರೂಪನಾದ ವಿಶ್ವಕರ್ಮನು ಸ್ಥೂಲರೂಪದಲ್ಲಿ ಅವಿರ್ಭವಿಸುವುದೇ ಸೃಷ್ಟಿ. ಈ ಸೃಷ್ಟಿಗೂ ಯಜ್ಞವೇ ಮೂಲ. ಈ ಯಜ್ಞದಲ್ಲಿ ಹಾವಿಸ್ಸೂ ವಿಶ್ವಕರ್ಮನೇ, ಹವಿರ್ಭೋ-ಕ್ತೃವೂ ಅವನೇ. ವಿಶ್ವ ರೂಪದಿಂದ ತನ್ನ ವಿಸ್ತೃತವಾದ ಪ್ರಕಾಶನವೇ ಯಜ್ಞದ ಫಲ. ಇದು ಬಹಳ ಗಭೀರವಾದ ವಿಷಯ. ಆಧ್ಯಾತ್ಮಿಕ ಮತ್ತು ಆಧಿದೈವಿಕವಾದ ತತ್ತ್ವ ಗಳನ್ನೂಳಗೊಂಡಿದ್ದು. ವಿಶ್ವದ ಸೃಷ್ಟಿ, ಸ್ಥಿತಿ ಮತ್ತು ಲಯ ಇವೆಲ್ಲವೂ ಚಕ್ರಾಕಾರ. ಎಲ್ಲವೂ ಈಶ್ವರನ ಅವಸ್ಥಾ ವಿಶೇಷಗಳೇ ಆಗಿವೆ. ಇವೆಲ್ಲವೂ ಯಜ್ಞಮಯ ಎಲ್ಲಕ್ಕೂ ಯಜ್ಞವೇ ಮೂಲ, ಎಲ್ಲವೂ ಯಜ್ಞ ರೂಪ. ಸೃಷ್ಟಿಸ್ಥಿತಿಲಯರೂಪವಾದ ಯಜ್ಞವು. ಅನುಸ್ಯೂತವಾಗಿ (ನಿರಂತರವಾಗಿ) ನಡೆಯುತ್ತಲೇ ಇರಬೇಕು. ಇವು ಚಲನಾತ್ಮಗಳಾದ ಅವಸ್ಥಾವಿಶೇಷಗಳು. ಈ ಅಂಶವು ಯಜ್ಞ ಶಬ್ದದ ನಿರ್ವಚನದಿಂದಲೇ ತಿಳಿಯುತ್ತದೆ.

            ಶಬ್ದ ಬ್ರಾಹ್ಮಣದಲ್ಲಿ ಹೀಗೆ ಹೇಳಿದೆ, “ಸಕಲ ದೇವಮಾ-ನವಾದಿಗಳಿಗೆಲ್ಲ ಈ ಯಜ್ಞವೇ ಆತ್ಮ. ಈ ಯಜ್ಞವನ್ನಾಚರಿಸುವ ಯಜಮಾನನು ಸಕಲ ಸಂಪತ್ ವೃದ್ಧಿಗಳನ್ನೂ ಹೊಂದುತ್ತಾನೆ ಎಂದು ಯಜ್ಞದ ವೈಶಿಷ್ಟ್ಯವು ಪ್ರಶಂಸಿತವಾಗಿದೆ. ವಿಶ್ವಕರ್ಮನು ಹೇಗೆ ಸಕಲ ದೇವಮಾನವಾದಿಗಳಿಗೆಲ್ಲ ಆತ್ಮನೋ ಹಾಗೆಯೇ ಯಜ್ಞವೂ ಸರ್ವಾತ್ಮಕವಾಗಿದೆ. ಇವೆರಡೂ ಭಿನ್ನವಲ್ಲ, ವಿಶ್ವಕರ್ಮನೇ ಯಜ್ಞವು; ಯಜ್ಞವೇ ವಿಶ್ವಕರ್ಮಾತ್ಮಕವು. ವಿಶ್ವಕರ್ಮರೂಪನಾದ ಪ್ರಜಾಪತಿಯ ಪ್ರತಿಬಿಂಬವೇ ಯಜ್ಞವು”. ...... “ಯಾವಾಗ ಯಜ್ಞದಲ್ಲಿ ಸೋಮವನ್ನು ಹಿಂಡುವರೋ ಆಗ ಯಜ್ಞದ ಹನನವಾದಂತೆ. ಯಾವಾಗ ಯಜ್ಞವನ್ನು ವಿಸ್ತರಿಸುವಂತೆ ಮಾಡುವರೋ ಆಗ ಪುನಃ ಅದರ ಜನನ. ಈ ರೀತಿಯಲ್ಲಿ ಚಲನಾತ್ಮಕವಾದ ವಿಸ್ತೃತಿಯೂ ಸಂಕೋಚವೂ ಇರುವುದರಿಂದ ಅದಕ್ಕೆ ಯಜ್ಞವೆಂದು ಹೆಸರು”. .... ವಿಶ್ವಕರ್ಮನು ವಾಕ್ಕಿನ (ಅಜಪ ಮಂತ್ರ)  ಸಹಾಯದಿಂದಲೇ ಸಕಲ ಪ್ರಜೆಗಳನ್ನೂ ಸೃಜಿಸಿದನು. ಎಂದು ವಾಗಾಧಾರತ್ವವನ್ನು ತೋರಿಸಿದೆ. ಈ ಸೃಷ್ಟಿಯ ಕ್ರಮವೇನೆಂಬುದನ್ನು ಈ ರೀತಿ ತಿಳಿಸಿದೆ. ಪ್ರಜಾಪತಿ-ರೂಪನಾದ ವಿಶ್ವಕರ್ಮನು ಧ್ಯಾನರೂಪದಿಂದ ವಾಕ್ಕಿನೊಂದಿಗೆ ಸೇರಿ-ಕೊಂಡನು. ಆಗ ಅವನ ರೇತಸ್ಸಿನ (ಅಮೃತ ರೂಪದ ವೀರ್ಯ) ಎಂಟು ಬಿಂದುವಿನೊಡನೆ ಗರ್ಭವನ್ನು ಹೊಂದಿದನು. ಅದರೆ ಫಲವಾಗಿ ಅಷ್ಟ (ಎಂಟು) ವಸುಗಳು ಉತ್ಪನ್ನರಾದರು ಅವರನ್ನು ಪೃಥ್ವಿಯಲ್ಲಿ ಸ್ಥಾಪಿಸಿದರು. .....  ಪುನಃ ಧ್ಯಾನರೂಪದಲ್ಲಿ ವಾಕ್ಕಿ ನೊಂದಿಗೆ ಸೇರಿಕ್ಕೊಂಡು ಯೋಜಿತನಾದನು. ಆಗ ತನ್ನ ರೇತಸ್ಸಿನ ಹೆನ್ನೊಂದು ಬಿಂದುಗಳೊಡಗೂಡಿ ಗರ್ಭವನ್ನು ಹೊಂದಿದನು. ಆದರಿಂದ ಹನ್ನೊಂದು ಜನ ರುದ್ರರು ಉತ್ಪನ್ನರಾದರು ಈ ಏಕಾದಶ ರುದ್ರರನ್ನು ಅಂತರಿಕ್ಷದಲ್ಲಿ (ಸಹಸ್ರಾರದಲ್ಲಿ) ಸ್ಥಾಪಿಸಿದನು. ..... ಪುನಃ ಧ್ಯಾನರೂಪದಲ್ಲಿ ವಾಕ್ಕಿನೊಂದಿಗೆ ಸಂಬಂಧವನ್ನು ಹೊಂದಿದನು. ಆಗ ತನ್ನ ರೇತಸ್ಸಿನ ಹನ್ನೆರಡು ಬಿಂದುವಿನೊಡನೆ ಗರ್ಭವನ್ನು ಹೊಂದಿದನು. ಅದರಿಂದ ಹನ್ನೆರಡು ಮಂದಿ ಆದಿತ್ಯರು ಉತ್ಪನ್ನ-ರಾದರು, ಈ ದ್ವಾದಶಾಧಿತ್ಯರನ್ನೂ ದ್ಯುಲೋಕದಲ್ಲಿ ಸ್ಥಾಪಿಸಿದನು. .... ಪುನಃ ಧ್ಯಾನರೂಪದಲ್ಲಿ ವಾಕ್ಕಿನೊಂದಿಗೆ ಸಂಯೋಗವನ್ನು ಹೊಂದಿದನು. ಅಗಲೂ ಗರ್ಭವನ್ನು ಹೊಂದಿದನು. ಆದರ ಫಲವಾಗಿ ವಿಶ್ವೇದೇವತೆಗಳು ಉತ್ಸನ್ನರಾದರು. ಅವರನ್ನು ದಿಗ್ರಕ್ಷಕರನ್ನಾಗಿ ಸ್ಥಾಪಿಸಿದನು”.

