ಪ್ರಾಣ-ಆತ್ಮ-ಮಂತ್ರ
ಪ್ರಾರ್ಥನೆ ಅರ್ಥ ಸಹಿತ
ಸರಸ್ಪತಿ ಕವಚ ಮಂತ್ರ ಪ್ರಯೋಗಿಸಿ ದೇಹ ರಕ್ಷಣೆ ಮಾಡಿ
ಸರಸ್ಪತಿ ಕವಚ ಮಂತ್ರ
"ಓಂ ಹ್ರೀಂ
ಸರಸ್ವತ್ಯೈ ಸ್ವಾಹಾ' ಎಂಬ ಮಂತ್ರ ನನ್ನ ಶಿರಸ್ಸನ್ನು ರಕ್ಷಿಸಲಿ.
"ಓಂ ಶ್ರೀ ವಾಗ್ದೇವತಾಯೈ ಸ್ವಾಹಾ'
ಎಂಬ ಮಂತ್ರ ಹಣೆಯನ್ನು ರಕ್ಷಿಸಲಿ.
"ಓಂ ಹ್ರೀಂ ಸರಸ್ವತ್ಯೈ ಸ್ವಾಹಾ'
ಎಂಬ ಮಂತ್ರ ಕಿವಿಗಳನ್ನು ರಕ್ಷಿಸಲಿ.
"ಓಂ ಶ್ರೀಂ ಹ್ರೀಂ ಭಾಗವತ್ಯೈ
ಸರಸ್ಪತ್ಯೈ ಸ್ವಾಹಾ'
ಎಂಬ ಮಂತ್ರ ಕಣ್ಣುಗಳನ್ನು ರಕ್ಷಿಸಲಿ.
"ಓಂ ಐಮ್ ಹ್ರೀಂ ವಾಗ್ವಾದಿನ್ಯೈ
ಸ್ವಾಹಾ' ಎಂಬ ಮಂತ್ರ
ಮೂಗನ್ನು ರಕ್ಷಿಸಲಿ.
"ಓಂ ಹ್ರೀಂ
ವಿದ್ಯಾಧಿಷ್ಠಾತೃದೇವ್ಯೈ ಸ್ವಾಹಾ' ಎಂಬ ಮಂತ್ರ
ಕಿವಿಯನ್ನು ರಕ್ಷಿಸಲಿ.
"ಓಂ ಶ್ರೀಂ ಹ್ರೀಂ ಬ್ರಾಹ್ಮ್ಯೈ
ಸ್ವಾಹಾ' ಎಂಬ ಮಂತ್ರ
ದಂತಪಂಕ್ತಿ ರಕ್ಷಿಸಲಿ.
"ಓಂ ಐಂ'
ಎಂಬ ಏಕಾಕ್ಷರ ಮಂತ್ರ ಕಂಠವನ್ನು ರಕ್ಷಿಸಲಿ.
"ಓಂ ಶ್ರೀಂ ಹ್ರೀಂ'
ಎಂಬ ಮಂತ್ರ ಕುತ್ತಿಗೆಯನ್ನು ರಕ್ಷಿಸಲಿ.
"ಓಂ ಶ್ರೀಂ'
ಎಂಬ ಮಂತ್ರ ಹೆಗಲನ್ನು ರಕ್ಷಿಸಲಿ.
"ಓಂ ಶ್ರೀಂ
ವಿದ್ಯಾಧಿಷ್ಠಾತೃದೇವ್ಯೈ ಸ್ವಾಹಾ' ಎಂಬ ಮಂತ್ರ
ಎದೆಯನ್ನು ರಕ್ಷಿಸಲಿ.
"ಓಂ ಹ್ರೀಂ ವಿದ್ಯಾ ಸ್ವರೂಪಾಯೈ
ಸ್ವಾಹಾ' ಎಂಬ ಮಂತ್ರ ನಾಭಿ
ರಕ್ಷಿಸಲಿ.
"ಓಂ ಹ್ರೀಂ ಕ್ಲೀಂ ವಾಣ್ಯೈ ಸ್ವಾಹಾ'
ಎಂಬ ಮಂತ್ರ ಬೆನ್ನನ್ನು ರಕ್ಷಿಸಲಿ.
"ಓಂ ಸರ್ವವರ್ಣಾತ್ಮಿಕಾಯೈ ಸ್ವಾಹಾ'
ಎಂಬ ಮಂತ್ರ ಪಾದಗಳನ್ನು ರಕ್ಷಿಸಲಿ.
"ಓಂ
ವಾಗಧಿಷ್ಠುತೃದೇವ್ಯೈ ಸ್ವಾಹಾ' ಎಂಬ ಮಂತ್ರ ಸರ್ವಾಂಗಗಳನ್ನು
ರಕ್ಷಿಸಲಿ.
"ಓಂ ಸರ್ವಕಂಠ ವಾಸಿನ್ಶೈ ಸ್ವಾಹಾ'
ಎಂಬ ಮಂತ್ರ ಪೂರ್ವದಿಕ್ಕಿನಲ್ಲಿ ರಕ್ಷಿಸಲಿ.
"ಓಂ ಹ್ರೀಂ ಜಿಹ್ವಾಗ್ರವಾಸಿನ್ಯೈ
ಸ್ವಾಹಾ' ಎಂಬ ಮಂತ್ರ
ಆಗ್ನೇಯದಲ್ಲಿ ರಕ್ಷಿಸಲಿ.
“ಓಂ ಐಂ ಶ್ರೀಂ ಹ್ರೀಂ ಸರಸ್ವತ್ಯೈ
ಬುಧಜನನ್ಯೈ ಸ್ವಾಹಾ' ಎಂಬ ಮಂತ್ರ
ದಕ್ಷಿಣ ದಿಕ್ಕಿನಲ್ಲಿ ರಕ್ಷಿಸಲಿ.
“ಓಂ ಹ್ರೀಂ ಶ್ರೀಂ'
ಎಂಬ ಮಂತ್ರ ನೈಋತ್ಯ ದಿಕ್ಕಿನಲ್ಲಿ ರಕ್ಷಿಸಲಿ.
"ಓಂ ಕವಿಜಿಹ್ವಾಗ್ರ ವಾಸಿನ್ಶೈ
ಸ್ವಾಹಾ' ಎಂಬ ಮಂತ್ರ
ಪಶ್ಚಿಮ ದಿಕ್ಕಿನಲ್ಲಿ ಸುರಕ್ಷಿಸಲಿ.
“ಓಂ ಸದಂಬಿಕಾಯೈ ಸ್ವಾಹಾ'
ಎಂಬ ಮಂತ್ರ ವಾಯವ್ಯದಲ್ಲಿ ರಕ್ಷಿಸಲಿ.
"ಓಂ ಗದ್ಯಪದ್ಯ ವಾಸಿನ್ಶೈ ಸ್ವಾಹಾ'
ಎಂಬ ಮಂತ್ರ ಉತ್ತರದಲ್ಲಿ ರಕ್ಷಿಸಲಿ.
"ಓಂ
ಸರ್ವಶಾಸ್ತ್ರ ವಾಸಿನ್ಶೈ ಸ್ವಾಹಾ' ಎಂಬ ಮಂತ್ರ ಈಶಾನ್ಯದಲ್ಲಿ
ರಕ್ಷಿಸಲಿ.
"ಓಂ ಹ್ರೀಂ ಸರ್ವಪೂಜಿತಾಯೈ ಸ್ವಾಹಾ'
ಎಂಬ ಮಂತ್ರ ಊರ್ಧ್ವದಿಕ್ಕಿನಲ್ಲಿ ರಕ್ಷಿಸಲಿ.
"ಓಂ ಐಂ ಹ್ರೀಂ ಪುಸ್ತಕವಾಸಿನ್ಕೈ
ಸ್ವಾಹಾ' ಎಂಬ ಮಂತ್ರ
ಅಧೋದಿಕ್ಕಿನಲ್ಲಿ ರಕ್ಷಿಸಲಿ.
"ಓಂ ಗ್ರಂಥ ಬೀಜ ರೂಪಾಯೈ ಸ್ವಾಹಾ'
ಎಂಬ ಮಂತ್ರ ಎಲ್ಲ ದಿಕ್ಕಿನಲ್ಲೂ ರಕ್ಷಿಸಲಿ.
ಇಲ್ಲಿ ಸ್ವಾಹಾ ಎಂಬ ಪದದ ಅರ್ಥದಲ್ಲಿ ಎಲ್ಲಾ
ದೇವರುಗಳಿಗೆ ಬೇದಭಾವವಿಲ್ಲದೆ ಮಾಡಿದ ನೈವೇದ್ಯ ಅಥವಾ ಅರ್ಪಣೆ. (ಅಗ್ನಿ ಮೂಲಕ), ಎಂದು ಇದೆ. ಇದರ ಅಕ್ಷರ ಜ್ಞಾನ ಅಥವಾ ಬ್ರಹ್ಮ ಜ್ಞಾನ ದಲ್ಲಿ ಗಮನಿಸಿದಾಗ
“ಶಕ್ತಿಯುತ ಅಗ್ನಿ ವಿಸ್ಮಯ ಶ್ರೇಷ್ಠತೆಯನ್ನು ಸಂಪಾದಿಸುವುದು”. ಯಜ್ಞವನ್ನು ಒಳಗೆ ಆಚರಿಸಲಿ
ಬಾಹ್ಯವಾಗಿ ಆಚರಿಸಲಿ, ಅದರಲ್ಲಿನ ಅಗ್ನಿಯು ನಮ್ಮ ಅಪರ್ಣೆಗಳಿಂದ ವಿಸ್ಮಯ
ಶ್ರೇಷ್ಟತೆಯನ್ನು ಸಂಪಾದಿಸುವನು. ಸಂಸ್ಕೃತದಲ್ಲಿ ಸ್ವಾಹಾ ಎಂಬ ಪದಕ್ಕೆ ಆಶೀರ್ವಾದಿಸಲಿ ಎಂಬ
ಅರ್ಥವೂ ಇದೆ.
ಈ ಕವಚದಿಂದಲೇ
ಶುಕ್ರಾಚಾರ್ಯರು ಎಲ್ಲ ದೈತ್ಯರಿಂದ ಪೂಜೆಗೆ ಅರ್ಹರಾದರು. ಇದರ ಶಕ್ತಿಯಿಂದ ಬೃಹಸ್ಪತಿಯ ಮಾನಸಿಕ
ತೀಕ್ಷ್ಣತೆ ಉಂಟಾಯಿತು. ಈ ಕವಚದ ಬಲದಿಂದಲೇ ವಾಲ್ಮೀಕಿಗೆ 'ಕಾವೀಶ್ವರ' ಎಂಬ ಹೆಸರು ಬಂತು. ಸ್ವಯಂಭೂ ಮನು ತನ್ನ
ನಿರಂತರ ಪಾರಾಯಣದಿಂದ ಪೂಜ್ಯನಾದನು. ಪ್ರಸಿದ್ಧ ಬರಹಗಾರರು ಅಂದರೆ, ಕಾನಾದ,
ಗೌತಮ, ಕಣ್ವ, ಪಾಣಿನಿ,
ಶಾಕತಾಯನ, ದಕ್ಷ ಮತ್ತು ಕಾತ್ಯಾಯನ ಈ
ಕವಚದಿಂದಾಗಿ ಖ್ಯಾತಿ ಗಳಿಸಿದರು. ಹಾಗೆಯೇ ವೇದವ್ಯಾನ, ಶತತಪ,
ಸಂವರ್ತ, ವಸಿಷ್ಠ, ಪರಾಶರ, ಯಜ್ಞವಾಲ್ಕ್ಯ, ಋಷ್ಯಶೃಂಗ,
ಮುಂತಾದವರು ಈ 'ಕವಚ'ದ ಪಠಣದ ಬಲದಿಂದ ತಮ್ಮ ಮೇರುಕೃತಿಗಳನ್ನು ಬರೆದಿದ್ದಾರೆ. ಈ ಮಂಗಳಕರವಾದ ಸರಸ್ವತಿ ಕವಚವು
ನಮ್ಮ ದೇಹವನ್ನು ಮುಖ್ಯವಾಗಿ ನಮಗೆ ಜ್ಞಾನವನ್ನು ನೀಡುವ ಅಂಗಗಳನ್ನು ರಕ್ಷಿಸಲು ದೇವಿಗೆ ಮಾಡಿದ
ಪ್ರಾರ್ಥನೆಯಾಗಿದೆ. ತಾಯಿ ಶಾರದಾ ಈ ಕವಚದ ಅಧಿದೇವತೆ. ಎಲ್ಲಾ ರೀತಿಯ ಜ್ಞಾನ, ಕಾವ್ಯ, ತತ್ವಶಾಸ್ತ್ರ, ಬರವಣಿಗೆ,
ಸಾಹಿತ್ಯ ಪ್ರಕಟಣೆ ಮತ್ತು ಅದರಲ್ಲಿ ಪ್ರಾವೀಣ್ಯತೆಯನ್ನು ಪಡೆದುಕೊಳ್ಳುವುದಕ್ಕೆ
ಮತ್ತು ಅಂತಹ ಜ್ಞಾನವನ್ನು ಜನರಿಗೆ ಲಭ್ಯವಾಗುವಂತೆ ಮಾಡುವುದಕ್ಕೆ; ಈ
ಕವಚವನ್ನು ಬಳಸಲಾಗುತ್ತದೆ.
ಹರೇ ರಾಮ ಹರೇ ಕೃಷ್ಣ
ಬ್ರಹ್ಮ ರಹಸ್ಯ.
ನಮ್ಮಲ್ಲಿ
ಹಿರಿಯರು हरे राम हरे
राम - राम राम हरे हरे -– ಎಂದು ಹೇಳುತ್ತಾರೆ,
ಇಂತಹ ಮಂತ್ರಸ್ವರೂಪದ ಅಕ್ಷರ ಜ್ಞಾನ ಹೀಗೆಯಿದೆ. “ಹರೇ ರಾಮ” ಎಂದರೆ “ವೈದ್ಯತೆಯ ಉಡುಗೊರೆಯ ಮಾಂತ್ರಿಕ ಸೂತ್ರವಾಗಿ ಪರಿಣಾಮ ಬೀರುವ
ಧ್ಯಾನ ಜೀವದ ಉಸಿರು ಮಾಂತ್ರಿಕ ಸೂತ್ರವನ್ನು ಪಡೆದುಕೊಳ್ಳುತ್ತದೆ” – (ಇನ್ನೊಮ್ಮೆ)
“ರಾಮ
ರಾಮ ಹರೇ ಹರೇ ಎಂದರೆ “ಜೀವದ ಉಸಿರು ಮಾಂತ್ರಿಕ ಸೂತ್ರವನ್ನು ಪಡೆದುಕೊಳ್ಳುತ್ತದೆ - ಜೀವದ ಉಸಿರು
ಮಾಂತ್ರಿಕ ಸೂತ್ರವನ್ನು ಪಡೆದುಕೊಳ್ಳುತ್ತದೆ, ವೈದ್ಯತೆಯ ಉಡುಗೊರೆಯ ಮಾಂತ್ರಿಕ ಸೂತ್ರವಾಗಿ ಪರಿಣಾಮ ಬೀರುವ
ಧ್ಯಾನ - ವೈದ್ಯತೆಯ ಉಡುಗೊರೆಯ ಮಾಂತ್ರಿಕ
ಸೂತ್ರವಾಗಿ ಪರಿಣಾಮ ಬೀರುವ ಧ್ಯಾನ.
ಇನ್ನೊಂದು
हरे कृष्ण हरे कृष्ण - कृष्ण कृष्ण हरे हरे
ಹರೇ
ಕೃಷ್ಣ ಎಂದರೆ, “ವೈದ್ಯತೆಯ
ಉಡುಗೊರೆಯ ಮಾಂತ್ರಿಕ ಸೂತ್ರವಾಗಿ ಪರಿಣಾಮ ಬೀರುವ ಧ್ಯಾನ,
ಅತ್ಯುತ್ತಮ ಜ್ಞಾನವನ್ನು ಸಂಯೋಜಿಸುವುದು”
ಹರೇ
ಕೃಷ್ಣ ಎಂದರೆ, “ವೈದ್ಯತೆಯ
ಉಡುಗೊರೆಯ ಮಾಂತ್ರಿಕ ಸೂತ್ರವಾಗಿ ಪರಿಣಾಮ ಬೀರುವ ಧ್ಯಾನ,
ಅತ್ಯುತ್ತಮ ಜ್ಞಾನವನ್ನು ಸಂಯೋಜಿಸುವುದು”
ಕೃಷ್ಣ
ಕೃಷ್ಣ ಎಂದರೆ, ಅತ್ಯುತ್ತಮ ಜ್ಞಾನವನ್ನು ಸಂಯೋಜಿಸುವುದು
ಅತ್ಯುತ್ತಮ ಜ್ಞಾನವನ್ನು ಸಂಯೋಜಿಸುವುದು, ಹರೇ ಹರೇ ಎಂದರೆ,
ವೈದ್ಯತೆಯ ಉಡುಗೊರೆಯ
ಮಾಂತ್ರಿಕ ಸೂತ್ರವಾಗಿ ಪರಿಣಾಮ ಬೀರುವ ಧ್ಯಾನ, ವೈದ್ಯತೆಯ ಉಡುಗೊರೆಯ ಮಾಂತ್ರಿಕ ಸೂತ್ರವಾಗಿ ಪರಿಣಾಮ ಬೀರುವ
ಧ್ಯಾನ,
ಹರಿ
ಮತ್ತು ಕೃಷ್ಣ ಜಪದಿಂದ ಇಂತಹ ಸರ್ವೋತ್ತಮ ಮಂತ್ರಗಳಲ್ಲಿ ಇರುವ ಮಹತ್ವವಾದ ಆರೋಗ್ಯದ ಮೇಲಿನ
ಪರಿಣಾಮವನ್ನು ಜ್ಞಾನದ ಮೇಲಿನ ಪರಿಣಾಮವನ್ನು ತೋರಿಸುತ್ತದೆ.
ರಾಮ
ಮಂತ್ರ ಪಠಣೆಯಿಂದ ಜೀವ ಹುಸಿರು ಮಾಂತ್ರಿಕ ಸೂತ್ರವನ್ನು ಪಡೆದುಕೊಳ್ಳುತ್ತದೆ ಅದರ ಜೊತೆಯಲ್ಲಿ
ಹರಿಯ ಸ್ಮರಣೆಯಿಂದ ವೈಧ್ಯತೆಯ ಪರಿಣಾಮ ಬೀರುವ ಬಗ್ಗೆ ಹೇಳುತ್ತದೆ.
ಪ್ರಾಣ ವಿದ್ಯೆ ಸಂಕ್ಷಿಪ್ತ ಪರಿಚಯ
ಪ್ರಾಣ ಎಂದರೆ ಸಂಸ್ಕೃತದಲ್ಲಿ ನೀರಿನ ಮನೆಗೆ
ಪೋಷಣೆಯ ಜೀವ ಉಸಿರು, ಎಂಬ ಆರ್ಥವಿದೆ. ನಮ್ಮ ದೇಹದಲ್ಲಿ ನೀರಿನ ಮನೆ
ಮೂಲಾಧಾರ ಚಕ್ರ, ಸ್ವಾಧೀಷ್ಟಾನ ಚಕ್ರ ಮತ್ತು ಮಣಿಪೂರಕ
ಚಕ್ರವಾಗಿದೆ. ಇಂತಹ ನೀರಿನ ಮನೆಯ ಪೋಷಣೆಗಾಗಿ ನಾವು ಒಳ ಸೆಳೆಯುವ ವಾಯುವೇ ಪ್ರಾಣವಾಗಿದೆ. ಶೈವರು
ಇದನ್ನೇ ಲಿಂಗ ಎಂದು ಕರೆದಿದ್ದಾರೆ. ಸಂಸ್ಕೃತದಲ್ಲಿ ಲಿಂಗ ಎಂದರೆ “ಚಲಿಸುವ ಬಯಕೆಯ ಸೃಷ್ಟಿಕರ್ತ”
ಅಥವಾ “ಅವಿಶ್ರಾಂತವಾಗಿ ಚಲಿಸುವ ಸೃಷ್ಟಿಕರ್ತ” ಅಥವಾ “ಸಂವೇದನೆಯನ್ನು ನೀಡುತ್ತಾ ಚಲಿಸುವ ಸೃಷ್ಟಿಕರ್ತ”
ಅದುವೇ ವಾಯು. ವಚನಕಾರರು ಅದನ್ನೇ ಹೇಳಿದ್ದು, "ಲಿಂಗವೇ
ಪ್ರಾಣ. ಪ್ರಾಣವೇ ಲಿಂಗವಾಯಿತ್ತು. ಅಂಗ (ದೇಹ) ಲಿಂಗವಾಯಿತ್ತು. ಗುಹೇಶ್ವರ ಲಿಂಗದಲ್ಲಿ
(ಸುಷುಮ್ನಾ ನಾಡಿಯಲ್ಲಿ) ಸರ್ವಾಂಗ (ಸರ್ವ
ಅಂಗಕ್ಕೂ ಇರುವ ನಾಡಿ ಸಂಪರ್ಕ) ಪ್ರಾಣಲಿಂಗ ಸ್ವಾಯತ್ತವಾಯಿತ್ತು (ಸ್ವಯಂ ನಿರ್ದೇಶಿತವಾಯಿತ್ತು) ಕಾಣಾ”.
ಪ್ರಾಣಾದಿ ಹತ್ತು ವಾಯುಗಳೂ ಪ್ರಾಣ ರೂಪವಾಗಿವೆ.
ಇವಕ್ಕೆ "ಪ್ರಾಣಮಯ' ಎನ್ನುವರು. ಪ್ರಾಣವಾಯುವು
ಜೀವಾತ್ಮನನ್ನು ತುಂಬಿರುವುದು. ಅದರಿಂದ ಇದಕ್ಕೆ ಪ್ರಾಣಮಯ ಕೋಶವೆಂದು ಹೆಸರು ಬಂದಿದೆ. ಈ
ಪ್ರಾಣಮಯ ಕೋಶದೊಳಗೆ ಮನೋಮಯ ಕೋಶವಿದೆ. ಪಂಚ ಜ್ಞಾನೇಂದ್ರಿಯಗಳು ಮನಸ್ಸೂ ಸೇರಿದ. ಈ ಆರು ತತ್ವಗಳಿಂದ ಕೂಡಿ ಈ ಮನೋಮಯ ಕೋಶವಾಗಿದೆ. ಈ ಮನೋಮಯ
ಕೋಶದೊಳಗೆ ವಿಜ್ಞಾನಮಯ ಕೋಶವಿದೆ. ಪಂಚ ಜ್ಞಾನೇಂದ್ರಿಯಗಳೂ ಬುದ್ಧಿಯೂ ಕೂಡಿ ಈ ಕೋಶವು ಆರು ತತ್ವಗಳನ್ನೊಳಗೊಂಡಿದೆ.
ಈ ಪ್ರಾಣಮಯ, ಮನೋಮಯ, ವಿಜ್ಞಾನಮಯ
ಕೋಶಗಳು ಸೂಕ್ಷ್ಮ ಶರೀರದ ಅಂತರ್ಭಾವವಾಗಿವೆ. ಆನಂದಮಯ ಕೋಶವು ಬುದ್ಧಿಯ ಒಳಗಿನದು. ಆತ್ಮಸ್ವರೂಪದ
ಆನಂದಾಂಶವು ಅದರಲ್ಲಿ ಪ್ರತಿಬಿಂಬಿಸುವುದು.
ಶರೀರಂ
ಹಿ ವಿನಾ ವಾಯಂ ಸಮತಾಂ ಯಾತಿ ದಾರುಭಿಃ |
ವಾಯುಃ
ಪ್ರಾಣಃ ಸುಖಂ ವಾಯುರ್ವಾಯಃ ಸರ್ವವಿಂದಂ ಜಗತ್
ರಾಮಾಯಣ
ಭಾವಾರ್ಥ:- (ಪ್ರಾಣ)
ವಾಯುವಿಲ್ಲದೆ ಶರೀರವು ಕಟ್ಟಗೆಗೆ ಸಮಾನ. ಆದ್ದರಿಂದ ವಾಯುವೇ ಪ್ರಾಣ, ಸುಖ ಮತ್ತು ಈ ಎಲ್ಲ ಜಗತ್ತೂ ಸಹ.
ಇಂದ್ರಸ್ತ್ವಮ್
ಪ್ರಾಣ ತೇಜಸಾ ರುದ್ರೋsಸಿ ಪರಿರಕ್ಷಿತಾ |
ತೃಮಂತರಿಕ್ಷೇ
ಚರಸಿ ಸೂರ್ಯಸ್ತ್ವಮ್ ಜ್ಯೋತಿಷಾಂ ಪತಿ: ॥
(ಪ್ರಶ್ನ.
೨-೯)
ಭಾವಾರ್ಥ:- ಎಲ್ಲಾ
ಜಗತ್ತಿಗೆ ಆಧಾರವಾದ ಪರಮಾತ್ಮ ರೂಪನಾದ ಪ್ರಾಣವೇ, ನಿನ್ನ
ಅಸಾಧಾರಣವಾದ ಶಕ್ತಿಯಿಂದ ನೀನೇ ಇಂದ್ರನು. ರಕ್ಷಕನಾದುದರಿಂದ ನೀನೇ ರುದ್ರನು, ಅಂತರಿಕ್ಷದಲ್ಲಿಯೂ ನೀನೇ ಸೂರ್ಯರೂಪದಲ್ಲಿ ಸಂಚರಿಸುತ್ತೀಯೆ. ನೀನೇ ಸಕಲ
ಜ್ಯೋತಿರ್ಮಂಡಲಕ್ಕೂ ಒಡೆಯನು.
ಪ್ರಾಣ ವಾಯುವು ಶರೀರದಲ್ಲಿ ನೆಲೆಸಿರುವವರೆಗೂ
ಶರೀರವು ಇರುವುದು. ಅದು ನಾಶವಾಗುವುದಿಲ್ಲ. ಪ್ರಾಣವು ಹೊರಟು ಹೋಯಿತೆಂದರೆ ಶರೀರವು ನಾಶವಾಗಿ
ಪಂಚಭೂತಗಳಲ್ಲಿ ಸೇರಿ ಹೋಗುವುದು. ಆದ್ದರಿಂದ ಪ್ರಾಣದಿಂದಲೇ ಶರೀರದ ರಕ್ಷಣೆಯಾಗುವುದು. ಪ್ರಾಣ
ವಾಯುವು (ಎಂದರೆ ಆತ್ಮನು) ಶರೀರದ ನಾನಾ ನಾಡಿಗಳಲ್ಲಿ ಸಂಚರಿಸುವನು. ತಪಸ್ವಿಗಳಾದ ಯೋಗಿಗಳು ಇದರ
ಸಂಚಾರ ಕ್ರಮವನ್ನು ಅರಿತಿರುವರು. ಇಂತಹ ಪ್ರಾಣನನ್ನು ಅತ್ಮನೆಂದೂ ಹೇಳಬಹುದು. ಶರೀರದಲ್ಲಿ ಮುಖ್ಯ
ಪ್ರಾಣವು ಪ್ರಾಣ, ಅಪಾನ, ವ್ಯಾನ ಉದಾನ,
ಸಮಾನ ಎಂದು ಐದು ವಿಧ ವಾಯುಗಳ ರೂಪದಲ್ಲಿರುವುದು. ಅವುಗಳಲ್ಲಿ ಪ್ರಾಣ ಅಪಾನ
ಎಂಬ ವಾಯುಗಳೇ ಮುಖ್ಯವು ಪ್ರಾಣವಾಯುವು ನಾಡಿಗಳ ಮೂಲಕ ಶರೀರದ ಊರ್ಧ್ವಭಾಗಕ್ಕೆ ಸಂಚರಿಸುವುದು,
ಹಾಗೆಯೇ ಅಪಾನವಾಯು ಅಧೋಭಾಗಕ್ಕೆ ಹೋಗುವುದು. ಪ್ರಾಣವಾಯುವನ್ನು ಕೆಳಭಾಗಕ್ಕೂ
ಅಪಾನವಾಯುವನ್ನು ಊರ್ಧ್ವಭಾಗಕ್ಕೂ ತಂದು ಮಧ್ಯದಲ್ಲಿ (ನಾಭಿ ಪ್ರದೇಶದಲ್ಲಿ) ಸೇರಿಸಿದರೆ ತೇಜಸ್ಸೂ
ಆರೋಗ್ಯವೂ ಅಭಿವೃದ್ಧಿಯಾಗುವುದು ಎಂದು ಯೋಗಶಾಸ್ತ್ರದ ಸಿದ್ಧಾಂತವು. ಪ್ರಾಣ, ಅಪಾನ ಮತ್ತು ವ್ಯಾನ ಈ ಮೂರು ಪ್ರಾಣತತ್ತ್ವವೆಂದೂ ಶ್ರುತಿ ವಾಕ್ಯವೂ ಇದೆ. ಅನ್ನಮಯಕ್ಕಿಂತ
ವ್ಯತಿರಿಕ್ತವಾಗಿ ಅಂತರತಮ-ವಾದದ್ದು ಪ್ರಾಣಮಯಕೋಶ. ಪ್ರಾಣವೆಂದರೆ ವಾಯು. ಪ್ರಾಣ, ಅಪಾನ, ವ್ಯಾನ, ಉದಾನ,
ಸಮಾನ ಎಂಬ ಹೆಸರುಗಳಿಂದ ಈ ವಾಯುವು ಅನ್ನಮಯದೊಳಗೆ ತುಂಬಿಕೊಂಡಿದೆ. ಇಂತಹ
ವಿಸ್ತಾರವಾದ ಪ್ರಾಣವಿದ್ಯೆಯನ್ನ ವೇದ, ಪುರಾಣ, ಉಪನಿಷತ್, ಇನ್ನಿತರೆ ಮಹಾ ಗ್ರಂಥಸಾರಗಳಿಂದ ಚರ್ಚಿಸಿ
ಅರಿಯುವ ಪ್ರಯತ್ನವೇ ಪ್ರಾಣವಿದ್ಯಾ ವೇದ ರಹಸ್ಯ.
ಅಕ್ಷರ ಅರ್ಥದಲ್ಲಿ ಪ್ರಾಣ ವಾಯುಗಳ ಸತ್ಯ ಕಾರ್ಯ
ಆವಿಷ್ಕಾರ
ಅಕ್ಷರ ಅರ್ಥದಲ್ಲಿ ದಶವಾಯು ಪ್ರಾಮುಕ್ಯತೆ
ಗಮನಿಸಿ. ದಶವಾಯುಗಳ ಬಗ್ಗೆ ಅನೇಕ ಗ್ರಂಥಗಳು ಒಂದೊಂದು ವಾಯುವಿಗೂ ಒಂದೊಂದು ಕಾರ್ಯವನ್ನು
ಕೊಟ್ಟಿದ್ದಾರೆ. ನಮ್ಮ ಸತ್ಯ ಶೋಧನಾ ಅಕ್ಷರ ಅರ್ಥ ವ್ಯಾಖ್ಯಾನ ಮೊದಲಿಗೆ ಗಮನಿಸುವ.
ಪ್ರಾಣ = प्राण = प्र अ ण = प र अ ण
ಅಕ್ಷರ ಅರ್ಥ:-
(1). ನೀರಿನ ಮನೆಗೆ ಪೋಷಣೆಯ ಜೀವ ಉಸಿರು.
(2). ಗಾಳಿಯು ನೀರಿನ ಮನೆಯಲ್ಲಿ
ಜ್ವಾಲೆಯ ಮೇಲೆ ಪರಿಣಾಮ ಬೀರುತ್ತದೆ
(3). ಗಾಳಿಯು ನಿರ್ದಿಷ್ಟ
ಪರಿಣಾಮಕಾರಿ ಮಂತ್ರವನ್ನು ಸುಷುಮ್ನಾ ಕಡೆಗೆ ಪಡೆಯುತ್ತದೆ
(4). ಗಾಳಿಯು ನೀರಿನ ಮನೆಯಲ್ಲಿ
ಜೀವ ಉಸಿರನ್ನು ಉತ್ಪಾದಿಸುತ್ತದೆ
ಅಪಾನ = अपान = अ पा न = अ प अ न
ಅಕ್ಷರ ಅರ್ಥ:-
(1). ಅವಿಭಜಿತವಾದುದ್ದನ್ನು ರಕ್ಷಿಸುವ ಜೀವ ಉಸಿರು
(2). ಅವಿಶ್ರಾಂತವಾಗಿ ಜ್ವಾಲೆಯನ್ನು ಕುಡಿಯುವ ಜೀವ ಉಸಿರು
(3).
ಅವಿಶ್ರಾಂತವಾಗಿ ಜ್ವಾಲೆಯನ್ನು ರಕ್ಷಿಸುವ ಜೀವ ಉಸಿರು
ವ್ಯಾನ = व्यान = व या न = व य अ न
ಅಕ್ಷರ ಅರ್ಥ:-
(1).
ಅವಿಶ್ರಾಂತವಾಗಿ ಶಕ್ತಿಯುತ ಚಲನೆ
(2).
ಶಕ್ತಿಯುತ ಗಂಜಿ ಅವಿಭಜಿತ ಜೀವದ ಉಸಿರು
(3).
ಅವಿಶ್ರಾಂತವಾಗಿ ಜೀವ ಉಸಿರನ್ನು ಸೇರುವ ಶಕ್ತಿಯುತವಾದದ್ದು
ಸಮಾನ
= समान = स मा न = स म अ न
ಅಕ್ಷರ ಅರ್ಥ:-
(1). ಅವಿಭಜಿತವಾದುದ್ದನ್ನು ಬಂಧಿಸಲು ಸಂಯೋಜನೆ ವ್ಯಕ್ತಪಡಿಸುವುದು
(2). ಧ್ಯಾನ ಮಾಂತ್ರಿಕ ಸೂತ್ರ ಅವಿಶ್ರಾಂತವಾದ
ಜೀವ ಉಸಿರು
(3).
ಮಾಂತ್ರಿಕ ಸೂತ್ರ ಮತ್ತು ಅವಿಶ್ರಾಂತ ಜೀವ ಉಸಿರಿನೊಂದಿಗೆ ಸಂಯೋಜನೆ ವ್ಯಕ್ತಪಡಿಸುವುದು
ಉದಾನ
= उदान =
उ दा न = उ द अ न
ಅಕ್ಷರ ಅರ್ಥ:-
(1).
ಅವಿಭಜಿತ ಶುದ್ಧೀಕರಿಸಿ ಧ್ವನಿಸುವುದು
(2).
ಅವಿಶ್ರಾಂತವಾಗಿ ಜ್ವಾಲೆಯನ್ನು ಉಂಟುಮಾಡುವ ಧ್ವನಿ
(3).
ಅದೇ ರೀತಿಯ ಜೀವ ಉಸಿರನ್ನು ನೀಡುವ ಧ್ವನಿ
ನಾಗ = नाग = न अ ग
ಅಕ್ಷರ
ಅರ್ಥ:-
(1). ಅವಿಶ್ರಾಂತವಾಗಿ
ಜ್ವಾಲೆ/ಜೀವ ಉಸಿರು ಚಲಿಸುತ್ತಿದೆ
(2). ಅವಿಭಜಿತ ಜ್ವಾಲೆ/ಜೀವ
ಉಸಿರು ಚಲಿಸುತ್ತಿದೆ
ಕೂರ್ಮ = कुर्म = क उ र म
ಅಕ್ಷರ
ಅರ್ಥ:-
(1). ದೇಹವು/ವಾಯು/ಆತ್ಮ ನೀರನ್ನು ಪಡೆದ ನಂತರ ಘರ್ಜಿಸುತ್ತದೆ
(2). ನೀರನ್ನು
ಸ್ವಾಧೀನಪಡಿಸಿಕೊಂಡ ನಂತರ ಘರ್ಜಿಸುವ ಗಾಳಿ
(3). ಮಾಂತ್ರಿಕ ಸೂತ್ರವನ್ನು ಪಡೆದುಕೊಂಡು
ಘರ್ಜಿಸುವ ಗಾಳಿ
ಕೃಕರ, = कृकर = क ऋ क र
(1).
ದೇಹದ ಬಯಕೆಯನ್ನು ಸರಿಸಲು ಗಾಳಿ
(2).
ಸಂಪತ್ತನ್ನು ಸಂಪಾದಿಸಿದ ನಂತರ ಚಲಿಸಲು ಗಾಳಿ
(3).
ಸಂಪತ್ತಿನ ವೈಭವವನ್ನು ಸರಿಸಲು ಗಾಳಿ
ದೇವದತ್ತ = देवदत्त = दे व द त त =
द ए व द त त
(1).
ಗರ್ಭಾಶಯದ ಅಮೃತವನ್ನು ರಕ್ಷಿಸಲು ಶಕ್ತಿಯುತ ಕೊಡುಗೆ
(2). ಗರ್ಭಾಶಯದಲ್ಲಿ
ಶಕ್ತಿಯುತವಾದ ಅಮೃತವನ್ನು ಉತ್ಪಾದಿಸುತ್ತದೆ ಮತ್ತು ಪರಿಣಾಮ ಬೀರುತ್ತದೆ
ಧನಂಜಯ = धनञ्जय = ध न ञ ज य
ಅಕ್ಷರ ಅರ್ಥ:-
(1).
ಗಂಜಿಯಿಂದ ಅವಿಶ್ರಾಂತವಾಗಿ ಜುಳು ಜುಳು ಶಬ್ದವನ್ನು ಉಂಟುಮಾಡುತ್ತದೆ.
(2).
ಗಂಜಿಯಿಂದ ಬಂದ ವೀರ್ಯವನ್ನು (ಶುಕ್ರ ಅಥವಾ ಅಮೃತ) ಅವಿಶ್ರಾಂತವಾಗಿ ನೀಡುವುದು
ಅಕ್ಷರ ವ್ಯಾಖ್ಯಾನ ಪ್ರಕಾರ ಪ್ರಾಣವಾಯು
ನೀರಿನ ಮನೆಯನ್ನು ತಲಪುತ್ತದೆ ಪೋಷಿಸುತ್ತದೆ. ಹೊರಗಿನಿಂದ ಎಳೆಯುವ ಉಸಿರು ನೀರಿನ ಮನೆಯಾದ
ಮಣಿಪೂರಕ, ಸ್ವಾದಿಷ್ಟಾನ, ಮೂಲಾಧಾರ
ವರೆಗೆ ತಲುಪಿ ಅಲ್ಲಿನ ಆಹಾರ, ಅನೇಕ ಗ್ರಂಥಿಗಳು, ರಕ್ತ, ಇತ್ಯಾದಿ ಅಂಶಗಳಿಗೆ ಪೋಷಕವಾಗುತ್ತದೆ.
ಜ್ವಾಲೆಯಂತಾ ಅಪಾನ ವಾಯು ಮೇಲೆ ಪರಿಣಾಮ
ಬೀರುತ್ತದೆ. ಪರಿಣಾಮಕಾರಿ ಮಂತ್ರದೊಂದಿಗೆ ಸುಷುಮ್ನಾ ಸೇರುತ್ತದೆ. ಅನ್ಯ ರೀತಿಯ ಜೀವ ಉಸಿರನ್ನು
ನೀರಿನ ಮನೆಯಲ್ಲಿ ಉತ್ಪಾದಿಸುತ್ತದೆ.
ಅವಿಭಜಿತವಾದ ಅನ್ನಮಯ ಪ್ರಾಣಮಯ ಸಂಪತ್ತನ್ನು ರಕ್ಷಿಸುವ ಜೀವ ಉಸಿರು ಅಪಾನ ವಾಯು. ಅವಿಭಜಿತವಾದ
ಎಂದರೆ ಎಲ್ಲಾ ಉತ್ಕೃಷ್ಟ ಅಮೃತ ಸಂಪತ್ತಿನ ಸಾರ. ಅಪಾನ ವಾಯು ಅವಿಶ್ರಾಂತವಾಗಿ ಜ್ವಾಲೆಯನ್ನು (ಗ್ಯಾಸ್ಟ್ರಿಕ್
ಫೈರ್) ಕುಡಿಯುವ ಜೀವ ಉಸಿರು. ಗ್ಯಾಸ್ಟ್ರಿಕ್ ಫೈರ್ ಜೀರ್ಣಕ್ರಿಯೆಗೆ ಅವಶ್ಯ ಸಾರವಾಗಿದೆ.
ಅವಿಶ್ರಾಂತವಾಗಿ ಜ್ವಾಲೆಯನ್ನು ರಕ್ಷಿಸುವ ಜೀವ ಉಸಿರು ಅಪಾನ ವಾಯು ಆಗಿದೆ.
ವ್ಯಾನ ವಾಯು ಅವಿಶ್ರಾಂತವಾಗಿ ಶಕ್ತಿಯುತ
ಚಲನೆಯನ್ನು ನಮ್ಮ ದೇಹದಲ್ಲಿ ಹೊಂದಿರುತ್ತದೆ. ಅಂತಹ ಶಕ್ತಿಯುತ ಚಲನೆ ರಕ್ತದಲ್ಲಿ ನಡೆಯುತ್ತದೆ.
ರಕ್ತವು ಶಕ್ತಿಯುತ ಅಂಶಗಳನ್ನು ಗಂಜಿಯ ಮಾದರಿಯಲ್ಲಿ ಹೊಂದಿರುವುದರಿಂದ, ಎಲ್ಲಾ ಉತ್ಕೃಷ್ಟ ಅಮೃತ ಸಂಪತ್ತಿನ ಸಾರ ಇರುವ ಜೀವದ ಉಸಿರು ವ್ಯಾನ ಉಸಿರಾಗಿದೆ.
ಇದು ಅವಿಶ್ರಾಂತವಾಗಿ ಜೀವ ಉಸಿರನ್ನು ಸೇರುವ ಶಕ್ತಿಯುತ ವಾಯು ಆಗಿದೆ.
ಅವಿಭಜಿತವಾದ ಎಲ್ಲಾ ಉತ್ಕೃಷ್ಟ ಅಮೃತ
ಸಂಪತ್ತಿನ ಸಾರ ಬಂಧಿಸಲು ಸಂಯೋಜನೆ ವ್ಯಕ್ತಪಡಿಸುವ ವಾಯು ಸಮಾನ ವಾಯು ಆಗಿದೆ. ಸಮಾನವಾಯುವು ಧ್ಯಾನದಿಂದ
ಮಾಂತ್ರಿಕ ಸೂತ್ರವನ್ನು ಪಡೆದು ಎಲ್ಲಾ ಉತ್ಕೃಷ್ಟ ಅಮೃತ ಸಂಪತ್ತಿನ ಸಾರ ಬಂಧಿಸಿ ಸಂಯೋಜನೆ ಮಾಡಿ ಅವಿಶ್ರಾಂತವಾದ
ಜೀವ ಉಸಿರಾಗುತ್ತದೆ. ಇದು ಮಾಂತ್ರಿಕ ಸೂತ್ರ
ಮತ್ತು ಅವಿಶ್ರಾಂತ ಜೀವ ಉಸಿರಿನೊಂದಿಗೆ ಸಂಯೋಜನೆ ವ್ಯಕ್ತಪಡಿಸುವುದು
ಉದಾನ ವಾಯುವು ಅವಿಭಜಿತವಾದ ಎಲ್ಲಾ
ಉತ್ಕೃಷ್ಟ ಅಮೃತ ಸಂಪತ್ತಿನ ಸಾರ ಶುದ್ಧೀಕರಿಸಿ ಧ್ವನಿಸುವುದು. ಇದು ಅವಿಶ್ರಾಂತವಾಗಿ ಜ್ವಾಲೆಯನ್ನು (ಜ್ವಾಲಾ ರೂಪದ ವಾಯು) ಉಂಟುಮಾಡುವ
ಧ್ವನಿ. ಉದಾನ ವಾಯುವು ಜೀವ ಉಸಿರು ರೀತಿಯ ಅನ್ಯ ಉಸಿರು ನೀಡುತ್ತಾ
ಧ್ವನಿಸುತ್ತದೆ.
ನಾಗ ವಾಯು ಎಂದರೆ ದೇಹದಲ್ಲಿ ಅವಿಶ್ರಾಂತವಾಗಿ
ಜ್ವಾಲೆ ರೂಪದ ಜೀವ ಉಸಿರು ಚಲಿಸುವುದಾಗಿದೆ. ಅವಿಭಜಿತವಾದ ಎಲ್ಲಾ ಉತ್ಕೃಷ್ಟ ಅಮೃತ ಸಂಪತ್ತಿನ ಸಾರ
ಜ್ವಾಲೆರೂಪದ ಜೀವ ಉಸಿರಾಗಿ ಚಲಿಸುತ್ತದೆ.
ಕೂರ್ಮ ವಾಯುವು ದೇಹವು/ ವಾಯು/ ಆತ್ಮ ನೀರನ್ನು ಪಡೆದ ನಂತರ ಘರ್ಜಿಸುವುದಾಗಿದೆ. ಇದು ನೀರನ್ನು
ಸ್ವಾಧೀನ ಪಡಿಸಿಕೊಂಡ ನಂತರ ಘರ್ಜಿಸುವ ಗಾಳಿಯಾಗಿದೆ. ಇದು ಮಾಂತ್ರಿಕ ಸೂತ್ರವನ್ನು ಪಡೆದುಕೊಂಡು
ಘರ್ಜಿಸುವ ಗಾಳಿಯಾಗಿದೆ.
ಕೃಕರ ವಾಯುವು ದೇಹದ ಬಯಕೆಯನ್ನು ಸರಿಸುವ
ಗಾಳಿಯಾಗಿದೆ. ದೇಹದ ಬಯಕೆ ಅಂದರೆ ಆಹಾರವನ್ನು ಕೋರುವ ದೇಹವಾಗಿದೆ. ಅಂತಹ ಆಹಾರ ಸಂಪತ್ತನ್ನು
ಚಲಿಸಲು ಬೇಕಾಗುವ ಗಾಳಿಯೇ ಕೃಕರ ವಾಯು ಆಗಿದೆ. ದೇಹದಲ್ಲಿ ಇನ್ನಿತರೆ ಅನೇಕ ಬಯಕೆ ಉಂಟಾಗುತ್ತದೆ
ಅಂತಹ ಬಯಕೆಯ ಚಲನೆಗೆ ಕೃಕರ ವಾಯು ಸಹಾಯಕವಾಗಿದೆ.
ಸಂಪತ್ತನ್ನು ಸಂಪಾದಿಸಿದ ನಂತರ ಚಲಿಸಲು ಈ
ಗಾಳಿ ಅವಶ್ಯವಾಗಿರುತ್ತದೆ. ಸಂಪತ್ತಿನ ಕಾಂತಿಯನ್ನು ಸರಿಸಲು ಕೃಕರ ಗಾಳಿ ಅವಶ್ಯವಾಗಿರುತ್ತದೆ.
ದೇವದತ್ತ ವಾಯುವು ಗರ್ಭಾಶಯದ ಅಮೃತವನ್ನು
ರಕ್ಷಿಸಲು ಶಕ್ತಿಯುತ ಕೊಡುಗೆಯಾಗಿದೆ. ಇದೇ
ವಾಯುವು ಗರ್ಭಾಶಯದಲ್ಲಿ ಶಕ್ತಿಯುತವಾದ ಅಮೃತವನ್ನು ಉತ್ಪಾದಿಸುತ್ತದೆ ಮತ್ತು ಪರಿಣಾಮ ಬೀರುತ್ತದೆ.
ಧನಂಜಯ ವಾಯುವು, ಗಂಜಿಯಿಂದ ಅವಿಶ್ರಾಂತವಾಗಿ ಜುಳು
ಜುಳು ಶಬ್ದವನ್ನು ಉಂಟುಮಾಡುತ್ತದೆ. ಗಂಜಿಯಿಂದ
ಬಂದ ವೀರ್ಯವನ್ನು (ಶುಕ್ರ ಅಥವಾ ಅಮೃತ) ಅವಿಶ್ರಾಂತವಾಗಿ ನೀಡುವುದು
ಇಂತಹ ದಶ ವಾಯು ಸ್ವರೂಪವನ್ನು ಅನೇಕ
ಪ್ರಾಚೀನ ಗ್ರಂಥಗಳು ಅನೇಕ ವಿಧದಲ್ಲಿ ವರ್ಣಿಸಿವೆ. ಕೇವಲ ಐದು ಮಾತ್ರ ಮುಖ್ಯವಾದವು ಎಂದಿವೆ. ಈ
ಮೇಲಿನ ಅರ್ಥಗಳು ದಶ ವಾಯುಗಳೂ ಪ್ರಮುಖ ಪಾತ್ರ ವಹಿಸುವುದು ಗಮನಕ್ಕೆ ಬರುತ್ತದೆ. ಅವುಗಳನ್ನೂ ಬ್ರಹ್ಮಜ್ಞಾನವಾದ ಅಕ್ಷರ ಜ್ಞಾನದಿಂದ ಉದಯಿಸುವ
ಅರ್ಥವನ್ನು ತುಲಾನಾತ್ಮಕವಾಗಿ ಚಿಂತನೆ ಮಾಡುತ್ತಾ ಸತ್ಯ ಕಂಡುಕೊಳ್ಳ ಬೇಕಿರುತ್ತದೆ.
ಪಂಚಭೂತಗಳು ಯಾವುದು ?
ನಾರದೀಯ ಪುರಾಣದಲ್ಲಿ ಹೇಳಿರುವಂತೆ, ಮನುಜನಲ್ಲಿ ಇರುವ ಪಂಚಭೂತಗಳು ಬಾಹ್ಯ ಪಂಚಭೂತಗಳು ಒಂದೇ ಆಗಿವೆ. ಮಹಾತೇಜಸ್ವಿಯಾದ
ಆ ಬ್ರಹ್ಮನ ಪಂಚಧಾತುಗಳಲ್ಲಿ ಮೂಳೆಯ ಸಮೂಹಗಳೇ ಪರ್ವತಗಳು, ಕೊಬ್ಬು
ಮತ್ತು ಮಾಂಸಗಳು ಪೃಥಿವಿಯು, ರಕ್ತವೇ ಸಮುದ್ರವು, ಹೊಟ್ಟೆಯು ಆಕಾಶವು, ನಿಶ್ವಾಸವೇ ವಾಯುವು, ಮುಖವೇ ತೇಜಸ್ಸು, ನಾಡಿಗಳೇ ನದಿಗಳೂ ಆದುವು. ಈ
ಶರೀರವು ಪೃಥಿವೀ ಜಲ, ತೇಜಸ್ಸು, ವಾಯು
ಮತ್ತು ಆಕಾಶ ಎಂಬ ಪಂಚಭೂತಗಳಿಂದ ಕೂಡಿರುವಾಗ ಅದು ಜೀವಿತ (ಬದುಕಿರುವುದು) ವೆನಿಸುವುದು.
ಅವುಗಳಲ್ಲಿ ಯಾವುದೊಂದು ಹೋದರೂ ಜೀವಿತವಿಲ್ಲ ಎಂದರೆ ಮೃತನಾಗುವನು. ಪ್ರ ಎನ್ನುವ ಶಬ್ದವನ್ನು
ಸಂಸ್ಕೃತದಲ್ಲಿ ಭರ್ತಿ, ಪೂರೈಸುವುದು ಎಂದು ಉಪಯೋಗಿಸಲಾಗುತ್ತದೆ.
ಪಂಚ ಎಂದರೆ ಸಂಸ್ಕೃತದಲ್ಲಿ ಐದು ಎಂದು ಬರುತ್ತದೆ. ಸಂಸ್ಕೃತದಲ್ಲಿ ಪಂಚಬೌತಿಕ ಎಂದರೆ ಐದು ಅಂಶಗಳ
ಸಂಯೋಜನೆ ಎನ್ನುತ್ತಾರೆ. ಪಂಚಭೂತಗಳು ಎಂದರೆ ಅಗ್ನಿ, ವಾಯು,
ಭೂಮಿ, ನೀರು ಮತ್ತು ಆಕಾಶ ಎಂದು
ಸಂಸ್ಕೃತಾರ್ಥವಿದೆ. ಪಂಚಭೂತ ಪರಿತ್ಯಕ್ತಾ ಎಂದರೆ ಮನುಜನ ಸತ್ತ ದೇಹವನ್ನು ಕುರಿತು ಹೇಳಲಾಗುತ್ತದೆ. ಪಂಚಭೂತಾತ್ಮಕ ಎಂದರೆ ಮನುಜನ ದೇಹವನ್ನು ಕುರಿತು
ಹೇಳಲಾಗುತ್ತದೆ. ಚೇಷ್ಟೆಯಿಂದ ಸಹಿತವಾದ ವಾಯು, ಇಂದ್ರಿಯಯುಕ್ತವಾದ
ಆಕಾಶ, ಆವಿನಿಮಿತ್ತವಾದ ಅಗ್ನಿ, ದ್ರವವಾದ
ನೀರು, ಮತ್ತು ಪೃಥಿವಿಯೂ ಇಲ್ಲಿ ಒಟ್ಟು ಗೂಡಿದೆ. ಆದುದರಿಂದ ಈ
ಶರೀರವು ಪಾಂಚಭೌತಿಕವೆನಿಸುವುದು. ಈ ರೀತಿ ಚರಾಚರಾತ್ಮಕ ಪ್ರಪಂಚವು ಪಂಚಭೂತಗಳಿಂದ ಯುಕ್ತವಾದ
ಶರೀರದಿಂದ ಕೂಡಿರುವುದು. ಕಿವಿಗಳು, ಮೂಗು, ನಾಲಿಗೆ, ತ್ವಕ್ಕು, (ಚರ್ಮ)
ನೇತ್ರ ಈ ಐದೂ ಇಂದ್ರಿಯಗಳೆನಿಸುವುವು. ಚೇಷ್ಟೆಯಿಂದ ಸಹಿತವಾದ ಶರೀರವುಳ್ಳ, ಸಕಲ ಚರಪ್ರಾಣಿಗಳ ಶರೀರದಲ್ಲಿಯೂ ಐದು ಧಾತುಗಳೂ ಪ್ರತ್ಯೇಕವಾಗಿ ಎಂದರೆ ಒಂದೊಂದೂ ಐದು
ವಿಧವಾಗಿ ವಿಭಾಗಿಸಲ್ಪಡುತ್ತದೆ. ಚರ್ಮ, ಮಾಂಸ, ಮೂಳೆ, ಕೊಬ್ಬು ಮತ್ತು ಐದನೆಯದಾದ ನರ ಇವುಗಳೇ ಈ
ಪಾರ್ಥಿವ ಶರೀರದಲ್ಲಿನ ಸಂಘಾತವು. ಅಗ್ನಿ ಸಂಬಂಧಿಗಳಾದ ತೇಜಸ್ಸು, ಅಗ್ನಿ,
ಕ್ರೋಧ, ಚಕ್ಷುಸ್ಸು (ಕಂಗೊಳಿಸುವುದು),
ಆವಿ ಈ ಐದು ಶರೀರದಲ್ಲಿನ ತೇಜಸ್ಸಂಘಾತವು (ಹೊಳಪಿನ ಗುಂಪು). ಶ್ರೋತ್ರ,
ಘ್ರಾಣ, ಬಾಯಿ, ಹೃದಯ,
ಕೋಷ್ಠ, ಈ ಐದು ಪ್ರಾಣಿ ಶರೀರದಲ್ಲಿರುವ
ಆಕಾಶದಿಂದ ಸಂಭವಿಸುವ ಪಂಚ ಧಾತುಗಳು. ಶ್ಲೇಷ್ಮ, ಪಿತ್ತ, ಬೆವರು, ಕೀವು ಮತ್ತು ರಕ್ತ ಇವುಗಳು ಪ್ರಾಣಿಗಳ
ಶರೀರದಲ್ಲಿ ನೀರಿನಿಂದ ಆಗುವ ಐದು ಪರಿಣಾಮಗಳು.