 

ಏಷದೇವೋ ವಿಶ್ವಕರ್ಮಾ ಮಹಾತ್ಮಾ ಸದಾ ಜನಾನಾಗ್‌ಂ ಹೃದಯೇ ಸನ್ನಿವಿಷ್ಟಃ (ಶ್ವೇತಾ. ಉಪ. ೪;೧೭)

ಭಾವಾರ್ಥ:- ಆ ವಿಶ್ವಕರ್ಮನು ಸಕಲ ಜನರಲ್ಲಿಯೂ (ಪ್ರಾಣಿ ವಸ್ತುಗಳೆಲ್ಲಿಯೂ, ಹೃವಯ ದೇಶದಲ್ಲಿ ಸದಾಕಾಲ ವಾಸಿಸುತ್ತಿರುತ್ತಾನೆ,

 

ಹೃದಾಮನೀಷಾ ಮನಸಾಭಿಕ್ಲಪ್ತೋ ಯಏವಂ ವಿದುರಮೃತಾಸ್ತೇ ಭವಂತಿ (ಶ್ವೇತಾ. ಉಪ. ೪:೧೭)

ಭಾವಾರ್ಥ:- ಯಾರು ಆ ವಿಶ್ವಕರ್ಮಸರ್ವೇಶ್ವರನನ್ನು ತನ್ನಲ್ಲಿಯೇ ತಿಳಿಯುತ್ತಾರೋ ಅವರು ಅಂತ್ಯವಿಲ್ಲದ ಪೂರ್ಣತಮವಾದ ಅಮೃತತ್ವವನ್ನು ಹೊಂದುತ್ತಾರೆ

 

ವಿಶ್ವಕರ್ಮನಲ್ಲಿ ಸಕಲ ಜ್ಯೋತಿಗಳ ಸ್ವರೂಪ

ವಿಶ್ವಕರ್ಮಾ ವಿಮನಾ ಆದ್ವಿಹಾಯಾ ಧಾತಾ ವಿಧಾತಾ ಪರಮೋತ ಸಂದೃಕ್‌ |

ತೇಷಾಮಿಷ್ಟಾನಿ ಸಮಿಷಾ ಮದಂತಿ ಯತ್ರಾ ಸಪ್ತಋಷೀನ್ಪರ ಏಕಮಾಹುಃ ||

- ಋಗ್ವೇದ 10-6-8೨-2

ಭಾವಾರ್ಥ:- ವಿಶ್ವಕರ್ಮದೇವನು ವಿಶೇಷವಾದ ಪ್ರಜ್ಞೆಯುಳ್ಳ ಮನಸ್ಸುಳ್ಳವನೂ ಮಹಾತ್ಮನೂ, ವೃಷ್ಟ್ಯಾದಿಗಳ ಕರ್ತನೂ, ಸಕಲ ಜಗತ್ತಿಗೂ ನಿರ್ಮಾಪಕನೂ, ಶ್ರೇಷ್ಠನೂ, ಎಲ್ಲವನ್ನೂ ಸೂಕ್ಷ್ಮವಾಗಿ ನೋಡುವವನೂ ಆಗಿದ್ದಾನೆ. ಯಾವ ಈ ವಿಶ್ವಕರ್ಮನಲ್ಲಿ ಸಕಲ ಜ್ಯೋತಿಗಳ ಸ್ವರೂಪ ಮತ್ತು  ಸಂಕಲ್ಪಗಳೂ ಉದಕದೊಡನೆ ಕೂಡಿ ಒಟ್ಟಿಗೆ ತೃಪ್ತಿಯನ್ನು ಹೊಂದುವುವೋ ಆ ವಿಶ್ವಕರ್ಮನನ್ನು ಸಪ್ತರ್ಷಿಗಿಂತಲೂ ಅಧಿಕನೂ, ಅದ್ವಿತೀಯನೂ ಆದ ಆದಿತ್ಯನೆಂದು ತಿಳಿದವರು ಹೇಳುತ್ತಾರೆ.

ವಿವರಣೆ ನಿರುಕ್ತದಿಂದ:- ಪರಮಾತ್ಮ ಅಥವಾ ಆತ್ಮ ಪರವಾದ ಅರ್ಥವನ್ನು ವಿವರಿಸುತ್ತಾರೆ. ಇಲ್ಲಿ ವಿಶ್ವಕರ್ಮಾ ಎಂದರೆ ಸರ್ವವನ್ನೂ ಸೃಷ್ಟಿಮಾಡಲು ಸಾಮರ್ಥ್ಯವುಳ್ಳ ಪರಮಾತ್ಮನೆಂದರ್ಥವು. ಅವನಿಗೆ ಕ್ಷೇತ್ರಜ್ಞನೆಂದೂ ಹೆಸರು. ಎಂದರೆ ಸರ್ವ ಪ್ರಾಣಿಗಳ ಶರೀರದಲ್ಲಿ ಅಂತರಾತ್ಮನಾಗಿದ್ದು ಅವುಗಳ ಕರ್ಮಗಳನ್ನು ಬುದ್ದಿಯನ್ನು, ಪ್ರೇರಿಸುವವನು. ಇವನ ಪ್ರೇರಣೆ ಇಲ್ಲದೆ ವಾಯುವಿನ ಚಲನೆಯು ಸಹ ಆಗಲಾರದು. ಈ ಆತ್ಮನು ಕೇವಲ ಶಕ್ತಿ ಯುತನು ಮಾತ್ರವೇ ಅಲ್ಲ, ಜ್ಞಾನಯುತನೂ ಹೌದು. ಆದರಿಂದಲೇ ಸರ್ವತೋಮು-ಖನಾದ ವಿಶೇಷಜ್ಞಾನಶಕ್ತಿಗಳಿಂದ ಕೂಡಿರುವವನು ಎಂದು ಹೇಳಲ್ಪ ಡುವನು. ಈ ಗುಣಗಳಿರುವುದರಿಂದ ಇವನನ್ನು ಮಹಾನ್‌ ಮಹತ್ವ ರೂಪವುಳ್ಳವನೆಂದು ಹೇಳುವರು. ಈ ಮಹತ್ವ ರೂಪಗುಣವಿ-ಶಿಷ್ಠನಾದ ಆತ್ಮನು ಸಮಸ್ತ ಪ್ರಾಣಿಗಳನ್ನೂ ಸೃಷ್ಟಿಸುವವನು, ಸೃಷ್ಟಿಸಿದ ಪ್ರಾಣಿಗಳನ್ನು ಅವರವರ ಯೋಗ್ಯವಾದ ಕರ್ಮಗಳಲ್ಲಿ ನಿಯಮಿಸುವನು ಮತ್ತು ಈ ಆತ್ಮನು ಇಂದ್ರಿಯಗಳಿಗೆ ವಿಷಯೋಪಭೋಗಗಳಲ್ಲಿ ಮಾರ್ಗದರ್ಶಿಯಾಗಿಯೂ ಇರುವನು ಅಥವಾ ಪ್ರಾಣಿಗಳು ಮಾಡುನ ಸ್ಪವ್ಯಾಪಾರಗಳನ್ನು ನಿರ್ಲಿಪ್ತತೆಯಿಂದ ನೋಡುವ ವೀಕ್ಷಕನಾಗಿರುವನು. ಆ ಇಂದ್ರಿಯಗಳಿಗೆ (ಶರೀರದಲ್ಲಿರುವ ಚಕ್ಷುರಾದೀಂದ್ರಿಯಗಳಿಗೆ) ಇಷ್ಟವಾದ, ಅಥವಾ ಆ ಇಂದ್ರಿಯಗಳು ಅಪೇಕ್ಷಿಸುವ, ಬಯಸುವ, ಬೇಕೆಂದು ಆಶಿಸುವ ಅನ್ನಾದಿವಸ್ತುಗಳನ್ನು ಒದಗಿಸಿಕೊಟ್ಟು ಆ ಇಂದ್ರಿಯಗಳೂ ಸಂತೋಷದಿಂದಿರುವಂತೆ ಮಾಡುವನು, ಇಂತಹ ಕಾರ್ಯಗಳನ್ನು ಮಾಡುವ ಆ ಆತ್ಮನು ಯಾರು ಎಂದರೆ, ಯಾವನಲ್ಲಿ ಏಳುವಿಧವಾದ ಇಂದ್ರಿಯಗಳು (ಈ ಇಂದ್ರಿಯಗಳನ್ನು ಜ್ಯೋತಿಗಳೆಂದು ಹೇಳುವರು) ಸಂಮಿಳಿತವಾಗಿ ಎಂದರೆ ಒಂದಾಗಿ ಸೇರಿರುವವೋ, ಆದರೆ ಇಂದ್ರಿಯಗಳಿಗಿಂತಲೂ ಯಾವನು ಭಿನ್ನವಾಗಿ ಎಂದರೆ ಅತೀತನಾಗಿ ಇರುವನೋ ಅವನೇ ಆತ್ಮನು. ಈ ಆತ್ಮನು ಸಮಸ್ತ ವಸ್ತು ಗಳಿಗಿಂತಲೂ ಪರತರನಾದನನು, ಇವನು ನಿತ್ಯತೃಪ್ತನು, ಇವನಿಗೆ ಅನ್ನಾದ್ಯಾಹಾರಗಳ ಅವಶ್ಯಕತೆ ಇಲ್ಲ. ಆದರೆ ಶರೀರದ ಇಂದ್ರಿಯಾದಿಗಳು ಮೂತ್ರ ಶಕ್ತಿ ಪ್ರದವಾದ ಆನ್ನಾದಿಗಳನ್ನೆ ಸೇವಿಸಿ ಶರೀರಾಂತರ್ಗತನಾಗಿರುವ ಆತ್ಮನೊಡನೆ ಸಂತೃಪ್ತಿಯನ್ನು ಹೊಂದುತ್ತವೆ. ಈ ಆತ್ಮನಿಗೆ ಶೋಕ, ಮೋಹ, ಜರಾಮೃತ್ಯುಗಳೆಂಬುದಿಲ್ಲ. ಈ ಆತ್ಮನನ್ನೇ ಪರಬ್ರಹ್ಮನೆಂದು ಆತ್ಮತತ್ತ್ವವನ್ನು ಬಲ್ಲವರು ಹೇಳುತ್ತಾರೆ. ಪರಬ್ರಹ್ಮನೆಂದರೆ ಇವನಿಗಿಂತ ಉತ್ಕೃಷ್ಟರಾದವರು (ಅಥವಾ ಇವನಿಗಿಂತ ವ್ಯತಿರಿಕ್ತವಾದ ವಸ್ತುವು) ಇಲ್ಲದಿರುವುದರಿಂದ ಈ ಆತ್ಮನಿಗೆ ಪರಮಾತ್ಮ ಅಥವಾ ಪರಬ್ರಹ್ಮನೆಂಬ ಹೆಸರು ಬಂದಿದೆ”.

 

ವಿಶ್ವಕರ್ಮನು ಯಜ್ಞದ ಬೆಳಕು

 

ಯಜ್ಞಸ್ಯ ಚಕ್ಷುಃ ಪ್ರಭೃತಿರ್ಮುಖಂಚ ವಾಚಾ ಶ್ರೋತ್ರೇಣ ಮನಸಾ ಜುಹೋಮಿ |

ಇಮಂ ಯಜ್ಞಂ ವಿತತಂ ವಿಶ್ವಕರ್ಮಣಾ ದೇವಾ ಯಂತು ಸುಮನಸ್ಯಮಾನಾಃ ||

 (ಅಥರ್ವವೇದ, ೨:೩೫)

 

ಭಾವಾರ್ಥ:- ವಿಶ್ವಕರ್ಮನು ಯಜ್ಞದ ಬೆಳಕು, ಇಡೀ ಸೃಷ್ಟಿ. ಅವನೇ ಪೋಷಕ, ಅವನದು ಅದರ ವಾಕ್ಯದ ಬಹಿರಂಗ. ನಾನು ವಿಶ್ವಕರ್ಮನನ್ನು ಗೌರವಿಸುತ್ತೇನೆ, ಆರಾಧಿಸುತ್ತೇನೆ ಮತ್ತು ಪೂಜಿಸುತ್ತೇನೆ ಮತ್ತು ಆಲೋಚನೆ, ಮಾತು ಮತ್ತು ಭಾಗವಹಿಸುವ ಪವಿತ್ರ ಮಂತ್ರದೊಂದಿಗೆ ಯಜ್ಞದ ಮೂಲಕ ಗೌರವವನ್ನು ಅರ್ಪಿಸುತ್ತೇನೆ. ವಾಸ್ತವವಾಗಿ ಈ ಬ್ರಹ್ಮಾಂಡದ ಯಜ್ಞವು ವಿಶ್ವಕರ್ಮನಿಂದ ಉರಿಯಲ್ಪಟ್ಟಿದೆ, ನಿರಂತರವಾಗಿದೆ ಮತ್ತು ವಿಸ್ತರಿಸಲ್ಪಟ್ಟಿದೆ. ಎಲ್ಲಾ ದೇವತೆಗಳು, ಪ್ರಕೃತಿಯ ದೈವಗಳು ಮತ್ತು ಮಾನವೀಯತೆಯ ಉದಾತ್ತರು, ಎಲ್ಲರೂ ಸಂತೋಷವಾಗಿರುವಿರಿ, ಈ ಗೌರವ ಯಜ್ಞಕ್ಕೆ ಬನ್ನಿ.

ವಿವರಣೆ:- ಲೋಕಸಂಗ್ರಹರೂಪ ಯಜ್ಞಕ್ಕೆ (ಎಲ್ಲಾ ಯಾಗಗಳಿಗೂ) ನೇತ್ರ ಸ್ವರೂಪವಾಗಿಯೂ ಮುಖದಂತೆ ಮುಖ್ಯವಾದುದಾಗಿಯೂ ವೈಶ್ವ ಕರ್ಮಣ ಯಾಗವಿದೆ. ಏಕೆಂದಕೆ ಇದರ ಮೂಲಕವೇ ಎಲ್ಲ ಯಜ್ಞಗಳಿಗೂ ಸಿದ್ದಿಯುಂಟಾಗುತ್ತದೆ. ಎಲ್ಲ ದೇವತೆಗಳಿಗೂ ವಿಶ್ವಕರ್ಮನು ನೇತ್ರದಂತೆ ಮುಖ್ಯನು. ಎಲ್ಲ ರೂಪವನ್ನು ಧಾರಣೆಮಾಡಿ ಆ ಮೂಲಕ ತಾನೊಬ್ಬನೇ ವಿಶ್ವವನ್ನು ನಡೆಸುತ್ತಿರುವವನೂ, ಎಲ್ಲ ಯಜ್ಞಗಳಲ್ಲಿಯೂ ಮೊದಲು ಹವಿಸ್ಸನ್ನು ಸ್ವೀಕರಿಸುವ ಪ್ರಧಾನ ದೈವವೂ, ಆಗಿರುವಂತಹ ಭಗವಂತನನ್ನು ಮಂತ್ರಗಳಿಂದಲೂ, ಸರ್ವೇಂದ್ರಿಯಗಳಿಂದಲೂ, ಅಂತಃಕರಣ-ದಿಂದಲೂ ಧ್ಯಾನಮಾಡಿ ಹೋಮ ಮಾಡುತ್ತೇವೆ. ಈ ಯಾಗ ಮಂತ್ರಗಳಲ್ಲಿ ಉಕ್ತವಾಗಿರುವ ದಿವ್ಯಜ್ಞಾನದ ತಿಳುವಳಿಕೆಯಿಂದ ಕೂಡಿ ಮಾಡಿರುವ ಈ ಯಜ್ಞದಿಂದ ಎಲ್ಲ ದೇವತೆಗಳೂ ಅನುಗ್ರಹ-ರೂಪರಾಗಿ ಯಜ್ಞಕರ್ತನಿಗೂ, ಸಕಲ ಪ್ರಪಂಚಕ್ಕೂ ಕ್ಷೇಮವನ್ನುಂಟು ಮಾಡಲಿ.

 

ಗ್ರಹಣ ಎಂದರೆ ಏನು?

ग्रहण = ಗ್ರಹಣ = ಗ ರ ಹ ಣ

ಅಕ್ಷರ ಅರ್ಥ:- ನಕಾರಾತ್ಮಕ ಧ್ವನಿಯನ್ನು ಆಕಾಶವು ಪಡೆದು-ಕೊಂಡ ನಂತರ ಚಲಿಸುವುದು.

            ಗ್ರಹಣ ಕಾಲವು ಜಪ, ದಾನಗಳಿಗೆ ಪ್ರಶಸವಾದದ್ದು ಗ್ರಹಣಕಾಲದಲ್ಲಿ ಯಾರೂ ಆಹಾರವನ್ನು ಸೇವಿಸಬಾರದು. ಗ್ರಹಣಕ್ಕೆ ಮೊದಲು ಸಹ ಕೆಲವು ಗಂಟೆಯ ವರೆಗೆ ಆಹಾರವು ನಿಷಿದ್ಧವಾಗಿದೆ. ಗ್ರಹಣ ಹಿಡಿದ ಕೂಡಲೇ ಸ್ನಾನ. ಅನಂತರ ಜಪ ಪೂಜಾದಿಗಳು. ಗ್ರಹಣವು ಬಿಡುತ್ತಿರುವಾಗ ದಾನ. ಬಿಟ್ಟಿ ಮೇಲೆ ಮತ್ತೆಸ್ನಾನ ಎಂಬುದು ವಿಧಿ. ಗ್ರಹಣಕ್ಕೆ ಪೂರ್ವದಲ್ಲಿ ಬೇಯಿಸಿದ ಯಾವ ಪದಾರ್ಥವನ್ನೂ ಗ್ರಹಣ ಬಿಟ್ಟ ಮೇಲೆ ಉಪಯೋಗಿಸಬಾರದು. ಗ್ರಹಣ ಕಾಲದಲ್ಲಿ ಧರಿಸಿದ ವಸ್ತ್ರಗಳನ್ನು ತೊಳೆದು ಹಾಕತಕ್ಕದ್ದು. ಇದು ಶಾಸ್ತ್ರಕಾರರು ಹೇಳುವುದು.