ವಿವಿಧ ಗ್ರಂಥಗಳಲ್ಲಿ ವಾಯುಗಳ ಬಗ್ಗೆ
ಪ್ರಾಣೋSಪಾನಃ ಸಮಾನಶೋದಾನವ್ಯಾನೌ ಚ ವಾಯವಃ |
ಹೃದಿ
ಪ್ರಾಣೋ ಗುದೇsಪಾನಃ ಸಮಾನೋ
ನಾಭಿಸಂಸ್ಥಿತಃ ||
ಉದಾನಃ
ಕಂಠದೇಶಸ್ಥೋ ವ್ಯಾನಃ ಸರ್ವಶರೀರಗಃ |
ನಾಗಶ್ಚ
ಕೂರ್ಮಕೃಕರೋ ದೇವದತ್ತೋ ಧನಂಜಯ ||
ವಾಗ್ದ್ವಾರೇ
ನಾಗ ಆಖ್ಯಾತಃ ಕೂರ್ಮ ಉನ್ಮೀಲನೇ ಸ್ಮೃತಃ |
ಕೃಕರಾಚಕ್ಷುತಂ
ಜ್ಞೇಯಂ ದೇವದತ್ತಾದ್ವಿಜೃಂಭಣಮ್ |
ನ
ಜಹಾತಿ ಮೃತಂ ವಾಪಿ ಸರ್ವವ್ಯಾಪೀ ಧನಂಜಯಃ ||
ಅಮರಕೋಶ
– 1-74 ರಿಂದ 77
ಭಾವಾರ್ಥ:- ಪ್ರಾಣ,
ಅಪಾನ, ವ್ಯಾನ, ಉದಾನ
ಮತ್ತು ಸಮಾನಗಳೆಂಬ ಐದು ವಾಯುಗಳು ನಮ್ಮ ದೇಹದಲ್ಲಿವೆ. ಪ್ರಾಣವು ಹೃದಯದಲ್ಲಿಯೂ, ಅಪಾನವು ಗುದಸ್ಥಾನದಲ್ಲಿಯೂ, ಸಮಾನವು ನಾಭಿಯಲ್ಲಿಯೂ,
ಉದಾನವು ಕುತ್ತಿಗೆಯಲ್ಲಿಯೂ ಮತ್ತು ವ್ಯಾನವು ಸರ್ವವ್ಯಾಪಿಯಾಗಿಯೂ ಎಂದರೆ
ಶರೀರದ ಎಲ್ಲ ಕೀಲು ಪ್ರದೇಶಗಳಲ್ಲಿಯೂ ಇರುವುದು. ನಾಗ, ಕೂರ್ಮ,
ಕೃಕರ, ದೇವದತ್ತ ಮತ್ತು ಧನಂಜಯಗಳೆಂಬ ಐದು
ಉಪವಾಯುಗಳಿವೆ. ನಾಗವಾಯುವು ನಾವು ಆಡುವ ಮಾತಿನ ದ್ವಾರದಲ್ಲಿಯೂ, ಕೂರ್ಮವು
ರೆಪ್ಪೆಗಳು ಮುಚ್ಚಿ ತೆಗೆಯುವಿಕೆಯಲ್ಲಿಯೂ ಇರುತ್ತದೆ. ಶೀನುವುದು ಕೃಕರವಾಯುವಿನ ಕಾರ್ಯ.
ಆಕಳಿಸುವುದು ದೇವದತ್ತವಾಯುವಿನ ಕಾರ್ಯ. ಧನಂಜಯವಾಯುವು ದೇಹದಲ್ಲಿ ಸರ್ವತ್ರ ವ್ಯಾಪಿಸಿರುತ್ತದೆ.
ಪ್ರಾಣವಾಯುವು ಹೋದಮೇಲೆಯೂ ಸಹ ಧನಂಜಯವಾಯುವು ದೇಹವನ್ನು ಬಿಡುವುದಿಲ್ಲ.
ಯತಃ
ಪ್ರವರ್ತತೇ ತನ್ನಂ ಯತ್ರ ಚ ಪ್ರತಿತಿಷ್ಠತಿ |
ಪ್ರಾಣೋಪಾನಃ
ಸಮಾನಶ್ಚ ವ್ಯಾನಶ್ಚೋದಾನ ಏವ ಚ |
ತತ
ಏವ ಪ್ರವರ್ತನ್ತೇ ತದೇವ ಪ್ರವಿಶನ್ತಿ ಚ ||
ಮಹಾಭಾರತ
ಅಶ್ವಮೇಧಿಕಾಪರ್ವ 20-14
ಭಾವಾರ್ಥ:- ಪರಬ್ರಹ್ಮತತ್ತ್ವದಿಂದಲೇ
ಅದು ಸೃಷ್ಟಿಯ ವಿಸ್ತಾರವಾಗುತ್ತದೆ. ವಿಸ್ತಾರವಾದ ಸೃಷ್ಟಿಯಲ್ಲಿಯೇ ಅದು ಉಪಸ್ಥಿತವಾಗಿರುತ್ತದೆ.
ಪ್ರಾಣ-ಅಪಾನ-ಸಮಾನ-ವ್ಯಾನ-ಉದಾನಗಳು ಅದರಿಂದಲೇ ಹುಟ್ಟುತ್ತವೆ. ಅದರಲ್ಲಿಯೇ ಪುನಃ
ಲೀನವಾಗುತ್ತವೆ.
ಸಮಾನವ್ಯಾನಯೋರ್ಮದ್ಯೇ
ಪ್ರಾಣಾಪಾನೌ ವಿಚೇರತುಃ।
ತಸ್ಮಿಲ್ಲೀನೇ
ಪ್ರಲೀಯೇತ ಸಮಾನೋ ವ್ಯಾನ ಏವ ಚ ||
ಅಪಾನಪ್ರಾಣಯೋರ್ಮಧ್ಯೇ
ಉದಾನೋ ವ್ಯಾಪ್ಯ ತಿಷ್ಠತಿ |
ತಸ್ಮಾಚ್ಚಯಾನಂ
ಪುರುಷಂ ಪ್ರಾಣಾಪಾನೌ ನ ಮುನ್ಚಿತಃ ॥
ಮಹಾಭಾರತ
ಅಶ್ವಮೇಧಿಕಾಪರ್ವ 20-15,16
ಭಾವಾರ್ಥ:- ನಾಭಿಯಲ್ಲಿರುವ ಸಮಾನವಾಯುವಿನ ಮತ್ತು ಶರೀರದ ಎಲ್ಲೆಡೆಗಳಲ್ಲಿಯೂ ಇರುವ
ವ್ಯಾನವಾಯುವಿನ ಮಧ್ಯದಲ್ಲಿ ಹೃದಯದಲ್ಲಿರುವ ಪ್ರಾಣವಾಯುವೂ ಗುದದಲ್ಲಿರುವ ಅಪಾನವಾಯುವೂ
ಸಂಚರಿಸುತ್ತವೆ. ಪ್ರಾಣದಲ್ಲಿ ಅಪಾನವು ಲಯಹೊಂದಿದರೆ ಸಮಾನ ವ್ಯಾನಗಳೂ ಪ್ರಾಣ ವಾಯುವಿನಲ್ಲಿಯೇ
ಲಯಹೊಂದುತವೆ. ಅಪಾನ-ಪ್ರಾಣವಾಯುಗಳ ಮಧ್ಯದಲ್ಲಿ ಉದಾನವು ಎಲ್ಲವನ್ನೂ ವ್ಯಾಪಿಸಿಕೊಂಡಿರುತ್ತದೆ. ಈ
ಕಾರಣದಿಂದಲೇ ಮಲಗಿರುವ ಮನುಷ್ಯನನ್ನು ಪ್ರಾಣಾಪಾನಗಳೆರಡೂ ಬಿಟ್ಟರುವುದಿಲ್ಲ.
ಪ್ರಾಣಾನಾಮಾಯತತ್ವೇನ
ತಮುದಾನಂ ಪ್ರಚಕ್ಷತೇ |
ತಸ್ಮಾತ್ತಪೋ
ವ್ಯವಸ್ಯನ್ತಿ ತದ್ಭವಂ ಬ್ರಹ್ಮವಾದಿನಃ ||
ಮಹಾಭಾರತ
ಅಶ್ವಮೇಧಿಕಾಪರ್ವ 20-17
ಭಾವಾರ್ಥ:- ಹೀಗೆ
ಪ್ರಾಣಿಗಳಿಗೆ ಆಧಾರವಾಗಿರುವುದರಿಂದ ಆ ವಾಯುವನ್ನು ಉದಾನವೆನ್ನುತ್ತಾರೆ. (ಉತ್ಕರ್ಷಣ ಆನಯತಿ
ಚೇಷ್ಟಯತಿ ಪ್ರಾಣಾನ್ ಇತಿ ಉದಾನಃ -ವಿಶೇಷವಾಗಿ ಪ್ರಾಣಗಳನ್ನು ಚೇಷ್ಟೆಮಾಡಿಸುತ್ತದೆ. ಅವುಗಳ ಕರ್ತವ್ಯದಲ್ಲಿ
ತೊಡಗಿಸುತ್ತದೆ. ಅದರಿಂದ ಉದಾನವೆಂದು ಹೆಸರು.) ಪ್ರಾಣಾದಿಗಳು ಉದಾನದಲ್ಲಿ ಹೊಂದುವ
ಅಂತರ್ಭಾವವನ್ನೇ ಬ್ರಹ್ಮವಾದಿಗಳು ತಪಸ್ಸೆಂದು ನಿಶ್ಚಯಿಸಿರುತ್ತಾರೆ.
ತೇಷಾಮನೋನ್ಯಭಕ್ಷಾಣಾಂ
ಸರ್ವೆಷಾಂ ದೇಹಚಾರಿಣಾಮ್
ಅಗ್ನಿರ್ವೆಶ್ವಾನರೋ
ಮಧ್ಯೆ ಸಪ್ತಧಾ ದೀವತೇsನ್ತರಾ
ಮಹಾಭಾರತ
ಅಶ್ವಮೇಧಿಕಾಪರ್ವ 20-18
ಭಾವಾರ್ಥ:- ಒಂದರಲ್ಲಿ
ಮತ್ತೊಂದು ಲೀನಗೊಳ್ಳುವ ಸ್ವಭಾವವುಳ್ಳ, ಎಲ್ಲ ಪ್ರಾಣಿಗಳ
ದೇಹದಲ್ಲಿಯೂ ಸಂಚರಿಸುವ ಪಂಚವಾಯುಗಳ ಮಧ್ಯದಲ್ಲಿ ನಾಭಿಮಂಡಲದಲ್ಲಿ ಸಮಾನವಾಯುವಿದೆ. ಅದರ
ಮಧ್ಯದಲ್ಲಿರುವ ವೈಶ್ವಾನರಾಗ್ನಿಯು ಏಳು ರೂಪಗಳಾಗಿ ಪ್ರಕಾಶಿಸುತ್ತಿದೆ.
ಘ್ರಾಣಂ
ಜಿಹ್ವಾ ಚ ಚಕ್ಪುಶ್ಚ ತ್ವಕ್ಚ ಶ್ರೋತ್ರಂ ಚ ಪಂಚಮಮ್ ।
ಮನೋ
ಬುದ್ಧಿಶ್ಚ ಸಪ್ತೈತಾ ಜಿಹ್ವಾ ವೈಶ್ವಾನರಾರ್ಚಿಷಃ ||
ಘ್ರೇಯಂ
ದೃಶ್ಯಂ ಚ ಪೇಯಂ ಚ ಸ್ಪೃಶ್ಯಂ ಶ್ರವ್ಯಂ ತಥೈವ ಚ!
ಮನ್ತವ್ಯಮಥ
ಬೋದ್ಧವ್ಯಂ ತಾಃ ಸಪ್ತ ಸಮಿಧೋ ಮಮ ||
ಮಹಾಭಾರತ
ಅಶ್ವಮೇಧಿಕಾಪರ್ವ 20-19,20
ಭಾವಾರ್ಥ:- ಮೂಗು,
ನಾಲಿಗೆ, ಕಣ್ಣು ಚರ್ಮ, ಕಿವಿ, ಮನಸ್ಸು ಮತ್ತು ಬುದ್ಧಿ -ಇವು ವೃಶ್ವಾನರಾಗ್ನಿಯ ಏಳು ನಾಲಿಗೆಗಳಾಗಿವೆ.
ಮೂಸಲು ಯೋಗ್ಯವಾದ ಗಂಧ, ನೋಡಲು ಯೋಗ್ಯವಾದ ರೂಪ, ಪಾನಮಾಡಲು ಯೋಗ್ಯವಾದ ರಸ, ಮುಟ್ಟಲು ಯೋಗ್ಯವಾದ
ಸ್ಪರ್ಶ, ಕೇಳಲು ಯೋಗ್ಯವಾದ ಶಬ್ದ, ಮನಸ್ಸಿನ
ಮೂಲಕವಾಗಿ ಮನನಮಾಡುವ ಮತ್ತು ಬುದ್ಧಿಯ ಮೂಲಕವಾಗಿ ತಿಳಿದುಕೊಳ್ಳಲು ಯೋಗ್ಯವಾದ ವಿಷಯ-ಈ ಏಳೂ ನನ್ನ
(ವೃಶ್ವಾನರಾಗ್ನಿಯ) ಸಮಿತ್ತುಗಳಾಗಿವೆ (ಅಗ್ನಿ/ಇಂಧನಗಳಾಗಿವೆ).
ಮೂರ್ಧಾನಮಾಶ್ರಿತೋ
ವಹಿ ಶರೀರಂ ಪರಿಪಾಲಯನ್ |
ಪ್ರಾಣೋ
ಮೂರ್ಧನಿ ಚಾಗ್ನೌ ಚ ವರ್ತಮಾನೋ ವಿಚೇಷ್ಟತೇ ||
ಮಹಾಭಾರತ ವನಪರ್ವ 213-3
ಭಾವಾರ್ಥ:- “ವಿಜ್ಞಾನರೂಪವಾದ
ಅಗ್ನಿಯು ತಲೆಯಲ್ಲಿದ್ದು (ಸಹಸ್ರಾರ) ಶರೀರವನ್ನು ರಕ್ಷಿಸುತ್ತದೆ. ಪ್ರಾಣವಾದರೋ ಸಹಸ್ರಾರ ಮತ್ತು
ಅಗ್ನಿ-ಈ ಎರಡರಲ್ಲಿಯೂ ಇರುತ್ತಾ ಎರಡರ ಕಾರ್ಯವಾಗಿ ದೇಹವನ್ನು ಆಡಿಸುತ್ತದೆ.
ಭೂತಂ
ಭವಂ ಭವಿಷ್ಯಂ ಚ ಸರ್ವಂ ಪ್ರಾಣೇ ಪ್ರತಿಷ್ಠಿತಮ್ |
ಶ್ರೇಷ್ಠಂ
ತದೇವ ಭೂತಾನಾಂ ಬ್ರಹ್ಮಯೋನಿಮುಪಾಸ್ಮಹೇ||
ಮಹಾಭಾರತ
ವನಪರ್ವ 213-4
ಭಾವಾರ್ಥ:- ಹೀಗೆ
ಭೂತ-ವರ್ತಮಾನ-ಭವಿಷ್ಯತ್ ಎಲ್ಲವೂ ಕೂಡ ಪ್ರಾಣದಲ್ಲಿ ನೆಲೆಗೊಂಡಿವೆ. ಈ ಪ್ರಾಣವೇ ಭೂತಗಳಲ್ಲಿ
ಶ್ರೇಷ್ಠವಾದುದು. ಬ್ರಹ್ಮಮೂಲವಾಗಿರುವ ಈ ಪ್ರಾಣವನ್ನು ನಾವು ಉಪಾಸನೆಮಾಡುತ್ತೇವೆ.
ಸ
ಜನ್ತುಃ ಸರ್ವಭೂತಾತ್ಮಾ ಪುರುಷಃ ಸ ಸನಾತನಃ |
ಮಹಾನ್ಬುದ್ಧಿರಹಂಕಾರೋ
ಭೂತಾನಾಂ ವಿಷಯಶ್ಚ ಸಃ
ಮಹಾಭಾರತ
ವನಪರ್ವ 213-5
ಭಾವಾರ್ಥ:- ಈ
ಅಗ್ನಿ-ಪ್ರಾಣಗಳ (ಚಿದಗ್ನಿ ಮತ್ತು ಪ್ರಾಣಗಳ) ಒಡಗೂಡಿದ ಜೀವನೇ ಎಲ್ಲ ಭೂತಗಳಿಗೂ ಆತ್ಮನು,
ನಿತ್ಯವಾದ ಪರಬ್ರಹ್ಮವೂ ಅದೇ ಆಗಿರುತ್ತದೆ. ಅದೇ ಬ್ರಹ್ಮವೇ ಮಹತ್ತು,
ಬುದ್ಧಿ, ಅಹಂಕಾರಗಳಾಗಿ ಪ್ರಾಣಿಗಳ
ಶಬ್ದ-ಸ್ಪರ್ಶ ಮುಂತಾದ ವಿಷಯಗಳೂ ಆಗುತ್ತವೆ.
ಏವಂ
ತ್ವಿಹ ಸ ಸರ್ವತ್ರ ಪ್ರಾಣೇನ ಪರಿಪಾಲ್ಯತೇ |
ಪೃಷ್ಠತಸ್ತು
ಸಮಾನೇನ ಸ್ವಾಂ ಸ್ವಾಂ ಗತಿಮುಪಾಶ್ರಿತಃ
ಬಸ್ತಿಮೂಲಂ
ಗುದಂ ಚೈವ ಪಾವಕಂ ಸಮುಪಾಶ್ರಿತಃ |
ವಹನ್ಮೂತ್ರಂ
ಪುರೀಷಂ ವಾಪ್ಯಪಾನಃ ಪರಿವರ್ತತೇ ॥
ಮಹಾಭಾರತ
ವನಪರ್ವ 213-6,7
ಭಾವಾರ್ಥ:- ಹೀಗೆ ಈ
ದೇಹೇಂದ್ರಿಯಾದಿಗಳೆಲ್ಲವೂ ಎಲ್ಲೆಡೆಗಳಲ್ಲಿಯೂ (ಒಳಗೆ ಮತ್ತು ಹೊರಗೆ) ಪ್ರಾಣದಿಂದ
ರಕ್ಷಿಸಲ್ಪಡುತ್ತಿವೆ. ಪ್ರಾಣವು ಮಧ್ಯದಲ್ಲಿರುತ್ತದೆ. ಅನಂತರ ಅದು ಸಮಾನವಾಗಿ ಪೃಷ್ಠದಲ್ಲಿ ತನ್ನ
ಉದ್ದಿಷ್ಟವಾದ ಗತಿಯನ್ನು ಹೊಂದುತ್ತಾ ಬಸ್ತಿಯ ಮೂಲಕ (ಮೂತ್ರಾಶಯ) ಗುದವನ್ನೂ ಮತ್ತು ಜಾಠರಾಗ್ನಿಯನ್ನೂ
ಆಶ್ರಯಿಸಿ ಆಹಾರವನ್ನು ಜೀರ್ಣಮಾಡಿ, ಮೂತ್ರ-ಪುರೀಷಗಳನ್ನು ಅದರದರ
ಜಾಗಕ್ಕೆ ಒಯ್ಯುತ್ತಾ ಅಪಾನವಾಗಿ ಕೆಲಸಮಾಡುತ್ತದೆ.
ಪ್ರಯತ್ನೇ
ಕರ್ಮಣಿ ಬಲೇ ಸ ಏಷ ತ್ರಿಷು ವರ್ತತೇ |
ಉದಾನಮಿತಿ
ತಂ ಪ್ರಾಹುರಧ್ಯಾತ್ಮವಿದುಷೋ ಜನಾಃ ||
ಮಹಾಭಾರತ
ವನಪರ್ವ 213-8
ಭಾವಾರ್ಥ:- ಹೀಗೆ ಅದೇ
ಪ್ರಾಣವು ಪ್ರಯತ್ನದಲ್ಲೂ, ಅದಕ್ಕನುಕೂಲವಾದ ಕೆಲಸದಲ್ಲೂ ಮತ್ತು ಸಾಮರ್ಥ್ಯದಲ್ಲೂ-ಈ
ಮೂರರಲ್ಲೂ ಇರುವಾಗ ಆಧ್ಯಾತ್ಮವನ್ನು ಬಲ್ಲ ಜನರು ಅದನ್ನು ಉದಾನವೆಂದು ಕರೆಯುತ್ತಾರೆ.
ಸಂಧೌ
ಸಂಧೌ ಸಂನಿವಿಷ್ಟಃ ಸರ್ವೆಷ್ಟಪಿ ತಥಾನಿಲಃ |
ಶರೀರೇಷು
ಮನುಷ್ಯಾಣಾಂ ವ್ಯಾನ ಇತ್ಯುಪದಿಶ್ಯತೇ ||
ಮಹಾಭಾರತ
ವನಪರ್ವ 213-9
ಭಾವಾರ್ಥ:- ಈ ವಾಯುವು
ಮನುಷ್ಯನ ಇಡೀ ದೇಹದಲ್ಲಿ ಪ್ರತಿಯೊಂದು ಸಂಧಿಯಲ್ಲೂ ಸೇರಿಕೊಂಡಾಗ ವ್ಯಾನವೆಂದು ಕರೆಯಲ್ಪಡುತ್ತದೆ.
ಧಾತುಷ್ವಗ್ನಿಸ್ತು
ವಿತತಃ ಸ ತು ವಾಯುಸಮೀರಿತಃ |
ರಸಾನ್ಧಾತೂಂಶ್ಚ
ದೋಷಾಂಶ್ಚ ವರ್ತಯನ್ಪರಿಧಾವತಿ
ಪ್ರಾಣಾನಾಂ
ಸಂನಿಪಾತಾತ್ತು ಸಂನಿಪಾತಃ ಪ್ರಜಾಯತೇ |
ಊಷ್ಮಾ
ಚಾಗ್ನಿ ರಿತಿ ಜ್ಞೇಯೋ ಯೋsನ್ನಂ ಪಚತಿ
ದೇಹಿನಾಮ್
ಮಹಾಭಾರತ
ವನಪರ್ವ 213-10,11
ಭಾವಾರ್ಥ:- ಜಾಠರಾಗ್ನಿಯು
ತ್ವಕ್ ಮುಂತಾದ ಧಾತುಗಳಲ್ಲಿ ವ್ಯಾಪಿಸಿ ಪ್ರಾಣಾದಿವಾಯುಗಳಿಂದ ಪ್ರೇರಿತವಾಗಿ, ಅನ್ನವೇ ಮುಂತಾದ ರಸಗಳನ್ನೂ ಧಾತುಗಳನ್ನೂ ಮತ್ತು ಪಿತ್ತವೇ ಮೊದಲಾದ ದೋಷಗಳನ್ನೂ
ಪರಿಣಾಮಗೊಳಿಸುತ್ತಾ ಓಡಾಡುತ್ತದೆ. ಪ್ರಾಣಗಳ ಸಂಘರ್ಷದಿಂದ ಜಠರದಲ್ಲಿ ಶಾಖವುಂಟಾಗುತ್ತದೆ. ಅದೇ
ವೈಶ್ವಾನರಾಗ್ನಿ, ಅದೇ ದೇಹಿಗಳ ಅನ್ನವನ್ನು ಪಚನ ಮಾಡುವುದು.
ಸಮಾನೋದಾನಯೋರ್ಮಧೈ
ಪ್ರಾಣಾಪಾನ ಸಮಾಹಿತ |
ಸಮರ್ಥಿತಸಧಿಷ್ಟಾನಂ
ಸಮಕಚತಿ ಪಾವಕಃ
ಮಹಾಭಾರತ
ವನಪರ್ವ 213-12
ಭಾವಾರ್ಥ:- ಶರೀರವ್ಯಾಪಾರವು
ನಡೆಯುವಾಗ ಪ್ರಾಣ ಮತ್ತು ಅಪಾನಗಳು ಸಮಾನ ಮತ್ತು ಉದಾನಗಳ ಮಧ್ಯದಲ್ಲಿ ಸೇರಿಕೊಳ್ಳುತ್ತವೆ.
(ಹೃದಯದಲ್ಲಿರುವ ಪ್ರಾಣವು ನಾಭಿಯಲ್ಲಿರುವ ಸಮಾನವನ್ನೂ, ಗುದದಲ್ಲಿರುವ
ಅಪಾನವು ಕಂಠದಲ್ಲಿರುವ ಉದಾನವನ್ನೂ ಸೇರಿಕೊಳ್ಳುತ್ತದೆ.) ಅಲ್ಲಿಯೂ ಹೀಗೆಯೇ ಪ್ರಾಣಾಪಾನ-ಸಮಾನಗಳು
ನಾಭಿಯಲ್ಲಿ ಸಂಘರ್ಷಣವಾಗುವುದರಿಂದ ಅಗ್ನಿಯು ಉಂಟಾಗಿ ತನ್ನ ಅಧಿಷ್ಠಾನವಾದ ಸಪ್ತಧಾತುಮಯವಾದ ಶರೀರವನ್ನು
ಪರಿಣಾಮಹೊಂದಿಸುತ್ತದೆ. (ಪುಷ್ಠಿಗೊಳಿಸುತ್ತದೆ.)
ಅಸ್ಯಾಪಿ
ಪಾಯುಪರ್ಯನಸ್ತಥಾ ಸ್ಯಾದ್ಗುದಸಂಜ್ಞಿತಃ |
ಸ್ರೋತಾಂಸಿ
ತಸ್ಮಾಜ್ಜಾಯನ್ತೇ ಸರ್ವಪ್ರಾಣೇಷು ದೇಹಿನಾಮ್
ಮಹಾಭಾರತ
ವನಪರ್ವ 213-13
ಭಾವಾರ್ಥ:- ಈ ಅಗ್ನಿಯು
ಪಾಯುಸ್ಥಾನದವರೆಗೆ ಗುದವನ್ನು ಪ್ರವೇಶಿಸಿದಾಗ ಗುದ ಅಥವಾ ಅಪಾನವಾಗುತ್ತದೆ. ಅಪಾನಾಗ್ನಿಯಿಂದಲೇ
ಐದು ಪ್ರಾಣಗಳಲ್ಲಿಯೂ ಸ್ರೋತಸ್ಸುಗಳು ಅಥವಾ ನಾಡೀಮಾರ್ಗಗಳು ಉಂಟಾಗುತ್ತವೆ.
ಅಗ್ನಿವೇಗವಹಃ
ಪ್ರಾಣೋ ಗುದಾನ್ತೇ ಪ್ರತಿಹನ್ಯತೇ |
ಸ
ಊರ್ಧ್ವಮಾಗಮ್ಯ ಪುನಃ ಸಮುಪತ್ಕಿಷ್ಪತಿ ಪಾವಕಮ್ ||
ಮಹಾಭಾರತ
ವನಪರ್ವ 213-14
ಭಾವಾರ್ಥ:- ನಾಡಿಯ
ಮಾರ್ಗಗಳ ಮೂಲಕ ಮೇಲಕ್ಕೆ ಪುಟಹೊಡೆದಾಗ ಪ್ರಾಣಾದಿವಾಯುಗಳಾಗುತ್ತವೆ. ಅಗ್ನಿಯ ವೇಗವನ್ನು
ಹೊತ್ತುಬಂದ ಪ್ರಾಣವು ಗುದದ ತುದಿಯಲ್ಲಿ ಡಿಕ್ಕಿಹೊಡೆದು ಮತ್ತೆ ಮೇಲಕ್ಕೆ ಜಿಗಿದು ಪುನಃ
ಅಗ್ನಿಯನ್ನು ಎಸೆಯುತ್ತದೆ. (ಘರ್ಷಣೆಯ ವೇಗದಿಂದ ಅಗ್ನಿಯು ವೃದ್ಧಿಯಾಗುವುದು.)
ಪಕ್ವಾಶಯಸ್ವಧೋ
ನಾಭ್ಯಾಮೂರ್ಧ್ವಮಾಮಾಶಯಃ ಸ್ಥಿತಃ |
ನಾಭಿಮಧ್ಯೇ
ಶರೀರಸ್ಯ ಪ್ರಾಣಾಃ ಸರ್ವೇ ಪ್ರತಿಷ್ಠಿತಾಃ ||
ಮಹಾಭಾರತ
ವನಪರ್ವ 213-15
ಭಾವಾರ್ಥ:- ಪಕ್ವಾನ್ನದ
ಜಾಗವು ನಾಭಿಯ ಕೆಳಗಡೆ ಮತ್ತು ಆಮಾಶಯವು ಅದರ ಮೇಲೆ ಇರುತ್ತದೆ. ಶರೀರದಲ್ಲಿ ನಾಭಿಮಧ್ಯದಲ್ಲಿ
ಎಲ್ಲ ಪ್ರಾಣಗಳೂ ನೆಲೆಗೊಂಡಿವೆ. (ಪ್ರಾಣಗಳಿಗೆ ನಾಭಿಯೇ ಕೇಂದ್ರ)
ಪ್ರವೃತ್ತಾ
ಹೃದಯಾತ್ಸರ್ವೇ ತಿರ್ಯಗೂರ್ಧ್ವಮಧಸ್ತಥಾ |
ವಹನ್ತ್ಯನ್ನರಸಾನ್ನಾಡ್ಯೋ
ದಶಪ್ರಾಣಪ್ರಚೋದಿತಾಃ ||
ಮಹಾಭಾರತ
ವನಪರ್ವ 213-16
ಭಾವಾರ್ಥ:- ನಾಡಿಗಳೆಲ್ಲವೂ
ಹೃದಯದಿಂದ ಅಡ್ಡಲಾಗಿ ಮೇಲಕ್ಕೆ ಮತ್ತು ಕೆಳಕ್ಕೆ ಹೊರಟು ಹತ್ತು ಪ್ರಾಣಗಳಿಂದ ಪ್ರೇರಿಸಲ್ಪಟ್ಟು
ಅನ್ನರಸಗಳನ್ನು ಸಾಗಿಸುತ್ತವೆ.
ಯೋಗಿನಾಮೇಷ
ಮಾರ್ಗಸ್ತು ಯೇನ ಗಚ್ಛನ್ತಿ ತತ್ಪರಮ್ |
ಜಿತಕ್ಲಮಾಃ
ಸಮಾ ಧೀರಾ ಮೂರ್ಧನ್ಯಾತ್ಮಾನಮಾದಧುಃ |
ಏವಂ
ಸರ್ವೆಷು ವಿತತೌ ಪ್ರಾಣಾಪಾನೌ ಹಿ ದೇಹಿಷು ||
ಮಹಾಭಾರತ
ವನಪರ್ವ 213-17
ಭಾವಾರ್ಥ:- ತಲೆಯಿಂದ
ಹಿಡಿದು ಪಾಯುಸ್ಥಾನದವರೆಗಿನ ಈ ಮಾರ್ಗವು ಯೋಗಿಗಳಿಗೆ ಪರಬ್ರಹ್ಮನನ್ನು ಹೊಂದುವ ಹಾದಿಯಾಗಿದೆ.
ಕೇಶಗಳನ್ನು ಜಯಿಸಿದವರಾಗಿ ಪ್ರಾಣಾಪಾನ ಸಾಮ್ಯವನ್ನೂ ಮತ್ತು ತ್ರಿಗುಣಸಾಮ್ಯವನ್ನೂ ಹೊಂದಿದ ಧೀರರಾದ
ಯೋಗಿಗಳು ತಲೆಯಲ್ಲಿ ಸಹಸ್ರಾರ ಸ್ಥಾನದಲ್ಲಿ ತಮ್ಮನ್ನು ಪ್ರತಿಷ್ಠಿಸಿಕೊಳ್ಳುತ್ತಾರೆ. ಹೀಗೆ ಎಲ್ಲ
ಪ್ರಾಣಿಗಳಲ್ಲಿಯೂ ಪ್ರಾಣಾಪಾನಗಳು ವಿಸ್ತಾರವಾಗಿವೆ.
ಅನ್ನೇನೆ
ಕುಶ್ಲೇರ್ದ್ವಾನಂಶೌ ಪಾನೇನೈಕಂ ಪ್ರಪೂರಯೇತ್ ।
ಆಶ್ರಯಂ
ಪವನಾದೀನಾಂ ತಥೈ ಕಮನಶೇಷಯೇತ್ ||
ವಿಷ್ಣುಧರ್ಮೋತ್ತರಪುರಾಣಂ
- ಅಧ್ಯಾಯ 56-
113
ಭಾವಾರ್ಥ:- ಹೊಟ್ಟೆಯಲ್ಲಿ
ಎರಡು ಭಾಗವನ್ನು ಅನ್ನದಿಂದಲೂ, ಒಂದು ಭಾಗವನ್ನು ನೀರಿನಿಂದಲೂ ತುಂಬಬೇಕಲ್ಲದೆ,
ಇನ್ನೊಂದು ಭಾಗವನ್ನು ವಾಯುಸಂಚಾರಕ್ಕೆ ಅವಕಾಶವಿರುವಂತೆ ಮಾಡಬೇಕು.
ನಾಭೇರೂರ್ಧ್ವಮಧಶ್ಚೈವ
ಗುದಶ್ರೋಣ್ಯೋಸ್ತಥೈವ ಚ |
ಬಲಾಸಪಿತ್ತನಾತಾನಾಂ
ದೇಹೇ ಸ್ಥಾನಂ ಪ್ರಕೀರ್ತಿತಂ ॥
ವಿಷ್ಣುಧರ್ಮೋತ್ತರಪುರಾಣಂ
- ಅಧ್ಯಾಯ 56-
115
ಭಾವಾರ್ಥ:- ಈ ನಮ್ಮ ದೇಹದೊಳಗಡೆ
ಹೊಕ್ಕಳ ಮೇಲೂ ಕೆಳಗೂ, ಗುದ ಮತ್ತು ಶ್ರೋಣೀ ಪ್ರದೇಶಗಳಲ್ಲೂ ವಾತ, ಕಫಗಳು ವಾಸಮಾಡಿ-ಕೊಂಡಿರುವುದೆಂದು ಎಲ್ಲರೂ ಮುಖ್ಯವಾಗಿ ಅರಿತಿರಬೇಕು.
ಪ್ರಾಣ ವಾಯು ಮತ್ತು ಆತ್ಮ / ಪರಮಾತ್ಮ
ಛಂಧಾಗ್ಯೋ ಉಪನಿಷತ್ (3-14-2) ಆತ್ಮನು
ಮನೋಮಯನು, ಪ್ರಾಣವೇ ಅವನ ಶರೀರವು, ಅವನು
ಚೈತನ್ಯ ರೂಪನು, ಸತ್ಯ ಸಂಕಲ್ಪನು. ಆಕಾಶವು ಅವನ ಆತ್ಮವು, ಅವನು ಸರ್ವಕರ್ಮನು, ಸರ್ವಕಾಮನು, ಸರ್ವಗಂಧನು, ಸರ್ವರಸನು, ಅವನು ಸರ್ವವಸ್ತುಗಳಲ್ಲಿ ವ್ಯಾಪ್ತನು. ಅವನು ವಾಗ್ರಹಿತನು (ಪೂರ್ಣಕಾಮನಾದುದರಿಂದ)
ಯಾವ ಆತುರತೆಯೂ ಇಲ್ಲದವನು.
ಎನ್ನ ಆರು
ಚಕ್ರಂಗಳಲ್ಲಿ ಪೂರೈಸಿ ತುಂಬಿಕೊಂಡಿರ್ಪ ಪರಮಾತ್ಮನು ನೀನೆ ಅಯ್ಯ. ಎನ್ನ ನವನಾಳಂಗಳಲ್ಲಿ ಹೊಳೆದು
ಸುಳಿವ ಪರವಸ್ತುವು ನೀನೆ ಅಯ್ಯ. ಎನ್ನ ಕರ ಮನ
ಭಾವದ ಒಳಹೊರಗೆ ತೊಳಗಿ ಬೆಳಗುವ ಪರಬ್ರಹ್ಮವು ನೀನೆ ಅಯ್ಯ. ಎನ್ನ ಬ್ರಹ್ಮರಂಧ್ರದ ಸಹಸ್ರದಳದ
ಕಮಲಮಧ್ಯದಲ್ಲಿ ನಿರಂತರ ಬೆಳಗುವ ಪರಂಜ್ಯೋತಿ ನೀನೆ ಅಯ್ಯ ಅಖಂಡೇಶ್ವರಾ.
ಪ್ರಾಣಲಿಂಗ ಸಂಬಂಧಿಗಳೆಂದು ನುಡಿಯುವವರು
ಅನೇಕರುಂಟು. ಪ್ರಾಣಲಿಂಗದ ಕಳೆಯನಾರು ಆರಿಯರಲ್ಲ. ಪ್ರಾಣಲಿಂಗದ ಕಳೆ ಎಂತೆಂದಡೆ: ಆಧಾರದಲ್ಲಿ
(ಮೂಲಾಧಾರದಲ್ಲಿ) ಎಳೆಯ ಸೂರ್ಯನಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಸ್ವಾಧಿಷ್ಠಾನದಲ್ಲಿ
ಪೂರ್ಣಚಂದ್ರನಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಮಣಿಪೂರಕದಲ್ಲಿ ಮಿಂಚಿನ ಲತೆಯಂತೆ
ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಅನಾಹತದಲ್ಲಿ
ಸ್ಪಟಿಕದ ಸಲಾಕೆಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ವಿಶುದ್ಧಿಯಲ್ಲಿ ಮೌಕ್ತಿಕದ
(ಮುತ್ತಿನ) ಗೊಂಚಲದಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಆಜ್ಞೆಯಲ್ಲಿ ರತ್ನದ ದೀಪ್ತಿಯಂತೆ
ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಬ್ರಹ್ಮರಂಧ್ರದಲ್ಲಿ ಸ್ವಯಂಜ್ಯೋತಿಯಂತೆ ಬೆಳಗುತಿರ್ಪುದು
ನೋಡಾ ಪ್ರಾಣಲಿಂಗವು. ಶಿಖೆಯಲ್ಲಿ ಶುದ್ಧತಾರೆಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ಪಶ್ಚಿಮದಲ್ಲಿ ಉಳುಕನಕ್ಷತ್ರದಂತೆ (ಮರೆಯಾದ/ಸೋಂಬೇರಿ ನಕ್ಷತ್ರದಂತೆ) ಬೆಳಗುತಿರ್ಪುದು ನೋಡಾ
ಪ್ರಾಣಲಿಂಗವು. ಇಂತಪ್ಪ ಪ್ರಾಣಲಿಂಗದ ಕಳೆಯನರಿದು, ಪ್ರಾಣನ
ಸಂಯೋಗಿಸಿ ಪ್ರಳಯವ ಗೆಲಲರಿಯದೆ ಮಾತಿನ ನೀತಿಶಾಸ್ತ್ರ ಘಾತಕದ ಕಥೆಗಳ ಕಲಿತು, ಓತು ಎಲ್ಲರೊಡನೆ ಹೇಳಿ ಚಾತುರ್ಯನೆನಿಸಿಕೊಂಡು ಒಡಲ ಹೊರೆವ ಘಾತಕರ
ಪ್ರಾಣಲಿಂಗಸಂಬಂಧಿಗಳಿಂತೆಂಬೆನಯ್ಯಾ ಅಖಂಡೇಶ್ವರಾ.
ಲಿಂಗಪೂಜೆಯ ಮಾಡಿರೋ ನಿಮ್ಮೊಳೆ
ಪ್ರಾಣಲಿಂಗಪೂಜೆಯ ಮಾಡಿರೋ ಗಂಗೆ ಯಮುನೆಯರ ಸಂಗಮದೊಳು ಮಿಂದು, ಎಂಬ ವಚನವೂ ಇಡಾ ಪಿಂಗಳ ಮತ್ತು
ಸುಷುಮ್ನಾ ತ್ರಿಕೂಟದಲ್ಲಿ ಉಸಿರಾಟದ ವಾಯು ಸಮರ್ಪಣೆ ಬಗ್ಗೆ ಹೇಳಿದೆ.
ಎನ್ನ ಹೃದಯಕಮಲದಲ್ಲಿ ಮೂರ್ತಿಗೊಂಡಿಪ್ಪ
ಎನ್ನ ಪ್ರಾಣೇಶ್ವರಂಗೆ ಎನ್ನ ಕ್ಷಮೆಯೇ ಅಭಿಷೇಕ. ಎನ್ನ ಪರಮ ವೈರಾಗ್ಯವೇ ಪುಷ್ಪದ ಮಾಲೆ. ಎನ್ನ
ಸಮಾಧಿಸಂಪತ್ತೇ ಗಂಧ. ಎನ್ನ ನಿರಹಂಕಾರವೇ ಅಕ್ಷತೆ. ಎನ್ನ ಸದ್ವಿವೇಕವೇ ವಸ್ತ್ರ. ಎನ್ನ ಸತ್ಯವೇ
ದಿವ್ಯಾಭರಣ. ಎನ್ನ ವಿಶ್ವಾಸವೇ ಧೂಪ. ಎನ್ನ ದಿವ್ಯ ಜ್ಞಾನವೇ ದೀಪ. ಎನ್ನ ನಿಭ್ರಾಂತಿಯೇ
ನೈವೇದ್ಯ. ಎನ್ನ ನಿರ್ವಿಷಯವೇ ತಾಂಬೂಲ. ಎನ್ನ ಮೌನವೇ ಘಂಟೆ. ಎನ್ನ ನಿರ್ವಿಕಲ್ಪವೇ ಪ್ರದಕ್ಷಿಣೆ.
ಎನ್ನ ಶುದ್ಧಿಯೇ ನಮಸ್ಕಾರ. ಎನ್ನ ಅಂತಃಕರಣದಿಂದ ಮಾಡುವ ಸೇವೆಯೇ ಉಪಚಾರಂಗಳು. ಈ ಪರಿಯಲ್ಲಿ ಎಮ್ಮ
ಗೊಹೇಶ್ವರಲಿಂಗಕ್ಕೆ ಪ್ರಾಣಪೊಜೆಯ ಮಾಡಿ ಬಾಹ್ಯಕ್ರೀಯ ಮಾಡಿದೆನು ಕಾಣಾ ಸಂಗನ ಬಸವಣ್ಣಾ.
ವ್ಯಾಸರು
ತಿಳಿಸಿರುವ ಬ್ರಹ್ಮಜ್ಞಾನ ಆತ್ಮಜ್ಞಾನ ಮಾರ್ಗ
ಬ್ರಹ್ಮ
ಮಹಾ ಪುರಾಣ ಅಧ್ಯಾಯ 236 ಶ್ಲೋಕ 6 ರಿಂದ ವ್ಯಾಸ ಮಹರ್ಷಿ ಹೀಗೆ ಹೇಳುತ್ತಾ ಬ್ರಹ್ಮ ಜ್ಞಾನ ಮತ್ತು
ಆತ್ಮ ಜ್ಞಾನ ಹೊಂದುವ ಬಗ್ಗೆ ಮಾರ್ಗ ಹೇಳುತ್ತಾರೆ.
ನಾನ್ಯತ್ರ
ಜ್ಞಾನತಪಸೋರ್ನಾನ್ಯತ್ರೇಂದ್ರಿಯನಿಗ್ರಹಾತ್ |
ನಾನ್ಯತ್ರ
ಸರ್ವಸಂತ್ಯಾಗಾತ್ಸಿದ್ಧಿಂ ವಿಂದತಿ ಕಶ್ಚನ ॥ 6
ಮಹಾಭೂತಾನಿ
ಸರ್ವಾಣಿ ಪೂರ್ವಸೃಷ್ಟಿಃ ಸ್ವಯಂಭುವಃ ।
ಭೂಯಿಷ್ಠಮ್
ಪ್ರಾಣಭೃದ್ಗ್ರಾಮೇ ನಿನಿಷ್ಟಾನಿ ಶರೀರಿಷು || 7
ಭೂಮೇರ್ದೇಹೋ
ಜಲಾತ್ಸ್ನೇಹೋ ಜ್ಯೋತಿಷಶ್ಚಕ್ಷುಷೀ ಸ್ಮೃತೇ ।
ಪ್ರಾಣಾಪಾನಾಶ್ರಯೋ
ವಾಯುಃ ಕೋಷ್ಠಾಕಾಶಂ ಶರೀರಿಣಾಂ || 8
ಕ್ರಾಂತೌ
ವಿಷ್ಣುರ್ಬಲೇ ಶಕ್ರಃ ಕೋಷ್ಟೇಅಗ್ನಿ ರ್ಭೋಕ್ತುಮಿಚ್ಛತಿ |
ಕರ್ಣಯೋಃ
ಪ್ರದಿಶಃ ಶ್ರೋತ್ರೇ ಜಿಹ್ವಾಯಾಂ ವಾಕ್ಸರಸ್ವತೀ || 9
ಕರ್ಣೌ
ತ್ವಕ್ಚಕ್ಷುಷೀ ಜಿಹ್ವಾ ನಾಸಿಕಾ ಚೈವ ಪಂಚಮಿ ।
ದಶ
ತಾನೀಂದ್ರಿಯೋಕ್ತಾನಿ ದ್ವಾರಾಣ್ಯಾಹಾರಸಿದ್ಧಯೇ || 10
ಭಾವಾರ್ಥ:- ವ್ಯಾಸನು
ಹೇಳಿದನು :- ಜ್ಞಾನ, ತಪಸ್ಸು, ಇಂದ್ರಿಯ
ನಿಗ್ರಹ, ಸನ್ಯಾಸ ಇವುಗಳಿಂದ ಹೊರತು ಬೇರೊಂದರಿಂದ ಯಾವ ಮನುಷ್ಯನೂ
ಸಿದ್ಧಿಯನ್ನು ಸಂಪಾದಿಸುವದಿಲ್ಲ. ಪ್ರಾಣಿಗಳ ದೇಹದಲ್ಲಿ ಬ್ರಹ್ಮನ ಪ್ರಥಮ ಸೃಷ್ಟಿಯಾದ ಪಂಚಮಹಾಭೂತಗಳೇ
ವಿಶೇಷವಾಗಿ ಇಡಲ್ಪಟ್ಟಿರುವುವು. ಭೂಮಿಯ ಅಂಶದಿಂದ ಶರೀರವು ಆಗಿರುವದು. ನೀರಿನ ಅಂಶವೇ ಅವಯವಗಳ
ಸಂಬಂಧವು. ತೇಜಸ್ಸೇ ಕಣ್ಣುಗಳು. ಪ್ರಾಣಾಪಾನಾದಿ ಕಾರ್ಯಗಳೇ ವಾಯುವು. ಜಠರ, ಕರುಳು ಮುಂತಾದ ನಾಳಗಳೇ ಆಕಾಶವು. ನಡಿಗೆಯಲ್ಲಿ ವಿಷ್ಣುವೂ, ಬಲದಲ್ಲಿ ಇಂದ್ರನೂ, ನಾಳಗಳಲ್ಲಿ ಅಗ್ನಿಯೂ, ನೆಲೆಯಾಗಿದ್ದು ಕೊಂಡು ವಿಷಯಾನುಭವವನ್ನು ಮಾಡುವರು. ಕಿವಿಗಳಲ್ಲಿ ಶ್ರವಣೇಂದ್ರಿಯವೂ, ದಿಗ್ದೇವತೆಯೂ, ನಾಲಿಗೆಯಲ್ಲಿ ವಾಗಿಂದ್ರಯವೂ
ಸರಸ್ವತೀದೇವಿಯೂ ಇರುವರು. ಕಿವಿ ಚರ್ಮ, ಕಣ್ಣು, ನಾಲಗೆ, ಮೂಗು, ಈ ಐದು
ಜ್ಞಾನೇಂದ್ರಿಯಗಳೂ, ವಾಕ್, ಪಾಣಿ,
ಪಾದ, ಸಾಯು, ಉಪಸ್ಥೆ,
ಎಂಬ ಐದು ಕರ್ಮೇಂದ್ರಿಯಗಳೂ ಸೇರಿ ಹತ್ತು ಇಂದ್ರಿಯಗಳು ಶರೀರದ ಆಹಾರಸಿದ್ದಿಗೆ
ಮಾರ್ಗಗಳಾಗಿರುವುವು.
ಶಬ್ದಸ್ಪರ್ಶೌ
ತಥಾ ರೂಪಂ. ರಸಂ ಗಂಧಂ ಚ ಪಂಚಮಂ ।
ಇಂದ್ರಿಯಾರ್ಥಾನ್ವೃಥಗ್ವಿದ್ವಾದಿಂದ್ರಿಯೇಭ್ಯಸ್ತು
ನಿತ್ಯದಾ || 11
ಇಂದ್ರಿಯಾಣಿ
ಮನೋ ಯುಜ್ಞ್ತೇ ಅವಶ್ಯಾನಿವ ರಾಜಿನಃ |
ಮನಶ್ಚಾಪಿ
ಸದಾ ಯುಜ್ಞ್ತೇ ಭೂತಾತ್ಮಾ ಹೃದೆಯಾಶ್ರಿತಃ ॥ 12
ಇಂದ್ರಿಯಾಣಾಂ
ತಥೈವೈಷಾಂ ಸರ್ವೇಷಾಮಿಾಶ್ವರಂ ಮನಃ ।
ನಿಯಮೇ
ಚ ವಿಸರ್ಗೇ ಚ ಭೂತಾತ್ಮಾ ಮನಸಸ್ತಥಾ ॥ 13
ಇಂದ್ರಿಯಾಣೀಂದ್ರಿಯಾರ್ಥಾಶ್ಚ
ಸ್ವಭಾವಶ್ಚೇತನಾ ಮನಃ ।
ಪ್ರಾಣಾಪಾನೌ
ಚ ಜೀವಶ್ಚ ನಿತ್ಯಂ ದೇಹೇಷು ದೇಹಿನಾಂ ॥ 14
ಭಾವಾರ್ಥ;- ಶಬ್ದ, ಸ್ಪರ್ಷ, ರೂಪ, ರಸ, ಗಂಧಗಳೇ ಇಂದ್ರಿಯಾರ್ಥಗಳು. ಬೇರೆ ಬೇರೆ
ಇಂದ್ರಿಯಗಳು ಇವುಗಳನ್ನು ಗ್ರಹಿಸುವುವು. ಮನಸ್ಸು ಹೃದಯಕಮಲವನ್ನಾ ಶ್ರಯಿಸಿ ಇಂದ್ರಿಯಗಳು
ಕೆಲಸಮಾಡುವಂತೆ ಪ್ರೇರೇಪಿಸುವದು. ಈ ಇಂದ್ರಿಯಗಳಿಗೆಲ್ಲ ಮನಸ್ಸೇ ಅಧಿಪತಿಯು. ಮನಸ್ಸಿನ
ಅಪ್ಪಣೆಯಿಂದಲೇ ಇಂದ್ರಿಯಗಳು ಕೆಲಸವನ್ನು ಮಾಡುತ್ತಲಿರುವುವು. ಇಂದ್ರಿಯಗಳಿಗೂ ಇಂದ್ರಿಯಾರ್ಥಗಳಿಗೂ
ಮನಸ್ಸೇ ಸ್ವಾಭಾವಿಕವಾದ ಶಕ್ತಿಸ್ವರೂಪ-ವಾಗಿರುವದು. ಪ್ರಾಣಿಗಳ ಶರೀರದಲ್ಲಿ ನಡೆಯುವ ಪ್ರಾಣಾಪಾನರೂಪವಾದ
ವಾಯುವಿನ ವ್ಯಾಪಾರವೇ ಜೀವವೆನಿಸುವುದು.
ಆಶ್ರಯೋ
ನಾಸ್ತಿ ಸತ್ತ್ವಸ್ಯ ಗುಣಶಬ್ದೋನ ಚೇತನಾಃ ।
ಸತ್ತ್ವಂಹಿ
ತೇಜಃ ಸೃಜತಿ ನ ಗುಣಾನ್ವೈ ಕಥಂಚನ ॥ 15
ಏವಂ
ಸಪ್ತದಶಂ ದೇಹಂ ವೃತ್ತಂ ಷೋಡಶಭಿರ್ಗುಣೈಃ |
ಮೆನೀಷೀ
ಮನಸಾ ವಿಪ್ರಾಃ ಪಶ್ಯತ್ಯಾತ್ಮಾನಮಾತ್ಮನಿ ॥ 16
ನ
ಹ್ಯಯಂ ಚಕ್ಷುಷಾ ದೈಶ್ಯೋ ನ ಚ ಸರ್ವ್ಮೈರಪೀಂದ್ರಿಯೈಃ !
ಮನಸಾತು
ಪ್ರದೀಪ್ತೇನ ಮಹಾನಾತ್ಮಾ ಪ್ರಕಾಶತೇ ॥ 17
ಭಾವಾರ್ಥ:- ಸತ್ವಾದಿಗುಣಗಳು
ಚೀತನವಸ್ತುವಲ್ಲ. ಅವುಗಳಿಗೆ ಆಶ್ರಯವೂ ಇಲ್ಲ. ಸತ್ವವೆಂದರೆ ಬಲವು. ಈ ಬಲವನ್ನು ತೇಜಸ್ಸು
ಸೃಷ್ಟಿಸುವದು. ಇದು ಗುಣಗಳನ್ನು ಹುಟ್ಟಿಸುವದಿಲ್ಲ. ಈ ರೀತಿಯಲ್ಲಿ ಜ್ಞಾನೇಂದ್ರಿಯ ಐದು,
ಕರ್ಮೇಂದ್ರಿಯ ಐದು, ಇಂದ್ರಿಯಾರ್ಥ ಐದು, ಮನಸ್ಸು, ಜೀವ, ಈ
ಹದಿನೇಳು ತತ್ವಗಳಿಂದ ದೇಹವಾಗಿರುವದು. ಈ ದೇಹವು ಹದಿನಾರು ಗುಣಗಳಿಂದ ಕೂಡಿರುವದು. ಎಲ್ಲೆ ಖುಷಿಗಳೇ,
ಬುದ್ಧಿವಂತನಾದ ಜೀವನು ತನ್ನ ಮನಸ್ಸಿ ನಿಂದಲೇ ಆತ್ಮನನ್ನು ತಿಳಿವನು. ಈ ಆತ್ಮನನ್ನು
ಕಣ್ಣಿನಿಂದ ನೋಡಲಾಗುವದಿಲ್ಲ. ಇವನು ಇತರ ಇಂದ್ರಿಯಗಳಿಗೂ ಗೋಚರನಲ್ಲ. ಆ ಪರಮಾತ್ಮನು ಪ್ರಕಾಶವಾದ
ಮನಸ್ಸಿಗೆ ಮಾತ್ರ ಗೋಚರನಾಗುವನು.