            ಬನ್ನಂಜೆ ಗೋವಿಂದಾಚಾರ್ಯರು ಈ ಬಗ್ಗೆ ಉತ್ತಮ ಬೆಳಕು ಚೆಲ್ಲಿದ್ದಾರೆ, “ಹಿಂದೆ ಬೆಳಿಗ್ಗೆ ಸುಮಾರು ನಾಲ್ಕು ಗಂಟೆಗೆ ಎದ್ದು ಸ್ನಾನ ಮಾಡಿ ಮುಖ್ಯವಾಗಿ ಗಾಯತ್ರಿ ಜಪ ಮಾಡುತ್ತಿದ್ದರು. ಅದೇ ರೀತಿ ಸಂಜೆ ಸೂರ್ಯಾಸ್ತಕ್ಕೆ ಮೊದಲು ಕೂಡಾ ಧ್ಯಾನದಲ್ಲಿ ತೊಡಗುತ್ತಿದ್ದರು. ಕಾರಣವೆಂದರೆ, ಮುಂಜಾವಿನ ಹಾಗೂ ಸಂಜೆಯ ಕೆಂಪಾದ ಸೂರ್ಯ ಕಿರಣದಲ್ಲಿ ನಮ್ಮ ಬುದ್ಧಿ ಶಕ್ತಿಯನ್ನು ಕುಂದಿಸುವ ಶಕ್ತಿ ಇರುತ್ತದೆ. ಅಂತಹ ಕೆಟ್ಟ ಶಕ್ತಿಯ ನಿರೋಧಕ್ಕಾಗಿ ಈ ರೀತಿ ಧ್ಯಾನ ಮಾಡುತ್ತಿದ್ದರು. ಸೂರ್ಯನ ಮುಂಜಾವಿನ ಹಾಗೂ ಸಂಜೆಯ ಕಿರಣ, ಗ್ರಹಣ ಕಾಲದ ಕಿರಣ ಮತ್ತು ನೀರಿನಿಂದ ಪ್ರತಿಫಲಿಸಿ ಕಾಣುವ ಸೂರ್ಯ ಕಿರಣ ವಿಷಕಾರಿ. ಮುಂಜಾವಿನ ಮತ್ತು ಸಂಜೆಯ ಕಿರಣ ಮಾನಸಿಕವಾಗಿ ಪರಿಣಾಮ ಬೀರಿದರೆ, ಗ್ರಹಣದ ಕಿರಣ ನಮಗೆ ದೈಹಿಕವಾಗಿ ಕೆಟ್ಟದ್ದು. ಆದರೆ ಗ್ರಹಣ ಕಾಲದಲ್ಲಿ ನಮ್ಮ ಮೆದುಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅದಕ್ಕಾಗಿ ಹಿಂದೆ ಗ್ರಹಣ ಕಾಲದಲ್ಲಿ ಉಪವಾಸವಿದ್ದು ಪಾರಾಯಣ ಮಾಡುತ್ತಿದ್ದರು. ಗ್ರಹಣ ಕಾಲದಲ್ಲಿ ಒಂದು ಬಾರಿ ಮಾಡುವ ಪಾರಾಯಣ ಬೇರೆ ಸಮಯದ ನೂರಕ್ಕೂ ಹೆಚ್ಚು ಪಾರಾಯಣಕ್ಕೆ ಸಮನಾಗಿರುತ್ತದೆ. ಹೊಟ್ಟೆ ಖಾಲಿಯಿದ್ದು ಪಾರಾಯಣ ಮಾಡಿದರೆ ಇದರ ಪರಿಣಾಮ ಇನ್ನೂ ಹೆಚ್ಚು. ಅದಕ್ಕಾಗಿ ಉಪವಾಸವಿದ್ದು ಪಾರಾಯಣ ಮಾಡುತ್ತಿದ್ದರು. ಹೀಗೆ ಸೂರ್ಯ ಮಂಡಲದಲ್ಲಿ ಅಡಗಿರುವ ಅಪೂರ್ವ ಶಕ್ತಿ ಭಗವಂತ ರವಿಃ”. ಇದು ಅಕ್ಷರ ಅರ್ಥಕ್ಕೆ ಹೋಲುವಂತಾ ವಿವರಣೆ ಆಗಿದೆ.

            ಗ್ರಹಣದ ದಿನ ಯಾವುದೇ ಅಶುಭವಾಗಬಾರದೆಂದು ತಮ್ಮ ಹೊಲಗಳ ಮೂಲೆಮೂಲೆಗೂ ಮೂಳೆಗಳನ್ನುಹಾಕಿದ ಬೆಂಕಿಯನ್ನು ಇಡುವ ಪದ್ಧತಿ ಕನ್ನಡ ನಾಡಿನ ಅನೇಕ ಭಾಗಗಳಲ್ಲಿ ಕಂಡುಬರುತ್ತದೆ. ಅಂದು ಗರ್ಭೀಣಿಯರನ್ನು ಹೊರಗೆ ಬಿಡುವುದಿಲ್ಲ. ಅಂದು ಉಪವಾಸ ಆಚರಿಸುವ ಪದ್ಧತಿಯೂ ಇದೆ. ಗ್ರಹಣ ಹಿಡಿದಿದೆಯೋ ಇಲ್ಲವೋ ಎಂದು ತಿಳಿಯಲು ಜನಪದರು ಕೆಲವು ಪ್ರಯೋಗಗಳನ್ನು ಮಾಡುವುದುಂಟು. ತಣಿಗೆಯಲ್ಲಿ ಅದೂ ಅಗಲವಾದ ಪಾತ್ರೆಯಲ್ಲಿ ನೀರನ್ನು ತುಂಬಿ ಅದರ ಮಧ್ಯದಲ್ಲಿ ಕಬ್ಬಿಣದ ಬಳೆಯನ್ನು ತೊಡಿಸಿರುವ ಒನಕೆಯನ್ನು ನಿಲ್ಲಿಸುತ್ತಾರೆ. ಒನಕೆ ಬೀಳದೆ ಹಾಗೇ ನಿಂತರೆ ಗ್ರಹಣ ಹಿಡಿದಿದೆ ಎಂದೂ ಬಿದ್ದರೆ ಗ್ರಹಣ ಬಿಟ್ಟಿದೆ ಎಂದೂ ಅವರು ಭಾವಿಸುತ್ತಾರೆ.


ನರಜನ್ಮ ನರಸಿಂಹ ರೂಪ ನರಗಳು ಮಹತ್ವ

 

ನರಮನುಜ = नरमनुज = नु

ಅಕ್ಷರ ಅರ್ಥ:- ವಿಜಯಶಾಲಿಯಾಗಿ ಘರ್ಜಿಸಲು ಮುರಿಯದ ಮಾರ್ಗದಲ್ಲಿ (ವೈನ್ಸ್) ಉತ್ಪಾದಿಸುವ ಮಾಂತ್ರಿಕ ಸೂತ್ರ

 

ನರಜನ್ಮ = नरजन्म  =

ಅಕ್ಷರ ಅರ್ಥ:- ಮುರಿಯದ ಮಾರ್ಗದಲ್ಲಿ (ವೈನ್ಸ್) ಉತ್ಪಾದಿಸುವ ವಿಜಯದ ಒಂದೇ ರೀತಿಯ ಮಾಂತ್ರಿಕ ಸೂತ್ರ

 

ನರೋತ್ತಮ = नरोत्तम =

ಅಕ್ಷರ ಅರ್ಥ:- ಮುರಿಯದ ಮಾರ್ಗದಲ್ಲಿ (ವೈನ್ಸ್) ಗರ್ಭಾಶಯದ ಮಾಂತ್ರಿಕ ಸೂತ್ರ ಕರೆದು ಉತ್ಪಾದಿಸುವ ಅಮೃತ

 

ನರಸಿಂಹ = नरसिंह =

ಅಕ್ಷರ ಅರ್ಥ:- “ವೈದ್ಯನಾದ ಮಾಂತ್ರಿಕ ಸೂತ್ರವನ್ನು  ವ್ಯಾಪಿಸಲು ಅವಿಶ್ರಾಂತವಾಗಿ ಗಾಳಿಯನ್ನು ಪಡೆದುಕೊಳ್ಳುವುದು

ವಿವರಣೆ:- “ನಾರಾಯಣಮ್ ನಮಸ್ಕೃತ್ಯ ನರಮ್ ಚೈವ ನರೋತ್ತಮಮ್ । ದೇವೀಮ್ ಸರಸ್ವತೀಮ್ ಚೈವ ತತೋ ಜಯಮುದೀರಯೇತ್ ॥ (ಮಹಾಭಾರತ ನಾಂದಿ ಶ್ಲೋಕ) – ಭಾವಾರ್ಥ:- “ಜಯ (ಮಹಾಭಾರತ)“ ದ ಪ್ರವಚನಕ್ಕೆ ಮುನ್ನವಾಗಿ ನಾರಾಯಣನನ್ನು, ಮನುಷ್ಯರಲ್ಲಿ ಶ್ರೇಷ್ಠನಾದ ನರನನ್ನು ಹಾಗು ಸರಸ್ವತೀ ದೇವಿಯನ್ನು ನಮಸ್ಕರಿಸಿಸಬೇಕು.