ಅಶಬ್ದಸ್ಪರ್ಶರೂಪಂ
ತಚ್ಚ ರಸಾಗಂಧಮವ್ಯಯಂ ।
ಅಶರೀರಂ
ಶರೀರೇ ಸ್ವೇ ನಿರೀಕ್ಷೇತ ನಿರಿಂದ್ರಿಯಂ || 18
ಅವ್ಯಕ್ತಂ
ಸರ್ವದೇಹೇಷು ಮರ್ತ್ಯೇಷು ಪರಮಾರ್ಚಿತಂ ।
ಯೋಅನುಪಶ್ಯತಿ
ಸ ಪ್ರೇತ್ಯ ಕಲ್ಪತೇ ಬ್ರಹ್ಮ ಭೂಯತಃ || 19
ವಿದ್ಯಾ
ವಿನಯಸಂಪನ್ನ ಬ್ರಾಹ್ಮಣೇ ಗವಿ ಹಸ್ತಿನಿ |
ಶುನಿ
ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ || 20
ಸ
ಹಿ ಸರ್ವೇಷು ಭೂತೇಷು ಜಂಗಮೇಷು ಧ್ರುವೇಷು ಚ |
ವಸತ್ಯೇಕೋ
ಮಹಾನಾತ್ಮಾಯೇನ ಸರ್ವಮಿದಂ ತತಂ ॥ 21
ಸರ್ವಭೂತೇಷು
ಚಾತ್ಮಾನಂ ಸರ್ವಭೂತಾನಿ ಚಾತ್ಮನಿ |
ಯದಾ
ಪಶ್ಯತಿ ಭೂತಾತ್ಮಾ ಬ್ರಹ್ಮ ಸಂಪದ್ಯತೇ ತದಾ || 22
ಯಾವಾನಾತ್ಮನಿ
ವೇದಾತ್ಮಾ ತಾವಾನಾತ್ಮಾ ಪರಾತ್ಮನಿ |
ಯ
ಏವಂ ಸತತಂ ವೇದ ಸೋಅಮೃತತ್ವಾಯ ಕಲ್ಪತೇ ॥ 23
ಭಾವಾರ್ಥ:- ಶಬ್ದ,
ಸ್ಪರ್ಶ, ರೂಪ, ರಸ
ಗಂಧಗಳೆಂಬ ಇಂದ್ರಿಯ ವಿಷಯಗಳಲ್ಲದ, ಶರೀರವಿಲ್ಲದ, ನಾಶರಹಿತನೂ ಇಂದ್ರಿಯಗಳಿಲ್ಲ-ದವನೂ ಆದ ಪರಮಾತ್ಮನನ್ನು ನಮ್ಮ ಶರೀರದಲ್ಲಿಯೇ
ನೋಡಬೇಕು. ಸಮಸ್ತ ಮನುಷ್ಯ ಶರೀರದಲ್ಲಿಯೂ ವ್ಯಕ್ತನಾಗದೆ ಇರುತ್ತಿರುವ, ಪರಮಪೂಜ್ಯನಾದ ಪರಮಾತ್ಮನನ್ನು ಯಾವ ಜೀವನು ತಿಳಿಯುವನೋ ಅವನು ಪರಬ್ರಹ್ಮನೇ ಆಗುವನು.
ಜ್ಞಾನಿಗಳಾದವರು ವಿದ್ಯೆಯಿಂದಲೂ ವಿನಯಾದಿ ಸದ್ಗುಣಗಳಿಂದಲೂ ಕೂಡಿದ ಬ್ರಾಹ್ಮಣನಲ್ಲಿಯೂ
ಗೋವಿನಲ್ಲಿಯೂ ಆನೆಯಲ್ಲಿಯೂ ನಾಯಿಯಲ್ಲಿಯೊ ಚಂಡಾಲನಲ್ಲಿಯೂ ಇರುವ ಆತ್ಮ ತತ್ವವನ್ನು ಸಮಾನಭಾವದಿಂದ
ತಿಳಿಯುವರು. ಯಾವ ಪರಮಾತ್ಮನಿಂದ ಈ ಸಮಸ್ತ ಪ್ರಪಂಚವೂ ವ್ಯಾಪಿಸಿರುವುದೋ ಆ ಒಂದೇ ಮಹಾತತ್ವ
ಸ್ವರೂಪನಾದ ಪರಮಾತ್ಮನು ಸಮಸ್ತ ಚರಾಚರ ಪ್ರಾಣಿಗಳಲ್ಲಿಯೂ ವಾಸವಾಗಿರುವನು. ಸಮಸ್ತ
ಪ್ರಾಣಿಗಳಲ್ಲಿಯೂ ಆತ್ಮತತ್ವವು ಇರುವುದೆಂದೂ ಎಲ್ಲ ಪ್ರಾಣಿಗಳೂ ಆತ್ಮತತ್ವದಲ್ಲಿ ಇರುವುದೆಂದೂ
ಯಾವಾಗ ಜೀವನು ತಿಳಿಯುವನೋ ಆಗ ಜೀವನು ಪರಬ್ರಹ್ಮ ಸ್ವರೂಪನಾಗುವನು. ಎಲ್ಲಿಯಪರ್ಯಂತವಾಗಿ
ಮನಸ್ಸಿನಲ್ಲಿ ಆತ್ಮಸ್ವರೂಪವನ್ನು ಧ್ಯಾನಮಾಡುತ್ತಿರುವನೋ ಆಲ್ಲಿಯ ಪರ್ಯಂತವಾಗಿ ಆ ಮನಸ್ಸು ಆತ್ಮತತ್ವದಲ್ಲಿರುವದು.
ಯಾವ ಜೀವನು ಯಾವಾಗಲೂ, ತನ್ನ ಮನಸ್ಸನ್ನು ಆತ್ಮತತ್ವದಲ್ಲಿಯೇ
ನೆಲಗೊಳಿಸುವನೋ ಆಗ ಅವನು ಮುಕ್ತನಾಗುವನು.
ವಿವರಣೆ:- ವ್ಯಾಸರು
ವಿವರಿಸಿರುವ ಆತ್ಮಜ್ಞಾನ ಮತ್ತು ಸಂಸ್ಕೃತವನ್ನು ಅಕ್ಷರ ವ್ಯಾಖ್ಯಾನದಿಂದ ತಿಳಿದು ಕೊಂಡ ಅಂಶಗಳು
ಒಂದಕ್ಕೊಂದು ಪೂರಕವಾಗಿವೆ. “ಅಕ್ಷರಂ ಚ ಕ್ಷರಂ ಚೈವ ದ್ವೇಧಾ ಭಾವೋಅಯಮಾತ್ಮನಃ | ಕ್ಷರಃ ಸರ್ವೇಷು ಭೂತೇಷು ದಿವ್ಯಂ ತ್ವಮೃತಮಕ್ಷರಂ ||” ಎಂದು ಅಕ್ಷರ ಮತ್ತು ಕ್ಷರ ರೂಪವಾದ ಆತ್ಮವನ್ನು ಹೀಗೆ ಹೇಳುತ್ತಾರೆ, “ಕ್ಷರ, ಅಕ್ಷರ ಎಂಬದಾಗಿ ಅತ್ಮಸ್ವರೂಪವು ಎರಡು
ಬಗೆಯಾಗಿರುವದು. ಸಮಸ್ತ ಪ್ರಾಣಿಗಳಲ್ಲಿಯೂ ಇರುವ ಆತ್ಮತತ್ವವು ಪ್ರಾಣಿಗಳ ನಾಶದಿಂದ ಕಾಣದೆ
ಹೋಗುವದರಿಂದ ಕ್ಷರವೆನಿಸುವುದು. ನಾಶರಹಿತವಾದ ಶ್ರೇಷ್ಠವೂ ಸರ್ವವ್ಯಾಪಿಯೂ ಆದ ತತ್ವವೇ
ಅಕ್ಷರವೆನಿಸುವದು”.
ಈ
ಬಗ್ಗೆ ನಾರಾಯಣ ಸೂಕ್ತದಲ್ಲಿನ ಕೆಲವು ಶ್ಲೋಕಗಳ ಅರ್ಥವನ್ನು ಗಮನಿಸಿ
ಅಧೋ
ನಿಷ್ಟ್ಯಾ ವಿತಸ್ತ್ಯಾಂತೇ ನಾಭ್ಯಾಮುಪರಿ ತಿಷ್ಠತಿ ।
ಜ್ವಾಲಮಾಲಾಕುಲಂ
ಭಾತಿ ವಿಶ್ವಸ್ಯಾssಯತನಂ ಮಹತ್ ॥ ಶ್ಲೋಕ
7
ಭಾವಾರ್ಥ:- ಕಂಠಮೂಲದ
ಕೆಳಗೆ ಮತ್ತು ನಾಭಿಯಿಂದ ಹನ್ನೆರಡು ಅಂಗುಲಗಳ ಮೇಲೆ ಹೃದಯವಿರುವುದು; ಜ್ವಾಲಮಾಲೆಗಳಿಂದ ಸುತ್ತಲ್ಪಟ್ಟ ಆ ಮಹತ್ತಾದ ಆಯತನವು ಅದರಲ್ಲಿ ಪ್ರಕಾಶಿಸುತ್ತಾ
ಇರುವುದು.
ಸನ್ತತಂ
ಶಿಲಾಭಿಸ್ತು ಲಂಬತ್ಯಾಕೋಶಸನ್ನಿಭಮ್ |
ತಸ್ಯಾನ್ತೇ
ಸುಷಿರಂ ಸೂಕ್ಷ್ಮಂ ತಸ್ಮಿನ್ ಸರ್ವಂ ಪ್ರತಿಷ್ಠಿತಂ ॥ ಶ್ಲೋಕ
-8
ಭಾವಾರ್ಥ:- ನಾಡಿಗಳಿಂದ
ಸುತ್ತಲ್ಪಟ್ಟ ಹೃದಯವು ಕಮಲದ ಮೊಗ್ಗಿನಂತೆ ತೂಗಾಡುತ್ತಿರುವುದು; ಅದರ
ಸಮೀಪದಲ್ಲಿ ಸೂಕ್ಷ್ಮವಾದ ಸುಷುಮ್ನಾ ನಾಡಿ ಇರುವುದು; ಅಲ್ಲಿ
ಎಲ್ಲವೂ ಇರುವುದು.
ತಸ್ಯ
ಮಧ್ಯೇ ಮಹಾನಗ್ನಿರ್ವಿಶ್ವಾರ್ಚಿರ್ವಿಶ್ವತೋಮುಖಃ |
ಸೋsಗ್ರಭುಗ್ವಿಭಜನ್ತಿಷ್ಠನ್ನಾಹಾರಮಜರಃ ಕವಿಃ।
ತಿರ್ಯಗೂರ್ಧ್ವಮಧಃ
ಶಾಯೀ ರಶ್ಮಯಸ್ತಸ್ಯ ಸಂತತಾ || ಶ್ಲೋಕ
-9
ಭಾವಾರ್ಥ:- ಅದರ
ಮಧ್ಯದಲ್ಲಿ ಬಹು ಜ್ವಾಲೆಗಳುಳ್ಳ ವಿಶ್ವತೋ ಮುಖವಾದ (ಶಕ್ತಿಯುತವಾದ ಅಮೃತವನ್ನು ಕರೆಯುವ ಗರ್ಭದಲ್ಲಿನ
ಹಿರಿಮೆ) ಮಹಾಗ್ನಿ ಇರುವುದು; ಅದು ತನಗೆ ಅರ್ಪಿಸಿದ ಆಹಾರವನ್ನು ಜೀರ್ಣಿಸಿಕೊಂಡು (ದೇಹದ ಇತರ ಭಾಗಗಳಿಗೆ)
ಹಂಚುತ್ತದೆ; ಅದು ಸ್ವತಃ ಜೀರ್ಣವಾಗದೆ ಜ್ಞಾನವುಳ್ಳದ್ದಾಗಿದೆ;
ಅದು ಎಲ್ಲಾ ಕಡೆಗಳಲ್ಲಿಯೂ ವ್ಯಾಪ್ತವಾಗಿ ತನ್ನ ಕಿರಣಗಳನ್ನು ಪ್ರಸರಿಸುವುದು.
ಸಂತಾಪಯತಿ
ಸ್ವಂ ದೇಹಮಾಪಾದತಲಮಸ್ತಶಕಃ |
ತಸ್ಯ
ಮಧ್ಯೇ ವಹ್ನಿಶಿಖಾ ಅಣೀಯೋರ್ಧ್ವಾ ವ್ಯವಸ್ಥಿತಃ ॥ ಶ್ಲೋಕ 10
ಭಾವಾರ್ಥ:- ಅದು
ಕಾಲಿನಿಂದ ತಲೆಯವರೆಗೆ ತನ್ನ ದೇಹವನ್ನು ಶಾಖವಾಗಿಟ್ಟಿರುವುದು; ಅದರ
ಮಧ್ಯದಲ್ಲಿ ಅತೀ ಸೂಕ್ಷ್ಮವಾದ ಒಂದು ಅಗ್ನಿಯ ಜ್ವಾಲೆಯು ಮೇಲಕ್ಕೇಳುವುದು.
ತಸ್ಯಾಃ
ಶಿಖಾಯಾ ಮಧ್ಯೇ ಪರಮಾತ್ಮಾ ವ್ಯವಸ್ಥಿತಃ |
ಸ
ಬ್ರಹ್ಮ ಸ ಶಿವಃ ಸ ಹರಿಃ ಸೇಂದ್ರಃ ಸೋsಕ್ಷರಃ ಪರಮಃ ಸ್ವರಾಟ್ - ಶ್ಲೋಕ 12
ಭಾವಾರ್ಥ:- ಈ
ಅಗ್ನಿಜ್ವಾಲೆಯ ಮಧ್ಯದಲ್ಲಿ ಪರಮಾತ್ಮನು ಪ್ರತಿಷ್ಠಿತನಾಗಿರುವನು; ಅವನೇ
ಬ್ರಹ್ಮ, ಅವನೇ ಶಿವ, ಅವನೇ ಇಂದ್ರ,
ಅವನೇ ಅಕ್ಷರ, ವಿಶ್ವಾತೀತ ಮತ್ತು ಸ್ವರಾಟ್.
ಯಥಾ
ಪರಿಚಿತಶ್ಚಾಯಂ ವಾಯುರ್ವೈ ವಿಶ್ವತೋ ಮುಖಃ ।
ಪರಿಧ್ಯಾಯಮಾನಃ
ಸಂರುದ್ಧಃ ಶರೀರೇ ಕಲ್ಮಿಷಂ ದಹೇತ್ ॥
ಶ್ರೀಮದ್ವಾಯುಪುರಾಣ
ಅಧ್ಯಾಯ 10-84
ಭಾವಾರ್ಥ:- ಸರ್ವತ್ರ
ಸಂಚರಿಸುವ ವಾಯುವನ್ನು ಪ್ರಾಣಾಯಾಮದ ಅಭ್ಯಾಸದಿಂದ ಶರೀರದಲ್ಲಿ ನಿರೋಧಮಾಡಿದರೆ ಅದು ಮನುಷ್ಯನ
ದೇಹಗತವಾದ ಸಕಲ ದೋಷಗಳನ್ನೂ ಪರಿಹರಿಸುತ್ತದೆ. (ನಿರೋಧಹ ಎಂಬ ಸಂಸ್ಕೃತದ ಅಕ್ಷರಶಃ ಅರ್ಥ "ಹೊಳಪನ್ನು
ಹಿಮ್ಮುಖಕ್ಕೆ ಕರೆಯುವ ಸದ್ಗುಣ" ಎಂದು ಬರುತ್ತದೆ. ಇಲ್ಲಿ ಹೊಳಪಿನ ವಾಯುವನ್ನು ಸುಷುಮ್ನಾ
ನಾಡಿಗೆ ಕರೆಯುವ ಆಚಾರವೇ ನಿರೋಧ ಎಂಬುದಾಗಿದೆ.)
ಶೈವರ ಮತ್ತು ಇತರರ ಅಭಿಮತವೂ ಬಿನ್ನವಾದುದ್ದಲ್ಲ.
ವಿಶ್ವತೋ
ಎಂದರೆ - (ಶಕ್ತಿಯುತವಾದ ಅಮೃತವನ್ನು ಕರೆಯುವ ಗರ್ಭದಲ್ಲಿನ ಹಿರಿಮೆ)
ವಿಶ್ವತೋ
ಭಾಸಮಾನೋsಪಿ
ವಿಶ್ವಮಾಯಾವಿಲಕ್ಷಣಃ |
ಪರಮಾತ್ಮಾ
ಸ್ವಯಂಜ್ಯೋತೀರೂಪೋ ಜೀವಾತ್ಮನಾಂ ಭವೇತ್ ॥
ಸಿದ್ದಾಂತಶಿಖಾಮಣಿ
18-35
ಭಾವಾರ್ಥ:- ವಿಶ್ವಮಾಯಾವಿಲಕ್ಷಣನಾದ
ಪರಮಾತ್ಮನು ಜೀವಾತ್ಮರಲ್ಲಿ ಸರ್ವತ್ರ ಪ್ರಕಾಶಮಾನನಾದರೂ, ಸ್ವಯಂಜ್ಯೋತಿಃ
ಸ್ವರೂಪನಾಗಿಯೇ ಪ್ರಕಾಶಿಸುವನು.
“ಎತ್ತೆತ್ತ ನೋಡಿದರೆ ನೀನೇ, ದೇವಾ ಸಕಲ ವಿಸ್ತಾರದ
ರೂಹು ನೀನೇ, ದೇವಾ ವಿಶ್ವತಃ ಚಕ್ಷು ನೀನೇ, ದೇವಾ ವಿಶ್ವತೋ ಮುಖ ನೀನೇ, ದೇವಾ ವಿಶ್ವತೋ ಪಾದ ನೀನೇ,
ದೇವಾ ಕೂಡಲ ಸಂಗಮದೇವಾ” – ಬಸವಣ್ಣ
“ಹೃದಯದಲ್ಲಡಗಿರ್ಪ ಈಶನ ತಿಳಿಯದೆ, ಕಲ್ಲಿಗೆಲ್ಲ ಮುಗಿವ
ಜೀವಿಗಳಿರ, ಕಲ್ಲಿನೊಳೇನಿಹುದು ಜೀವದೊಳಲ್ಲದೆ, ವಿಶ್ವತೋಭಿರಾಮ ಕೇಳೊ ವೇಮಾ.
ದೇವನೆನಲು ಬೇರೆ ದೇಶದೊಳಿರ್ಪನೇ, ದೇವಿಯೊಡನೆ ಸತತ
ದೇಹದೊಳಗೆ, ವಾಹನಂಗಳೇರಿ ಹೊಡೆಯುತಲಿರ್ಪನು, ವಿಶ್ವತೋಭಿರಾಮ ಕೇಳೊ ವೇಮಾ” – ವೇಮನ್ನ
ಪ್ರಾಣ
ವಿದ್ಯೆ ಪುರುಷ ಸೂಕ್ತದಲ್ಲೂ ಎಲ್ಲೆಲ್ಲೂ ವ್ಯಕ್ತವಾಗಿದೆ.
ಕೂರ್ಮ
ಪುರಾಣ (71-66):- ನೀನು ವಿಶ್ವತೋ (ಶಕ್ತಿಯುತವಾದ ಅಮೃತವನ್ನು
ಕರೆಯುವ ಗರ್ಭದಲ್ಲಿನ ಹಿರಿಮೆ) ಮುಖನಾಗಿ ಸರ್ವಭೂತಗಳ ಹೃದಯ ಗುಹೆಯ ಒಳಗೆ ಸಂಚರಿಸುತ್ತೀಯೆ. ನೀನು
ಯಜ್ಞ ಸ್ವರೂಪನಾಗಿದ್ದೀಯೆ ಮತ್ತು ನೀನು ವಷಟ್ಕಾರ ಜಲ ತೇಜಸ್ಸು ರಸ ಅಮೃತ ಮುಂತಾದವುಗಳ ಸ್ವರೂಪನೂ
ಆಗಿದ್ದೀಯೆ. (ಸೂರ್ಯನನ್ನುದ್ದೇಶಿಸಿ ಹೇಳಿದ್ದು ಎಂದು ಅಲ್ಲಿ
ವ್ಯಕ್ತವಾಗುತ್ತದೆ, ಆದರೆ ಇದರಲ್ಲಿ ಅಕ್ಷರ ರೀತಿಯ ಅರ್ಥ
ಬರುತ್ತದೆ.) “ಮುಖ” ಎಂಬ ಸಂಸ್ಕೃತದ ಪದಕ್ಕೆ “ಇಂದ್ರಿಯ ಅಂಗದ ದಾಸ್ಯದಿಂದ ಅಂತಿಮ ವಿಮೋಚನೆ” ಎನ್ನುವ ಅರ್ಥ ಇದೆ.
ಪುರುಷ
ಸೂಕ್ತ
“ಬ್ರಾಹ್ಮಣೋ ಅಸ್ಯ ಮುಖ ಮಾಸೀತ್”
ಎಂಬುದಕ್ಕೆ ಅಕ್ಷರ ಅರ್ಥ “ನೀರು, ಬೆಂಕಿ, ಜೀವ ಉಸಿರು, ವೈದ್ಯ, ಮಾಂತ್ರಿಕ
ಸೂತ್ರ ಜ್ಞಾನ ಕರೆದು, ಜೀವ ಉಸಿರು ಧ್ಯಾನ ಸೇರಿ, ಇಂದ್ರಿಯ ಅಂಗದ (ದಾಸ್ಯದಿಂದ)
ಅಂತಿಮ ವಿಮೋಚನೆಯ ಬೆಳಕು ಅಮೃತವನ್ನು ಬಂದಿಸುತ್ತದೆ.”
“ಬಾಹೂ ರಾಜನ್ಯಃ ಕೃತಃ” ಎಂಬುದಕ್ಕೆ ಅಕ್ಷರ
ಅರ್ಥ “ಅವಿಭಜಿತ ಗಂಜಿ ಅಥವ ಗಾಳಿಯಿಂದ ಬಂದ ತೊಗಟೆ (ಮೂಲಿಕೆ) ನೀಡುವ ನೀರು ಮತ್ತು ಜೀವ ಉಸಿರು
ಅಮೃತವನ್ನು ತಯಾರಿಸುವುದು”.
“ಊರೂ ತದ್ ಆಸ್ಯ ಯದ್ ವೈಶ್ಯಃ” ಎಂಬುದಕ್ಕೆ
ಅಕ್ಷರ ಅರ್ಥ, “ಗರ್ಭದಲ್ಲಿ ಹಮ್ ಶಬ್ದ ಹಿಡಿತಕ್ಕೆ ಕರೆದು ಜೀವ
ಉಸಿರಾಟವನ್ನು ನೀಡುತ್ತದೆ ಮತ್ತು ಬೆಳಕನ್ನು ಸೇರುವ ಉಡುಗೊರೆಯನ್ನು ನೀಡುತ್ತಾ ವಿಭಾಗಿಸುವ
ಚಲನೆಯನ್ನು ಶಕ್ತಿಯುತವಾಗಿ ಕರೆಯುವುದು”
“ಪದಾ ಬ್ಯಂ ಶೂದ್ರೋ ಅಜಾಯತ” ಎಂಬುದಕ್ಕೆ ಅಕ್ಷರ ಅರ್ಥ “ಆಸರೆಗಾಗಿ ಶುದ್ಧೀಕರಿಸುವ
ನೀರನ್ನು ರಕ್ಷಿಸುವುದು, ಬೆಂಕಿಯನ್ನು ತ್ವರಿತವಾಗಿ
ಉತ್ಪಾದಿಸುವುದು, ಜೀವ ಉಸಿರು ತಾಯಿ ಗಾಳಿ ಅಮೃತವನ್ನು ಕರೆಯುತ್ತದೆ”
ಮಂತ್ರೋಪದೇಶ
ಮಂತ್ರ ಎಂದರೆ
ಸಂಸ್ಕೃತದ ಅಕ್ಷರಾರ್ಥದಲ್ಲಿ "ವರ್ಣಿಸುವ (ಶ್ಲಾಘಿತ) ಮೂರು ಮಾಂತ್ರಿಕ ಸೂತ್ರ" ಎಂದು
ಬರುತ್ತದೆ. ಇನ್ನೊಂದು ವ್ಯಾಖ್ಯಾನದಲ್ಲಿ ಮನ್-ತಿಳಿದವನನ್ನು, ತ್ರ-ರಕ್ಷಿಸು
ಎಂಬುದಾಗಿ ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ. ಇನ್ನೊಂದು ರೀತಿಯಲ್ಲಿ ಮಹಾನುಭಾವರಿಂದ
ದೃಷ್ಟವಾಗಿ ಮಹಾಫಲಪ್ರದವಾದ ವರ್ಣಕ್ಕೆ ಅಥವಾ ವರ್ಣಸಮೂಹಕ್ಕೆ ಮಂತ್ರವೆಂದು ಹೆಸರು ಎಂದಿದ್ದಾರೆ.
ಕೆಲವು ಒಂದೊಂದೇ ಅಕ್ಷರದ ಮಂತ್ರಗಳೂ ಇವೆ, ಎರಡು-ಮೂರು, ಐದು, ಆರು, ಎಂಟು,
ಹನ್ನೆರಡು ಹೀಗೆ ಅನೇಕ ವರ್ಣಗಳುಳ್ಳ ಮಂತ್ರಗಳೂ ಇವೆ. ಮಂತಾರಂ ತ್ರಾಯತೇ ಇತಿ
ಮಂತ್ರಃ ಅಂದರೆ, ಆದನ್ನು ತಿಳಿದವನನ್ನು ರಕ್ಷಿಸುವುದರಿಂದ ಅವಕ್ಕೆ
ಮಂತ್ರ ಎಂಬ ಹೆಸರು ಬಂದಿದೆ ಎನ್ನುತ್ತಾರೆ ವಿದ್ವಾಂಸರು. ಪುರಂದರ ದಾಸರು ತಮ್ಮ ಕೀರ್ತನೆಯಲ್ಲಿ "ತಂತ್ರವನು
ಅರಿಯದೆ ಮಂತ್ರ ಮಾಡುವ ಭ್ರಷ್ಟ ಮಂತ್ರವಿಲ್ಲದೆ ವಿಪ್ರನತಿ ಭ್ರಷ್ಟನು ಅಂತರವನರಿಯದೆ
(ಅಂತರಂಗವನ್ನರಿಯದೆ) ನುಡಿದವನು ಭ್ರಷ್ಟ ......ಮತಿ (ಬುದ್ಧಿಶಕ್ತಿ) ಶುದ್ದಿಯಿಲ್ಲದ ಮಂತ್ರ
ತಂತ್ರಗಳೇಕೆ .........ಸ್ನಾನ ಮೌನಂಗಳಿಗೆ ಸಾಧನದ ಮಂತ್ರ,
ಜ್ಞಾನಿಗಳು ಮನದಿ ಧ್ಯಾನಿಪ ಮಂತ್ರ, ಹೀನಗುಣಂಗಳ ಹಿಂಗಿಸುವ ಮಂತ್ರ
......... ಸಕಲ ವೇದಾಂಗಳಿಗೆ ಸಾರವೇಣಿಪ ಮಂತ್ರ, ಮುಕುತಿ ಮಾರ್ಗಕೆ
ಇದೇ ಮೂಲ ಮಂತ್ರ ........ ". ವಿಪ್ರ ಎಂದರೆ ಬ್ರಾಹ್ಮಣ
ಅಲ್ಲ, ಧ್ಯಾನದಿ ತನ್ನ ದೇಹದಲ್ಲಿನ ಹೊಳಪನ್ನು ರಕ್ಷಿಸುವ
ಶ್ರೇಷ್ಟನು ಎಂದು ಅಕ್ಷರಾನುವಾದ ತೋರಿಸುತ್ತದೆ.
ಮಂತ್ರ ಉಪದೇಶ ಎಂದರೆ
ಮಂತ್ರದ ಹಿಂದೆ ಇರುವ ಗೋಪ್ಯ ವಿದ್ಯೆ ಬೋಧನೆ ಮಾಡುವುದಾಗಿದೆ. ಹಿಂದು ಗುರುಗಳು ಮಂತ್ರೋಪದೇಶಕ್ಕೆಂದು
ಯಾರಾದರೂ ಬಂದರೆ ಆತನ ಅರ್ಹತೆ, ಯೋಗ್ಯತೆಗಳನ್ನು ಒರೆ ಹಚ್ಚಿದ
ಮೇಲೆಯೇ ಉಪದೇಶ ನೀಡುತ್ತಿದ್ದರೆಂದು ಚರಿತ್ರೆ ಸಾರುತ್ತೆ, ಬಂದ
ವ್ಯಕ್ತಿಯ ಒಳ ಹೊರಗೆಲ್ಲವನ್ನೂ ಗುರುಗಳು ತಮ್ಮ ದಿವ್ಯದೃಷ್ಟಿಯಿಂದ ಅರಿತು ಬಿಡುತ್ತಿದ್ದರು.
ಅಂತಹ ಗೋಪ್ಯತೆಯೂ ಇಂದು ಅನೇಕ ತಪ್ಪು ವ್ಯಾಖ್ಯಾನಕ್ಕೆ ಮತ್ತು ಸ್ವಾರ್ಥತೆಗೆ ದಾರಿಯಾಗಿದೆ.
ಕೃತಿಯೊಂದರಲ್ಲಿ ಶ್ರೀ ವಿದ್ಯೇಶತೀರ್ಥರೂ ಹೀಗೆ ಹೇಳಿದ್ದಾರೆ, "ಅಜ್ಞಂ ಚ ಬಾಲಮಿತ್ಯಾಹುಃ ಪಿತೇತ್ಯೇವ ಚ ಮಂತ್ರದಮ್” ಎಂಬುದಾಗಿ ಹೇಳಿದ್ದಾರೆ ಇದರ
ಭಾವಾರ್ಥ, “ತಂದೆಯಾದವನು ತನ್ನ ಮಗುವಿಗೆ ಮಂತ್ರೋಪದೇಶ ನೀಡಲು
ತಿಳಿದರೆ ಮಾತ್ರ “ಪಿತಾ” ಎಂದು ಕರೆಸಿಕೊಳ್ಳಲು ಅರ್ಹನಾಗುವನು. ಒಂದೊಮ್ಮೆ ಅವನಿಗೆ ಉಪದೇಶನೀಡಲು
ತಿಳಿಯದಿದ್ದಲ್ಲಿ ಅವನು “ಬಾಲ” ಎಂದು ಟೀಕಿಸಲ್ಪಡುತ್ತಾನೆ. ಆದ್ದರಿಂದ ತಂದೆಯಾದವನು ತಾನು
ನಿಜವಾದ ತಂದೆಯೆನಿಸಬೇಕಾದರೆ ತನ್ನ ಮಗನಿಗೆ ಸರಿಯಾಗಿ ಮಂತ್ರೋಪದೇಶ ನೀಡಬೇಕು”.
ಮಂತ್ರೋಪದೇಶ ಗೋಪ್ಯವಾಗಿದ್ದು ಯಾಕೆ?
ಕೆಲವು
ಸಂಸ್ಕೃತ ಪದಗಳ ಬಗ್ಗೆ ಅನ್ವೇಷಣೆ ಮಾಡಿದಾಗ ಗುರುಗಳಿಂದ ಮಂತ್ರೋಪದೇಶ ಆಗುವ ವಿಧಾನವು ಬೆಳಕಿಗೆ
ಬರುತ್ತದೆ. ಮಂತ್ರೋಪದೇಶವು ಗೋಪ್ಯವಾಗಿ ಮಾಡುವುದಾಗಿದೆ ಎಂದು ಎಲ್ಲರೂ ಹೇಳುತ್ತಾರೆ. ಇದು
ಬಹಿರಂಗವಾಗಿಯೇ ಸನಾತನ ಹಿಂದು ಧರ್ಮೀಯರು ಹಿಂದೆ ಮಾಡುತ್ತಿದ್ದರು. ಕಲಿಯುವವರೆಗೆ ಬ್ರಹ್ಮ
ವಿದ್ಯೆ ಕಲಿತ ಮೇಲೆ ಕೋತಿ ವಿದ್ಯೆ ಮಾಡಿಕೊಳ್ಳುವ ಪರಿಪಾಟಲನ್ನು ತಡೆಯಲು ಹಾಗೂ ಕೆಲವು ಕ್ಷುದ್ರ
ಮನಸ್ಥಿತಿಯವರನ್ನು ಈ ಮಂತ್ರೋಪದೇಶದಿಂದ ತಡೆಯಲು, ಕಠೋರ ಮಾನಸಿಕತೆಯ
ಅಬ್ರಹಾಮಿಕ್ ಮತೀಯರನ್ನು ಮಂತ್ರ ರಹಸ್ಯದಿಂದ ದೂರ ಇಡಲು, ರಹಸ್ಯ
ಬೋಧನೆ ಜಾರಿಗೆ ಬಂದಿರುವ ಸಾಧ್ಯತೆ ಇದೆ. ಸನಾತನ ಧರ್ಮದ ರಹಸ್ಯಗಳು ಜ್ಞಾನಕ್ಕೆ ಮತ್ತು
ಆರೋಗ್ಯಕ್ಕೆ ಪೂರಕವಾದುದ್ದರಿಂದ ಕ್ರೂರಿಗಳ ಕೈಯಲ್ಲಿ ಜ್ಞಾನ ಮತ್ತು ಕ್ರೂರಿಗಳಿಗೆ ಆರೋಗ್ಯ
ಲಭ್ಯವಾದರೆ ಮಾನವ ಕುಲಕ್ಕೆ ಮುಳ್ಳಾಗುವುದು ಎಂಬ ಆಲೋಚನೆಯಲ್ಲಿ ಈ ಮಂತ್ರ ರಹಸ್ಯವನ್ನು ಗೋಪ್ಯವಾಗಿ ಇಡಲಾಗಿದೆ ಎಂದು ತರ್ಕಬದ್ದ
ದಿವ್ಯಾಲೋಚನೆ-ಯಿಂದ ತಿಳಿಯಬಹುದಾಗಿದೆ. ಕ್ರೂರತೆ ಮತ್ತು ಕಾನೂನು ಉಲ್ಲಂಘತೆ ಅತಿರೇಕಕ್ಕೆ ಹೋದಾಗ
ಅದು ಅಸಹ್ಯ ತರಿಸುವ ಮಟ್ಟಕ್ಕೆ ಹೋದಾಗ, ಸಭ್ಯ ಸಮಾಜ ಆಲೋಚಿಸುವ
ಮೊದಲ ಹೆಜ್ಜೆ ಅಂತಹ ಕ್ರೂರಿಗಳ ಮತ್ತು ಕಾನೂನು ಉಲ್ಲಂಘಿತರ ಭಹಿಷ್ಕಾರ. ಇಂತಹ ಭಹಿಷ್ಕಾರದ ಫಲವೇ
ಅಂತವರಿಂದ ದೈವ ರಹಸ್ಯ ಮೂಲ ಗೋಪ್ಯಾವಾಗಿಟ್ಟಿದ್ದು ಹಾಗೆಯೇ ಅದರ ಮೂಲ ಅರ್ಥದಲ್ಲಿ ಗೋಪ್ಯತೆ
ಇಟ್ಟಿದ್ದು.
ಎಲ್ಲಾ
ಸಾಹಿತ್ಯ ಮತ್ತು ಬೋಧನೆಗಳಲ್ಲಿ ಸತ್ಯವಾದ ಅರ್ಥ ಹುಡುಕ ಬೇಕು,
ಅದನ್ನು ಅರಿತುಕೊಳ್ಳಬೇಕು, ಆದರೆ ಅಂತಹ ಕಾರ್ಯವನ್ನು ಬದಿಗೊತ್ತಿ
ಸಾಹಿತ್ಯದ ಅಥವಾ ಶ್ಲೋಕಗಳ ಹಾಡುವಿಕೆ /ಪಠಣೆ ಮಾಡುವಿಕೆಗೆ ಮುಂದಾದುದ್ದೇ ಗೋಪ್ಯತೆಯ ಇನ್ನೊಂದು
ಹಾದಿ. ಸಂಸ್ಕೃತ ಶ್ಲೋಕಗಳ ಹಾಡುವಿಕೆ/ಪಠಣೆ ಆರೋಗ್ಯದಲ್ಲಿ ಉತ್ತಮತೆ ಮಾಡುವುದಿಲ್ಲ ಎಂಬುದು ನಮ್ಮ
ವಾದವಲ್ಲ. ಶ್ಲೋಕಗಳ ಹಾಡುವಿಕೆ/ಪಠಣೆಯಿಂದ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರಿ ಮಾನಸಿಕ ಮತ್ತು
ದೈಹಿಕ ಆರೋಗ್ಯದಲ್ಲೂ ಸುಧಾರಣೆ ಆಗುತ್ತದೆ. ಅದಕ್ಕಾಗಿಯೇ ಸನಾತನ ಋಷಿಗಳು ರಚಿಸಿದ ಅನೇಕ
ಗ್ರಂಥಗಳು ಇಂದಿಗೂ ಅದ್ಬುತವನ್ನು ಉಂಟು ಮಾಡುತ್ತಿರುವುದು. ಇದರ ಮಧ್ಯೆ ಮೂಲ ಅರ್ಥವನ್ನು
ತಿಳಿಸುವ ಅರ್ಥೈಸುವಿಕೆ ಬಗ್ಗೆ ಗಮನಹರಿಸಿದಾಗ ಆರೋಗ್ಯ ಮಾತ್ರವಲ್ಲ ಜ್ಞಾನ ಹೊಂದುವ ಆರೋಗ್ಯಕರ
ಮಾರ್ಗವು ತೆರೆದುಕೊಂಡು ಸನಾತನ ಹಿಂದು ತನ್ನ ಅಧ್ಯಾತ್ಮಿಕ ಮಾರ್ಗದಲ್ಲಿ ಜಗದ್ಗುರು ಆಗುತ್ತಾನೆ.
ಈ ಗೋಪ್ಯ ಮಂತ್ರಗಳ ಬಗ್ಗೆ ತಿಳಿಯುವ ಮುನ್ನ ಹಲವು ವಿಚಾರಗಳ ಬಗ್ಗೆ ತಿಳಿಯುವುದು ಅವಶ್ಯ. ಇದನ್ನು
ಪ್ರಾರಂಭದ ಹಲವು ಅಧ್ಯಾಯಗಳಲ್ಲಿ ವಿವರಿಸಿದ್ದೇನೆ.
ಯಜ್ಞೋಪವೀತದ
ಧಾರಣೆಯನಂತರ ಹುಡುಗನಿಗೆ "ಬ್ರಹ್ಮೋಪದೇಶ' ವನ್ನು ಮಾಡುತ್ತಾರೆ.
ಇದಕ್ಕೆ ಗಾಯತ್ರೀ ಮಂತ್ರವೆಂದು ಹೆಸರು. ವಟುವು ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳುತಾನೆ. ಅವನ ಕಿವಿಯಲ್ಲಿ
ಬೇರೆಯವರಿಗೆ ಕೇಳಿಸದಂತೆ ನಿರ್ದೇಶಿಸುತಾನೆ. ತಂದೆಯೇ ಈ ಮಂತ್ರವನ್ನು ಉಪದೇಶಿಸುತ್ತಾನೆ. ಅವನೇ
ಮೊದಲ ಗುರು. ಇದು ರಹಸ್ಯ ಮಂತ್ರ ತಂದೆಯಿಂದ ಮಗನಿಗೆ ನೇರವಾಗಿ ಪ್ರವಹಿಸುವ ಮಂತ್ರ. ಗಾಯತ್ರೀ
ಮಂತ್ರವೇ ಸೂರ್ಯೋಪಾಸನೆಯ ಮಂತ್ರ. "ಓಂ ಭೂರ್ಭುವಸ್ಸುವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ
ನಃ ಪ್ರಚೋದಯಾತ್" (ಇದನ್ನು "ಪಂಚಾವಸಾನ ಗಾಯತ್ರೀ” ಎನ್ನುತ್ತಾರೆ) ಇದರ ಅರ್ಥ
ಅಕ್ಷರಾನುವಾದದಲ್ಲಿ "ಭೂಮಿಯ ಮೇಲೆ ಬೀಸಿದ ಘನ ರೂಪವಲ್ಲದ, ಘರ್ಜಿಸುವ,
ಹೊಳೆಯುವ ಕಿರಣವುಳ್ಳ, ಉತ್ಕೃಷ್ಟವಾದ ದೈವಿಕ ಆಸ್ತಿಯಾದ ಗಾಳಿಯಿಂದ ಅತ್ಯಂತ ಶ್ರೇಷ್ಠವಾದ ಓಂ
ಮೂಲವನ್ನು ಮಾನಸಿಕತೆಯ ಈ ಬುದ್ಧಿವಂತಿಕೆಯಲ್ಲಿ ನೋಡುವೆನು ಪೋಷಿಸುವೆನು." ಹೀಗೆ ಮಂತ್ರದ
ಹಿನ್ನೆಲೆ ಪ್ರಾಮುಖ್ಯತೆ ಬಹಳ ಮುಖ್ಯವಾದುದ್ದು.
ಇಲ್ಲಿವರೆಗೆ
ವಿದ್ವಾಂಸರು ಕೊಟ್ಟಿರುವ ಅರ್ಥವನ್ನು ಗಮನಿಸಿ, ಆ ಸವಿತೃ ದೇವನ
ಶ್ರೇಷ್ಠತಮವಾದ | ತೇಜಸ್ಸನ್ನು ಕುರಿತು ನಾನು ಧ್ಯಾನಿಸುವೆನು. ಪ್ರಚೋದಿಸಲಿ
(ಪ್ರೇರೇಪಸಲಿ) ಆ ದೇವ ನಮ್ಮ ಬುದ್ಧಿಗಳ. ವಿದ್ವಾಂಸರ ಪ್ರಕಾರ ಗಾಯತ್ರೀ ಮಂತ್ರವನ್ನು ೫
ಭಾಗಗಳಾಗಿ ಉಜ್ಜಾರಮಾಡಿದರೆ ಗಾಯತ್ರಿಯು ಪಂಚಪಾತಕಗಳನ್ನು ನಾಶಮಾಡುತ್ತದೆ. ಹಾಗೆ ಮಾಡದಿದ್ದರೆ
ಪಂಚಪಾತಕಗಳನ್ನು ತಂದು-ಕೊಡುತ್ತದೆ. ಓಂ॥ ಭೂರ್ಭುವಸ್ವಃ॥ ತತ್ಸವಿತುರ್ವರೇಣ್ಯಂ॥ ಭರ್ಗೋ
ದೇವಸ್ಕಧೀಮಹಿ॥ ಧಿಯೋ ಯೋ ನಃ ಪ್ರಚೋದಯಾತ್॥ (ಇಲ್ಲಿ ಗಾಯತ್ರಿ ಮಂತ್ರ ಮಾರ್ಗದರ್ಶಿ ಸೂತ್ರ
ಮಾತ್ರ ನಿಜ, ಆದರೆ ಆಸಲು ಗಾಯತ್ರಿ ಮಂತ್ರ “ಸೋಹಂ” “ಹಂಸ” “ಓಂ ಸೋ ಹಮ್”
ಆಗಿರುತ್ತದೆ.) ಸಾವಿರಾರು ವರ್ಷದ ಈ ಸನಾತನ ಧರ್ಮದ ಈ ಪಯಣದಲ್ಲಿ ಇಂತಹ ತಪ್ಪು ಗ್ರಹಿಕೆ
ಆಗಿರುವುದು ಯಾವ ದೊಡ್ಡ ಲೋಪವೂ ಅಲ್ಲ, ಅದಕ್ಕೆ ಕೃಷ್ಣ ಹೇಳಿದ್ದು
ಹೀಗೂ ಇರಬಹುದು, “ಪವಿತ್ರಾಣಾಯ ಸಾಧೂನಾಮ್ ವಿಮರ್ಶಾಯ ಚ
ದುಷ್ಕೃತಾಮ್, ಧರ್ಮ ಸಂಸ್ತಾಪನಾರ್ತಾಯ ಸಂಭವಾಮಿ ಕ್ಷಣೆ
ಕ್ಷಣೇ.” ಪವಿತ್ರ ಸಾಧು ಸಜ್ಜನರು
ದುಷ್ಕೃತ್ಯಗಳನ್ನು ವಿಮರ್ಶೆ ಮಾಡುತ್ತಲೇ ಧರ್ಮ ಸಂಸ್ಥಾಪನೆಗೇ ಕ್ಷಣ ಕ್ಷಣಕ್ಕೂ ಅವತರಿಸುವೆನು.
ನಾನು ನಿನ್ನಲ್ಲೇ ಇರುವೆನು ಎಂಬುದು ಕೃಷ್ಣನೇ
ಹೇಳಿರುವ ಕಾರಣ ಮೇಲಿನ ಅರ್ಥ ಸಾಧ್ಯತೆಯೂ ಇಲ್ಲವೆನ್ನಲಾಗದು.
ಸಾಯಣಾಚಾರ್ಯರ
ಭಾಷ್ಯ: “ಯಾವ ಪರಮಾತ್ಮನು ನಮ್ಮ ಬುದ್ಧಿ ವೃತ್ತಿಗಳನ್ನು ಪ್ರೇರಿಸುತ್ತಲಿರುವನೋ
ಪ್ರಕಾಶಮಾನನಾಗಿಯೂ, ಸರ್ವಾಂತರ್ಯಾಮಿಯಾಗಿಯೂ, ಸರ್ವಪ್ರೇರಕನಾ ಗಿಯೂ, ಜಗತ್ ಸೃಷ್ಟೃವಾಗಿಯೂ ಇರುವ
ಪರಮೇಶ್ವರನ ಆತ್ಮಭೂತವಾದಂಥ, ಶ್ರೇಷ್ಠವಾದ, ಸರ್ವಪ್ರಾಣಿಗಳಿಂದಲೂ ಉಪಾಸ್ಯವಾದ, ಅವಿದ್ಯಾ-ತತ್ಕಾರ್ಯನಾಶಕವಾದ,
ಸ್ವಯಂಪ್ರಕಾಶವಾದ ಪರಮಾತ್ಮನ ಸಂಬಂಧಿಯಾದ, ತೇಜಸ್ಸನ್ನು
ಧ್ಯಾನ ಮಾಡುತ್ತೇನೆ”.
ಶ್ರೀ ಶಂಕರಾಚಾರ್ಯರ
ವಿವರಣೆ : ಯಾವ ಸವಿತಾ ಸೂರ್ಯ ದೇವನು ನಮಗೆ ಭೇದಭಾವವಿಲ್ಲದೆ,
ಭಗವಂತನಲ್ಲಿ ಒಂದಾಗಲು ಯೋಗ್ಯವಾದ, ಅವಿದ್ಯಾನಾಶಕವಾದ,
ಪರಮಾತ್ಮನ ದರ್ಶನಪ್ರಾಪ್ತಿ ಮಾಡಿಕೊಳ್ಳಲು ಆ ಸವಿತೃದೇವನ ತೇಜಸ್ಸನ್ನು
ತಿಳಿಯಲು ಪ್ರೇರೇಪಿಸಲಿ. ಆ ಪ್ರಸಿದ್ಧನಾದ, ಸರ್ವಾಂತರ್ಯಾ-ಮಿಯೂ ಪರಮೇಶ್ವರನೂ, ಲೋಕಷ್ಟಸಿದ್ದನೂ, ಬುದ್ದಿ ಪ್ರೇರಕನೂ, ಮಹಾತೇಜಸ್ವಿಯೂ, ದಿವ್ಯಪ್ರಭೆಯನ್ನು ಬೀರುವವನೂ, ಕ್ರೀಡಾತ್ಮ-ಕನೂ, ಆಹ್ಲಾದಕರನೂ, ಮಾನವ
ಹೃದಯದಲ್ಲಿ ಅಜ್ಞಾನ ಅಂಧ ಕಾರವನ್ನು ನಾಶಮಾಡುವ ಪರಂಜ್ಯೋತಿಯೂ, ಪೂಜಾರ್ಹನೂ,
ಶ್ರವಣ, ಮನನ, ನಿದಿಧ್ಯಾಸನಕ್ಕೆ
ನಿಲುಕುವನನೂ, ಶಾಂತನೂ, ಅನಂದ ರೂಪಿಯೂ,
ದುಃಖ ಪರಿಹಾರಕನೂ, ಜಗತ್ಸಂಹಾ-ರಕರ್ತನೂ ಆದ ಆ ಪರಮಾತ್ಮನನ್ನು (ವಾಯುವನ್ನು) ಧ್ಯಾನರೂ-ಪದಲ್ಲಿ ಧಾರಣೆ ಮಾಡುತ್ತೇನೆ.
ಈ
ಮೇಲಿನ ಗಾಯತ್ರೀ ಮಂತ್ರ ನಮಗೆ ಮಾರ್ಗದರ್ಶನ ನೀಡುತ್ತದೆ. ನಾವು ಉಚ್ಚರಿಸಬೇಕಾದ ಗಾಯತ್ರೀ ಮಂತ್ರ
ಇದಲ್ಲ. ನಮ್ಮ ಉಸಿರಾಟದಲ್ಲೇ ಉದ್ಬವವಾಗಿರುವ ಮಂತ್ರ, ಸ ಹ, ಸೋ ಹಂ, ಹಂಸ, ಇದು
ಗಾಯತ್ರಿ ಮಂತ್ರವಾಗಿದೆ. ಇದರ ಜೊತೆಗೆ ಓಂ ಸೇರಿಸುವುದು ಪರಿಣಾಮಕಾರಿಯಾದ ಗಾಯತ್ರಿ
ಮಂತ್ರವಾಗಿದೆ. ಇದನ್ನು ಉಸಿರಾಟದೊಂದಿಗೆ ಜೋಡಿಸಿ ಧ್ಯಾನಿಸುವ ಕ್ರಮವೇ ಗಾಯತ್ರೀ ಮಹಾಮಂತ್ರವಾಗಲು
ದಾರಿಯಾಗುತ್ತದೆ. ಗಾಯತ್ರೀ ಮಹಾಮಂತ್ರವೂ ಸಹ
ಕುಂಡಲಿನಿಯೊಡನೆ ಆಳವಾದ ಸಂಬಂಧವನ್ನು ಪಡೆದಿರುತ್ತದೆ. ಕುಂಡಲಿನಿಯಿಂದ ಹುಟ್ಟುವ ಗಾಯತ್ರಿಯು
ಪ್ರಾಣಧಾರಿಣಿಯೂ, ಪ್ರಾಣವಿದ್ಯೆಯೂ ಆಗಿ ಮಹಾವಿದ್ಯೆಯಾಗಿದೆ ಎಂದು
ಯೋಗಶಾಸ್ತ್ರಗಳು ತಿಳಿಸಿರುತ್ತೆ. ಗೌತಮರು ಹೇಳಿರುವಂತೆ: “ಶ್ರೀಗಾಯತ್ರೀ ಮಂತ್ರವೇ ವೇದಕ್ಕೆ
ಮೂಲಾಧಾರ. ಗಾಯತ್ರೀ ಜಪ ಒಂದರಿಂದಲೇ ಯೋಗದ ಸಂಪೂರ್ಣ ಸಾಧನವಾಗುವುದು”. ರವೀಂದ್ರನಾಥ ಠಾಕೂರ್ ಹೀಗೆ
ಹೇಳುತ್ತಾರೆ: “ಆರೋಗ್ಯವನ್ನು ಬಯಸುವವನು ಶುದ್ಧ ವಾಯು ಸೇವನೆಗಾಗಿ ಸ್ವಚ್ಛಂದ ಬಯಲಿಗೆ ಹೋಗುವಂತೆ
ಗಾಯತ್ರೀ ಮಂತ್ರವನ್ನ ಜಪಿಸಿರಿ. ಇದು ಉದಾರವೂ, ಅತ್ಯಂತ ಸರಳವೂ ಆಗಿದೆ,
ಇದರಲ್ಲಿ ನಕಲಿತನವಿಲ್ಲ. ಬಾಹ್ಯ ಜಗತ್ತು ಹಾಗೂ ಆಂತರಿಕ ಬುದ್ಧಿ ಇವೆರಡೂ
ಅದರಲ್ಲಿವೆ.
ಓಂಕಾರನಾದದಲ್ಲಿ
ಗಾಯತ್ರೀ, ಸಾವಿತ್ರೀ, ಸರಸ್ಪತಿ ಎಂಬ
ಶ್ಶಕ್ತಿತ್ರಯರೂಪವಾದ ಮೂರು ಮಾತೃಗಳಿರುವುವು ಎಂದು ಸಂಗೀತ ಶಾಸ್ತ್ರದಲ್ಲಿ ಹೇಳಿದೆ. ಈ ಮೂರು
ಮಾತೃಕೆಗಳೇ ಸಪ್ತ ಮಾತೃಕೆಗಳಾಗಿ, ಸಪ್ತವ್ಯಾಹೃತಿ ಮತ್ತು ಸಪ್ತಸ್ವರಗಳೆನಿಸಿರುವವು.
ಒಂದು
ದಿನದಲ್ಲಿ ೨೧೬೦೦ ಉಚ್ಛ್ವಾಸ ನಿಶ್ವಾಸಗಳು ಆಗುತ್ತವೆ. ಇದನ್ನು ಯೋಗಿಗಳು ಹಂಸವೆಂದು
ಕರೆಯುತ್ತಾರೆ. ಸೋಹಂ, ಹಂಸಃ ಎಂಬುದೇ ಹಂಸ ಗಾಯತ್ರಿ ಮಂತ್ರ ಸಾಧಕ
ಯೋಗಿಯು ಪ್ರಾಣಾಪಾನಗಳ ಅನುಸಂಧಾನ ಮಾಡುವಾಗ ಇದನ್ನು ನುಡಿಯದಿದ್ದಾಗಲೂ ಜಪಿಸಿದಂತೆಯೇ ಆಗುತ್ತದೆ.
ಇದನ್ನು ಅಜಪಾ ಗಾಯತ್ರಿ, ಹಂಸ ಗಾಯತ್ರಿ ಎಂದೂ ಕರೆಯುತ್ತಾರೆ. ಹಂಸರೂಪಿ
ಭಗವಂತನನ್ನು "ಅವನೇ ನಾನು' (ಸೋಹಂ) ಎನ್ನುವ ಭಾವನೆಯಿಂದ
ಧ್ಯಾನಿಸಬೇಕು. ತಂತ್ರಸಾರದ ಶ್ಲೋಕವೊಂದು ಹೀಗಿದೆ : “ಪ್ರಥಮಾ ಪ್ರತಿಮಾ ಪೂಜಾ, ಜಪಸ್ತೋತ್ರಾದಿ ಮಧ್ಯಮಾ | ಉತಮಾ ಮಾನಸೀಪೂಜಾ । ಸೋಹಂ
ಪೂಜೋತ್ತಮೋತಮಾ॥“ ಅಂದರೆ, ಮೊದಲನೆಯದು ಪ್ರತಿಮಾಪೂಜೆ; ಇದಕ್ಕಿಂತ ಉತ್ತಮ ಮಂತ್ರ ಜಪವು ಇನ್ನು ಉತ್ತಮ ಮಾನಸ ಪೂಜೆ, ಅತ್ಯುನ್ನತ ಅವಸ್ಥೆ. "ಸೋಹಂ ಪೂಜೆ”.
ಶ್ವಾಸ
ಒಳಗೆ ಪ್ರವೇಶಿಸಿದಾಗ “ಸೋ” ಎನ್ನುವ ಶಬ್ದದಿಂದ, ಹೊರಗೆ ಬರುವಾಗ
“ಹಂ” ಶಬ್ದದಿಂದ ಚಲಿಸುತ್ತದೆ. ಈ ಎರಡು ಶಬ್ಧಗಳು ಸೇರಿ “ಸೋಹಂ” ಎನ್ನುವ
ಶಬ್ಧ ಏರ್ಪಟ್ಟಿದೆ. ಈ ಶಬ್ಧದಲ್ಲಿ ಮಹಿಮೆ ಇರುವುದು ಆದ್ದರಿಂದ ಇದನ್ನು ಮಂತ್ರ ಎಂದು ಹೇಳಿದ್ದಾರೆ
ಮತ್ತು ಅಕ್ಷರ ಸಮ್ಮೇಳನಗಳಿಂದ ಕೂಡಿಕೊಂಡಿದೆ ಆದ್ದರಿಂದ ಮಂತ್ರವೆಂದು ಹೇಳಲಾಗಿದೆ. “ಸೋಹಂ”
ಎನ್ನುವ ಮಂತ್ರವು ಆದಿಮಂತ್ರವಾಗಿ ಬದಲಾಗುತ್ತಿದೆ. ಅದು ಹೇಗೆಂದರೆ, “ಸೋ” ಎನ್ನುವ ಶಬ್ದದಲ್ಲಿ ಕೊನೆಯದಾಗಿ “ಓ” ಎನ್ನುವ ಶಬ್ದವಿದೆ. “ಹಂ” ಎನ್ನುವ
ಶಬ್ದದಲ್ಲಿ ಕೊನೆಯದಾಗಿ “ಮ್” ಎನ್ನುವ ಶಬ್ದವಿದೆ. ಒಂದು ಸಲ ಶ್ವಾಸ ಒಳಗೆ ಹೋಗಿ ಹೊರಗೆ ಬಂದರೆ
“ಸೋಹಂ” ಎನ್ನುವ ಮಂತ್ರ ಏರ್ಪಡುತ್ತಿದೆ. ಆ ಸೋಹಂ ಮಂತ್ರದಲ್ಲಿಯೇ “ಓಮ್” ಎನ್ನುವ ಶಬ್ದವು
ಒಳಪಟ್ಟಿದೆ. ಆದ್ದರಿಂದ “ಸೋಹಂ” ತಾಯಿ “ಓಮ್” ಶಿಶುವು. “ಓಂ” ಪ್ರಪಂಚ ಹುಟ್ಟುವಿಕೆಯಲ್ಲಿ
ಮೊದಲು ಹುಟ್ಟಿದ ಶಬ್ದವಾದ್ದರಿಂದ ಇದನ್ನು ಆದಿಮಂತ್ರ ಎಂದೂ ಹೇಳುತ್ತಾರೆ. ಶ್ವಾಸಕ್ಕೆ ಆಧಾರ
ಶರೀರದಲ್ಲಿ ಕಾಣಿಸದಿರುವ ಬ್ರಹ್ಮನಾಡಿಯಲ್ಲಿನ ಚೈತನ್ಯ. ಇದರಲ್ಲಿ ವ್ಯಾನ, ಸಮಾನ, ಉದಾನ, ಪ್ರಾಣ, ಅಪಾನ
ವಾಯುಗಳೆಲ್ಲವೂ ಸೇರ್ಪಡೆಯಾಗುತ್ತದೆ.
ಅಧ್ಬುತರಾಮಾಯಣದ ಹನ್ನೆರಡನೇ ಸರ್ಗ ಹೀಗೆ ಹೇಳಿದೆ:-
ಸೋಹಂ ಸರ್ವತ್ರಗಶ್ಯಾಂತೋ ಜ್ಞಾನಾತ್ಮಾ
ಪರಮೇಶ್ವರಃ।
ನಾಸ್ತಿಮತ್ಸರಮಂ ಭೂತಂ ಮಾಂ ವಿಜ್ಞಾಯ
ನಿಮುಚ್ಯತೇ ॥ 21
ಭಾವಾರ್ಥ:- ಆ ಸೋಹಂ ನಾದ ನಾನು ಎಲ್ಲಾ ಕಡೆಯಲ್ಲೂ ಇರುತ್ತೇನೆ. ನಾನು ಶಾಂತನು ಜ್ಞಾನಸ್ವರೂಪನು,
ಪರಮೇಶ್ವರನು, ನನಗಿಂತಲೂ ಬೇರೆಯಾದ ಭೂತನೇ ಇಲ್ಲ.
ನನ್ನನ್ನು ತಿಳಿಯುವುದರಿಂದಲೇ ಬಂಧವಿಮೋಚನೆಯಾಗುವುದು.
ಸೋಹಂ ಸೃಜಾಮಿ ಸಕಲಂ ಸಂಹರಾಮಿ ಸದಾ ಜಗತ್
।
ಮಾಯಾ ಮಾಯಾಮಯೋ ದೇವಃ ಕಾಲೇನ ಸಹ ಸಂಗತಃ
॥ 23
ಭಾವಾರ್ಥ:- ಸೋಹಂ ಆದ ನಾನು ಜಗತ್ತೆಲ್ಲನನ್ನೂ ಸೃಷ್ಟಿ ಮಾಡುತ್ತೇನೆ, ಮತ್ತು ನಾಶ ಮಾಡುತ್ತೇನೆ ಮತ್ತು ಮಾಯೆಯನ್ನು ಮಾಡುವವನೂ, ಮಾಯೆಯಿಂದ ಕೂಡಿದವನೂ ಆಗಿ ಕಾಲದಿಂದಲೂ ಕೂಡಿಕೊಂಡಿರುವೆನು
ಅಧ್ಬುತರಾಮಾಯಣದ
ಹದಿಮೂರನೇ ಸರ್ಗ ಹೀಗೆ ಹೇಳಿದೆ:-
ಸೋಹಂ ಪ್ರೇರಯಿತಾ ದೇವಃ
ಪರಮಾನಂದಮಾಶ್ರಿತಃ ।
ತಿಷ್ಠಾಮಿ ಯೋಗೀ ಸತತಂ ಯುಸ್ತದ್ವೇದ ಸ
ವೇದವಿತ್ ॥ 30
ಭಾವಾರ್ಥ:- ಸೋಹಂ ಆದ ನಾನು ಪರಮಾನಂದವನ್ನು ಹೊಂದಿ ಅವೆಲ್ಲಕ್ಕೂ ಪ್ರೇರಕನಾಗಿದ್ದೇನೆ. ಆ
ರೀತಿಯಲ್ಲಿ ಪ್ರೇರಿಸುತ್ತ ಯೋಗವನ್ನು ಮಾಡುತ್ತಲೇ ಇರುತ್ತೇನೆ. ಅದೆಲ್ಲವನ್ನೂ ತಿಳಿಯುವವನೇ ವೇದವನ್ನು
ಬಲ್ಲವನು.
ಅಜಪ
ಎಂದರೆ ಮನಸ್ಸಿನಲ್ಲಿ ಮೌನವಾಗಿ ಮಂತ್ರವನ್ನು ಹೇಳುವುದು,
ಮಂತ್ರವನ್ನು ಜಪಿಸುವುದು ಎಂದರೆ ಮಂತ್ರವನ್ನು ಬಾಯಿಂದ ಉಚ್ಚರಿಸುವುದು ಆಗಿದೆ. ಧ್ಯಾನದಲ್ಲಿ
ಮಂತ್ರಗಳನ್ನು ಮೌನವಾಗಿ ಮನಸ್ಸಿನಲ್ಲಿ ಜಪಿಸುತ್ತಾ ಉಸಿರಾಟದ ಮೇಲೆ ನಮ್ಮ ಗಮನವನ್ನು
ಕೇಂದ್ರೀಕರಿಸುವುದು ಕುಂಡಲಿನಿ ಪ್ರಾಣಾಯಾಮದ ಸತ್ಯ ಸಾಧನೆ ಆಗಿರುತ್ತದೆ. ಗಾಯತ್ರಿ ಅಜಪ ಮಂತ್ರ "ಸೋಹಮ್" ಅಥವಾ
"ಹಂಸ", ಅಜಪ ವಿಧಾನದಲ್ಲಿ ಅಂದರೆ ಮಾನಸಿಕವಾಗಿ ಸ ಅಥವಾ
ಸೋ ಎಂದು ಉಸಿರು ಮೂಲಾಧಾರದವರೆಗೆ ಒಳ ಎಳೆಯುವುದು "ಹಮ್"
ಎಂದು ಮೂಲಾಧಾರದಿಂದ ಸಹಸ್ರಾರದವರೆಗೆ ಉಸಿರನ್ನು ಸುಷುಮ್ನ ನಾಡಿಯಲ್ಲಿ ಹರಿಸುವುದು. ಅಥವಾ
ಉಸಿರನ್ನು ಮೂಲಾಧಾರದಿಂದ ಆಜ್ಞಾ ಚಕ್ರದವರೆಗೆ ಇಡಾ ಮತ್ತು ಪಿಂಗಳ ನಾಡಿ ಮುಖೇನ
ಹರಿಸುವುದು. ಇಲ್ಲಿ ಇನ್ನೊಂದು ವಿಧಾನವೂ ಇದೆ
"ಓಂ" ಎನ್ನುತ್ತಾ ಎದೆಯಲ್ಲಿ ಮತ್ತು ಮೂಲಾಧಾರದವರೆಗೆ ಪೂರ್ಣವಾಗಿ ಉಸಿರನ್ನು
ತುಂಬುವುದು ನಂತರ ಉಸಿರನ್ನು "ಸೋ" ಎಂದು ಕಿಬ್ಬೊಟ್ಟೆಯನ್ನು ಒಳ ಎಳೆಯುವುದು, ನಂತರ ಉಸಿರನ್ನು ಸುಷುಮ್ನಾ ನಾಡಿಯಲ್ಲಿ ಸಹಸ್ರಾದವರೆಗೆ "ಹಮ್" ಎನ್ನುವ ಮೂಲಕ ತಲುಪುವುದು. ಇಲ್ಲಿ ಎಲ್ಲಾ ಮಂತ್ರವೂ ಅಜಪ ಮುಖೇನ
ಮಾಡಬೇಕಿರುತ್ತದೆ. ಇಂತಹ ವಿಧಾನವೇ ಹಿಂದೆ ಋಷಿಗಳು ಮಂತ್ರೋಪದೇಶವಾಗಿ ನೀಡುವ ಉಸಿರಾಟದ ಕುಂಡಲಿನಿ
ವಿಧಾನವಾಗಿದೆ.
ಇದರಲ್ಲಿ "ಅ ಉ ಮ" ಎಂಬ ಓಂಕಾರ ಮಂತ್ರ, "ಓಂ ನಮಃ ಶಿವಾಯ", "ಓಂ ನಮೋ ನಾರಾಯಣಾಯ", "ಈ ಶ್ವ
ರ", "ಶಿ ವಾ", "ಈ ಶಾ",
"ಶಿ ವಾ ಯ", "ಶಿ ವೋ ಹಮ್", "ಸ ಹ" ಇತ್ಯಾದಿ. ಸಾಧಾರಣ ಭಕ್ತನು ಜಪಿಸುವಾಗ ಅವನ ಜಪವು ಬೇರೆಯವರಿಗೆ
ಕೇಳಿಸುತ್ತದೆ. ಆದರೆ ಆಧ್ಯಾತ್ಮದಲ್ಲಿ ಪ್ರಗತಿಹೊಂದಿದ ಸಾಧಕನು ಜಪವನ್ನು ತನ್ನ ಉಸಿರಿನೊಂದಿಗೆ
ಜೋಡಿಸುತ್ತಾನೆ. ಹೀಗೆ ಅವನ ಉಸಿರಾಟವೇ ಒಂದು ಜಪ.
ಉಸಿರಾಟವನ್ನು
ಹಿಂದಿನಿಂದ ಮಾಡುವುದು ಮತ್ತು ಮುಂದಿನಿಂದ ಮಾಡುವುದು ಎರಡು ವಿಧ. ಉಸಿರನ್ನು
ಇಡಾ ಮತ್ತು ಪಿಂಗಳ ನಾಡಿಯಿಂದ ಒಳ ಎಳೆದು
ಹಿಂದಿನಿಂದ ಸುಷುಮ್ನಾ ನಾಡಿಯಲ್ಲಿ ಉಸಿರನ್ನು ಸಹಸ್ರಾರಕ್ಕೆ ಕಳಿಸುವ ಕ್ರಿಯೆಯಲ್ಲಿ ಏಳು
ಚಕ್ರಗಳನ್ನು ಅದು ತಲುಪುತ್ತದೆ, ಇದು ಹಿಂದಿನಿಂದ ಮಾಡುವ ಉಸಿರಾಟ.
ಅದೇ ಮುಂದಿನಿಂದ ಉಸಿರಾಡುವ ಕ್ರಿಯೆಯಲ್ಲಿ ಉಸಿರನ್ನು ಇಡಾ ಮತ್ತು ಪಿಂಗಳ ನಾಡಿಯಿಂದ ಒಳ ಎಳೆದು
ಮೂಲಾಧಾರ ತಲುಪಿ, ಅದೇ ಇಡಾ ಮತ್ತು ಪಿಂಗಳ ನಾಡಿಯಲ್ಲಿ ಆಜ್ಞಾ
ಚಕ್ರದವರೆಗೆ ಕಳಿಸುವ ಕ್ರಿಯೆಯಲ್ಲಿ ಆರು ಚಕ್ರಗಳನ್ನು ಮಾತ್ರ ತಲುಪುತ್ತದೆ.
ಪ್ರಪಂಚದಲ್ಲಿ
ನಾವು ಕೇಳುವ ಯಾವ ಶಬ್ದವೇ ಆಗಲೀ ಒಂದು ವಸ್ತುವಿನೊಡನೆ ಇನ್ನೊಂದು ವಸ್ತುವು ಸಂಯೋಗವಾಗುವು-ದರಿಂದಲೇ
ಉಂಟಾಗುವ ಶಬ್ದವಾದುದರಿಂದ ಅದು "ಅಹತ ಶಬ್ದ' ಎಂದು
ಕರೆಯಲ್ಪಡುವುದು. ಆದರೆ ಒಂದಕ್ಕೊಂದು ಸಂಯೋಗ-ವಾಗದೆ ತನ್ನಷ್ಟಕ್ಕೆ ತಾನೇ ಸ್ವಾಭಾವಿಕವಾಗಿ ಇರುವ ದೇವತಾತ್ಮಕವಾದ
"ಓಂಕಾರ” ನಾದಕ್ಕೆ "ಅನಾಹತ ಶಬ್ದ”ವೆಂದು ಹೆಸರು. ಸುಷುಮ್ನಾನಾಡಿಯಲ್ಲಿ ಧ್ವನಿಮಾಡುವ
ಈ ಪ್ರಣವನಾದಶಕ್ತಿಯಿಂದಲೇ ಮನುಷ್ಯನ ಸಮಸ್ತ ವ್ಯಾಪಾರಗಳೂ ನಡೆಯುತ್ತವೆ. ಶಿರಃ ಪ್ರದೇಶದಲ್ಲಿ ಇಚಾ
ಶಕ್ತಿಯೂ, ಅದಕ್ಕಿಂತ ಕೆಳಗೆ ಜ್ಞಾನೇಂದ್ರಿಯಗಳ ಶಕ್ತಿಯೂ, ನಂತರ ಕರ್ಮೇಂದ್ರಿಯಗಳ ಶಕ್ತಿಯೂ ಇರುತ್ತವೆ. ಪ್ರಣವನೇ ಈ ಮೂರು ಶಕ್ತಿಗಳೂ
ಅಗಿರುತ್ತದೆ. ಲೋಕದಲ್ಲಿ ಯಾರು ಯಾವ ಕೆಲಸವನ್ನು ಮಾಡಿದರೂ ಮೊದಲು ಮನಸ್ಸಿನಲ್ಲಿ ಇಚ್ಛೆ,
ನಂತರ ಆ ವಿಷಯದಲ್ಲಿ ವಿವರವಾದ ಜ್ಞಾನ, ಅನಂತರ
ಆದನ್ನು ಕಾರ್ಯ-ರೂಪಕ್ಕೆ ತರುವುದು ಹೀಗೆ ಮೂರು ಹಂತಗಳಲ್ಲಿ ಕೆಲಸವಾಗುತ್ತದೆ. ಈ ಆತ್ಮಮಂತ್ರವಾದ
ಪ್ರಣವವನ್ನು ಸರ್ವದಾ ಅಭ್ಯಾಸ(ಜಪ) ಮಾಡುವುದರಿಂದ ಮನುಷ್ಯನಲ್ಲಿ ಯೋಗದ ಸ್ಥಿತಿಯುಂಟಾಗುತ್ತದೆ.
ಪರಮಾತ್ಮನು ಅವರ ಹೃದಯದಲ್ಲಿ ಪ್ರಕಾಶಕ್ಕೆ ಬರುತ್ತಾನೆ. ಈ ಪ್ರಣವ ಜ್ಞಾನವನ್ನು ಸಂಪಾದಿಸುವುದು
ಯೋಗಸಾಧನೆಯ ಅಂತಿಮ ಚರಣವಾಗಿರುತ್ತದೆ.
ಮೂರ್ಛೆ
ಮತ್ತು ಮನೋವಿಕಾರಗಳಿಂದ ಬಳಲುವ ರೋಗಿಗಳಿಗೆ ಯೋಗಿಯು ಧ್ಯಾನದಲ್ಲಿದ್ದಾಗ ಆತನ ಮೆದುಳಿನಿಂದ
ಹೊರಡುವ ತರಂಗಗಳನ್ನು ಎಲೆಕ್ಟ್ರಾನಿಕ್ ಉಪಕರಣಗಳ ನೆರವಿನಿಂದ ರೋಗಿಯ ಮೆದುಳಿಗೆ ವರ್ಗಾವಣೆ
ಮಾಡಿದರೆ ಯೋಗಿಯ ಆಲ್ಫಾ ತರಂಗಗಳು ರೋಗಿಯ ಮೆದುಳನ್ನು ವ್ಯಾಪಿಸಿ ಅವನು ಶಾಂತನೂ ಸಮಾಧಾನಿಯೂ,
ಉತ್ತಮನೂ ಆಗುವಂತೆ ಮಾಡುತ್ತವೆ ಹಾಗೂ ಅವನ ಕಾಯಿಲೆಗಳನ್ನೂ ಗುಣಪಡಿಸ
ಬಹುದೆಂದು ನರರೋಗ ತಜ್ಞರು ಸಾಕ್ಷಾಧಾರ ಸಹಿತ ಸಾದರಪಡಿಸಿರುತ್ತಾರೆ.
ಉಸಿರು
ಒಳಗೆ ಎಳೆದುಕೊಂಡಾಗ 'ಸೋ' ಎನ್ನುವ ಸೂಕ್ಷ್ಮ ಶಬ್ದವನ್ನು ಮಾಡುತ್ತದೆ,
ಮತ್ತು ಉಸಿರಾಟದಲ್ಲಿ ಉಸಿರು ಹೊರಬಿಟ್ಟಾಗ 'ಹಮ್'
ಎನ್ನುವ ಸೂಕ್ಷ್ಮ ಶಬ್ದವನ್ನು ಮಾಡುತ್ತದೆ, ಆದ್ದರಿಂದ
'ಸೋಹಮ್'. ಈ ಮಂತ್ರವು ನೈಸರ್ಗಿಕ ಉಸಿರಾಡುವಿಕೆ
ಮತ್ತು ಉಸಿರಾಟದ ಹೊರಹರಿವು, ಪ್ರತಿ ಮನುಷ್ಯನಲ್ಲಿ ಮತ್ತು ಬೇರೆ ಬೇರೆ
ಆವರ್ತನಗಳನ್ನು ಹೊಂದಿರುವ ಎಲ್ಲಾ ಇತರ ಜೀವಿಗಳಲ್ಲಿ ಸಂಭವಿಸುತ್ತದೆ. ನಾವು ಸುಮ್ಮನೆ ಕುಳಿತು ನಮ್ಮೊಳಗಿನ ಈ ಉಸಿರಾಟದ ಪ್ರಕ್ರಿಯೆಯತ್ತ ಗಮನ ಹರಿಸಬೇಕು.
ಯಾವುದೇ ಮಂತ್ರ ಅಥವಾ ಇನ್ನಾವುದೇ ಪದವನ್ನು ಪದೇ ಪದೇ ಕೇಳುವಂತೆ ಹೇಳಿದಾಗ ಅಥವಾ
ಪಿಸುಗುಟ್ಟುವ ಶಬ್ದದೊಂದಿಗೆ ಉಚ್ಚರಿಸಿದಾಗ ಅದು ಜಪ ವಿಧಾನದ ಮಂತ್ರ ಆಗುತ್ತದೆ. ಅದನ್ನು
ಕೇವಲ ಮಾನಸಿಕವಾಗಿ ಹೃದಯದಿಂದ ಯೋಚಿಸಿದಾಗ, ಅದನ್ನು ಅಜಪ ಎಂದು ಕರೆಯಲಾಗುತ್ತದೆ.
ಸೋಹಮ್ ಅಜಪ, ಅತ್ಯಂತ ನೈಸರ್ಗಿಕ, ಅತ್ಯಂತ ಪ್ರಯತ್ನವಿಲ್ಲದ ಮತ್ತು ಅದು ಅತ್ಯಂತ ಪರಿಣಾಮಕಾರಿಯಾದ ಮಂತ್ರವು ನಮ್ಮನ್ನು
ಜ್ಞಾನೋದಯದ ಯಾತ್ರೆಗೆ ಕರೆದೊಯ್ಯುತ್ತದೆ.
ಯೋಗ
ಚೂಡಾಮಣಿ ಉಪನಿಷತ್ ಪ್ರಕಾರ :- ಅಜಪ ಗಾಯತ್ರಿ ಎಂದು ಕರೆಯಲ್ಪಡುವ ಈ
ಮಂತ್ರವು (ಯೋಗವು) ಎಲ್ಲಾ ಯೋಗಿಗಳಿಗೆ
ಮೋಕ್ಷವನ್ನು ನೀಡುತ್ತದೆ. ಈ ಮಂತ್ರದ ಕೇವಲ ಮಾನಸಿಕ ಪುನರಾವರ್ತನೆಯು
ಎಲ್ಲಾ ಪಾಪಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಕುಂಡಲಿನಿಯಿಂದ
ಏರುವ ಈ ಅಜಪ ಗಾಯತ್ರಿ ಆತ್ಮವನ್ನು ಬೆಂಬಲಿಸುತ್ತದೆ. ಆತ್ಮದ ವಿಜ್ಞಾನಗಳಲ್ಲಿ
ಇದು ಶ್ರೇಷ್ಠವಾದುದು.
ಯೋಗ
ಶಿಖಾ ಉಪನಿಷತ್ ಪ್ರಕಾರ :- "ಸೋಹಂ, ಸೋಹಮ್" ಎಂಬ ಮಂತ್ರದ ಪಠಣವನ್ನು (ಉಸಿರಾಟದ ಸಮಯದಲ್ಲಿ) ಮಂತ್ರ ಯೋಗ ಎಂದು ಕರೆಯಲಾಗುತ್ತದೆ.
ಗರುಡ
ಪುರಾಣ - (15:70) ಪ್ರಕಾರ - ಅಜಪ ಎಂಬ
ಗಾಯತ್ರಿ ಋಷಿಗಳಿಗೆ ಮುಕ್ತಿ ನೀಡುವವಳು; ಅದನ್ನು ಮಾನಸಿಕವಾಗಿ ಪುನರಾವರ್ತಿಸುವುದರಿಂದ
ಒಬ್ಬನು ಎಲ್ಲಾ ಪಾಪಗಳಿಂದ ಬಿಡುಗಡೆ ಹೊಂದುತ್ತಾನೆ.
ಯೋಗ
ವಸಿಷ್ಠ - ಪ್ರಕಾರ (ಉತ್ಪತ್ತಿ ಖಾಂಡ
3: 64: 9) - ಜೀವಂತ ಆತ್ಮವು ತನ್ನನ್ನು "ಸೋಹಮ್" ಎಂದು ತಿಳಿದಿದೆ.
ಕಬೀರರು
ಹೀಗೆ ಹೇಳಿದ್ದಾರೆ, “ನೀವು ಆತ್ಮನನ್ನು ನೋಡಬೇಕಂತ ಇದರೆ ..............
ನಿಮ್ಮ ಶ್ವಾಸದಲ್ಲಿ ಶಿಕ್ಕುವನು, ಅಂದರೆ "ಸೋಹಂ” ದೊಳಗೆ
ಶಿಗುವನು, "ಸೊ” ಅಂದರೆ ಶ್ವಾಸ ಒಳಗೆ ತಕ್ಕೊಳ್ಳುವಾಗ ಆಗುವ
ಧ್ವನಿ ಮತ್ತು “ಹಂ” ಅಂದರೆ ಶ್ವಾಸ ಹೊರಗೆ ಬಿಡುವಾಗ್ಗೆ ಆಗುವ ಧ್ವನಿ.
ಅಥರ್ವ ವೇದದಲ್ಲಿ ಪಂಡಿತರು
ಕಂಡುಕೊಂಡ ಅಜಪ ಮಂತ್ರ
ಅಜಪ
ಮಂತ್ರ ಜೀವಕ್ಕೆ ಚೈತನ್ಯವನ್ನು ಸೆಳೆಯುತ್ತದೆ.
ಅಥರ್ವ
ವೇದ ಖಾಂಡ-5 ಸೂಕ್ತ 17 ಶ್ಲೋಕ 2 ರಲ್ಲಿನ
ಸೋಮೋ ರಾಜಾ ಪ್ರಥಮೋ ಬ್ರಹ್ಮಜಾಯಾಂ ಪುನಃ
ಪ್ರಾಯಚ್ಛದಹೃಣೀಯಮಾನಃ |
ಅನ್ವರ್ತಿತಾ ವರುಣೋ ಮಿತ್ರ
ಆಸೀದಗ್ನಿರ್ಹೋತಾ ಹಸ್ತಗೃಹ್ಯಾ ನಿನಾಯ ||
2
ಭಾವಾರ್ಥ:- "ಸೋಮರಸ, ಜೀವನದ ಆಳ್ವಿಕೆಯ ಚೈತನ್ಯ, ಎಲ್ಲರೂ ಸಮಾಧಾನದಿಂದ,
ಮೊದಲು ದೈವಿಕ ಪದವನ್ನು (ಅಜಪ ಮಂತ್ರ) ಪಡೆದ ನಂತರ, ಅದನ್ನು ಬ್ರಹ್ಮ ಋಷಿಗೆ (ಬ್ರಹ್ಮರಂದ್ರವಿರುವ ಸಹಸ್ರಾರಕ್ಕೆ) ಸರಸ್ವತಿ ರೂಪದಲ್ಲಿ
ನೀಡುತ್ತಾರೆ. ವರುಣ, ತೀರ್ಪಿನ ಋಷಿ,
ಮಿತ್ರ, ಋಷಿಯು ಪ್ರೀತಿಯಿಂದ, ಅನುಸರಿಸುವ,
ಮತ್ತು ಅಗ್ನಿ, ಯಜ್ಞದ ಬೆಂಕಿಗೆ ಸಮರ್ಪಿತನಾಗಿ,
ಅದನ್ನು ಯಜ್ಞದ ಭಾರ ಹೊತ್ತವರಂತೆ ಕೈಯಲ್ಲಿ ಹಿಡಿದು ಅದನ್ನು
ಮುನ್ನಡೆಸುತ್ತಾನೆ. (ಯಜ್ಞದ ಭಾರ ಹೊರುವುದು ಎಂದರೆ ಜ್ವಾಲೆಯಿಂದ ಉಂಟಾಗುವ ಆವಿ)
ವಿವರಣೆ:-
ಅಜಪ ಮಂತ್ರ ಒಂದು ದೈವಿಕ ಪದ ಅದನ್ನು ಸಹಸ್ರಾರದ ವರೆಗೆ ಉಪಯೋಗಿಸಬೇಕು. ಸರಸ್ಪತಿ ರೂಪದಲ್ಲಿ
ಎಂದರೆ ಆವಿಯಿಂದ ಉಂಟಾದ ನದಿಯ ರೂಪದಲ್ಲಿ ಅಜಪ ಮಂತ್ರದ ಮುಖೇನ ಅಗ್ನಿ, (ಬಿಸಿ ಗಾಳಿ) ಸೂರ್ಯ ಶಾಖ (ಅದುವೇ ಮಿತ್ರ), ವರುಣ
(ನೀರು), ಯಜ್ಞದ ಬೆಂಕಿಗೆ (ಜಠರದಲ್ಲಿನ ಅಪಾನ ವಾಯು) ನೀಡಿ ನಂತರ ಅಲ್ಲಿ
ನಡೆಯುವ ವಿವಿದ ಪ್ರಕ್ರಿಯೆಯಲ್ಲಿ ಉಂಟಾಗುವ ಆವಿ ಸಮೃದ್ದಿಯನ್ನು ಸಹಸ್ರಾರದವರೆಗೆ, ಯಜ್ಞದ ಶ್ರೇಷ್ಟತೆಯನ್ನು ಸಹಸ್ರಾರಕ್ಕೆ ಒಯ್ಯುವುದಕ್ಕೆ ಸಹಾಯ ಮಾಡುವುದೇ ಈ ಅಜಪ
ಮಂತ್ರ. ಈ ರೀತಿ ಒಯ್ಯುವುದೇ ಅಮೃತ ಅಥವಾ ಸೋಮರಸ. ಸೋಮರಸ ಜೀವಕ್ಕೆ ಆಳ್ವಿಕೆ ಮಾಡುವ
ಚೈತನ್ಯವಾಗಿದೆ. (ಇದನ್ನೇ ಸಂಪದ್ಭರಿತ ಲಕ್ಷ್ಮಿಯನ್ನು ನಾರಾಯಣನ
ಜೊತೆ ಅಂದರೆ ಓಂ ನಮೋ ನಾರಾಯಣಾಯ ಅಜಪ ಮಂತ್ರದ ಜೊತೆ ಸಹಸ್ರಾರಕ್ಕೆ ಕಳಿಸಿ ಎಂದು ವೈಷ್ಣವರು
ಮತ್ತು ಮಾಧ್ವಮತದವರು ಹೇಳಿದ್ದು.)
ಬ್ರಹ್ಮಜ್ಞಾನ ಪಡೆಯಲು ಮೊದಲಿಗೆ ಅಜಪ
ಮಂತ್ರ ಬೋಧನೆಯಾಗಬೇಕು
ಅಥರ್ವ ವೇದ ಖಾಂಡ-5 ಸೂಕ್ತ 17 ಶ್ಲೋಕ 5
ರಲ್ಲಿನ
ಬ್ರಹ್ಮಚಾರೀ ಚರತಿ ವೇವಿಷದ್ವಿಷಃ ಸ
ದೇವಾನಾಂ ಭವತ್ಯೇಕಮಙಗಮ್ |
ತೇನ ಜಾಯಾಮನ್ವವಿನ್ದದ್ ಬೃಹಸ್ಪತಿಃ
ಸೋಮೇನ ನಿತಾಂ ಜುಹ್ವಂ ೧ ನ್ಕ ದೇವಾಃ ||
5
ಭಾವಾರ್ಥ:- "ಬ್ರಹ್ಮಚಾರಿ, ಬ್ರಹ್ಮಜ್ಞಾನದ ಅನ್ವೇಷಕ, ಈ ಉತ್ಕೃಷ್ಟ ವಿಷಯಕ್ಕೆ
ಸಮರ್ಪಿತನಾಗಿ ದಿವ್ಯ ಧ್ವನಿಯನ್ನು ಮುಂದುವರಿಸುತ್ತಾನೆ ಮತ್ತು ಅದನ್ನು ಆಂತರಿಕಗೊಳಿಸುತ್ತಾ,
ಪ್ರಕೃತಿ ಮತ್ತು ವಿದ್ವಾಂಸರ ಸಮ್ಮುಖದಲ್ಲಿ ದೇವತೆಗಳಲ್ಲಿ ಒಬ್ಬನಾಗುತ್ತಾನೆ.
ಅವನು ಬೃಹಸ್ಪತಿಯಾಗುತ್ತಾನೆ. ಮತ್ತು ಹೀಗೆ, ಆ ಋಷಿಗಳು, ವಿದ್ವಾಂಸರು ಪದವನ್ನು (ಅಜಪ ಮಂತ್ರವನ್ನು) ಪಡೆಯುತ್ತಾರೆ ..............."
ವಿವರಣೆ:-
ಸಂಸ್ಕೃತದಲ್ಲಿ ಅಕ್ಷರ ಅರ್ಥದಲ್ಲಿ ಬ್ರಹ್ಮಚಾರಿ ಎಂದರೆ, "ನೀರು,
ಬೆಂಕಿ, ಜೀವ ಉಸಿರು, ವೈದ್ಯ, ಮಾಂತ್ರಿಕ ಸೂತ್ರ ಮತ್ತು ವಿಶೇಷವಾಗಿ
ಪರಿಣಾಮಕಾರಿ ಮಂತ್ರ ಚಲಿಸುವವನು" ಎಂಬ ಅರ್ಥ ಇದೆ.
ಬ್ರಹ್ಮಚರ್ಯ ಎಂದರೆ "ನೀರು, ಬೆಂಕಿ, ಜೀವ ಉಸಿರು, ವೈದ್ಯ, ಮಾಂತ್ರಿಕ
ಸೂತ್ರ ಮತ್ತು ಉಜ್ವಲತೆ ಚಲಿಸುವವನು" ಎಂಬ ಅರ್ಥ ಇದೆ. ವಿಧ್ಯಾಬ್ಯಾಸದ ಸಮಯದಲ್ಲಿ ಅಂತಹ ಚಲನೆಯನ್ನು
ಕಲಿಯುವವನೇ ಬ್ರಹ್ಮಚಾರಿ/ ಬ್ರಹ್ಮಚರ್ಯ ಪರಿಪಾಲಕ. ವೀರ್ಯ ರಕ್ಷಣೆ ಮಾಡುವವ ಬ್ರಹ್ಮಚಾರಿ ಎಂದು
ಆದದ್ದು ಹೇಗೆ ಮುಂದೆ ನೋಡಿ. ಅಜಪ ಮಂತ್ರವು ಬ್ರಹ್ಮಜ್ಞಾನ ಪಡೆಯಲು ಸಾಧನವಾಗಿದೆ.
ಅಂತಹ ಅನ್ವೇಷಕ ಬ್ರಹ್ಮಚಾರಿ ಬ್ರಹ್ಮಜ್ಞಾನವನ್ನು ಪಡೆಯಲು ಸಮರ್ಪಣಾ ಭಾವದಿಂದ ದಿವ್ಯವಾದ ಅಜಪ
ಮಂತ್ರವನ್ನು ಆಂತರಿಕವಾಗಿ ಮುಂದುವರಿಸುತ್ತಾನೆ. ಹೀಗೆ ಮಾಡುವ ಯೋಗಿ ವಿದ್ವಾಂಸನಾಗುತ್ತಾನೆ, ಇನ್ನೂ ಹೆಚ್ಚಿನ ಸಾಧನೆಯಿಂದ ವಿದ್ವಾಂಸರಲ್ಲಿ ದೇವರಾಗುತ್ತಾನೆ. ಹಾಗೇ
ಮುಂದುವರಿದು ಬೃಹಸ್ಪತಿಯಾಗುತ್ತಾನೆ, ಕಾಲಜ್ಞಾನಿ ಆಗುತ್ತಾನೆ.
ಕುಂಡಲಿನಿ ಚಕ್ರಗಳಿಗೆ ವಾಯುವನ್ನು
ಪಸರಿಸುವ ಅಜಪ ಮಂತ್ರ
ಅಥರ್ವ ವೇದ - ಖಾಂಡ 10 ಸೂಕ್ತ 10
ಶ್ಲೋಕ 2
ಯೋ ವಿದ್ಯಾತ್ಸಪ್ತ ಪ್ರವತಃ ಸಪ್ತ
ವಿದ್ಯಾತ್ಪರಾವತಃ |
ಶಿರೋ ಯಜ್ಞಸ್ಯ ಯೋ ವಿದ್ಯಾತ್ಸ ವಶಾಂ
ಪ್ರತಿ ಗ್ರುಹ್ನೀಯಾತ್ ||
2
ಭಾವಾರ್ಥ:-
"ಏಳು ಕೃತಕ ಪರ್ವತಗಳಲ್ಲಿ (ಕುಂಡಲಿನಿ ಚಕ್ರಗಳಲ್ಲಿ) ಚಲಿಸುವ ಕ್ರಮದಲ್ಲಿ ವಿಲೇವಾರಿ
ಮಾಡಲು ಅರ್ಥಮಾಡಿಕೊಳ್ಳಿ, ಏಳು ಜಾತಿಯ ಮಡಕೆ ಮೂಲಿಕೆಗಳಲ್ಲಿ (ವಾಯು, ಆಹಾರ, ನೀರು, ಬೆಂಕಿ, ರಕ್ತ, ಮಾಂಸ, ಮೂಳೆ)
ಕ್ರಮವಾಗಿ ವಿಲೇವಾರಿ ಮಾಡಲು ಅರ್ಥಮಾಡಿಕೊಳ್ಳಿ. ಸಿರೆಗಳು, ನರಗಳು
ಮತ್ತು ಅಪಧಮನಿಗಳಲ್ಲಿ ಯಜ್ಞದ ಬೆಂಕಿಯನ್ನು (ಆವಿಯನ್ನು) ಚಲಿಸುವ ಕ್ರಮದಲ್ಲಿ ವಿಲೇವಾರಿ ಮಾಡಲು
ಅರ್ಥಮಾಡಿಕೊಳ್ಳಲು, ಮಾತಿನ ಅಂಗದೊಂದಿಗೆ (ಅಜಪ ಮಂತ್ರದೊಂದಿಗೆ) (ಹಮ್, ಶಿವಾಯ, ನಾರಾಯಣಾಯ ಓಂಕಾರ-ದಲ್ಲಿ 'ಮ' ಎಂಬ ಮೂರನೇ
ಅಜಪ ಮಂತ್ರವು ಅಜಪ ವಿಧಾನದಲ್ಲಿ ಶೀಘ್ರ ಉಚ್ಚಾರಾಣೆ ವಿಧಾನವನ್ನು) ಮತ್ತೆ ಗೆಲ್ಲಲು ಮತ್ತು
ಇಂದ್ರಿಯ-ಗಳ ವಶಪಡಿಸಿಕೊಳ್ಳುವ ಅಂಗಗಳನ್ನು ಬಿಡುಗಡೆ ಮಾಡುತ್ತದೆ
(ಧ್ಯಾನದ ಮೂಲಕ)."
ವಿವರಣೆ:-
ಅಜಪ ಮಂತ್ರವನ್ನು ಮಾನಸಿಕವಾಗಿ ಧ್ಯಾನಿಸುತ್ತಾ ಉಸಿರಾಡುವ ಯೋಗಿಯು ತನ್ನ ಉಸಿರನ್ನು ಸುಷುಮ್ನಾ
ನಾಡಿಯ ಮುಖೇನ ಮೂಲಾಧಾರದಿಂದ ಸಹಸ್ರಾರದವರೆಗೆ ವಾಯುವನ್ನು ಕಳಿಸುತ್ತಾನೆ. ಸುಷುಮ್ನಾ ನಾಡಿ ಏಳು
ಕುಂಡಲಿನಿ ಚಕ್ರಗಳ ಸಂಪರ್ಕವನ್ನು ಮಾಡುತ್ತದೆ. ಅಲ್ಲಿಂದ ನಾಡಿಗಳು, ನಾಳಗಳು, ನರಗಳು ಮತ್ತು ಅಪಧಮನಿಗಳಲ್ಲಿ
(ಆರ್ಟರಿಗಳಲ್ಲಿ) ಚಲಿಸುವ ಆವಿ ರೂಪದ ದೇಹದಲ್ಲಿನ ಯಜ್ಞದ ತಿರುಳನ್ನು ಕ್ರಮವಾಗಿ 72000
ನಾಡಿಗಳಲ್ಲಿ ವಿಲೇವಾರಿ ಮಾಡುತ್ತದೆ. ಈ ಆವಿರೂಪದ ಬೆಂಕಿಯಂತಾ ತಿರುಳು ಮೂಲಾಧಾರದಲ್ಲಿ ಇರುವ
ಅಪಾನ ವಾಯು ಅದರ ಜೊತೆಸೇರುವ ಪ್ರಾಣವಾಯು, ಮತ್ತು ನೀರು ಮತ್ತು ಅಲ್ಲಿ ಉಂಟಾಗುವ ಉಸಿರಿನಲ್ಲಿನ
ಚಮತ್ಕಾರಿ ಪರಿಣಾಮಗಳಿಂದ ಉಂಟಾಗುವ ತಿರುಳಿನಲ್ಲಿ ದ್ರವರೂಪದ ಅಮೃತ,
ಅಮೃತದ ಆವಿ, ನೈಟ್ರಿಕ್ ಆಕ್ಸೈಡ್,
ಆಕ್ಟಿವೇಟೆಡ್ ಕಾರ್ಬನ್, ಮುಂತಾದ ಜೈವಿಕ ಉತ್ಪಾದನೆಗಳನ್ನು ಇಡೀ
ದೇಹಕ್ಕೆ ಆರೋಗ್ಯವರ್ದಕವಾಗಿ ನೀಡುತ್ತದೆ. ದೇಹದಲ್ಲಿನ ವಾಯು, ಆಹಾರ, ನೀರು, ಬೆಂಕಿ, ರಕ್ತ, ಮಾಂಸ, ಮೂಳೆ ಇವು ಮೂಲಿಕೆಯನ್ನು ಅರ್ಥಾತ್
ಔಷಧಿಯನ್ನು ನೀಡುವ ಕೇಂದ್ರಗಳು ಅಂತಹ ಔಷಧ ದೇಹಕ್ಕೆ ವಿಲೇ ಮಾಡುವುದೇ ನಾಡಿ.
ಅಜಪ ಮಂತ್ರವು
ಗಂಟಲಿನಲ್ಲಿ ಸೋಮರಸ ನೀಡುತ್ತದೆ
ಅಥರ್ವ ವೇದ - ಖಾಂಡ 10 ಸೂಕ್ತ 10
ಶ್ಲೋಕ 3
ವೇದಾಹಂ ಸಪ್ತ ಪ್ರವತಃ ಸಪ್ತ ವೇದ
ಪರಾವತಃ |
ಶಿರೋ ಯಜ್ಞಸ್ಯಾಹಂ ವೇದ ಸೋಮಂ ಚಾಸ್ಯಾಂ
ವಿಚಕ್ಷಣಮ್ || 3
ಭಾವಾರ್ಥ:- "ಪವಿತ್ರ ಜ್ಞಾನವನ್ನು ಏಳು
ಕೃತಕ ಪರ್ವತಗಳು (ಕುಂಡಲಿನಿ ಚಕ್ರಗಳಲ್ಲಿ) ಮತ್ತು
ಏಳು ಜಾತಿಯ ಗಿಡಮೂಲಿಕೆಗಳು (ವಾಯು, ಆಹಾರ, ನೀರು, ಬೆಂಕಿ, ರಕ್ತ, ಮಾಂಸ, ಮೂಳೆ) ಎಂದು ಮೂರು ಪದಗಳಾದ "ಅ, ಉ, ಮ" (ಅಥವಾ ಓಂ ನಮೋ ನಾರಾಯಣಾಯ ಎಂಬ) ಮೂರು
ಪದಗಳಿಂದ ನೀಡಲಾಗಿದೆ. ನರಗಳು, ರಕ್ತನಾಳಗಳು
ಮತ್ತು ಅಪಧಮನಿಗಳ ಮೂಲಕ ಯಜ್ಞದ ಬೆಂಕಿಯನ್ನು ತೊರೆಯುವ ಮಾತಿನ ಅಂಗ, (ಅಜಪ ಮಂತ್ರ) ಖಂಡಿತವಾಗಿಯೂ
ಗಂಟಲಿನಲ್ಲಿ ಸೋಮ ರಸವನ್ನು ಪಡೆದ ಅನುಭವಿಸಿ."
ವಿವರಣೆ:-
ಅಜಪ ಮಂತ್ರ ಮೂರು ಪದಗಳಿಂದ ನೀಡಲಾಗಿರುತ್ತದೆ, ಅದುವೇ "ಅ ಉ
ಮ", "ಓಂ ನಮಃ ಶಿವಾಯ", "ಓಂ ನಮೋ ನಾರಾಯಣಾಯ", "ಓಂ ಸೋ
ಹಮ್", "ಸೋ ಹ ಮ್",
"ಈ ಶ್ವ ರ", "ಶಿ ವಾ ಯ", "ಶಿ ವೋ ಹಮ್", ಇತ್ಯಾದಿ. ಇಂತಹ ಅಜಪ
ಮಂತ್ರವು ಯೋಗಿಯು ಉಪಯೋಗಿಸುವುದರಿಂದ ಆತನ ಗಂಟಲಿನಲ್ಲಿ ಅಮೃತವನ್ನು ಅರ್ಥಾತ್ ಸೋಮರಸವನ್ನು
ಪಡೆಯುತ್ತಾನೆ. ಭಗವಾನ್ ಶಿವನು ತಪಸ್ವಿಯೂ ಮತ್ತು ಇಂತಹ ಮಂತ್ರ ಹೊಂದಿದವನಾಗಿ ಆತನ ಗಂಟಲಿನ
ಅಮೃತವು ಆತ ಕುಡಿದ ವಿಷವನ್ನು ಗಂಟಲಿನಲ್ಲಿಯೇ ನಿಲ್ಲಿಸಿ ವಿಷಕಂಟನಾಗಿರುವ ಬಗ್ಗೆ ವಿವಿದ ರೀತಿಯ
ಕತೆ ಇದೆ. ಧ್ಯಾನಾಸಕ್ತನಾದ ಯೋಗಿಯು ತನ್ನ ಧ್ಯಾನದಲ್ಲಿ ಅಜಪ ಮಂತ್ರದ ಉಪಯೋಗದಿಂದ ಅಮೃತವನ್ನು
ಗಂಟಲಿನಲ್ಲಿ (ವಿಶುದ್ಧ ಚಕ್ರದಲ್ಲಿ) ಪಡೆಯುತ್ತಾನೆ. ಇದು ಶಿವ ಮಾನಸ ಪೂಜಾ ಸ್ತೋತ್ರದಲ್ಲಿ ಆಧಿ
ಶಂಕರಾಚಾರ್ಯರು ವಿವರಿಸಿದ್ದಾರೆ. ಈ ಅಮೃತ ರಸ ದೇಹದಲ್ಲಿ ಉತ್ಪತ್ತಿಯಾಗುವ ವೀರ್ಯ ರೀತಿಯ ಜೀವಾಂಶ
ನೀಡುವ ಪೋಷಣಾಯುಕ್ತವಾಗಿದೆ. ಇದರ ಉತ್ಪಾದನೆ ಮತ್ತು ಸಂರಕ್ಷಣೆಯಲ್ಲಿ ನಿರತನಾದವನೇ ಬ್ರಹ್ಮಚಾರಿ.
ಸಂಸ್ಕೃತದ ಅಕ್ಷರಾರ್ಥದಲ್ಲಿ ವೀರ್ಯ ಎಂದರೆ "ಶ್ರೇಷ್ಟತೆಯು ಗಂಜಿಯನ್ನು
ಉತ್ಪಾದಿಸುವುದು" ಎಂದು ಬರುತ್ತದೆ ಅಂದರೆ ಆಹಾರದ ಶ್ರೇಷ್ಠತೆ ಗಂಜಿಯಂತಿರುವ ದ್ರವವನ್ನು
ದೇಹದಲ್ಲಿ ಉತ್ಪಾದಿಸುವುದು ಎಂದು ಅರ್ಥೈಸಬೇಕು. ಅಂತಹ ಉತ್ಪಾದನಾ ಮೂಲಿಕೆ ಇರುವ ಅಂಶಗಳೇ ವಾಯು, ಆಹಾರ, ನೀರು, ಬೆಂಕಿ, ರಕ್ತ, ಮಾಂಸ, ಮೂಳೆ.
ಆಂತರಿಕವಾಗಿ ಧ್ಯಾನ ಜ್ಞಾನವನ್ನು ಚಲಿಸುತ್ತದೆ
ಅಥರ್ವ ವೇದ - ಖಾಂಡ 10 ಸೂಕ್ತ 10
ಶ್ಲೋಕ 28
ತಿಸ್ರೋ ಜಿಹ್ವಾ
ವರುನಸ್ಯಾನ್ತರ್ದೀದ್ಯಾತ್ಯಾಸನಿ |
ತಾಸಾಂ ಯಾ ಮಧ್ಯೇ ರಾಜತಿ ಸಾ ವಶಾ
ದುಷ್ಪ್ರ್ತಿಗ್ರಹಾ || 28
ಭಾವಾರ್ಥ:- "ಮೂರು ಭಾಷೆ (ಅಜಪ ಮಂತ್ರ),
ಆಂತರಿಕವಾಗಿ ಧ್ಯಾನ ಜ್ಞಾನವನ್ನು ಚಲಿಸುತ್ತದೆ ಮತ್ತು ನೀರು, ಗಾಳಿ ಮತ್ತು ಹೊಳಪನ್ನು (ಬೆಂಕಿ)
ಉತ್ಪಾದಿಸುತ್ತದೆ ಮತ್ತು ಕ್ರಮವಾಗಿ ವಿಲೇವಾರಿ ಮಾಡುತ್ತದೆ. ದೇಹದ ಮಧ್ಯದಲ್ಲಿ (ಸುಷುಮ್ನಾ
ನಾಡಿಯಲ್ಲಿ) ಹೊಳಪಿನ (ಬೆಂಕಿಯ ಆವಿ) ಪ್ರಭಾವದ ಅಡಿಯಲ್ಲಿ ದುರ್ಬಲವಾಗಿರುವುದನ್ನು ತಡೆಹಿಡಿದು, ಧಾರ್ಮಿಕ ಧ್ಯಾನದ ಮೂಲಕ ಅಮೃತವನ್ನು ಸಂಗ್ರಹಿಸುವುದು, ನೀಡುವುದು."
ವಿವರಣೆ:- ನಾವು
ಸೇವಿಸುವ ಆಹಾರದ ಕಡೆಯ ಸಾರವಸ್ತುವಾಗಿರುವ ಈ ಅಮೃತದಿಂದ ದೇಹದಲ್ಲಿ ಆರೋಗ್ಯವು ಮತ್ತು ಜ್ಞಾನವು
ವೃದ್ಧಿಯಾಗುವುದು. ಅಮೃತವು ಮೂರು ರೂಪದಲ್ಲಿ ಉತ್ಪತ್ತಿಯಾಗುತ್ತದೆ ಒಂದು ದ್ರವ ರೂಪದಲ್ಲಿ (ವೀರ್ಯ), ಇನ್ನೊಂದು ವಾಯು ರೂಪದಲ್ಲಿ (ನೈಟ್ರಿಕ್ ಆಕ್ಸೈಡ್), ಇನ್ನೊಂದು ಉಜ್ವಲತೆಯನ್ನು ನೀಡುವ ಬೆಂಕಿಯರೂಪದ ಆವಿಯಲ್ಲಿ. ಇಂತಹ ಮೂರು ರೂಪದ
ಜ್ಞಾನವನ್ನು ಹೊಂದಿ ಸಂರಕ್ಷಿಸುವುದೇ ಬ್ರಹ್ಮಚರ್ಯಾ ವಿಧಿ,
ಒಂದೇ ಮೂಗಿನ ಹೊಳ್ಳೆಯಲ್ಲಿ ಅಜಪ ಮಂತ್ರ
ಉಪಯೋಗದಿ ಉಸಿರಾಟ ಅಮೃತ ತರದು
ಅಥರ್ವ ವೇದ - ಖಾಂಡ 10 ಸೂಕ್ತ 10
ಶ್ಲೋಕ 13
ಸಂ ಹಿ ಸೋಮೇನಾಗತ ಸಮು ಸರ್ವೇಣ ಪದವತಾ |
ವಶಾ ಸಮುದ್ರಮಧ್ಯಷ್ಠಾದ್ರನ್ಧವೈಃ
ಕಲಿಭಿಃ ಸಹ ||
ಭಾವಾರ್ಥ:- ಚಂದ್ರನಾಡಿಯ (ಎಡಮೂಗಿನ ಹೊಳ್ಳೆ)
ಮಾರ್ಗಕ್ಕೆ ಚಲಿಸುವ ಎಲ್ಲಾ ಗಾಳಿಯು ಧ್ಯಾನ ಮತ್ತು ಅಂತಿಮ ವಿಮೋಚನೆಯ ಅಮೃತವನ್ನು ತರುವುದಿಲ್ಲ.
ದೇಹದ ಮಧ್ಯದ (ಸುಷುಮ್ನಾ ನಾಡಿ) ನಿಯಂತ್ರಣದಲ್ಲಿ ನೀರಿನ ಜೊತೆಯಲ್ಲಿ ತಾಯಿಯ ದೇವತೆಯ ಮೂಲಕ (ಏಳು
ಚಕ್ರಗಳು) ಉಸಿರಾಡು, ಆಕಾಶ ಸಂಗೀತಗಾರ 'ಸಹ' (ಅಜಪ ಮಂತ್ರ) ಮುಖೇನ ಏಳನೇ ಸಹಸ್ರಾರವನ್ನು
ವ್ಯಾಪಿಸು.
ಚಂದ್ರನ
ಮಹಲಿಗೆ (ಸಹಸ್ರಾರಕ್ಕೆ) ಸಂಪತ್ತು ಸಾಗಿಸುವುದು
ಅಥರ್ವ ವೇದ - ಖಾಂಡ 10 ಸೂಕ್ತ 10
ಶ್ಲೋಕ 23
ಸರ್ವೇ ಗರ್ಭಾದವೇಪನ್ತ ಜಾಯಮಾನಾದಸೂಸ್ವ
ಅಃ |
ಸಸೂವ ಹಿ ತಾಮಾಹುರ್ವಶೇತಿ ಬ್ರಹ್ಮಭಿಃ ಕ್ಲೃಪ್ತಃಸ ಹ್ಯ ಅ ಸ್ಯಾ
ಬನ್ಧುಃ || 23
ಭಾವಾರ್ಥ:- "ಎಲ್ಲಾ ಆಂತರಿಕ ಉಡುಗೊರೆಗಳು,
ಶಬ್ದವಿಲ್ಲದೆ ಗಾಳಿ ಬೀಸುವ ಜ್ಞಾನವನ್ನು ಪಡೆದುಕೊಳ್ಳುವುದನ್ನು
ರಕ್ಷಿಸುವುದು, ಸರಿಸಿ ಮತ್ತು ಬಿಡುಗಡೆ ಮಾಡುವುದು. ಮಾತಿನ
ಅಂಗವನ್ನು ಪಡೆದ ನಂತರ "ಸ ಹ" (ಅಜಪ ಮಂತ್ರ) ಚಲನೆಯನ್ನು ಜೊತೆಯಾಗಿರುವ (ಗಾಳಿ) ದೈವಿಕ
ಶಕ್ತಿ (ಗರ್ಭದಲ್ಲಿನ ಪೋಷಕಾಂಶಗಳ ಶಕ್ತಿ) ಚಂದ್ರನ ಭವನಕ್ಕೆ (ಸಹಸ್ರಾರಕ್ಕೆ) ಸಾಗಿಸಿ ಮತ್ತು
ಬಿಡುಗಡೆ ಮಾಡಿ, ಈ ರೀತಿಯಲ್ಲಿ ಸುಸಜ್ಜಿತ ಜ್ಞಾನ ಮತ್ತು
ಅಮೃತವನ್ನು ಚಲನೆಯಲ್ಲಿ ಹೊಂದಿಸಲಾಗಿದೆ."