            ಮಾನವನ ಶರೀರದಲ್ಲಿ ಹಲವು ಪ್ರಕಾರದ ನರಗಳು ಇರುವುದು. ಶರೀರದ ರಚನೆಯಲ್ಲಿ ಒಂದು ಭಾಗ ಸಮವಾಗಿ ಕೆಲಸ ಮಾಡುವುದು ಮತ್ತು ಕೋಶಗಳ ಜತೆ ಸೇರಿ ಆಗಿರುವುದು. ದೇಹದ ಯಾವುದೇ ಭಾಗದಿಂದ ಮಿದುಳಿಗಾಗಲಿ ಬೆನ್ನುಹುರಿಗಾಗಲಿ ಸಂವೇದನೆಯನ್ನು ಸಾಗಿಸಬಲ್ಲ ತಂತು ಅಥವಾ ತಂತುಗಳ ಕಂತೆ ಅಥವಾ ಅವುಗಳನ್ನು ರೂಪಿಸಿರುವ ಪದಾರ್ಥ. ಪೂರ್ತಿ ಶರೀರದ ವಿಸ್ತಾರವಾದ ತುಂಬಾ ಸೂಕ್ಷ್ಮವಾದ ನಾಡಿಗಳ ಜಾಲ ಅದರಿಂದ ಸ್ಪರ್ಶ, ಶೀತ, ತಾಪ, ಕಷ್ಟ (ತ್ರಾಸ) ಮೊದಲಾದವುಗಳ ಅನುಭವಾಗುತ್ತದೆ. ಈ ರೀತಿ ನರಗಳು ದೇಹದ ಎಲ್ಲ ಭಾಗಗಳನ್ನೂ ಮಿದುಳು ಮತ್ತು ಮಿದುಳು ಬಳ್ಳಿಗಳಿಗೆ ಸಂಪರ್ಕಿಸುವ ಸಾಧನಗಳಾಗಿವೆ. ವಾಸ್ತವವಾಗಿ ಇದು ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮವಾದ ನೂರಾರು ತಂತುಗಳಿಂದಾದುದು. ಈ ತಂತುಗಳು ಸಾಮಾನ್ಯವಾಗಿ ನರದ ಬುಡದಿಂದ ಕೊನೆಯವರೆಗೂ ಅವಿಚ್ಛಿನ್ನವಾಗಿ ಹರಡಿಕೊಂಡಿರುತ್ತವೆ. ನರದ ಕವಲುಗಳಿಗೆ ನರತಂತುಗಳು ಅಖಂಡವಾಗಿ ಹೋಗುವುದೇ ವಿನಾ ಸ್ವತಃ ಒಂದು ನರತಂತು ಕವಲಾಗುವುದು ಅಪರೂಪ. ದೇಹದ ಹೊರ ಮತ್ತು ಒಳ ಆವರಣಗಳ ವ್ಯತ್ಯಾಸಗಳಿಂದ ಪಂಚೇಂದ್ರಿಯಗಳಲ್ಲಿಯೂ ದೇಹದ ಇತರ ಭಾಗಗಳಲ್ಲಿಯೂ ಉದ್ಭವಿಸಿದ ಇಂದ್ರಿಯ ಜ್ಞಾನ ಮತ್ತು ಇತರ ಸಂವೇದನೆಗಳನ್ನು ಮಿದುಳು ಮತ್ತು ಮಿದುಳು ಬಳ್ಳಿಗಳಿಗೆ ಒಯ್ದು, ತತ್ಫಲವಾಗಿ ಅಲ್ಲಿ ಉಂಟಾಗುವ ಪ್ರತಿಕ್ರಿಯಾ ಸಂದೇಶಗಳನ್ನು ಸ್ನಾಯು, ರಸಗ್ರಂಥಿ ಮುಂತಾದ ಕ್ರಿಯಾಂಗಗಳಿಗೆ ತಲಪಿಸುವುದು ನರತಂತುಗಳ ಕಾರ್ಯ. ಇಂಥ ತಂತುಗಳಿಗೆ ಅನುಕ್ರಮವಾಗಿ ಜ್ಞಾನವಾಹಿ ಮತ್ತು ಕ್ರಿಯಾವಾಹಿ ನರತಂತುಗಳೆಂದು ಹೆಸರು. ನರಮಂಡಲವು ದೇಹದ ಪ್ರಮುಖ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇದು ನರಗಳ ಮೂಲಕ ಮೆದುಳು ಮತ್ತು ದೇಹದ ಇತರ ಭಾಗಗಳ ನಡುವಿನ ಸಮನ್ವಯವನ್ನು ಖಾತ್ರಿಗೊಳಿಸುತ್ತದೆ. ನರಮಂಡಲವು ಸರಿಯಾಗಿ ಕೆಲಸ ಮಾಡದಿದ್ದರೆ, ಅದು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

            ಕೇವಲ ಜನ್ಮತಾಳಿದ ಮಾತ್ರಕ್ಕೆ ನರಜನ್ಮ ಸಫಲವಾಗದು. ನರ ನಾರಾಯಣ’ ನಾಗಲು ಸಾಧ್ಯ.  ನರಗಳಿಂದ ಕೂಡಿದ ಮಾನವ ಆರೋಗ್ಯದ ಮೂಲ ನರಗಳೇ ಆಗಿವೆ. ಆ ನರ ಸಮೂಹಕ್ಕೆ ರಾಜ ನರಸಿಂಹ ಎಂಬ ಸಂಕೇತವನ್ನು ಕೊಟ್ಟು ಆ ನರಗಳ ಸಮೂಹದಲ್ಲಿ ನಮ್ಮ ಕರುಳು ಆರೋಗ್ಯಕ್ಕೆ ಮೂಲವಾಗಿರುವುದು ಎಂದು ತೋರಲು ನರಸಿಂಹ ದೇವರ ಸಂಕೇತಿಕ ಉದಯ ಆಗಿರುವ ಸಾಧ್ಯತೆ ಇದೆ. ನರಸಿಂಹ ಎಂದ ಕೂಡಲೇ ಭಗವದ್ಭಕ್ತರ, ಭಗವದುಪಾಸಕರ ಹೃದಯದಲ್ಲಿ ಏಳುವ ಎರಡು ಭಾವನೆಗಳೆಂದರೆ ಕ್ರೌರ್ಯ ಮತ್ತು ವಾತ್ಸಲ್ಯ. ನರ ಸಮೂಹ ವ್ಯಗ್ರವಾದರೆ ಕ್ರೌರ್ಯ ಆರೋಗ್ಯದಿ ಶಾಂತವಾಗಿದ್ದಾರೆ ವಾತ್ಸಲ್ಯದಿಂದ ಕೂಡಿರುವ ಸಂಕೇತಗಳಿವೆ.  ಸಿಂಹ ಎಂದರೆ ವೈದ್ಯನಾಗಿ ಮಾಂತ್ರಿಕ ಸೂತ್ರ ವಾಯು ವ್ಯಾಪಿಸುತ್ತದೆ, ಎಂಬ ಅಕ್ಷರ ಅರ್ಥ ಇದೆ. ಅಂತಹ ಮಾಂತ್ರಿಕ ಸೂತ್ರ ಮತ್ತು ವಾಯುವನ್ನು ಆತ್ಮ ಶಕ್ತಿ ಎಂದೂ ಕರೆಯುತ್ತಾರೆ. ಎಲ್ಲಾದಕ್ಕೂ ರಾಜ ಎಂದೂ ಕರೆಯುತ್ತಾರೆ. ಅಂತಹ ಶಕ್ತಿ ನರ ನಾಡಿಗಳಲ್ಲಿ ಹರಿಯುವುದು ವ್ಯಾಪಿಸುವುದು ಇದರ ಚಿಹ್ನೆಯಾಗಿ ನರಸಿಂಹ ದೇವರ ಚಿತ್ರಣವಾಗಿದೆ ಎಂದು ಬ್ರಹ್ಮಜ್ಞಾನದ ಆವಿಷ್ಕಾರವಾಗಿದೆ.  

            ಶ್ರೀ ಮಹಾವಿಷ್ಣುವಿನ ನಾಲ್ಕನೆಯ ಅವತಾರವೇ ನರಸಿಂಹಾವತಾರ. ಈ ನರಸಿಂಹನಿಗೆ ಹತ್ತಾರು ಅವತಾರಗಳುಂಟು, ಯೋಗಾನರಸಿಂಹ, ಭೋಗಾನರಸಿಂಹ, ಉಗ್ರನರಸಿಂಹ, ವರದ ನರಸಿಂಹ, ಶಾಂತನರಸಿಂಹ, ಅಭಯನರಸಿಂಹ, ಶಕ್ತಿ ನರಸಿಂಹ, ಲಕ್ಷ್ಮೀನರಸಿಂಹ, ಭಕ್ತನರಸಿಂಹ, ಸಮರ್ಥ ನರಸಿಂಹ, ಇತ್ಯಾದಿ. ಅಕ್ಷರ ವ್ಯಾಖ್ಯಾನವಲ್ಲದೆ ಬೇರೆ ರೀತಿಯಲ್ಲಿ ಜ್ಞಾನಿಗಳು ಹೀಗೆ ಹೇಳಿದ್ದಾರೆ,  ಸಿಂಹಃ ಎಂದರೆ ಸರ್ವ ಸಂಹಾರಕ! ಯಾವುದು ನಮಗೆ ಬೇಡವಾಗಿದೆಯೋ ಅದನ್ನು ಸಂಹಾರ ಮಾಡುವವನು ಸಿಂಹಃ. ಎಲ್ಲಾ ದೋಷಗಳ ಸಂಹಾರಕ, ದೇಹದ ಸಂಹಾರಕ ಮತ್ತು ಪೌರುಷದ ಗಣಿಯಾದ ಸರ್ವಶ್ರೇಷ್ಠ ಭಗವಂತ ಸಿಂಹಃ. ನಮ್ಮಲ್ಲಿರುವ ದೋಷದ ನಿವಾರಣೆಗಾಗಿ ನರಸಿಂಹ ಸ್ವರೂಪವನ್ನು ಉಪಾಸನೆ ಮಾಡುವುದು ಶಾಸ್ತ್ರೋಕ್ತ. ದುಷ್ಟ ಸಂಹಾರದಲ್ಲಿ ಭಗವಂತ ಸ್ವಯಂ ಕ್ರೋಧ ರೂಪಿ. ಭಗವಂತನ ನರಸಿಂಹ ಅವತಾರ ಆತನ ಕ್ರೋಧ ರೂಪದ ಒಂದು ಉದಾಹರಣೆ. ನಮ್ಮಲ್ಲಿರುವ ದೌರ್ಬಲ್ಯ, ದೋಷ, ಎಲ್ಲವನ್ನು ನಾಶ ಮಾಡುವವನೂ ಅವನೇ. ಈ ಕಾರಣಕ್ಕಾಗಿ ಭಗವಂತನ ಸಿಂಹ ರೂಪದ ಉಪಾಸನೆ ಮಾಡುತ್ತಾರೆ. "ನನ್ನಲ್ಲಿರುವ ತಮೋಗುಣವನ್ನು, ದೋಷವನ್ನು, ಕಾಮ-ಕ್ರೋಧ-ಮದ-ಮತ್ಸರಲೋಭವನ್ನು ನಾಶ-ಮಾಡಿ, ಸಂಸಾರ ಬಂಧನದಿಂದ ಪಾರುಮಾಡು" ಎಂದು ನರಸಿಂಹ ರೂಪದ ಭಗವಂತನ ಉಪಾಸನೆ ಮಾಡುತ್ತಾರೆ. ಸಾತ್ವಿಕ ಜೀವರೊಳಗಿದ್ದು, ಮುಕ್ತಿಪ್ರದನಾಗಿ, ಸಂಸಾರ ಬಂಧನದ ಸಂಹಾರ ಮಾಡುವ ಭಗವಂತ ಸಿಂಹಃ.

            ಒಟ್ಟು ನಮ್ಮ ದೇಹಗತ ಪ್ರಧಾನ ನಾಡಿಗಳು ೭೨೦೦೦, ಅದರಲ್ಲಿ ಮುಖ್ಯವಾದುವು ೧೦೧ ನಾಡಿಗಳು, ಆ ನಾಡಿಗಳಲ್ಲಿ ಕಲಶಸ್ಯ ಮುಖೇ ವಿಷ್ಣುಃ” ಇತ್ಯಾದಿ ಶ್ಲೋಕದಿಂದ ಕಲಶದಲ್ಲಿ ಕಲಶನಾಮಕ ಪರಮಾತ್ಮ ನನ್ನು ಚಿಂತಿಸಿ ೧೦೧ ಮೂರ್ತಿಗಳನ್ನು ಆವಾಹನ ಮಾಡುವ ಸಂಪ್ರದಾಯವು ತಂತ್ರಸಾರ ರೀತ್ಯಾ ದೇವತಾರ್ಚನೆ ಮಂತ್ರದಲ್ಲಿ ಇದೆ. ಏಕಪಂಚಾ ಶದ್ವರ್ಣಾನಾಂ ಚತುರ್ವಿಂಶತಿ ಮೂರ್ತಯಃ ಆತ್ಮ್ವಾದ್ಯ್ಯಾ ವಾಸುದೇವಾದ್ಯಾ ವಿಶ್ವಾದ್ಯಾ ಮತ್ಸ್ಯ ಕಚ್ಚಪೌ | ಕ್ರೋಡೋ ನೃಸಿಂಹಃ ಸವನಟುರ್ಜಾಮದಗ್ನಿ ರಘೂದ್ವಹೌ | ವಾಸಿಷ್ಟಯಾದವೌ ಕೃಷ್ಣ್ವಾವಾತ್ರೇಯೋ ಬುದ್ಧಕಲ್ಕಿನೌ | ಶಿಂಶು ಮಾರಶ್ಚೇತಿ ಶತಂಕಲಾಃ ಕಲಶದೇವತಾಃ॥'' ಅಂದರೆ, ಅಜಾದಿ ೫೧, ಕೇಶವಾದಿ ೨೪, ಆತ್ಮ, ಅಂತರಾತ್ಮ, ಪರಮಾತ್ಮ, ಜ್ಞಾನಾತ್ಮ ಎಂಬ ೪ ಮೂರ್ತಿಗಳು, ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಅನಿರುದ್ಧ ಇವು ೪. ವಿಶ್ವ, ತೈಜಸ, ಪ್ರಾಜ್ಞ, ತುರಿಯ ಇವು ೪, ಮತ್ಸ್ಯಾದಿ ೧೦, ವೇದವ್ಯಾಸ, ದತ್ತಾತ್ರೇಯ ಶಿಂಶುಮಾರ, ಶ್ರೀ ಲಕ್ಷ್ಮೀನಾರಾಯಣ. ಅಂತು ೧೦೧ ಮೂರ್ತಿಗಳು ಇವು ಕಲಶ ಮೂರ್ತಿಯ ಕಳಾಭೂತವೆಂದು ತಂತ್ರಸಾರದಲ್ಲಿ ಹೇಳಿರುವರು. ಈ ಮೂರ್ತಿಗಳೇ ನಮ್ಮ ದೇಹಗತ ೧೦೧ ಮುಖ್ಯ ನಾಡಿಗಳಲ್ಲಿ ಇರುವವು. ಅವುಗಳೂ ಕಲಶನಾಮಕ ಪರಮಾತ್ಮನ ಕಳೆಗಳೆಂದು ತಿಳಿದು ಪರಮಾದರದಿಂದ ಜ್ಞಾನಿಗಳಾದ ಬ್ರಾಹ್ಮಣರು ವೂಜಿಸುತ್ತಿರುವರು. ಬ್ರಾಹ್ಟ್ಮಣರು ಎಂಬ ಮಾತಿನಿಂದ ಬ್ರಹ್ಮ್ಮಜ್ಞಾನಿಗಳೆಂದರ್ಥ. ಬರೇ ಬ್ರಾಹ್ಮಣ ಜಾತಿಯಲ್ಲಿ ಹುಟ್ಟದ-ವರೆಲ್ಲರೂ ಹೀಗೆ ಪೂಜೆ ಮಾಡುತ್ತಾರೆಂದು ಅರ್ಥವಲ್ಲ.

            ”ಇಡಾನಾಡಿಯಲ್ಲಿ ಮಂದಾಕಿನೀ, ಪಿಂಗಳಾ ನಾಡಿಯಲ್ಲಿ ಯಮುನೆ, ಗಾಂಧಾರಿ ನಾಡಿಯಲ್ಲಿ ಕಾವೇರಿ, ಹಸ್ತಿನೀ ನಾಡಿಯಲ್ಲಿ ಸಿಂಧು, ಅಲಂಬು ನಾಡಿಯಲ್ಲಿ ತಾಮ್ರಪರ್ಣೀ, ಮಧ್ಯನಾಡಿಯಲ್ಲಿ ಗೋಮತಿ, ಪುನ್ನಾಡಿ ನಾಡಿಯಲ್ಲಿ ಗಂಡಿಕೆ, ಸರಸ್ವತೀ ನಾಡಿಯಲ್ಲಿ ನಂದಾ ಕೃಷ್ಣವೇಣೀ, ಕುಹುನಾಡೀ ಕಾಳಿಂದೀ, ಶಂಕಿಣಿ....ತಪತೀ, ವಾರುಣಿ--ಗೋದಾವರಿ, ಪೂಷಾ--ಪಯಸ್ವನೀ, ಹೀಗೆ ೧೨ ನಾಡಿಗಳಲ್ಲಿ ೧೨ ನದಿಗಳನ್ನು ತಿಳಿದು ಜ್ಞ್ಯಾನತೀರ್ಥದಲ್ಲಿ ಸ್ನಾನ ಮಾಡಿರೆಂದು ವಿಜಯದಾಸರಾಯರವರ ಸುಳಾದಿಯಿಂದ ವ್ಯಕ್ತವಾಗುವುದು.