ವಿವರಣೆ:-
ಒಂದೇ ಮೂಗಿನ ಹೊಳ್ಳೆಯಲ್ಲಿ ಅಜಪ ಮಂತ್ರ ಉಪಯೋಗದಿ ಉಸಿರಾಟ ಅಮೃತ ತರದು, ಮಧ್ಯದ ಸುಷುಮ್ನಾ ನಾಡಿಯಲ್ಲಿ ಏಳುಚಕ್ರಗಳಲ್ಲಿ ಮೂಲಾಧಾರದಿಂದ ಸಹಸ್ರಾರದ ವರೆಗೆ
ತೆಗೆದುಕೊಂಡು ಹೋಗುವ ಉಸಿರು ಮಾತ್ರ ಅಮೃತ ಕೊಡುತ್ತದೆ. ಇಲ್ಲಿ "ಸಹ" ಎಂಬ ಎರಡಕ್ಷರದ
ಅಜಪ ಮಂತ್ರವೂ ಉಪಯೋಗಕಾರಿ ಎಂದು ತಿಳಿಸಿದ್ದಾರೆ. ಸ ಎಂದು ಉಸಿರು ಎಳೆದು ಎದೆಯ ಬಾಗ ಮತ್ತು
ಮೂಲಾಧಾರದ ವರೆಗೆ ತುಂಬುವುದು ಹ ಎಂದು ಉಸಿರನ್ನು ಮೂಲಾಧಾರದಿಂದ ಸಹಸ್ರಾರಕ್ಕೆ ಕಳಿಸುವುದು
ಅಥವಾ ಆಜ್ಞಾ ಚಕ್ರದವರೆಗೆ ಕಳಿಸುವುದು, ಒಂದು ಅಂಗೀಕೃತ ಅಜಪ ಮಂತ್ರ
ವಿಧಾನವು. ಒಂದು ಮೂಗಿನ ಉಸಿರಾಟ ನಾಡಿ ಶುದ್ದಿಗಾಗಿ ಬಳಸುತ್ತಾರೆ ಎಂಬುದು ಯೋಗ ಸಾಧಕರ
ಅಭಿಪ್ರಾಯ. ಉಸಿರಾಟದ ಪ್ರಾಣಾಯಾಮದಲ್ಲಿ ಪೂರಕ ರೇಚಕ ಮತ್ತು ಕುಂಭಕವಿಧಾನವನ್ನು ಎಲ್ಲಾ
ಗ್ರಂಥಗಳಲ್ಲಿ ಹೇಳಿರುವ ರೀತಿ ಬೇರೆ ಆದರೆ ಅಕ್ಷರಾನುವಾದದಲ್ಲಿ ಇದಕ್ಕೆ ಇರುವ ಅರ್ಥವೇ ಬೇರೆ
ಇದೆ. ಇಂತಹ ಅರ್ಥ ಕುಂಡಲಿನಿ ಪ್ರಾಣಾಯಾಮವನ್ನು ಅರ್ಥಗರ್ಭಿತವಾಗಿ ವಿವರಿಸುತ್ತದೆ. ಕುಂಭಕ ಎಂದರೆ,
"ಚಂದ್ರನ ಮಹಲಿಗೆ (ಸಹಸ್ರಾರಕ್ಕೆ) ಸಂಪತ್ತು ಮಾಂತ್ರಿಕ ಸೂತ್ರವನ್ನು ಧ್ವನಿಸುವ
ಆತ್ಮ" ಎಂಬ ಅರ್ಥ ಬರುತ್ತದೆ. ಪೂರಕ "ಸ್ವಾಧೀನಪಡಿಸಿಕೊಂಡಿರುವ ಗಾಳಿಯನ್ನು
ಶುದ್ಧಗೊಳಿಸಲು" ಎಂಬ ಅರ್ಥ ಬರುತ್ತದೆ. ರೇಚಕ ಎಂದರೆ "ನೀರಿನಲ್ಲಿ ಅತ್ತಿಂದಿತ್ತ
ಚಲಿಸುವಿಕೆಯಿಂದ ದ್ವಿಗುಣ ಗೊಳಿಸಲಾಗಿದೆ" ಎಂಬ ಅರ್ಥ ಬರುತ್ತದೆ. ಉಸಿರು ಒಳ
ಎಳೆದುಕೊಂಡಾಗ ಅದನ್ನು ಹೊಟ್ಟೆಯ ಪ್ರದೇಶದ ಬೆಂಕಿಯಲ್ಲಿ ನೀರಿನಲ್ಲಿ ವಿಲೀನಗೊಳಿಸಿ
ಶುದ್ದೀಕರಿಸುವ ಪ್ರಕ್ರಿಯೆಗೆ ಪೂರಕ ಎಂಬ ಹೆಸರು ಇದೆ. ರೇಚಕ ಎಂದರೆ ಮೂಲಾಧಾರದಲ್ಲಿ ನೀರಿನ ಒಳಗೆ
ಹೊರಗೆ ಚಲಿಸುತ್ತಾ ವಾಯು ದ್ವಿಗುಣಗೊಳ್ಳುವ ಪ್ರಕ್ರಿಯೆ ಬಗ್ಗೆ ಹೇಳಲಾಗಿದೆ. ಕುಂಭಕ ಎಂದರೆ
ಗರ್ಭದಲ್ಲಿ ಉಂಟಾಗುವ ಮಾಂತ್ರಿಕ ಸೂತ್ರದ ಆವಿಯ ಸಂಪತ್ತನ್ನು ಸಹಸ್ರಾರಕ್ಕೆ ಚಾಲನೆ ನೀಡಿ
ಧ್ವನಿಸುವುದೇ ಆತ್ಮ, ಅಂತಹ ಪ್ರಕ್ರಿಯೆ ಕುಂಭಕ ಆಗಿದೆ. ಇದು ಕಲ್ಪನೆ ಅಲ್ಲ ಸಂಸ್ಕೃತ
ಅಕ್ಷರಗಳನ್ನು ರತ್ನದಂತೆ ಪ್ರತ್ಯೇಕಿಸಿ ಪಡೆದ ಸತ್ಯ ಅರ್ಥವಾಗಿದೆ.
ಆಯುರ್ವೇದ ಗ್ರಂಥಗಳಲ್ಲಿ ಇರುವ ವಿವರಣೆ ಗಮನಿಸಿ
ಸ್ವಸ್ಥ ವೃತ್ತವನ್ನನುಸರಿಸಿ ನಡೆಯುವವನು ಆರೋಗ್ಯ ಸಂಪನ್ನ
ನಾಗುವನು
ಸಮುದೋಷಃ ಸಮಾಗ್ನಿ ಶ್ಚ
ಸಮಧಾತುಮಲಕ್ರಿಯಃ |
ಪ್ರಸಸ್ನಾತ್ಮೇಂದ್ರಿಯಮನಾಃ ಸ್ವಸ್ಥ
ಇತ್ಯ ಭಿಧೀಯತೇ ||
ಸುಶ್ರುತ ಸೂ. ಅ, 16.
ಭಾವಾರ್ಥ:- ಆರೋಗ್ಯ ಸೂತ್ರಗಳು ಚರಕಸೂತ್ರಾದಿ
ಗ್ರಂಥಗಳಲ್ಲಿ "ಸ್ಪಸ್ಥವೃತ್ತ' ಎಂಬ ಅಂಕಿತದಿಂದ
ಪರಿಶೋಭಿಸುತ್ತಿವೆ. ಸ್ವಸ್ಥನ ಲಕ್ಷಣವನ್ನು ಸುಶ್ರುತ
ಮಹರ್ಷಿಯು ಈ ಶ್ಲೋಕದಿಂದ ವರ್ಣಿಸಿರುವರು. "ವಾತ ಪಿತ್ತ ಕಫಗಳ ಸಮಾನತೆಯಿಂದ ಕೂಡಿದವನೂ, ಮಂದ ವಿಷಮ ತೀಕ್ಷ್ಣ ಸಮಗಳೆಂಬ
ಜಠರಾಗ್ನಿಗಳಲ್ಲಿ ಶ್ರೇಷ್ಠವಾದ ಸಮನಾಗ್ನಿ ಯಿಂದ ಕೂಡಿದವನೂ, ರಸ,
ರಕ್ತ ಮಾಂಸ, ಮಜ್ಜ, ಆಸ್ಥಿ, ಶುಕ್ರ
(ವೀರ್ಯ) ಗಳೆಂಬ ಸಪ್ತಧಾತುಗಳ ಮತ್ತು ಮಲ, ಮೂತ್ರ, ಸ್ವೇದ (ಬೆವರು) ಗಳೆಂಬ ಮಲತ್ರಯದ ಸಮಾನ ಕ್ರಿಯೆಯಿಂದ ಕೂಡಿದವನೂ, ದೃಢಶರೀರ ಮತ್ತು ನಿರ್ಮಲಗಳಾದ ಇಂದ್ರಿಯ ಮನಸ್ಸುಗಳಿಂದ ಯುಕ್ತನಾದವನೂ, ಸ್ಪಸ್ಥನೆಂದು (ಆರೋಗ್ಯವಂತನೆಂದು) ಅನಿಸಿಕೊಳ್ಳುವನು. ಈ ಸ್ವಸ್ಥನಾದ ಮನುಷ್ಯನು
ತನ್ನ ಸ್ವಾಸ್ಥ್ಯ (ಆರೋಗ್ಯ) ವನ್ನು ರಕ್ಷಿಸಿಕೊಳ್ಳುವುದಕ್ಕಾಗಿ
ಆಚರಿಸಬೇಕಾಗಿರುವ ಆಚರಣೆಗೆ ಸ್ವಸ್ಥವೃತ್ತವೆಂಬ ನಾಮಧೇಯವುಂಟಾಗಿರುತ್ತದೆ.
"ಸ್ವಸ್ಥವೃತ್ತಂ ಯಥೋದ್ಧಿಷ್ಟಂ ಯಃ
ಸಮ್ಯಗನುತಿಷ್ಠತಿ |
ಸ ಸಮಾಃ ಶತಮವ್ಯಾಧಿರಾಯುಷಾನ ವಿಯುಜ್ಯತೇ
||
ಚರಕ ಸೂ, ಆ. 8.
ಭಾವಾರ್ಥ:- ಶಾಸ್ತ್ರವಿಹಿತವಾದ
ಸ್ಪಸ್ಥವೃತ್ತವನ್ನು ಕ್ರಮದಿಂದಾಚರಿಸುವ ಮನುಷ್ಯನು 'ಶತಾಯುರ್ವೈ
ಪುರುಷಃ ತತ ವೀರ್ಯ' ಎಂಬ ಶ್ರುತಿವಾಕ್ಯ-ದಂತೆ ಮರಣಪರ್ಯಂತವಾಗಿ ಜ್ಞಾನೇಂದ್ರಿಯ
ಕರ್ಮೇಂದ್ರಿಯಗಳಲ್ಲಿ ಅಕುಂಟಿತವಾದ ಶಕ್ತಿಯನ್ನು ಹೊಂದಿ ವ್ಯಾಧಿರಹಿತನಾಗಿ ನೂರುವರ್ಷಗಳ ಪೂರ್ಣಾಯುಷ್ಯವನ್ನು
ಹೊಂದುವನು.
ಬ್ರಹ್ಮಚರ್ಯದ
ಪ್ರಧಾನೋದ್ದೇಶವು ವೀರ್ಯರಕ್ಷಣೆಯೇ (ವೀರ್ಯ ಎಂದರೆ ದೇಹದಲ್ಲಿ ತಯಾರಾಗುವ ಶಕ್ತಿ) ಆಗಿದೆ. ವೀರ್ಯದ
ಪ್ರಭಾವದಿಂದಲೇ ಮನುಷ್ಯನು ತನ್ನ ಸಕಲೇಷ್ಟಾರ್ಥಗಳನ್ನು ಸಂಪಾದಿಸಿಕೊಂಡು ಸುಖಿಯಾಗುವನು
ಎನ್ನುತ್ತಾರೆ ಮಹರ್ಷಿಗಳು. ವೀರ್ಯವೇ ಶರೀರದ ವೃದ್ಧಿ ಕ್ಷಯಗಳಿಗೆ ಪ್ರಧಾನಕಾರಣವಾಗಿರುವುದು.
ಆಹಾರಸ್ಯ ಪರಂ ಧಾಮ ಶುಕ್ರಂ
ತದ್ರಕ್ಷ್ಯಮಾತ್ಮನಃ |
ಕ್ಷಯೇಹ್ಯಸ್ಯ ಬರ್ಹೂ ರೋಗಾನ್ಮರಣಂ ವಾ
ನಿಯಚ್ಛತಿ ||
ಚರಕ, ಸೂ ಅ, 6
ಭಾವಾರ್ಥ:- ವೀರ್ಯವು ನಾವು ಸೇವಿಸುವ ಆಹಾರದ ಕಡೆಯ ಸಾರವಸ್ತುವಾಗಿದೆ. ಈ ವೀರ್ಯದಿಂದ 'ಓಜ' ಎಂಬ ತೇಜೋರೂಪವಾದ ಸೂಕ್ಷ್ಮ ವಸ್ತುವು ಹುಟ್ಟಿ ಸಮಸ್ತ
ಶರೀರವನ್ನು ವ್ಯಾಪಿಸಿ ಶರೀರದ ಸಕಲ ಕಾರ್ಯಗಳಿಗೂ ಸಹಾಯವನ್ನುಂಟುಮಾಡುತ್ತದೆ. ಈ ಓಜವು ಎಂದು ಕ್ಷೀಣವಾಗುವುದೋ
ಅಂದೇ "ಮನುಷ್ಯನು ತನ್ನ ಇಹಲೋಕ ಯಾತ್ರೆಯನ್ನು ಮುಗಿಸಿಕೊಂಡು ಯಮರಾಜನ ಅತಿಥಿ ಆಗುವನು. ಈ ಓಜಕ್ಕೆ ಕಾರಣವಾದ
ವೀರ್ಯವನ್ನು ರಕ್ಷಿಸಿಕೊಳ್ಳದಿದ್ದರೆ ಅನಂತರೋಗಗಳು ಶರೀರವನ್ನು ಆಕ್ರಮಿಸುವವು.
ವೀರ್ಯವು ಶರೀರವನ್ನು ಹೇಗೆ ವ್ಯಾಪಿಸಿರುವುದು
ವೀರ್ಯವು
ಶರೀರವನ್ನು ಹೇಗೆ ವ್ಯಾಪಿಸಿರುವುದೆಂಬುದನ್ನು ಚರಕ ಸಂಹಿತೆಯ ಚಿಕಿತ್ಸಾಸ್ಥಾನದ ೨ನೆಯ
ಅಧ್ಯಾಯದಲ್ಲಿರುವ ಶ್ಲೋಕ ಗಮನಿಸಿ
ರಸ ಇಕ್ಷೌಯಥಾ ದದ್ದ್ನಿ ಸರ್ಪಿಸ್ತೈಲಂ
ತಿಲೇ ಯಥಾ |
ಸರ್ವತ್ರಾನುಗತಂ ದೇಹೇ ಶುಕ್ರಂ ಸಂಸ್ಪರ್ಶನೇ ತಥಾ ||
ಭಾವಾರ್ಥ:- ಕಬ್ಬಿನ ಸರ್ವಾಂಗದಲ್ಲಿ ರಸವು ವ್ಯಾಪಕವಾಗಿರುವೆಂತೆಯೂ, ಮೊಸರಿನ ಪ್ರತಿಯೊಂದು ಕಣದಲ್ಲಿ ತುಪ್ಪವು ಸೂಕ್ಷ್ಮರೂಪದಿಂದ ವ್ಯಾಪಿಸಿರುವಂತೆಯೂ,
ಎಳ್ಳಿನ ಸರ್ವಾವಯವದಲ್ಲಿ ಎಣ್ಣೆಯು ವ್ಯಾಪಿಸಿರುವಂತೆಯೂ ವೀರ್ಯವು ಸಂಪೂರ್ಣ ಶರೀರ
ಮತ್ತು ಚರ್ಮದಲ್ಲಿ ವ್ಯಾಪಿಸಿಕೊಂಡಿ-ರುವುದಾಗಿದೆ. ಆದುದರಿಂದ ಹಿತವಾದ ಆಹಾರ ವಿಹಾರಗಳಿಂದಲೂ
ಸದಾಚರಣೆಯಿಂದಲೂ ಶರೀರ ಧಾರಣೆಗೆ ಮೂಲಕಾರಣವಾದ ವೀರ್ಯವನ್ನು ರಕ್ಷಿಸಿಕೊಳ್ಳುವುದರಲ್ಲಿ ಬಹಳ
ಎಚ್ಚರಿಕೆಯಿಂದಿರ-ಬೇಕಾದುದು ವಿವೇಕಿಗಳ ಕರ್ತವ್ಯವಾಗಿರುತ್ತದೆ.
ಪ್ರಾಣಾಯಾಮ ವ್ಯಾಯಾಮವು ಮನುಷ್ಯನಿಗೆ ಯಾವ ಫಲವನ್ನು ಕೊಡುತ್ತದೆ
ಬಹ್ಮಚರ್ಯ
ಪರಿಪಾಲನೆ ವೀರ್ಯ ರಕ್ಷಣೆಯ ಮತ್ತು ಪೋಷಣೆಯ ವಿಧಾನಗಳನ್ನು ಅರಿಯುವ ಮೂಲಕ ಮಾಡಿದ ಪ್ರಾಣಾಯಾಮ ವ್ಯಾಯಾಮವು
ಮನುಷ್ಯನಿಗೆ ಯಾವ ಫಲವನ್ನು ಕೊಡುತ್ತದೆಂಬ ವಿಷಯವು ಆಯುರ್ವೇದ ಗ್ರಂಥಗಳಲ್ಲಿ ಅತಿವಿಸ್ತಾರವಾಗಿ
ವರ್ಣಿತವಾಗಿದೆ.
ಶರೀರೋಪಚಯಃ। ಕಾಂತಿರ್ಗಾತ್ರಾಣಾಂ
ಸುವಿಭಕ್ತತಾ |
ದೀಪ್ನಾಗ್ನಿತ್ವಮನಾಲಸ್ಯಂ ಸ್ಥಿರತ್ವಂ
ಲಾಘವಂ ಮೃಜಾ ॥
ಶ್ರಮಕ್ಲಮಪಿಪಾಸೋಷ್ಣ ಶೀತಾದೀನಾಂ
ಸಹಿಷ್ಣು ತಾ |
ಆರೋಗ್ಯಂ ಚಾಪಿ ಪರಮಂ
ವ್ಯಾಯಾಮಾದುಪಜಾಯತೇ॥
ಸುಶ್ರುತ, ಸೂ, ಆ, 24,
ಭಾವಾರ್ಥ:- ನಿಯಮವೂರ್ವಕವಾಗಿ ನಿತ್ಯದಲ್ಲಿ
ಮಾಡುವ ವ್ಯಾಯಾಮದಿಂದ ಶರೀರದ ಸಕಲಾವಯವಗಳು ಸುಂದರವಾಗಿ ವಿಭಾಗವನ್ನು ಹೊಂದಿ ದೃಢಗಳೂ, ಕಾಂತಿವಿಶಿಷ್ಟಗಳೂ ಆಗುವುವು. ಜಠರಾಗ್ನಿಯು ವೃದ್ಧಿಗೊಂಡು ಆಹಾರದ ರಸವು ಶರೀರದಲ್ಲಿ
ವ್ಯಾಪಿಸಿ ಚಟುವಟಿಕೆ, ಕಾರ್ಯದಲ್ಲಿ ಉತ್ಸಾಹ, ಇಂದ್ರಿಯಗಳಲ್ಲಿ ಸ್ಥಿರತೆ, ಲಾಘವ (ಶರೀರವು ಹಗುರಾಗುವುದು), ಮತ್ತು ಇಂದ್ರಿಯ ಮನಸ್ಸುಗಳ
ನಿರ್ಮಲತೆಯೇ ಮುಂತಾದುವುಗಳು ಉಂಟಾಗುತ್ತವೆ. ವ್ಯಾಯಾಮದಿಂದ ಪರಿಶ್ರಮ, ಬಾಯಾರಿಕೆ ಮತ್ತು ಶೀತೋಷ್ಣಗಳ ವೇಗವನ್ನು ಸಹಿಸಿಕೊಳ್ಳುವ ಸಾಮರ್ಥ್ಯವುಂಟಾಗುತ್ತದೆ.
ಸಿಂಹವನ್ನು ನೋಡಿ ಮೃಗಗಳು ಪಲಾಯನವನ್ನು ಮಾಡುವಂತೆ ವ್ಯಾಯಾಮ-ಶೀಲನಾದವನನ್ನು ನೋಡಿ ರೋಗಗಳು
ಪಲಾಯನ ಸೂಕ್ತವನ್ನು ಪಠಿಸುತ್ತವೆ. ವ್ಯಾಯಾಮದಿಂದ ತರೀರದ ಸ್ಥೂಲತೆಯು ಕಡಿಮೆಯಾಗುತ್ತದೆ.
ವ್ಯಾಯಾಮವು ಕುರೂಪಿಯನ್ನು ಸುರೂಪಿ-ಯನ್ನಾಗಿ ಮಾಡುತ್ತದೆ. ವ್ಯಾಯಾಮದಿಂದ ಪರಿಪುಷ್ಟವಾದ ಶರೀರವನ್ನು
ವಾರ್ಧಕ್ಯವು (ಮುಪ್ಪು) ಶೀಘ್ರವಾಗಿ ಆಕ್ರಮಿಸಲಾರದು. ವ್ಯಾಯಾಮವೇ ಮಾನವನ ಸಕಲ ಸುಖಗಳಿಗೆ
ಆಧಾರವಾಗಿದೆ.
ಅಷ್ಟಾಂಗ
ಹೃದಯದಲ್ಲಿ ಹೀಗೆ ಹೇಳಿದೆ "ಉಷ್ಣಶೀತ ಗುಣೋತ್ಕರ್ಷಾತ್ ತತ್ರ ವೀರ್ಯಂ ದ್ವಿಧಾಸ್ಮೃತಂ | "ಅದರ ಅರ್ಥ -ದ್ರವ್ಯದಲ್ಲಿರುವ ೨೦ ಗುಣಗಳೊಳೆಗೆ ಉಷ್ಣ ಶೀತಗಳ ಶಕ್ತಿಯೇ
ಹಚ್ಚು. ಅದ್ದರಿಂದಲೇ ಉಷ್ಣ-ಶೀತ ಇವೆರಡು ವೀರ್ಯವೆಂದು ಕರೆಯಲ್ಪಡುತ್ತದೆ”.
ವಿವರಣೆ:- ಇದರಿಂದ
ತಿಳಿಯುವುದೇನೆಂದರೆ ಬ್ರಹ್ಮಚರ್ಯೆ ಪಾಲನೆ ಎಂದರೆ ಪ್ರಾಣಾಯಾಮದಿಂದ ನೀರು, ಬೆಂಕಿ, ಜೀವ ಉಸಿರು, ವೈದ್ಯ,
ಮಾಂತ್ರಿಕ ಸೂತ್ರ ಮತ್ತು ಉಜ್ವಲತೆ ಚಲಿಸುವ ನಿಪುಣನಾಗುವುದು. ಅದನ್ನು
ಕಲಿತು ನಾವು ಸೇವಿಸುವ ಆಹಾರದ ಕಡೆಯ ಸಾರವಸ್ತುವಾಗಿರುವ ಈ ವೀರ್ಯದಿಂದ ದೇಹದಲ್ಲಿ ಆರೋಗ್ಯವನ್ನು
ಮತ್ತು ಜ್ಞಾನವನ್ನು ಪಡೆಯುವವನಾಗಿ ಸದಾ ಕರ್ಮಾಸಕ್ತನಾಗಿರುವವನೇ ಬ್ರಹ್ಮಚಾರಿ. ಇಂತಹ
ಬ್ರಹ್ಮಚರ್ಯವನ್ನು ಸಂಸಾರಿಯೂ ನಿರ್ವಹಿಸಬಹುದು, ದೇಹದಲ್ಲಿ
ವೀರ್ಯವು ಕೇವಲ ಸಂತಾನಾಭಿವೃದ್ದಿಗೆ ಉತ್ಪತ್ತಿಯಾಗುತ್ತಿರುವ ದ್ರವ ಮಾತ್ರವಲ್ಲ, ಅದು ಸೋಮ ರಸ, ಅಮೃತ ಮತ್ತು ದೇಹದ ಸಕಲ ಜೀವಕೋಶಗಳಿಗೂ
ಜೀವಾಮೃತವನ್ನು ತುಂಬುವ ದ್ರವ ಎಂದು ಅರ್ಥ ಮಾಡಿಕೊಂಡಾಗ ಬ್ರಹ್ಮಚರ್ಯ ಎಂದರೆ ನಾವು ವೀರ್ಯ ಸ್ಖಲನ
ಮಾಡದೆ ಹೆಣ್ಣು ಸಂಗ ಮಾಡದೆ ಪರಿಶುದ್ಧರಾಗಿರುವುದು ಎಂಬ ಅರಿವಿನ ಲೋಕದಲ್ಲಿ ಸ್ವಲ್ಪ ಆಲೋಚನಾ
ವಿಧಾನ ಬದಲಾಗುವುದು.
ದೇಹದಲ್ಲಿ ಎಲ್ಲಾ ಪರಿಚಲನೆಗೆ ವಾಯು ಸಹಾಯಕ
“ಪಿತ್ತಂ ಪಂಗು ಕಫಃ ಪಂಗುಃ ಪಂಗವೋ
ಮಲಧಾತವಃ |
ವಾಯುನಾ ಯತ್ರ ನೀಯನ್ತೇ ಯತ್ರ ಗಚ್ಛನ್ತಿ
ಮೇಘವತ್॥
ಪವನಸ್ತೇಷು ಬಲವಾನ್ ವಿಭಾಗಕರಣಾನ್ಮತಃ |
ರಜೋಗುಣಮಯಃ ಸೂಕ್ಷ್ಮಃ ಶೀತೋ ರೂಕ್ಷೋ
ಲಘುಶ್ಜಲ॥“
(ಸ್ರಾಂಗಧರ ಸಂಹಿತಾ : 5-25-26)
ಭಾವಾರ್ಥ:- ಪಿತ್ತ ಕಫ, ದೇಹದ ಅನ್ಯ ಧಾತುಗಳ ಮತ್ತು ಮಲ (ಹೊಲಸು)
ಇವೆಲ್ಲ ಕುಂಟ, ಅಂದರೆ ಇವೆಲ್ಲವೂ ಶರೀರದಲ್ಲಿ ಒಂದು ಸ್ಥಾನದಿಂದ
ಮತ್ತೊಂದು ಸ್ಥಾನಕ್ಕೆ ತಾವಾಗಿಯೇ ಚಲಿಸಲಾರವು. ಇವುಗಳನ್ನು ವಾಯುವೇ ಕೊಂಡೊಯುತ್ತದೆ. ಹೇಗೆಂದರೆ
ಆಕಾಶದಲ್ಲಿ ವಾಯು ಮೋಡಗಳನ್ನು ಅಲ್ಲಿ-ಇಲ್ಲಿ ಕರೆದುಕೊಂಡು ಹೋಗುವುದೋ ಹಾಗೆ. ಈ ಮೂರು ದೋಷಗಳಲ್ಲಿ
ವಾತ, ಪಿತ್ತ ಮತ್ತು ಕಫಗಳಲ್ಲಿ ವಾತ (ಗಾಳಿ) ವೇ ಬಲಶಾಲಿಯಾಗಿದೆ;
ಏಕೆಂದರೆ ಅದು ಎಲ್ಲ ಧಾತು, ಮಲ ಇತ್ಯಾದಿಗಳನು
ವಿಭಾಗಿಸುವ ಮತ್ತು ಕ್ರಿಯಾಶೀಲತೆಯಿಂದ ತುಂಬಿದ ಸೂಕ್ಷ್ಮ ಅಂದರೆ ಸಮಸ್ತ ಶರೀರದ ಸೂಕ್ಷ್ಮ
ತೂತುಗಳಲ್ಲಿ ಪ್ರವೇಶ ಮಾಡಬಲ್ಲ. ಶೀತಲ, ಹಗುರವಾದ ಮತ್ತು ಚಂಚಲವಾಗಿದೆ.
(ಉಪನಿಷತ್ತುಗಳಲ್ಲಿ ಪ್ರಾಣವನ್ನು ಬ್ರಹ್ಮ ಎನ್ನಲಾಗಿದೆ. ಪ್ರಾಣವು ಶರೀರದ ಕಣಕಣದಲ್ಲೂ
ವ್ಯಕ್ತವಾಗಿದೆ.
ತಪ್ಪು ಮಾಡಿರುವೆನೆಂಬ ಪ್ರಜ್ಞೆ ಎಲ್ಲಾ ರೋಗಗಳಿಗೂ ಮೂಲ
“ಪ್ರಜ್ಞಾಪರಾಧೋ
ಹಿ ಸರ್ವರೋಗಾಣಾಂ ಮಾಲಕಾರಣಂ” (ಚರಕ ಆಯುರ್ವೇದ ಸಿದ್ಧಾಂತ) ಅಂದರೆ ತಪ್ಪು ಮಾಡಿರುವೆನೆಂಬ ಪ್ರಜ್ಞೆ ಎಲ್ಲಾ ರೋಗಗಳಿಗೂ ಮೂಲ. ಇಲ್ಲಿ
ವೈಜ್ಞಾನಿಕವಾಗಿ ಸ್ಟ್ರೆಸ್ ಎಲ್ಲಾ ಖಾಯಿಲೆಗೆ ಮುಲ ಕಾರಣವಾಗುತ್ತೆ ಎನ್ನುತ್ತಾರೆ ವಿಜ್ಞಾನಿಗಳು.
ಮಾನಸಿಕ ಅಸಮತೋಲನೆಯಿಂದ ಒತ್ತಡ ಅಥವಾ ಒತ್ತಡಜನಿತ ಹೃದಯರೋಗ, ರಕ್ತದೊತ್ತಡ, ನರರೋಗ, ದಪ್ಪವಾಗುವುದು ಅಥವಾ ಮಧುಮೇಹ ಇತ್ಯಾದಿ
ಜಠಿಲ ರೋಗಗಳು ಉತ್ಪನವಾಗುತ್ತದೆ. ಇದೇ ರೀತಿಯಲ್ಲಿ ವ್ಯಕ್ತಿಯ ಮಾಂಸ ಮೂಳೆಗಳ ಅನೇಕ ವಿಕೃತಿಗಳಿಗೆ
ಶಿಕಾರಿಯಾಗುತ್ತಾನೆ. ಆಂತರಿಕ ಅಸಮತೋಲನೆಯೇ ರೋಗವಾಗಿದೆ. ಅಂದರೆ ಒಳಗಿನ ಸಮತೋಲನೆಯೇ
ಆರೋಗ್ಯವಾಗಿದೆ.
ವಾಯು ಎಲ್ಲಾ ಇಂದ್ರಿಯಗಳಿಗೂ ಪ್ರೇರಕವಾಗಿದೆ
ವಾಯುಸ್ತಂತ್ರಯಂತ್ರಧರಃ
ಪ್ರವರ್ತಕಶ್ಚೇಷ್ಟಾನಾಮುಚ್ಚಾವಚಾನಾಂ,
ನಿಯಂತಾ
ಪ್ರಣೇತಾ ಚ ಮನಸಹ್,
ಸವ್ರೇಂದ್ರಿಯಾಣಾಮುದ್ಯೋಜಕಃ
ಸರ್ವೇಂದ್ರಿಯಾರ್ಥಾನಾಮಬಿವೋಢಾ
ಆಯುಷೋನುವೃತ್ತಿಪ್ರತ್ಯಯಭೂತಂ॥
(ಚರಕಸಂಹಿತಾ)
ಭಾವಾರ್ಥ:- ವಾಯು ದೇಹರೂಪಿ ಯಂತ್ರವನ್ನು ಧಾರಣೆ ಮಾಡುತ್ತದೆ. ಇದರ ಎಲ್ಲ ಚೇಷ್ಟೆಗಳು ಪ್ರವಾರ್ತಕವಾಗಿದೆ.
ಅವಂಚಿತ ವಿಷಯಗಳ ಕಡೆ ಹೋಗುವಂತಹ ಮನಸ್ಸಿನ ನಿಯಂತ್ರಕವಾಗಿದೆ. ಮತ್ತು ವಂಚಿತ ವಿಷಯಗಳಲ್ಲಿ ಮನಸ್ಸಿಗೆ
ಪ್ರೇರಕವಾಗಿದೆ. ಎಲ್ಲ ಇಂದ್ರಿಯಗಳಿಗೂ ಪ್ರೇರಕವಾಗಿದೆ. ಎಲ್ಲ ಇಂದ್ರಿಯಗಳನ್ನು ಮನಸ್ಸಿನ ಕಡೆ
ಕರೆದುಕೊಂಡು ಹೋಗುವಂತಹ ಮತ್ತು ಆಯಸ್ಸಿನ ನಿರಂತರತೆಯ ಸಾಕ್ಷಿಯಾಗಿದೆ.
ವಾಯುರಾಯುರ್ಬಲಂ ವಾಯುರ್ವಾಯುರ್ಧಾತಾ
ಶರೀರಿಣಾಮ್।
ವಾಯುರ್ವಿಶ್ವಮಿದಂ ಸರ್ವ
ಪ್ರಭುರ್ವಾಯುಶ್ಟ ಕೀರ್ತಿತ:॥
(ಚರಕಸಂಹಿತಾ)
ಭಾವಾರ್ಥ:- ವಾಯು ಜೀವನವಾಗಿದೆ. ವಾಯು ಶಕ್ತಿಯಾಗಿದೆ. ವಾಯು ಜೀವನ ಉದ್ದಾರಕವಾಗಿದೆ. ವಾಯುವೇ
ಈ ವಿಶ್ವದ ಕಾರಣವಾಗಿದೆ ಮತ್ತು ವಾಯುವನ್ನು ಎಲ್ಲರ ಪ್ರಭು ಎಂದು ಕರೆಯಲಾಗಿದೆ.
ತತ್ವವು ನಮ್ಮಲ್ಲೇ ಇದೆ – ಗರುಡಪುರಾಣ
ತತ್ತ್ವಮಾತ್ಮಸ್ಥಮಜ್ಞಾತ್ವಾ ಮೂಢಃ
ಶಾಸ್ತ್ರೇಷು ಮುಹ್ಯತಿ |
ಗೋಪಃ ಕಕ್ಷಗತೇ ಛಾಗೇ ಕೂಪೇ ಪಶ್ಯತಿ
ದುರ್ಮತಿಃ || || ೮೫ ||
ಗರುಡಪುರಾಣ, 16-80
ಭಾವಾರ್ಥ:- ತತ್ತ್ವವು ತನ್ನಲ್ಲಿಯೇ
ಇದೆಯೆಂಬುದನ್ನರಿಯದೆ, ಮೂಢನು ಶಾಸ್ತ್ರಗಳಲ್ಲಿ ಇದೆ ಎಂದು
ಭ್ರಮಿಸುತ್ತಾನೆ. ದನಕಾಯುವವನು ಮೇಕೆಯನ್ನು ತನ್ನ ಕಂಕುಳಲ್ಲಿಯೇ ಇಟ್ಟುಕೊಂಡು, ಅದು ಬಾವಿಯಲ್ಲಿದೆಯೆಂದು ಬುದ್ದಿಯಿಲ್ಲದೆ ಬಗ್ಗಿ ನೋಡುತ್ತಾನೆ.''
ವಿವರಣೆ:- ತಾನು
ಯಾರೆಂದು ಅರಿಯುವುದೇ ವೇದಾಂತದ ಪರಮ ಬೋಧನೆ ಎಂದು ವಿದ್ವಾಂಸರು ಹೇಳಿದ್ದಾರೆ. ತಾನೇ ಆತ್ಮ,
ತನ್ನಲ್ಲಿಯೇ ಎಲ್ಲವೂ ಇದೆ, ಹೊರಗೆ ನೋಡುವ
ಪ್ರಪಂಚದ ವೈವಿಧ್ಯವನ್ನು ತನ್ನ ದೇಹದಲ್ಲಿಯೇ ಕಾಣಲಾದೀತು ಎಂದು ವಿದ್ವಾಂಸರು ಬೋಧಿಸಿದ್ದಾರೆ.
ಹೊರಗಿನ ಪ್ರಪಂಚ ಬಹು ವಿಸ್ತಾರವಾದದ್ದು, ಅನಂತವಾದದ್ದು. ಅದನ್ನು
ನೋಡಿ ಮುಗಿಸುವುದು ಎಂದಿಗೂ ಯಾರಿಗೂ ಅಶಕ್ಯವೇ. ಪ್ರಕೃತಿಯು ತನ್ನ ರಹಸ್ಯವನ್ನು ಎಂದಿಗೂ
ಪೂರ್ತಿಯಾಗಿ ಬಿಟ್ಟುಕೊಡುವುದಿಲ್ಲ. ವಿಜ್ಞಾನಿಗಳಿಗೆ ಗೊತ್ತಿರುವುದು ಪ್ರಕೃತಿ ಸಾಮ್ರಾಜ್ಯದ
ಸಾಸಿವೆಕಾಳಿನಷ್ಟು ಮಾತ್ರ. ಎಲ್ಲಾ ವೇದ ಮತ್ತು ಸನಾತನ ಗ್ರಂಥಗಳು ನಮ್ಮನ್ನು ನಾವು
ಅರಿತುಕೊಳ್ಳುವುದಕ್ಕೆ ಮಾಡಿದ ಪ್ರಯತ್ನಗಳಾಗಿವೆ, ಅದು ಮುಂದೆ
ಓದುತ್ತಾ ಓದುತ್ತಾ ಎಲ್ಲರ ಅರಿವಿಗೆ ಬರುತ್ತೆ.
ಯಜುರ್ವೇದದಲ್ಲಿ ಪಂಡಿತರು ಕಂಡುಕೊಂಡ ಅಜಪ ಮಂತ್ರ
ಯಜುರ್ವೇದದ 5.11. ರಲ್ಲಿ ಹೀಗೆ ಇದೆ
ಇನ್ದ್ರಘೋಷಸ್ತವಾ ವಸುಭಿಃ
ಪುರಸ್ತಾತ್ಪಾತು ಪ್ರಚೇತಾಸ್ತ್ವಾ ರುದ್ರೈಃ
ಪಶ್ಚಾತ್ಪಾತು ಮನೋಜವಾಸ್ತ್ವಾ
ಪಿತೃಭಿರ್ದಕ್ಷಿಣತಃ
ಪಾತು ವಿಶ್ವಕರ್ಮಾ ತ್ವಾದಿಯೈರುತ್ತರತಃ
ಪಾತ್ವಿದಮಹಂ ತಪ್ತಂ ವಾರ್ಬಹಿರ್ಧಾ
ಯಜ್ಞಾತ್ರಿಃ ಸೃಜಾಮಿ ||
11
ಭಾವಾರ್ಥ:- "ವೈದಿಕ ದೇವರುಗಳ ಮುಖ್ಯಸ್ಥರು
ಆ ಸಂಪತ್ತಿನಲ್ಲಿ ನಿಪುಣರಾಗಿ ಮುಂದಿನಿಂದ ಉಸಿರು ಎಳೆಯುವುದು ಮತ್ತು ಉಸಿರು ಹೊರಹಾಕುವ ಮೂಲಕ
ಘರ್ಜಿಸುತ್ತಾರೆ. ನೂರು ಶಾಖವನ್ನು ತಯಾರಿಸುವ ಸೂರ್ಯನ ಕಿರಣಗಳು ಹಲವಾರು ಕರೆಗಳಿಂದ (ಅಜಪ
ಉಸಿರಾಟದಿಂದ) ಹಿಂದಕ್ಕೆ ಕರೆದೊಯ್ಯುತ್ತವೆ, ತ್ವರಿತತೆಯಿಂದಲ್ಲ,
ಪ್ರಾಚೀನ ಋಷಿ ಮತ್ತು ಕಾನೂನು ನೀಡುವವರ ಕೌಶಲ್ಯವನ್ನು ಪಡೆ, ಆದು ಉತ್ತಮ ಪೂರ್ವಿಕರ ಜ್ಞಾನ.
ನಾನು ಸೂರ್ಯನಿಂದ (ಶಾಖದಿಂದ) ಉತ್ತರಕ್ಕೆ (ಮೇಲಕ್ಕೆ) ಹೊರಡುವ ಹಲವಾರು ವಿಷಯಗಳನ್ನು
ದಕ್ಷಿಣದಿಂದ (ಮೂಲಾಧಾರದಿಂದ) ಕರೆಯುವ ಜ್ಞಾನದಿ ಪ್ರತಿಯೊಂದು ವಸ್ತುವನ್ನು
ಸೃಷ್ಟಿಸುತ್ತಿದ್ದೇನೆ, ಹೆಚ್ಚಿನವರು ಇದನ್ನು ರಕ್ಷಿಸಲು, ಜ್ಞಾನವನ್ನು ಪಡೆಯಲು ಮತ್ತು ಉಷ್ಣತೆಯಿಂದ ಶುದ್ಧೀಕರಿಸಲು ಬಯಸಿದರು. ಕೆಲವು ರೀತಿಯ
ಬ್ಲೀಟ್ (ಅಜಪ ಮಂತ್ರ) ವಿಲೇವಾರಿಯಿಂದ ಚಲನರಹಿತವಾಗಿ-ರುವವರನ್ನು (ಕುಂಡಲಿನಿಗಳನ್ನು)
ಸಮೀಪಿಸುವುದು ಮತ್ತು ಅತ್ಯುತ್ತಮವಾದ ನೀರನ್ನು (ಸೋಮರಸವನ್ನು) ಸೋರುವಂತೆ ಮಾಡುವುದು, ಅಂತಹ ಅನುದಾನಕ್ಕೆ ಚಲನೆ ನೀಡುವುದು."
ವಿವರಣೆ:- ವೈದಿಕ
ದೇವರುಗಳು ಯಾರು ಎಂದರೆ ನೈಸರ್ಗಿಕ ವಾಯು, ನೀರು, ಬೆಂಕಿ, ಇದರಲ್ಲಿ ಇಂದ್ರ ಎಂಬ ದೇವರನ್ನು ಬೆಂಕಿ,
ಸೂರ್ಯ ಮತ್ತು ವಿದ್ಯುತ್ ಶಕ್ತಿ ಎಂತಲೂ ನೋಡಲಾಗುತ್ತದೆ. ಪ್ರಕೃತಿಯ ದೇವರುಗಳ
ಮೇಲೆ ಅಧಿಪತ್ಯ ಸಾಧಿಸುವ ಆತ್ಮ ಶಕ್ತಿ ವೈದಿಕ ದೇವರುಗಳ ಮುಖ್ಯಸ್ಥ ಆತ ಮೊದಲಿಗೆ ಮುಂದಿನಿಂದ
ಉಸಿರು ಎಳೆಯುವುದು ಹೊರಹಾಕುವುದು ಮಾಡುವುದರಲ್ಲಿ ನೈಸರ್ಗಿಕ ಸಂಪತ್ತಿನಲ್ಲಿ
ನಿಪುಣರಾಗಿರುತ್ತಾರೆ. (ಉಸಿರಾಟವನ್ನು ಸುಷುಮ್ನಾ ನಾಡಿಗೆ ಕಳುಹಿಸದೆ ಇಡಾ ಪಿಂಗಳ ಮೂಲಕ ಆಜ್ಞಾ
ಚಕ್ರದವರೆಗೆ ಆಡುವ ಉಸಿರಾಟ ಮುಂದಿನಿಂದ
ಮಾಡುವುದಾಗಿದೆ) ಇಲ್ಲಿ ದೇಹದಲ್ಲಿ ಶಾಖವಿರುವವರೆಗೆ
ಜೀವ ಇರುವ ಬಗ್ಗೆ ನಮಗೆಲ್ಲಾ ತಿಳಿದಿದೆ. ಆ ರೀತಿಯ ಶಾಖವೇ ದೇಹದ ಆತ್ಮವಾಗಿ ಕೆಲಸ ಮಾಡುತ್ತದೆ. (ಆತ್ಮ
ಎಂದರೆ ಸಂಸ್ಕೃತಾಕ್ಷರ ಅರ್ಥದಲ್ಲಿ "ಜೀವ ಉಸಿರು ಅಮೃತ ಮಾಂತ್ರಿಕ ಸೂತ್ರ")
ಅದುವೇ
ಬಾಕಿ ಎಲ್ಲಾ ನೈಸರ್ಗಿಕ ನೀರು ವಾಯು ಮತ್ತು ಇತರೆ ದೇವರ ಅಧಿಪತಿ. ಸತ್ತ ಮನುಜನಲ್ಲಿ ನೀರಿನ ಅಂಶ
ಇರುತ್ತೆ, ವಾಯು ಇರುತ್ತೆ ಆದರೆ ಶಾಖ ಇರಲು ಸಾಧ್ಯವೇ ಇಲ್ಲ.
ಶಾಖವನ್ನು ನೀಡುವ ಈ ವಿಸ್ಮಯ ಬೆಂಕಿ, ಸೂರ್ಯ ಮತ್ತು ವಿದ್ಯುತ್
ಶಕ್ತಿ ಜೀವವನ್ನು ನೀಡುತ್ತದೆ, ಅದಿಲ್ಲದೆ ಸತ್ತ ದೇಹವನ್ನು ಪಂಚ-ಭೂತಗಳಲ್ಲಿ
ಲೀನ ಮಾಡಲು ಬಾಹ್ಯ ಬೆಂಕಿಯ ಶಾಖದ ಅವಶ್ಯವಿರುತ್ತೆ. ಬಾಹ್ಯ ಬೆಂಕಿ ಜೀವವನ್ನು ತೆಗೆದರೆ ಆಂತರಿಕ
ಬೆಂಕಿ ಜೀವವನ್ನು ಕೊಡುತ್ತದೆ. ಇಂತಹ ಜೀವ ನೀಡುವ ಶಾಖದಿಂದ ಕೂಡಿದ ಆತ್ಮವು ಅಜಪ ಮಂತ್ರದ ಮುಖೇನ
ಮುಂದಿನಿಂದ ಉಸಿರಾಟ ಆಡುತ್ತಾ ಘರ್ಜನೆ ಮಾಡುತ್ತದೆ. ನಿರಂತರ ಅಭ್ಯಾಸದಿಂದ ಉಸಿರನ್ನು ಹಿಂದಕ್ಕೆ
ಕರೆದೊಯ್ಯುತ್ತದೆ. ಅಂದರೆ ಉಸಿರನ್ನು ಬೆನ್ನುಹುರಿಯ ಬಾಗದಲ್ಲಿರುವ ಸುಷುಮ್ನಾ ನಾಡಿಯತ್ತಾ
ಕರೆದೊಯ್ಯುತ್ತದೆ. ಇದನ್ನು ಆತುರದಿಂದ ಮಾಡಬೇಡಿ ಎನ್ನುವ ಎಚ್ಚರಿಕೆ ಇದೆ. ಪ್ರಾಚೀನ ಋಷಿ ಮತ್ತು
ನಿಯಮವನ್ನು ನೀಡುವವರ ಬಳಿ ಅಂದರೆ ವೇದಗಳಿಂದ ಅದರ ಕೌಶಲ್ಯವನ್ನು ಪಡೆಯಲು ತಿಳಿಸಲಾಗಿದೆ.
ವೇದದಲ್ಲಿ
ಇರುವುದು ಉತ್ತಮ ಪೂರ್ವಿಕರ ಜ್ಞಾನವಾಗಿದೆ. ದಕ್ಷಿಣದಲ್ಲಿ ಇರುವ ಮೂಲಾಧಾರದಿಂದ ಉತ್ತರದಲ್ಲಿ
ಇರುವ ಸಹಸ್ರಾರದ ವರೆಗೆ ಇದೇ ಶಾಖದಿಂದ ಹಲವಾರು ವಸ್ತುಗಳನ್ನು ಸೃಷ್ಠಿಸಲಾಗುತ್ತದೆ, ವಾಯುವಿನಿಂದ ಅಂತಹ ವಸ್ತುಗಳನ್ನು ಸೆಳೆಯಲಾಗುತ್ತದೆ. ಇದನ್ನು ಪಡೆಯಲು ಶಾಖದಿಂದ
ಪ್ರಾಣಾಯಾಮವನ್ನು ಮಾಡಿ ಶುದ್ದೀಕರಿಸುವ ಅಥವಾ ನಾಡಿ ಶುದ್ದೀಕರಿಸುವ ಕ್ರಿಯೆ ಮಾಡಿದರೂ ತಪ್ಪಲ್ಲ.
ಅಜಪ ಮಂತ್ರಗಳ ಧ್ಯಾನದಿಂದ ಮಾಡುವ ಉಸಿರಾಟದಲ್ಲಿ ಕುಂಡಲಿನಿ ಚಕ್ರಗಳನ್ನು ಸಮೀಪಿಸಿ ಅಲ್ಲಿನ
ನಾಡಿಗಳನ್ನು ಜಾಗೃತೆಗೊಳಿಸಿದಾಗ ಅವುಗಳಿಂದ ಅಮೃತವು ದೇಹಾದ್ಯಂತ ಹಂಚಿಕೆ ಆಗುವುದು. ಇದುವೇ ವೇದ
ರಹಸ್ಯ ಇಲ್ಲಿನ ಶ್ಲೋಕದಲ್ಲಿ ಸಮಗ್ರವಾಗಿ ಸಾರಿರುವುದು.
ಮೊದಲಿಗೆ ಷಟ್ಚಕ್ರ (ಆರು ಚಕ್ರಗಳ ಮುಖೇನ ಉಸಿರಾಟ ನಂತರ ಸುಷುಮ್ನಾ ಮುಖೇನ ಸಹಸ್ರಾರಕ್ಕೆ
ಏಳು ಚಕ್ರಗಳಲ್ಲಿ ಉಸಿರಾಟ ತೋರಿಸುತ್ತದೆ)
ಇಷ್ಟಪ್ರಾಪ್ತ್ಯನಿಷ್ಟಪರಿಹಾರಯೋಃ
ಅಲೌಕಿಕಂ ಉಪಾಯಂ ಯೋ ಗ್ರಂಥೋ
ವೇದಯತಿ ಸ ವೇದಃ || ಕೃಷ್ಣ
ಯಜುರ್ವೇದಸಂಹಿತಾ ಸಾಯಣಭಾಷ್ಯ 1-1-1
ಭಾವಾರ್ಥ:- ಬಯಸಿದ್ದನ್ನು ಪಡೆಯುವುದು ಮತ್ತು ಕೇಡಾಗುವುದನ್ನು ತಪ್ಪಿಸಿಕೊಳ್ಳುವುದು ಈ
ವಿಷಯದಲ್ಲಿ ಲೋಕದಿಂದ ತಿಳಿದುಬರದ ಉಪಾಯವನ್ನು ತಿಳಿಸುವ ಗ್ರಂಥವೇ ವೇದ.
ಯಜ್ಞವಿತ್ ಸರ್ವವಿದ್ ಭವತಿ| ಯಜ್ಞಃ ಸರ್ವಮ| ತಸ್ಮಾದ್
ಯಾಜ್ಞೀಷು ಚಿಂತಾಸು ರಮಂತೇ
ತತ್ತ್ವದರ್ಶಿನಃ ॥
ಭಾವಾರ್ಥ:- ಯಜ್ಞವನ್ನು ತಿಳಿದವನು ಎಲ್ಲವನ್ನೂ ತಿಳಿದವನಾಗುತ್ತಾನೆ. ಯಜ್ಞವೇ ಸರ್ವಸ್ವ,
ಆದ್ದರಿಂದ ತತ್ವ್ವದರ್ಶಿಗಳು ಯಜ್ಞದ ಚಿಂತನೆಯಲ್ಲಿ ಅನಿರ್ವಚನೀಯ ಆನಂದವನ್ನು
ಅನುಭವಿಸುತ್ತಾರೆ.
ವೇದಾಧ್ಯಯನದೊಡನೆ
ಯಾರಿಗೆ ಮಂತ್ರಾರ್ಥವೂ ತಿಳಿದಿದೆಯೋ ಅಂತಹವರು ಅರ್ಥವನ್ನು ಅನುಸಂಧಾನ ಮಾಡಿದರೆ ಮಾನಸಿಕ ಯಜ್ಞವನ್ನು
ಅನುಷ್ಠಿಸಿದಂತಾಗುತ್ತದೆ. "ಅಗ್ನಿಹೋತ್ರ ಫಲಾಃ ವೇದಾಃ” "ಯಜ್ಞೋ ಹಿ ಶ್ರೇಷ್ಠತಮಂ ಕರ್ಮ' ಎಂಬ ಮಾತುಗಳು
ತಿಳಿಸುವಂತೆ ವೇದಮಂತ್ರಗಳಿಗೆ ಯಜ್ಞಗಳಲ್ಲಿಯೇ ವಿನಿಯೋಗ. ವೇದಗಳಿಗೆ ಫಲ ಅಗ್ನಿಹೋತ್ರ
ಮೊದಲಾದವುಗಳನ್ನು ಅನುಷ್ಠಿಸುವುದೇ ಆಗಿದೆ. ಅಗ್ನಿಹೋತ್ರವೆಂಬುದು ಗೃಹಸ್ಥನಾದವನು ನಿತ್ಯವೂ
ಬೆಳಗ್ಗೆ ಮತ್ತು ಸಾಯಂಕಾಲ ಅಗ್ನಿಯಲ್ಲಿ (ಅಪಾನ ವಾಯುವಿನಲ್ಲಿ) ಮಾಡಬೇಕಾದ
ಹವಿಸ್ಸಿನ ಅರ್ಪಣೆ.
ವೇದದ
ವಿದ್ವಾಂಸರೂ ಒಟ್ಟಿಗೆ ಸೇರಿ ತಮ್ಮ ತಮ್ಮ ಪ್ರಾವೀಣ್ಯವನ್ನು ಪ್ರಕಟಿಸುತ್ತಾ, ಎಲ್ಲರೂ ಒಟ್ಟಿಗೆ ಸೇರಿ ಒಂದು ಕರ್ಮವನ್ನು ನೆರವೇರಿಸಿದಾಗ ಎಲ್ಲರ ಪ್ರಾವೀಣ್ಯದ
ಪರಿಚಯವು ಎಲ್ಲರಿಗೂ ಆಗುವುದಲ್ಲದೇ ತಾವೆಲ್ಲರೂ ಒಂದೇ ವೇದೋಪವನದ ವೃಕ್ಷಗಳನ್ನು ಆಶ್ರಯಿಸಿದವರು
ಎಂಬ ಅರಿವು ಎಲ್ಲರಿಗೂ ಉಂಟಾಗುವುದು. ಹೀಗೆ ಎಲ್ಲ ವೇದಗಳ ವಿದ್ವಾಂಸರೂ ಸೇರಿ ನೆರವೇರಿಸುವ
ಮಂಗಲಕಾರ್ಯವೇ “ಯಜ್ಞ.” ಎಂಬ ವ್ಯಾಖ್ಯಾನವೂ ಇದೆ.
ನಾಲ್ಕು
ವೇದಗಳಲ್ಲಿ ಯಾವ ಒಂದು ವೇದದ ವಿದ್ವಾಂಸ ಇಲ್ಲದಿದ್ದರೂ ಆ ಯಜ್ಞವು ನಡೆಯಲಾರದು. ಎಲ್ಲ ವೇದಗಳ
ಸಹಕಾರದಿಂದಲೇ ಯಜ್ಞವು ಸಂಪನ್ನವಾಗುವುದು. ಯಜ್ಞದಲ್ಲಿ ಭಾಗವಹಿಸುವ ಋಗ್ವೇದದ ಋತ್ತಿಜನಿಗೆ 'ಹೋತಾ' ಎಂದು ಹೆಸರು. ಯಜುರ್ವೇದದ ಋತ್ತಿಜನು 'ಅಧ್ವರ್ಯ' ಎನಿಸಿಕೊಳ್ಳುತ್ತಾನೆ. ಸಾಮವೇದದ ಋತ್ತಿಜನಿಗೆ
"ಉದ್ದಾತಾ' ಎಂದು ಹೆಸರು. ಅಥರ್ವವೇದದ ಋತ್ತಿಜನಿಗೆ 'ಬ್ರಹ್ಮಾ' ಎಂದು ಹೆಸರು. ಈ ಕಾರಣಗಳಿಂದ ಋಗ್ವೇದವನ್ನು 'ಹೋತೃವೇದ'
ವೆಂದೂ, ಯಜುರ್ವೇದವನ್ನು 'ಅಧ್ವರ್ಯುವೇದ' ವೆಂದೂ, ಸಾಮವೇದವನ್ನು
"ಉದ್ದಾತೃವೇದ' ವೆಂದೂ, ಅಥರ್ವವೇದವನ್ನು
'ಬ್ರಹ್ಮವೇದ' ವೆಂದೂ ಕೆರೆಯುತ್ತಾರೆ.
ಯಜ್ಞದಲ್ಲಿ
ಹೋತೃವು ದೇವತೆಗಳನ್ನು ಆಹ್ವಾನಿಸುತ್ತಾನೆ. ಅಧ್ವರ್ಯುವು ಯಜ್ಞವೇದಿಕೆಯನ್ನು ರಚಿಸಿ ಹೋಮಾದಿಗಳನ್ನು
ಮಾಡುತ್ತಾನೆ. ಉದ್ಗಾತೃವು ಋಕ್ಕುಗಳನ್ನು ಸಾಮದಿಂದ ಗಾನಮಾಡಿ ದೇವತೆಗಳನ್ನು ಸಂತೋಷಪಡಿಸುತ್ತಾನೆ.
ಮತ್ತು ಬ್ರಹ್ಮನು ಯಜ್ಞಗಳನ್ನು ರಾಕ್ಷಸರ ಉಪದ್ರವದಿಂದ ಕಾಪಾಡುತ್ತಾನೆ. ಅಲ್ಲದೇ ಇಡೀ ಯಜ್ಞ
ಕಾರ್ಯಕ್ಕೆ ಅಧ್ಯಕ್ಷನಾಗಿರುತ್ತಾನೆ. ಅವನಿಗೆ ಅಥರ್ವವೇದದ ಜೊತೆಗೆ ಇತರ ವೇದಗಳ ಪರಿಜ್ಞಾನವೂ
ಇರಬೇಕೆಂದು ಶಾಸ್ತ್ರಗಳು ಹೇಳುತ್ತವೆ.
ತೈತ್ತರೀಯ
ಸಂಹಿತೆಯಲ್ಲಿ ಈ ರೀತಿಯಾದ ಉಲ್ಲೇಖ ಇದೆ “ಎಲೈ ಸರ್ವವ್ಯಾಪಕನೂ”' ಸರ್ವರಕ್ಷಕನೂ
ಆಗಿರುವ ವಿಷ್ಣುವೇ ದೇವತೆಗಳಿಗೋಸ್ಕರ ಸಿದ್ಧ ಪಡಿಸುತ್ತಿರುವ ಈ ಹವ್ಯವನ್ನು ರಕ್ಷಿಸು. ಇಲ್ಲಿ
ಹವ್ಯ ಎಂದರೆ ಯಜ್ಞದಲ್ಲಿ ಅರ್ಪಣೆಗಾಗಿ ತಯಾರಾಗುತ್ತಿರುವ ಬೆಣ್ಣೆಯಂತಹ ಪಧಾರ್ಥ ಎಂತಲೂ ಅರ್ಥ
ಇದೆ. ಇದು ಅಂತರಿಕವಾಗಿ ಅಮೃತ ಮಾದರಿಯಲ್ಲಿ ನಮ್ಮ ದೇಹದಲ್ಲಿ ತಯಾರಾಗುತ್ತದೆ. ನಮ್ಮ ದೇಹದಲ್ಲಿ
ಇರುವ ಕೋಟ್ಯಾನು ಜೀವಾಕ್ಕೋಶಗಳೆಂಬ ದೇವತೆಗೆಳಿಗೆ ಈ ಹವ್ಯವನ್ನು ಅರಿಯುವ ಬಗ್ಗೆ ತೈತ್ತರೀಯ
ಸಂಹಿತೆಯಲ್ಲಿ 1-1-6 ರಲ್ಲಿ ಹೀಗೆ ಹೇಳಿದ್ದಾರೆ, “ಪ್ರಾಣ,
ಅಪಾನ ಮತ್ತು ವ್ಯಾನಗಳು ಉಚ್ಛ್ವಾಸ, ನಿಶ್ವಾಸ
ಮತ್ತು ಅವೆರಡರ ಸಂಧಿಯಲ್ಲಿರುವ ವಾಯುವಿನ ವೃತ್ತಿಗಳು. ಪ್ರಾಣಾಪಾನಗಳ ಸಂಧಿಯೇ
ವ್ಯಾನವೆನಿಸುತ್ತದೆ. ಇವುಗಳನ್ನು ಯಜಮಾನನಲ್ಲಿ ಚಿರಕಾಲ ಸ್ಥಾಪಿಸುವುದಕ್ಕಾಗಿ ಹವ್ಯವಾದ
ನಿನ್ನನ್ನು ಅರೆಯುತ್ತೇನೆ”.
ನಮ್ಮ
ದೇಹದ ಸಮಗ್ರ ಚಟುವಟಿಕೆಗಳಿಗೆ ಶಕ್ತಿದಾತೃವಾಗಿ ಜೀವಾತ್ಮನಿದ್ದಾನೆ. ಜೀವನಿಲ್ಲದೆ ದೇಹದಲ್ಲಿ
ಯಾವುದೇ ಚಟುವಟಿಕೆಗಳು ನಡೆಯವು. ಅದರಂತೆ ಬ್ರಹ್ಮಾಂಡದಲ್ಲಿಯೂ ಭಗವಂತನೆಂಬ ಚಿನ್ಮಯನಿರುವುದರಿಂದ
ಜಗತ್ತಿನ ಸಕಲ ವ್ರವೃತ್ತಿಗಳೂ ನಡೆಯುತ್ತಿವೆ. ನಮ್ಮ ಶರೀರದಿಂದ ಅನೇಕ ಕ್ರಿಯೆಗಳು ಅನಾಯಾಸ ವಾಗಿ
ನಡೆಯುವಂತೆ ಭಗವಂತನೂ ಜಗತ್ತಿನ ಮೂಲಕ ಕ್ರೀಡೆಯಂತೆ ಪ್ರವೃತ್ತಿಗಳನ್ನು ನಡೆಸುತ್ತಿದ್ದಾನೆ.
ಆದ್ದರಿಂದಲೇ ಜಗತ್ತಿಗೆ ಆತ್ಮನೆನಿಸಿದ್ದಾನೆ. ವರಾಹನ ಒಂದು ಶರೀರ ಜಗತ್ತಾದರೆ, ಮತ್ತೊಂದು ಶರೀರ ಯಜ್ಞ. ಆದ್ದರಿಂದಲೇ ಯಜ್ಞವರಾಹನೆನಿಸಿದ್ದಾನೆ.
ಸತ್ಕರ್ಮಗಳೆನಿಸಿದ
ಯಜ್ಞಯಾಗಾದಿಗಳ ಮೂಲಕ ನಾವು ಭಗವಂತನನ್ನು ಗುರುತಿಸಬೇಕು. ಆತ್ಮನು ನಿತ್ಯನಾಗಿದ್ದರೂ ಪ್ರಕಟನಾಗಲು
ಶರೀರ ಬೇಕಾಗುವಂತೆ ವ್ಯಾಪ್ತನಾದ ಭಗವಂತನು ಪ್ರಕಟನಾಗಲು ಯಜ್ಞ ಬೇಕು. ಸತ್ಕರ್ಮಗಳಿಂದ ಭಗವಂತ
ಪ್ರಕಟನಾಗುತ್ತಾನೆ. ಜಗತ್ತೆಂಬ ಶರೀರದಲ್ಲಿ ನೆಲೆನಿಂತು ಚಟುವಟಿಕೆಗಳನ್ನು ನಡೆಸಿದರೆ, ಯಜ್ಞವೆಂಬ ಶರೀರದಲ್ಲಿದ್ದು ವ್ಯಕ್ತನಾಗುತ್ತಾನೆ
ಯಜ್ಞ
ಎಂದರೆ “ದೇವತಾ ಉದ್ದೇಶೇನ ದ್ರವ್ಯತ್ಯಾಗಃ” “ಹವಿಸ್ಸನ್ನು ಅಗ್ನಿಗೆ ಅರ್ಪಿಸುವುದೇ ಯಜ್ಞ” ಜ್ಞಾನಿಗಳು
ಹೇಳುತ್ತಾರೆ, ಇದರಾರ್ಥ ಇಷ್ಟೇ ಅಲ್ಲ, ನಮ್ಮ ದೈನಂದಿನದ ಎಲ್ಲ ಕ್ರಿಯೆಗಳೂ ಯಜ್ಞ ವಾಗಬೇಕು. ಭಗವತ್ಪ್ರೀತಿಯನ್ನು
ಉದ್ದೇಶವಾಗಿಟ್ಟು ಕೊಂಡು "ಮಾಡುವ ಪರೋಪಕಾರರೂಪವಾದ ತ್ಯಾಗವೇ "ಯಜ್ಞ” ಎನಿಸಿದೆ
ಎನ್ನುತ್ತಾರೆ. ಸ್ವಾರ್ಥರಹಿತ ತ್ಯಾಗ ಮತ್ತು ಭಗವದ್ಬಕ್ತಿಗಳು ಬದುಕಿನಲ್ಲಿ ಸಮ್ಮಿಲನಗೊಂಡಾಗ
ಜೀವನವೂ ಯಜ್ಞ ಎನಿಸುತ್ತದೆ ಎನ್ನುತ್ತಾರೆ. ಭಕ್ತಿ ತ್ಯಾಗರೂಪವಾದ ಯಜ್ಞವೇ ಭಗವಂತನ ಶರೀರ
ಎನ್ನುತ್ತಾರೆ. ಯಜ್ಞ ಅಂದರೆ ತ್ಯಾಗ, ತನ್ನದ್ದು ಯಾವುದೂ ಇಲ್ಲ, ಎಲ್ಲವೂ ಅವನದ್ದೇ ಎಂಬ ಚಿಂತನೆಯೇ ಯಜ್ಞ ಎನ್ನುತ್ತಾರೆ.
ಬ್ರಹ್ಮದೇವರು
ಹೇಳುತ್ತಾರೆ- “ಇತಿ
ಸಂಭೃತ ಸಂಭಾರಃ ಪುರುಷಾವಯವೈರಹಮ್ । ತಮೇವ ಪುರುಷಂ ಯಜ್ಞಂ ತೇನೈವಾಯಜಮೀಶ್ವರಮ್ ॥ - (ಭಾಗವತ 2-6-26)” ಅಂದರೆ, ಭಗವಂತನ ಅವಯವಗಳಿಂದ ರೂಪುಗೊಂಡ ಭಗವಂತನದ್ದೇ
ಆದ ವಸ್ತುಗಳಿಂದ ಭಗವಂತನನ್ನು ಕುರಿತು ಅವನ ಪೂಜಾರೂಪವಾದ ಯಜ್ಞವನ್ನು ಅರ್ಪಿಸಿದೆವು.
ಶ್ರೀಮದಾಚಾರ್ಯರು
ತಂತ್ರಸಾರದಲ್ಲಿ ಧ್ಯಾನದ ಕ್ರಮಗಳನ್ನು ನಿರೂಪಿಸಿದ್ದಾರೆ. “ಖಂಡಸ್ಮೃತಿರ್ಧಾರಣಾ ಸ್ಯಾದಖಂಡಾ ಧ್ಯಾನ
ಮುಚ್ಯತೇ । ಅಪ್ರಯತ್ನಾತ್ ಸಮಾಧಿಶ್ಚ ದರ್ಶನಂ ಚಿರಯಾ ತಯಾ । ಅಥವಾ ಸತತಂ ಶಾಸ್ತ್ರವಿಮರ್ಶೇನ
ಭವಿಷ್ಯತಿ ॥“ (4-157)
ಭಾವಾರ್ಥ:- “ಧ್ಯಾನ, ಧಾರಣಾ, ಸಮಾಧಿ,
ಶಾಸ್ತ್ರಾಧ್ಯಯನ ಇವೆಲ್ಲವನ್ನೂ ಅಳವಡಿಸಿಕೊಳ್ಳಬೇಕು. ಭಗವಂತ ಮತ್ತು ಅವನ
ಅವಯವಗಳಲ್ಲಿ ಜಗತ್ತು. ಹೀಗೆ ಎರಡೂ ಕಡೆಯ ಚಿಂತನೆಯೇ ಧಾರಣಾ ಎನಿಸಿದರೆ ನಿರಂತರ ಸಮಗ್ರ
ಹರಿಸ್ಮರಣೆ ಧ್ಯಾನ ಎನಿಸುತ್ತದೆ. ಸಕಲ ಇಂದ್ರಿಯಗಳನ್ನು ಅಂತರ್ಮುಖಗೊಳಿಸಿ ಪ್ರಯತ್ನ ಪೂರ್ವಕವಾಗಿ
ಸಾಧಿಸ ಬೇಕಾದದ್ದು ಧ್ಯಾನವಾದರೆ ಇದಕ್ಕೂ ಮಿಗಿಲಾದದ್ದು ಸಮಾಧಿ. ಪ್ರಯತ್ನವಿಲ್ಲದೆ ನಿರಂತರ ಹರಿಸ್ಮರಣೆ
ಮಾಡುವವರು ಸಮಾಧಿ ಪುರುಷರೆನಿಸುತ್ತಾರೆ. ಅಥವಾ ನಿರಂತರ ಶಾಸ್ತ್ರ ಅಧ್ಯಯನ ಮಾಡುವುದರಿಂದಲೂ ಹರಿ
ಒಲಿಯುವನು”.
ಸ ಏವ ಭೂಯೋ
ನಿಜವೀರ್ಯಚೋದಿತಾಂ ಸ್ವಜೀವ ಮಾಯಾಂ ಪ್ರಕೃತಿಂ ಸಿಸೃಕ್ಷತೀಮ್ । ಅನಾಮರೂಪಾತ್ಮನಿ ರೂಪನಾಮನೀ
ವಿಧಿತ್ಸಮಾನೋsಸಸಾರ ಶಾಸ್ತಿಕೃತ್ || - ಭಾಗವತ 1-10-23 ॥
ಭಾವಾರ್ಥ;- ನಮ್ಮೆಲ್ಲರ ದೇಹದ
ಆತ್ಮ ಜೀವ. ದೇಹದೊಳಗೆ ಜೀವಾತ್ಮನಿದ್ದಾಗ ದೇಹದ ಚಟುವಟಿಕೆ. ಜೀವಾತ್ಮನಿಲ್ಲದಿರೆ ದೇಹ ನಿಷ್ಕ್ರಿಯ.
ಈ ದೇಹದ ಆತ್ಮ ಜೀವನಾಗಿದ್ದರೆ ಸಮಗ್ರ ಪ್ರಪಂಚದ ಆತ್ಮ ಭಗವಂತ. ಜಗತ್ತು ಭಗವಂತನ ಶರೀರವಿದ್ದಂತೆ.
ಅವನು ಈ ಪ್ರಕೃತಿಯ ಒಳಗೆ ಸೇರಿದಾಗ ಎಲ್ಲ ಕ್ರಿಯೆಗಳು ಆರಂಭವಾಗುತ್ತವೆ. ಭಗವಂತನಿಲ್ಲದಿರೆ
ಜಗತ್ತೇ ಸ್ತಬ್ದ. ಆದ್ದರಿಂದ ಭಗವಂತನೇ ವಿಶ್ವಾತ್ಮನಾಗಿದ್ದಾನೆ.
ಬ್ರಹ್ಮಸ್ಥಶ್ಚೈವ
ರುದ್ರಸ್ಥಹ್ ಸ್ವಯಂ ಚಾಪಿ ಹರಿಃ ಪ್ರಭುಃ । ಪ್ರಜಾಂ ತ್ರಿಪುರುಷ ಸಮಾಂ ಯಚ್ಛತ್ವಿತ್ಯತ್ರಿರೈಚ್ಛತ
॥ - (ಭಾ. ತಾ. ನಿ. 4.30) ಅಂದರೆ, ಬ್ರಹ್ಮನಲ್ಲಿ ಬ್ರಹ್ಮರೂಪದಿಂದ, ರುದ್ರನಲ್ಲಿ ರುದ್ರರೂಪದಿಂದ, ಅವರವರಲ್ಲಿ ಆಯಾ
ರೂಪಗಳಿಂದ ಭಗವಂತನು ಇದ್ದುಕೊಂಡು ಎಲ್ಲರನ್ನೂ ನಿಯಂತ್ರಣ ಮಾಡುತ್ತಾನೆ.
ದೇವತೆಗಳಲ್ಲಿ
ದೇವತೆಗಳ ರೂಪದಿಂದ, ದೈತ್ಯರಲ್ಲಿ ದೈತ್ಯಾಕಾರದಿಂದ ಇರುತ್ತಾನೆ.
ಹೀಗೆಂದ ಮಾತ್ರಕ್ಕೆ ಅವನಿಗೆ ಅವರವರ ಸ್ವಭಾವ ಬರುವುದಿಲ್ಲ. ಅವನದ್ದು ಚಿನ್ಮಯರೂಪ. ನೀರಿಗೆ ಒಂದು
ರೂಪವಿದೆ. ರೂಪವಿಲ್ಲದ ವಸ್ತು ನೋಡಲೂ ಸಾಧ್ಯವಿಲ್ಲ. ರೂಪವಿದ್ದರೂ ಒಂದು ನಿಯಮಿತವಾದ ಆಕಾರವಿಲ್ಲ.
ನೀರನ್ನು ಯಾವುದರಲ್ಲಿ ಹಾಕುತ್ತೇವೆಯೋ ಆ ನೀರು ಆ ವಸ್ತುವಿನ ಆಕಾರವನ್ನೇ ತಾಳುತ್ತದೆ. ಬಿಂದಿಗೆ,
ತಂಬಿಗೆ, ಗಿಂಡಿ ಇದೇ ನೀರಿನ ಆಕಾರ. ಇದರಂತೆ
ಭಗವಂತನಿಗೂ ಒಂದು ಪ್ರತ್ಯೇಕ ಆಕಾರವೆಂಬುದಿಲ್ಲ. ಎಲ್ಲೆಡೆಯೂ ಎಲ್ಲಾ ಆಕಾರಗಳಿಂದ ಇದ್ದು ವಿಕಾರಕ್ಕೊಳಗಾಗದೆ
ನಿಯಂತ್ರಿಸುತ್ತಾನೆ. ಬ್ರಹ್ಮದೇವರಲ್ಲಿ ಚತುರ್ಮುಖಿಯಾಗಿದ್ದರೆ, ರುದ್ರನಲ್ಲಿ
ಮುಕ್ಕಣ್ಣನಾಗಿದ್ದಾನೆ. ಇಂದ್ರನಲ್ಲಿ ಸಹಸ್ರಾಕ್ಷನಾಗಿಯೂ ಇದ್ದಾನೆ. ಅನಂತನು ಅನಂತರೂಪನಾದ್ದರಿಂದ
ಅನಂತನಾಮಗಳಿಂದ ಕರೆಸಿಕೊಳ್ಳುತ್ತಾನೆ. ಎಲ್ಲಾ ನಾಮಗಳೂ ಅವನದ್ದೇ. ಒಂದು ಹೆಸರಿನವನಿವನಲ್ಲ. ಹೀಗೆ
ಭಗವಂತನು ನಾಮ ರೂಪಾತ್ಮಕವಾದ ಪ್ರಪಂಚವನ್ನು ವ್ಯಾಪಿಸಿಕೊಂಡಿದ್ದಾನೆ.
ಒಮ್ಮೆ
ದೇವತೆಗಳೆಲ್ಲರೂ “ಭಗವಂತನನ್ನು ಎಲ್ಲಿ ಧ್ಯಾನಿಸಬೇಕು” ಎಂದು ವಿಚಾರಮಾಡಿದರು. ಬೇರೆ ಬೇರೆ
ದೇವತೆಗಳಲ್ಲಿ ಭಗವಂತನ ಧ್ಯಾನಮಾಡಬೇಕೆಂದು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಕೊನೆಗೆ
ದೇವತೆಗಳು ವಾಯುದೇವರಲ್ಲಿ ಹರಿಯನ್ನು ಧ್ಯಾನಿಸಬಯಸಿದರು. ಧ್ಯಾನವು ಕೈಗೂಡಿತು. ವಾಯುದೇವರ
ಮನಸ್ಸನ್ನು ಕೆಡಿಸಲು ಕಲಿಗೆ ಸಾಧ್ಯವಾಗಲಿಲ್ಲ. ಬ್ರಹ್ಮ-ವಾಯುಗಳ ಮನಸ್ಸನ್ನು ಯಾವ ದುಷ್ಟಶಕ್ತಿಗೂ
ಹಾಳುಗೆಡಹಲಾಗದು. ಅಚ್ಚೇದ್ಯ ಅಭೇದ್ಯವಾದ ಆತ್ಮಶಕ್ತಿ ಇವರದು.
ಯಸ್ಯಾಸ್ತಿ
ಭಕ್ತಿರ್ಭಗವತ್ಯಕಿಂಚನಾ ಸರ್ವೈರ್ಗುಣೈಸ್ತತ್ರ ಸಮಾಸತೇ ಸುರಾಃ (ಭಾಗವತ 5-18-12) ಅಂದರೆ, ದೀಪವಿಲ್ಲದ ಮನೆಗೆ ಕಳ್ಳರು ನುಗ್ಗುತ್ತಾರೆ.
ದೀಪ ಉರಿಯುತ್ತಿದ್ದರೆ ಜನರು ಎಚ್ಚೆತ್ತಿ ದ್ದಾರೆಂದು ಒಳಬರಲು ಅಂಜುತ್ತಾರೆ.
ಇದಕ್ಕೆ
ಮಹಾತ್ಮರೂ ಹೀಗೆ ಹೇಳುತ್ತಾರೆ, ಅದರಂತೆ ಅಜ್ಞಾನವೆಂಬ ಕತ್ತಲು
ತುಂಬಿದ ಮನವೆಂಬ ಮನೆಯೊಳಗೆ ಅಸತ್ಕರ್ಮಗಳೆಂಬ ಅಸುರರು ಧೈರ್ಯವಾಗಿ ಪ್ರವೇಶಿಸುತ್ತಾರೆ.
ನಮ್ಮಲ್ಲಿರುವ ಸದ್ಗುಣಗಳೆಂಬ ಸಂಪತ್ತನ್ನು ದೋಚುತ್ತಾರೆ. ಮನಸು ದುರ್ಗುಣಗಳ ಅಡಗುದಾಣವಾಗುತ್ತದೆ.
ಆದರೆ ಮನೆಯಲ್ಲಿ ದೀಪ ಉರಿಯುತ್ತಿದ್ದರೆ ಕಳ್ಳರ ಭಯವಿಲ್ಲ. ಅದರಂತೆ ಮನವೆಂಬ ಮನೆಯಲ್ಲಿ ಭಕ್ತಿ
ಎಂಬ ನಂದಾದೀಪ ಉರಿಯುತ್ತಿದ್ದರೆ ಅಸುರರ ಭಯವಿಲ್ಲ. ಸದ್ದುಣಗಳ ಪ್ರತೀಕರಾದ ದೇವತೆಗಳು
ಆಗಮಿಸುತ್ತಾರೆ. ಆದ್ದರಿಂದ ನಮ್ಮ ಹೃದಯದೇಗುಲದಲ್ಲಿ ನಿರಂತರವು ಭಕ್ತಿ ಎಂಬ ನಂದದ ದೀಪ ಉರಿಯುತ್ತಿರಬೇಕು.
ಭಗವಂತನು ಎಲ್ಲ ಜೀವಿಗಳ ಆತ್ಮ. ಹೇಗೆ ನೀರಿಲ್ಲದೆ ಮೀನುಗಳು ಬದುಕುವುದಿಲ್ಲವೋ, ಅದರಂತೆ ಭಗವಂತನಿಲ್ಲದ ಜೀವರಿಗೆ ಅಸ್ತಿತ್ವವಿಲ್ಲ.
ಭಗವಂತನನ್ನು
ತಿಳಿಯಲು ಬ್ರಾಹ್ಮಣನಾಗಬೇಕಿಲ್ಲ. ಋಷಿ-ಯಾಗಬೇಕಿಲ್ಲ. ಭಾರೀ ಪಾಂಡಿತ್ಯ ಗಳಿಸಬೇಕಿಲ್ಲ. ದಾನ,
ಧರ್ಮ, ಯಜ್ಞ ಯಾವುದೂ ಪ್ರಮುಖವಾದವುಗಳಲ್ಲ.
ಭಗವಂತ ಒಲಿಯು-ವುದು ನಿರ್ಮಲವಾದ ಭಕ್ತಿಗೆ ಮಾತ್ರ. ನಿರ್ಮಲವಾದ ಪ್ರೇಮ ಯಾರ ಹೃದಯದಲ್ಲಡಗಿದೆಯೋ
ಅವರ ವಿಷಯದಲ್ಲಿ ಭಗವಂತ ಪ್ರಸನ್ನ ನಾಗುತ್ತಾನೆ ಎನ್ನುತ್ತಾನೆ ಪ್ರಹ್ಲಾದ.
ದೇವತೆಗಳು
ಅಮೃತತ್ವಪ್ರಾಪ್ತಿಗೆ ಅವರ ಭಗವದ್ಬಕ್ತಿಯೇ ಕಾರಣ. ಈ ಮಾತನ್ನು ನಾವೆಲ್ಲರೂ ಮನನ “ಮಾಡಬೇಕು. ನಾವು
ಏನೆಲ್ಲ ಕಾರ್ಯ ಮಾಡಿದರೂ, ಆ ಕಾರ್ಯಕ್ಕಿಂತ ಅದರ ಹಿಂದಿರುವ
ಭಾವನೆಗಳೇ ಮುಖ್ಯವಾಗಿವೆ. ಸ್ವಾರ್ಥ, ಅಧಿಕಾರ, ಆಸೆಗಳಿಗೆ ಬಲಿಯಾಗಿ ಏನೆಲ್ಲ ಮಾಡಿದರೂ ಅದೆಲ್ಲ ವ್ಯರ್ಥವೇ ಸರಿ. ಅದು ಯಜ್ಞವಾಗಬಹುದು, ಸತ್ಕರ್ಮಗಳಾಗಬಹುದು,
ಜಪಾದಿ ಅನುಷ್ಠಾ-ನವು ಇರಬಹುದು. ಅವುಗಳ ಹಿಂದೆ ಭಗವದ್ಭಕ್ತಿ ಸೇರಿದಾಗ
ಮಾತ್ರ ಫಲಪ್ರದಗಳಾಗುತ್ತವೆ. ಭಕ್ತಿಯಿಲ್ಲದ ಕರ್ತವ್ಯ, ಅದು ಕೇವಲ ಡಾಂಬಿಕತನ
ಪ್ರದರ್ಶನ. ಇದಕ್ಕೆ ದೇವದಾನವರೇ ದೃಷ್ಟಾಂತ. ನಾವು ದೇವತೆಗಳನ್ನೇ ಆದರ್ಶವನ್ನಾಗಿಟ್ಟುಕೊಂಡು
ಭಗವದ್ಬಕ್ತಿಯನ್ನು ಮೈಗೂಡಿಸಿಕೊಂಡೆವೆಂದಾದರೆ, ದೇವತೆಗಳು ಅಮೃತ ಭಾಗಿ-ಗಳಾದಂತೆ,
ನಾವು ಅಮೃತಭಾಗಿಗಳಾಗುತ್ತೇವೆ.
ಕವಿಯೊಬ್ಬ
ವರ್ಣಿಸುತ್ತಾನೆ: “ಯಾಂತಿ
ನ್ಯಾಯ ಪ್ರವೃತ್ತಸ್ಯ ತಿರ್ಯಂಚೋಪಿ ಸಹಾಯತಾಮ್ । ಅಪಂಥಾನಂ ತು ಗಚ್ಛಂತಂ ಸೋದರೋsಪಿ ವಿಮುಂಚತಿ ॥“ ಅಂದರೆ,
ನ್ಯಾಯಮಾರ್ಗದಲ್ಲಿ ನಡೆಯುವವರಿಗೆ ಕೆಳಮಟ್ಟದ ಪ್ರಾಣಿಗಳೂ ಸಹಾಯ ಮಾಡುತ್ತವೆ.
ನ್ಯಾಯಮಾರ್ಗ ಭ್ರಷ್ಟರಾದವರನ್ನು ಅವರ ಸೋದರರೂ ತೊರೆಯುತ್ತಾರೆ.
“ಕಾಯೇನ ವಾಚಾ ಮನಸಾ
ಇಂದ್ರಿಯೈರ್ವಾ । ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಬಾವಾತ್ ॥ ಕರೋಮಿ ಯದ್ಯತ್ ಸಕಲಂ ಪರಸ್ಮೈ
। ನಾರಾಯಣಾ ಯೇತಿ ಸಮರ್ಪಯಾಮಿ” ಭಾಗವತ 11-2-36
ಭಾವಾರ್ಥ:- ಭಗವಂತನು ವಿಶ್ವಾತ್ಮನೆನಿಸಿದ್ದಾನೆ.
ಆಕಾಶ, ವಾಯು, ಅಗ್ನಿ, ನೀರು, ಪೃಥಿವೀ, ಜ್ಯೋತಿ
ಎಲ್ಲೆಡೆಯೂ ಇವನು ನೆಲಸಿದ್ದಾನೆ. ಈ ಎಲ್ಲ ಅಧಿಷ್ಠಾನಗಳಲ್ಲಿಯೂ ಇವನನ್ನು ಚಿಂತಿಸಬೇಕು.
ಆತ್ಮನಿಲ್ಲದ ಶರೀರ ನಿಷ್ಕ್ರಿಯವಾದಂತೆ ದೇವನಿಲ್ಲದ ಜಗತ್ತೂ ಸ್ತಬ್ದ.
ವಿವರಣೆ:- ಭಗವಂತನು ಜಗತ್ತಿನ ಎಲ್ಲ
ಕಾರ್ಯಗಳನ್ನೂ ನಡೆ-ಸುತ್ತಿದ್ದಾನೆ. ಆದ್ದರಿಂದ ಕೇವಲ ದೇವಮಂದಿರ ಮೂರ್ತಿಯಲ್ಲಿ
ಭಗವಂತನಿದ್ದಾನೆಂದು ತಿಳಿಯದೆ ಎಲ್ಲೆಡೆಯೂ ಭಗವಂತನಿದ್ದಾನೆಂಬ ವಿಶಾಲ ದೃಷ್ಟಿಯನ್ನು
ಬೆಳೆಸಿಕೊಂಡು ಭಗವಂತನನ್ನು ಕಾಣಬೇಕು. ಶ್ರೀಹರಿಯು ನನ್ನಲ್ಲಿ ಅಂತರ್ಯಾಮಿಯಾಗಿ ನೆಲೆಸಿ ನನ್ನಿಂದ
ಮಾಡಿಸಿದ್ದಾನೆ” ಎಂಬ ಕೃತಜ್ಞತಾಭಾವದಿಂದ ಭಕ್ತಿಪೂರ್ವಕವಾಗಿ ಶ್ರೀಹರಿಗೆ ಸಮರ್ಪಿಸಬೇಕು. ಶ್ರೀಹರಿಯೇ
ಸರ್ವೋತ್ತಮ, ಸರ್ವತಂತ್ರ ಸ್ವತಂತ್ರ, ರಮಾದಿ
ಎಲ್ಲರೂ ಅವನ ಅಧೀನ. ಅವನ ಪ್ರೀತ್ಯರ್ಥವಾಗಿ ಅವನು ಹೇಳಿರುವ ಮಾರ್ಗವನ್ನನುಸರಿಸಿ ಶ್ರದ್ಧಾ
ಭಕ್ತಿಪೂರ್ವಕವಾಗಿ ಸ್ವವಿಹಿತ ಕರ್ಮಗಳನ್ನು ಆಚರಿಸಬೇಕು. ಇದೇ ಸದಾಚಾರ. ಹೀಗೆ ಮಾಡುವುದೇ
ಶ್ರೇಷ್ಠ ಕರ್ಮ. ಇದರಿಂದಲೇ ಜ್ಞಾನಪ್ರಾಪ್ತಿ. ಪರಮಾತ್ಮನ ಪರಮ ಪ್ರಸಾದವಾದ ಮುಕ್ತಿಯನ್ನು ಗಳಿಸಲು
ಇದೇ ಸರಿಯಾದ ಮಾರ್ಗ.
ಸಂಸ್ಕೃತ ಅಕ್ಷರ ಅರ್ಥದಲ್ಲಿ “ಶ್ರೀ ಹರಿ” ಎಂದರೆ “ಸಂಪತ್ತಿನಿಂದ ಕೂಡಿದ ಚಲಿಸುವ
ವೈದ್ಯ” ಎಂದು ಬರುತ್ತದೆ. ಅಂದರೆ ದೇಹದಲ್ಲಿ ಉತ್ಪತ್ತಿಯಾಗುವ ಆರೋಗ್ಯಕ್ಕೆ ಪೂರಕ ಸಂಪತ್ತಿನಿಂದ ಕೂಡಿದ
ಅಮೃತ, ಆತ್ಮ ಶಕ್ತಿ. ಇಂತಹ ಶಕ್ತಿ
ಸುಷುಮ್ನಾ ನಾಡಿಯಲ್ಲಿ ಚಳಿಸಿ ಏಳು ಚಕ್ರಗಳಲ್ಲಿನ ನಾಡಿಗಳಲ್ಲಿ ವೈದ್ಯ ಅಮೃತವನ್ನು ಚಾಲನೆ
ನೀಡುವವನು ಶ್ರೀ ಹರಿ. ಇವನನ್ನು ನಾರಾಯಣ, ವಿಷ್ಣು, ಎಂಬಿತ್ಯಾದಿ ನಾಮದಿಂದ ಜ್ಞಾನಿಗಳು ಸಂಭೋದಿಸುತ್ತಾರೆ.
ಹರಿವಂಶದಲ್ಲಿಯೂ
ಹೀಗೆ ಹೇಳಿದೆ, “ಸಸ್ಮಾರ ವಿಪುಲಂ ದೇಹಂ ಹರಿರ್ಹಯತಶಿರೋ ಮಹಾನ್ |
ಕೃತ್ವಾ ವೇದಮಯಂ ರೂಪಂ ಸರ್ವದೇವಮಯಂ ವಪುಃ ॥“ ಅಂದರೆ "ದೇವತೆಗಳ
ಸ್ತುತಿಯನ್ನು ಕೇಳಿ ಶ್ರೀಹರಿ ತನ್ನ ಹಯಗ್ರೀವಾಕೃತಿಯ ಮಹಾಕಾಯವನ್ನು ನೆನೆದನು (ಏಳು ಚಕ್ರಗಳ
ಸುಷುಮ್ನಾ ನಾಡಿಯಲ್ಲಿ ತನ್ನ ಕಾಯಕವನ್ನು ನೆನೆದನು). ಎಲ್ಲ ವೇದಗಳಿಗೂ ಎಲ್ಲ ದೇವತೆಗಳಿಗೂ ಆಶ್ರಯವೆನಿಸಿದ
ಆ ರೂಪವನ್ನು ಧರಿಸಿದನು.”
“ಧರ್ಮ' ಎಂಬ ಶೀರ್ಷಿಕೆಯ ಅಡಿಯಲ್ಲಿ ಬರುವ ಹಲವು
ಅಂಶಗಳಲ್ಲಿ ಯಜ್ಞವೂ ಒಂದು. ಯಾಜ್ಞಿಕನು ಧಾರ್ಮಿಕನೆನಿಸುತ್ತಾನೆ. ಎಂದೆಂದೂ ಸಂತೋಷಿಯಾಗಿ
ಇರುವಿಕೆ, ಸಹನೆ, ಮನಸ್ಸಿನ ಸಮಸ್ಥಿತಿ,
ಪರರ ಧನಕ್ಕೆ ಕೈಹಾಕದಿರುವ ಪ್ರವೃತ್ತಿ. ಮನಸ್ಸು-ಮಾತು- ದೇಹಗಳ ಶುಚಿತ್ವ
ಇಂದ್ರಿಯಗಳ ನಿಯಂತ್ರಣ, ಸೂಕ್ಷ್ಮಗ್ರಾಹೀ ವಿವೇಚನೆ, ಶಾಸ್ತ್ರಪರಿಜ್ಞಾನ, ಸತ್ಯವಚನ, ಕೋಪಗೊಳ್ಳದ ಸಂಯಮತೆ ಇವು ಹತ್ತು ಧರ್ಮದ ಲಕ್ಷಣ. ಬ್ರಹ್ಮಚರ್ಯದಿಂದಾಗಿ ಋಷಿ ಋಣದಿಂದ
ಬಿಡುಗಡೆ. ಯಜ್ಞದ ಮೂಲಕ ದೇವ ಋಣದಿಂದ ಮುಕ್ತಿ ಸತ್ಸತಂತಿಯನ್ನು ಪಡೆಯುವುದರಿಂದ ಪಿತೃ ಋಣ ಸಂದಾಯ
ಎಂದೂ ಲೋಕಾ ರೂಡಿ ಹೇಳುತ್ತಾರೆ. ಬ್ರಹ್ಮಯಜ್ಞ ದೇವಯಜ್ಞ ಪಿತೃಯಜ್ಞಗಳೆಂಬ ಮೂರು ಯಜ್ಞಗಳನ್ನು
ಗಮನಿಸಿದ್ದೇವೆ. ಇವಲ್ಲದೇ ಮನುಷ್ಯಯಜ್ಞ ಹಾಗೂ ಭೂತ ಯಜ್ಞಗಳೆಂಬ ಎರಡು ಯಜ್ಞಗಳೂ ಇವೆ.
ಗೃಹಸ್ಥನಿಗೆ ಈ ಐದು ಯಜ್ಞಗಳು ಕರ್ತವ್ಯ. ಶ್ರೀ ಪುರಂದರದಾಸರು, ಮನ
ಶುದ್ಧಿ ಇಲ್ಲದವಗೆ ಮಂತ್ರದ ಫಲವೇನು ಯಾವ ಶುಭಕಾರ್ಯವೆಸಗಲು ಫಲಸಿದ್ದಿಸಲು ಮನಶುದ್ದಿ ಇರಬೇಕು
ಎನ್ನುತ್ತಾರೆ. ....... ಮನ ಚಂಚಲದಿ ತಪವ ಮಾಡಲಶಕ್ಯವು ಮನ ಶುದ್ಧಿಯಿಲ್ಲದೆ ಧ್ಯಾನವು ವ್ಯರ್ಥವು, ಎಂದಿದ್ದಾರೆ. ಹಾಗೆಯೇ ಶ್ರೀ ಕನಕದಾಸರು ಇಂತಹ ಮನಸ್ಸನ್ನು ನಿಗ್ರಹಿಸಲು
ಕೇಳಿಕೊಳ್ಳುವರು, ಮನವೆನ್ನ ಮಾತ ಕೇಳದು ಕಾಣೋ ಗೋವಿಂದ ಮನವ
ಗೆಲ್ಲುವ ಬಗೆ ಎನಗಿಲ್ಲ ಗೋವಿಂದ…. ಎ ಸದಾ ನಿನ್ನ ಘನ ನಾಮ ಸ್ಮರಣೆಯ ಕೊಡು ಗೋವಿಂದ,
ಎಂದಿದ್ದಾರೆ.
ಋಗ್ವೇದದಲ್ಲಿ ವೇದ ಪಂಡಿತರು ಕಂಡು ಕೊಂಡ ಅಜಪ ಮಂತ್ರ
ಹಂಸ ಅಥವಾ ಸೋಹಂ ಅಥವಾ ಸ
ಹಮ್ ಅಜಪ ಗಾಯತ್ರಿ ಮಂತ್ರ
ಋಗ್ ವೇದ - ಮಂಡಲ 3 - ಸೂಕ್ತ 53 - ಶ್ಲೋಕ 10
ಹಂಸಾಇವ ಕೃಣುಥ ಶಲಾಕಮದಿಭಿಮದನ್ತಾ
ಗೀಭಿರಧ್ವರ
ಸುತ ಸಚಾ | ದೇವೇಭಿವಿಪಾ ಋಷಯಾ
ನೃಚಾಸಾ
ವಿ ಪಿಬಧ್ವಂ ಕುಶಿಕಾಃ ಸಾಮ್ಯಂ ಮಧು || 10
ಭಾವಾರ್ಥ:- ಮೋಡದ ಮಳೆಯ ಸೌಂದರ್ಯ ಮತ್ತು
ಗಾಂಭೀರ್ಯದಿಂದ ಜಪಿಸುವ ಹಂಸ, (ಅಜಪ ಮಂತ್ರ) ಓ ರೋಮಾಂಚಕ ಋಷಿಗಳು
ಮತ್ತು ವಿದ್ವಾಂಸರು, ಪ್ರಕೃತಿ ಮತ್ತು ದೈವತ್ವದ ದರ್ಶಕರು, ಸರ್ವಜ್ಞರ ರಹಸ್ಯಗಳಾಗಿ ವಿಭಜನೆ, ವಿಶಾಲವಾದ
ಮಾನವೀಯತೆಯ ಮಾರ್ಗಗಳನ್ನು ನೋಡುವವರು, ಪ್ರಕೃತಿಯ ದೈವತ್ವಗಳೊಂದಿಗೆ
ಸೇರುವವರು ಮತ್ತು ಮಾನವೀಯತೆಯ ತೇಜಸ್ವಿಗಳು, ಪ್ರೀತಿ ಮತ್ತು
ನಂಬಿಕೆಯ ಅಹಿಂಸಾತ್ಮಕ ಯಜ್ಞಗಳಲ್ಲಿ (ಧ್ಯಾನದಲ್ಲಿ) ಜಾರಿಗೊಳಿಸಿದ ಮತ್ತು ನಡೆಸಿದ, ಪವಿತ್ರ ಸಂತೋಷದ ಸಂಭ್ರಮದ ಪದಗಳಲ್ಲಿ ದೈವತ್ವದ ಜಪಿಸುವಿಕೆ ಮತ್ತು ಶಾಂತಿ ಮತ್ತು
ದೈವಿಕ ಭಾವಪರವಶತೆಯಿಂದ ತುಂಬಿರುವ ಸೋಮದ ಅಮೃತ ಸವಿಯುತ್ತಾರೆ.
ವಿವರಣೆ:-
ಸಂಸ್ಕೃತದ ಅಕ್ಷರ ಅರ್ಥದಲ್ಲಿ ಯಜ್ಞ ಎಂದರೆ "ಗಾಳಿಯನ್ನು ತಿಳಿಯುವುದು" ಎಂದಾಗಿದೆ. ಪೇಜಾವರ
ಶ್ರೀಗಳವರು ತಮ್ಮ ಗೀತಾಸಾರೋದ್ಧಾರದಲ್ಲಿ ಯೋಗಿಗಳು ಮಾಡುವ ಭಗವದು-ಪಾಸನೆಯೂ ಸಾಧಕರು ನಡೆಸುವ
ಇಂದ್ರಿಯನಿಗ್ರಹ ಉಪವಾಸ ಪ್ರಾಣಾಯಾಮಾದಿಗಳೂ ವಿದ್ವಾಂಸರ ಪಾಠ ಪ್ರವಚನಾದಿಗಳೂ ಎಲ್ಲವೂ ಯಜ್ಞವೇ
ಆಗಿವೆ. ಹೆಚ್ಚೇಕೆ ಇಂದ್ರಿಯಗಳಿಂದ ನಡೆಯುವ ವಿಷಯೋಪಭೋಗ ವ್ಯವಹಾರವೂ ಕೂಡ ಯಜ್ಞವೇ ಆಗುವದು
ಎಂದಿದ್ದಾರೆ, ಛಾಂದೋಗ್ಯ
ಉಪನಿಷತ್ತಿನಲ್ಲಿ ಜೀವನವನ್ನೇ ಒಂದು ಯಜ್ಞವೆಂದು ಕರೆಯಲಾಗಿದೆ. ಪರಮಾತ್ಮನ ಸೇವೆಗಾಗಿಯೇ ತನ್ನ
ಜೀವನದ ಸಕಲ ವ್ಯವಹಾರಗಳನ್ನು ಮೀಸಲಾಗಿರಿಸಿದ ಪುಣ್ಯ ಪುರುಷನ ಜೀವನವೇ ಒಂದು ಪರಮಯಜ್ಞವಾಗಿದೆ.
ಹಂಸ ತರಹದ
ಐದು ಮಾರ್ಗ ಅಭ್ಯಾಸ ಮಾಡಿ
ಋಗ್ ವೇದ - ಮಂಡಲ 3 - ಸೂಕ್ತ 8 - ಶ್ಲೋಕ 9
ಹಂಸಾ ಇವ ಶರೇಣಿಶೋ ಯತಾನಾಃ ಶುಕ್ರಾ ವಸಾನಾಃ
ಸವರವೋ ನಾಗುಃ | ಉನ್ನೀಯಮಾನಾಃ ಕವಿಭಿಃ
ಪುರಸ್ತಾದ ದೇವಾ ದೇವಾನಾಮಪಿ ಯನ್ತಿ ಪಾಥಃ
||
ಭಾವಾರ್ಥ:- ಎಂದೆಂದಿಗೂ ಕೇಂದ್ರೀಕೃತವಾದ ಹಂಸಾ ತರಹ ಐದು ಮಾರ್ಗ ಅಭ್ಯಾಸ ಮಾಡಿ ನಿಮ್ಮಲ್ಲಿ
ಶುದ್ಧ ಸೋಮದ ಎಂದೆಂದಿಗೂ ಹೊರತೆಗೆಯುವಿಕೆ ಹೊಂದಿರುವ ಉನ್ನತ ಅಂಶ ಹಾಗೆ ಶಬ್ದಮಾಡುವುದು.
ಮಾರ್ಗದರ್ಶನ ಮಾಡುತ್ತಾ ಮೇಲಕ್ಕೆ ಕಳಿಸುವುದರಿಂದ ತಲೆಯಲ್ಲಿ ದೈವಿಕ ಜ್ಞಾನ ಹೊಳೆಯುವ ಸರ್ವಜ್ಞತೆ
ಚಲಿಸುತ್ತದೆ, ನೀರು ಮತ್ತು ಬೆಂಕಿ ಉಪಸ್ಥಿತಿಯಲ್ಲಿ ಸರಿಸು ಚಲನೆಯ
ನೀಡು.
ಹಂಸ ರೀತಿಯ ಐದು ತರಹ ಉಸಿರಾಟ ವಿಧಾನ ಯಾವುದಿರಬಹುದು.
1. ನಾಡಿ ಶುದ್ದಿಗಾಗಿ ಸ ಹ/ ಸೋ ಹಮ್ ರೀತಿಯಲ್ಲಿ
ಒಂದೊಂದು ನಾಸಿಕದಲ್ಲಿ ಹಾಗೆಯೇ ಎರಡು ನಾಸಿಕದಲ್ಲೂ ಎದೆಯವರೆಗೆ ಅಥವಾ ಮೂಲಾದಾರದವರೆಗೆ ಉಸಿರು ತುಂಬುವುದು, ಅಲ್ಲಿಂದ ಸುಷುಮ್ನಕ್ಕೆ ಹೋಗದೆ ಮುಂದಿನಿಂದಲೇ ಹೊರಹಾಕುವುದು ಇದು ವಿಶುದ್ದ
ಚಕ್ರದವರೆಗೆ ಬಂದು ದೇಹದಲ್ಲಿ ಇರುವ ಕಲ್ಮಶವನ್ನು ಗಗ್ಗಳು ರೂಪದಲ್ಲಿ ಅಲ್ಲಿಗೆ ತರುತ್ತಾ ದೇಹದ
ಸರ್ವ ನಾಡಿ ಶುದ್ದಿ ಮಾಡುವ ಉಸಿರಾಟದ ವಿವಿದ ಆಯಾಮ. ಇದು ಎಲ್ಲರೂ ಮೊದಲಿಗೆ ಮಾಡಬೇಕಾದ ಕ್ರಿಯೆ.
ಏಕಾಏಕಿ ಸಹಸ್ರಾರದವೆರೆಗೆ ಉಸಿರು ಎಳೆಯುವುದರಿಂದ ದೇಹದ ಕಲ್ಮಶ ಸುಷುಮ್ನಾ ನಾಡಿಯಲ್ಲಿ
ಸೆಳೆಯುವುದು ಒಳ್ಳೆಯದಲ್ಲ.
2. ಸ ಎಂದು ಉಸಿರನ್ನು ಎಳೆದು ಎದೆಯನ್ನು ಹೊಟ್ಟೆಯ
ಭಾಗವನ್ನು ಮೂಲಾಧಾರವನ್ನು ತುಂಬಿಸಿ ಹ ಎಂದು ಮೇಲಕ್ಕೆ ಹೊರಹಾಕುವ ಮುಂದಿನಿಂದ ಉಸಿರಾಟ ಮಾಡುವ ಒಂದು ವಿಧಾನ. ಇಲ್ಲಿ ಸುಷುಮ್ನಾ ಕಡೆ ಹೋಗದಿರುವುದು.
ಆದರೆ ಇಡಾ ಮತ್ತು ಪಿಂಗಳ ನಾಡಿಯಲ್ಲಿ ಆಜ್ಞಾ ಚಕ್ರದವರೆಗೆ ಉಸಿರಾಟ ಒಳಕ್ಕೆ ಎಳೆದು ಹೊರಹಾಕುವುದು
ಮಾಡುವುದು.
3. ಓಂ ಎಂದು ಉಸಿರನ್ನು ಎಳೆದು ಮೂಲಾಧಾರದವರೆಗೆ
ತುಂಬಿಸಿ ಅಲ್ಲಿ ಉಸಿರನ್ನು ಒಂದು ಕ್ಷಣ ನೀರಿನಲ್ಲಿ ಬೆರೆಸಿ ಶುದ್ದೀಕರಿಸಿ ದ್ವಿಗುಣಗೊಳಿಸಿ ಹಮ್
ಎಂದು ಮೇಲಕ್ಕೆ ಹೊರಹಾಕುವ ಮುಂದಿನಿಂದ ಉಸಿರಾಟ ಮಾಡುವ ಒಂದು ವಿಧಾನ. ಇಲ್ಲಿ ಸುಷುಮ್ನಾ ಕಡೆ
ಹೋಗದಿರುವುದು.
4. ಓಂ ಎಂದು ಉಸಿರನ್ನು ಎಳೆದು ಎದೆಯನ್ನು ಹೊಟ್ಟೆಯ
ಭಾಗವನ್ನು ತುಂಬಿಸಿ ನಮೋ/ನಮಃ/ಸೋ ಎಂದು
ಕಿಬ್ಬೊಟ್ಟೆಯನ್ನು ಒಳ ಎಳೆದು ಸುಷುಮ್ನಾ ದ್ವಾರವನ್ನು ತೆರೆಯುವಂತೆ ಮಾಡಿ ನಾರಾಯಣಾಯ/
ಶಿವಾಯ/ಹಮ್ ಎಂದು ಉಸಿರನ್ನು ಸಹಸ್ರಾರದ ವರೆಗೆ
ತಲುಪಿಸುವುದು ನಾಲ್ಕನೇ ವಿಧಾನ.
5. ಸೋ ಎಂದು ಉಸಿರನ್ನು ಎಳೆದು ಮೂಲಾಧಾರದವರೆಗೆ
ತುಂಬಿಸಿ ಹಮ್ ಎಂದು ಸುಷುಮ್ನಾ ನಾಡಿಯಿಂದ ಸಹಸ್ರಾರಕ್ಕೆ ಹೊರಹಾಕುವ ಮುಂದುವರಿದ ತಪಸ್ವಿಗಳು ಮಾಡುವ ಐದನೇ ವಿಧಾನ.
(ಇದು ನನ್ನ ಅನುಭವದ ಸಾರಾಂಶ)
ಸಂಸ್ಕೃತದಲ್ಲಿ ಐದು ವಿಧಾನದ ಇನ್ನೊಂದು ಬೋಧನೆ ಇದೆ
ಪ್ರತಿದಿನ
ಇಂತಹ ಐದು ಯಜ್ಞ ರೂಪದ ಭಕ್ತಿ ಕಾರ್ಯಗಳು; ಅವುಗಳ ಹೆಸರುಗಳು:-
ಭೂತಯಜ್ಞ (ಎಲ್ಲಾ
ಸೃಷ್ಟಿ ಜೀವಿಗಳಿಗೆ ಸಹಾನು ಭೂತಿ, ನಿತ್ಯ ಆಹಾರ ನೀರು ನೀಡುವಿಕೆ, ಪರಿಸರ ಸಂರಕ್ಷಣೆ, ವಾಯು ಮಾಲಿನ್ಯ ಮಾಡದಿರುವಿಕೆ,)
ಮನುಷ್ಯಯಜ್ಞ, (ಮನುಜರಿಂದ
ಭಕ್ತಿಯ ಕ್ರಿಯೆ ಅದುವೇ ಕುಂಡಲಿನಿ ಉಪಾಸನೆ, ಮಾನವ ಕುಲಕ್ಕೆ ಸಹಾನು
ಭೂತಿ, ನಿತ್ಯ ಆಹಾರ ನೀರು ನೀಡುವಿಕೆ)
ಪಿತೃಯಜ್ಞ, (ಪೂರ್ವಜರು
ನಮಗೆ ವಂಶವಾಹಿನಿಯಾಗಿ ನೀಡಿರುವ ಅಗ್ನಿಯ ಬಗ್ಗೆ ಉಪಾಸನೆಯಿಂದ (ಪ್ರಾಣಾಯಾಮ ಉಸಿರಾಟದಿಂದ)
ಜಾಗ್ರತೆ ಉಂಟು ಮಾಡುವುದು)
ದೇವಯಜ್ಞ, (ಕುಂಡಲಿನಿ
ಪುಷ್ಪಗಳ ಮುಖೇನ ವಾಯುವನ್ನು ಮತ್ತು ದೇಹದ ಶ್ರೇಷ್ಟತೆಯ ಅಮೃತವನ್ನು ಸಹಸ್ರಾರಕ್ಕೆ ತಂದು ದೈವ
ಸಾಕ್ಷಾತ್ಕಾರ ಹೊಂದುವುದು) ಮತ್ತು
ಬ್ರಹ್ಮಯಜ್ಞ, (ನಿರಂತರ
ಕುಂಡಲಿನಿ ಸಂಗಮದಿಂದ ಗುಪ್ತಗಾಮಿನಿ ಸರಸ್ಪತಿ ನದಿಯನ್ನು ಸಹಸ್ರಾರಕ್ಕೆ ಹರಿಸಿ ಪವಿತ್ರ
ಪುಸ್ತಕಗಳ ಬ್ರಹ್ಮಜ್ಞಾನವನ್ನು ಪಡೆಯುವುದು)
ಇವುಗಳನ್ನು
ಒಟ್ಟಾಗಿ ಐದು 'ಮಹಾನ್ ಅರ್ಪಣೆಗಳು' ಮನುಜನು
ತನ್ನ ಜೀವನದಲ್ಲಿ ನಿತ್ಯ ಮಾಡಬೇಕಾದ ಯಜ್ಞ ಎಂದು ಕರೆಯಲಾಗುತ್ತದೆ.