 

ಸಂಸ್ಕೃತದಲ್ಲಿ ಕಮಲ ಮತ್ತು ಕುಂಡಲಿನಿ ಚಕ್ರಗಳ ವಿಶೇಷತೆ

 

ಕಮಲ = ಕ ಮ ಲ = = कमल

ಅಕ್ಷರ ಅರ್ಥ:- ಶ್ರೀಮಂತ ಮಾಂತ್ರಿಕ ಸೂತ್ರದ ಸೃಷ್ಟಿಕರ್ತ

 

ಪುಷ್ಪ = ಪು ಶ ಪ = पुष्प = पु

ಅಕ್ಷರ ಅರ್ಥ:- ಅತ್ಯುತ್ತಮ ಗಾಳಿಯನ್ನು ಶುದ್ಧೀಕರಿಸುವುದು

ವಿವರಣೆ:- ಸಾಮಾನ್ಯವಾಗಿ ಕಮಲದ ಹೂವಿಗೆ ಸಂಬಂಧಪಟ್ಟ ಅರ್ಥ ಸೂಕ್ಷ್ಮತೆಗಳು ನೀಡುತ್ತಾರೆ. ಸ್ತ್ರೀಯ ಸ್ವರೂಪ, ಸೃಷ್ಟಿಕ್ರಿಯೆ, ಶಕ್ತಿ ಮತ್ತು ಜೀವನದ ಪ್ರೇರಕ ಅಂಶ. ಫಲವಂತಿಕೆ, ಪಕ್ವತೆ, ಸಮೃದ್ದಿ, ಅದೃಷ್ಟ, ಶುಭ, ಸಂತಸದ ಶಕುನ, ಸಂತಾನ ಪ್ರಾಪ್ತಿ, ದೀರ್ಘಾಯುಷ್ಯ ಮತ್ತು ಕೀರ್ತಿ. ಮಾತೃದೇವತೆ, ನದಿಗಳ ಜನನ ಮೂಲ, ಜೀವದಾಯಕ, ಭೂಮಿ, ಸೃಷ್ಟಿ, ಪ್ರಾಣ, ಚೈತನ್ಯ, ಸ್ವಯಂ ಸೃಷ್ಟಿಶೀಲ, ವಿಶ್ವದ ಪ್ರಮುಖ ಪ್ರಕ್ರಿಯೆ. ದೈವತ್ವ, ಅತಿಮಾನವ ಹುಟ್ಟು, ನಿರಂತರ ಪೀಳಿಗೆ ಉತ್ಪತ್ತಿ, ಮರುಹುಟ್ಟು,. ಅಮರತ್ವ, ಪುರುಜ್ಜೀವನ ಮತ್ತು ಜೀವರಕ್ಷಣೆ, ಜ್ಞಾನೋದಯ ತಿರುಳು. ಸೂರ್ಯ ಪ್ರತಿಷ್ಠಾಪಕ, ಆತ್ಮಗಳನ್ನು ಆಚ್ಛಾದಿಸುವ ಹೂ ಮತ್ತು ಬುದ್ದನ ವಿಶ್ರಾಂತಿ ತಾಣ. ಪಾವಿತ್ರ್ಯ, ಆಧ್ಯಾತ್ಮಿಕ ನಿಯಮ ರಕ್ಷಣೆ ಮತ್ತು ರಚನೆ, ನಿರ್ವಾಣ ಮಾರ್ಗದರ್ಶಿ.

            ವೇದಾಂತಿಗಳು ಹೇಳುವ ಪ್ರಕಾರ, "ದಶದಳಕಮಲ' ಎಂದರೆ ದಶೇಂದ್ರಿಯಗಳಿಗೆ ಸಂಬಂಧಪಟ್ಟ ಹತ್ತು ನಾಡೀ ದಾರಗಳ ಗಂಟು. ಇದರಂತೆ "ಹದಿನಾರು ದಳಗಳ ಕಮಲ' ಎಂದರೆ, ದಶೇಂದ್ರಿಯಗಳು, ಶಬ್ದಾದಿ ಪಂಚತನ್ಮಾತ್ರಗಳು ಮತ್ತು ಮನಸ್ಸು ಎಂಬ ಆರು ಅಂಶಗಳನ್ನು ನಿಯಂತ್ರಿಸುವ ಹದಿನಾರು ನಾಡೀ ಎಳೆಗಳ ಗಂಟು. ಗಂಟಲಿನ ಬಳಿಯ ಹನ್ನೆರಡು ದಳಗಳಲ್ಲಿ ಇಡಾ, ಪಿಂಗಳಾ ನಾಡಿಗಳಿಗೆ ಸಂಬಂಧಿಸಿದ ಎರಡು ದಳಗಳು ದ್ವಿದಳ ಕಮಲವೆಂದು ಪ್ರಸಿದ್ಧವಾಗಿವೆ. ಅಲ್ಲಿ ಮುಖ್ಯಪ್ರಾಣ ಮತ್ತು ಭಾರತೀದೇವಿಯರ ಇನ್ನೊಂದು ಸ್ಥಾನವಿರುವುದು. ಅವರು ಅಲ್ಲಿ ನಿಂತು ನಡೆಸುವ ಹಂಸಮಂತ್ರ ಜಪದಿಂದಲೇ ಶ್ವಾಸೋಚ್ಚಾನ ನಡೆಯುವುದು. ಜೀವನನ್ನು ಎತ್ತಿಕೊಂಡು ಪ್ರಾಣದೇವರು ಕಂಠ ಪ್ರದೇಶಕ್ಕೆ ಬಂದು, ಅಲ್ಲಿಂದ ಭ್ರೂಮಧ್ಯ ಪ್ರದೇಶಕ್ಕೇಕ್ಕೆರುವಾಗಲೇ ಭೌತದೇಹದ ಕಾರ್ಯಗಳೆಲ್ಲಾ ಸ್ಥಗಿತವಾಗಿ ಹೋಗುವುವು. ಸಾಮಾನ್ಯವಾಗಿ ಜೀವಿಗಳು ದೇಹತ್ಕಾಗ ಮಾಡುವಾಗ, ಪ್ರಾಣದೇವರು ಜೀವನನ್ನು ಎತ್ತಿಕೊಂಡು ಕಣ್ಣು, ಮೂಗು, ಕಿವಿ ಅಥವ ಬಾಯಿ, ಇವುಗಳಲ್ಲಿ ಯಾವುದಾದರೊಂದರ ಮುಖಾಂತರ ನಿರ್ಗಮಿಸುತ್ತಾರೆ. ಆದರೆ, ಭಗವದ್ಭಕ್ತನಾದ ಯೋಗಿಯ ಜೀವವನ್ನು ಕರೆದು ಕೊಂಡು, ಭ್ರೂಮಧ್ಯದಿಂದ ವೈಕುಂಠ ವಾಸುದೇವನ ಮಂದಿರವಾದ ಶಿರಸ್ಸಿನ ಸಹಸ್ರದಳ ಕಮಲಕ್ಕೆ ಬಂದು ಆ ಸ್ವಾಮಿಯ ಅಪ್ಪಣೆ ಪಡೆದು ಬ್ರಹ್ಮರಂಧ್ರವನ್ನು ಭೇದಿಸಿ ನಿರ್ಗಮಿಸುತ್ತಾರೆ. ಪದ್ಮ ಎಂದರೆ ಕಮಲ ಎಂದರೆ ತಾವರೆ ಹೂವು. ಪದ್ಮದಲ್ಲಿ ಹುಟ್ಟಿದವನು - ಬ್ರಹ್ಮ. ಬ್ರಹ್ಮನಿಗೆ ತಂದೆ ಶ್ರೀ ಹರಿ. ಪದ್ಮದಲ್ಲಿ ನಿಂತಿರುವಳು - ಮಹಾಲಕ್ಷ್ಮಿ, ಅವಳಿಗೆ ಈಶನು ವಿಷ್ಣು. ಪದ್ಮ - ಮಹಾವಿಷ್ಣುವಿನ, ಲಕ್ಷ್ಮಿಯ ಮತ್ತು ಇಷ್ಟದೈವಗಳ ಅವಯವಗಳನ್ನು ಪದ್ಮಕ್ಕೆ ಕವಿಗಳು ಹೋಲಿಸುತ್ತಾರೆ.

            ಮಾನವ ದೇಹವು ನಾಡಿಗಳ ಸಂಕೀರ್ಣವಾದ ಜಾಲವನ್ನು ಹೊಂದಿದೆ , ಅವುಗಳು ದೇಹದ ಮೂಲಕ ಹಾದುಹೋಗುವ ಮತ್ತು ಶಕ್ತಿಯನ್ನು ಸಾಗಿಸುವ ಚಾನಲ್ಗಳಾಗಿವೆ. ಸುಷುಮ್ನಾ, ಇಡಾ ಮತ್ತು ಪಿಂಗಲಾ ಸೇರಿದಂತೆ ಮೂರು ಪ್ರಾಥಮಿಕ ನಾಡಿಗಳಿವೆ. ಸುಷುಮ್ನಾವು ಬೆನ್ನುಮೂಳೆಯ ಬುಡದಿಂದ ತಲೆಯ ಕಿರೀಟದವರೆಗೆ ಏರುತ್ತದೆ, ಆದರೆ ಇಡಾ ಮತ್ತು ಪಿಂಗಲಾ ಕ್ರಮವಾಗಿ ಎಡ ಮತ್ತು ಬಲ ಮೂಗಿನ ಹೊಳ್ಳೆಗಳಲ್ಲಿ ಕೊನೆಗೊಳ್ಳುತ್ತದೆ. ಒಟ್ಟಾರೆಯಾಗಿ, ದೇಹದಲ್ಲಿ 72,000 ನಾಡಿಗಳಿವೆ ಎಂದು ಹೇಳಲಾಗುತ್ತದೆ. ಸುಷುಮ್ನಾ ನಾಡಿ ಎಲ್ಲಾ ಏಳು ಚಕ್ರಗಳನ್ನು ಜೋಡಿಸುವ ಜವಾಬ್ದಾರಿಯನ್ನು ಹೊಂದಿದೆ, ಇದನ್ನು ಸಾಮಾನ್ಯವಾಗಿ ಕಮಲದ ಹೂವುಗಳು ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಚಕ್ರವು ವಿಭಿನ್ನ ಸಂಖ್ಯೆಯ ದಳಗಳನ್ನು ಹೊಂದಿರುತ್ತದೆ. ಚಕ್ರಗಳನ್ನು ಸಾಮಾನ್ಯವಾಗಿ ಕಮಲದ ಹೂವುಗಳಿಗೆ ಹೋಲಿಸಲಾಗುತ್ತದೆ, ಏಕೆಂದರೆ ಅವುಗಳು ಮೇಲ್ಮುಖವಾಗಿ ತಿರುಗುತ್ತವೆ, ಅಶುದ್ಧ ಪಾತ್ರೆಗಳಲ್ಲಿ ನೆಲೆಗೊಂಡಿದ್ದರೂ ಶುದ್ಧತೆಯನ್ನು ಸಂಕೇತಿಸುತ್ತವೆ. ಕಮಲದ ಹೂವು ಕೊಳದ ತಳದಿಂದ ಬೆಳೆಯುತ್ತದೆ, ಆದರೆ ಅದರ ಸುತ್ತಮುತ್ತಲಿನ ಪರಿಸರದಿಂದ ಕಲ್ಮಶವಿಲ್ಲದೆ ಉಳಿದಿದೆ. ಅಂತೆಯೇ, ಅಶುದ್ಧ ಮಾನವ ದೇಹದಲ್ಲಿ ನೆಲೆಗೊಂಡಿದ್ದರೂ ಚಕ್ರಗಳು ಪವಿತ್ರವಾಗಿರುತ್ತವೆ. ಕುಂಡಲಿನಿ ಶಕ್ತಿಯು ಚಕ್ರಗಳ ಮೂಲಕ ಮೇಲೇರಿದಾಗ ಮತ್ತು ಸಹಸ್ರಾರವನ್ನು ತಲುಪಿದಾಗ, ಅದು ಜ್ಞಾನೋದಯ ಅಥವಾ ಸಮಾಧಿ ಸ್ಥಿತಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಇದು ಕುಂಡಲಿನಿ ಯೋಗದ ಅಂತಿಮ ಗುರಿಯಾಗಿದೆ ಮತ್ತು ಇದು ಬ್ರಹ್ಮಾಂಡದೊಂದಿಗೆ ಶಾಂತಿ, ಆನಂದ ಮತ್ತು ಏಕತೆಯ ಆಳವಾದ ಅರ್ಥವನ್ನು ತರುತ್ತದೆ ಎಂದು ಹೇಳಲಾಗುತ್ತದೆ.

            ಆರು ಚಕ್ರ (ಪದ್ಮ ಅಥವಾ ಕಮಲ) ಗಳಲ್ಲಿ ಎಲ್ಲಕ್ಕಿಂತ ಕೆಳಗಿರುವುದೆಂದರೆ ಮೂಲಾಧಾರ ಚಕ್ರ . ಅದು ಮೂಲಾಧಾರದಲ್ಲಿ ತಲೆಕೆಳಗಾಗಿರುತ್ತದೆ. ಇದನ್ನ ಇನ್ನೊಂದು ರೀತಿಯಾಗಿ ಹೇಳುತ್ತಾರೆ. ಮೂಲಾಧಾರದಲ್ಲಿ ಕುಂಡಲಿಯು ಸುತ್ತು ಹಾಕಿಕೊಂಡು ಮಲಗಿರುತ್ತದೆ. ಸಾಧಕನು ಆ ಕುಂಡಲಿಯನ್ನು ಜಾಗೃತಗೊಳಿಸಿ ಮೇಲ್ಮುಖವಾಗಿ ಸಂಚರಿಸುವಂತೆ ಮಾಡಿ ಉಳಿದ ಚಕ್ರಗಳ ಮೂಲಕ ಹಾದು ಸಹಸ್ರಾರ ಚಕ್ರವನ್ನು ತಲುಪುವಂತೆ ಮಾಡಬೇಕು.



[1] ಸೋಮ ಎಂದರೆ ಅಕ್ಷರಶಃ ಅರ್ಥ ಗಾಳಿ ಕರೆಯುವ ಮಾಂತ್ರಿಕ ಸೂತ್ರ

[2] ಮಾನವ ನರಸಮೂಹದ ನಿರ್ಮಿತನು, ಅವನ ಅಸ್ತಿತ್ವವವೇ ನರಸಮೂಹ ಅಂತಹ ನರಸಮೂಹದ ರಾಜ (ಸಿಂಹ) ನರಸಿಂಹ, ಅದು ಸುಷುಮ್ನಾ ನಾಡಿ ಎಂತಲೂ ಬಿಂಬಿಸಬಹುದು, ಅಜಪ ಮಂತ್ರ ಸ್ವರೂಪವು ಸುಷುಮ್ನಾ 
ನಾಡಿಯಲ್ಲಿ ಸಕಲ ನರ ನಾಡಿಯಲ್ಲಿ ವಾಯು ಸ್ವರೂಪ ಅಮೃತ ದೇವನಾದ ಹರಿ/ಲಕ್ಷ್ಮಿಯ ಚಲಿಸುವಿಕೆಗೆ ಬಳಸುವ ಮಂತ್ರ ಎಂಬುದೇ ಸತ್ಯ ಸಾಕ್ಷಾತ್ಕಾರ.


[3] ಆಕಾಶ ಎಂದರೆ ಅಕ್ಷರಾರ್ಥದಲ್ಲಿ "ಭೂಮಿಯಲ್ಲಿನ (ಮೂಲಾಧಾರದಲ್ಲಿನ) ಜೀವ ಉಸಿರು ಒಂದು ಆಯುಧ"

[4] ಉಷ ಎಂದರೆ ಸುಷುಮ್ನಾ ನಾಡಿ ಅಥವಾ ಮಲಯ ಪರ್ವತ ಅಥವಾ ರಂಧ್ರ ಎಂಬ ಸಂಸ್ಕೃತ ವ್ಯಾಖ್ಯಾನ ಇದೆ.


[5] ಓಂ ಉಷಾ ಅ ವ ಅ ಅ ಶ ವ ಸ್ಯ ಮೇಧ ಯ ಸ್ಯ ಶ ಇ ರ ಹ

[6] ಸೂರ್ಯಸ್  ಚಕ್ಷುರ್ ವಾತಃ


[7] ವ ಅ ಯ ತ ತ ಮ ಅಗ್ನಿರ್ (ವೈಶ್ವಾನರಃ) ವ ಐ ಶ ವ ಅ ನ ರ ಹ

[8] ಸ ಮ ವ ತ ಸ ರ  ಆತ್ಮ ಅ ಶ ವ ಸ್ಯ ಮೇಧ ಯ ಸ್ಯ


[9] ದ ಔ ಯ ಹ ಪೃಷ್ಠ ಮ ಅಂತರಿಕ್ಷಮ್ ಉದರಂ ಪೃಥಿವೀ

[10] ಪಾಜಸ್ಯಂ ದಿಶ್ ಹ ಪಾರ್ಶ್ವ ವೇ ಅವಾಂತರ ದಿಶ್ ಹ


[11] ಪರ್ಶ ವ ಋತ ವೋ ಮ ಗಾ ನಿ ಮಾಸ ಅ ಶ ಚ ಅರ್ಧ ಮಾಸ ಅ ಶ ಚ  ಪರ್ವ ಅಣ್ ಯಃ ವೋ ರಾತ್ರ ಆ ನ ಎ   ಪ್ರತಿಷ್ಠಾ ನಕ್ಷತ್ರ ಆ ಣ ಯ  ಸ್ಥೀತಿ ನಭ ಓ  ಮಾಂಸ ಅ ನಿ

[12] ಊವಧ್ಯಂ ಸಿಕತಾ ಹ  ಸಿಂಧವೋ ಗುದಾಃ ಯಕೃತ್ ಚ  ಕ್ಲೋಮಾನ ಶ ಚ ಪರ್ವತಾಃ ಓಷಧ ಯ ಶ ಚ  ವನಸ್ಪತ ಯ ಶ ಚ ಲ ಓ  ಮ ಅ ನಿ, ಉದ್ಯ ನ್ ಪೂರ್ವ ಧಃ ನಿಮಾಲ್ ಓ ಚಂ ಜಘನಾರ್ಧಃ ಯದ್ವಾ ವಿಜೃಂಭ ತೇ ತದ್ ವಿ  ದ್ಯೋತ ತೇ ಯ ದ ವಿ  ಧೂನ ಉ ತೇ ತತ್ ಸ್ತನಯತಿ  ಯನ ಮೇಹ ತಿ ತದ್ ವರ್ಷ ತಿ ವಾಗ ವೇ ವಾಸ್ಯ ವಾಕ್‌


No comments:

Post a Comment

ಪ್ರಾಣ ವಿದ್ಯಾ ವೇದ ರಹಸ್ಯ - 14

  ಅಧ್ಯಾಯ - 17        ವೈಜ್ಞಾನಿಕ ವಿವರಣೆಗಳು   ನಮ್ಮ ದೇಹದ ಉಸಿರಾಟ ವಿಧಾನ               ವಿಜ್ಞಾನಿಗಳು ಕಂಡುಕೊಂಡಂತೆ , ಗಾಳಿಯಲ್ಲಿನ ದೂಳಿನ ದೊಡ್ಡ...