ನಾರದೀಯ ಪುರಾಣದಲ್ಲಿ ಅಜಪ ಮಂತ್ರದ ಬಗ್ಗೆ
ಮಂತ್ರ ಜಪ ಸ್ವ ಅಧ್ಯಯನ
ಶ್ರೀ ನಾರದೀಯ ಪುರಾಣಂ - ಪೂರ್ವಭಾಗ
- ಅಧ್ಯಾಯ 33
ಪ್ರಣವಸ್ಕೋಪನಿಷದಾಂ
ದ್ವಾದಶಾರ್ಣಸ್ಯ ಚ ದ್ವಿಜ।
ಅಸ್ಟಾಕ್ಷರಸ್ಯ
ಮಂತ್ರಸ್ಯ ಮಹಾವಾಕ್ಯಸ್ಯ ಯಸ್ಯ ಚ ॥ ೮೯॥
ಜಪಃ ಸ್ವಾಧ್ಯಾಯ ಉದಿತೋ ಯೋಗಸಾಧನಮುತ್ತಮಂ
।
ಸ್ವಾಧ್ಯಾಯಂ
ಯಸ್ತ್ಯಜೇನ್ಮೂಢಸ್ತಸ್ಯ ಯೋಗೋನ ಸಿಧ್ಯತಿ ॥ ೯೦॥
ಭಾವಾರ್ಥ:- ಪ್ರಣವಮಂತ್ರ
(ಓಂಕಾರ) ಉಪನಿಷತ್ತು, ದ್ವಾದಶಾಕ್ಷರ ಮತ್ತು ಅಷ್ಟಾಕ್ಷರ ಮಂತ್ರಗಳು ಮತ್ತು ಮಹಾವಾಕ್ಯ ಇವುಗಳನ್ನು ಜಪಿಸುವುದೇ
ಸ್ವಾಧ್ಯಾಯವೆಂದು ಉಕ್ತವಾಗಿದೆ. ಅದು ಉತ್ತಮ ಯೋಗಸಾಧನವು. ಸ್ವಾಧ್ಯಾಯವನ್ನು ಬಿಟ್ಟಿರುವ ಮನುಷ್ಯನಿಗೆ
ಯೋಗಸಿದ್ಧಿಯಾಗುವುದಿಲ್ಲ.
ಮಂತ್ರದಲ್ಲಿರುವ ಅಕ್ಷರಗಳ ಅರ್ಥ ವಿಚಾರ ಮಾಡಿ
ಜಪಸ್ತು ತ್ರಿನಿಧಃ
ಪ್ರೋಕ್ತೋ ವಾಚಿಕೋಪಾಂಶುಮಾನಸಃ ।
ತ್ರಿವಿಧೇಪಿ
ಚ ವಿಪ್ರೇಂದ್ರ ಪೂರ್ವಾತ್ಪೂರ್ವಾತ್ಪರೋ ವರಃ ॥ ೯2
ಭಾವಾರ್ಥ:- ಜಪವು
ವಾಚನಿಕ, ಉಪಾಂಶು
ಮತ್ತು ಮಾನಸಿಕ ಎಂದು ಮೂರುವಿಧವು.
ಈ ಮೂರರಲ್ಲಿಯೂ ಪೂರ್ವ-ಪೂರ್ವಕ್ಕಿಂತ ಉತ್ತರೋತ್ತರವು ಶ್ರೇಷ್ಠ ಎಂದರೆ ವಾಚನಿಕವು ಕನಿಷ್ಠ,
ಉಪಾಂಶುವು ಮಧ್ಯಮ, ಮಾನಸವು ಉತ್ತಮವೆಂದು
ತಾತ್ಪರ್ಯ.
ಮಂತ್ರಸ್ಯೋಚ್ಚಾರಣಂ
ಸಮ್ಯಾಕ್ಸುಛಟಾಕ್ಷರ ಪದಂ ಯಥಾ ।
ಜಪಸ್ತು
ವಾಚಿಕಃ ಪ್ರೋಕ್ತಃ ಸರ್ವಯಜ್ಞ ಫಲಪ್ರದಃ || ೯೩
ಮಂತ್ರಸ್ಯೋಚ್ಚಾರಣೇ
ಕಿಂಚಿತ್ಪದಾತ್ಪದವಿವೇಚನಂ |
ಸ
ತೂಪಾಂಶುರ್ಜಪಃ ಪ್ರೋಕ್ತಃ ಪೂರ್ನಸ್ಮಾದ್ದ್ವಿಗುಣೋಧಿಕಃ ॥
- 94
ವಿಧಾಯ ಹೃಕ್ಷರಶ್ರೇಣ್ಯಾಂ
ತತ್ತದರ್ಥವಿಚಾರಣಂ |
ಸ
ಜಪೋ ಮಾನಸಃ ಪ್ರೋಕ್ತೋ ಯೋಗಸಿದ್ಧಿ ಪ್ರದಾಯಕಃ || ೯೫
ವಿವರಣೆ:-
ಸಂಸ್ಕೃತದಲ್ಲಿ ಅ ಇಂದ ಅಃ ವರೆಗೂ 15 ಸ್ವರಗಳು, ಕ ಇಂದ ಜ್ಞ ವರೆಗೂ 35 ವ್ಯಂಜನಗಳು ಸೇರಿ 50 ಅಕ್ಷರಗಳು ಇವೆ, ಇದಲ್ಲದೆ ಸ್ವರಗಳು ವ್ಯಂಜನಗಳು ಸೇರಿ ಅನೇಕ ಅಕ್ಷರಗಳು ಆಗುತ್ತವೆ ಹೀಗೆ ಕನಿಷ್ಠ
50 ರಿಂದ ಮೇಲ್ಪಟ್ಟು ಅಕ್ಷರಗಳ ಪ್ರತಿಯೊಂದು ಅಕ್ಷರಗಳ ಸರಿಯಾದ ಅರ್ಥವನ್ನು ಜೋಡಿಸಿ ಅಥವಾ
ವಿಭಾಗಿಸಿ ಅನುವಾದಿಸುವುದೇ ಯೋಗಸಿದ್ದಿಯುಂಟು ಮಾಡುವ ರಹಸ್ಯ ಅಡಗಿದೆ ಎಂದು ಭೋದಿತವಾಗಿದೆ.
ಮುಂಡಕೋಪನಿಷತ್ತಿನಲ್ಲಿ ಭೋಧಿತವಾಗಿರುವಂತೆ ವಿದ್ಯೆ-ಯನ್ನು ಪರಾ ವಿದ್ಯೆ ಮತ್ತು
ಅಪರಾ ವಿದ್ಯೆ ಎಂದು ವಿಂಗಡಿಸಲಾಗಿದೆ. ಅಪರಾ ವಿದ್ಯೆಗಳೇ ವೇದ ವೇದಾಂಗ ಮುಂತಾದವು. ಪರಾ ವಿದ್ಯೆ
ಅಕ್ಷರ ವಿದ್ಯೆ ಆಗಿದೆ. ಅಕ್ಷರ ವಿದ್ಯೆ ಎಂದರೆ ನಾಶರಹಿತವಾದ ವಿದ್ಯೆ ಅದುವೇ ಆತ್ಮ ವಿದ್ಯೆ. ಪರಾ
ಅಥವಾ ಪರ ವಿದ್ಯೆಯೇ ಬ್ರಹ್ಮ ವಿದ್ಯೆ ಆಗಿದೆ. "ಅಪರಾ ಹಿ ವಿದ್ಯಾ ನಾಮ ಅವಿದ್ಯಾ"
ಎಂದು ಶ್ರೀ ಶಂಕರರು ವ್ಯಾಖ್ಯಾನಿಸಿದ್ದಾರೆ ಅಂದರೆ ಅಪರಾ ವಿದ್ಯೆ ಎಂದರೆ ಅದು ಅವಿದ್ಯೆ
ಎಂಬುದಾಗಿದೆ.
ಭಗವದ್ಗೀತೆಯಲ್ಲಿರುವ
ಅಕ್ಷರ ಮಹತ್ವ ಭೋದನೆ
ಕರ್ಮ ಬ್ರಹ್ಮೋದ್ಭವಂ ವಿದ್ಧಿ
ಬ್ರಹ್ಮಾಕ್ಷರಸಮುದ್ಭವಮ್ ।
ತಸ್ಮಾತ್ ಸರ್ವಗತಂ ಬ್ರಹ್ಮ ನಿತ್ಯಂ
ಯಜ್ಞೇ ಪ್ರತಿಷ್ಠಿತಮ್ ॥೧5
ಭಗವದ್ಗೀತಾ 3-15
ಭಾವಾರ್ಥ:- ಕರ್ಮದ ನಿಷ್ಪತ್ತಿ ಭಗವಂತನಿಂದ;
ಭಗವಂತನ ಅಭಿವ್ಯಕ್ತಿ- ವೇದಾಕ್ಷರದಿಂದ. ಆದ್ದರಿಂದ ಎಲ್ಲೆಡೆಯಿರುವ ಭಗವಂತ
ಸದಾ ಯಜ್ಞದಲ್ಲಿ ನೆಲೆಸಿದ್ದಾನೆ.
ಯದಕ್ಷರಂ ವೇದವಿದೋ ವದಂತಿ ವಿಶಂತಿ ಯದ್ ಯತಯೋ
ವೀತರಾಗಾಃ ।
ಯದಿಚ್ಛಂತೋ ಬ್ರಹ್ಮಚರ್ಯಂ ಚರಂತಿ ತತ್ ತೇ
ಪದಂ ಸಂಗ್ರಹೇಣ ಪ್ರವಕ್ಷ್ಯೇ ॥೧೧॥
ಭಗವದ್ಗೀತಾ 8-11
ಭಾವಾರ್ಥ:- ವೇದ ಬಲ್ಲವರು ಅಳಿವಿರದ ಅದನ್ನು
‘ಅಕ್ಷರ’ ಎನ್ನುತ್ತಾರೆ. ಭೋಗದ ಒಲವು ತೊರೆದ ಸಾಧಕರು ಅದನ್ನೇ ಸೇರುತ್ತಾರೆ. ಅದನ್ನು ಸೇರಬಯಸಿಯೇ
ಬಗೆಯಲ್ಲಿ ಆ ಹಿರಿಯ ತತ್ವವನ್ನು ಚಿಂತಿಸುತ್ತಾರೆ.
ಅವ್ಯಕ್ತೋSಕ್ಷರ
ಇತ್ಯುಕ್ತಸ್ತಮಾಹುಃ ಪರಮಾಂ ಗತಿಮ್ ।
ಯಂ ಪ್ರಾಪ್ಯ ನ ನಿವರ್ತಂತೇ ತದ್
ಧಾಮ ಪರಮಂ ಮಮ॥ ೨೧
ಭಗವದ್ಗೀತಾ 8 - 21
ಭಾವಾರ್ಥ:- ಈ ಅವ್ಯಕ್ತ (ಸಂಸ್ಕೃತದಲ್ಲಿ
ಅವ್ಯಕ್ತ ಅಂದರೆ ಸಾಕಷ್ಟು ಸ್ಪಷ್ಟ ಅಥವಾ ಅರ್ಥಗರ್ಭಿತ ಎಂಬುದಾಗಿದೆ) ತತ್ವವನ್ನೇ ‘ಅಕ್ಷರ’ ನಾದ ಭಗವಂತನೆನ್ನುತ್ತಾರೆ.
ಅವನೇ ಕೊನೆಯಾಸರೆ ಎನ್ನುತ್ತಾರೆ. ಅವನನ್ನು ಪಡೆದವರು ಮತ್ತೆ ಮರಳಿ ಬರುವುದಿಲ್ಲ. ಅದು ನನ್ನ
ಹಿರಿದಾದ ಸ್ವರೂಪ.
ಅಕ್ಷರಾಣಾಮಕಾರೋಸ್ಮಿ ದ್ವಂದ್ವಃ
ಸಾಮಾಸಿಕಸ್ಯ ಚ ।
ಅಹಮೇವಾಕ್ಷಯಃ ಕಾಲೋ ಧಾತಾSಹಂ ವಿಶ್ವತೋಮುಖಃ
॥೩೩
ಭಗವದ್ಗೀತಾ 10 - 33
ಭಾವಾರ್ಥ:- ಅಕ್ಷರಗಳಲ್ಲಿ ಮೊದಲ ಅಕಾರ ನಾನು. (‘ಅಕಾರ’ ಎನ್ನಿಸಿ ಅ-ಕಾರದಿಂದ ವಾಚ್ಯನಾಗಿದ್ದೇನೆ.) ಸಮಾಸಗಳ (ಒಟ್ಟಾಗಿ-ರುವ
ಅಕ್ಷರಗಳ ಪದಗಳ) ಗುಂಪಿನಲ್ಲಿ ದ್ವಂದ್ವ ಸಮಾಸ (ಸಂಪರ್ಕ ನೀಡುವವನು) ನಾನು. ಅಳಿವಿರದ ನಾನೇ (ಕಾಲದಲ್ಲಿದ್ದು) ಕಬಳಿಸುವವನು.
ಎಲ್ಲೆಡೆ ತುಂಬಿದ್ದು ಎಲ್ಲವನ್ನು ಸಲಹುವವನೂ ನಾನೇ. (ಅದುವೇ ವಾಯು ಗುಣವುಳ್ಳದ್ದು 'ಅ' ಎಂದರೆ ಜೀವ ಉಸಿರು ಎಂದು ಪ್ರಧಾನವಾಗಿ
ವ್ಯಕ್ತವಾಗುತ್ತದೆ.)
ವಿವರಣೆ:-
ಸಂಸ್ಕೃತದಲ್ಲಿ ‘ಅ’ ಎಂಬ ಅಕ್ಷರಕ್ಕೆ ಇವುಗಳನ್ನು ಉದ್ದೇಶಿಸಿ ಕರೆಯಲಾಗುತ್ತೆ, "ಕೃಷ್ಣ, ಶಿವ, ಬ್ರಹ್ಮ, ಇಂದ್ರ,
ಸೋಮ, ವಾಯು, ಅಗ್ನಿ,
ಸೂರ್ಯ, ಪ್ರಾಣ ಉಸಿರು, ಯಮ, ಕಾಲ, ವಸಂತ,
ಪ್ರಣವ, ಶ್ರೇಷ್ಠತೆ, ಜ್ವಾಲೆ, ವಿಶೇಷವಾಗಿ ಪರಿಣಾಮಕಾರಿ ಮಂತ್ರ , ಲಗಾಮು, ರಥದ ಕುದುರೆ, ಚಕ್ರ,".
ಸಂಸ್ಕೃತ ಎಂಬ ಪದದ ಅಕ್ಷರಾನುವಾದವೇ ಎಲ್ಲವನ್ನೂ ತಿಳಿಸುತ್ತದೆ "ಬೇರ್ಪಡಿಸಲಾ-ಗದ್ದರಿಂದ
ಗೊಂದಲಕ್ಕೀಡಾಗಬೇಡಿ ಅಮೂಲ್ಯವಾದ ರತ್ನವನ್ನು ವ್ಯವಸ್ಥೆ ಮಾಡಿ", ಅಂದರೆ ಒಟ್ಟಾಗಿರುವ ಅಕ್ಷರಗಳ
ಸಮೂಹದಿಂದ ಗೊಂದಲಕ್ಕೆ ಒಳಗಾಗದೆ, ಅಮೂಲ್ಯವಾದ ರತ್ನದಂತಾ
ಅಕ್ಷರಗಳನ್ನು ವಿಂಗಡಿಸು/ವ್ಯವಸ್ಥೆ ಮಾಡಿ ಎಂಬ ಸಂದೇಶವೇ ಅಡಗಿದೆ.
ವೈದಿಕಾ: ಸರ್ವಶಬ್ದಾಶ್ಚ ತಸ್ಮಾತ್
ಸರ್ವಾಭಿಧ್ಯೋsಸ್ಮ್ಯಹಮ್ |
ಪಂಚಾಶದ್ ವರ್ಣವಾಚ್ಯಾಶ್ಚ
ಸರ್ವಶಬ್ದಾಅತೋsಪಿ ಚ||
ತಂತ್ರಸಾರ (೧ ಅ. ೧೬ ಶ್ಲೋ)
ಭಾವಾರ್ಥ:- ಲೋಕದಲ್ಲಿ ಪ್ರಸಿದ್ದವಾಗಿರುವ ಸಕಲ
ಶಬ್ದಗಳು ವೈದಿಕ ಶಬ್ದಗಳಿಂದಲೇ ಅಭಿವ್ಯಕ್ತವಾದುವು. ಅಷ್ಟೇ ಅಲ್ಲದೆ ಸಕಲ ಪದಗಳು ಅಕಾರಾದಿ
ಐವತ್ತು ಅಕ್ಷರಗಳ ಯೋಜನೆಯಿಂದಲೇ ಆಗುತ್ತವೆ. ಆ ಐವತ್ತು ವರ್ಣಗಳು ನನ್ನನ್ನೇ
ಹೇಳುತ್ತವೆಯಾದ್ದರಿಂದಲೂ ಸಕಲ ಶಬ್ದಗಳೂ ಪರಂಪರಯಾ ನನ್ನನ್ನೇ ಹೇಳುತ್ತವೆ. ಹೀಗೆ ನಾನು ಸಮಸ್ತ
ಶಬ್ದವಾಚ್ಯನಾಗಿದ್ದೇನೆ ಎಂದು ನಾರಾಯಣ ಬ್ರಹ್ಮದೇವರಿಗೆ ಹೇಳುತ್ತಾನೆ.
ಈಶ
ಈಶ್ವರ ಅಜಪ ಮಂತ್ರದಿ ಉಸಿರಾಟವನ್ನು ತಿಳಿಸಿದ ಶ್ರೀಮದ್ವಾಯುಪುರಾಣ
ವಿವೇಶ ತಂ ತದಾ ವಾಯುರೀಶಾನೋ ವಾಯುರುಚ್ಯತೇ |
ತಸ್ಮಾದೇನಂ ಪರಿವದೇದಾಯತಂ ವಾಯುಮಿಶ್ವರಂ ॥
ಏವಂ ಯುಕ್ತಮಥೇಶಾನೋ ನೈವ ದೇವೋ ಹಿನಸ್ತಿ ತಂ || ೩೪
ಶ್ರೀಮದ್ವಾಯುಪುರಾಣ ಅಧ್ಯಾಯ 27 ಶ್ಲೋಕ
34
ಭಾವಾರ್ಥ:- ಆಗ ವಾಯುದೇವನು ಈಶ್ವರನ ದೇಹವನ್ನು ಪ್ರವೇಶಮಾಡಿದ್ದರಿಂದ ವಾಯುವಿಗೆ ಈಶಾನವೆಂಬ ನಾಮವು
ಪ್ರಾಪ್ತವಾಗಿದೆ. ಹೀಗೆ ಈಶ್ವರನು ವಾಯು ಶರೀರದಿಂದ ಸರ್ವತ್ರ ವ್ಯಾಪ್ತನಾಗಿರುವನೆಂದು
ಯಾರು ತಿಳಿಯುವರೋ ಅವರನ್ನು ಈಶ್ವರನು ಹಿಂಸೆಮಾಡುವುದಿಲ್ಲ.
ಯಾವತ್ ಸ್ಥಿತಾ ಶರೀರೇಷು ಭೂತಾನಾಂ
ಪ್ರಾಣವೃತ್ತಿಭಿಃ ।
ವಾಯ್ವಾತ್ಮಿಕಾ ತು ಐಶಾನಿ ಸಾ ಪ್ರಾಣಾಃ ಪ್ರಾಣಿನಾ
ಸಹ ॥ ೪೩
ಫೀತಾಶಿತಾನಿ ಪಚತಿ ಭೂತಾನಾಂ ಜಠರೇಷು ಯಾ ।
ತತಃ ಪಾಶುಪತೀ ತಸ್ಯ ಪಾಚಿಕಾ ಶಕ್ತಿರುಚ್ಯತೇ
॥ ೪೪
ಭಾವಾರ್ಥ:- ಈಶ್ವರನು ಪಂಚಪ್ರಾಣಗಳ ಸಹಿತನಾಗಿ ಈಶಾನೀ
ನಾಮಕವಾದ ತನ್ನ ವಾಯುರೂಪದಿಂದ ಸರ್ವಪ್ರಾಣಿಗಳ ಶರೀರಗಳಲ್ಲಿ ಎಲ್ಲಿಯವರೆಗೂ ವಾಸಮಾಡುವನೋ ಅಲ್ಲಿಯವರೆಗೂ
ಪ್ರಾಣಿಗಳು ಭಕ್ಷಿಸಿದ ಅನ್ನವೂ, ಪಾನಮಾಡಿದ ಜಲಾದಿಗಳೂ, ಉದರಗಳಲ್ಲಿ ಪಚನವಾಗುವುದು. ಆದುದರಿಂದ ಪಚನಮಾಡುವ ಆ ಶಕ್ತಿಯು
ಪಶುಪತಿಯ ಶಕ್ತಿಯಾಗಿದೆಯೆಂದು ಜ್ಞಾನಿಗಳು ಹೇಳುವರು.
ಯಾನೀಹ ಸುಷಿರಾಣಿ ಸ್ಯುರ್ದೇಹೇಷ್ವಂತರ್ಗತಾನಿ
ವೈ । ವಾಯೋಃ ಸಂಚರಣಾರ್ಥಾಯ ಸಾ
ಭೀಮಾ ಚೋಚ್ಯತೇ ತನುಃ ॥ ೪೫
ಭಾವಾರ್ಥ:- ದೇಹದಲ್ಲಿ ವಾಯುಸಂಚಾರಕ್ಕಾಗಿ ಯಾವ ಯಾವ
ರಂಧ್ರಗಳಿವೆಯೋ ಅಂತಹ ಶರೀರವು ಈಶ್ವರನ ಭೀಮನಾಮಕ ಶರೀರವಾಗಿದೆಯೆಂದು ಹೇಳುವರು.
ಭಕ್ತೇಃ ಸೂರ್ಯೇಪ್ಸು ಪೃಥಿವ್ಯಾಂ ವಾಯ್ವಾಗ್ನಿ
ವ್ಯೋಮದೀಕ್ಷಿತೇ ।
ತಥಾ ಚ ವೈ ಚಂದ್ರಮಸಿ ತನುಭಿರ್ನಾಮಭಿಃ ಸಹ
॥
ಪ್ರಜಾವಾನೇತಿ ಸಾಯುಜ್ಯಮೀಶ್ವರಸ್ಯ ನರೋ ಹಿ
ಸಃ ॥ ೫೮॥
ಭಾವಾರ್ಥ:- ಭಕ್ತರಾದ ಜನರು ಈಶ್ವರನ ಸೂರ್ಯ, ಚಂದ್ರ, ಜಲ, ಭೂಮಿ, ಆಕಾಶ,
ವಾಯು, ಅಗ್ನಿ, ಯಜಮಾನ
ಎಂಬ ಅಷ್ಟ ಶರೀರಗಳೂ, ನಾಮಗಳೂ, ಪತ್ನೀಸುತರೂ
ಇವುಗಳನ್ನು ತಿಳಿದರೆ ಈಶ್ವರನ ಸಾಯುಜ್ಯ ರೂಪವಾದ ಮೋಕ್ಷವನ್ನು ಪಡೆಯುವರು.
ವಿವರಣೆ:-
ಮಂತ್ರ ಜಪದಿಂದ ಯೋಗಸಿದ್ದಿ ಅದರಲ್ಲೂ ಅಜಪ ಮಂತ್ರದಿಂದ ಎಂಬ ಬೋಧನೆ ಇದೆ. ಅಕ್ಷರಗಳ ಅರ್ಥ ಅರಿತು ವಿಚಾರಪೂರ್ವಕವಾಗಿ
ಮಂತ್ರಾನುಸಂಧಾನ ಮಾಡುವುದು ಮಾನಸಿಕ ಜಪವೆನಿಸುವುದು. ಅದು ಯೋಗ ಸಿದ್ದಿಯನ್ನುಂಟು ಮಾಡುತ್ತದೆ.
ಈಶ ಎಂದರೆ ಸಂಸ್ಕೃತ ಅಕ್ಷರಾನುವಾದದಲ್ಲಿ "ವ್ಯಾಪಿಸುವ ಆಯುಧ" ಎಂದು ಬರುತ್ತದೆ.
ಅದುವೇ ವಾಯು, ಆವಿ ರೂಪದ ಜೀವಾಂಶ. ಈಶ್ವರ ಎಂದರೆ "ಶಕ್ತಿಯುತ ಹೊಳಪಿನ ಒಡೆಯ" ಎಂದು ಬರುತ್ತದೆ. ಇಂತಹ ನಾಮವನ್ನು ಅರಿತು ಅಂತಹ
ಈಶನನ್ನು ವಶವಾಗಿಸಿಕೊಳ್ಳುವವನು ಮೋಕ್ಷವನ್ನು ಪಡೆಯುತ್ತಾನೆ ಎಂಬುದೇ ನಾವು ಅರಿಯಬೇಕಾದ
ರಹಸ್ಯವು.
ಪಂಚಕರ್ಮ ಮತ್ತು ಪಂಚಪ್ರಾಣಗಳ ಬಗ್ಗೆ ಅರಿವು ಇರಲಿ
ಪಂಚ
ಕರ್ಮೇಂದ್ರಿಯಗಳು - ವಾಗಿಂದ್ರಿಯ : ಇದು, ನಾಲಿಗೆ ತಾಲುಮೂಲ,
ತುಟಿಗಳು ನಾಸಿಕ ಕಂಠ, ಹೃದಯ, ಎಂಬ ಎಂಟು ಸ್ಥಾನಗಳನ್ನು ಆಶ್ರಯಿಸಿದೆ. ಪಾಣೀಂದ್ರಿಯ : ಬಿಡುವುದು, ಗ್ರಹಿಸುವುದು ಮುಂತಾದ ಕ್ರಿಯಾ ಕಾರಕವಾಗಿದೆ. ಇದು ಅಂಗೈಯನ್ನು ಆಶ್ರಯಿಸಿರುತ್ತೆ.
ಪಾದೇಂದ್ರಿಯ : ಗಮನಾಗಮನ ಕ್ರಿಯಾಕಾರಕ ಅಂಗಾಲನ್ನು ಆಶ್ರಯಿಸಿದೆ. ಶಿಶ್ನ: ಶುಕ್ಲ ಮೂತ್ರ
ವಿಸರ್ಜನೆ. ಗುದ : ಮಲವಿಸರ್ಜನೆ.
ಪಂಚ
ಪ್ರಾಣೇಂದ್ರಿಯಗಳು - ಪ್ರಾಣ : ಹೃದಯದಲ್ಲಿದೆ, ಉಚ್ಛ್ವಾಸ
ಕ್ರಿಯಾಕಾರಕ. ಅಪಾನ ; ಗುದೆಯಲ್ಲಿದೆ, ನಿಶ್ವಾಸ ಕ್ರಿಯಾಕಾರಕ. ವ್ಯಾನ: ಶರೀರಾದ್ಯಂತವಿದೆ ಇಂದ್ರಿಯ ಬಲಕಾರಕ. ಉದಾನ :
ಕಂಠದಲ್ಲಿದೆ ಸುಷುಪ್ತಿ ಅವಸ್ಥೆಯಲ್ಲಿ ಸಕಲ ಇಂದ್ರಿಯ ಗಳನ್ನೂ, ಉಪಸಂಹರಿಸಿಕೊಂಡು
ತನಗೆ ಕಾರಣವಾದ ಅಜ್ಞಾನದಲ್ಲಿ ಲಯವನ್ನು ಹೊಂದಿ ಜಾಗ್ರದವಸ್ಥೆಯಲ್ಲಿ ಆಯಾ ಇಂದ್ರಿಯಗಳನ್ನು ಆಯಾ ಗೋಳಕದಲ್ಲಿ
ನಿಲ್ಲಿಸುತ್ತಾ, ಉತ್ಕ್ರಮಣ ಕಾಲದಲ್ಲಿ ಸಕಲೇಂದ್ರಿಯ ಶಕ್ತಿಯನ್ನೂ
ಗ್ರಹಿಸಿಕೊಂಡು ಲೋಕಾಂತರವನ್ನು ಹೊಂದುತ್ತದೆ. ಸಮಾನ : ನಾಭಿಯಲ್ಲಿದೆ. ಇದು ಜಠರಾಗ್ನಿಯಿಂದ ಕೂಡಿ
ಆಹಾರವನ್ನು ಪಚನಮಾಡಿ ಶರೀರಕ್ಕೆ ಪುಸ್ಟಿಯನ್ನುಂಟು-ಮಾಡುತ್ತದೆ. ಇತರ ವಾಯುಗಳು - ನಾಗ : ವಾಂತಿ
ಮಾಡಿಸುತ್ತದೆ.
ಕೂರ್ಮ: ಕಣ್ಣಿನ ರೆಪ್ಪೆ ಆಡಿಸುತ್ತದೆ. ಕೃಕರ:
ಸೀನುವಂತೆ ಮಾಡುತ್ತದೆ. ದೇವದತ್ತ: ಆಕಳಿಸಲು ಸಹಕಾರಿಯಾಗಿದೆ. ಧನಂಜಯ : ಶರೀರವನ್ನು
ಪೋಷಣೆಮಾಡುತ್ತದೆ. ಈ 5 ಇತರ ವಾಯುಗಳು ಮೇಲ್ಕಂಡ ಪಂಚಪ್ರಾಣಗಳಲ್ಲಿಯೇ ಅಂತರ್ಭೂತವಾಗಿವೆ. ಮತ್ತು
ಆ ಪಂಚಪ್ರಾಣಗಳ ಸ್ಥಾನಗಳು ಮತ್ತು ಭೂತಗಳು ಇವಕ್ಕೂ ಆಗಿವೆ
ಅಂತಃಕರಣ
ಪಂಚಕ ವಿವರವನ್ನು ತಿಳಿಯೋಣ 1) ಮನಸ್ಸು ...... ಕಂಠಾಂತದಲ್ಲಿದೆ, ಸಂಕಲ್ಪ
ಕ್ರಿಯಾಕಾರಕ, ಅಧಿದೈವತೆ ಚಂದ್ರ. 2) ಬುದ್ಧಿ... ಮುಖದಲ್ಲಿದೆ.
ನಿಶ್ಚಯ ಕ್ರಿಯಾಕಾರಕ, ಅಧಿದೈವತೆ ಬ್ರಹ್ಮ 3) ಆಹಂಕಾರ -
ಹೃದಯದಲ್ಲಿದೆ, ಅಭಿಮಾನ ಕ್ರಿಯಾಕಾರಕ, ಅಧಿದೈವತೆ ಗೌರೀರಮಣ 4) ಅಂತಃಕರಣ-- ಹೃದಯದಲ್ಲಿದೆ, ಸ್ಫುರಣ
ಕ್ರಿಯಾಕಾರಕ, ಅಧಿದೈವತೆ ವಿಷ್ಣು. 5) ಚಿತ್ತ--ನಾಭಿಯಲ್ಲಿದೆ,
ಸ್ಮರಣ ಕ್ರಿಯಾಕಾರಕ, ಅಧಿದೈವತೆ ಕ್ಷೇತ್ರಜ್ಞ
ಜೀವ.
ಉಸಿರಾಟದ ಅಜಪ ಮಂತ್ರ ಸಾಮವೇದದಿಂದ ಉಲ್ಲೇಕ
ಓಂ ಸರ್ವೇಶ್ವರೇಶ್ವರಾಯ
ಸರ್ವವಿಘ್ನವಿನಾಶಿನೇ ಮಧುಸೂಧನಾಯ |
ಸ್ಪಾಹೇತಿ ಅಯಂ ಮಂತ್ರೋ ಮಹಾಗೂಢಃ
ಸರ್ವೇಷಾಂ ಕಲ್ಪಪಾದಪಃ |
ಸಾಮವೇದೇ ಚ ಕಥಿತಃ ಸಿದ್ಧಾನಾಂ
ಸರ್ವಸಿದ್ದಿದಃ || 37
ಬ್ರಹ್ಮವೈವರ್ತ ಪುರಾಣ - ಸಂಪುಟ 9, ಅಧ್ಯಾಯ-78 -
ಶ್ರೀ ಕೃಷ್ಣ ಜನ್ಮ ಖಂಡ
ಭಾವಾರ್ಥ:- ಓಂ ಸರ್ವೆಶ್ವರೇಶ್ವರಾಯ
ಸರ್ವವಿಫ್ನವಿನಾಶಿನೇ ಮಧುಸೂಧನಾಯ, ಇದು ನಮ್ಮ ಸ್ವಂತಕ್ಕೆ ವೈದ್ಯತೆಯು ಬರಲು ಚಲಿಸುವ ಮಾಂತ್ರಿಕ
ಸೂತ್ರ ಮಂತ್ರ (ಸ್ವಾಹೇತಿ ಅಯಂ) ಮಹಾಗೋಪ್ಯವೂ, ಎಲ್ಲರಿಗೂ
ಅನುಸರಣೀಯವಾದ ವೃಕ್ಷವಾಗಿದೆ. ಈ ಮಹಾಮಂತ್ರವು ಸಾಮವೇದದಲ್ಲಿ ಹೇಳಲ್ಪಟ್ಟಿರುವುದಲ್ಲದ ಸಿದ್ಧರಿಗೆ
ಸಕಲಸಿದ್ಧಿಯನ್ನುಂಟು ಮಾಡುತ್ತದೆ.
ಮುಂದುವರಿದ ವಿವರಣೆ:- ಈ ಮಂತ್ರದಿಂದಲೇ ಯೋಗಿಗಳು, ಸಿದ್ಧರು, ಮುನೀಂದ್ರರು ಮತ್ತು ಸುರರು ಇಷ್ಟಸಿದ್ಧಿಯನ್ನು ಪಡೆಯುವರು.
ವಾಯುವಿನ
ಪ್ರಾಮುಖ್ಯತೆ ವಿವಿದ ಗ್ರಂಥಗಳಿಂದ
ಶರೀರಂ ಹಿ ವಿನಾ ವಾಯುಂ ಸಮತಾಂ ಯಾತಿ
ದಾರುಭಿಃ
ವಾಯುಃ ಪ್ರಾಣಃ ಸುಖಂ ವಾಯುರ್ವಾಯುಃ
ಸರ್ವಮಿದಂ ಜಗತ್|| (ರಾಮಾಯಣ)
ಭಾವಾರ್ಥ:- ವಾಯುವಿನ ವಿನಃ ದೇಹ ಕಟ್ಟಿಗೆಗಳ ತಲ್ಯ (ಚೇತನರಹಿತ) ವಾಗುತ್ತದೆ. ಅದ್ದರಿಂದ
ವಾಯುವೇ ಶರೀರದ ಪ್ರಾಣ ಅರ್ಥಾತ್ ಜೀವನವಾಗಿದೆ. ಸಂಕ್ಷೇಪದಲ್ಲಿ ಎಲ್ಲವೂ ಇದೆ.
ಯೇನ ಜೀವತಿ ಜೀವೋಯಂ ನಿರ್ಜೀವೋ ಯಂ ವಿನಾ
ಭವೇತ್।
ಸ ಪ್ರಾಣ ಇತಿ ವಿದ್ಯಾತೋ ವಾಯುಃ
ಕ್ಷೇತ್ರಚರಃ ಪರಃ
(ಸ್ರಾಂಗಧರ ಪದ್ದತಿ)
ಭಾವಾರ್ಥ:- ಯಾವುದರಿಂದ ಜೀವ ಜೀವಿತವಾಗಿರುತ್ತದೆ. ಯಾವುದರ ವಿನಃ (ದೇಹ) ನಿರ್ಜೀವವಾಗುತ್ತದೆ.
ಅದು ಪ್ರಾಣ ಎಂದು ಕರೆಯಲ್ಪಡುತ್ತದೆ. ಕ್ಷೇತ್ರ (ಶರೀರ)ದಲ್ಲಿ ವಿಚಾರಣೆ ಮಾಡುವಂತವರಲ್ಲಿ ಈ ಪ್ರಾಣವಾಯು
ಸರ್ವಶ್ರೇಷ್ಠವಾಗಿದೆ.
ಪ್ರಾಣೋ ಬ್ರಹೇತಿ ವ್ಯಜಾನಾತ | ಪ್ರಾಣಾದ್ದೇಯೇವ
ಖಲ್ವಿಮಾನಿ ಭೂತಾನಿ ಜಾಯಂತೇ,
ಪ್ರಾಣೇನ ಜಾತಾನಿ ಜೀವನ್ತಿ
ಪ್ರಾಣಂಪ್ರಯಂತ್ಯಭಿಸಂವಿಶಂತಿ।
(ತೈತ್ತಿರೀಯ ಉ. ೨.೩)
ಭಾವಾರ್ಥ:- ದೇವತೆ, ಮನುಷ್ಯಮತ್ತು ಪಶು-ಪಕ್ಷಿ ಪ್ರಾಣದ
ಅನುಗಾಮಿಯಾಗಿ ಪ್ರಾಣನ (ಜೀವನ) ಮಾಡುತ್ತವೆ. ಪ್ರಾಣವೇ ಪ್ರಾಣಿಗಳ ಆಯುವಾಗಿದೆ. ಆದ್ದರಿಂದ ಅದು 'ಸರ್ವಾಯುಷ' (ಎಲ್ಲರ ಜೀವನ) ಎಂದು ಕರೆಯಲ್ಪಡುತ್ತದೆ.
ಸರ್ವಮೇವ ತ ಆಯುರ್ಯಾಂತಿ ಯೇ ಪ್ರಾಣಂ
ಬ್ರಹ್ಮ್ಯೋಪಾಸತೆ।
ಪ್ರಾಣೋ ಹಿ ಭೂತಾನಾಮಾಯುಸ್ತಾಸ್ಮತರ್ವಾಯುಷಮುಚ್ಛತೆ।
(ತೈತ್ತಿರೀಯ ಉ. ೨.3)
ಭಾವಾರ್ಥ:-
ಯಾರು ಪ್ರಾಣದ ಬ್ರಹ್ಮರೂಪದಿಂದ ಉಪಾಸನೆ ಮಾಡುತ್ತಾರೆ. ಅಂತಹವರು
ಪೂರ್ಣ ಆಯಸ್ಸನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಪ್ರಾಣವೇ ಆಯುವಾಗಿದೆ. ಆದ್ದರಿಂದ ಅದು 'ಸರ್ವಾಯುಷಿ' ಎಂದು ಕರೆಯಲ್ಪಡುತ್ತದೆ.
ಪ್ರಾಣಾಯಾಮೇನ ಯುಕ್ತೇನ ಸರ್ವರೋಗಕ್ಷಯೋ
ಭವೇತ್|
ಆಯುಕ್ತಾಭ್ಯಾಸಯೋಗೇನ ಸರ್ವರೋಗಸ್ಯ ಸಂಭವಃ
||
(ಹಠಯೋಗ ಪ್ರದೀಪಿಕಾ)
ಭಾವಾರ್ಥ:- ವಿಧಿಯುಕ್ತವಾಗಿ ಮಾಡಿದಂತಹ ಪ್ರಾಣಾಯಾಮದಿಂದ ಎಲ್ಲಾ ರೋಗಗಳು ನಾಶವಾಗುತ್ತವೆ ಮತ್ತು
ವಿಧಿಯ ವಿರುದ್ಧ ಪ್ರಾಣಾಯಾಮ ಮಾಡುವುದರಿಂದ ಎಲ್ಲಾ ರೋಗಗಳು ಬರಬಹುದು.
ಪವನೋ ಬಧ್ಯತೇ ಯೇನ ಮನಸ್ತೆನೈವ ಬಧ್ಯತೆ।
ಮನಶ್ಚ ಬಧ್ಯತೇ ಯೇನ ಪವನಸ್ತೇನ ಬದ್ಧತೆ||
(ಹಠಯೋಗ ಪ್ರದೀಪಿಕಾ)
ಭಾವಾರ್ಥ:- ಯಾವ ತಂತ್ರೋಪಾಯದಿಂದ ವಾಯುವನ್ನು ನಿಗ್ರಹಿಸಬಹುದೋ,
(ನಿಗ್ರಹ ಎಂದರೆ ವ್ಯವಸ್ಥಿತ ನಿರ್ವಹಣೆ ಎಂದು ಅರ್ಥೈಸಬೇಕು) ಅದರಿಂದಲೇ ಮನಸ್ಸನ್ನು ಕೂಡಾ
ನಿಗ್ರಹಿಸ ಬಹುದಾಗಿದೆ. ಯಾವ ತಂತ್ರೋಪಾಯದಿಂದ ಮನವನ್ನು ನಿಗ್ರಹಿಸ ಬಹುದೋ ಅದರಿಂದಲೇ ವಾಯುವನ್ನು
ಕೂಡಾ ನಿಗ್ರಹಿಸ ಬಹುದಾಗಿದೆ.
ಮನು
ಹೇಳುತ್ತಾರೆ, “ಪ್ರಾಣಾಯಾಮೈರ್ದಹೇದ್ ದೋಷಾನ್” ಪ್ರಾಣಾಯಾಮದ ಮೂಲಕ
ಶಾರೀರಿಕ ಮತ್ತು ಮಾನಸಿಕ ದೋಷಗಳನ್ನು ದೂರ ಮಾಡಬೇಕು.
"ಭುವಿ ತೀರ್ಥಾನ್ಯನೇಕಾನಿ
ಲೋಲಮಾಯುಶ್ಚಲಂ ಮನಃ |
ತತಃ ಸಪ್ತಪುರೀರ್ಯಾಯಾಂ ಸರ್ವ ತೀರ್ಥಾನಿ
ತತ್ರ ಯತ್ ||"
ಸ್ಕಾಂದ ಪುರಾಣ
ಭಾವಾರ್ಥ:-
ಭೂಮಿಯಲ್ಲಿ (ಮೂಲಾಧಾರದಲ್ಲಿ) ಅನೇಕ ತೀರ್ಥಗಳಿರುವುವು. ಆಯುಸ್ಸು ಅತ್ಯಲ್ಪವು
ಮತ್ತು ಮನಸ್ಸು ಬಹಳ ಚಂಚಲವು. ಆದುದರಿಂದ ಸಪ್ತಪುರಿಯಲ್ಲಿ (ಸಪ್ತ ಚಕ್ರಗಳಲ್ಲಿ) ಸರ್ವತೀರ್ಥಗಳೂ
ಇರುವುದರಿಂದ, ಅವುಗಳ ಯಾತ್ರೆಯು ಬಹಳ ಪುಣ್ಯಕರವು.
ಜಗತ್ತಿನಲ್ಲಿ ಏಳು ಕೋಟಿ ಮಹಾಮಂತ್ರಗಳಿವೆಯೆಂಬುದು ಶ್ರೀಮಂತ್ರಾಲಯ ರಾಯರ ಪ್ರಾತಃ ಸಂಕಲ್ಪ
ಗದ್ಯದ 'ಸಂಸಿದ್ದ-ಸಪ್ತಕೋಟಿ-ಮಹಾಮಂತ್ರಾಣಾಂ' ಎಂಬ ಹೇಳಿಕೆಯಿಂದ ತಿಳಿದು ಬರುತ್ತದೆ. ಆದರೆ ಅವುಗಳಲ್ಲಿ ಅನೇಕ ಮಂತ್ರಗಳ ವೀರ್ಯವು
(ಪ್ರಭಾವವು) ಕಲಿಯುಗದಲ್ಲಿ ಕಲಿಯ ಪ್ರಭಾವದಿಂದ ಮುಚ್ಚಿಹೋಗಿರುತ್ತವೆಯೆಂದು ಶ್ರೀಮದಾಚಾರ್ಯರೇ
ತಂತ್ರಸಾರದಲ್ಲಿ ಹೇಳಿದ್ದಾರೆ.
ಕುಂಡಲಿನೀ
ಶಕ್ತಿಯೋಗದಲ್ಲಿ ಹಲವು ಪ್ರಕ್ರಿಯೆಗಳಿವೆ. ಇವುಗಳಲ್ಲಿ, ತೈತ್ರರೀಯ
ಉಪನಿಷತ್ ತ್ರಿಶಿಖಾ ಬ್ರಾಹ್ಮಣೋಪನಿಷತ್, ಯೋಗ ಕುಂಡಲ್ಯುಪನಿಷತ್,
ಯೋಗಶಿಖೋಪನಿಷತ್ ಮುಂತಾದವುಗಳಲ್ಲಿ ಹೇಳಲ್ಪಟ್ಟಿರುವ ವಿಷಯಗಳನ್ನು
ಕ್ರೋಢೀಕರಿಸಿ ಕುಂಡಲಿನೀ ಶಕ್ತಿಯೋಗವನ್ನು ವಿವರಿಸಿದೆ.
“ನಾನಾನಿಧೈರ್ವಿಚಾರೈಸ್ತು ನ ಬಾಧ್ಯಂ
ಜಾಯತೇ ಮನಃ |
ತಸ್ಮಾತ್ತಸ್ಯ ಜಯೋಪಾಯಃ ಪ್ರಾಣ ಏವ ಹಿ
ನಾನ್ಯಥಾ |
ತರ್ಕೈರ್ಜಲ್ಪೈಃ
ಶಾಸ್ತ್ರಜಾಲೈರುಕ್ತಿಭಿರ್ಮಸ್ತ್ರಭೇರುಷಜೈಃ।
ನ ವಶೋ ಜಾಯತೇ ಪ್ರಾಣಾಸ್ಸಿದ್ದ್ಯು ಪಾಯಂ
ವಿನಾವಿಧೇ | ಉಪಯಂತಮವಿಜ್ಞಾಯ ಯೋಗಮಾರ್ಗೋ ಪ್ರವರ್ತತೇ|”
ಭಾವಾರ್ಥ:-
ಕೇವಲ
ವಿಚಾರಗಳಿಂದಲೇ ಮನಸ್ಸಿನ ಚಂಚಲತೆ ಹೋಗಿ ಅದು ಸ್ವಾಧೀನಕ್ಕೆ ಬರಲಾರದು. ಅದು ಸ್ವಾಧೀನವಾಗಲು
ಪ್ರಾಣವಾಯುವು ಸ್ವಾಧೀನಕ್ಕೆ ಬರಬೇಕು. ಕೇವಲ ತರ್ಕದಿಂದಾಗಲೀ, ಜಲ್ಪದಿಂದಾಗಲಿ, ಶಾಸ್ತ್ರ ವ್ಯಾಸಂಗದಿಂದಾಗಲೀ ಯುಕ್ತಿ, ಮಂತ್ರೋಚ್ಚಾರಣೆಗಳಿಂದ
ಆಗಲೀ ಪ್ರಾಣವಾಯುವು ವಶ ಆಗುವುದಿಲ್ಲ. ಯೋಗ ಮಾರ್ಗದಿಂದಲೇ ಅದು ವಶವಾಗಬೇಕು ಎಂದು ಹೇಳಿರುವಂತೆ
ಯೋಗಮಾರ್ಗವು ಮುಕ್ತಿ ಸಾಧನೆಗೆ ಅತ್ಯವಶ್ಯಕವಾದುದು.
ಅಷ್ಟಚಕ್ರಾ ನವದ್ವಾರಾ | ದೇವಾನಾಂ
ಪೂರಯೋಧ್ಯಾ |
ತಸ್ಯಾಂ ಹಿರಣ್ಮಯ ಕೋಶಃ। ಸ್ವರ್ಗೋ ಲೋಕೋ
ಜ್ಯೋತಿಷಾವೃತಃ॥
( ಅಥರ್ವ ೧೦-೨-೩೧)
ಭಾವಾರ್ಥ:- ಈ ದೇಹವು, ಮೂಲಾಧಾರ, ಸ್ಪಾಧಿಷ್ಟಾನ, ಮಣಿಪೂರ, ಸೂರ್ಯ, ಅನಾಹತ,
ವಿಶುದ್ಧಿ. ಆಜ್ಞಾ, ಭ್ರಮರ ಗುಹಾ ಎಂಬ 8
ಚಕ್ರಗಳಿಂದಲೂ, ಒಂಭತ್ತು ದ್ವಾರಗಳಿಂದಲೂ ಕೂಡಿ “ಅಯೋಧ್ಯಾ” ಎಂದರೆ
ಹಿಂಸಾರಹಿತವಾದದ್ದಾಗಿಯೂ ದಿವ್ಯ ಶಕ್ತಿಗಳಿಗೆ ಜನ್ಮಸ್ಥಾನವಾಗಿಯೂ ಇದೆ. ಇದರಲ್ಲಿಯೇ ಆತ್ಮನ
ಗುಪ್ತಸ್ಥಾನವಾದ ಬುದ್ಧಿ ಗುಹೆಯಿದೆ.
ವಿವರಣೆ:- ಇವುಗಳಲ್ಲಿ ಸಾಮಾನ್ಯ ರೂಢಿಯಲ್ಲಿ
"ಸೂರ್ಯ ಚಕ್ರ” ಸೇರಿರುವುದಿಲ್ಲ. ಭ್ರಮರ ಗುಹ ಚಕ್ರವನ್ನು
ಸಹಸ್ರಾರು ಚಕ್ರವೆನ್ನುವರು. ಹೀಗಾಗಿ ಚಕ್ರಗಳು ಏಳು. ಚಕ್ರವೆಂದರೆ ನಮ್ಮ ದೇಹದೊಳಗಿನ ಸ್ಥಾನ ವಿಶೇಷಗಳಲ್ಲಿ
ಜ್ಞಾನ ತಂತುಗಳು ಕೂಡುವ ಸ್ಥಳ. ಬೇರೆ ಬೇರೆ ಜಾಗಗಳಲ್ಲಿ ಕವಲು ಕವಲಾಗಿ ಒಡೆದಿರುವ ಜ್ಞಾನ ತಂತು
ಗಳು ಗ್ರಂಥಿ ರೂಪದಲ್ಲಿ ಸೇರುತ್ತವೆ. ಇಂತಹ ಒಂದೊಂದು ಸ್ಥಳವೂ ಒಂದೊಂದು ಚಕ್ರವೆನಿಸುವುದು. ಚಕ್ರಗಳಲ್ಲಿ
ಶಿರಸ್ಥಾನದಲ್ಲಿರುವ ಸಹಸ್ರಾರ ಚಕ್ರವನ್ನು ಬಿಟ್ಟರೆ ಉಳಿದ ಆರು ಚಕ್ರಗಳಲ್ಲಿ ಮೂಲಾಧಾರ, ಅನಾಹತ, ಆಜ್ಞಾ ಚಕ್ರಗಳೇ ಮುಖ್ಯವಾದವು. ಪ್ರತಿ
ಚಕ್ರವೂ ಕಮಲವೆಂದೂ ಅದರ ಸುತ್ತಲೂ ಇರುವ ಮುಖ್ಯ ಸೂಕ್ಷ್ಮನಾಡಿಗಳು ಕಮಲದಳಗಳೆಂದೂ ಹೇಳಲ್ಪಡುತ್ತವೆ.
ವಿಶುದ್ದ ಚಕ್ರದಲ್ಲಿ ಅಮೃತ ಸೋರುವಿಕೆಯು ಮತ್ತು ಸ್ವಾಧೀಷ್ಟಾನ ಚಕ್ರದಲ್ಲಿ ವೀರ್ಯ ಶೇಖರಣೆಯು
ಅಮೃತ ರೂಪದಲ್ಲೇ ಆಗುತ್ತದೆ. ಎಲ್ಲಾ ಚಕ್ರಗಳ ಒಟ್ಟು ದಳಗಳು, ಸಂಸ್ಕೃತ
ಅಕ್ಷರ ಮಾಲಿಕೆಯ 50 ಅಕ್ಷರಗಳಿಗೆ ಸರಿಯಾಗಿ 50 ಇರುವುವು. ಕಮಲದಳಗಳು ಎಲ್ಲಾ ನಾಡಿಗಳೂ, ಎಲ್ಲಾ ಚಕ್ರಗಳೂ, ಎಲ್ಲಾ ಕಮಲದಳಗಳೂ ಸೂಕ್ಷ್ಮ ಶಬ್ದ
ಶಕ್ತಿಯನ್ನು ಪಡೆದಿರುತ್ತವೆ. ಅವು ದೃಷ್ಟಿಗೆ ಕಾಣುವವಲ್ಲ. ಕೇವಲ ಮನೋಮಯವಾದವುಗಳು. ಉಪನಿಷತ್ತಿನಲ್ಲಿ
ಇವುಗಳನ್ನು "ಸ್ಥಾನಾನೇತಾನೀದೇಹೇಸ್ಮಿನ್ ಶಕ್ತಿರೂಪಂ ಪ್ರಕಾಶತೇ” ಅಂದರೆ ಇವುಗಳು ಕೇವಲ ಧ್ಯಾನಯೋಗಿಗಳಿಗೆ
ವೇದ್ಯವಾದವುಗಳು ಎಂದಿದ್ದಾರೆ.
ಪಿಂಗಳಾನಾಡಿಯಲ್ಲಿ
(ಸೂರ್ಯನಾಡಿ-ಮೂಗಿನ ಬಲರಂದ್ರ) ಪ್ರಾಣವಾಯುವನ್ನು ಮೇಲಕ್ಕೆ ಎಳೆಯುವ ಸೂರ್ಯ ಶಕ್ತಿಯಿದೆ.
ಇಡಾನಾಡಿಯಲ್ಲಿ (ಚಂದ್ರನಾಡಿ-ಮೂಗಿನ ಎಡರಂದ್ರ) ಅಪಾನ ವಾಯುವನ್ನು ಕೆಳಕ್ಕೆ ಎಳೆಯುವ ಚಂದ್ರ
ಶಕ್ತಿಯಿದೆ. ಮೂಲಾಧಾರ ಚಕ್ರದಿಂದ ಇಡಾ ಪಿಂಗಳಾ ನಾಡಿಗಳು ಹೊರಟು ನಾಸಿಕ ರಂದ್ರಗಳವರೆಗೂ
ಹರಿಯುತ್ತದೆ. ಸುಷುಮ್ನಾ ಎಂಬ ಸೂಕ್ಷ್ಮ ನಾಡಿಯು ಬೆನ್ನು ಹುರಿ (ಮೇರುದಂಡ)ಯ ಒಳಗೆ ಇದೆ. ಇದು
ಅಗ್ನಿ ಸ್ವರೂಪವಾದುದು. ಈ ನಾಡಿಯು ಬ್ರಹ್ಮಶಕ್ತಿ- ಯುತವಾದುದು. ಇದು ಮಲದ್ವಾರದ ಸಮೀಪದಿಂದ
ಆರಂಭಿಸಿ ಬೆನ್ನುಹುರಿ ಮೂಲಕ ಹಾದು ಸಹಸ್ರಾರಕ್ಕೆ (ಬ್ರಹ್ಮರಂಧ್ರಕ್ಕೆ) ಸೇರುತ್ತದೆ. "ಮೇರು'ದಂಡ ವಿಭಾಗದ ನರಗಳು ಮೆದುಳಿನಿಂದ ಬೆನ್ನುಮೂಳೆಯಲ್ಲಿ ಹೊರಟಿರುವ ಮುಖ್ಯ
ಜ್ಞಾನತಂತುವಿನಿಂದ ಕವಲೊಡೆದು, ಶರೀರದಲ್ಲೆಲ್ಲಾ ವ್ಯಾಪಿಸಿ,
ಜ್ಞಾನಸಂಬಂಧವಾದ ವ್ಯವಹಾರಗಳಿಗೆ ಕಾರಣವಾಗಿರುವುದು. "ಸಹಾನುಭೂತಿಪರ
ವಿಭಾಗದ ನರಗಳು”, "ಇಡಾ' ಮತ್ತು
"ಪಿಂಗಳಾ” ನಾಡಿಗಳಿಂದ ಹೊರಟು, ಅಲ್ಲಲ್ಲಿ ಕೇಂದ್ರೀಭೂತವಾಗಿ,
ಶರೀರ ದಲ್ಲೆಲ್ಲಾ ಹೆರಡಿರುತ್ತವೆ. ಈ ವಿಭಾಗದ ನರಗಳಿಂದ ದೇಹದ ಒಳಗಿನ
ಕ್ರಿಯೆಗಳು ನಡೆಯುತ್ತವೆ.
ಪ್ರಾಣಾಯಾಮ
ಪೂರ್ವಕವಾಗಿ ಕುಂಡಲಿನಿಯನ್ನು ಜಾಗ್ರತಗೊಳಿಸಿದರೆ ಅದರಿಂದ ಚಕ್ರಗಳು ಅರಳುತ್ತವೆ. ಚಕ್ರಗಳನ್ನು
ಧ್ಯಾನಮಾಡುತ್ತಾ ಸೂಕ್ಷ್ಮ ವಾಯುವನ್ನು ಅವುಗಳಲ್ಲಿ ತುಂಬಿದರೆ ನರಗಳ ಮತ್ತು ನಾಡಿಗಳ ಶೋಧನವಾಗಿ
ಚಿತ್ತಸ್ಥೈರ್ಯವುಂಟಾಗಿ ವಿಷಯಗಳ ಕಡೆ ವೈರಾಗ್ಯವುಂಟಾಗುವುದು. ಹೀಗೆ ಚಕ್ರಗಳಲ್ಲಿ ಕ್ರಮವಾಗಿ
ಚೈತನ್ಯವನ್ನುಂಟು ಮಾಡಿದರೆ ಮನಸ್ಸಿನ ಶಕ್ತಿಯು ವೃದ್ಧಿಯಾಗಿ ಆತ್ಮ ವಿಚಾರ ಸಾಧಿಸಲು
ಅನುಕೂಲವಾಗುತ್ತದೆ. ಪ್ರಾಣಾಯಾಮದಿಂದ ಮನಸ್ಸಿನ ಶಕ್ತಿಗಳು ವಿಕಾಸಗೊಳ್ಳುತ್ತವೆ. ರಜಸ್ತಮೋಗುಣಗಳು
ಕ್ಷೀಣವಾಗಿ ಸತ್ವಗುಣವು ವೃದ್ಧಿ ಹೊಂದುತ್ತದೆ. ಯೋಗದ ಧಾರಣ, ಧ್ಯಾನ,
ಸಮಾಧಿಗಳಿಗೆ ಮನಸ್ಸು ಯೋಗ್ಯವಾದುದಾಗುತ್ತದೆ.
“ತಪಸೋ ಹಿ ಷರಂ
ನಾಸ್ತಿ ತಪೆಸಾ ವಿಂದತೇ ಮಹತ್ । ನಾಸಾಧ್ಯಂ ತಪಸಃ ಕಿಂಚಿದಿತಿ...”॥ ಮಹಾಭಾರತ ವನಪರ್ವ,
೨೫೯/ ೧೬-೧೭ - ತಪಸ್ಸಿನಂತಹ ಸಾಧನ
ಇನ್ನೊಂದಿಲ್ಲ. ಮಾನವ ಶ್ರೇಷ್ಠತೆ ಯನ್ನು ಹೊಂದುವುದು ತಪಸ್ಸಿಂದಾಗಿಯೇ. ತಪಸ್ಸಿನಿಂದ ಕೈಗೂಡದ
ಅದಾವ ಸಂಗತಿಯೂ ಇಲ್ಲ”... ವೆಂದು ವ್ಯಾಸರ ಹೇಳಿಕೆಯಿದೆ.
ಮಾನವನ ದೇಹ
ಪಂಚಭೂತಗಳಿಂದ ಸೃಷ್ಟಿಯಾದದ್ದು ಎಂದು ವಿದ್ವಾಂಸರು ಹೇಳುತ್ತಾರೆ. ನಮ್ಮ ಪಂಚಭೂತಾತ್ಮಕವಾದ ದೇಹದಲ್ಲಿ,
ಪೃಥ್ವಿ, ಅಪ್, ಅಗ್ನಿ, ವಾಯು
ಮತ್ತು ಆಕಾಶ. ಇವೇ ಪಂಚಭೂತಗಳು. ಈ "ಭೂತ'ಗಳನ್ನು ದೇಹದಲ್ಲಿ
ಪ್ರತಿಷ್ಠವಾಗಿರುವ 'ಚಕ್ರ'ಗಳಲ್ಲಿ
ಗುರುತಿಸುತ್ತಾರೆ. ಪೃಥ್ವಿ ತತ್ತ್ವ ಮೂಲಾಧಾರ ಚಕ್ರದಲ್ಲೂ 'ಅಪ್'
ತತ್ತ್ವ "ಸ್ವಾಧಿಷ್ಟಾನ' ಚಕ್ರದಲ್ಲೂ
ಅಗ್ನಿ ತತ್ತ್ವ ಮಣಿಪೂರ ಚಕ್ರದಲ್ಲೂ ವಾಯುತತ್ವ್ವ "ಅನಾಹತ' ಚಕ್ರದಲ್ಲೂ
ಆಕಾಶ ತತ್ತ್ವ ವಿಶುದ್ಧ ಚಕ್ರದಲ್ಲೂ ಅಂತರ್ಗತವಾಗಿದೆಯೆಂದು ವಿವರಿಸುತ್ತಾರೆ. ಪಂಚಭೂತಾತ್ಮಕವಾದ
ದೇಹದಲ್ಲಿ ದಿವೃಶಕ್ತಿ ಸುಪ್ತವಾಗಿದೆ. ದೇಹದ ಆಂತರ್ಮದ ಮೂಲದಲ್ಲಿ ಈ
'ದಿವೃಶಕ್ತಿ' ನಿದ್ರಿಸುತ್ತಿರುವ
ಸರ್ಪದಂತೆ ಸುತ್ತಿಕೊಂಡು ಮಲಗಿದೆ. ಆಗ ಅದು ಇಲ್ಲಿ ಜಡವಸ್ತು. ಇದನ್ನೇ ಶಾಸ್ತ್ರಜ್ಞರು 'ಕುಂಡಲಿನಿ'ಎಂದು ಕರೆಯುತ್ತಾರೆ. ಇದು ಮಲಗಿರುವ
ಜಾಗಕ್ಕೆ "ಮೂಲಾಧಾರ' ಎಂದು ಹೆಸರು. ಇದರ ಸ್ಥಾನ ಬೆನ್ನು
ಮೂಳೆಯ ಬುಡ. ಇದನ್ನು ಅರಿಯಲು ಸಾಧಕ ಉಸಿರಾಟದ ಆರಾಧನೆಯ ಮೂಲಕ ಯತ್ನಿಸುತ್ತಾನೆ. ಈ
ಕುಂಡಲಿನಿಯನ್ನು ಎಚ್ಚರಿಸಿ ಊರ್ಧ್ವಮುಖವಾಗಿ ಚಲಿಸುವಂತೆ ಮಾಡಲು ಯತ್ನಿಸುವುದೇ ಸಾಧಕನ ಕಾರ್ಯ.
"ಇದು ಎಚ್ಚರಿಕೆಗೊಂಡು ಮೂಲಾಧಾರದಿಂದ ಬೆನ್ನು ಮೂಳೆಯ ಮುಖಾಂತರ ಮೆದುಳಿನವರೆಗೆ ಹರಿದು
ಹೋಗಬೇಕು. ಈ ಹರಿಯುವಿಕೆ ಸುಷುಮ್ನಾ ನಾಡಿಯ ಮೂಲಕ ಮೆದುಳನ್ನು ತಲಪಬೇಕು. ಇದರ ಯತ್ನವೇ
ಪ್ರಾಣಾಯಾಮ. ಇದು ಊರ್ಧ್ವಮುಖವಾಗಿ. ಚಲಿಸುವಾಗ ದೇಹದ ಚೈತನ್ಯದ ಕೇಂದ್ರಗಳಾದ ಚಕ್ರಗಳನ್ನು ಅಥವಾ
ಪದ್ಮಗಳನ್ನು ಸ್ಪರ್ಶಿಸಿ ಅವುಗಳನ್ನು ಜಾಗ್ರತಗೊಳಿಸುತ್ತದೆ. ಮಾನವರು ಸಾಮಾನ್ಯವಾಗಿ ಈ ಮೂರು
ಚಕ್ರಗಳಿಂದ (ಮೂಲಾಧಾರ, ಸ್ವಾಧಿಷ್ಠಾನ ಮತ್ತು ಮಣಿಪೂರ) ಹುಟ್ಟುವ
ಚೈತನ್ಯದಿಂದ ಗುರುತಿಸಲಾಗಿರುತ್ತದೆ. ಇವುಗಳ ಮೇಲಿರುವ ಇತರ ಚಕ್ರಗಳು ಜ್ಞಾನಿಗಳಲ್ಲಿ
ಪ್ರಬುದ್ಧವಾಗಿರುತ್ತವೆ. “ಮೂಲಾಧಾರದಲ್ಲಿ ಭೂತತ್ತ್ವ, ಮಣಿಪೂರ
ಚಕ್ರದಲ್ಲಿ ಜಲತತ್ವ, ಸ್ವಾಧಿಷ್ಠಾನದಲ್ಲಿ ಅಗ್ನಿತತ್ತ್ವ, ಅನಾಹತ ಚಕ್ರದಲ್ಲಿ ವಾಯುತತ್ವೃ, ವಿಶುದ್ಧಿ
ಚಕ್ರದಲ್ಲಿ ಆಕಾಶತತ್ತ್ವ, ಭ್ರೂ ಮಧ್ಯದ ಚಕ್ರದಲ್ಲಿ ಮನಸ್ಸಿನ
ತತ್ತ್ವಗಳನ್ನೆಲ್ಲ ಭೇದಿಸಿ ಸಹಸ್ರದಳ ಕಮಲದಲ್ಲಿ ಶಕ್ತಿ ಮಾತೆಯು ಆಕೆಯ ಪತಿಯಾದ ಸದಾಶಿವನೊಂದಿಗೆ ಸೇರಿ
ವಿಹರಿಸುವ ದೇವಿ ಎಂದೂ ಸೌಂದರ್ಯಲಹರಿಯಲ್ಲಿ ಹೇಳಲಾಗಿದೆ. ಹಾಗೆಯೇ ಅಮೃತಧಾರೆಯ ಸಾರದಿಂದ ನನ್ನ
ಶರೀರದಲ್ಲಿರುವ ನಾಡಿಗಳನ್ನೆಲ್ಲ ನೆನಸುವಳು ಎಂದೂ,
ಸೌಂದರ್ಯಲಹರಿಯಲ್ಲಿ ಹೇಳಲಾಗಿದೆ.
ಈ ಬಗ್ಗೆ ಬಿ. ಎಸ್.
ಕಪನೀಪತಯ್ಯ ಹೀಗೆ ಹೇಳುತ್ತಾರೆ, ಚಕ್ರಗಳಲ್ಲಿ ಶಿರಸ್ಥಾನದಲ್ಲಿರುವ “ಸಹಸ್ರಾರ” ಚಕ್ರವನ್ನು ಬಿಟ್ಟರೆ ಉಳಿದ ಆರು
ಚಕ್ರಗಳಲ್ಲಿ ಮೂಲಾಧಾರ, ಅನಾಹತ, ಆಜ್ಞಾ
ಚಕ್ರಗಳೇ ಮುಖ್ಯ ವಾದವು. ಪ್ರತಿ ಚಕ್ರವೂ ಕಮಲವೆಂದೂ ಅದರ ಸುತ್ತಲೂ ಇರುವ ಮುಖ್ಯ
ಸೂಕ್ಷ್ಮನಾಡಿಗಳು ಕಮಲದಳಗಳೆಂದೂ ಹೇಳಲ್ಪಡುತ್ತವೆ. ಎಲ್ಲಾ ಚಕ್ರಗಳ ಒಟ್ಟು ದಳಗಳು, ಸಂಸ್ಕೃತ ಅಕ್ಷರ ಮಾಲಿಕೆಯ 50 ಅಕ್ಷರಗಳಿಗೆ ಸರಿಯಾಗಿ 50 ಇರುವುವು. ಕಮಲದಳಗಳು
ಎಲ್ಲಾ ನಾಡಿಗಳೂ, ಎಲ್ಲಾ ಚಕ್ರಗಳೂ, ಎಲ್ಲಾ
ಕಮಲದಳಗಳೂ ಸೂಕ್ಷ್ಮ ಶಬ್ದ ಶಕ್ತಿಯನ್ನು ಪಡೆದಿರುತ್ತವೆ. ಅವು ದೃಷ್ಟಿಗೆ ಕಾಣುವವಲ್ಲ. ಕೇವಲ
ಮನೋಮಯ ವಾದವುಗಳು. ಉಪನಿಸತ್ತಿನಲ್ಲಿ ಇವುಗಳನ್ನು "ಸ್ಥಾನಾನೇತಾನೀದೇಹೇಸ್ಮಿನ್
ಶಕ್ತಿರೂಪಂ ಪ್ರಕಾಶತೇ” ಅಂದರೆ ಇವುಗಳು ಕೇವಲ ಧ್ಯಾನಯೋಗಿಗಳಿಗೆ
ವೇದ್ಯವಾದವುಗಳು ಎಂದಿದ್ದಾರೆ. ಶಿರಸ್ಸಿನ ಏಳನೆಯ
ಚಕ್ರವಾದ "ಸಹಸ್ರಾರವು ಬ್ರಹ್ಮನ ಚಿಚ್ಛಕ್ತಿಯಾಗಿ "ಓಂ” ಕಾರ ಸ್ವರೂಪವಾಗಿದೆ. ಈ
ಜ್ಯೋತಿಯೇ ಮೂಲಾಧಾರ ಚಕ್ರದಲ್ಲಿ "ಕುಂಡಲಿನೀ” ಶಕ್ತಿಯಾಗಿ
ಓಂಕಾರದ "ಅ” ಕಾರ ರೂಪದಲ್ಲಿದೆ. "ಅ” ಕಾರ "ಉ' ಕಾರ
"ಮ' ಕಾರಗಳು ಸೇರಿ "ಓಂ” ಕಾರವಾಗಿದೆ.
ಅನಾಹುತ ಚಕ್ರದಲ್ಲಿ "ಉ' ಕಾರವೂ ಆಜ್ಞಾ ಚಕ್ರದಲ್ಲಿ "
ಮ' ಕಾರವೂ ಇದೆ. ಮೂಲಾಧಾರ ಚಕ್ರವೇ ಆದಿಯಾಗಿ ಷಟ್ ಚಕ್ರಗಳಲ್ಲಿಯೂ,
ಕೊನೆಯದಾದ ಸಹಸ್ರಾರ ಚಕ್ರದಲ್ಲಿಯೂ ಈ ಜ್ಯೋತಿಯು ನೆಲೆಸಿದೆ.
ಈ
ಕುಂಡಲಿನಿಯನ್ನೇ ಯೋಗಶಿಖೋಪನಿಷತ್ತಿನಲ್ಲಿ ಮಹಾಮಾಯಾ, ಮಹಾಲಕ್ಷ್ಮೀ ಮಹಾ ಸರಸ್ವತೀ ಎಂದು ಹೇಳಿದ್ದಾರೆ.
ಶಿವಶಕ್ತಿಮಯಂ ಮಂತ್ರಂ
ಮೂಲಾಧಾರಾತ್ಸಮುತ್ಥಿತಂ |
ಮಹಾಮಾಯಾ ಮಹಾಲಕ್ಷ್ಮೀ ಮಹಾದೇವೀ, ಸರಸ್ಪತೀ॥
ಆಧಾರಶಕ್ತಿರವ್ಯಕ್ತಾ ಯಯಾ ವಿಶ್ವಂ
ಪ್ರವರ್ತತೇ |
ಸೂಕ್ಷ್ಮಾಭಾ ಬಿಂದುರೂಪೇಣ ಪೀಠರೂಪೇಣ
ವರ್ತತೇ ॥
ಭಾವಾರ್ಥ:- ಅಂದರೆ ಶಿವಶಕ್ತಿಮಯವಾದ ಓಂಕಾರ
ಮಂತ್ರವು (ಕುಂಡಲಿನಿಯು) ಮೂಲಾಧಾರಚಕ್ರದಿಂದ ಎಬ್ಬಿಸಲ್ಪಡುವುದು. ಈ ಶಕ್ತಿಯಿಂದ ಜಗತ್ತಿಗೆ
ಪ್ರವೃತ್ತಿ. ಇದೇ ಮಹಾಲಕ್ಷ್ಮಿ, ಮಹಾಮಾಯೆ, ಮಹಾ ಸರಸ್ವತಿ. ಇದೇ ಶರೀರಗಳನ್ನು ಸೃಷ್ಟಿಸಿ ಅದನ್ನು ಧರಿಸುವುದು. ಇದು
ಮೂಲಾಧಾರದಲ್ಲಿ ಫೀಠರೂಪವಾಗಿಯೂ ಆಜ್ಞಾಚಕ್ರದಲ್ಲಿ ಬಿಂದು ರೂಪವಾಗಿಯೂ ಇರುವುದು, ಎಂದು ಹೇಳಿದೆ.
ಪ್ರಪಂಚದಲ್ಲಾಗುವ
ಎಲ್ಲಾ ಶಬ್ದವೂ. ಎಲ್ಲಾ ಅಕ್ಷರ ಶಕ್ತಿಗಳೂ ಸುಷುಮ್ನಾನಾಡಿಯ ಒಳಗಿನ ಓಂಕಾರದ
ಪ್ರತಿಧ್ವನಿಗಳಾಗಿವೆ. ನಾವು ಮಾತನಾಡುವ ಮತ್ತು ಗಾನ ಮಾಡುವ ಪ್ರತಿಯೊಂದು ಅಕ್ಷರ ಮತ್ತು ಗಾನ ರೂಪ
ಶಕ್ತಿಗಳು “ಆಹತ” ನಾದಕ್ಕೆ ಸಂಬಂಧಿಸುತ್ತವೆ. ಇವುಗಳೆಲ್ಲಾ ಸುಷುಮ್ನಾನಾಡಿಯ
ಒಳಗಿರುವ "ಓಂ” ಕಾರದ ಅನಾಹತ ನಾದದ ಪ್ರತಿಧ್ವನಿಗಳು. ಕುಂಡಲಿನಿಯಲ್ಲಿ ಅದ್ಭುತ ಶಕ್ತಿ
ನೆಲೆಸಿರುತ್ತದೆ. ಪ್ರಾಣಾಯಾಮಪೂರ್ವಕವಾಗಿ ಕುಂಡಲಿನಿಯನ್ನು ಜಾಗ್ರತಗೊಳಿಸಿದರೆ ಅದರಿಂದ ಚಕ್ರಗಳು
ಅರಳುತ್ತವೆ. ಚಕ್ರಗಳನ್ನು ಧ್ಯಾನಮಾಡುತ್ತಾ ಸೂಕ್ಷ್ಮ ವಾಯುವನ್ನು ಅವುಗಳಲ್ಲಿ ತುಂಬಿದರೆ ನರಗಳ
ಮತ್ತು ನಾಡಿಗಳ ಶೋಧೆನವಾಗಿ ಚಿತ್ತಸ್ಥೈರ್ಯವುಂಟಾಗಿ ವಿಷಯಗಳ ಕಡೆ ವೈರಾಗ್ಯವುಂಟಾಗುವುದು. ಹೀಗೆ
ಚಕ್ರಗಳಲ್ಲಿ ಕ್ರಮವಾಗಿ ಚೈತನ್ಯವನ್ನುಂಟು ಮಾಡಿದರೆ ಮನಸ್ಸಿನ ಶಕ್ತಿಯು ವೃದ್ಧಿಯಾಗಿ ಆತ್ಮ ವಿಚಾರ
ಸಾಧಿಸಲು ಅನುಕೂಲವಾಗುತ್ತದೆ. ಪ್ರಾಣಾಯಾಮದಿಂದ ಮನಸ್ಸಿನ ಶಕ್ತಿಗಳು ವಿಕಾಸಗೊಳ್ಳುತ್ತವೆ.
ಆಂತರಿಕವಾಗಿ ಯಜ್ಞ ಮಾಡುವ ಬಗ್ಗೆ ರಹಸ್ಯ ಅರಿಯಿರಿ
ಶ್ರೀ
ಲಲಿತಾ ಸಹಸ್ರನಾಮದಲ್ಲಿ “ರಹೋಯಾಗ
ಕ್ರಮಾರಾಧ್ಯಾಯೈ ನಮಃ” ಎಂಬ ನಾಮವಿದೆ ಇದಕ್ಕೆ ಭಾಷ್ಯ ಬರೆದಿರುವ
ವಿದ್ವಾನ್ ಯಾಡುತೊರೆ ಸುಬ್ಬರಾಯಶರ್ಮ ಹೀಗೆ ಬರೆಯುತ್ತಾರೆ, “ರಹಃ
ಎಂದರೆ ಗುಟ್ಟು ಮತ್ತು ಆಂತರ್ಯವೆಂದು ಅರ್ಥ. ರಹೋಯಾಗ ವೆಂದರೆ ಅಂತರ್ಯವಾಗಿ ಒಳಗಡೆಯೇ ಮಾಡುವ ಯಾಗ
ಅಥವಾ ಯಜ್ಞ. ನಮ್ಮಲ್ಲಿ ಮೂಲಾಧಾರದಲ್ಲಿ ಗಾರ್ಹಪತ್ಯಾಗ್ನಿಯೂ, ಅನಾಹತ
ಚಕ್ರದಲ್ಲಿ ದಕ್ತಿಣಾಗ್ನಿಯೂ, ಭ್ರೂಮುಧ್ಯವೆಂದರೆ ಆಜ್ಞಾ
ಚಕ್ರದಲ್ಲಿ ಆಹವನೀಯಾಗ್ನಿಯೂ ಇರುವುವು. ಈ ಮೂರು ಅಗ್ನಿಗಳನ್ನೂ ಶ್ರೌತಾಗ್ನಿಹೋತ್ರಿಗಳು
ಬಾಹ್ಯದಲ್ಲಿ ಆರಾಧಿಸುವಂತೆ ನಮ್ಮಲ್ಲಿಯೇ ಇರುವ ಈ ಮೂರು ಅಗ್ನಿಗಳನ್ನು ಧ್ಯಾನಾಭ್ಯಾಸದಿಂದ ಪ್ರಜ್ವಲನೆ
ಮಾಡುವುದೇ ಅಂತರ್ಯಾಗ ಅಥವಾ ಒಳಗೇ ಮಾಡುವ ಯಜ್ಞ ವಾಗಿರುವುದು. ಇಂತಹ ಅಂತರ್ಯಾಗದಿಂದ
ಶಿರಸ್ಸಿನಲ್ಲಿ ಸಹಸ್ರಾರ ಕಮಲ ದಲ್ಲಿರುವ ಚಿದಾನಂದರೂಪಳಾದ ಶ್ರೀದೇವಿಯನ್ನು ಉಪಾಸನೆ ಮಾಡುವುದೇ
ರಹೋಯಾಗವೆಂದು ಹೆಸರು. ಈ ತತ್ವ ಸಮರ್ಥನೆಗೆ ಪಾಶುಪತ ಬ್ರಹ್ಮೋಪನಿಷತ್ತಿನಲ್ಲಿ (ಹೀಗೆ ಹೇಳಿದೆ) “ತ್ರೇತಾಗ್ನ್ಯನುಸಂಧಾನೋ
ಯಾಗಃ | ತ್ರೇತಾಗ್ನ್ಯಾತ್ಮಾಕೃತಿ ವರ್ಣೊಂ ಕಾರ ಹಂಸಾನು ಸಂಧಾನೋಂತರ್ಯಾಗಃ||”
ಅಂದರೆ ಗಾರ್ಹಪತ್ಯ, ದಕ್ಷಿಣಾಗ್ನಿ, ಆಹವನೀಯಗಳಾದ ಮೂರು ಅಗ್ನಿಗಳನ್ನು ಬಾಹ್ಯದಲ್ಲಿ ಯಜ್ಞ ಕ್ರಮದಲ್ಲಿ ಆರಾಧಿಸುವುದೆ
ಯಾಗವೆನಿಸಿಕೊಳ್ಳುವುದು. ಈ ಮೂರು ಅಗ್ನಿಗಳೂ ನಮ್ಮ ದೇಹದಲ್ಲಿ ಮೂಲಾಧಾರ, ಅನಾಹತ, ಆಜ್ಞಾ ಚಕ್ರಗಳಲ್ಲಿವೆ. ಈ ಸ್ಥಳಗಳಲ್ಲೇ
ಓಂಕಾರದ ವಿವರಣೆಯಾದ ಅ, ಉ, ಮ
ಎಂಬುವುಗಳಿವೆ. ಈ ಮೂರು ಅಗ್ನಿಗಳೂ ಮೂರು ಅಕ್ಷರಗಳು ಏಕತತ್ವದ್ದಾಗಿವೆ. ಆದುದರಿಂದ ಮೂರು
ಅಗ್ನಿಗಳ ಅನುಸಂಧಾನವೆಂದರೆ ಅ, ಉ, ಮ
ಗಳು ಒಂದಕ್ಕೊಂದು ಕೂಡಿಕೊಳ್ಳುವ ಓಂಕಾರೋಪಾಸನೆಯಿಂದ ಸಹಸ್ರಾರ ಕಮಲದಲ್ಲಿರುವ ಸಚ್ಚಿದಾನಂದ
ಸ್ವರೂಪಿಣಿಯಾದ ಶ್ರೀದೇವಿಯನ್ನು ಸಾಕ್ಷಾತೃರಿಸಿ ಕ್ಳೊಳ್ಳುವುದೇ ರಹೋಯಾಗಕ್ರಮದಿಂದ
ಶ್ರೀದೇವಿಯನ್ನು ಆರಾಧಿಸಲ್ಪಡುವುದಾಗಿದೆ.”
ವೇ.
ಬ್ರ. ಶ್ರೀ ದೊಡ್ಡಬೆಲೆ ನಾರಾಯಣಶಾಸ್ತ್ರಿಗಳು ಬರೆದಿರುವ ಶ್ರೀ ಕೃಷ್ಣಬೋಧಾಮೃತ ಗ್ರಂಥದಲ್ಲಿ ಈ
ಬಗ್ಗೆ ಹೀಗೆ ಹೇಳಿದ್ದಾರೆ, “ಬ್ರಹ್ಮ, ವಿಷ್ಣು, ಮಹೇಶ್ವರರಿಗೂ ಪ್ರಣವವೇ ಮೂಲ ಮಂತ್ರವು. ಸಾಕ್ಷಾತ್
ಪರಶಿವನೂ ಕೂಡ, ತಾರಕಮಂತ್ರವೇ ತನಗೆ ಮೂಲ ಮಂತ್ರವೆಂದು ವಲ್ಲಭೆಯಾದ
ಗಿರಿರಾಜಪುತ್ರಿಗೆ ತಿಳುಹಿದನು. ಅನೇಕ ಪುರಾತನ ಪುಣ್ಯಪುರುಷರು ಆ ತಾರಕಮಂತ್ರ ಧ್ಯಾನಮಾತ್ರದಿಂದಲೇ
ತಮ್ಮ ಇಷ್ಟಸಿದ್ಧಿಯನ್ನು ಹೊಂದಿ ಕೈವಲ್ಯ ಪದವಿಯನ್ನು ಪಡೆದಿರುವರು, ತಾರಕವೆಂದರೆ ಪ್ರಣವವು. ಪ್ರಣವವಾದಂಧಾದ್ದು ಓಂಕಾರದಲ್ಲಿ ಅಕಾರ, ಉಕಾರ, ಮಕಾರಗಳು ಹುಟ್ಟಿ ತ್ರಿಮೂರ್ತಿಗಳಾದರಲ್ಲದೆ
ಬೇರೆ ಇಲ್ಲ ಅಯಮಾತ್ಮಾ ಬ್ರಹ್ಮಾ ಎಂಬುದಾಗಿಯೂ ಪ್ರಜ್ಞಾನ ಚೈತನ್ಯಗಳೇ ಬ್ರಹ್ಮವೆಂತಲೂ ಹೇಳುತಲಿರುವ ಮಹಾವಾಕ್ಯಗಳಿಗನುಸಾರವಾಗಿ ಚೈತನ್ಯ
ಸ್ವರೂಪನಾದ ಆತ್ಮಾರಾಮ ಬ್ರಹ್ಮವು ಸಮಸ್ತವಾದ ಶರೀರಗಳಲ್ಲಿಯೂ ವಾಯುಮಾರ್ಗದಿಂದ ಹೊಕ್ಕು
ಆತ್ಮನೆಂದೂ ಪ್ರಸಿದ್ಧಿಯಾಗಿ ಅಂತರ್ ಬಹಿರ್ಯಾದಿ ದಿವ್ಯತ್ವಗಳುಂಟಾಗಿ ತ್ರಿಮೂರ್ತಿಗಳೇ ಮೊದಲಾಗಿ ಉಳ್ಳ
ಲಿಂಗಶರೀರಗಳನ್ನೆಲ್ಲ ಭಂಗವುಂಟಾಗದಂತೆ ಆಧಾರವಾಗಿ ಹಗಲು ರಾತ್ರಿಗಳಲ್ಲಿಯೂ ಆರೋಹಣ ಅವರೋಹಣಗಳುಂಟಾಗಿ
ಷಡಾಧಾರಗಳಿಗೆ ಸೂತ್ರ ರೂಪನಾಗಿ ಚಂದ್ರ, ಸೂರ್ಯರ ನಾಡಿಗಳಲ್ಲಿ ಒಂದು
ದಿನಕ್ಕೆ ಇಪ್ಪತ್ತೊಂದು ಸಾವಿರ ಆರನೂರು ಸಾರಿ ನಡೆಯುತಲಿರುವುದು. ಇದೇ ಅಜಪ ಗಾಯತ್ರಿಯೆಂದೂ
ಜೀವೇಶ್ವರೈಕ್ಯವೆಂತಲೂ, ಪ್ರಣವವೆಂತಲೂ, ಮೌನಸಮಾಧಿ ಎಂಬುದಾಗಿಯೂ, ತಾರಕಮಂತ್ರವೆಂತಲೂ,
ಹೇಳಲ್ಪಟ್ಟಿರುವುದು. ರೇಚಕಪೂರಕಾದಿಗಳೂಳಗೆ
ಸಕಾರ ಓಂಕಾರಕ್ಕೆ ಬಿಂದುಯುಕ್ತವಾದ ಹಕಾರವನ್ನು ಸೇರಿಸಿ ಜಪಿಸುತ್ತ ಆ ಹಂಸದ ಹಿಂದುಗಡೆಯೇ
ತಿರುಗುತ್ತ, ಸರ್ವಕಾಲದಲ್ಲಿಯೂ ಸರ್ವಾವಸ್ಥೆಗಳಲ್ಲಿಯೂ ಮರೆಯದೆ
ತುಟಿಗಳನ್ನು ಚೆನ್ನಾಗಿ ಬಂಧಿಸಿ ಜ್ಞಾನೇಂದ್ರಿಯವಾದಂತಾ ಜಿಹ್ವೇಂದ್ರಿಯವಂ ವಾಯುವಿನೊಳು ಸೇರಿಸಿ ಜಪಿಸತಕ್ಕದೇ ನಿಶ್ಚಯವಾಗಿ
ತಾರಕಮಂತ್ರ ರಹಸ್ಯವು.”
“ತುಟಗಳಂ
ಬಂಧಿಸಿಕೊಂಡು ವಾಯುವಂ ನಿಯಮಿಸಿ ಇಡಾಪಿಂಗಳ ನಾಡಿಗಳಲ್ಲಿ ಸಂಚಾರ ಮಾಡುತಲಿರುವ ಮಾರುತಗಳೊಂದಿಗೆ ಆ
ಅಕ್ಷರಗಳೆರಡನ್ನು ಸರಿಸಿ ಜಿಹ್ವಾಬಂಧವಂ ಮಾಡಿ ಜಪಿಸುತಲಿರು, ಆ ಅತ್ಮಾರಾಮಬ್ರಹ್ಮನು
ನಿನ್ನ ಮನೋಭೀಷ್ಟ ಮತ್ತು ಕೈವಲ್ಯವನ್ನು ಕೊಡುವುದು”
ಈ
ಬಗ್ಗೆ ಬಿ. ವಿರೂಪಾಕ್ಷಪ್ಪ ತಮ್ಮ ವಚನಗಳಲ್ಲಿ ಹೀಗೆ ಬರೆಯುತ್ತಾರೆ, “ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ
ಜಗಳವಿಲ್ಲ, ಇದೊಂದು ಹಳೆಯ ಗಾದೆ. ವೇದಕ್ಕಿಂತ ಗಾದೆ ಮೊದಲು.
ಈ ಸತ್ಯವನು ಸಾರುತಿದೆ ಈ ಮಾತು. ಸಮತೂಕ ಆಹಾರ ಆರೋಗ್ಯ ರಕ್ಷಣೆಯ ತಾರಕ
ಸೂತ್ರ. ಪ್ರೋಟೀನುಗಳು, ಪಿಷ್ಟಗಳು, ಕೊಬ್ಬುಗಳು,
ಜೀವಸತ್ವಗಳು, ಖನಿಜಗಳು, ಪರಿಶುದ್ಧ ನೀರು, ಇವುಗಳ ಹದವುಳ್ಳ ಪ್ರಮಾಣಬದ್ಧ ಆಹಾರ
ಸಮತೂಕ ಆಹಾರ. ಇದರ ಸೇವನೆ ಆರೋಗ್ಯ ಕಾಪಾಡಲಾಧಾರ. ಇದು ಆರೋಗ್ಯ ಜೀವನದ ಮೂಲಸೂತ್ರ ದೀರ್ಫಾಯುಷ್ಯದ
ತಾರಕಮಂತ್ರ. ಹಿತಮಿತ ಆಹಾರ, ಕ್ರಮಬದ್ಧ ಜೀವನ, ನೀತಿಯ ಬಾಳು, ಸಜ್ಜನರ ಸಹವಾಸ, ಸತತ ನಿನ್ನ ಧ್ಯಾನ ಇವು ಬಾಳ ಸಾಗರವ ದಾಟಿಸುವ ಹರಿಗೋಲಯ್ಯ, ಇಷ್ಟಲಿಂಗರೂಪಿ ಹಂಪೆಯ ವಿರೂಪಾಕ್ಷೇಶ್ವರ”.
ಶ್ರೀ
ನರಸಿಂಹಸ್ವಾಮಿ ಸಹಸ್ರ ನಾಮಾವಳಿಯಲ್ಲಿ “ತಾರಕಾಯ ನಮಃ”
ಎನ್ನುತ್ತಾರೆ, ತಾರಕ - ದಾಟಿಸುವವನು. ಸಂಸಾರ ಸಾಗರದಿಂದ
ದಾಟಿಸುವವನು ಯಾರೋ ಅವನು ಪರಮಾತ್ಮ. ಅವನಿಗೆ ನಮಸ್ಕಾರಗಳು. ದಾಟಿಸುವವರಲ್ಲೆಲ್ಲ ಇವನೇ ಅತ್ಯಂತ
ದೊಡ್ಡವನು. ಇವನಿಗಿಂತ ಉತ್ತಮರು ಯಾರೂ ಇಲ್ಲ. (ತಾರಕ ಎಂದರೆ ದಾಟಿಸುವುದು) ಅದಕ್ಕೆ ತಾರಕಾಯ ನಮಃ
ಎನ್ನುತ್ತಾರೆ.
ನನ್ನ
ಸಲಹೆ:- ಈ ಪುಸ್ತಕವನ್ನು ಪೂರ್ತಿ ಓದಿದ ನಂತರ ಒಂದೊಂದಾಗಿ
ಅನುಷ್ಟಾನಕ್ಕೆ ತನ್ನಿ. ತಿಳಿಯುವುದು ತಿಳಿಯಬೇಕಾದ್ದು ಬಹಳ ಇದೆ,
ಆತುರ ಬೇಡ. ನಮ್ಮ ಸುತ್ತಲಿನ ವಾಯುವಿನಲ್ಲಿ ಅನೇಕ ರೀತಿಯ ಕಲ್ಮಷವೂ ಇರುತ್ತದೆ, ಅದಕ್ಕೆ ನಿಮ್ಮ ಸ್ವಸ್ಥ ಉಸಿರಾಟದ ಯಜ್ಞಕ್ಕೆ ಸ್ಥಳ ಆಯ್ಕೆ ಮುಖ್ಯವಾಗುತ್ತದೆ. ಅಂತಹ
ಸ್ಥಳ ಸಸ್ಯ ಕಾಶಿಯಾಗಿರಬೇಕು. ಹರಿಯುವ ನೀರಿನ ಹತ್ತಿರ ಒಳಿತು. ಶಬ್ದ ಮಾಲಿನ್ಯ ಇರದ ಕಡೆ ಒಳಿತು.
ಅದಕ್ಕಾಗಿ ಗುಹೆ ಮತ್ತು ಹಿಮಾಲಯ ಹುಡುಕುತ್ತಾ ಹೋಗಬೇಡಿ.
ಇರುವುದರಲ್ಲಿ ಸ್ವಚ್ಛ ಜಾಗವನ್ನು ಆಯ್ಕೆ ಮಾಡಿ. ನಮ್ಮ ಪರಿಸರದ ವಾಯುವಿನಲ್ಲಿ ಅನೇಕ ಗಿಡಮೂಲಿಕಾ
ಕಣಗಳು ಇರುತ್ತವೆ, ತೇವಾಂಶ ಇರುತ್ತದೆ, ನೈಟ್ರೋಜನ್ ಹೇರಳವಾಗಿ ಇರುತ್ತೆ, ಆಕ್ಸಿಜನ್
ಇರುತ್ತೆ, ಕಾರ್ಬನ್ ಡೈಯಾಕ್ಸೈಡ್ ಇರುತ್ತೆ. ಇದರಲ್ಲಿ ಒಳಿತು
ಯಾವುದು ಕೆಟ್ಟದ್ದು ಯಾವುದು ಚಿಂತಿಸಬೇಡಿ. ವಾಯು ಮಾಲಿನ್ಯ ಇರುವ ಕಡೆ ಬೇಡ. ಶುದ್ದ ನೈಸರ್ಗಿಕ
ವಾಯು ಇರುವ ಕಡೆ ಆಯ್ಕೆ ಮಾಡಿ. ದೇವರು ನಮಗೆ ಬೇಕಾದ ಎಲ್ಲಾ ಸಂಪತ್ತನ್ನು ವಾಯುವಿನಲ್ಲಿ
ಇರಿಸಿದ್ದಾನೆ. ಅದನ್ನು ಹೇಗೆ ನಮ್ಮ ದೇಹದ ಶುದ್ದಿಗೆ ಮತ್ತು ಅಭಿವೃದ್ದಿಗೆ ಮತ್ತು ಅಮೃತ
ತಯಾರಿಸುವಿಕೆಗೆ ಬಳಸಬೇಕು ಎಂಬುದನ್ನೂ ಸೂಕ್ಷ್ಮವಾಗಿ ಅರಿಯಿರಿ. ಇದುವೇ ಬ್ರಹ್ಮಜ್ಞಾನ
ಹೊಂದುವುದಕ್ಕೆ ದಾರಿಯಾಗಿದೆ ಮತ್ತು ಅದುವೇ ಬ್ರಹ್ಮಜ್ಞಾನವಾಗಿದೆ. ಮೊದಲು ಇಲ್ಲಿ ಕೊಟ್ಟಿರುವ
ಸತ್ಯ ಅರ್ಥಗಳನ್ನು ಗ್ರಹಿಸಿ ಇಂದಿನವರೆಗೆ ನಾವು ತಿಳಿದಿದ್ದ ಅರ್ಥವನ್ನು ಮಾರ್ಪಡಿಸಿಕೊಳ್ಳಿ.
ಆನಂತರವೇ ಮುಂದಿನ ನಿಮ್ಮ ಅನುಷ್ಠಾನ ಯಜ್ಞ ಪ್ರಾರಂಭವಾಗಲಿ. ಉಸಿರನ್ನು ಬಂದಿಸುವುದು ಬಿಗಿ
ಹಿಡಿಯುವುದು, ಸಲ್ಲದ ಪ್ರದೇಶಕ್ಕೆ ಬಲವಂತವಾಗಿ ನುಗ್ಗಿಸುವುದು, ಮಾಡಬೇಡಿ. ಕುಂಭಕ ಎಂದರೆ ಲೋಕಾರೂಡಿ ಭೋದನೆ ಆಗುತ್ತಿರುವುದು ಬೇರೆ ಅಕ್ಷರ ಅರ್ಥ
ಬೇರೆ ಇದೆ. ಲೋಕಾ ರೂಡಿ ಅರ್ಥವನ್ನು ಅಳವಡಿಸಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.
ಮೊದಲಿಗೆ
ವ್ಯಾಯಾಮ, ನಾಡಿ ಶುದ್ದಿ, ಯೋಗಾಸನ
ಮಾಡಿ. ನಂತರ ರಕ್ತಶುದ್ದಿ ಮಾಡುವ ಆಯುರ್ವೇದಿಕ ವಿಧಾನ ನುರಿತರಿಂದ ಕಲಿಯಿರಿ. ನಮ್ಮ ತಂದೆ
ತಾಯಿವರಿಗೆ ಯಾವ ರೀತಿ ಖಾಯಿಲೆ ಇತ್ತು. ನಮ್ಮ ಬಾಲ್ಯದಲ್ಲಿ ನಮಗೆ ಯಾವ ಖಾಯಿಲೆ ಇತ್ತು. ವಿವಿದ
ಹಂತದಲ್ಲಿ ಕಾಡಿದ ಖಾಯಿಲೆ ಸ್ವರೂಪ ಎಂತದ್ದು ಎಂದು ಒಂದೆ ಕಡೆ ನೋಟ್ಸ್ ಮಾಡಿ ಆಯುರ್ವೇದಿಕಾ ಅಥವಾ
ಹೋಮಿಯೋಪತಿ ನುರಿತ ವೈದ್ಯರನ್ನು ಕಂಡು ನಿಮಗೆ ವೈನ್ಸ್ ಪ್ರಾಬ್ಲಮ್ ಇದ್ದರೆ ಅದಕ್ಕೆ ಚಿಕಿತ್ಸೆ
ಪಡೆಯುರಿ. ರಕ್ತ ಪರಿಚಲನೆ ಸರಿಯಾಗಲು “ಅರ್ಜುನ” ಆಯುರ್ವೇದಿಕ ಮಾತ್ರೆ ಉಪಯೋಗಿಸ ಬಹುದೇ ಅದು
ನಿಮ್ಮ ದೇಹದ ಇತರೆ ಖಾಯಿಲೆಗೆ ಮಾರಕ ಅಲ್ಲವೇ ಸಮಾಲೋಚಿಸಿ. ಸನಾತನ ಪೂಜಾ ವಿಧಾನದಲ್ಲಿ ಕೆಲವು
ಪುಷ್ಪ ಮತ್ತು ಎಲೆಯನ್ನು ದೇವರಿಗೆ ಅರ್ಥಾತ್ ದೇಹವೆಂಬ ಈ ದೇವರಿಗೆ ಸಮರ್ಪಿಸಲು ಸೂಚನೆ ಇದೆ.
ನಮ್ಮ ಬಹುಮುಖ್ಯ ಆರೋಗ್ಯ ಅಂಗ ಕರುಳು ಅದರ ಆರೋಗ್ಯಕ್ಕೆ “ಬಿಲ್ವ ಪತ್ರೆ” ಮಾತ್ರೆಗಳು
ತೆಗೆದುಕೊಳ್ಳುವ ಬಗ್ಗೆ ಆಯುರ್ವೇದ ವೈದ್ಯರಲ್ಲಿ ಸಮಾಲೋಚಿಸಿ.
ನಮ್ಮಲ್ಲಿ
ಆಹಾರ ಪದ್ದತಿಯಲ್ಲಿ ಮೊದಲಿಗೆ ಉಪ್ಪು ಬಡಿಸುವುದು ಅದನ್ನು ನಾಲಿಗೆ ಮೇಲೆ ನಾವು ಬೆರಳಿನಿಂದ
ಅದ್ದಿ ಸೇವಿಸುವುದು, ನಾರಿನ ಅಂಶಗಳ ತರಕಾರಿ ಫಲ್ಯಗಳು, ಮೊಳಕೆ ಕಾಳಿನ ಪಲ್ಯ, ಕೋಸಂಬರಿ, ಜೀರ್ಣಕ್ರಿಯೆಗೆ ಸಹಾಯಕ ಮಾವಿನ ಉಪ್ಪಿನಕಾಯಿ, ಹಿಂಗು
ಬೆರೆಸಿದ ಸಾರು, ಬೆಲ್ಲದಿಂದ ಮಾಡಿದ ಸಿಹಿ, ಕುಂಭಳಕಾಯಿ ಅಥವಾ ಸೋತೆಕಾಯಿ ಸಾರು, ಮಜ್ಜಿಗೆ, ಮೊಸರು, ಇತ್ಯಾದಿ. ಊಟದ ನಂತರ ನೀಡುವ ಏಲಕ್ಕಿ, ಏಲಕ್ಕಿ ಬಾಳೆ, ಎಲೆ ಅಡಿಕೆ, ಬೆಲ್ಲ. ಇವೆಲ್ಲಾ ಆಡಂಬರಕ್ಕೆ ಮಾಡಿದ್ದಲ್ಲ,
ಆರೋಗ್ಯಕ್ಕೆ ಮಾಡಿರುವುದಾಗಿದೆ. ಇದನ್ನು ಮತ್ತೆ ಅನುಷ್ಟಾನಕ್ಕೆ ತರಲು ಪ್ರಯತ್ನಿಸಿ.
ಇಂದು
ಆಹಾರದಲ್ಲಿ ಬಣ್ಣ ಬೆರೆಸುವುದು, ರುಚಿ ಹೆಚ್ಚಿಸಲು ಪೌಡರ್
ಬಳಸುವುದು ಮಾಡಿರುವ ಆಹಾರ ನಿಲ್ಲಿಸಿ. ನಿಮ್ಮ ದೇಹ ಉಷ್ಣದಿಂದ ಕೂಡಿದ್ದರೆ ಎಳೆನೀರು, ಸೊಗದೆ ಬೇರಿನ ಶರಬತ್ತು, ಸೇವಿಸಲು ತಜ್ಞರಲ್ಲಿ ಸಲಹೆ
ಪಡೆಯಿರಿ. ದೇಹ ಶೀತದಿಂದ ಕೂಡಿದ್ದರೆ, ಅದಕ್ಕೆ ಪೂರಕ ಗಿಡಮೂಲಿಕೆ
ಉಪಯೋಗದ ಬಗ್ಗೆ ತಜ್ಞರಲ್ಲಿ ಸಮಾಲೋಚಿಸಿ. ದೇಹದಲ್ಲಿ ವಾತ ಪಿತ್ತ ಕಫ ಸಮತೋಲನ ಕಾಪಾಡಿಕೊಳ್ಳಿ.
ಹೀಗೆ
ದೇಹದಲ್ಲಿನ ಕಲ್ಮಶಗಳನ್ನು/ಟಾಕ್ಸಿಕ್ ಕಂಟೆಂಟ್ಸ್ ಹೊರಹಾಕಿ, ದೇಹ
ಶುದ್ದಿ ಗೊಳಿಸಿದ ನಂತರವೇ ಇಂತಹ ಬ್ರಹ್ಮ ಯಜ್ಞ ಅನುಷ್ಠಾನ ಮಾಡಬೇಕು. ಕುಂಡಲಿನಿ ವಿದ್ಯೆ
ಜಾಗೃತಿಯಿಂದ ಮನುಜ ತೇಲುತ್ತಾನೆ, ವಿಚಿತ್ರವಾಗಿ ಕುಣಿಯುತ್ತಾನೆ
ಎಂಬುದೆಲ್ಲಾ ತಪ್ಪು ಮಾಡುತ್ತಿರುವವರ ದೈಹಿಕ ವಿಕೃತಿಯಾಗಿರುತ್ತದೆ. ಕುಂಡಲಿನಿ ಜಾಗೃತಿ
ದೇಹದಲ್ಲಿನ ಎಲ್ಲಾ ನರನಾಡಿಗಳನ್ನು ಜೀವಂತಗೊಳಿಸಿ ಆರೋಗ್ಯವನ್ನು ನೀಡಿ ಮನುಜನ ಕಾಂತಿಯನ್ನು
ಹೆಚ್ಚಿಸುತ್ತದೆ. ನಂತರ ಮೆದುಳಿನ ಸಹಸ್ರಾರ ನಾಡಿಗಳು ಜಾಗೃತವಾಗಿ ಮೆದುಳು 100% ಉಪಯೋಗಕ್ಕೆ
ಬರುತ್ತದೆ. ಇಂದು ನಾವು 5% ರಿಂದ 25% ಮಾತ್ರ ಉಪಯೋಗಿಸುತ್ತಿದ್ದೇವೆ. 100% ಉಪಯೋಗದ ಹಂತ
ತಲುಪಿದರೆ ಅಂತಹ ವ್ಯಕ್ತಿಗಳ ವಿಸ್ಮಯಕಾರಿ ನೋಟ, ವಿಸ್ಮಯಕಾರಿ
ಸಂದೇಶಗಳು, ವಿಸ್ಮಯಕಾರಿ ಭೋದನೆಗಳು,
ಸಕಲ ಕಾಲಗಳ ಅನುಭವ ಜ್ಞಾನ, ಆರನೇ ಮತ್ತು ಏಳನೇ ಇಂದ್ರಿಯಗಳ ಜಾಗೃತಿ, ಇದು ಉಂಟಾಗಿ ಎಲ್ಲರಿಗೂ ಗುರು ಆಗುತ್ತಾನೆ. ಅಂತಹ ವಿದ್ಯೆ ಬಲ್ಲ ಸನಾತನ ಧರ್ಮದವರು
ಎಂದಿಗೂ ಜಗತ್ತಿಗೆ ಗುರುಗಳಾಗುತ್ತಾರೆ.
ಏನೋ
ಬರೆಯಬೇಕು ನೀವು ಅದನ್ನು ಓದಬೇಕು ಎಂಬ ಆಲೋಚನೆಯಲ್ಲಿ ಬರೆದಿರುವುದಲ್ಲ ಈ ಪುಸ್ತಕ. ಒಂದೊಂದು
ಅಧ್ಯಾಯದಲ್ಲಿಯೂ ತಿಳಿಯುವ ಮತ್ತು ಆಲೋಚನೆಗೆ ಪೂರಕ ಸಂಗ್ರಹಗಳು ವಿವರಣೆಗಳು, ವೇದ ಉಲ್ಲೇಕಗಳು, ಉಪನಿಷದ್ ಮತ್ತು ಇತ್ಯಾದಿ ಗ್ರಂಥ
ಉಲ್ಲೇಕಗಳ ಸಂಗ್ರಹ ನಿಮ್ಮ ಆಲೋಚನಾ ಪ್ರವೃತ್ತಿಯನ್ನು ವಿಸ್ತರಿಸುತ್ತಾ ಹೋಗುತ್ತದೆ. ಅದಕ್ಕಾಗಿಯೇ
ಹೇಳಿದ್ದು ಪರಿಪೂರ್ಣ ಓದಿದ ನಂತರ ಅನುಷ್ಠಾನ ಮಾಡಿ ಎಂದಿದ್ದು.
ನಮ್ಮ
ಜನನ ಉಸಿರಿನಿಂದಲೇ ಈ ಭೂಮಿಯಲ್ಲಿ ಪ್ರಾರಂಭವಾಗುತ್ತೆ ಅದರಿಂದಲೇ ಪೋಷಣೆ ಆಗುತ್ತೆ, ಅದರ ಒಂದೊಂದು ರೀತಿಯ ಉಸಿರು ನಾಶ ಆಗುವಿಕೆಯಿಂದ ಒಂದೊಂದು ದೈಹಿಕ ಅಂಗ
ನಾಶವಾಗುತ್ತದೆ. ಪರಮಾತ್ಮ ಸ್ವರೂಪವಾದ ಈ ನಮ್ಮ ದೇಹಕ್ಕೆ ವಾಯು ಸರ್ವೋತ್ತಮನು ಒಳಹೊಕ್ಕು, ಅಮೃತವನ್ನು ಉತ್ಪಾದಿಸಿ ಹರಿ ಸರ್ವೋತ್ತಮನನ್ನು ತಯಾರು ಮಾಡಿ ದೇಹದ 72,000
ನಾಡಿಗಳಲ್ಲಿ ಹರಿಸಿ ದೇವರನ್ನು ಸಂತೃಪ್ತಿಯಿಂದ ಶುದ್ದವಾಗಿ ಇಡುವ
ಯಜ್ಞ/ಪೂಜಾ ವಿಧಾನವೇ ಪ್ರಾಣವಿದ್ಯೆ. ಈ ಪ್ರಾಣವಿದ್ಯೆ ಕಲಿತವನಿಗೆ ದೈಹಿಕವಾಗಿಯಾಗಲೀ ಮಾನಸಿಕವಾಗಿ ಆಗಲಿ ಸೋಲಿಲ್ಲ.
ದೀರ್ಘಾಯುಷ್ಯವನ್ನು ಹೊಂದುತ್ತಾನೆ, ಜಗತ್ತಿಗೇ ಮಾರ್ಗದರ್ಶಿ ಗುರು
ಆಗುತ್ತಾನೆ, ಬ್ರಹ್ಮಜ್ಞಾನಿಯಾಗುತ್ತಾನೆ, ವಿದ್ಯಾವಂತನಾಗುತ್ತಾನೆ. ಇದರ ವೈಜ್ಞಾನಿಕ ಸತ್ಯವನ್ನು ಅರಿತು, ವೇದ ರಹಸ್ಯವನ್ನು ತಿಳಿದು ನಂಬಿಕೆಯಿಂದ ಅನುಷ್ಠಾನ ಗೊಳಿಸಿದರೆ ಯಾರಿಗೂ ಯಾವ
ಸೋಲಿನ ಭಯ ಇರಲಾರದು. ಅಪನಂಬಿಕೆಯಲ್ಲಿ ಅರೆತಿಳಿಯುವಿಕೆಯಲ್ಲಿ ಮಾಡುವ ಎಲ್ಲಾ ಕಾರ್ಯಗಳಲ್ಲಿ
ಸೋಲಿನ ಭಯ ಇದ್ದೇ ಇರುತ್ತೆ ಅನ್ನುವುದು ಮನಗಾಣುವುದು ಒಳಿತು.
No comments:
Post a Comment